Tag: Kollywood

  • ಬಾಲಿವುಡ್ ಕೆಟ್ಟ ಮನಸ್ಥಿತಿ ಬಯಲು ಮಾಡಿದ ಖ್ಯಾತ ನಟ ಸಿದ್ದಾರ್ಥ

    ಬಾಲಿವುಡ್ ಕೆಟ್ಟ ಮನಸ್ಥಿತಿ ಬಯಲು ಮಾಡಿದ ಖ್ಯಾತ ನಟ ಸಿದ್ದಾರ್ಥ

    ಕ್ಷಿಣದ ಸಿನಿಮಾಗಳು ಹಿಂದಿ ಚಿತ್ರರಂಗಕ್ಕೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಬಾಕ್ಸ್ ಆಫೀಸ್ ನಲ್ಲಿ ಗೆಲ್ಲುತ್ತಿವೆ. ಹೀಗಾಗಿ ಬಾಲಿವುಡ್ ಮಂದಿಗೆ ನಡುಕ ಶುರುವಾಗಿದೆ. ಕೇವಲ ಸಿನಿಮಾಗಳು ಮಾತ್ರವಲ್ಲ, ದಕ್ಷಿಣದ ಸ್ಟಾರ್ ಗಳು ಕೂಡ ಬಾಲಿವುಡ್ ಮಂದಿಯ ಮನಸ್ಥಿತಿಯನ್ನು ಒಬ್ಬೊಬ್ಬರಿ ಬಿಚ್ಚಿಡುತ್ತಿದ್ದಾರೆ. ಹೀಗಾಗಿ ಬಾಲಿವುಡ್ ಮಂದಿಯ ಬಣ್ಣ ಬಯಲಾಗುತ್ತಿದೆ. ಇದನ್ನೂ ಓದಿ : ಹೊಂಬಾಳೆ ಫಿಲ್ಮಸ್ ಬಘೀರನಿಗೆ ಮೇ 20ಕ್ಕೆ ಮುಹೂರ್ತ : ಶ್ರೀಮುರುಳಿ ನಾಯಕ

    ಹಿಂದಿ ಸಿನಿಮಾ ರಂಗದ ಕುರಿತು ಸ್ವತಃ ಕಂಗನಾ ರಣಾವತ್ ಅವರೇ ಆರೋಪದ ಮಾತುಗಳನ್ನು ಆಡಿದ್ದರು. ಬಾಲಿವುಡ್ ಕೆಲವರ ಕೈಯಲ್ಲಿ ಮಾತ್ರ ಇದೆ ಎಂದು ಹೇಳಿದ್ದರು. ಸ್ಟಾರ್ ನಟರ ಮಕ್ಕಳ  ಬಗ್ಗೆಯೂ ಮಾತನಾಡಿದ್ದರು. ಇದೀ ತೆಲುಗಿನ ಖ್ಯಾತ ನಟ ಸಿದ್ಧಾರ್ಥ ಕೂಡ ಬಾಲಿವುಡ್ ಚಿತ್ರಗಳ ಬಗ್ಗೆ ಮಾತನಾಡಿದ್ದಾರೆ. ದಕ್ಷಿಣದವರನ್ನು ಅವರು ಕೀಳು ಮಟ್ಟದಲ್ಲಿ ತೋರಿಸುತ್ತಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ : ಮನೆಗೆ ಕರೆಯಿಸಿಕೊಳ್ಳುವಂಥ ಅರ್ಹತೆ ಬಾಲಿವುಡ್ ನಲ್ಲಿ ಯಾರಿಗೂ ಇಲ್ಲ : ಕಂಗನಾ ರಣಾವತ್

    ಸದ್ಯ ಸಿದ್ಧಾರ್ಥ ನಟನೆಯ ಎಸ್ಕೇಪ್ ಪ್ಲಾನ್ ವೆಬ್ ಸೀರಿಸ್ ರಿಲೀಸ್ ಆಗುತ್ತಿದೆ. ಈ ಸಂದರ್ಭದಲ್ಲಿ ಮಾತನಾಡಿರುವ ಅವರು, ಬಾಲಿವುಡ್ ಸಿನಿಮಾಗಳಲ್ಲಿ ದಕ್ಷಿಣದವರ ಪಾತ್ರವನ್ನು ಕೀಳಾಗಿ ಬಿಂಬಿಸಲಾಗುತ್ತಿತ್ತು. ದಕ್ಷಿಣದ ಪಾತ್ರಗಳು ಇದ್ದರೆ, ಅವುಗಳ ಡೈಲಾಗ್ ಕೂಡ ಅಷ್ಟೇ ಕೆಟ್ಟದ್ದಾಗಿ ಇರುತ್ತಿದ್ದವು ಎಂದು ಹಲವು ಉದಾಹರಣೆಗಳ ಸಮೇತ ಅವರು ವಿವರಿಸಿದ್ದಾರೆ. ಇದನ್ನೂ ಓದಿ : ಕಾನ್ ಫೆಸ್ಟಿವಲ್‌ನಲ್ಲಿ ತಾರೆಯರ ದಂಡು

    ದಕ್ಷಿಣದ ಹಲವು ಚಿತ್ರಗಳ ಬಗ್ಗೆಯೂ ಮಾತನಾಡಿರುವ ಅವರು, ಹೆಮ್ಮೆಯಿಂದ ಹೊಸ ರೀತಿಯ ಚಿತ್ರಗಳನ್ನು ದಕ್ಷಿಣ ಭಾರತದ ನಿರ್ದೇಶಕರು ಮಾಡುತ್ತಿದ್ದಾರೆ. ಈ ಮೂಲಕ ಅವಮಾನದ ಸೇಡು ತೀರಿಸಿಕೊಳ್ಳಲಾಗುತ್ತಿದೆ ಎಂದೂ ಸಿದ್ಧಾರ್ಥ ಮಾತನಾಡಿದ್ದಾರೆ.

  • ಅಟ್ಲೀ ಸಂಭಾವನೆ ಕೇಳಿ ಅಲ್ಲು ಅರ್ಜುನ್ ಶಾಕ್

    ಅಟ್ಲೀ ಸಂಭಾವನೆ ಕೇಳಿ ಅಲ್ಲು ಅರ್ಜುನ್ ಶಾಕ್

    ಕಾಲಿವುಡ್‌ನ ಸಾಕಷ್ಟು ಸಿನಿಮಾಗಳ ಮೂಲಕ ನಿರ್ದೇಶಕ ಅಟ್ಲೀ ಸಂಚಲನ ಮೂಡಿಸಿದ್ದಾರೆ. ರಾಜಾ ರಾಣಿ, ಮರ್ಸೆಲ್, ಬಿಗಿಲ್‌ನಂತರ ಸಾಲು ಸಾಲು ಹಿಟ್ ಚಿತ್ರಗಳನ್ನೇ ನೀಡುತ್ತಾ ಬಂದಿದ್ದಾರೆ. ಇದೀಗ ಶಾರುಖ್ ಖಾನ್‌ಗೆ ಆ್ಯಕ್ಷನ್ ಕಟ್ ಹೇಳಿದ ನಂತರ ಅಲ್ಲು ಅರ್ಜುನ್‌ಗೆ ಡೈರೆಕ್ಷನ್ ಮಾಡುವುದಕ್ಕೆ ಅಟ್ಲೀ ರೆಡಿಯಾಗಿದ್ದಾರೆ. ಈಗ ಅಟ್ಲೀ ಸಂಭಾವನೆ ಕೇಳಿ ಅಲ್ಲು ಅರ್ಜುನ್ ಫುಲ್ ಶಾಕ್ ಆಗಿದ್ದಾರೆ.

    ಅಟ್ಲೀ ಟ್ಯಾಲೆಂಟ್ ನೋಡಿ ಬಾಲಿವುಡ್ ಸ್ಟಾರ್‌ಗಳು ರೆಡ್ ಕಾರ್ಪೆಟ್ ಹಾಕಿ ವೆಲ್‌ಕಮ್ ಮಾಡ್ತಿದ್ದಾರೆ. ಇತ್ತೀಚೆಗಷ್ಟೇ ಅಟ್ಲೀ ಪ್ರತಿಭೆ ನೋಡಿ ಶಾರುಖ್ ಖಾನ್ ತಮಗೆ ಸಿನಿಮಾ ಮಾಡಿಕೊಂಡುವಂತೆ ಕೇಳಿದ್ರು. ಅದರಂತೆ ಶೂಟಿಂಗ್ ಭರದಿಂದ ಸಾಗುತ್ತಿದೆ. ಹಾಗಾಗಿ ನಿರ್ದೇಶಕ ಅಟ್ಲೀಗೆ ಚಿತ್ರರಂಗದಲ್ಲಿ ಭಾರೀ ಬೇಡಿಕೆಯಿದೆ. ಇನ್ನು ಇತ್ತೀಚೆಗಷ್ಟೇ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಜತೆ ಸಿನಿಮಾ ವಿಚಾರವಾಗಿ ಮಾತುಕತೆ ನಡೆಸಿದ್ದಾರೆ.

    `ಪುಷ್ಪ’ ಗ್ರ್ಯಾಂಡ್ ಸಕ್ಸಸ್ ನಂತರ ಅಲ್ಲು ಅರ್ಜುನ್ ಅಟ್ಲೀ ಜತೆಗೆ ಸಿನಿಮಾ ವಿಷ್ಯವಾಗಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಅಟ್ಲೀ 35 ಕೋಟಿ ರೂಪಾಯಿ ಸಂಭಾವನೆ ಡಿಮ್ಯಾಂಡ್ ಮಾಡಿದ್ದರಂತೆ. `ಬಿಗಿಲ್’ ನಿರ್ದೇಶಕನ ಸಂಭಾವನೆ ಕೇಳಿನೇ ಅಲ್ಲು ಅರ್ಜುನ್ ಬೆರಗಾಗಿದ್ದಾರಂತೆ. ಇದೀಗ ಸಂಭಾವನೆ ಕೇಳಿ ಸಿನಿಮಾ ಮಾಡುವುದನ್ನೇ ಅಲ್ಲು ಅರ್ಜನ್ ಕೈಬಿಟ್ಟಿದ್ದಾರಂತೆ. ಈ ಸುದ್ದಿ ಇದೀಗ ಸೌತ್ ಗಲ್ಲಿಯಲ್ಲಿ ಸಿಕ್ಕಾಪಟ್ಟೆ ಸಂಚಲನ ಸೃಷ್ಟಿಸಿದೆ. ಇದನ್ನೂ ಓದಿ:ಕಾನ್ ಫೆಸ್ಟಿವಲ್‌ನಲ್ಲಿ ತಾರೆಯರ ದಂಡು

    ಅಲ್ಲು ಅರ್ಜುನ್ ಅವರು ಅಟ್ಲೀ ಅವರೊಂದಿಗೆ ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಮುಂದಾಗಿದ್ದರು. ಲೈಕಾ ಬ್ಯಾನರ್‌  ನಿರ್ಮಾಣಕ್ಕೆ ಮುಂದಾಗಿತ್ತು. ಇದೀಗ ಅಟ್ಲೀ ಸಂಭಾವನೆ ಕೇಳಿ ಶಾಕ್ ಆಗಿರುವ ಅಲ್ಲು ಅರ್ಜುನ್ ಆ್ಯಂಡ್ ಟೀಮ್ ಸಿನಿಮಾ ಯೋಜನೆ ಮುಂದುವರೆಯುತ್ತಾ ಅಥವಾ ಕೈಬೀಡುತ್ತಾರಾ ಅಂತಾ ಕಾದುನೋಡಬೇಕಿದೆ.

  • ತಮಿಳು ನಟ ಸಂತಾನಂ ಜತೆ ಹಾಟ್ ಆಗಿ ಕಾಣಿಸಿಕೊಂಡ ರಾಗಿಣಿ

    ತಮಿಳು ನಟ ಸಂತಾನಂ ಜತೆ ಹಾಟ್ ಆಗಿ ಕಾಣಿಸಿಕೊಂಡ ರಾಗಿಣಿ

    ಸ್ಯಾಂಡಲ್‌ವುಡ್ ತುಪ್ಪದ ಬೆಡಗಿ ರಾಗಿಣಿ ಮತ್ತೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಶಾಂತ್ ರಾಜ್ ಮತ್ತು ಸಂತಾನಂ ಕಾಂಬಿನೇಷನ್ ಚಿತ್ರದಲ್ಲಿ ರಾಗಿಣಿ ಹೆಜ್ಜೆ ಹಾಕಿದ್ದಾರೆ. ಚಿತ್ರದಲ್ಲಿ ಸಖತ್ ಹಾಟ್ ಹಾಟ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಶೂಟಿಂಗ್ ಫೋಟೋಗಳು ಇದೀಗ ವೈರಲ್ ಆಗಿದೆ.

    ಕನ್ನಡದ ಪ್ರತಿಭಾವಂತ ನಿರ್ದೇಶಕ ಪ್ರಶಾಂತ್ ರಾಜ್ ಮೊಟ್ಟ ಮೊದಲ ಬಾರಿಗೆ ತಮಿಳಿನಲ್ಲಿ ನಿರ್ದೇಶನ ಮಾಡಲು ಸಜ್ಜಾಗಿದ್ದಾರೆ. ತಮಿಳು ಸ್ಟಾರ್ ನಟ ಸಂತಾನಂ ಮತ್ತು ಬಸಣ್ಣಿ ಬಾ ಖ್ಯಾತಿಯ ತಾನ್ಯ ಹೋಪ್‌ಗೆ ಪ್ರಶಾಂತ್ ರಾಜ್ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಈ ಚಿತ್ರದಲ್ಲಿ ಸ್ಯಾಂಡಲ್‌ವುಡ್ ಬ್ಯೂಟಿ ರಾಗಿಣಿ ದ್ವಿವೇದಿ ಸ್ಪೆಷಲ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ಚಿತ್ರದ ಶೂಟಿಂಗ್‌ನಲ್ಲಿ ಭಾಗಿಯಾಗಿರೋ ರಾಗಿಣಿಯ ಫೋಟೋಗಳು ವೈರಲ್ ಆಗುತ್ತಿದೆ.

    ಪ್ರಶಾಂತ್ ರಾಜ್ ನಿರ್ದೇಶನದ ಈ ಚಿತ್ರ ತಮಿಳು ಮತ್ತು ಕನ್ನಡದಲ್ಲಿ ಈ ಸಿನಿಮಾ ಮೂಡಿ ಬರಲಿದೆ. ಚಿತ್ರದಲ್ಲಿ ರಾಗಿಣಿ ಪ್ರಮುಖ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಅಷ್ಟೇ ಅಲ್ಲ, ರಾಗಿಣಿಗಾಗಿಯೇ ವಿಶೇಷ ಹಾಡು ಕೂಡ ಇರಲಿದೆ. ಇದೀಗ ಆ ಸ್ಪೆಷಲ್ ಹಾಡಿಗೆನೇ ಸಖತ್ ಹಾಟ್ ಆಗಿ ಸೆಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರತಂಡದ ಜತೆ ರಾಗಿಣಿ ಕ್ಯಾಮೆರಾ ಕಣ್ಣಿಗೆ ಪೋಸ್ ಕೊಟ್ಟಿದ್ದಾರೆ. ವೆಸ್ಟ್‌ರ್ನ್‌ ಡ್ರೇಸ್‌ನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ರೆ, ಮತ್ತೊಮ್ಮೆ ಸೀರೆ ಧರಿಸಿ ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಫೋಟೋಗಳು ಭಾರೀ ವೈರಲ್ ಆಗುತ್ತಿದೆ. ಇದನ್ನೂ ಓದಿ: ದೊಡ್ಮನೆ ಕುಡಿ ಯುವರಾಜ್ ಎದುರು ವಿಲನ್ ಆಗಿ ಡಾಲಿ!

    ರೊಮ್ಯಾಂಟಿಕ್ ಲವ್ ಸ್ಟೋರಿ ಜತೆ ಬರುತ್ತಿರೋ ಪ್ರಶಾಂತ್‌ರಾಜ್ ಚಿತ್ರದಲ್ಲಿ ನಾಯಕ ಸಂತಾನಂ ಜತೆ ತಾನ್ಯ ಜತೆ ರಾಗಿಣಿ ಕೂಡ ಪವರ್‌ಫುಲ್ ಪಾತ್ರದ ಮೂಲಕ ಬರಲು ರೆಡಿಯಾಗಿದ್ದಾರೆ. ಒಟ್ನಲ್ಲಿ ಈ ಮೂವರ ಕಾಂಬಿನೇಷನ್ ತೆರೆಯ ಮೇಲೆ ಮೋಡಿ ಮಾಡುತ್ತಾ ಅಂತಾ ಕಾದುನೋಡಬೇಕಿದೆ.

  • ಲೇಡಿ ಸೂಪರ್ ಸ್ಟಾರ್ ನಯನತಾರಾ ಚಿತ್ರದ ಮೂಲಕ ಖ್ಯಾತ ಕ್ರಿಕೆಟಿಗ ಧೋನಿ ಸಿನಿ ರಂಗಕ್ಕೆ ಎಂಟ್ರಿ

    ಲೇಡಿ ಸೂಪರ್ ಸ್ಟಾರ್ ನಯನತಾರಾ ಚಿತ್ರದ ಮೂಲಕ ಖ್ಯಾತ ಕ್ರಿಕೆಟಿಗ ಧೋನಿ ಸಿನಿ ರಂಗಕ್ಕೆ ಎಂಟ್ರಿ

    ಕ್ರಿಕೆಟ್ ಜೊತೆ ಈಗಾಗಲೇ ಹಲವು ಉದ್ಯಮಗಳಲ್ಲಿ ತೊಡಗಿಕೊಂಡಿರುವ ಖ್ಯಾತ ಕ್ರಿಕೆಟಿಗೆ ಮಹೇಂದ್ರ ಸಿಂಗ್ ಧೋನಿ ಇದೀಗ ಸಿನಿಮಾ ರಂಗಕ್ಕೂ ಪದಾರ್ಪಣೆ ಮಾಡುತ್ತಿದ್ದಾರೆ. ಸದ್ಯದಲ್ಲೆ ಅವರ ನಿರ್ಮಾಣದ ಸಿನಿಮಾವೊಂದು ಸೆಟ್ಟೇರಲಿದೆ. ಧೋನಿಗೂ ಮತ್ತು ಬಾಲಿವುಡ್ ಗೂ ಸಖತ್ ನಂಟಿದ್ದರೂ, ಅವರು ತಮಿಳು ಸಿನಿಮಾ ರಂಗದ ಮೂಲಕ ಸಿನಿಮಾ ರಂಗಕ್ಕೆ ಪ್ರವೇಶಿಸುತ್ತಿರುವುದು ವಿಶೇಷ. ಇದನ್ನೂ ಓದಿ : ಕಂಗನಾಗೆ ಹುಡುಗರನ್ನು ಕಂಡರೆ ಆಗಲ್ಲವಂತೆ: ಅದಕ್ಕೆ ಮದುವೆ ಆಗಿಲ್ಲವಂತೆ

    ಈಗಾಗಲೇ ಧೋನಿ ಅವರ ಬಯೋಪಿಕ್ ಹಿಂದಿ ಮತ್ತು ತಮಿಳಿನಲ್ಲಿ ರಿಲೀಸ್ ಆಗಿತ್ತು. ಹಿಂದಿಗಿಂತಲೂ ತಮಿಳಿನಲ್ಲೇ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅಲ್ಲದೇ, ತಮಿಳಿನಲ್ಲಿ ಧೋನಿ ಅವರನ್ನು ಅಪಾರವಾಗಿ ಪ್ರೀತಿಸುವ ಅಭಿಮಾನಿಗಳು ಇದ್ದಾರಂತೆ. ಹಾಗಾಗಿ ತಮಿಳು ಸಿನಿಮಾವನ್ನು ನಿರ್ಮಾಣ ಮಾಡುವ ಮೂಲಕ ನಿರ್ಮಾಪಕರಾಗಿ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ ಧೋನಿ. ಇದನ್ನೂ ಓದಿ : ವಿಜಯ್ ದೇವರಕೊಂಡ ಹೊಸ ಗರ್ಲ್ ಫ್ರೆಂಡ್ ಅನನ್ಯ ಪಾಂಡೆ? : ಮುನಿಸಿಕೊಂಡ್ರಾ ರಶ್ಮಿಕಾ ಮಂದಣ್ಣ

    ತಮ್ಮ ಚೊಚ್ಚಲು ಸಿನಿಮಾವನ್ನು ಮಹಿಳಾ ಪ್ರಧಾನ ಚಿತ್ರಕ್ಕಾಗಿ ಮೀಸಲಿಟ್ಟಿದ್ದಾರೆ ಎನ್ನುವ ಮಾಹಿತಿ ಇದೆ. ಹಾಗಾಗಿ ಈ ಸಿನಿಮಾಗೆ ನಾಯಕಿಯಾಗಿ ಲೇಡಿ ಸೂಪರ್ ಸ್ಟಾರ್ ನಯನತಾರಾ ಆಯ್ಕೆಯಾಗುವ ಸಾಧ್ಯತೆ ಇದೆ. ಈಗಾಗಲೇ ಧೋನಿ ಮತ್ತು ನಯನತಾರಾ ಭೇಟಿಯಾಗಿದ್ದು, ಒಂದು ಹಂತದ ಮಾತುಕತೆ ಕೂಡ ಮುಗಿದಿದೆ. ಧೋನಿ ನಿರ್ಮಾಣದಲ್ಲಿ ಸಿನಿಮಾದಲ್ಲಿ ನಟಿಸಲು ನಯನತಾರಾ ಒಪ್ಪಿಕೊಂಡಿರುವ ವಿಷಯವು ಕಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ : ಕಾಂಗ್ರೆಸ್‍ನಿಂದಲೇ ಟ್ರೋಲ್‍ಗೆ ಕರೆ – ನನ್ನನ್ನು ನಾನೇ ಟ್ರೋಲ್ ಮಾಡ್ಕೋತಿನಿ ಎಂದ ರಮ್ಯಾ

    ಈ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿಯು ಲಭ್ಯವಾಗದೇ ಇದ್ದರೂ, ಅತೀ ಶೀಘ್ರದಲ್ಲೇ ಧೋನಿ ಅವರ ಎಲ್ಲ ಮಾಹಿತಿಯನ್ನು ಹಂಚಿಕೊಳ್ಳಲಿದ್ದಾರೆ ಎನ್ನುತ್ತದೆ ಅವರ ಆಪ್ತವಲಯ. ಈಗಾಗಲೇ ಸಿನಿಮಾದ ಕಥೆಯು ಆಯ್ಕೆಯಾಗಿದ್ದು, ನಿರ್ದೇಶಕರನ್ನೂ ಕೂಡ ಧೋನಿ ಗೊತ್ತು ಮಾಡಿದ್ದಾರಂತೆ. ಹೆಸರಾಂತ ನಿರ್ದೇಶಕರೇ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ ಎನ್ನುವ ಮಾಹಿತಿ ಇದೆ.

  • ತಿರುಪತಿಯಲ್ಲಿ ನಯನತಾರಾ- ವಿಘ್ನೇಶ್ ಶಿವನ್ ಮದುವೆ : ಅದ್ದೂರಿ ಪಾರ್ಟಿ ಚೆನ್ನೈನಲ್ಲಿ

    ತಿರುಪತಿಯಲ್ಲಿ ನಯನತಾರಾ- ವಿಘ್ನೇಶ್ ಶಿವನ್ ಮದುವೆ : ಅದ್ದೂರಿ ಪಾರ್ಟಿ ಚೆನ್ನೈನಲ್ಲಿ

    ಸೌತ್ ಸಿನಿರಂಗದಲ್ಲಿ ಗಲ್ಲಿ ಗಲ್ಲಿಯಲ್ಲೂ ಸೌಂಡ್ ಮಾಡ್ತಿರೋ ಸುದ್ದಿ ಅಂದ್ರೆ ನಯನತಾರಾ ಮತ್ತು ವಿಘ್ನೇಶ್ ಶಿವನ್ ಮದುವೆ ವಿಚಾರ. ಸದ್ಯ ಈ ಜೋಡಿ ಹಸೆಮಣೆ ಎರಲು ಸಜ್ಜಾಗಿದ್ದಾರೆ. ಜತೆಗೆ ಚಿತ್ರರಂಗದ ಸ್ನೇಹಿತರಿಗೆ ಚೆನ್ನೈನಲ್ಲಿ ಅದ್ದೂರಿ ಪಾರ್ಟಿ ಕೊಡೋದಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ.

    ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ವಿಘ್ನೇಶ್ ಶಿವನ್ ಮದುವೆಗೆ ದಿನಗಣನೆ ಶುರುವಾಗಿದೆ. ಕಳೆದ ಆರು ವರ್ಷಗಳಿಂದ ಡೇಟಿಂಗ್‌ನಲ್ಲಿದ್ದ ಈ ಜೋಡಿ ಮದುವೆ ಎಂಬ ಅಫಿಷಿಯಲ್ ಮುದ್ರೆ ಒತ್ತಲು ರೆಡಿಯಾಗಿದ್ದಾರೆ. ನಯನತಾರಾ ಮತ್ತು ವಿಘ್ನೇಶ್ ಶಿವನ್ ಆರು ವರ್ಷಗಳಿಂದ ಪ್ರೀತಿಸಿ ಒಬ್ಬರನೊಬ್ಬರು ಅರ್ಥ ಮಾಡಿಕೊಂಡು ಈಗ ಗುರು ಹಿರಿಯರ ಸಮ್ಮುಖದಲ್ಲಿ ಸರಳವಾಗಿ ಮದುವೆ ಆಗ್ತಿದ್ದಾರೆ. ಈ ಹಿಂದೆ ಡೆಸ್ಟಿನೇಷನ್‌ ವೆಡ್ಡಿಂಗ್‌ ಕುರಿತು ಯೋಚಿಸಿದ್ದ ಈ ಜೋಡಿ, ಈಗ ಸರಳವಾಗಿ ಮದುವೆ ಆಗಲು ನಿರ್ಧರಿಸಿದ್ದಾರೆ.

    ಜೂನ್ 9ರಂದು ಆಂಧ್ರ ಪ್ರದೇಶದ ತಿರುಮಲ ತಿರುಪತಿ ದೇವಸ್ಥಾನದಲ್ಲಿ ಕುಟುಂಬಸ್ಥರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಮದುವೆ ಆಗಲು ನಿರ್ಧರಿಸಿದ್ದಾರೆ. ಬಳಿಕ ಚಿತ್ರರಂಗದ ಸ್ನೇಹಿತರಿಗೆಂದೇ ಆರತಕ್ಷತೆ ಮಾಡಲಾಗುತ್ತಿದೆ. ಈ ಪಾರ್ಟಿಯಲ್ಲಿ ಸಮಂತಾ, ವಿಜಯ್‌ ಸೇತುಪತಿ, ರಜನೀಕಾಂತ್‌, ಅಜಿತ್‌, ದಳಪತಿ ವಿಜಯ್‌ ಹೀಗೆ ಸೌತ್‌ ಸಿನಿರಂದ ಸಿನಿ ತಾರೆಯರ ದಂಡೇ ನಯನತಾರಾ ಮತ್ತು ವಿಘ್ನೇಶ್‌ ಶಿವನ್‌ ಚನ್ನೈನ ಅದ್ದೂರಿ ಪಾರ್ಟಿಯಲ್ಲಿ ಸಾಕ್ಷಿಯಾಗಲಿದ್ದಾರೆ. ಅದಕ್ಕಾಗಿಯೇ ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ.ಇದನ್ನೂ ಓದಿ: ಬೆಂಗಳೂರಿನ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಕುರಿತು ಸಿನಿಮಾ: ಸಂದೀಪ್ ತಂದೆಯ ಪಾತ್ರದಲ್ಲಿ ಪ್ರಕಾಶ್ ರೈ

    `ಕಾತುವಾಕುಲ ಎರಡು ಕಾದಲ್’ ಚಿತ್ರದ ರಿಲೀಸ್ ವೇಳೆ ಈ ಜೋಡಿ ತಿರುಪತಿಗೆ ಭೇಟಿ ನೀಡಿತ್ತು. ಇದೀಗ ತಮ್ಮ ವೈವಾಹಿಕ ಜೀವನ ಕೂಡ ಇಲ್ಲಿಂದಲೇ ಆರಂಭಿಸಲು ನಯನತಾರಾ ಮತ್ತು ವಿಘ್ನೇಶ್ ಶಿವನ್ ನಿರ್ಧರಿಸಿದೆ.

  • ಸೂಪರ್ ಸ್ಟಾರ್ ಕಮಲ್ ಹಾಸನ್ ಚಿತ್ರದಲ್ಲಿ ಸಾಯಿ ಪಲ್ಲವಿ

    ಸೂಪರ್ ಸ್ಟಾರ್ ಕಮಲ್ ಹಾಸನ್ ಚಿತ್ರದಲ್ಲಿ ಸಾಯಿ ಪಲ್ಲವಿ

    ಕ್ಷಿಣ ಭಾರತದ ಸ್ಟಾರ್ ನಟಿಯರಲ್ಲಿ ಒಬ್ಬರಾದ ಸಾಯಿ ಪಲ್ಲವಿ ಮತ್ತೆ ಸುದ್ದಿಯಲ್ಲಿದ್ದಾರೆ. ನಟನೆಯಿಂದ ದೂರ ಉಳಿದಿದ್ದಾರೆ ಎಂಬ ಸುದ್ದಿಗೆ ಸಿನಿಮಾಗಳ ಮೂಲಕ ಸಾಯಿಪಲ್ಲವಿ ಉತ್ತರ ಕೊಟ್ಟಿದ್ದಾರೆ. `ಗಾರ್ಗಿ’ ಚಿತ್ರದ ಬೆನ್ನೆಲ್ಲೆ ಮತ್ತೊಂದು ಪ್ರಾಜೆಕ್ಟ್‌ನಲ್ಲಿ `ಪ್ರೇಮಂ’ ನಟಿ ಕಾಣಿಸಿಕೊಳ್ತಿದ್ದಾರೆ. ಸೂಪರ್ ಸ್ಟಾರ್ ಕಮಲ್ ಹಾಸನ್ ಚಿತ್ರದಲ್ಲಿ ಸಾಯಿ ಪಲ್ಲವಿ ನಟಿಸಲಿದ್ದಾರೆ.

    ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಬದಲು ಬೋಲ್ಡ್ ಆಗಿ ನಟಿಸಿ, ಆ ಪಾತ್ರವೇ ತಾವಾಗಿ ನಟಿಸೋ ಪ್ರತಿಭಾವಂತ ನಟಿ ಸಾಯಿ ಪಲ್ಲವಿ. ಗಾರ್ಗಿ ಫಸ್ಟ್ ಲುಕ್‌ನಲ್ಲಿ ಮಿಂಚಿದ ನಂತರ ತಮ್ಮ ಫ್ಯಾನ್ಸ್‌ಗೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಭಾರತ ಚಿತ್ರರಂಗದ ಸ್ಟಾರ್ ಕಮಲ್ ಹಾಸನ್ ಚಿತ್ರದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಪವರ್‌ಫುಲ್ ಪಾತ್ರದ ಮೂಲಕ ಕಮಾಲ್ ಮಾಡಲು ಸಾಯಿ ಪಲ್ಲವಿ ರೆಡಿಯಾಗಿದ್ದಾರೆ.

    ಕಮಲ್ ಹಾಸನ್ ಮತ್ತು ಶಿವಕಾರ್ತಿಕೇಯನ್ ಅವರ ಹೊಸ ಪ್ರಾಜೆಕ್ಟ್ನಲ್ಲಿ ಸಾಯಿ ಪಲ್ಲವಿ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಚಿತ್ರದಲ್ಲಿ ಶಿವಕಾರ್ತಿಕೇಯನ್‌ಗೆ ಜೋಡಿಯಾಗಿ ನಟಿಸಲಿದ್ದಾರೆ. ಈ ಚಿತ್ರಕ್ಕೆ ಕಮಲ್ ಹಾಸನ್ ಬಂಡವಾಳ ಹೂಡಲಿದ್ದಾರೆ. ರಾಜ್ ಕಮಲ್ ಬ್ಯಾನರ್‌ನ 51ನೇ ಚಿತ್ರಕ್ಕೆ ಸಾಯಿ ಪಲ್ಲವಿ ನಾಯಕಿ ಅಂತಾ ಟ್ವಿಟರ್ ಮೂಲಕ ಅಧಿಕೃತವಾಗಿ ಹಂಚಿಕೊಂಡಿದ್ದಾರೆ.

    ಶಿವಕಾರ್ತಿಕೇಯನ್ ಮತ್ತು ಸಾಯಿಪಲ್ಲವಿ ಕಮಲ್ ಹಾಸನ್ ಕೂಡ ನಟಿಸಲಿದ್ದಾರೆ. ಚಿತ್ರ ನಿರ್ಮಾಣದ ಜತೆ ಪವರ್‌ಫುಲ್ ಪಾತ್ರದಲ್ಲಿ ಕಮಲ್ ಹಾಸನ್ ನಟಿಸಲಿದ್ದಾರೆ. ವಿಶೇಷ ಅಂದ್ರೆ ಈ ಹೊಸ ಚಿತ್ರಕ್ಕೆ ಕಥೆ ಬರೆದಿರುವುದು ಕೂಡ ಕಮಲ್ ಹಾಸನ್ ಅವರೇ, ಇನ್ನು ಈ ಚಿತ್ರಕ್ಕೆ ರಾಜ್‌ಕುಮಾರ್ ಪೆರಿಯಸ್ವಾಮಿ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಇದನ್ನೂ ಓದಿ: ಜ್ಯೂ.ರವಿಚಂದ್ರನ್ ಖ್ಯಾತಿಯ ಲಕ್ಷ್ಮಿ ನಾರಾಯಣ್ ನಿಧನ

    `ಗಾರ್ಗಿ’ ಹೆಸರಿನ ಮಹಿಳಾ ಪ್ರಧಾನ ಚಿತ್ರದಲ್ಲಿ ಸಾಯಿ ಪಲ್ಲವಿ ಕಾಣಿಸಿಕೊಂಡಿದ್ದು, ಫಸ್ಟ್ ಲುಕ್ ಮೂಲಕ ಈಗಾಗಲೇ ಅಭಿಮಾನಿಗಳ ಮನಗೆದ್ದಿದ್ದಾರೆ. ಈಗ ಕಮಲ್ ಹಾಸನ್ ಅವರ ಪ್ರಾಜೆಕ್ಟ್‌ನಲ್ಲಿ ನಟಿಸಲು ಸಜ್ಜಾಗಿದ್ದಾರೆ. ಒಟ್ನಲ್ಲಿ ಈ ಸುದ್ದಿ ಕೇಳಿ ಫ್ಯಾನ್ಸ್ ದಿಲ್ ಖುಷ್ ಆಗಿದ್ದಾರೆ.

  • ಸಮಂತಾ ಫೋಟೋ ನೋಡಿ ತಲೆ ಕೆಡಿಸಿಕೊಂಡ ಅಭಿಮಾನಿಗಳು

    ಸಮಂತಾ ಫೋಟೋ ನೋಡಿ ತಲೆ ಕೆಡಿಸಿಕೊಂಡ ಅಭಿಮಾನಿಗಳು

    ದಿನದಿಂದ ದಿನಕ್ಕೆ ಖ್ಯಾತ ನಟಿ ಸಮಂತಾ ಸಖತ್ ಹಾಟ್ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪುಷ್ಪಾ ಸಿನಿಮಾ ರಿಲೀಸ್ ಆಗಿದ್ದೆ ತಡ, ಫೋಟೋ ಶೂಟ್ ಮೇಲೆ ಫೋಟೋ ಶೂಟ್ ಆಗುತ್ತಿವೆ. ವಿಶೇಷ ಕಾಸ್ಟ್ಯೂಮ್, ಹಾಟ್ ಲುಕ್ ಮತ್ತು ನಾನಾ ಭಾವ ಭಂಗಿಯಲ್ಲಿ ಸಮಂತಾ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಅವರ ಫೋಟೋಗೆ ಫಿದಾ ಆಗಿದ್ದಾರೆ. ಇದನ್ನೂ ಓದಿ : ಪ್ರಶಾಂತ್ ನೀಲ್ -ಜ್ಯೂ.ಎನ್‌ಟಿಆರ್ ವಿವಾಹ ವಾರ್ಷಿಕೋತ್ಸವ ಸಂಭ್ರಮ ಹೇಗಿತ್ತು ಗೊತ್ತಾ?

    ಮ್ಯಾಗಿಝಿನ್ ವೊಂದರ ಫೋಟೋ ಶೂಟ್ ನಲ್ಲಿ ಸಮಂತಾ ಕಾಣಿಸಿಕೊಂಡಿದ್ದು, ಕಾಸ್ಟ್ಯೂಮ್ ಅವರ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. ಅಲ್ಲದೇ ಕಾಸ್ಟ್ಯೂಮ್ ಡಿಸೈನ್ ಕೂಡ ವಿಭಿನ್ನ ಮತ್ತು ಹೊಸದಾಗಿದೆ. ಹೀಗಾಗಿ ಅಭಿಮಾನಿಗಳು ಕಾಸ್ಟ್ಯೂಮ್ ಬಗ್ಗೆಯೂ ಹೊಗಳಿಕೆ ಶುರುವಾಗಿದೆ. ಇದನ್ನೂ ಓದಿ : ಯಶ್ ಮುಂದಿನ ಚಿತ್ರ ಯಾರ ಜೊತೆ? ಹೊರಬಿತ್ತು ಬಿಗ್ ನ್ಯೂಸ್

    ಸಮಂತಾ ಈಗಾಗಲೇ ಹಲವು ಹೊಸ ಚಿತ್ರಗಳನ್ನು ಒಪ್ಪಿಕೊಂಡಿದ್ದು, ಬಾಲಿವುಡ್ ನಲ್ಲೂ ಅವರು ಕಮಾಲ್ ಮಾಡುತ್ತಿದ್ದಾರೆ. ಇನ್ನಷ್ಟೇ ಅವರ ನಟನೆಯ ಯಶೋದಾ ಸಿನಿಮಾ ರಿಲೀಸ್ ಆಗಬೇಕಿದೆ. ಅಚ್ಚರಿಯ ಸಂಗತಿ ಅಂದರೆ, ಯಶೋದಾ ಸಿನಿಮಾ ರಿಲೀಸ್ ದಿನವೇ ಅವರ ಮಾಜಿ ಪತಿ ನಾಗಚೈತನ್ಯ ಅವರ ಹಿಂದಿ ಸಿನಿಮಾ ಕೂಡ ರಿಲೀಸ್ ಆಗುತ್ತಿದೆ.

  • ಕಾಲಿವುಡ್‌ನಲ್ಲೂ ಯಶ್‌ ಮೇನಿಯಾ: 100 ಕೋಟಿ ಬಾಚಿದ `ಕೆಜಿಎಫ್ 2′

    ಕಾಲಿವುಡ್‌ನಲ್ಲೂ ಯಶ್‌ ಮೇನಿಯಾ: 100 ಕೋಟಿ ಬಾಚಿದ `ಕೆಜಿಎಫ್ 2′

    ಲ್ಲಿ ಹೋದ್ರೂ ಅಲ್ಲಿ ರಾಕಿಭಾಯ್ ಹವಾ, ಯಶ್‌ದೇ ಜಪತಪ ಅಷ್ಟರ ಮಟ್ಟಿಗೆ ಕ್ರೇಜ್ ಹುಟ್ಟು ಹಾಕಿರೋ `ಕೆಜಿಎಫ್ 2′ ಬಾಲಿವುಡ್ ಗಲ್ಲಾಪೆಟ್ಟಿಗೆಯಲ್ಲಿ ಮಾತ್ರ ಸೌಂಡ್ ಮಾಡ್ತಿರೋದಲ್ಲ. ತಮಿಳುನಾಡಿನ ಪ್ರೇಕ್ಷಕರಿಗೂ ಚಿತ್ರ ಸಿಕ್ಕಾಪಟ್ಟೆ ಮೋಡಿ ಮಾಡಿದೆ. ಅಷ್ಟೇ ಅಲ್ಲ, ಬಾಕ್ಸಾಫೀಸ್‌ನಲ್ಲಿ 100 ಕೋಟಿ ಬಾಚಿರೋ ಮೊದಲ ತಮಿಳು ಡಬ್ಬಿಂಗ್ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    `ಕೆಜಿಎಫ್’ ಚಾಪ್ಟರ್ 1 ಭರ್ಜರಿ ಹಿಟ್ ಆಗಿತ್ತು ಇದೀಗ ಚಾಪ್ಟರ್ 2 ದಾಖಲೆಯ ಮೇಲೆ ದಾಖಲೆ ಬರೆಯುತ್ತಿದೆ. ತಮಿಳಿನ `ಬೀಸ್ಟ್’ ಚಿತ್ರದ ಮುಂದೆ ರಿಲೀಸ್ ಆಗಿರೋ `ಕೆಜಿಎಫ್ 2′ ಚಿತ್ರ ದಳಪತಿ ವಿಜಯ್ ಸಿನಿಮಾಗೆ ಗೇಟ್ ಪಾಸ್ ಕೊಟ್ಟು ಬಾಕ್ಸಾಆಫೀಸ್ ಲೂಟಿ ಮಾಡ್ತಿದೆ ಯಶ್ ಸಿನಿಮಾ. `ಬೀಸ್ಟ್’ ಚಿತ್ರಕ್ಕೆ ಸೆಡ್ಡು ಹೊಡೆದು ಕಾಲಿವುಡ್ ಗಲ್ಲಾಪೆಟ್ಟಿಗೆಯಲ್ಲಿ 100 ಕೋಟಿ ಬಾಚಿರೋ ಮೊದಲ ತಮಿಳು ಡಬ್ಬಿಂಗ್ ಚಿತ್ರ ಎಂಬ ಪ್ರಶಂಸೆಗೆ ಪಾತ್ರವಾಗಿದೆ.

    ಈ ಹಿಂದೆ ಮಾರ್ಚ್ನಲ್ಲಿ ರಿಲೀಸ್ ಆಗಿದ್ದ `ಆರ್‌ಆರ್‌ಆರ್’ ಚಿತ್ರದ ಕಲೆಕ್ಷನ್ ಅನ್ನು ಮೀರಿಸಿ `ಕೆಜಿಎಫ್ 2′ ನಿಂತಿದೆ. ತಮಿಳು ವರ್ಷನ್‌ನಲ್ಲೂ ಪ್ರಶಾಂತ್ ನೀಲ್ ಮತ್ತು ಯಶ್ ಡೆಡ್ಲಿ ಕಾಂಬಿನೇಷನ್ ವರ್ಕೌಟ್ ಆಗಿದ್ದು, ತೆರೆಯ ಮೇಲೆ ರಾಕಿಭಾಯ್ ಕಮಾಲ್ ಮಾಡ್ತಿದ್ದಾರೆ. ಚಿತ್ರ ನೋಡಿ ತಮಿಳು ಪ್ರೇಕ್ಷಕರು ಕೂಡ ಯಶ್ ಆಕ್ಟಿಂಗ್‌ಗೆ ಬೋಲ್ಡ್ ಆಗಿದ್ದಾರೆ ಅನ್ನೋದಕ್ಕೆ ಗಲ್ಲಾಪೆಟ್ಟಿಗೆಯ ಕಲೆಕ್ಷನ್ ತಾಜಾ ಉದಾಹರಣೆ. ಇದನ್ನೂ ಓದಿ: ಮತ್ತೆ ಬೇಬಿ ಬಂಪ್ ಫೋಟೋಶೂಟ್‌ನಲ್ಲಿ ಸಂಜನಾ ಗಲ್ರಾನಿ: ಫೋಟೋಸ್ ವೈರಲ್

    ಇನ್ನು ಕಾಲಿವುಡ್ ಅಂಗಳದಲ್ಲಿ `ಕೆಜಿಎಫ್ 2′ 100 ಕೋಟಿ ಬಾಚಿ ಮೊದಲ ತಮಿಳು ಡಬ್ಬಿಂಗ್ ಚಿತ್ರವಾಗಿ ಸೌಂಡ್ ಮಾಡ್ತಿದ್ದು, ಒಟ್ಟು ಕಲೆಕ್ಷನ್‌ನಲ್ಲಿ 1000 ಸಾವಿರ ಕೋಟಿ ಗಡಿ ದಾಟಿ ಕಲೆಕ್ಷನ್ ಮಾಡಿದೆ. ಎಲ್ಲಾ ವುಡ್‌ನಲ್ಲೂ ಯಶ್ ಮೇನಿಯಾ ಜೋರಾಗಿದೆ.

  • ರಜನಿಕಾಂತ್ ಜತೆ ಶಿವರಾಜ್ ಕುಮಾರ್ ನಟಿಸುವುದು ಪಕ್ಕಾ: ಬೆಂಗಳೂರಿನಲ್ಲಿ ‘ಬೀಸ್ಟ್’ ಡೈರೆಕ್ಟರ್

    ರಜನಿಕಾಂತ್ ಜತೆ ಶಿವರಾಜ್ ಕುಮಾರ್ ನಟಿಸುವುದು ಪಕ್ಕಾ: ಬೆಂಗಳೂರಿನಲ್ಲಿ ‘ಬೀಸ್ಟ್’ ಡೈರೆಕ್ಟರ್

    ಸೂಪರ್ ಸ್ಟಾರ್ ರಜನಿಕಾಂತ್ ಅವರ ಹೊಸ ಸಿನಿಮಾದಲ್ಲಿ ಸೆಂಚ್ಯುರಿ ಸ್ಟಾರ್ ಶಿವರಾಜ್ ಕುಮಾರ್ ನಟಿಸಲಿದ್ದಾರೆ ಎನ್ನುವ ಸುದ್ದಿಯನ್ನು ಈ ಹಿಂದೆ ಪಬ್ಲಿಕ್ ಟಿವಿ ಡಿಜಿಟೆಲ್ ಬ್ರೇಕ್ ಮಾಡಿತ್ತು. ಆದರೆ, ನಿರ್ದೇಶಕರು ಇನ್ನೂ ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡದೇ ಇರುವ ಕಾರಣಕ್ಕಾಗಿ ಈ ಸುದ್ದಿ ಗಾಂಧಿನಗರದಲ್ಲಿ ಗಿರಕಿ ಹೊಡೆಯುತ್ತಿದೆ ಎಂದು ಬರೆಯಲಾಗಿತ್ತು. ಆದರೆ, ಇದೀಗ ರಜನಿ ಜತೆ ಶಿವರಾಜ್ ಕುಮಾರ್ ಸಿನಿಮಾ ಮಾಡುವುದು ಪಕ್ಕಾ ಆಗಿದೆ. ಇದನ್ನೂ ಓದಿ : ಪ್ರಶಾಂತ್ ನೀಲ್ -ಜ್ಯೂ.ಎನ್‌ಟಿಆರ್ ವಿವಾಹ ವಾರ್ಷಿಕೋತ್ಸವ ಸಂಭ್ರಮ ಹೇಗಿತ್ತು ಗೊತ್ತಾ?

    ರಜನಿ ಮತ್ತು ಶಿವರಾಜ್ ಕುಮಾರ್ ಕಾಂಬಿನೇಷನ್ ಚಿತ್ರವನ್ನು ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನ ಮಾಡುತ್ತಿದ್ದು, ಶಿವಣ್ಣನ ಮನೆಗೆ ನೆಲ್ಸನ್ ದಿಲೀಪ್ ಕುಮಾರ್ ಭೇಟಿ ನೀಡಿ, ಕಥೆ ಮತ್ತು ಪಾತ್ರದ ವಿವರಣೆಯನ್ನೂ ನೀಡಿದ್ದಾರೆ. ಪಾತ್ರವು ತೆರೆಯ ಮೇಲೆ ತುಂಬಾ ಹೊತ್ತು ಇಲ್ಲದೇ ಇದ್ದರೂ ಅದೊಂದು ಪವರ್ ಫುಲ್ ಪಾತ್ರವಾಗಿದ್ದು, ಆ ಪಾತ್ರವನ್ನು ಶಿವರಾಜ್ ಕುಮಾರ್ ಒಪ್ಪಿದ್ದಾರೆ. ಇದನ್ನೂ ಓದಿ : ಯಶ್ ಮುಂದಿನ ಚಿತ್ರ ಯಾರ ಜೊತೆ? ಹೊರಬಿತ್ತು ಬಿಗ್ ನ್ಯೂಸ್

    ಸಾಮಾನ್ಯವಾಗಿ ಶಿವರಾಜ್ ಕುಮಾರ್ ಪರಭಾಷಾ ಚಿತ್ರಗಳಲ್ಲಿ ನಟಿಸುವುದಕ್ಕೆ ಒಪ್ಪಿಕೊಳ್ಳುವುದಿಲ್ಲ. ಆದರೆ, ರಜನಿ ಮೇಲಿರುವ ಗೌರವದಿಂದಾಗಿ ಈ ಚಿತ್ರವನ್ನು ಒಪ್ಪಿದ್ದಾರೆ ಎನ್ನಲಾಗುತ್ತಿದೆ. ಇದೇ ಮೊದಲ ಬಾರಿಗೆ ಶಿವರಾಜ್ ಕುಮಾರ್ ಮತ್ತು ರಜನಿ ನಟನೆಯ ಸಿನಿಮಾ ತೆರೆಯ ಮೇಲೆ ಬರುತ್ತಿದೆ. ಇದನ್ನೂ ಓದಿ : ಹಾಲಿವುಡ್‌ಗೆ ಹಾರಲಿದ್ದಾರೆ ಬಾಲಿವುಡ್ ರಾಧೆ ಆಲಿಯಾ ಭಟ್

    ಈ ಹಿಂದೆ ಬಾಲಕೃಷ್ಣ ನಟನೆಯ ‘ಗೌತಮಪುತ್ರ ಶಾತಕರ್ಣಿ’ ಸಿನಿಮಾದಲ್ಲಿ ಶಿವರಾಜ್ ಕುಮಾರ್ ನಟಿಸಿದ್ದರು. ಅದನ್ನು ಬಿಟ್ಟರೆ, ಪರಭಾಷಾ ಸಿನಿಮಾಗಳಲ್ಲಿ ನಟಿಸುವಂತೆ ಅವಕಾಶ ಬಂದರೂ, ನಿರಾಕರಿಸಿದ್ದಾರೆ. ಹಾಗಾಗಿ ಸೂಪರ್ ಸ್ಟಾರ್ ನಟನೆಯ 169ನೇ ಚಿತ್ರದಲ್ಲಿ ಶಿವರಾಜ್ ಕುಮಾರ್ ಇರಲಿದ್ದಾರಾ ಎನ್ನುವ ಕುತೂಹಲ ಅವರ ಅಭಿಮಾನಿಗಳದ್ದು.

  • ಯಶೋದಾ ಫಸ್ಟ್ ಗ್ಲಿಂಪ್ಸ್ ರಿಲೀಸ್: ಜೈ ಹೋ ಅಂದ ಸಮಂತಾ ಅಭಿಮಾನಿಗಳು

    ಯಶೋದಾ ಫಸ್ಟ್ ಗ್ಲಿಂಪ್ಸ್ ರಿಲೀಸ್: ಜೈ ಹೋ ಅಂದ ಸಮಂತಾ ಅಭಿಮಾನಿಗಳು

    ಮಂತಾ ಅವರೇ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಯಶೋದಾ ಸಿನಿಮಾದ ಫಸ್ಟ್ ಗ್ಲಿಂಪ್ಸ್ ರಿಲೀಸ್ ಆಗಿದ್ದು, ಅಭಿಮಾನಿಗಳು ಸಮಂತಾ ಲುಕ್ ಕಂಡು ಫಿದಾ ಆಗಿದ್ದಾರೆ. ಇದು ಕೂಡ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಈ ಮೂಲಕ ಸಮಂತ್ ಮತ್ತೊಂದು ಇನ್ನಿಂಗ್ಸ್ ಶುರು ಮಾಡಲಿದ್ದಾರೆ. ಈ ಗ್ಲಿಂಪ್ಸ್ ಜೊತೆಗೆ ಯಶೋದ ಸಿನಿಮಾದ ಸಣ್ಣ ವಿಡಿಯೋ ತುಣುಕನ್ನು ಕೂಡ ಇಂದು ರಿಲೀಸ್ ಮಾಡಲಾಗಿದ್ದು, ಆ ವಿಡಿಯೋ ಕುತೂಹಲ ಮೂಡಿಸುತ್ತಿದೆ. ಸಮಂತಾ ಅವರ ನಟನೆ ಕೂಡ ಕಾಯುವಿಕೆಗೆ ಸಾಕ್ಷಿಯಾಗಿದೆ. ಈಗಾಗಲೇ ಸಿನಿಮಾದ ಶೇ.80ರಷ್ಟು ಶೂಟಿಂಗ್‌ ಮುಗಿದಿದ್ದು, ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಲ್ಲಿ ತೊಡಗಿದೆ ಚಿತ್ರತಂಡ. ಇದನ್ನೂ ಓದಿ : ಶತ್ರುಘ್ನಾ ಸಿನ್ಹಾ ಮೇಲೆ ಲೈಂಗಿಕ ಹಗರಣ ದಂಧೆ ಆರೋಪ : ನಟಿ ವಿರುದ್ಧ ತಿರುಗಿ ಬಿದ್ದ ಸಿನ್ಹಾ ಕುಟುಂಬ

    ಶ್ರೀದೇವಿ ಪ್ರೊಡಕ್ಷನ್‌ನ 14ನೇ ಸಿನಿಮಾ ಇದಾಗಿದ್ದು, ಹರಿ ಮತ್ತು ಹರೀಶ್‌ ಈ ಚಿತ್ರಕ್ಕೆ ನಿರ್ದೇಶನ ಮಾಡಿದರೆ, ಶಿವಲೆಂಕಾ ಕೃಷ್ಣ ಪ್ರಸಾದ್‌ ನಿರ್ಮಿಸಿದ್ದಾರೆ. ಸಿನಿಮಾ ಬಗ್ಗೆ ಹೇಳಿಕೊಳ್ಳುವ ನಿರ್ಮಾಪಕರು, ಫ್ಯಾಮಿಲಿ ಮ್ಯಾನ್‌ 2 ವೆಬ್‌ ಸಿರೀಸ್‌ ಮೂಲಕ ಪ್ಯಾನ್‌ ಇಂಡಿಯಾ ಜನರನ್ನು ಸಮಂತಾ ತಲುಪಿದ್ದಾರೆ. ಆ ಒಂದು ಕಾರಣಕ್ಕೆ ಎಲ್ಲಿಯೂ ಕಾಂಪ್ರಮೈಸ್‌ ಆಗದೇ, ಎಲ್ಲೆಡೆ ಸಲ್ಲುವ ಸಿನಿಮಾ ಮಾಡಿದ್ದೇವೆ. ಈ ಸಿನಿಮಾದಲ್ಲಿನ ಸಮಂತಾ ಅವರ ಡೆಡಿಕೇಷನ್‌ ತೆರೆಮೇಲೆ ಕಾಣಿಸಲಿದೆ. ಅವರ ನಟನೆಯನ್ನು ನೋಡುವುದೇ ಚಂದʼ ಎನ್ನುತ್ತಾರೆ. ಇದನ್ನೂ ಓದಿ : ಸ್ಟಾರ್ ನಟಿ ಪೂಜಾ ಹೆಗಡೆ ನಿದ್ದೆಗೆಡಿಸಿದ ಸಾಲು ಸಾಲು ಸೋಲು

    ಚಿತ್ರೀಕರಣದ ಬಗ್ಗೆಯೂ ಮಾಹಿತಿ ನೀಡುವ ಅವರು, ಚಿತ್ರದ ಕ್ಲೈಮ್ಯಾಕ್ಸ್‌ ಹಂತವನ್ನು ಕೊಡೈಕೆನಾಲ್‌ನಲ್ಲಿ ಏಪ್ರಿಲ್‌ನಲ್ಲಿ ಚಿತ್ರೀಕರಿಸಿದ್ದೇವೆ. ಶೇ. 80 ಭಾಗದ ಶೂಟಿಂಗ್‌ ಮುಕ್ತಾಯವಾಗಿದ್ದು, ಹೈದರಾಬಾದ್‌ನಲ್ಲಿ ಕೊನೇ ಶೆಡ್ಯೂಲ್‌ ನಡೆಯುತ್ತಿದೆ. ಜೂನ್‌ 1ಕ್ಕೆ ಶೂಟ್‌ ಮುಗಿಸಲಿದ್ದೇವೆ. ಇಡೀ ಸಿನಿಮಾದಲ್ಲಿ ಗ್ರಾಫಿಕ್ಸ್‌ ಕೆಲಸ ಪ್ರಮುಖ ಪಾತ್ರ ವಹಿಸಲಿದೆ. ನಿರ್ದೇಶಕರ ಕೆಲಸವೂ ಇಂಪ್ರೆಸಿವ್‌ ಆಗಿದೆ ಎಂದರು. ಇದನ್ನೂ ಓದಿ : ಪ್ರಶಾಂತ್ ನೀಲ್ ಭಾರತೀಯ ಸಿನಿಮಾ ರಂಗದ ವೀರಪ್ಪನ್ : ಆರ್.ಜಿ.ವಿ

    ಅಂದಹಾಗೆ, ಇದು ಕೇವಲ ತೆಲುಗಿನಲ್ಲಿ ಮಾತ್ರವಲ್ಲದೆ, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿಯಲ್ಲಿ ಬಿಡುಗಡೆಯಾಗಲಿದೆ. ಬಿಡುಗಡೆಗೆ ದಿನಾಂಕವೂ ನಿಗದಿಯಾಗಿದ್ದು, ಆಗಸ್ಟ್‌ 12ಕ್ಕೆ ತೆರೆಗೆ ಬರಲಿದೆ. ಚಿತ್ರದಲ್ಲಿ ಸ್ಟಾರ್‌ ನಟರ ದಂಡೇ ಇದೆ. ವರಲಕ್ಷ್ಮೀ ಶರತ್‌ಕುಮಾರ್‌, ಉನ್ನಿ ಮುಕುಂದನ್‌, ರಾವ್‌ ರಮೇಶ್‌, ಮುರಳಿ ಶರ್ಮಾ, ಸಂಪತ್‌ ರಾಜ್, ಶತ್ರು, ಮಧುರಿಮಾ, ಕಲ್ಪಿಕಾ ಗಣೇಶ್‌, ದಿವ್ಯಾ ಶ್ರೀಪಾದ್‌, ಪ್ರಿಯಾಂಕಾ ಶರ್ಮಾ ಸೇರಿ ಹಲವರಿದ್ದಾರೆ.