Tag: Kollywood

  • `ನನ್ನ ಹೀರೋ’ ಎಂದು ಕಮಲ್ ಹಾಸನ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ ಖುಷ್ಬೂ

    `ನನ್ನ ಹೀರೋ’ ಎಂದು ಕಮಲ್ ಹಾಸನ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ ಖುಷ್ಬೂ

    ಟನೆ ಮತ್ತು ರಾಜಕೀಯ ಎರಡು ಕ್ಷೇತ್ರಗಳಲ್ಲಿ ಗುರುತಿಸಿಕೊಂಡು ಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವ ನಟಿ ಖುಷ್ಬೂ ಸುಂದರ್ ಇದೀಗ ನಟ ಕಮಲ್ ಹಾಸನ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಖುಷ್ಬೂ ಖುಷಿಪಟ್ಟಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

    ಸಾಕಷ್ಟು ಸಿನಿಮಾಗಳಲ್ಲಿ ಒಟ್ಟಿಗೆ ಜೋಡಿಯಾಗಿ ನಟಿಸಿರುವ ಕಮಲ್ ಹಾಸನ್ ಮತ್ತು ಖುಷ್ಬೂ ಇದೀಗ ಮತ್ತೆ ಭೇಟಿಯಾಗಿದ್ದಾರೆ. ನನ್ನ ಹೀರೋ ಎಂದು ಕಮಲ್ ಹಾಸನ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ನಟಿ ಖುಷ್ಬೂ ಸಂಭ್ರಮಿಸಿದ್ದಾರೆ. ನನ್ನ ಹೀರೋ, ನನ್ನ ಗೆಳೆಯ, ನನ್ನ ವಿಕ್ರಮ್ ಎಂದು ಬರೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

    ಕಮಲ್ ಹಾಸಸ್ ನಟನೆಯ ಜೊತೆಗೆ ನಿರ್ಮಾಣ ಮಾಡಿದ `ವಿಕ್ರಮ್’ ಸಿನಿಮಾ ಮೂಲಕ ಕಂಬ್ಯಾಕ್ ಆಗಿದ್ದಾರೆ. `ವಿಕ್ರಮ್’ ಚಿತ್ರದ ಸಕ್ಸಸ್ ಅಲೆಯಲ್ಲಿ ತೆಲುತ್ತಿದ್ದಾರೆ. ಇದೇ ಖುಷಿಯಲ್ಲಿ ಚಿತ್ರರಂಗದ ಸ್ನೇಹಿತರನ್ನು ಕಮಲ್ ಭೇಟಿಯಾಗಿ ಸಕ್ಸಸ್ ಖುಷಿಯಾಗಿ ಸಂಭ್ರಮಿಸುತ್ತಿದ್ದಾರೆ. ಇದೀಗ ವಿಕ್ರಮ್ ಸಿನಿಮಾ ಗೆದ್ದ ಖುಷಿಯಲ್ಲಿ ಕಮಲ್ ಹಾಸನ್, ಖುಷ್ಬೂ ಪರಸ್ಪರ ಭೇಟಿಯಾಗಿದ್ದಾರೆ. ೩೦ ವರ್ಷಗಳಿಂದ ಇಬ್ಬರಿಗೂ ಗೆಳೆತನವಿದ್ದು, ಇಂದಿಗೂ ಪರಸ್ಪರ ಭೇಟಿಯಾಗುತ್ತಾ ಒಬ್ಬರ ಗೆಲುವನ್ನ ಇನ್ನೊಬ್ಬರು ಸಂಭ್ರಮಿಸುತ್ತಾರೆ.

    Live Tv

  • ಆರ್.ಆರ್.ಆರ್ ಅಕೌಂಟ್ ಕ್ಲೋಸ್ : ನಿರ್ಮಾಪಕರಿಗೆ ಒಟ್ಟು ಹರಿದು ಬಂದ ಹಣವೆಷ್ಟು?

    ಆರ್.ಆರ್.ಆರ್ ಅಕೌಂಟ್ ಕ್ಲೋಸ್ : ನಿರ್ಮಾಪಕರಿಗೆ ಒಟ್ಟು ಹರಿದು ಬಂದ ಹಣವೆಷ್ಟು?

    ರಾಜಮೌಳಿ ನಿರ್ದೇಶನದ ಬಹುಕೋಟಿ ಬಜೆಟ್ ಸಿನಿಮಾ ಆರ್.ಆರ್.ಆರ್ ಸಿನಿಮಾ ಬಹುತೇಕ ಚಿತ್ರಮಂದಿರಗಳಿಂದ ಎತ್ತಂಗಡಿ ಆಗಿದೆ. ಹಾಗಾಗಿ ಈ ಸಿನಿಮಾ ಎಷ್ಟೆಲ್ಲ ಹಣವನ್ನು ತಂದುಕೊಟ್ಟಿತು ಎನ್ನುವ ಕುತೂಹಲ ಮೂಡಿದೆ. ಸಿನಿಮಾ ರಿಲೀಸ್ ಆಗಿ ಎರಡ್ಮೂರು ವಾರಗಳ ಕಾಲ, ನೂರು ಕೋಟಿ ಬಂತು, ಐನೂರು ಕೋಟಿ ಆಯಿತು ಹೀಗೆ ಸುದ್ದಿಗಳನ್ನು ಓದಿದ್ದೇವೆ. ಇದೀಗ ಒಟ್ಟು ಎಷ್ಟು ಹಣ ಬಂದಿದೆ ಎನ್ನುವ ಪ್ರಶ್ನೆ ಕ್ಯೂರಿಯಾಸಿಟಿ ಮೂಡಿಸಿದೆ.

    ಕೇವಲ ರಾಜಮೌಳಿ ನಿರ್ದೇಶನ ಮಾಡಿದಾಗ, ಬಾಕ್ಸ್ ಆಫೀಸಿನಲ್ಲಿ ಒಂದು ಲೆಕ್ಕಚಾರ ಇದ್ದೇ ಇರುತ್ತದೆ. ಆದರೆ, ಈ ಬಾರಿ ಇಬ್ಬರು ಸೂಪರ್ ಸ್ಟಾರ್ ಜೊತೆ ರಾಜಮೌಳಿ ಬಂದಿದ್ದಾರೆ. ಹಾಗಾಗಿ ಲೆಕ್ಕಾಚಾರ ಭರ್ಜರಿಯಾಗಿಯೇ ಇರುತ್ತದೆ ಎನ್ನುವ ನಂಬಿಕೆ ಚಿತ್ರೋದ್ಯಮದ್ದು. ರಾಜಮೌಳಿಯೂ ಸೇರಿದಂತೆ ಮೂವರು ಸ್ಟಾರ್ ಗಳು ಒಂದೇ ಸಿನಿಮಾದಲ್ಲಿ ಸಮಾಗಮವಾಗಿದ್ದರಿಂದ ಸಾವಿರ ಕೋಟಿಯೇ ನಿರ್ಮಾಪಕರ ಜೇಬಿಗೆ ಹರಿದು ಬಂದಿದೆ. ಇದನ್ನೂ ಓದಿ: ಶಿವಣ್ಣ – ತಲೈವಾ ಸಿನಿಮಾಗೆ `ಜೈಲರ್’ ಟೈಟಲ್ ಫಿಕ್ಸ್

    ಸಿನಿ ರಂಗದ ಲೆಕ್ಕಾಚಾರದ ಪಂಡಿತರ ಪ್ರಕಾರ ಥಿಯೇಟರ್ ನಿಂದಲೇ ಒಟ್ಟು 1100 ಕೋಟಿ ಬಂದಿದೆ ಎಂದು ಹೇಳಲಾಗುತ್ತಿದೆ. ಟಿವಿ ರೈಟ್ಸ್, ಡಿಜಿಟಲ್ ರೈಟ್ಸ್, ಆಡಿಯೋ ಹಕ್ಕುಗಳನ್ನು ಸೇರಿಸಿದರೆ, 1450 ಕೋಟಿಯಷ್ಟು ಹಣವು ಆರ್.ಆರ್.ಆರ್ ಗಳಿಸಿದೆ ಎನ್ನಲಾಗುತ್ತಿದೆ. ಟ್ಯಾಕ್ಸ್, ಕಮಿಷನ್, ಇತ್ಯಾದಿ ಇತ್ಯಾದಿ ಕಡಿತಗೊಂಡು ನಿರ್ಮಾಪಕರಿಗೆ ಎಷ್ಟು ಹಣ ಸೇರುತ್ತದೆ ಎನ್ನುವುದೇ ಸದ್ಯಕ್ಕಿರುವ ಕುತೂಹಲ. ಮುಂದಿನ ದಿನಗಳಲ್ಲಿ ಅದೂ ಗೊತ್ತಾಗಬಹುದು.

    Live Tv

  • ಶಿವಣ್ಣ – ತಲೈವಾ ಸಿನಿಮಾಗೆ `ಜೈಲರ್’ ಟೈಟಲ್ ಫಿಕ್ಸ್

    ಶಿವಣ್ಣ – ತಲೈವಾ ಸಿನಿಮಾಗೆ `ಜೈಲರ್’ ಟೈಟಲ್ ಫಿಕ್ಸ್

    ಸೂಪರ್‌ ಸ್ಟಾರ್‌ ರಜನಿಕಾಂತ್‌ ಮತ್ತು ಹ್ಯಾಟ್ರಿಕ್‌ ಹೀರೋ ಶಿವಣ್ಣ ನಟನೆಯ ನಿರೀಕ್ಷಿತ ಸಿನಿಮಾಗೆ ‌ʻಜೈಲರ್ʼ ಟೈಟಲ್ ಫಿಕ್ಸ್ ಆಗಿದೆ. ಇದೀಗ `ಜೈಲರ್’ ಚಿತ್ರದ ಮಾಸ್‌ ಪೋಸ್ಟರ್‌ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸುತ್ತಿದೆ.

    ಶಿವಣ್ಣ ಮತ್ತು ರಜನಿಕಾಂತ್ ಈ ಇಬ್ಬರು ಸ್ಟಾರ್ಸ್ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ತಿದ್ದಾರೆ. `ಬೀಸ್ಟ್’ ಚಿತ್ರದ ಸೋಲಿನ ನಂತರ ರಜನಿಕಾಂತ್ 169ನೇ ಸಿನಿಮಾಗೆ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಇನ್ನು ಇತ್ತೀಚೆಗಷ್ಟೇ ನಟ ಶಿವಣ್ಣ ಕೂಡ ರಜನಿಕಾಂತ್ ಸಿನಿಮಾದಲ್ಲಿ ತಾವು ಕೂಡ ಭಾಗವಾಗಿ ನಟಿಸುತ್ತಿರುವುದರ ಬಗ್ಗೆ ಹೇಳಿಕೊಂಡಿದ್ದರು. ಇದೀಗ ಚಿತ್ರದ ಪೋಸ್ಟರ್ ಔಟ್ ಆಗಿದ್ದು, ಸಿನಿಪ್ರೇಕ್ಷಕರು ಪೋಸ್ಟರ್ ನೋಡಿ ವಾವ್ ಎನ್ನುತ್ತಿದ್ದಾರೆ. ಇದನ್ನೂ ಓದಿ: ಸಿನಿಮಾ ನೋಡಲು 5 ಹೆಚ್ಚುವರೆ ಅಂಕ ಮತ್ತು 1 ದಿನ ರಜೆ ಘೋಷಿಸಿದ ಪ್ರಿನ್ಸಿಪಾಲ್ : ಪಾಲಕರು ಏನ್ ಹೇಳ್ತಾರೆ?

    ಚಿತ್ರದಲ್ಲಿ ಪವರ್‌ಫುರ್ ಪಾತ್ರದಲ್ಲಿ ಶಿವಣ್ಣ ರಜನಿಕಾಂತ್‌ಗೆ ಸಾಥ್ ನೀಡ್ತಿದ್ದಾರೆ. ಇನ್ನು ರಕ್ತಸಿಕ್ತವಾಗಿರುವ ಮಚ್ಚು ನೇತಾಡುತ್ತಿರುವ ಲುಕ್ ರಿವೀಲ್ ಆಗಿದ್ದು, ಇದೊಂದು ಪಕ್ಕಾ ಮಾಸ್ ಸಿನಿಮಾ ಆಗಿದೆ. ಚಿತ್ರದ ರಗಡ್ ಪೋಸ್ಟರ್ ಬಗ್ಗೆ ಅಭಿಮಾನಿಗಳ ವಲಯದಲ್ಲಿ ಕ್ಯೂರಿಯಾಸಿಟಿ ಬೀಲ್ಡ್ ಆಗಿದ್ದು, ಪೋಸ್ಟರ್ ಲುಕ್ ಏಲ್ಲೆಡೆ ವೈರಲ್ ಆಗಿದೆ. ಚಿತ್ರಕ್ಕೆ ನಾಯಕಿಯಾಗಿ ವಿಶ್ವ ಸುಂದರಿ ಐಶ್ವರ್ಯ ರೈ ನಟಿಸಲಿದ್ದಾರೆ. ಸಾಕಷ್ಟು ವರ್ಷಗಳ ನಂತರ ಒಂದಾಗ್ತಿರೋ ಈ ಜೋಡಿಯನ್ನ ಹಾಗೂ ತಲೈವಾ ಮತ್ತು ಶಿವಣ್ಣ ಡೆಡ್ಲಿ ಕಾಂಬಿನೇಷನ್‌ ನೋಡಲು ಫ್ಯಾನ್ಸ್‌ ಥ್ರಿಲ್‌ ಆಗಿದ್ದಾರೆ.

    Live Tv

  • ಗಂಡನ ಮನೆಯ ಫೋಟೋ ಹಂಚಿಕೊಂಡ ನಯನತಾರಾ : ಸಂಪ್ರದಾಯ ಪಾಲಿಸಿದ ನಟಿಗೆ ಅಭಿಮಾನಿಗಳ ಹಾರೈಕೆ

    ಗಂಡನ ಮನೆಯ ಫೋಟೋ ಹಂಚಿಕೊಂಡ ನಯನತಾರಾ : ಸಂಪ್ರದಾಯ ಪಾಲಿಸಿದ ನಟಿಗೆ ಅಭಿಮಾನಿಗಳ ಹಾರೈಕೆ

    ಸಿಲೆಬ್ರಿಟಿಗಳು ಏನೇ ಮಾಡಿದರೂ ಅದು ಸುದ್ದಿ ಆಗುತ್ತದೆ. ಇತ್ತೀಚೆಗಷ್ಟೇ ಹೊಸ ಜೀವನಕ್ಕೆ ಕಾಲಿಟ್ಟಿರುವ ಲೇಡಿ ಸೂಪರ್ ಸ್ಟಾರ್ ನಯನತಾರಾ ಇದೀಗ ಪತಿ ವಿಘ್ನೇಶ್ ಶಿವನ್ ಮನೆಯಲ್ಲಿದ್ದಾರೆ. ಪತಿಯ ಮನೆಗೆ ಬಂದಿದ್ದೇನೆ ಎಂದು ಅವರು ಫೋಟೋವೊಂದನ್ನು ಶೇರ್ ಮಾಡಿದ್ದು, ಅದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಮದುವೆಯಾದ ನಂತರ ಪತಿ ಮನೆಗೆ ಹೋಗುವುದು ಕಾಮನ್ ಆಗಿದ್ದರೂ, ಮದುವೆ ನಂತರದ ಸಂಪ್ರದಾಯವನ್ನು ಅವರು ಪಾಲಿಸುತ್ತಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

    ಮದುವೆಯ ಮರುದಿನ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಈ ಜೋಡಿ, ಆನಂತರ ಮಾಧ್ಯಮಗಳ ಮುಂದೆ ಬಂದು, ಮದುವೆಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ. ಅಲ್ಲದೇ, ತಿರುಪತಿಯಲ್ಲಿ ನಡೆದ ಘಟನೆಗೆ ಈಗಾಗಲೇ ಅವರು ಕ್ಷಮೆ ಕೂಡ ಕೇಳಿದ್ದಾರೆ. ತಿರುಪತಿ ಆಡಳಿತ ಮಂಡಳಿ ನೋಟಿಸ್ ಕಳುಹಿಸುವ ವಿಚಾರದ ಕುರಿತು ಮಾತನಾಡಿರುವ ವಿಘ್ನೇಶ್ ಶಿವನ್. ಆಗಲೇ ಕ್ಷಮೆ ಕೇಳಿದ್ದೇವೆ. ಇನ್ನೂ ನೋಟಿಸ್ ಬಂದಿಲ್ಲ. ಬಂದರೆ, ಆಡಳಿತ ಮಂಡಳಿ ಜೊತೆ ಮಾತನಾಡುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ಕವಿಶೈಲದಿಂದ ತೀರ್ಥಹಳ್ಳಿವರೆಗೆ ಕಾಂಗ್ರೆಸ್ ಪಾದಯಾತ್ರೆ 

    ಸತತ ಆರೇಳು ವರ್ಷಗಳಿಂದ ಪ್ರೀತಿಸುತ್ತಿದ್ದ ನಯನತಾರಾ ಮತ್ತು ವಿಘ್ನೇಶ್ ಶಿವನ್, ಒಟ್ಟೊಟ್ಟಿಗೆ ಓಡಾಡುತ್ತಿದ್ದರು. ಅಷ್ಟೂ ವರ್ಷಗಳ ಕಾಲ ಪ್ರೀತಿಯನ್ನು ಕಾಪಿಟ್ಟುಕೊಂಡು ಇದೀಗ ಸತಿಪತಿಗಳಾಗಿದ್ದಾರೆ. ಅದ್ಧೂರಿಯಾಗಿಯೇ ಮದುವೆ ಆಗಿದ್ದಾರೆ. ರಜನಿಕಾಂತ್, ಶಾರುಖ್ ಖಾನ್ ಸೇರಿದಂತೆ ಭಾರತೀಯ ಸಿನಿಮಾ ರಂಗದ ಅನೇಕ ತಾರೆಯರು ಈ ಜೋಡಿಯ ಮದುವೆಗೆ ಹಾಜರಿದ್ದು ಶುಭ ಹಾರೈಸಿದ್ದಾರೆ.

  • ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸಲ್ಲ: ಮದುವೆ ನಂತರ ನಯನತಾರಾ ನಿರ್ಧಾರ

    ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸಲ್ಲ: ಮದುವೆ ನಂತರ ನಯನತಾರಾ ನಿರ್ಧಾರ

    ಯನತಾರಾ ಮದುವೆಯಾಗಿ ಇನ್ನೂ ಒಂದು ವಾರ ಕೂಡ ಕಳೆದಿಲ್ಲ. ಮದುವೆಯ ಸಂಭ್ರಮದಲ್ಲಿದ್ದ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ ಲೇಡಿ ಸೂಪರ್ ಸ್ಟಾರ್. ಮದುವೆಯ ನಂತರ ನಟನೆಗೆ ಸಂಬಂಧಿಸಿದಂತೆ ಅವರು ಕೆಲವು ನಿರ್ಧಾರಗಳನ್ನು ತಗೆದುಕೊಂಡಿದ್ದು, ಅದರಿಂದಾಗಿ ಅಭಿಮಾನಿಗಳಿಗೆ ಖಂಡಿತಾ ನಿರಾಸೆ ಆಗದೇ ಇರದು. ಅಲ್ಲದೇ, ಈ ನಿರ್ಧಾರ ತಗೆದುಕೊಂಡಿದ್ದು ಯಾಕೆ ಎಂದು ತಮಿಳು ಸಿನಿಮಾ ರಂಗ ತಲೆ ಕೆಡಿಸಿಕೊಂಡು ಕೂತಿದೆ.

    ಮದುವೆಯ ಮಾರನೇ ದಿನವೇ ಅವರು ತಿರುಪತಿ ದರ್ಶನಕ್ಕೆ ಹೋಗಿ ಎಡವಟ್ಟು ಮಾಡಿಕೊಂಡರು. ಚಪ್ಪಲಿ ಧರಿಸಿ ದೇವಸ್ಥಾನದ ಆವರಣದಲ್ಲಿ ಓಡಾಡಿದ್ದಕ್ಕಾಗಿ ತಿಮ್ಮಪ್ಪನ ಭಕ್ತರ ಕೋಪಕ್ಕೆ ಕಾರಣವಾದರು. ಅಲ್ಲದೇ, ದೇವಸ್ಥಾನದ ಅಧಿಕಾರಿಗಳಿ ನೋಟಿಸ್ ಗೆ ಅವರು ಉತ್ತರ ಕೊಡಬೇಕಾಗಿ ಬಂತು. ಇದರ ಬೆನ್ನಲ್ಲೇ ಅವರು ಮತ್ತೊಂದು ಮಹತ್ವದ ಘೋಷಣೆ ಮಾಡಿದ್ದು, ಅದರಿಂದಾಗಿ ಅಭಿಮಾನಿಗಳಿಗೆ ಕೊಂಚ ನಿರಾಸೆ ಆಗದೇ ಇರದು. ಇದನ್ನೂ ಓದಿ:ರಾಜಮೌಳಿ ಮುಂದಿನ ಚಿತ್ರಕ್ಕೆ ಐಶ್ವರ್ಯ ರೈ ನಾಯಕಿ?

    ನಯನತಾರಾ ಲೇಡಿ ಸೂಪರ್ ಸ್ಟಾರ್. ಪವರ್ ಫುಲ್ ಪಾತ್ರಗಳಿಗೂ ಸೈ, ರೊಮ್ಯಾಂಟಿಕ್ ದೃಶ್ಯಗಳಿಗೂ ಜೈ ಎನ್ನುತ್ತಿದ್ದರು. ಅದರಲ್ಲೂ ಇಂಟಿಮೇಟ್ ದೃಶ್ಯಗಳು ಇದ್ದಾಗ, ಆ ಪಾತ್ರದೊಳಗೆ ತಲ್ಲೀಣರಾಗುತ್ತಿದ್ದರು. ಇನ್ಮುಂದೆ ಅವರು ಈ ರೀತಿಯ ಪಾತ್ರಗಳಲ್ಲಿ ಮತ್ತು ದೃಶ್ಯಗಳಲ್ಲಿ ನಟಿಸುವುದಿಲ್ಲ ಎಂದು ಹೇಳಿದ್ದಾರಂತೆ. ಹಾಗಂತ ಅಲ್ಲಿನ ನಿರ್ಮಾಪಕರಿಗೆ ಸಂದೇಶ ಕಳುಹಿಸಿರುವುದಾಗಿ ಅಲ್ಲಿನ ಮಾಧ್ಯಮಗಳು ಸುದ್ದಿ ಮಾಡಿವೆ. ಇದನ್ನು ಕೇಳಿದ ನಯನತಾರಾ ಅಭಿಮಾನಿಗಳಿಗೆ ಕೊಂಚ ನಿರಾಸೆಯೂ ಆಗಿದೆ ಎಂದೂ ಸುದ್ದಿಯಾಗಿದೆ.

  • ರಾಜಮೌಳಿ ಮುಂದಿನ ಚಿತ್ರಕ್ಕೆ ಐಶ್ವರ್ಯ ರೈ ನಾಯಕಿ?

    ರಾಜಮೌಳಿ ಮುಂದಿನ ಚಿತ್ರಕ್ಕೆ ಐಶ್ವರ್ಯ ರೈ ನಾಯಕಿ?

    ಆರ್.ಆರ್.ಆರ್ ಯಶಸ್ಸಿನಲ್ಲಿ ತೇಲುತ್ತಿರುವ ನಿರ್ದೇಶಕ ರಾಜಮೌಳಿ, ಸದ್ದಿಲ್ಲದೇ ಮತ್ತೊಂದು ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಈ ಬಾರಿ ಅವರು ಮಹೇಶ್ ಬಾಬು ಅವರಿಗಾಗಿ ಸಿನಿಮಾ ಮಾಡಲಿದ್ದು, ಈ ಕೆಲಸದಲ್ಲಿ ರಾಜಮೌಳಿ ಬ್ಯುಸಿಯಾಗಿದ್ದಾರಂತೆ. ಸ್ಕ್ರಿಪ್ಟ್ ಕೆಲಸದಲ್ಲಿ ತಲ್ಲೀಣರಾಗಿರುವ ನಿರ್ದೇಶಕರು ಮಹೇಶ್ ಬಾಬು ಅವರನ್ನು ಈ ಸಿನಿಮಾದಲ್ಲಿ ಹೊಸ ರೀತಿಯಲ್ಲಿ ತೋರಿಸಲಿದ್ದಾರಂತೆ. ಕಥೆಯೇ ಬಗ್ಗೆ ಯಾವುದೇ ಮಾಹಿತಿ ಕೊಡದೇ ಇದ್ದರೂ, ಇದು ಕೂಡ ಐತಿಹಾಸಿಕ ಸಂಬಂಧವನ್ನು ಹೊಂದಿದೆಯಂತೆ.

