Tag: Kollywood

  • ಪೂಜಾ ಹೆಗ್ಡೆ 1 ಕೋಟಿ ಸಂಭಾವನೆ ಪಡೆದ ಹಾಡಿನಲ್ಲಿ ಏನಿದೆ?: ಫನ್ ಅಂಡ್ ಫ್ರಸ್ಟ್ರೇಷನ್

    ಪೂಜಾ ಹೆಗ್ಡೆ 1 ಕೋಟಿ ಸಂಭಾವನೆ ಪಡೆದ ಹಾಡಿನಲ್ಲಿ ಏನಿದೆ?: ಫನ್ ಅಂಡ್ ಫ್ರಸ್ಟ್ರೇಷನ್

    ರ್ನಾಟಕ ಮೂಲದ ದಕ್ಷಿಣದ ಚೆಲುವೆ ಪೂಜಾ ಹೆಗ್ಡೆ ಹಾಡೊಂದಕ್ಕೆ ಹೆಜ್ಜೆ ಹಾಕಲು ಬರೋಬ್ಬರಿ ಒಂದು ಕೋಟಿ ಸಂಭಾವನೆ ಪಡೆದುಕೊಂಡ ವಿಚಾರ ವಾರದಿಂದ ಸಿನಿಮಾ ರಂಗದಲ್ಲಿ ಗಿರಿಕಿ ಹೊಡೆಯುತ್ತಿದೆ. ಸಾಲು ಸಾಲು ಸೋಲುಗಳನ್ನೇ ಉಂಡಿರುವ ಪೂಜಾ, ನಿಜಕ್ಕೂ ಅಷ್ಟೊಂದು ಸಂಭಾವನೆ ಪಡೆದರಾ ಅನ್ನುವ ಅನುಮಾನ ಕೂಡ ಮೂಡಿದೆ. ಯಾವುದಕ್ಕೂ ತಲೆಕೆಡಿಸಿಕೊಳ್ಳದ ಪೂಜಾ, ತಮ್ಮ ಪಾಡಿಗೆ ತಾವು ಒಪ್ಪಿಕೊಂಡಿರುವ ಹಾಡಿಗೆ ಹೆಜ್ಜೆ ಹಾಕಿ ಬಂದಿದ್ದಾರೆ. ಇದನ್ನೂ ಓದಿ : ಕೆಜಿಎಫ್-2 : ಎರಡನೇ ದಿನಕ್ಕೆ 240 ಕೋಟಿ ಬಾಚಿದ ರಾಕಿ ಭಾಯ್ : ಗ್ರೌಂಡ್ ರಿಪೋರ್ಟ್

    ಹೌದು, ಪೂಜಾ ಇದೀಗ ‘ಎಫ್ 3’ ಹೆಸರಿನ ಸಿನಿಮಾವೊಂದರಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ನಿನ್ನೆಯಷ್ಟೇ ಆ ಸಿನಿಮಾದ ಹಾಡಿನ ಚಿತ್ರೀಕರಣ ನಡೆದಿದೆ. ದಟ್ಟ ಪಿಂಕ್ ಬಣ್ಣದ ತುಂಡುಡುಗೆಯಲ್ಲಿ ಪೂಜಾ ಸೊಂಟ ಬಳುಕಿಸಿದ್ದಾರೆ. ಇದೊಂದು ಪಾರ್ಟಿ ಸಾಂಗ್ ಆಗಿದ್ದು, ಪಡ್ಡೆಗಳಿಗೆ ಕಿಕ್ ಏರಿಸುವಂತಹ ಸಾಹಿತ್ಯ ಈ ಹಾಡಿನಲ್ಲಿ ಇದೆಯಂತೆ. ಇದನ್ನೂ ಓದಿ : ಹನುಮ ಜಯಂತಿ : ದೂರದ ಬೆಟ್ಟ ಸಿನಿಮಾದಲ್ಲಿಯ ಡಾ.ರಾಜ್ ಅವರ ಹನುಮನ ಪಾತ್ರ ಏನಾಯಿತು?

    ‘ಎಫ್ 3’ ಅಂದರೆ ಏನು? ಅನ್ನುವುದರ ಕುರಿತು ಸಿನಿಮಾ ರಂಗವು ಈವರೆಗೂ ಮಾಹಿತಿ ಹಂಚಿಕೊಂಡಿಲ್ಲ. ಆದರೆ, ಫೋಸ್ಟರ್ ನಲ್ಲಿ ಇರುವಂತೆ ‘ಎಫ್’ ಅಂದರೆ ಫನ್, ‘ಎಫ್’ ಅಂದರೆ ಫ್ರಸ್ಟ್ರೇಷನ್. ಇವೆರಡರ ಸಂಗಮವೇ ಈ ಸಿನಿಮಾ ಎನ್ನಬಹುದು. ವಿಕ್ಟರಿ ವೆಂಕಟೇಶ್ ಮತ್ತು ವರುಣ್ ತೇಜ್ ಕಾಂಬಿನೇಷನ್ ನ ಈ ಸಿನಿಮಾಗೆ ಅನಿಲ್ ರವಿಪುಡಿ ನಿರ್ದೇಶನ ಮಾಡಿದ್ದಾರೆ. ನಿರ್ದೇಶಕರೇ ಪೂಜಾ ಡ್ಯಾನ್ಸ್ ಮಾಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ : ಹಸೆಮಣೆ ಏರಿದ ಆಲಿಯಾ-ರಣಬೀರ್‌ಗೆ ಜೋಡಿ ಕುದುರೆ ಉಡುಗೊರೆ

    ಪೂಜಾ ಹೆಗ್ಡೆ ನಟನೆಯ ಎರಡು ಪ್ಯಾನ್ ಇಂಡಿಯಾ ಸಿನಿಮಾಗಳು ಅಂದುಕೊಂಡಷ್ಟು ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡಲಿಲ್ಲ. ಪ್ರಭಾಸ್ ಜತೆ ನಟಿಸಿದ್ದ ರಾಧೆ ಶ್ಯಾಮ್ ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸಲಿದೆ ಎಂದು ನಂಬಲಾಗಿತ್ತು. ಆ ನಂಬಿಕೆ ಹುಸಿ ಆಯಿತು. ಅಲ್ಲದೇ, ಮೊನ್ನೆಯಷ್ಟೇ ರಿಲೀಸ್ ಆಗಿರುವ ದಳಪತಿ ವಿಜಯ್ ಅವರ ಬೀಸ್ಟ್ ನಲ್ಲೂ ಪೂಜಾ ನಟಿಸಿದ್ದಾರೆ. ಈ ಸಿನಿಮಾ ಕೂಡ ಪ್ರೇಕ್ಷಕರ ಮನಸ್ಸನ್ನು ಗೆಲ್ಲಲು ಹಿಂದೆ ಬಿದ್ದಿದೆ.

