Tag: Komaram Bheem

  • ರಾಮರಾಜು ಫಾರ್ ಭೀಮ್- ‘ಅವನು ಭೂ ತಾಯಿ ಎದೆ ಹಾಲು ಕುಡಿದ ಹೆಮ್ಮೆಯ ಕಂದ’

    ರಾಮರಾಜು ಫಾರ್ ಭೀಮ್- ‘ಅವನು ಭೂ ತಾಯಿ ಎದೆ ಹಾಲು ಕುಡಿದ ಹೆಮ್ಮೆಯ ಕಂದ’

    – ನನ್ನ ತಮ್ಮ, ಗೋಂಡು ಹೆಬ್ಬುಲಿ ಕೋಮರಂ ಭೀಮ್

    ಹೈದರಾಬಾದ್: ಟಾಲಿವುಡ್ ಸ್ಟಾರ್ ನಿರ್ದೇಶಕ ರಾಜಮೌಳಿ ಮಹತ್ವಾಕಾಂಕ್ಷೆಯ ‘ರೌದ್ರ ರಣ ರುಧಿರ’ ಸಿನಿಮಾದ ಮತ್ತೊಂದು ಟೀಸರ್ ಬಿಡುಗಡೆಯಾಗಿದ್ದು, ಕನ್ನಡದ ಟೀಸರ್ ಗೆ ದನಿ ನೀಡುವ ಮೂಲಕ ನಟ ರಾಮ್ ಚರಣ್ ಅಭಿಮಾನಿಗಳ ಮನಗೆದ್ದಿದ್ದಾರೆ.

    ‘ಆರ್‍ಆರ್‍ಆರ್’ ಸಿನಿಮಾ ಬಗ್ಗೆ ವಿಶ್ವಾದ್ಯಂತ ಬಹುದೊಡ್ಡ ನಿರೀಕ್ಷೆ ಇದ್ದು, ಸಿನಿಮಾದಲ್ಲಿ ಅಲ್ಲೂರಿ ಸೀತಾರಾಮರಾಜು ಪಾತ್ರದಲ್ಲಿ ರಾಮ್‍ಚರಣ್, ಗಿರಿಜನರ ಹೋರಾಟಗಾರ ಕೋಮರಂ ಭೀಮ್ ಪಾತ್ರದಲ್ಲಿ ಜೂನಿಯರ್ ಎನ್‍ಟಿಆರ್ ನಟಿಸುತ್ತಿದ್ದಾರೆ. ಇಬ್ಬರು ಬೇರೆ ಬೇರೆ ಪ್ರದೇಶಗಳಿಗೆ ಸೇರಿದ್ದರು, ಇಬ್ಬರೂ ವೀರನ್ನು ಒಂದು ಮಾಡಿ ಐತಿಹಾಸಿಕ ಸಿನಿಮಾವಾಗಿ ತೆರೆಗೆ ತರಲು ನಿರ್ದೇಶಕರು ಶ್ರಮಿಸಿದ್ದಾರೆ.

    ಮಾರ್ಚ್ 27 ರಂದು ನಟ ರಾಮ್ ಚರಣ್ ಅವರ ಹುಟ್ಟುಹಬ್ಬದ ವಿಶೇಷತೆಯಾಗಿ ‘ಭೀಮ್ ಫಾರ್ ರಾಮರಾಜು’ ಎಂದು ರಾಮ್ ಚರಣ್ ಅವರ ಟೀಸರ್ ಬಿಡುಗಡೆ ಮಾಡಲಾಗಿತ್ತು. ಕೊರೊನಾ ಲಾಕ್‍ಡೌನ್ ಕಾರಣದಿಂದ ಎನ್‍ಟಿಆರ್ ಟೀಸರ್ ಬಿಡುಗಡೆ ತಡವಾಗಿತ್ತು. ಮೇ 20 ರಂದು ಎನ್‍ಟಿಆರ್ ಟೀಸರ್ ಬಿಡುಗಡೆಯಾಗಲಿದೆ ಎಂದು ಅಭಿಮಾನಿಗಳು ನಿರೀಕ್ಷೆ ಮಾಡಿದ್ದರು. ಆದರೆ ಅದು ಸಾಧ್ಯವಾಗರಿಲಿಲ್ಲ. ಸದ್ಯ ಕೋಮರಂ ಭೀಮ್ ಜಯಂತಿ ವಿಶೇಷವಾಗಿ ‘ರಾಮ್‍ರಾಜು ಫಾರ್ ಭೀಮ್’ ಟೀಸರ್ ಬಿಡುಗಡೆ ಮಾಡಲಾಗಿದೆ.

    1 ನಿಮಿಷ 32 ಸೆಕೆಂಡ್‍ಗಳ ಟೀಸರ್ ನಲ್ಲಿ ಎನ್‍ಟಿಆರ್ ಆ್ಯಕ್ಷನ್‍ಗೆ ರಾಮ್‍ಚರಣ್ ವಾಯ್ಸ್ ನೀಡಿದ್ದಾರೆ. ‘ಅವನು ಎದರು ನಿಂತ್ರೆ ಸಮುದ್ರಗಳೇ ಹೆದರಿಕೊಳ್ತವೆ’, ‘ಎದ್ದು ನಿಂತ್ರೆ ಸಾಮ್ರಾಜ್ಯಗಲೇ ತಲೆಬಾಗುತ್ತವೆ’ ಎಂಬ ಡೈಲಾಗ್‍ಗಳು ಕೇಳುತ್ತಿದ್ದರೆ ರೋಮಾಂಚನದ ಅನುಭವವಾಗುತ್ತದೆ. ಸಿನಿಮಾಗೆ ಡಿವಿವಿ ದಾನಯ್ಯ 400 ಕೋಟಿ ರೂ. ಅಧಿಕ ಬಜೆಟ್‍ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಆಲಿಯಾ ಭಟ್, ಅಜಯ್ ದೇವ್‍ಗನ್, ಸಮುದ್ರ ಖಣಿ, ಶ್ರಿಯಾ ಸರಣ್ ಸೇರಿದಂತೆ ಮುಂತಾದವರು ನಟಿಸುತ್ತಿದ್ದಾರೆ.