Tag: Kollywood

  • ಕೋವಿಡ್ ನಂತರ ನಿದ್ರಾ ಸಮಸ್ಯೆಯಿಂದ ಬಳಲುತ್ತಿದ್ದಾರಂತೆ ಖ್ಯಾತ ನಟಿ ಶ್ರುತಿ ಹಾಸನ್

    ಕೋವಿಡ್ ನಂತರ ನಿದ್ರಾ ಸಮಸ್ಯೆಯಿಂದ ಬಳಲುತ್ತಿದ್ದಾರಂತೆ ಖ್ಯಾತ ನಟಿ ಶ್ರುತಿ ಹಾಸನ್

    ಮಲ್ ಹಾಸನ್ ಪುತ್ರಿ, ನಟಿ ಶ್ರುತಿ ಹಾಸನ್ ವಿಚಿತ್ರ ಸಮಸ್ಯೆಯೊಂದರಿಂದ ಹೈರಾಣಾಗಿದ್ದಾರಂತೆ. ಕೋವಿಡ್ ಗಿಂತಲೂ ಈ ಸಮಸ್ಯೆ ತುಂಬಾ ಬಾಧಿಸುತ್ತಿದೆ ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    ಕಳೆದ ಒಂದು ತಿಂಗಳ ಹಿಂದೆ ಶ್ರುತಿ ಹಾಸನ್ ಅವರಿಗೆ ಕೋವಿಡ್ ಲಕ್ಷಣಗಳು ಕಾಣಿಸಿಕೊಂಡಿದ್ದವು. ಅವರು ಕೊರೋನಾಗೆ ಬೇಕಾದ ಅಗತ್ಯ ಚಿಕಿತ್ಸೆಯನ್ನು ಪಡೆದುಕೊಂಡರು. ಬರೋಬ್ಬರಿ ಒಂದು ತಿಂಗಳ ಕಾಲ ವಿಶ್ರಾಂತಿ ಪಡೆದರು. ಆದರೂ, ಕೋವಿಡ್ ನಂತರ ಅವರಿಗೆ ಬೇರೆ ಬೇರೆ ಸಮಸ್ಯೆಗಳು ಕಾಣಿಸಿಕೊಂಡಿವೆಯಂತೆ. ಇದನ್ನೂ ಓದಿ : ಪುನೀತ್ ಅಭಿಮಾನಿಗಳಿಗೆ ಭಾರೀ ನಿರಾಸೆ : ಮೆರವಣಿಗೆ ಇಲ್ಲ, ಹೆಲಿಕಾಪ್ಟರ್ ಗೆ ಅನುಮತಿ ಕೊಟ್ಟಿಲ್ಲ

    ಕೋವಿಡ್ ಗೆ ಚಿಕಿತ್ಸೆ ಪಡೆದುಕೊಂಡ ನಂತರ ವಿಪರೀತ ತಲೆನೋವು ಶುರುವಾಗಿದೆ. ದೇಹ ಆಯಾಸಗೊಳ್ಳುತ್ತದೆ. ನಿದ್ರಾಹೀನತೆಯಿಂದ ಬಳಲುತ್ತಿದ್ದೇವೆ. ಇದರಿಂದಾಗಿ ಬೇರೆ ಬೇರೆ ಸಮಸ್ಯೆಗಳು ನನ್ನಲ್ಲಿ ಶುರುವಾಗಿವೆ ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ, ಕೋವಿಡ್ ನಿಂದಾದ ಪರಿಣಾಮನಾ ಇದು ಎಂದು ಕೇಳಿದ್ದಾರೆ. ಇದನ್ನೂ ಓದಿ : ದುನಿಯಾ ವಿಜಯ್ ನಟನೆಯ ತೆಲುಗು ಸಿನಿಮಾದ ಫಸ್ಟ್ ಲುಕ್ ರಿಲೀಸ್ : ಯಾರದು ಪ್ರತಾಪ್ ರೆಡ್ಡಿ?

    ತೆಲುಗು ಮತ್ತು ತಮಿಳು ಸಿನಿಮಾಗಳನ್ನು ಒಪ್ಪಿಕೊಂಡಿರುವ ಶ್ರುತಿ, ಈಗ ಅವುಗಳ ಚಿತ್ರೀಕರಣದಲ್ಲಿ ಪಾಲ್ಗೊಳ್ಳಬೇಕಿದೆ. ಹಾಗಾಗಿ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯ. ಈ ಸಮಸ್ಯೆಗಳ ನಡುವೆಯೂ ಅವು ನಿರಂತರವಾಗಿ ವ್ಯಾಯಾಮ ಮಾಡುತ್ತಿದ್ದಾರಂತೆ. ಆದರೆ, ನಿದ್ರೆ ಸಮಸ್ಯೆಯೇ ಅವರನ್ನು ಗಂಭೀರವಾಗಿ ಕಾಡುತ್ತಿದೆ ಎಂದು ಬರೆದುಕೊಂಡಿದ್ದಾರೆ.

  • ಹೊಟ್ಟೆ ಡುಮ್ಮ ಅಂದಿದ್ದಕ್ಕೆ ಸೂಪರ್ ಸ್ಟಾರ್ ಅಜಿತ್ ಮಾಡಿದ್ದೇನು?

    ಹೊಟ್ಟೆ ಡುಮ್ಮ ಅಂದಿದ್ದಕ್ಕೆ ಸೂಪರ್ ಸ್ಟಾರ್ ಅಜಿತ್ ಮಾಡಿದ್ದೇನು?

    ಕಾಲಿವುಡ್ ಸೂಪರ್‌ಸ್ಟಾರ್ ಅಜಿತ್ ‘ವಲಿಮೈ’ ಯಶಸ್ವಿನ ನಂತರ ಮತ್ತೆ ಅದೇ ಟೀಮ್ ಜತೆ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಈಗಾಗಲೇ ಈ ಸಿನಿಮಾ ಸೆಟ್ ಏರಿದೆ.

    Ajith asks fans, media not to call him 'Thala' | The News Minute

    ಅಜಿತ್ ನಟನೆಯ ‘ವಲಿಮೈ’ ಸಿನಿಮಾ ಬಾಕ್ಸ್ಆಫೀಸ್ ನಲ್ಲಿ ಭಾರಿ ಸದ್ದು ಮಾಡಿತ್ತು. ಈ ಸಿನಿಮಾದಲ್ಲಿ ಅಜಿತ್ ಖಡಕ್ ಲುಕ್ಗೆ ಅಭಿಮಾನಿಗಳು ಫಿದಾ ಆಗಿದ್ದರು. ಅಲ್ಲದೇ, ಸಿನಿಮಾದಲ್ಲಿ ಒಳ್ಳೆಯ ಮೆಸೇಜ್ ಹಾಗೂ ಭಾವನಾತ್ಮಕ ಸಂದೇಶವಿದೆ ಎನ್ನುವ ಕಾರಣಕ್ಕಾಗಿ ಎಲ್ಲ ಕಡೆ ಪ್ರಶಂಸೆಯ ಮಾತುಗಳು ಕೇಳಿ ಬಂದವು. ಇದನ್ನೂ ಓದಿ: ಬೆಂಗಳೂರಿನ ಗ್ಯಾಲರಿಯಲ್ಲಿ ಪ್ರದರ್ಶನಗೊಳ್ಳಲಿದೆ ಸಲ್ಲು ‘ಮದರ್‌ಹುಡ್’ ಪೇಂಟಿಂಗ್

    Valimai First Look: Motion Poster of Ajith Kumar's Much-anticipated Tamil Release is Out

    ಈ ಸಿನಿಮಾ ಯಶಸ್ಸಿನ ಬೆನ್ನಲ್ಲೇ ‘ವಲಿಮೈ’ ಸಿನಿಮಾ ನಿರ್ಮಾಪಕ ಮತ್ತು ನಿದೇಶಕ ಎಚ್.ವಿನೋತ್, ಅಜಿತ್ ಜೊತೆಗೇ ಮತ್ತೊಂದು ಸಿನಿಮಾ ಮಾಡಲು ಮುಂದಾಗಿದ್ದು, ಆ ಸಿನಿಮಾಗೆ ‘ವಲ್ಲಮೈ’ ಎಂದು ಹೆಸರಿಡುವ ಸಾಧ್ಯತೆ ಇದೆ. ಈ ಸಿನಿಮಾದ ಮುಹೂರ್ತ ಮಾರ್ಚ್ 10ರಂದು ಹೈದರಬಾದ್ನಲ್ಲಿ ನಡೆಯಲಿದ್ದು, ಅಂದೇ ಈ ಸಿನಿಮಾ ಟೈಟಲ್ ರಿವೀಲ್ ಕೂಡ ಆಗಲಿದೆ.

    ಅಜಿತ್ ನಟನೆಯ ‘ವಲಿಮೈ’ನಲ್ಲಿ ಅವರ ನಟನೆ ಎಲ್ಲರಿಗೂ ಇಷ್ಟವಾಗಿದ್ದರೂ, ಅಭಿಮಾನಿಗಳು ಅಜಿತ್ ಸಿನಿಮಾದಲ್ಲಿ ತುಂಬಾ ದಪ್ಪ ಆಗಿರುವುದಕ್ಕೆ ಕೊಂಚ ಬೇಸರ ವ್ಯಕ್ತಪಡಿಸಿದ್ದಾರೆ. ಚಿತ್ರದಲ್ಲಿ ಅಜಿತ್ ಅವರಿಗೆ ಹೊಟ್ಟೆ ತುಂಬಾ ಬಂದಿದೆ ಎಂದು ಕಾಮೆಂಟ್ ಕೂಡ ಮಾಡಿದ್ದರು. ಈ ಹಿನ್ನೆಲೆ ಅಜಿತ್ ಸ್ವಲ್ಪ ಅಪ್ಸೆಟ್ ಆಗಿದ್ದು, ಪಾತ್ರಕ್ಕಾಗಿ ದೇಹ ದಂಡಿಸುವುದು ಕಲಾವಿದನ ಕೆಲಸ. ಮುಂದಿನ ಸಿನಿಮಾಗಳಲ್ಲಿ ನನ್ನ ಬಾಡಿ ನೋಡಿ ಎಂದು ಚಾಲೆಂಜ್ ಮಾಡಿದ್ದರು. ಈ ಬೆನ್ನಲ್ಲೇ ಅವರು ಈಗಾಗಲೇ 10 ಕೆಜಿ ತೂಕ ಕಡಿಮೆ ಮಾಡಿಕೊಂಡಿದ್ದಾರಂತೆ. ಇದನ್ನೂ ಓದಿ: ಗೂಗಲ್ ಮ್ಯಾಪ್‍ನಲ್ಲಿ ಕೆಜಿಎಫ್ ಮೂವೀ ಲೋಕೆಶನ್!


    ಸದ್ಯ ‘ಎಕೆ 61’ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಈ ಸಿನಿಮಾದ ಒಂದು ಹಂತದಲ್ಲಿ ಬರುವ ಪಾತ್ರಕ್ಕಾಗಿ ಅವರು 25 ಕೆಜಿ ತೂಕವನ್ನು ಕಡಿಮೆ ಮಾಡಿಕೊಳ್ಳಲಿದ್ದಾರಂತೆ. ಈ ಸಿನಿಮಾಗೆ ವಿನೋದ್ ಆಕ್ಷನ್ ಕಟ್ ಹೇಳುತ್ತಿದ್ದು, ಭಿನ್ನ ಪಾತ್ರದಲ್ಲಿ ಅಜಿತ್ ಅವರನ್ನು ನೋಡಬಹುದಾಗಿದೆ.

  • ಧನುಷ್ ಜೊತೆಗಿನ ವಿಚ್ಛೇದನದ ಬಳಿಕ ಪ್ರೀತಿ ಬಗ್ಗೆ ಐಶ್ವರ್ಯಾ ಮಾತು

    ಧನುಷ್ ಜೊತೆಗಿನ ವಿಚ್ಛೇದನದ ಬಳಿಕ ಪ್ರೀತಿ ಬಗ್ಗೆ ಐಶ್ವರ್ಯಾ ಮಾತು

    ಚೆನ್ನೈ: ಸೌತ್ ಸೂಪರ್ ಸ್ಟಾರ್ ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ಕೆಲವು ದಿನಗಳ ಹಿಂದಷ್ಟೇ ತಮ್ಮ 18 ವರ್ಷಗಳ ಸುದೀರ್ಘ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದರು. ಈ ಸುದ್ದಿ ಅನೇಕ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿತ್ತು. ಇದೀಗ ಐಶ್ವರ್ಯಾ ರಜನಿಕಾಂತ್ ಅವರು ಪ್ರೀತಿ ಬಗ್ಗೆ ಮಾತನಾಡಿದ್ದಾರೆ.

    ಸದ್ಯ ಹಲವು ದಿನಗಳ ಬಳಿಕ ಐಶ್ವರ್ಯಾ ರಜನಿಕಾಂತ್ ಜೀವನ ಮತ್ತು ಪ್ರೀತಿಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ನಾವು ಜೀವನದಲ್ಲಿ ಎಲ್ಲವನ್ನು ನಿಭಾಯಿಸಬೇಕು ಎಂದು ನಾನು ಭಾವಿಸುತ್ತೇನೆ. ನಮ್ಮ ದಾರಿಯಲ್ಲಿ ನಮಗೆ ಏನು ಎದುರಾಗುತ್ತದೆಯೋ ಅದನ್ನು ನಾವು ಎದುರಿಸಬೇಕಾಗಿದೆ. ಅಂತಿಮವಾಗಿ, ನಮಗೆ ಏನು ಸಿಗಬೇಕೋ ಅದು ನಮಗೆ ಸಿಗುತ್ತದೆ. ನಾನು ಈ ಹಿಂದೆಯೇ ಹೇಳಿದ್ದೇನೆ. ನಾನು ಕಲಿಯುತ್ತಿದ್ದೇನೆ ಮತ್ತು ನನ್ನನ್ನು ಕಲಿಯಲು ಬಿಡಬೇಕೆಂದು ಭಾವಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ:  ಮಾರ್ಚ್‌ನಲ್ಲಿ ಬೆಲ್ ಬಾಟಮ್ 2 ಪಕ್ಕಾ

    ಪ್ರೀತಿ ಎಂಬುವುದು ಸಾಮಾನ್ಯವಾದ ಭಾವನೆಯಾಗಿದೆ. ಇದು ಒಬ್ಬ ಮನುಷ್ಯ ಅಥವಾ ಒಂದು ವೈಯಕ್ತಿಕ ವಿಷಯದೊಂದಿಗೆ ಸಂಬಂಧಿಸಿಲ್ಲ. ನಾನು ವಿಕಸನಗೊಳ್ಳುತ್ತಿದ್ದಂತೆ, ಪ್ರೀತಿಯ ವ್ಯಾಖ್ಯಾನವು ನನ್ನೊಂದಿಗೆ ವಿಕಸನಗೊಳ್ಳುತ್ತಿದೆ. ನಾನು ನನ್ನ ತಂದೆಯನ್ನು ಪ್ರೀತಿಸುತ್ತೇನೆ. ನಾನು ನನ್ನ ತಾಯಿಯನ್ನು ಪ್ರೀತಿಸುತ್ತೇನೆ. ನಾನು ನನ್ನ ಮಕ್ಕಳನ್ನು ಪ್ರೀತಿಸುತ್ತೇನೆ. ಹಾಗಾಗಿ ಪ್ರೀತಿ ಕೇವಲ ಒಬ್ಬ ವ್ಯಕ್ತಿಗೆ ಮಾತ್ರ ಸೀಮಿತವಾಗುವುದಿಲ ಎಂದು ನಾನು ಭಾವಿಸುತ್ತೇನೆ. ಹೌದು, ನಾನು ಎಲ್ಲರನ್ನು ಪ್ರೀತಿಸುತ್ತೇನೆ ಎಂದು ಹೇಳಲು ಬಯಸುತ್ತೇನೆ ಎಂದು ಹೇಳಿದ್ದಾರೆ.

    ಐಶ್ವರ್ಯಾ ರಜನಿಕಾಂತ್ ಅವರು ಕೋವಿಡ್-19 ಸೋಂಕಿಗೆ ಒಳಗಾಗಿದ್ದು, ಅದರಿಂದ ಹೊರಬರುವುದು ಎಷ್ಟು ಕಷ್ಟ ಎಂದು ತಿಳಿಸಿದ್ದಾರೆ ಮತ್ತು ತಮ್ಮ ಸಂಕಷ್ಟದ ಸಮಯದಲ್ಲಿ ತಮಗೆ ಸಹಾಯ ಮಾಡಿದ್ದಕ್ಕಾಗಿ ವೈದ್ಯರ ತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ:ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ – ಯಾವೆಲ್ಲ ಚಿತ್ರಗಳು ಸ್ಪರ್ಧಾ ಕಣದಲ್ಲಿ?

    ರಜನಿಕಾಂತ್ ಅವರ ಹಿರಿಯ ಮಗಳಾಗಿರುವ ಐಶ್ವರ್ಯಾ ಅವರು 2004 ರಲ್ಲಿ ಧನುಷ್ ಅವರೊಂದಿಗೆ ವಿವಾಹವಾದರು. ಸದ್ಯ ಇವರಿಗೆ ಯಾತ್ರಾ ಮತ್ತು ಲಿಂಗ ಎಂಬ ಇಬ್ಬರು ಮಕ್ಕಳಿದ್ದಾರೆ.

  • ತಲೈವಾನ 169ನೇ ಚಿತ್ರಕ್ಕೆ ನೆಲ್ಸನ್ ದಿಲೀಪ್ ಕುಮಾರ್ ಆಕ್ಷನ್ ಕಟ್

    ತಲೈವಾನ 169ನೇ ಚಿತ್ರಕ್ಕೆ ನೆಲ್ಸನ್ ದಿಲೀಪ್ ಕುಮಾರ್ ಆಕ್ಷನ್ ಕಟ್

    ಚೆನ್ನೈ: ದಕ್ಷಿಣ ಭಾರತದ ಸೂಪರ್ ಸ್ಟಾರ್ ತಲೈವಾ ರಜನೀಕಾಂತ್ ಅವರ 169ನೇ ಚಿತ್ರಕ್ಕೆ ಯುವ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

    ರಜನೀಕಾಂತ್ ಅವರು ಭಾರತೀಯ ಚಿತ್ರರಂಗದ ಅತಿದೊಡ್ಡ ನಟ. ರಜನಿ ಸಿನಿಮಾ ನೋಡಲು ಹಲವು ಜನರು ತಮ್ಮ ಕೆಲಸಗಳಿಗೆ ರಜೆ ಹಾಕುವುದು, ಅವರ ಸಿನಿಮಾಗಾಗಿ ವರ್ಷಗಟ್ಟಲೇ ಕಾಯುವುದು ಸಾಮಾನ್ಯ. ಇವರ ಚಿತ್ರಗಳು ಬಾಕ್ಸಾಫೀಸ್‍ನಲ್ಲಿ ಧೂಳ್ ಎಬ್ಬಿಸುತ್ತೆ. ರಜನಿ ಸಿನಿಮಾ ನಿರ್ದೇಶಿಸಬೇಕು ಎಂಬುದು ಪ್ರತಿಯೊಬ್ಬ ನಿರ್ದೇಶಕರ ಕನಸು. ಈಗ ಆ ಚಾನ್ಸ್ ಯುವ ನಿರ್ದೇಶಕ ನೆಲ್ಸನ್ ದಿಲೀಪ್‍ಕುಮಾರ್ ಅವರಿಗೆ ಸಿಕ್ಕಿದೆ. ಇದನ್ನೂ ಓದಿ: ಉತ್ತರಾಖಂಡದ ಬ್ರಾಂಡ್ ಅಂಬಾಸಿಡರ್ ಆಗಿ ಅಕ್ಷಯ್ ಕುಮಾರ್ ನೇಮಕ

    ಮೂಲಗಳ ಪ್ರಕಾರ, ‘ಅಣ್ಣಾತ್ತೆ’ ಸಿನಿಮಾ ನಂತರ ರಜನಿ ಇನ್ನೊಂದು ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾಗೆ ನೆಲ್ಸನ್ ಅವರು ಜೊತೆಯಾಗುತ್ತಿದ್ದಾರೆ. ಚಿತ್ರಕಥೆಯನ್ನು ನೆಲ್ಸನ್ ತುಂಬಾ ಸೊಗಸಾಗಿ ಬರೆದಿದ್ದು, ಕುತೂಹಲ ಮೂಡಿಸುವಂತಿದೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾದ ಚಿತ್ರೀಕರಣವನ್ನು ಏಪ್ರಿಲ್ ಅಂತ್ಯ ಅಥವಾ ಮೇ ಆರಂಭದಲ್ಲಿ ಪ್ರಾರಂಭಿಸಲು ನಿರ್ಧರಿಸಲಾಗಿದೆ. ಅಲ್ಲದೆ ಈ ಸಿನಿಮಾವನ್ನು ಡಿಸೆಂಬರ್ 2022 ರಿಂದ ಫೆಬ್ರವರಿ 2023 ಬಳಗೆ ರಿಲೀಸ್ ಮಾಡುವ ಯೋಚನೆ ಇದೆ ಎಂಬುದು ಸಹ ತಿಳಿದುಬಂದಿದೆ.

    ಸಿನಿಮಾವನ್ನು ಸನ್ ಪಿಕ್ಚರ್ಸ್ ನಿರ್ಮಿಸುತ್ತಿದ್ದು, ಅನಿರುದ್ಧ್ ಅವರು ಸಂಗೀತ ಮತ್ತು ಹಿನ್ನೆಲೆ ಸಂಗೀತವನ್ನು ಮಾಡುತ್ತಾರೆ ಎನ್ನಲಾಗುತ್ತಿದೆ. ಈ ಸಿನಿಮಾಗೆ ಇನ್ನು ಯಾವುದೇ ಹೆಸರನ್ನು ಇಟ್ಟಿಲ್ಲ. ಅಲ್ಲದೆ ಇದು ರಜನಿಯ 169ನೇ ಸಿನಿಮಾವಾಗಿದ್ದು, ಚಿತ್ರರಂಡಕ್ಕೆ ಹೆಚ್ಚು ಜವಾಬ್ದಾರಿ ಇದೆ. ಈ ಸಿನಿಮಾದ ಚಿತ್ರೀಕರಣವು ಬೇಸಿಗೆಯಲ್ಲಿ ಆರಂಭವಾಗಲಿದೆ ಎಂದು ಮೂಲಗಳಿಂದ ತಿಳಿದುಬರುತ್ತಿದೆ. ಆದರೆ ಈ ಕುರಿತು ಚಿತ್ರತಂಡ ಅಧಿಕೃತವಾಗಿ ಮಾಹಿತಿ ನೀಡಬೇಕು. ಇದನ್ನೂ ಓದಿ: ಪ್ರೀತಂ ಜೊತೆ ಇಷ್ಟು ವರ್ಷ ಏಕೆ ಕೆಲಸ ಮಾಡಿಲ್ಲ – ಮೌನಮುರಿದ ಸೋನು ನಿಗಮ್

    ಈ ವರ್ಷ ರಜನಿ ನಟನೆಯ ‘ಅಣ್ಣಾತ್ತೆ’ ಸಿನಿಮಾ ರಿಲೀಸ್ ಆಗಿದ್ದು, ಅಭಿಮಾನಿಗಳನ್ನು ರಂಜಿಸಿತ್ತು. ಈ ಸಿನಿಮಾವನ್ನು ಶಿವ ನಿರ್ದೇಶನ ಮಾಡಿದ್ದು, ಕೌಟುಂಬಿಕ ಸಿನಿಮಾವಾಗಿತ್ತು. ಸಿನಿಮಾದಲ್ಲಿ ತಂಗಿ ಸೆಂಟಿಮೆಂಟ್ ಇದ್ದು, ರಜನಿ ತಂಗಿ ಪಾತ್ರದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತೆ ಕೀರ್ತಿ ಸುರೇಶ್ ನಟಿಸಿ ಸೈ ಎನಿಸಿಕೊಂಡಿದ್ದರು.

  • ಮಗಳ ದಾಂಪತ್ಯ ಸರಿಪಡಿಸಲು ರಜನಿಕಾಂತ್ ಸರ್ಕಸ್

    ಮಗಳ ದಾಂಪತ್ಯ ಸರಿಪಡಿಸಲು ರಜನಿಕಾಂತ್ ಸರ್ಕಸ್

    ಚೆನ್ನೈ: ಕಾಲಿವುಡ್ ನಟ ಸೂಪರ್ ಸ್ಟಾರ್ ರಜನಿಕಾಂತ್ ಅವರು ಮಗಳು ಐಶ್ವರ್ಯ ಹಾಗೂ ಧನುಷ್ ದಾಂಪತ್ಯವನ್ನು ಸರಿಪಡಿಸಲು ಮಗಳೊಂದಿಗೆ ಮಾತನಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

    ನಟ ಧನುಷ್ ಹಾಗೂ ಐಶ್ವರ್ಯ ರಜನಿಕಾಂತ್ 18 ವರ್ಷಗಳ ದಾಂಪತ್ಯ ಜೀವನವನ್ನು ಅಂತ್ಯಗೊಳಿಸುವ ಮೂಲಕ ಜನವರಿ 17ರಂದು ವಿಚ್ಛೇದನ ಪಡೆದರು. ನಂತರ ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಬಳಿಕ ಇಬ್ಬರ ಕುಟುಂಬ ಸದಸ್ಯರಿಗೆ, ಅಭಿಮಾನಿಗಳು ಹಾಗೂ ಸ್ನೇಹಿತರಿಗೆ ದೊಡ್ಡ ಆಘಾತವನ್ನುಂಟು ಮಾಡಿತ್ತು. ಐಶ್ವರ್ಯ ಹಾಗೂ ಧನುಷ್‍ಗೆ ಇಬ್ಬರು ಮುದ್ದಾದ ಗಂಡುಮಕ್ಕಳಿದ್ದಾರೆ. ಇದೀಗ ವಿಚ್ಛೇದನ ಬಳಿಕ ಇಬ್ಬರು ತಮ್ಮ ತಮ್ಮ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿ ಅವರು ಸಿದ್ದರಾಮಯ್ಯರ ಬಗ್ಗೆ ಮಾತನಾಡಬಾರದು: ಶಿವರಾಮೇಗೌಡ

    ಸದ್ಯ ಧನುಷ್ ಹಾಗೂ ಐಶ್ವರ್ಯ ನಡುವಿನ ವಿಚ್ಛೇದನ ರಜನಿಕಾಂತ್ ಅವರಿಗೆ ಬೇಸರ ತರಿಸಿದ್ದು, ಅವರಿಬ್ಬರನ್ನು ಒಂದು ಮಾಡಲು ಸಕಲ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೆ ಧನುಷ್ ಹಾಗೂ ಐಶ್ವರ್ಯ ಮಾತ್ರ ರಾಜಿ ಮಾಡಿಕೊಳ್ಳುತ್ತಾರೋ ಎಂಬುವುದನ್ನು ಕಾದು ನೋಡಬೇಕಾಗಿದೆ. ಇದನ್ನೂ ಓದಿ: ನನ್ನ ಟ್ವಿಟ್ಟರ್ ರೀಚ್ ಇದ್ದಕ್ಕಿದ್ದಂತೆ ಕಡಿಮೆಯಾಗಿದೆ – ದಾಖಲೆ ಮುಂದಿಟ್ಟು ಪರಾಗ್‍ಗೆ ರಾಹುಲ್ ಪತ್ರ

  • ಗಂಡ-ಹೆಂಡ್ತಿ ಜಗಳ ಅಷ್ಟೇ, ವಿಚ್ಛೇದನ ಅಲ್ಲ: ನಟ ಧನುಷ್ ತಂದೆ

    ಗಂಡ-ಹೆಂಡ್ತಿ ಜಗಳ ಅಷ್ಟೇ, ವಿಚ್ಛೇದನ ಅಲ್ಲ: ನಟ ಧನುಷ್ ತಂದೆ

    ನವದೆಹಲಿ: ಇತ್ತೀಚೆಗಷ್ಟೇ ಕಾಲಿವುಡ್ ನಟ ಧನುಷ್ ಹಾಗೂ ರಜನಿಕಾಂತ್ ಪುತ್ರಿ ಐಶ್ವರ್ಯಾ ವಿಚ್ಛೇದನ ವಿಚಾರ ಭಾರೀ ಸುದ್ದಿಯಾಗಿತ್ತು. ಬರೋಬ್ಬರಿ 18 ವರ್ಷಗಳ ದಾಂಪತ್ಯದಲ್ಲಿನ ಬಿರುಕು ಕಂಡು ಅಭಿಮಾನಿಗಳೇ ದಂಗಾಗಿದ್ದರು. ಆ ಬಳಿಕ ವಿಚ್ಛೇದನ ವಿಚಾರ ಸಂಬಂಧ ಹಲವಾರು ಊಹಾಪೋಹಗಳು ಹರಿದಾಡತೊಡಗಿದವು. ಇದೀಗ ಸ್ವತಃ ನಟ ಧನುಷ್ ತಂದೆ ಕಸ್ತೂರಿ ರಾಜಾ ಅವರು ಮಗನ ವಿಚ್ಛೇದನ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

    ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಮಗನ ವಿಚ್ಛೇದನದ ಕುರಿತು ಹೇಳಿಕೆ ನೀಡಿದರು. ಇದು ಮಾಮೂಲಿ ಗಂಡ-ಹೆಂಡತಿ ನಡುವೆ ನಡೆದ ಜಗಳ ಅಷ್ಟೇ. ಕೆಲವೊಂದು ವಿಚಾರಗಳಲ್ಲಿ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯಗಳು ಮೂಡಿದೆ. ಆದರೆ ಇದು ವಿಚ್ಛೇದನ ಅಲ್ಲ. ಸದ್ಯ ಅವರು ಚೆನ್ನೈನಲ್ಲಿ ಇಲ್ಲ ಹೈದರಾಬಾದ್ ನಲ್ಲಿ ನೆಲೆಸಿದ್ದಾರೆ. ವಿಚ್ಛೇದನ ನೀಡಿದ್ದಾರೆ ಎಂಬ ವಿಚಾರ ತಿಳಿದ ಕೂಡಲೇ ನಾನು ಮಗನಿಗೆ ಕರೆ ಮಾಡಿ ಮಾತನಾಡಿದ್ದೇನೆ. ಅಲ್ಲದೆ ಕೆಲವೊಂದು ಸಲಹೆಗಳನ್ನು ಕೂಡ ನೀಡಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಟ ಧನುಷ್, ಐಶ್ವರ್ಯಾ ಡಿವೋರ್ಸ್- 18 ವರ್ಷದ ವೈವಾಹಿಕ ಸಂಬಂಧಕ್ಕೆ ಗುಡ್‍ಬೈ

    ಕಳೆದ ಮೂರು ದಿನಗಳ ಹಿಂದೆಯಷ್ಟೇ, ನಾವಿಬ್ಬರು 18 ವರ್ಷಗಳಿಂದ ಸ್ನೇಹಿತರಾಗಿ, ಪ್ರೇಮಿಗಳಾಗಿ, ದಂಪತಿಯಾಗಿ, ಪೋಷಕರಾಗಿ, ಪರಸ್ಪರ ಒಳ್ಳೆಯದನ್ನು ಬಯಸುತ್ತಾ, ಅರ್ಥಮಾಡಿಕೊಳ್ಳುತ್ತಾ, ಸಹಕರಿಸುತ್ತಾ ಜೀವನ ನಡೆಸಿದ್ದೇವೆ. ಒಬ್ಬರಿಗೆ ಒಬ್ಬರು ಆಸರೆಯಾಗಿದ್ದೇವೆ. ಇಂದು ನಮ್ಮಿಬ್ಬರ ದಾರಿ ಬೇರೆ ಬೇರೆಯಾಗಿದೆ. ನಾನು ಹಾಗೂ ಐಶ್ವರ್ಯಾ ಸಮಯ ತೆಗೆದುಕೊಂಡು ಕೊನೆಗೆ ತೀರ್ಮಾನಿಸಿ ಪರಸ್ಪರ ಒಪ್ಪಿ ದಾಂಪತ್ಯ ಜೀವನದಿಂದ ದೂರಾಗುತ್ತಿದ್ದೇವೆ. ನಮ್ಮ ನಿರ್ಧಾರಕ್ಕೆ ನಿಮ್ಮ ಬೆಂಬಲ ಹಾಗೂ ಸಹಕಾರ ಇರಲಿ ಎಂದು ಆಶಿಸುತ್ತೇನೆ. ದಯಮಾಡಿ ನಮ್ಮ ಖಾಸಗಿ ನಿರ್ಧಾರವನ್ನು ಗೌರವಿಸಿ ಎಂದು ಧನುಷ್ ಟ್ವೀಟ್ ಮಾಡಿ ಅಚ್ಚರಿ ಹುಟ್ಟಿಸಿದ್ದರು.

    ಇದೀಗ ಧನುಷ್ ತಂದೆ ನೀಡಿರುವ ಹೇಳಿಕೆಯಿಂದ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಕೊಂಡಿದೆ. ಧನುಷ್- ಐಶ್ವರ್ಯಾ ಮತ್ತೆ ಒಂದಾಗುತ್ತಾರಾ ಹಾಗೂ ಮನೆಯ ಹಿರಿಯರು ಕೂತು ಮಾತುಕತೆ ನಡೆಸಿ ಜೋಡಿಯನ್ನು ಒಂದಾಗಿಸುತ್ತಾರಾ ಎಂಬ ಕ್ಯೂರಿಯಾಸಿಟಿ ಹುಟ್ಟಿದೆ.

  • ದಳಪತಿ ವಿಜಯ್‍ರಿಂದ ಪ್ರಿಯಾಂಕಾ ಚೋಪ್ರಾ ಕಲಿತ ಪಾಠವೇನು ಗೊತ್ತಾ?

    ದಳಪತಿ ವಿಜಯ್‍ರಿಂದ ಪ್ರಿಯಾಂಕಾ ಚೋಪ್ರಾ ಕಲಿತ ಪಾಠವೇನು ಗೊತ್ತಾ?

    ಚೆನ್ನೈ: ಕಾಲಿವುಡ್ ನಟ ದಳಪತಿ ವಿಜಯ್ ಅವರಿಂದ ಕಲಿತ ಪಾಠವನ್ನು ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ರಿವೀಲ್ ಮಾಡಿದ್ದಾರೆ.

    ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, 2000ರಲ್ಲಿ ನಾನು ಮಿಸ್ ವರ್ಲ್ಡ್ ಅವಾರ್ಡ್ ಗೆದ್ದ ನಂತರ ಸಿನಿಮಾಕ್ಕೆ ನಾನು ಇನ್ನೂ ಹೊಸಬಳಾಗಿದ್ದೆ. ಮೊದಲಿಗೆ ತಮಿಝನ್ ಎಂಬ ತಮಿಳು ಚಿತ್ರ ಹಾಗೂ ಅಂದಾಜ್ ಮತ್ತು ದಿ ಹೀರೋ ಎಂಬ ಎರಡು ಹಿಂದಿ ಸಿನಿಮಾಗಳಲ್ಲಿ ಅಭಿನಯಿಸಿದೆ. ನನಗೆ ಈಗಲೂ ನೆನಪಿದೆ ಸೆಟ್‍ಗೆ ಹೋದಾಗ ನನಗೆ ಏನು ಸಹ ತಿಳಿದಿರಲಿಲ್ಲ. ನಟನೆ ಎಂಬುದು ನಿಜವಾಗಿಯೂ ನೀವು ಧರಿಸುವ ಡ್ರೆಸ್ ಹಾಗೂ ಮೇಕಪ್ ಗೆ  ಸಂಬಂಧಿಸುತ್ತದೆ. ನಾನು ಸೆಟ್‍ಗೆ ಹೋದಾಗ ಕಾಗದದ ಮೇಲೆ ನೀಡಿರುವ ಡೈಲಾಂಗ್ ತೆಗೆದುಕೊಂಡು ಪಾತ್ರಕ್ಕೆ ಜೀವ ತುಂಬಿಸುವುದು ಹೇಗೆ ಎಂದು ಯೋಚಿಸುತ್ತಿದ್ದೆ. ಈ ಅನುಭವ ಬಹಳ ಕಷ್ಟಕರವಾಗಿತ್ತು.

    ನಾನು ಡೈಲಾಗ್ ಫೋನೆಟಿಕ್ ಆಗಿ ಕಲಿಯುತ್ತಿದ್ದೆ. ನಂತರ ಅದನ್ನು ಕಂಠಪಾಠ ಮಾಡುತ್ತಿದ್ದೆ. ಅದರ ಹಿಂದಿನ ಅರ್ಥವನ್ನು ಅರ್ಥಮಾಡಿಕೊಳ್ಳುತ್ತಿದ್ದೆ ಮತ್ತು ನಂತರ ನನ್ನ ಸಾಲುಗಳನ್ನು ಹೇಳುತ್ತಿದ್ದೆ. ಈ ವೇಳೆ ನನ್ನ ನನ್ನ ಕೋ ಸ್ಟಾರ್ ವಿಜಯ್ ಅವರನ್ನು ನೋಡಿದೆ. ನನ್ನ ಜೀವನದ ಪ್ರಮುಖ ವ್ಯಕ್ತಿಗಳಲ್ಲಿ ಅವರು ಸಹ ಒಬ್ಬರು. ಅವರು ವಿಶಾಲವಾದ ಹೃದಯವನ್ನು ಹೊಂದಿದ್ದಾರೆ. ಒಂದು ಬಾರಿ ಸೆಟ್‍ಗೆ ಅವರು ಬಂದರೆ ಮತ್ತೆ ಸೆಟ್‍ನಿಂದ ಹೊರಹೋಗುತ್ತಿರಲಿಲ್ಲ. ನಾನು ಕೂಡ ಅದನ್ನು ಪಾಲಿಸುತ್ತೇನೆ. ಚಿತ್ರೀಕರಣದ ವೇಳೆ ನನ್ನ ಟ್ರೇಲರ್‌ಗೆ ನಾನು ಹೋಗುವುದು ಬಹಳ ಕಡಿಮೆ. ಇಲ್ಲದಿದ್ದರೆ ಬಹಳಷ್ಟು ಹೊತ್ತು ಕಾಯಬೇಕಾಗುತ್ತದೆ. ನಾನು ಸಾಮಾನ್ಯವಾಗಿ ಸೆಟ್‍ನಲ್ಲಿಯೇ ಸುತ್ತಾಡುತ್ತಿರುತ್ತೇನೆ. ನಾವು ಏಕೆ ಡಿಫರೆಂಟ್ ಶಾಟ್‍ಗಳನ್ನು ತೆಗೆದುಕೊಳ್ಳುತ್ತಿರುತ್ತೇವೆ ಎಂದು ತಿಳಿಯಲು ಹೆಚ್ಚಾಗಿ ಯೋಚಿಸುತ್ತಿರುತ್ತೇನೆ. ನಾನು ಸಿಬ್ಬಂದಿಯೊಂದಿಗೆ ಮಾತನಾಡಲು ಬಯಸುತ್ತೇನೆ. ನಾನು ಯಾವಾಗಲೂ ಎಲ್ಲರ ಮಧ್ಯೆ ಇರಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ‘ಊ ಅಂತಾವಾ’ ವಿವಾದದ ಕುರಿತು ಮೌನ ಮುರಿದ ದೇವಿ ಶ್ರೀ ಪ್ರಸಾದ್

    ಪ್ರಿಯಾಂಕಾ ಚೋಪ್ರಾ ಅವರು ದಳಪತಿ ವಿಜಯ್ ಜೊತೆಗೆ ತಮಿಝನ್ ಎಂಬ ಸಿನಿಮಾದಲ್ಲಿ ಮೊದಲ ಬಾರಿಗೆ ಅಭಿನಯಿಸಿದ್ದರು. ನಟನೆ ಅಷ್ಟೇ ಅಲ್ಲದೇ ಡಿ ಇಮ್ಮಾನ್ ಸಂಯೋಜಿಸಿರುವ ಉಲ್ಲತೈ ಕಿಲ್ಲಾತೆ ಎಂಬ ಹಾಡನ್ನು ಸಹ ಹಾಡಿದ್ದಾರೆ. ಇದನ್ನೂ ಓದಿ:  ಬ್ರೇಕಪ್ ವಿಚಾರವಾಗಿ ಕೊನೆಗೂ ಮೌನ ಮುರಿದ ಅರ್ಜುನ್ ಕಪೂರ್!

  • ಬಾಯ್ ಫ್ರೆಂಡ್ ಸಂತನುಗೆ ಪ್ರಪೋಸ್ ಮಾಡಿದ್ದನ್ನು ರಿವೀಲ್ ಮಾಡಿದ ಶ್ರುತಿ ಹಾಸನ್

    ಬಾಯ್ ಫ್ರೆಂಡ್ ಸಂತನುಗೆ ಪ್ರಪೋಸ್ ಮಾಡಿದ್ದನ್ನು ರಿವೀಲ್ ಮಾಡಿದ ಶ್ರುತಿ ಹಾಸನ್

    ಚೆನ್ನೈ: ಕಾಲಿವುಡ್ ನಟ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ತಮ್ಮ ಬಾಯ್ ಫ್ರೆಂಡ್ ಸಂತನು ಹಜಾರಿಕಗೆ ಮೊದಲು ತಾವೇ ಪ್ರಪೋಸ್ ಮಾಡಿರುವ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ರಿವೀಲ್ ಮಾಡಿದ್ದಾರೆ.

    ಶ್ರುತಿ ಹಾಸನ್ ಹಾಗೂ ಸಂತನು ಹಜಾರಿಕ ಇನ್‍ಸ್ಟಾಗ್ರಾಮ್‍ನಲ್ಲಿ ಕೇಳಲಾದ ಕೆಲವೊಂದು ಕಪಲ್ಸ್ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಈ ವೇಳೆ ನಿಮ್ಮಲ್ಲಿ ಮೊದಲು ಯಾರು ಪ್ರಪೋಸ್ ಮಾಡಿದ್ದು ಎಂಬ ಪ್ರಶ್ನೆಗೆ ಶೃತಿ ಹಾಸನ್ ನಾನೇ ಎಂದು ಹೇಳಿದ್ದಾರೆ. ನಿಮ್ಮಿಬ್ಬರಲ್ಲಿ ಹೆಚ್ಚಾಗಿ ಯಾರು ಪ್ರೊಟೆಕ್ಟ್ ಮಾಡುತ್ತಾರೆ ಎಂಬ ಪ್ರಶ್ನೆಗೆ ಇಬ್ಬರು ಒಬ್ಬರನ್ನೊಬ್ಬರು ತೋರಿಸಿದ್ದಾರೆ. ಇದನ್ನೂ ಓದಿ: ಪಬ್ಲಿಕ್ ಪ್ಲೇಸ್‍ನಲ್ಲಿ ಗೆಳೆಯನಿಗೆ ಶ್ರುತಿ ಹಾಸನ್ ಕಿಸ್

     

    View this post on Instagram

     

    A post shared by Shruti Haasan (@shrutzhaasan)

    ಶೃತಿ ಹಾಸನ್ ಹಾಗೂ ಸಂತನು ಹಜಾರಿಕಾ ಒಂದೆರಡು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಸದ್ಯ ಶೃತಿ ಹಾಸನ್ ಈ ಫನ್ನಿ ವೀಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿಕೊಳ್ಳುವ ಮೂಲಕ ಸಾರ್ವಜನಿಕವಾಗಿ ಸಂತನು ಹಾಗೂ ತಮ್ಮ ಮಧ್ಯೆ ಇರುವ ಸಂಬಂಧವನ್ನು ಬಹಿರಂಗಪಡಿಸಿದ್ದಾರೆ.

    ಕೆಲವು ತಿಂಗಳ ಹಿಂದೆಯಷ್ಟೇ ಶ್ರುತಿ ಹಾಸನ್ ಸಂತನು ಹಜಾರಿಕಗೆ ಸಾರ್ವಜನಿಕ ಸ್ಥಳದಲ್ಲಿ ಕಿಸ್ ಮಾಡಿದ ಫೋಟೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಸದ್ಯ ಈ ಜೋಡಿ ಒಟ್ಟಿಗೆ ಕಾಲ ಕಳೆಯುತ್ತಿದ್ದು, ಈ ವಿಚಾರದ ಬಗ್ಗೆ ಹಿಂದೆಯೇ ಶ್ರುತಿ ಹಾಸನ್ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದರು. ಅಲ್ಲದೇ ಬಾಯ್‍ಫ್ರೆಂಡ್ ಜೊತೆ ತುಂಬ ಆಪ್ತವಾಗಿರುವ ಫೋಟೋಗಳನ್ನು ಆಗಾಗ ಶೃತಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ.  ಇದನ್ನೂ ಓದಿ: ರೊಮ್ಯಾಂಟಿಕ್ ಫೋಟೋ ಹಂಚಿಕೊಂಡ ಖ್ಯಾತ ನಟನ ಪುತ್ರಿ

  • ಸೂಪರ್ ಸ್ಟಾರ್ ರಜನಿಕಾಂತ್‍ಗೆ 71ನೇ ಹುಟ್ಟುಹಬ್ಬದ ಸಂಭ್ರಮ

    ಸೂಪರ್ ಸ್ಟಾರ್ ರಜನಿಕಾಂತ್‍ಗೆ 71ನೇ ಹುಟ್ಟುಹಬ್ಬದ ಸಂಭ್ರಮ

    ಚೆನ್ನೈ: ಕಾಲಿವುಡ್ ನಟ ಸೂಪರ್ ಸ್ಟಾರ್ ರಜನಿಕಾಂತ್‍ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 71 ನೇ ವಸಂತಕ್ಕೆ ಕಾಲಿಟ್ಟಿರುವ ರಜನಿಕಾಂತ್ ಅವರಿಗೆ ಕುಟುಂಬದವರು, ಸ್ನೇಹಿತರು ಸೇರಿದಂತೆ ಅಭಿಮಾನಿಗಳು ಸೋಶಿಯಲ್ ಮೀಡಿಯಾ ಮೂಲಕ ಶುಭಾಶಯ ತಿಳಿಸುತ್ತಿದ್ದಾರೆ.

    70 ವರ್ಷ ವಯಸ್ಸಾದರೂ ಯುವಕನಂತೆ ನಟಿಸುವ ನಟ ರಜನಿಕಾಂತ್ ಅವರಿಗೆ ದೇಶಾದ್ಯಂತ ಅಪಾರ ಅಭಿಮಾನಿ ಬಳಗವಿದೆ. ಅಲ್ಲದೇ ಅಭಿಮಾನಿಗಳು ಅವರನ್ನು ಪ್ರೀತಿಯಿಂದ ತಲೈವಾ ಎಂದು ಕರೆಯುತ್ತಾರೆ. ಸದ್ಯ ರಜನಿಕಾಂತ್ ಅವರ ಹುಟ್ಟುಹಬ್ಬದ ಪ್ರಯುಕ್ತ ತಮಿಳುನಾಡಿನಾದ್ಯಂತ ಅಭಿಮಾನಿಗಳು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಇದನ್ನೂ ಓದಿ: ಐಟಂ ಸಾಂಗ್ ಕ್ಲಿಕ್ -‘ಪುಷ್ಪ’ದಲ್ಲಿ ಸಮಂತಾ ಫುಲ್ ಮಿಂಚಿಂಗ್

    ಕಳೆದ ತಿಂಗಳಷ್ಟೇ ರಿವಾಸ್ಕುಲರೈಸೇಶನ್ ಶಸ್ತ್ರಚಿಕಿತ್ಸೆಗೆ ಒಳಗಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ರಜನಿಕಾಂತ್ ಅವರು ಸದ್ಯ ಚೇತರಿಸಿಕೊಳ್ಳುತ್ತಿದ್ದು, ಯಾವುದೇ ಹೊಸ ಸಿನಿಮಾವನ್ನು ಘೋಷಿಸಿಲ್ಲ. ಸದ್ಯ ಇಂದು ರಜನಿ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು ಫೋಟೋ ಹಾಗೂ ವೀಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಸಂಭ್ರಮಿಸುತ್ತಿದ್ದಾರೆ. ಇದನ್ನೂ ಓದಿ: 1 ತಿಂಗಳೊಳಗೆ ಹಣ ಮರಳಿಸಿ – ದ್ವಾರಕೀಶ್‍ಗೆ ಕೋರ್ಟ್ ಸೂಚನೆ

  • ಅಪ್ಪು ಸದಾ ನಮ್ಮ ಹೃದಯದಲ್ಲಿ ನಗುತ್ತಿರುತ್ತಾರೆ – ಪುನೀತ್ ನೆನೆದು ಬಿಕ್ಕಿ, ಬಿಕ್ಕಿ ಅತ್ತ ಸೂರ್ಯ

    ಅಪ್ಪು ಸದಾ ನಮ್ಮ ಹೃದಯದಲ್ಲಿ ನಗುತ್ತಿರುತ್ತಾರೆ – ಪುನೀತ್ ನೆನೆದು ಬಿಕ್ಕಿ, ಬಿಕ್ಕಿ ಅತ್ತ ಸೂರ್ಯ

    ಬೆಂಗಳೂರು: ಕಾಲಿವುಡ್ ಖ್ಯಾತ ನಟ ಸೂರ್ಯ ಅವರು ಇಂದು ಅಪ್ಪು ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸಿದರು.

    surya

    ಬೆಂಗಳೂರಿನ ಕಂಠೀರವ ಸ್ಟುಡಿಯೋಗೆ ಭೇಟಿ ಕೊಟ್ಟ ತಮಿಳಿನ ನಟ ಸೂರ್ಯ ಆತ್ಮೀಯ ಗೆಳೆಯ ಪುನೀತ್ ಜೊತೆಗೆ ಕಳೆದ ಸಿಹಿ ಕ್ಷಣಗಳನ್ನು ನೆನಪಿಸಿಕೊಂಡು ಸಮಾಧಿ ಎದುರು ನಿಂತು ಬಿಕ್ಕಿಬಿಕ್ಕಿ ಕಣ್ಣೀರು ಹಾಕಿದರು.

    ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದು ಬಹಳ ಅನ್ಯಾಯ. ಈ ರೀತಿ ಆಗಬಾರದಿತ್ತು. ಏನು ಜರುಗಿದೆ ಅದನ್ನು ಈಗಲೂ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಮ್ಮ ಹಾಗೂ ಡಾ. ರಾಜ್ ಕುಮಾರ್ ಅವರ ಕುಟುಂಬ ಬಹಳ ಆತ್ಮೀಯತೆ ಮತ್ತು ಉತ್ತಮ ಬಾಂಧವ್ಯ ಹೊಂದಿದ್ದೇವೆ. ಅಪ್ಪ ಅವರ ಫ್ಯಾಮಿಲಿ ಜೊತೆ ಕಳೆದಂತಹ ಬಹಳಷ್ಟು ಸಮಯಗಳು ಸದಾ ನೆನಪಾಗುತ್ತಿರುತ್ತದೆ. ನನಗೆ 4 ತಿಂಗಳು ಆಗಿದ್ದಾಗ ಅಪ್ಪುಗೆ 7 ತಿಂಗಳಾಗಿತ್ತು ಎಂದು ಅಮ್ಮ ಹೇಳುತ್ತಿದ್ದ ಮಾತು ನನಗೆ ಈಗಲೂ ಕೂಡ ನೆನಪಿನಲ್ಲಿದೆ. ಅಪ್ಪ, ಅಮ್ಮನ ಯಾವುದೇ ಫೋಟೋ ಅಥವಾ ವೀಡಿಯೋ ನೋಡಿದರೂ ಇಬ್ಬರು ಸದಾ ನಗುತ್ತಲೇ ಇರುವುದನ್ನೇ ಕಾಣುತ್ತೇವೆ.  ಇದನ್ನೂ ಓದಿ: ನನಗೆ ಅರ್ಥ ಮಾಡಿಕೊಳ್ಳಲು, ಈ ಸತ್ಯವನ್ನ ಅರಗಿಸಿಕೊಳ್ಳಲು ಆಗ್ತಿಲ್ಲ: ರಾಮ್ ಚರಣ್ ತೇಜಾ

    ಸಮಾಜಕ್ಕೆ ಪುನೀತ್ ಅದ್ಭುತವಾದಂತಹ ಕೆಲಸಗಳನ್ನೇ ಮಾಡಿದ್ದಾರೆ. ಯಾರು ಪುನೀತ್‍ರನ್ನು ನಿಜವಾಗಿಯೂ ಪ್ರೀತಿಸುತ್ತಾರೆ ಅವರ ನೆನಪುಗಳನ್ನು ಸದಾ ಮನದಲ್ಲಿಟ್ಟುಕೊಂಡಿರುತ್ತಾರೆ. ಅಪ್ಪು ಯಾವಾಗಲೂ ನಮ್ಮ ಹೃದಯದಲ್ಲಿ ನಗುತ್ತಲೇ ಇರುತ್ತಾರೆ. ನಾನು ಪುನೀತ್‍ರನ್ನು ಬಹಳ ಮಿಸ್ ಮಾಡಿಕೊಳ್ಳುತ್ತೇನೆ. ದೇವರು ಅವರ ಪತ್ನಿ, ಮಕ್ಕಳು ಮತ್ತು ಕುಟುಂಬಕ್ಕೆ ದುಃಖವನ್ನು ಸಹಿಸಿಕೊಳ್ಳುವ ಶಕ್ತಿ ನೀಡಲಿ. ಪುನೀತ್ ಆತ್ಮಕ್ಕೆ ಶಾಂತಿ ಸಿಗಲಿ ಅಂತ ಪ್ರಾರ್ಥಿಸುತ್ತೇನೆ ಎಂದು ಭಾವುಕರಾಗಿ ಹೇಳಿದರು. ಇದೇ ವೇಳೆ ಸೂರ್ಯ ಅವರಿಗೆ ಶಿವರಾಜ್ ಕುಮಾರ್  ಸಾಥ್ ನೀಡಿದರು. ಇದನ್ನೂ ಓದಿ: ಪುನೀತ್ ಭೇಟಿಯಾಗುವ ಸೌಭಾಗ್ಯ ನನಗೆ ಸಿಕ್ಕಿಲ್ಲ: ವಿಜಯ್ ಸೇತುಪತಿ