Tag: Kollywood

  • ನಟಿ ಅಮಲಾ ಪೌಲ್ 2ನೇ ಮದುವೆಗೆ ಸಿದ್ಧತೆ : ಹುಡುಗ ಯಾರು?

    ನಟಿ ಅಮಲಾ ಪೌಲ್ 2ನೇ ಮದುವೆಗೆ ಸಿದ್ಧತೆ : ಹುಡುಗ ಯಾರು?

    ನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ತೆಲುಗು ನಟಿ ಅಮಲಾ ಪೌಲ್, ಬಹುಬೇಡಿಕೆಯ ನಟಿಯಾಗಿ ಸಿನಿಮಾ ರಂಗವನ್ನು ಆಳಿದರು. ಬೇಡಿಕೆ ಇರುವಾಗಲೇ ನಿರ್ದೇಶಕ ವಿಜಯ್ ಅವರ ಜೊತೆ ಮದುವೆಯಾದರು. ಹೊಸ ಬದುಕಿಗೆ ಕಾಲಿಟ್ಟ ನಂತರ ಅವರ ಜೀವನ ಹೊಸ ರೂಪ ಪಡೆದುಕೊಳ್ಳುತ್ತಿದೆ ಎಂದೇ ಎಲ್ಲರೂ ನಂಬಿದ್ದರು. ಆದರೆ, ಎಲ್ಲರೂ ಅಂದುಕೊಂಡಂತೆ ಏನೂ ಆಗಲಿಲ್ಲ. ವಿಜಯ್ ಅವರ ಜೊತೆ ಮೂರ್ನಾಲ್ಕು ವರ್ಷಗಳ ಕಾಲ ಸತಿಪತಿಗಳಾಗಿ ಇದ್ದವರು ದಿಢೀರ್ ಅಂತ ಡಿವೋರ್ಸ್ ಘೋಷಣೆ ಮಾಡಿದರು.

    ವಿಜಯ್ ಮತ್ತು ಅಮಲಾ ಪೌಲ್ ಅವರು ವಿಚ್ಛೇದನ ವಿಷಯ ದೊಡ್ಡ ಮಟ್ಟದಲ್ಲಿ ಆಘಾತ ನೀಡಿತ್ತು. ಅನೋನ್ಯವಾಗಿದ್ದ ದಂಪತಿಗಳ ನಡುವೆ ಆಗಿದ್ದು ಏನು ಎನ್ನುವ ವಿಚಾರಕ್ಕೆ ನಾನಾ ರೆಕ್ಕೆಪುಕ್ಕಗಳು ಹುಟ್ಟಿದವು. ಯಾವುದಕ್ಕೂ ಪ್ರತಿಕ್ರಿಯಿಸದೇ ಐದು ವರ್ಷಗಳ ಹಿಂದೆ ಈ ಜೋಡಿ ದೂರವಾಯಿತು. ಆನಂತರ ಅಮಲಾ ಅವರು ಮತ್ತೊಂದು ಮದುವೆ ಆಗಲಿದ್ದಾರೆ ಎನ್ನುವ ಸುದ್ದಿಯೂ ಹಬ್ಬಿತ್ತು. ಆದರೆ, ಆ ಕುರಿತು ಅವರು ಏನೂ ಹೇಳಲಿಲ್ಲ. ಇದನ್ನೂ ಓದಿ: ಕಾಳಿ ಕೈಗೆ ಸಿಗರೇಟು : ಮಾಳವಿಕಾ ಅವಿನಾಶ್ ಛೀಮಾರಿ, ನಟ ಕಿಶೋರ್ ವಿಭಿನ್ನ ಪ್ರತಿಕ್ರಿಯೆ

    ಇದೀಗ ಅಭಿಮಾನಿಯೊಬ್ಬರ ಪ್ರಶ್ನೆಗೆ ಉತ್ತರಿಸಿರುವ ಅಮಲಾ ಪೌಲ್, ತಾವು ಮದುವೆ ಆಗುವ ಹುಡುಗ ಹೇಗಿರಬೇಕು ಎಂದು ಹೇಳಿಕೊಂಡಿದ್ದಾರೆ. ಈ ಮೂಲಕ ಮತ್ತೊಂದು ಮದುವೆಗೆ ಸಿದ್ಧತೆ ನಡೆಸಿರುವ ಕುರಿತು ಸಣ್ಣದೊಂದು ಸುಳಿವು ಕೊಟ್ಟಿದ್ದಾರೆ. ಒಬ್ಬರನೊಬ್ಬರು ನಂಬುವಂತಹ ಹುಡುಗ ಸಿಗಬೇಕು ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಈ ಉತ್ತರ ತೆಲುವು ಸಿನಿಮಾ ರಂಗದಲ್ಲಿ ಸಂಚಲನ ಮೂಡಿಸಿದೆ.

    Live Tv
    [brid partner=56869869 player=32851 video=960834 autoplay=true]

  • ತಮಿಳು ನಟ ವಿಕ್ರಮ್‌ಗೆ ಹೃದಯಾಘಾತ

    ತಮಿಳು ನಟ ವಿಕ್ರಮ್‌ಗೆ ಹೃದಯಾಘಾತ

    ಕಾಲಿವುಡ್‌ನ ಸಾಕಷ್ಟು ಸಿನಿಮಾಗಳ ಮೂಲಕ ಸಂಚಲನ ಮೂಡಿಸಿದ್ದ ಸ್ಟಾರ್ ನಟ ವಿಕ್ರಮ್‌ಗೆ ಇಂದು ಹೃದಯಾಘಾತವಾಗಿದೆ. ಚಿಕಿತ್ಸೆಗಾಗಿ ಚೆನ್ನೈ ಕಾವೇರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

    `ಎನ್ ಕಾದಲ್ ಕಣ್ಮಣಿ’ ಚಿತ್ರದ ಮೂಲಕ ಕಾಲಿವುಡ್‌ಗೆ ಪರಿಚಿತರಾದ ನಟ ವಿಕ್ರಮ್ ನಂತರ ಸಾಕಷ್ಟು ಸಿನಿಮಾಗಳ ಮೂಲಕ ಸಂಚಲನ ಮೂಡಿಸಿದ್ದರು. ಇದೀಗ ನಟ ವಿಕ್ರಮ್‌ಗೆ ಹೃದಯಾಘಾತವಾಗಿದ್ದು, ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ನಟನಿಗೆ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ.

