Tag: Kollywood

  • ಎರಡೇ ದಿನಕ್ಕೆ 100 ಕೋಟಿ ಕ್ಲಬ್ ಸೇರಿದ ಕಮಲ್ ಹಾಸನ್ ನಟನೆಯ `ವಿಕ್ರಮ್’ ಚಿತ್ರ

    ಎರಡೇ ದಿನಕ್ಕೆ 100 ಕೋಟಿ ಕ್ಲಬ್ ಸೇರಿದ ಕಮಲ್ ಹಾಸನ್ ನಟನೆಯ `ವಿಕ್ರಮ್’ ಚಿತ್ರ

    ಬಾಲಿವುಡ್ ಚಿತ್ರರಂಗಕ್ಕೆ ದಕ್ಷಿಣದ ಸಿನಿಮಾಗಳು ಪೈಪೋಟಿ ಕೊಡುತ್ತಲೇ ಬಂದಿದೆ. ಬಾಹುಬಲಿ, ಪುಷ್ಪ, ಕೆಜಿಎಫ್ 2 ಭರ್ಜರಿ ಸಕ್ಸಸ್‌ನಿಂದ ಬಾಲಿವುಡ್ ಮಂಕಾಗಿದೆ. ಹಿಂದಿ ಚಿತ್ರರಂಗಕ್ಕೆ ಇದೀಗ ದಕ್ಷಿಣದ `ವಿಕ್ರಮ್’ ಸಿನಿಮಾ ಬಿಗ್ ಫೈಟ್ ಕೊಡುತ್ತಿದೆ. ರಿಲೀಸ್ ಆದ ಎರಡೇ ದಿನಕ್ಕೆ 100 ಕೋಟಿ ಕ್ಲಬ್ ಸೇರಿದೆ. ಈ ಮೂಲಕ ಬಾಕ್ಸಾಫೀಸ್‌ನಲ್ಲಿ `ವಿಕ್ರಮ್’ ಚಿತ್ರ ಹೊಸ ದಾಖಲೆ ಬರೆದಿದೆ.

    ಕಾಲಿವುಡ್ ಸ್ಟಾರ್ ಕಮಲ್ ಹಾಸನ್ `ವಿಕ್ರಮ್’ ಚಿತ್ರದ ಮೂಲಕ ಸ್ಟ್ರಾಂಗ್ ಆಗಿ ಕಮ್ ಬ್ಯಾಕ್ ಮಾಡಿದ್ದಾರೆ. ನಿರ್ದೇಶಕ ಲೋಕೇಶ್ ಕನಗರಾಜ್ ಮತ್ತು ಕಮಲ್ ಹಾಸನ್ ಕಾಂಬಿನೇಷನ್ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಕಮಾಲ್ ಮಾಡುತ್ತಿದೆ. ರಿಲೀಸ್ ಆದ ಎರಡೇ ದಿನಕ್ಕೆ 100 ಕೋಟಿ ಕಲೆಕ್ಷನ್ ಮಾಡಿ, ಧೂಳೆಬ್ಬಿಸಿದೆ. ಜೂನ್ 3ರಂದು ರಿಲೀಸ್ ಆದ ವಿಕ್ರಮ್ ಥಿಯೇಟರ್‌ನಲ್ಲಿ ಭರ್ಜರಿ ಸೌಂಡ್ ಮಾಡುತ್ತಿದೆ.

    ಲೋಕೇಶ್ ಕನಗರಾಜ್ ಅವರು ಈ ಬಾರಿ ಒಂದು ರೀವೆಂಜ್ ಸ್ಟೋರಿ ತೋರಿಸಿದ್ದಾರೆ. ಕಮಲ್ ಜತೆ ವಿಜಯ್ ಸೇತುಪತಿ, ಫಹಾದ್ ಫಾಸಿಲ್ ಜೀವತುಂಬಿದ್ದಾರೆ. ಹಿಂದಿಯ `ಸಾಮ್ರಾಟ್ ಪೃಥ್ವಿರಾಜ್’ ಚಿತ್ರಕ್ಕೆ ಸೆಡ್ಡು ಹೊಡೆದು ವಿಕ್ರಮ್ ಸಿನಿಮಾ 100 ಕೋಟಿ ಕ್ಲಬ್ ಮಾಡಿದೆ. ಇದನ್ನೂ ಓದಿ: ಬೇಬಿ ಶವರ್‌ನಲ್ಲಿ ಮಿಂಚಿದ ಪ್ರಣೀತಾ ಸುಭಾಷ್

    ಒಟ್ಟು ಬಾಕ್ಸಾಫೀಸ್‌ನಲ್ಲಿ 62 ಕೋಟಿ ಬಾಚಿತ್ತು. ಇದೀಗ ಶನಿವಾರದ ಕಲೆಕ್ಷನ್ ಸೇರಿ 100 ಕೋಟಿ ಗಳಿಕೆ ಮಾಡಿದೆ. ಇನ್ನು ಮುಂಬರುವ ದಿನಗಳಲ್ಲಿ ಕಮಲ್‌ ಹಾಸನ್‌ ಸಿನಿಮಾ ಯಾವ ರೀತಿ ಕಲೆಕ್ಷನ್ ಮಾಡಲಿದೆ ಕಾದುನೋಡಬೇಕಿದೆ.

  • ಬೇಗಂ ಅವತಾರದಲ್ಲಿ ಕಾಣಿಸಿಕೊಂಡ ಸಮಂತಾ

    ಬೇಗಂ ಅವತಾರದಲ್ಲಿ ಕಾಣಿಸಿಕೊಂಡ ಸಮಂತಾ

    ಕ್ಷಿಣ ಭಾರತದ ಸ್ಟಾರ್ ನಟಿ ಸಮಂತಾ, ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಸಮಂತಾ ಸಿನಿಮಾ, ನಟನೆಯ ವಿಷ್ಯವಾಗಿ ಅದೆಷ್ಟು ಸುದ್ದಿಯಲಲಿರುತ್ತಾರೋ ಅಷ್ಟೇ ವಯಕ್ತಿಕ ವಿಚಾರವಾಗಿ ಅಷ್ಟೇ ಸುದ್ದಿಯಲ್ಲಿರುತ್ತಾರೆ. ಈಗ ಆಪಲ್ ಬ್ಯೂಟಿ ಸಮಂತಾ ಹೊಸ ಫೋಟೋಶೂಟ್ ವಿಷ್ಯವಾಗಿ ಸಖತ್ ಸುದ್ದಿ ಮಾಡ್ತಿದ್ದಾರೆ.

    ಚಿತ್ರರಂಗದಲ್ಲಿ ಸದ್ಯ ಸಮಂತಾದೇ ಸದ್ದು ಸುದ್ದಿ, ಕಳೆದ ಸಲ ಹಾಟ್ ಫೋಟೋಶೂಟ್‌ನಿಂದ ಗಮನ ಸೆಳೆದಿದ್ದ ನಟಿ ಈಗ ಮುಸ್ಲಿಂ ವರ್ಗದ ಹುಡುಗಿಯಾಗಿ ಬೇಗಂ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ರೆಡ್ ಕಲರ್ ಡ್ರೆಸ್‌ನಲ್ಲಿ ಮಿರ ಮಿರ ಅಂತಾ ಮಿಂಚಿದ್ದಾರೆ. ಸಮಂತಾ ನ್ಯೂ ಲುಕ್ ನೋಡಿ ಫ್ಯಾನ್ಸ್ ಕೂಡ ಖುಷಿಪಟ್ಟಿದ್ದಾರೆ. ಈ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಇದನ್ನೂ ಓದಿ: ಸರಾಯಿ ಜೊತೆ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ನಟಿ

    ಇತ್ತೀಚೆಗಷ್ಟೇ ತೆರೆಕಂಡಿದ್ದ ಕಾತುವಾಕುಲ ಎರಡು ಕಾದಲ್ ಚಿತ್ರದಲ್ಲಿ ಖತೀಜಾ ಪಾತ್ರದಲ್ಲಿ ಸಮಂತಾ ಬಣ್ಣ ಹಚ್ಚಿದ್ದರು. ಈ ಚಿತ್ರದ ಸಮಂತಾ ಸಾಕಷ್ಟು ಲುಕ್ ರಿವೀಲ್ ಆಗಿತ್ತು. ಆದರೆ ಖತೀಜಾ ಪಾತ್ರದ ಈ ಲುಕ್ ರಿವೀಲ್ ಆಗಿರಲಿಲ್ಲ. ಈಗ ಸಮಂತಾ ರೆಡ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿರೋ ಫೋಟೋಗಳು ಸಖತ್ ವೈರಲ್ ಆಗುತ್ತಿದೆ. ಸಮಂತಾ ಫ್ಯಾನ್ಸ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಜೂನ್ 3ಕ್ಕೆ ತೆರೆಮೇಲೆ ಸಂದೀಪ್ ಉನ್ನಿಕೃಷ್ಣನ್ ಜೀವನಚರಿತ್ರೆ

    ಜೂನ್ 3ಕ್ಕೆ ತೆರೆಮೇಲೆ ಸಂದೀಪ್ ಉನ್ನಿಕೃಷ್ಣನ್ ಜೀವನಚರಿತ್ರೆ

    ಬೆಂಗಳೂರಿನಲ್ಲೇ ವಾಸವಿದ್ದ ಹುತಾತ್ಮ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಜೀವನ ಕುರಿತಾಗಿ ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ‘ಮೇಜರ್’ ಸಿನಿಮಾ‌ ಬರುತ್ತಿದೆ. ಇದೇ ತಿಂಗಳ ಜೂ.3 ರಂದು ಸಿನಿಮಾ ತೆರೆಗೆ ತೆರೆ ಕಾಣುತ್ತಿತ್ತು,  ಹೀಗಾಗಿ ಇಡೀ ತಂಡ ಬೆಂಗಳೂರಿಗೆ ಆಗಮಿಸಿ ಪ್ರಚಾರ ನಡೆಸಿತು. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕನಿಗೆ ಆಕ್ಸ್ ಫರ್ಡ್ ಯೂನಿವರ್ಸಿಟಿಯಲ್ಲಿ ಅವಮಾನ

    ತೆಲುಗು ನಟ ಅಡಿವಿ ಶೇಷ್ ಅವರು ಸಂದೀಪ್ ಉನ್ನಿಕೃಷ್ಣನ್ ಪಾತ್ರ ನಿರ್ವಹಿಸುವುದರ ಜೊತೆಗೆ ಸಿನಿಮಾಗೆ ಕಥೆ ಕೂಡ ಬರೆದಿದ್ದು, ಪ್ರಿನ್ಸ್ ಮಹೇಶ್ ಬಾಬು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಈ ಬಗ್ಗೆ ಮಾಹಿತಿ ಹಂಚಿಕೊಂಡ ಅಡಿವಿ ಶೇಷ್, “ಸಂದೀಪ್ ಸರ್ ಪಾತ್ರ ಮಾಡುವುದು‌ ದೊಡ್ಡ ಚಾಲೆಂಜ್ ಆಗಿತ್ತು. ನಾನು ಲೆಫ್ಟ್ ಹ್ಯಾಂಡ್, ಸಂದೀಪ್ ಸಾರ್ ರೈಟ್ ಹ್ಯಾಂಡ್. ಸಂದೀಪ್ ಸಾರ್ ಬಾಲ್ಯ, ಕಾಲೇಜ್ ಮತ್ತು ಸೇನೆಗೆ ಸೇರುವ ವಯಸ್ಸು ಮಾಡೋದು ಕಷ್ಟ ಆಯಿತು. ತೂಕ ಕಡಿಮೆ ಮಾಡಿಕೊಂಡು ನಂತರ ಮತ್ತೆ ತೂಕ ಜಾಸ್ತಿ ಮಾಡಿಕೊಳ್ಳಬೇಕಿತ್ತು. ಅದು ನನಗೆ ಸವಾಲಿನ ಕೆಲಸವಾಗಿತ್ತು. ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ. ಪ್ರಿನ್ಸ್ ಮಹೇಶ್ ಬಾಬು ಈ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ” ಎಂದರು. ಕನ್ನಡದಲ್ಲಿ ಕಿಚ್ಚ ಸುದೀಪ್ ಹಾಗೂ ರಕ್ಷಿತ್ ಶೆಟ್ಟಿ ನನ್ನ ಫೇವರೇಟ್ ನಟರು ಎಂದು ಶ್ಲ್ಯಾಘಿಸಿದರು.  ಇದನ್ನೂ ಓದಿ : ನಟ ಸಲ್ಮಾನ್ ಖಾನ್ ಹತ್ಯೆಗೆ ಸ್ಕೆಚ್ : ಭದ್ರತೆ ಹೆಚ್ಚಿಸಲು ನಿರ್ಧಾರ

