Tag: Kollywood

  • ತಮಿಳಿನಿಂದ ಕನ್ನಡ ಎಂದ ಕಮಲ್ ಹಾಸನ್‌ಗೆ ಸಂಕಷ್ಟ- ಕ್ಷಮೆಯಾಚಿಸುವಂತೆ ಆಗ್ರಹ

    ತಮಿಳಿನಿಂದ ಕನ್ನಡ ಎಂದ ಕಮಲ್ ಹಾಸನ್‌ಗೆ ಸಂಕಷ್ಟ- ಕ್ಷಮೆಯಾಚಿಸುವಂತೆ ಆಗ್ರಹ

    ‘ಥಗ್ ಲೈಫ್’ ಚಿತ್ರದ (Thug Life)  ಪ್ರಚಾರಕ್ಕಾಗಿ ನಿನ್ನೆ (ಮೇ 27) ಬೆಂಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದ ಕಮಲ್ ಹಾಸನ್ ಹೇಳಿಕೆಗೆ ಕರವೇ ಮತ್ತು ಕನ್ನಡಪರ ಸಂಘಟನೆ ಕ್ಷಮೆಯಾಚಿಸುವಂತೆ ಪಟ್ಟುಹಿಡಿದಿವೆ. ಇದನ್ನೂ ಓದಿ:ಗೆಳತಿಯ ಮದ್ವೆಯಲ್ಲಿ ಆಲಿಯಾ ಭಟ್ ಫುಲ್ ಶೈನ್ – ವಿಡಿಯೋ ವೈರಲ್

    ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದು ಮಾತನಾಡಿದ್ದ ಕಮಲ್ ಹೇಳಿಕೆಗೆ ಕನ್ನಡಪರ ಸಂಘಟನೆಗಳು ಕ್ಷಮೆ ಯಾಚಿಸುವಂತೆ ಫಿಲ್ಮ್ ಚೇಂಬರ್‌ಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಕನ್ನಡ ಭಾಷೆಗೆ 4ರಿಂದ 5 ಸಾವಿರ ವರ್ಷಗಳ ಇತಿಹಾಸವಿದೆ. ಅವರು ಆಡಿದ ಮಾತಿನಿಂದ ದ್ರಾವಿಡ ಭಾಷೆಗಳು ಒಗ್ಗಟ್ಟಿಗೆ ದಕ್ಕೆಯಾಗಿದೆ. ಕಮಲ್ ಅತ್ಯುತ್ತಮ ಕಲಾವಿದ, ಅವರು ಕನ್ನಡ ಚಿತ್ರಗಳಲ್ಲೂ ನಟಿಸಿದ್ದಾರೆ. ನಟನ ಮಾತಿನಿಂದ ಕನ್ನಡಿಗರು, ತಮಿಳರ ನಡುವೆ ದ್ವೇಷ ಹುಟ್ಟುವಂತೆ ಮಾಡಿದ್ದಾರೆ. ತಕ್ಷಣ ತಮ್ಮ ತಪ್ಪನ್ನ ಅವರು ತಿದ್ದುಕೊಂಡು ಕನ್ನಡಿಗರಿಗೆ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ. ಕ್ಷಮೆಯಾಚಿಸದಿದ್ದರೆ ‘ಥಗ್‌ ಲೈಫ್‌’ ಚಿತ್ರದ ರಿಲೀಸ್‌ಗೆ ತಡೆ ನೀಡೋದಾಗಿ ಕರವೇ ಮತ್ತು ಕನ್ನಡಪರ ಸಂಘಟನೆ ಎಚ್ಚರಿಸಿದೆ. ಇದನ್ನೂ ಓದಿ:ತಮಿಳಿನಿಂದ ಕನ್ನಡ ಹುಟ್ಟಿದ್ದು- ಕಮಲ್ ಹಾಸನ್ ಹೇಳಿಕೆಗೆ ಕನ್ನಡಿಗರ ಆಕ್ರೋಶ

    ಮೇ 27ರಂದು ಬೆಂಗಳೂರಿನಲ್ಲಿ ನಡೆದ ‘ಥಗ್ ಲೈಫ್’ ಪ್ರಚಾರ ಕಾರ್ಯಕ್ಕೆ ನಟ ಶಿವಣ್ಣ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ, ರಾಜ್‌ಕುಮಾರ್ ಜೊತೆಗಿನ ಒಡನಾಡವನ್ನು ಕಮಲ್ ಹಾಸನ್ ಸ್ಮರಿಸಿದರು. ಬಳಿಕ ಶಿವಣ್ಣ ಎದುರೇ ನಿಮ್ಮ ಕನ್ನಡ ಹುಟ್ಟಿದ್ದು ತಮಿಳಿನಿಂದ ಎಂದು ನಟ ಹೇಳಿದ್ದಾರೆ. ಕನ್ನಡಿಗರ ಪ್ರೀತಿ, ಗೌರವಕ್ಕೆ ನಮಿಸುತ್ತಲೇ ನಿಮ್ಮ ಕನ್ನಡ ನಮ್ಮಿಂದ ಬಂದಿದ್ದು ಎಂದ ಕಮಲ್ ಹೇಳಿಕೆಗೆ ಕನ್ನಡಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಕಮಲ್ ಆಡಿರುವ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕನ್ನಡ ತಮಿಳಿನಿಂದ ಬಂದಿಲ್ಲ. ತಮಿಳಿಗಿಂತ ಕನ್ನಡ ಭಾಷೆಯೇ ಪುರಾತನವಾದದ್ದು ಎಂದು ಕನ್ನಡಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ.

    ‘ಥಗ್ ಲೈಫ್’ ಸಿನಿಮಾದಲ್ಲಿ ಕಮಲ್ ಹಾಸನ್ ಜೊತೆ ತ್ರಿಷಾ ಕೃಷ್ಣನ್, ಅಭಿರಾಮಿ ಸೇರಿದಂತೆ ಅನೇಕರು ನಟಿಸಿದ್ದಾರೆ. ಮಣಿರತ್ನಂ ಈ ಚಿತ್ರದ ನಿರ್ದೇಶನ ಮಾಡಿದ್ದಾರೆ.

  • ‘ಕೂಲಿ’ ಮಾಡಿದ ತಲೈವಾಗೆ 150 ಕೋಟಿ, ನಿರ್ದೇಶಕನಿಗೆ 20 ಕೋಟಿ!

    ‘ಕೂಲಿ’ ಮಾಡಿದ ತಲೈವಾಗೆ 150 ಕೋಟಿ, ನಿರ್ದೇಶಕನಿಗೆ 20 ಕೋಟಿ!

    ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಅವರು ‘ಕೂಲಿ’ (Coolie) ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಸಿನಿಮಾಗಿಂತ ಹೆಚ್ಚು ಅವರ ಸಂಭಾವನೆ ವಿಚಾರವಾಗಿ ಸುದ್ದಿಯಾಗ್ತಿದ್ದಾರೆ. ಈ ಚಿತ್ರಕ್ಕೆ ತಲೈವಾ 150 ಕೋಟಿ ರೂ. ಹಾಗೂ ನಿರ್ದೇಶಕ ಲೋಕೇಶ್ 50 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾದ ಸುದ್ದಿಯೊಂದು ಈಗ ಚರ್ಚೆಗೆ ಗ್ರಾಸವಾಗಿದೆ.

    ತಲೈವಾಗೆ ವಯಸ್ಸು 74 ವರ್ಷವಾದ್ರೂ ಅವರಿಗಿರುವ ಚಾರ್ಮ್ ಮತ್ತು ಸಿನಿಮಾ ಮೇಲಿನ ಕ್ರೇಜ್ ಫ್ಯಾನ್ಸ್‌ಗೆ ಕಮ್ಮಿಯಾಗಿಲ್ಲ. ಹೀಗಾಗಿಯೇ ಕೂಲಿ ಸಿನಿಮಾದಲ್ಲಿ ನಟಿಸಲು 150 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಅದಷ್ಟೇ ಅಲ್ಲ, ಈ ಚಿತ್ರದ ನಿರ್ದೇಶಕ ಲೋಕೇಶ್ ಕನಕರಾಜ್ (Lokesh Kanagaraj) ಕೂಡ 50 ಕೋಟಿ ರೂ. ಸಂಭಾವನೆ ಪಡೆದಿದ್ದಾರಂತೆ. ಇದನ್ನೂ ಓದಿ: ವಿದೇಶಕ್ಕೆ ಶೂಟಿಂಗ್‌ ತೆರಳಲು ಅನುಮತಿ ಕೋರಿ ದರ್ಶನ್‌ ಅರ್ಜಿ

    ಈ ಸಿನಿಮಾ ರಿಲೀಸ್‌ಗೂ ಮೊದಲೇ ಡಿಜಿಟಲ್ ರೈಟ್ಸ್, ಸ್ಯಾಟಲೈಟ್, ಮ್ಯೂಸಿಕ್ ರೈಟ್ಸ್‌ನಿಂದ 240 ಕೋಟಿ ರೂ. ಅಧಿಕ ಗಳಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ:ಹಿರಿಯ ನಟ ಅನಂತ್ ನಾಗ್‌ಗೆ ಪದ್ಮಭೂಷಣ ಪ್ರಶಸ್ತಿ ಪ್ರದಾನ

    ಈ ಸಿನಿಮಾದಲ್ಲಿ ತಲೈವಾ ಜೊತೆ ನಾಗಾರ್ಜುನ ಅಕ್ಕಿನೇನಿ, ರಿಯಲ್ ಸ್ಟಾರ್ ಉಪೇಂದ್ರ, ಶ್ರುತಿ ಹಾಸನ್, ರೆಬಾ, ಪೂಜಾ ಹೆಗ್ಡೆ, ಆಮೀರ್ ಖಾನ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಈ ಚಿತ್ರವನ್ನು ಸನ್ ಪಿಕ್ಚರ್ಸ್ ನಿರ್ಮಾಣ ಮಾಡಿದೆ. ಈ ಚಿತ್ರ ಆ.14ಕ್ಕೆ ರಿಲೀಸ್‌ಗೆ ಸಿದ್ಧವಾಗಿದೆ.

  • ತಮಿಳಿನಿಂದ ಕನ್ನಡ ಹುಟ್ಟಿದ್ದು- ಕಮಲ್ ಹಾಸನ್ ಹೇಳಿಕೆಗೆ ಕನ್ನಡಿಗರ ಆಕ್ರೋಶ

    ತಮಿಳಿನಿಂದ ಕನ್ನಡ ಹುಟ್ಟಿದ್ದು- ಕಮಲ್ ಹಾಸನ್ ಹೇಳಿಕೆಗೆ ಕನ್ನಡಿಗರ ಆಕ್ರೋಶ

    ಕಾಲಿವುಡ್ ನಟ ಕಮಲ್ ಹಾಸನ್ ನಟನೆಯ ‘ಥಗ್ ಲೈಫ್’ ಸಿನಿಮಾ (Thug Life) ಜೂನ್ 5ರಂದು ರಿಲೀಸ್‌ಗೆ ಸಿದ್ಧವಾಗಿದೆ. ಈ ಚಿತ್ರದ ಪ್ರಚಾರಕ್ಕಾಗಿ ಚಿತ್ರತಂಡ ಇಂದು (ಮೇ 27) ಬೆಂಗಳೂರಿಗೆ ಆಗಮಿಸಿದೆ. ಈ ವೇಳೆ, ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದ ಕಮಲ್ ಹಾಸನ್ (Kamal Haasan) ಹೇಳಿಕೆಗೆ ಕನ್ನಡಿಗರು ರಾಂಗ್ ಆಗಿದ್ದಾರೆ. ಇದನ್ನೂ ಓದಿ:ಪ್ರಶಾಂತ್ ನೀಲ್, ಜ್ಯೂ.ಎನ್‌ಟಿಆರ್ ಸಿನಿಮಾದಲ್ಲಿ ರಶ್ಮಿಕಾ ಐಟಂ ಡ್ಯಾನ್ಸ್?

