ತಮ್ಮ ಹುಟ್ಟುಹಬ್ಬದ ದಿನವೇ ತಮಿಳು ನಟ ವಿಶಾಲ್ (Vishal) ಅಭಿಮಾನಿಗಳಿಗೆ ಸರ್‌ಪ್ರೈಸ್ ನ್ಯೂಸ್ ಕೊಟ್ಟಿದ್ದಾರೆ. ನಟಿ ಸಾಯಿ ಧನ್ಸಿಕಾ (Dhanshika) ಜೊತೆ ಚೆನ್ನೈನಲ್ಲಿ ನಡೆದ ಸರಳ ಸಮಾರಂಭದಲ್ಲಿ ನಿಶ್ಚಿತಾರ್ಥ (Engagement) ಮಾಡಿಕೊಂಡು ಫೋಟೋಸ್‌ಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ನಟ ವಿಶಾಲ್ ಹೆಸರು ಹಿಂದೆ ಹಲವು ನಟಿಯರ ಜೊತೆ ಥಳುಕು ಹಾಕಿಕೊಂಡಿದ್ದರೂ ಮದುವೆವರೆಗೆ ಬಂದಿರಲಿಲ್ಲ. ಇದೀಗ ತಮ್ಮ 48ನೇ ವಯಸ್ಸಿನಲ್ಲಿ ಧನ್ಸಿಕಾ ಜೊತೆ ವಿವಾಹಕ್ಕೆ ಸಜ್ಜಾಗಿದ್ದಾರೆ. ಉಂಗುರ ಬದಲಿಸಿಕೊಂಡು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಅಸಲಿಗೆ ಆಗಸ್ಟ್ 29ಕ್ಕೆ ವಿವಾಹವನ್ನೇ ಘೋಷಿಸಿದ್ದರು ವಿಶಾಲ್. ಹಿಂದೆ ಯೋಗಿಡಾ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ವಿಶಾಲ್ ಧನ್ಸಿಕಾ ಜೊತೆಗಿನ ಪ್ರೀತಿ ಖಚಿತಪಡಿಸಿ ಬಳಿಕ ಮದುವೆ ದಿನಾಂಕ ಘೋಷಿಸಿದ್ದರು. ಆದರೆ ಈ ದಿನ ಸಿನಿ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದೆ. ನಿಶ್ಚಿತಾರ್ಥ ಮಾಡಿಕೊಂಡಿದ್ದರೂ ಮದುವೆ ದಿನವನ್ನು ಜೋಡಿ ಪ್ರಕಟಿಸಿಲ್ಲ. ಇದನ್ನೂ ಓದಿ: ವಿಷ್ಣು ಸಮಾಧಿ ಇದ್ದ ಅಭಿಮಾನ್ ಸ್ಟುಡಿಯೋ ಮುಟ್ಟುಗೋಲು?

ವಿಶಾಲ್ ಇದುವರೆಗೂ 40ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕರಾಗಿ ಅಭಿನಯಿಸಿದ್ದಾರೆ. ಧನ್ಸಿಕಾ 15 ವರ್ಷಗಳಲ್ಲಿ 20ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕಲಾವಿದರ ಸಂಘ ನಾಡಿಗೇರ್ ಸಂಘದ ಜನರಲ್ ಕಾರ್ಯದರ್ಶಿಯಾಗಿರುವ ವಿಶಾಲ್ ಸಂಘದ ಕಟ್ಟಡ ಸಂಪೂರ್ಣವಾದ ಬಳಿಕ ಮದುವೆಯಾಗುವುದಾಗಿ ಘೋಷಿಸಿದ್ದರು.














ತಮಿಳು ನಟ ಮಾತಾಡಿರೋದರ ಬಗ್ಗೆ ತಪ್ಪು ಎಂದು ಎಲ್ಲೂ ಶಿವಣ್ಣ ಹೇಳುತ್ತಿಲ್ಲವಲ್ಲ ಎಂದು ಅಭಿಮಾನಿಗಳಲ್ಲಿ ಬೇಸರ ಮೂಡಿದೆ. ಇಷ್ಟೆಲ್ಲಾ ಆದ ಮೇಲೆಯೂ ಶಿವಣ್ಣ ಮೌನವಹಿಸಿರೋದ್ಯಾಕೆ? ಕಮಲ್ ಬಗ್ಗೆ ಕೇಳ್ತಿದ್ದಂತೆ ಕೈಮುಗಿದು ಹೋಗಿದ್ದು ಯಾಕೆ. ಹಾಗಾದ್ರೆ ಕಮಲ್ ಮಾಡಿದ್ದು ಸರಿ ಅಂತನಾ? ತಪ್ಪು ಅಂತನಾ ಎಂದೆಲ್ಲಾ ಪ್ರಶ್ನಿಸುತ್ತಿದ್ದಾರೆ. ಶಿವಣ್ಣ ಉತ್ತರದ ನಿರೀಕ್ಷೆಯಲ್ಲಿದ್ದ ಫ್ಯಾನ್ಸ್‌ಗೆ ನಿರಾಸೆ ಆಗಿದೆ.

ಕನ್ನಡಿಗರಿಗೆ ಕ್ಷಮೆಯಾಚಿಸಲು ಕಮಲ್ ಹಾಸನ್‌ಗೆ ಕೊಟ್ಟ ಗಡುವು ಮುಗಿದಿದೆ. ಕರ್ನಾಟಕದಲ್ಲಿ 100ಕ್ಕೂ ಹೆಚ್ಚು ಸ್ಕ್ರಿನ್‌ಗಳಲ್ಲಿ ರಿಲೀಸ್‌ಗೆ ರೆಡಿಯಿರುವ ‘ಥಗ್ ಲೈಫ್’ (Thug Life) ಚಿತ್ರ ಪ್ರದರ್ಶನ ಮಾಡದಂತೆ ಥಿಯೇಟರ್‌ಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಇತರ ಕನ್ನಡಪರ ಸಂಘಟನೆಗಳು ಎಚ್ಚರಿಕೆ ನೀಡಿವೆ. ಒಂದು ವೇಳೆ ಚಿತ್ರ ಪ್ರದರ್ಶನಕ್ಕೆ ಮುಂದಾದರೆ ಥಿಯೇಟರ್‌ಗೆ ಬೆಂಕಿ ಹಚ್ಚೋದಾಗಿ ಎಚ್ಚರಿಕೆ ನೀಡಿವೆ. ಇದನ್ನೂ ಓದಿ:
ಕಮಲ್ ನಟನೆ, ನಿರ್ಮಾಣದ ‘ಥಗ್ ಲೈಫ್’ ಚಿತ್ರದ ಹಂಚಿಕೆಯ ಹಕ್ಕನ್ನು ಪಡೆದಿದ್ದ ವೆಂಕಟೇಶ್ ಹಣ ವಾಪಸ್ ಕೊಡಲು ಮುಂದಾಗಿದ್ದಾರೆ. ರಿಲೀಸ್‌ಗೆ ಅಡ್ಡಿಯಾದ್ರೂ ಪರ್ವಾಗಿಲ್ಲ ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ ಎಂದ ಕಮಲ್ ಈಗಲಾದ್ರು ತಪ್ಪು ಅರಿತು ಕ್ಷಮೆಯಾಚಿಸುತ್ತಾರಾ ಎಂದು ಕಾದುನೋಡಬೇಕಿದೆ.
ಇಂದು (ಮೇ 30) ಚೆನ್ನೈನಲ್ಲಿ ಕಮಲ್ ಹಾಸನ್ ಮಾತನಾಡಿ, ಇದು ಪ್ರಜಾಪ್ರಭುತ್ವ. ನಾನು ಕಾನೂನು ಮತ್ತು ನ್ಯಾಯವನ್ನು ನಂಬುತ್ತೇನೆ. ಕರ್ನಾಟಕ, ಆಂಧ್ರಪ್ರದೇಶ ಮತ್ತು ಕೇರಳದ ಮೇಲಿನ ನನ್ನ ಪ್ರೀತಿ ನಿಜ. ನಾನು ತಪ್ಪು ಮಾಡಿಲ್ಲ, ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ನನ್ನಿಂದ ತಪ್ಪಾಗಿದ್ರೆ ಕ್ಷಮೆ ಕೇಳುವೆ, ನನ್ನಿಂದ ತಪ್ಪು ಆಗಿಲ್ಲ. ನನ್ನ ನಿರ್ಧಾರಕ್ಕೆ ಬದ್ಧವಾಗಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಕಲೆಗೆ ಜಾತಿ ಇಲ್ಲ. ಎಲ್ಲಾ ಭಾಷೆಯ ಕಲಾವಿದರು ಶಾರದಾಸುತರು ಒಪ್ಪುತ್ತೇವೆ. ಆ ನಿಟ್ಟಿನಲ್ಲಿ ಕಮಲ್ ಹಾಸನ್ (Kamal Haasan) ಅವರನ್ನು ಮೆಚ್ಚಿದ್ದೇವೆ. ಹಾಗಂತ ಕನ್ನಡ ತಮಿಳಿಂದ ಹುಟ್ಟಿದೆ ಎಂದ ಅವರ ಮಾತು ಒಪ್ಪಲ್ಲ. ಕನ್ನಡಕ್ಕೆ ಎರಡೂವರೆ ಸಾವಿರ ವರ್ಷದ ಇತಿಹಾಸವಿದೆ. ಅಷ್ಟೇಕೆ ಹನುಮದೇವರು ಕನ್ನಡ ಕಲಿಪುಂಗವ ಅವನ ಕಾಲ ರಾಮಾಯಣ ಇಷ್ಟು ಅರ್ಥವಾದರೆ ಸಾಕಲ್ಲವೆ ಸಾರ್ ಎಂದು ಜಗ್ಗೇಶ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.