Tag: Konanakunte

  • ಪಿಜಿ ಮಾಲಕಿ ನೇಣಿಗೆ ಶರಣು – ಹಣದ ವಿಚಾರಕ್ಕೆ ಸ್ನೇಹಿತನೇ ಕೊಲೆ ಮಾಡಿರುವ ಶಂಕೆ

    ಪಿಜಿ ಮಾಲಕಿ ನೇಣಿಗೆ ಶರಣು – ಹಣದ ವಿಚಾರಕ್ಕೆ ಸ್ನೇಹಿತನೇ ಕೊಲೆ ಮಾಡಿರುವ ಶಂಕೆ

    ಬೆಂಗಳೂರು: ಇಲ್ಲಿನ ಪಿಜಿ ಮಾಲಕಿಯೊಬ್ಬರು ಅನುಮಾನಾಸ್ಪದವಾಗಿ ನೇಣಿಗೆ ಶರಣಾಗಿರುವ ಘಟನೆ ಕೋಣನಕುಂಟೆಯಲ್ಲಿ (Konanakunte) ನಡೆದಿದೆ. ಆಸ್ತಿಯ ವಿಚಾರಕ್ಕೆ ಸ್ನೇಹಿತನೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

    ಕೋಣನಕುಂಟೆಯ ಕೊತ್ತನೂರು ನಿವಾಸಿ ಹೇಮಾವತಿ ಮೃತ ಮಹಿಳೆ.

    ಕೆಲ ದಿನಗಳ ಹಿಂದೆ ಪತಿಯನ್ನು ಕಳೆದುಕೊಂಡಿದ್ದ ಹೇಮಾವತಿ, ಪಿಜಿಯನ್ನು ನಡೆಸುತ್ತಿದ್ದರು. ಪಿಜಿ ಹಾಗೂ ಮನೆ ಕಡೆಯೂ ಆರ್ಥಿಕವಾಗಿ ಚೆನ್ನಾಗಿದ್ದ ಹೇಮಾವತಿಗೆ ಶರವಣ ಎನ್ನುವ ವ್ಯಕ್ತಿಯ ಪರಿಚಯವಾಗಿತ್ತು. ದಿನ ಕಳೆದಂತೆ ಸಲುಗೆಯಲ್ಲಿ ಮಾತಾಡಿಸುತ್ತಿದ್ದ ಶರವಣ, ಹೇಮಾವತಿಗೆ ತುಂಬಾ ಹತ್ತಿರವಾಗಿದ್ದ. ಇದನ್ನೂ ಓದಿ: ಭಾಗ್ಯಲಕ್ಷ್ಮಿ ಫಲಾನುಭವಿಗಳಿಗೆ ಗುಡ್‌ನ್ಯೂಸ್‌ – ಖಾತೆಗೆ 1 ಲಕ್ಷ ರೂ. ಹಣ ಜಮೆ

    ಈ ವೇಳೆ ಹೇಮಾವತಿ, ಶರವಣ ಬಳಿ ಸಾಲ ಪಡೆದಿದ್ದರು. ಆದರೆ ಹೇಳಿದ ಟೈಮ್‌ಗೆ ಹಣ ವಾಪಸ್ ಕೊಡಲಿಲ್ಲ ಎನ್ನುವ ಕಾರಣಕ್ಕೆ ಮಾ.2 ರಂದು ರಾತ್ರಿ ಹೇಮಾವತಿಯನ್ನು ಹುಡುಕಿಕೊಂಡು ಶರವಣ ಮನೆ ಹತ್ತಿರ ಬಂದಿದ್ದ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಮಧ್ಯರಾತ್ರಿಯ ಹೊತ್ತಿಗೆ ಜಗಳ ತಣ್ಣಾಗಿದ್ದು, ಬೆಳಗ್ಗೆ ಹೇಮಾವತಿ ಅನುಮಾನಾಸ್ಪದವಾಗಿ ನೇಣಿಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿಂದು ವಿಜಯೇಂದ್ರರಿಂದ ಭತ್ತದ ನಾಟಿ

    ಜೊತೆಗಿದ್ದ ಶರವಣ ನಂಗೇನು ಗೊತ್ತಿಲ್ಲ. ರಾತ್ರಿ ಏನಾಗಿದೆ ಗೊತ್ತಿಲ್ಲ ಎಂದು ಹೇಳುತ್ತಿದ್ದು, ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ಪೊಲೀಸರು ಶರವಣನ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಏರ್‌ಪೋರ್ಟ್‌ನಲ್ಲಿ ಐಪಿಎಸ್ ಅಧಿಕಾರಿ ಸಂಬಂಧಿ ವಶಕ್ಕೆ

    ಮೃತ ಹೇಮಾವತಿ ಕತ್ತಿನ ಭಾಗ ಸೇರಿದಂತೆ ದೇಹದ ಮೇಲೆ ಹಲವು ಗಾಯದ ಗುರುತುಗಳು ಕಾಣಿಸಿದೆ. ಈ ಹಿನ್ನೆಲೆ ಪೊಲೀಸರು ಶರವಣ ಮತ್ತು ಗಿರೀಶ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: ಬೆಂಗಳೂರು | ಸರಣಿ ಕಳ್ಳತನ ಮಾಡಿ ಮಹಾ ಕುಂಭಮೇಳಕ್ಕೆ ಹೋಗಿದ್ದ ಇಬ್ಬರು ಅರೆಸ್ಟ್‌

  • ಬೆಂಗಳೂರಲ್ಲಿ ಡಬಲ್ ಮರ್ಡರ್ – ಪತ್ನಿ, ಆಕೆ ಪ್ರಿಯಕರನ ಕೊಲೆ ಮಾಡಿ ವ್ಯಕ್ತಿ ಆತ್ಮಹತ್ಯೆ

    ಬೆಂಗಳೂರಲ್ಲಿ ಡಬಲ್ ಮರ್ಡರ್ – ಪತ್ನಿ, ಆಕೆ ಪ್ರಿಯಕರನ ಕೊಲೆ ಮಾಡಿ ವ್ಯಕ್ತಿ ಆತ್ಮಹತ್ಯೆ

    ಬೆಂಗಳೂರು: ಶೀಲ ಶಂಕಿಸಿ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಬರ್ಬರವಾಗಿ ಹತ್ಯೆ ಮಾಡಿ ಬಳಿಕ ಪತಿ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ (Bengaluru) ಆರ್‌ಬಿಐ ಲೇಔಟ್ ಸಮೀಪದ ಸೋಮೇಶ್ವರ ಬಡಾವಣೆಯಲ್ಲಿ ನಡೆದಿದೆ.

    ನಿರ್ಮಾಣ ಹಂತದ ಕಟ್ಟಡದಲ್ಲಿ ಮರದ ತುಂಡಿನಿಂದ ಪತ್ನಿ ಹಾಗೂ ಆಕೆಯ ಪ್ರಿಯಕರನ ಮೇಲೆ ಹಲ್ಲೆ ನಡೆಸಿ, ಪತಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಡಬಲ್ ಮರ್ಡರ್ ಮಾಡಿದ ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.  ಇದನ್ನೂ ಓದಿ: ಹುಬ್ಬಳ್ಳಿಯಿಂದ ಅಹಮದಾಬಾದ್, ಚೆನ್ನೈಗೆ ವಿಮಾನ: ಕೇಂದ್ರ ಸಚಿವರ ಸಮಾಲೋಚನೆ

    ಕೋಣನಕುಂಟೆ (Konanakunte) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕೋಣನಕುಂಟೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಕಣ್ತೆರೆದ ನ್ಯಾಯದೇವತೆ – ಇಲ್ಲಿಯವರೆಗೂ ಕಣ್ಣಿಗೆ ಕಟ್ಟಿದ್ದ ಬಟ್ಟೆ ತೆರವುಗೊಳಿಸಿದ ಸುಪ್ರೀಂ ಕೋರ್ಟ್

  • ಪತ್ನಿಯ ಬೆರಳನ್ನೇ ಕಚ್ಚಿ ತಿಂದ ಪತಿ

    ಪತ್ನಿಯ ಬೆರಳನ್ನೇ ಕಚ್ಚಿ ತಿಂದ ಪತಿ

    ಬೆಂಗಳೂರು: ಜಗಳದ ವೇಳೆ ಪತ್ನಿಯ (Wife) ಎಡಗೈ ಬೆರಳನ್ನೇ (Finger) ಪತಿ (Husband) ಕಚ್ಚಿ ತಿಂದಿರುವ ಘಟನೆ ಬೆಂಗಳೂರಿನ (Bengaluru) ಕೋಣನಕುಂಟೆ (Konanakunte) ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಪುಷ್ಪಾ (40) ಎಂಬ ಮಹಿಳೆ 23 ವರ್ಷಗಳ ಹಿಂದೆ ವಿಜಯ್‌ಕುಮಾರ್ ಎಂಬಾತನನ್ನು ಮದುವೆಯಾಗಿದ್ದರು. ಮದುವೆಯಾದ ಕೆಲ ವರ್ಷಗಳಿಂದ ವಿಜಯ್‌ಕುಮಾರ್ ಪತ್ನಿಗೆ ಕಿರುಕುಳ ನೀಡುತ್ತಿದ್ದ ಎಂದು ಪತ್ನಿ ಆರೋಪಿಸಿದ್ದಾರೆ. ವಿವಾಹದ ಬಳಿಕ ಪತ್ನಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದು, ದಂಪತಿಗೆ ಒಬ್ಬ ಮಗನೂ ಇದ್ದಾನೆ. ಇದನ್ನೂ ಓದಿ: ಜಾಮೀನಿಗಾಗಿ ವಕೀಲನ ಕಿಡ್ನಾಪ್ – ರಾತ್ರಿ ಇಡೀ ಹಲ್ಲೆ ನಡೆಸಿ ಕ್ರೌರ್ಯ ಮೆರೆದ ರೌಡಿಶೀಟರ್

    ಪತಿಯ ಕಿರುಕುಳದಿಂದ ಬೇಸತ್ತ ಪತ್ನಿ ಬೇರೆಡೆ ಮನೆ ಮಾಡಿ ಪತಿಯಿಂದ ದೂರವಿದ್ದರು. ಜುಲೈ 28ನೇ ತಾರೀಕು ಪತಿ ವಿಜಯ್‌ಕುಮಾರ್ ಪತ್ನಿ ಇದ್ದ ಮನೆಗೆ ತೆರಳಿ ಜಗಳ ತೆಗೆದಿದ್ದ. ಈ ವೇಳೆ ಪತ್ನಿಯ ಬೆರಳನ್ನು ಪತಿ ಕಚ್ಚಿ ತಿಂದಿದ್ದು, ನಿನ್ನನ್ನು ಕೂಡಾ ಕೊಂದು ಇದೇ ರೀತಿ ತಿನ್ನುವುದಾಗಿ ಬೆದರಿಕೆ ಹಾಕಿದ್ದಾನೆ. ಅಲ್ಲದೇ ರೌಡಿಶೀಟರ್‌ಗಳನ್ನು ಬಿಟ್ಟು ಕೊಲೆ ಮಾಡಿಸುವುದಾಗಿ ಹೆದರಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ಕುರಿತು ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: 3 ಸಾವಿರಕ್ಕಾಗಿ ಯುವಕನನ್ನು ಹಾಡಹಗಲೇ ಚುಚ್ಚಿ ಚುಚ್ಚಿ ಕೊಂದ!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮನೆ ಬಿಟ್ಟು ನಾಪತ್ತೆಯಾದ ದಂಪತಿ – ಬೆಂಗಳೂರು ಪೊಲೀಸರಿಗೆ ಪೀಕಲಾಟ

    ಮನೆ ಬಿಟ್ಟು ನಾಪತ್ತೆಯಾದ ದಂಪತಿ – ಬೆಂಗಳೂರು ಪೊಲೀಸರಿಗೆ ಪೀಕಲಾಟ

    ಬೆಂಗಳೂರು: ಕ್ಷುಲ್ಲಕ ಕಾರಣಕ್ಕಾಗಿ ಮನೆ ಬಿಟ್ಟು ಹೋಗಿದ್ದ ದಂಪತಿಯನ್ನು ಠಾಣೆಗೆ ಕರೆಸಿ ರಾಜಿ ಮಾಡಿಸಿದ ಪ್ರಸಂಗ ಕೋಣನಕುಂಟೆ (Konanakunte) ಪೊಲೀಸ್ ಠಾಣೆಯಲ್ಲಿ ನಡೆದಿದೆ.

    ಹೆಚ್ಚಿನ ಸಮಯ ಫೋನಿನಲ್ಲಿ ಮಾತನಾಡುವುದನ್ನು ಪ್ರಶ್ನಿಸಿದ್ದಕ್ಕೆ ಗಲಾಟೆ ಮಾಡಿಕೊಂಡು ಪತ್ನಿ (Wife) ಮನೆ ಬಿಟ್ಟಿದ್ದಾಳೆ. ಆಕೆಯನ್ನು ಪತ್ತೆಮಾಡಿ ಪತಿಗೆ (Husband) ಒಪ್ಪಿಸಿದ ಎರಡೇ ದಿನದಲ್ಲಿ ಪತಿ ನಾಪತ್ತೆಯಾಗಿದ್ದಾನೆ. ಕೊನೆಗೆ ಇಬ್ಬರನ್ನೂ ಠಾಣೆಗೆ ಕರೆಸಿ ಪೊಲೀಸರು ರಾಜಿ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ ನಾಯಕ, ಮಾಜಿ ಸಚಿವ ಅಂಜನಮೂರ್ತಿ ನಿಧನ

    ಅಶೋಕ್ (30) ಎಂಬುವವರ ಪತ್ನಿ, ನಾನು ಮತ್ತೆ ಬರುವುದಿಲ್ಲ. ತಾಳ್ಮೆ ಕಳೆದುಕೊಂಡಿದ್ದೇನೆ. ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಮೆಸೇಜ್ ಕಳುಹಿಸಿ ಮನೆಯಿಂದ ನಾಪತ್ತೆಯಾಗಿದ್ದಳು. ಈ ಬಗ್ಗೆ ಮಾರನೇ ದಿನ ಮಾ.10 ರಂದು ಅಶೋಕ್ ಕೋಣನಕುಂಟೆ ಪೊಲೀಸ್ ಠಾಣೆಗೆ ಹಾಜರಾಗಿ ದೂರು ದಾಖಲಿಸಿದ್ದ. ನಂತರ ಮಾ.12 ರಂದು ಉತ್ತರ ಕನ್ನಡದ ಶಿರಸಿಯ (Sirasi) ಸ್ನೇಹಿತರ ಮನೆಯಲ್ಲಿರುವುದನ್ನು ಪೊಲೀಸರು ಪತ್ತೆಹಚ್ಚಿ ಗಂಡನೊಂದಿಗೆ ಕಳುಹಿಸಿದ್ದರು.

    ಇದಾದ ಎರಡು ದಿನಗಳ ಬಳಿಕ ಪತಿ ನಾಪತ್ತೆಯಾಗಿದ್ದು ಪತ್ನಿ ಸುಕನ್ಯಾಬಾಯಿ (25) ಮಾ.14 ರಂದು ಪೊಲೀಸ್ (Police) ಠಾಣೆಗೆ ಬಂದು ಪತಿ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದಳು. ಪೊಲೀಸರು ತಕ್ಷಣವೇ ಅಶೋಕ್‍ನನ್ನು ಪತ್ತೆ ಮಾಡಿದ್ದರು. ಇಬ್ಬರನ್ನೂ ಠಾಣೆಗೆ ಕರೆಸಿದ ಪೊಲೀಸರು ಬುದ್ಧಿವಾದ ಹೇಳಿ ಮನೆಗೆ ಕಳಿಸಿದ್ದಾರೆ. ಇದನ್ನೂ ಓದಿ: ಶ್ರವಣಬೆಳಗೊಳ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಜಿನೈಕ್ಯ

  • ಹೆಂಡತಿ, ಮಕ್ಕಳಿಗೆ ವಿಷವುಣಿಸಿ ಆತ್ಮಹತ್ಯೆಗೆ ಯತ್ನ

    ಹೆಂಡತಿ, ಮಕ್ಕಳಿಗೆ ವಿಷವುಣಿಸಿ ಆತ್ಮಹತ್ಯೆಗೆ ಯತ್ನ

    ಬೆಂಗಳೂರು: ಹೆಂಡತಿ ಹಾಗೂ ಮಕ್ಕಳಿಗೆ ವಿಷವುಣಿಸಿ (Poison) ಬಳಿಕ ತಾನೂ ಕೈ ಕುಯ್ದುಕೊಂಡು ವ್ಯಕ್ತಿ ಆತ್ಮಹತ್ಯೆಗೆ (Suicide) ಯತ್ನಿಸಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.

    ನಗರದ ಕೋಣನಕುಂಟೆಯ (Konanakunte) ವಡ್ಡರಪಾಳ್ಯದಲ್ಲಿ ಘಟನೆ ನಡೆದಿದ್ದು, ಅಲ್ಲಿನ ನಿವಾಸಿ ನಾಗೇಂದ್ರ ಪತ್ನಿ ಹಾಗೂ ಮಕ್ಕಳನ್ನು ಸಾಯಿಸಿ, ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ವ್ಯಕ್ತಿ. ಪತ್ನಿ ವಿಜಯ (28), ಮಕ್ಕಳಾದ ನಿಶಾ (7) ಹಾಗೂ ದೀಕ್ಷಾ (5) ಮೃತ ದುರ್ದೈವಿಗಳಾದರೆ ನಾಗೇಂದ್ರನ ಸ್ಥಿತಿ ಚಿಂತಾಜನಕವಾಗಿದೆ.

     

    ನಾಗೇಂದ್ರ ಕ್ಯಾನ್ಸರ್ ಪೀಡಿತನಾಗಿದ್ದು, ಬುಧವಾರ ರಾತ್ರಿ ತನ್ನ ಪತ್ನಿ ಹಾಗೂ ಮಕ್ಕಳಿಗೆ ಊಟದಲ್ಲಿ ತಿಗಣೆ ಔಷಧಿ ಹಾಗೂ ಇಲಿ ಔಷಧಿ ಬೆರೆಸಿದ್ದ. ಬಳಿಕ ವಿಷವನ್ನು ತಾನೂ ಕುಡಿದಿದ್ದ. ಬೆಳಗ್ಗೆ ವೇಳೆಗೆ ನಾಗೇಂದ್ರ ಪತ್ನಿ ಹಾಗೂ ಮಕ್ಕಳು ಸಾವನ್ನಪ್ಪಿದ್ದು, ತಾನು ಮಾತ್ರ ಬದುಕುಳಿದಿದ್ದ. ಇದರಿಂದ ನಾಗೇಂದ್ರ ಮತ್ತೆ ತನ್ನ ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇದನ್ನೂ ಓದಿ: ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆ

    ಘಟನೆ ಬಗ್ಗೆ ಮಾಹಿತಿ ನೀಡಿರುವ ಮೃತ ವಿಜಯ ತಾಯಿ ಸಾಕಮ್ಮ, ಕಳೆದ 8 ವರ್ಷಗಳಿಂದ ಇಬ್ಬರು ಸಂಸಾರ ನಡೆಸುತ್ತಿದ್ದರು. ನಾಗೇಂದ್ರನಿಗೆ ಕ್ಯಾನ್ಸರ್ ಇರುವ ವಿಚಾರ ಗೊತ್ತಾದ ಬಳಿಕ ಆತ ಕೆಲಸ ಬಿಟ್ಟಿದ್ದ. ಪತ್ನಿ ವಿಜಯ ಮೆಡಿಕಲ್ ಒಂದರಲ್ಲಿ ಕೆಲಸ ಮಾಡಿಕೊಂಡು ಸಂಸಾರ ಸಾಗಿಸುತ್ತಿದ್ದಳು. ಕೆಲಸ ಬಿಟ್ಟಿದ್ದ ನಾಗೇಂದ್ರ ಖರ್ಚಿಗೆ ಹಣ ನೀಡುವಂತೆ ಪತ್ನಿಗೆ ಪೀಡಿಸುತ್ತಿದ್ದ ಎಂದು ತಿಳಿಸಿದ್ದಾರೆ.

    3 ತಿಂಗಳ ಹಿಂದೆ ನಾಗೇಂದ್ರ ಮಗಳ ಕೈ ಸುಟ್ಟು ವಿಕೃತಿ ಮೆರೆದಿದ್ದ. ಪತಿಯ ಕಿರುಕುಳಕ್ಕೆ ರೋಸಿ ಹೋಗಿದ್ದ ವಿಜಯ ಈ ಹಿಂದೆ ಪೊಲೀಸರಿಗೆ ದೂರು ನೀಡಿದ್ದಳು. ಇತ್ತೀಚೆಗೆ ಆತನ ಕಿರುಕುಳ ಹೆಚ್ಚಾಗಿದ್ದು, ಬುಧವಾರ ರಾತ್ರಿ ಹೆಂಡತಿ ಮಕ್ಕಳಿಗೆ ವಿಷ ಹಾಕಿ ಕೊಲೆ ಮಾಡಿದ್ದಾನೆ ಎಂದು ವಿಜಯ ತಾಯಿ ಸಾಕಮ್ಮ ಆರೋಪಿಸಿದ್ದಾರೆ. ಇದನ್ನೂ ಓದಿ: ಎಷ್ಟೇ ಪೌಡರ್ ಹಾಕಿದ್ರೂ ನೀನು ಬೆಳ್ಳಗಾಗಲ್ಲ – ಪತ್ನಿಯ ಕತ್ತು ಹಿಸುಕಿ ಕೊಂದ ಪತಿ

    ಘಟನೆ ಬಗ್ಗೆ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹಗಳನ್ನು ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸದ್ಯ ನಾಗೇಂದ್ರನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

  • ನಟ ಪ್ರವೀಣ್ ತೇಜ ಕಾರಿನ ಗಾಜು ಪುಡಿಪುಡಿ : ಹಲ್ಲೆ ಮಾಡಿದವನ ವಿರುದ್ಧ ದೂರು

    ನಟ ಪ್ರವೀಣ್ ತೇಜ ಕಾರಿನ ಗಾಜು ಪುಡಿಪುಡಿ : ಹಲ್ಲೆ ಮಾಡಿದವನ ವಿರುದ್ಧ ದೂರು

    ಚೂರಿಕಟ್ಟೆ ಸೇರಿದಂತೆ ಕನ್ನಡದ ಅನೇಕ ಚಿತ್ರಗಳಲ್ಲಿ ನಾಯಕನಾಗಿ ನಟಿಸಿರುವ ಪ್ರವೀಣ್ ತೇಜ (Praveen Tej) ಮೇಲೆ ಹಲ್ಲೆಯಾದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ತಮ್ಮ ಮೇಲೆ ದಿಲೀಪ್ (Dileep) ಎನ್ನುವವ ಹಲ್ಲೆ ಮಾಡಿ, ದುಬಾರಿ ಕಾರಿನ ಗಾಜನ್ನು ಪುಡಿ ಪುಡಿ ಮಾಡಿದ್ದಾನೆ. ಜೊತೆಗೆ ತಮ್ಮ ಕುಟುಂಬಕ್ಕೆ ಪ್ರಾಣ ಬೆದರಿಕೆ ಹಾಕಿದ್ದಾನೆ ಎಂದು ಪ್ರವೀಣ್ ಕೋಣನಕುಂಟೆ  (Konanakunte) ಠಾಣೆಗೆ (Police) ದೂರು (Complaint) ನೀಡಿದ್ದಾರೆ. ದಿಲೀಪ್ ವಿರುದ್ಧ ಕ್ರಮ ತಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.

    ಫೆಬ್ರವರಿ 12 ರಂದು ಬನ್ನೇರುಘಟ್ಟ ರಸ್ತೆಯಲ್ಲಿರುವ ಗೆಳೆಯನ ಅಪಾರ್ಟ್ ಮೆಂಟ್ ನಲ್ಲಿ ನಡೆಯುತ್ತಿದ್ದ ಹುಟ್ಟು ಹಬ್ಬದಲ್ಲಿ ಪ್ರವೀಣ್ ಪಾಲ್ಗೊಂಡಿದ್ದಾರೆ. ಈ ಸಮಯದಲ್ಲಿ ದಿಲೀಪ್ ಎಂಬ ಪರಿಚಿತನೊಬ್ಬನಿಂದ ಗಲಾಟೆ ಶುರುವಾಗಿದೆ. ಪ್ರವೀಣ್ ಅವರ ವೃತ್ತಿಯ ಬಗ್ಗೆ ದಿಲೀಪ್ ಕೆಟ್ಟದ್ದಾಗಿ ಮಾತನಾಡಿದ್ದಾನಂತೆ. ಮಾತಿಗೆ ಮಾತು ಬೆಳೆದು ಅದು ಹೊಡೆದಾಟದ ಹಂತಕ್ಕೆ ತಲುಪಿದೆ. ಪ್ರವೀಣ್ ಮೇಲೆ ದೈಹಿಕ ಹಲ್ಲೆಯಾಗಿದ್ದು, ಕುತ್ತಿಗೆ ಭಾಗದಲ್ಲಿ ಗಾಯಗಳಾಗಿವೆ ಎಂದು ದೂರಿನಲ್ಲಿ ಬರೆಯಲಾಗಿದೆ. ಇದನ್ನೂ ಓದಿ: 150 ಕೋಟಿ ಮೌಲ್ಯದ ಹೊಸ ಮನೆಯನ್ನು ಪೋಷಕರಿಗೆ ಗಿಫ್ಟ್ ನೀಡಿದ ಧನುಷ್

    ಘಟನೆಯಿಂದ ನೊಂದಿದ್ದ ಪ್ರವೀಣ್ ಆ ರಾತ್ರಿ ಅದೇ ಅಪಾರ್ಟ್ ಮೆಂಟ್ ನಲ್ಲಿ ಉಳಿದುಕೊಂಡಿದ್ದಾರೆ. ಬೆಳಗ್ಗೆ ಮನೆಗೆ ಹೊರಡಲು ಕಾರು ಬಳಿ ಬಂದರೆ ಕಾರಿನ ಗ್ಲಾಸ್ ಗಳನ್ನು ಹೊಡೆದು ಹಾಕಲಾಗಿತ್ತು. ಸಿಸಿ ಟಿವಿ ಪರಿಶೀಲನೆ ಮಾಡಿದಾಗ ದಿಲೀಪ್ ಅವರೇ ಕಾರಿನ ಗಾಜು ಒಡೆದಿದ್ದಾರೆ ಎನ್ನುವುದು ಗೊತ್ತಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

    ‘ಹೊಂದಿಸಿ ಬರೆಯಿರಿ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಪ್ರವೀಣ್ ತೇಜ್, ಈವರೆಗೂ ಯಾವುದೇ ಗಲಾಟೆ ಅಥವಾ ಗಾಸಿಪ್ ಗಳಲ್ಲಿ ಕಾಣಿಸಿಕೊಂಡಿಲ್ಲ. ಇದೇ ಮೊದಲ ಬಾರಿಗೆ ಅವರು ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸ್, ಸೂಕ್ತ ಕ್ರಮದ ಭರವಸೆ ನೀಡಿದ್ದಾರಂತೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k