    ಸದ್ಯ ವಿಕ್ರಮ್ ನಟನೆಯ ಮುಂಬರುವ ಚಿತ್ರಗಳು `ಕೋಬ್ರಾ’ ಮತ್ತು `ಪೊನ್ನಿಯನ್ ಸೆಲ್ವನ್’ ಈ ಎರಡು ಪ್ರಾಜೆಕ್ಟ್‌ನಲ್ಲಿ ಸಕ್ರಿಯರಾಗಿದ್ದಾರೆ. ಇಂದು ಸಂಜೆ ʻಪೊನ್ನಿಯನ್ ಸೆಲ್ವನ್ʼ ಚಿತ್ರದ ಟ್ರೈಲರ್ ಲಾಂಚ್ ಕೂಡ ಆಯೋಜಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ‘ಕೆಜಿಎಫ್ 2’, ‘ಆರ್.ಆರ್.ಆರ್’ ದಾಖಲೆ ಮುರಿಯತ್ತಾ ರಾಮ್ ಗೋಪಾಲ್ ವರ್ಮಾ ಅವರ ‘ಲಡ್ಕಿ’ ಸಿನಿಮಾ ?

    ‘ಕೆಜಿಎಫ್ 2’, ‘ಆರ್.ಆರ್.ಆರ್’ ದಾಖಲೆ ಮುರಿಯತ್ತಾ ರಾಮ್ ಗೋಪಾಲ್ ವರ್ಮಾ ಅವರ ‘ಲಡ್ಕಿ’ ಸಿನಿಮಾ ?

    ರ್ತಮಾನಗಳಿಗೆ ಸದಾ ಸ್ಪಂದಿಸುವ ಮತ್ತು ಸುಖಾಸುಮ್ಮನೆ ವಿವಾದಗಳನ್ನು ಮೈಮೇಲೆ ಹಾಕಿಕೊಳ್ಳುವ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಇಡೀ ಭಾರತೀಯ ಸಿನಿಮಾ ರಂಗವೇ ಬೆಚ್ಚಿಬೀಳುವಂತಹ ಸುದ್ದಿಯನ್ನು ಕೊಟ್ಟಿದ್ದಾರೆ. ಇದು ನಿಜವೋ, ಸುಳ್ಳೋ ಗೊತ್ತಿಲ್ಲ ಆದರೆ, ತಮ್ಮ ನಿರ್ದೇಶನದ ಲಡ್ಕಿ ಸಿನಿಮಾ ಭಾರತ ಮತ್ತು ಚೀನಾದಲ್ಲೇ 40 ಸಾವಿರ ಸ್ಕ್ರೀನ್ ಗಳಲ್ಲಿ ಪ್ರದರ್ಶನ ಕಾಣಲಿದೆ ಎಂದು ಹೇಳಿದ್ದಾರೆ. ಈ ಸುದ್ದಿ ಭಾರತೀಯ ಸಿನಿಮಾ ರಂಗದಲ್ಲಿ ಭಾರೀ ಕೋಲಾಹಲ ಉಂಟು ಮಾಡಿದೆ.

    ಲಡ್ಕಿ  ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ಭಾರತದಲ್ಲಿ ಮೂಡಿ ಬಂದ ಮೊದಲ ಮಾರ್ಷಲ್ ಆರ್ಟ್ ಸಿನಿಮಾ ಇದಾಗಿದೆ. ಈ ಸಿನಿಮಾ ಜುಲೈ 15 ರಂದು ವಿಶ್ವದಾದ್ಯಂತ ರಿಲೀಸ್ ಆಗುತ್ತಿದ್ದು, ಇದೇ ಮೊದಲ ಬಾರಿಗೆ ಭಾರತೀಯ ಸಿನಿಮಾವೊಂದು ಭಾರತ ಮತ್ತು ಚೀನಾದಲ್ಲಿ 40 ಸಾವಿರ ಸ್ಕ್ರೀನ್ ಗಳಲ್ಲಿ ಪ್ರದರ್ಶನವಾಗುತ್ತಿದೆ. ಇಷ್ಟು ದೊಡ್ಡ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಆಗುತ್ತಿರುವ ವಿಷಯವನ್ನು ಸ್ವತಃ ರಾಮ್ ಗೋಪಾಲ್ ವರ್ಮಾ ಅವರೇ ತಮ್ಮದೇ ಸೋಷಿಯಲ್ ಮೀಡಿಯಾ ವೇದಿಕೆಯಲ್ಲಿ ಪೋಸ್ಟರ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಕರಣ್‌ ಜೋಹರ್‌ ನಿರ್ಮಾಣದಲ್ಲಿ ಈ ಸ್ಟಾರ್‌ ನಟನಿಗೆ ನಾಯಕಿಯಾದ ರಶ್ಮಿಕಾ ಮಂದಣ್ಣ

    ಈ ಹಿಂದೆ ಯಶ್ ನಟನೆಯ ಕೆಜಿಎಫ್ 2 ಸಿನಿಮಾ ಚೀನಾದಲ್ಲಿ ಆರು ಸಾವಿರ ಸ್ಕ್ರೀನ್ ಗಳಲ್ಲಿ ರಿಲೀಸ್ ಆಗಿತ್ತು. ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ ಸಿನಿಮಾ ಎಂಟು ಸಾವಿರ ಸ್ಕ್ರೀನ್ ಗಳಲ್ಲಿ ಪ್ರದರ್ಶನ ಕಂಡಿದೆ ಎಂದು ಹೇಳಲಾಗಿತ್ತು. ಇದು ಈ ಎಲ್ಲ ದಾಖಲೆಗಳನ್ನು ಮುರಿದು, ಯಾರೂ ಬ್ರೇಕ್ ಮಾಡದೇ ಇರುವಂತಹ ದಾಖಲೆಯನ್ನು ಸೃಷ್ಟಿಸಲು ಮುಂದಾಗಿದೆ.

    ರಾಮ್ ಗೋಪಾಲ್ ವರ್ಮಾ ಅವರು ಈ ರೀತಿಯಲ್ಲಿ ಪೋಸ್ಟ್ ಮಾಡುತ್ತಿದ್ದಂತೆಯೇ ಪೋಸ್ಟರ್ ಬಗ್ಗೆ ಹಲವು ಅನುಮಾಗಳು ಕೂಡ ವ್ಯಕ್ತವಾಗಿವೆ. ನಿಜವಾಗಿಯೂ ಅಷ್ಟೊಂದು ಥಿಯೇಟರ್ ನಲ್ಲಿ ಈ ಸಿನಿಮಾ ರಿಲಿಸ್ ಆಗತ್ತಾ ಎನ್ನುವುದನ್ನು ಕಾದು ನೋಡಬೇಕಿದೆ. ಪೂಜಾ ಭಲೇಕರ್ ಮುಖ್ಯ ಭೂಮಿಕೆಯಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ಅವರು ಸ್ವತಃ ಮಾರ್ಷಲ್ ಆರ್ಟ್ ಕಲಿತಿದ್ದಾರೆ. ಅದನ್ನೇ ಸಿನಿಮಾದಲ್ಲೂ ತೋರಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನನ್ನ ಮಗನ ವಯಸ್ಸಿನವರು ಅಂದರೂ, ಆ ನಿರ್ಮಾಪಕರು ಕೇಳಲಿಲ್ಲ : ಕರಾಳ ಮುಖ ಬಿಚ್ಚಿಟ್ಟ ನಟಿ ಚಾರ್ಮಿಳಾ

    ನನ್ನ ಮಗನ ವಯಸ್ಸಿನವರು ಅಂದರೂ, ಆ ನಿರ್ಮಾಪಕರು ಕೇಳಲಿಲ್ಲ : ಕರಾಳ ಮುಖ ಬಿಚ್ಚಿಟ್ಟ ನಟಿ ಚಾರ್ಮಿಳಾ

    ಬಾಲಕಲಾವಿದೆಯಾಗಿ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿರುವ ಚಾರ್ಮಿಳಾ, ಆನಂತರ ಒಯಿಲಟ್ಟಂ ಸಿನಿಮಾದ ಮೂಲಕ ನಾಯಕಿಯಾಗಿ ತಮಿಳು ಸಿನಿಮಾ ರಂಗದಲ್ಲಿ ಗುರುತಿಸಿಕೊಂಡರು. ಇದೀಗ ತಾಯಿ ಪಾತ್ರದಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅನೇಕ ಸೂಪರ್ ಸ್ಟಾರ್ ಸಿನಿಮಾಗಳಲ್ಲಿ ನಾನಾ ರೀತಿಯ ಪಾತ್ರಗಳನ್ನೂ ಚಾರ್ಮಿಳಾ ಮಾಡಿದ್ದಾರೆ. ಅವರು ಸಂದರ್ಶನವೊಂದರಲ್ಲಿ ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಗಳನ್ನು ಹಂಚಿಕೊಂಡಿದ್ದಾರೆ.

    ಸಿನಿಮಾ ಶೂಟಿಂಗ್ ಗಾಗಿ ನಾನು ಕ್ಯಾಲಿಕಟ್ ಗೆ ಹೋಗಿದ್ದೆ. ಎರಡ್ಮೂರು ದಿನ ಶೂಟಿಂಗ್ ಚೆನ್ನಾಗಿಯೇ ನಡೆಯಿತು. ಆ ಸಿನಿಮಾದ ನಿರ್ಮಾಪಕರು ನನ್ನನ್ನು ಸಹೋದರಿ ಎಂದೇ ಕರೆಯುತ್ತಿದ್ದರು. ಇನ್ನೂ ಆ ನಿರ್ಮಾಪಕರಿಗೆ ವಯಸ್ಸು 24 ವರ್ಷ ಆಗಿದ್ದರಿಂದ ನಾನೂ ಕೂಡ ತಮ್ಮನಂತೆಯೇ ಸ್ವೀಕರಿಸಿದ್ದೆ. ಎರಡ್ಮೂರು ದಿನಗಳ ನಂತರ ಅವರು ಬೇರೆಯವರು ಮೂಲಕ ನನಗೆ ಆಫರ್ ನೀಡಿದರು. ನಮ್ಮಿಬ್ಬರಲ್ಲಿ ಒಬ್ಬರ ಜೊತೆ ಮಲಗಿದರೆ ದುಡ್ಡು ಕೊಡುವುದಾಗಿ ತಿಳಿಸಿದರು. ಅವರ ಮಾತಿಂದ ನಾನು ಶಾಕ್ ಆದೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ:`ಮಣಿರತ್ನಂ’ ನಿರ್ದೇಶನದ ಚಿತ್ರದ ಮೂಲಕ ಕನ್ನಡಕ್ಕೆ ಬಂದ ಐಶ್ವರ್ಯ ರೈ

    ಮಂಚಕ್ಕೆ ಕರೆದ ಆ ಹುಡುಗರು ನನ್ನ ಮಗನಿಗಿಂತ ಸ್ವಲ್ಪ ದೊಡ್ಡವರು ಇರಬಹುದು. ಅವರಿಗೆ ಇದನ್ನೇ ಹೇಳಿದೆ. ಏನೇ ಹೇಳಿದರೂ ಅವರು ಕೇಳಲಿಲ್ಲ. ಹಾಗಾಗಿ ನಾನು ಕೋಪದಿಂದಲೇ ಆ ಸಿನಿಮಾದ ಶೂಟಿಂಗ್ ಅನ್ನು ಅರ್ಧಕ್ಕೆ ಬಿಟ್ಟು ವಿಮಾನ ಏರಿ ಚೆನ್ನೈಗೆ ಬಂದೆ. ಈ ರೀತಿಯ ಅನುಭವಗಳು ಬಹುತೇಕ ನಟಿಯರಿಗೆ ಆಗಿರುತ್ತವೆ. ಅದಕ್ಕೆ ಆಸ್ಪದ ಕೊಟ್ಟರೆ ಇಂತಹ ಪ್ರಕರಣಗಳು ಇನ್ನೂ ಹೆಚ್ಚಾಗುತ್ತವೆ ಎಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸೂಪರ್ ಸ್ಟಾರ್ ರಜನಿಕಾಂತ್ ಮನೆ ಪಕ್ಕದಲ್ಲೇ ನಯನತಾರಾ ಮನೆ ಖರೀದಿ

    ಸೂಪರ್ ಸ್ಟಾರ್ ರಜನಿಕಾಂತ್ ಮನೆ ಪಕ್ಕದಲ್ಲೇ ನಯನತಾರಾ ಮನೆ ಖರೀದಿ

    ಯನತಾರಾ ಮದುವೆ ಆಗುತ್ತಿದ್ದಂತೆಯೇ ಅವರ ಬದುಕಿನಲ್ಲಿ ನಾನಾ ಸಂಭ್ರಮಗಳು ಒಂದುಗೂಡುತ್ತಿವೆ. ಈಗಾಗಲೇ ನಯನತಾರಾ ಮತ್ತು ವಿಘ್ನೇಶ್ ಶಿವನ್ ಹಲವು ಆಸ್ತಿಗಳನ್ನು ಹೊಂದಿದ್ದಾರೆ. ಇದೀಗ ಮತ್ತೊಂದು ಮನೆಯನ್ನು ಖರೀದಿಸುವ ಪ್ಲ್ಯಾನ್ ಮಾಡುತ್ತಿದ್ದಾರೆ. ಆ ಮನೆಯ ಕಾರಣದಿಂದಾಗಿಯೇ ನಯನತಾರಾ ಸುದ್ದಿ ಆಗಿದ್ದಾರೆ. ಅಲ್ಲದೇ, ತಮ್ಮ ನೆಚ್ಚಿನ ನಟನ ಮನೆಯ ಪಕ್ಕದಲ್ಲೇ ಆ ಮನೆ ಇರುವುದರು ಅವರ ಸಂಭ್ರಮಕ್ಕೆ ಮತ್ತಷ್ಟು ಕಾರಣವಾಗಿದೆ.

    ರಜನಿಕಾಂತ್ ಅವರ ಸಿನಿಮಾಗಳನ್ನು ನೋಡುತ್ತಾ ಬೆಳೆದವರು ನಯನತಾರಾ, ಅವರೊಂದಿಗೆ ನಟಿಸಲು ಅವಕಾಶ ಸಿಕ್ಕಾಗ ಜೀವಮಾನ ಸಾಧನೆ ಅಂದುಕೊಂಡಿದ್ದರು. ರಜನಿಕಾಂತ್ ಅವರನ್ನು ದಿನವೂ ನೋಡಬೇಕು ಎಂದು ಇಷ್ಟಪಟ್ಟರು. ಇದೀಗ ಆ ಆಸೆಯನ್ನು ಅವರ ಮನೆಯ ಪಕ್ಕದಲ್ಲೇ ಮನೆಯನ್ನು ಖರೀದಿಸುವ ಮೂಲಕ ಈಡೇರಿಸಿಕೊಳ್ಳುತ್ತಿದ್ದಾರಂತೆ ನಯನತಾರ. ಮದುವೆಯ ನಂತರ ಪತಿಯು ಅವರಿಗೆ ಕೊಡುತ್ತಿರುವ ದುಬಾರಿ ಗಿಫ್ಟ್ ಇದಾಗಿದೆಯಂತೆ. ಇದನ್ನೂ ಓದಿ:ತೆಲುಗಿನ ಮಹೇಶ್ ಬಾಬುಗೆ ತಂದೆಯಾಗಿ ನಟಿಸ್ತಾರಾ ರಿಯಲ್ ಸ್ಟಾರ್ ಉಪೇಂದ್ರ

    ರಜನಿಕಾಂತ್ ಮನೆಯ ಪಕ್ಕದಲ್ಲೇ ನಯನತಾರಾ ಮನೆಯನ್ನು ಖರೀದಿಸುತ್ತಿದ್ದಾರೆ ಎನ್ನುವುದು ತಮಿಳು ಸಿನಿಮಾ ರಂಗದಲ್ಲಿ ಸಖತ್ ಸುದ್ದಿ ಆಗಿದೆ. ಆ ಮನೆ ಯಾವುದು ಎನ್ನುವುದು ಇನ್ನೂ ನಿಕ್ಕಿ ಆಗದೇ ಹೋದರೂ, ಯಾವ ಮನೆಯನ್ನು ಅವರು ಖರೀದಿಸಲಿದ್ದಾರೆ ಎನ್ನುವ ಕುತೂಹಲ ಕೂಡ ಮೂಡಿದೆ. ಹಾಗಂತ ರಜನಿಕಾಂತ್ ಅವರ ಪಕ್ಕದ ಮನೆಯವರು ಮನೆ ಮಾರಾಟಕ್ಕೆ ಇಟ್ಟಿದ್ದಾರಾ ಎನ್ನುವ ಪ್ರಶ್ನೆ ಕೂಡ ಇದೀಗ ಎದುರಾಗಿದೆ.

