Tag: Kollywood

  • ರತನ್ ಟಾಟಾ ಬಯೋಪಿಕ್‌ಗೆ ಸುಧಾ ಕೊಂಗರಾ ಆ್ಯಕ್ಷನ್ ಕಟ್

    ರತನ್ ಟಾಟಾ ಬಯೋಪಿಕ್‌ಗೆ ಸುಧಾ ಕೊಂಗರಾ ಆ್ಯಕ್ಷನ್ ಕಟ್

    `ಸೂರರೈ ಪೊಟ್ರು’ (Soorarai Pottru) ಚಿತ್ರದ ಭರ್ಜರಿ ಸಕ್ಸಸ್ ಬಳಿಕ ನಿರ್ದೇಶಕಿ ಸುಧಾ ಕೊಂಗರ ಈ ಚಿತ್ರವನ್ನ ಹಿಂದಿಗೂ ರಿಮೇಕ್ ಮಾಡುತ್ತಿದ್ದಾರೆ. ಇದರ ನಡುವೆ ಅವರ ಮುಂದಿನ ಚಿತ್ರದ ಬಗ್ಗೆ ಸೂಪರ್ ಅಪ್‌ಡೇಟ್‌ವೊಂದು ಸಿಕ್ಕಿದೆ. ಯಶಸ್ವಿ ಉದ್ಯಮಿ ರತನ್ ಟಾಟಾ(Ratan Tata) ಬಯೋಪಿಕ್ ಮಾಡಲು ನಿರ್ದೇಶಕಿ ಸುಧಾ (Sudha Kongara) ಸಜ್ಜಾಗಿದ್ದಾರೆ.

    2020ರಲ್ಲಿ ಸೂರ್ಯ (Actor Surya) ನಟನೆಯ `ಸೂರರೈ ಪೊಟ್ರು’ ಸಿನಿಮಾಗೆ ಹಲವು ಪ್ರಶಸ್ತಿಗಳು ಲಭಿಸಿತ್ತು. ಇದರ ಹಿಂದಿ ರಿಮೇಕ್‌ನಲ್ಲಿ ಅಕ್ಷಯ್ ಕುಮಾರ್‌ಗೆ ಸುಧಾ ಡೈರೆಕ್ಷನ್ ಮಾಡ್ತಿದ್ದಾರೆ. ಇದರ ಜೊತೆ ಹೊಸ ಸಿನಿಮಾಗೂ ಪ್ಲ್ಯಾನ್‌ ಮಾಡಿದ್ದಾರೆ. ರತನ್ ಟಾಟಾ ಕಥೆಯನ್ನ ತೆರೆಯ ಮೇಲೆ ತರಲು ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸಕ್ಸಸ್‌ ಸಂಭ್ರಮದಲ್ಲಿ ʻಕಾಂತಾರʼ ಸಿನಿಮಾ ತಂಡ

    ರತನ್ ಟಾಟಾ ಅವರು ಈ ದೇಶ ಕಂಡ ಹೆಸರಾಂತ ಉದ್ಯಮಿ. ಅವರ ಕುರಿತು ಸಿನಿಮಾ ಮಾಡುವುದು, ಅದನ್ನು ಬೆಳ್ಳಿತೆರೆ ಮೇಲೆ ತರುವುದು ಎಲ್ಲರ ಹೆಮ್ಮೆ ಆಗಿದೆ. ರತನ್ ಟಾಟಾ ಅವರ ಕುರಿತು ಸಮಾಜಕ್ಕೆ ಗೊತ್ತಿರದ ಒಂದಷ್ಟು ವಿಶೇಷತೆಗಳನ್ನು ಈ ಸಿನಿಮಾದ ಮೂಲಕ ಹೇಳುವ ಉದ್ದೇಶವಿದೆ. ಸದ್ಯ ಸ್ಕ್ರಿಪ್ಟ್ ವರ್ಕ್ ಕೆಲಸ ಕೂಡ ಜಾರಿಯಲ್ಲಿದೆ. 2023ರ ನವೆಂಬರ್ ವೇಳೆ ಶೂಟಿಂಗ್ ಆರಂಭಿಸುವ ಕುರಿತು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ ಎಂದು ಮೂಲಗಳಿಂದ ಮಾಹಿತಿ ಸಿಕ್ಕಿದೆ.

    ಇನ್ನೂ ರತನ್ ಟಾಟಾ ಪಾತ್ರಕ್ಕೆ ಅಕ್ಷಯ್ ಕುಮಾರ್ ಅಥವಾ ತಮಿಳು ನಟ ಸೂರ್ಯ ಇಬ್ಬರಲ್ಲಿ ಒಬ್ಬರು ಈ ಪಾತ್ರ ಮಾಡಲಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ. ಅದ್ಯಾವ ನಟ ರತನ್‌ ಟಾಟಾ ಪಾತ್ರಕ್ಕೆ ಜೀವ ತುಂಬಲಿದ್ದಾರೆ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಅನುಷ್ಕಾ ಶೆಟ್ಟಿ ಅಭಿಮಾನಿಗಳಿಗೆ ಸಿಹಿ ಸುದ್ದಿ

    ಅನುಷ್ಕಾ ಶೆಟ್ಟಿ ಅಭಿಮಾನಿಗಳಿಗೆ ಸಿಹಿ ಸುದ್ದಿ

    `ಬಾಹುಬಲಿ’ (Bahubali) ನಟಿ ಅನುಷ್ಕಾ ಶೆಟ್ಟಿ (Anushka Shetty) ಚಿತ್ರರಂಗದಲ್ಲಿ ಮತ್ತೆ ಆಕ್ಟೀವ್‌ ಆಗಿದ್ದಾರೆ. ಸದ್ದಿಲ್ಲದೇ ಸೈಲೆಂಟ್‌ ಆಗಿ ಸಿನಿಮಾ ಮಾಡ್ತಿದ್ದಾರೆ. ಇದೀಗ ಹೊಸ ಸಿನಿಮಾಗೆ ಸ್ವೀಟಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಪವರ್‌ಫುಲ್ ಪಾತ್ರದ ಮೂಲಕ ಮೋಡಿ ಮಾಡಲು ರೆಡಿಯಾಗಿದ್ದಾರೆ.

    ಕನ್ನಡತಿ ಅನುಷ್ಕಾ ಶೆಟ್ಟಿ ಮತ್ತೆ ಸಿನಿಮಾಗಳಲ್ಲಿ ಆಕ್ಟೀವ್ ಆಗ್ತಿದ್ದಾರೆ. ಸದ್ಯ ನವೀನ್ ಪೋಲಿಶೆಟ್ಟಿ (Naveen Polishetty) ಅಭಿನಯದ ಚಿತ್ರದಲ್ಲಿ ಅನುಷ್ಕಾ ಬ್ಯುಸಿಯಾಗಿದ್ದಾರೆ. ಈ ಬೆನ್ನಲ್ಲೇ ತಮಿಳಿನ(Tamil Films) ಹೊಸ ಚಿತ್ರಕ್ಕೆ ನಟಿ ಓಕೆ ಅಂದಿದ್ದಾರೆ.

    ಎ.ಎಲ್ ವಿಜಯ್ ನಿರ್ದೇಶನದ ಸಿನಿಮಾದಲ್ಲಿ ಅನುಷ್ಕಾ ನಟಿಸೋದು ಫೈನಲ್ ಆಗಿದೆ. ಈ ಕುರಿತು ಡೈರೆಕ್ಟರ್ ವಿಜಯ್ ಅವರೇ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ. ತಮಿಳು ಮತ್ತು ತೆಲುಗುಭಾಷೆಯಲ್ಲಿ ಸಿನಿಮಾ ಮೂಡಿ ಬರಲಿದೆ.ಇದನ್ನೂ ಓದಿ: ಗುರೂಜಿ ಮಾಡಿದ ಆ ಒಂದು ತಪ್ಪಿನಿಂದ, ಮನೆ ಮಂದಿಗೆ ಬಿಗ್ ಬಾಸ್ ಗುನ್ನ

    ಈ ಹಿಂದೆ ಎ.ಎಲ್ ವಿಜಯ್ ಮತ್ತು ಅನುಷ್ಕಾ ಕಾಂಬಿನೇಷನ್‌ನ `ದೈವ ತಿರುಮಗಳ್’ ಮತ್ತು `ತಾಂಡವಂ’ ಚಿತ್ರ ಮೂಡಿ ಬಂದಿತ್ತು. ಇದೀಗ ಮೂರನೇ ಬಾರಿಗೆ ಒಟ್ಟಿಗೆ ಸಿನಿಮಾ ಮಾಡಲು ರೆಡಿಯಾಗಿದ್ದಾರೆ. ಅರುಂಧತಿ, ಭಾಗಮತಿಯಂತಹ ಪವರ್‌ಫುಲ್ ರೋಲ್ ಮೂಲಕ ಅನುಷ್ಕಾ ಮತ್ತೆ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ತಮ್ಮ ಫ್ಯಾನ್ಸ್‌ಗೆ ಸ್ವೀಟಿ ಗುಡ್ ನ್ಯೂಸ್ ಕೊಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 14 ವರ್ಷಗಳ ನಂತರ ಮತ್ತೆ ಜೊತೆಯಾಗ್ತಿದ್ದಾರೆ ವಿಜಯ್- ತ್ರಿಷಾ

    14 ವರ್ಷಗಳ ನಂತರ ಮತ್ತೆ ಜೊತೆಯಾಗ್ತಿದ್ದಾರೆ ವಿಜಯ್- ತ್ರಿಷಾ

    ಮಿಳಿನ(Kollywood) ಆನ್ ಸ್ಕ್ರೀನ್ ಜೋಡಿಗಳಲ್ಲಿ ಒಂದಾಗಿರುವ ದಳಪತಿ ವಿಜಯ್(Thalapathy Vijay) ಮತ್ತು ತ್ರಿಷಾ (Thrisha Krishnan) ತಮ್ಮ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಸತತ 14 ವರ್ಷಗಳ ನಂತರ ಈ ಜೋಡಿ ಒಟ್ಟಿಗೆ ಕಾಣಿಸಿಕೊಳ್ತಿದ್ದಾರೆ.

    ಗಿಲ್ಲಿ, ಕುರುವಿ ಹೀಗೆ ಸಾಕಷ್ಟು ಚಿತ್ರಗಳಲ್ಲಿ ಒಟ್ಟಾಗಿ ನಟಿಸಿದ್ದ ವಿಜಯ್ ಮತ್ತು ತ್ರಿಷಾ ಮತ್ತೆ ಒಂದಾಗ್ತಿದ್ದಾರೆ. ಕಮಲ್ ಹಾಸನ್ ನಟನೆಯ `ವಿಕ್ರಮ್’ ಚಿತ್ರದ ನಿರ್ದೇಶಕ ಲೋಕೇಶ್ ಕನಗರಾಜ್ ವಿಜಯ್ ಮುಂದಿನ ಸಿನಿಮಾಗೆ ಡೈರೆಕ್ಷನ್ ಮಾಡ್ತಿದ್ದಾರೆ. ಈ ಚಿತ್ರಕ್ಕೆ ನಟಿ ತ್ರಿಷಾ ಅವರನ್ನೇ ನಾಯಕಿಯಾಗಿ ನಟಿಸಲು ಕೇಳಲಾಗಿದೆಯಂತೆ. ಸಿನಿಮಾಗೆ ತ್ರಿಷಾ ಕೂಡ ಓಕೆ ಅಂದಿದ್ದಾರೆ. ಇದನ್ನೂ ಓದಿ:ಬೆಂಗಳೂರಿನ ಉದ್ಯಮಿ, Zerodha ಸಹ ಸಂಸ್ಥಾಪಕ ನಿಖಿಲ್ ಜೊತೆ ಮಾನುಷಿ ಚಿಲ್ಲರ್ ಡೇಟಿಂಗ್

    ಬ್ಯಾಕ್ ಟು ಬ್ಯಾಕ್ ನಾಲ್ಕು ಸಿನಿಮಾಗಳಲ್ಲಿ ಈ ಜೋಡಿ ಒಟ್ಟಾಗಿ ಕಾಣಿಸಿಕೊಂಡಿದ್ದರು. 14 ವರ್ಷಗಳ ನಂತರ ಮತ್ತೆ ನಿರ್ದೇಶಕರು ಇವರಿಬ್ಬರನ್ನ ಒಟ್ಟಾಗಿ ತೋರಿಸಲು ಹೊರಟಿದ್ದಾರೆ. ಈ ಮೂಲಕ ಸೂಪರ್ ಜೋಡಿ ಮತ್ತೆ ಒಂದಾಗ್ತಿದೆ. ಈ ಸುದ್ದಿ ಕೇಳಿ ವಿಜಯ್ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • `ಜೈಲರ್’ ಚಿತ್ರದ ಸೆಟ್‌ನಲ್ಲಿ ಶಿವಣ್ಣನನ್ನು ಭೇಟಿಯಾದ ಶಿವಕಾರ್ತಿಕೇಯನ್

    `ಜೈಲರ್’ ಚಿತ್ರದ ಸೆಟ್‌ನಲ್ಲಿ ಶಿವಣ್ಣನನ್ನು ಭೇಟಿಯಾದ ಶಿವಕಾರ್ತಿಕೇಯನ್

    ಜನಿಕಾಂತ್ (Rajanikanth) 169ನೇ ಚಿತ್ರ `ಜೈಲರ್’ (Jailer) ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಹ್ಯಾಟ್ರಿಕ್ ಹೀರೋ ಶಿವಣ್ಣ(Shivarajkumar) ಕೂಡ ತಲೈವಾ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಈ ಚಿತ್ರದ ಸೆಟ್‌ನಲ್ಲಿ ಶಿವನನ್ನು ಶಿವಕಾರ್ತಿಕೇಯನ್ ಭೇಟಿಯಾಗಿದ್ದಾರೆ.

    ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ `ಜೈಲರ್’ (Jailer)ಸಿನಿಮಾದಲ್ಲಿ ರಜನಿಕಾಂತ್ ಜೊತೆ ಕನ್ನಡದ ಸೂಪರ್ ಹೀರೋ ಶಿವಣ್ಣ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಶಿವಣ್ಣನ ಫಸ್ಟ್ ಲುಕ್ ಸಖತ್ ಸದ್ದು ಮಾಡಿತ್ತು. ಈ ಸಿನಿಮಾದ ಶೂಟಿಂಗ್‌ನಲ್ಲಿ ಪಾಲ್ಗೊಂಡಿರುವ ಶಿವನನ್ನು ತಮಿಳಿನ ಹೀರೋ ಶಿವಕಾರ್ತಿಕೇಯನ್ (Sivakarthikeyan) ಮೀಟ್ ಮಾಡಿದ್ದಾರೆ.

     

    View this post on Instagram

     

    A post shared by DrShivaRajkumar (@nimmashivarajkumar)

    `ಜೈಲರ್’ ಚಿತ್ರದಲ್ಲಿ ಶಿವಕಾರ್ತಿಕೇಯನ್ ಕೂಡ ಸ್ಪೆಷಲ್ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಲೈವಾ ಬಹುನಿರೀಕ್ಷಿತ ಚಿತ್ರದಲ್ಲಿ ಶಿವಕಾರ್ತಿಕೇಯನ್ ಕೂಡ ಇರಲಿದ್ದಾರೆ. ಆದರೆ ಅವರ ಪಾತ್ರದ ಬಗ್ಗೆ ಗುಟ್ಟುನ್ನ ಚಿತ್ರತಂಡ ಬಿಟ್ಟು ಕೊಟ್ಟಿಲ್ಲ. ಶಿವಣ್ಣನನ್ನು ಮೀಟ್ ಆಗಿ ಯೋಗ ಕ್ಷೇಮ ವಿಚಾರಿಸಿದ್ದಾರೆ. ಈ ಫೋಟೋ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ:ಎಂಗೇಜ್ ಆದ ಖುಷಿಯಲ್ಲಿ ಗೆಳೆಯನ ಜೊತೆ ಆಮೀರ್‌ ಖಾನ್‌ ಪುತ್ರಿಯ ಲಿಪ್‌ಲಾಕ್

    ತಲೈವಾ 169ನೇ ಸಿನಿಮಾವಾಗಿರುವ ಕಾರಣ ಚಿತ್ರದ ಬಗ್ಗೆ ಫ್ಯಾನ್ಸ್ ಸಿಕ್ಕಾಪಟ್ಟೆ ನಿರೀಕ್ಷೆಯನ್ನ ಇಟ್ಟುಕೊಂಡಿದ್ದಾರೆ. ಸದ್ಯದಲ್ಲೇ ಸಿನಿಮಾ ತೆರೆಗೆ ಬರಲಿದೆ.

    Live Tv
    [brid partner=56869869 player=32851 video=960834 autoplay=true]

  • ʻಕಮಾಂಡೋʼ ಶೂಟಿಂಗ್ ವೇಳೆ ರಾಗಿಣಿ ದ್ವಿವೇದಿ ಕೈಗೆ ಪೆಟ್ಟು

    ʻಕಮಾಂಡೋʼ ಶೂಟಿಂಗ್ ವೇಳೆ ರಾಗಿಣಿ ದ್ವಿವೇದಿ ಕೈಗೆ ಪೆಟ್ಟು

    ಸ್ಯಾಂಡಲ್‌ವುಡ್‌ನ(Sandalwood) ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ (Ragini Dwivdi) ಮತ್ತೆ ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.ಸದ್ಯ ಶೂಟಿಂಗ್ ವೇಳೆ ರಾಗಿಣಿಗೆ ಅವಗಢವೊಂದು ಸಂಭವಿಸಿದೆ. ಚಿತ್ರೀಕರಣದ ಸಂದರ್ಭದಲ್ಲಿ ರಾಗಿಣಿ ಕೈಗೆ ಪೆಟ್ಟಾಗಿದೆ.

    ಕನ್ನಡದ ವೀರ ಮದಕರಿ, ಕೆಂಪೇಗೌಡ, ಸಿನಿಮಾಗಳ ನಾಯಕಿ ರಾಗಿಣಿ ದ್ವಿವೇದಿಗೆ ಕೈಗೆ ಪೆಟ್ಟಾಗಿದೆ. ಚೆನ್ನೈನಲ್ಲಿ ರಾಗಿಣಿ ನಟನೆಯ ಸಿನಿಮಾವೊಂದರಲ್ಲಿ ಚಿತ್ರೀಕರಣದ ವೇಳೆಯಲ್ಲಿ ಕೈಗೆ ಬಲವಾಗಿ ಪೆಟ್ಟು ಬಿದ್ದಿದೆ. ತಕ್ಷಣ ಸೂಕ್ತ ಚಿಕಿತ್ಸೆ ಕೂಡ ನೀಡಲಾಗಿದೆ. ನಾಲ್ಕು ದಿನಗಳ ಕಾಲ ವೈದ್ಯರು ಬೆಡ್ ರೆಸ್ಟ್ ಹೇಳಿದ್ದಾರೆ. ʻಕಮಾಂಡೋʼ ಸಿನಿಮಾ ಚಿತ್ರೀಕರಣದ ವೇಳೆ ಈ ಅವಗಢ ನಡೆದಿದೆ. ‌ಇದನ್ನೂ ಓದಿ:`ಸಿಂಧೂರ ಲಕ್ಷ್ಮಣ’ ಸಿನಿಮಾ ಬಗ್ಗೆ ನಿರ್ಮಾಪಕ ಉಮಾಪತಿ ಪ್ರತಿಕ್ರಿಯೆ

     

    View this post on Instagram

     

    A post shared by Ragini dwivedi (@rraginidwivedi)

    ಸದ್ಯ ಆರೋಗ್ಯದಲ್ಲಿ ಚೇತರಿಕೆಯಿದೆ. ಆದಷ್ಟು ಬೇಗ ಹುಷಾರಾಗಿ, ಚಿತ್ರತಂಡ ಸೇರುವುದಾಗಿ ಸೋಷಿಯಲ್ ಮೀಡಿಯಾ ಮೂಲಕ ರಾಗಿಣಿ ತಿಳಿಸಿದ್ದಾರೆ. ನೆಚ್ಚಿನ ನಟಿ ಫಿಟ್ ಆಗಿ ಮತ್ತೆ ಕಮ್‌ಬ್ಯಾಕ್ ಆಗಿ ಎಂದು ಫ್ಯಾನ್ಸ್ ಶುಭಹಾರೈಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೊನೆಗೂ ಮದುವೆ ವಿಚಾರ ರಿವೀಲ್ ಮಾಡಿದ್ರು ತಮಿಳು ನಟ ವಿಶಾಲ್

    ಕೊನೆಗೂ ಮದುವೆ ವಿಚಾರ ರಿವೀಲ್ ಮಾಡಿದ್ರು ತಮಿಳು ನಟ ವಿಶಾಲ್

    ಮಿಳಿನ ಸಾಕಷ್ಟು ಸಿನಿಮಾಗಳ ಮೂಲಕ ಸಂಚಲನ ಮೂಡಿಸಿರುವ ಹೀರೋ ವಿಶಾಲ್(Actor Vishal) ಸದ್ಯ `ಲಾಠಿ'(Lathi Film) ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ವಿಶಾಲ್ ಮದುವೆ ವಿಷ್ಯಕ್ಕೆ ರಿಯಾಕ್ಟ್ ಮಾಡಿದ್ದಾರೆ. ತಮ್ಮ ಮದುವೆ ಯಾವಾಗ ಎಂಬುದನ್ನ ರಿವೀಲ್ ಮಾಡಿದ್ದಾರೆ.

    ಕಾಲಿವುಡ್(Kollywood) ಸ್ಟಾರ್ ನಟ ವಿಶಾಲ್, ಸಿನಿಮಾಗಳ ಹಲವು ಸಮಾಜಮುಖಿ ಕಾರ್ಯಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಕರ್ನಾಟಕದ ಜೊತೆ ಪುನೀತ್ ಕುಟುಂಬದ ಜೊತೆ ಉತ್ತಮ ಒಡನಾಟ ಹೊಂದಿದ್ದಾರೆ. ಅಪ್ಪು ಅಗಲಿಕೆಯ ನಂತರ ಶಕ್ತಿಧಾಮದ ಮಕ್ಕಳ ಜವಬ್ದಾರಿಯನ್ನು ತಾವೇ ಹೊತ್ತುಕೊಳ್ಳುವುದಾಗಿ ಹೇಳಿದ್ದರು. ಚಿತ್ರರಂಗದ ಕಾರ್ಮಿಕರ ಸಂಕಷ್ಟಕ್ಕೂ ವಿಶಾಲ್ ಸಾಥ್ ನೀಡಿದ್ದಾರೆ.

    ವಿಶಾಲ್ ನಟನೆಯ ಬಹುನಿರೀಕ್ಷಿತ ಸಿನಿಮಾ `ಲಾಠಿ’ ಸದ್ಯದಲ್ಲೇ ತೆರೆಗೆ ಅಪ್ಪಳಿಸಲಿದೆ. ಸದ್ಯ ಈ ಚಿತ್ರದ ಪ್ರಚಾರದಲ್ಲಿರುವ ವಿಶಾಲ್, ತಮ್ಮ ಮದುವೆ ಬಗ್ಗೆ ಬಾಯ್ಬಿಟ್ಟಿದ್ದಾರೆ. ಪ್ರತಿ ವಿಚಾರಕ್ಕೂ ಒಂದು ಸಮಯ ಬರಬೇಕು. ದಕ್ಷಿಣ ಭಾರತದ ಕಲಾವಿದರ ಸಂಘದ ಕಟ್ಟಡ ನಿರ್ಮಾಣದ ಬಳಿಕ ನಾನು ಮದುವೆ ಆಗುತ್ತೇನೆ. ಆ ಕಟ್ಟಡದಿಂದ 3500 ಕಲಾವಿದರ ಕುಟುಂಬಗಳಿಗೆ ಸಹಾಯ ಆಗಲಿದೆ ಎಂದು ವಿಶಾಲ್ ಮಾತನಾಡಿದ್ದಾರೆ. ಇದನ್ನೂ ಓದಿ:ಬಿಗ್‌ ಬಾಸ್‌ ವೇದಿಕೆಯಲ್ಲಿ ಸಿಹಿ ಸುದ್ದಿ ಕೊಟ್ರು ವರುಣ್‌ ಧವನ್‌

    ನಟ ವಿಶಾಲ್‌ಗೆ 45 ವರ್ಷ ವಯಸ್ಸಾಗಿದೆ. ಈ ಹಿಂದೆ ಹೈದರಾಬಾದ್‌ನ ಯುವತಿ ಜೊತೆ ನಿಶ್ಚಿತಾರ್ಥವಾಗಿತ್ತು. ಬಳಿಕ ವೈಯಕ್ತಿಕ ಕಕಾರಣಗಳಿಂದ ಈ ಸಂಬಂಧ ಮುರಿದು ಬಿದ್ದಿತ್ತು. ಇದೀಗ ಮತ್ತೆ ವಿಶಾಲ್ ಎಂಗೇಜ್ ಆಗಿದ್ದಾರೆ ಎನ್ನಲಾಗುತ್ತಿದೆ. ಸದ್ಯದಲ್ಲೇ ಈ ಕುರಿತು ನಟ ರಿವೀಲ್ ಮಾಡಲಿದ್ದಾರೆ ಎನ್ನಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಸ್ನೇಹಾ- ಪ್ರಸನ್ನ ಡಿವೋರ್ಸ್ ಬಗ್ಗೆ ಸ್ಪಷ್ಟನೆ ನೀಡಿದ ನಟಿ

    ಸ್ನೇಹಾ- ಪ್ರಸನ್ನ ಡಿವೋರ್ಸ್ ಬಗ್ಗೆ ಸ್ಪಷ್ಟನೆ ನೀಡಿದ ನಟಿ

    ಕಾಲಿವುಡ್‌ನ ಸ್ಟಾರ್ ಜೋಡಿ ಸ್ನೇಹಾ(Sneha) ಮತ್ತು ನಟ ಪ್ರಸನ್ನ(Prasanna) ಮತ್ತೆ ಸುದ್ದಿಯಲ್ಲಿದ್ದಾರೆ. ಸಮಂತಾ ಮತ್ತು ನಾಗಚೈತನ್ಯ, ಐಶ್ವರ್ಯ ಧನುಷ್ ಜೋಡಿಯ ನಂತರ ಸ್ನೇಹಾ ಮತ್ತು ಪ್ರಸನ್ನ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ವದಂತಿ ಹಬ್ಬಿದೆ. ಈ ಬೆನ್ನಲ್ಲೇ ನಟಿ ಸ್ನೇಹಾ ಕೂಡ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.

     

    View this post on Instagram

     

    A post shared by Sneha (@realactress_sneha)

    ತಮಿಳು, ಕನ್ನಡ ಹೀಗೆ ಸಾಕಷ್ಟು ಸಿನಿಮಾಗಳ ಮೂಲಕ ಸಂಚಲನ ಮೂಡಿಸಿರುವ ನಟಿ ಸ್ನೇಹಾ ದಾಂಪತ್ಯದಲ್ಲಿ ಬಿರುಕು(Divorce) ಮೂಡಿದೆ. ಇಬ್ಬರೂ ಬೇರೇ ಬೇರೆಯಾಗುತ್ತಿದ್ದಾರೆ ಎಂಬ ಸುದ್ದಿ ಸಖತ್ ಸೌಂಡ್ ಮಾಡುತ್ತಿದೆ. 2009ರಲ್ಲಿ `ಅಚ್ಚಬೇಡು’ ಚಿತ್ರದಲ್ಲಿ ಸ್ನೇಹಾ ಮತ್ತು ಪ್ರಸನ್ನ ಜೋಡಿಯಾಗಿ ನಟಿಸಿದ್ದರು. ಈ ವೇಳೆ ಇಬ್ಬರ ನಡುವೆ ಪ್ರೀತಿ ಅರಳಿತು. 2011ರಲ್ಲಿ ದಾಂಪತ್ಯ ಜೀವನಕ್ಕೆ ಈ ಜೋಡಿ ಕಾಲಿಟ್ಟಿದ್ದರು. ಇಬ್ಬರ ಮಕ್ಕಳ ಪೋಷಕರಾಗಿರುವ ಸ್ನೇಹಾ, ಪ್ರಸನ್ನ ನಡುವೆ ಸಂಸಾರದಲ್ಲಿ ಬಿರುಕಾಗಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಸಾನ್ಯ ವಿಷ್ಯವಾಗಿ ರೂಪೇಶ್‌ ಶೆಟ್ಟಿ ಕಾಲೆಳೆದ ಕಿಚ್ಚ ಸುದೀಪ್‌

    ಸೌತ್ ಸಿನಿ ಅಂಗಳದಲ್ಲಿ ಸದ್ಯದ ಮಟ್ಟಿಗೆ ಹಾಟ್ ನ್ಯೂಸ್ ಅಂದ್ರೆ ಸ್ನೇಹಾ ಪ್ರಸನ್ನ ದಂಪತಿ ವಿಚಾರ. ಇದೀಗ ಡಿವೋರ್ಸ್ ವಿಚಾರಕ್ಕೆ ಸಂಬಂಧಿಸಿದ ವದಂತಿಗೆ ನಟಿ ಸ್ನೇಹಾ ಬ್ರೇಕ್ ಹಾಕಿದ್ದಾರೆ. ಸ್ನೇಹಾ ತಮ್ಮ ಪತಿ ಪ್ರಸನ್ನ ಜೊತೆಗಿನ ಆಪ್ತ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕೆನ್ನೆಗೆ ಮುತ್ತಿಟ್ಟು ಸೆಲ್ಫಿ ತೆಗೆದು ತನ್ನ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ವಿಚ್ಛೇದನದ ವಿಷಯ ಕೇವಲ ವದಂತಿ ಎಂದು ಸ್ನೇಹಾ ಖಚಿತಪಡಿಸಿದ್ದಾರೆ. ಈ ಮೂಲಕ ಡಿವೋರ್ಸ್ ವದಂತಿಗೆ ಅಂತ್ಯ ಹಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಾಲಿವುಡ್‌ನತ್ತ ಕನ್ನಡದ ನಟ ಭರತ್ ಭೋಪಣ್ಣ

    ಕಾಲಿವುಡ್‌ನತ್ತ ಕನ್ನಡದ ನಟ ಭರತ್ ಭೋಪಣ್ಣ

    ಕಿರುತೆರೆಯ `ಬ್ರಹ್ಮಗಂಟು'(Bramhagantu Serial) ಸೀರಿಯಲ್ ಮೂಲಕ ಮನೆಮಾತಾದ ನಟ ಭರತ್ ಭೋಪಣ್ಣ(Bharath Bopanna) ಕನ್ನಡದ `ಡೆಮೋಪೀಸ್’ ಚಿತ್ರದಲ್ಲಿ ಹೀರೋ ಆಗಿ ಮಿಂಚಿದ್ದರು. ಇದೀಗ ಕೊಡಗಿನ ಕುವರ ಭರತ್ ಕಾಲಿವುಡ್‌ನತ್ತ ಮುಖ ಮಾಡಿದ್ದಾರೆ.

     

    View this post on Instagram

     

    A post shared by Bharat Bopana (@iambharathbopanna7)

    ಟಿವಿ ಲೋಕದಲ್ಲಿ ಸಾಕಷ್ಟು ಸೀರಿಯಲ್ ಮೂಲಕ ಛಾಪೂ ಮೂಡಿಸಿದ್ದ ಭರತ್ ಭೋಪಣ್ಣ ಡೆಮೋ ಪೀಸ್(Demo Piece) ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಿದ್ದರು. ಇನ್ನೂ `ವಿಜಯಾನಂದ’ (Demopiece) ಚಿತ್ರದಲ್ಲೂ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿರುವ ಭರತ್ ತಮಿಳು ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಇದನ್ನೂ ಓದಿ:ಆಲಿಯಾ ರಣಬೀರ್ ಮಗು ನೋಡೋಕೆ ಕೋವಿಡ್ ಟೆಸ್ಟ್ ಕಡ್ಡಾಯ

     

    View this post on Instagram

     

    A post shared by Bharat Bopana (@iambharathbopanna7)


    ಕಂಗನಾ ನಟನೆಯ `ತಲೈವಿ’ ಚಿತ್ರದ ಡೈರೆಕ್ಟರ್ ವಿಜಯ್ ನಿರ್ದೇಶನದ `ಅಚ್ಚಚ್ಚಮ್ ಎಂಬತ್ತು ಇಳಯೇ’ ಚಿತ್ರದಲ್ಲಿ ಅರುಣ್ ವಿಜಯ್ ನಾಯಕನಾಗಿದ್ದು, ಈ ಚಿತ್ರದಲ್ಲಿ ಭರತ್ ಪ್ರಮುಖ ಪಾತ್ರಕ್ಕೆ ಜೀವ ತುಂಬಿದ್ದಾರೆ. ಈಗಾಗಲೇ ಮೊದಲ ಹಂತದ ಚಿತ್ರೀಕರಣವನ್ನ ಲಂಡನ್‌ನಲ್ಲಿ ಮುಗಿಸಿ ಬಂದಿದ್ದಾರೆ.

     

    View this post on Instagram

     

    A post shared by Bharat Bopana (@iambharathbopanna7)

    ಕನ್ನಡ ಕಿರುತೆರೆ, ಸ್ಯಾಂಡಲ್‌ವುಡ್ ನಂತರ ಇದೀಗ ತಮಿಳು ಚಿತ್ರರಂಗದಲ್ಲಿ ಕನ್ನಡದ ಪ್ರತಿಭೆ ಮಿಂಚಲು ಸಿದ್ಧವಾಗಿದೆ. ಪ್ರತಿಭೆ ಮತ್ತು ಅದೃಷ್ಟದ ಮೂಲಕ ಭರತ್‌ ಸೌತ್‌ ಸಿನಿರಂಗದಲ್ಲೂ ಮಿಂಚಲಿ ಎಂಬುದೇ ಅಭಿಮಾನಿಗಳ ಆಶಯ.

    Live Tv
    [brid partner=56869869 player=32851 video=960834 autoplay=true]

  • ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ತಮಿಳು ನಟ ವಿಶಾಲ್ ಭೇಟಿ

    ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ತಮಿಳು ನಟ ವಿಶಾಲ್ ಭೇಟಿ

    ಕಾಲಿವುಡ್(Kollywood) ನಟ ವಿಶಾಲ್ ಮತ್ತೆ ಸುದ್ದಿಯಲ್ಲಿದ್ದಾರೆ. ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ವಿಶಾಲ್ ಭೇಟಿ ಕೊಟ್ಟಿದ್ದಾರೆ. ಈ ವೇಳೆ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ.

    ತಮಿಳಿನ(Tamil Films) ಸಾಕಷ್ಟು ಸಿನಿಮಾಗಳ ಮೂಲಕ ಸಂಚಲನ ಮೂಡಿಸಿರುವ ನಟ ಇದೀಗ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ(Dharmastala) ಭೇಟಿ ನೀಡಿದ್ದಾರೆ. ವಿಶೇಷ ಪೂಜೆ ಮಾಡಿಸಿ, ಮಂಜುನಾಥಸ್ವಾಮಿ ಆಶೀರ್ವಾದ ಪಡೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿರುವ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ನೆಚ್ಚಿನ ನಟನನ್ನು ನೋಡಿ ಫ್ಯಾನ್ಸ್ ಮುಗಿಬಿದ್ದಿದ್ದಾರೆ.‌ ಇದನ್ನೂ ಓದಿ:ʻಕಾಂತಾರʼ ಸಿಂಗಾರ ಸಿರಿಯೇ ಲಿರಿಕ್ಸ್ ರೈಟರ್ ಬರೆದಿರುವ `ದೂರದರ್ಶನ’ ಚಿತ್ರದ ನ್ಯೂ ಸಾಂಗ್ ಔಟ್

    ಇನ್ನೂ ವಿಶಾಲ್ `ಲಾಠಿ’ ಚಿತ್ರದ ಮೂಲಕ ಖಡಕ್ ಆಫೀಸರ್ ಆಗಿ ತೆರೆಗೆ ಅಪ್ಪಳಿಸುತ್ತಿದ್ದಾರೆ. ಹೊಸ ಸಿನಿಮಾಗಾಗಿ ನಿರ್ದೇಶನಕ್ಕೂ ಕೈಹಾಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • `ಕೆಜಿಎಫ್ 2′ ಮುಂದೆ ಮುಗ್ಗರಿಸಿದ್ದ ʻಬೀಸ್ಟ್‌ʼ ಚಿತ್ರಕ್ಕೆ ಮತ್ತೆ ಗೆಲುವು

    `ಕೆಜಿಎಫ್ 2′ ಮುಂದೆ ಮುಗ್ಗರಿಸಿದ್ದ ʻಬೀಸ್ಟ್‌ʼ ಚಿತ್ರಕ್ಕೆ ಮತ್ತೆ ಗೆಲುವು

    ಭಾರತೀಯ ಚಿತ್ರರಂಗದಲ್ಲಿ ಹಿಸ್ಟರಿ ಕ್ರಿಯೇಟ್ ಮಾಡಿದ `ಕೆಜಿಎಫ್ 2′ (Kgf 2)   ಮುಂದೆ ಬೀಸ್ಟ್ ಸಿನಿಮಾ ಮುಗ್ಗರಿಸಿತ್ತು. ಯಶ್ ಚಿತ್ರದ ಮುಂದೆ ಥಳಪತಿ ವಿಜಯ್ ಸಿನಿಮಾ ಮಕಾಡೆ ಮಲಗಿತ್ತು. ಇದೀಗ ಆದರೆ ವಿಕ್ರಮ್ ಚಿತ್ರದ ಮುಂದೆ ʻಬೀಸ್ಟ್ʼ(Beast Film) ಗೆಲುವು ಸಾಧಿಸಿದೆ.

    `ಕೆಜಿಎಫ್ 2′ ಮತ್ತು ಬೀಸ್ಟ್ ಸಿನಿಮಾ ಒಂದು ದಿನದ ಅಂತರದಲ್ಲಿ ತೆರೆಕಂಡಿತ್ತು. ಯಶ್ (Yash) ನಟನೆಯ `ಕೆಜಿಎಫ್ 2′ 1000 ಸಾವಿರ ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಬೀಸ್ಟ್ ಹೀನಾಯವಾಗಿ ಸೋತಿತ್ತು. ಆದರೆ `ಬೀಸ್ಟ್’ ಚಿತ್ರದ ನಸೀಬು ಬದಲಾಗಿದೆ. ಕಮಲ್ ಹಾಸನ್ ನಟನೆಯ `ವಿಕ್ರಮ್’ ಚಿತ್ರದ ಮುಂದೆ ಗೆದ್ದು ಬೀಗಿದೆ. ಇದನ್ನೂ ಓದಿ:ನಟನೆಯತ್ತ ʻಕಾಂತಾರʼ ಹೀರೋ ರಿಷಬ್ ಪತ್ನಿ ಪ್ರಗತಿ ಶೆಟ್ಟಿ

    ದೀಪಾವಳಿ ಹಬ್ಬಕ್ಕೆ(Deepavali Festival) `ಬೀಸ್ಟ್’ ಮತ್ತು `ವಿಕ್ರಮ್'(Vikram) ಸಿನಿಮಾ ಟಿವಿಯಲ್ಲಿ ಪ್ರೀಮಿಯರ್ ಆಗಿತ್ತು. ಥಿಯೇಟರ್‌ನಲ್ಲಿ 426 ಕೋಟಿ ರೂ. ಲೂಟಿ ಮಾಡಿದ್ದ ವಿಕ್ರಮ್ ಸಿನಿಮಾ ಮುಂದೆ ಈಗ ಬೀಸ್ಟ್ ಗೆದ್ದಿದೆ. ವಾಹಿನಿಯ ಟಿಆರ್‌ಪಿ ರೇಟಿಂಗ್ ಪ್ರಕಾರ ಬೀಸ್ಟ್ 12.62 ರೇಟಿಂಗ್ ಸಿಕ್ಕಿದೆ. ವಿಕ್ರಮ್‌ಗೆ 4.42 ರೇಟಿಂಗ್ ಸಿಕ್ಕಿದೆ. ಈ ಮೂಲಕ ವಿಕ್ರಮ್ ಮುಂದೆ ಬೀಸ್ಟ್ ಗೆಲುವು ಸಾಧಿಸಿದೆ.

    `ಕೆಜಿಎಫ್ 2′ ಮುಂದೆ ಶೇಕ್ ಆಗಿದ್ದ ಬೀಸ್ಟ್ ಸಿನಿಮಾಗೆ ಇದೀಗ ಕಿರುತೆರೆಯ ಮೂಲಕ ಸಕ್ಸಸ್ ತಂದು ಕೊಟ್ಟಿದೆ. ಥಳಪತಿ ವಿಜಯ್ ಚಿತ್ರಕ್ಕೆ ಫ್ಯಾನ್ಸ್ ಮನಗೆದ್ದಿದೆ.

    Live Tv
    [brid partner=56869869 player=32851 video=960834 autoplay=true]