    ರಾಜಮೌಳಿ ಅವರ ಮುಂದಿನ ಸಿನಿಮಾಗೆ ಮಹೇಶ್ ಬಾಬು ಅವರೇ ನಾಯಕ ಎಂದು ಹೇಳಲಾದರೂ, ನಾಯಕಿ ಯಾರು ಎನ್ನುವ ಬಗ್ಗೆ ಚರ್ಚೆ ನಡೆದಿತ್ತು. ಈ ಬಾರಿ ಯಾವ ನಾಯಕಿಗೆ ರಾಜಮೌಳಿ ಅವರು ಅವಕಾಶ ನೀಡಲಿದ್ದಾರೆ ಎಂಬ ಪ್ರಶ್ನೆ ಮೂಡಿತ್ತು. ತೆಲುಗು ಸಿನಿಮಾ ರಂಗದಲ್ಲಿ ಸದ್ಯ ಐಶ್ವರ್ಯ ರೈ ಅವರ ಹೆಸರು ಕೇಳಿ ಬರುತ್ತಿದೆ. ಈ ಸಿನಿಮಾದಲ್ಲಿ ಐಶ್ವರ್ಯ ರೈ ಪ್ರಮುಖ ಪಾತ್ರ ಮಾಡಲಿದ್ದಾರೆ ಎನ್ನುವ ಸುದ್ದಿ ಸದ್ದು ಮಾಡುತ್ತಿದೆ. ಇದನ್ನೂ ಓದಿ: ಥೈಲ್ಯಾಂಡ್ ಟ್ರಿಪ್‌ನಲ್ಲಿ ಪಟಾಕಿ ಪೋರಿ ಆಶಿಕಾ ರಂಗನಾಥ್

    ಮಹೇಶ್ ಬಾಬು ಮತ್ತು ರಾಜಮೌಳಿ ಕಾಂಬಿನೇಷನ್ ನ ಈ ಸಿನಿಮಾ ಸೆಟ್ಟೇರುವುದು ತಡವಾಗಿದ್ದರೂ, ಈಗಾಗಲೇ ಹಲವು ಸುತ್ತು ಚರ್ಚೆಗಳು ನಡೆದಿವೆ. ಸಿನಿಮಾದ ಬಜೆಟ್, ಕಲಾವಿದರ ಆಯ್ಕೆ, ಕಥೆ ಹೀಗೆ ಹಲವು ಕಾರಣಗಳಿಂದಾಗಿ ಸಿನಿಮಾ ಈಗಿನಿಂದಲೇ ನಿರೀಕ್ಷೆ ಮೂಡಿಸಿದೆ. ಆರ್.ಆರ್.ಆರ್ ಸಿನಿಮಾದ ನಂತರ ಈ ಸಿನಿಮಾ ಬರುತ್ತಿರುವುದರಿಂದ ಮತ್ತಷ್ಟು ಬೇಡಿಕೆಯಂತೂ ಹೆಚ್ಚಾಗಲಿದೆ.

  • ಸಲಾರ್ ಶೂಟಿಂಗ್ ಶುರು: ಹೈದರಾಬಾದ್ ನಲ್ಲಿ ಬೀಡು ಬಿಟ್ಟ ಪ್ರಶಾಂತ್ ನೀಲ್

    ಸಲಾರ್ ಶೂಟಿಂಗ್ ಶುರು: ಹೈದರಾಬಾದ್ ನಲ್ಲಿ ಬೀಡು ಬಿಟ್ಟ ಪ್ರಶಾಂತ್ ನೀಲ್

    ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ ನ ಸಲಾರ್ ಸಿನಿಮಾದ ಶೂಟಿಂಗ್ ಕೆಲ ತಿಂಗಳ ಕಾಲ ನಿಲ್ಲಿಸಲಾಗಿತ್ತು. ಪ್ರಭಾಸ್ ನಟನೆಯ ರಾಧೆ ಶ್ಯಾಮ್ ಮತ್ತು ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ 2 ಸಿನಿಮಾ ರಿಲೀಸ್ ಕಾರಣದಿಂದಾಗಿ ಸಲಾರ್ ಚಿತ್ರೀಕರಣ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಹೈದರಾಬಾದ್ ನಲ್ಲಿ ಶೂಟಿಂಗ್ ನಡೆದಿದೆ. ಪ್ರಭಾಸ್, ಶ್ರುತಿ ಹಾಸನ್ ಸೇರಿದಂತೆ ಹಲವು ಕಲಾವಿದರು ಈ ಹಂತದ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ.

    ಅಂದುಕೊಂಡಂತೆ ಆಗಿದ್ದರೆ ಈ ಹಿಂದೆಯೇ ಚಿತ್ರೀಕರಣಕ್ಕೆ ಪ್ರಶಾಂತ್ ತೆರೆಳಬೇಕಿತ್ತು. ಗಾಯದ ಸಮಸ್ಯೆಯಿಂದಾಗಿ ಪ್ರಭಾಸ್ ವಿಶ್ರಾಂತಿ ತಗೆದುಕೊಳ್ಳುತ್ತಿದ್ದರು. ಇದೀಗ ಪ್ರಭಾಸ್ ಎಲ್ಲ ರೀತಿಯಿಂದಲೂ ಫಿಟ್ ಆಗಿದ್ದು, ಹಲವು ದಿನಗಳ ಕಾಲ ಇದೇ ಸಿನಿಮಾದ ಶೂಟಿಂಗ್ ನಲ್ಲಿ ಪ್ರಭಾಸ್ ಭಾಗಿಯಾಗಲಿದ್ದಾರೆ. ಅದಕ್ಕಾಗಿ ಸಖತ್ ತಯಾರಿಯನ್ನೂ ಅವರು ಮಾಡಿಕೊಂಡಿದ್ದಾರೆ. ಅಲ್ಲದೇ, ಈ ಹಂತದಲ್ಲಿ ಮಹತ್ವದ ದೃಶ್ಯಗಳನ್ನು ಪ್ರಶಾಂತ್ ನೀಲ್ ಸೆರೆ ಹಿಡಿಯುತ್ತಿದ್ದಾರಂತೆ. ಇದನ್ನೂ ಓದಿ: ಥೈಲ್ಯಾಂಡ್ ಟ್ರಿಪ್‌ನಲ್ಲಿ ಪಟಾಕಿ ಪೋರಿ ಆಶಿಕಾ ರಂಗನಾಥ್

    ಸಲಾರ್ ತೆಲುಗು ಸಿನಿಮಾವಾಗಿದ್ದರಿಂದ, ಆನಂತರ ಬೇರೆ ಭಾಷೆಗಳಿಗೆ ಡಬ್ ಮಾಡುವುದರಿಂದ, ಕನ್ನಡದ ಕಲಾವಿದರಿಗೆ ಅಷ್ಟೇನೂ ಅವಕಾಶ ಸಿಕ್ಕಿಲ್ಲ. ಆದರೆ, ಕೆಜಿಎಫ್ ನಲ್ಲಿ ಮುದುಕ ಪಾತ್ರ ಮಾಡಿದ್ದ ಕೃಷ್ಣಜೀ ರಾವ್ ಅವರು ಸಲಾರ್ ನಲ್ಲಿ ನಟಿಸಲಿದ್ದಾರೆ. ಈ ಸಿನಿಮಾದಲ್ಲೂ ಗುರುತಿಸುವಂತೆ ಪಾತ್ರವನ್ನು ಪ್ರಶಾಂತ್ ನೀಲ್ ನೀಡಿದ್ದಾರಂತೆ.

  • `ವಿಕ್ರಮ್’ ಚಿತ್ರದ ಗೆಲುವನ್ನು ಸಂಭ್ರಮಿಸಿದ ಮೆಗಾಸ್ಟಾರ್- ಸಲ್ಮಾನ್ ಖಾನ್‌ ಸಾಥ್

    `ವಿಕ್ರಮ್’ ಚಿತ್ರದ ಗೆಲುವನ್ನು ಸಂಭ್ರಮಿಸಿದ ಮೆಗಾಸ್ಟಾರ್- ಸಲ್ಮಾನ್ ಖಾನ್‌ ಸಾಥ್

    ಕಾಲಿವುಡ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿರುವ ವಿಕ್ರಮ್ ಸಿನಿಮಾ ಕೋಟಿ ಕೋಟಿ ಲೂಟಿ ಮಾಡುತ್ತಿದೆ. ಇದೀಗ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವ ಕಮಲ್ ಹಾಸನ್ ಸಿನಿಮಾದ ಗೆಲುವನ್ನು ಮೆಗಾಸ್ಟಾರ್ ಚಿರಂಜೀವಿ ಸಂಭ್ರಮಿಸಿದ್ದಾರೆ. ಈ ಸಕ್ಸಸ್ ಖುಷಿಯಲ್ಲಿ ಸಲ್ಮಾನ್ ಖಾನ್ ಕೂಡ ಸಾಥ್ ನೀಡಿದ್ದಾರೆ.

    ಬಹುಭಾಷೆಗಳಲ್ಲಿ ತೆರೆಕಂಡಿರೋ `ವಿಕ್ರಮ್’ ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೇ ಸಕ್ಸಸ್ ಖುಷಿಯಲ್ಲಿ ಟಾಲಿವುಡ್ ಸ್ಟಾರ್ ಚಿರಂಜೀವಿ ತಮ್ಮ ನಿವಾಸದಲ್ಲಿ ಸಕ್ಸಸ್ ಪಾರ್ಟಿ ಆಯೋಜಿಸಿದ್ದರು. ಈ ವೇಳೆ ಚಿರಂಜೀವಿ, ಕಮಲ್ ಹಾಸನ್ ಅವರನ್ನು ಸನ್ಮಾನ ಮಾಡಿ, ಗೌರವಿಸಿದ್ದಾರೆ. ಈ ಸಂದರ್ಭದಲ್ಲಿ ಬಾಲಿವುಡ್ ಭಾಯ್‌ಜಾನ್ ಸಲ್ಮಾನ್ ಖಾನ್ ಮತ್ತು ನಿರ್ದೇಶಕ ಲೋಕೇಶ್ ಕನಗರಾಜ್ ಕೂಡ ಹಾಜರಿದ್ದರು.‌ ಇದನ್ನೂ ಓದಿ: ವ್ಯಕ್ತಿಯ ಮೇಲೆ ಹಲ್ಲೆ ಆರೋಪ: ಜೈ ಜಗದೀಶ್ ಪ್ರಕರಣಕ್ಕೆ ಟ್ವಿಸ್ಟ್

    ಸಕ್ಸಸ್‌ನ ಖುಷಿಯ ಕ್ಷಣಗಳನ್ನು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡು ಸಿನಿಮಾವನ್ನು ಮೆಗಾಸ್ಟಾರ್ ಚಿರಂಜೀವಿ ಹಾಡಿ ಹೊಗಳಿದ್ದಾರೆ. ಗೆಳೆಯ ಕಮಲ್ ಹಾಸನ್ ಯಶಸ್ಸನ್ನು ಸಂಭ್ರಮಿಸಿದ್ದಾರೆ. ಈ ವೇಳೆ ಸಾಥ್ ನೀಡಿರೋ ಚಿರಂಜೀವಿಗೆ ಕಮಲ್ ಹಾಸನ್ ಧನ್ಯವಾದ ತಿಳಿಸಿದ್ದಾರೆ. ಸಿನಿಮಾರಂಗದಲ್ಲಿ ಒಬ್ಬರ ಯಶಸ್ಸನ್ನ ಮತ್ತೊಬ್ಬ ಸ್ಟಾರ್ ಸಂಭ್ರಮಿಸೋದು ನೋಡಿ ಫ್ಯಾನ್ಸ್ ಕೂಡ ಥ್ರಿಲ್ ಆಗಿದ್ದಾರೆ.

