Tag: Kollywood

  • ವಿದೇಶಿ ಪ್ರವಾಸದಲ್ಲಿ ಕಾಲು ಮುರಿದುಕೊಂಡ ತ್ರಿಶಾ – ಅಭಿಮಾನಿಗಳ ಎದೆಯಲ್ಲಿ ಢವಢವ

    ವಿದೇಶಿ ಪ್ರವಾಸದಲ್ಲಿ ಕಾಲು ಮುರಿದುಕೊಂಡ ತ್ರಿಶಾ – ಅಭಿಮಾನಿಗಳ ಎದೆಯಲ್ಲಿ ಢವಢವ

    ಚೆನ್ನೈ: ವಿದೇಶ ಪ್ರವಾಸದಲ್ಲಿದ್ದ (Foreign Trip) ತಮಿಳಿನ ಖ್ಯಾತ ನಟಿ ತ್ರಿಶಾ ಕೃಷ್ಣನ್ (Trisha Krishnan) ಕಾಲು ಮುರಿದುಕೊಂಡು ಮನೆಗೆ ವಾಪಸ್ಸಾಗಿದ್ದಾರೆ.

    ಇತ್ತೀಚೆಗಷ್ಟೇ ವಿದೇಶಕ್ಕೆ ತೆರಳಿದ್ದ ದಕ್ಷಿಣ ಭಾರತದ ಹೆಸರಾಂತ ಸಿನಿಮಾ ತಾರೆ ತ್ರಿಶಾ ಅಪಘಾತದಲ್ಲಿ (Accident) ಕಾಲು ಮುರಿದಿದ್ದು, ಸದ್ಯ ಮನೆಗೆ ಮರಳಿದ್ದಾರೆ. ಇದನ್ನೂ ಓದಿ: ಝೈದ್ ಖಾನ್ ಜೊತೆ `ಬನಾರಸ್’ ವೀಕ್ಷಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

    ನಟಿ ತಮ್ಮ ಕಾಲಿನ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದು, ಅಪಘಾತವಾದ ಕಾರಣ ವೆಕೇಶನ್‌ನಿಂದ ವಾಪಸ್ ಬರಬೇಕಾಯಿತು ಎಂದಿದ್ದಾರೆ. ಫೋಟೋ ಹಂಚಿಕೊಳ್ಳುತ್ತಿದ್ದಂತೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿ, ಶೀಘ್ರ ಗುಣಮುಖರಾಗಿ ಎಂದು ಹಾರೈಸಿದ್ದಾರೆ. ಇದನ್ನೂ ಓದಿ: ಟಿಕೆಟ್ ದರ ಇಳಿಕೆ – `ಗಂಧದಗುಡಿ’ ಚಿತ್ರ ವೀಕ್ಷಿಸುವ ಪ್ರೇಕ್ಷಕರಿಗೆ ಬಂಪರ್ ಆಫರ್

    ಎರಡು ದಶಕಗಳಲ್ಲಿ ಹಲವು ಹಿಟ್ ಸಿನಿಮಾಗಳನ್ನು ನೀಡಿರುವ ತ್ರಿಶಾ, ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ವಯಸ್ಸು 40 ಸಮೀಪಿಸುತ್ತಿದ್ದರೂ ಯುವ ನಟಿಯರಿಗೂ ಕಮ್ಮಿಯಿಲ್ಲದ ನಟಿ, ಸ್ಟಾರ್ ಹೀರೋಯಿನ್ ಎಂಬುದನ್ನು ಸಾಬೀತುಪಡಿಸುತ್ತಲೇ ಇದ್ದಾರೆ. ಇತ್ತೀಚೆಗೆ ಅವರು ಅಭಿನಯಿಸಿರುವ `ಪೊನ್ನಿಯನ್ ಸೆಲ್ವನ್’ (Ponniyin Selvan) ಭಾಗ-1 ಚಿತ್ರವು ಭರ್ಜರಿ ಪ್ರದರ್ಶನ ಕಾಣ್ತಿದ್ದು, ಈಗಾಗಲೇ ಸುಮಾರು 500 ಕೋಟಿ ಬಾಚಿಕೊಂಡಿದೆ.

    ಮಲಯಾಳಂ ಸ್ಟಾರ್ ಮೋಹನ್ ಲಾಲ್ (Mohan Lal) ಅವರೊಂದಿಗೆ ನಟಿಸಿರುವ `ರಾಮ್’ ಮಲಯಾಳಂ (Malayalam) ಸಿನಿಮಾದ (Cinema) ಶೂಟಿಂಗ್ ಮುಗಿಸಿದ ತ್ರಿಶಾ ಯುರೋಪಿಯನ್ ದೇಶಗಳಿಗೆ ಪ್ರವಾಸ ಹೋಗಿದ್ದರು. ಈ ವೇಳೆ ಕಾಲಿಗೆ ಪೆಟ್ಟಾಗಿದ್ದು, ಮನೆಗೆ ವಾಪಸ್ಸಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • `ವಾರಿಸು’ಗಾಗಿ ವಿಜಯ್ ಥಳಪತಿ ಜೊತೆ ಸೊಂಟ ಬಳುಕಿಸಿದ ರಶ್ಮಿಕಾ

    `ವಾರಿಸು’ಗಾಗಿ ವಿಜಯ್ ಥಳಪತಿ ಜೊತೆ ಸೊಂಟ ಬಳುಕಿಸಿದ ರಶ್ಮಿಕಾ

    ನ್ನಡದ ಚಸ್ಮಾ ಸುಂದರಿ ಸಾನ್ವಿ ಅಲಿಯಾಸ್ ರಶ್ಮಿಕಾ ಮಂದಣ್ಣ(Rashmika Mandanna), ಇದೀಗ ಸೌತ್ ಮತ್ತು ನಾರ್ತ್ ಇಂಡಸ್ಟ್ರಿಯಲ್ಲಿ ಮಿರ ಮಿರ ಅಂತಾ ಮಿಂಚ್ತಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬಹುಬೇಡಿಕೆಯ ನಾಯಕಿಯಾಗಿ ಚಾನ್ಸ್ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಸದ್ಯ `ವಾರಿಸು’ (Varisu)  ಸಿನಿಮಾಗಾಗಿ ವಿಜಯ್ ಜೊತೆ ಸೊಂಟ ಬಳುಕಿಸಿದ್ದಾರೆ.

    ಪ್ಯಾನ್ ಇಂಡಿಯಾ ಸಿನಿಮಾ `ಪುಷ್ಪ'(Pushpa) ಶ್ರೀವಲ್ಲಿಯಾಗಿ ಗೆದ್ದಿರುವ ರಶ್ಮಿಕಾ ಮಂದಣ್ಣ, ಸದ್ಯ `ವಾರಿಸು'(Varisu) ಚಿತ್ರದ ವಿಷ್ಯವಾಗಿ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದ್ದಾರೆ. ಸೂಪರ್ ಸ್ಟಾರ್ ವಿಜಯ್ ಜೊತೆ ನಟಿಸಬೇಕು ಎಂಬುದು ರಶ್ಮಿಕಾ ಕನಸಾಗಿತ್ತು. ಅದೀಗ ನನಸಾಗಿದೆ. ವಿಜಯ್‌ಗೆ(Vijay) ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಚಿತ್ರದ ಹಾಡೊಂದು ರಿಲೀಸ್ ಆಗಿದ್ದು, ವಿಜಯ್ ಜೊತೆ ಭರ್ಜರಿಯಾಗಿ ಕುಣಿದು ಕುಪ್ಪಳಿಸಿದ್ದಾರೆ. ಇದನ್ನೂ ಓದಿ:ದೈವ ನರ್ತಕರಿಗೆ ಸರ್ಕಾರ ಮಾಸಾಶನ ನೀಡಬಾರದಿತ್ತು – ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯ್ಕ್‌

    `ವಾರಿಸು’ ಚಿತ್ರದ ರಂಜಿತಮೆ ಸಾಂಗ್‌ಗೆ ಫ್ಯಾನ್ಸ್ ಬೋಲ್ಡ್ ಆಗಿದ್ದಾರೆ. ವಿಜಯ್ ಜೊತೆ ಹಾಟ್ ಆಗಿ ಕಾಣಿಸಿಕೊಂಡು ರಶ್ಮಿಕಾ ಸೊಂಟ ಬಳುಕಿಸಿರೋದು ಫ್ಯಾನ್ಸ್‌ಗೆ ಖುಷಿಕೊಟ್ಟಿದೆ. ಸಾಂಗ್ ರಿಲೀಸ್ ಆಗಿ ಕೆಲವೇ ಗಂಟೆಗಳಲ್ಲಿ ಮಿಲಿಯನ್ ಗಟ್ಟಲ್ಲೇ ವೀಕ್ಷಣೆ ಪಡೆದಿದೆ.

    `ಪುಷ್ಪ’ ಚಿತ್ರದಲ್ಲಿ ರಶ್ಮಿಕಾ ಹೆಜ್ಜೆ ಹಾಕಿದ್ದ ಸಾಮಿ ಸಾಂಗ್ ಭರ್ಜರಿ ಹಿಟ್ ಆಗಿತ್ತು. ಇದೀಗ `ವಾರಿಸು’ ಚಿತ್ರದ ಸಾಂಗ್‌ಗೆ ಅದ್ಬುತ ರೆಸ್ಪಾನ್ಸ್ ಸಿಗುತ್ತಿದೆ. ಇನ್ನೂ ಈ ಸಿನಿಮಾ 2023ರಲ್ಲಿ ತೆರೆಗೆ ಅಪ್ಪಳಿಸಲಿದೆ.

    Live Tv
    [brid partner=56869869 player=32851 video=960834 autoplay=true]

  • ʻಇಂಡಿಯನ್‌ 2ʼ ಚಿತ್ರದಲ್ಲಿ ಕಮಲ್‌ ಹಾಸನ್‌ ಜೊತೆ ಖ್ಯಾತ ಕ್ರಿಕೆಟರ್‌ ತಂದೆ ನಟನೆ

    ʻಇಂಡಿಯನ್‌ 2ʼ ಚಿತ್ರದಲ್ಲಿ ಕಮಲ್‌ ಹಾಸನ್‌ ಜೊತೆ ಖ್ಯಾತ ಕ್ರಿಕೆಟರ್‌ ತಂದೆ ನಟನೆ

    ಕ್ರಿಕೆಟ್ ಕ್ಷೇತ್ರದಲ್ಲಿ ಮಿಂಚಿದ ಅನೇಕ ಸ್ಟಾರ್ ಕ್ರಿಕೆಟಿಗರು ತಮ್ಮ ನಿವೃತ್ತಿಯ ನಂತರ ಬೇರೆ ಕ್ಷೇತ್ರಗಳತ್ತ ಮುಖ ಮಾಡೋದು ಸರ್ವೇ ಸಾಮಾನ್ಯ. ಇತ್ತೀಚೆಗಷ್ಟೇ ಎಂ.ಎಸ್ ಧೋನಿ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇದೀಗ ಖ್ಯಾತ ಕ್ರಿಕೆಟಿಗ ಯುವರಾಜ್ ಸಿಂಗ್(Yuvaraj Singh) ತಂದೆ ಯೋಗರಾಜ್ ಸಿಂಗ್(Yogaraj Singh) ಕೂಡ ಸಿನಿಮಾಗೆ ಎಂಟ್ರಿ ಕೊಡ್ತಿದ್ದಾರೆ.

    ಹರ್ಭಜನ್ ಸಿಂಗ್, ಇರ್ಫಾನ್ ಪಠಾಣ್, ಎಂ.ಎಸ್ ಧೋನಿ ನಂತರ ಮಾಜಿ ಕ್ರಿಕೆಟಿಗ ಆಗಿರುವ ಯೋಗರಾಜ್ ಸಿಂಗ್ ಇದೀಗ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಖ್ಯಾತ ಕ್ರಿಕೆಟರ್ ಯುವರಾಜ್ ಸಿಂಗ್ ತಂದೆ ಕೂಡ ಕ್ರಿಕೆಟ್ ಜಗತ್ತಿನಲ್ಲಿ ಗುರುತಿಸಿಕೊಂಡಿದ್ದರು. ಇದೀಗ ಕಮಲ್ ಹಾಸನ್(Kamal Haasan) ನಟನೆಯ `ಇಂಡಿಯನ್ 2′ (Indian 2) ಚಿತ್ರದಲ್ಲಿ ಯೋಗರಾಜ್ ಸಿಂಗ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದನ್ನೂ ಓದಿ:ಹನ್ಸಿಕಾ ಮೋಟ್ವಾನಿಗೆ ರೊಮ್ಯಾಂಟಿಕ್‌ ಆಗಿ ಪ್ರಪೋಸ್‌ ಮಾಡಿದ ಭಾವಿ ಪತಿ

     

    View this post on Instagram

     

    A post shared by Yograj Singh (@yograjofficial)

    `ಇಂಡಿಯನ್ 2′ ಸಿನಿಮಾ ಶುರುವಾಗಿ ಹಲವು ವರ್ಷಗಳೇ ಆಗಿದೆ. ಆದರೆ ಕೆಲವು ಕಾರಣಗಳಿಂದ ಈ ಚಿತ್ರ ಸ್ಥಗಿತಗೊಂಡಿತ್ತು. ಇದೀಗ ಕಮಲ್ ಹಾಸನ್ ನಟನೆಯ `ವಿಕ್ರಮ್’ ಚಿತ್ರದ ಸಕ್ಸಸ್ ನಂತರ ಈ ಚಿತ್ರ ಮತ್ತೆ `ಇಂಡಿಯನ್ 2′ ಪ್ರಾಜೆಕ್ಟ್ ಶುರುವಾಗಿದೆ. ಮಾಜಿ ಕ್ರಿಕೆಟರ್ ಯೋಗರಾಜ್ ಸಿಂಗ್ ಈ ಚಿತ್ರದಲ್ಲಿ ಪವರ್‌ಫಯಲ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • `ಹೃದಯದ ರಾಣಿ’ ಎಂದು ಪ್ರೇಯಸಿಯನ್ನ ಹಾಡಿ ಹೊಗಳಿದ ಸಿದ್ಧಾರ್ಥ್

    `ಹೃದಯದ ರಾಣಿ’ ಎಂದು ಪ್ರೇಯಸಿಯನ್ನ ಹಾಡಿ ಹೊಗಳಿದ ಸಿದ್ಧಾರ್ಥ್

    ಕಾಲಿವುಡ್ ನಟ ಸಿದ್ಧಾರ್ಥ್(Siddarth) ಸಿನಿಮಾಗಿಂತ ವೈಯಕ್ತಿಕ ವಿಚಾರವಾಗಿಯೇ ಸಖತ್ ಸುದ್ದಿಯಾಗುತ್ತಿದ್ದಾರೆ. ಬಾಲಿವುಡ್ ನಟಿ ಅದಿತಿ ರಾವ್ ಹೈದರಿ(Aditi Rao Hydari) ಜೊತೆಗಿನ ಡೇಟಿಂಗ್ ವಿಷ್ಯವಾಗಿ ಸಿದ್ಧಾರ್ಥ್ ಇತ್ತೀಚೆಗೆ ಸೌಂಡ್ ಮಾಡುತ್ತಿದ್ದಾರೆ. ಇದೀಗ ನಟಿಯ ಹುಟ್ಟಿದ ಹಬ್ಬಕ್ಕೆ ವಿಶೇಷವಾಗಿ ಸಿದ್ಧಾರ್ಥ್ ವಿಶ್ ಮಾಡಿರೋದು ಸಖತ್ ವೈರಲ್ ಆಗುತ್ತಿದೆ.

    ತಮಿಳಿನ (Kollywood) ಸಾಕಷ್ಟು ಸಿನಿಮಾಗಳ ಮೂಲಕ ಮೋಡಿ ಮಾಡಿರುವ ಸ್ಟಾರ್ ನಟ ಸಿದ್ಧಾರ್ಥ್ ಸದ್ಯ ಅದಿತಿ ಜೊತೆಗಿನ ಡೇಟಿಂಗ್ ವಿಚಾರವಾಗಿ ಸಖತ್ ಸದ್ದು ಮಾಡುತ್ತಿದ್ದಾರೆ. `ಮಹಾಸಮುದ್ರಂ’ (Mahasamudram) ಸಿನಿಮಾ ವೇಳೆ ಸಿದ್ಧಾರ್ಥ್ ಮತ್ತು ಅದಿತಿ ಒಟ್ಟಿಗೆ ತೆರೆಹಂಚಿಕೊಂಡಿದ್ದರು. ಈ ಪರಿಚಯವೇ ಪ್ರೀತಿಗೆ ತಿರುಗಿದೆ ಎನ್ನಲಾಗುತ್ತಿದೆ. ಸದ್ಯ ಅದಿತಿ ಹುಟ್ಟುಹಬ್ಬಕ್ಕೆ ಸ್ಪೆಷಲ್ ಆಗಿ ಸಿದ್ಧಾರ್ಥ್ ಶುಭಹಾರೈಸಿದ್ದಾರೆ. ಇದನ್ನೂ ಓದಿ:ಪುನೀತ್ ಪ್ರಥಮ ಪುಣ್ಯಸ್ಮರಣೆ: ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಭಾವುಕ ಪತ್ರ

    ಇದೇ ಅ.28ರಂದು ಅದಿತಿ ಹುಟ್ಟಿದ ಹಬ್ಬವಾಗಿದ್ದು, ಹೃದಯದ ರಾಣಿಗೆ ಜನ್ಮ ದಿನದ ಶುಭಾಶಯಗಳು ಎಂದು ಸಿದ್ಧಾರ್ಥ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ನೆಟ್ಟಿಗರ ಗಮನ ಸೆಳೆದಿದೆ. ಇಬ್ಬರ ಡೇಟಿಂಗ್ ವದಂತಿಗೆ ಮತ್ತಷ್ಟು ಕುರುಹು ಸಿಕ್ಕಂತಾಗಿದೆ.

     

    View this post on Instagram

     

    A post shared by Siddharth (@worldofsiddharth)

    ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿರುವ ಅದಿತಿ ರಾವ್ ಆಕ್ಟೀವ್‌ ಆಗಿದ್ದಾರೆ. ಸೌತ್‌ ಸಿನಿಮಾಗಳಲ್ಲಿ ಸಿದ್ಧಾರ್ಥ್ ಬ್ಯುಸಿಯಾಗಿದ್ದಾರೆ. ಸದ್ಯದಲ್ಲೇ ಇಬ್ಬರು ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ನಯನತಾರಾ- ವಿಘ್ನೇಶ್ ಶಿವನ್ ಬಾಡಿಗೆ ತಾಯ್ತನದ ಕೇಸ್‌ಗೆ ಬಿಗ್ ಟ್ವಿಸ್ಟ್

    ನಯನತಾರಾ- ವಿಘ್ನೇಶ್ ಶಿವನ್ ಬಾಡಿಗೆ ತಾಯ್ತನದ ಕೇಸ್‌ಗೆ ಬಿಗ್ ಟ್ವಿಸ್ಟ್

    ಕಾಲಿವುಡ್‌ನ ಕ್ಯೂಟ್ ಕಪಲ್ ನಯನತಾರಾ(Nayanatara) ಮತ್ತು ವಿಘ್ನೇಶ್ ಶಿವನ್ (Vignesh Shivan) ದಂಪತಿ ಸಂಕಷ್ಟವೊಂದರಲ್ಲಿ ಸಿಲುಕಿದ್ದಾರೆ. ಬಾಡಿಗೆ ತಾಯ್ತನದ ಪ್ರಕರಣ ಭಾರೀ ರೋಚಕ ತಿರುವು ಪಡೆದುಕೊಂಡಿದೆ. ಅವಳಿ ಮಕ್ಕಳನ್ನು ಪಡೆದ (Surrogate Mother)( ನಯನತಾರಾ ದಂಪತಿಗೆ ವಿವಾದವೊಂದು ಸೃಷ್ಟಿಯಾಗಿತ್ತು. ಇದೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

    ಕೆಲ ದಿನಗಳಿಂದ ನಯನತಾರಾ ದಂಪತಿ(Nayanatara Couple) ಸಖತ್ ಸುದ್ದಿಯಲ್ಲಿದ್ದಾರೆ. ಬಾಡಿಗೆ ತಾಯ್ತನದ ವಿಚಾರವಾಗಿ ತೀವ್ರ ಆಕ್ಷೇಪ ಎದುರಿಸುತ್ತಿದ್ದಾರೆ. ಕಳೆದ ಜೂನ್ 2ರಂದು ಮದುವೆಯಾದ ಈ ಜೋಡಿಗೆ 4 ತಿಂಗಳಲ್ಲಿ ಮಗು ಹೇಗೆ ಸಾಧ್ಯ ಎಂದು ಅಭಿಮಾನಿಗಳ ವಲಯದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು. ಬಾಡಿಗೆ ತಾಯ್ತನದ ಮೂಲಕ ಮಗು ಪಡೆದಿದ್ದಾರೆ ಎಂದು ಸುದ್ದಿಯಾದ ಬೆನ್ನಲ್ಲೇ, ಇವರು ಬಾಡಿಗೆ ತಾಯ್ತನದ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎಂಬ ಮಾತು ಹರಿದಾಡಿತ್ತು. ನಂತರ ಈ ದಂಪತಿಯ ವಿರುದ್ಧ ದೂರು ದಾಖಲಾಗಿತ್ತು. ಆದರೆ ಈಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇದನ್ನೂ ಓದಿ:ಈ ಮನೆ ಅದಕ್ಕಲ್ಲ; ಮಿತಿ ಮೀರಿದ ರೂಪೇಶ್, ಸಾನ್ಯ ರೊಮ್ಯಾನ್ಸ್‌ಗೆ ಕಿಚ್ಚ ವಾರ್ನಿಂಗ್

    ಮೂಲಗಳ ಪ್ರಕಾರ ಕಾನೂನು ಬದ್ಧವಾಗಿ ದಾಖಲೆಗಳನ್ನು ಸಲ್ಲಿಸಿದ್ದಾರೆಂದು ತಿಳಿದು ಬಂದಿದೆ. ನಯನತಾರಾ ದಂಪತಿಗಳು ಆರು ವರ್ಷಗಳ ಹಿಂದೆಯೇ ರಿಜಿಸ್ಟ್ರಾರ್‌ ಮದುವೆಯಾಗಿದ್ದು, ಇದಕ್ಕೆ ಸಂಬಂಧಿಸಿದ ಕಾನೂನಾತ್ಮಕ ದಾಖಲೆಗಳನ್ನು ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
    ಅಷ್ಟೇ ಅಲ್ಲದೇ, 2021ರಲ್ಲೇ ಬಾಡಿಗೆ ತಾಯ್ತನದ(Surrogate Mother) ಒಪ್ಪಂದಕ್ಕೆ ದಂಪತಿ ಸಹಿ ಹಾಕಿರುವುದಕ್ಕೆ ಸಂಬಂಧಿಸಿದ ದಾಖಲೆ ಕೂಡ ಸಲ್ಲಿಸಿದ್ದಾರೆ.

    ಕಳೆದ ಜೂನ್ ಸಂಪ್ರದಾಯಿಕವಾಗಿ ಮದುವೆ ಆಗಿದ್ದು, ಆರು ವರ್ಷಗಳ ಹಿಂದೆಯೇ ರಿಜಿಸ್ಟ್ರಾರ್ ಮದುವೆ(Register Wedding) ಆಗಿದ್ದಾರೆ. ಹೀಗಾಗಿ ಇದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎನ್ನಲಾಗುತ್ತಿದೆ. ಈ ಮೂಲಕ ಈ ಬಾಡಿಗೆ ತಾಯ್ತನದ ಪ್ರಕರಣಕ್ಕೆ ಅಂತ್ಯ ಕಾಣುವ ಎಲ್ಲಾ ಲಕ್ಷಣಗಳು ಇದೆ.

    Live Tv
    [brid partner=56869869 player=32851 video=960834 autoplay=true]

  • ಕಾಲಿವುಡ್ ನಟ ವಿಜಯ್ ಆಂಥೋನಿ ದಾಂಪತ್ಯದಲ್ಲಿ ಬಿರುಕು?

    ಕಾಲಿವುಡ್ ನಟ ವಿಜಯ್ ಆಂಥೋನಿ ದಾಂಪತ್ಯದಲ್ಲಿ ಬಿರುಕು?

    ಕ್ಷಿಣದ ಸ್ಟಾರ್‌ಗಳಾದ ಸಮಂತಾ ಮತ್ತು ನಾಗಚೈತನ್ಯ (Samanth & Nagachaitanya) , ಧನುಷ್ ಮತ್ತು ಐಶ್ವರ್ಯ (Dhanush & Aishwarya Rajanikanth) ಡಿವೋರ್ಸ್ ನಂತರ ಮತ್ತೊಬ್ಬ ನಟ ತಮ್ಮ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡುತ್ತಿದ್ದಾರೆ. ತಮಿಳು ನಟ ವಿಜಯ್ ಆಂಥೋನಿ (Vijay Antony) ದಾಂಪತ್ಯದಲ್ಲಿ ಬಿರುಕುಂಟಾಗಿದೆ ಎಂಬ ಸುದ್ದಿ ಟಿಟೌನ್ ಅಂಗಳದಲ್ಲಿ ಗಿರಕಿ ಹೊಡೆಯುತ್ತಿದೆ.

    ದಕ್ಷಿಣ ಭಾರತದ ಸ್ಟಾರ್ಸ್‌ಗಳಿಗೆ ಡಿವೋರ್ಸ್ ಅನ್ನೋದು ಕಾಮನ್ ಆಗಿಬಿಟ್ಟಿದೆ. ಚಿತ್ರರಂಗದಲ್ಲಿ ವಿಚ್ಛೇದನ ಹೆಚ್ಚಾಗುತ್ತಲೇ ಇದೆ. ಸಮಂತಾ ದಂಪತಿ ನಂತರ ಧನಷ್ ದಂಪತಿ ಕೂಡ ಡಿವೋರ್ಸ್ (Divorce) ಪಡೆದಿದ್ದರು. ಇದೀಗ ಖ್ಯಾತ ನಟ ವಿಜಯ್ ಆಂಥೋನಿ ಕೂಡ ತಮ್ಮ ವೈವಾಹಿಕ ಜೀವನಕ್ಕೆ ಫುಲ್ ಸ್ಟಾಪ್ ಇಡಲಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ನಟ ಸುಳಿವು ನೀಡಿದ್ದಾರೆ.

    ಇತ್ತೀಚೆಗಷ್ಟೇ ತಮಿಳು ನಟ ವಿಜಯ್ ಆಂಥೋನಿ ಮದುವೆ ಬಗ್ಗೆ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ವಿಜಯ್ ಆಂಥೋನಿ ತಮ್ಮ ಪತ್ನಿ ಫಾತಿಮಾಗೆ(Fatima) ಡಿವೋರ್ಸ್ ನೀಡುವ ಸುಳಿವು ನೀಡಿದ್ದಾರೆಂದು ತಮಿಳು ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ರೂಪೇಶ್ ರಾಜಣ್ಣ ಮೇಲೆ ಪ್ರಶಾಂತ್ ಸಂಬರ್ಗಿ ವಾಗ್ದಾಳಿ

    ನಿಮ್ಮ ಕುಟುಂಬದಲ್ಲಿ ಏನೇ ಸಮಸ್ಯೆ ಇದ್ದರೂ, ಅದನ್ನು ನಿಮ್ಮಗಳ ನಡುವೆ ಪರಿಹಾರ ಮಾಡಿಕೊಳ್ಳಿ. ಅದು ಸಾಧ್ಯವಿಲ್ಲ ಅಂದರೆ ಬೇರೆಯಾಗಿ. ಇಬ್ಬರೂ ಕಾಲಿಗೆ ಬೀಳುವ ಮೂಲಕ ಹೊಂದಾಣಿಕೆ ಮಾಡಿಕೊಳ್ಳಲು ಪ್ರಯತ್ನಿಸಿ. ಆದರೆ, ಮೂರನೇ ವ್ಯಕ್ತಿಯನ್ನು ನಿಮ್ಮ ಜೀವನದೊಳಗೆ ಪ್ರವೇಶ ಮಾಡಲು ಬಿಡಬೇಡಿ. ಆವರು ನಿಮ್ಮನ್ನು ಮುಗಿಸಿಬಿಡುತ್ತಾರೆ ಎಂದು ವಿಜಯ್ ಆಂಥೋನಿ ಟ್ವೀಟ್ ಮಾಡಿದ್ದಾರೆ. ಇದೀಗ ಈ ಟ್ವೀಟ್‌ನಿಂದ ನಟ ವಿಜಯ್ ತಮ್ಮ ಪತ್ನಿಗೆ ಡಿವೋರ್ಸ್ ಕೊಡಲಿದ್ದಾರೆ ಎಂಬ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಅಷ್ಟಕ್ಕೂ ಈ ವಿಚಾರ ಅದೆಷ್ಟರ ಮಟ್ಟಿಗೆ ಸತ್ಯ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • `ಪುನೀತ ಪರ್ವ’ ಕಾರ್ಯಕ್ರಮಕ್ಕೆ ಬರಲಿದ್ದಾರೆ ದಕ್ಷಿಣದ ಸ್ಟಾರ್ಸ್

    `ಪುನೀತ ಪರ್ವ’ ಕಾರ್ಯಕ್ರಮಕ್ಕೆ ಬರಲಿದ್ದಾರೆ ದಕ್ಷಿಣದ ಸ್ಟಾರ್ಸ್

    `ಗಂಧದ ಗುಡಿ’ (Gandadagudi) ಇದೇ ಅಕ್ಟೋಬರ್ 28ಕ್ಕೆ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಸ್ಯಾಂಡಲ್‌ವುಡ್ ಜೊತೆ ದಕ್ಷಿಣದ ಸ್ಟಾರ್ಸ್ ಸಾಥ್ ಕೊಡಲಿದ್ದಾರೆ. `ಪುನೀತ ಪರ್ವ’ (Puneetha Parva) ಕಾರ್ಯಕ್ರಮದಲ್ಲಿ ಸೌತ್ ಸ್ಟಾರ್‌ಗಳ ದಂಡೇ ಬೆಂಗಳೂರಿಗೆ ಬರಲಿದೆ.

    ಅಪ್ಪು ನಟನೆಯ ಕೊನೆಯ ಕನಸಿನ ಸಿನಿಮಾ `ಗಂಧದ ಗುಡಿ’ಗೆ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಇಡೀ ಅಣ್ಣಾವ್ರ ಕುಟುಂಬವೇ ಕೈ ಜೋಡಿಸಿದೆ. ಈ ಚಿತ್ರವನ್ನು ಅದ್ದೂರಿಯಾಗಿ ಬಿಡುಗಡೆ ಮಾಡಲು ಸಕಲ ತಯಾರಿ ನಡೆಯುತ್ತಿದೆ. ಚಿತ್ರದ ಪ್ರೀ -ರಿಲೀಸ್ ಇವೆಂಟ್‌ಗೆ ಕರ್ನಾಟಕದ ಮೂಲೆ ಮೂಲೆಯಿಂದ ಅಪ್ಪು ಫ್ಯಾನ್ಸ್ ಬರಲಿದ್ದಾರೆ. ಇನ್ನೂ ಕಾರ್ಯಕ್ರಮ ರಂಗು ಹೆಚ್ಚಿಸಲು ಸೌತ್‌ನ ಸೂಪರ್ ಸ್ಟಾರ್ಸ್ ಕೂಡ ಸಾಥ್ ಕೊಡಲಿದ್ದಾರೆ.‌ ಇದನ್ನೂ ಓದಿ:ಮತ್ತೆ ಬೋಲ್ಡ್ ಲುಕ್‌ನಲ್ಲಿ ಮಿಂಚಿದ ಗೋಲ್ಡನ್ ಗರ್ಲ್ ರಶ್ಮಿಕಾ ಮಂದಣ್ಣ

    ಅಪ್ಪು ಸ್ನೇಹಜೀವಿ ಆಗಿದ್ದರು. ಎಲ್ಲಾ ಚಿತ್ರರಂಗದ ಕಲಾವಿದರ ಜೊತೆಗೆ ಒಡನಾಟವಿದ್ದ ಕಾರಣ ದಕ್ಷಿಣದ ಸ್ಟರ‍್ಸ್ಗಳಾದ ನಂದಮುರಿ  ಬಾಲಕೃಷ್ಣ(Nandamuri Balakrishna), ಸೂರ್ಯ(Surya), ಕಮಲ್ ಹಾಸನ್ (Kamal Hassan), ರಾಣಾ ದಗ್ಗುಬಾಟಿ (Rana Daggubati) ಅವರಿಗೆ ಅಣ್ಣಾವ್ರ ಕುಟುಂಬದಿಂದ ಆಹ್ವಾನ ನೀಡಲಾಗಿದೆ. ಅಪ್ಪು ನಟನೆಯ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಈ ಎಲ್ಲಾ ಸ್ಟಾರ್‌ಗಳು ಬರಲಿದ್ದಾರೆ.

    ಅಕ್ಟೋಬರ್ 21ರಂದು ಸಂಜೆ 6.30ಕ್ಕೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿ ಕಾರ್ಯಕ್ರಮ ನಡೆಯಲಿದೆ. 5 ಲಕ್ಷಕ್ಕೂ ಅಧಿಕ ಜನ ಈ ಕಾರ್ಯಕ್ರಮಕ್ಕೆ ಬರುವ ನಿರೀಕ್ಷೆಯಿದೆ.

    Live Tv
    [brid partner=56869869 player=32851 video=960834 autoplay=true]

  • ದುಬಾರಿ ಕಾರು ಖರೀದಿಸಿದ ನಟಿ ಕೀರ್ತಿ ಸುರೇಶ್

    ದುಬಾರಿ ಕಾರು ಖರೀದಿಸಿದ ನಟಿ ಕೀರ್ತಿ ಸುರೇಶ್

    ಟಾಲಿವುಡ್ (Tollywood) ನಟಿ ಕೀರ್ತಿ ಸುರೇಶ್ (Keerthi Suresh) ಮತ್ತೆ ಸುದ್ದಿಯಲ್ಲಿದ್ದಾರೆ. ಸಿನಿಮಾಗಳಿಂದ ಸದ್ದು ಮಾಡುತ್ತಿದ್ದ ನಟಿ ಕೀರ್ತಿ, ತಮ್ಮ ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ದಸರಾ ಹಬ್ಬದಂದು ಮನೆಗೆ ಹೊಸ ಅತಿಥಿಯನ್ನ ಬರಮಾಡಿಕೊಂಡಿದ್ದಾರೆ. ದುಬಾರಿ ಕಾರು ಖರೀದಿಸುವ ಮೂಲಕ ಮಹಾನಟಿ ಸುದ್ದಿಯಲ್ಲಿದ್ದಾರೆ.

    `ಸರ್ಕಾರು ವಾರಿ ಪಾಟ’ ಚಿತ್ರದ ಸಕ್ಸಸ್ ನಂತರ ಕೊಂಚ ಸೈಲೆಂಟ್ ಆಗಿರುವ ನಟಿ ಕೀರ್ತಿ ಕೈಯಲ್ಲಿ ಸಾಕಷ್ಟು ಪ್ರಾಜೆಕ್ಟ್‌ಗಳಿವೆ. ಸೈಲೆಂಟ್ ಆಗಿ ಒಂದೊಂದೇ ಸಿನಿಮಾಗಳನ್ನ ಕಂಪ್ಲೀಟ್ ಮಾಡಿ ಕೊಡುತ್ತಿದ್ದಾರೆ. ಇದೀಗ ನವರಾತ್ರಿ ಹಬ್ಬದ ಸಂದರ್ಭದಲ್ಲಿ ನಟಿ, ಮನೆಗೆ ಹೊಸ ಅತಿಥಿಯನ್ನ ಬರಮಾಡಿಕೊಂಡಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಪೈಲ್ವಾನ್‌ಗಳು: ಎನು ಇದು ಹೊಸ ಟ್ವಿಸ್ಟ್

    ದಸರಾ ಹಬ್ಬದ(Dasara Festival) ವೇಳೆ ಕೀರ್ತಿ ಗ್ಯಾರೇಜ್ ಹೊಸ ಕಾರು ಸೇರ್ಪಡೆಯಾಗಿದೆ. BMW*7 ಮನೆಗೆ ಎಂಟ್ರಿ ಕೊಟ್ಟಿದೆ. 1.78 ಕೋಟಿ ಬೆಲೆ ಹೊಸ ಕಾರಿಗೆ ಪೂಜೆ ಮಾಡಿ, ಬಳಿಕ 7 ಆಸನಗಳ ಐಷಾರಾಮಿ ಕಾರಿನಲ್ಲಿ ಎಂದಿನಂತೆ ತಮ್ಮ ಮುದ್ದಿನ ಶ್ವಾನದ ಜೊತೆ ಕಾರು ರೈಡ್ ಹೋಗಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ನಟಿ ಕೀರ್ತಿ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ.

    ಇನ್ನೂ ಕೀರ್ತಿ ಸುರೇಶ್ ನಾನಿ ಹೊಸ ಸಿನಿಮಾ ದಸರಾಗೆ ನಾಯಕಿಯಾಗಿ ನಟಿಸಿದ್ದಾರೆ. ಸದ್ಯದಲ್ಲೇ ಸಿನಿಮಾ ತೆರೆಗೆ ಅಬ್ಬರಿಸಲಿದೆ.

    Live Tv
    [brid partner=56869869 player=32851 video=960834 autoplay=true]

  • ಲಾಡ್ಜ್ ಕೋಣೆಯಲ್ಲಿ ಶವವಾಗಿ ಪತ್ತೆಯಾದ  ನಟಿ ಆಕಾಂಕ್ಷಾ ಮೋಹನ್

    ಲಾಡ್ಜ್ ಕೋಣೆಯಲ್ಲಿ ಶವವಾಗಿ ಪತ್ತೆಯಾದ ನಟಿ ಆಕಾಂಕ್ಷಾ ಮೋಹನ್

    ರಡು ವಾರಗಳ ಹಿಂದೆಯಷ್ಟೇ ಬಿಡುಗಡೆ ಆಗಿರುವ ಹಿಂದಿ ಸಿನಿಮಾ ‘ಸಿಯಾ’ದ ನಾಯಕಿ ಹಾಗೂ ತಮಿಳು ಚಿತ್ರ ರಂಗದ ನಟಿ ಆಕಾಂಕ್ಷಾ ಮೋಹನ್ (Akanksha Mohan), ಮುಂಬೈನ ವೆರ್ಸೋವಾದಲ್ಲಿರುವ ಹೋಟೆಲ್ ಕೋಣೆಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸೆಪ್ಟಂಬರ್ 28 ರಂದು ರೂಮ್ ಪಡೆದಿದ್ದ ಇವರು, ಸೆ.30 ರಂದು ಶವವಾಗಿ ಪತ್ತೆಯಾಗಿರುವುದು ಅನುಮಾನಕ್ಕೆ ಕಾರಣವಾಗಿತ್ತು. ಆದರೆ, ಶವ ಸಿಕ್ಕ ರೂಮ್ ನಲ್ಲಿ ಡೆತ್ ನೋಟ್ ಕೂಡ ಪತ್ತೆಯಾಗಿದ್ದು ತನ್ನ ಸಾವಿಗೆ ತಾನೇ ಕಾರಣ ಎಂದು ಅದರಲ್ಲಿ ಬರೆದಿದ್ದಾರೆ.

    ಪೊಲೀಸರ ಮಾಹಿತಿ ಪ್ರಕಾರ ಸೆ.28 ರಂದು ಬುಧವಾರ ಬೆಳಗ್ಗೆ ಆಕಾಂಕ್ಷಾ ರೂಮ್ ಬುಕ್ ಮಾಡಿದ್ದಾರೆ. ಎರಡು ದಿನಗಳವರೆಗೂ ಅವರು ರೂಮ್ (Lodge) ಬುಕ್ ಮಾಡಿದ್ದು, ಎರಡು ದಿನಗಳ ಬಳಿಕವೂ ರೂಮ್ ಬಾಗಿಲು ತೆರೆಯದೇ ಇರುವ ಕಾರಣಕ್ಕಾಗಿ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸ್ ಬಂದ ಬಳಿಕೆ ಬಾಗಿಲು ತೆರೆದರು ಆಕಾಂಕ್ಷಾ ಬಾಡಿ ಪತ್ತೆಯಾಗಿದೆ. ಅಲ್ಲಿಯೇ ಇದ್ದ ಡೆತ್ ನೋಟ್ ನಲ್ಲಿ ನನಗೆ ನೆಮ್ಮದಿ ಬೇಕು. ಹಾಗಾಗಿ ಸಾಯುತ್ತಿದ್ದೇನೆ. ನನ್ನ ಕ್ಷಮಿಸಿ, ನನ್ನ ಸಾವಿಗೆ ಯಾರೂ ಕಾರಣವಲ್ಲ’ ಎಂದು ಬರೆದಿದ್ದಾರೆ.

    ಮುಂಬೈ (Mumbai) ನಗರದ ಲೋಖಂಡವಾಲಾ ಪ್ರದೇಶದ ಯಮುನಾ ನಗರದ ಸೊಸೈಟಿಯಲ್ಲಿ ಆಕಾಂಕ್ಷಾ ಒಂಟಿಯಾಗಿ ವಾಸವಿದ್ದರು ಎಂದು ಹೇಳಲಾಗುತ್ತಿದೆ. ಅಲ್ಲದೇ, ಮಾನಸಿಕ ಖಿನ್ನತೆಗೂ ಅವರು ಒಳಗಾಗಿದ್ದರಂತೆ. ಈ ಕಾರಣದಿಂದಾಗಿಯೇ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ಇದೆ. ಇದನ್ನೂ ಓದಿ:ಐಶ್ವರ್ಯ ಪಿಸ್ಸೆ ನಂತರ ದೀಪಿಕಾ ದಾಸ್ ಅಂದ್ರೆ ನನಗಿಷ್ಟ ಎಂದ ಸೈಕ್ ನವಾಜ್

    ತಮಿಳಿನ (Kollywood) ‘9 ಥಿರದರ್ಗಳ್’ ಸಿನಿಮಾದ ಮೂಲಕ ಕಾಲಿವುಡ್ ಸಿನಿ ಪ್ರಪಂಚಕ್ಕೆ ಕಾಲಿಟ್ಟಿದ್ದ ಆಕಾಂಕ್ಷಾ ಮೋಹನ್, ಹಿಂದಿ ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿನಿಮಾ ರಂಗದಲ್ಲಿ ಮಾತ್ರವಲ್ಲ ಮಾಡೆಲಿಂಗ್ ಕ್ಷೇತ್ರದಲ್ಲೂ ಇವರು ತಮ್ಮದೇ ಆದ ಹೆಸರು ಮಾಡಿದ್ದಾರೆ. ದುಡುಕಿನ ಕಾರಣದಿಂದಾಗಿ ಕೇವಲ 30 ವರ್ಷದಲ್ಲಿ ಬದುಕು ಮುಗಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಟ ವಿಶಾಲ್ ಮನೆ ಮೇಲೆ ದುಷ್ಕರ್ಮಿಗಳಿಂದ ಕಲ್ಲು ತೂರಾಟ

    ನಟ ವಿಶಾಲ್ ಮನೆ ಮೇಲೆ ದುಷ್ಕರ್ಮಿಗಳಿಂದ ಕಲ್ಲು ತೂರಾಟ

    ಮಿಳು ಸಿನಿಮಾಗಳ (Tamil Films) ಮೂಲಕ ಗುರುತಿಸಿಕೊಂಡಿರುವ ನಟ ವಿಶಾಲ್ (Vishal) ಮತ್ತೆ ಸುದ್ದಿಯಲ್ಲಿದ್ದಾರೆ. ವಿಶಾಲ್ ಮನೆಯ ಮೇಲೆ ಕಲ್ಲು ತೂರಾಟ ನಡೆದಿದೆ. ಇದೀಗ ಈ ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನಟನ ಮನೆಯ ಗಾಜು ಕೂಡ ಒಡೆದಿದೆ.

    ಚೆನ್ನೈನ ಅಣ್ಣಾ ನಗರ್ ಪ್ರದೇಶದಲ್ಲಿ ವಿಶಾಲ್ ನಿವಾಸದಲ್ಲಿ (ಸೆ.26)ರಂದು ರಾತ್ರಿ ಕೆಂಪು ಬಣ್ಣದ ಕಾರಿನಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ಕಲ್ಲು ಎಸೆದಿದ್ದಾರೆ. ಈ ವೇಳೆ ವಿಶಾಲ್ ಅವರು ಮನೆಯಲ್ಲಿ ಇರಲಿಲ್ಲ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ಇದನ್ನೂ ಓದಿ:ಅನುಚಿತವಾಗಿ ವರ್ತಿಸಿದ ಅಭಿಮಾನಿಗೆ ನಟಿ ಸಾನಿಯಾ ದಂಡಂ ದಶಗುಣಂ

    ನಟನ ಮನೆಗೆ ದುಷ್ಕರ್ಮಿಗಳು ಕಲ್ಲು ಎಸೆದಿದ್ದರಿಂದ ಮನೆಯ ಕಿಟಕಿ ಗಾಜು ಒಡೆದು ಹೋಗಿದ್ದು, ಅದರ ಫೋಟೋ ಕೂಡ ವೈರಲ್ ಆಗಿದೆ. ವಿಶಾಲ್ ಮ್ಯಾನೇಜರ್ ಹರಿಕೃಷ್ಣ ಅವರು ಅಣ್ಣಾ ನಗರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಕಲ್ಲು ತೂರಾಟದ ಕೃತ್ಯವನ್ನು ಅಭಿಮಾನಿಗಳು ಖಂಡಿಸಿದ್ದಾರೆ. ಅಪರಾಧಿಗಳಿಗೆ ತಕ್ಕ ಪಾಠ ಕಲಿಸಬೇಕು ಎಂದು ಸೋಶಿಯಲ್ ಮೀಡಿಯಾದಲ್ಲಿ ಒತ್ತಾಯ ಹೇರಲಾಗುತ್ತಿದೆ. ತಮ್ಮ ಪಾಡಿಗೆ ತಾವು ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಿರುವ ನಟನ ಮನೆ ಮೇಲೆ ಕಿಡಿಗೇಡಿಗಳು ಕಲ್ಲು ಎಸೆದಿದ್ದು ಯಾಕೆ ಎಂಬ ಪ್ರಶ್ನೆ ಇದೀಗ ಅಭಿಮಾನಿಗಳಲ್ಲಿ ಮೂಡಿದೆ.

    Live Tv
    [brid partner=56869869 player=32851 video=960834 autoplay=true]