Tag: Kollywood

  • ನಯನತಾರಾ ನನ್ನ ಭಾವಿ ಮಕ್ಕಳ ತಾಯಿ ಎಂದ ವಿಘ್ನೇಶ್ ಶಿವನ್

    ನಯನತಾರಾ ನನ್ನ ಭಾವಿ ಮಕ್ಕಳ ತಾಯಿ ಎಂದ ವಿಘ್ನೇಶ್ ಶಿವನ್

    ಚೆನ್ನೈ: ಲೇಡಿ ಸೂಪರ್ ಸ್ಟಾರ್ ನಯನತಾರಾ ತಮ್ಮ ಲವ್ ಸ್ಟೋರಿಗಳ ಮೂಲಕವೇ ಹೆಚ್ಚು ಸುದ್ದಿಯಾದವರು. ಆದರೆ ಯಾವುದಕ್ಕೂ ಜಗ್ಗದೇ ತಮ್ಮ ವೃತ್ತಿ ಬದುಕಿನತ್ತ ಚಿತ್ತ ಹರಿಸಿ ಯಶಸ್ವಿ ನಟಿಯಾಗಿ ಬೆಳೆದಿದ್ದಾರೆ. ಅದೇ ರೀತಿ ತಮ್ಮ ಹಿಂದಿನ ಲವ್ ಸ್ಟೋರಿಗಳನ್ನು ಮರೆತು ಇದೀಗ ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ಲಿವಿಂಗ್ ರಿಲೇಷನ್‍ಶಿಪ್‍ನಲ್ಲಿದ್ದಾರೆ. ಹೀಗಿರುವಾಗಲೇ ಶಾಕಿಂಗ್ ನ್ಯೂಸ್ ನೀಡಿದ್ದಾರೆ.

    ನಯನತಾರಾ ದಕ್ಷಿಣ ಭಾರತದ ಜನಪ್ರಿಯ ನಟಿಯರಲ್ಲಿ ಒಬ್ಬರು, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ವಿವಿಧ ಭಾಷೆಗಳಲ್ಲಿ ನಟಿಸಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಸೂಪರ್ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡದಲ್ಲಿಯೂ ಜನಪ್ರಿಯತೆ ಗಳಿಸಿದ್ದಾರೆ. ಅಲ್ಲದೆ ಸೌತ್ ಸಿನಿರಂಗದಲ್ಲಿ ಅಧಿಕ ಸಂಭಾವನೆ ಪಡೆಯುವ ನಟಿ ಎಂದೂ ಹೇಳಲಾಗುತ್ತದೆ. ಹೀಗೆ ತಮ್ಮ ವಿಭಿನ್ನ ಹಾಗೂ ಹಿಟ್ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ನಟಿ ವಿವಾದಗಳಿಗೂ ಹೊರತಾಗಿಲ್ಲ. ತಮ್ಮ ವೈಯಕ್ತಿಕ ಜೀವನದ ಕುರಿತು ಸಾಕಷ್ಟು ಸುದ್ದಿಯಾಗಿದ್ದಾರೆ.

    ಇತ್ತೀಚೆಗೆ ನಯನತಾರಾ ವೈಯುಕ್ತಿಕ ಜೀವನದ ಬಗ್ಗೆ ಹೆಚ್ಚು ಚರ್ಚೆಯಾಗಿತ್ತು. ತಮ್ಮ ಹಿಂದಿನ ಪ್ರೀತಿ ಪ್ರೇಮದ ಬಗ್ಗೆ ಮಾತನಾಡಿ ಸುದ್ದಿಯಾಗಿದ್ದರು. ಡ್ಯಾನ್ಸರ್ ಪ್ರಭುದೇವ, ನಟ ಸಿಂಬು ಜೊತೆಗಿನ ಪ್ರೇಮ್ ಕಹಾನಿ ಬಗ್ಗೆ ನಯನತಾರಾ ಬಹಿರಂಗ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಪ್ರಭುದೇವ ಮಾಜಿ ಪತ್ನಿ ರಮ್ಲತ್ ನಮ್ಮ ಸುಂದರ ಸಂಸಾರಕ್ಕೆ ಕೊಳ್ಳಿ ಇಟ್ಟಿದ್ದೇ ನಯನತಾರಾ ಎಂದು ಆರೋಪಿಸಿದ್ದರು. ಇವೆಲ್ಲದರ ನಡುವೆ ಇದೀಗ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಕುರಿತು ಶಾಕಿಂಗ್ ನ್ಯೂಸ್ ಹೊರ ಬಿದ್ದಿದೆ.

    ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಲಿವಿಂಗ್ ರಿಲೇಷನ್‍ಶಿಪ್‍ನಲ್ಲಿರುವುದು ತಿಳಿದಿರುವ ವಿಚಾರ. ಶೀಘ್ರದಲ್ಲೇ ಈ ಜೋಡಿ ವಿವಾಹ ಸಹ ಆಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಹೀಗಾಗಿಯೇ ತಮ್ಮ ಸಂಬಂಧವನ್ನು ಬಹಿರಂಗವಾಗಿ ಘೋಷಿಸಿದ್ದಾರೆ. ಅಲ್ಲದೆ ಇಬ್ಬರೂ ಜೊತೆಯಾಗಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ.

    ಇದೀಗ ಈ ಜೋಡಿ ಕುರಿತು ಅಚ್ಚರಿ ಸುದ್ದಿಯೊಂದು ಹೊರ ಬಿದ್ದಿದ್ದು, ನಯನತಾರಾ ತಾಯಿಯಾಗುತ್ತಿದ್ದಾರಾ ಎಂಬ ಪ್ರಶ್ನೆ ಟಾಲಿವುಡ್‍ನಲ್ಲಿ ಹುಟ್ಟಿಕೊಂಡಿದೆ. ಈ ಕುರಿತು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಆದರೆ ಈ ಪ್ರಶ್ನೆಗೆ ಕಾರಣವಾಗಿದ್ದೇ ವಿಘ್ನೇಶ್ ಶಿವನ್ ಅವರು ತಾಯಂದಿರ ದಿನದಂದು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿರುವ ಫೋಟೋ. ಹೌದು ನಯನತಾರಾ ಮಗು ಎತ್ತಿಕೊಂಡಿರುವ ಫೋಟೋ ಹಾಕಿರುವ ವಿಘ್ನೇಶ್ ಶಿವನ್, ನನ್ನ ಭವಿಷ್ಯದ ಮಗುವಿನ ತಾಯಿಗೆ ತಾಯಂದಿರ ದಿನದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ. ಈ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಲ್ಲದೆ ಮದುವೆಗೂ ಮುಂಚೆ ನಯನತಾರಾ ಗರ್ಭಿಣಿಯಾಗಿದ್ದಾರಾ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಇದನ್ನು ಕಂಡ ನಯನತಾರಾ ಅಭಿಮಾನಿಗಳು ಆಶ್ಚರ್ಯಕ್ಕೊಳಗಾಗಿದ್ದಾರೆ ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆ ಆಗುತ್ತಿದೆ.