  • ಖ್ಯಾತ ನಟರ ಅಶ್ಲೀಲ ವಿಡಿಯೋ  ಮೂಲಕ ಸದ್ದು ಮಾಡಿದ್ದ ಗಾಯಕಿ ಸುಚಿತ್ರಾ, ಇದೀಗ ಮತ್ತೊಮ್ಮೆ ರಾಂಗ್ ಆಗಿದ್ದಾರೆ

    ಖ್ಯಾತ ನಟರ ಅಶ್ಲೀಲ ವಿಡಿಯೋ ಮೂಲಕ ಸದ್ದು ಮಾಡಿದ್ದ ಗಾಯಕಿ ಸುಚಿತ್ರಾ, ಇದೀಗ ಮತ್ತೊಮ್ಮೆ ರಾಂಗ್ ಆಗಿದ್ದಾರೆ

    ಮಿಳು ಸಿನಿಮಾ ರಂಗದ ಅನೇಕ ಹೆಸರಾಂತ ನಟ ನಟಿಯರ ನಿದ್ದೆಗೆಡಿಸಿದ್ದ ಗಾಯಕಿ ಸುಚಿತ್ರಾ ಇದೀಗ ಮತ್ತೆ ಗರಂ ಆಗಿದ್ದಾರೆ. ಖ್ಯಾತ ನಟ ಧನುಷ್ ಸೇರಿದಂತೆ ಹಲವರ ವಿರುದ್ಧ ಚೆನ್ನೈನ ಪೊಲೀಸ್ ಆಯುಕ್ತರಿಗೆ ಅವರು ದೂರು ಸಲ್ಲಿಸಿದ್ದಾರೆ. ತನ್ನನ್ನು ಅವಹೇಳನಕಾರಿ ರೀತಿಯಲ್ಲಿ ರಂಗನಾಥನ್ ಎನ್ನುವ ನಟ ಮತ್ತು ಪತ್ರಕರ್ತ ತೋರಿಸುತ್ತಿದ್ದು, ಈ ನಟನ ಹಿಂದೆ ಧನುಷ್ ಮತ್ತು ಇತರ ಕಲಾವಿದರು ಇದ್ದಾರೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    2017ರಲ್ಲಿ ತಮ್ಮ ಫೇಸ್ ಬುಕ್ ಮತ್ತು ಟ್ವಿಟರ್ ಪೇಜಿನಲ್ಲಿ ಕಾಲಿವುಡ್ ಸೆಲೆಬ್ರಿಟಿಗಳ ಕೆಲವೊಂದು ಅಶ್ಲೀಲ ವಿಡಿಯೋಗಳನ್ನು ಅವರು ಪೋಸ್ಟ್ ಮಾಡಿದ್ದರು. ಹೆಸರಾಂತ ನಟರು ಮಾತ್ರವಲ್ಲ, ನಟಿಯರ ಅಶ್ಲೀಲ ವಿಡಿಯೋಗಳನ್ನು ಅವರು ಪೋಸ್ಟ್ ಮಾಡುತ್ತಿದ್ದರು. ಇದಕ್ಕೆ ಸುಚಿ ಲೀಕ್ಸ್ ಎಂದು ಹೆಸರಿಟ್ಟಿದ್ದರು. ಆ ವೇಳೆಯಲ್ಲಿ ಕಾಲಿವುಡ್ ನಲ್ಲಿ ಅದು ಸಂಚಲನವನ್ನೇ ಮೂಡಿಸಿತ್ತು. ಅನೇಕ ನಟ ನಟಿಯರು ತಲೆತಗ್ಗಿಸುವಂತೆ ಮಾಡಿತ್ತು. ತಮ್ಮ ಖಾತೆಗಳನ್ನು ಹ್ಯಾಕ್ ಮಾಡಿ, ಯಾರೋ ಈ ವಿಡಿಯೋಗಳನ್ನು ಹಂಚುತ್ತಿದ್ದಾರೆ ಎಂದು ಸುಚಿತ್ರಾ ಹೇಳಿದ್ದರು. ಅಲ್ಲಿಂದ ಸುಚಿತ್ರಾ ಅವರ ಮೇಲೆ ನಿರಂತರ ಕಿರುಕುಳ ನೀಡಲಾಗುತ್ತಿದೆಯಂತೆ. ಓದಿ : ಧನಂಜಯ್ ನಟನೆಯ ಮತ್ತೊಂದು ಸಿನಿಮಾ ರಿಲೀಸ್ ಘೋಷಣೆ : ವರ್ಷದ ಅತೀ ಹೆಚ್ಚು ಸಿನಿಮಾ ರಿಲೀಸ್ ಆದ ನಟ ಡಾಲಿ

    ತಾನು ಮಾಡದೇ ಇರುವ ತಪ್ಪಿಗೆ 2017ರಿಂದ ಕಿರುಕುಳವನ್ನು ಅನುಭವಿಸುತ್ತಾ ಬಂದಿದ್ದೇನೆ. ಯೂಟ್ಯೂನಲ್ಲಿ ಪತ್ರಕರ್ತ ಮತ್ತು ನಟನಾಗಿರುವ ಬೈಲ್ವಾನ್ ರಂಗನಾಥ್ ಅನ್ನುವವರು ನಾನು ಲೈಂಗಿಕ ವ್ಯಸನಿ, ಮದ್ಯ ವ್ಯಸನಿ ಎನ್ನುವಂತೆ ಬಿಂಬಿಸುತ್ತಿದ್ದಾರೆ. ಅನೇಕ ವಿಡಿಯೋಗಳನ್ನು ನನ್ನ ವಿರುದ್ಧ ಮಾಡಿದ್ದಾರೆ. ಇವರ ಹಿಂದೆ ನಟ ಧನುಷ್, ನಿರ್ದೇಶಕ ವೆಂಕಟ್ ಪ್ರಭು ಮತ್ತು ಕಾರ್ತಿಕ್ ಕುಮಾರ್ ಎನ್ನುವವರು ಇದ್ದಾರೆ. ಇದರ ವಿರುದ್ಧ ಕ್ರಮ ತಗೆದುಕೊಳ್ಳಬೇಕು ಎಂದು ಸುಚಿತ್ರಾ ದೂರು ನೀಡಿದ್ದಾರೆ.

  • ಪತಿ ವಿಘ್ನೇಶ್‌ಗೆ ದುಬಾರಿ ಬಂಗ್ಲೆ ಗಿಫ್ಟ್ ಮಾಡಿದ ನಯನತಾರಾ: ಬಂಗ್ಲೆಯ ಮೊತ್ತವೆಷ್ಟು ಗೊತ್ತಾ?

    ಪತಿ ವಿಘ್ನೇಶ್‌ಗೆ ದುಬಾರಿ ಬಂಗ್ಲೆ ಗಿಫ್ಟ್ ಮಾಡಿದ ನಯನತಾರಾ: ಬಂಗ್ಲೆಯ ಮೊತ್ತವೆಷ್ಟು ಗೊತ್ತಾ?

    ಸೌತ್ ಸಿನಿಮಾರಂಗದ ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ವಿಘ್ನೇಶ್ ಶಿವನ್ 7 ವರ್ಷಗಳ ಪ್ರೀತಿಯ ನಂತರ ಆಪ್ತರ ಸಮ್ಮುಖದಲ್ಲಿ  ಅದ್ದೂರಿಯಾಗಿ ಮದುವೆ ನೆರವೇರಿತು. ಜೂನ್ 9ರಂದು ತಮಿಳುನಾಡಿನ ಮಹಾಬಲಿಪುರಂನಲ್ಲಿ ನಡೆದ ಅದ್ದೂರಿ ಮದುವೆಯಲ್ಲಿ ವಿಘ್ನೇಶ್ ಶಿವನ್, ನಯನತಾರಾಗೆ ಮಾಂಗಲ್ಯ ಧಾರಣೆ ಮಾಡಿದರು. ಗ್ರ್ಯಾಂಡ್ ಆಗಿ ನಡೆದ ಮದುವೆಯ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಈ ಸ್ಟಾರ್ ಜೋಡಿಯ ಮದುವೆಯಲ್ಲಿ ದಕ್ಷಿಣ ಭಾರತದ ಖ್ಯಾತ ಕಲಾವಿದರಾದ ರಜನಿಕಾಂತ್, ದಳಪತಿ ವಿಜಯ್ ಸೇರಿದಂತೆ ಅನೇಕ ಕಲಾವಿದರು ಭಾಗಿಯಾಗಿದ್ದರು. ಬಾಲಿವುಡ್ ಸ್ಟಾರ್ ಶಾರುಖ್ ಖಾನ್, ಬೋನಿ ಕಪೂರ್ ಸೇರಿದಂತೆ ಅನೇಕ ಗಣ್ಯರು ಮದುವೆಯಲ್ಲಿ ಬಂದು ನಯನತಾರಾ ಮತ್ತು ವಿಘ್ನೇಶ್ ಜೋಡಿಗೆ ಶುಭಹಾರೈಸಿದರು. ನಯನತಾರಾ ಕೆಂಪು ಸೀರೆ ಮತ್ತು ರಾಯಲ್ ಆಭರಣದಲ್ಲಿ ಮಿಂಚಿದ್ದರು. ವಿಘ್ನೇಶ್ ಶಿವನ್ ಬಿಳಿ ಮತ್ತು ಗೋಲ್ಡ್ ಬಣ್ಣದ ಪಂಚೆ, ಕುರ್ತಾ ಮತ್ತು ಶಾಲ್ ಧರಿಸಿದ್ದರು. ಇಬ್ಬರ ಮದುವೆ ಲುಕ್‌ಗೆ ಫ್ಯಾನ್ಸ್ ಕೂಡ ಫಿದಾ ಆಗಿದ್ದಾರೆ. 7 ಎಳೆಯ ಈ ಜ್ಯುವೆಲ್ಲರಿಯನ್ನು ಮುತ್ತು, ವಜ್ರ ಮತ್ತು ವಿವಿಧ ದುಬಾರಿ ಸ್ಟೋನ್‌ಗಳನ್ನು ಬಳಸಿ ಮಾಡಲಾಗಿದೆ.

    ದುಬಾರಿ ಮದುವೆ ವೆಚ್ಚದಲ್ಲಿ ಮದುವೆಯಾಗಿರುವ ಈ ಜೋಡಿ ಒಬ್ಬರಿಗೊಬ್ಬರು ನೀಡಿರುವ ಗಿಫ್ಟ್ ಕೂಡ ಅಷ್ಟೆ ದುಬಾರಿಯಾಗಿದೆ. ನಯನತಾರಾ ಮದುವೆಗೆ ಧರಿಸಿದ್ದ ಅಭರಣವನ್ನು ವಿಘ್ನೇಶ್ ಶಿವನ್ ಗಿಫ್ಟ್ ಮಾಡಿದ್ದಾರೆ. ಒಟ್ಟು 5 ಕೋಟಿ ಬೆಲೆಬಾಳುವ ಒಡವೆಯನ್ನು ಧರಿಸಿದ್ದರು. ಇನ್ನು 5 ಕೋಟಿ ಮೌಲ್ಯದ ರಿಂಗ್ ಅನ್ನು ವಿಘ್ನೇಶ್ ಶಿವನ್ ಉಡುಗೊರೆಯಾಗಿ ನೀಡಿದ್ದಾರೆ. ನಯನತಾರಾ ಕೂಡ ಪತಿ ವಿಘ್ನೇಶ್ ಶಿವನ್‌ಗೆ 20 ಕೋಟಿ ಬೆಲೆಬಾಳುವ ಬಂಗ್ಲೆಯನ್ನು ಗಿಫ್ಟ್ ನೀಡಿದ್ದಾರೆ. ಇದನ್ನೂ ಓದಿ: ತಂದೆಯ ಬ್ಯಾನರ್ ನಲ್ಲೇ ಮತ್ತೆ ನಟಿಸಲಿದ್ದಾರಾ ನಿಖಿಲ್ ಕುಮಾರಸ್ವಾಮಿ?: ಯದುವೀರ ಡ್ರಾಪ್?

    ಸದ್ಯ ನಟಿ ನಯನತಾರಾ ಶಾರುಖ್ ಖಾನ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಅಟ್ಲೀ ನಿರ್ದೇಶನದ `ಜವಾನ್’ ಸಿನಿಮಾದಲ್ಲಿ ನಯನತಾರಾ ನಾಯಕಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಮೂಲಕ ಮತ್ತೊಮ್ಮೆ ಕನ್ನಡ ಸಿನಿರಸಿಕರಿಗೆ ಹತ್ತಿರವಾಗುತ್ತಿದ್ದಾರೆ. ಇನ್ನು ಮದುವೆ ಬಳಿಕವೂ ನಯನತಾರಾ ಚಿತ್ರರಂಗದಲ್ಲಿ ಆಕ್ಟೀವ್ ಆಗಿರುತ್ತಾರೆ. ಹೊಸ ಬಗೆಯ ಪಾತ್ರಗಳ ಮೂಲಕ ಮೋಡಿ ಮಾಡಲಿದ್ದಾರೆ.