ಕಾಲಿವುಡ್ ಸೂಪರ್ ಸ್ಟಾರ್ ವಿಜಯ್, ಇದೀಗ ಮತ್ತೊಂದು ಮನೆ ಖರೀದಿಸಿದ್ದಾರೆ ಎನ್ನುವ ಸುದ್ದಿ ತಮಿಳು ಸಿನಿಮಾ ರಂಗದಲ್ಲಿ ಹರಿದಾಡುತ್ತಿದೆ. ಈಗಾಗಲೇ ಕಾಸ್ಟ್ಲಿ ಮನೆಯಲ್ಲೇ ವಾಸವಿರುವ ವಿಜಯ್, ಮತ್ತೊಂದು ದುಬಾರಿ ಮನೆಗೆ ಶಿಫ್ಟ್ ಆಗಲು ಬಯಸಿದ್ದಾರಂತೆ. ಕಾರಣ, ಈಗಿರುವ ಮನೆಯಲ್ಲಿ ಅವರಿಗೆ ಹಲವು ತೊಂದರೆಗಳು ಆಗುತ್ತಿವೆಯಂತೆ.

ವಿಜಯ್ ಅವರು ಸದ್ಯ ಚೆನ್ನೈನ ಈಸ್ಟ್ ಕೋಸ್ಟ್ ರಸ್ತೆಯಲ್ಲಿರುವ ಸ್ವಂತ ಮನೆಯಲ್ಲಿ ನೆಲೆಸಿದ್ದರು. ಅವರ ಇಡೀ ಕುಟುಂಬ ಅದೇ ಮನೆಯಲ್ಲೇ ವಾಸ ಮಾಡುತ್ತಿದೆ. ಈ ರಸ್ತೆಯಲ್ಲಿ ಸಂಚಾರ ದಟ್ಟನೆಯ ಕಾರಣದಿಂದಾಗಿ ಮನೆ ಬದಲಿಸುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ದುಬಾರಿ ಅಪಾರ್ಟ್ಮೆಂಟ್ ವೊಂದನ್ನು ವಿಜಯ್ ಖರೀದಿಸಿದ್ದು ಆ ಮನೆಗೆ 35 ಕೋಟಿಗೂ ಅಧಿಕ ಎನ್ನಲಾಗುತ್ತಿದೆ. ಇದನ್ನೂ ಓದಿ:ಬಾಲಿವುಡ್‌ಗೆ ಎಂಟ್ರಿ ಕೊಟ್ಟ `ಮಾಸ್ಟರ್ ಪೀಸ್’ ನಟಿ ಶಾನ್ವಿ ಶ್ರೀವಾಸ್ತವ್

ಸದ್ಯ ವಾರಿಸು ಸಿನಿಮಾದಲ್ಲಿ ಬ್ಯುಸಿಯಾಗಿರುವ ವಿಜಯ್, ಸದಾ ಶಾಂತವಾಗಿಯೇ ವರ್ತಿಸುವಂತಹ ನಟ ಕೂಡ. ಅಂದಹಾಗೆ ಇವರ ನಟನೆಯ ವಾರಿಸು ಸಿನಿಮಾ ಸದ್ಯ ಶೂಟಿಂಗ್ ನಡೆಯುತ್ತಿದ್ದು, ಈ ಚಿತ್ರದಲ್ಲಿ ಕನ್ನಡದ ಬೆಡಗಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಈ ಕಾಂಬಿನೇಷನ್ ನಲ್ಲಿ ಸಿನಿಮಾವೊಂದು ಮೂಡಿ ಬರುತ್ತಿದೆ.



















ಕೃತಿ ಶೆಟ್ಟಿ ಮೂರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ನೀಡುತ್ತಲೇ `ಗೋಲ್ಡನ್ ಲೆಗ್’ ಅನ್ನೋ ಪಟ್ಟ ಕೊಟ್ಟಿದ್ದರು. ಆದ್ರೀಗ ಈ ನಟಿ `ಗೋಲ್ಡನ್ ಲೆಗ್’ ಅನ್ನೋ ಚಾರ್ಮ್ ಅನ್ನು ಕಳೆದುಕೊಳ್ಳುತ್ತಿದ್ದಾರೆ. ಅದಕ್ಕೆ ಇತ್ತೀಚೆಗೆ ಬಿಡುಗಡೆಯಾಗಿದ್ದ ಎರಡು ಸಿನಿಮಾಗಳು. ರಾಮ್ ಪೋತಿನೇನಿ ಅಭಿನಯದ `ದಿ ವಾರಿಯರ್’ ಹಾಗೂ ನಿತಿನ್ ಜೊತೆ ನಟಿಸಿದ್ದ `ಮಾಚೆರ್ಲಾ ನಿಯೊಜಕವರ್ಗಂ’ ಸಿನಿಮಾಗಳು ಬಾಕ್ಸಾಫೀಸ್ ಮೋಡಿ ಮಾಡಲು ಸೋತಿವೆ. ಈ ಕಾರಣಕ್ಕೆ ಕೃತಿ ಶೆಟ್ಟಿಯನ್ನು ಟೀಕೆ ಮಾಡಲು ಆರಂಭಿಸಿದ್ದಾರೆ.

ಬಹುನಿರೀಕ್ಷಿತ `ಮಾರ್ಕ್ ಆ್ಯಂಟನಿ’ ಸಿನಿಮಾ ಮತ್ತೆ ಸುದ್ದಿಯಲ್ಲಿದೆ. ಈ ಚಿತ್ರದ ಶೂಟಿಂಗ್ ವೇಳೆ ಮತ್ತೆ ಅವಘಡ ಸಂಭವಿಸಿದೆ. ಫೈಟ್ ಸೀನ್ ಚಿತ್ರೀಕರಿಸುವಾಗ ನಟ ವಿಶಾಲ್‌ಗೆ ಮತ್ತೆ ಪೆಟ್ಟಾಗಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: