Tag: Kollywood

  • `ಬೀಸ್ಟ್’ ಹೀನಾಯ ಸೋಲಿನ ನಂತರ ರಶ್ಮಿಕಾ ಜತೆ ದಳಪತಿ ವಿಜಯ್ ರೊಮ್ಯಾನ್ಸ್

    `ಬೀಸ್ಟ್’ ಹೀನಾಯ ಸೋಲಿನ ನಂತರ ರಶ್ಮಿಕಾ ಜತೆ ದಳಪತಿ ವಿಜಯ್ ರೊಮ್ಯಾನ್ಸ್

    ನ್ನಡದ ಅದೃಷ್ಟದ ನಟಿ ಅಂದ್ರೆ ರಶ್ಮಿಕಾ ಮಂದಣ್ಣ ಎಲ್ಲ ಇಂಡಸ್ಟ್ರಿಯಲ್ಲೂ ಸಿಕ್ಕಾಪಟ್ಟೆ ಸದ್ದು ಮಾಡ್ತಿದ್ದಾರೆ. ಸ್ಟಾರ್ ನಟರ ಚಿತ್ರಗಳಿಗೆ ರಶ್ಮಿಕಾರನ್ನೆ ಆಯ್ಕೆ ಮಾಡ್ತಿದ್ದಾರೆ. ಇದೀಗ ದಳಪತಿ ವಿಜಯ್ ನಟನೆಯ 66ನೇ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದು, ಇದೀಗ ಚಿತ್ರದ ಶೂಟಿಂಗ್ ಶುರುವಾಗಿದೆ.

    ಕನ್ನಡದ `ಕಿರಿಕ್ ಪಾರ್ಟಿ’ ಚಿತ್ರದಿಂದ ಪರಿಚಿತರಾದ ರಶ್ಮಿಕಾ ಸದ್ಯ ಸೌತ್ ಸಿನಿಮಾ ರಂಗ ಮತ್ತು ಬಾಲಿವುಡ್ ಬಹುಬೇಡಿಕೆಯ ನಟಿಯಾಗಿ ಮಿರ ಮಿರ ಅಂತಾ ಮಿಂಚ್ತಿದ್ದಾರೆ. ಇತ್ತೀಚಿನ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ನಟನೆಯ `ಪುಷ್ಪ’ ಸಿನಿಮಾ ಭರ್ಜರಿ ಸಕ್ಸಸ್ ಕಂಡ ಮೇಲಂತೂ ಕಿರಿಕ್ ಬೆಡಗಿಗೆ ಎಲ್ಲಿಲ್ಲದ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಅಲ್ಲು ಅರ್ಜುನ್ ಜತೆ ತೆರೆ ಹಂಚಿಕೊಂಡಿದಾಯ್ತು, ಈಗ ಕಾಲಿವುಡ್ ಸೂಪರ್ ಸ್ಟಾರ್ ದಳಪತಿ ವಿಜಯ್ ಜತೆ ರಶ್ಮಿಕಾ ತೆರೆಹಂಚಿಕೊಳ್ತಿದ್ದಾರೆ.

    ಇತ್ತೀಚೆಗಷ್ಟೇ ದಳಪತಿ ವಿಜಯ್ ನಟನೆಯ 66ನೇ ಚಿತ್ರದ ಮುಹೂರ್ತ ನೆರವೇರಿತ್ತು. ಈ ವೇಳೆ ನಟಿ ರಶ್ಮಿಕಾ ಖುಷಿ ಖುಷಿಯಿಂದ ದಳಪತಿ ವಿಜಯ್‌ಗೆ ದೃಷ್ಟಿ ತೆಗೆದ ಫೋಟೋ ಕೂಡ ಭಾರೀ ವೈರಲ್ ಆಗಿತ್ತು. ಯಾವಾಗಿನಿಂದ ಶೂಟಿಂಗ್ ಶುರು ಅಂತಿದ್ದ ಅಭಿಮಾನಿಗಳಿಗೆ ಇದೀಗ ಗುಡ್ ನ್ಯೂಸ್ ಚಿತ್ರತಂಡ ವಿಜಯ್ ಮತ್ತು ರಶ್ಮಿಕಾ ನಟನೆಯ ಹೊಸ ಚಿತ್ರದ ಶೂಟಿಂಗ್ ಶುರುವಾಗಿದೆ. ಹೈದರಾಬಾದ್‌ನಲ್ಲಿ ಚಿತ್ರೀಕರಣ ಭರದಿಂದ ಸಾಗ್ತಿದೆ. ಇದನ್ನೂ ಓದಿ: ಕನ್ನಡದ ಕೋಟ್ಯಧಿಪತಿ ಮೂಲಕ ಫೇಮಸ್ ಆಗಿದ್ದ ಲೈನ್ ಮನ್ ತಿಮ್ಮಣ್ಣ ಆತ್ಮಹತ್ಯೆ : ಅನುಮಾನ ವ್ಯಕ್ತ ಪಡಿಸಿದ ಸ್ನೇಹಿತರು

    ವಂಶಿ ಪೈಡಿಪಲ್ಲಿ ನಿರ್ದೇಶನದಲ್ಲಿ ಮೂಡಿ ಬರಲಿರುವ ಚಿತ್ರದಲ್ಲಿ ಚೆಂದದ ಲವ್‌ಸ್ಟೋರಿ ಜತೆ ಪವರ್‌ಫುಲ್ ಆ್ಯಕ್ಷನ್ ಕಂಟೆಂಟ್ ಹೊತ್ತು ಸೂಪರ್ ಸ್ಟಾರ್ ವಿಜಯ್ ಮತ್ತು ರಶ್ಮಿಕಾ ರಂಜಿಸಲು ಬರುತ್ತಿದ್ದಾರೆ. `ಬೀಸ್ಟ್’ ಚಿತ್ರದ ಹೀನಾಯ ಸೋಲಿನ ನಂತರ ರಶ್ಮಿಕಾ ಜತೆಗಿನ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸೌಂಡ್ ಮಾಡುತ್ತಾ ಅಂತಾ ಕಾದು ನೋಡಬೇಕಿದೆ.

  • ಆಗಸ್ಟ್ 12ಕ್ಕೆ ಸಮಂತಾ ನಟನೆಯ ಯಶೋದಾ ರಿಲೀಸ್

    ಆಗಸ್ಟ್ 12ಕ್ಕೆ ಸಮಂತಾ ನಟನೆಯ ಯಶೋದಾ ರಿಲೀಸ್

    ಮಂತಾ ರುತ್‌ಪ್ರಭು ನಟನೆಯ, ನಾಯಕಿ ಪ್ರಧಾನ ಸಿನಿಮಾ ‘ಯಶೋದಾ’ ಸದ್ಯ ಶೂಟಿಂಗ್‌ ಮುಗಿಸಿದ್ದು, ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಲ್ಲಿ ತೊಡಗಿದೆ ಚಿತ್ರತಂಡ. ಶ್ರೀದೇವಿ ಪ್ರೊಡಕ್ಷನ್‌ನ ೧೪ನೇ ಸಿನಿಮಾ ಇದಾಗಿದ್ದು, ಹರಿ ಮತ್ತು ಹರೀಶ್‌ ಈ ಚಿತ್ರಕ್ಕೆ ನಿರ್ದೇಶನ ಮಾಡಿದರೆ, ಶಿವಲೆಂಕಾ ಕೃಷ್ಣ ಪ್ರಸಾದ್‌ ನಿರ್ಮಿಸಿದ್ದಾರೆ. ಇದನ್ನೂ ಓದಿ : ಶತ್ರುಘ್ನಾ ಸಿನ್ಹಾ ಮೇಲೆ ಲೈಂಗಿಕ ಹಗರಣ ದಂಧೆ ಆರೋಪ : ನಟಿ ವಿರುದ್ಧ ತಿರುಗಿ ಬಿದ್ದ ಸಿನ್ಹಾ ಕುಟುಂಬ

    ಸಿನಿಮಾ ಬಗ್ಗೆ ಹೇಳಿಕೊಳ್ಳುವ ನಿರ್ಮಾಪಕರು, ಫ್ಯಾಮಿಲಿ ಮ್ಯಾನ್‌ ೨ ವೆಬ್‌ ಸಿರೀಸ್‌ ಮೂಲಕ ಪ್ಯಾನ್‌ ಇಂಡಿಯಾ ಜನರನ್ನು ಸಮಂತಾ ತಲುಪಿದ್ದಾರೆ. ಆ ಒಂದು ಕಾರಣಕ್ಕೆ ಎಲ್ಲಿಯೂ ಕಾಂಪ್ರಮೈಸ್‌ ಆಗದೇ, ಎಲ್ಲೆಡೆ ಸಲ್ಲುವ ಸಿನಿಮಾ ಮಾಡಿದ್ದೇವೆ. ಈ ಸಿನಿಮಾದಲ್ಲಿನ ಸಮಂತಾ ಅವರ ಡೆಡಿಕೇಷನ್‌ ತೆರೆಮೇಲೆ ಕಾಣಿಸಲಿದೆ. ಅವರ ನಟನೆಯನ್ನು ನೋಡುವುದೇ ಚಂದʼ ಎನ್ನುತ್ತಾರೆ. ಇದನ್ನೂ ಓದಿ : ಪ್ರಶಾಂತ್ ನೀಲ್ ಭಾರತೀಯ ಸಿನಿಮಾ ರಂಗದ ವೀರಪ್ಪನ್ : ಆರ್.ಜಿ.ವಿ

    ಚಿತ್ರೀಕರಣದ ಬಗ್ಗೆಯೂ ಮಾಹಿತಿ ನೀಡುವ ಅವರು, ಚಿತ್ರದ ಕ್ಲೈಮ್ಯಾಕ್ಸ್‌ ಹಂತವನ್ನು ಕೊಡೈಕೆನಾಲ್‌ನಲ್ಲಿ ಏಪ್ರಿಲ್‌ನಲ್ಲಿ ಚಿತ್ರೀಕರಿಸಿದ್ದೇವೆ. ಶೇ. ೮೦ ಭಾಗದ ಶೂಟಿಂಗ್‌ ಮುಕ್ತಾಯವಾಗಿದ್ದು, ಹೈದರಾಬಾದ್‌ನಲ್ಲಿ ಕೊನೇ ಶೆಡ್ಯೂಲ್‌ ನಡೆಯುತ್ತಿದೆ. ಜೂನ್‌ ೧ಕ್ಕೆ ಶೂಟ್‌ ಮುಗಿಸಲಿದ್ದೇವೆ. ಇಡೀ ಸಿನಿಮಾದಲ್ಲಿ ಗ್ರಾಫಿಕ್ಸ್‌ ಕೆಲಸ ಪ್ರಮುಖ ಪಾತ್ರ ವಹಿಸಲಿದೆ. ನಿರ್ದೇಶಕರ ಕೆಲಸವೂ ಇಂಪ್ರೆಸಿವ್‌ ಆಗಿದೆ ಎಂದರು. ಇದನ್ನೂ ಓದಿ : ಕೇಂದ್ರ ಸಚಿವ ಅನುರಾಗ್ ಠಾಕೂರ್ ಜತೆ ಸಿನಿರಂಗದ ಸಮಸ್ಯೆ ಚರ್ಚೆ

    ಅಂದಹಾಗೆ, ಇದು ಕೇವಲ ತೆಲುಗಿನಲ್ಲಿ ಮಾತ್ರವಲ್ಲದೆ, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿಯಲ್ಲಿ ಬಿಡುಗಡೆಯಾಗಲಿದೆ. ಬಿಡುಗಡೆಗೆ ದಿನಾಂಕವೂ ನಿಗದಿಯಾಗಿದ್ದು, ಆಗಸ್ಟ್‌ 12ಕ್ಕೆ ತೆರೆಗೆ ಬರಲಿದೆ. ಚಿತ್ರದಲ್ಲಿ ಸ್ಟಾರ್‌ ನಟರ ದಂಡೇ ಇದೆ. ವರಲಕ್ಷ್ಮೀ ಶರತ್‌ಕುಮಾರ್‌, ಉನ್ನಿ ಮುಕುಂದನ್‌, ರಾವ್‌ ರಮೇಶ್‌, ಮುರಳಿ ಶರ್ಮಾ, ಸಂಪತ್‌ ರಾಜ್, ಶತ್ರು, ಮಧುರಿಮಾ, ಕಲ್ಪಿಕಾ ಗಣೇಶ್‌, ದಿವ್ಯಾ ಶ್ರೀಪಾದ್‌, ಪ್ರಿಯಾಂಕಾ ಶರ್ಮಾ ಸೇರಿ ಹಲವರಿದ್ದಾರೆ. ಇದನ್ನೂ ಓದಿ : ಅಮ್ಮನಾಗ್ತಿದ್ದಾರೆ ಕಿರುತೆರೆ ನಟಿ ರಶ್ಮಿ ಜಯರಾಜ್: ಬೇಬಿ ಬಂಪ್ ಫೋಟೋಸ್ ವೈರಲ್

    ತಾಂತ್ರಿಕ ವರ್ಗದಲ್ಲಿ ಮಣಿಶರ್ಮಾ ಸಂಗೀತ, ಪಲ್ಗುಮ್‌ ಚಿನ್ನರಾಯನ, ಡಾ. ಚಲ್ಲ ಭಾಗ್ಯಲಕ್ಷ್ಮಿ ಸಂಭಾಷಣೆ, ಚಂದ್ರಬೋಸ್‌ ರಾಮಜೋಗಯ್ಯ ಶಾಸ್ತ್ರಿ ಸಾಹಿತ್ಯ, ಎಂ. ಸುಕುಮಾರ್‌ ಛಾಯಾಗ್ರಹಣ ಚಿತ್ರಕ್ಕಿದೆ. ಮಾರ್ತಾಂಡ್‌ ವೆಂಕಟೇಶ್‌ ಸಂಕಲನ ಮಾಡುತ್ತಿದ್ದಾರೆ.

  • ರಜನಿಕಾಂತ್ ಸಿನಿಮಾದಲ್ಲಿ ಶಿವರಾಜ್ ಕುಮಾರ್: ಏನಿದು ಭರ್ಜರಿ ಕಾಂಬಿನೇಷನ್?

    ರಜನಿಕಾಂತ್ ಸಿನಿಮಾದಲ್ಲಿ ಶಿವರಾಜ್ ಕುಮಾರ್: ಏನಿದು ಭರ್ಜರಿ ಕಾಂಬಿನೇಷನ್?

    ಸೂಪರ್ ಸ್ಟಾರ್ ರಜನಿಕಾಂತ್ ಅವರ ಹೊಸ ಸಿನಿಮಾದಲ್ಲಿ ಸೆಂಚ್ಯುರಿ ಸ್ಟಾರ್ ಶಿವರಾಜ್ ಕುಮಾರ್ ನಟಿಸಲಿದ್ದಾರೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಗಿರಕಿ ಹೊಡೆಯುತ್ತಿದೆ. ಸಾಮಾನ್ಯವಾಗಿ ಶಿವರಾಜ್ ಕುಮಾರ್ ಪರಭಾಷಾ ಚಿತ್ರಗಳಲ್ಲಿ ನಟಿಸುವುದಕ್ಕೆ ಒಪ್ಪಿಕೊಳ್ಳುವುದಿಲ್ಲ. ಆದರೆ, ರಜನಿ ಮೇಲಿರುವ ಗೌರವದಿಂದಾಗಿ ಈ ಚಿತ್ರವನ್ನು ಒಪ್ಪಬಹುದು ಎನ್ನುತ್ತಾರೆ ಅವರು ಆಪ್ತರು. ಇದನ್ನೂ ಓದಿ : ಕೇಂದ್ರ ಸಚಿವ ಅನುರಾಗ್ ಠಾಕೂರ್ ಜತೆ ಸಿನಿರಂಗದ ಸಮಸ್ಯೆ ಚರ್ಚೆ

    ಈ ಹಿಂದೆ ಬಾಲಕೃಷ್ಣ ನಟನೆಯ ‘ಗೌತಮಪುತ್ರ ಶಾತಕರ್ಣಿ’ ಸಿನಿಮಾದಲ್ಲಿ ಶಿವರಾಜ್ ಕುಮಾರ್ ನಟಿಸಿದ್ದರು. ಅದನ್ನು ಬಿಟ್ಟರೆ, ಪರಭಾಷಾ ಸಿನಿಮಾಗಳಲ್ಲಿ ನಟಿಸುವಂತೆ ಅವಕಾಶ ಬಂದರೂ, ನಿರಾಕರಿಸಿದ್ದಾರೆ. ಹಾಗಾಗಿ ಸೂಪರ್ ಸ್ಟಾರ್ ನಟನೆಯ 169ನೇ ಚಿತ್ರದಲ್ಲಿ ಶಿವರಾಜ್ ಕುಮಾರ್ ಇರಲಿದ್ದಾರಾ ಎನ್ನುವ ಕುತೂಹಲ ಅವರ ಅಭಿಮಾನಿಗಳದ್ದು. ಇದನ್ನೂ ಓದಿ : ಹಿರಿಯ ರಂಗಕರ್ಮಿ, ಏಣಗಿ ಬಾಳಪ್ಪನವರ ಪತ್ನಿ ಲಕ್ಷ್ಮೀಬಾಯಿ ನಿಧನ

    ಈ ಸಿನಿಮಾವನ್ನು ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನ ಮಾಡುತ್ತಿದ್ದು, ಸದ್ಯದಲ್ಲೇ ಶಿವಣ್ಣನ ಮನೆಗೆ ನೆಲ್ಸನ್ ದಿಲೀಪ್ ಕುಮಾರ್ ಭೇಟಿ ನೀಡಿ, ಕಥೆ ಮತ್ತು ಪಾತ್ರದ ವಿವರಣೆಯನ್ನೂ ಕೊಡಲಿದ್ದಾರೆ ಎನ್ನುವ ಮಾಹಿತಿ ಕೂಡ ಹರಿದಾಡುತ್ತಿದೆ. ಅದೊಂದು ಪವರ್ ಫುಲ್ ಪಾತ್ರವಾಗಿದ್ದು, ಆ ಪಾತ್ರವನ್ನು ಒಪ್ತಾರೆ ಎನ್ನುವ ವಿಶ್ವಾಸ ನಿರ್ದೇಶಕರದ್ದು. ಇದನ್ನೂ ಓದಿ : ಶಿವಣ್ಣನ ಹುಲಿ ಅವತಾರ: ಬೈರಾಗಿ ಹಾಡಿಗೆ ಭೀಮನ ಬಲ

    ಆದರೆ, ಅಧಿಕೃತವಾಗಿ ಈ ಕುರಿತು ಎಲ್ಲಿಯೂ ಹೇಳಿಕೊಂಡಿಲ್ಲವಾದರೂ, ಶಿವರಾಜ್ ಕುಮಾರ್ ಅಥವಾ ರಜನಿಕಾಂತ್ ಅಭಿಮಾನಿಗಳು ಈ ಕುರಿತು ಕೆಲ ಮಾಹಿತಿಗಳನ್ನು ಲೀಕ್ ಮಾಡಿದ್ದಾರೆ. ಅಲ್ಲದೇ, ನೆಲ್ಸನ್ ಕೂಡ ಅತೀ ಶೀಘ್ರದಲ್ಲೇ ಶಿವರಾಜ್ ಕುಮಾರ್ ಅವರನ್ನು ಭೇಟಿ ಆಗಲಿದ್ದಾರೆ.

  • ಧನುಷ್ ತಮ್ಮ ಮಗ ಅಂತ ಕೋರ್ಟ್ ಮೆಟ್ಟಿಲೇರಿದ ವೃದ್ಧ ದಂಪತಿ: ನಟನಿಗೆ ಮದ್ರಾಸ್ ಕೋರ್ಟ್ ಸಮನ್ಸ್

    ಧನುಷ್ ತಮ್ಮ ಮಗ ಅಂತ ಕೋರ್ಟ್ ಮೆಟ್ಟಿಲೇರಿದ ವೃದ್ಧ ದಂಪತಿ: ನಟನಿಗೆ ಮದ್ರಾಸ್ ಕೋರ್ಟ್ ಸಮನ್ಸ್

    ಕಾಲಿವುಡ್ ಸ್ಟಾರ್ ನಟ ಧನುಷ್ ಮತ್ತೆ ಸುದ್ದಿಯಲ್ಲಿದ್ದಾರೆ. ನಟನ ತಂದೆ ತಾಯಿ ಯಾರು ಎಂಬ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ. ಧನುಷ್ ನಮ್ಮ ಮಗ ಎಂದು ವೃದ್ಧ ದಂಪತಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

    ಈ ವಿಚಾರವಾಗಿ, ಮದ್ರಾಸ್ ಹೈಕೋರ್ಟ್ ಧನುಷ್‌ಗೆ ಸಮನ್ಸ್ ನೀಡಿದೆ. ಧನುಷ್ ನಮ್ಮ ಮಗ ಎಂದು ಕತೀರೇಸನ್ ಮತ್ತು ಮೀನಾಕ್ಷಿ ದಂಪತಿ ಹೇಳಿದ್ದಾರೆ. ಕಳೆದ ಆರು ವರ್ಷಗಳ ಹಿಂದೆ ಮದುರೈ ಜಿಲ್ಲೆಯ ಮೆಲೂರ್ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಈ ಕುರಿತು ಅರ್ಜಿ ಸಲ್ಲಿಸಿದ್ದಾರೆ. ತಮ್ಮ ಜೀವನ ನಿರ್ವಹಣೆಗೆ ಮಗ ಧನುಷ್ ಪ್ರತಿ ತಿಂಗಳು 65 ಸಾವಿರ ಕೊಡಬೇಕೆಂದು ಮನವಿ ಸಲ್ಲಿಸಿದ್ದಾರೆ. ಈ ಪ್ರಕರಣ ಕಳೆದ 6 ವರ್ಷಗಳಿಂದ ಸಾಗುತ್ತಿದೆ.

    ಕತಿರೇಸನ್ ಮತ್ತು ಮೀನಾಕ್ಷಿ ದಂಪತಿಗೆ ಧನುಷ್ ಮೂರನೇ ಮಗನಾಗಿದ್ದು, ನಟನಾಗುವ ಇಚ್ಛೆಯಿಂದ ಮನೆಯಿಂದ ಪರಾರಿಯಾಗಿದ್ದಾನೆ. ನಾವೇ ಅವನ ನಿಜವಾದ ತಂದೆ ತಾಯಿ. ಇದಕ್ಕೆ ಜನನ ಪ್ರಮಾಣ ಪತ್ರ ಮತ್ತು ಎಸ್‌ಎಸ್‌ಎಲ್‌ಸಿ ಮೆಮೋಗಳನ್ನು ಸಾಕ್ಷಿಯಾಗಿ ನೀಡಿದ್ದಾರೆ. ಇನ್ನು ಈ ಬಗ್ಗೆ ಪಿತೃತ್ವ ಪರೀಕ್ಷೆ ಮಾಡಬೇಕು ಎಂದು ಡಿಮ್ಯಾಂಡ್ ಮಾಡಲಾಗಿತ್ತು. ಆದರೆ ಕೋರ್ಟ್ ಆದೇಶದ ಬಳಿಕ ಇದರಲ್ಲಿ ಸತ್ಯಾಂಶವಿಲ್ಲ ಎಂಬುದು ದೃಢಪಟ್ಟಿತ್ತು. 2020ರಲ್ಲಿ ಈ ಕೇಸ್ ಅನ್ನು ರದ್ದು ಮಾಡಲಾಗಿತ್ತು. ಇದೀಗ ಈ ಆದೇಶವನ್ನು ರದ್ದು ಮಾಡಬೇಕೆಂದು ವೃದ್ಧ ದಂಪತಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಇದನ್ನೂ ಓದಿ: ಗೋವಾ ಸಿಎಂ ಭೇಟಿಯಾದ ಯಶ್, ರಾಧಿಕಾ ಪಂಡಿತ್

     

    View this post on Instagram

     

    A post shared by Dhanush (@dhanushkraja)

    ಸದ್ಯ ಕೋರ್ಟ್ ಧನುಷ್‌ಗೆ ಸಮನ್ಸ್ ನೀಡಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ ಪೊಲೀಸಲು ಧನುಷ್ ಸಲ್ಲಿಸಿರುವ ಸಾಕ್ಷ್ಯಗಳ ಸೂಕ್ತ ತನಿಖೆ ನಡೆಸಬೇಕೆಂದು ನ್ಯಾಯಾಲಯ ತಿಳಿಸಿದೆ. ಈಗ ಚೆರ್ಚೆಯಾಗುತ್ತಿರುವ ವಿಚಾರ ನಿಜನಾ ಅಥವಾ ಸುಳ್ಳಾ ಎಂಬುದು ತಿಳಿದು ಬಂದಿಲ್ಲ. ಮುಂದಿನ ದಿನಗಳಲ್ಲಿ ಸತ್ಯಾಂಶ ಬೆಳಕಿಗೆ ಬರುತ್ತಾ ಎಂದು ಕಾದು ನೋಡಬೇಕಿದೆ.

  • ʻದಿ ರೋಡ್‌ʼ ಚಿತ್ರದ ಮೂಲಕ ಮಧುರೈನ ನೈಜ ಕಥೆಯನ್ನ ಹೇಳಲು ಹೊರಟಿದ್ದಾರೆ ತ್ರಿಶಾ

    ʻದಿ ರೋಡ್‌ʼ ಚಿತ್ರದ ಮೂಲಕ ಮಧುರೈನ ನೈಜ ಕಥೆಯನ್ನ ಹೇಳಲು ಹೊರಟಿದ್ದಾರೆ ತ್ರಿಶಾ

    ವಿಭಿನ್ನ ಪಾತ್ರಗಳ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡಿರೋ ಬಹುಭಾಷಾ ನಟಿ ತ್ರಿಶಾ ಕೃಷ್ಣನ್ ಆ್ಯಕ್ಷನ್ ಅವತಾರದಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಈ ಬಾರಿ ನಟಿ ತ್ರಿಶಾ ಮಧುರೈನ ನೈಜ ಕಥೆಯನ್ನ ಹೇಳಲು ಹೊರಟಿದ್ದಾರೆ.

    ಸೌತ್ ಸಿನಿರಂಗದಲ್ಲಿ ವಿಶಿಷ್ಟ ವ್ಯಕ್ತಿತ್ವ ಮತ್ತು ಅಮೋಘ ನಟನೆಯ ಮೂಲಕ ಮನೆಮಾತಾಗಿರೋ ನಟಿ ತ್ರಿಶಾ `ಪೊನ್ನಿಯನ್ ಸೆಲ್ವನ್’ ಚಿತ್ರೀಕರಣ ಮುಗಿಯುತ್ತಿದ್ದಂತೆ `ದಿ ರೋಡ್’ ಎಂಬ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರದ ಮುಹೂರ್ತ ನೆರೆವೇರಿದೆ.

    ನವ ನಿರ್ದೇಶಕ ಅರುಣ್ ವಸೀಗರನ್ ಆ್ಯಕ್ಷನ್ ಕಟ್ ಹೇಳ್ತಿರುವ `ದಿ ರೋಡ್’ ಚಿತ್ರದಲ್ಲಿ ತ್ರಿಶಾ ಕೃಷ್ಣನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಆ್ಯಕ್ಷನ್ ಕ್ವೀನ್ ಆಗಿ ಮಿಂಚಲಿದ್ದಾರೆ. ಮಧುರೈನ ನೈಜ ಘಟನೆಯನ್ನ ಆಧರಿಸಿ `ದಿ ರೋಡ್’ ಚಿತ್ರ ಮಾಡಲಾಗುತ್ತಿದ್ದು, 50 ದಿನಗಳ ಕಾಲ ಮಧುರೈನಲ್ಲೇ ಶೂಟಿಂಗ್ ನಡೆಯಲಿದೆ. ಇದನ್ನೂ ಓದಿ: ಪುನೀತ್ ಗಾಗಿ ಹಾಡಿದ ಅಪ್ಪು ಅಕ್ಕನ ಮಗಳು ನಟಿ ಧನ್ಯಾ ರಾಮ್ ಕುಮಾರ್

    ಕಾಲಿವುಡ್ ನಿರ್ದೇಶಕ ಅರುಣ್ ವಸೀಗರನ್ ಭಿನ್ನ ಕಥೆಯನ್ನ ತೆರೆಯ ಮೇಲೆ ತರಲು ಸಜ್ಜಾಗಿದ್ದಾರೆ. ನಾಯಕಿ ತ್ರಿಶಾಗೆ ಸಂತೋಷ ಪ್ರತಾಪ್, ಶಬೀರ್, ಮಿಯಾ ಜಾರ್ಜ್, ಸಾಥ್ ನೀಡಲಿದ್ದಾರೆ. ಸದ್ಯದಲ್ಲೇ ಚಿತ್ರೀಕರಣ ಶುರುವಾಗಲಿದೆ. ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಿರೋ ತ್ರಿಶಾ ನಟನೆಯ ಮುಂಬರುವ ಚಿತ್ರಕ್ಕಾಗಿ ಕಾಯ್ತಿದ್ದಾರೆ.

  • ಶೀಘ್ರದಲ್ಲೇ ಗುಡ್ ನ್ಯೂಸ್ ಕೊಡಲಿರುವ ನಯನತಾರಾ ಮತ್ತು ವಿಘ್ನೇಶ್ ಜೋಡಿ

    ಶೀಘ್ರದಲ್ಲೇ ಗುಡ್ ನ್ಯೂಸ್ ಕೊಡಲಿರುವ ನಯನತಾರಾ ಮತ್ತು ವಿಘ್ನೇಶ್ ಜೋಡಿ

    ಕಾಲಿವುಡ್ ಕ್ಯೂಟ್ ಜೋಡಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಕಳೆದ 6 ವರ್ಷಗಳಿಂದ ರಿಲೇಶನ್ ಶಿಪ್‍ನಲ್ಲಿದ್ದು, ಇಬ್ಬರು ತಮ್ಮ ಗುರಿಯನ್ನು ಸಾಧಿಸುವುದರಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. 2015ರ ರೌಡಿ ಧಾನ್ ಚಿತ್ರೀಕರಣದ ವೇಳೆ ಪ್ರೀತಿಯಲ್ಲಿ ಬಿದ್ದಿದ್ದ ಈ ಜೋಡಿ ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇಷ್ಟು ದಿನ ನಯನತಾರಾ ಮದುವೆ ಯಾವಾಗ ಎಂದು ಕೇಳುತ್ತಿದ್ದ ಅಭಿಮಾನಿಗಳಿಗೆ ಕೊನೆಗೂ ಗುಡ್ ನ್ಯೂಸ್ ಸಿಕ್ಕಿದೆ. ಹೌದು, ನಿರ್ದೇಶಕ ವಿಘ್ನೇಶ್ ಶಿವನ್ ತಮ್ಮ ಮುಂದಿನ ಎಕೆ 69 ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳುವ ಮುನ್ನ ನಯನತಾರಾ ಅವರನ್ನು ವರಿಸಲಿದ್ದಾರೆ ಎಂಬ ಸುದ್ದಿಯೊಂದು ಕಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ವಿಜಯ್ ಸೇತುಪತಿ ಒಲಿಯುವುದು ನಯನತಾರಾಗಾ ಅಥವಾ ಸಮಂತಗಾ?: ಹೆಚ್ಚಿದ ಕುತೂಹಲ

    ಎಕೆ 69 ಸಿನಿಮಾ ಕಾಲಿವುಡ್ ನಟ ತಲಾ ಅಜಿತ್ ಅಭಿನಯಿಸುತ್ತಿರುವ 62ನೇ ಪ್ರಾಜೆಕ್ಟ್ ಇದಾಗಿದ್ದು, ಈ ಸಿನಿಮಾ ಇದೇ ವರ್ಷದ ಅಂತ್ಯದ ವೇಳೆಗೆ ಸೆಟ್ಟೇರುವ ನಿರೀಕ್ಷೆ ಇದೆ. ಈ ಸಿನಿಮಾದ ಶೂಟಿಂಗ್‍ನಲ್ಲಿ ವಿಘ್ನೇಶ್ ಶಿವನ್ ಬ್ಯುಸಿಯಾಗುವ ಮುನ್ನವೇ ನಯನತಾರಾ ಅವರನ್ನು ವಿವಾಹವಾಗಲಿದ್ದಾರೆ ಎನ್ನಲಾಗುತ್ತಿದ್ದು, ಈ ವಿಚಾರವಾಗಿ ಶೀಘ್ರದಲ್ಲಿಯೇ ಈ ಜೋಡಿ ಅಧಿಕೃತವಾಗಿ ಅನೌನ್ಸ್ ಮಾಡುವ ನಿರೀಕ್ಷೆಯಿದೆ. ಅಲ್ಲದೇ ಈ ವರ್ಷದ ಜೂನ್ ಹೊತ್ತಿಗೆ ವಿಘ್ನೇಶ್ ನಯನತಾರಾ ಕೈ ಹಿಡಿಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಪೋಸ್ಟ್‌ಮ್ಯಾನ್‍ನಿಂದಲೇ ಬಡ ಜನರ ಲಕ್ಷ, ಲಕ್ಷ ಹಣ ಗುಳುಂ 

    ಸದ್ಯ ಕಾತು ವಾಕುಲಾ ರೆಂದು ಕಾದಲ್ ಎಂಬ ಪ್ರೇಮ ಕಥಾಹಂದರದ ಸಿನಿಮಾದಲ್ಲಿ ವಿಘ್ನೇಶ್ ಶಿವನ್, ನಯನ ಒಟ್ಟಿಗೆ ಕೆಲಸ ಮಾಡಿದ್ದು, ಚಿತ್ರದಲ್ಲಿ ನಾಯಕನಾಗಿ ವಿಜಯ್ ಸೇತುಪತಿ, ನಟಿ ನಯನತಾರಾ ಮತ್ತು ಸಮಂತಾ ರುತ್ ಪ್ರಭು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾ ಏಪ್ರಿಲ್ 28 ರಂದು ಬಿಡುಗಡೆಯಾಗಲಿದ್ದು, ಚಿತ್ರದ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಹೊಂದಿದ್ದಾರೆ.

  • ಗರಂ ಆದ ಸಮಂತಾ: ಶಾಂತ ಸ್ವಭಾವ ಕೆಣಕಿದವರಿಗೆ ಖಡಕ್ ಉತ್ತರ

    ಗರಂ ಆದ ಸಮಂತಾ: ಶಾಂತ ಸ್ವಭಾವ ಕೆಣಕಿದವರಿಗೆ ಖಡಕ್ ಉತ್ತರ

    ಟಿ ಸಮಂತಾ ತಮ್ಮ ಪಾಡಿಗೆ ತಾವು ಕೆಲಸ ಮಾಡುತ್ತಿದ್ದರೂ, ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಅವರನ್ನು ಪ್ರತಿಕ್ಷಣವೂ ಒಂದಿಲ್ಲೊಂದು ಕಾರಣಕ್ಕಾಗಿ ಟೀಕೆ ಮಾಡುತ್ತಲೇ ಇರುತ್ತಾರೆ. ನಾಗಚೈತನ್ಯರಿಂದ ದೂರವಾದ ನಂತರ ಇದೆಲ್ಲವೂ ಆಗುತ್ತಿರುವುದರಿಂದ ಈವರೆಗೂ ಅವರೂ ಯಾವುದಕ್ಕೂ ಪ್ರತಿಕ್ರಿಯಿಸಿದೇ ತಮ್ಮ ಪಾಡಿಗೆ ತಾವು ಶೂಟಿಂಗ್ ನಲ್ಲಿ ಬ್ಯುಸಿ ಆಗಿದ್ದಾರೆ. ಇದನ್ನೂ ಓದಿ : ಪ್ಲಾಸ್ಟಿಕ್ ಸುತ್ತಿಕೊಂಡು ಬಂದ ಉರ್ಫಿ ಜಾವೇದ್ : ಕಾಸ್ಟ್ಯೂಮ್ ಡಿಸೈನರ್ ಹುಡುಕುತ್ತಿದ್ದಾರೆ ನೆಟ್ಟಿಗರು

    ಈ ನಡುವೆ ಅವರ ಮಾಡುತ್ತಿರುವ ಪಾತ್ರಗಳು, ಅವರು ಕಳೆಯುತ್ತಿರುವ ಖಾಸಗಿ ಕ್ಷಣಗಳನ್ನು ಗುರಿಯಾಗಿಟ್ಟುಕೊಂಡು ಟ್ರೋಲ್ ಮಾಡಲಾಗುತ್ತಿದೆ. ಅವರು ಧರಿಸುವ ಕಾಸ್ಟ್ಯೂಮ್ ಬಗ್ಗೆಯೂ ಕೆಟ್ಟದ್ದಾಗಿ ಕಾಮೆಂಟ್ ಮಾಡಲಾಗುತ್ತಿದೆ. ಇಷ್ಟೆಲ್ಲ ಅವರನ್ನು ಟಾರ್ಗೆಟ್ ಮಾಡುತ್ತಿದ್ದರೂ ಈವರೆಗೂ ಯಾವುದಕ್ಕೂ ಅವರು ರಿಯ್ಯಾಕ್ಟ್ ಮಾಡಿರಲಿಲ್ಲ. ಇದನ್ನೂ ಓದಿ : ಕನ್ನಡ ಚಿತ್ರರಂಗವನ್ನು ರಾಷ್ಟ್ರಮಟ್ಟಕ್ಕೆ ತಗೆದುಕೊಂಡು ಹೋದ ಮೊದಲಿಗರಾರು? ಹೀಗಿದೆ ನಟ ಜಗ್ಗೇಶ್ ಉತ್ತರ

    ನಾಗಚೈತನ್ಯರಿಂದ ದೂರವಾದ ನಂತರ ಅತೀ ಹೆಚ್ಚು ಮಾನಸಿಕ ಹಿಂಸೆಯನ್ನು ಅನುಭವಿಸಿದ ಈ ನಟಿ ಅದರಿಂದ ಆಚೆ ಬರುವುದಕ್ಕಾಗಿ ಏನೆಲ್ಲ ಕಸರತ್ತು ಮಾಡಿದರು. ಅದಕ್ಕೂ ಅವರು ಟೀಕೆಯನ್ನು ಎದುರಿಸಬೇಕಾಯಿತು. ಪುಷ್ಪಾ ಸಿನಿಮಾದ ಹಾಡು ಬಂದಾಗಲಂತೂ ಮುಗಿಬಿದ್ದು ಕೆಟ್ಟದಾಗಿ ಕೆಲವರು ಕಾಮೆಂಟ್ ಮಾಡಿದರು. ಇದನ್ನೂ ಓದಿ :  ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನಿರ್ದೇಶಕನ ವಿರುದ್ಧ ಕಿಡಿಕಾರಿದ ಸಿಖ್ ಸಂಘ

    ಇಷ್ಟೆಲ್ಲ ಹಿಂಸೆಗಳನ್ನು ಈವರೆಗೂ ತಡೆದುಕೊಂಡಿದ್ದ ಸಮಂತಾ, ಇದೀಗ ಏಕಾಏಕಿಯಾಗಿ ಗರಂ ಆಗಿದ್ದಾರೆ. ಏಪ್ರಿಲ್ 22 ರಂದು ಸಂಜೆ 5.30ಕ್ಕೆ ಟ್ವಿಟ್ ಮಾಡಿರುವ ಅವರು, ‘ಮೌನ ಮತ್ತು ತಾಳ್ಮೆಯನ್ನು ಅಜ್ಞಾನ ಎಂದು ತಿಳಿದುಕೊಳ್ಳಬಾರದು. ಅದು ದೌರ್ಬಲ್ಯ ಕೂಡ ಅಲ್ಲ. ನನ್ನೀ ಮೌನವನ್ನು ಅಜ್ಞಾನವೆಂದು ತಿಳಿದುಕೊಂಡಿದ್ದರೆ, ನನ್ನ ಶಾಂತ ಸ್ವಭಾವವನ್ನೂ ಸ್ವೀಕಾರವೆಂದು, ದಯೆಯನ್ನು ದೌರ್ಬಲ್ಯ ಎಂದು ತಪ್ಪಾಗಿ ಭಾವಿಸಬೇಡಿ’ ಎಂದು ಖಡಕ್ಕಾಗಿಯೇ ಸಂದೇಶ ರವಾನಿಸಿದ್ದಾರೆ. ಈ ಖಡಕ್ ಸಂದೇಶ ಯಾರಿಗೆ ಎಂದು ಅವರು ಹೇಳದೇ ಇದ್ದರೂ, ಅರ್ಥ ಮಾಡಿಕೊಳ್ಳುವವರು ಖಂಡಿತಾ ಅರ್ಥ ಮಾಡಿಕೊಳ್ಳುತ್ತಾರೆ.

  • `ಹೊಂಬಾಳೆ ಫಿಲ್ಮ್ಸ್‌’ ಸುಧಾ ಕೊಂಗರ ನಿರ್ದೇಶನದಲ್ಲಿ ಕಾಲಿವುಡ್ ನಟ ಸೂರ್ಯ..!

    `ಹೊಂಬಾಳೆ ಫಿಲ್ಮ್ಸ್‌’ ಸುಧಾ ಕೊಂಗರ ನಿರ್ದೇಶನದಲ್ಲಿ ಕಾಲಿವುಡ್ ನಟ ಸೂರ್ಯ..!

    ದೇಶಾದ್ಯಂತ ಸಂಚಲನ ಮೂಡಿಸುತ್ತಿರುವ `ಹೊಂಬಾಳೆ ಫಿಲ್ಮ್ಸ್‌’ ಇತ್ತೀಚೆಗಷ್ಟೇ ಸುಧಾ ಕೊಂಗರ ಜತೆ ಸಿನಿಮಾ ಮಾಡುವುದಾಗಿ ಅಧಿಕೃತವಾಗಿ ಅನೌನ್ಸ್ ಮಾಡಲಾಗಿತ್ತು. ಈಗ ಸುಧಾ ಕೊಂಗರ ನಿರ್ದೇಶನದಲ್ಲಿ ಕಾಲಿವುಡ್ ನಟ ಸೂರ್ಯ ನಟಿಸುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ.

    `ಸೂರರೈ ಪೊಟ್ರು’ ಯಶಸ್ಸಿನ ನಂತರ ಮತ್ತೆ ಕಾಲಿವುಡ್ ಸೂಪರ್ ಸ್ಟಾರ್‌ಗೆ ನಿರ್ದೇಶನ ಮಾಡಲಿದ್ದಾರೆ ಸುಧಾ ಕೊಂಗರ ಎಂಬ ಊಹಾಪೋಹ ಹರಿದಾಡುತ್ತಿದೆ. ಈ ಚಿತ್ರ ಯಶಸ್ಸಿನ ನಂತರ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಹಾಗಾಗಿ ಮತ್ತೆ ನಟ ಸೂರ್ಯಗೆ ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.

    ಹೊಂಬಾಳೆ ಬ್ಯಾನರ್‌ನ ಚಿತ್ರದ ನಂತರ ಮತ್ತೆ ಸೂರ್ಯ ಮತ್ತು ಸುಧಾ ಒಟ್ಟಿಗೆ ಚಿತ್ರ ಮಾಡಲಿದ್ದಾರೆ. ಬಯೋಪಿಕ್ ಚಿತ್ರದಲ್ಲಿ ನಟಿಸಲಿದ್ದು, ಈ ಚಿತ್ರವನ್ನು ಸೂರ್ಯ ಅವರ ಸ್ವಂತ ಬ್ಯಾನರ್‌ನಲ್ಲೇ ನಿರ್ಮಾಣವಾಗಿದೆ. ಅದಕ್ಕೂ ಮುಂಚೆ ಸೂರ್ಯ ಒಪ್ಪಿಕೊಂಡಿರುವ ಚಿತ್ರಗಳನ್ನು ಪೂರ್ಣಗೊಳಿಸಬೇಕಿದೆ. ಇದನ್ನೂ ಓದಿ: ಪ್ಲಾಸ್ಟಿಕ್ ಸುತ್ತಿಕೊಂಡು ಬಂದ ಉರ್ಫಿ ಜಾವೇದ್ : ಕಾಸ್ಟ್ಯೂಮ್ ಡಿಸೈನರ್ ಹುಡುಕುತ್ತಿದ್ದಾರೆ ನೆಟ್ಟಿಗರು

    `ಹೊಂಬಾಳೆ ಫಿಲ್ಮ್ಸ್‌’ ಅಡಿಯಲ್ಲಿ ಮೂಡಿ ಬರಲಿರುವ ನೈಜ ಆಧಾರಿತ ಕಥೆಗೆ ಸುಧಾ ಕೊಂಗರ ಆಕ್ಷನ್ ಕಟ್ ಹೇಳ್ತಿದ್ದಾರೆ. ಸುಧಾ ಅವರ ಕಥೆಗೆ ನಾಯಕ ನಟನ ಹುಡುಕಾಟದಲ್ಲಿದೆ ಚಿತ್ರತಂಡ. ಸಿನಿಮಾದ ಅಧಿಕೃತ ಮಾಹಿತಿಗಾಗಿ ಕಾದುನೋಡಬೇಕಿದೆ.

  • `ಬೀಸ್ಟ್’ ಸೋಲಿನ ಹಿನ್ನೆಲೆ `ತಲೈವರ್ 169′ ಚಿತ್ರಕ್ಕೆ ಹೊಸ ನಿರ್ದೇಶಕರ ಹುಡುಕಾಟದಲ್ಲಿ ತಲೈವಾ!

    `ಬೀಸ್ಟ್’ ಸೋಲಿನ ಹಿನ್ನೆಲೆ `ತಲೈವರ್ 169′ ಚಿತ್ರಕ್ಕೆ ಹೊಸ ನಿರ್ದೇಶಕರ ಹುಡುಕಾಟದಲ್ಲಿ ತಲೈವಾ!

    ಕಾಲಿವುಡ್ ಸೂಪರ್ ಸ್ಟಾರ್ ರಜನೀಕಾಂತ್ ಮತ್ತು ನೆಲ್ಸನ್ ದಿಲೀಪ್ ಕುಮಾರ್ ಕಾಂಬಿನೇಷನ್‌ನಲ್ಲಿ `ತಲೈವರ್ 169′ ಚಿತ್ರ ಅನೌನ್ಸ್ ಆಗಿತ್ತು. ಆದರೆ ರಜನೀಕಾಂತ್ ತಮ್ಮ ಚಿತ್ರ ನಿರ್ದೇಶಕನನ್ನು ಬದಲಾವಣೆ ಮಾಡುವ ಯೋಜನೆಯಲ್ಲಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ.

    ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಬೀಸ್ಟ್ ಚಿತ್ರ ಇತ್ತೀಚಿಗೆ ರಿಲೀಸ್ ಆಗಿತ್ತು. ಚಿತ್ರಕ್ಕೆ ಪ್ರತಿಕ್ರಿಯೆ ವ್ಯಕ್ತವಾಗ್ತಿರೋ ಹಿನ್ನೆಲೆಯಲ್ಲಿ, `ತಲೈವರ್ 169′ ಚಿತ್ರಕ್ಕೆ ನಿರ್ದೇಶಕ ಬದಲಿಸುವ ಪ್ಲ್ಯಾನ್‌ನಲ್ಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇತ್ತೀಚೆಗೆ `ಕೆಜಿಎಫ್ 2′ ಚಿತ್ರವನ್ನ ಕನ್ನಡದಲ್ಲೇ ನೋಡಿ ಸೂಪರ್ ಸ್ಟಾರ್ ರಜನೀಕಾಂತ್ ಮೆಚ್ಚುಗೆ ಸೂಚಿಸಿದ್ದರು. ಆದರೆ ಬೀಸ್ಟ್ ಚಿತ್ರದ ಬಗ್ಗೆ ಯಾವುದೇ ಅಭಿಪ್ರಾಯ ತಿಳಿಸಿರಲಿಲ್ಲ. ಹಾಗಾಗಿ ಈ ವದಂತಿಗೆ ಮತ್ತಷ್ಟು ಪುಷ್ಠಿ ನೀಡಿದೆ.

    ಈ ಹಿಂದೆ `ತಲೈವರ್ 169′ ಚಿತ್ರದ ಅಧಿಕೃತ ಟೀಸರ್ ಲುಕ್‌ನ್ನ ರಜನೀಕಾಂತ್ ಅವರು ಟ್ವಿಟರ್ ಕವರ್ ಪೇಜ್‌ನಲ್ಲಿ ಪೋಸ್ಟ್ ಮಾಡಿದ್ದರು ಈಗ ಆ ಪೋಸ್ಟ್ ಇಲ್ಲದೇ ಇರುವುದು ಹಲವಾರು ವದಂತಿಗೆ ದಾರಿ ಮಾಡಿಕೊಟ್ಟಿದೆ. ಚಿತ್ರತಂಡದವರಾಗಲಿ, ಸ್ವತಃ ರಜನೀಕಾಂತ್ ಅವರು ಕೂಡ ಈ ವದಂತಿಯ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಇದನ್ನೂ ಓದಿ:`ಕೆಜಿಎಫ್ 2′ ಚಿತ್ರ ನೋಡಿ ಮಾಸ್ಟರ್ ಪೀಸ್ ಎಂದು ಹೊಗಳಿದ ರಿಯಲ್ ಸ್ಟಾರ್ ಉಪೇಂದ್ರ

    ದಳಪತಿ ವಿಜಯ್ ಮತ್ತು ಪೂಜಾ ಹೆಗ್ಡೆ ನಟನೆಯ ʻಬೀಸ್ಟ್‌ʼ ಚಿತ್ರ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡದೇ ಇರೋದು ನಿರ್ದೇಶಕ ನೆಲ್ಸನ್ ಕೆರಿಯರ್‌ಗೆ ಎಫೆಕ್ಟ್ ಆಯ್ತಾ ಅಥವಾ ನಿಜಕ್ಕೂ ರಜನೀಕಾಂತ್ ಹೊಸ ನಿರ್ದೇಶಕರ ಹುಡುಕಾಟದಲ್ಲಿದ್ದಾರಾ ಅಂತಾ ಕಾದು ನೋಡಬೇಕಿದೆ.

  • ʻಹೊಂಬಾಳೆ ಫಿಲ್ಮ್ಸ್‌ʼ ಹೊಸ ಸಿನಿಮಾ ಅನೌನ್ಸ್: ಭರ್ಜರಿ ಅವಕಾಶ ಗಿಟ್ಟಿಸಿಕೊಂಡ `ಸೂರರೈ ಪೋಟ್ರು’ ನಿರ್ದೇಶಕಿ

    ʻಹೊಂಬಾಳೆ ಫಿಲ್ಮ್ಸ್‌ʼ ಹೊಸ ಸಿನಿಮಾ ಅನೌನ್ಸ್: ಭರ್ಜರಿ ಅವಕಾಶ ಗಿಟ್ಟಿಸಿಕೊಂಡ `ಸೂರರೈ ಪೋಟ್ರು’ ನಿರ್ದೇಶಕಿ

    ದೇಶಾದ್ಯಂತ ಸಂಚಲನ ಮೂಡಿಸುತ್ತಿರುವ `ಹೊಂಬಾಳೆ ಫಿಲ್ಮ್ಸ್‌ʼ ಸಂಸ್ಥೆ `ಕೆಜಿಎಫ್ ಚಾಪ್ಟರ್ 2′ ಯಶಸ್ಸಿನಿಂದ ಸದ್ಯ ಭಾರೀ ಸುದ್ದಿ ಮಾಡ್ತಿದೆ. ಹೀಗೆ ಒಂದಲ್ಲಾ ಒಂದು ವಿಚಾರವಾಗಿ ಸೌಂಡ್ ಮಾಡ್ತಿರೋ ಹೊಂಬಾಳೆ ಬ್ಯಾನರ್‌ನಿಂದ ನಿರ್ದೇಶಕಿ ಸುಧಾ ಕೊಂಗರ ಅವರಿಗೆ ಚಿತ್ರ ಮಾಡುವ ಅವಕಾಶ ಸಿಕ್ಕಿದೆ. ಈ ಬಗ್ಗೆ ಬ್ರೇಕಿಂಗ್ ನ್ಯೂಸ್ ಹೊರಬಿದ್ದಿದೆ.

    ಸಿನಿಮಾರಂಗದಲ್ಲಿ ಮೈಲಿಗಲ್ಲು ನಿರ್ಮಾಣ ಮಾಡಿರುವ ಸಂಸ್ಥೆಯಿಂದ ಅನೇಕ ಚಿತ್ರಗಳು ನಿರ್ಮಾಣವಾಗುತ್ತಿದೆ. ಈಗ ಚಿತ್ರ ಕೂಡ ಅನೌನ್ಸ್ ಮಾಡಲಾಗಿದೆ. ಮತ್ತೊಂದು ವಿಶೇಷ ಅಂದ್ರೆ, ಈ ಬಾರಿ ʻಹೊಂಬಾಳೆ ಫಿಲ್ಮ್ಸ್‌ʼ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ದೇಶನ ಮಾಡುವ ಅವಕಾಶವನ್ನು ಕಾಲಿವುಡ್ ಲೇಡಿ ನಿರ್ದೇಶಕಿ ಸುಧಾ ಕೊಂಗರ ಗಿಟ್ಟಿಸಿಕೊಂಡಿದ್ದಾರೆ.

    ನಿರ್ದೇಶಕಿ ಸುಧಾ ಕೊಂಗರ ಅವರು ಮೂಲತಃ ಆಂಧ್ರ ಪ್ರದೇಶದವರಾಗಿದ್ದು, ಅವರು ತಮಿಳು ಸಿನಿಮಾರಂಗದಲ್ಲಿ ಸಾಧನೆ ಮಾಡಿದ್ದಾರೆ. ಡಿಫರೆಂಟ್ ಸಬ್‌ಜೆಕ್ಟ್ಗಳನ್ನ ತೆರೆಯ ಮೇಲೆ ತೋರಿಸುವಲ್ಲಿ ಸೈ ಎನಿಸಿಕೊಂಡಿದ್ದಾರೆ. ಈ ಹಿಂದೆ ಸೂರ್ಯ ನಟನೆಯ `ಸೂರರೈ ಪೋಟ್ರು’ ನಿರ್ದೇಶನ ಮಾಡಿ ಗಮನ ಸೆಳೆದಿದ್ದರು. ಇದನ್ನೂ ಓದಿ:ನನ್ನಿಂದ ತಪ್ಪಾಯ್ತು – ತಂಬಾಕು ಬ್ರ್ಯಾಂಡ್ ಅಂಬಾಸಿಡರ್ ಪಟ್ಟ ತ್ಯಜಿಸಿದ ಅಕ್ಷಯ್

    ಕಾಲಿವುಡ್ ಪ್ರತಿಭಾವಂತ ನಿರ್ದೇಶಕಿ ಸುಧಾ ಕೊಂಗರ ಅವರ ಕೆಲಸ ಗುರುತಿಸಿ ಇದೀಗ ಹೊಂಬಾಳೆ ಸಂಸ್ಥೆಯಡಿ ನಿರ್ದೇಶನ ಮಾಡುವ ಅವಕಾಶವನ್ನು ಕೊಟ್ಟಿದ್ದಾರೆ. ಹಾಗಂತ ಅಧಿಕೃತವಾಗಿ `ಹೊಂಬಾಳೆ ಫಿಲ್ಮ್ಸ್‌ʼ ಟ್ವಿಟರ್‌ನಲ್ಲಿ ಘೋಷಿಸಿದ್ದಾರೆ. ಸುಧಾ ಕೊಂಗರ ಅವರಿಗೆ `ಹೊಂಬಾಳೆ ಫಿಲ್ಮ್ಸ್‌’ ಮೂಲಕ ವಿಜಯ್ ಕಿರಗಂದೂರು ಸಾಥ್‌ ನೀಡಿರುವುದು ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿಸಿದೆ.