Tag: Kollywood

  • ಮದುವೆಯ ವದಂತಿಗೆ ಸ್ಪಷ್ಟನೆ ನೀಡಿದ ರಾಮ್ ಪೋತಿನೇನಿ

    ಮದುವೆಯ ವದಂತಿಗೆ ಸ್ಪಷ್ಟನೆ ನೀಡಿದ ರಾಮ್ ಪೋತಿನೇನಿ

    ಸ್ಟಾರ್ ನಟ ರಾಮ್ ಪೋತಿನೇನಿ ಸದ್ಯ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗ ತಮ್ಮ ಮದುವೆಯ ಕುರಿತು ಆಗಿತ್ತಿರುವ ಚರ್ಚೆಗೆ ಸ್ಮಾರ್ಟ್ ಆಗಿ ಉತ್ತರಿಸಿದ್ದಾರೆ. ಅಷ್ಟಕ್ಕೂ ನಟ ರಾಮ್ ಹಸೆಮಣೆ ಏರುತ್ತಿರುವುದು ವಿಚಾರ ನಿಜಾನಾ ಎಂಬ ಅಪ್‌ಡೇಟ್ಸ್ ಇಲ್ಲಿದೆ ನೋಡಿ.

    ಮಸಲಾ, ಶಿವಂ, ಹೈಪರ್,ಇಸ್ಮಾರ್ಟ್ ಶಂಕರ್ ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ಗಮನ ಸೆಳೆದ ನಟ ರಾಮ್ ಪೋತಿನೇನಿ ಮದುವೆಯ ಕುರಿತು ಇತ್ತೀಚೆಗೆ ಸಾಕಷ್ಟು ಸುದ್ದಿಯಾಗಿತ್ತು. ರಾಮ್ ತನ್ನ ಹೈಸ್ಕೂಲ್ ಸ್ನೇಹಿತೆಯ ಜತೆಗೆ ಈ ಸೆಪ್ಟೆಂಬರ್‌ನಲ್ಲಿ ಹಸೆಮಣೆ ಏರುತ್ತಿದ್ದಾರೆ ಎಂದೇ ಸುದ್ದಿಯಾಗಿತ್ತು. ಈಗ ಈ ವದಂತಿಗೂ ನಟ ಟ್ವೀಟ್ ಮೂಲಕ ಉತ್ತರಿಸಿದ್ದಾರೆ. ಇದನ್ನೂ ಓದಿ:ಸಾವರ್ಕರ್ ಅವಹೇಳನ : ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಹತ್ಯೆ ಮಾಡುವುದಾಗಿ ಪತ್ರ

    ಓ ದೇವರೇ ನಿಲ್ಲಿಸು, ನಾನು ಯಾವುದೇ ರಹಸ್ಯ ಹೈಸ್ಕೂಲ್ ಪ್ರಿಯತಮೆಯನ್ನು ಮದುವೆಯಾಗುತ್ತಿಲ್ಲ ಎಂದು ನನ್ನ ಸ್ವಂತ ಕುಟುಂಬ ಮತ್ತು ಸ್ನೇಹಿತರಿಗೆ ಮನವರಿಕೆ ಮಾಡುವ ಹಂತಕ್ಕೆ ತಲುಪಿದ್ದೇನೆ. ಹೈಸ್ಕೂಲ್‌ಗೆ ನಾನು ಅಷ್ಟೇನೂ ಹೋಗಿಲ್ಲ ಎಂದು ನಟ ರಾಮ್ ಟ್ವೀಟ್ ಮೂಲಕ ಎಲ್ಲಾ ತಮ್ಮ ಮದುವೆ ವದಂತಿಗಳನ್ನು ತಳ್ಳಿಹಾಕಿದ್ದಾರೆ. ತಾವು ಸದ್ಯ ಮದುವೆಯಾಗುತ್ತಿಲ್ಲ ಎಂದು ನಟ ಸ್ಪಷ್ಟನೆ ನೀಡಿದ್ದಾರೆ.

    ಸದ್ಯ `ದಿ ವಾರಿಯರ್’ ಚಿತ್ರದಲ್ಲಿ ಬ್ಯುಸಿಯಾಗಿದ್ದು, ರಾಮ್ ಪೋತಿನೇನಿ ಜತೆ ಕೃತಿ ಶೆಟ್ಟಿ, ಆದಿ ಪಿನಿಸೆಟ್ಟಿ ನಟಿಸಿದ್ದಾರೆ. ಸದ್ಯದಲ್ಲೇ ಈ ಸಿನಿಮಾ ತೆರೆಗೆ ಅಪ್ಪಳಿಸಲಿದೆ.

    Live Tv

  • ಧನುಷ್ ವಿರುದ್ಧ ಠಾಣೆ ಮೆಟ್ಟಿಲೇರಿದ ಸಾಮಾಜಿಕ ಕಾರ್ಯಕರ್ತೆ

    ಧನುಷ್ ವಿರುದ್ಧ ಠಾಣೆ ಮೆಟ್ಟಿಲೇರಿದ ಸಾಮಾಜಿಕ ಕಾರ್ಯಕರ್ತೆ

    ಕಾಲಿವುಡ್ ಸ್ಟಾರ್ ಧನುಷ್ ಮೇಲೆ ಅಭಿಮಾನಿಗಳು ಫುಲ್ ಆಗಿದ್ದಾರೆ. ಧನುಷ್ ನಟನೆಯ `ತಿರುಚಿತ್ರಂಬಲಂ’ ಚಿತ್ರದ `ಥಾಯ್ ಕೆಲ್ವೈ’ ಸಾಂಗ್ ರಿಲೀಸ್ ಆಗಿದ್ದು, ನಟ ಧನುಷ್ ಸಾಹಿತ್ಯ ಬರೆದು, ಹಾಡಿದ್ದಾರೆ. ಈಗ ಧನುಷ್ ಬರೆದಿರುವ ಸಾಹಿತ್ಯಕ್ಕೆ ಸಾಮಾಜಿಕ ಕಾರ್ಯಕರ್ತೆ ಫುಲ್ ಗರಂ ಆಗಿದ್ದಾರೆ.

    ನಟ ಧನುಷ್ ಈಗ ಕಾಲಿವುಡ್ ಮತ್ತು ಹಾಲಿವುಡ್ ಚಿತ್ರರಂಗದಲ್ಲಿ ಬೇಡಿಕೆಯಿರುವ ನಟ. ಸದ್ಯ `ತಿರುಚಿತ್ರಂಬಲಂ’ ಸಿನಿಮಾದ ಮೂಲಕ ಸೌಂಡ್ ಮಾಡ್ತಿದ್ದಾರೆ. ಮಿತ್ರನ್ ಜವಾಹರ್ ನಿರ್ದೇಶನದ ಈ ಚಿತ್ರದಲ್ಲಿ ನಟನೆಯ ಜತೆ `ಥಾಯ್ ಕೆಲ್ವೈ’ ಹಾಡಿಗೆ ಸಾಹಿತ್ಯ ಕೂಡ ನಟ ಧನುಷ್ ಬರೆದಿದ್ದಾರೆ. ಅದೇ ಈಗ ಧನುಷ್‌ಗೆ ಮುಳುವಾಗಿದೆ.

    `ತಿರುಚಿತ್ರಂಬಲಂ’ ಚಿತ್ರವು ಮ್ಯೂಸಿಕ್ ಲವ್‌ಸ್ಟೋರಿಯಾಗಿದೆ. ಚಿತ್ರದಲ್ಲಿ ಧನುಷ್, ನಿತ್ಯ ಮೆನನ್, ರಾಶಿ ಖನ್ನಾ ನಟಿಸಿದ್ದಾರೆ. ನಾಯಕನಾಗಿ ಕಾಣಿಸಿಕೊಳ್ಳುವುದರ ಜತೆಗೆ `ಥಾಯ್ ಕೆಲ್ವೈ’ ಸಾಹಿತ್ಯ ಬರೆದು ಹಾಡಿದ್ದಾರೆ. ಚಿತ್ರಕ್ಕೆ ಅನಿರುದ್ಧ ರವಿಚಂದರ್‌ ಸಂಗೀತ ಸಂಯೋಜನೆಯಿದೆ. ಈ ಹಾಡು ಕೂಡ ಸಿಕ್ಕಾಪಟ್ಟೆ ಹಿಟ್ ಆ ಬೆನ್ನಲ್ಲೇ ಸಾಮಾಜಿಕ ಕಾರ್ಯಕರ್ತೆಯೊಬ್ಬರು ಹಾಡಿನ ಸಾಹಿತ್ಯವನ್ನು ಬದಲಿಸಿ ಎಂದು ಚಿತ್ರತಂಡದ ವಿರುದ್ಧ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ:ತಮಿಳು ಸಿನಿಮಾ ಮಾಡ್ತಾರಾ ಅಥವಾ ಕನ್ನಡದ ನಿರ್ದೇಶಕನಿಗೆ ಮಣೆ ಹಾಕ್ತಾರಾ ಯಶ್?

    ಹಾಡಿನ ಸಾಹಿತ್ಯವು ತಮಾಷೆಯಾಗಿ ಕಂಡು ಬಂದರೂ ಅದರ ಕೆಲವು ಪದಗಳು ಹಿರಿಯರಿಗೆ ಅಗೌರವ ತರುವಂತಹ ಪದವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತೆ ಹಾಡಿನ ಸಾಹಿತ್ಯ ಬದಲಿಸುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇನ್ನು ಆಗಸ್ಟ್ 18ರಂದು ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ. ರಿಲೀಸ್‌ಗೂ ಮುಂಚೆನೇ ಈ ವಿವಾದವನ್ನ ಬಗೆಹರಿಸಿಕೊಳ್ಳತ್ತಾರಾ ಅಂತಾ ಕಾದುನೋಡಬೇಕಿದೆ.

    Live Tv

  • ನಟಿ ಚಾರ್ಮಿಗಾಗಿ ಪತ್ನಿಯನ್ನೇ ಬಿಡ್ತಾರಾ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್

    ನಟಿ ಚಾರ್ಮಿಗಾಗಿ ಪತ್ನಿಯನ್ನೇ ಬಿಡ್ತಾರಾ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್

    ಪುನೀತ್ ರಾಜ್ ಕುಮಾರ್ ಅವರನ್ನು ಕನ್ನಡ ಸಿನಿಮಾ ರಂಗಕ್ಕೆ ಪರಿಚಯಿಸಿದ ನಿರ್ದೇಶಕ ಪುರಿ ಜಗನ್ನಾಥ್ ವೈವಾಹಿಕ ಬದುಕಿನಲ್ಲಿ ಬಿರುಗಾಳಿ ಎದ್ದಿದೆಯಾ? ಅಂಥದ್ದೊಂದು ಸುದ್ದಿ ತೆಲುಗು ಸಿನಿಮಾ ರಂಗದಿಂದ ಬಂದಿದೆ. ಕಳೆದ ಒಂಬತ್ತು ವರ್ಷಗಳಿಂದ ಪುರಿ ಜಗನ್ನಾಥ್ ನಿರ್ದೇಶನದ ಬಹುತೇಕ ಸಿನಿಮಾಗಳಿಗೆ ಬಂಡವಾಳ ಹೂಡುತ್ತಿರುವ ಖ್ಯಾತ ನಟಿ ಚಾರ್ಮಿ ಕೌರ್, ಈ ಬಿರುಗಾಳಿಗೆ ಕಾರಣ ಎನ್ನಲಾಗುತ್ತಿದೆ. ಕಷ್ಟದ ದಿನಗಳಲ್ಲಿ ಪತಿಯೊಂದಿಗೆ ನಿಂತಿರುವ ಪತ್ನಿಯನ್ನು ಪುರಿ ಅಷ್ಟು ಬೇಗ ದೂರ ಮಾಡುತ್ತಾರಾ ಎನ್ನುವ ಪ್ರಶ್ನೆಯೂ ಎದ್ದಿದೆ.

    ಪುರಿ ಜಗನ್ನಾಥ್ ಮತ್ತು ಚಾರ್ಮಿ ಕೌರ್ ಕಾಂಬಿನೇಷನ್ ನಲ್ಲಿ ಅನೇಕ ಸಿನಿಮಾಗಳು ನಿರ್ಮಾಣವಾಗಿದೆ. ಪುರಿ ಮಗನಿಗಾಗಿಯೇ ಚಾರ್ಮಿ ಮೂರು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಅಲ್ಲದೇ, ಪತ್ನಿಗಿಂತ ಹೆಚ್ಚು ಸಮಯವನ್ನು ಚಾರ್ಮಿ ಜೊತೆಯೇ ಪುರಿ ಕಳೆಯುತ್ತಿದ್ದಾರೆ. ಹಾಗಾಗಿ ಪತ್ನಿಯನ್ನು ಚಾರ್ಮಿಗಾಗಿ ತೊರೆಯಲಿದ್ದಾರೆ ಎನ್ನುವ ಸುದ್ದಿ ದಟ್ಟವಾಗಿದೆ. ಈ ಸುದ್ದಿಯು ಎಲ್ಲ ಕಡೆ ಹರಡುತ್ತಿದ್ದಂತೆಯೇ ಪುರಿ ಅವರ ಪುತ್ರ, ನಟ ಆಕಾಶ್ ಪರೋಕ್ಷವಾಗಿ ಕೆಲ ಮಾತುಗಳನ್ನೂ ಆಡಿದ್ದಾರೆ. ಹೀಗಾಗಿ ಚಾರ್ಮಿ ಮತ್ತು ಪುರಿ ಜಗನ್ನಾಥ್ ಮಧ್ಯೆ ಅತೀವ ಬಾಂಧವ್ಯ ಇದೆ ಎಂದು ನಂಬಲಾಗಿದೆ.  ಇದನ್ನೂ ಓದಿ: ಪೃಥ್ವಿ ಅಂಬರ್ ಮತ್ತು ಪ್ರಮೋದ್ ಕಾಂಬಿನೇಷನ್ ಚಿತ್ರಕ್ಕೆ ಚಾಲನೆ

    ಸದ್ಯ ಆಕಾಶ ನಟನೆಯ ಹೊಸ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಈ ಸಂದರ್ಭದಲ್ಲಿ ಮಾತನಾಡಿರುವ ಅವರು, ‘ನನ್ನ ತಾಯಿ ತುಂಬಾ ಒಳ್ಳೆಯವರು. ಅಪ್ಪನ ಕಷ್ಟದ ದಿನಗಳಿಂದ ಅವರ ಜೊತೆಯೇ ನಿಂತಿದ್ದಾರೆ. ಇವತ್ತು ಅಪ್ಪ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರುವುದಕ್ಕೆ ಅಮ್ಮನೂ ಕಾರಣನಾಗಿದ್ದಾರೆ. ಅವರಿಬ್ಬರೂ ದೂರವಾಗುವ ಪ್ರಶ್ನೆಯೇ ಇಲ್ಲ. ಯಾರಿಂದಲೂ ಅವರನ್ನು ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಚಾರ್ಮಿಗೆ ಎಚ್ಚರಿಕೆ ಕೊಟ್ಟಿದ್ದಾರೆ.

    ಪ್ರಕಾಶ್ ಆಡಿದ ಮಾತೂ ಕೂಡ ತೆಲುಗು ಸಿನಿಮಾ ರಂಗದಲ್ಲಿ ಸಂಚಲನ ಮೂಡಿಸಿದೆ. ಒಳ್ಳೆಯ ಪತ್ನಿಯನ್ನು ದೂರ ಮಾಡುವುದು ಸರಿ ಅಲ್ಲ ಎಂದು ಚಾರ್ಮಿಗೆ ಸೋಷಿಯಲ್ ಮೀಡಿಯಾದಲ್ಲಿ ಕಿವಿಮಾತು ಹೇಳುವಂತಹ ಕಾಮೆಂಟ್ಸ್ ಕೂಡ ಬಂದಿದೆ. ಆದರೆ, ಈ ಕುರಿತು ಚಾರ್ಮಿ ಆಗಲಿ, ಪುರಿ ಜಗನ್ನಾಥ್ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ತಮ್ಮ ಮಧ್ಯೆ ಇರುವ ಬಾಂಧವ್ಯದ ಕುರಿತು ಅವರು ಎಲ್ಲಿಯೂ ಮಾತನಾಡಿಲ್ಲ.

    Live Tv

  • ವಿದೇಶಕ್ಕೆ ಹಾರಿದ ಕಾಲಿವುಡ್ ಸ್ಟಾರ್ ಸೂರ್ಯ ದಂಪತಿ

    ವಿದೇಶಕ್ಕೆ ಹಾರಿದ ಕಾಲಿವುಡ್ ಸ್ಟಾರ್ ಸೂರ್ಯ ದಂಪತಿ

    ಕಾಲಿವುಡ್ ಸ್ಟಾರ್ ದಂಪತಿಗಳಾದ ಸೂರ್ಯ ಮತ್ತು ಜ್ಯೋತಿಕಾ ಇದೀಗ ವೆಕೇಷನ್ ಮೂಡ್‌ನಲ್ಲಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾ ಶೂಟಿಂಗ್‌ಗೆ ಬ್ರೇಕ್ ಕೊಟ್ಟು, ದೂರದ ಊರಿಗೆ ಸೂರ್ಯ ಮತ್ತು ಜ್ಯೋತಿಕಾ ಹಾರಿದ್ದಾರೆ. ಸದ್ಯ ಪ್ರವಾಸದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

     

    View this post on Instagram

     

    A post shared by Jyotika (@jyotika)

    ತಮಿಳಿನ ಸೂಪರ್ ಸ್ಟಾರ್ ಸೂರ್ಯ ಬತ್ತಳಿಕೆ ಸಾಕಷ್ಟು ಸಿನಿಮಾಗಳಿವೆ. ತಮ್ಮ ಸಿನಿಮಾದ ಶೂಟಿಂಗ್ ಜತೆ ಸ್ಟಾರ್ ನಟರ ಚಿತ್ರದಲ್ಲಿ ಅತಿಥಿ ಪಾತ್ರದ ಮೂಲಕ ಸೌಂಡ್ ಮಾಡ್ತಿರುತ್ತಾರೆ. ಸದ್ಯ ಶೂಟಿಂಗ್‌ಗೆ ಬ್ರೇಕ್ ಹಾಕಿ, ಕೋಸ್ಟರಿಕಾಗೆ ಪ್ರವಾಸಕ್ಕೆ ತೆರಳಿದ್ದಾರೆ. ಕುಟಂಬದ ಜತೆ ರಿವರ್ ರಾಫ್ಟಿಂಗ್, ಕಾಪಿ ತೋಟಗಳಿಗೆ ಭೇಟಿ ನೀಡುವುದು ಹೀಗೆ ಕುಟುಂಬದ ಜತೆ ಒಂದೊಳ್ಳೆ ಕ್ಷಣವನ್ನ ಎಂಜಾಯ್ ಮಾಡ್ತಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಪೃಥ್ವಿ ಅಂಬರ್ ಮತ್ತು ಪ್ರಮೋದ್ ಕಾಂಬಿನೇಷನ್ ಚಿತ್ರಕ್ಕೆ ಚಾಲನೆ

    ಅಮೆರಿಕಾದ ಕೋಸ್ಟರಿಕಾಗೆ ನಟ ಸೂರ್ಯ ಕುಟುಂಬ ಭೇಟಿ ನೀಡಿದೆ. ದೂರದ ಊರಿನಲ್ಲಿ ಬೀಡು ಬಿಟ್ಟಿರುವ ಸೂರ್ಯ ಕುಟುಂಬ ಹಾಲಿಡೇಸ್‌ನ ಮಸ್ತ್ ಆಗಿ ಏಂಜಾಯ್ ಮಾಡ್ತಿದ್ದಾರೆ. ಒಟ್ನಲ್ಲಿ ನೆಚ್ಚಿನ ಜೋಡಿ ಖುಷಿ ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

    Live Tv

  • ತಮಿಳಿನ ಸ್ಟಾರ್ ದಳಪತಿ ವಿಜಯ್ ಜೊತೆ ಧನ್ಯ ರಾಮ್‌ಕುಮಾರ್ ಎಂಟ್ರಿ?

    ತಮಿಳಿನ ಸ್ಟಾರ್ ದಳಪತಿ ವಿಜಯ್ ಜೊತೆ ಧನ್ಯ ರಾಮ್‌ಕುಮಾರ್ ಎಂಟ್ರಿ?

    ಸ್ಯಾಂಡಲ್‌ವುಡ್ ಬ್ಯೂಟಿ ಧನ್ಯ ರಾಮ್‌ಕುಮಾರ್ ಕನ್ನಡದ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿದ್ದಾರೆ. ಈಗ ಕಾಲಿವುಡ್‌ಗೆ ಎಂಟ್ರಿ ಕೊಡ್ತಿದ್ದಾರೆ ಎಂಬ ಸುದ್ದಿಯ ಬೆನ್ನಲ್ಲೇ ಯಾವ ಸ್ಟಾರ್ ಜತೆ ಕಾಣಿಸಿಕೊಳ್ಳುತ್ತಾರೆ ಎಂಬ ಸುದ್ದಿಯೂ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ತಮಿಳಿನ ಸ್ಟಾರ್ ವಿಜಯ್ ಸಿನಿಮಾದಲ್ಲಿ ಅಣ್ಣಾವ್ರ ಮೊಮ್ಮಗಳು ನಟಿಸುತ್ತಾರೆ ಎಂಬ ಸುದ್ದಿ ಹಬ್ಬಿದೆ.

    `ನಿನ್ನ ಸನಿಹಕೆ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕಿಯಾಗಿ ಪರಿಚಿತರಾದ ಧನ್ಯ ರಾಮ್‌ಕುಮಾರ್, ತಮ್ಮ ಮೊದಲ ಚಿತ್ರದಲ್ಲೇ ಸೈ ಎನಿಸಿಕೊಂಡರು. ಇದೀಗ ಸೌತ್ ಸಿನಿಮಾಗಳಲ್ಲಿ ಮಿಂಚಲು ಧನ್ಯ ರೆಡಿಯಾಗಿದ್ದಾರೆ ಎಂಬ ಸುದ್ದಿಯ ಬೆನ್ನಲ್ಲೇ ಯಾವ ನಟನ ಸಿನಿಮಾದಲ್ಲಿ ಎಂಬುದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆ ಆಗಿದೆ. ಇದನ್ನೂ ಓದಿ: ಅಸಲಿ ‘ಕೆಜಿಎಫ್’ ಕಥೆ ಹೇಳ್ತಾರಂತೆ ತಮಿಳಿನ ಕಬಾಲಿ ಖ್ಯಾತಿಯ ನಿರ್ದೇಶಕ ಪಾ.ರಂಜಿತ್

    ತಮಿಳಿನ ಸೂಪರ್ ಸ್ಟಾರ್ ವಿಜಯ್ ಪ್ರಾಜೆಕ್ಟ್ನಲ್ಲಿ ಧನ್ಯ ಕಾಣಿಸಿಕೊಳ್ತಿದ್ದಾರಂತೆ. ಅದಕ್ಕೆ ಪೂರಕವೆಂಬಂತೆ ನಟಿ ಧನ್ಯ ಕೂಡ ನಟ ವಿಜಯ್ ನಟನೆಯ ವಾರಿಸು ಪೋಸ್ಟರ್ ಶೇರ್ ಮಾಡಿ ವಿಶ್ ಮಾಡಿದ್ದಾರೆ. ನಿಮ್ಮ ಅಭಿನಯ ನನಗೆ ತುಂಬಾ ಇಷ್ಟ. ನಿಮ್ಮ ವಾರಿಸು ಚಿತ್ರದ ಪೋಸ್ಟರ್ ನನಗೆ ತುಂಬಾ ಇಷ್ಟ ಆಯ್ತು. ನಿಮಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ. ಹಾಗಾಗಿ ತಮಿಳಿ ವಿಜಯ್ ಚಿತ್ರದಲ್ಲಿ ಧನ್ಯ ನಟಿಸುತ್ತಾರಾ ಎಂಬ ಸುದ್ದಿ ಸಖತ್ ಸೌಂಡ್ ಮಾಡುತ್ತಿದೆ.

    ಒಟ್ನಲ್ಲಿ ಸೌತ್ ಸಿನಿಮಾರಂಗಕ್ಕೆ ಅಣ್ಣಾವ್ರ ಮನೆತನದ ಕುಡಿ ಮಿಂಚಲಿದ್ದಾರೆ ಎಂಬ ಗುಡ್ ನ್ಯೂಸ್ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಚಿತ್ರರಂಗದಲ್ಲಿ ಧನ್ಯ ಉತ್ತುಂಗ ಸ್ಥಾನಕ್ಕೆ ಏರಲಿ ಎಂಬುದು ಅಭಿಮಾನಿಗಳ ಆಶಯ.

    Live Tv

  • ಕಾಲಿವುಡ್ ಹಿರಿಯ ನಟ ವಿಜಯ್ ಕಾಂತ್ ಅವರ ಮೂರು ಬೆರಳು ಕತ್ತರಿಸಿದ ವೈದ್ಯರು

    ಕಾಲಿವುಡ್ ಹಿರಿಯ ನಟ ವಿಜಯ್ ಕಾಂತ್ ಅವರ ಮೂರು ಬೆರಳು ಕತ್ತರಿಸಿದ ವೈದ್ಯರು

    ಮಿಳಿನ ಹೆಸರಾಂತ ಹಿರಿಯ ನಟ, ಡಿಎಂಡಿಕೆ ಪಕ್ಷದ ಅಧ್ಯಕ್ಷರೂ ಆಗಿರುವ ವಿಜಯ್ ಕಾಂತ್ ಮಧುಮೇಹದಿಂದ ಬಳಲುತ್ತಿದ್ದರು. ಇತ್ತೀಚೆಗಷ್ಟೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಧುಮೇಹ ವಿಪರೀತವಾಗಿದ್ದರಿಂದ ಮತ್ತು ಬೆರಳುಗಳಿಗೆ ರಕ್ತ ಸಂಚಾರ ಆಗದೇ ಇರುವ ಕಾರಣದಿಂದಾಗಿ ಅವರ ಕಾಲಿನ ಮೂರು ಬೆರಳುಗಳನ್ನು ಕತ್ತರಿಸಿದ್ದಾರೆ ಎಂದು ಡಿಎಂಡಿಕೆ ಪಕ್ಷ ಮಾಹಿತಿ ನೀಡಿದೆ. ರಕ್ತ ಸಂಚಾರಕ್ಕೆ ತೊಂದರೆ ಆಗುತ್ತಿದ್ದರಿಂದ ಬೆರಳುಗಳನ್ನು ಕತ್ತರಿಸುವುದು ಅನಿವಾರ್ಯವಾಗಿತ್ತು ಎಂದು ವೈದ್ಯರು ತಿಳಿಸಿದ್ದರಂತೆ.

    ವಿಜಯ್ ಕಾಂತ್ ತಮಿಳಿನಲ್ಲಿ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದಾರೆ. ತಮ್ಮದೇ ಆದ ಅಭಿಮಾನ ಬಳಗ ಹೊಂದಿದ್ದರು. ಸಿನಿಮಾ ರಂಗದಿಂದ ರಾಜಕೀಯ ರಂಗಕ್ಕೆ ಜಿಗಿದು, 2005ರಿಂದ ತಮ್ಮದೇ ಡಿಎಂಡಿಕೆ ಪಕ್ಷ ಸ್ಥಾಪನೆ ಮಾಡಿ, ಸಮಾಜಸೇವೆಗೆ ಮುಂದಾಗಿದ್ದರು. ಹತ್ತು ವರ್ಷಗಳ ಕಾಲ ರಾಜಕೀಯ ಜೀವನದಲ್ಲಿದ್ದು, ನಂತರ ಸಿನಿಮಾ ಮತ್ತು ರಾಜಕೀಯ ರಂಗದಿಂದಲೇ ಅವರು ದೂರ ಉಳಿದರು. ಅನಾರೋಗ್ಯದ ಕಾರಣದಿಂದಾಗಿ ಅವರು ಈ ನಿರ್ಧಾರಕ್ಕೆ ಬಂದಿದ್ದರು. ಇದನ್ನೂ ಓದಿ: ಆಗಸ್ಟ್ 11ಕ್ಕೆ ಅಕ್ಷಯ್ ಕುಮಾರ್ ಮತ್ತು ಆಮೀರ್ ಖಾನ್ ನಡುವೆ ಬಿಗ್ ಫೈಟ್ : ಗೆಲುವು ಯಾರ ಪಾಲಿಗೆ?

    ರಜನಿಕಾಂತ್, ಕಮಲ್ ಹಾಸನ್ ಸೇರಿದಂತೆ ಅನೇಕ ನಟರ ಜೊತೆ ಒಂದೊಳ್ಳೆ ಬಾಂಧವ್ಯ ಇಟ್ಟುಕೊಂಡಿದ್ದ ವಿಜಯ್ ಕಾಂತ್ ಆರೋಗ್ಯ ಸ್ಥಿರವಾಗಿದ್ದು, ಮಧುಮೇಹಕ್ಕೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಸದ್ಯ ಅವರು ಆಸ್ಪತ್ರೆಯಲ್ಲೇ ವಿಶ್ರಾಂತಿ ತಗೆದುಕೊಳ್ಳುತ್ತಿದ್ದು, ಕೆಲವು ದಿನಗಳಲ್ಲಿ ಅವರು ಆಸ್ಪತ್ರೆಯಿಂದ ಬಿಡುಗಡೆ ಆಗಲಿದ್ದಾರಂತೆ. ವಿಜಯ್ ಕಾಂತ್ ಆರೋಗ್ಯದ ಬಗ್ಗೆ ವಿಷಯ ತಿಳಿದುಕೊಂಡಿರುವ ರಜನಿಕಾಂತ್ ಸೇರಿದಂತೆ ಹಲವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

    Live Tv

  • ದಳಪತಿ ವಿಜಯ್ ನಟನೆಯ `ವಾರಿಸು’ ಲುಕ್‌ಗೆ ಫ್ಯಾನ್ಸ್ ಬೋಲ್ಡ್

    ದಳಪತಿ ವಿಜಯ್ ನಟನೆಯ `ವಾರಿಸು’ ಲುಕ್‌ಗೆ ಫ್ಯಾನ್ಸ್ ಬೋಲ್ಡ್

    ಕಾಲಿವುಡ್ ನಟ ದಳಪತಿ ವಿಜಯ್‌ಗೆ 48ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇದೇ ಖುಷಿಯಲ್ಲಿ ದಳಪತಿ ವಿಜಯ್ ನಟನೆಯ ಮುಂಬರುವ 66ನೇ ಚಿತ್ರದ ಲುಕ್ ಮತ್ತು ಟೈಟಲ್ ಅನ್ನು ರಿವೀಲ್ ಮಾಡಿದೆ ಚಿತ್ರತಂಡ. ಸದ್ಯ ವಿಜಯ್ ನಟನೆಯ ನಯಾ ಲುಕ್ ನೋಡುಗರನ್ನ ಸಿಕ್ಕಾಪಟ್ಟೆ ಅಟ್ರಾಕ್ಟ್ ಮಾಡುತ್ತಿದೆ.

    `ಬೀಸ್ಟ್’ ಸೋಲಿನ ನಂತರ ದಳಪತಿ ವಿಜಯ್ ನಟನೆಯ ಮುಂದಿನ ಚಿತ್ರದ ಟೈಟಲ್ ಅನೌನ್ಸ್ ಆಗಿದೆ. ಸೂಪರ್ ಸ್ಟಾರ್ ವಿಜಯ್ ಹುಟ್ಟುಹಬ್ಬದ ಪ್ರಯುಕ್ತ ಚಿತ್ರದ ಟೈಟಲ್ ಜತೆ ವಿಜಯ್ ಲುಕ್ ಕೂಡ ರಿವೀಲ್ ಆಗಿದೆ. `ವಾರಿಸು’ ಚಿತ್ರದ ಟೈಟಲ್ ಮೂಲಕ ವಿಜಯ್ ಸದ್ದು ಮಾಡ್ತಿದ್ದಾರೆ. ವಾರಿಸು ಎಂದರೆ ವಾರಸುದಾರ ಎಂಬ ಅರ್ಥವಿದೆ. `ವಾರಿಸು’ ಟೈಟಲ್ ಜತೆ ದಿ ಬಾಸ್ ರಿಟನ್ಸ್ ಎಂಬ ಅಡಿಬರಹವಿದೆ. ಇದನ್ನೂ ಓದಿ: ಆಗಸ್ಟ್ 11ಕ್ಕೆ ಅಕ್ಷಯ್ ಕುಮಾರ್ ಮತ್ತು ಆಮೀರ್ ಖಾನ್ ನಡುವೆ ಬಿಗ್ ಫೈಟ್ : ಗೆಲುವು ಯಾರ ಪಾಲಿಗೆ?

    `ವಾರಿಸು’ ಚಿತ್ರದಲ್ಲಿನ ವಿಜಯ್ ಲುಕ್ಕಿಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ರಾಜಭಂಗಿಯಲ್ಲಿ ಕುಳಿತಿರುವ ವಿಜಯ್, ದುಬಾರಿ ಸೂಟ್ ಧರಿಸಿ ಮಿಂಚಿದ್ದಾರೆ. ಇದೀಗ ʻವಾರಿಸುʼ ಚಿತ್ರದ ಸೆಕೆಂಡ್‌ ಲುಕ್‌ ಕೂಡ ರಿವೀಲ್‌ ಮಾಡಿದೆ. ಈ ಸಿನಿಮಾಗೆ ವಂಶಿ ಪೈಡಿಪಲ್ಲಿ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ವಿಜಯ್ ತಾಯ್ನಾಡಿಗೆ ಹಿಂದಿರುಗುವ ಶ್ರೀಮಂತ ಕುಟುಂಬದ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ವಿಜಯ್‌ಗೆ ಜೋಡಿಯಾಗಿ ಮೊದಲ ಬಾರಿಗೆ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ.

    Live Tv

  • `ಬಾಹುಬಲಿ 2′ ರೆಕಾರ್ಡ್ ಬ್ರೇಕ್ ಮಾಡಿದ ಕಮಲ್ ಹಾಸನ್ ನಟನೆಯ `ವಿಕ್ರಮ್’

    `ಬಾಹುಬಲಿ 2′ ರೆಕಾರ್ಡ್ ಬ್ರೇಕ್ ಮಾಡಿದ ಕಮಲ್ ಹಾಸನ್ ನಟನೆಯ `ವಿಕ್ರಮ್’

    ಕಾಲಿವುಡ್‌ನಲ್ಲಿ ಏಲ್ಲೆಲ್ಲೂ `ವಿಕ್ರಮ್’ ಮೇನಿಯಾ ಜೋರಾಗಿದೆ. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಕಮಲ್ ಹಾಸನ್ ವಿಕ್ರಮಾವತಾರ ತಾಳಿ ರಗಡ್ ಆಗಿ ಕಮ್ ಬ್ಯಾಕ್ ಆಗಿದ್ದಾರೆ. ಕಾಲಿವುಡ್‌ನಲ್ಲಿ `ಬಾಹುಬಲಿ 2′ ಮಾಡಿರುವ ಎಲ್ಲಾ ರೆಕಾರ್ಡ್ ಬ್ರೇಕ್ ಮಾಡಿ, `ವಿಕ್ರಮ್’ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.

    ಸದ್ಯ ಸೌತ್ ಸಿನಿರಂಗದಲ್ಲಿ `ವಿಕ್ರಮ್’ ಆರ್ಭಟ ಜೋರಾಗಿದೆ. ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಕಲೆಕ್ಷನ್ ಲೂಟಿ ಮಾಡುತ್ತಿದೆ. ಗ್ಯಾಪ್‌ನ ನಂತರ ಕಮಲ್ ಹಾಸನ್ ವಿಕ್ರಮ್ ಚಿತ್ರದ ಕಮ್ ಬ್ಯಾಕ್ ಮಾಡಿ, ಕಮಾಲ್ ಮಾಡ್ತಿದ್ದಾರೆ. ಕಮಲ್ ಹಾಸನ್ ರಾ ಲುಕ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಇದೀಗ ಅಸಲಿ ವಿಚಾರ ಏನು ಅಂದ್ರೆ, ಪ್ರಭಾಸ್ ನಟನೆಯ `ಬಾಹುಬಲಿ 2′ ಮಾಡಿರುವ ಎಲ್ಲಾ ರೆಕಾರ್ಡ್ ಬ್ರೇಕ್ ಮಾಡಿ, ಅಗ್ರ ಸ್ಥಾನದಲ್ಲಿದೆ.

    ತಮಿಳಿನಲ್ಲಿ ಬಿಗ್ ಓಪನಿಂಗ್ ಪಡೆದಿರೋ `ವಿಕ್ರಮ್’ ಚಿತ್ರ. ರಿಲೀಸ್ 3 ವಾರಗಳು ಕಳೆದರು ಜನ ಥಿಯೇಟರ್‌ನತ್ತು ಮುಗಿಬಿದ್ದು ಚಿತ್ರ ನೋಡ್ತಿದ್ದಾರೆ. ಬಾಕ್ಸಾಫೀಸ್‌ನಲ್ಲಿ 16 ದಿನಕ್ಕೆ 352.17 ಕೋಟಿ ಕಲೆಕ್ಷನ್ ಮಾಡಿ, ನಂಬರ್ ಒನ್ ಸ್ಥಾನಕ್ಕೇರಿದೆ. ಈ ಹಿಂದೆ `ಬಾಹುಬಲಿ 2′ ಮಾಡಿರುವ ಎಲ್ಲಾ ರೆಕಾರ್ಡ್ ವಿಕ್ರಮ್ ಸಿನಿಮಾ ಬ್ರೇಕ್ ಮಾಡಿದೆ. ತಮಿಳುನಾಡಿನಲ್ಲಿ ಒಟ್ಟು 153.65 ಗಳಿಸಿದೆ. ಇನ್ನು ಯಶಸ್ವಿಯಾಗಿ ಚಿತ್ರ ಕಲೆಕ್ಷನ್ ಮಾಡುತ್ತಿದೆ. ಇದನ್ನೂ ಓದಿ: ರಣ್‌ವೀರ್ ಅವರನ್ನು ದೀಪಿಕಾ ಪಡುಕೋಣೆ ಮದುವೆಯಾಗಿದ್ದು ಏಕೆ? ರಿವೀಲ್ ಆಯ್ತು ಸೀಕ್ರೆಟ್

    `ಬಾಹುಬಲಿ 2′ ತಮಿಳಿನಲ್ಲಿ ಡಬ್ ಆಗಿ ಮಾಡಿರುವ ಮೋಡಿಗಿಂತ ಈಗ ವಿಕ್ರಮ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಈ ಮೂಲಕ ವಿಕ್ರಮ್ ಚಿತ್ರ ಅಗ್ರ ಸ್ಥಾನ ಪಟ್ಟಕ್ಕೇರಿದೆ.

    Live Tv

  • ಹನಿಮೂನ್‌ಗಾಗಿ ಥಾಯ್‌ಲೆಂಡ್‌ಗೆ ಹಾರಿದ ನಯನತಾರಾ- ವಿಘ್ನೇಶ್ ಶಿವನ್

    ಹನಿಮೂನ್‌ಗಾಗಿ ಥಾಯ್‌ಲೆಂಡ್‌ಗೆ ಹಾರಿದ ನಯನತಾರಾ- ವಿಘ್ನೇಶ್ ಶಿವನ್

    ಸೌತ್ ಸಿನಿರಂಗದ ನವಜೋಡಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಇತ್ತೀಚೆಗಷ್ಟೇ ಅದ್ದೂರಿಯಾಗಿ ಮದುವೆಯಾಗಿದ್ದರು. ನಯನತಾರಾ ಜವಾನ್‌ ಚಿತ್ರದ ಶೂಟಿಂಗ್‌ನಲ್ಲಿದ್ದರು. ಚಿತ್ರೀಕರಣಕ್ಕೆ ಬ್ರೇಕ್‌ ಕೊಟ್ಟು ಇದೀಗ ಥಾಯ್‌ಲೆಂಡ್ ಈ ಜೋಡಿ ಹಾರಿದೆ. ತಮ್ಮ ಹನಿಮೂನ್ ಪ್ರವಾಸದ ಫೋಟೋಗಳ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

    ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಅವರ ಮದುವೆಯು ಜೂನ್ 9ರಂದು ಐಷಾರಾಮಿ ರೆಸಾರ್ಟ್ವೊಂದರಲ್ಲಿ ನಡೆದಿತ್ತು. ಸೂಪರ್ ಸ್ಟಾರ್ ರಜನಿಕಾಂತ್, ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್, ಕಾರ್ತಿ ಸೇರಿದಂತೆ ಅನೇಕ ಗಣ್ಯರು ಮದುವೆಗೆ ಆಗಮಿಸಿ ಈ ಮುದ್ದಾದ ಜೋಡಿಗೆ ಶುಭ ಹಾರೈಸಿದ್ದರು. ಬಳಿಕ ಶಾರುಖ್‌ ಖಾನ್‌ ನಟನೆಯ ಜವಾನ್‌ ಶೂಟಿಂಗ್‌ನಲ್ಲಿ ನಯನತಾರಾ ಭಾಗಿಯಾಗಿದ್ದರು. ಈಗ ಹನಿಮೂನ್‌ಗೆ ಥಾಯ್‌ಲೆಂಡ್‌ಗೆ ಈ ಜೋಡಿ ಹಕ್ಕಿಗಳು ಹಾರಿದ್ದಾರೆ.

    ನಂತರ ತಿರುಪತಿಗೆ ತೆರಳಿದ್ದ ಈ ನವ ದಂಪತಿ, ದೇವರ ದರ್ಶನ ಮಾಡಿದ್ದರು. ಇದೀಗ ಹನಿಮೂನ್‌ಗಾಗಿ ನಯನತಾರಾ ಮತ್ತು ವಿಘ್ನೇಶ್ ವಿದೇಶಕ್ಕೆ ಹಾರಿದ್ದಾರೆ. ತಮ್ಮ ಹನಿಮೂನ್ ಪ್ರವಾಸಕ್ಕೆ ಈ ಜೋಡಿ ಆಯ್ಕೆ ಮಾಡಿಕೊಂಡಿರುವುದು ಥಾಯ್‌ಲೆಂಡ್ ಅನ್ನು ಹೌದು ಥಾಯ್‌ಲೆಂಡ್‌ನಲ್ಲಿ ನಯನತಾರಾ ಮತ್ತು ವಿಘ್ನೇಶ್ ಅವರು ಬೀಡುಬಿಟ್ಟಿದ್ದಾರೆ. ಇದನ್ನೂ ಓದಿ:ಹನಿಮೂನ್ ಗಿಂತ ಶೂಟಿಂಗ್ ಮುಖ್ಯ ಅಂದ ನಯನತಾರಾ: ಜವಾನ್ ಶೂಟಿಂಗ್ ನಲ್ಲಿ ಭಾಗಿ

     

    View this post on Instagram

     

    A post shared by Vignesh Shivan (@wikkiofficial)

    ಅಲ್ಲಿನ ಐಷಾರಾಮಿ ಹೋಟೆಲ್‌ವೊಂದರಲ್ಲಿ ವಾಸ್ತವ್ಯ ಹೂಡಿದ್ದಾರೆ. ತಮ್ಮ ಒಂದಷ್ಟು ಸುಂದರ ಫೋಟೋಗಳನ್ನು ಹಂಚಿಕೊಂಡಿರುವ ವಿಘ್ನೇಶ್ ಶಿವನ್, ನನ್ನ ಸ್ವೀಟ್‌ಹಾರ್ಟ್ ಜೊತೆಗೆ ಥಾಯ್‌ಲೆಂಡ್‌ನಲ್ಲಿ ಎಂದು ಕ್ಯಾಪ್ಷನ್ ನೀಡಿದ್ದಾರೆ. ಈ ಚೆಂದದ ಜೋಡಿ ಫೋಟೋಗಳಿಗೆ ಭರ್ಜರಿ ಲೈಕ್ಸ್ ಮತ್ತು ವಿಶ್ಸ್ ಹರಿದು ಬರುತ್ತಿದೆ.

    Live Tv

  • ಪುಷ್ಪಾ 2 ರಶ್ಮಿಕಾ ಮಂದಣ್ಣ ಪಾತ್ರಕ್ಕೆ ಏನಾಯಿತು? ಡೈರೆಕ್ಟರ್ ನಿರ್ಧಾರ ಸರೀನಾ?

    ಪುಷ್ಪಾ 2 ರಶ್ಮಿಕಾ ಮಂದಣ್ಣ ಪಾತ್ರಕ್ಕೆ ಏನಾಯಿತು? ಡೈರೆಕ್ಟರ್ ನಿರ್ಧಾರ ಸರೀನಾ?

    ಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಕಾಂಬಿನೇಷನ್ ನ ಪುಷ್ಪಾ ಸಿನಿಮಾ ಕೆಲ ರಾಜ್ಯಗಳಲ್ಲಿ ಹೇಳಿಕೊಳ್ಳುವಷ್ಟು ಬಾಕ್ಸ್ ಆಫೀಸಿನಲ್ಲಿ ಕಲೆಕ್ಷನ್ ಮಾಡದೇ ಇದ್ದರೂ, ಅಭಿಮಾನಿಗಳ ಮನಸ್ಸು ಗೆಲ್ಲುವಲ್ಲಿ ಹಿಂದೆ ಬೀಳಲಿಲ್ಲ.  ಇನ್ನೂ ಕೆಲವು ಕಡೆ ಬಾಕ್ಸ್ ಆಫೀಸ್ ಹಿಟ್ ಸಿನಿಮಾ ಎಂಬ ಪ್ರಂಶಸೆಗೆ ಪಾತ್ರವಾಯಿತು. ಹಾಗಾಗಿ ಪುಷ್ಪಾ 2 ಸಿನಿಮಾ ಇದೀಗ ಸೆಟ್ಟೇರಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಸಮಯದಲ್ಲಿ ಸಿನಿಮಾ ತಂಡದಿಂದ ಅಚ್ಚರಿಯ ಸುದ್ದಿಗಳು ಹೊರ ಬೀಳುತ್ತಿವೆ.

    ಪುಷ್ಪಾ ಸಿನಿಮಾದಲ್ಲಿ ನಾಯಕಿ ರಶ್ಮಿಕಾ ಮಂದಣ್ಣ ಪಾತ್ರಕ್ಕೂ ಹೆಚ್ಚು ಪ್ರಾಮುಖ್ಯತೆ ನೀಡಲಾಯಿತು. ನಾಯಕನಷ್ಟೇ ನಾಯಕಿಯ ಪಾತ್ರಕ್ಕೂ ಮಹತ್ವ ನೀಡಿದ್ದರು ನಿರ್ದೇಶಕು ಸುಕುಮಾರ್. ಆದರೆ, ಪುಷ್ಪಾ 2 ಸಿನಿಮಾದಲ್ಲಿ ನಾಯಕಿಯ ಪಾತ್ರವನ್ನು ಕೊಂಚ ಕಡಿಮೆ ಮಾಡಿದ್ದಾರಂತೆ. ಹೀರೋಯಿಸಂ ಹೆಚ್ಚು ಮಾಡಿಕೊಂಡು ನಾಯಕಿಯ ಪಾತ್ರಕ್ಕೆ ಅಷ್ಟೊಂದು ಫೋಕಸ್ ಮಾಡಿಲ್ಲ ಎನ್ನಲಾಗುತ್ತಿದೆ ರಶ್ಮಿಕಾ ತೆರೆಯ ಮೇಲೆ ಹೆಚ್ಚು ಹೊತ್ತು ಕಾಣಿಸಿಕೊಳ್ಳುವುದು ಅನುಮಾನ ಎನ್ನುವ ಸುದ್ದಿಯಿದೆ.

    ಪುಷ್ಪಾ ಸಿನಿಮಾದಲ್ಲಿ ನಾಯಕಿ ಪಾತ್ರ ಹೆಚ್ಚು ಇರುವುದರಿಂದ ಚಿತ್ರಕಥೆಯು ಎಳೆದಂತೆ ಭಾಸವಾಗುತ್ತಿದೆ ಎನ್ನುವ ಅನಿಸಿಕೆ ವ್ಯಕ್ತವಾಗಿತ್ತು. ಅಲ್ಲು ಅರ್ಜುನ್ ಪಾತ್ರವನ್ನು ಹೈಲೈಟ್ ಮಾಡಿದ್ದರೆ, ಕಥೆಯ ಓಟ ಇನ್ನೂ ಸೂಪರ್ ಆಗಿರಬಹುದು ಎಂಬ ಪತ್ರಿಕ್ರಿಯೆ ಬಂದಿರುವುದರಿಂದ, ಪುಷ್ಪಾ 2 ಸಿನಿಮಾದಲ್ಲಿ ಅಲ್ಲು ಅರ್ಜುನ್ ಅವರಿಗೆ ಹೆಚ್ಚು ಒತ್ತು ನೀಡಿದ್ದಾರಂತೆ. ಹಾಗಾಗಿ ರಶ್ಮಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿಯಿದೆ.  ಇದನ್ನೂ ಓದಿ: ಚಾರ್ಲಿ 777 ತೆರಿಗೆ ವಿನಾಯತಿ: ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಅಸಮಾಧಾನ ಏಕೆ?

    ಈ ಕುರಿತು ಅಧಿಕೃತವಾಗಿ ನಿರ್ದೇಶಕರು ಏನೂ ಹೇಳದೇ ಇದ್ದರೂ, ಈ ಸುದ್ದಿಯಂತೂ ಎಲ್ಲ ಕಡೆ ಓಡಾಡುತ್ತಿದೆ. ನಾಯಕಿ, ನಾಯಕ ಇರುವ ಸಾಕಷ್ಟು ದೃಶ್ಯಗಳಿಗೆ ಕತ್ತರಿ ಹಾಕಿ, ಹೊಸ ಕಥೆಯನ್ನು ಬರೆದಿದ್ದಾರೆ ಎಂದು ಹೇಳಲಾಗುತ್ತಿದೆ.

    Live Tv