ಅಂತರಾಷ್ಟ್ರೀಯ ಮಟ್ಟದಲ್ಲಿ `ಕಾಂತಾರ’ (Kantara) ಸದ್ದು ಜೋರಾಗಿದೆ. ಭೂತಕೋಲದ ಬಗ್ಗೆ ಪರಿಚಯ ಆದಮೇಲೆ ಅದೆಷ್ಟೋ ಜನ ದೈವ ಆರಾಧನೆಯನ್ನ ನೋಡಲು ಕಾಯ್ತಿದ್ದಾರೆ. ಹೀಗಿರುವಾಗ ಭೂತಕೋಲವನ್ನು ಸೆಲೆಬ್ರಿಟಿಗಳು ಕೂಡ ನೋಡಲು ಉತ್ಸುಕರಾಗಿದ್ದಾರೆ. ಕೋಲವನ್ನು ನೋಡಲು ಧರ್ಮಸ್ಥಳಕ್ಕೆ ಬರೋದಾಗಿ ಕಾಲಿವುಡ್ (Kollywood) ನಟ ವಿಶಾಲ್ (Actor Vishal) ಹೇಳಿದ್ದಾರೆ.
`ಕಾಂತಾರ’ ಬರೋದಕ್ಕೂ ಮುಂಚೆ ಕನ್ನಡಿಗರಿಗಷ್ಟೇ ದೈವ ಕೋಲದ ಬಗ್ಗೆ ಅರಿವಿತ್ತು. ಈ ಚಿತ್ರ ನೋಡಿದ ಮೇಲೆ ದೇಶ-ವಿದೇಶದ ಜನರಿಗೂ ಈ ಬಗ್ಗೆ ಪರಿಚಯವಾಯ್ತು. ಈ ಸಿನಿಮಾದ ಕ್ಲೈಮ್ಯಾಕ್ಸ್ ನೋಡಿದ ಅನೇಕರಿಗೆ ರೋಮಾಂಚನವಾಗಿತ್ತು. ಇದೀಗ ಇದೇ ರೀತಿ ಕಾಂತಾರ ನೋಡಿ, ವಿಶಾಲ್ ಅವರಿಗೂ ಭಾಸವಾಗಿದೆ. ತುಳುನಾಡಿನ ಸಂಸ್ಕೃತಿಯ ದೈವ ನೇಮವನ್ನು ಕಣ್ಣಾರೆ ನೋಡಲು ವಿಶಾಲ್ ಇಷ್ಟಪಟ್ಟಿದ್ದಾರೆ. ಇದನ್ನೂ ಓದಿ: ಭೂತಕೋಲದಲ್ಲಿ ನಟಿ ಅನುಷ್ಕಾ ಶೆಟ್ಟಿ ಭಾಗಿ
ಧರ್ಮಸ್ಥಳಕ್ಕೆ (Dharmasthaala) ತೆರಳಿ, ದೈವಕೋಲ ಮತ್ತು ಅಲ್ಲಿನ ಪ್ರತೀತಿ ಬಗ್ಗೆ ತಿಳಿದುಕೊಳ್ಳಲು ಎಂದು ನಟ ವಿಶಾಲ್ ಆಸಕ್ತಿ ತೋರಿದ್ದಾರೆ. ಸದ್ಯದಲ್ಲೇ ಧರ್ಮಸ್ಥಳ ಕ್ಷೇತ್ರಕ್ಕೆ ನಟ ಬರಲಿದ್ದಾರೆ.
Live Tv
[brid partner=56869869 player=32851 video=960834 autoplay=true]
ಕಾಲಿವುಡ್ (Kollywood) ಸೂಪರ್ ಸ್ಟಾರ್ ರಜನಿಕಾಂತ್ (Rajanikanth) ಜೈಲರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಶೂಟಿಂಗ್‌ಗೆ ಬ್ರೇಕ್ ಹಾಕಿ, ಪುತ್ರಿ ಐಶ್ವರ್ಯ ಜೊತೆ ತಿರುಪತಿ ದೇವಸ್ಥಾನಕ್ಕೆ ರಜನಿಕಾಂತ್ ಭೇಟಿ ನೀಡಿದ್ದಾರೆ.
ರಜನಿಕಾಂತ್ ಗುರುವಾರ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಪುತ್ರಿ ಐಶ್ವರ್ಯಾ (Aishwarya) ಜೊತೆ ಬೆಳಗಿನ ಜಾವ ತಿರುಪತಿ (Tirupathi) ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬುಧವಾರ ತಿರುಪತಿಗೆ ಧಾವಿಸಿ, ವಿಶ್ರಾಂತಿ ನಂತರ ಮರುದಿನ ದೇವರ ದರ್ಶನ ಪಡೆದರು. ಇದನ್ನೂ ಓದಿ: ನಟ ವಿರೇನ್ ಕೇಶವ್‌ಗೆ ಚಲನಚಿತ್ರೋತ್ಸವದ ‘ಅತ್ಯುತ್ತಮ ನಟ’ ಪ್ರಶಸ್ತಿ
ಸೌತ್ ಸಿನಿಮಾರಂಗದ ಸ್ಟಾರ್ ನಟ ವಿಜಯ್ ಸೇತುಪತಿ (Vijay Sethupathi)ಇದೀಗ ಹೊಸ ಅವತಾರದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸುತ್ತಿದ್ದಾರೆ. ತಾವು ಸ್ಲಿಮ್ ಆಗಿರುವ ಫೋಟೋ ಶೇರ್ ಮಾಡುವ ಮೂಲಕ ಅಭಿಮಾನಿಗಳು ಹುಬ್ಬೇರಿಸುವಂತೆ ಮಾಡಿದ್ದಾರೆ.
ವಿಜಯ್ ಸೇತುಪತಿ ಕಾಲಿವುಡ್‌ನ (Kollywood) ಪ್ರತಿಭಾನ್ವಿತ ನಟ, ಒಂದೇ ಪಾತ್ರಗಳಿಗೆ ಬ್ರ್ಯಾಂಡ್ ಆಗದೇ ಹೊಸ ಬಗೆಯ ಪಾತ್ರಗಳ ಮೂಲಕ ಹವಾ ಕ್ರಿಯೆಟ್ ಮಾಡಿದ್ದಾರೆ. ನಾಯಕ, ವಿಲನ್, ಹೀಗೆ ತಮಗೆ ಸಿಕ್ಕಿರುವ ಪಾತ್ರಗಳಿಗೆ ನಟ ಜೀವ ತುಂಬಿದ್ದಾರೆ. ಇನ್ನೂ ಅವರು ದಪ್ಪಗಿರುವ ವಿಚಾರಕ್ಕೆ ಈ ಹಿಂದೆ ಭಾರಿ ಟ್ರೋಲ್ ಆಗುತ್ತಿದ್ದರು. ಇದೀಗ ಅದನ್ನೇ ಚಾಲೆಂಜ್ ಆಗಿ ತೆಗೆದುಕೊಂಡಿದ್ದಾರೆ. ಒಂದೇ ತಿಂಗಳಲ್ಲಿ ಸಖತ್ ಸ್ಲಿಮ್ ಆಗಿದ್ದಾರೆ.
ವಿಜಯ್ ಸೇತುಪತಿ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಒಂದು ಹೊಸ ಫೋಟೋ ಹಂಚಿಕೊಂಡಿದ್ದಾರೆ. ಇದು ಅಭಿಮಾನಿಗಳ ವಲಯದಲ್ಲಿ ಈ ಫೋಟೋ ಸದ್ದು ಮಾಡ್ತಿದೆ. ಕೆಲವು ದಿನಗಳ ಹಿಂದೆ ತಮಿಳಿನ ʻಡಿಎಸ್‌ಪಿʼ ಸಿನಿಮಾ ತೆರೆಕಂಡಿತು. ಆ ಚಿತ್ರ ಪ್ರಚಾರದ ವೇಳೆ ಸಾರ್ವಜನಿಕವಾಗಿ ಕಾಣಿಸಿಕೊಂಡ ವಿಜಯ್ ಸೇತುಪತಿ ಅವರು ಮೊದಲಿನಂತೆಯೇ ದಪ್ಪಗಿದ್ದರು. ಆದರೆ ಈಗ ಸಡನ್ ಆಗಿ ತೂಕ ಇಳಿಸಿಕೊಂಡಿರುವ ಫೋಟೋ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ದೀಪಿಕಾ ದಾಸ್ ವರ್ತನೆಗೆ ಕಿಡಿಕಾರಿದ ರೂಪೇಶ್ ರಾಜಣ್ಣ
ಇಷ್ಟು ಕಡಿಮೆ ಅವಧಿಯಲ್ಲಿ ಈ ಪರಿ ಸ್ಲಿಮ್ ಆಗಲು ಸಾಧ್ಯವೇ ಇಲ್ಲ ಎಂಬುದು ಕೆಲವರ ವಾದವಾಗಿದ್ದರೆ, ಸ್ಲಿಮ್ ಆಗಿ ಕಾಣಿಸಲು ಕ್ಯಾಮೆರಾ ಆಂಗಲ್ ಕಾರಣ ಎಂದು ಕೂಡ ಹೇಳಲಾಗುತ್ತಿದೆ. ಈ ಹಿಂದೆ ಅವರನ್ನು ಟ್ರೋಲ್ ಮಾಡಿದ್ದವರೆಲ್ಲ ಈಗ ಅವರನ್ನು ನೋಡಿ ಗಪ್ ಚುಪ್ ಆಗಿದ್ದಾರೆ. ದೇಹದ ತೂಕ ಕಡಿಮೆ ಮಾಡಿಕೊಳ್ಳುವ ವಿಚಾರದಲ್ಲಿ ವಿಜಯ್ ಸೇತುಪತಿ ಅವರು ಎಲ್ಲರಿಗೂ ಸ್ಫೂರ್ತಿ ನೀಡಿದ್ದಾರೆ ಎಂದು ಫ್ಯಾನ್ಸ್ ಕಾಮೆಂಟ್ ಮಾಡುತ್ತಿದ್ದಾರೆ.
Live Tv
[brid partner=56869869 player=32851 video=960834 autoplay=true]
ಕಾಂಟ್ರವರ್ಸಿ ಕ್ವೀನ್ (Controversy Queen) ರಶ್ಮಿಕಾ ಮಂದಣ್ಣ (Rashmika Mandanna) ಸದಾ ಒಂದಲ್ಲಾ ಒಂದು ವಿಚಾರ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಮೊದಲ ಸಿನಿಮಾದ ನಿರ್ಮಾಣ ಸಂಸ್ಥೆಯ ಹೆಸರು ಹೇಳದೇ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಹೊಸ ವಿಷ್ಯವಾಗಿ ಕಿರಿಕ್ ಬ್ಯೂಟಿ ಸದ್ದು ಮಾಡ್ತಿದ್ದಾರೆ. ಕಾಲಿವುಡ್‌ನ ಸ್ಟಾರ್ ನಟ ವಿಶಾಲ್‌ಗೆ (Vishal) ರಶ್ಮಿಕಾ ಜೊತೆ ಡೇಟಿಂಗ್ ಮಾಡುವ ಆಸೆಯಂತೆ.
ಸೌತ್ ನಟ ವಿಶಾಲ್ ಸದ್ಯ `ಲಾಠಿ’ (Lathi) ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ರಶ್ಮಿಕಾ ಬಗ್ಗೆ ಅಚ್ಚರಿಯ ವಿಚಾರವೊಂದನ್ನ ವಿಶಾಲ್ ವ್ಯಕ್ತಪಡಿಸಿದ್ದಾರೆ. ರಶ್ಮಿಕಾ ಇಷ್ಟೆಲ್ಲಾ ಟ್ರೋಲ್ ಆದರೂ ಅಭಿಮಾನಿಗಳು ಮಾತ್ರ ಸದಾ ಆಕೆಯ ಜೊತೆ ನಿಲ್ಲುತ್ತಾರೆ. ಇನ್ನು ಸ್ಟಾರ್ ನಟರಿಗೆ ಕೂಡ ರಶ್ಮಿಕಾ ಅಂದರೆ ಬಹಳ ಇಷ್ಟ. ಕೆಲ ದಿನಗಳ ಹಿಂದೆ ತೆಲುಗು ನಟ ಬಾಲಕೃಷ್ಣ, ರಶ್ಮಿಕಾ ನನ್ನ ಲೇಟೆಸ್ಟ್ ಕ್ರಶ್ ಎಂದು ಹೇಳಿಕೊಂಡಿದ್ದರು. ಇದೀಗ ಮತ್ತೊಬ್ಬ ನಟ ವಿಶಾಲ್ ರಶ್ಮಿಕಾ ಜೊತೆ ಸೆಲೆಬ್ರೆಟಿ ಡೇಟ್ ಹೋಗಬೇಕು ಎಂದಿದ್ದಾರೆ.
ತಮಿಳು ನಟ ವಿಶಾಲ್, ರಶ್ಮಿಕಾ ಜೊತೆ ಸೆಲೆಬ್ರೆಟಿ ಡೇಟ್ ಹೋಗುವ ಇಂಗಿತ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಈ ವಿಚಾರವನ್ನು ಅವರು ಹಂಚಿಕೊಂಡಿದ್ದಾರೆ. ಸದ್ಯ ವಿಶಾಲ್ `ಲಾಠಿ’ ಎನ್ನುವ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಪ್ರಮೋಷನ್ ವೇಳೆ ಸಂದರ್ಶನದಲ್ಲಿ ಪುಷ್ಪ ನಟಿ ರಶ್ಮಿಕಾ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ: ಜಗ್ಗೇಶ್ ನಟನೆ `ರಾಘವೇಂದ್ರ ಸ್ಟೋರ್ಸ್’ ರಿಲೀಸ್ ಬಗ್ಗೆ ಸ್ಪಷ್ಟನೆ ನೀಡಿದ ಸಂತೋಷ್ ಆನಂದ್‌ರಾಮ್
ಇನ್ನೂ ಸದ್ಯದಲ್ಲೇ ಮದುವೆ ಆಗುವುದಾಗಿ ಇತ್ತೀಚೆಗೆ ಹೇಳಿಕೊಂಡಿದ್ದರು. ಒಪ್ಪಿಕೊಂಡಿರುವ ಸಿನಿಮಾ, ಜೊತೆ ಕಟ್ಟಡ ನಿರ್ಮಾಣ ಕಾರ್ಯ ಮುಗಿಯೋಕು ಗುಡ್ ನ್ಯೂಸ್ ಕೊಡುವುದಾಗಿ ವಿಶಾಲ್ ತಿಳಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ತಮಿಳು ಚಿತ್ರರಂಗದ(Tamil Films) ಸ್ಟಾರ್ ಜೋಡಿ ನಟ ಆರ್ಯ (Arya)ಮತ್ತು ಸಯೇಶಾ (Sayyesha) ಸಿನಿಮಾ ಜೊತೆ ವೈವಾಹಿಕ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಪತಿಯ ಹುಟ್ಟುಹಬ್ಬದಂದು ಮುದ್ದು ಮಗಳನ್ನು ನಟಿ ಸಯೇಶಾ ಪರಿಚಯಿಸಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.
ಆರ್ಯ ಮತ್ತು ಸಯೇಶಾ ಕಾಲಿವುಡ್‌ನ ಬೆಸ್ಟ್ ಜೋಡಿಯಾಗಿದ್ದಾರೆ. ಬೆಳ್ಳಿಪರದೆಯಲ್ಲೂ ಜೊತೆಯಾಗಿ ಮಿಂಚಿದ್ದಾರೆ. ಸಾಕಷ್ಟು ವರ್ಷಗಳ ಡೇಟಿಂಗ್ ನಂತರ ಪ್ರೀತಿಸಿ, 2019ರಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇನ್ನೂ ಮುದ್ದು ಮಗಳ ಆಗಮನವಾಗಿ ಒಂದೂವರೆ ವರ್ಷದ ನಂತರ ಈಗ ಮಗಳ ಫೋಟೋವನ್ನು ಯುವರತ್ನ (Yuvaratna) ನಟಿ ಸಯೇಶಾ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ: ವಸ್ತ್ರಾಲಂಕಾರ ಕಲಾವಿದ ಗಂಡಸಿ ನಾಗರಾಜ್ ನಿಧನ
ಸಯೇಶಾ ಕಳೆದ ವರ್ಷ 2021ರ ಜುಲೈನಲ್ಲಿ ಹೆಣ್ಣು ಮಗುವಿಗೆ ತಾಯಿಯಾಗಿದ್ದರು. ಆದರೆ ಎಲ್ಲಿಯೂ ಕೂಡ ಮಗಳ ಮುಖ ಪರಿಚಯ ಮಾಡಿಸಿರಲಿಲ್ಲ. ಇದೀಗ ಪತಿ ಆರ್ಯ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಮಗಳ ಫೋಟೋ ರಿವೀಲ್ ಮಾಡಿದ್ದಾರೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ `ಕೆಜಿಎಫ್ 2′ (Kgf 2) ಮತ್ತು `ಕಾಂತಾರ’ (Kantara) ಎಂಬ ಎರಡು ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡಿರುವ ಹೊಂಬಾಳೆ ಸಂಸ್ಥೆಯು ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿದೆ. ಇದುವರೆಗೂ ಕನ್ನಡ, ತೆಲುಗು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಚಿತ್ರಗಳನ್ನು ನಿರ್ಮಿಸಿದ್ದ ಹೊಂಬಾಳೆ ಫಿಲ್ಮ್ಸ್(Hombale Films) ರೂವಾರಿ ವಿಜಯ್ ಕಿರಗಂದೂರು, ಇದೇ ಮೊದಲ ಬಾರಿಗೆ ತಮಿಳು ಚಿತ್ರವೊಂದನ್ನು (Tamil Films) ನಿರ್ಮಿಸುತ್ತಿದ್ದಾರೆ.
ಹೊಂಬಾಳೆ ಫಿಲ್ಮ್ಸ್ ನಿರ್ಮಿಸುತ್ತಿರುವ ಮೊದಲ ತಮಿಳು ಚಿತ್ರದ ಹೆಸರು `ರಘುತಥಾ’. ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿರುವ ಕೀರ್ತಿ ಸುರೇಶ್ ಈ ಚಿತ್ರದಲ್ಲಿ ನಟಿಸುತ್ತಿದ್ದು, ಚಿತ್ರದ ಮೊದಲ ಪೋಸ್ಟರ್ ಇಂದು ಬಿಡುಗಡೆಯಾಗಿದೆ. ಈ ಹಿಂದೆ, `ದಿ ಫ್ಯಾಮಿಲಿ ಮ್ಯಾನ್’ ವೆಬ್ ಸೀರೀಸ್ ಜತೆಗೆ ಕೆಲವು ಚಿತ್ರಗಳಿಗೆ ಕಥೆ-ಚಿತ್ರಕಥೆ ರಚಿಸಿದ್ದ ಸುಮನ್ ಕುಮಾರ್ ಈ ಚಿತ್ರವನ್ನು ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ. ʻರಘುತಥಾʼ ಒಂದು ಮಹಿಳಾಪ್ರಧಾನ ಚಿತ್ರವಾಗಿದ್ದು, ಒಬ್ಬ ಯುವತಿಯ ಸುತ್ತ ಸುತ್ತುತ್ತದೆ. ಆಕೆ ತನ್ನ ನೆಲ ಮತ್ತು ಜನರ ಗುರುತನ್ನು ರಕ್ಷಿಸುವ ನಿಟ್ಟಿನಲ್ಲಿ ಏನೆಲ್ಲ ಸಾಹಸಗಳನ್ನು ಮಾಡುತ್ತಾಳೆ ಎಂಬುದನ್ನು ಈ ಕಥೆಯಲ್ಲಿ ಹಾಸ್ಯಮಯವಾಗಿ ಚಿತ್ತಿಸಲಾಗಿದೆ. ಇದನ್ನೂ ಓದಿ: ದೊಡ್ಮನೆ ಯುವರಾಜನಿಗೆ ನಾಯಕಿ ಯಾರು? ಕೊನೆಗೂ ಸಿಕ್ತು ಅಪ್‌ಡೇಟ್
ಈ ಚಿತ್ರದ ಕುರಿತು ಮಾತನಾಡುವ ಹೊಂಬಾಳೆ ಸಂಸ್ಥೆಯ ರೂವಾರಿ ವಿಜಯ್ ಕಿರಗಂದೂರು, ಇದೊಂದು ಕಾಮಿಡಿ ಡ್ರಾಮಾ ಚಿತ್ರವಾಗಿದ್ದು, ಸಮಾಜದ ವಿರುದ್ದ ಸವಾಲೆಸೆಯುವ ಒಬ್ಬ ಗಟ್ಟಿಗಿತ್ತಿ ಯುವತಿಯ ಸುತ್ತ ಸುತ್ತುತ್ತದೆ. ತನ್ನ ಸಿದ್ಧಾಂತಗಳನ್ನು ಎತ್ತಿಹಿಡಿಯುವುದರ ಜೊತೆಗೆ, ಸಮಾಜದ ವಿರುದ್ಧ ಹೋರಾಡುತ್ತಲೇ, ಆಕೆ ಹೇಗೆ ಎಲ್ಲರಿಗೂ ಸ್ಫೂರ್ತಿಯಾಗುತ್ತಾಳೆ ಎಂಬುದು ಚಿತ್ರದ ಕಥೆ. ಇಂಥದ್ದೊಂದು ಕಥೆ ಮತ್ತು ಪಾತ್ರಕ್ಕೆ ಕೀರ್ತಿ ಸುರೇಶ್ ಅವರು ಅದ್ಭುತವಾದ ಆಯ್ಕೆಯಾಗಿದ್ದು, ಅವರೊಂದಿಗೆ ಕೆಲಸ ಮಾಡಲು ಹೊಂಬಾಳೆ ಸಂಸ್ಥೆ ಹೆಮ್ಮೆ ಪಡುತ್ತದೆ. ಇದೊಂದು ಕಾಮಿಡಿ ಚಿತ್ರವಾಗಿದ್ದು, ಜನ ನಗುತ್ತಲೇ ತಮ್ಮ ಆತ್ಮಾವಲೋಕನ ಮಾಡಿಕೊಳ್ಳುವ ವಿಭಿನ್ನ ಪ್ರಯತ್ನ ಇದಾಗಲಿದೆ ಎಂದು ಹೇಳಿದ್ದಾರೆ.
ಈ ಚಿತ್ರದಲ್ಲಿ ಕೀರ್ತಿ ಸುರೇಶ್ ಜತೆಗೆ ಎಂ.ಎಸ್. ಭಾಸ್ಕರ್, ದೇವದರ್ಶಿನಿ, ರವೀಂದ್ರ ವಿಜಯ್, ಆನಂದ್ಸಾಮಿ, ರಾಜೇಶ್ ಬಾಲಕೃಷ್ಣನ್ ಮುಂತಾದವರು ಪ್ರಮುಖ ಪಾತ್ರಗಳ ಕಾಣಿಸಿಕೊಳ್ಳುತ್ತಿದ್ದಾರೆ. ಯಾಮಿನಿ ಯಜ್ನಮೂರ್ತಿ ಚಿತ್ರಕ್ಕೆ ಛಾಯಾಗ್ರಹಣ ಮಾಡುತ್ತಿದ್ದು, ʻಜೈ ಭೀಮ್ʼ ಖ್ಯಾತಿಯ ಸೀನ್ ರೋಲ್ಡನ್ ಸಂಗೀತ ಸಂಯೋಜಿಸುತ್ತಿದ್ದಾರೆ. `ರಘುತಥಾ’ (Raghuthatha) ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದ್ದು, 2023ರ ಬೇಸಿಗೆ ರಜೆಯ ಸಂದರ್ಭದಲ್ಲಿ ಚಿತ್ರವು ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ.
Live Tv
[brid partner=56869869 player=32851 video=960834 autoplay=true]
ರಜನೀಕಾಂತ್ (Rajanikanth) ಅಭಿಮಾನಿಗಳಿಗೆ ನಿಜಕ್ಕೂ ಇದು ಸಿಹಿ ಸುದ್ದಿ. ತಲೈವಾ ನಟನೆಯ `ಬಾಬಾ’ (Baba) ಸಿನಿಮಾ ಮತ್ತೆ ತೆರೆ ಬರಲು ಸಿದ್ಧವಾಗಿದೆ. ಚಿತ್ರವನ್ನು ಅಪ್‌ಗ್ರೇಡ್ ಮಾಡಿ, ತೆರೆಗೆ ತರಲಾಗುತ್ತಿದೆ. ಸದ್ಯ ಈ ಚಿತ್ರದ ಟ್ರೈಲರ್ ಹಂಚಿಕೊಂಡು, ಚಿತ್ರದ ಬಗ್ಗೆ ರಜನೀಕಾಂತ್ ಮೇಜರ್ ಅಪ್‌ಡೇಟ್ ಕೊಟ್ಟಿದ್ದಾರೆ.
ತಲೈವಾ, ಮನಿಷಾ ಕೊಯಿರಾಲ ನಟನೆಯ `ಬಾಬಾ’ ಡಿಸೆಂಬರ್ 12ಕ್ಕೆ ತೆರೆಗೆ ಅಪ್ಪಳಿಸಲಿದೆ. ರಜನೀಕಾಂತ್ ಹುಟ್ಟುಹಬ್ಬದಂದೇ ಈ ಸಿನಿಮಾ ರಿಲೀಸ್ ಮಾಡಲಾಗುತ್ತಿದೆ. ಚಿತ್ರದ ಅಪ್‌ಡೇಟ್ ವರ್ಷನ್ ಮೂಲಕ ಮತ್ತೆ ತೆರೆಯ ಮೇಲೆ ಕಮಾಲ್ ಮಾಡಲು ರಜನೀಕಾಂತ್ ಸಜ್ಜಾಗಿದ್ದಾರೆ. ಸದ್ಯ ಸಿನಿಮಾ ಟ್ರೈಲರ್ ಹಂಚಿಕೊಂಡು, ನನ್ನ ಮನಸ್ಸಿಗೆ ಹತ್ತಿರವಾದ ಸಿನಿಮಾ `ಬಾಬಾ’ ಎಂದು ಟ್ವೀಟ್ಟರ್‌ನಲ್ಲಿ ನಟ ಬರೆದುಕೊಂಡಿದ್ದಾರೆ. ಇದನ್ನೂ ಓದಿ: Kantara ಸಂಘರ್ಷಕ್ಕೆ ತೆರೆ: `ವರಾಹರೂಪಂ’ ಹಾಡಿಗಿದ್ದ ಅಡಚಣೆ ನಿವಾರಣೆ
ಇಪ್ಪತ್ತು ವರ್ಷಗಳ ಹಿಂದೆ ತೆರೆಗೆ ಮೇಲೆ ಕಮಾಲ್ ಮಾಡೋದರಲ್ಲಿ ಬಾಬಾ ಸಿನಿಮಾ ಸೋತಿತ್ತು. ಈಗ `ಕಾಂತಾರ’ (Kantara Film) ಚಿತ್ರದ ಯಶಸ್ಸು ಚಿತ್ರದಲ್ಲಿನ ದೈವ ಶಕ್ತಿ ನೋಡಿ, `ಬಾಬಾ’ ಚಿತ್ರದ ರಿಲೀಸ್‌ಗೆ ತಲೈವಾ ಮನಸ್ಸು ಮಾಡಿದ್ದಾರೆ. `ಬಾಬಾ’ ಚಿತ್ರದ ದೈವ ಶಕ್ತಿಯ ಒಳಗೊಂಡ ಚಿತ್ರವಾಗಿದ್ದು, ಡಿ.12ರಂದು ತಮಿಳುನಾಡು ಸೇರಿದಂತೆ ರಾಜ್ಯದ ಎಲ್ಲೆಡೆ ಸಿನಿಮಾ ರಿಲೀಸ್ ಆಗುತ್ತಿದೆ.
ಸಿನಿಮಾಗೆ ಹೊಸ ರೀತಿಯ ಕಲರ್ ಗ್ರೇಡಿಂಗ್, ಮತ್ತೊಮ್ಮೆ ರಜನೀಕಾಂತ್ ವಾಯ್ಸ್ ಡಬ್ಬಿಂಗ್ ಮಾಡಿ, ಭಿನ್ನವಾಗಿ ಅಭಿಮಾನಿಗಳ ಮನ ತಲುಪಲು ರೆಡಿಯಾಗಿದ್ದಾರೆ. 20 ವರ್ಷಗಳ ಹಿಂದೆ ಸೋತಿದ್ದ ಬಾಬಾ ಸಿನಿಮಾ ಇದೀಗ ಗೆಲ್ಲುತ್ತಾ, ಕಾಂತಾರ ಚಿತ್ರದ ಸ್ಪೂರ್ತಿ ಪಡೆದು ಮುನ್ನುಗ್ಗುತ್ತಿರುವ ತಲೈವಾ ಸಕ್ಸಸ್ ಸಿಗುತ್ತಾ ಎಂದು ಕಾದುನೋಡಬೇಕಿದೆ.
Live Tv
[brid partner=56869869 player=32851 video=960834 autoplay=true]
ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ (Nayanatara) ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ನಟನೆಗೆ ಬ್ರೇಕ್ ಹಾಕಿ, ಕೂಲ್ ಅಗಿ ಲೈಫ್ ಎಂಜಾಯ್ ಮಾಡುತ್ತಿದ್ದಾರೆ. ಸರೋಗಸಿ ಮೂಲಕ ಅವಳಿ ಗಂಡು ಮಕ್ಕಳನ್ನು ಬರ ಮಾಡಿಕೊಂಡಿರುವ ನಯನತಾರ ಬಗ್ಗೆ ವಿಘ್ನೇಶ್ ತಾಯಿ ಮೀನಾ ಕುಮಾರಿ (Meena Kumari) ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಸೊಸೆ ನಯನತಾರಾ ಬಗ್ಗೆ ಅಚ್ಚರಿಯ ವಿಚಾರವೊಂದನ್ನ ರಿವೀಲ್ ಮಾಡಿದ್ದಾರೆ.
ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ವಿಘ್ನೇಶ್ ತಾಯಿ ಮೀನಾ ಕುಮಾರಿ, ನನ್ನ ಈ ಪ್ರಪಂಚದಲ್ಲಿ ನಾನು ಕಂಡಿರುವ ಅತಿ ಹೆಚ್ಚು ಕಾಳಜಿ ಮತ್ತು ಪ್ರೀತಿ ಕೊಡುವ ವ್ಯಕ್ತಿ ಅಂದ್ರೆ ನಯನತಾರ ಯಾರು ಏನೇ ಕಷ್ಟ ಅಂದರು ಸಹಾಯ ಮಾಡಲು ಯಾವಾಗಲೂ ಮುಂದಿರುತ್ತಾರೆ ಎಂದು ಸೊಸೆಯನ್ನ ಹಾಡಿ ಹೊಗಳಿದ್ದಾರೆ. ಇದನ್ನೂ ಓದಿ: ಯಶ್ ಮುಂದಿನ ಚಿತ್ರಕ್ಕೆ ಅವರ ಮಗಳೇ ನಿರ್ಮಾಪಕಿ: ಐರಾ ಹೆಸರಲ್ಲಿ ಪ್ರೊಡಕ್ಷನ್ ಹೌಸ್
ನನ್ನ ಮಗ ವಿಘ್ನೇಶ್ ನಿರ್ದೇಶಕ, ಸೊಸೆ ದೊಡ್ಡ ಸ್ಟಾರ್ ನಟಿ. ಇಬ್ಬರು ತುಂಬಾ ಕಷ್ಟ ಪಟ್ಟು ಶ್ರಮಪಟ್ಟು ಜೀವನ ನಡೆಸುತ್ತಾರೆ. ಮನೆಯಲ್ಲಿ ಒಟ್ಟು 8 ಸಹಾಯಕರು ಇದ್ದಾರೆ 4 ಗಂಡಸರು 4 ಹೆಂಗಸರು ಇದ್ದಾರೆ. ಒಂದು ಸಲ ಮನೆ ಕೆಲಸ ಮಾಡುವ ಮಹಿಳೆ 4 ಲಕ್ಷ ರೂಪಾಯಿ ಸಾಲ ಇದೆ ತೀರಿಸಲು ಆಗುತ್ತಿಲ್ಲ ಎಂದು ದುಃಖ ಹೇಳಿಕೊಂಡಾಗ ಯೋಚಿಸದೇ ಕೆಲವೇ ನಿಮಿಷಗಳಲ್ಲಿ 4 ಲಕ್ಷ ತಂದು ಕೈಗೆ ಕೊಟ್ಟು ಸಾಲ ತೀರಿಸಿಕೋ ಎಂದು ಹೇಳುತ್ತಾಳೆ. ಇದು ನಯನತಾರಾ ಬಗ್ಗೆ ಯಾರಿಗೂ ಗೊತ್ತಿರದ ವಿಷಯ ಎಂದು ಸೊಸೆಯ ಬಗ್ಗೆ ಹೆಮ್ಮೆಯಿಂದ ವಿಘ್ನೇಶ್ ತಾಯಿ ಮಾತನಾಡಿದ್ದಾರೆ.
ತುಂಬಾ ನಂಬಿಕೆ ಇಟ್ಟು ಆ ಮನೆಯಲ್ಲಿ ಕೆಲಸ ಮಾಡಿದ್ದರೆ, ಮಾಲೀಕರು ಕೂಡ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಅದೇ ರೀತಿ ಅವರು ನಮ್ಮ ಮನೆಯನ್ನು ಕಾಪಾಡುತ್ತಾರೆ ಎಂದಿದ್ದಾರೆ ಮೀನಾ ಕುಮಾರಿ.
Live Tv
[brid partner=56869869 player=32851 video=960834 autoplay=true]
ಕಾಲಿವುಡ್‌ನಲ್ಲಿ (Kollywood) `ಜೈ ಭೀಮ್’ ಸಿನಿಮಾ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿತ್ತು. ನಟ ಸೂರ್ಯ ಅವರ ಲಾಯರ್ ಗತ್ತಿಗೆ ಫ್ಯಾನ್ಸ್ ಫಿದಾ ಆಗಿದ್ದರು. ಇದೀಗ ಈ ಚಿತ್ರದ ಪಾರ್ಟ್ 2 ಬಗ್ಗೆ ಹೊಸ ಅಪ್‌ಡೇಟ್‌ವೊಂದು ಸಿಕ್ಕಿದೆ.
`ಜೈ ಭೀಮ್’ (Jai Bhim) ಸಿನಿಮಾ ನೋಡಿ ಇಷ್ಟಪಟ್ಟವರಿಗೆ ಇದೀಗ ಈ ವಿಚಾರ ನಿಜಕ್ಕೂ ಸಿಹಿ ಸುದ್ದಿ ಎಂದೇ ಹೇಳಬಹುದು. ಸಂಕಷ್ಟದಲ್ಲಿರುವವರ ಪರ ನಿಂತು ಖಡಕ್ ವಕೀಲ ಪಾತ್ರದಲ್ಲಿ ನಟ ಸೂರ್ಯ (Actor Surya) ಕಮಾಲ್ ಮಾಡಿದ್ದರು. ಇದೀಗ ಇದೇ ಚಿತ್ರದ ಪಾರ್ಟ್ 2 ಅನ್ನು ತೆರೆಗೆ ತರೋದರ ಬಗ್ಗೆ ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಇದನ್ನೂ ಓದಿ: ಪ್ರಭಾಸ್ ಜೊತೆಗಿನ ಡೇಟಿಂಗ್ ವಿಚಾರಕ್ಕೆ ಮೌನ ಮುರಿದ ಕೃತಿ ಸನೂನ್
ಜ್ಞಾನ್‌ವೇಲ್ ನಿರ್ದೇಶನದಲ್ಲಿ `ಜೈ ಭೀಮ್’ ಮೂಡಿ ಬಂದಿತ್ತು. ಇದೀಗ ಸೌತ್‌ನ ನಿರ್ಮಾಪಕ ರಾಜಶೇಖರ್ ಪಾಂಡಿಯನ್ ನಿರ್ಮಾಣದಲ್ಲಿ ಜೈ ಭೀಮ್ ಪಾರ್ಟ್ 2ಗೆ ಮಾತುಕತೆ ನಡೆದಿದೆ. ಸದ್ಯದಲ್ಲಿ ಈ ಚಿತ್ರದ ಸೀಕ್ವೇಲ್ ಚಿತ್ರೀಕರಣ ಕೂಡ ಶುರುವಾಗಲಿದೆ.
Live Tv
[brid partner=56869869 player=32851 video=960834 autoplay=true]
ದಳಪತಿ ವಿಜಯ್ (Thalapathy vijay) ಮತ್ತು ರಶ್ಮಿಕಾ(Rashmika Mandanna) ನಟನೆಯ `ವಾರಿಸು’ (Varisu Film) ಚಿತ್ರಕ್ಕೆ ಸಂಕಷ್ಟವೊಂದು ಎದುರಾಗಿದೆ. ಪ್ರಾಣಿ ದಯಾ ಸಂಘದವರು `ವಾರಿಸು’ ತಂಡದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಚಿತ್ರದಲ್ಲಿ ಅನುಮತಿಯಿಲ್ಲದೇ ಪ್ರಾಣಿಗಳ ಬಳಕೆ ಮಾಡಿದ್ದಕ್ಕೆ ರಶ್ಮಿಕಾ ಸಿನಿಮಾ ವಿರುದ್ಧ ನೋಟಿಸ್ ನೀಡಲಾಗಿದೆ.
ರಶ್ಮಿಕಾ ಮಂದಣ್ಣ ನಟನೆಯ `ವಾರಿಸು’ ಸಿನಿಮಾ ದೊಡ್ಡ ಸಂಕಷ್ಟವನ್ನ ಎದುರಿಸುತ್ತಿದ್ದಾರೆ. ಸದ್ಯ ಸಿನಿಮಾದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಈ ನಡುವೆ ಪ್ರಾಣಿ ದಯಾ ಸಂಘದವರು ಚಿತ್ರತಂಡಕ್ಕೆ ನೋಟಿಸ್ ನೀಡಿದೆ. ಅಧಿಕಾರಿಗಳ ಅನುಮತಿ ಇಲ್ಲದೆ ಸಿನಿಮಾತಂಡ ಚಿತ್ರೀಕರಣದಲ್ಲಿ ಆನೆಗಳನ್ನು ಬಳಸಿಕೊಂಡ ಪರಿಣಾಮ ಪ್ರಾಣಿ ದಯಾ ಸಂಘ (Animal Welfare Board) ನೋಟಿಸ್ ನೀಡಿದೆ. ಈ ಬಗ್ಗೆ ಮುಂದಿನ ಏಳು ದಿನಗಳಲ್ಲಿ ವಿವರಣೆ ನೀಡುವಂತೆ ಅರಣ್ಯಾಧಿಕಾರಿಗಳು ʻವಾರಿಸುʼ ತಂಡಕ್ಕೆ ಸೂಚಿಸಿದ್ದಾರೆ. ಇಲ್ಲವಾದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಕಾಂತಾರ `ತುಳು’ ಟ್ರೈಲರ್‌ಗೆ ಭರ್ಜರಿ ರೆಸ್ಪಾನ್ಸ್: ರಿಲೀಸ್ ಡೇಟ್ ಔಟ್
ನಿಯಮಗಳ ಪ್ರಕಾರ ಪ್ರಾಣಿಗಳನ್ನು ಶೂಟಿಂಗ್‌ನಲ್ಲಿ ಬಳಸಬಾರದು. ಪ್ರಾಣಿಗಳನ್ನು ಬಳಸಿದರೆ ಪ್ರತಿಯೊಬ್ಬ ವ್ಯಕ್ತಿಯು ನೋಂದಾಯಿಸಿಕೊಳ್ಳಬೇಕು. ಈ ನಿಯಮವನ್ನ ಚಿತ್ರತಂಡ ಉಲ್ಲಂಘಿಸಿದೆ ಎಂದು ಹೇಳಲಾಗುತ್ತಿದೆ. ಈ ಚಿತ್ರದ ನಿರ್ಮಾಪಕರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
`ವಾರಿಸು’ ಸಿನಿಮಾಗೆ ನಿರ್ದೇಶಕ ವಂಶಿ ಪೈಡಿಪಲ್ಲಿ ನಿರ್ದೇಶನ ಮಾಡುತ್ತಿದ್ದಾರೆ. ನಿರ್ಮಾಪಕ ದಿಲ್ ರಾಜು ಬಂಡವಾಳ ಹೂಡಿದ್ದಾರೆ. ಈಗಾಗಲೇ ಈ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಿದ್ದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇತ್ತೀಚಿಗಷ್ಟೆ ಸಿನಿಮಾದ ಮೇಕಿಂಗ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಂದಹಾಗೆ ಈ ಸಿನಿಮಾದಲ್ಲಿ ವಿಜಯ್ ವಿದೇಶದಿಂದ ತಾಯ್ನಾಡಿಗೆ ವಾಪಾಸ್ ಆಗಿರುವ ಎನ್‌ಆರ್‌ಐ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ವಿಜಯ್‌ಗೆ, ರಶ್ಮಿಕಾ ಮೊದಲ ಬಾರಿಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
Live Tv
[brid partner=56869869 player=32851 video=960834 autoplay=true]