    ಬೆಂಗಳೂರಿನಲ್ಲಿ ನಡೆದ ‘ಥಗ್ ಲೈಫ್’ ಪ್ರಚಾರ ಕಾರ್ಯಕ್ಕೆ ನಟ ಶಿವಣ್ಣ (Shivarajkumar) ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ, ರಾಜ್‌ಕುಮಾರ್ ಜೊತೆಗಿನ ಒಡನಾಡವನ್ನು ಕಮಲ್ ಹಾಸನ್ ಸ್ಮರಿಸಿದ್ದಾರೆ. ಬಳಿಕ ಶಿವಣ್ಣ ಎದುರೇ ನಿಮ್ಮ ಕನ್ನಡ ಹುಟ್ಟಿದ್ದು ತಮಿಳಿನಿಂದ ಎಂದು ನಟ ಹೇಳಿದ್ದಾರೆ. ಕನ್ನಡಿಗರ ಪ್ರೀತಿ, ಗೌರವಕ್ಕೆ ನಮಿಸುತ್ತಲೇ ನಿಮ್ಮ ಕನ್ನಡ ನಮ್ಮಿಂದ ಬಂದಿದ್ದು ಎಂದ ಕಮಲ್ ಹೇಳಿಕೆಗೆ ಕನ್ನಡಿಗರು ಕೆಂಡ ಕಾರಿದ್ದಾರೆ. ಇದನ್ನೂ ಓದಿ: ಮತ್ತೆ ಸೂಪರ್ ಹೀರೋ ಆಗಿ ತೇಜ್ ಸಜ್ಜಾ ಎಂಟ್ರಿ; ‘ಮಿರಾಯ್’ ಟೀಸರ್ ರಿಲೀಸ್‌ಗೆ ಡೇಟ್ ಫಿಕ್ಸ್

    ಹೀಗಾಗಿ ಕಮಲ್ ಆಡಿರುವ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕನ್ನಡ ತಮಿಳಿನಿಂದ ಬಂದಿಲ್ಲ. ತಮಿಳಿಗಿಂತ ಕನ್ನಡ ಭಾಷೆಯೇ ಪುರಾತನವಾದದ್ದು ಎಂದು ಕನ್ನಡಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ.

    ‘ಥಗ್ ಲೈಫ್’ ಸಿನಿಮಾದಲ್ಲಿ ಕಮಲ್ ಹಾಸನ್ ಜೊತೆ ತ್ರಿಷಾ ಕೃಷ್ಣನ್, ಅಭಿರಾಮಿ ಸೇರಿದಂತೆ ಅನೇಕರು ನಟಿಸಿದ್ದಾರೆ. ಮಣಿರತ್ನಂ ಈ ಚಿತ್ರದ ನಿರ್ದೇಶನ ಮಾಡಿದ್ದಾರೆ.

  • ಸೂರ್ಯ ನಟನೆಯ ಸಿನಿಮಾದಲ್ಲಿ ವಿಜಯ್ ದೇವರಕೊಂಡ?

    ಸೂರ್ಯ ನಟನೆಯ ಸಿನಿಮಾದಲ್ಲಿ ವಿಜಯ್ ದೇವರಕೊಂಡ?

    ಮಿಳು ನಟ ಸೂರ್ಯ (Suriya) ನಟನೆಯ 46ನೇ ಚಿತ್ರದಲ್ಲಿ ವಿಜಯ್ ದೇವರಕೊಂಡ (Vijay Devarakonda) ನಟಿಸಲಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ:ರಾಧಿಕಾ ಪಂಡಿತ್‌ಗೆ ಸಿನಿಮಾ – ಯಶ್ ತಾಯಿ ಹೇಳೋದೇನು?

    ಇತ್ತೀಚೆಗೆ ಸೂರ್ಯ ನಟನೆಯ 46ನೇ ಚಿತ್ರಕ್ಕೆ (Suriya 46) ಅದ್ಧೂರಿಯಾಗಿ ಚಾಲನೆ ನೀಡಲಾಗಿತ್ತು. ಈ ಸಿನಿಮಾದಲ್ಲಿ ನಾಯಕಿಯಾಗಿ ‘ಪ್ರೇಮಲು’ ನಟಿ ಮಮಿತಾ ಬೈಜು ನಟಿಸಲಿದ್ದಾರೆ. ಚಿತ್ರದಲ್ಲಿ ವಿಜಯ್ ದೇವರಕೊಂಡ ಕೂಡ ನಟಿಸಲಿದ್ದಾರೆ ಎನ್ನಲಾಗಿದೆ. ಹೀಗೊಂದು ಸುದ್ದಿಯೊಂದು ಟಾಲಿವುಡ್ ಗಲ್ಲಿಯಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: ಅತ್ಯಾಚಾರ ಕೇಸ್‌ – ನಾಪತ್ತೆಯಾಗಿದ್ದ ನಟ ಮಡೆನೂರು ಮನು ಅರೆಸ್ಟ್‌

    ಚಿತ್ರದಲ್ಲಿ ತಿರುವು ಕೊಡುವ ಪಾತ್ರದಲ್ಲಿ ವಿಜಯ್ ನಟಿಸಲಿದ್ದಾರೆ ಎನ್ನಲಾಗಿದೆ. ನಟನೊಂದಿಗೆ ಚಿತ್ರತಂಡ ಮಾತುಕತೆ ನಡೆಸಿದೆಯಂತೆ. ಆದರೆ ವಿಜಯ್ ದೇವರಕೊಂಡ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆಯಾ ಎಂಬುದನ್ನು ಚಿತ್ರತಂಡವೇ ಅಧಿಕೃತವಾಗಿ ತಿಳಿಸಬೇಕಿದೆ.

    ವಿಜಯ್ ಸದ್ಯ `ಕಿಂಗ್‌ಡಮ್’ ಚಿತ್ರದ ರಿಲೀಸ್‌ಗಾಗಿ ಎದುರು ನೋಡ್ತಿದ್ದಾರೆ. ಭಾಗ್ಯಶ್ರೀ ಜೊತೆ ನಟ ರೊಮ್ಯಾನ್ಸ್ ಮಾಡಿದ್ದಾರೆ. ಈ ಚಿತ್ರ ಜುಲೈ 4ರಂದು ಬಹುಭಾಷೆಗಳಲ್ಲಿ ರಿಲೀಸ್ ಆಗಲಿದೆ.

  • ತಲೈವಾಗೆ ಯುವ ನಿರ್ದೇಶಕ ಆ್ಯಕ್ಷನ್ ಕಟ್

    ತಲೈವಾಗೆ ಯುವ ನಿರ್ದೇಶಕ ಆ್ಯಕ್ಷನ್ ಕಟ್

    ಜನಿಕಾಂತ್ ಅವರು (Rajinikanth) ‘ಕೂಲಿ’ ಮತ್ತು ‘ಜೈಲರ್ 2’ (Jailer 2) ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಯುವ ನಿರ್ದೇಶಕನ ಸಿನಿಮಾಗೆ ತಲೈವಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾದ ಸುದ್ದಿಯೊಂದು ಹರಿದಾಡುತ್ತಿದೆ. ಇದನ್ನೂ ಓದಿ:ಕಾನ್ 2025: ಕತ್ತಲ್ಲಿ ಮೋದಿ ಚಿತ್ರವಿರುವ ನೆಕ್ಲೆಸ್ ಧರಿಸಿ ನಟಿ ಗುಜ್ಜರ್ ವಾಕ್!

    ತಲೈವಾಗೆ 74 ವರ್ಷವಾದ್ರೂ ಅವರಿಗುವ ಚಾರ್ಮ್, ಅಭಿಮಾನಿಗಳ ಕ್ರೇಜ್ ಇದುವರೆಗೂ ಕಮ್ಮಿಯಾಗಿಲ್ಲ. ಪ್ರತಿ ಸಿನಿಮಾದಲ್ಲೂ ವಿಭಿನ್ನ ಕಂಟೆಂಟ್ ಹೊತ್ತು ಅವರು ಬರುತ್ತಾರೆ. ಅಂತಹದ್ದೇ ಭಿನ್ನವಾಗಿರುವ ಚಿತ್ರಕ್ಕೆ ತಲೈವಾ ಓಕೆ ಎಂದಿದ್ದಾರಂತೆ. ಅಂತೆ ಸುಂದರಣಿಕಿ, ಸರಿಪೋಧಾ ಶನಿವಾರಂ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದ ವಿವೇಕ್ ಅತ್ರೇಯ ಈಗ ತಲೈವಾ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದನ್ನೂ ಓದಿ:ದರ್ಶನ್ ಮೇಕಪ್ ಆರ್ಟಿಸ್ಟ್ ಹೊನ್ನೆಗೌಡ ನಿಧನ- ಭಾವುಕ ಪೋಸ್ಟ್ ಹಂಚಿಕೊಂಡ ದಚ್ಚು

    ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾ ಕೆಲಸಗಳನ್ನು ಮುಗಿಸಿದ ಬಳಿಕ ವಿವೇಕ್ (Vivek Athreya) ಜೊತೆ ತಲೈವಾ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ತಂಡದ ಕಡೆಯಿಂದ ಅಧಿಕೃತ ಮಾಹಿತಿ ಸಿಗಲಿದೆಯಾ ಕಾದುನೋಡಬೇಕಿದೆ.

    ರಜನಿಕಾಂತ್ ನಟನೆಯ ‘ಕೂಲಿ’ ಸಿನಿಮಾ (Coolie) ಆಗಸ್ಟ್ 14 ರಂದು ರಿಲೀಸ್ ಆಗಲಿದೆ. ‘ಜೈಲರ್ 2’ ಸಿನಿಮಾ ಶೂಟಿಂಗ್ ಭರದಿಂದ ನಡೆಯುತ್ತಿದೆ. ನೆಲ್ಸನ್ ದಿಲೀಪ್ ಕುಮಾರ್ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.

  • ವಿಶಾಲ್ ಹುಟ್ಟುಹಬ್ಬದ ದಿನವೇ ಧನ್ಶಿಕಾ ಜೊತೆ ಮದುವೆ- ಕೊನೆಗೂ ಸಿಕ್ತು ಗುಡ್‌ ನ್ಯೂಸ್

    ವಿಶಾಲ್ ಹುಟ್ಟುಹಬ್ಬದ ದಿನವೇ ಧನ್ಶಿಕಾ ಜೊತೆ ಮದುವೆ- ಕೊನೆಗೂ ಸಿಕ್ತು ಗುಡ್‌ ನ್ಯೂಸ್

    ಕಾಲಿವುಡ್ ನಟ ವಿಶಾಲ್ (Vishal) ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ‘ಯೋಗಿದ’ ಚಿತ್ರದ ನಟಿ ಸಾಯಿ ಧನ್ಶಿಕಾ (Sai Dhanshika) ಜೊತೆ ಹಸೆಮಣೆ (Wedding) ಏರಲು ಸಜ್ಜಾಗಿದ್ದಾರೆ. ಈ ಮದುವೆ ಬಗ್ಗೆ ಅಧಿಕೃತವಾಗಿ ಧನ್ಶಿಕಾ, ವಿಶಾಲ್ ಇಬ್ಬರೂ ಅನೌನ್ಸ್ ಮಾಡಿದ್ದಾರೆ. ಆಗಸ್ಟ್‌ನಲ್ಲಿ ಮದುವೆ ಆಗೋದಾಗಿ ಸಿಹಿಸುದ್ದಿ ಕೊಟ್ಟಿದ್ದಾರೆ. ಇದನ್ನೂ ಓದಿ:War 2 Teaser: ಹೃತಿಕ್ ರೋಷನ್ ಮುಂದೆ ವಿಲನ್ ಆಗಿ ಅಬ್ಬರಿಸಿ ಬೊಬ್ಬಿರಿದ ಜ್ಯೂ.ಎನ್‌ಟಿಆರ್

    ಕಳೆದ 15 ವರ್ಷಗಳಿಂದ ಪರಿಚಿತರಾಗಿರುವ ಧನ್ಶಿಕಾ ಜೊತೆ ವಿಶಾಲ್ ಮದುವೆಗೆ ಸಜ್ಜಾಗಿದ್ದಾರೆ. ಈ ಬಗ್ಗೆ ಚೆನ್ನೈನಲ್ಲಿ ನಡೆದ ಧನ್ಶಿಕಾ ನಟನೆಯ ‘ಯೋಗಿದ’ ಚಿತ್ರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶಾಲ್, ನನಗೆ ಧನ್ಶಿಕಾ ಜೊತೆ ಮದುವೆ ಫಿಕ್ಸ್ ಆಗಿದೆ. ಅವರ ತಂದೆ ಕೂಡ ಇಲ್ಲಿಯೇ ಇದ್ದಾರೆ. ಅವರ ಆಶೀರ್ವಾದೊಂದಿಗೆ ನಾನು ಅವಳನ್ನು ಪರಿಚಯಿಸುತ್ತಿದ್ದೇನೆ. ಧನ್ಶಿಕಾ ಅದ್ಭುತ ನಟಿ. ಮದುವೆ ಬಳಿಕವೂ ಆಕೆ ನಟನೆ ಮಾಡುತ್ತಾರೆ ಎಂದಿದ್ದಾರೆ. ಇದನ್ನೂ ಓದಿ:ಲಿಫ್ಟ್‌ನಲ್ಲಿ ಹಠ ಹಿಡಿದು ದರ್ಶನ್ ನಂಬರ್ ಪಡೆದ ಪವಿತ್ರಾಗೌಡ

    ಬಳಿಕ ಸಾಯಿ ಧನ್ಶಿಕಾ ಮಾತನಾಡಿ, ನಮ್ಮ ಮದುವೆ ವಿಷಯ ಈಗಲೇ ತಿಳಿಸಬಾರದು ಅಂದುಕೊಂಡಿದ್ದೇವು. ಆದರೆ ಸೋಶಿಯಲ್ ಮೀಡಿಯಾದಲ್ಲಿ ಬೆಳಗ್ಗೆಯಿಂದ ನ್ಯೂಸ್ ವೈರಲ್ ಆಗುತ್ತಿದೆ. ಹೀಗಾಗಿ ಈಗಲೇ ಮದುವೆ ದಿನಾಂಕ ಕೂಡ ಘೋಷಣೆ ಮಾಡುತ್ತೇವೆ. ಕಳೆದ 15 ವರ್ಷಗಳಿಂದಲೂ ಇಬ್ಬರ ನಡುವೆ ಒಳ್ಳೆಯ ಸಂಬಂಧ ಇದೆ. ನಡಿಗರ್ ಸಂಘದ ಕಟ್ಟಡ ಆ.15ರಂದು ಉದ್ಘಾಟನೆ ಮಾಡಲು ಪ್ಲ್ಯಾನ್ ಮಾಡಿದ್ದೇವೆ. ಬಳಿಕ ಆಗಸ್ಟ್ 29ರಂದು ಇಬ್ಬರು ಹೊಸ ಜೀವನಕ್ಕೆ ಕಾಲಿಡಲಿದ್ದೇವೆ ಎಂದು ಹೇಳಿದ್ದಾರೆ.

    ಆಗಸ್ಟ್‌ 29ರಂದು ವಿಶಾಲ್ ಅವರ ಹುಟ್ಟುಹಬ್ಬ. ಅದೇ ದಿನ ವಿವಾಹ ನಿಶ್ಚಯ ಮಾಡಲಾಗಿದೆ. ಈ ಸುದ್ದಿ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

  • ‘‌ಡ್ರ್ಯಾಗನ್’ ನಟನಿಗೆ ಹೆಚ್ಚಿದೆ ಬೇಡಿಕೆ- ಸಾಲು ಸಾಲು ಚಿತ್ರಗಳಲ್ಲಿ ನಟ

    ‘‌ಡ್ರ್ಯಾಗನ್’ ನಟನಿಗೆ ಹೆಚ್ಚಿದೆ ಬೇಡಿಕೆ- ಸಾಲು ಸಾಲು ಚಿತ್ರಗಳಲ್ಲಿ ನಟ

    ‘‌ಡ್ರ್ಯಾಗನ್’ ಸಿನಿಮಾ (Dragon) ಬಳಿಕ ಪ್ರದೀಪ್ ರಂಗನಾಥನ್‌ಗೆ (Pradeep Ranganathan) ಅದೃಷ್ಟ ಖುಲಾಯಿಸಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಅವರು ಬ್ಯುಸಿಯಾಗಿದ್ದಾರೆ. ‘‌ಡ್ರ್ಯಾಗನ್’ ಆಯ್ತು ಈಗ ‘ಡ್ಯೂಡ್’ ಸಿನಿಮಾ ಕಥೆ ಹೇಳಲು ಶುರು ಮಾಡಿದ್ದಾರೆ. ಇದನ್ನೂ ಓದಿ:ಬ್ರೇಕಪ್ ಬಳಿಕ ಮಹತ್ವದ ನಿರ್ಧಾರ ಕೈಗೊಂಡ ತಮನ್ನಾ ಭಾಟಿಯಾ

    ‘ಡ್ಯೂಡ್’ (Dude) ಎಂಬ ತಮಿಳಿನ ಸಿನಿಮಾದಲ್ಲಿ ಪ್ರದೀಪ್ ರಂಗನಾಥನ್ (Pradeep Ranganathan) ಪವರ್‌ಫುಲ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಪೋಸ್ಟರ್ ರಿಲೀಸ್ ಕೂಡ ಆಗಿದೆ. ತಾಳಿ ಹಿಡಿದು ರಗಡ್ ಲುಕ್‌ನಲ್ಲಿ ಪ್ರದೀಪ್ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾಗೆ ಮಲಯಾಳಂ ನಟಿ ಮಮಿತಾ ಬೈಜು ನಾಯಕಿಯಾಗಿದ್ದಾರೆ. ಇದನ್ನೂ ಓದಿ:‘ಆಂಧ್ರ ಕಿಂಗ್’ ಆದ ಉಪೇಂದ್ರ ಕಟೌಟ್ ಮುಂದೆ ರಾಮ್ ಪೋತಿನೇನಿ ಸಂಭ್ರಮ- ಟೀಸರ್ ಔಟ್

     

    View this post on Instagram

     

    A post shared by Keerthiswaran (@keerthiswarann)

    ಇದೊಂದು ಲವ್ ಸ್ಟೋರಿ ಸಿನಿಮಾ ಆಗಿದ್ದು, ಪ್ರದೀಪ್, ಮಮಿತಾ ಜೊತೆ ಶರತ್ ಕುಮಾರ್, ರೋಹಿಣಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪುಷ್ಪ 2 ನಿರ್ಮಿಸಿದ್ದ ಮೈತ್ರಿ ಮೂವಿ ಮೇಕರ್ಸ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಯುವ ನಿರ್ದೇಶಕ ಕೀರ್ತೀಶ್ವರನ್ ನಿರ್ದೇಶನ ಮಾಡುತ್ತಿದ್ದಾರೆ.

     

    View this post on Instagram

     

    A post shared by Mythri Movie Makers (@mythriofficial)

    ಈ ಸಿನಿಮಾ ಜೊತೆ ನಯನತಾರಾ ನಿರ್ಮಾಣದ ‘ಲವ್ ಇನ್ಶೂರೆನ್ಸ್ ಕಂಪನಿ’ ಚಿತ್ರದಲ್ಲಿ ಕೃತಿ ಶೆಟ್ಟಿಗೆ ನಾಯಕನಾಗಿ ಪ್ರದೀಪ್ ನಟಿಸಿದ್ದಾರೆ. ಇನ್ನೂ ಕೆಲವು ಸಿನಿಮಾಗಳ ಅಧಿಕೃತ ಘೋಷಣೆ ಆಗಬೇಕಿದೆ.

  • ತಮಿಳಿನತ್ತ ಕೋಮಲ್- ರಗಡ್ ಲುಕ್‌ನಲ್ಲಿ ಕನ್ನಡದ ನಟ

    ತಮಿಳಿನತ್ತ ಕೋಮಲ್- ರಗಡ್ ಲುಕ್‌ನಲ್ಲಿ ಕನ್ನಡದ ನಟ

    ನ್ನಡದ ನಟ ಕೋಮಲ್ (Komal) ಕಾಲಿವುಡ್‌ನತ್ತ (Kollywood) ಮುಖ ಮಾಡಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ವಿವಿಧ ಪಾತ್ರಗಳಲ್ಲಿ ರಂಜಿಸಿದ್ದ ಕೋಮಲ್ ಈಗ ತಮಿಳಿನಲ್ಲಿ ರಗಡ್ ಅವತಾರ ತಾಳಿದ್ದಾರೆ. ಈ ಮೂಲಕ ತಮಿಳಿನಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಇದನ್ನೂ ಓದಿ: ಕಾರ್ತಿಕ್ ಆರ್ಯನ್ ಜೊತೆ ಶ್ರೀಲೀಲಾ ಸೆಲ್ಫಿ- ಡೇಟಿಂಗ್ ಬಗ್ಗೆ ಹಿಂಟ್ ಕೊಟ್ರಾ ಈ ಜೋಡಿ?

    ಮೊದಲ ಬಾರಿಗೆ ತಮಿಳಿ ‘ರಾಜ್‌ಪುತ್ರನ್’ ಚಿತ್ರಕ್ಕೆ ಕೋಮಲ್ ಬಣ್ಣ ಹಚ್ಚಿದ್ದಾರೆ. ಬಾಯಲ್ಲಿ ಸಿಗಾರ್, ಶರ್ಟ್ ಮತ್ತು ಕಪ್ಪು ಲುಂಗಿ ಧರಿಸಿ ರಗಡ್ ಅವತಾರದಲ್ಲಿ ಮಿಂಚಿದ್ದಾರೆ. ನಟ ಕೋಮಲ್‌ರನ್ನು ಡಿಫರೆಂಟ್ ಗೆಟಪ್‌ನಲ್ಲಿ ತೋರಿಸಿದ್ದಾರೆ. ಚಿತ್ರದ ಟೀಸರ್ ರಿವೀಲ್ ಆಗಿದ್ದು. ಇದೇ ಮೇ 30ಕ್ಕೆ ಸಿನಿಮಾ ಬಿಡುಗಡೆಯಾಗಲಿದೆ. ಇದನ್ನೂ ಓದಿ:ತಡವಾಗಿ ಆಮೀರ್ ಖಾನ್ ಪ್ರಶಂಸೆ- ಈಗ ಎಚ್ಚರವಾದ್ರಾ ಎಂದು ಪ್ರಶ್ನಿಸಿದ ನೆಟ್ಟಿಗರು

    ಮಹಾ ಕಂಧನ್ ನಿರ್ದೇಶನದ ಮತ್ತು ಶಿವಾಜಿ ಪ್ರಭು ನಟನೆಯ ಈ ಸಿನಿಮಾದಲ್ಲಿ ಕೋಮಲ್‌ಗೆ ಇಂಟ್ರೆಸ್ಟಿಂಗ್ ಪಾತ್ರವೇ ಸಿಕ್ಕಿದೆ. ನಟನ ಮಹತ್ವ ನೀಡಲಾಗಿದೆ. ಸಿಗಾರ್ ಹಿಡಿದು ರಗಡ್ ಅವತಾರ ತಾಳಿರೋ ನಟನನ್ನು ನೋಡಿ ‘ಜೈಲರ್’ನಲ್ಲಿ ಶಿವಣ್ಣ ಲುಕ್‌ಗೆ ಫ್ಯಾನ್ಸ್ ಹೋಲಿಕೆ ಮಾಡಿದ್ದಾರೆ. ಕಾಲಿವುಡ್‌ನಲ್ಲಿ ಕೋಮಲ್ ಕ್ಲಿಕ್ ಆಗೋದು ಪಕ್ಕಾ ಅಂತ ಫ್ಯಾನ್ಸ್ ಭವಿಷ್ಯ ನುಡಿದಿದ್ದಾರೆ. ಆ ಮಟ್ಟಿಗೆ ಕೋಮಲ್ ನಟಿಸಿರುವ ಪಾತ್ರದ ಮೇಲೆ ಅಭಿಮಾನಿಗಳಿಗೆ ಭರವಸೆ ಮೂಡಿದೆ.

    ಕನ್ನಡದ ‘ಕೋಣ’ ಚಿತ್ರದಲ್ಲಿ ಕೋಮಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ‘ಬಿಗ್ ಬಾಸ್’ ಖ್ಯಾತಿಯ ತನಿಷಾ ಕುಪ್ಪಂಡ ನಿರ್ಮಾಣ ಮಾಡಿದ್ದಾರೆ. ಇದರಲ್ಲೂ ಚಿತ್ರಕಥೆ ಮತ್ತು ಪಾತ್ರ ವಿಭಿನ್ನವಾಗಿದೆ.

  • RRR ಚಿತ್ರದಂತೆ 3 ವರ್ಷ ಕಾಯಿಸಲ್ಲ: ‘ಕೂಲಿ’ ನಿರ್ದೇಶಕ ಲೋಕೇಶ್ ಕನಗರಾಜ್

    RRR ಚಿತ್ರದಂತೆ 3 ವರ್ಷ ಕಾಯಿಸಲ್ಲ: ‘ಕೂಲಿ’ ನಿರ್ದೇಶಕ ಲೋಕೇಶ್ ಕನಗರಾಜ್

    ಕಾಲಿವುಡ್‌ನ ಸಕ್ಸಸ್‌ಫುಲ್ ನಿರ್ದೇಶಕ ಲೋಕೇಶ್ ಕನಗರಾಜ್ (Lokesh Kanagaraj) ಪ್ರಸ್ತುತ ‘ಕೂಲಿ’ (Coolie) ಸಿನಿಮಾದಲ್ಲಿ ರಜನಿಕಾಂತ್‌ಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ನಡುವೆ ಅವರು ನೀಡಿರುವ ಹೇಳಿಕೆಯೊಂದು ವೈರಲ್ ಆಗ್ತಿದೆ. ‘ಆರ್‌ಆರ್‌ಆರ್’ (RRR) ಚಿತ್ರದಂತೆ 3 ವರ್ಷ ಕಾಯಿಸಲ್ಲ ಎಂದು ನಿರ್ದೇಶಕ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಇದನ್ನೂ ಓದಿ:‘ಡ್ರ್ಯಾಗನ್’ ಹೀರೋಗೆ ಜೊತೆಯಾದ ಕೃತಿ ಶೆಟ್ಟಿ- ಸಿನಿಮಾ ಬಗ್ಗೆ ಹೊರಬಿತ್ತು ಬಿಗ್ ಅಪ್‌ಡೇಟ್

    ಸಂದರ್ಶನವೊಂದರಲ್ಲಿ ನಿರ್ದೇಶಕ ಮಾತನಾಡಿ, ಕೂಲಿ ಸೇರಿದಂತೆ ಯಾವುದೇ ಸಿನಿಮಾ ಆಗಿದ್ರೂ ನಾನು 6ರಿಂದ 8 ತಿಂಗಳಲ್ಲಿ ಮುಗಿಸುತ್ತೇನೆ. ಕಲಾವಿದರು ನನ್ನ ಸಿನಿಮಾದಲ್ಲಿ ನಟಿಸುವ ಜೊತೆ ಬೇರೆಯೊಂದು ಪ್ರಾಜೆಕ್ಟ್‌ನಲ್ಲಿ ನಟಿಸುತ್ತಿದ್ರೆ, ನನ್ನ ಚಿತ್ರಕ್ಕೂ ತೊಂದರೆ ಆಗುತ್ತದೆ. ಹೀಗಾಗಿ ಕಲಾವಿದರು ನನ್ನ ಸಿನಿಮಾದಲ್ಲಿ ಪೂರ್ಣ ಪ್ರಮಾಣದಲ್ಲಿ ನಟಿಸಬೇಕು ಎಂದರು. ಇದನ್ನೂ ಓದಿ:‘ಬಿಗ್ ಬಾಸ್’ ಫ್ರೆಂಡ್ಸ್ ಜೊತೆ ಮೋಕ್ಷಿತಾ ಫಾರಿನ್ ಟ್ರಿಪ್

    ‘ಆರ್‌ಆರ್‌ಆರ್’ ಸಂಸ್ಥೆಯ ಚಿತ್ರದ ನಿರ್ಮಾಣ ಸಂಸ್ಥೆಯಂತೆ ನಾನು ಒಂದು ಚಿತ್ರವನ್ನು 3 ವರ್ಷಗಳವರೆಗೆ ಮಾಡಲ್ಲ, ನಟರನ್ನು ಕಾಯಿಸಲ್ಲ. ಕಲಾವಿದರು ಯಾರೇ ಆಗಿರಲಿ ಅವರಿಗೆ 3 ವರ್ಷಗಳು ಒಂದು ಚಿತ್ರಕ್ಕೆ ಸಮಯ ಮೀಸಲಿಡೋದು ಕಷ್ಟವಾಗುತ್ತದೆ. ನನ್ನ ಸಿನಿಮಾದಲ್ಲಿ ನಟಿಸುವ ಕಲಾವಿದರು ಆಯಾ ಸಮಯದಲ್ಲಿ ಅದೇ ಪಾತ್ರಗಳಲ್ಲಿ ಜೀವಿಸಬೇಕು ಎಂಬುದು ನನ್ನ ಅಭಿಪ್ರಾಯ ಎಂದಿದ್ದಾರೆ.

    ಸದ್ಯ ಲೋಕೇಶ್ ನೀಡಿರುವ ಈ ಹೇಳಿಕೆ ವೈರಲ್ ಆಗಿದೆ. ಸಂದರ್ಶನದಲ್ಲಿ ರಾಜಮೌಳಿ ಹೆಸರನ್ನು ಹೇಳದೇ ಲೋಕೇಶ್ ಟಾಂಗ್ ಕೊಟ್ರಾ ಎಂಬ ಮಾತುಗಳು ಚರ್ಚೆಗೆ ಗ್ರಾಸವಾಗಿದೆ.

    ಅಂದಹಾಗೆ, ತಲೈವಾ ನಟನೆಯ ‘ಕೂಲಿ’ ಚಿತ್ರ ಆಗಸ್ಟ್ 14ರಂದು ರಿಲೀಸ್ ಆಗ್ತಿದೆ. ತಲೈವಾ ಜೊತೆ ರಮ್ಯಾ ಕೃಷ್ಣ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಪೂಜಾ ಹೆಗ್ಡೆ ಚಿತ್ರದಲ್ಲಿ ಐಟಂ ಡ್ಯಾನ್ಸ್‌ಗೆ ಹೆಜ್ಜೆ ಹಾಕಿದ್ದಾರೆ.

  • ‘ಯುದ್ಧ ಬೇಡ’ ಎಂದು ಮನವಿ ಮಾಡಿದ ಐಶ್ವರ್ಯಾ ರಾಜೇಶ್- ನೆಟ್ಟಿಗರಿಂದ ತರಾಟೆ

    ‘ಯುದ್ಧ ಬೇಡ’ ಎಂದು ಮನವಿ ಮಾಡಿದ ಐಶ್ವರ್ಯಾ ರಾಜೇಶ್- ನೆಟ್ಟಿಗರಿಂದ ತರಾಟೆ

    ಭಾರತ-ಪಾಕ್ ನಡುವೆ ಯುದ್ಧ ಬೇಡ ಎಂದು ಸೋಷಿಯಲ್ ಮೀಡಿಯಾದಲ್ಲಿ ಸೌತ್ ನಟಿ ಐಶ್ವರ್ಯಾ ರಾಜೇಶ್ (Aishwarya Rajesh) ಮನವಿ ಮಾಡಿದ್ದಾರೆ. ಯುದ್ಧಕ್ಕೆ ನನ್ನ ಬೆಂಬಲವಿಲ್ಲ ಎಂದು ಪೋಸ್ಟ್ ಮಾಡಿರುವ ನಟಿಗೆ ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ:ಉರಿ, ದಂಗಲ್ ಸಿನಿಮಾಗಳ ಖ್ಯಾತ ಮೇಕಪ್ ಕಲಾವಿದ ವಿಕ್ರಮ್ ಗಾಯಕ್ವಾಡ್ ನಿಧನ

    ಯುದ್ಧ ಬೇಡ. ಈ ದೇಶದ ಪ್ರಜೆಯಾಗಿ ನಾನು ಭಾರತ ಮತ್ತು ಪಾಕಿಸ್ತಾನ ಸರ್ಕಾರಗಳನ್ನು ವಿನಂತಿಸುತ್ತೇನೆ. ಯುದ್ಧದ ಬದಲು ಶಾಂತಿಗೆ ಆದ್ಯತೆ ನೀಡಿ. ಜೀವಗಳನ್ನು ಕಳೆದುಕೊಳ್ಳಲು ಬಿಡಬೇಡಿ. ಸೈನಿಕರು, ಮುಗ್ಧ ನಾಗರಿಕರು ಸಾಯಬಾರದು. ನಾವು ಇದರ ಬಗ್ಗೆ ಜಾಗೃತಿ ಮೂಡಿಸಬೇಕು ಮತ್ತು ಮತ್ತೊಂದು ಯುದ್ಧ ತಡೆಯಲು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಐಶ್ವರ್ಯಾ ರಾಜೇಶ್ ಇನ್ಸಾ÷್ಟಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಅವರು ಹಂಚಿಕೊಂಡಿರುವ ಪೋಸ್ಟ್ ವಿವಾದವನ್ನು ಹುಟ್ಟು ಹಾಕಿದೆ. ಇದನ್ನೂ ಓದಿ:ಭಾರತೀಯ ಸೇನೆಗೆ ದೇಣಿಗೆ ಘೋಷಿಸಿದ ವಿಜಯ್ ದೇವರಕೊಂಡ – ಫ್ಯಾನ್ಸ್ ಮೆಚ್ಚುಗೆ

    ಕನ್ನಡದ ‘ಉತ್ತರಾಖಂಡ’ ಸಿನಿಮಾದಲ್ಲಿ ಶಿವಣ್ಣ, ಡಾಲಿ ಜೊತೆ ನಟಿಸುವ ಮೂಲಕ ತಮಿಳು ನಟಿ ಐಶ್ವರ್ಯಾ ರಾಜೇಶ್ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ.