ಕಾಲಿವುಡ್ ಸೂಪರ್ ಸ್ಟಾರ್ ರಜನೀಕಾಂತ್ ಬತ್ತಳಿಕೆಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಈ ಮಧ್ಯೆ ತಲೈವಾ ರಾಜಕೀಯ ಎಂಟ್ರಿಯ ಕುರಿತು ಸಖತ್ ಸುದ್ದಿಯಾಗ್ತಿರುವ ಬೆನ್ನಲ್ಲೇ ರಾಜಕೀಯ ಅಖಾಡಕ್ಕೆ ಬರುವ ಕುರಿತು ಸ್ವತಃ ತಲೈವಾ ಸ್ಪಷ್ಟನೆ ನೀಡಿದ್ದಾರೆ.
71ರ ವಯಸ್ಸಿನಲ್ಲೂ ಚಿತ್ರರಂಗದಲ್ಲಿ ಆಕ್ಟೀವ್ ಇರುವ ಸೂಪರ್ ಸ್ಟಾರ್ ರಜನೀಕಾಂತ್‌ಗೆ ಬ್ಯಾಕ್ ಟು ಬ್ಯಾಕ್ ಸಿನಿಮಾ ಅವಕಾಶಗಳು ಅರಸಿ ಬರುತ್ತಿವೆ. ಜತೆಗೆ ರಾಜಕೀಯ ರಂಗದಲ್ಲೂ ಭಾಗಿಯಾಗಲು ತಲೈವಾಗೆ ಬುಲಾವ್ ಬಂದಿದೆ. ರಜನೀಕಾಂತ್ ಮತ್ತೆ ರಾಜಕೀಯ ಅಖಾಡದಲ್ಲಿ ಆಕ್ಟೀವ್ ಆಗುತ್ತಾರೆ ಎಂಬ ವದಂತಿಯ ಬೆನ್ನಲ್ಲೇ ತಮಿಳುನಾಡಿನ ರಾಜ್ಯಪಾಲರಾದ ಆರ್.ಎನ್ ರವಿ ಅವರನ್ನು ತಲೈವಾ ಭೇಟಿಯಾಗಿದ್ದಾರೆ. ಇದನ್ನೂ ಓದಿ:ಇನ್ನೊಂದು ವೀಡಿಯೋ ಇದೆ, ಯಾವಾಗ ಬಿಡುತ್ತಾನೋ ನನಗೆ ಗೊತ್ತಿಲ್ಲ: ಸೋನು ಗೌಡ

ರಾಜ್ಯಪಾಲರಾದ ಆರ್.ಎನ್ ರವಿ ಭೇಟಿಯಾದ ಬೆನ್ನಲ್ಲೇ ತಾವು ರಾಜಕೀಯ ಬರುವುದಿಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ. ರಾಜಕೀಯ ಪಕ್ಷ ಪ್ರಾರಂಭಿಸುವ ವಿಚಾರಕ್ಕೆ ಅಂತ್ಯ ಹಾಡಿದ್ದಾರೆ.


`ಪುಷ್ಪ’ ಬ್ಯೂಟಿ ರಶ್ಮಿಕಾ ಮಂದಣ್ಣ ಮೇಲೆ ದಿನದಿಂದ ದಿನಕ್ಕೆ ಕ್ರೇಜ್ ಜಾಸ್ತಿಯಾಗುತ್ತಲೇ ಇದೆ. ಸೂಪರ್‌ಸ್ಟಾರ್‌ಗಳ ಸಿನಿಮಾಗೆ ನಾಯಕಿಯಾಗಿ, ಅವಕಾಶ ಬಾಚಿಕೊಳ್ಳುತ್ತಲೇ ಇದ್ದಾರೆ. `ಪುಷ್ಪ’ ಚಿತ್ರದಿಂದ ಬಿಗ್ ಬ್ರೇಕ್ ಸಿಕ್ಕದ ಮೇಲೆ ಮಾಲಿವುಡ್‌ನತ್ತ ನಟಿ ಮುಖ ಮಾಡಿದ್ದರು. ಸೀತಾ ರಾಮಂ ಚಿತ್ರದಲ್ಲಿ ದುಲ್ಕರ್ ಸಲ್ಮಾನ್, ಮೃಣಾಲ್ ಜತೆ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದ ಮೇಲೆ ಫ್ಯಾನ್ಸ್‌ಗೆ ಸಿಕ್ಕಾಪಟ್ಟೆ ನಿರೀಕ್ಷೆಯಿದೆ. ಆದರೆ ಈ ಚಿತ್ರವನ್ನ ಹಲವು ರಾಷ್ಟ್ರಗಳಲ್ಲಿ ಬ್ಯಾನ್ ಮಾಡಲಾಗಿದೆ. ಇದನ್ನೂ ಓದಿ:
ಹನು ರಾಘವಪುಡಿ ನಿರ್ದೇಶನದ `ಸೀತಾ ರಾಮಂ’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಅವರು ಆಫ್ರೀನ್ ಎಂಬ ಮುಸ್ಲಿಂ ಯುವತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಫಸ್ಟ್ ಲುಕ್ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದರು. ಆದರೆ ಅವರು ಬುರ್ಕಾ ಧರಿಸಿ ಕಾಣಿಸಿಕೊಂಡಿದ್ದು ಅನೇಕರಿಗೆ ಅಚ್ಚರಿ ಮೂಡಿಸಿತ್ತು. ಈ ಚಿತ್ರದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗುವಂತಹ ಅಂಶಗಳಿವೆ ಎಂದು ಆರೋಪಿಸಿ ಅರಬ್ ರಾಷ್ಟ್ರಗಳಲ್ಲಿ ಈ ಚಿತ್ರದ ರಿಲೀಸ್‌ಗೆ ನಿಷೇಧಿಸಿದೆ.
ಬಹ್ರೇನ್, ಓಮನ್, ಕುವೈತ್, ಖತಾರ್, ಸೌದಿ ಅರೇಬಿಯಾ ಮುಂತಾದ ರಾಷ್ಟ್ರಗಳಲ್ಲಿ ಸಿನಿಮಾವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿ ಸದಸ್ಯರ ಅಭಿಪ್ರಾಯದ ಮೇರೆಗೆ ಈ ಚಿತ್ರವನ್ನು ಬ್ಯಾನ್ ಮಾಡಲಾಗಿದೆ. ಚಿತ್ರತಂಡದವರು ಮತ್ತೊಮ್ಮೆ ಸೆನ್ಸಾರ್‌ಗೆ ಮನವಿ ಸಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾದಲ್ಲಿ ಎರಡು ಕಾಲಘಟ್ಟದ ಕಥೆಯಿದ್ದು, ಚಿತ್ರದ ಲುಕ್ ಮತ್ತು ಟ್ರೈಲರ್ ಮೂಲಕ ಸೌಂಡ್ ಮಾಡುತ್ತಿದೆ. ಇದೇ ಆಗಸ್ಟ್ 5ಕ್ಕೆ ತೆರೆಗೆ ಬರಲಿದೆ. ಈ ಎಲ್ಲಾ ಅಡೆ ತಡೆ ದಾಟಿ ಕಲೆಕ್ಷನಲ್ಲಿಯೂ ಸಿನಿಮಾ ಸೌಂಡ್ ಮಾಡುತ್ತಾ ಅಂತಾ ಕಾದುನೋಡಬೇಕಿದೆ.
ತಮಿಳು ಸಿನಿಮಾಗಳ ಮೂಲಕ ಸಂಚಲನ ಮೂಡಿಸಿದ್ದ ನಟ ಅಜಿತ್ ಕುಮಾರ್‌ಗೆ ತಮಿಳುನಾಡಿನ ರಾಜ್ಯ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ನಟ ಅಜಿತ್ ಮತ್ತು ತಂಡ ಭಾಗವಹಿಸಿ, ನಾಲ್ಕು ಚಿನ್ನ ಮತ್ತು ಎರಡು ಕಂಚಿನ ಪದಕವನ್ನು ಗೆದ್ದಿದ್ದಾರೆ. ರಾಜ್ಯ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಅಜಿತ್ ಆ್ಯಂಡ್ ಟೀಮ್ ಸೆಂಟರ್ ಫೈರ್ ಪಿಸ್ತೂಲ್ ಮೆನ್, ಸ್ಟ್ಯಾಂಡರ್ಡ್ ಪಿಸ್ತೂಲ್ ಮಾಸ್ಟರ್ ಮೆನ್, 50 ಮೀಟರ್ ಪಿಸ್ತೂಲ್ ಮಾಸ್ಟರ್ ಮೆನ್, ಸ್ಟ್ಯಾಂಡರ್ಡ್ ಪಿಸ್ತೂಲ್ ಮಾಸ್ಟರ್ ಮೆನ್, ಹೀಗೆ ಈ ನಾಲ್ಕು ವಿಭಾಗಗಳಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಇದನ್ನೂ ಓದಿ:
ಜೊತೆಗೆ 50 ಮೀಟರ್ ಉಚಿತ ಪಿಸ್ತೂಲ್ ಮೆನ್, ಸ್ಟ್ಯಾಂಡರ್ಡ್ ಪಿಸ್ತೂಲ್ ಪುರುಷರ ವಿಭಾಗದಲ್ಲಿ 2 ಕಂಚಿನ ಪದಕವನ್ನ ಅಜಿತ್ ಮತ್ತು ತಂಡ ಗೆದ್ದಿದ್ದಾರೆ. ತಿರುಚ್ಚಿ ರೈಫೆಲ್ ಕ್ಲಬ್‌ನಲ್ಲಿ ಈ ಚಾಂಪಿಯನ್‌ಶಿಪ್ ನಡೆದಿದ್ದು, ನೆಚ್ಚಿನ ನಟನನ್ನು ನೋಡಲು ಅಪಾರ ಅಭಿಮಾನಿಗಳು ಜಮಾಯಿಸಿದ್ದರು. ಇನ್ನು ಕಳೆದ 46ನೇ ತಮಿಳುನಾಡು ರಾಜ್ಯ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಅಜಿತ್ ಕುಮಾರ್ ಭಾಗವಹಿಸಿ, ಸಾಕಷ್ಟು ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದರು.
1986ರಲ್ಲಿ `ಅರುವಾಡೈ ನಾಲ್’ ಚಿತ್ರಕ್ಕೆ ನಿರ್ದೇಶನ ಮಾಡುವುದರ ಮೂಲಕ ತಮಿಳು ಚಿತ್ರರಂಗಕ್ಕೆ ಜಿ.ಎಂ ಕುಮಾರ್ ಪಾದಾರ್ಪಣೆ ಮಾಡಿದ್ದರು. ಸಾಕಷ್ಟು ಸಿನಿಮಾಗಳಿಗೆ ನಿರ್ದೇಶನ ಮಾಡಿದ ಬಳಿಕ ನಂದಿ ಪ್ರಶಸ್ತಿಗೂ ಪಾತ್ರರಾಗಿದ್ದರು. ಇದೀಗ ಜಿ.ಎಂ ಕುಮಾರ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಚೆನ್ನೈನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ:
ನಟ ಜಿ.ಎಂ ಕುಮಾರ್ ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ನಟ ಚಿಕಿತ್ಸೆಗೆ ಸ್ಪಂದಿಸುವವರೆಗೂ ಕಾದುನೋಡಬೇಕಿದೆ.
`ವಿಕ್ರಮ್’ ಸಿನಿಮಾ ಕಮಲ್ ಹಾಸನ್ ಕೆರಿಯರ್‌ಗೆ ಒಂದೊಳ್ಳೆಯ ಟರ್ನಿಂಗ್ ಪಾಯಿಂಟ್ ಕೊಟ್ಟಿದೆ. ಸಕ್ಸಸ್ ಖುಷಿಯಲ್ಲಿರುವ ನಟ ಕಮಲ್ ಅಭಿನಯದ ಮುಂದಿನ ಚಿತ್ರದ ಬಗ್ಗೆ ಬಿಗ್ ಅಪ್‌ಡೇಟ್ ಸಿಕ್ಕಿದೆ. `ಇಂಡಿಯನ್ 2′ ಕಮಲ್ ಹಾಸನ್ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:
ಎಸ್. ಶಂಕರ್ ನಿರ್ದೇಶನದ `ಇಂಡಿಯನ್ 2′ ಕಮಲ್ ಹಾಸನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜತೆಗೆ ಎಂದೂ ಮಾಡಿರದ ಪಾತ್ರದಲ್ಲಿ ಕಮಲ್ ಹಾಸನ್ ಕಾಣಿಸಿಕೊಂಡಿದ್ದಾರೆ. ಸೆಪ್ಟೆಂಬರ್‌ನಲ್ಲಿ ತೆರೆ ಕಾಣಲಿದೆ ಈ ಸಿನಿಮಾ. ತೆರೆಮರೆಯಲ್ಲಿ ಚಿತ್ರದ ರಿಲೀಸ್‌ಗೆ ತಯಾರಿ ಕೂಡ ನಡೆಯುತ್ತಿದೆ.
ಕನ್ನಡ ಮತ್ತು ಸೌತ್ ಸಿನಿಮಾರಂಗದಲ್ಲಿ ಛಾಪೂ ಮೂಡಿಸುತ್ತಿರುವ ನಟಿ ಸಂಯುಕ್ತ ಹೆಗ್ಡೆಗೆ `ಕ್ರೀಮ್’ ಚಿತ್ರೀಕರಣದ ವೇಳೆ ಭಾರಿ ಪೆಟ್ಟಾಗಿದೆ. ಫೈಟಿಂಗ್ ಸೀಕ್ವೆನ್ಸ್ ಚಿತ್ರೀಕರಿಸುವಾಗ ಈ ಅವಘಡ ನಡೆದಿದೆ. ಡ್ಯೂಪ್ ಬಳಸಿ ಚಿತ್ರೀಕರಣ ಮಾಡೋಣ ಎಂದು ಚಿತ್ರತಂಡ ಒತ್ತಾಯಿಸಿದರೂ ಸಂಯುಕ್ತಾ ಒಪ್ಪದಿದ್ದ ಕಾರಣ ಚಿತ್ರೀಕರಣ ವೇಳೆ ನಟಿಗೆ ಪೆಟ್ಟಾಗಿದೆ. ಸಂಯುಕ್ತಾ ಕಾಲು ಟ್ವಿಸ್ಟ್ ಆಗಿದೆ. ಇದೀಗ ನಟಿಗೆ ಹೆಚ್ಚುವರಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ:
ಅಭಿಷೇಕ್ ಬಸಂತ್ ನಿರ್ದೇಶನದ ʻಕ್ರೀಮ್ʼ ಚಿತ್ರದಲ್ಲಿ ಸಂಯುಕ್ತಾ ಹೆಗ್ಡೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕ ಡಿ ಕೆ. ದೇವೇಂದ್ರ, ಫೈಟ್ ಮಾಸ್ಟರ್ ಪ್ರಭು ಹಾಗೂ ಛಾಯಾಗ್ರಾಹಕ ಸುನೋಜ್ ವೇಲಾಯುಧನ್ ರವರು ಡ್ಯೂಪ್ ಬಳಸಲು ಒತ್ತಾಯಿಸಿದರೂ ನಾಯಕಿ ಒಪ್ಪಲಿಲ್ಲ ಇದರ ಪರಿಣಾಮ ನಾಯಕಿ ಸಂಯುಕ್ತಾ ಕಾಲು ಟ್ವಿಸ್ಟ್ ಆಗಿದೆ. ಈ ಸಿನಿಮಾದ ಚಿತ್ರೀಕರಣವನ್ನು ಮುಂದೂಡಲಾಗಿದೆ.
ಸಿನಿಮಾರಂಗದಲ್ಲಿ ಅಭಿನಯ ಚಕ್ರವರ್ತಿ ಆಗಿ ರಾರಾಜಿಸುತ್ತಿರುವ ಕಿಚ್ಚ ಸುದೀಪ್ ಗಾಂಧಿನಗರದಲ್ಲಿ ಮಾತ್ರವಲ್ಲ ಪರಭಾಷೆ, ಹೊರದೇಶದಲ್ಲೂ ಅಪಾರ ಅಭಿಮಾನಿಗಳಿದ್ದಾರೆ. ಗಡಿ ದಾಟಿ ಬೆಳೆದಿರುವ ಬಹುಮುಖ ಪ್ರತಿಭೆ ಕಿಚ್ಚ ಸುದೀಪ್ ಸದ್ಯ ʻವಿಕ್ರಾಂತ್ ರೋಣʼ ಗ್ರ್ಯಾಂಡ್ ಆಗಿ ರಿಲೀಸ್ ಆಗುವುದಕ್ಕೆ ದಿನಗಣನೆ ಶುರುವಾಗಿದೆ. ೩ಡಿ ರೂಪದಲ್ಲಿ ಬಹುಭಾಷೆಗಳಲ್ಲಿ ಇದೇ ಜುಲೈ 28ಕ್ಕೆ ತೆರೆಗೆ ಬರಲಿದೆ. `ವಿಕ್ರಾಂತ್ ರೋಣ’ ಚಿತ್ರದ ನಂತರ ಕಿಚ್ಚನ ಮುಂದಿನ ಸಿನಿಮಾ ಯಾವುದು ಎಂಬುದಕ್ಕೆ ಸ್ವತಃ ಸುದೀಪ್ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ.
ತಮಿಳಿನ ಸಾಕಷ್ಟು ಸಿನಿಮಾಗಳಿಗೆ ನಿರ್ದೇಶನ ಮಾಡಿರುವ ವೆಂಕಟ್ ಪ್ರಭು ಈಗ ಕಿಚ್ಚ ಸುದೀಪ್‌ಗೆ ಡೈರೆಕ್ಷನ್ ಮಾಡಲು ರೆಡಿಯಾಗಿದ್ದಾರೆ. ಸೌತ್ ಸಿನಿಮಾರಂಗದಲ್ಲಿ ಸಾಕಷ್ಟು ಹಿಟ್ ಚಿತ್ರಗಳನ್ನ ನೀಡಿರುವ ವೆಂಕಟ್ ಪ್ರಭು ಈಗ ಭಿನ್ನ ಕಥೆಯೊಂದನ್ನ ರೆಡಿ ಮಾಡಿ, ಈಗಾಗಲೇ ಕಿಚ್ಚನಿಗೆ ಸ್ಟೋರಿ ಹೇಳಿದ್ದಾರೆ. ಕಥೆ ಕೇಳಿ ಸುದೀಪ್ ಕೂಡ ಓಕೆ ಅಂದಿದ್ದಾರೆ. ಇದನ್ನೂ ಓದಿ:


ಮಕ್ಕಳ ಜೀವನವೇ ಮನಸ್ಸಿನಲ್ಲಿಕೊಂಡು ಈ ಮಾತು ಹೇಳಿದ್ರಾ ರಜನಿಕಾಂತ್. ಒಟ್ನಲ್ಲಿ ಸಕ್ಸಸ್‌ಫುಲ್ ಆಕ್ಟರ್ ಆಗಿದ್ದರು. ಖುಷಿ, ನೆಮ್ಮದಿ ಇಲ್ಲದೇ ಬದುಕುವುದು ಕಷ್ಟ. ನೆಚ್ಚಿನ ನಟನ ಈ ಕಾಮೆಂಟ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಚಲನಚಿತ್ರ ನಿರ್ಮಾಪಕರಾದ ವಿಪುಲ್ ಶಾ ಮತ್ತು ಅನುರಾಗ್ ಠಾಕೂರ್ ಅವರನ್ನ ಭೇಟಿ ಮಾಡಿ, 68ನೇ ರಾಷ್ಟ್ರ ಪ್ರಶಸ್ತಿಯ ಕುರಿತು ವರದಿ ಸಲ್ಲಿಸಲಾಯಿತು. ಯಾರಿಗೆಲ್ಲಾ ರಾಷ್ಟ್ರ ಪ್ರಶಸ್ತಿ ಬಂದಿದೆ. ಈ ಕುರಿತ ಡಿಟೈಲ್ಸ್ ಇಲ್ಲಿದೆ.