Tag: Kollywood

  • ನಯನತಾರಾ ಧರಿಸಿದ ಆಭರಣದ ಮೊತ್ತವೆಷ್ಟು ಗೊತ್ತಾ.?

    ನಯನತಾರಾ ಧರಿಸಿದ ಆಭರಣದ ಮೊತ್ತವೆಷ್ಟು ಗೊತ್ತಾ.?

    ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ವಿಘ್ನೇಶ್ ಶಿವನ್ ಇಂದು ಬೆಳಿಗ್ಗೆ 8.10ಕ್ಕೆ ಹಸೆಮಣೆ ಏರಿದ್ದಾರೆ. ಹೊಸ ಬಾಳಿಗೆ ಕಾಲಿಟ್ಟಿರುವ ನವಜೋಡಿಗೆ ಶುಭ ಹಾರೈಸಲು ಸ್ಟಾರ್ ತಾರೆಯರು ಮದುವೆಗೆ ಸಾಕ್ಷಿಯಾಗಿದ್ದಾರೆ. ಇನ್ನು ಅವರ ಮದುವೆಯಲ್ಲಿ ದುಬಾರಿ ಕಾಸ್ಟ್ಯೂಮ್ ಮತ್ತು ಆಭರಣ ಧರಿಸಿದ್ದು, ಅದರ ಬೆಲೆಯ ಕುರಿತು ಇನ್ನಷ್ಟು ಡಿಟೈಲ್ಸ್ ಇಲ್ಲಿದೆ ನೋಡಿ.

    ಬಹುಭಾಷಾ ನಟಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ತಮ್ಮ 7 ವರ್ಷಗಳ ಸುಧೀರ್ಘ ಪ್ರೀತಿಗೆ ಇಂದು ಮದುವೆ ಎಂಬ ಮುದ್ರೆ ಒತ್ತಿದ್ದಾರೆ. ಖುಷಿ ಖುಷಿಯಾಗಿ ಮದುವೆಯಲ್ಲಿ ಮಿಂಚ್ತಿರೋ ಜೋಡಿಯ ಕಾಸ್ಟ್ಯೂಮ್ ಕೂಡ ಸಖತ್ ಅಟ್ರಾಕ್ಟೀವ್ ಆಗಿದ್ದು, ಇದೀಗ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

    ಮದುವೆಯಲ್ಲಿ ಸಿಂಪಲ್ ಆಗಿ ನಿರ್ದೇಶಕ ವಿಘ್ನೇಶ್ ಶಿವನ್ ಶರ್ಟ್ ಪಂಚೆಯ ಜತೆ ಶಲ್ಯದಲ್ಲಿ ಮಿಂಚಿದ್ರೆ, ನಯನತಾರಾ ರೆಡ್ ಕಲರ್ ನೆಟೆಡ್ ಸ್ಯಾರಿಯಲ್ಲಿ ಮಿಂಚಿದ್ದಾರೆ. ಇನ್ನು ನಯನತಾರಾ ಧರಿಸಿದ ಗ್ರ್ಯಾಂಡ್ ಆಭರಣಕ್ಕೆ 5 ಕೋಟಿ ಮೌಲ್ಯ ಎಂದು ತಿಳಿದು ಬಂದಿದೆ. ಇನ್ನು ನಯನತಾರಾ ಲುಕ್ಕಿಗೆ ಮತ್ತು ಆಭರಣಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇದನ್ನೂ ಓದಿ: ಕೊನೆಗೂ ರಿವೀಲ್ ಆಯಿತು ನಯನತಾರಾ ಮತ್ತು ವಿಘ್ನೇಶ್ ಶಿವನ್ ಮದುವೆ ಫೋಟೋ

    ನಯನತಾರಾ ಮತ್ತು ವಿಘ್ನೇಶ್ ಶಿವನ್ ಅದ್ದೂರಿ ಮದುವೆಗೆ ಶಾರುಖ್ ಖಾನ್, ನಿರ್ದೇಶಕ ಅಟ್ಲಿ ದಂಪತಿ, ರಜನಿಕಾಂತ್ ಕೂಡ ಸಾಕ್ಷಿಯಾಗಿದ್ದಾರೆ. ನೆಚ್ಚಿನ ದಂಪತಿಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

  • ಕೊನೆಗೂ ರಿವೀಲ್ ಆಯಿತು ನಯನತಾರಾ ಮತ್ತು ವಿಘ್ನೇಶ್ ಶಿವನ್ ಮದುವೆ ಫೋಟೋ

    ಕೊನೆಗೂ ರಿವೀಲ್ ಆಯಿತು ನಯನತಾರಾ ಮತ್ತು ವಿಘ್ನೇಶ್ ಶಿವನ್ ಮದುವೆ ಫೋಟೋ

    ಇಂದು ಬೆಳಗ್ಗೆ 8.10ಕ್ಕೆ ಚೆನ್ನೈನ ಮಹಾಬಲಿಪುರಂನ ರೆಸಾರ್ಟ್‌ವೊಂದರಲ್ಲಿ ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ ಲೇಡಿ ಸೂಪರ್ ಸ್ಟಾರ್ ನಯನತಾರಾ. ಈ ಮದುವೆಯ ವೀಡಿಯೋಗಳನ್ನು ಓಟಿಟಿಗೆ ಮಾರಿಕೊಂಡಿದ್ದರಿಂದ ಫೋಟೋ ಮತ್ತು ವೀಡಿಯೋಗಳು ಇತರ ಮಾಧ್ಯಮಗಳಿಗೆ ಸಿಗುವುದು ಕಷ್ಟ ಎಂದು ಹೇಳಲಾಗಿತ್ತು. ಆದರೀಗ ಫೋಟೋ ರಿವೀಲ್ ಆಗಿದೆ. ಸ್ವತಃ ವಿಘ್ನೇಶ್ ಅವರೇ ತಮ್ಮ ಮದುವೆ ಫೋಟೋವನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.

    ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್, ತಮಿಳಿನ ಸೂಪರ್ ಸ್ಟಾರ್‌ಗಳಾದ ರಜನಿಕಾಂತ್ ಮತ್ತು ಕಮಲ್ ಹಾಸನ್, ಕನ್ನಡದಿಂದ ಉಪೇಂದ್ರ, ತೆಲುಗಿನಿಂದ ಚಿರಂಜೀವಿ ಸೇರಿದಂತೆ ಅನೇಕ ಸ್ಟಾರ್ ಸೆಲಿಬ್ರಿಟಿಗಳು ಈ ಮದುವೆಯ ಸಮಾರಂಭದಲ್ಲಿ ಹಾಜರಿರಲಿದ್ದಾರೆ ಎಂದು ಹೇಳಲಾಗುತ್ತಿದೆ. ಸ್ವತಃ ರಜನಿಕಾಂತ್ ಅವರೇ ಮುಂದೆ ನಿಂತುಕೊಂಡು ಮದುವೆ ಮಾಡಿಸಿದ್ದು, ನೂತನ ದಂಪತಿಗೆ ಶುಭಹಾರೈಸಿದ್ದಾರೆ. ಇದನ್ನೂ ಓದಿ: ಶ್ರದ್ಧಾ ಶ್ರೀನಾಥ್ ಗುಡ್ ಬೈ ಹೇಳಿದ್ದು ಯಾಕೆ.?

    ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ ರಜನಿಕಾಂತ್, ಶಾರೂಖ್ ಖಾನ್, ದಿಲೀಪ್, ದಿವ್ಯ ದರ್ಶಿನಿ, ಬೋನಿ ಕಪೂರ್, ಖ್ಯಾತ ನಿರ್ದೇಶಕ ಮಣಿರತ್ನಂ ಸೇರಿದಂತೆ ಸಾಕಷ್ಟು ಕಲಾವಿದರು ಆಗಮಿಸಿದ್ದಾರೆ. ಸೆಲಿಬ್ರಿಟಿಗಳು ಉಳಿದುಕೊಳ್ಳುವುದಕ್ಕಾಗಿಯೇ ನೂರಕ್ಕೂ ಹೆಚ್ಚು ಕೋಣೆಗಳನ್ನು ಕಾಯ್ದಿರಿಸಲಾಗಿದೆ ಎಂಬ ಮಾಹಿತಿ ಇದೆ.

  • ನಯನತಾರಾ ಮದುವೆಗೆ ಬಂದ ಶಾರುಖ್ ಖಾನ್, ರಜನಿಕಾಂತ್ :  ಯಾರೆಲ್ಲ ಬಂದಿದ್ದರು ಗೊತ್ತಾ?

    ನಯನತಾರಾ ಮದುವೆಗೆ ಬಂದ ಶಾರುಖ್ ಖಾನ್, ರಜನಿಕಾಂತ್ : ಯಾರೆಲ್ಲ ಬಂದಿದ್ದರು ಗೊತ್ತಾ?

    ಇಂದು ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ಹೊಸಜೀವನಕ್ಕೆ ಕಾಲಿಟ್ಟ ಲೇಡಿ ಸೂಪರ್ ಸ್ಟಾರ್ ನಯನತಾರಾ ಮದುವೆಗೆ ಅನೇಕ ಹೆಸರಾಂತ ಕಲಾವಿದರೇ ಆಗಮಿಸಿದ್ದಾರೆ. ಚೆನ್ನೈನ ಮಹಾಬಲಿಪುರಂ ನಲ್ಲಿ ನಡೆದ ವಿವಾಹ ಮಹೋತ್ಸವದಲ್ಲಿ ಭಾರತೀಯ ಸಿನಿಮಾ ರಂಗದ ಅನೇಕ ಖ್ಯಾತ ನಟ, ನಟಿಯರು ಮತ್ತು ನಿರ್ದೇಶಕರು ಭಾಗಿಯಾಗಿದ್ದಾರೆ.

    ತಮಿಳು ನಾಡಿನ ಮುಖ್ಯಮಂತ್ರಿ ಸ್ಟಾಲಿನ್, ತಮಿಳಿನ ಸೂಪರ್ ಸ್ಟಾರ್ ಗಳಾದ ರಜನಿಕಾಂತ್ ಮತ್ತು ಕಮಲ್ ಹಾಸನ್, ಕನ್ನಡದಿಂದ ಉಪೇಂದ್ರ, ತೆಲುಗಿನಿಂದ ಚಿರಂಜೀವಿ ಸೇರಿದಂತೆ ಅನೇಕ ಸ್ಟಾರ್ ಸಿಲಿಬ್ರಿಟಿಗಳು ಈ ಮದುವೆಯ ಸಮಾರಂಭದಲ್ಲಿ ಹಾಜರಿರಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ : ನಯನತಾರಾ ಮದುವೆಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಜರ್?

    ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ ರಜನಿಕಾಂತ್, ಶಾರುಖ್ ಖಾನ್, ದಿಲೀಪ್, ದಿವ್ಯ ದರ್ಶಿನಿ, ಬೋನಿ ಕಪೂರ್, ಖ್ಯಾತ ನಿರ್ದೇಶಕ ಮಣಿರತ್ನಂ ಸೇರಿದಂತೆ ಸಾಕಷ್ಟು ಕಲಾವಿದರು ಆಗಮಿಸಿದ್ದಾರೆ. ಸಿಲೆಬ್ರಿಟಿಗಳು ಉಳಿದುಕೊಳ್ಳುವುದಕ್ಕಾಗಿಯೇ ನೂರಕ್ಕೂ ಹೆಚ್ಚು ಕೋಣೆಗಳನ್ನು ಕಾಯ್ದಿರಿಸಲಾಗಿದೆ ಎಂಬ ಮಾಹಿತಿ ಇದೆ.  ಇದನ್ನೂ ಓದಿ: ಸನ್ನಿ ಲಿಯೋನ್ ಫುಲ್ ಗರಂ: ಓರ್ವ ವ್ಯಕ್ತಿಗೆ ಸನ್ನಿ ಕೊಟ್ರು ಚಪ್ಪಲಿ ಏಟು

    ಕೆಲವೇ ನಿಮಿಷಗಳಲ್ಲಿ ತಮಿಳಿನ ಖ್ಯಾತ ಜೋಡಿ ವಿಘ್ನೇಶ್ ಶಿವನ್ ಮತ್ತು ಲೇಡಿ ಸೂಪರ್ ಸ್ಟಾರ್ ನಯನತಾರಾ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ಪ್ರಣಯ ಪಕ್ಷಿಗಳ ಮದುವೆಗೆ ಮದುವಣಗಿತ್ತಿಯಂತೆಯೇ ರೆಸಾರ್ಟ್ ಕೂಡ ಸಿಂಗಾರಗೊಂಡಿದೆ. ಅಂದಹಾಗೆ ಇಂದು ಈ ಜೋಡಿಯು  ಚೆನ್ನೈನ ಮಹಾಬಲಿಪುರಂನಲ್ಲಿ ಮದುವೆಯಾಗುತ್ತಿದ್ದಾರೆ.

  • ನಯನತಾರಾ- ವಿಘ್ನೇಶ್ ಶಿವನ್ ಮದುವೆಗೆ ಸಮಂತಾ ಮಿಸ್ಸಿಂಗ್?

    ನಯನತಾರಾ- ವಿಘ್ನೇಶ್ ಶಿವನ್ ಮದುವೆಗೆ ಸಮಂತಾ ಮಿಸ್ಸಿಂಗ್?

    ಕಾಲಿವುಡ್‌ನ ಸದ್ಯದ ಗುಡ್ ನ್ಯೂಸ್ ಅಂದ್ರೆ ನಯನತಾರಾ ಮತ್ತು ವಿಘ್ನೇಶ್ ಶಿವನ್ ಮದುವೆ ಸಂಭ್ರಮ. ಆ ಸಂಭ್ರಮಕ್ಕೆ ಚಿತ್ರರಂಗದ ಸಾಕಷ್ಟು ಮಂದಿ ಸಾಕ್ಷಿಯಾಗಲಿದ್ದಾರೆ. ಅದರಲ್ಲಿ ನಿರೀಕ್ಷಿಸುವ ಸ್ಟಾರ್ ಅಂದ್ರೆ `ಪುಷ್ಪ’ ಬ್ಯೂಟಿ ಸಮಂತಾ, ಆದರೆ ಕಾರಣಾಂತರದಿಂದ ಸಮಂತಾ ಮದುವೆಗೆ ಬರಲು ಸಾಧ್ಯವಾಗುತ್ತಿಲ್ಲ.

    ನಯನತಾರಾ ಮತ್ತು ವಿಘ್ನೇಶ್ ಶಿವನ್ ಮದುವೆಗೆ ಈಗಾಗಲೇ ಕ್ಷಣಗಣನೆ ಶುರುವಾಗಿದೆ. ನಾಳೆಯೇ ಹಸೆಮಣೆ ಏರಲು ಈ ಜೋಡಿ ಸಜ್ಜಾಗಿದೆ. ಇನ್ನು ಸಾಕಷ್ಟು ವರ್ಷಗಳಿಂದ ನಯನತಾರಾ ಮತ್ತು ಸಮಂತಾ ಸ್ನೇಹಿತರು. ಅದಲ್ಲದೇ ಇತ್ತೀಚೆಗಷ್ಟೇ ರಿಲೀಸ್ ಆಗಿದ್ದ `ಕಾತುವಾಕುಲ ರೆಂಡು ಕಾದಲ್’ ಚಿತ್ರದಲ್ಲಿ ವಿಜಯ್ ಸೇತುಪತಿಗೆ ಜೋಡಿಯಾಗಿ ಒಟ್ಟಿಗೆ ನಟಿಸಿದ್ದರು. ಈ ಚಿತ್ರಕ್ಕೆ ವಿಘ್ನೇಶ್ ಶಿವನ್ ನಿರ್ದೇಶನ ಮಾಡಿದ್ದರು. ಆದರೆ ಈಗ ಈ ಮದುವೆಗೆ ಶೂಟಿಂಗ್ ನಿಮಿತ್ತ ಮದುವೆಗೆ ಬರಲಾಗುತ್ತಿಲ್ಲ. ಇದನ್ನೂ ಓದಿ: ನಯನತಾರಾ- ವಿಘ್ನೇಶ್ ಶಿವನ್ ಮದುವೆಗೆ ಕ್ಷಣಗಣನೆ

    ನಯನತಾರಾ ಮತ್ತು ಸಮಂತಾ ನಡುವೆ ಒಳ್ಳೆಯ ಬಾಂಧವ್ಯವಿದೆ. ಸಾಕಷ್ಟು ವರ್ಷಗಳಿಂದ ಒಳ್ಳೆಯ ಗೆಳೆತನವಿದೆ.  ಸದ್ಯ `ಖುಷಿ’ ಚಿತ್ರದಲ್ಲಿ ಸಮಂತಾ ಬ್ಯುಸಿಯಾಗಿದ್ದಾರೆ. ವಿಜಯ್ ದೇವರಕೊಂಡಗೆ ನಾಯಕಿಯಾಗಿ ಸಮಂತಾ ನಟಿಸುತ್ತಿದ್ದಾರೆ. ಈ ಚಿತ್ರದ ಎರಡನೇ ಹಂತದ ಶೂಟಿಂಗ್ ನಡೆಯಲಿದೆ. ಹಾಗಾಗಿ ನಯನತಾರಾ ಮದುವೆಗೆ ಬರಲಾಗುತ್ತಿಲ್ಲ. ನಯನತಾರಾ ಮತ್ತು ವಿಘ್ನೇಶ್ ಶಿವನ್ ಮದುವೆ ಯಾರೆಲ್ಲಾ ತಾರೆಯರು ಸಾಕ್ಷಿಯಾಗಲಿದ್ದಾರೆ ಎಂಬುದನ್ನ ಕಾದುನೋಡಬೇಕಿದೆ.

  • ನಟ ಸೂರ್ಯಗೆ ದುಬಾರಿ ವಾಚ್ ಗಿಫ್ಟ್ ಮಾಡಿದ ಕಮಲ್ ಹಾಸನ್

    ನಟ ಸೂರ್ಯಗೆ ದುಬಾರಿ ವಾಚ್ ಗಿಫ್ಟ್ ಮಾಡಿದ ಕಮಲ್ ಹಾಸನ್

    ಕಾಲಿವುಡ್‌ನಲ್ಲಿ ಧೂಳೆಬ್ಬಿಸುತ್ತಿರುವ `ವಿಕ್ರಮ್’ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಕೋಟಿ ಕೋಟಿ ಲೂಟಿ ಮಾಡುತ್ತಿದೆ. ಇದೇ ಸಕ್ಸಸ್ ಖುಷಿಯಲ್ಲಿ ನಿರ್ದೇಶಕ ಲೋಕೇಶ್ ಕನಗರಾಜ್‌ಗೆ ದುಬಾರಿ ಕಾರು ಗಿಫ್ಟ್ ಮಾಡಿದ ಬೆನ್ನಲ್ಲೇ ನಟ ಸೂರ್ಯಗೆ ದುಬಾರಿ ವಾಚ್ ಅನ್ನು ಕಮಲ್ ಹಾಸನ್ ಗಿಫ್ಟ್ ಮಾಡಿದ್ದಾರೆ.

    `ವಿಕ್ರಮ್’ ಸಿನಿಮಾ ಕಮಲ್ ಹಾಸನ್ ಕೆರಿಯರ್‌ಗೆ ಬಿಗ್ ಬ್ರೇಕ್ ನೀಡಿದೆ. ಕಾಲಿವುಡ್ ರಂಗದಲ್ಲಿ ಕಮಲ್ ಹಾಸನ್ ಸಿನಿಮಾ ಸದ್ದು ಮಾಡುತ್ತಿದೆ. ಗಲ್ಲಾಪೆಟ್ಟಿಗೆಯಲ್ಲಿ 175 ಕೋಟಿ ಕಲೆಕ್ಷನ್ ಮಾಡಿ, 200 ಕೋಟಿಯತ್ತ ಲಗ್ಗೆ ಇಡುತ್ತಿದೆ. ಈ ಸಕ್ಸಸ್ ಖುಷಿಯಲ್ಲಿ ಚಿತ್ರದ ನಿರ್ದೇಶಕ ಲೋಕೇಶ್ ಕನಗರಾಜ್‌ಗೆ 70 ಲಕ್ಷ ಮೌಲ್ಯದ ದುಬಾರಿ ಕಾರನ್ನು ಗಿಫ್ಟ್ ಮಾಡಿದ ಬೆನ್ನಲ್ಲೆ ನಟ ಸೂರ್ಯ ಅವರಿಗೂ ಕೂಡ ದುಬಾರಿ ವಾಚ್ ಅನ್ನು ಗಿಫ್ಟ್ ಮಾಡಿದ್ದಾರೆ. ಇದನ್ನೂ ಓದಿ: ನಿರ್ದೇಶಕನಿಗೆ ಐಷಾರಾಮಿ ಕಾರು, ಸಹ ನಿರ್ದೇಶಕರಿಗೆ ದುಬಾರಿ ಬೈಕ್ ಗಿಫ್ಟ್ ಮಾಡಿದ ಕಮಲ್ ಹಾಸನ್

    `ವಿಕ್ರಮ್’ ಸಿನಿಮಾ ಮಲ್ಟಿ ಸ್ಟಾರ್ಸ್ ಇರುವ ತಂಡ ಈ ಚಿತ್ರದಲ್ಲಿ ನಟ ಸೂರ್ಯ ಕೂಡ ಪವರ್‌ಫುಲ್ ಪಾತ್ರದಲ್ಲಿ ಖಡಕ್ ಆಗಿ ನಟಿಸಿದ್ದಾರೆ. ಚಿತ್ರದ ಯಶಸ್ಸಿಗೆ ಸೂರ್ಯ ಅವರು ಕಾರಣ ಅಂತಾ ಚೆಂದದ ದುಬಾರಿ ವಾಚ್ ಉಡುಗೊರೆಯಾಗಿ ಕಮಲ್ ಹಾಸನ್ ನೀಡಿದ್ದಾರೆ. ಸ್ವತಃ ಕಮಲ್ ಹಾಸನ್ ಅವರೇ ಸೂರ್ಯ ಇರುವ ಜಾಗಕ್ಕೆ ತೆರಳಿ ವಾಚ್ ಅನ್ನು ಸೂರ್ಯ ಅವರಿಗೆ ತೊಡಸಿ ಸಂಭ್ರಮಿಸಿದ್ದಾರೆ. ಈ ವೇಳೆ ನಿರ್ದೇಶಕ ಲೋಕೇಶ್ ಕನಗರಾಜ್ ಕೂಡ ಸಾಥ್ ನೀಡಿದ್ದಾರೆ. ಒಟ್ನಲ್ಲಿ ಕಮಲ್ ಹಾಸನ್ ನಡೆಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

  • ನಯನತಾರಾ- ವಿಘ್ನೇಶ್ ಶಿವನ್ ಮದುವೆಗೆ ಕ್ಷಣಗಣನೆ

    ನಯನತಾರಾ- ವಿಘ್ನೇಶ್ ಶಿವನ್ ಮದುವೆಗೆ ಕ್ಷಣಗಣನೆ

    ಕಾಲಿವುಡ್‌ನಲ್ಲಿ ಸದ್ಯ ಸೌಂಡ್ ಮಾಡುತ್ತಿರೋ ಸುದ್ದಿ ಅಂದ್ರೆ ನಯನತಾರಾ ಮತ್ತು ವಿಘ್ನೇಶ್ ಮದುವೆ ವಿಚಾರ. ನಯನತಾರಾ ಮದುವೆ ಕಾರ್ಯಕ್ರಮ ಭರದಿಂದ ಸಾಗುತ್ತಿದೆ. ಮದುವೆಯ ಆಮಂತ್ರಣ ಮತ್ತು ಸ್ಟಾರ್ ಜೋಡಿಯ ಮದುವೆ ಯಾರೆಲ್ಲಾ ಬರುತ್ತಾರೆ ಎಂಬೆಲ್ಲಾ ಮಾಹಿತಿ ಇಲ್ಲಿದೆ ನೋಡಿ.

    ಸೌತ್ ಸಿನಿರಂಗದಲ್ಲಿ ಸದ್ಯ ಹಸೆಮಣೆ ಏರುತ್ತಿರೋ ಜೋಡಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಮದುವೆಗೆ ಇದೀಗ ಒಂದೇ ದಿನ ಬಾಕಿ ಇದೆ. `ರೌಡಿ ಧಾನ್’ ಚಿತ್ರದ ಸೆಟ್‌ನಲ್ಲಿ ಮೊದಲ ಬಾರಿಗೆ ಭೇಟಿಯಾದ ಜೋಡಿ, ಅಲ್ಲಿಂದ ಶುರುವಾದ ಸ್ನೇಹ ನಂತರ ಪ್ರೀತಿಗೆ ತಿರುಗಿ ಇದೀಗ 7 ವರ್ಷಗಳ ನಂತರ ಹಸೆಮಣೆ ಏರಲು ಸಜ್ಜಾಗಿದ್ದಾರೆ. ತಮ್ಮ ಮತ್ತು ನಯನತಾರಾ ಮದುವೆಯ ವಿಚಾರದ ಜತೆ ನಟ ಅಜಿತ್‌ಗೆ ನಿರ್ದೇಶನ ಮಾಡುತ್ತಿರುವುದಾಗಿ ಅಧಿಕೃತವಾಗಿ ವಿಘ್ನೇಶ್ ತಿಳಿಸಿದ್ದರು.

    ಇದೇ ಜೂನ್ 9ರಂದು ನಯನತಾರಾ ಮತ್ತು ವಿಘ್ನೇಶ್ ಶಿವನ್ ಮಹಾಬಲಿಪುರಂನಲ್ಲಿ ಗುರುಹಿರಿಯರು, ಆಪ್ತರ ಸಮ್ಮುಖದಲ್ಲಿ ಹಸೆಮಣೆ ಏರಲಿದ್ದಾರೆ. ಜೂನ್ 7ರಂದು ಹಳದಿ ಶಾಸ್ತ್ರ ನೆರವೇರಿದ್ದು, ಜೂನ್ 8ರಂದು ಮೆಹೆಂದಿ ಶಾಸ್ತ್ರ ನಡೆಯುತ್ತಿದೆ. ಜೂನ್ 9ರಂದು ಮಹಾಬಲಿಪುರಂನ ಶೆರಾಟನ್ ಗ್ರ್ಯಾಂಡ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಮದುವೆಯ ಬಳಿಕ ಚೆನ್ನೈನಲ್ಲಿ ಚಿತ್ರರಂಗದ ಸ್ನೇಹಿತರಿಗೆ ಮತ್ತು ಮಾಧ್ಯಮ ಮಿತ್ರರಿಗೆ ಅದ್ದೂರಿ ಆರತಕ್ಷತೆ ಏರ್ಪಡಿಸಲಾಗಿದೆ. ಇದನ್ನೂ ಓದಿ:ಉಪೇಂದ್ರ- ಸುದೀಪ್ ಕಾಂಬಿನೇಷನ್ ‘ಕಬ್ಜ’ ಚಿತ್ರಕ್ಕೆ ಏಳು ಭಾಷೆಗಳಲ್ಲಿ ಡಬ್ಬಿಂಗ್

    ನಯನತಾರಾ ಮದುವೆಗೆ ಸಿಎಂ ಸ್ಟಾಲಿನ್, ರಜನಿಕಾಂತ್, ಅಬಿರುದ್ಧ, ಸಮಂತಾ, ಕಮಲ್ ಹಾಸನ್, ಚಿರಂಜೀವಿ, ಸೂರ್ಯ, ಜ್ಯೋತಿ, ಕಾತೀ, ವಿಜಯ್ ಸೇತುಪತಿ, ಹೀಗೆ ಸಾಕಷ್ಟು ಸೆಲೆಬ್ರಿಟಿ ಸ್ನೇಹಿತರು ಈ ಮದುವೆಗೆ ಸಾಕ್ಷಿಯಾಗಲಿದ್ದಾರೆ. ಇನ್ನು ನಯನತಾರಾ ಮದುವೆ ಆಮಂತ್ರಣ ಕೂಡ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಇನ್ನು ನೆಚ್ಚಿನ ಜೋಡಿಯ ಮದುವೆಯನ್ನ ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾಯ್ತಿದ್ದಾರೆ.

  • ನಿರ್ದೇಶಕನಿಗೆ ಐಷಾರಾಮಿ ಕಾರು, ಸಹ ನಿರ್ದೇಶಕರಿಗೆ ದುಬಾರಿ ಬೈಕ್ ಗಿಫ್ಟ್ ಮಾಡಿದ ಕಮಲ್ ಹಾಸನ್

    ನಿರ್ದೇಶಕನಿಗೆ ಐಷಾರಾಮಿ ಕಾರು, ಸಹ ನಿರ್ದೇಶಕರಿಗೆ ದುಬಾರಿ ಬೈಕ್ ಗಿಫ್ಟ್ ಮಾಡಿದ ಕಮಲ್ ಹಾಸನ್

    ಚಾರ್ಯ ಸಿನಿಮಾ ಸೋತಿದ್ದಕ್ಕೆ ತೆಲುಗು ನಟ ಚಿರಂಜೀವಿ ತಮ್ಮ ಸಿನಿಮಾ ನಿರ್ದೇಶಕನಿಂದ ಮೂವತ್ತು ಕೋಟಿ ರೂಪಾಯಿಯನ್ನು ವಿತರಕರಿಗೆ ಮರುಪಾವತಿಸುವಂತೆ ಹೇಳಿದರೆ, ಇತ್ತ ತಮಿಳು ಚಿತ್ರದ ಖ್ಯಾತ ನಟ ಕಮಲ್ ಹಾಸನ್ ತಮ್ಮ ವಿಕ್ರಮ್ ಸಿನಿಮಾ ಗೆದ್ದಿರುವುದಕ್ಕೆ ನಿರ್ದೇಶಕರ ತಂಡಕ್ಕೆ ಭಾರೀ ಉಡುಗೊರೆ ನೀಡಿದ್ದಾರೆ. ಕಮಲ್ ಹಾಸನ್ ಈ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಇದನ್ನೂ ಓದಿ : ಚಿರಂಜೀವಿ ನಟನೆಯ ‘ಆಚಾರ್ಯ’ ಸಿನಿಮಾ ಸೋಲು : ಹೊಣೆಹೊತ್ತು ಹಣ ಮರಳಿಸಿದ್ರಾ ನಿರ್ದೇಶಕ ಶಿವ

    ಕಮಲ್ ಹಾಸನ್ ನಟನೆಯ ವಿಕ್ರಮ್ ಸಿನಿಮಾ ನಾಲ್ಕೇ ದಿನಕ್ಕೆ 175 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಈ ವಾರದಲ್ಲಿ ಸಿನಿಮಾ ಇನ್ನೂರು ಕೋಟಿ ಕ್ಲಬ್ ಗೆ ಸೇರಲಿದೆ ಎಂದು ಅಂದಾಜಿಸಲಾಗಿದೆ. ಈ ಖುಷಿಗಾಗಿ ಕಮಲ್ ಹಾಸನ್, ತಮ್ಮ ಸಿನಿಮಾದ ನಿರ್ದೇಶಕ ಲೋಕೇಶ್ ಕನಗರಾಜ್ ಅವರಿಗೆ ದುಬಾರಿ ಕಾರನ್ನು ಉಡುಗೊರೆಯಾಗಿ ನೀಡಿದದ್ದಾರೆ. ಈ ಕಾರಿಗೆ ಅಂದಾಜು 70 ಲಕ್ಷ ರೂಪಾಯಿ ಎಂದು ಹೇಳಲಾಗುತ್ತಿದೆ. ಈ ವಿಷಯವನ್ನು ನಿರ್ದೇಶಕರೇ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ : ನಿಖಿಲ್ ಕುಮಾರ್ ಸ್ವಾಮಿ ಪುತ್ರನಿಗೆ ಇಟ್ಟ ಹೆಸರೇನು? ಆ ಹೆಸರಿನ ಅರ್ಥ ಏನು?

    ಕೇವಲ ನಿರ್ದೇಶಕರಿಗೆ ಮಾತ್ರವಲ್ಲ, ಸಹ ನಿರ್ದೇಶನದ ತಂಡಕ್ಕೂ ಕೂಡ ದುಬಾರಿ ಬೈಕ್ ಕೊಡಿಸಿದ್ದಾರೆ ಎನ್ನಲಾಗುತ್ತಿದೆ. ಒಟ್ಟು 18 ಜನರಿಗೆ ಈ ಬೈಕ್ ದೊರೆತಿದೆ. ವಿಕ್ರಮ್ ಸಿನಿಮಾ ಗೆಲುವಿಗೆ ಚಿತ್ರತಂಡವೇ ಕಾರಣ ಎನ್ನುವ ಕಾರಣಕ್ಕಾಗಿ ಇಂಥದ್ದೊಂದು ಉಡುಗೊರೆಯನ್ನು ಕಮಲ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ವಿಶ್ವದಾದ್ಯಂತ ಚಿತ್ರಕ್ಕೆ ಭರ್ಜರಿ ಗೆಲುವು ಸಿಕ್ಕಿದೆ. ಅಲ್ಲದೇ, ಕರ್ನಾಟಕದಲ್ಲೂ ಈ ಸಿನಿಮಾ ಚೆನ್ನಾಗಿಯೇ ದುಡ್ಡು ಮಾಡಿದೆ.

  • ರಜನಿಕಾಂತ್ 169ನೇ ಸಿನಿಮಾಗೆ ಐಶ್ವರ್ಯ ರೈ ನಾಯಕಿ

    ರಜನಿಕಾಂತ್ 169ನೇ ಸಿನಿಮಾಗೆ ಐಶ್ವರ್ಯ ರೈ ನಾಯಕಿ

    ಕಾಲಿವುಡ್ ರಜನಿಕಾಂತ್ ನಟನೆಯ 169ನೇ ಚಿತ್ರಕ್ಕೆ ಕೊನೆಗೂ ನಾಯಕಿ ಯಾರು ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಈ ಹಿಂದೆ `ರೋಬೋ’ ಚಿತ್ರದಲ್ಲಿ ರಜನಿಕಾಂತ್‌ಗೆ ಜೋಡಿಯಾಗಿ ನಟಿಸಿದ್ದ ಐಶ್ವರ್ಯ ರೈ ಮತ್ತೆ ಈ ಚಿತ್ರದ ಮೂಲಕ ದಕ್ಷಿಣದ ಸಿನಿಮಾದತ್ತ ಮುಖ ಮಾಡಿದ್ದಾರೆ.

    ರಜನೀಕಾಂತ್ ಮತ್ತೆ ಸಿನಿಮಾಗಳಲ್ಲಿ ಆಕ್ಟೀವ್ ಆಗಿದ್ದಾರೆ. ತಮ್ಮ 169ನೇ ಸಿನಿಮಾಗೆ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದಲ್ಲಿ ನಟಿಸುತ್ತಿದ್ದು, ಈ ಚಿತ್ರಕ್ಕೆ ರಜನಿಕಾಂತ್ ನಾಯಕಿಯಾಗಿ ವಿಶ್ವ ಸುಂದರಿ ಐಶ್ವರ್ಯ ರೈ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಮೂಲಕ ಮತ್ತೆ ಸೌತ್ ಸಿನಿಮಾಗೆ ಬರುತ್ತಿದ್ದಾರೆ. ಇದನ್ನೂ ಓದಿ: ರೆಡ್ ಕಲರ್ ಡ್ರೆಸ್‌ನಲ್ಲಿ ಸಮಂತಾ ಮಿಂಚಿಂಗ್

    ಐಶ್ವರ್ಯ ರೈ ಮದುವೆ, ಸಂಸಾರ ಅಂತಾ ಬ್ಯುಸಿಯಿದ್ದ ನಟಿ ಈಗ ಬಾಲಿವುಡ್ ಮತ್ತು ಸೌತ್ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ರಜನಿಕಾಂತ್ ಅವರ ಬಹುನಿರೀಕ್ಷಿತ ಸಿನಿಮಾ, 169ನೇ ಚಿತ್ರಕ್ಕೆ ನಾಯಕಿಯಾಗಿ ಐಶ್ವರ್ಯ ರೈ ನಟಿಸುತ್ತಿದ್ದಾರೆ.

    ನೆಲ್ಸನ್ ನಿರ್ದೇಶನದ ಡಾಕ್ಟರ್ ಚಿತ್ರ ಒಳ್ಳೆಯ ಪ್ರತಿಕ್ರಿಯೆ ಪಡೆದಿತ್ತು. ಬಳಿಕ ಬೀಸ್ಟ್ `ಕೆಜಿಎಫ್ 2′ ಎದುರು ಮಕಾಡೆ ಮಲಗಿತ್ತು. ಈಗ ರಜನೀಕಾಂತ್‌ಗೆ ನಿರ್ದೇಶನ ಮಾಡುವುದಕ್ಕೆ ದಿಲೀಪ್ ಕುಮಾರ್ ಸಜ್ಜಾಗಿದ್ದಾರೆ. ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಾ ಅಂತಾ ಕಾದು ನೋಡಬೇಕಿದೆ.

  • ಮದುವೆಗೂ ಮುನ್ನ ನಯನತಾರಾ ಭಾವಿ ಪತಿ ಕೊಟ್ರು ಗುಡ್ ನ್ಯೂಸ್

    ಮದುವೆಗೂ ಮುನ್ನ ನಯನತಾರಾ ಭಾವಿ ಪತಿ ಕೊಟ್ರು ಗುಡ್ ನ್ಯೂಸ್

    ಕಾಲಿವುಡ್‌ನಲ್ಲಿ ಸದ್ಯದ ಹಾಟ್ ಟಾಪಿಕ್ ಅಂದ್ರೆ ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ವಿಘ್ನೇಶ್ ಶಿವನ್ ಮದುವೆಯ ವಿಚಾರ. ಈ ಜೋಡಿ ಈವರೆಗೂ ಮದುವೆಯ ಕುರಿತು ಎಲ್ಲಿಯೂ ಮಾತನಾಡಿರಲಿಲ್ಲ. ಈಗ ಸುದ್ದಿಗೋಷ್ಠಿಯಲ್ಲಿ ವಿಘ್ನೇಶ್ ಶಿವನ್ ತಮ್ಮ ಮದುವೆಯ ಬಗ್ಗೆ ಮಾತನಾಡಿದ್ದಾರೆ. ಜತೆಗೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

    ದಕ್ಷಿಣದ ಚಿತ್ರರಂಗದಲ್ಲಿ ಸದ್ಯ ಹಸೆಮಣೆ ಏರುತ್ತಿರೋ ಜೋಡಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಮದುವೆಗೆ ದಿನಗಣನೆ ಶುರುವಾಗಿದೆ. ಅಭಿಮಾನಿಗಳು ಈ ಜೋಡಿಯ ಮದುವೆಯ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಕಾಯ್ತಿದ್ದಾರೆ. ಇದೀಗ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ವಿಘ್ನೇಶ್, ತಾವು ಮತ್ತು ನಯನತಾರಾ ಮದುವೆಯಾಗುತ್ತಿರುವ ಕುರಿತು ಅಧಿಕೃತವಾಗಿ ಹೇಳಿದ್ದಾರೆ.

    ʻರೌಡಿ ಧಾನ್ʼ ಚಿತ್ರದ ಸೆಟ್‌ನಲ್ಲಿ ಮೊದಲ ಬಾರಿಗೆ ಭೇಟಿಯಾದ ಜೋಡಿ, ಅಲ್ಲಿಂದ ಶುರುವಾದ ಸ್ನೇಹ ನಂತರ ಪ್ರೀತಿಗೆ ತಿರುಗಿ ಇದೀಗ 7 ವರ್ಷಗಳ ನಂತರ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಈ ಕುರಿತು ಮಾತನಾಡಿರುವ ವಿಘ್ನೇಶ್, ಇಲ್ಲಿಯವರೆಗೂ ತಮ್ಮ ಸಿನಿಮಾಗೆ ಮತ್ತು ನಮ್ಮ ಖಾಸಗಿ ಜೀವನಕ್ಕೆ ಬೆಂಬಲಿಸಿದ ಅಭಿಮಾನಿಗಳಿಗೆ ಮತ್ತು ಮಾಧ್ಯಮದವರಿಗೆ ಧನ್ಯವಾದ ತಿಳಿಸಿದ್ದಾರೆ. ಇನ್ನು ಈ ವೇಳೆ, ಕಾಲಿವುಡ್ ಸ್ಟಾರ್ ಅಜಿತ್ ಕುಮಾರ್‌ಗೆ ನಿರ್ದೇಶನ ಮಾಡುವ ಕುರಿತು ಅಧಿಕೃತವಾಗಿ ನಿರ್ದೇಶಕ ವಿಘ್ನೇಶ್ ಶಿವನ್ ಅನೌನ್ಸ್ ಮಾಡಿದ್ದಾರೆ. ಇದನ್ನೂ ಓದಿ: ಡೊಳ್ಳು ಚಿತ್ರಕ್ಕೆ ಪ್ರಶಸ್ತಿಗಳ ಸುರಿಮಳೆ : ದಾಖಲೆಯ ರೀತಿಯಲ್ಲಿ ಪ್ರಶಸ್ತಿ ಪಡೆದ ಪವನ್ ಒಡೆಯರ್

    ಇದೇ ಜೂನ್ 9ರಂದು ನಯನತಾರಾ ಮತ್ತು ವಿಘ್ನೇಶ್ ಶಿವನ್ ಮಹಾಬಲಿಪುರಂನಲ್ಲಿ ಗುರುಹಿರಿಯರು, ಆಪ್ತರ ಸಮ್ಮುಖದಲ್ಲಿ ಹಸೆಮಣೆ ಏರಲಿದ್ದಾರೆ. ಜೂನ್ 7 ಮತ್ತು 8ರಂದು ಹಳದಿ ಶಾಸ್ತ್ರ ಮತ್ತು ಮೆಹೆಂದಿ ಶಾಸ್ತ್ರವಿದ್ದು, ಮದುವೆಯ ಬಳಿಕ ಚೆನ್ನೈನಲ್ಲಿ ಚಿತ್ರರಂಗದ ಸ್ನೇಹಿತರಿಗೆ ಅದ್ದೂರಿ ಆರತಕ್ಷತೆ ಏರ್ಪಡಿಸಲಾಗಿದೆ. ಇನ್ನು ನೆಚ್ಚಿನ ಜೋಡಿಯ ಮದುವೆಯನ್ನ ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾಯ್ತಿದ್ದಾರೆ.

  • ನಯನತಾರಾ ಮದುವೆಗೆ ಬರಲಿದ್ದಾರೆ ಸಿಎಂ ಸ್ಟಾಲಿನ್

    ನಯನತಾರಾ ಮದುವೆಗೆ ಬರಲಿದ್ದಾರೆ ಸಿಎಂ ಸ್ಟಾಲಿನ್

    ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ವಿಘ್ನೇಶ್ ಶಿವನ್ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಹಲವು ವರ್ಷಗಳಿಂದ ಪ್ರೀತಿಸಿ ಮದುವೆಯಾದ ಈ ಜೋಡಿ ಈಗ ಮದುವೆ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಮದುವೆ ದಿನಗಣನೆ ಶುರುವಾಗಿದ್ದು, ಯಾರಿಗೆಲ್ಲ ನಯನಾತಾರಾ ಮದುವೆಗೆ ಆಮಂತ್ರಣವಿದೆ ಯಾರೆಲ್ಲ ಈ ಮದುವೆಗೆ ಸಾಕ್ಷಿಯಾಗಲಿದ್ದಾರೆ ಎಂಬುದೇ ವಿಶೇಷ.

    ಕಾಲಿವುಡ್‌ನ ಮುದ್ದಾದ ಜೋಡಿಗಳಲ್ಲಿ ಒಂದಾಗಿರೋ ನಯನತಾರಾ ಮತ್ತು ವಿಘ್ನೇಶ್ ಶಿವನ್ ೭ ವರ್ಷಗಳ ಡೇಟಿಂಗ್ ನಂತರ ಈಗ ಗುರು ಹಿರಿಯರ ಸಮ್ಮುಖದಲ್ಲಿ ಜೂನ್ 9ರಂದು ತಿರುಪತಿ ಸನ್ನಿಧಿಯಲ್ಲಿ ಹಸೆಮನೆ ಏರಲು ಸಜ್ಜಾಗಿದ್ದಾರೆ. ಆಪ್ತರಿಗೆ ಈಗಾಗಲೇ ಆಹ್ವಾನಿಸುವುದರಲ್ಲಿ ಬ್ಯುಸಿಯಿರೋ ಈ ಜೋಡಿ ಈಗ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಅವರಿಗೂ ಮದುವೆಗೆ ಆಮಂತ್ರಣ ನೀಡಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ: ಮೂಸೆವಾಲಾ ರೀತಿಯಲ್ಲೇ ಹತ್ಯೆ ಮಾಡೋದಾಗಿ ಸಲ್ಮಾನ್‌ಖಾನ್‌ಗೆ ಬೆದರಿಕೆ – ಕೃಷ್ಣಮೃಗ ಬೇಟೆಯೇ ಮುಳುವಾಯ್ತ?

     

    View this post on Instagram

     

    A post shared by Nayanthara Team (@nayantharateam)

    ಇನ್ನು ನಯನತಾರಾ ಅದ್ದೂರಿ ಮದುವೆಯಲ್ಲಿ ಕಮಲ್ ಹಾಸನ್, ರಜನೀಕಾಂತ್ ಸಮಂತಾ, ವಿಜಯ್ ಸೇತುಪತಿ, ಅನುಷ್ಕಾ ಶೆಟ್ಟಿ, ದಳಪತಿ ವಿಜಯ್ ಸೇರಿದಂತೆ ಸಾಕಷ್ಟು ಗಣ್ಯರಿಗೆ ಆಮಂತ್ರಣ ನೀಡಿಲಾಗಿದೆ. ಇನ್ನು ಮದುವೆಗೆ ಆಪ್ತರಿಗಷ್ಟೇ ಆಹ್ವಾನವಿದೆ. ಮದುವೆ ಪ್ರಸಾರದ ಹಕ್ಕನ್ನು ಓಟಿಟಿ ನೀಡಲಾಗಿದೆ ಎಂನ ಮಾಹಿತಿ ಹೊರಬಿದ್ದಿದೆ. ಇನ್ನು ಮದುವೆ ಸಿದ್ಧತೆ ಭರದಿಂದ ಸಾಗುತ್ತಿದ್ದು, ನೆಚ್ಚಿನ ಜೋಡಿಯ ಮದುವೆ ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ.