Tag: Komal

  • ಕೋಮಲ್ ನಟನೆಯ ‘ಉಂಡೆನಾಮ’ ಚಿತ್ರದ ಟ್ರೈಲರ್ ರಿಲೀಸ್ ಮಾಡಿದ ಜಗ್ಗೇಶ್

    ಕೋಮಲ್ ನಟನೆಯ ‘ಉಂಡೆನಾಮ’ ಚಿತ್ರದ ಟ್ರೈಲರ್ ರಿಲೀಸ್ ಮಾಡಿದ ಜಗ್ಗೇಶ್

    ಹಳ ವರ್ಷಗಳ ನಂತರ ಕೋಮಲ್ ಕುಮಾರ್ (Komal) ನಾಯಕರಾಗಿ ನಟಿಸಿರುವ ‘ಉಂಡೆನಾಮ’ (Undenaama) ಚಿತ್ರದ ಟ್ರೇಲರ್  (Trailer)ಇತ್ತೀಚೆಗೆ ಬಿಡುಗಡೆಯಾಯಿತು. ನವರಸ ನಾಯಕ ಜಗ್ಗೇಶ್ (Jaggesh) ಟ್ರೇಲರ್ ಬಿಡುಗಡೆ ಮಾಡಿದರು. ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

    ಟ್ರೇಲರ್ ಚೆನ್ನಾಗಿದೆ. ನನ್ನ ತಮ್ಮ ಕೋಮಲ್ , ಬಹಳವರ್ಷಗಳ ನಂತರ ನಟಿಸಿರುವ ಚಿತ್ರವಿದು. “ಕೋಮಲ್ ಕಾಮಿಡಿ ಪಾತ್ರಗಳನ್ನು ನೋಡಿದಾಗ, ಎಷ್ಟೋ ಸಲ ನಾನು ಅಂದುಕೊಂಡಿದ್ದೀನಿ ಇವನ ಹಾಗೆ ನಾನು ಕಾಮಿಡಿ ಕಲಿಯಬೇಕು” ಅಂತ. ಅಷ್ಟು ಉತ್ತಮ ಕಲಾವಿದ ಕೋಮಲ್. ನಿರ್ದೇಶಕರು ಲಾಕ್ ಡೌನ್ ಸನ್ನಿವೇಶವನ್ನಿಟ್ಟುಕೊಂಡು ಹಾಸ್ಯ ಚಿತ್ರ ಮಾಡಿದ್ದಾರೆ. ನಿರ್ಮಾಪಕರು ಸೇರಿದಂತೆ ಇಡೀ ತಂಡಕ್ಕೆ ಒಳ್ಳೆಯದಾಗಲಿ. ಚಿತ್ರ ಯಶಸ್ವಿಯಾಗಲಿ ಎಂದು ಜಗ್ಗೇಶ್ ಹಾರೈಸಿದರು.

    ಬಹಳ ದಿನಗಳ ನಂತರ ಈ ಚಿತ್ರದಲ್ಲಿ ಅಭಿನಯಿಸಿದ್ದೇನೆ. ನಿರ್ದೇಶಕ ರಾಜಶೇಖರ್ ಅವರು ಹೇಳಿದ ಕಥೆ ಇಷ್ಟವಾಯಿತು. ನನ್ನ ಜೊತೆ ನಟಿಸಿರುವ ತಬಲನಾಣಿ, ಹರೀಶ್ ರಾಜ್ ಸೇರಿದಂತೆ ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ. ನೋಡಿ ಹಾರೈಸಿ ಎಂದರು ನಾಯಕ ಕೋಮಲ್ ಕುಮಾರ್. ಇದನ್ನೂ ಓದಿ: ಕರಣ್ ಜೋಹಾರ್ ವಿರುದ್ಧ ಮತ್ತೆ ಕೆಂಡಕಾರಿದ ಕಂಗನಾ ರಣಾವತ್

    ಮೊದಲ ಲಾಕ್ ಡೌನ್ ನಲ್ಲಿ ಕಥೆ ಬರೆದೆ. ಆನಂತರ ನಿರ್ಮಾಪಕ ನಂದಕಿಶೋರ್ ಅವರ ಬಳಿ ಕಥೆ ಹೇಳಿದಾಗ, ಅವರು ಈ ಚಿತ್ರವನ್ನು ಕೋಮಲ್ ಅವರು ಮಾಡಬೇಕು ಎಂದರು. ನಾನು ಕೋಮಲ್ ಅವರಿಗಾಗಿಯೇ ಈ ಕಥೆ ಮಾಡಿದೆ. ಆದರೆ ಅವರು ನಟಿಸಲು ಒಪ್ಪುತ್ತಾರೊ? ಇಲ್ಲವೊ? ಎಂಬ ಆತಂಕವಿತ್ತು. ಕಥೆ ಕೇಳಿದ ಕೋಮಲ್ ಅವರು, ಈ ಕಥೆ ಚೆನ್ನಾಗಿದೆ. ನಾನಲ್ಲ. ಯಾರು ಮಾಡಿದರೂ ಈ ಚಿತ್ರ ಯಶಸ್ವಿಯಾಗುತ್ತದೆ ಎಂದರು. ಅದು ಅವರ ದೊಡ್ಡ ಗುಣ. ಸಹಕಾರ ನೀಡಿದ ನಿರ್ಮಾಪಕರಿಗೆ, ತಂತ್ರಜ್ಞರಿಗೆ ಹಾಗೂ ಕಲಾವಿದರಿಗೆ ನನ್ನ ಅಭಿನಂದನೆ ಎಂದರು ನಿರ್ದೇಶಕ ಕೆ.ಎಲ್ ರಾಜಶೇಖರ್.

    ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಜಗ್ಗೇಶ್ ಅವರಿಗೆ ಧನ್ಯವಾದ. ಇಡೀ ತಂಡದ ಶ್ರಮದಿಂದ ‘ಉಂಡೆನಾಮ’ ಚಿತ್ರ ಚೆನ್ನಾಗಿ ಬಂದಿದೆ. ನೋಡಿ ಪ್ರೋತ್ಸಾಹಿಸಿ ಎಂದರು ನಿರ್ಮಾಪಕರಾದ ಟಿ.ಆರ್ ಚಂದ್ರಶೇಖರ್ ಹಾಗೂ ಸಿ.ನಂದಕಿಶೋರ್. ಚಿತ್ರದಲ್ಲಿ ನಟಿಸಿರುವ ಹರೀಶ್ ರಾಜ್, ತಬಲನಾಣಿ, ಅಪೂರ್ವ ಹಾಗೂ ಸಂಗೀತ ನಿರ್ದೇಶಕ ಶ್ರೀಧರ್ ವಿ ಸಂಭ್ರಮ್ ಚಿತ್ರದ ಕುರಿತು ಮಾತನಾಡಿದರು.

  • ಕೋಮಲ್ ನಟನೆಯ ‘ಯಲಾಕುನ್ನಿ’ ಚಿತ್ರಕ್ಕೆ ಚಾಲನೆ

    ಕೋಮಲ್ ನಟನೆಯ ‘ಯಲಾಕುನ್ನಿ’ ಚಿತ್ರಕ್ಕೆ ಚಾಲನೆ

    ಸೆನ್ಸೇಷನಲ್ ಸ್ಟಾರ್ ಕೋಮಲ್ ಕುಮಾರ್ (Komal) ಮೊಟ್ಟಮೊದಲ ಬಾರಿಗೆ ದ್ವಿಪಾತ್ರದಲ್ಲಿ  ನಟಿಸುತ್ತಿರುವ ‘ಯಲಾ ಕುನ್ನಿ’ (Yalakunni) ಚಿತ್ರದ ಮುಹೂರ್ತ ಸಮಾರಂಭ ವಿಜಯನಗರದ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನೆರವೇರಿತು. ಚಿತ್ರಕ್ಕೆ  ಕನ್ನಡ ಚಿತ್ರರಂಗದ ದಂತಕಥೆ ವಜ್ರಮುನಿ ರವರ ಕುಟುಂಬದ ಎಲ್ಲ ಸದಸ್ಯರು ಆಗಮಿಸಿ ಚಿತ್ರಕ್ಕೆ ಶುಭ ಕೋರಿದ್ದು ವಿಶೇಷವಾಗಿತ್ತು. ವಜ್ರಮುನಿರವರ ಪತ್ನಿ  ಲಕ್ಷ್ಮೀ ವಜ್ರಮುನಿ (Lakshmi Vajramuni) ಕ್ಯಾಮರಾ ಚಾಲನೆ ಮಾಡಿದರೆ, ಮೊದಲ ಸನ್ನಿವೇಶಕ್ಕೆ  ವಜ್ರಮುನಿ ಅವರ ಹಿರಿಯ ಪುತ್ರ ವಿಶ್ವನಾಥ್ ಆರಂಭಫಲಕ ತೋರಿದರು, ವಜ್ರಮುನಿ ಯವರ ಕಿರಿಯ ಪುತ್ರ ಜಗದೀಶ್ ವಜ್ರಮುನಿ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಆನಂತರ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಚಿತ್ರದ ಕುರಿತು ಮಾತನಾಡಿದರು. ‘ಯಲಾಕುನ್ನಿ’ ಖ್ಯಾತ ನಟ ವಜ್ರಮುನಿ ಅವರ ಚಿತ್ರಗಳಲ್ಲಿ ಹೆಚ್ಚಾಗಿ ಬಳಸುತ್ತಿದ್ದ ಪದ. ಈಗ ಆ ಪದವೇ ಚಿತ್ರದ ಶೀರ್ಷಿಕೆಯಾಗಿದೆ. ‘ಮೇರಾ ನಾಮ್ ವಜ್ರಮುನಿ’ ಎಂಬ ಅಡಿಬರಹ ಕೂಡ ಇದೆ.

    ನಾನು ಮೊದಲ ಬಾರಿಗೆ ದ್ವಿಪಾತ್ರದಲ್ಲಿ ಅಭಿನಯಿಸುತ್ತಿದ್ದೇನೆ. ನಿರ್ದೇಶಕ ಪ್ರದೀಪ್ ಬಹಳ ಚೆನ್ನಾಗಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಚಿತ್ರದ ಮುಕ್ಕಾಲು ಭಾಗ 1981 ರ ಕಾಲಘಟ್ಟದಲ್ಲಿ ನಡೆಯುವ ಕಥೆ. ಶ್ರೀರಂಗಪಟ್ಟಣ, ಮೈಸೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಗಂಜಾಂ ಬಳಿ ಪುರಾತನ ದೇವಾಲಯವಿದ್ದು, ಆ ದೇವಾಲಯದಲ್ಲೇ ಹೆಚ್ಚಿನ ಚಿತ್ರೀಕರಣವಾಗಲಿದೆ. ಚಿತ್ರಕ್ಕಾಗಿ ವಿಶೇಷ ಸೆಟ್ ಸಹ ಹಾಕಲಾಗುವುದು ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಬೆಂಬಲವಿರಲಿ ಎಂದು ನಾಯಕ ಕೋಮಲ್ ಕುಮಾರ್ ತಿಳಿಸಿದರು. ಇದನ್ನೂ ಓದಿ:ಹೊಸ ಫೋಟೋಶೂಟ್‌ನಿಂದ ಇಂಟರ್‌ನೆಟ್‌ ಬೆಂಕಿ ಹಚ್ಚಿದ ರಶ್ಮಿಕಾ ಮಂದಣ್ಣ

    ನಾನು ಕನ್ನಡದ ಹಿರಿಯ ನಿರ್ದೇಶಕರ ಬಳಿ ಕೆಲಸ ಮಾಡಿದ್ದೀನಿ . ಇದು ನನ್ನ ನಿರ್ದೇಶನದ ಮೊದಲ ಚಿತ್ರ. ಈ ಹಿಂದೆ ಸಡಗರ ಚಿತ್ರ ನಿರ್ಮಿಸಿದ್ದ ಮಹೇಶ್ ಗೌಡ್ರು ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.  ಮತ್ತೊಂದು ವಿಶೇಷವೆಂದರೆ  ವಜ್ರಮುನಿ ಯವರ ಮೊಮ್ಮಗ ಆಕರ್ಶ್ ಈ ಚಿತ್ರದ ಮೂಲಕ  ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಹೊಸ ಪ್ರತಿಭೆ ನಿಸರ್ಗ ಈ ಚಿತ್ರದ ನಾಯಕಿ.‌ ಯತಿರಾಜ್ ಜಗ್ಗೇಶ್, ಫ್ರೆಂಚ್ ಬಿರಿಯಾನಿ ಮಹಾಂತೇಶ್, ಜಯಸಿಂಹ ಮುಸುರಿ, ಅರವಿಂದ್ ರಾವ್, ಮಂಜು ಪಾವಗಡ, ರಾಜು ತಾಳಿಕೋಟೆ, ಶಿವರಾಜ್, ಬಿರಾದರ್, ವೆಂಕಟೇಶ್ ಪ್ರಸಾದ್, ಉಮೇಶ್ ಸಕ್ಕರೆನಾಡು, ಅನಿಲ್ ಯಾದವ್ ಇನ್ನು ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಧರ್ಮವಿಶ್ ಸಂಗೀತ ‌ನಿರ್ದೇಶನ ಹಾಗೂ ಉದಯ್ ಲೀಲಾ ಅವರ ಛಾಯಾಗ್ರಹಣ, ದೀಪು ಎಸ್. ಕುಮಾರ್ ಸಂಕಲನ , ವಿನೋದ್ ರವರ ಸಾಹಸ  ಈ ಚಿತ್ರಕ್ಕಿದೆ. ಈ ಚಿತ್ರದಲ್ಲಿ ಕೋಮಲ್ ಕುಮಾರ್  ವಜ್ರಮುನಿಯಾದರೆ, ಅವರ ಬಲಗೈ ಬಂಟನಾಗಿ ಜಯಸಿಂಹ ಮುಸುರಿ ಕನೆಕ್ಷನ್ ಕಾಳಪ್ಪನಾಗಿ  ಕಾಣಿಸಿ ಕೊಳ್ಳಲಿದ್ದಾರೆ. ಚಿತ್ರದ ಹಿನ್ನಲೆ  ಗೋವಿನ ಹಾಡಿನಲ್ಲಿ ಬರುವ ವ್ಯಾಘ್ರ ಹುಲಿ ಅರ್ಭುತ ಮತ್ತು ಸತ್ಯವೇ ಭಗವಂತನೆಂದ ಪುಣ್ಯಕೋಟಿಯ ಕಥೆಯಿಂದ ಪ್ರೇರಿತವಾಗಿದೆ.  ಏಪ್ರಿಲ್ ನಲ್ಲಿ ಚಿತ್ರೀಕರಣ ಆರಂಭವಾಗಲಿದೆ ಎಂದು ನಿರ್ದೇಶಕ ಪ್ರದೀಪ್ ತಿಳಿಸಿದರು.

    ಇದು ನನ್ನ ಎರಡನೇ ನಿರ್ಮಾಣದ ಚಿತ್ರ . ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಮಹೇಶ್ ಗೌಡ್ರು. ನಾಯಕಿ ನಿಸರ್ಗ ಹಾಗೂ ಚಿತ್ರದಲ್ಲಿ ನಟಿಸುತ್ತಿರುವ ಯತಿರಾಜ್, ಮಾಹಂತೇಶ್, ಆಕರ್ಶ್,‌ ಅರವಿಂದ್ ರಾವ್, ಮಂಜು ಪಾವಗಡ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಛಾಯಾಗ್ರಾಹಕ ಉದಯ್ ಲೀಲಾ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ನನ್ನ ಮೊಮ್ಮಗ ಆಕರ್ಶ್ ಈ ಚಿತ್ರದಲ್ಲಿ ಕೋಮಲ್ ಅವರ ಮಗನ   ಪಾತ್ರದಲ್ಲಿ ಅಭಿನಯಿಸುತ್ತಿದ್ದಾನೆ. ಅವನಿಗೆ ಹಾಗೂ ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದರು ಶ್ರೀಮತಿ ಲಕ್ಷ್ಮೀ ವಜ್ರಮುನಿ.

  • ‘ಉಂಡೆನಾಮ’ ಹಾಕೋಕೆ ಬರ್ತಿದ್ದಾರೆ ನಟ ಕೋಮಲ್

    ‘ಉಂಡೆನಾಮ’ ಹಾಕೋಕೆ ಬರ್ತಿದ್ದಾರೆ ನಟ ಕೋಮಲ್

    ಕೋಮಲ್ (Komal) ಮತ್ತೆ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಬೆನ್ನಲ್ಲೇ ಈಗಾಗಲೇ ಎರಡು ಚಿತ್ರಗಳು ಮುಹೂರ್ತವಾಗಿ ಚಿತ್ರೀಕರಣ ಆರಂಭಿಸಿವೆ. ಮತ್ತೊಂದು ಸಿನಿಮಾ ‘ಉಂಡೆನಾಮ’ ರಿಲೀಸ್ ಗೆ ರೆಡಿಯಾಗಿದೆ. ಖ್ಯಾತ ಸಂಭಾಷಣೆಗಾರ, ರಾಬರ್ಟ್ ಖ್ಯಾತಿಯ ರಾಜಶೇಖರ್ (Rajasekhar) ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ಪಕ್ಕಾ ಕಾಮಿಡಿ ಚಿತ್ರ ಇದಾಗಿದೆ.

    ತುಂಬಾ ದಿನಗಳ ನಂತರ ನಗುವಿನ ಕಚುಗುಳಿ ಇಡುವುದಕ್ಕೆ ನಟ ಕೋಮಲ್ ಕುಮಾರ್ ಉಂಡೆನಾಮ (Undenaama) ಹಾಕ್ಕೊಂಡು ಬರ್ತಾ ಇದಾರೆ. ಈ ಚಿತ್ರದ ಶೀರ್ಷಿಕೆ ಯನ್ನು ಸ್ಯಾಂಡಲ್ ವುಡ್ ನ ಸೆಲೆಬ್ರಿಟಿಗಳು ಚಿತ್ರದ ಶೀರ್ಷಿಕೆ ಹೇಳುವುದರ ಮುಖಾಂತರ ವಿನೂತನವಾಗಿ ಅನಾವರಣ ಮಾಡಿದ್ದಾರೆ. ಇದನ್ನೂ ಓದಿ: ರಜನಿಕಾಂತ್ ಪುತ್ರಿ ಮನೆಯಲ್ಲಿ ಕಳ್ಳತನ: ಅಪಾರ ಚಿನ್ನಾಭರಣ ದೋಚಿದ ಕಳ್ಳರು

    ಹೆಸರಿನಲ್ಲೇ ಹಾಸ್ಯ ಹೊಂದಿರುವ ಉಂಡೆನಾಮ ಸಿನಿಮಾ ಮುಂದಿನ ತಿಂಗಳು ರಾಜ್ಯಾದ್ಯಂತ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಮುಖ್ಯ ಭೂಮಿಕೆಯಲ್ಲಿ ಕೋಮಲ್ ಅವರ ಜೊತೆ ಹರೀಶ್ ರಾಜ್ (Harish Raj) , ಧನ್ಯ ಬಾಲಕೃಷ್ಣ (Dhanya Balakrishna), ತಬಲಾನಾಣಿ, ಅಪೂರ್ವ, ವೈಷ್ಣವಿ, ತನಿಷ ಕುಪ್ಪಂಡ, ಬ್ಯಾಕ್ ಜನಾರ್ಧನ್ ಸೇರಿದಂತೆ ಹಲವು ಕಲಾವಿದರು ತಾರಾಗಣದಲ್ಲಿ ಇದ್ದಾರೆ.

    ಈ ಚಿತ್ರವು ಎನ್.ಕೆ. ಸ್ಟುಡಿಯೋಸ್ ನ ಅಡಿಯಲ್ಲಿ ಸಿ.ನಂದ ಕಿಶೋರ್ ಅವರು ನಿರ್ಮಿಸಿದ್ದಾರೆ. ಮಜಾಟಾಕೀಸ್, ರಾಬರ್ಟ, ಖ್ಯಾತಿಯ ಸಂಭಾಷಾಣೆಗಾರ ಕೆ.ಎಲ್.ರಾಜಶೇಖರ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಶ್ರೀಧರ್ ಸಂಭ್ರಮ ಅವರ ಸಂಗೀತ, ನವೀನ್ ಕುಮಾರ್ ಛಾಯಾಗ್ರಾಹಣ ಹಾಗೂ ಕೆ.ಎಮ್.ಪ್ರಕಾಶ್ ಸಂಕಲನದಲ್ಲಿ ಚಿತ್ರ ಮೂಡಿ ಬಂದಿದೆ.

  • ಕೋಮಲ್ ಜೊತೆ ಡ್ಯುಯೆಟ್ ಹಾಡಲು ಬಂದ ಕರಾವಳಿ ಹುಡುಗಿ

    ಕೋಮಲ್ ಜೊತೆ ಡ್ಯುಯೆಟ್ ಹಾಡಲು ಬಂದ ಕರಾವಳಿ ಹುಡುಗಿ

    ಕೋಮಲ್ (Komal) ಆಫ್ಟರ್ ಲಾಂಗ್ ಬ್ರೇಕ್ ಬಳಿಕ ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲೂ ಬ್ಯುಸಿಯಾಗುತ್ತಿದ್ದಾರೆ. ಶ್ರೀನಿವಾಸ್ ಮಂಡ್ಯ (Srinivas Mandya) ನಿರ್ದೇಶನದಲ್ಲಿ ಮೂಡಿ ಬರ್ತಿರೋ ‘ರೋಲೆಕ್ಸ್ ಕೋಮಲ್’ (Rolex) ಚಿತ್ರಕ್ಕೆ ಕೋಮಲ್ ಬಣ್ಣ ಹಚ್ಚುತ್ತಿದ್ದಾರೆ. ಫೋಟೋಶೂಟ್ ಮೂಲಕ ಗಮನ ಸೆಳೆದ ಈ ಚಿತ್ರ ಜನವರಿ 26ರಂದು ಸೆಟ್ಟೇರುತ್ತಿದೆ. ಅದಕ್ಕೂ ಮುನ್ನ ಚಿತ್ರತಂಡದಿಂದ ಹೊಸದೊಂದು ಅಪ್ಡೇಟ್ ಹೊರಬಿದ್ದಿದೆ.

    ‘ರೋಲೆಕ್ಸ್ ಕೋಮಲ್’ ಚಿತ್ರಕ್ಕೆ ನಾಯಕಿ ಹುಡುಕಾಟದಲ್ಲಿದ್ದ ಚಿತ್ರತಂಡಕ್ಕೆ ಕರಾವಳಿ ಬೆಡಗಿ ಸೋನಾಲ್ ಮೊಂಟೆರೋ (Sonal Montero) ಜೊತೆಯಾಗಿದ್ದಾರೆ. ಚಿತ್ರದ ಕಥೆ ಕೇಳಿ ಇಂಪ್ರೆಸ್ ಆಗಿರೋ ಸೋನಾಲ್ ಕೋಮಲ್ ಜೊತೆ ನಟಿಸೋಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಸ್ಯಾಂಡಲ್ ವುಡ್ ಅಂಗಳದಲ್ಲಿ ಸಖತ್ ಬ್ಯುಸಿಯಾಗಿರೋ ಸೋನಾಲ್ ಮೊಂಟೆರೋ ಹಲವು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಇದೀಗ ‘ರೋಲೆಕ್ಸ್ ಕೋಮಲ್’ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದು ‘ರೋಲೆಕ್ಸ್ ಕೋಮಲ್’ ಚಿತ್ರತಂಡ ಸೇರಿಕೊಂಡಿದ್ದಾರೆ. ಇದನ್ನೂ ಓದಿ: `ಧಮಾಕ’ ಸಕ್ಸಸ್ ನಂತರ ಕನ್ನಡತಿ ಶ್ರೀಲೀಲಾಗೆ ತೆಲುಗಿನಲ್ಲಿ ಡಿಮ್ಯಾಂಡ್

    ಕಂಟೆಂಟ್ ಬೇಸ್ಡ್ ಸಿನಿಮಾವಾಗಿರೋ ಈ ಚಿತ್ರ ನಿರ್ದೇಶಕ ಶ್ರೀನಿವಾಸ್ ಮಂಡ್ಯ ಅವರ ಎರಡನೇ ಸಿನಿಮಾ ವೆಂಚರ್. ಈ ಹಿಂದೆ ‘ಬಿಲ್ ಗೇಟ್ಸ್’ ಸಿನಿಮಾ ನಿರ್ದೇಶನ ಮಾಡಿದ್ದ ಶ್ರೀನಿವಾಸ್ ಮಂಡ್ಯ ಈ ಬಾರಿ  ಇಂಟ್ರಸ್ಟಿಂಗ್ ಕಥೆ ಹೊತ್ತು ಬಂದಿದ್ದಾರೆ. ಜನವರಿ 26ರಂದು ಸಿನಿಮಾ ಸೆಟ್ಟೇರಲಿದ್ದು 27ರಿಂದ ಚಿತ್ರೀಕರಣ ಆರಂಭವಾಗಲಿದೆ ಎಂದು ಶ್ರೀನಿವಾಸ್ ಮಂಡ್ಯ ತಿಳಿಸಿದ್ದಾರೆ.

    ಫೀನಿಕ್ಸ್ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ನಡಿ ಅನಿಲ್ ಕುಮಾರ್. ಎಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ರಂಗಾಯಣ ರಘು, ಶೋಭರಾಜ್, ಅರವಿಂದ್, ಅಪೂರ್ವ ಸೇರಿದಂತೆ ಹಲವು ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ. ರಾಕೇಶ್ ಸಿ ತಿಲಕ್ ಕ್ಯಾಮೆರಾ ವರ್ಕ್, ಜೆಸ್ಸಿ ಗಿಫ್ಟ್ ಸಂಗೀತ ನಿರ್ದೇಶನ, ಅರವಿಂದ್ ರಾಜ್ ಸಂಕಲನ ಚಿತ್ರಕ್ಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕೋಮಲ್ ನಟನೆಯ ‘ಕಾಲಾಯ ನಮಃ’ ಅಡ್ಡದಲ್ಲಿ ಕಾಣಿಸಿಕೊಂಡ ಪ್ರಕಾಶ್ ರೈ

    ಕೋಮಲ್ ನಟನೆಯ ‘ಕಾಲಾಯ ನಮಃ’ ಅಡ್ಡದಲ್ಲಿ ಕಾಣಿಸಿಕೊಂಡ ಪ್ರಕಾಶ್ ರೈ

    ನಪ್ರಿಯ ಹಾಸ್ಯನಟ ಕೋಮಲ್ ಕುಮಾರ್, ಐದು ವರ್ಷಗಳ ನಂತರ ನಾಯಕರಾಗಿ ನಟಿಸುತ್ತಿರುವ ಚಿತ್ರ ‘ಕಾಲಾಯಾ ನಮಃ’ ಪ್ರಸ್ತುತ ಈ ಚಿತ್ರಕ್ಕೆ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಈಗ ಮತ್ತೊಂದು ಖುಷಿಯ ವಿಚಾರವೆಂದರೆ, ತಮ್ಮ ನಟನೆಯ ಮೂಲಕ ಭಾರತದಾದ್ಯಂತ ಹೆಸರು ಮಾಡಿರುವ ಬಹುಭಾಷಾ ನಟ ಪ್ರಕಾಶ್ ರೈ ‘ಕಾಲಾಯಾ ನಮಃ’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.  ಪ್ರಕಾಶ್ ರೈ ಅವರ ಅಭಿನಯದ ಸನ್ನಿವೇಶಗಳ ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿದೆ.

    ಕೋಮಲ್ ಹಲವು ವರ್ಷಗಳ ನಂತರ ಮತ್ತೆ ಸಿನಿಮಾ ರಂಗದಲ್ಲಿ ಕಾಣಿಸಿಕೊಂಡಿರುವುದು ಅವರ ಅಭಿಮಾನಿಗಳಿಗೆ ಸಹಜವಾಗಿಯೇ ಸಂಭ್ರಮ ತಂದಿದೆ. ಬಹುತೇಕ ಹಾಸ್ಯ ಪಾತ್ರಗಳ ಮೂಲಕವೇ ಗುರುತಿಸಿಕೊಂಡಿದ್ದ ಅವರು, ಆನಂತರ ಒಂದಷ್ಟು ಸಾಹಸ ಪ್ರಧಾನ ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದರು. ಸಿನಿಮಾ ರಂಗದಲ್ಲಿ ಏರುಗತಿಯಲ್ಲಿ ಇರುವಾಗಲೇ, ಹಲವು ಎಡವಟ್ಟುಗಳನ್ನು ಮಾಡಿಕೊಂಡ ಪರಿಣಾಮ, ಚಿತ್ರಗಳು ಸೋಲು ಕಂಡವು. ಆನಂತರ ಅವರು ಸಿನಿಮಾ ರಂಗದಿಂದಲೇ ದೂರ ಉಳಿದುಕೊಂಡರು. ಇದನ್ನೂ ಓದಿ:ನಾವಿನ್ನೂ ಮಗುವಿಗೆ ಸಿದ್ಧರಿಲ್ಲ: ಚಂದನ್ ಶೆಟ್ಟಿ ಪ್ರತಿಕ್ರಿಯೆ

    ಇದೀಗ ಮತ್ತೆ ಹೊಸ ಸಿನಿಮಾದ ಮೂಲಕ ವಾಪಸ್ಸಾಗಿದ್ದಾರೆ. ಎಲ್ಲ ಎಚ್ಚರಿಕೆಗಳನ್ನು ತಗೆದುಕೊಂಡು ಈ ಸಿನಿಮಾವನ್ನು ಮಾಡುತ್ತಿದ್ದಾರೆ. ಅನುಸೂಯ ಕೋಮಲ್ ಕುಮಾರ್ ನಿರ್ಮಿಸುತ್ತಿರುವ ಈ ಚಿತ್ರವನ್ನು ಮತಿವಣನ್ ನಿರ್ದೇಶಿಸುತ್ತಿದ್ದಾರೆ. ಎಮಿಲ್ ಸಂಗೀತ ನಿರ್ದೇಶನ ಹಾಗೂ ರಾಕೇಶ್ ಸಿ ತಿಲಕ್ ಛಾಯಾಗ್ರಹಣ ಈ ಚಿತ್ರಕ್ಕಿದೆ. ಕೋಮಲ್ ಕುಮಾರ್,  ಆಸಿಯಾ ಫಿರ್ದೋಸ್, ಪ್ರಕಾಶ್ ರೈ, ಸುಚೀಂದ್ರ ಪ್ರಸಾದ್, ತಿಲಕ್, ಯತಿರಾಜ್ ಜಗ್ಗೇಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಿನಿಮಾ ರಂಗದ ‘ರೋಲೆಕ್ಸ್’ ಆದ ನಟ ಕೋಮಲ್

    ಸಿನಿಮಾ ರಂಗದ ‘ರೋಲೆಕ್ಸ್’ ಆದ ನಟ ಕೋಮಲ್

    ಸೆನ್ಸೇಶನಲ್ ಸ್ಟಾರ್ ಕೋಮಲ್ ಆಫ್ಟರ್ ಲಾಂಗ್ ಬ್ರೇಕ್ ಬಳಿಕ ಮತ್ತೆ ನಟನೆಗೆ ಮರಳಿದ್ದಾರೆ. ಇತ್ತೀಚೆಗೆ ಅವರ ಹೊಸ ಸಿನಿಮಾ ‘ಕಾಲಾಯ ನಮಃ’ ಸೆಟ್ಟೇರಿದ್ದು, ಈ ಚಿತ್ರದ ಮೂಲಕ ಮತ್ತೆ ಬಣ್ಣದ ಲೋಕದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಆ ಸಿನಿಮಾ ನಂತರ ಮತ್ತೊಂದು ಹೊಸ ಸಿನಿಮಾಗೂ ಗ್ರೀನ್ ಸಿಗ್ನಲ್ ನೀಡಿದ್ದಾರೆ.

    ‘ಬಿಲ್ ಗೇಟ್ಸ್’ ಸಿನಿಮಾ ಮೂಲಕ ಗಮನ ಸೆಳೆದ ನಿರ್ದೇಶಕ ಶ್ರೀನಿವಾಸ್ ಮಂಡ್ಯ ಹೊಸದೊಂದು ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಚಿತ್ರಕ್ಕೆ ‘ರೋಲೆಕ್ಸ್’ ಎಂದು ಟೈಟಲ್ ಇಡಲಾಗಿದ್ದು, ಈ ಚಿತ್ರದಲ್ಲಿ ನಾಯಕ ನಟನಾಗಿ ಕೋಮಲ್ ನಟಿಸುತ್ತಿದ್ದಾರೆ. ಈ ಚಿತ್ರ ಕಟೆಂಟ್ ಬೆಸ್ಡ್ ಸಿನಿಮಾವಾಗಿದ್ದು ಕೋಮಲ್ ತುಂಬಾ ಇಷ್ಟಪಟ್ಟು ಈ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ ಎಂದು ನಿರ್ದೇಶಕ ಶ್ರೀನಿವಾಸ್ ಮಂಡ್ಯ ತಿಳಿಸಿದ್ದಾರೆ. ಇದನ್ನೂ ಓದಿ: ರಶ್ಮಿಕಾ ನಂತರ ಟ್ರೋಲಿಗರ ಕಣ್ಣಿಗೆ ಗುರಿಯಾದ್ರು ನಿವೇದಿತಾ ಗೌಡ

     

    ಫೀನಿಕ್ಸ್ ಎಂಟರ್ ಟೈನ್ಮೆಂಟ್ಸ್ ಬ್ಯಾನರ್ ನಡಿ ಅನಿಲ್ ಕುಮಾರ್. ಎಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಬಹು ದೊಡ್ಡ ತಾರಾಗಣ ಸಿನಿಮಾದಲ್ಲಿದ್ದು, ರಾಕೇಶ್. ಸಿ. ತಿಲಕ್ ಕ್ಯಾಮೆರಾ ವರ್ಕ್, ಜೆಸ್ಸಿ ಗಿಫ್ಟ್ ಸಂಗೀತ ನಿರ್ದೇಶನ, ಅರವಿಂದ್ ರಾಜ್ ಸಂಕಲನ ಚಿತ್ರಕ್ಕಿದೆ. ಜನವರಿಯಲ್ಲಿ ‘ರೋಲೆಕ್ಸ್ ‘ ಸಿನಿಮಾ ಸೆಟ್ಟೇರಲಿದ್ದು ಸದ್ಯದಲ್ಲೇ ಹೆಚ್ಚಿನ ಮಾಹಿತಿಯನ್ನು ಸಿನಿಮಾ ತಂಡ ಹಂಚಿಕೊಳ್ಳಲಿದೆ.

    Live Tv
    [brid partner=56869869 player=32851 video=960834 autoplay=true]

  • ‘ಕಾಲಾಯ ನಮಃ’ ಸಿನಿಮಾ ಮೂಲಕ ಕೋಮಲ್ ಕಮ್ ಬ್ಯಾಕ್

    ‘ಕಾಲಾಯ ನಮಃ’ ಸಿನಿಮಾ ಮೂಲಕ ಕೋಮಲ್ ಕಮ್ ಬ್ಯಾಕ್

    ಹಾಸ್ಯ ಕಲಾವಿದನಾಗಿ ಜನಪ್ರಿಯರಾಗಿರುವ ನಟ ಕೋಮಲ್ ಕುಮಾರ್, ನಾಯಕನಾಗೂ ಸೈ ಎನಿಸಿಕೊಂಡವರು. ಕಳೆದ ಕೆಲವು ವರ್ಷಗಳಿಂದ ಕೋಮಲ್ ಕುಮಾರ್  ಚಿತ್ರರಂಗದಿಂದ ದೂರವಿದ್ದರು. ಈಗ “ಕಾಲಾಯ ನಮಃ” ಚಿತ್ರದ ಮೂಲಕ ಕೋಮಲ್ ಕುಮಾರ್ ಚಿತ್ರರಂಗಕ್ಕೆ ಮರಳಿ ಬರುತ್ತಿದ್ದಾರೆ. ಪ್ರಸ್ತುತ ಈ ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯುತ್ತಿದೆ.

    ಮನುಷ್ಯನ ಜೀವನದಲ್ಲಿ ಗ್ರಹಗಳ ಪ್ರಭಾವ ಅಪಾರ. ನನ್ನ ಜೀವನದಲ್ಲೂ ಹಾಗೆ. ನಮ್ಮ ಅಣ್ಣ ಜಗ್ಗೇಶ್ ಅವರು, ಕೆಲವು ವರ್ಷಗಳ ಹಿಂದೆ ನನ್ನ ಜಾತಕ ನೋಡಿ, ನಿನಗೆ ಈಗ ಕೇತು ದೆಸೆ ನಡೆಯುತ್ತಿದೆ. ಹಾಗಾಗಿ ಸ್ವಲ್ಪ ಹುಷಾರಾಗಿರು ಅಂದಿದ್ದರು. ಹಾಗಾಗಿ ಐದು ವರ್ಷದಿಂದ ನಾನು ಯಾವುದೇ ಚಿತ್ರಗಳಲ್ಲಿ ಕಾಣಿಸಿಕೊಂಡಿಲ್ಲ.‌ ನಮ್ಮ ಊರಿನ ದೇವರಾದ ಕಾಲಭೈರವನ ಉಪಾಸನೆ ಮಾಡುತ್ತಿದೆ. ಈಗ ಕಾಲ ಕೂಡಿ ಬಂದಿದೆ. “ಕಾಲಾಯ ನಮಃ” ಶುರುವಾಗಿದೆ. ಕಾಲಭೈರವ ದೇವರ ಭಕ್ತನಾದ ನನ್ನ ಸಿನಿಮಾ ಶೀರ್ಷಿಕೆ ಕೂಡ, ಕಾಲದಿಂದಲೇ ಶುರುವಾಗುತ್ತಿರುವುದು ಕಾಕತಾಳೀಯ. ಕಾಲ ನಿಲುವುದಿಲ್ಲ. ಕಾಲ ಯಾರಿಗೂ ಕಾಯುವುದಿಲ್ಲ. ಈ ರೀತಿ ಕಾಲದ ಬಗ್ಗೆ ನಮ್ಮ ಸಿನಿಮಾ ಸಾಗುತ್ತದೆ. ನನ್ನ ಪತ್ನಿ ಅನಸೂಯ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.  ಮತಿವಣನ್ ನಿರ್ದೇಶಿಸುತ್ತಿದ್ದಾರೆ.‌ ನನ್ನ ಅಣ್ಣ ಜಗ್ಗೇಶ್ ಅವರ ಸಹಕಾರವಿದೆ. ಅಸಿಯಾ ಫಿರ್ದೋಸಿ, ಸುಚೇಂದ್ರ ಪ್ರಸಾದ್,‌ ತಿಲಕ್ ಹಾಗೂ ನನ್ನ ಅಣ್ಣ ಜಗ್ಗೇಶ್ ಅವರ‌ ಪುತ್ರ ಯತಿರಾಜ್ ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸುತ್ತಿದ್ದಾರೆ.‌ ನಾನು ನಟಿಸಿರುವ 2020 ಚಿತ್ರ ಕೂಡ ಸದ್ಯದಲ್ಲೇ ತೆರೆಗೆ ಬರುತ್ತಿದೆ‌ ಎಂದು ಕೋಮಲ್ ಕುಮಾರ್ ವಿವರಣೆ ನೀಡಿದರು.

    ಜ್ಯೋತಿಷ್ಯ ಯಾರು ನಂಬುತ್ತಾರೊ, ಬಿಡುತ್ತಾರೊ ನನಗ ಗೊತ್ತಿಲ್ಲ. ಆದರೆ ನನಗೆ ನಂಬಿಕೆಯಿದೆ. ಕೋಮಲ್ ಗೆ ಕೇತುದೆಸೆ ಇದೆ. 2022 ರವರೆಗೂ ಏನು ಮಾಡಬೇಡ ಅಂದಿದೆ. ಆತ ನನ್ನ ಮಾತು ಕೇಳಿ ಹಾಗೆ ನಡೆದುಕೊಂಡ. ಈಗ ಕಾಲಭೈರವನ ದಯೆಯಿಂದ ಈ‌ ಚಿತ್ರ ಆರಂಭಿಸಿದ್ದಾನೆ. ನನ್ನ‌ ಮಗ ಯತಿರಾಜ್ ಕೂಡ ಇದರಲ್ಲಿ ಅಭಿನಯಿಸುತ್ತಿದ್ದಾನೆ ಈ ತಂಡದಿಂದ ಒಳ್ಳೆಯ ಸಿನಿಮಾ ಬರುವ ವಿಶ್ವಾಸವಿದೆ.‌‌ ಒಳ್ಳೆಯದಾಗಲಿ ಎಂದರು ಜಗ್ಗೇಶ್. ಇದನ್ನೂ ಓದಿ:ನಾವು ನಟರಿಗೆ ಹೆಚ್ಚು ಕ್ರೆಡಿಟ್ ನೀಡುತ್ತೇವೆ: ಪ್ರಿಯಾಂಕಾ ಚೋಪ್ರಾ

    “ಕಾಲಾಯ ನಮಃ” ಒಳ್ಳೆಯ ಕಥೆಯುಳ್ಳ ಚಿತ್ರ ಕೋಮಲ್ ಅವರ ಜೊತೆ ಕೆಲಸ ಮಾಡುತ್ತಿರುವುದು ಖುಷಿ ಎಂದು ನಿರ್ದೇಶಕ ಮತಿವಣನ್ ತಿಳಿಸಿದರು. ಧಾರಾವಾಹಿಯಲ್ಲಿ ನಟಿಸುತ್ತಿದ್ದ ನನಗೆ ಇದು ಮೊದಲ ಸಿನಿಮಾ ಎಂದರು ನಟಿ ಆಸಿಯಾ ಫಿರ್ದೋಸ್. ಚಿಕ್ಕಪ್ಪ ನನಗೆ ಒಳ್ಳೆಯ ಪಾತ್ರ ಕೊಟ್ಟಿದ್ದಾರೆ ಧನ್ಯವಾದ ಎಂದರು ಯತಿರಾಜ್. ನಟರಾದ ಸುಚೀಂದ್ರ ಪ್ರಸಾದ್ ಹಾಗೂ ತಿಲಕ್ ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು. ನಿರ್ಮಾಪಕಿ ಅನಸೂಯ ಕೋಮಲ್ ಕುಮಾರ್, ಸಂಗೀತ ನಿರ್ದೇಶಕ ಎಮಿಲ್ ಹಾಗೂ ಛಾಯಾಗ್ರಾಹಕ ರಾಕೇಶ್ ಸಿ ತಿಲಕ್ ಚಿತ್ರದ ಕುರಿತು ಮಾತನಾಡಿದರು.

    Live Tv
    [brid partner=56869869 player=32851 video=960834 autoplay=true]

  • ನನ್ನ ಮಗನ ಕಾರು ಅಪಘಾತಕ್ಕೆ ‘ಬುಧ ಭಕ್ತಿ’ ಕಾರಣ ಎಂದ ಜಗ್ಗೇಶ್

    ನನ್ನ ಮಗನ ಕಾರು ಅಪಘಾತಕ್ಕೆ ‘ಬುಧ ಭಕ್ತಿ’ ಕಾರಣ ಎಂದ ಜಗ್ಗೇಶ್

    ಟ ಜಗ್ಗೇಶ್ ಅವರ ಪುತ್ರ ಯತೀಶ್ ಕಾರು ಆಕ್ಸಿಡೆಂಟ್ ಪ್ರಕರಣ ಸಖತ್ ಸುದ್ದಿ ಮಾಡಿತ್ತು. ಕಾರು ಅಪಘಾತ ಮಾಡಿಕೊಂಡಿದ್ದ ಯತೀಶ್ ಅಂದು ವರ್ತಿಸಿದ ರೀತಿ ಟ್ರೋಲ್ ಕೂಡ ಆಗಿತ್ತು. ಮತ್ತೆ ರಿಪೇರಿ ಆಗದೇ ಇರುವಷ್ಟು ಕಾರು ಕೂಡ ಡ್ಯಾಮೇಜ್ ಆಗಿತ್ತು. ಈ ಕುರಿತು ಮೊದಲ ಬಾರಿಗೆ ಜಗ್ಗೇಶ್ ಘಟನೆಯ ಕುರಿತು ಮಾತನಾಡಿದ್ದಾರೆ. ಅಂದು ನಡೆದ ಕಾರು ಅಪಘಾತಕ್ಕೆ ಕಾರಣ ಏನು ಎನ್ನುವುದನ್ನು ಜಗ್ಗೇಶ್ ತಿಳಿಸಿದ್ದಾರೆ.

    ಜಗ್ಗೇಶ್ ಸಹೋದರ ಕೋಮಲ್ ಸಿನಿಮಾ ರಂಗಕ್ಕೆ ಕಮ್ ಬ್ಯಾಕ್ ಆಗುತ್ತಿರುವ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಜಗ್ಗೇಶ್, ‘ನನ್ನ ಮಗನಿಗೆ ಬುಧಭುಕ್ತಿ ಇತ್ತು. ಹಾಗಾಗಿ ಹುಷಾರಿಂದ ಇರುವಂತೆ ಅವನಿಗೆ ಹೇಳಿದ್ದೆ. ಕೋವಿಡ್ ಸಂದರ್ಭಲ್ಲಿ ಯತೀಶ್ ಎಲ್ಲಿಯೂ ಹೋಗುತ್ತಿರಲಿಲ್ಲ. ಭಯದಿಂದ ಮನೆಯಲ್ಲೇ ಇರುತ್ತಿದ್ದ. ಅವತ್ತು ಎ.ಆರ್.ಬಾಬು ಪುತ್ರನಿಗೆ ಕಾಲ್ ಮಾಡಿ, ಬಿರಿಯಾನಿ ಮಾಡಿಸು ಎಂದು ಹೇಳಿ ಹೊರಟ. ಬುಧಭುಕ್ತಿ ಇರುವ ಕಾರಣಕ್ಕಾಗಿಯೇ ಕಾರು ಅಪಘಾತ ಆಯಿತು’ ಎಂದು ಜಗ್ಗೇಶ್ ಮಾತನಾಡಿದ್ದಾರೆ. ಇದನ್ನೂ ಓದಿ:‘ಲೈಗರ್’ ಸಿನಿಮಾಗೆ ಹಣ ಎಲ್ಲಿಂದ ಬಂತು?: ನಟಿ, ನಿರ್ದೇಶಕನಿಗೆ ‘ಇಡಿ’ ಗ್ರಿಲ್

    ‘ಕೋಮಲ್ ಗೆ ಕೇತುದೆಸೆ ಇತ್ತು. ಈ ವೇಳೆಯಲ್ಲಿ ಏನೇ ಕೆಲಸ ಮಾಡಿದರೂ, ಅದರಲ್ಲಿ ಯಶಸ್ಸು ಕಾಣುವುದಿಲ್ಲೆ ಎ‍ನ್ನುವುದು ಗೊತ್ತಿತ್ತು. ಹಾಗಾಗಿ ನಾನೇ ಸಿನಿಮಾ ಮಾಡಬೇಡ ಅಂತ ಕೋಮಲ್ ಗೆ ಹೇಳಿದ್ದೆ. ಇದೀಗ ಕೇತುದೆಸೆ ಕಳೆದಿದೆ. ಇನ್ಮುಂದೆ ಕೋಮಲ್ ಸಿನಿಮಾಗಳು ಹಿಟ್ ಆಗುತ್ತವೆ. ಸಿನಿಮಾ ರಂಗದಲ್ಲಿ ಮತ್ತೆ ಕೋಮಲ್ ಅಗಾಧವಾಗಿ ಬೆಳೆಯುತ್ತಾರೆ ಎಂದು ತಮ್ಮನ ಬಗ್ಗೆ ಮಾತನಾಡಿದರು ಜಗ್ಗೇಶ್.

    ಕೋಮಲ್ ಮತ್ತೆ ಸಿನಿಮಾ ರಂಗದಲ್ಲಿ ಕಾಣಿಸಿಕೊಂಡಿರುವುದು ಸಹಜವಾಗಿಯೇ ಅಭಿಮಾನಿಗಳಿಗೆ ಖುಷಿ ಆಗಿದೆ. ಅಲ್ಲದೇ, ಕೋಮಲ್ ನಟನೆಯ ನಮೋ ಭೂತಾತ್ಮ ಸಿನಿಮಾ ಭಾಗ 2 ಆಗಿ ಮೂಡಿ ಬರಲಿದೆಯಂತೆ. ಅಲ್ಲದೇ, ಕೋಮಲ್ ಗೆ ಸಿನಿಮಾ ಮಾಡಲು  ಅನೇಕರು ತುದಿಗಾಲಲ್ಲಿ ನಿಂತಿದ್ದಾರೆ. ಕೋಮಲ್ ಮತ್ತೆ ಸಿನಿಮಾ ರಂಗದಲ್ಲಿ ಬ್ಯುಸಿ ಆಗುವುದರಲ್ಲಿ ಅನುಮಾನವಿಲ್ಲ ಅಂತಾರೆ ಜಗ್ಗೇಶ್.

    Live Tv
    [brid partner=56869869 player=32851 video=960834 autoplay=true]

  • ನಟ ಕೋಮಲ್ ಗೆ ಕೇತುದೆಸೆ: 7 ವರ್ಷ ಸಿನಿಮಾ ಮಾಡಬೇಡ ಎಂದಿದ್ದರಂತೆ ಜಗ್ಗೇಶ್

    ನಟ ಕೋಮಲ್ ಗೆ ಕೇತುದೆಸೆ: 7 ವರ್ಷ ಸಿನಿಮಾ ಮಾಡಬೇಡ ಎಂದಿದ್ದರಂತೆ ಜಗ್ಗೇಶ್

    ನ್ನಡದ ಪ್ರತಿಭಾವಂತ ಹಾಸ್ಯ ನಟ ಕೋಮಲ್ ಮತ್ತೆ ಸಿನಿಮಾ ರಂಗಕ್ಕೆ ಕಮ್ ಬ್ಯಾಕ್ ಆಗುತ್ತಿದ್ದಾರೆ. ಕೆಂಪೇಗೌಡ ಸಿನಿಮಾದ ನಂತರ ಸಂಪೂರ್ಣವಾಗಿ ಅವರು ಸಿನಿಮಾ ರಂಗದಿಂದಲೇ ದೂರ ಉಳಿದಿದ್ದರು. ಕಳೆದ ಆರೇಳು ವರ್ಷಗಳಿಂದ ಸಿನಿಮಾಗಳು ಹಿಟ್ ಆಗದೇ ಇದ್ದರೂ, ಸಿನಿಮಾವಂತ ಮಾಡುತ್ತಿದ್ದರು. ಆದರೆ, ಕಳೆದ ನಾಲ್ಕೈದು ವರ್ಷಗಳಿಂದ ಸಿನಿಮಾದಲ್ಲಿ ನಟಿಸುವುದನ್ನೇ ಬಿಟ್ಟಿದ್ದರು.

    ಬೇಡಿಕೆ ಇರುವಾಗ ಕೋಮಲ್ ಯಾಕೆ ಮನೆಯಲ್ಲಿ ಕೂತಿದ್ದಾರೆ ಎನ್ನುವ ಪ್ರಶ್ನೆ ಸಹಜವಾಗಿಯೇ ಅವರ ಅಭಿಮಾನಿಗಳಲ್ಲಿ ಮೂಡಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಕೋಮಲ್ ಅವರಿಗೆ ಕೇತುದೆಸೆ ಇತ್ತಂತೆ. ಹಾಗಾಗಿ ಸಿನಿಮಾದಲ್ಲಿ ನಟಿಸಬೇಡ ಎಂದು ಸ್ವತಃ ಜಗ್ಗೇಶ್ ಅವರೇ ಹೇಳಿದ್ದರಂತೆ. ಸಹೋದರನ ಮಾತಿಗೆ ಒಪ್ಪಿಗೆ ಸೂಚಿಸಿ ಸಿನಿಮಾ ಮಾಡಲಿಲ್ಲವಂತೆ ಕೋಮಲ್. ಈ ಮಾಹಿತಿಯನ್ನು ಜಗ್ಗೇಶ್ ಅವರೇ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ʻಸಿಂಧೂರ ಲಕ್ಷ್ಮಣʼನಾಗಿ ಬರಲಿದ್ದಾರೆ ನಟ ಧನಂಜಯ

    ‘ಕೋಮಲ್ ಗೆ ಕೇತುದೆಸೆ ಇತ್ತು. ಈ ವೇಳೆಯಲ್ಲಿ ಏನೇ ಕೆಲಸ ಮಾಡಿದರೂ, ಅದರಲ್ಲಿ ಯಶಸ್ಸು ಕಾಣುವುದಿಲ್ಲೆ ಎ‍ನ್ನುವುದು ಗೊತ್ತಿತ್ತು. ಹಾಗಾಗಿ ನಾನೇ ಸಿನಿಮಾ ಮಾಡಬೇಡ ಅಂತ ಕೋಮಲ್ ಗೆ ಹೇಳಿದ್ದೆ. ಇದೀಗ ಕೇತುದೆಸೆ ಕಳೆದಿದೆ. ಇನ್ಮುಂದೆ ಕೋಮಲ್ ಸಿನಿಮಾಗಳು ಹಿಟ್ ಆಗುತ್ತವೆ. ಸಿನಿಮಾ ರಂಗದಲ್ಲಿ ಮತ್ತೆ ಕೋಮಲ್ ಅಗಾಧವಾಗಿ ಬೆಳೆಯುತ್ತಾರೆ ಎಂದು ತಮ್ಮನ ಬಗ್ಗೆ ಮಾತನಾಡಿದರು ಜಗ್ಗೇಶ್.

    ಕೋಮಲ್ ಮತ್ತೆ ಸಿನಿಮಾ ರಂಗದಲ್ಲಿ ಕಾಣಿಸಿಕೊಂಡಿರುವುದು ಸಹಜವಾಗಿಯೇ ಅಭಿಮಾನಿಗಳಿಗೆ ಖುಷಿ ಆಗಿದೆ. ಅಲ್ಲದೇ, ಕೋಮಲ್ ನಟನೆಯ ನಮೋ ಭೂತಾತ್ಮ ಸಿನಿಮಾ ಭಾಗ 2 ಆಗಿ ಮೂಡಿ ಬರಲಿದೆಯಂತೆ. ಅಲ್ಲದೇ, ಕೋಮಲ್ ಗೆ ಸಿನಿಮಾ ಮಾಡಲು  ಅನೇಕರು ತುದಿಗಾಲಲ್ಲಿ ನಿಂತಿದ್ದಾರೆ. ಕೋಮಲ್ ಮತ್ತೆ ಸಿನಿಮಾ ರಂಗದಲ್ಲಿ ಬ್ಯುಸಿ ಆಗುವುದರಲ್ಲಿ ಅನುಮಾನವಿಲ್ಲ ಅಂತಾರೆ ಜಗ್ಗೇಶ್.

    Live Tv
    [brid partner=56869869 player=32851 video=960834 autoplay=true]

  • ಸಂಧಾನ ಸಭೆ ನಡೆಸಿದ್ದಾರೆ ಅಂದ್ರೆ ಅಲ್ಲಿ ಏನೋ ನಡೆದಿದೆ: ಡಿಕೆಶಿ

    ಸಂಧಾನ ಸಭೆ ನಡೆಸಿದ್ದಾರೆ ಅಂದ್ರೆ ಅಲ್ಲಿ ಏನೋ ನಡೆದಿದೆ: ಡಿಕೆಶಿ

    – ಜಗ್ಗೇಶ್, ಕೋಮಲ್ ಬಗ್ಗೆ ಮಾತಾಡಲ್ಲ

    ಬೆಂಗಳೂರು: ಸ್ವೆಟರ್ ಹಗರಣದಲ್ಲಿ ಹೆಸರು ಕೇಳಿಬರುತ್ತಿರುವ ಜಗ್ಗೇಶ್ ಅಥವಾ ಕೋಮಲ್ ಬಗ್ಗೆ ಮಾತನಾಡಲ್ಲ. ಅವರು ಇನ್ವಾಲ್ ಆಗಿದಾರೋ ಇಲ್ವೋ ಗೊತ್ತಿಲ್ಲ. ಅದು ಅವರ ವೈಯುಕ್ತಿಕ ವಿಚಾರ. ಆದರೆ ಸಂಧಾನ ಸಭೆ ನಡೆಸಿದ್ದಾರೆ ಎಂದರೆ ಅಲ್ಲಿ ಏನೋ ನಡೆದಿದೆ, ಏನೋ ಫೈಲೂರ್ ಆಗಿದೆ ಅಂತ ಅರ್ಥ ಎಂದು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅನುಮಾನ ವ್ಯಕ್ತಪಡಿಸಿದ್ದಾರೆ.

    ಸ್ವೆಟರ್ ಹಗರಣದಲ್ಲಿ ಸರ್ಕಾರ ಮತ್ತು ಒಂದು ಕಾರ್ಪೊರೇಷನ್ ಏನು ಮಾಡಿದೆ? ಸ್ವೆಟರ್ ಕೊಡೋದು ಸಂತೋಷ, ಟೆಂಡರ್ ಕರೆದಿದ್ದು ಸಂತೋಷ, ದುಡ್ಡು ಕೊಟ್ಟಿದ್ದು ಸಂತೋಷ. ಆದರೆ ಯಾರಿಗೆ ಸ್ವೆಟರ್ ಕೊಟ್ಟಿದ್ದಾರೆ? ಸ್ವೆಟರ್ ಎಲ್ಲಿದೆ? ಶಾಲೆ ಎಲ್ಲಿ ಆರಂಭವಾಗಿತ್ತು? ಇದಕ್ಕೆ ಕಾರ್ಪೊರೇಷನ್, ಸರ್ಕಾರ ಉತ್ತರಿಸಬೇಕು. ಮುಖ್ಯಮಂತ್ರಿಗಳು ಇದಕ್ಕೆ ಜವಬ್ದಾರಿ. ಸಂಧಾನ ಸಭೆ ಯಾಕೆ ನಡೆಸುತ್ತಾರೆ. ಈ ಸಭೆಗೆ ಕಮೀಷನರ್ ಹೋಗಬಾರದು. ಸಂಧಾನ ಸಭೆ ನಡೆಸುತ್ತಿದ್ದಾರೆ ಎಂದರೆ ಏನೋ ಹೆಚ್ಚುಕಮ್ಮಿ ಆಗಿದೆ ಅಂತ ಅರ್ಥ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ನಟ ಕೋಮಲ್ ವಿರುದ್ಧ ಸ್ವೆಟರ್ ಹಗರಣ ಆರೋಪ

    ಕಾಂಗ್ರೆಸ್ ಕಾರ್ಯಕರ್ತರ ಬಂಧನ ವಿಚಾರವಾಗಿ ಮಾತನಾಡಿ, ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಪೋಸ್ಟರ್ ಅಂಟಿಸಿ ನಮ್ಮ ಕಾರ್ಯಕರ್ತರು ಒಳ್ಳೆಯ ಕೆಲಸ ಮಾಡಿದ್ದಾರೆ. ನಮ್ಮ ನಾಯಕರ ವಿರುದ್ಧ ಯಾರೇ ಹೇಳಿಕೆ ಕೊಟ್ಟರು ನಮ್ಮ ಕಾರ್ಯಕರ್ತರು ಹೋರಾಟ ಮಾಡುತ್ತಾರೆ. ನಮ್ಮ ಕಾರ್ಯಕರ್ತರ ವಿರುದ್ಧ ಎಷ್ಟು ಬೇಕಾದರು ಕೇಸ್ ಹಾಕಲಿ ಇದಕ್ಕೆಲ್ಲಾ ಹೆದರಲ್ಲ ಮುಂದೆಯು ಹೋರಾಟ ಮಾಡುತ್ತೇವೆ ಎಂದು ಗುಡುಗಿದರು. ಇದನ್ನೂ ಓದಿ: 1.72 ಕೋಟಿ ರೂ. ಸ್ವೆಟರ್ ಹಗರಣಕ್ಕೆ ಹೊಸ ಟ್ವಿಸ್ಟ್