    ಮೇಜರ್ ಸಂದೀಪ್ ತಂದೆ-ತಾಯಿ ಬೆಂಗಳೂರಿನಲ್ಲಿ ವಾಸವಾಗಿರುವುದರಿಂದ ಅವರ ಪೋಷಕರು ಹಾಗೂ ಅಭಿಮಾನಿಗಳಿಗಾಗಿ ಚಿತ್ರತಂಡ ಬೆಂಗಳೂರಿನಲ್ಲಿ ಉಚಿತ ಶೋ ಆಯೋಜಿಸಿತ್ತು. ಮುಂಬೈ ದಾಳಿಯಲ್ಲಿ ಹುತಾತ್ಮರಾದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಜೀವನ ಆಧರಿಸಿ ‘ಮೇಜರ್’ ಸಿನಿಮಾ ತೆರೆಗೆ ಬರುತ್ತಿದೆ. ಮುಂಬೈ ದಾಳಿಯ ಕಥೆ ಸಿನಿಮಾದಲ್ಲಿ ಹೈಲೈಟ್ ಆಗಲಿದೆ. ಅನೇಕ ಜನರ ಜೀವ ಉಳಿಸಿದ ಸಂದೀಪ್​ ಅವರಿಗೆ ಗೌರವ ಸೂಚಿಸುವ ನಿಟ್ಟಿನಲ್ಲಿ ಈ ಸಿನಿಮಾ ಸಿದ್ಧಗೊಂಡಿದೆ. ಈಗಾಗಲೇ ರಿಲೀಸ್ ಆಗಿರುವ ಟ್ರೇಲರ್ ಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.

  • ಕಿಚ್ಚ ಸುದೀಪ್ ಅವರನ್ನ ಕಾಪಿ ಹೊಡೆದ ಸ್ಟಾರ್ ನಟ ಕಮಲ್ ಹಾಸನ್

    ಕಿಚ್ಚ ಸುದೀಪ್ ಅವರನ್ನ ಕಾಪಿ ಹೊಡೆದ ಸ್ಟಾರ್ ನಟ ಕಮಲ್ ಹಾಸನ್

    ನ್ನಡ ಸಿನಿಮಾಗಳ ಮಾರುಕಟ್ಟೆ ಈಗ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ. ಅದಲ್ಲದೇ ಯಶ್, ಸುದೀಪ್ ಇಂತಹ ಸ್ಟಾರ್‌ಗಳನ್ನ ಎಲ್ಲಾ ರಂಗದ ಸ್ಟಾರ್‌ಗಳು ಫಾಲೋವ್ ಮಾಡ್ತಿದ್ದಾರೆ. ಇನ್ನು ಕಿಚ್ಚ ಸುದೀಪ್ ತೋರಿಸಿಕೊಟ್ಟ ಹಾದಿಯಲ್ಲೇ ಕಾಲಿವುಡ್ ಸ್ಟಾರ್ ಕಮಲ್ ಹಾಸನ್  ಫಾಲೋವ್ ಮಾಡುತ್ತಿದ್ದಾರೆ.

    ಸುದೀಪ್ ಕನ್ನಡ ಮಾತ್ರವಲ್ಲದೇ ಪರಭಾಷಾ ಚಿತ್ರರಂಗದಲ್ಲೂ ಗುರುತಿಸಿಕೊಂಡ ಮಹಾನ್ ಪ್ರತಿಭೆ, ಅಕ್ಕ ಪಕ್ಕದ ರಾಜ್ಯದ ಸೂಪರ್ ಸ್ಟಾರ್‌ಗಳ ಜತೆಗೂ ಕಿಚ್ಚನಿಗೆ ಒಳ್ಳೆಯ ಒಡನಾಟವಿದೆ. ಕಿಚ್ಚನ ಸಿನಿಮಾ ಪ್ರಚಾರದ ವೈಖರಿ ಪರಭಾಷಾ ಮಂದಿಗೂ ಇಷ್ಟವಾಗುತ್ತಿದೆ. `ವಿಕ್ರಾಂತ್ ರೋಣ’ ಚಿತ್ರದ ಪ್ರಚಾರವನ್ನ ಭಿನ್ನವಾಗಿ ಮಾಡಿದ್ದರು. ದುಬೈನ ಬುರ್ಜ್ ಖಲೀಫಾ ಕಟ್ಟಡದ ಮೇಲೆ ಟೈಟಲ್ ಲಾಂಚ್ ಮಾಡಿದ್ದರು. ಕಮಲ್ ಹಾಸನ್ ಕೂಡ ಇದೇ ಟ್ರೇಂಟ್ ಫಾಲೋವ್ ಮಾಡುತ್ತಿದ್ದಾರೆ.

    ಕಮಲ್ ಹಾಸನ್ ನಟನೆಯ ನಿರೀಕ್ಷಿತ `ವಿಕ್ರಮ್’ ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ. ಜೂನ್ 1ರಂದು ರಾತ್ರಿ 8.10ಕ್ಕೆ ಬುರ್ಜ್ ಖಲೀಫಾ ಕಟ್ಟಡದ ಮೇಲೆ ಚಿತ್ರದ ಕೆಲ ತುಣುಕುಗಳನ್ನು ಬಿತ್ತರಿಸಲು ಸಕಲ ಸಿದ್ಧತೆ ಮಾಡಲಾಗಿದೆ. ವಿಕ್ರಮ್ ಚಿತ್ರದ ತುಣುಕುಗಳನ್ನು ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ. ಈ ಮೂಲಕ ಕಿಚ್ಚನ ಟ್ರೆಂಡ್ ಅನ್ನು ಕಮಲ್ ಹಾಸನ್ ಅನುಸರಿಸುತ್ತಿದ್ದಾರೆ. ಇದನ್ನು ಓದಿ:`ಕೆಜಿಎಫ್’ ನಿರ್ದೇಶಕನಿಗೆ ಟಕ್ಕರ್ ಕೊಡಲು ಸಜ್ಜಾದ `ಪುಷ್ಪ’ ಡೈರೆಕ್ಟರ್ ಸುಕುಮಾರ್

    ರಾಜ್ ಕಮಲ್ ಫಿಲ್ಮ್÷್ಸ ಇಂಟರ್‌ನ್ಯಾಷನಲ್ ನಿರ್ಮಾಣದ `ವಿಕ್ರಮ್’ ಜೂನ್ 3ಕ್ಕೆ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ಕಮಲ್ ಹಾಸನ್ ಅವರ ವಿಕ್ರಮಾವತಾರ ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ.

  • ಲೀಕ್ ಆಯ್ತು ನಯನತಾರಾ-ವಿಘ್ನೇಶ್ ಶಿವನ್ ಮದುವೆ ಆಮಂತ್ರಣ

    ಲೀಕ್ ಆಯ್ತು ನಯನತಾರಾ-ವಿಘ್ನೇಶ್ ಶಿವನ್ ಮದುವೆ ಆಮಂತ್ರಣ

    ಕಾಲಿವುಡ್‌ನ ಲೇಡಿ ಸೂಪರ್ ಸ್ಟಾರ್ ನಯನತಾರಾ ಮದುವೆಯ ವಿಚಾರ ಸಖತ್ ಸುದ್ದಿ ಮಾಡುತ್ತಿದೆ. ಕಳೆದ ಆರು ವರ್ಷಗಳಿಂದ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಪ್ರೀತಿಸುತ್ತಿದ್ದು, ಈಗ ಮದುವೆಯ ಆಮಂತ್ರಣ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಸಾಕಷ್ಟು ಸಿನಿಮಾಗಳ ಮೂಲಕ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿರುವ ನಯನತಾರಾ ಮದುವೆಯ ವಿಚಾರ ಸಖತ್ ಸೌಂಡ್ ಮಾಡುತ್ತಿದೆ. ಕಳೆದ ವರ್ಷಗಳಿಂದ ಒಬ್ಬರನೊಬ್ಬರು ಪ್ರೀತಿಸುತ್ತಿರುವ ಜೋಡಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಮದುವೆಗೆ ದಿನಗಣಣೆ ಶುರುವಾಗಿದೆ. ಇದೀಗ ನಯನತಾರಾ ಮತ್ತು ವಿಘ್ನೇಶ್ ಮದುವೆ ಆಮಂತ್ರಣ ಲೀಕ್ ಆಗಿ, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಬೇಬಿ ಬಂಪ್ ಫೋಟೋ ಹಂಚಿಕೊಂಡ ಸೋನಮ್ ಕಪೂರ್

    ಬಾಲಿವುಡ್ ಸ್ಟಾರ್ ಕತ್ರಿನಾ ಮತ್ತು ವಿಕ್ಕಿ ಕೌಶಲ್ ಜೋಡಿಯ ಮದುವೆಯ ಜವಬ್ದಾರಿ ಹೊತ್ತಿಕೊಂಡಿದ್ದ ವೆಡ್ಡಿಂಗ್ ಪ್ಲಾನರ್ ಟೀಮ್ ಈಗ ನಯನತಾರಾ ಮತ್ತು ವಿಘ್ನೇಶ್ ಜೋಡಿ ಮದುವೆ ಪ್ಲಾನಿಂಗ್‌ಗೆ ಸಾಥ್ ನೀಡಿದೆ. ತಮಿಳುನಾಡಿನ ಮಹಾಬಲಿಪುರಂನಲ್ಲಿ ಜೂನ್ 9ರಂದು ಅದ್ದೂರಿಯಾಗಿ ಈ ಜೋಡಿ ಹಸೆಮಣೆ ಏರಲಿದೆ. ಈಗ ಮದುವೆಯ ಆಮಂತ್ರಣದ ಕುರಿತ ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದೆ. ಒಟ್ನಲ್ಲಿ ನೆಚ್ಚಿನ ನಟಿಯ ಮದುವೆಯ ಗುಡ್ ನ್ಯೂಸ್ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

  • ರಜನಿಕಾಂತ್ ನನ್ನ ವೈರಿಯಲ್ಲ ಎಂದ ಕಮಲ್ ಹಾಸನ್

    ರಜನಿಕಾಂತ್ ನನ್ನ ವೈರಿಯಲ್ಲ ಎಂದ ಕಮಲ್ ಹಾಸನ್

    ಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಖ್ಯಾತ ನಟ ಕಮಲ್ ಹಾಸನ್ ಒಟ್ಟಿಗೆ ಸಿನಿಮಾ ರಂಗಕ್ಕೆ ಬಂದವರು. ಅದರಲ್ಲೂ ಅನೇಕ ಚಿತ್ರಗಳಲ್ಲಿ ಒಟ್ಟಾಗಿ ನಟಿಸಿದ್ದಾರೆ. ಅದರಲ್ಲೂ ರಜನಿಯ ಮೊದಲ ಸಿನಿಮಾ ಅಪೂರ್ವ ರಾಗಂಗಳ್ ಚಿತ್ರದಲ್ಲಿ ಕಮಲ್ ಹಾಸನ್ ಕೂಡ ಪಾತ್ರ ನಿರ್ವಹಿಸಿದ್ದಾರೆ. ಇಷ್ಟಿದ್ದೂ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುವುದಿಲ್ಲ ಎನ್ನುವ ಸುದ್ದಿ ಹಲವು ವರ್ಷಗಳಿಂದ ಹರಿದಾಡುತ್ತಿದೆ. ಇದನ್ನೂ ಓದಿ : ಹಾಲಿವುಡ್ ಖ್ಯಾತ ನಟ ರೇ ಲಿಯೊಟ್ಟಾ ಮಲಗಿದ್ದಾಗಲೇ ನಿಧನ

    ರಜನಿ ಮತ್ತು ಕಮಲ್ ಹಾಸನ್ ಸಿನಿಮಾಗಳು ಒಟ್ಟಿಗೆ ರಿಲೀಸ್ ಆದಾಗ, ಇಬ್ಬರ ಅಭಿಮಾನಿಗಳು ಹೊಡೆದಾಡಿಕೊಂಡಿದ್ದುಇದೆ. ಫ್ಯಾನ್ಸ್ ವಾರ್ ಗೆ ಹೆಸರಾದ ನಟರು ಇವರು. ಇಂತಿಪ್ಪ ರಜನಿ ಮತ್ತು ಕಮಲ್ ಹಾಸನ್ ಯಾವತ್ತು ವೈರತ್ವ ಸಾಧಿಸಿಲ್ಲ ಎನ್ನುವುದನ್ನು ಕಮಲ್ ಹಾಸನ್ ಹೇಳಿದ್ದಾರೆ. ಅವರ ವಿಕ್ರಮ್ ಸಿನಿಮಾದ ರಿಲೀಸ್ ಇವೆಂಟ್ ನಲ್ಲಿ ಮಾತನಾಡಿದ ಕಮಲ್ ಹಾಸನ್, ‘ನಾನು ಯಾವತ್ತೂ ರಜನಿಯನ್ನು ವೈರಿ ಎಂದು ಪರಿಗಣಿಸಿಲ್ಲ. ವೃತ್ತಿಯಲ್ಲಿ ಸ್ಪರ್ಧೆ ಇರುವುದು ಸಹಜ’ ಎಂದಿದ್ದಾರೆ. ಇದನ್ನೂ ಓದಿ  : ಸಿನಿಮಾವಾಗಲಿದೆ ‘ಟೈಂಪಾಸ್’ ಬೆಡಗಿ ಪ್ರೋತಿಮಾ ಬೇಡಿ ಬಯೋಪಿಕ್

    ಇಂಥದ್ದೇ ಮಾತನ್ನು ರಜನಿಕಾಂತ್ ಕೂಡ ಈ ಹಿಂದೆ ಹೇಳಿದ್ದರು. ‘ಕಮಲ್ ಹಾಸನ್ ಬಗ್ಗೆ ನಾನ್ಯಾಕೆ ವೈರತ್ವ ಬೆಳೆಸಿಕೊಳ್ಳಲಿ? ಅವರು ನನ್ನ ಉತ್ತಮ ಸ್ನೇಹಿತ. ನಾವಿಬ್ಬರೂ ಒಳ್ಳೆಯ ಬಾಂಧವ್ಯ ಹೊಂದಿದ್ದೇವೆ. ವೈರಿ ಅಂತ ಹೇಳ್ತಿರೋದು ಯಾರು? ನಾವು ಯಾವತ್ತಿಗೂ ಸ್ನೇಹವನ್ನು ಬಿಟ್ಟ ಕೊಡುವುದಿಲ್ಲ’ ಎಂದು ಹೇಳಿದ್ದರು.

    ರಜನಿಕಾಂತ್ ಮತ್ತು ಕಮಲ್ ಹಾಸನ್ ಏನೇ ಹೇಳಿದರೂ, ಅಭಿಮಾನಿಗಳು ಮಾತ್ರ ತಮ್ಮ ನಟರೇ ಮೇಲು ಎಂದು ಯಾವಾಗಲೂ ಫ್ಯಾನ್ಸ್ ವಾರ್ ನಡೆಸುತ್ತಲೇ ಇರುತ್ತಾರೆ. ಅಲ್ಲದೇ, ರಾಜಕೀಯ ಭಿನ್ನಾಭಿಪ್ರಾಯಗಳು ಇರುವುದರಿಂದ ಸ್ನೇಹಿತರಾಗಲು ಸಾಧ್ಯವೇ ಇಲ್ಲ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.

  • `1947ರ ಆಗಸ್ಟ್ 16’ರ ಕಥೆಯಲ್ಲಿ ಗೌತಮ್ ಕಾರ್ತಿಕ್

    `1947ರ ಆಗಸ್ಟ್ 16’ರ ಕಥೆಯಲ್ಲಿ ಗೌತಮ್ ಕಾರ್ತಿಕ್

    ಕಾಲಿವುಡ್ ನಟ ಗೌತಮ್ ಕಾರ್ತಿಕ್ 1947ರ ಕಥೆ ಹೇಳಲು ಹೊರಟಿದ್ದಾರೆ. `1947 ಆಗಸ್ಟ್ 16′ ಚಿತ್ರದ ಫಸ್ಟ್ ಲುಕ್ ರಿವೀಲ್ ಆಗಿದ್ದು, ಸಖತ್ ರಗಡ್ ಲುಕ್ಕಿನಲ್ಲಿ ಗೌತಮ್ ಕಾರ್ತಿಕ್ ಕಾಣಿಸಿಕೊಂಡಿದ್ದಾರೆ.

    ಮಣಿರತ್ನಂ ನಿರ್ದೇಶನದ `ಕಾದಲ್’ ಚಿತ್ರ ಮೂಲಕ ಬಣ್ಣದ ಲೋಕಕ್ಕೆ ಪರಿಚಿತರಾದ ಗೌತಮ್ ಕಾರ್ತಿಕ್ ಇದೀಗ ಮಾಸ್ ಲುಕ್ಕಿನಲ್ಲಿ ಮಿಂಚ್ತಿದ್ದಾರೆ. ಎ.ಆರ್ ಮುರುಗದಾಸ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ `1947 ಆಗಸ್ಟ್ 16′ ಚಿತ್ರದಲ್ಲಿ ಗೌತಮ್ ಪ್ರಮುಖ ಪಾತ್ರಕ್ಕೆ ಜೀವ ತುಂಬಿದ್ದಾರೆ.


    `1947 ಆಗಸ್ಟ್ 16’ಚಿತ್ರದ ಫಸ್ಟ್ ಲುಕ್‌ನ್ನ ಶಿವ ಕಾರ್ತೀಕೇನ್ ರಿವೀಲ್ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಸಾಂಪ್ರದಾಯಿಕ ದೋತಿಯಲ್ಲಿ ಕಾಣಿಸಿಕೊಂಡಿರುವ ಗೌತಮ್ ರಾ ಲುಕ್‌ನಲ್ಲಿ ಸಖತ್ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಚಿತ್ರದ ಫಸ್ಟ್ ಲುಕ್ ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಬೆಂಗಳೂರಿನಲ್ಲಿದ್ದರೆ, ಈ ದೇವಸ್ಥಾನಕ್ಕೆ ಭೇಟಿ ಪಕ್ಕಾ

    ಪೊನ್ ಕುಮಾರ್ ನಿರ್ದೇಶನದ `1947 ಆಗಸ್ಟ್ 16′ ಕಥೆ ಭಿನ್ನವಾಗಿದೆ. ಎಂದೂ ಮಾಡಿರದ ಪಾತ್ರದಲ್ಲಿ ಗೌತಮ್ ಕಾಣಿಸಿಕೊಂಡಿದ್ದಾರೆ. ಇದೀಗ ಚಿತ್ರದ ಕೊನೆಯ ಹಂತದ ಚಿತ್ರೀಕರಣದಲ್ಲಿದೆ ಸದ್ಯದಲ್ಲೇ ರಿಲೀಸ್ ಡೇಟ್ ಅನೌನ್ಸ್ ಆಗಲಿದೆ. ಒಟ್ನಲ್ಲಿ ಚಿತ್ರದ ಫಸ್ಟ್ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

  • ಐಶ್ವರ್ಯ ರಜನಿಕಾಂತ್ ನಿರ್ದೇಶನದಲ್ಲಿ ಸೌರವ್ ಗಂಗೂಲಿ ಬಯೋಪಿಕ್

    ಐಶ್ವರ್ಯ ರಜನಿಕಾಂತ್ ನಿರ್ದೇಶನದಲ್ಲಿ ಸೌರವ್ ಗಂಗೂಲಿ ಬಯೋಪಿಕ್

    ಸೂಪರ್ ಸ್ಟಾರ್ ರಜನಿಕಾಂತ್ ಅವರ ಪುತ್ರಿ ಕ್ರಿಕೆಟ್ ಕುರಿತ ಸಿನಿಮಾ ಮಾಡಲು ಮುಂದಾಗಿದ್ದಾರೆ. ಕ್ರಿಕೆಟ್ ಜಗತ್ತಿನ ಮಹಾನ್ ಕ್ರಿಕೆಟಿಗ ಸೌರವ್ ಗಂಗೂಲಿ ಬಯೋಪಿಕ್ ತೆರೆಗೆ ತರಲು ತಯಾರಿ ನಡೆಸುತ್ತಿದ್ದಾರೆ.

    ಸ್ಟಾರ್ ನಟ ಧನುಷ್ ಜೊತೆ ಡಿವೋರ್ಸ್ ಪಡೆದ ಮೇಲೆ ರಜನಿಕಾಂತ್ ಪುತ್ರಿ ಐಶ್ವರ್ಯ ಮತ್ತಷ್ಟು ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದಾರೆ. ಈಗಾಗಲೇ ಸಾಕಷ್ಟು ಚಿತ್ರಗಳನ್ನು ನಿರ್ದೇಶನ ಮಾಡುವ ಮೂಲಕ ಐಶ್ವರ್ಯ ರಜನೀಕಾಂತ್ ಸೈ ಎನಿಸಿಕೊಂಡಿದ್ದಾರೆ. ಈಗ ಕ್ರಿಕೆಟ್‌ನತ್ತ ಒಲವು ತೋರಿಸುತ್ತಿದ್ದಾರೆ. ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿರುವ, ಕ್ರಿಕೆಟ್ ಜಗತ್ತಿನ ದಂತಕಥೆ ಸೌರವ್ ಗಂಗೂಲಿ ಇಂಚಿಂಚೂ ಕಥೆಯನ್ನ ಬೆಳ್ಳಿಪರದೆಯಲ್ಲಿ ತೋರಿಸಲು ನಿರ್ದೇಶಕಿ ಐಶ್ವರ್ಯ ಸಜ್ಜಾಗಿದ್ದಾರೆ. ಇದನ್ನೂ ಓದಿ: ಪತ್ನಿ ರಮ್ಯಾ ಜೊತೆ `ನಾಗಿಣಿ 2′ ಖ್ಯಾತಿಯ ನಿನಾದ್ ದಾಂಪತ್ಯಗೀತೆ

    ನಿರ್ದೇಶಕ ಲವ್ ರಂಜನ್ ಒಡೆತನದ ಲವ್ ಫಿಲ್ಮ್ಸ್‌ ನಿರ್ಮಾಣದ ಅಡಿಯಲ್ಲಿ ಸೌರವ್ ಗಂಗೂಲಿ ಬಯೋಪಿಕ್ ತೆರೆಗೆ ಬರಲು ಸಿದ್ಧವಾಗುತ್ತಿದೆ. ಈಗಾಗಲೇ ಸೌರವ್ ಅವರ ಜೊತೆ ಈ ಕುರಿತು ಮಾತುಕತೆ ನಡೆದಿದ್ದು, ಬಯೋಪಿಕ್ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಈ ಕುರಿತು ಮಾಜಿ ಕ್ರಿಕೆಟಿಗ ಸೌರವ್ ಕೂಡ ಈ ಹಿಂದೆಯೇ ಅಧಿಕೃತವಾಗಿ ಟ್ವೀಟರ್‌ನಲ್ಲಿ ಹೇಳಿಕೊಂಡಿದ್ದರು.

    ಸೌರವ್ ಗಂಗೂಲಿ ಅವರ ಬಯೋಪಿಕ್‌ನಲ್ಲಿ ಸೌರವ್ ಪಾತ್ರಕ್ಕೆ ಯಾರು ಜೀವ ತುಂಬಲಿದ್ದಾರೆ ಎಂಬುದರ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಹುಟ್ಟು ಹಾಕಿದೆ. ಇದರ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ನೀಡಿಲ್ಲ. ಸದ್ಯದಲ್ಲೇ ಈ ಕುರಿತು ಅಪ್‌ಡೇಟ್ ನೀಡಲಿದೆ ಚಿತ್ರತಂಡ. ಒಟ್ನಲ್ಲಿ ಐಶ್ವರ್ಯ ರಜನೀಕಾಂತ್ ನಿರ್ದೇಶನದಲ್ಲಿ ಸಿನಿಮಾ ಹೇಗೆ ಮೂಡಿ ಬರಲಿದೆ ಎಂಬುದನ್ನ ಕಾದುನೋಡಬೇಕಿದೆ.

  • ಕನ್ನಡಕ್ಕೆ ಬರ್ತಾ ಇದ್ದೀನಿ ಅಂದ ಜ್ಯೂನಿಯರ್ ಎನ್.ಟಿ.ಆರ್

    ಕನ್ನಡಕ್ಕೆ ಬರ್ತಾ ಇದ್ದೀನಿ ಅಂದ ಜ್ಯೂನಿಯರ್ ಎನ್.ಟಿ.ಆರ್

    ರ್.ಆರ್.ಆರ್ ಸಿನಿಮಾ ಮೂಲಕ ಕನ್ನಡ ಸಿನಿಮಾ ರಂಗಕ್ಕೂ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿರುವ ಜ್ಯೂನಿಯರ್ ಎನ್.ಟಿ.ಆರ್ ಇದೀಗ ಬ್ಯಾಕ್ ಟು ಬ್ಯಾಕ್ ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹಾಗಂತ ನೇರವಾಗಿ ಈ ಸಿನಿಮಾಗಳು ಕನ್ನಡದಲ್ಲಿ ನಿರ್ಮಾಣವಾಗದೇ ಇದ್ದರೂ, ಮೂಲ ಸಿನಿಮಾಗಳ ಜೊತೆಗೆ ಕನ್ನಡದಲ್ಲೂ ಅವುಗಳು ಡಬ್ ಆಗಿ ಬಿಡುಗಡೆ ಆಗಲಿವೆ. ಇದನ್ನೂ ಓದಿ : ‘ಧಾಕಡ್’ ಸೋಲಿಗೆ ಕಂಗೆಟ್ಟ ಕಂಗನಾ ರಣಾವತ್ : ವೀಕೆಂಡ್ ನಲ್ಲೂ ವೀಕ್ ಕಲೆಕ್ಷನ್

    ಆರ್.ಆರ್.ಆರ್ ಸಿನಿಮಾ ಕನ್ನಡದಲ್ಲಿ ಯಶಸ್ವಿಯಾದ ನಂತರ ಬಹುತೇಕ ಬಹುಕೋಟಿ ಬಜೆಟ್ ಚಿತ್ರಗಳು ಕನ್ನಡ ಭಾಷೆಗೂ ಡಬ್ ಮಾಡಿ ಬಿಡುಗಡೆ ಮಾಡುತ್ತಿದ್ದಾರೆ. ಹೀಗಾಗಿ ಜ್ಯೂನಿಯರ್ ಎನ್.ಟಿ.ಆರ್ ನಟನೆಯ ಎರಡು ಚಿತ್ರಗಳು ಇದೀಗ ಕನ್ನಡಕ್ಕೆ ಡಬ್ ಆಗಲಿವೆ. ಮೊನ್ನೆಯಷ್ಟೇ ಎರಡೂ ಸಿನಿಮಾಗಳ ಫಸ್ಟ್ ಲುಕ್ ಮತ್ತು ಟೀಸರ್ ಅನ್ನು ಬಿಡುಗಡೆ ಮಾಡಿವೆ ಆಯಾ ಚಿತ್ರತಂಡ. ಇದನ್ನೂ ಓದಿ : ಶೀಘ್ರದಲ್ಲೇ ಶಿವರಾಜ್ ಕುಮಾರ್ ಮತ್ತು ಪ್ರಭುದೇವ ಸಿನಿಮಾ ಶುರು : ಯೋಗರಾಜ್ ಭಟ್ ನಿರ್ದೇಶಕ

    ಒಂದು ಚಿತ್ರವನ್ನು ಕೋರಟಾಲ ಶಿವ ನಿರ್ದೇಶನ ಮಾಡುತ್ತಿದ್ದರೆ, ಮತ್ತೊಂದು ಸಿನಿಮಾವನ್ನು ಕನ್ನಡದವರೇ ಆದ ಪ್ರಶಾಂತ್ ನೀಲ್ ಡೈರೆಕ್ಷನ್ ಮಾಡುತ್ತಿದ್ದಾರೆ. ಎರಡೂ ಚಿತ್ರಗಳ ಫಸ್ಟ್ ಲುಕ್ ಜ್ಯೂನಿಯರ್ ಹುಟ್ಟು ಹಬ್ಬದ ದಿನದಂದು ಬಿಡುಗಡೆ ಆಗಿವೆ. ಅದರಲ್ಲೂ ಕೋರಟಾಲ ಶಿವ ನಿರ್ದೇಶನದ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಸ್ವತಃ ಜೂ.ಎನ್.ಟಿ.ಆರ್ ಅವರೇ ಕನ್ನಡದಲ್ಲಿ ಡೈಲಾಗ್ ಹೊಡೆದಿದ್ದಾರೆ. ಅವರಿಗೆ ಅಲ್ಪಸ್ವಲ್ಪ ಕನ್ನಡವೂ ಬರುವುದರಿಂದ, ಚೆನ್ನಾಗಿಯೇ ಕನ್ನಡದಲ್ಲಿ ಡಬ್ ಮಾಡಿದ್ದಾರೆ. ಇದನ್ನೂ ಓದಿ: ವೀಲ್‍ಚೇರ್ ರೋಮಿಯೋಗೆ ಮಯೂರಿ ಜೂಲಿಯಟ್ – ‘ಆ’ ಸವಾಲಿನ ಪಾತ್ರ ಒಪ್ಪಿಕೊಂಡಿದ್ದರ ಹಿಂದಿದೆ ಒಂದು ಕಥಾನಕ!

    ಕೆಲವು ಬಾರಿ ಧೈರ್ಯಕ್ಕೆ ಕೂಡ ಗೊತ್ತಿರಲ್ಲ, ಅವಶ್ಯಕತೆ ಮೀರಿ ತಾನಿರಕೂಡದು ಅಂತ. ಆಗ ಭಯಕ್ಕೆ ಗೊತ್ತಾಗ್ಬೇಕು ತಾನು ಬರಬೇಕಾದ ಸಮಯ ಬಂದಿದೆ ಅಂತ. ಬರ್ತಾ ಇದ್ದೀನಿ.. ಎನ್ನುವ ಖಡಕ್ ಡೈಲಾಗ್ ಅನ್ನು ಜ್ಯೂನಿಯರ್ ಹೊಡೆದಿದ್ದಾರೆ. ಇದು ಇವರ 30ನೇ ಸಿನಿಮಾವಾದರೆ, 31ನೇ ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡಲಿದ್ದಾರೆ.

  • ಪ್ರಶಾಂತ್ ನೀಲ್ – ಜ್ಯೂ.ಎನ್‌ಟಿಆರ್ ಚಿತ್ರದಲ್ಲಿ ಸೂಪರ್ ಸ್ಟಾರ್ ಕಮಲ್ ಹಾಸನ್..!

    ಪ್ರಶಾಂತ್ ನೀಲ್ – ಜ್ಯೂ.ಎನ್‌ಟಿಆರ್ ಚಿತ್ರದಲ್ಲಿ ಸೂಪರ್ ಸ್ಟಾರ್ ಕಮಲ್ ಹಾಸನ್..!

    ಕೆಜಿಎಫ್ ಮಾಸ್ಟರ್ ಮೈಂಡ್ ಪ್ರಶಾಂತ್ ನೀಲ್ `ಸಲಾರ್’ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇದರ ಬೆನ್ನಲ್ಲೇ ಜ್ಯೂ.ಎನ್‌ಟಿಆರ್ ಜತೆ ಹೊಸ ಪ್ರಾಜೆಕ್ಟ್ ಅನೌನ್ಸ್ ಮಾಡಿದ್ದರು. ಇದೀಗ ಈ ಚಿತ್ರದಲ್ಲಿ ಸೂಪರ್ ಸ್ಟಾರ್ ಕಮಲ್ ಹಾಸನ್ ಎಂಟ್ರಿಯಾಗುತ್ತಿದೆ. ಜ್ಯೂ.ಎನ್‌ಟಿಆರ್ ಎದುರು ಅಬ್ಬರಿಸಲು ಕಮಲ್ ಹಾಸನ್ ರೆಡಿಯಾಗಿದ್ದಾರೆ.

    ಯಶ್ ನಟನೆಯ `ಕೆಜಿಎಫ್ 2′ ಸಕ್ಸಸ್ ನಂತರ ನಿರ್ದೇಶಕ ಪ್ರಶಾಂತ್ ನೀಲ್ `ಸಲಾರ್’ ಚಿತ್ರದ ಆ್ಯಕ್ಷನ್ ಸೀಕ್ವೆನ್ಸ್ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾಗಿನೇ ತಾವೇ ಬರೆದಿರೋ `ಬಘೀರ’ ಚಿತ್ರದ ಮುಹೂರ್ತದಲ್ಲಿ ಗೈರಾಗಿದ್ದರು. ಈ ಬೆನ್ನಲ್ಲೇ ಪ್ರಶಾಂತ್ ನೀಲ್ ಮತ್ತು ಜ್ಯೂ.ಎನ್‌ಟಿಆರ್ ಕಾಂಬಿನೇಷನ್‌ನಲ್ಲಿ ಮೂಡಿಬರಲಿರುವ ಎನ್‌ಟಿಆರ್ 31 ಚಿತ್ರದ ಜ್ಯೂ.ಎನ್‌ಟಿಆರ್ ಪಾತ್ರದ ಮಾಸ್ ಲುಕ್ ಬಿಟ್ಟು ಚಿತ್ರದ ಕುರಿತು ಅನೌನ್ಸ್ ಮಾಡಿದ್ರು. ಇದೀಗ ಇನ್ನೊಂದು ಬಿಗ್ ಬ್ರೇಕಿಂಗ್ ವಿಚಾರ ಹೊರ ಬಿದ್ದಿದೆ. ನೀಲ್ ಮತ್ತು ಜ್ಯೂ.ಎನ್‌ಟಿಆರ್ ಚಿತ್ರದಲ್ಲಿ ಸೂಪರ್ ಸ್ಟಾರ್ ಕಮಲ್ ಹಾಸನ್ ಎಂಟ್ರಿಯಾಗುತ್ತಿದೆ.

    ಪ್ರಶಾಂತ್ ನೀಲ್ ನಿರ್ದೇಶನದ ಹೊಸ ಚಿತ್ರದಲ್ಲಿ ಕಮಲ್ ಹಾಸನ್ ನಟಿಸೋದು ಫಿಕ್ಸ್ಯಾಗಿದೆ. ಕಥೆ ಕೇಳಿ ಫುಲ್ ಥ್ರಿಲ್ ಆಗಿ ಕಮಲ್ ಹಾಸನ್ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಆದರೆ ಜ್ಯೂ.ಎನ್‌ಟಿಆರ್ ಎದುರು ಹೀರೋ ಆಗಿ ಕಾಣಿಸಿಕೊಳ್ತಿಲ್ಲ ಬದಲಾಗಿ ಯಂಗ್ ಟೈಗರ್ ಅಬ್ಬರಿಸಲು ರೆಡಿಯಾಗಿದ್ದಾರೆ. ಚಿತ್ರದಲ್ಲಿ ಜ್ಯೂ.ಎನ್‌ಟಿಆರ್‌ಗೆ ಖಡಕ್ ವಿಲನ್ ಆಗಿ ಟಕ್ಕರ್ ಕೊಡೋದಕ್ಕೆ ಕಮಲ್ ಹಾಸನ್ ಸಜ್ಜಾಗಿದ್ದಾರೆ. ಇದನ್ನೂ ಓದಿ: ಕಂಗನಾ ರಣಾವತ್ ಕನಸು ನುಚ್ಚುನೂರು : ಬಾಕ್ಸ್ ಆಫೀಸಿನಲ್ಲಿ ಕೈ ಹಿಡಿಯಲಿಲ್ಲ ‘ಧಾಕಡ್’

    `ಸಲಾರ್ ಮುಗಿಯುತ್ತಿದ್ದಂತೆ ಜ್ಯೂ.ಎನ್‌ಟಿಆರ್ ಚಿತ್ರವನ್ನ ಪ್ರಶಾಂತ್ ನೀಲ್ ಕೈಗೆತ್ತಿಕೊಳ್ಳಲಿದ್ದಾರೆ. 2023ರಲ್ಲಿ ಜ್ಯೂ.ಎನ್‌ಟಿಆರ್ ಮತ್ತು ಕಮಲ್ ಹಾಸನ್ ಡೆಡ್ಲಿ ಕಾಂಬಿನೇಷನ್ ಕಮಾಲ್ ಮಾಡೋದು ಗ್ಯಾರೆಂಟಿ.