  • ಮಂಗಳಮುಖಿಯರ ಮನೆ ನಿರ್ಮಾಣಕ್ಕಾಗಿ ಅಕ್ಷಯ್ ಒಂದೂವರೆ ಕೋಟಿ ರೂ. ದಾನ

    ಮಂಗಳಮುಖಿಯರ ಮನೆ ನಿರ್ಮಾಣಕ್ಕಾಗಿ ಅಕ್ಷಯ್ ಒಂದೂವರೆ ಕೋಟಿ ರೂ. ದಾನ

    ಚೆನ್ನೈ: ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಅವರು ಮಂಗಳಮುಖಿಯರ ಮನೆ ನಿರ್ಮಾಣಕ್ಕಾಗಿ ಒಂದೂವರೆ ಕೋಟಿ ರೂ. ದಾನ ಮಾಡಿದ್ದಾರೆ. ಈ ಬಗ್ಗೆ ತಮಿಳು ನಟ, ನಿರ್ದೇಶಕ ರಾಘವ ಲಾರೆನ್ಸ್ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ.

    ಅಕ್ಷಯ್ ಕುಮಾರ್ ತಮ್ಮ ಮಂಬರುವ ‘ಲಕ್ಷ್ಮಿ ಬಾಂಬ್’ ಚಿತ್ರದಲ್ಲಿ ಮಂಗಳಮುಖಿ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಚಿತ್ರವನ್ನು ರಾಘವ ಲಾರೆನ್ಸ್ ನಿರ್ದೇಶನ ಮಾಡುತ್ತಿದ್ದಾರೆ. ರಾಘವ ಅವರು ಅಕ್ಷಯ್ ಕುಮಾರ್ ಅವರ ಬಳಿ ತಮ್ಮ ಹೊಸ ಚಿತ್ರದ ಬಗ್ಗೆ ಮಾತನಾಡುತ್ತಿದ್ದರು. ಈ ವೇಳೆ ಮಂಗಳಮುಖಿಯರ ಜೀವನವನ್ನು ಬದಲಿಸಲು ಒಂದು ಹೊಸ ಹೆಜ್ಜೆ ಇಡುತ್ತಿದ್ದೇವೆ ಎಂದರು. ಇದನ್ನು ಕೇಳಿದ ಅಕ್ಷಯ್, ರಾಘವ್ ಅವರಿಗೆ ಧನ್ಯವಾದ ತಿಳಿಸಿ ಒಂದೂವರೆ ಕೋಟಿ ರೂ. ದಾನ ಮಾಡಿದ್ದಾರೆ.

    ಪೋಸ್ಟ್‌ನಲ್ಲಿ ಏನಿದೆ?
    ನಾನು ಸಿಹಿ ಸುದ್ದಿ ಹಂಚಿಕೊಳ್ಳಲು ಬಯಸುತ್ತೇನೆ. ಮಂಗಳಮುಖಿಯರಿಗಾಗಿ ಭಾರತದಲ್ಲಿ ಮೊದಲ ಬಾರಿಗೆ ಮನೆಯನ್ನು ನಿರ್ಮಿಸಲಾಗುತ್ತಿದೆ. ಇದಕ್ಕೆ ಅಕ್ಷಯ್ ಕುಮಾರ್ ಅವರು ಒಂದೂವರೆ ಕೋಟಿ ರೂ. ದಾನ ಮಾಡಿದ್ದಾರೆ. ಎಲ್ಲರಿಗೂ ಗೊತ್ತಿರುವ ಹಾಗೆ ಲಾರೆನ್ಸ್ ಚಾರಿಟೇಬಲ್ ಟ್ರಸ್ಟ್ ಎಜುಕೇಶನ್‍ನಲ್ಲಿ ಮಕ್ಕಳಿಗಾಗಿ ಮನೆ, ವೈದ್ಯಕೀಯ ಹಾಗೂ ಅಂಗವಿಕಲ ಡ್ಯಾನ್ಸರ್ಸ್‍ ಗೆ ವಿಭಿನ್ನ ಯೋಜನೆಗಳೊಂದಿಗೆ ತೊಡಗಿಸಿಕೊಂಡಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಈಗ ಈ ಟ್ರಸ್ಟ್‌ಗೆ 15 ವರ್ಷಗಳಾಗಿದ್ದು, ಇದನ್ನು ಸಂಭ್ರಮಿಸಲು ಮಂಗಳಮುಖಿಯರಿಗಾಗಿ ಮನೆ ಕಟ್ಟಿಸಲು ಹಣವನ್ನು ಸಂಗ್ರಹಿಸುತ್ತಿದ್ದೇವೆ.

    ‘ಲಕ್ಷ್ಮಿ ಬಾಂಬ್’ ಚಿತ್ರದ ಶೂಟಿಂಗ್ ವೇಳೆ ಅಕ್ಷಯ್ ಅವರ ಬಳಿ ತನ್ನ ಟ್ರಸ್ಟ್ ಹಾಗೂ ಮಂಗಳಮುಖಿಯರಿಗಾಗಿ ಮನೆ ನಿರ್ಮಿಸುತ್ತಿರುವ ವಿಷಯವನ್ನು ತಿಳಿಸಿದೆ. ಇದನ್ನು ಕೇಳಿದ ತಕ್ಷಣ ಅಕ್ಷಯ್ ಅವರು ಮಂಗಳಮುಖಿಯರ ಮನೆ ನಿರ್ಮಾಣಕ್ಕಾಗಿ ಒಂದೂವರೆ ಕೋಟಿ ರೂ. ದಾನ ಮಾಡಿದ್ದಾರೆ. ದೇವರಂತೆ ಸಹಾಯ ಮಾಡುವುದನ್ನು ನಾನು ಪರಿಗಣಿಸುತ್ತೇನೆ. ಈಗ ಅಕ್ಷಯ್ ಅವರು ನಮಗೆ ದೇವರಂತೆ. ಅವರ ಬೆಂಬಲಕ್ಕೆ ನಾನು ಧನ್ಯವಾದ ತಿಳಿಸುತ್ತೇನೆ. ಎಲ್ಲಾ ಮಂಗಳಮುಖಿಯರ ಪರವಾಗಿ ನಾನು ಅಕ್ಷಯ್ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಅತಿ ಶೀಘ್ರದಲ್ಲೇ ಭೂಮಿ ಪೂಜೆ ಡೇಟ್ ಅನೌನ್ಸ್ ಮಾಡುತ್ತೇನೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

  • ಖ್ಯಾತ ನಟಿಯ ನಂಬರನ್ನು ಅಡಲ್ಟ್ ಗ್ರೂಪ್‍ಗೆ ಹಾಕಿದ ಪಿಜ್ಜಾ ಡೆಲಿವರಿ ಬಾಯ್

    ಖ್ಯಾತ ನಟಿಯ ನಂಬರನ್ನು ಅಡಲ್ಟ್ ಗ್ರೂಪ್‍ಗೆ ಹಾಕಿದ ಪಿಜ್ಜಾ ಡೆಲಿವರಿ ಬಾಯ್

    ಚೆನ್ನೈ: ಹಲವು ನಟಿಯರು ಹಲವು ರೀತಿಯ ಸಂಕಷ್ಟಗಳನ್ನು ಎದುರಿಸುತ್ತಾರೆ. ಕೆಲವರು ಈ ಕುರಿತು ಹೇಳಿಕೊಂಡು ಇತರರಲ್ಲಿ ಜಾಗೃತಿ ಮೂಡಿಸುತ್ತಾರೆ. ಇನ್ನೂ ಕೆಲವರು ಅದನ್ನು ಅಲ್ಲಿಗೇ ಮುಚ್ಚಿ ಹಾಕುತ್ತಾರೆ. ಇದೀಗ ದಿಕ್ಷಿಣದ ಖ್ಯಾತ ನಟಿಗೂ ಅದೇ ರೀತಿಯಾಗಿದ್ದು, ಫಿಜ್ಜಾ ಡೆಲಿವರಿ ಬಾಯ್ ನಟಿಯ ಮೊಬೈಲ್ ನಂಬರನ್ನು ಅಡಲ್ಟ್ ಗ್ರೂಪ್‍ಗೆ ಶೇರ್ ಮಾಡುವ ಮೂಲಕ ಪುಂಡಾಟ ಮೆರೆದಿದ್ದಾನೆ. ಈ ಕುರಿತು ಅವರು ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

    ದಕ್ಷಿಣದ ಚಿತ್ರರಂಗದಲ್ಲಿ ಅಪಾರ ಖ್ಯಾತಿ ಪಡೆದಿರುವ ನಟಿ ಗಾಯಾತ್ರಿ ಸಾಯಿ ಸಂಕಷ್ಟಕ್ಕೆ ಸಿಲುಕಿದ್ದು, ಅವರ ನಂಬರನ್ನು ಅಡಲ್ಟ್ ವಾಟ್ಸಪ್ ಗ್ರೂಪ್ ನಲ್ಲಿ ಹಂಚಿಕೊಳ್ಳಲಾಗಿದೆ. ಇದರಿಂದಾಗಿ ಅವರಿಗೆ ಸಿಕ್ಕಾಪಟ್ಟೆ ಕರೆಗಳು ಬರುತ್ತಿದ್ದು, ತೀವ್ರ ಕಿರುಕುಳ ಅನುಭವಿಸುತ್ತಿದ್ದಾರೆ. ಅಷ್ಟಕ್ಕೂ ಈ ನಂಬರ್ ಹೇಗೆ ಗ್ರೂಪ್‍ನಲ್ಲಿ ಶೇರ್ ಮಾಡಲಾಗಿದೆ, ಯಾರು ಶೇರ್ ಮಾಡಿದರು ಎಂಬುದಕ್ಕೆ ಅಚ್ಚರಿಯ ಉತ್ತರ ಸಿಕ್ಕಿದ್ದು, ಫಿಜ್ಜಾ ಡೆಲಿವರಿ ಬಾಯ್ ಈ ರೀತಿಯ ಕೃತ್ಯ ಎಸಗಿದ್ದಾನೆ ಎಂಬ ಭಯಾನಕ ಮಾಹಿತಿ ಹೊರ ಬಿದ್ದಿದೆ.

    ಗಾಯತ್ರಿಯವರು ಪಿಜ್ಜಾ ಆರ್ಡರ್ ಮಾಡಿದ್ದಾರೆ. ಈ ವೇಳೆ ಪಿಜ್ಜಾ ಡೆಲಿವರಿ ಮಾಡಲು ಬಂದ ಬಾಯ್ ಅದೇ ಮೊಬೈಲ್ ಸಂಖ್ಯೆಯನ್ನು ಅಡಲ್ಟ್ ವಾಟ್ಸಪ್ ಗ್ರೂಪ್ ನಲ್ಲಿ ಹಂಚಿಕೊಂಡಿದ್ದಾನೆ. ಹೀಗಾಗಿ ನಟಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಲ್ಲದೆ ಪರಿಹಾರಕ್ಕಾಗಿ ಪೊಲೀಸರಿಗೆ ಮನವಿ ಮಾಡಿದ್ದಾರೆ.

    https://twitter.com/gainsai/status/1232529346541178882

    ಈ ಕುರಿತು ಟ್ವೀಟ್ ಮಾಡಿರುವ 26 ವರ್ಷದ ನಟಿ ಗಾಯತ್ರಿಯವರು ಮಾಹಿತಿ ಹಂಚಿಕೊಂಡಿದ್ದು, ಮಹಿಳೆಯರು ಜಾಗೃತರಾಗಿರುವಂತೆ ಎಚ್ಚರಿಸಿದ್ದಾರೆ. “ಡೊಮಿನೋಸ್ ಡೆಲಿವರಿ ಬಾಯ್ ಫೆಬ್ರವರಿ 9 ರಂದು ಚೆನ್ನೈನಲ್ಲಿರುವ ನಮ್ಮ ನಿವಾಸಕ್ಕೆ ಭೇಟಿ ನೀಡಿ ಪಿಜ್ಜಾ ಡೆಲಿವರಿ ಮಾಡಿದ್ದಾನೆ. ಆದರೆ ನನ್ನ ಮೊಬೈಲ್ ಸಂಖ್ಯೆಯನ್ನು ಅಡಲ್ಟ್ ವಾಟ್ಸಪ್ ಗ್ರೂಪ್ ನಲ್ಲಿ ಹಂಚಿಕೊಂಡಿದ್ದಾನೆ. ಈ ಕುರಿತು ಡೊಮಿನೋಸ್‍ಗೆ ದೂರು ನೀಡಿದರೂ ಅದು ಪೆಂಡಿಂಗ್‍ನಲ್ಲಿದೆ. ಪ್ರಕರಣದ ಕುರಿತು ನಿಮ್ಮ ಕಚೇರಿಯ ಯಾವುದೇ ಸದಸ್ಯ ನಮ್ಮನ್ನು ಸಂಪರ್ಕಿಸಿಲ್ಲ. ನನಗೆ ಹಲವರು ಕಾಲ್ ಹಾಗೂ ಮೆಸೇಜ್ ಮಾಡುತ್ತಿದ್ದಾರೆ ಎಂದು ಡೊಮಿನೋಸ್ ಇಂಡಿಯಾಗೆ ಟ್ಯಾಗ್ ಮಾಡಿ ಗಾಯತ್ರಿ ದೂರು ಸಲ್ಲಿಸಿದ್ದಾರೆ. ಅಲ್ಲದೆ ಈ ಕುರಿತು ಎಚ್ಚರದಿಂದಿರುವಂತೆ ಮಹಿಳೆಯರಿಗೆ ಕರೆ ನಿಡಿದ್ದಾರೆ.

    ಘಟನೆಗೆ ಸಂಬಂಧಿಸಿದಂತೆ ಚೆನ್ನೈ ಮಹಿಳಾ ಆಯೋಗಕ್ಕೂ ಗಾಯತ್ರಿ ದೂರು ನೀಡಿದ್ದು, ಕೂಡಲೇ ತಮ್ಮ ನಂಬರ್ ತೆಗೆದುಹಾಕಿ, ಅಲ್ಲದೆ ಅಪರಾಧಿಗಳಿಗೆ ತಕ್ಕ ಶಿಕ್ಷೆ ವಿಧಿಸಿ ಎಂದು ಕೋರಿದ್ದಾರೆ.

    ದಕ್ಷಿಣ ಚಿತ್ರರಂಗದಲ್ಲಿ ಗಾಯತ್ರಿ ಚಿರಪರಿಚಿತರಾಗಿದ್ದು, ಬಾಲಿವುಡ್ ನ ಒಂದು ಚಿತ್ರದಲ್ಲಿಯೂ ನಟಿಸಿದ್ದಾರೆ. 1990ರಲ್ಲಿ ತೆರೆಕಂಡ ಮಣಿರತ್ನಂ ನಿರ್ದೇಶನದ ‘ಅಂಜಲಿ’ ತಮಿಳು ಚಿತ್ರದಲ್ಲಿ ಬಾಲನಟಿಯಾಗಿ ನಟಿಸುವ ಮೂಲಕ ಗಾಯತ್ರಿ ಸಾಯಿ ಅವರು ಚಿತ್ರರಂಗವನ್ನು ಪ್ರವೇಶಿಸಿದ್ದರು. ಇದೀಗ ಬಾಲಿವುಡ್ ಸೇರಿದಂತೆ ತಮಿಳಿನ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

  • ರಶ್ಮಿಕಾ ಫೋಟೋಗಳನ್ನು ತಮಿಳು ನಟ ವಡಿವೇಲುಗೆ ಹೋಲಿಸಿದ ನೆಟ್ಟಿಗರು

    ರಶ್ಮಿಕಾ ಫೋಟೋಗಳನ್ನು ತಮಿಳು ನಟ ವಡಿವೇಲುಗೆ ಹೋಲಿಸಿದ ನೆಟ್ಟಿಗರು

    ಚೆನ್ನೈ: ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಪದೇ ಪದೇ ಟ್ರೋಲ್ ಆಗುತ್ತಾನೆ ಇರುತ್ತಾರೆ. ಇದೀಗ ರಶ್ಮಿಕಾ ಅವರು ಹೊಸ ಫೋಟೋಶೂಟ್ ಮಾಡಿಸಿದ್ದು, ಅವರ ಫೋಟೋವನ್ನು ನೆಟ್ಟಿಗರು ತಮಿಳಿನ ಹಾಸ್ಯ ನಟ ವಡಿವೇಲು ಅವರಿಗೆ ಹೋಲಿಕೆ ಮಾಡಿ ಟ್ರೋಲ್ ಮಾಡುತ್ತಿದ್ದಾರೆ.

    ಇತ್ತೀಚೆಗೆ ರಶ್ಮಿಕಾ ತಿಳಿಗುಲಾಬಿ ಬಣ್ಣದ ಫ್ಲೋರಲ್ ಡಿಸೈನ್ ಡ್ರೆಸ್ ಧರಿಸಿ ಅದಕ್ಕೆ ಫಿಶ್‍ಟೇಲ್ ಹೇರ್ ಸ್ಟೈಲ್ ಮಾಡಿಸಿ ವಿವಿಧ ಎಕ್ಸ್‌ಪ್ರೆಶನ್ ಕೊಡುವ ಮೂಲಕ ವಿಭಿನ್ನವಾಗಿ ಫೋಟೋಶೂಟ್ ಮಾಡಿಸಿದ್ದಾರೆ. ಅಲ್ಲದೆ ಈ ಫೋಟೋವನ್ನು ತಮ್ಮ ಇನ್‍ಸ್ಟಾದಲ್ಲೂ ಹಂಚಿಕೊಂಡಿದ್ದಾರೆ.

    ಈ ಫೋಟೋ ನೋಡಿದ ನೆಟ್ಟಿಗರು ರಶ್ಮಿಕಾರಂತೆ ಎಕ್ಸ್‌ಪ್ರೆಶನ್ ನೀಡಿದ ವಡಿವೇಲು ಅವರ ಫೋಟೋ ಜೊತೆ ಹೋಲಿಕೆ ಮಾಡಿದ್ದಾರೆ. ಅಲ್ಲದೆ ವಡಿವೇಲು ಫಾರ್ ಲೈಫ್ ಎಂಬ ಹ್ಯಾಶ್‍ಟ್ಯಾಗ್ ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುತ್ತಿದ್ದಾರೆ. ರಶ್ಮಿಕಾ ಹಾಗೂ ವಡಿವೇಲು ಅವರ ಫೋಟೋ ನೋಡಿ ಕೆಲವರು ರಶ್ಮಿಕಾ ಇನ್ನೂ ಮಗುವಿನಂತೆ ವರ್ತಿಸುತ್ತಾರೆ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು, ರಶ್ಮಿಕಾ ಯಾವಾಗಲೂ ಓವರ್ ಆ್ಯಕ್ಟಿಂಗ್ ಮಾಡುತ್ತಾರೆ ಎಂದು ಕಮೆಂಟ್ ಮಾಡುತ್ತಿದ್ದಾರೆ.

    https://twitter.com/Troll_Cinema/status/1231434815905230853?ref_src=twsrc%5Etfw%7Ctwcamp%5Etweetembed%7Ctwterm%5E1231434815905230853&ref_url=https%3A%2F%2Ftimesofindia.indiatimes.com%2Fentertainment%2Ftamil%2Fmovies%2Fnews%2Fthis-hilarious-vadivelu-version-of-rashmika-mandannas-recent-photoshoot-will-leave-you-in-splits%2Farticleshow%2F74278873.cms

    ಈ ಹಿಂದೆ ಹೈದರಾಬಾದ್‍ನಲ್ಲಿ ರಶ್ಮಿಕಾ, ಪ್ರಿನ್ಸ್ ಮಹೇಶ್ ಬಾಬು ಅವರ ಜೊತೆ ನಟಿಸಿದ ‘ಸರಿಲೇರು ನೀಕ್ಕೆವ್ವರು’ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ವೇದಿಕೆ ಮೇಲೆ ರಶ್ಮಿಕಾ ಭಾಷಣ ಕೇಳಿ ತೆಲುಗು ಪ್ರೇಕ್ಷಕರು ಅವರನ್ನು ಟ್ರೋಲ್ ಮಾಡಿದ್ದರು. ಚಿತ್ರದ ಟ್ರೈಲರ್ ಬಿಡುಗಡೆ ವೇಳೆ ರಶ್ಮಿಕಾ ಮಾತನಾಡಿದ ವಿಡಿಯೋ ನೋಡಿದ ಪ್ರೇಕ್ಷಕರು ಅವರಿಗೆ ‘ಓವರ್ ಆ್ಯಕ್ಟಿಂಗ್’, ‘ಓವರ್ ಆ್ಯಕ್ಟಿಂಗ್‍ಗೆ ಮುಖ ಏನಾದರೂ ಇದ್ದರೆ ಅದು ರಶ್ಮಿಕಾ ರೀತಿ ಇರುತಿತ್ತು’ ಎಂದು ಸಾಕಷ್ಟು ಟ್ರೋಲ್ ಮಾಡಿದ್ದರು.

    ಸದ್ಯ ರಶ್ಮಿಕಾ ತೆಲುಗಿನಲ್ಲಿ ನಟ ನಿತಿನ್ ಜೊತೆ ನಟಿಸಿದ ‘ಭೀಷ್ಮ’ ಚಿತ್ರ ಬಿಡುಗಡೆಯಾಗಿದ್ದು, ಬಾಕ್ಸ್ ಆಫೀಸ್‍ನಲ್ಲಿ ಭರ್ಜರಿ ಕಲೆಕ್ಷನ್ ಆಗುತ್ತಿದೆ. ಈ ಸಿನಿಮಾ ಸಿತಾರಾ ಎಂಟರ್ ಟೇನ್‍ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿದ್ದು, ವೆಂಕಿ ಕುದುಮುಲ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.

  • ತಮಿಳು ನಟ ಅಜಿತ್‍ಗೆ ಅಪಘಾತ- ಅಭಿಮಾನಿಗಳ ಪ್ರಾರ್ಥನೆ

    ತಮಿಳು ನಟ ಅಜಿತ್‍ಗೆ ಅಪಘಾತ- ಅಭಿಮಾನಿಗಳ ಪ್ರಾರ್ಥನೆ

    – ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ

    ಚೆನ್ನೈ: ತಮಿಳು ಚಿತ್ರರಂಗದ ಸ್ಟಾರ್ ನಟ ಅಜಿತ್ ಕುಮಾರ್ ಅವರಿಗೆ ಅಪಘಾತವಾಗಿದ್ದು, ಶೂಟಿಂಗ್ ವೇಳೆ ರೇಸ್ ಸೀನ್ ಶೂಟ್ ಮಾಡುತ್ತಿದ್ದಾಗ ಬೈಕ್ ಅಪಘಾತವಾಗಿದೆ. ಈ ಸುದ್ದಿ ಪಸರಿಸುತ್ತಿದ್ದಂತೆ ಅಭಿಮಾನಿಗಳಲ್ಲಿ ಬೇಸರ ಮೂಡಿದ್ದು, ಬೇಗ ಗುಣಮುಖವಾಗಲೆಂದು ಪ್ರಾರ್ಥಿಸುತ್ತಿದ್ದಾರೆ.

    ನಟ ಅಜಿತ್ ಕುಮಾರ್ ಕಳೆದ ವರ್ಷ ‘ವಿಶ್ವಾಸಂ’ ಮತ್ತು ‘ನೇರ್ಕೊಂಡ ಪಾರವೈ’ ಹಿಟ್ ಸಿನಿಮಾಗಳನ್ನು ನೀಡಿದ್ದರು. ಅದೇ ರೀತಿ ಈ ವರ್ಷದ ಪ್ರಾಜೆಕ್ಟರ್‍ಗಳತ್ತ ಚಿತ್ತ ಹರಿಸಿದ್ದರು. ಸದ್ಯ ಹೊಸ ಸಿನಿಮಾದ ಶೂಟಿಂಗ್‍ನಲ್ಲಿ ನಿರತರಾಗಿದ್ದ ಅವರಿಗೆ ವಿಘ್ನ ಎದುರಾಗಿದೆ. ಬೈಕ್ ಅಪಘಾತ ಆಗಿರುವುದರಿಂದ ಕೆಲವು ದಿನಗಳ ಕಾಲ ಚಿತ್ರೀಕರಣಕ್ಕೆ ಗೈರಾಗಲಿದ್ದಾರೆ ಎನ್ನಲಾಗಿದೆ.

    ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಎಚ್.ವಿನೋದ್ ಆ್ಯಕ್ಷನ್-ಕಟ್ ಹೇಳುತ್ತಿರುವ ಹೊಸ ಸಿನಿಮಾದಲ್ಲಿ ಅಜಿತ್ ಬ್ಯುಸಿಯಾಗಿದ್ದಾರೆ. ಈ ಹಿಂದೆ ‘ನೇರ್ಕೊಂಡ ಪಾರವೈ’ ಚಿತ್ರದಲ್ಲಿ ಸಹ ಅಜಿತ್ ಮತ್ತು ವಿನೋದ್ ಜೊತೆಯಾಗಿ ಕೆಲಸ ಮಾಡಿದ್ದರು. ಇಬ್ಬರ ಕಾಂಬಿನೇಷನ್‍ನಲ್ಲಿ ಮೂಡಿಬರುತ್ತಿರುವ ಹೊಸ ಚಿತ್ರದ ಶೂಟಿಂಗ್ ವೇಳೆ ಅಪಘಾತ ಸಂಭವಿಸಿದೆ. ಚೆನ್ನೈನಲ್ಲಿ ನಡೆಯುತ್ತಿದ್ದ ಸಾಹಸ ಸನ್ನಿವೇಶದ ಚಿತ್ರೀಕರಣದ ಸಂದರ್ಭದಲ್ಲಿ ಅಜಿತ್ ಓಡಿಸುತ್ತಿದ್ದ ಬೈಕ್ ಸ್ಕಿಡ್ ಆಗಿ ಅಪಘಾತ ಸಂಭವಿಸಿದೆ. ಅಜಿತ್ ಕೆಳಗೆ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ.

    ಬೈಕ್ ಮೇಲಿಂದ ಬಿದ್ದ ನಂತರ ಅಜಿತ್ ಅವರಿಗೆ ಗಾಯಗಳಾಗಿದ್ದವು. ಆದರೂ ಕೆಲ ನಿಮಿಷಗಳ ಕಾಲ ಬ್ರೇಕ್ ಪಡೆದು ಮತ್ತೆ ಶೂಟಿಂಗ್‍ನಲ್ಲಿ ಪಾಲ್ಗೊಂಡರಂತೆ. ಆ ದಿನದ ಶೂಟಿಂಗ್ ಮುಗಿದ ಬಳಿಕವಷ್ಟೇ ಫ್ಯಾಮಿಲಿ ಡಾಕ್ಟರ್ ಬಳಿ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಸುದ್ದಿ ತಿಳಿದ ಅಭಿಮಾನಿಗಳು ತೀವ್ರ ಬೇಸರಗೊಂಡಿದ್ದಾರೆ.

    ದಕ್ಷಿಣ ಭಾರತದಲ್ಲಿ ನಟ ಅಜಿತ್‍ಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಅಜಿತ್ ಬೇಗ ಗುಣಮುಖವಾಗಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನವೇ ಪ್ರಾರಂಭವಾಗಿದೆ. #GetWellSoonTHALA ಎಂಬ ಹ್ಯಾಷ್‍ಟ್ಯಾಗ್ ಮೂಲಕ ಅಭಿಯಾನ ಪ್ರಾರಂಭಿಸಿದ್ದಾರೆ. ಈ ಮೂಲಕ ತಮ್ಮ ನೆಚ್ಚಿನ ನಟ ಬೇಗ ಗುಣಮುಖವಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

  • ತಮಿಳು ನಟ ವಿಜಯ್‍ಗೆ ಐಟಿ ಶಾಕ್ – ಸಿನಿಮಾ ಶೂಟಿಂಗ್ ಸ್ಪಾಟ್‍ನಲ್ಲೇ ವಿಚಾರಣೆ

    ತಮಿಳು ನಟ ವಿಜಯ್‍ಗೆ ಐಟಿ ಶಾಕ್ – ಸಿನಿಮಾ ಶೂಟಿಂಗ್ ಸ್ಪಾಟ್‍ನಲ್ಲೇ ವಿಚಾರಣೆ

    ಚೆನ್ನೈ: ತಮಿಳು ನಟ ವಿಜಯ್ ಅವರಿಗೆ ಐಟಿ ಶಾಕ್ ನೀಡಿದ್ದು, ಸಿನಿಮಾ ಶೂಟಿಂಗ್ ಸೆಟ್‍ನಲ್ಲೇ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

    ಕಳೆದ ವರ್ಷ ಬಿಡುಗಡೆಯಾದ ‘ಬಿಗಿಲ್’ ಸಿನಿಮಾ ನಿರ್ಮಿಸಿದ್ದ ಎಜಿಎಸ್ ಸಿನಿಮಾ ಸಂಸ್ಥೆಯ ಕಚೇರಿಗಳಲ್ಲಿ ಶೋಧ ಕೈಗೊಂಡಿದೆ. ಸದ್ಯ ಐಟಿ ಅಧಿಕಾರಿಗಳು ಎಜಿಎಸ್ ಸಂಸ್ಥೆಗೆ ಸಂಬಂಧಿಸಿದ 20 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.

    ದಾಳಿ ನಡೆದ ವೇಳೆ ವಿಜಯ್ ಅವರು ತಮಿಳುನಾಡಿನ ಕುಡಲೂರು ಜಿಲ್ಲೆಯ ನೈವೇಲಿಯಲ್ಲಿ ತಮ್ಮ ಮುಂಬರುವ ‘ಮಾಸ್ಟರ್’ ಸಿನಿಮಾ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದರು. ಈ ವೇಳೆ ಐಟಿ ಅಧಿಕಾರಿಗಳು ಅಲ್ಲಿಯೇ ವಿಜಯ್ ಅವರ ವಿಚಾರಣೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಚಿತ್ರದ ಚಿತ್ರೀಕರಣವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.

    ಕಳೆದ ವರ್ಷ ಬಿಡುಗಡೆಯಾಗಿದ್ದ ಬಿಗಿಲ್ ಸಿನಿಮಾ ಸೂಪರ್ ಹಿಟ್ ಆಗಿದ್ದು, ಚಿತ್ರದ ಕಲೆಕ್ಷನ್ 180 ಕೋಟಿ ರೂ. ಗಳಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಚಿತ್ರದ ಕಲೆಕ್ಷನ್ ಬಗ್ಗೆ ವಿವರಣೆ ಪಡೆಯಲು ಈ ಹಿಂದೆ ಐಟಿ ಇಲಾಖೆ ಸಮನ್ಸ್ ಜಾರಿ ಮಾಡಿತ್ತು.

    ಮಧುರೈ ಮೂಲದ ಫೈನಾನ್ಶಿಯರ್ ಅನ್ಬು ಚೆಳಿಯಾನ್‍ನ ಆಸ್ತಿಪಾಸ್ತಿಗಳ ಶೋಧ ಕೈಗೊಂಡಿದೆ. ಬಿಗಿಲ್ ಸಿನಿಮಾ 180 ಕೋಟಿ ರೂ. ಗಳಿಕೆ ಮಾಡಿತ್ತು. ಸಿನಿಮಾಗಳಿಗೆ ಪಡೆದಿರುವ ಸಂಭಾವನೆ ಬಗ್ಗೆ ನಟ ವಿಜಯ್ ಅವರಿಗೆ ಐಟಿ ಪ್ರಶ್ನೆ ಕೇಳಿದೆ ಎಂದು ಮೂಲಗಳು ತಿಳಿಸಿವೆ.

    ಐಟಿ ದಾಳಿ ಬಗ್ಗೆ ವಿಜಯ್ ಪ್ರತಿಕ್ರಿಯೆ ನೀಡಿ, ಕಳೆದ ವಾರ ಕೂಡ ಐಟಿ ಅಧಿಕಾರಿಗಳ ನನ್ನ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿದ್ದರು. ನನ್ನ ಕುಟುಂಬ ಹಾಗೂ ಸಿಬ್ಬಂದಿ ಅಧಿಕಾರಿಗಳ ಶೋಧ ಕಾರ್ಯಕ್ಕೆ ಸಹಕರಿಸಿದ್ದಾರೆ. ಸದ್ಯ ವಿವರಣೆಯ ದಾಖಲೆಗಳನ್ನು ಅಧಿಕಾರಿಗಳಿಗೆ ನೀಡಲಾಗಿದೆ ಎಂದರು.

  • ಕಾಲಿವುಡ್‍ನ ಯಶಸ್ಸಿನೊಂದಿಗೆ ಸ್ಟಾರ್ ನಟನ ಜೊತೆ ಬಾಲಿವುಡ್‍ಗೆ ರೀ ಎಂಟ್ರಿಕೊಟ್ಟ ಧನುಷ್

    ಕಾಲಿವುಡ್‍ನ ಯಶಸ್ಸಿನೊಂದಿಗೆ ಸ್ಟಾರ್ ನಟನ ಜೊತೆ ಬಾಲಿವುಡ್‍ಗೆ ರೀ ಎಂಟ್ರಿಕೊಟ್ಟ ಧನುಷ್

    ಮುಂಬೈ: ತಮಿಳು ಚಿತ್ರರಂಗದಲ್ಲಿ ಯಶಸ್ವಿ ನಾಯಕನಾಗಿ ಮಿಂಚುತ್ತಿರುವ ಧನುಷ್ ಅವರು ಸ್ಟಾರ್ ನಟನೊಂದಿಗೆ ಬಾಲಿವುಡ್‍ಗೆ ಮತ್ತೆ ರೀ ಎಂಟ್ರಿ ಕೊಡಲು ಸಿದ್ಧವಾಗಿದ್ದಾರೆ.

    2013ರಲ್ಲಿ ಬಿಡುಗಡೆಯಾದ ರಾಂಜನ್ ಚಿತ್ರದ ಮೂಲಕ ಬಾಲಿವುಡ್‍ಗೆ ಮೊದಲ ಬಾರಿ ಎಂಟ್ರಿಕೊಟ್ಟಿದ್ದ ಧನುಷ್, ನಂತರ 2015ರಲ್ಲಿ ಬಿಗ್‍ಬಿ ಅಮಿತಾ ಬಚ್ಚನ್ ಜೊತೆ ಶಮಿತಾಭ್ ಸಿನಿಮಾ ಮಾಡಿದ್ದರು. ನಂತರ ಹಿಂದಿ ಚಿತ್ರದಲ್ಲಿ ಅಷ್ಟೇನು ಕಾಣಿಸಿಕೊಂಡಿರಲಿಲ್ಲ. ಈಗ 5 ವರ್ಷದ ನಂತರ ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಅವರು ಜೊತೆ ನಟಿಸಲು ಸಿದ್ಧವಾಗಿದ್ದಾರೆ. ಈ ಮೂಲಕ ಬಾಲಿವುಡ್‍ಗೆ ರೀ ಎಂಟ್ರಿ ಕೊಡುತ್ತಿದ್ದಾರೆ.

    ಹೌದು ಕಾಲಿವುಡ್‍ನಲ್ಲಿ ಅಸುರನ್, ಪಟಾಸ್ ಚಿತ್ರಗಳ ಯಶಸ್ಸಿನ ನಂತರ ಧನುಷ್ ಅವರು, ಬಾಲಿವುಡ್‍ನಲ್ಲಿ ಸ್ಟಾರ್ ಡೈರೆಕ್ಟರ್ ಆನಂದ್ ಎಲ್ ರೈ ಅವರು ನಿರ್ದೇಶನ ಮಾಡುತ್ತಿರುವ ಅತ್ರಂಗಿ ರೇ ಎಂಬ ಚಿತ್ರದಲ್ಲಿ ನಟಿಸಲಿದ್ದಾರೆ. ಈ ಚಿತ್ರದಲ್ಲಿ ಧನುಷ್ ಜೊತೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ನಟಿಸಲಿದ್ದಾರೆ. ಈ ಚಿತ್ರದ ನಾಯಕಿಯಾಗಿ ನಟ ಸೈಫ್ ಅಲಿಖಾನ್ ಅವರು ಮಗಳು ಸಾರಾ ಅಲಿಖಾನ್ ನಟಿಸಲಿದ್ದಾರೆ.

    ಸದ್ಯ ಈ ಸಿನಿಮಾಗಾಗಿ ಚಿತ್ರತಂಡ ಫೋಟೋಶೂಟ್ ಮಾಡಿಸಿದ್ದು, ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ. ನಾಯಕನಟಿ ಸಾರಾ ಅಲಿಖಾನ್ ಅವರಿಗೆ ಧನುಷ್ ಮತ್ತು ಅಕ್ಷಯ್ ಕುಮಾರ್ ಅವರು ಮುತ್ತಿಡುತ್ತಿರುವ ಫೋಟೋ ತುಂಬ ವೈರಲ್ ಆಗಿದೆ. ಇದು ಒಂದು ಮ್ಯೂಸಿಕಲ್ ಸಿನಿಮಾವಾಗಿದ್ದು, ಹಿಮಾಂಶು ಶರ್ಮಾ ಅವರು ಬರೆದಿರುವ ಕಥೆಯನ್ನು ಆನಂದ್ ಎಲ್ ರೈ ಅವರು ನಿರ್ದೇಶನ ಮಾಡುತ್ತಿದ್ದಾರೆ.

    ಸದ್ಯ ಧನುಷ್ ಅವರು, ಕಾಲಿವುಡ್‍ನಲ್ಲಿ ಸಖತ್ ಬೇಡಿಕೆಯ ನಟನಾಗಿದ್ದು, ಅವರ ನಟನೆಯ ಪಟಾಸ್ ಚಿತ್ರ ಇತ್ತೀಚೆಗೆ ತೆರೆಕಂಡು ಸೂಪರ್ ಹಿಟ್ ಆಗಿತ್ತು. ಈಗಾಗಲೇ ಧನುಷ್ ಕೈಯಲ್ಲಿ ಸುರಳಿ ಮತ್ತು ಕರ್ಣನ್ ಎಂಬ ಎರಡು ಚಿತ್ರಗಳು ಇದ್ದು, ಇವುಗಳ ಜೊತೆಗೆ ಅತ್ರಂಗಿ ರೇ ಚಿತ್ರವನ್ನು ಧನುಷ್ ಒಪ್ಪಿಕೊಂಡಿದ್ದಾರೆ. ಈ ಚಿತ್ರ ಧನುಷ್ ಅವರ 40 ನೇ ಸಿನಿಮಾವಾಗಿದ್ದು, ಮಾರ್ಚ್ 1 ರಿಂದ ಚಿತ್ರೀಕರಣ ಆರಂಭವಾಗಲಿದೆ.

  • ಹೆಣ್ಣು ಮಗುವಿಗೆ ಜನ್ಮ ನೀಡಿದ ದ್ರೌಪದಿ ಪಾತ್ರಧಾರಿ ಸ್ನೇಹ

    ಹೆಣ್ಣು ಮಗುವಿಗೆ ಜನ್ಮ ನೀಡಿದ ದ್ರೌಪದಿ ಪಾತ್ರಧಾರಿ ಸ್ನೇಹ

    ಚೆನ್ನೈ: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ `ಮುನಿರತ್ನ ಕುರುಕ್ಷೇತ್ರ’ ಚಿತ್ರದಲ್ಲಿ ದ್ರೌಪದಿ ಪಾತ್ರದಲ್ಲಿ ನಟಿಸಿದ ನಟಿ ಸ್ನೇಹ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

    ನಟಿ ಸ್ನೇಹ ಇಂದು ಮಗುವಿಗೆ ಜನ್ಮ ನೀಡಿದ್ದು, ತಾಯಿ-ಮಗು ಆರೋಗ್ಯವಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಸ್ನೇಹ ಹಾಗೂ ಅವರ ಪತಿ ಪ್ರಸನ್ನ ಅವರಿಗೆ ಇದು ಎರಡನೇ ಮಗುವಾಗಿದ್ದು, ಈ ವಿಷಯವನ್ನು ಇನ್‍ಸ್ಟಾದಲ್ಲಿ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ.

     

    View this post on Instagram

     

    Its a girl❤❤

    A post shared by Sneha Prasanna (@realactress_sneha) on

    ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಸ್ನೇಹ ಅವರು ಸಾಂಪ್ರದಾಯಿಕವಾಗಿ ತಮ್ಮ ಸೀಮಂತ ಕಾರ್ಯಕ್ರಮವನ್ನು ಮಾಡಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಸ್ನೇಹ ಅವರ ಕುಟುಂಬಸ್ಥರು, ಸಂಬಂಧಿಕರು ಹಾಗೂ ಆತ್ಮೀಯ ಸ್ನೇಹಿತರು ಮಾತ್ರ ಭಾಗಿಯಾಗಿದ್ದರು.

    ಮೇ 11, 2012ರಲ್ಲಿ ಸ್ನೇಹ ತಮ್ಮ ಗೆಳೆಯ ಪ್ರಸನ್ನ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 2009ರಲ್ಲಿ ‘ಅಚಮಂಡು ಅಚಾಮುಂಡು’ ಚಿತ್ರದ ಚಿತ್ರೀಕರಣದ ವೇಳೆ ಇಬ್ಬರು ಪ್ರೀತಿಸಲು ಶುರು ಮಾಡಿದ್ದರು. ಬಳಿಕ ಇಬ್ಬರು ರಿಲೇಶಿನ್‍ಶಿಪ್‍ನಲ್ಲಿ ಇದ್ದಾರೆ ಎಂಬ ಗಾಸಿಪ್ ಹರಿದಾಡುತ್ತಿತ್ತು. ನಂತರ ಇಬ್ಬರು ಪೋಷಕರನ್ನು ಒಪ್ಪಿಸಿ ಮದುವೆಯಾಗಿದ್ದರು.

    ಮದುವೆಯಾಗಿ ಮೂರು ವರ್ಷಗಳ ನಂತರ ಸ್ನೇಹ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆ ಮಗುವಿಗೆ ‘ವಿಹಾನ್’ ಎಂದು ನಾಮಕರಣ ಮಾಡಿದ್ದರು. ಈಗ ಸ್ನೇಹ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಅಭಿಮಾನಿಗಳು ದಂಪತಿಗೆ ಶುಭಾಶಯ ತಿಳಿಸುತ್ತಿದ್ದಾರೆ.

  • ಮದುವೆ ಬಗ್ಗೆ ಮೌನ ಮುರಿದ ನಟಿ ತ್ರಿಷಾ

    ಮದುವೆ ಬಗ್ಗೆ ಮೌನ ಮುರಿದ ನಟಿ ತ್ರಿಷಾ

    ಚೆನ್ನೈ: ಬಹುಭಾಷಾ ನಟಿ ತ್ರಿಷಾ ಕೊನೆಗೂ ತಮ್ಮ ಮದುವೆ ಬಗ್ಗೆ ಮೌನ ಮುರಿದಿದ್ದಾರೆ.

    ತ್ರಿಷಾ ತಮ್ಮ ಇನ್‍ಸ್ಟಾದಲ್ಲಿ ಅಭಿಮಾನಿಗಳಿಗೆ ಪ್ರಶ್ನೆ ಕೇಳುವಂತೆ ಪೋಸ್ಟ್ ಹಾಕಿಕೊಂಡಿದ್ದರು. ಈ ವೇಳೆ ಅಭಿಮಾನಿಯೊಬ್ಬರು, ನಿಮ್ಮ ಬಕೆಟ್ ಲಿಸ್ಟ್ ನಲ್ಲಿರುವ ಕ್ರೇಝಿಯೆಸ್ಟ್ ವಿಷಯ ಏನು ಎಂದು ಪ್ರಶ್ನಿಸಿದ್ದಾರೆ. ಅಭಿಮಾನಿಯ ಪ್ರಶ್ನೆಗೆ ತ್ರಿಷಾ “ಲಾಸ್ ವೇಗಾಸ್‍ನಲ್ಲಿ ಮದುವೆಯಾಗುವುದು” ಎಂದು ಉತ್ತರಿಸಿದ್ದಾರೆ. ಈ ಉತ್ತರ ನೋಡಿದ ಅಭಿಮಾನಿಗಳು ತ್ರಿಷಾ ಅತಿ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

    ಈ ಹಿಂದೆ ತ್ರಿಷಾ ತೆಲುಗು ನಟ ರಾಣಾ ದಗ್ಗುಬಾಟಿ ಜೊತೆ ಡೇಟಿಂಗ್ ಮಾಡುತ್ತಿದ್ದರು. ಬಳಿಕ ಇಬ್ಬರ ಸಂಬಂಧ ಸರಿ ಹೋಗಲಿಲ್ಲ. ಹಾಗಾಗಿ ಇಬ್ಬರು ಬ್ರೇಕಪ್ ಮಾಡಿಕೊಂಡಿದ್ದರು. ಇದಾದ ಬಳಿಕ ತ್ರಿಷಾ ಉದ್ಯಮಿ ವರುಣ್ ಜೊತೆ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಡಿಸೆಂಬರ್ 2015ರಲ್ಲಿ ತ್ರಿಷಾ ತಮ್ಮ ನಿಶ್ಚಿತಾರ್ಥವನ್ನು ಮುರಿದುಕೊಂಡಿದ್ದರು. ಕೆಲವೇ ತಿಂಗಳಲ್ಲಿ ಮುರಿದು ಬಿದ್ದಾಗಲೂ ಧೈರ್ಯದಿಂದ ಮಾತನಾಡಿದ್ದರು.

    ಸದ್ಯ ತ್ರಿಷಾ ಮಲೆಯಾಳಂ ನಟ ಮೋಹನ್‍ಲಾಲ್ ನಟಿಸುತ್ತಿರುವ ‘ರಾಮ್’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ತ್ರಿಷಾ ಡಾ. ವಿನಿತಾ ಪಾತ್ರ ನಿರ್ವಹಿಸುತ್ತಿದ್ದು, ಇಂದ್ರಜಿತ್ ಸುಕುಮಾರನ್, ಆದಿಲ್ ಹುಸೇನ್, ದುರ್ಗಾ ಕೃಷ್ಣನ್, ಸಾಯಿಕುಮಾರ್, ಸುಮನ್ ಸೇರಿದಂತೆ ಹಲವು ಕಲಾವಿದರು ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದಾರೆ.

  • ಶಿವಮೊಗ್ಗ ಜೈಲಿಗೆ ತಮಿಳಿನ ಸೂಪರ್ ಸ್ಟಾರ್ ನಟ ವಿಜಯ್

    ಶಿವಮೊಗ್ಗ ಜೈಲಿಗೆ ತಮಿಳಿನ ಸೂಪರ್ ಸ್ಟಾರ್ ನಟ ವಿಜಯ್

    ಶಿವಮೊಗ್ಗ: ತಮಿಳಿನ ಸೂಪರ್ ಸ್ಟಾರ್ ವಿಜಯ್ ಸದ್ಯ ‘ಬಿಗಿಲ್’ ಚಿತ್ರದ ಸಕ್ಸಸ್ ಖುಷಿಯಲ್ಲಿದ್ದು, ಅವರ ಮುಂದಿನ ಸಿನಿಮಾದ ಬಗ್ಗೆ ಈಗಾಗಲೇ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿದೆ. ಅದರಂತೆ ಸೂಪರ್ ಸ್ಟಾರ್ ನಟ ವಿಜಯ್ ಶಿವಮೊಗ್ಗದ ಜೈಲಿಗೆ ಬರುತ್ತಿದ್ದಾರೆ.

    ವಿಜಯ್ ಅವರ ಮುಂದಿನ ಸಿನಿಮಾ ‘ದಳಪತಿ-64’ ಸಿನಿಮಾದ ಶೂಟಿಂಗ್‍ಗಾಗಿ ಶಿವಮೊಗ್ಗದ ಜೈಲಿಗೆ ಬರುತ್ತಿದ್ದಾರೆ. ಶಿವಮೊಗ್ಗದ ಜೈಲು ಕೊರಿಯನ್ ಮಾದರಿ ಜೈಲಾಗಿದ್ದು, ರಾಜ್ಯದಲ್ಲಿಯೇ ಇದೊಂದು ವಿಶೇಷ ಕಾರಾಗೃಹವಾಗಿದೆ. ಹೀಗಾಗಿ ಈ ಜೈಲಿನಲ್ಲಿ ಆಗಾಗ ಸಿನಿಮಾ ಶೂಟಿಂಗ್‍ಗಳು ನಡೆಯುತ್ತಿರುತ್ತವೆ.

    ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಹಾಗೂ ಕಿಚ್ಚ ಸುದೀಪ್ ನಟಸಿದ ‘ದಿ-ವಿಲನ್’ ಸಿನಿಮಾದಲ್ಲಿಯೂ ಶಿವಮೊಗ್ಗದ ಈ ನೂತನ ಜೈಲನ್ನು ಬಳಕೆ ಮಾಡಿಕೊಳ್ಳಲಾಗಿತ್ತು. ಶಿವರಾಜ್ ಕುಮಾರ್ ಸಾಹಸ ದೃಶ್ಯ ಇದೇ ಜೈಲಿನಲ್ಲಿ ಶೂಟಿಂಗ್ ನಡೆಸಲಾಗಿತ್ತು.

    ವಿಜಯ್ ಅವರ ದಳಪತಿ ಸಿನಿಮಾದ ಚಿತ್ರೀಕರಣ ಈಗಾಗಲೇ ಭರದಿಂದ ಸಾಗುತ್ತಿದೆ. ಮೊದಲ ಹಂತದ ಶೂಟಿಂಗ್ ದೆಹಲಿಯಲ್ಲಿ ಮುಗಿಸಿ, ವಿಜಯ್ ಆ್ಯಂಡ್ ಟೀಂ ಈಗ ಶಿವಮೊಗ್ಗದ ಕಡೆ ಹೊರಟ್ಟಿದ್ದಾರೆ. ಶಿವಮೊಗ್ಗದ ಜೈಲಿನ ಸುತ್ತಮುತ್ತ ದಳಪತಿ-64 ಚಿತ್ರದ ಶೂಟಿಂಗ್ ನಡೆಯಲಿದ್ದು, ಇದಕ್ಕಾಗಿ ಜಿಲ್ಲಾಡಳಿತದ ಅನುಮತಿಯನ್ನು ಪಡೆದುಕೊಂಡಿದೆ.

    ದಳಪತಿ-64 ಸಿನಿಮಾ ಚಿತ್ರೀಕರಣಕ್ಕಾಗಿ, ಡಿಸೆಂಬರ್ 1ರಿಂದ ಜನವರಿ 18ರ ವರೆಗೆ ಅನುಮತಿ ನೀಡಿದ್ದು ವಿಜಯ್ ಜೊತೆ ವಿಜಯ್ ಸೇತುಪತಿ ಕೂಡ ಈ ಚಿತ್ರೀಕರಣದಲ್ಲಿ ಕಾಣಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.