    Live Tv
    [brid partner=56869869 player=32851 video=960834 autoplay=true]

  • ನಯನತಾರಾ ಕೊರಳಲ್ಲಿ ಇನ್ನೂ ಹಳದಿ ದಾರ : ಚಿನ್ನದ ಮಾಂಗಲ್ಯ ಎಲ್ಲಿ ಅಂತ ಕೇಳಿದ ಅಭಿಮಾನಿಗಳು

    ನಯನತಾರಾ ಕೊರಳಲ್ಲಿ ಇನ್ನೂ ಹಳದಿ ದಾರ : ಚಿನ್ನದ ಮಾಂಗಲ್ಯ ಎಲ್ಲಿ ಅಂತ ಕೇಳಿದ ಅಭಿಮಾನಿಗಳು

    ಳೆದ ತಿಂಗಳಷ್ಟೇ ಮದುವೆಯಾಗಿರುವ ತಮಿಳಿನ ಖ್ಯಾತ ನಟಿ ನಯನತಾರಾ ಎಷ್ಟು ಸಿಂಪಲ್ ಅನ್ನುವುದಕ್ಕೆ ಅವರ ಕೊರಳಲ್ಲಿರುವ ಹಳದಿ ದಾರವೇ ಸಾಕ್ಷಿಯಾಗಿದೆ. ಮದುವೆಯ ದಿನ ಪತಿ ವಿಘ್ನೇಶ್ ಕಟ್ಟಿರುವ ಹಳದಿ ದಾರದ ಮಾಂಗಲ್ಯವನ್ನು ಹಾಗೆಯೇ ಕೊರಳಲ್ಲಿ ಉಳಿಸಿಕೊಂಡಿದ್ದಾರೆ ನಯನತಾರಾ. ಹಾಗಾಗಿ ಅಭಿಮಾನಿಗಳು ಚಿನ್ನದ ಮಾಂಗಲ್ಯ ಎಲ್ಲಿ ಎಂದು ಕೇಳುತ್ತಿದ್ದಾರೆ.

    ನಿನ್ನೆ ನಯನತಾರಾ ಏರ್ ಪೋರ್ಟ್ ನಿಂದ ಆಚೆ ಬರುವಾಗಿ ಅವರ ಕೊರಳಲ್ಲಿರುವ ಹಳದಿ ದಾರವನ್ನು ಗಮನಿಸಿರುವ ಅಭಿಮಾನಿಗಳು ಅದನ್ನು ಫೋಟೋ ತಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ನಮ್ ನಟಿ ಎಷ್ಟು ಸಿಂಪಲ್ ನೋಡಿ ಎಂದು ಟ್ಯಾಗ್ ಲೈನ್ ಬೇರೆ ಕೊಟ್ಟಿದ್ದಾರೆ. ಆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇದನ್ನೂ ಓದಿ : Breaking- ಫಹಾದ್ ಫಾಸಿಲ್ ಗಾಗಿ ಸಿನಿಮಾ ಮಾಡಲು ಮತ್ತೆ ತಮಿಳಿಗೆ ಹೊರಟ ಪವನ್ ಕುಮಾರ್

    ನಯನತಾರಾ ಮತ್ತು ವಿಘ್ನೇಶ್ ಅಷ್ಟೇ ಸಿಂಪಲ್ ಆಗಿಯೇ ಮದುವೆಯಾದರೆ, ಆಡಂಬರಕ್ಕೆ ಆಸ್ಪದ ಕೊಡದೇ ಕೆಲವೇ ಕೆಲವು ಸಿಲಿಬ್ರಿಟಿಗಳಿಗೆ ಆಹ್ವಾನ ನೀಡಿದ್ದರು. ದೇವಸ್ಥಾನದಲ್ಲಿ ಮದುವೆ ಆಗಬೇಕು ಎಂದಿದ್ದ ಜೋಡಿ ಕೊನೆಗೆ ಸಪ್ತಪದಿ ತುಳಿದದ್ದು ರೆಸಾರ್ಟ್ ನಲ್ಲಿ. ಹಾಗಾಗಿ ನಯನತಾರಾ ಯಾವಾಗಲೂ ಸಿಂಪಲ್ ಎನ್ನುವ ಮಾತು ಕೇಳಿ ಬಂದಿದೆ. ಮದುವೆಯ ನಂತರ ಸದ್ಯ ಈಗವರು ಶಾರುಖ್ ಖಾನ್ ನಟನೆಯ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • Breaking- ಫಹಾದ್ ಫಾಸಿಲ್ ಗಾಗಿ ಸಿನಿಮಾ ಮಾಡಲು ಮತ್ತೆ ತಮಿಳಿಗೆ ಹೊರಟ ಪವನ್ ಕುಮಾರ್

    Breaking- ಫಹಾದ್ ಫಾಸಿಲ್ ಗಾಗಿ ಸಿನಿಮಾ ಮಾಡಲು ಮತ್ತೆ ತಮಿಳಿಗೆ ಹೊರಟ ಪವನ್ ಕುಮಾರ್

    ಅಂದುಕೊಂಡಂತೆ ಆಗಿದ್ದರೆ ಲೂಸಿಯಾ ಖ್ಯಾತಿಯ ಪವನ್ ಕುಮಾರ್ ದ್ವಿತ್ವ ಸಿನಿಮಾ ಮಾಡಬೇಕಿತ್ತು. ಪುನೀತ್ ರಾಜ್ ಕುಮಾರ್ ಬದುಕಿದ್ದರೆ, ಈ ಸಿನಿಮಾದ ಬಹುತೇಕ ಶೂಟಿಂಗ್ ಕೂಡ ಮುಗಿದಿರುತ್ತಿತ್ತು. ಆದರೆ, ವಿಧಿಯಾಟ ಬೇರೆಯೇ ಆಗಿತ್ತು. ಇನ್ನೇನು ಸಿನಿಮಾದ ಶೂಟಿಂಗ್ ಗೆ ಹೊರಡಬೇಕಿದ್ದ ಅಪ್ಪು ಲೋಕವನ್ನೇ ಬಿಟ್ಟು ನಡೆದು ಬಿಟ್ಟರು. ಹಾಗಾಗಿ ದ್ವಿತ್ವ ಸೇರಿದಂತೆ ಹಲವು ಸಿನಿಮಾಗಳು ಹಾಗೆಯೇ ಉಳಿದುಕೊಂಡವು.

    ದ್ವಿತ್ವ ಸಿನಿಮಾ ನಿಲ್ಲುತ್ತಿದ್ದಂತೆಯೇ ಈ ಕಥೆಯನ್ನು ಪವನ್ ಕುಮಾರ್ ಏನು ಮಾಡಲಿದ್ದಾರೆ ಎನ್ನುವ ಪ್ರಶ್ನೆಯೂ ಮೂಡಿ ಬಂತು. ಈ ಕುರಿತು ಪವನ್ ಕೆಲ ಮಾಧ್ಯಮಗಳಲ್ಲಿ ಸ್ಪಷ್ಟನೆಯನ್ನೂ ನೀಡಿದರು. ಸೂಕ್ತ ಕಲಾವಿದರನ್ನು ಹುಡುಕಿ ಇದೇ ಕಥೆಯನ್ನೇ ಸಿನಿಮಾ ಮಾಡುವುದಾಗಿಯೂ ಹೇಳಿಕೊಂಡಿದ್ದರು. ಬಹುಶಃ ಈ ಕಥೆಯನ್ನು ದಕ್ಷಿಣದ ಖ್ಯಾತ ನಟ ಫಹಾದ್ ಫಾಸಿಲ್ ಗಾಗಿ ಮಾಡುತ್ತಿದ್ದಾರಾ ಎನ್ನುವ ಕುತೂಹಲ ಮೂಡಿದೆ. ಕಾರಣ ಅವರು ಫಹಾದ್ ಗಾಗಿ ತಮಿಳಿನಲ್ಲಿ ಸಿನಿಮಾವೊಂದನ್ನು ಮಾಡಲಿದ್ದಾರಂತೆ. ಇದನ್ನೂ ಓದಿ : ಬಾಲಿವುಡ್ ನಲ್ಲಿ ಕನ್ನಡದ ರಂಗಿತರಂಗ ಸಿನಿಮಾ ರಿಮೇಕ್

    ಅಧಿಕೃತವಾಗಿ ಪವನ್ ಕುಮಾರ್ ಈ ವಿಷಯವನ್ನು ಹೇಳದೇ ಇದ್ದರೂ, ಅವರ ಆಪ್ತರ ಖಚಿತ ಮಾಹಿತಿ ಪ್ರಕಾರ ಫಹಾದ್ ಫಾಸಿಲ್ ಜೊತೆ ಈಗಾಗಲೇ ಮಾತುಕತೆ ಮಾಡಿದ್ದಾರಂತೆ. ಅದೇ ಸಿನಿಮಾದ ಕೆಲಸಗಳಲ್ಲೇ ಪವನ್ ಕುಮಾರ್ ಸದ್ಯ ಬ್ಯುಸಿಯಾಗಿದ್ದಾರೆ. ಕೆಲವೇ ದಿನಗಳಲ್ಲೇ ಈ ಸಿನಿಮಾ ಸೆಟ್ಟೇರಲಿದೆಯಂತೆ. ಆದರೆ, ಫಾಸಿಲ್ ಗಾಗಿ ದ್ವಿತ್ವ ಕಥೆಯನ್ನೇ ಮಾಡುತ್ತಾರಾ ಅಥವಾ ಹೊಸ ಕಥೆಯನ್ನು ಬರೆದುಕೊಂಡಿದ್ದಾರಾ ಎನ್ನುವುದೇ ಸಸ್ಪೆನ್ಸ್.

    Live Tv
    [brid partner=56869869 player=32851 video=960834 autoplay=true]

  • ನಯನತಾರಾ ಪ್ರೀತಿಯ ಅಪ್ಪುಗೆಯಲ್ಲಿ ಮೈಮರೆತ ವಿಘ್ನೇಶ್: ಫೋಟೋ ವೈರಲ್

    ನಯನತಾರಾ ಪ್ರೀತಿಯ ಅಪ್ಪುಗೆಯಲ್ಲಿ ಮೈಮರೆತ ವಿಘ್ನೇಶ್: ಫೋಟೋ ವೈರಲ್

    ಕಾಲಿವುಡ್‌ನ ನವಜೋಡಿ ನಯನತಾರಾ ಮತ್ತು ವಿಘ್ನೇಶ್ ಮತ್ತೆ ಸುದ್ದಿಯಲ್ಲಿದ್ದಾರೆ. ಮದುವೆಯ ನಂತರ ಹನಿಮೂನ್‌ಗೆ ವಿದೇಶಕ್ಕೆ ಹಾರಿದ್ದ ಈ ಜೋಡಿ ಇದೀಗ ಹೊಸ ಫೋಟೋ ಮೂಲಕ ಸಂಚಲನ ಮೂಡಿಸುತ್ತಿದ್ದಾರೆ. ಪತ್ನಿ ನಯನತಾರಾ ಪ್ರೀತಿಯ ಅಪ್ಪುಗೆಯಲ್ಲಿ ಮೈಮರೆತ ವಿಘ್ನೇಶ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ನಯನತಾರಾ ಮದುವೆಗಾಗಿ ಅಭಿಮಾನಿಗಳೆಲ್ಲ ಕಾಯುತ್ತಿದ್ದರು. ಕಳೆದ ಸಾಕಷ್ಟು ವರ್ಷಗಳಿಂದ ವಿಘ್ನೇಶ್ ಮತ್ತು ನಯನತಾರಾ ಡೇಟಿಂಗ್‌ನಲ್ಲಿದ್ದರು.ಕಳೆದ ಐದು ವರ್ಷಗಳಿಂದ ಪ್ರೀತಿಯಲ್ಲಿದ್ದ ನಯನತಾರಾ ಜೂನ್ 9ರಂದು ಹಸೆಮಣೆ ಏರಿದ್ದರು. ಗುರು ಹಿರಿಯರ ಮತ್ತು ಆಪ್ತರ ಸಮ್ಮುಖದಲ್ಲಿ ಮದುವೆಯಾಗಿದ್ದರು. ಈಗ ನವ ಜೋಡಿಯ ಹೊಸ ಫೋಟೋ ಸಖತ್ ಸದ್ದು ಮಾಡುತ್ತಿದೆ. ಇದನ್ನೂ ಓದಿ:ಥೇಟ್ ನಯನತಾರಾ ರೀತಿಯೇ ಕಂಗೊಳಿಸಿದ ‘ಸತ್ಯ’ ಧಾರಾವಾಹಿಯ ಗೌತಮಿ

    `ನೇನು ರೌಡಿನೇ’ ಚಿತ್ರದ ಶೂಟಿಂಗ್ ವೇಳೆ ನಯನತಾರಾ ಜೊತೆ ಪ್ರೀತಿಯಲ್ಲಿ ಬಿದ್ದಿದ್ದ ವಿಘ್ನೇಶ್, ಇದೀಗ ಮಡದಿಯ ಅಪ್ಪುಗೆಯಲ್ಲಿ ಮೈಮರೆತಿದ್ದಾರೆ. ಇನ್ನು ಮದುವೆಯಾಗಿ ಒಂದು ತಿಂಗಳು ಕೂಡ ಕಳೆದಿಲ್ಲ. ಹನಿಮೂನ್‌ಗೆ ಎಂದು ಹೋಗಿದ್ದ ಈ ಜೋಡಿ ಮತ್ತೆ ಗೂಡಿಗೆ ಮರಳಿದ್ದರು. `ಜವಾನ್’ ಚಿತ್ರೀಕರಣಕ್ಕೂ ನಯನತಾರಾ ಹಾಜರಿ ಹಾಕಿದ್ದರು.

     

    View this post on Instagram

     

    A post shared by Vignesh Shivan (@wikkiofficial)


    ಇದೀಗ ಶೂಟಿಂಗ್‌ನಿಂದ ಕೊಂಚ ಬಿಡುವು ಸಿಕ್ಕ ಬೆನ್ನಲ್ಲೇ ಪತಿ ಜತೆ ಅಮೂಲ್ಯ ಕ್ಷಣಗಳನ್ನ ನಯನತಾರಾ ಕಳೆದಿದ್ದಾರೆ. ಮಡದಿಯ ಪ್ರೀತಿಯ ಅಪ್ಪುಗೆಯಲ್ಲಿ ಮೈಮರೆತಿರುವ ವಿಘ್ನೇಶ್ ಫೋಟೋ ಈಗ ನೆಟ್ಟಿಗರ ಗಮನ ಸೆಳೆದಿದೆ. ಜೋಡಿ ಅಂದ್ರೆ ಹೀಗಿರಬೇಕು ಅಂತಾ ಫ್ಯಾನ್ಸ್ ಕಾಮೆಂಟ್ ಮಾಡ್ತಿದ್ದಾರೆ. ಈ ಫೋಟೋ ಸಖತ್ ವೈರಲ್ ಆಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಚಿತ್ರೀಕರಣದ ವೇಳೆ ನಟ ವಿಶಾಲ್‌ಗೆ ಗಾಯ

    ಚಿತ್ರೀಕರಣದ ವೇಳೆ ನಟ ವಿಶಾಲ್‌ಗೆ ಗಾಯ

    ಕಾಲಿವುಡ್ ನಟ ವಿಶಾಲ್ `ಲತ್ತಿಯ’ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ವೇಳೆ ಗಾಯಗೊಂಡಿದ್ದಾರೆ. ಫೈಟ್‌ ಸೀನ್‌ ಚಿತ್ರೀಕರಿಸುವಾಗ ಗಾಯಗೊಂಡಿದ್ದು, ಸದ್ಯ ಚಿತ್ರೀಕರಣಕ್ಕೆ ಬ್ರೇಕ್‌ ಹಾಕಲಾಗಿದೆ.

     

    View this post on Instagram

     

    A post shared by Vishal (@actorvishalofficial)

    ನಟ ವಿಶಾಲ್ ಮುಂಬರುವ `ಲತ್ತಿಯ’ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಖಡಕ್ ಆಗಿ ಕಾಣಿಸಿಕೊಳ್ಳುತ್ತಿದ್ದು, ಸದ್ಯ ಚಿತ್ರ ಕೊನೆಯ ಹಂತದಲ್ಲಿದೆ. ಆ್ಯಕ್ಷನ್ ಸೀನ್ಸ್ ಶೂಟಿಂಗ್‌ ಮಾಡುವಾಗ ಗಾಯಗೊಂಡಿದ್ದು, ಸದ್ಯ ಚಿತ್ರೀಕರಣಕ್ಕೆ ಬ್ರೇಕ್ ಹಾಕಲಾಗಿದೆ. ಈ ಹಿಂದೆಯೂ ಕೂಡ ಚಿತ್ರೀಕರಣದಲ್ಲಿ ಪೆಟ್ಟು ಮಾಡಿಕೊಂಡಿದ್ದ ವಿಶಾಲ್ ಗುಣಮುಖರಾದ ಮೇಲೆ ಚಿತ್ರೀಕರಣಕ್ಕೆ ಬಂದಿದ್ದರು. ಇದನ್ನೂ ಓದಿ:ಥೇಟ್ ನಯನತಾರಾ ರೀತಿಯೇ ಕಂಗೊಳಿಸಿದ ‘ಸತ್ಯ’ ಧಾರಾವಾಹಿಯ ಗೌತಮಿ

    ಇದೀಗ ಮತ್ತೆ ಕೊನೆ ಹಂತದ ಚಿತ್ರೀಕರಣ ವೇಳೆ ಫೈಟ್ ಮಾಡುವಾಗ ಗಾಯವಾಗಿದೆ. ಶೂಟಿಂಗ್‌ಗೆ ಬ್ರೇಕ್ ಹಾಕಿ, ವಿಶ್ರಾಂತಿಯಲ್ಲಿದ್ದಾರೆ. ಸದ್ಯದಲ್ಲೇ ಶೂಟಿಂಗ್‌ಗೆ ಬರಲಿದ್ದಾರೆ. `ಲತ್ತಿಯ’ ಸಿನಿಮಾಗಾಗಿ ವಿಶಾಲ್ ಸಿಕ್ಕಾಪಟ್ಟೆ ವರ್ಕೌಟ್ ಮಾಡಿದ್ದರು. ಈ ವಿಡಿಯೋ ಸಖತ್ ವೈರಲ್ ಆಗಿತ್ತು. ಇನ್ನು ನಟ ವಿಶಾಲ್ ಜಾಸ್ತಿ ಎನು ಅಪಾಯವಾಗದೇ ಸದ್ಯ ರೆಸ್ಟ್‌ನಲ್ಲಿರೋದು ನೋಡಿ ಫ್ಯಾನ್ಸ್ ನಿಟ್ಟುಸಿರು ಬಿಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸ್ವಿಮ್ ಸೂಟ್‌ನಲ್ಲಿ ಹಾಟ್‌ ಆಗಿ ಕಾಣಿಸಿಕೊಂಡ `ರಾ’ಗಿಣಿ

    ಸ್ವಿಮ್ ಸೂಟ್‌ನಲ್ಲಿ ಹಾಟ್‌ ಆಗಿ ಕಾಣಿಸಿಕೊಂಡ `ರಾ’ಗಿಣಿ

    ಸ್ಯಾಂಡಲ್‌ವುಡ್ ನಟಿ ರಾಗಿಣಿ ದಿನದಿಂದ ದಿನಕ್ಕೆ ಮತ್ತಷ್ಟು ಹಾಟ್ ಆಗಿ ಕಾಣಿಸಿಕೊಳ್ತಿದ್ದಾರೆ. ಹೊಸ ಹೊಸ ಫೋಟೋಶೂಟ್ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸುತ್ತಿದ್ದಾರೆ. ಈಗ ಸ್ವಿಮ್ ಸೂಟ್‌ನಲ್ಲಿ ಬೋಲ್ಡ್ ಆಗಿ ಪೋಸ್ ಕೊಟ್ಟಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ವೀರಮದಕರಿ, ಕೆಂಪೇಗೌಡ, ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ಗಮನ ಸೆಳೆದಿರುವ ರಾಗಿಣಿ, ಈಗ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಬೋಲ್ಡ್ ಆಗಿ ಕ್ಯಾಮೆರಾ ಕಣ್ಣಿಗೆ ಪೋಸ್ ಕೊಡುವ ಮೂಲಕ ಸಖತ್ ಸುದ್ದಿಯಲ್ಲಿದ್ದಾರೆ. ರಾಗಿಣಿಯ ನಯಾ ಲುಕ್‌ನಿಂದ ಪಡ್ಡೆ ಹುಡುಗರು ಕ್ಲೀನ್ ಬೋಲ್ಡ್ ಆಗಿದ್ದಾರೆ. ಬ್ಲ್ಯಾಕ್ ಕಲರ್ ಸ್ವಿಮ್ ಸೂಟ್‌ನಲ್ಲಿ ಹಾಟ್‌ ಆಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ನಟಿ ಪವಿತ್ರಾ ಲೋಕೇಶ್ ನನ್ನ ಬೆಸ್ಟ್ ಫ್ರೆಂಡ್ : ಪತ್ನಿ ರಮ್ಯಾ ಆರೋಪಕ್ಕೆ ನಟ ನರೇಶ್ ತಿರುಗೇಟು

    ನಟಿ ರಾಗಿಣಿ ಸಾಕಷ್ಟು ಸಂಕಷ್ಟಗಳನ್ನು ಏದುರಿಸಿದ ನಂತರ ಮತ್ತೆ ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದಾರೆ. ಕನ್ನಡ ಮತ್ತು ತಮಿಳಿನ ಸಿನಿಮಾಗಳ ಮೂಲಕ ಸೌಂಡ್ ಮಾಡಿದ್ದಾರೆ. ಈ ವರ್ಷದಲ್ಲಿ ಒಂದೊಂದೇ ಸಿನಿಮಾಗಳ ಮೂಲಕ ತೆರೆಯ ಮೇಲೆ ಅಬ್ಬರಿಸಲಿದ್ದಾರೆ.

    Live Tv