  • ಮತ್ತೆ ತುಂಡುಡುಗೆ ತೊಟ್ಟು ಟ್ರೋಲ್ ಆದ ಸಮಂತಾ

    ಮತ್ತೆ ತುಂಡುಡುಗೆ ತೊಟ್ಟು ಟ್ರೋಲ್ ಆದ ಸಮಂತಾ

    ಪುಷ್ಪಾ ಸಿನಿಮಾದ ‘ಹೂಂ ಅಂತೀಮಾ ಮಾವ’ ಹಾಡಿನ ನಂತರ ಸಮಂತಾ ಮೇಲೆ ಕೆಲ ಅಭಿಮಾನಿಗಳು ನಿರಂತರ ಕೆಂಡಕಾರುತ್ತಿದ್ದಾರೆ. ಅವರು ಹಾಗೆ ಮಾಡುವುದಕ್ಕೆ ಕಾರಣವೂ ಇದೆ. ನಟ ನಾಗಚೈತನ್ಯ ಅವರಿಂದ ಸಮಂತಾ ದೂರಾದ ಮೇಲೆ ನಾನಾ ರೀತಿಯ ಅವಮಾನಕ್ಕೆ ತುತ್ತಾಗುತ್ತಿದ್ದಾರೆ. ಅವೆಲ್ಲದಕ್ಕೂ ತಲೆ ಕೆಡಿಸಿಕೊಳ್ಳದೇ ತಮ್ಮ ಪಾಡಿಗೆ ತಾವು ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಲೇ ಇದ್ದಾರೆ ಸಮಂತಾ. ಇದನ್ನೂ ಓದಿ : ಟರ್ಕಿಯಲ್ಲಿ ರಜಾಮಜಾ ಮಾಡುತ್ತಿರೋ ಬ್ಯೂಟಿಫುಲ್‌ ಗರ್ಲ್ ಕಾರುಣ್ಯ ರಾಮ್

    ಹೂಂ ಅಂತೀಯಾ ಮಾವ ಹಾಡು ಬಂದ ನಂತರ ಇಂಥದ್ದೊಂದು ಹಾಡಿನಲ್ಲಿ ಕಾಣಿಸಿಕೊಳ್ಳಬಾರದಿತ್ತು ಎಂದು ಕೆಲವರು ಕಾಮೆಂಟ್ ಮಾಡಿದರು. ದುಡ್ಡಿಗಾಗಿ ಸಮಂತಾ ಏನು ಬೇಕಾದರೂ ಮಾಡಲು ರೆಡಿ ಎನ್ನುವಲ್ಲಿಗೆ ಕಾಮೆಂಟ್ ಗಳು ಹರಿದಾಡಿದವು. ಅವೆಲ್ಲವಕ್ಕೂ ಡೋಂಟ್ ಕೇರ್ ಅಂದ ಸಮಂತಾ ಇದೀಗ ಮತ್ತೊಂದು ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಆ ಹಾಡಿನ ಗ್ಲಿಂಪ್ಸ್ ಇದೀಗ ರಿಲೀಸ್ ಆಗಿದೆ. ಇದನ್ನೂ ಓದಿ : ತಾಳಿಕಟ್ಟಿ ಹೆಂಡತಿಯನ್ನು ಎತ್ತಿಕೊಂಡ ರಣಬೀರ್ ಕಪೂರ್

    ಸದ್ಯ ನಯನತಾರಾ ಮತ್ತು ವಿಜಯ್ ಸೇತುಪತಿ ಕಾಂಬಿನೇಷನ್ ನಲ್ಲಿ ‘ಕಾದು ವಾಕುಲ ರೆಂಡು ಕಾದಲ್’ ಹೆಸರಿನಲ್ಲಿ ಸಿನಿಮಾವೊಂದು ಮೂಡಿ ಬರುತ್ತಿದೆ. ಬಹುತೇಕ ಸಿನಿಮಾದ ಶೂಟಿಂಗ್ ಕೂಡ ಮುಗಿದಿದೆ. ಈ ಸಿನಿಮಾಗೆ ನಯನತಾರಾ ಬಾಯ್ ಫ್ರೆಂಡ್ ವಿಘ್ನೇಶ್ ಶಿವನ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ‘ಟು ಟು ಟು..’ ಹಾಡಿಗೆ ಸಮಂತಾ ನೃತ್ಯ ಮಾಡಿದ್ದಾರೆ. ಇದನ್ನೂ ಓದಿ: ‘BOSS’ ಪಟ್ಟ ಅಲಂಕರಿಸಿದ ಯಶ್ : ಟ್ವಿಟರ್ ಟ್ರೆಂಡಿಂಗ್ ನಲ್ಲಿ #YASHBOSS

    ಈ ಹಾಡಿನಲ್ಲಿ ಸಮಂತಾ ಕಾಣಿಸಿಕೊಳ್ಳುತ್ತಿರುವುದಕ್ಕೆ ಬಲವಾದ ಕಾರಣವಿದೆ. ಸಮಂತಾ ಮತ್ತು ನಯನತಾರಾ ಕ್ಲೋಸ್ ಫ್ರೆಂಡ್ಸ್. ಕಷ್ಟದ ಪ್ರತಿಕ್ಷಣದಲ್ಲೂ ಒಬ್ಬರಿಗೊಬ್ಬರು ಸಹಾಯ ಮಾಡಿಕೊಂಡಿದ್ದಾರೆ. ನೈತಿಕವಾಗಿ ಬೆಂಬಲ  ವ್ಯಕ್ತಪಡಿಸಿದ್ದಾರೆ. ಈ ಕಾರಣಕ್ಕಾಗಿಯೇ ನಯನತಾರಾ ನಟನೆಯ ಈ ಸಿನಿಮಾದ ಹಾಡಿಗೆ ಸಮಂತಾ ಕುಣಿದಿದ್ದಾರೆ.

    ಕಾಡು ವಾಕುಲ ರೆಂಡು ಕಾದಲ್ ಸಿನಿಮಾದ ಪ್ರಮುಖ ಘಟ್ಟದಲ್ಲಿ ಬರುವ ‘ಟು ಟು ಟು’ ಗೀತೆಯಲ್ಲಿ ಸಮಂತಾ ಗುಲಾಬಿ ಬಣ್ಣದ ಶಾರ್ಟ್ ಡ್ರೆಸ್ ಹಾಕಿ ಅಚ್ಚರಿ ಮೂಡಿಸಿದ್ದಾರೆ. ಅನಿರುದ್ಧ ರವಿಚಂದರ್ ಸಂಗೀತ ನಿರ್ದೇಶನದಲ್ಲಿ ಈ ಹಾಡು ಮೂಡಿ ಬಂದಿದ್ದು, ನಯನತಾರಾ ಮತ್ತು ವಿಜಯ್ ಸೇತುಪತಿ ಕೂಡ ಹಾಡಿನಲ್ಲಿದ್ದಾರೆ.

  • ಕಾಲಿವುಡ್‌ಗೆ ದಳಪತಿ ವಿಜಯ್ ಪುತ್ರನ ಎಂಟ್ರಿ!

    ಕಾಲಿವುಡ್‌ಗೆ ದಳಪತಿ ವಿಜಯ್ ಪುತ್ರನ ಎಂಟ್ರಿ!

    ಕಾಲಿವುಡ್‌ನ ಸೂಪರ್ ಸ್ಟಾರ್ ಆಗಿ ಮಿರ ಮಿರ ಅಂತಾ ಮಿಂಚ್ತಿರೋ ಖ್ಯಾತ ನಟ ದಳಪತಿ ವಿಜಯ್ ನಟನೆಯ `ಬೀಸ್ಟ್’ ಚಿತ್ರ ರಿಲೀಸ್ ಆಗಿ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ತಿದೆ. ಇದರ ಮಧ್ಯೆ ಹೊಸ ವಿಚಾರವೊಂದು ಸಿನಿಗಲ್ಲಿಯಲ್ಲಿ ಸೌಂಡ್ ಮಾಡ್ತಿದೆ. ಸೂಪರ್‌ಸ್ಟಾರ್ ದಳಪತಿ ವಿಜಯ್ ಪುತ್ರ ಸಂಜಯ್ ಸಿನಿರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ.

    ತಮಿಳು ಚಿತ್ರರಂಗದಲ್ಲಿ 60ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ನಾನಾ ಪಾತ್ರಗಳ ರಂಜಿಸಿ ಸೈ ಎನಿಸಿಕೊಂಡಿದ್ದಾರೆ. `ಬೀಸ್ಟ್’ ಚಿತ್ರದ ಕುರಿತು ಸಿಕ್ಕಾಪಟ್ಟೆ ಸುದ್ದಿಯಲ್ಲಿರಬೇಕಾದ್ರೆ, ದಳಪತಿ ವಿಜಯ್ ಮಗ ಸಂಜಯ್, ಸಿನಿಮಾ ರಂಗಕ್ಕೆ ಎಂಟ್ರಿ ಕೊಡೋದರ ಕುರಿತು ಸಿಕ್ಕಾಪಟ್ಟೆ ಚರ್ಚೆಯಾಗ್ತಿದೆ. ಈ ವಿಷ್ಯವಾಗಿ ದಳಪತಿ ವಿಜಯ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

    ಕಳೆದ ಎರಡು ವರ್ಷಗಳಿಂದ ಇಂಡಸ್ಟ್ರಿಗೆ ವಿಜಯ್ ಮಗನ ಎಂಟ್ರಿಯಾಗುತ್ತೆ ಅಂತಾ ಭಾರೀ ಚರ್ಚೆ ಆಗ್ತಿತ್ತು. ಅದಕ್ಕೆ ಪೂರಕವೆನ್ನುವಂತೆ ಸಾಕಷ್ಟು ಕಥೆಗಳು ವಿಜಯ್ ಪುತ್ರ ಸಂಜಯ್‌ರನ್ನ ಅರಸಿ ಬಂದಿತ್ತು. `ಪ್ರೇಮಂ’ ನಿರ್ದೇಶಕ ಅಲ್ಫೋನ್ಸ್ ಪುತ್ರೇನ್ ಒಮ್ಮೆ ವಿಜಯ್‌ರನ್ನ ಸಂಪರ್ಕಿಸಿ ಕಥೆ ಹೇಳಾಗಿತ್ತಂತೆ, ಕಥೆ ಕೇಳಿ ಇಷ್ಟಪಟ್ಟಿದ್ರಂತೆ ವಿಜಯ್, ಆದರೆ ಆ ಕಥೆಯನ್ನ ಸಂಜಯ್‌ಗಾಗಿ ಸಿದ್ಧಪಡಿಸಿದ್ರಂತೆ.

    ನಂತರ ಸಂಜಯ್ ಚಿತ್ರರಂಗಕ್ಕೆ ಬರೋದಕ್ಕೆ ಸ್ವಲ್ವ ಸಮಯ ಬೇಕು ಅಂತಾ ನಿರ್ದೇಶಕ ಅಲ್ಫೋನ್ಸ್ಗೆ ತಿಳಿಸಿದ್ರಂತೆ. ಚಿತ್ರರಂಗಕ್ಕೆ ಬರೋದು ಸಂಜಯ್‌ಗೆ ಬಿಟ್ಟಿದ್ದು, ಪುತ್ರ ಸಂಜಯ್‌ಗೆ ಯಾವ ಕ್ಷೇತ್ರದಲ್ಲಿ ಬೆಳೆಯಲು ಇಷ್ಟವೋ ಅದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದ `ಪ್ರೇಮಂ’ ನಿರ್ದೇಶಕ ಅಲ್ಫೋನ್ಸ್ಗೆ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ:ಕೆಜಿಎಫ್ 2 ಚಿತ್ರಕ್ಕೆ ಪೈರಸಿ ಶಾಕ್

    ಇನ್ನು ಪುತ್ರ ವಿಜಯ್ ಕೂಡ ಒಂದೊಳ್ಳೆ ಗಟ್ಟಿ ಕಥೆಯ ಮೂಲಕ ಕಾಲಿವುಡ್ ರಂಗಕ್ಕೆ ಬರಲು ತೆರೆಮರೆಯಲ್ಲಿ ಸಿಧ್ಧತೆ ನಡೆಸುತ್ತಿದ್ದಾರೆ. ಒಂದೊಳ್ಳೆ ಪಾತ್ರದ ಮೂಲಕ ಸಂಜಯ್ ಸ್ಕ್ರೀನ್‌ಗೆ ಶೇರ್ ಮಾಡೋದು ಗ್ಯಾರೆಂಟಿ. ಒಟ್ನಲ್ಲಿ ಈ ಶುಭ ಸುದ್ದಿ ಕೇಳಿ ದಳಪತಿ ವಿಜಯ್ ಫ್ಯಾನ್ಸ್ ದಿಲ್ ಖುಷ್ ಆಗಿದ್ದಾರೆ.

  • ರಾಜಕೀಯ ಪ್ರವೇಶದ ಸೂಚನೆ ಕೊಟ್ಟ ಖ್ಯಾತನಟ ದಳಪತಿ ವಿಜಯ್

    ರಾಜಕೀಯ ಪ್ರವೇಶದ ಸೂಚನೆ ಕೊಟ್ಟ ಖ್ಯಾತನಟ ದಳಪತಿ ವಿಜಯ್

    ನಾಳೆ ತಮಿಳಿನ ಖ್ಯಾತ ನಟ ದಳಪತಿ ವಿಜಯ್ ಅವರ ‘ಬೀಸ್ಟ್’ ಸಿನಿಮಾ ಬಿಡುಗಡೆ ಆಗುತ್ತಿದೆ. ಸಿನಿಮಾ ನೋಡಲು ವಿಜಯ್ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಇನ್ನೇನು ಸಿನಿಮಾ ತೆರೆಗೆ ಬರಬೇಕಿದೆ. ಅದಕ್ಕೂ ಎರಡು ದಿನ ಮುನ್ನ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡಿ, ಸಂಚಲನ ಸೃಷ್ಟಿಸಿದ್ದಾರೆ ವಿಜಯ್. ಇದನ್ನೂ ಓದಿ: ಬೆಂಕಿ ಬಿರುಗಾಳಿ ಎಬ್ಬಿಸಿದ ಕಂಗನಾ ಶೋ: ಪತಿ ಜತೆ ಮಲಗಿದವರ ಲಿಸ್ಟ್ ಹೇಳಿದ ನಟಿ ಮಂದರಾ

    ವಿಜಯ್ ರಾಜಕೀಯ ಪ್ರವೇಶ ಮಾಡುತ್ತಾರೆ ಎನ್ನುವ ಸುದ್ದಿ ಹಲವು ವರ್ಷಗಳಿಂದ ತಮಿಳುನಾಡಿನಲ್ಲಿ ಹರಿದಾಡುತ್ತಲೇ ಇದೆ. ವಿಜಯ್ ಹೆಸರಿನಲ್ಲೇ ಪಕ್ಷವೊಂದನ್ನು ಅವರ ತಂದೆ ಸ್ಥಾಪಿಸಿದ್ದರು. ಆ ಪಕ್ಷದಲ್ಲಿ ನಾನು ಸಕ್ರೀಯನಾಗಿಲ್ಲ ಎಂದು ವಿಜಯ್ ಹೇಳಿದ್ದರೂ, ಅವರ ಹೆಸರಿನಲ್ಲಿಯೇ ಅನೇಕ ಚಟುವಟಿಕೆಗಳು ಆ ಪಕ್ಷದಲ್ಲಿ ನಡೆದಿವೆ. ಅಲ್ಲದೇ, ಕಳೆದ ಬಾರಿ ಸ್ಥಳೀಯ ಮಟ್ಟದ ಚುನಾವಣೆಯಲ್ಲಿ ವಿಜಯ್ ಅವರ ತಂದೆಯ ಪಕ್ಷ ಸ್ಪರ್ಧಿಸಿತ್ತು. ಆ ವೇಳೆ ತಮ್ಮ ಫೋಟೋವನ್ನು ಬಳಸಿಕೊಳ್ಳಲು ವಿಜಯ್ ಅನುಮತಿ ಕೊಟ್ಟಿದ್ದರು. ಈಗ ತಾವೂ ರಾಜಕೀಯ ಪ್ರವೇಶ ಮಾಡುವ ಕುರಿತು ಮಾತನಾಡಿದ್ದಾರೆ. ಇದನ್ನೂ ಓದಿ:  ಕೊನೆಗೂ ಮದುವೆಯ ವಿಚಾರ ಖಚಿತಪಡಿಸಿದ ಆಲಿಯಾ!

    ‘ಬೀಸ್ಟ್’ ಸಿನಿಮಾಗೆ ಸಂಬಂಧಿಸಿದ ಸಂದರ್ಶನದಲ್ಲಿ ಮಾತನಾಡಿರುವ ವಿಜಯ್, ‘ನಾನು ರಾಜಕೀಯ ರಂಗಕ್ಕೆ ಬರಬೇಕು ಎನ್ನುವುದು ನನ್ನ ಅಭಿಮಾನಿಗಳಿಗೆ ಆಸೆಯಿದೆ. ಹಲವು ಬಾರಿ ಅವರು ನನ್ನನ್ನು ಒತ್ತಾಯಿಸಿದ್ದಾರೆ. ಅವರು ಆಸೆ ಪಟ್ಟರೆ ಖಂಡಿತಾ ನಾನು ರಾಜಕೀಯಕ್ಕೆ ಪ್ರವೇಶ ಮಾಡುತ್ತೇನೆ’ ಎಂದು ಹೇಳುವ ಮೂಲಕ ಮುಂದಿನ ದಿನಗಳಲ್ಲಿ ರಾಜಕಾರಣಿ ಆಗುತ್ತೇನೆ ಎಂದು ಪರೋಕ್ಷವಾಗಿ ಮಾತನಾಡಿದ್ದಾರೆ. ಇದನ್ನು ಓದಿ: ಬಂಕಿಮ್ ಚಂದ್ರ ಚಟರ್ಜಿ ಬಯೋಪಿಕ್: ಸ್ಕ್ರಿಪ್ಟ್ ಬರೆಯಲಿದ್ದಾರೆ ಜಕ್ಕಣ್ಣನ ತಂದೆ ವಿಜಯೇಂದ್ರ ಪ್ರಸಾದ್

    ವಿಜಯ್ ಈಗಾಗಲೇ ಜನಪರ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ನಾನಾ ಪಕ್ಷಗಳ ವಿರುದ್ಧ ತಮ್ಮದೇ ಆದ ರೀತಿಯಲ್ಲಿ ಪ್ರತಿಭಟಿಸಿದ್ದಾರೆ. ಪೆಟ್ರೊಲ್, ಡಿಸೈಲ್ ಬೆಲೆ ಏರಿಕೆಯಾದ ಸಂದರ್ಭದಲ್ಲಿ ಸೈಕಲ್ ಮೇಲೆ ಸವಾರಿ ಮಾಡಿ ಮತದಾನ ಮಾಡಿದ್ದರು ವಿಜಯ್, ಅವರ ಈ ನಡೆ ಭಾರೀ ಚರ್ಚೆಗೆ ಕಾರಣವಾಗಿತ್ತು. ಅಲ್ಲದೇ, ನಾಡು, ನುಡಿಗೆ ತೊಂದರೆ ಆದಾಗಲೂ ಅವರು ಅದರ ವಿರುದ್ಧ ಧ್ವನಿ ಎತ್ತಿದ್ದಾರೆ. ಹೀಗಾಗಿ ವಿಜಯ್ ಅವರು ರಾಜಕೀಯ ಪ್ರವೇಶ ಮಾಡಬೇಕು ಎನ್ನುವುದು ಅವರ ಅಭಿಮಾನಿಗಳ ಆಸೆಯಾಗಿದೆ. ಮುಂದಿನ ದಿನಗಳಲ್ಲಿ ಅವರು ಈಡೇರಿಸುವುದರಲ್ಲಿ ಅಚ್ಚರಿಯಿಲ್ಲ.

  • ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ತುಪ್ಪದ ಬೆಡಗಿ ರಾಗಿಣಿ ಬ್ಯುಸಿ

    ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ತುಪ್ಪದ ಬೆಡಗಿ ರಾಗಿಣಿ ಬ್ಯುಸಿ

    ಸ್ಯಾಂಡಲ್‌ವುಡ್‌ಗೆ `ಕೆಂಪೇಗೌಡ’, `ವೀರಮದಕರಿ’ ಚಿತ್ರಗಳ ಮೂಲಕ ಸಂಚಲನ ಮೂಡಿಸಿದ ನಟಿ ರಾಗಿಣಿ ದ್ವಿವೇದಿ.ಈಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬ್ಯೂಟಿ ಜೊತೆ ಪ್ರತಿಭೆಯಿರೋ ರಾಗಿಣಿಗೆ ಕನ್ನಡ ಚಿತ್ರಗಳು ಮಾತ್ರವಲ್ಲದೇ ಪರಭಾಷಾ ಸಿನಿಮಾಗಳಿಂದಲೂ ಬುಲಾವ್ ಬರುತ್ತಿದೆ.

    `ಜುಮ್ ಜುಮ್ ಮಾಯಾ’ ಎಂಬ ಹಾಡಿನ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಅಲೆ ಸೃಷ್ಠಿಸಿದ ತುಪ್ಪದ ಬೆಡಗಿ ರಾಗಿಣಿ ಸಾಕಷ್ಟು ಚಿತ್ರಗಳ ಮೂಲಕ ಕಮಾಲ್ ಮಾಡಿದ್ರು. ಭಿನ್ನ ಪಾತ್ರಗಳ ಮೂಲಕ ಮನರಂಜಿಸಿರೋ ರಾಗಿಣಿ ಕಡೆಯದಾಗಿ ಕಾಣಿಸಿಕೊಂಡಿದ್ದ ಚಿತ್ರ ನಟ ಶರಣ್ ಜೊತೆಗಿನ `ಅಧ್ಯಕ್ಷ ಇನ್ ಅಮೆರಿಕಾ’ ಚಿತ್ರದಲ್ಲಿ, ಇದೀಗ ಮತ್ತೆ ರಾಗಿಣಿ ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದಾರೆ.

    ರಾಗಿಣಿ ಈ ಬಾರಿ ಪವರ್‌ಫುಲ್ ಪಾತ್ರಗಳ ಮೂಲಕ ಕಂಬ್ಯಾಕ್ ಆಗಿದ್ದಾರೆ. ವಿಶಾಲ್ ಶೇಖರ್ ನಿರ್ದೇಶನದ `ಕರ್ವ 3′ ನಲ್ಲಿ ಡಿಫರೆಂಟ್ ಪಾತ್ರಕ್ಕೆ ಜೀವ ತುಂಬ್ತಿದ್ದಾರೆ. ವೇದಿಕ್ ನಿರ್ದೇಶನದ `ಜಾನಿವಾಕರ್’  ಚಿತ್ರದಲ್ಲಿ ತನಿಖಾ ಅಧಿಕಾರಿಯ ಪಾತ್ರದಲ್ಲಿ ಕಾಣಸಿಕೊಳ್ತಿದ್ದಾರೆ. ಇನ್ನೊಂದು ಭಿನ್ನ ಕಥೆ `ಗಾಂಧಿಗಿರಿ’ ಚಿತ್ರದಲ್ಲೂ ನಟಿಸ್ತಿದ್ದಾರೆ. ಇದನ್ನು ಓದಿ:`ಕೆಜಿಎಫ್ 2′ ಟೀಮ್‌ನಿಂದ ಪ್ರಭಾಸ್ ಫ್ಯಾನ್ಸ್‌ಗೆ ಗುಡ್ ನ್ಯೂಸ್

    ಬ್ರಹ್ಮ ನಿರ್ದೇಶನದ `ಸಾರಿ ಕರ್ಮ ರಿಟನ್ಸ್’ ಚಿತ್ರ ಕನ್ನಡ, ಹಿಂದಿ ಮತ್ತು ಮಲಯಾಳಂನಲ್ಲಿ ರಿಲೀಸ್ ಆಗುತ್ತಿದೆ. ಕ್ರಿಸ್ ಇಂಟರ್‌ನ್ಯಾಷನಲ್ ಬ್ಯಾನರ್ ಅಡಿ ಸಿದ್ದವಾಗ್ತಿರೋ ಈ ಚಿತ್ರದಲ್ಲಿ ರಾಗಿಣಿ ಎರಡು ಭಿನ್ನ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಕಾಲಿವುಡ್‌ನ `ಒನ್ ಟು ಒನ್’ ಚಿತ್ರಕ್ಕೆ ರಾಗಿಣಿ ಸಹಿ ಹಾಕಿದ್ದಾರೆ. ಫ್ಯಾಮಿಲಿ ಡ್ರಾಮ ಜೊತೆ ಸಸ್ಪೆನ್ಸೆ ಕಥೆಯಲ್ಲಿ ರಾಗಿಣಿ ಹೋಮ್ಲಿ ಲುಕ್‌ನಲ್ಲಿ ಮಿಂಚಲಿದ್ದಾರೆ. ಸಿನಿಮಾ, ಫೋಟೋಶೂಟ್ ಮಾಡಿಸೋದ ಜೊತೆಗೆ ಸಮಾಜ ಮುಖಿ ಕಾರ್ಯಗಳಿಂದಲೂ ಸೈ ಎನಿಸಿಕೊಂಡಿದ್ದಾರೆ.

  • ಅಭಿಮಾನಿಗಳಿಗೆ ಖಡಕ್ ವಾರ್ನಿಂಗ್‌ ಕೊಟ್ಟ ವಿಜಯ್ ದಳಪತಿ

    ಅಭಿಮಾನಿಗಳಿಗೆ ಖಡಕ್ ವಾರ್ನಿಂಗ್‌ ಕೊಟ್ಟ ವಿಜಯ್ ದಳಪತಿ

    ಕಾಲಿವುಡ್ ನಟ ವಿಜಯ್ ತಮಿಳುನಾಡು ಸೇರಿದಂತೆ ಭಾರತದ ವಿವಿಧ ಮೂಲೆಗಳಿಂದಲೂ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ವಿಜಯ್ ಸಿನಿಮಾ ರಿಲೀಸ್ ಆಗುತ್ತದೆ ಅಂದರೆ ಅಭಿಮಾನಿಗಳಿಗೆ ಅಂದೊಂದು ರೀತಿಯಲ್ಲಿ ಹಬ್ಬದಂತೆ. ದಳಪತಿ ಎಂದೇ ವಿಜಯ್ ಅವರನ್ನು ಕರೆಯುವ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಒಂದು ವೇಳೆ ಯಾರಾದರೂ ಟ್ರೋಲ್ ಮಾಡಿದರೆ ಎಂದಿಗೂ ಸಹಿಸುವುದಿಲ್ಲ.

    ಕಳೆದ ವರ್ಷ ತಮಿಳುನಾಡಿನ 9 ಜಿಲ್ಲೆಗಳ ಗ್ರಾಮೀಣ ಭಾಗದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ವಿಜಯ್ ಅವರ 100ಕ್ಕೂ ಹೆಚ್ಚು ಅಭಿಮಾನಿಗಳು ಗೆಲುವು ಸಾಧಿಸುವ ಮೂಲಕ ಭಾರೀ ಸದ್ದು ಮಾಡಿದ್ದರು. ಸದ್ಯ ತಮಿಳುನಾಡಿನಲ್ಲಿ ಪ್ರಬಲ ವ್ಯಕ್ತಿಯಾಗಿ ಹೊರಹೊಮ್ಮುತ್ತಿರುವ ವಿಜಯ್, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಯಾರನ್ನೂ ಟ್ರೋಲ್ ಮಾಡಬೇಡಿ ಎಂದು ತಮ್ಮ ಅಭಿಮಾನಿಗಳ ಸಂಘದ ಸದಸ್ಯರಿಗೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ:  ಮತ್ಸ್ಯಕನ್ಯೆ ಸ್ಟೈಲ್‍ನಲ್ಲಿ ಸೋನಾಕ್ಷಿ ಫುಲ್ ಮಿಂಚಿಂಗ್ 

    ವಿಜಯ್ ಮಕ್ಕಳ್ ಇಯಕ್ಕಂನ ಪ್ರಧಾನ ಕಾರ್ಯದರ್ಶಿ ಬುಸ್ಸಿ ಆನಂದ್ ಅವರು ತಮ್ಮ ಟ್ವಿಟ್ಟರ್‌ನಲ್ಲಿ ಪೋಸ್ಟರ್‌ವೊಂದನ್ನು ಶೇರ್ ಮಾಡಿದ್ದು, ರಾಜಕಾರಣಿಗಳು, ಅಧಿಕಾರಿಗಳು ಅಥವಾ ಯಾರಾದರೂ ಹೇಳಿಕೆಗಳು ಮತ್ತು ಪೋಸ್ಟರ್‌ಗಳನ್ನು ಟ್ರೋಲ್ ಮಾಡುವ ಯಾವುದನ್ನೂ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಬೇಡಿ. ದಳಪತಿ ವಿಜಯ್ ಅವರ ಸೂಚನೆಯಂತೆ, ನಮ್ಮ ದಳಪತಿ ಅವರ ಸಲಹೆಗೆ ವಿರುದ್ಧವಾಗಿ ವರ್ತಿಸುವ ಯಾರನ್ನಾದರೂ ಸಂಸ್ಥೆಯಿಂದ ತೆಗೆದುಹಾಕಲಾಗುವುದು ಮತ್ತು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಾನು ನಿಮಗೆ ತಿಳಿಸುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

     

    ಅಭಿಮಾನಿಗಳಿಂದ ದಳಪತಿ ಎಂದು ಪ್ರೀತಿಯಿಂದ ಕರೆಯಿಸಿಕೊಳ್ಳುವ ವಿಜಯ್ ಅವರು, 2021ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಮತಗಟ್ಟೆಗೆ ಸೈಕಲ್ ತುಳಿದುಕೊಂಡು ಬರುವ ಮೂಲಕ ಇಂಧನ ಬೆಲೆ ಏರಿಕೆ ಕುರಿತಂತೆ ಪರೋಕ್ಷವಾಗಿ ಟೀಕಿಸಿದ್ದರು. ಇದನ್ನೂ ಓದಿ: ಕೆಜಿಎಫ್-2 ಬುಕಿಂಗ್ ಯಾವಾಗ ಪ್ರಾರಂಭ?

  • ರಶ್ಮಿಕಾ ಮಂದಣ್ಣಗೆ ತಮಿಳು ಹುಡುಗ ಬೇಕಂತೆ: ಮತ್ತೆ ಟ್ರೋಲ್ ಆದ ಕನ್ನಡತಿ

    ರಶ್ಮಿಕಾ ಮಂದಣ್ಣಗೆ ತಮಿಳು ಹುಡುಗ ಬೇಕಂತೆ: ಮತ್ತೆ ಟ್ರೋಲ್ ಆದ ಕನ್ನಡತಿ

    ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ನೆನ್ನೆಯಷ್ಟೇ ತಮಿಳು ಸಿನಿಮಾದ ಮುಹೂರ್ತದಲ್ಲಿ ಭಾಗಿಯಾಗಿದ್ದರು. ದಳಪತಿ ವಿಜಯ್ ಅವರ ಹೊಸ ಸಿನಿಮಾದಲ್ಲಿ ಅವರು ನಾಯಕಿಯಾಗಿ ನಟಿಸುತ್ತಿದ್ದು, ಈ ಸಿನಿಮಾದ ಮುಹೂರ್ತ ನಿನ್ನೆಯಷ್ಟೇ ನಡೆದಿದೆ. ಈ ಸಂದರ್ಭದಲ್ಲಿ ದಳಪತಿ ವಿಜಯ್ ಅವರಿಗೆ ದೃಷ್ಟಿ ತಗೆದು ಶಹಭಾಷ್ ಅನಿಸಿಕೊಂಡಿದ್ದ ರಶ್ಮಿಕಾ, ಅದೇ ಸಂದರ್ಭದಲ್ಲೇ ತಮ್ಮ ಮನದಾಳದ ಮಾತುಗಳನ್ನು ಆಚೆ ಹಾಕಿ ಟ್ರೋಲ್ ಆಗುತ್ತಿದ್ದಾರೆ. ಇದನ್ನೂ ಓದಿ : ಮತ್ತೆ ನಿರ್ದೇಶನದತ್ತ ಐಶಾನಿ ಶೆಟ್ಟಿ : ಬೋಲ್ಡ್ ಅಂಡ್ ಬ್ಯೂಟಿಫುಲ್ ಮಾತುಕತೆ

    ಮದುವೆಯ ವಿಷಯದಲ್ಲಿ ಹೆಚ್ಚು ಸುದ್ದಿ ಆಗುವ ರಶ್ಮಿಕಾ, ಈ ಹಿಂದೆ ತಾವು ಯಾವ ರಾಜ್ಯದ ಸೊಸೆಯಾಗಿರಬೇಕು ಎಂದು ಹೇಳಿ ಕನ್ನಡಿಗರ ಕಂಗೆಣ್ಣಿಗೆ ಗುರಿಯಾಗಿದ್ದರು. ಇದೀಗ ಯಾವ ಹುಡುಗನನ್ನು ಲಗ್ನ ಮಾಡಿಕೊಳ್ಳಬೇಕು ಎಂದು ಹೇಳಿ ಮತ್ತೆ ಸುದ್ದಿಯಾಗಿದ್ದಾರೆ. ಸಿನಿಮಾ ಮುಹೂರ್ತದ ಸಂದರ್ಭದಲ್ಲಿ ತಾವು ತಮಿಳು ಹುಡುಗನನ್ನು ಮದುವೆ ಆಗಬೇಕೆಂದು ಬಯಸಿರುವೆ ಎಂದು ಹೇಳಿಕೆಕೊಟ್ಟಿದ್ದಾರೆ ಎನ್ನಲಾಗುತ್ತಿದ್ದು, ಈಗದು ಭಾರೀ ಚರ್ಚೆಗೆ ಕಾರಣವಾಗಿದೆ. ಇದನ್ನೂ ಓದಿ : ಮತ್ಸ್ಯಕನ್ಯೆ ಸ್ಟೈಲ್‍ನಲ್ಲಿ ಸೋನಾಕ್ಷಿ ಫುಲ್ ಮಿಂಚಿಂಗ್

    ಈ ಹಿಂದೆ ತಮಗೆ ತಮಿಳು ಕಲ್ಚರ್ ತುಂಬಾ ಇಷ್ಟ. ಹಾಗಾಗಿ ತಮಿಳು ನಾಡಿನ ಸೊಸೆಯಾಗುತ್ತೇನೆ ಎಂದು ಹೇಳಿದ್ದರು. ಆಗಲೂ ಕೂಡ ಅವರ ಮಾತು ಇಷ್ಟೇ ಸದ್ದು ಮಾಡಿತ್ತು. ಕನ್ನಡ ಸಿನಿಮಾ ರಂಗದಿಂದ ಬೆಳೆದು, ಕರ್ನಾಟಕದಲ್ಲೇ ಹುಟ್ಟಿ ಈ ರೀತಿಯ ಮಾತುಗಳನ್ನು ನಾವು ಕೇಳುವುದಿಲ್ಲ ಎಂದು ಕನ್ನಡದ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದರೆ, ತಮಿಳು ಅಭಿಮಾನಿಗಳು ಅವರ ಮಾತುಗಳನ್ನು ಸ್ವಾಗತಿಸಿದ್ದಾರೆ. ಇದನ್ನೂ ಓದಿ: ಕೆಜಿಎಫ್ ಚಾಪ್ಟರ್ ಒಂದನ್ನೇ ನೋಡಿಲ್ಲ ಎಂದ ಉರ್ಫಿ – ಯಶ್ ಫ್ಯಾನ್ಸ್ ಫುಲ್ ಗರಂ

    ಈ ನಡುವೆ ತೆಲುಗಿನ ಹುಡುಗನ ಜತೆ ರಶ್ಮಿಕಾ ಓಡಾಡುತ್ತಿರುವುದು ಕೂಡ ಚರ್ಚೆಯಾಗುತ್ತಿದೆ. ರಕ್ಷಿತ್ ಶೆಟ್ಟಿ ಜತೆಗಿನ ನಿಶ್ಚಿತಾರ್ಥ ಮುರಿದುಕೊಂಡ ನಂತರ ಹೆಚ್ಚು ಸುದ್ದಿಯಾಗಿದ್ದು ವಿಜಯ್ ದೇವರಕೊಂಡ ಜತೆ ರಶ್ಮಿಕಾ ತುಂಬಾ ಆತ್ಮೀಯರಾಗಿದ್ದಾರೆ ಎನ್ನುವುದು. ಹಲವು ಪಾರ್ಟಿಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದು ಕೂಡ ಈ ಸುದ್ದಿಗೆ ಹೆಚ್ಚು ಪುಷ್ಠಿ ಕೊಟ್ಟಿತ್ತು. ಹಾಗಾದರೆ, ತೆಲುಗಿನ ಹುಡುಗನನ್ನು ಬಿಟ್ಟು, ತಮಿಳು ಹುಡುಗನ ಕೈ ಹಿಡಿಯುತ್ತಾರಾ ರಶ್ಮಿಕಾ ಎನ್ನುವುದು ಸದ್ಯಕ್ಕಿರುವ ಪ್ರಶ್ನೆ.

  • ಸಿನಿಮಾ ಮುಹೂರ್ತದಲ್ಲೇ ನೆಚ್ಚಿನ ನಟನಿಗೆ ದೃಷ್ಟಿ ತಗೆದ ರಶ್ಮಿಕಾ ಮಂದಣ್ಣ

    ಸಿನಿಮಾ ಮುಹೂರ್ತದಲ್ಲೇ ನೆಚ್ಚಿನ ನಟನಿಗೆ ದೃಷ್ಟಿ ತಗೆದ ರಶ್ಮಿಕಾ ಮಂದಣ್ಣ

    ಲ್ಲಿ ನೋಡಿದರೂ ರಶ್ಮಿಕಾ ಮಂದಣ್ಣ ಮೇನಿಯಾ. ಸೌತ್ ಟು ನಾರ್ತ್ವರೆಗೂ ರಶ್ಮಿಕಾದೇ ಹವಾ. ಸೂಪರ್ ಸ್ಟಾರ್ ದಳಪತಿ ವಿಜಯ್‌ಗೆ ಜೋಡಿಯಾಗುವ ಮೂಲಕ ರಶ್ಮಿಕಾ ಮತ್ತೆ ಸುದ್ದಿಯಲ್ಲಿದ್ದಾರೆ. ದಳಪತಿ ವಿಜಯ್ ನಟನೆಯ 66ನೇ ಚಿತ್ರಕ್ಕೆ ಕನ್ನಡತಿ ರಶ್ಮಿಕಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

    ದಿಲ್ ರಾಜು ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಹೊಸ ಚಿತ್ರಕ್ಕೆ ಫಸ್ಟ್ ಟೈಮ್ ದಳಪತಿ ವಿಜಯ್‌ಗೆ ನಾಯಕಿಯಾಗಿ ರಶ್ಮಿಕಾ ನಟಿಸುತ್ತಿದ್ದಾರೆ. ರಶ್ಮಿಕಾ ಕೂಡ ದಳಪತಿ ವಿಜಯ್ ಅವರ ಅಭಿಮಾನಿಯಾಗಿದ್ದು, ಇದೇ ಖುಷಿಯಲ್ಲಿ ಹೊಸ ಚಿತ್ರದ ಮುಹೂರ್ತದ ವೇಳೆ ರಶ್ಮಿಕಾ ಖುಷಿ ಖುಷಿಯಾಗಿ ಲಟಿಕೆ ಮುರಿದು ವಿಜಯ್‌ಗೆ ದೃಷ್ಠಿ ತೆಗೆದಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    `ಪುಷ್ಪ’ ಸಕ್ಸಸ್ ನಂತರ ಡೈರೆಕ್ಟರ್ ವಂಶಿ ಪಡಿಪಲ್ಲಿ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ದಳಪತಿ ವಿಜಯ್ ನಟನೆಯ ೬೬ನೇ ಚಿತ್ರ ತೆಲುಗು ಮತ್ತು ತಮಿಳು ಎರಡು ಭಾಷೆಗಳಲ್ಲಿ ಈ ಚಿತ್ರ ಮೂಡಿ ಬರಲಿದೆ. ವಿಜಯ್ ಮತ್ತು ರಶ್ಮಿಕಾ ಕಾಂಬಿನೇಷನ್‌ನ ಚಿತ್ರ ಗ್ರ್ಯಾಂಡ್ ಮುಹೂರ್ತ ನೆರೆವೇರಿದೆ. ವಿಜಯ್ ನಟನೆಯ `ಬಿಗಿಲ್’, `ಸರ್ಕಾರ್’ ಹೀಗೆ ಬ್ಯಾಕ್ ಟು ಬ್ಯಾಕ್ ಚಿತ್ರಗಳು ಹಿಟ್ ಆಗಿದೆ. ಈಗ ನಿರ್ದೇಶಕ ವಂಶಿ ಪಡಿಪಲ್ಲಿ ವಿಭಿನ್ನ ಕಥೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದನ್ನು ಓದಿ:ಜಗ್ಗೇಶ್ ಜೊತೆ ಹೊಂಬಾಳೆ ಫಿಲ್ಮ್ಸ್ ಹೊಸ ಸಿನಿಮಾ ‘ರಾಘವೇಂದ್ರ ಸ್ಟೋರ್’

    ವಿಭಿನ್ನ ಕಟೆಂಟ್ ಮೂಲಕ ಬರುತ್ತಿರೋ ದಳಪತಿ ವಿಜಯ್ ಮತ್ತು `ಪುಷ್ಪ’ ಕ್ವೀನ್ ನಯಾ ಜೋಡಿಯನ್ನು ತೆರೆಯ ಮೇಲೆ ನೋಡಲು ಥ್ರಿಲ್ ಆಗಿದ್ದಾರೆ. ಸದ್ಯದಲ್ಲೇ ಶೂಟಿಂಗ್ ಶುರುವಾಗಲಿದೆ. ಒಟ್ಟಿನಲ್ಲಿ ವೈರಲ್ ಆಗ್ತಿರೋ ಫೋಟೋಸ್ ಜೊತೆ ನೆಚ್ಚಿನ ನಟಿಯ ಖುಷಿ, ಯಶಸ್ಸು ನೋಡಿ ಫ್ಯಾನ್ಸ್ ಶುಭಹಾರೈಸುತ್ತಿದ್ದಾರೆ.

  • ನಾಗಚೈತನ್ಯಗೆ ಮತ್ತೆ ಜೊತೆಯಾದ ಬೊಟ್ಟಬೊಮ್ಮ ಬೆಡಗಿ ಪೂಜಾ

    ನಾಗಚೈತನ್ಯಗೆ ಮತ್ತೆ ಜೊತೆಯಾದ ಬೊಟ್ಟಬೊಮ್ಮ ಬೆಡಗಿ ಪೂಜಾ

    `ಲವ್‌ಸ್ಟೋರಿ’ ಚಿತ್ರದ ಸಕ್ಸಸ್ ನಂತರ ನಾಗಚೈತನ್ಯ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. `ಓಕಾ ಲೈಲಾ ಕೋಸಂ’ ಚಿತ್ರದ ಜೋಡಿ ನಾಗಚೈತನ್ಯ ಮತ್ತು ಸೌತ್ ಬ್ಯೂಟಿ ಪೂಜಾ ಹೆಗ್ಡೆ ಮತ್ತೆ ರೊಮ್ಯಾನ್ಸ್ ಮಾಡಲು ರೆಡಿಯಾಗಿದ್ದಾರೆ.

    `ಮಾನಾಡು’ ಖ್ಯಾತಿಯ ವೆಂಕಟ್ ಪ್ರಭು ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಹೊಸ ಚಿತ್ರದಲ್ಲಿ ನಾಗಚೈತನ್ಯ ಮತ್ತು ಪೂಜಾ ಹೆಗ್ಡೆ ಜೋಡಿಯಾಗಿ ನಟಿಸುತ್ತಿದ್ದು, ತೆಲುಗು ಮತ್ತು ತಮಿಳು ದ್ವಿಭಾಷೆಗಳಲ್ಲಿ ಈ ಚಿತ್ರ ಮೂಡಿ ಬರುತ್ತಿದೆ. ವಿಶೇಷ ಅಂದರೆ, ಈ ಚಿತ್ರದ ಮೂಲಕ ಚೈ ಕಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.

    ಇನ್ನೂ ಹೆಸರಿಡದ ಈ ಹೊಸ ಪ್ರಾಜೆಕ್ಟ್ಗೆ ಶ್ರೀನಿವಾಸ್ ಸಿಲ್ವರ್ ಮತ್ತು ಪವನ್ ಕುಮಾರ್ ಹಣ ಹೂಡುತ್ತಿದ್ದು, ಈ ಹಿಂದೆ `ಓಕಾ ಲೈಲಾ ಕೋಸಂ’ ಚಿತ್ರದ ಮೂಲಕ ಮೋಡಿ ಮಾಡಿದ್ದ ಚೈ ಮತ್ತು ಪೂಜಾ 8 ವರ್ಷಗಳ ನಂತರ ಮತ್ತೆ ತೆರೆಯ ಮೇಲೆ ಒಂದಾಗುತ್ತಿರುವುದು ವಿಶೇಷ. ವಿಭಿನ್ನ ಲವ್‌ಸ್ಟೋರಿ, ಡಿಫರೆಂಟ್ ಶೇಡ್‌ಗಳ ಮೂಲಕ ಈ ಜೋಡಿ ಕಮಾಲ್ ಮಾಡಲು ಬರುತ್ತಿದ್ದಾರೆ. ಇದನ್ನು ಓದಿ: ಸಂಜನಾ ತಲೆ ಬೋಳಿಸಿಕೊಂಡಿದ್ದು ಸುಳ್ಳೇ ಸುಳ್ಳು : ಭಾವನೆಗಳ ಜೊತೆ ಆಟವಾಡಿದ ನಟಿಗೆ ಕ್ಲಾಸ್ ತಗೆದುಕೊಂಡ ನೆಟ್ಟಿಗರು

    `ಓಕಾ ಲೈಲಾ ಕೋಸಂ’ ಜೋಡಿ ಆಪ್ಟರ್ ಎ ಲಾಂಗ್ ಟೈಮ್ ಆನ್ ಸ್ಕ್ರೀನ್‌ನಲ್ಲಿ ಒಂದಾಗುತ್ತಿರುವುದು ಅಭಿಮಾನಿಗಳಿಗೆ ಖುಷಿಕೊಟ್ಟಿದೆ. ಸದ್ಯ ನಾಗಚೈತನ್ಯ ನಟನೆಯ `ಲಾಲ್ ಸಿಂಗ್ ಚಡ್ಡಾ’ ಮತ್ತು ಪೂಜಾ ನಟನೆಯ ಬಹುನಿರೀಕ್ಷಿತ `ಬೀಸ್ಟ್’ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಈ ಎರಡೂ ಚಿತ್ರಗಳಿಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

  • ವಿಮಲಾ ರಾಮನ್ ಜೊತೆಯೇ ಖ್ಯಾತ ನಟ ವಿನಯ್ ಮದುವೆ – ಮದುವೆ ಮುಂಚೆಯೇ ಮಾಲ್ಡೀವ್ಸ್‌ನಲ್ಲಿ ಕಾಣಿಸಿಕೊಂಡ ಜೋಡಿ

    ವಿಮಲಾ ರಾಮನ್ ಜೊತೆಯೇ ಖ್ಯಾತ ನಟ ವಿನಯ್ ಮದುವೆ – ಮದುವೆ ಮುಂಚೆಯೇ ಮಾಲ್ಡೀವ್ಸ್‌ನಲ್ಲಿ ಕಾಣಿಸಿಕೊಂಡ ಜೋಡಿ

    ಕಾಲಿವುಡ್ ಖ್ಯಾತ ನಟ ವಿನಯ್ ತಮ್ಮ ಬಹುಕಾಲದ ಗೆಳತಿ ವಿಮಲಾ ರಾಮನ್ ಜೊತೆಗೆ ಸದ್ಯದಲ್ಲೇ ಸಪ್ತಪದಿ ತುಳಿಯಲಿದ್ದಾರೆ. ‘ಉನ್ನಲೆ ಉನ್ನಲೆ’ ಸಿನಿಮಾದ ಮೂಲಕ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ವಿನಯ್, ಈಗ ಖಳನಟನಾಗಿ ಬಿಗ್ ಸ್ಟಾರ್‌ಗಳ ಸಿನಿಮಾದಲ್ಲಿ ಮಿಂಚುತ್ತಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾದ ‘ಡಾಕ್ಟರ್’ ಸಿನಿಮಾದಲ್ಲಿ ವಿಲನ್ ಆಗಿ ವಿನಯ್ ಅಭಿನಯಿಸಿದ್ದು, ಈ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.

    42 ವರ್ಷದ ವಿನಯ್ ಕೆಲವು ವರ್ಷಗಳಿಂದ ನಟಿ ವಿಮಲಾ ರಾಮನ್ ಜೊತೆಗೆ ಡೇಟಿಂಗ್ ನಡೆಸುತ್ತಿದ್ದರು. ಇದೀಗ ಈ ಜೋಡಿ ಹಸೆಮಣೆ ಏರಲು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗಷ್ಟೇ ವಿನ್, ವಿಮಲಾ ಮಾಲ್ಡೀವ್ಸ್ ಪ್ರವಾಸಕ್ಕೆ ಹೋಗಿದ್ದ ಕೆಲವು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ತಮ್ಮ ಪ್ರೀತಿ ವಿಚಾರ ರಿವೀಲ್ ಮಾಡಿದ್ದರು. ಅಲ್ಲದೇ ಈ ಫೋಟೋಗಳು ಕೂಡ ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಇದೀಗ ಈ ಜೋಡಿ ಮದುವೆಯಾಗಲು ನಿರ್ಧರಿಸಿದ್ದು, ಸದ್ಯದಲ್ಲಿಯೇ ವಿವಾಹದ ದಿನಾಂಕವನ್ನು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ ಎಂದು ಅವರ ಆಪ್ತ ಮೂಲಗಳು ಮಾಹಿತಿ ನೀಡಿವೆ. ಅಲ್ಲದೇ ಇವರಿಬ್ಬರ ಮದುವೆಗೆ ಎರಡು ಕುಟುಂಬಸ್ಥರು ಗ್ರೀನ್ ಸಿಗ್ನಲ್ ನೀಡಿದ್ದಾರೆಂದು ಹೇಳಲಾಗುತ್ತಿದೆ.  ಇದನ್ನೂ ಓದಿ : ಮೇ 11ಕ್ಕೆ ನಟಿ ಮಮತಾ ರಾವುತ್ ಮದುವೆ : ಡಾಕ್ಟರ್ ಜತೆ ಸಪ್ತಪದಿ ತುಳಿಯಲಿರುವ ನಟಿ

    Vinay

    40 ವರ್ಷದ ವಿಮಲಾ ರಾಮನ್ ಅವರು ಆಸ್ಟ್ರೀಯಾದಲ್ಲಿ ಜನಿಸಿದ್ದು, ತಮಿಳಿನ ಪೊಯ್ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಈ ಸಿನಿಮಾಕ್ಕೆ ಲೆಜೆಂಡರಿ ನಿರ್ದೇಶಕ ಕೆ.ಬಾಲಚಂದಿರನ್ ಆಕ್ಷನ್ ಕಟ್ ಹೇಳಿದ್ದರು. ಅಲ್ಲದೇ ಇದು ಬಾಲಚಂದಿರನ್ ಅವರ 100ನೇ ಸಿನಿಮಾವಾಗಿತ್ತು. ನಂತರ ತಮಿಳಿನ ತೇಡಿಯ ಸೀತೈ ಸೇರಿದಂತೆ ಅನೇಕ ಸಿನಿಮಾದಲ್ಲಿ ಅಭಿನಯಿಸಿದ್ದರು. ಕೊನೆಯದಾಗಿ ತಮಿಳಿನ ಇರುಟ್ಟು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಅವರು ಪ್ರಸ್ತುತ ಮಲಯಾಳಂನ ಗ್ರಾಂಡ್ ಮಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದನ್ನೂ ಓದಿ : ರಣಬೀರ್ ನನ್ನ ದೊಡ್ಡ ವಿಮರ್ಶಕ ಎಂದು ಹೇಳಿ ನಾಚಿ ನೀರಾದ ಆಲಿಯಾ

    ಉನ್ನಲೆ ಉನ್ನಲೆ ಸಿನಿಮಾದಲ್ಲಿ ಚಾಕೊಲೇಟ್ ಬಾಯ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದ ವಿನಯ್‍ಗೆ ಆಗಲೇ ಅನೇಕ ಹುಡುಗಿಯರು ಕ್ಲೀನ್ ಬೋಲ್ಡ್ ಆಗಿದ್ದರು. ನಂತರ ಜಯಂ ಕೊಂಡನ್, ಎಂದ್ರೆಂಡ್ರುಮ್ ಪುನ್ನಗೈ ಹೀಗೆ ಕೆಲವು ಹಿಟ್ ಸಿನಿಮಾಗಳಲ್ಲಿ ನಟಿಸಿ ಕೊಂಚ ಬ್ರೇಕ್ ಪಡೆದುಕೊಂಡಿದ್ದ ವಿನಯ್, 2017ರಲ್ಲಿ ವಿಶಾಲ್ ನಟನೆಯ ತುಪ್ಪರಿವಾಲನ್ ಸಿನಿಮಾದಲ್ಲಿ ವಿಲನ್ ಆಗಿ ಪ್ರೇಕ್ಷಕರ ಮನಗೆದ್ದಿದ್ದರು. ನಂತರ ಶಿವಕಾರ್ತಿಕೇಯನ್ ನಟನೆಯ ಡಾಕ್ಟರ್ ಸಿನಿಮಾದಲ್ಲಿ ಅಭಿನಯಿಸಿದ್ದರು. ಇದೀಗ ಸೂರ್ಯ ನಿರ್ಮಾಣದ ಓ ಮೈ ಡಾಗ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.