ಬಾಲಿವುಡ್ ಬ್ಯೂಟಿ ಐಶ್ವರ್ಯಾ ರೈ(Aishwarya rai) ಇದೀಗ ಮತ್ತೆ ಕಾಲಿವುಡ್‌ನತ್ತ ಮುಖ ಮಾಡಿದ್ದಾರೆ. `ಪೊನ್ನಿಯನ್ ಸೆಲ್ವನ್’ ಚಿತ್ರದ ಮೂಲಕ ಐಶ್ವರ್ಯ ರೈ ಸೌಂಡ್ ಮಾಡ್ತಿದ್ದಾರೆ. ಸದ್ಯ ಈ ಚಿತ್ರದ ಇವೆಂಟ್‌ನಲ್ಲಿ ರಾಣಿ ನಂದಿನಿ ಬ್ಲ್ಯಾಕ್ ಬ್ಯೂಟಿ ಆಗಿ ಮಿಂಚಿದ್ದಾರೆ.

ಬಿಟೌನ್‌ನ ಬಟ್ಟಲು ಕಂಗಳ ಸುಂದರಿ ಐಶ್ವರ್ಯಾ ರೈ ಮತ್ತೆ ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದಾರೆ. ಸದ್ಯ ಮಣಿರತ್ನಂ (Mani Ratnam) ನಿರ್ದೇಶನದ `ಪೊನ್ನಿಯನ್ ಸೆಲ್ವನ್’ (Ponniyin Selvan) ಚಿತ್ರದಲ್ಲಿ ರಾಣಿ ನಂದಿನಯಾಗಿ ಮಿಂಚ್ತಿದ್ದಾರೆ. ಐಶ್ ಫಸ್ಟ್ ಲುಕ್ ರಿವೀಲ್ ಆದಾಗಲೇ ನೋಡುಗರ ಗಮನ ಸೆಳೆದಿತ್ತು. ಇದೀಗ ಈ ಚಿತ್ರದ ಟ್ರೈಲರ್ ಲಾಂಚ್‌ನಲ್ಲೂ ಐಶ್ವರ್ಯ ರೈ ಬ್ಲ್ಯಾಕ್ ಬ್ಯೂಟಿ ಆಗಿ ಕಂಗೊಳಿಸಿದ್ದಾರೆ.

ಈ ಚಿತ್ರದ ಟ್ರೈಲರ್ ಲಾಂಚ್‌ನಲ್ಲಿ ಎಲ್ಲರ ಕಣ್ಣು ಕುಕ್ಕುವಂತೆ ಐಶ್ವರ್ಯಾ ರೈ ಕಾಣಿಸಿಕೊಂಡಿದ್ದಾರೆ. ಬ್ಲ್ಯಾಕ್ ಕಲರ್ ಸೆಲ್ವಾರ್ ಧರಿಸಿ, ಕಪ್ಪು ಬಣ್ಣದ ಬಿಂದಿ ಧರಿಸಿದ್ದಾರೆ. ಹಸಿರು ಬಣ್ಣದ ಗ್ರ್ಯಾಂಡ್ ಬಳೆ ಹಾಕಿದ್ದಾರೆ. ಸಿಂಪಲ್ ಮೇಕಪ್‌ನಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಒಟ್ನಲ್ಲಿ ಐಶ್ ಲುಕ್ ಈಗ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಇದನ್ನೂ ಓದಿ:ರಾಕೇಶ್‌ಗಾಗಿ ಬಿಗ್ ಬಾಸ್ ಮನೆನಾ ಎರಡು ಮನೆ ಮಾಡಬೇಕಾ: ಸೋನು ವಿರುದ್ಧ ಗುರೂಜಿ ಗರಂ
View this post on Instagram
ಮಣಿರತ್ನಂ ನಿರ್ದೇಶನದ `ಪೊನ್ನಿಯನ್ ಸೆಲ್ವನ್’ ಸೆಪ್ಟೆಂಬರ್ 30ಕ್ಕೆ ತೆರೆಗೆ ಅಪ್ಪಳಿಸಲಿದೆ. ವಿಕ್ರಮ್, ತ್ರಿಶಾ, ಐಶ್ವರ್ಯಾ ರೈ, ಕಾರ್ತಿ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.


























