Tag: kolluru mookambika

  • ಕೊಲ್ಲೂರು ಮೂಕಾಂಬಿಕೆಗೆ ವಿಶೇಷ ಪೂಜೆ ಅರ್ಪಿಸಿದ ಬಿಎಸ್‍ವೈ

    ಕೊಲ್ಲೂರು ಮೂಕಾಂಬಿಕೆಗೆ ವಿಶೇಷ ಪೂಜೆ ಅರ್ಪಿಸಿದ ಬಿಎಸ್‍ವೈ

    ಉಡುಪಿ: ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ (B.S Yediyurappa) ಅವರು ಕೊಲ್ಲೂರು ಮೂಕಾಂಬಿಕೆ (Kolluru Mookambike) ಗೆ ವಿಶೇಷ ಪೂಜೆ ಅರ್ಪಿಸಿದ್ದಾರೆ.

    ಕೊಲ್ಲೂರಿಗೆ ಇಂದು ಭೇಟಿ ನೀಡಿರುವ ಅವರು ಪ್ರಾಂಗಣದಲ್ಲಿ ನಡೆದ ಮೂಕಾಂಬಿಕಾ ದೇವಿಯ ಉತ್ಸವದಲ್ಲಿ ಭಾಗಿಯಾದರು. ನಂತರ ದೇವರಿಗೆ ವಿಶೇಷ ಪೂಜೆಯೊಂದನ್ನು ನೆರವೇರಿಸಿದರು.

    ಇದೇ ವೇಳೆ ಮಾಜಿ ಸಿಎಂಗೆ ಸಂಸದ ಬಿ ವೈ ರಾಘವೇಂದ್ರ, ಸಚಿವ ಗೋವಿಂದ ಕಾರಜೋಳ, ಶಾಸಕ ಸುಕುಮಾರಶೆಟ್ಟಿ ಹಾಗೂ ಕೆ ರಘುಪತಿ ಭಟ್ ಯಡಿಯೂರಪ್ಪ ಸಾಥ್ ನೀಡಿದರು. ಇದನ್ನೂ ಓದಿ: ಮಂಗಳೂರು, ಉಡುಪಿಯವರು ಶಿಸ್ತಿನ ಜನಗಳು: ಹಾಡಿಹೊಗಳಿದ ಬಿಎಸ್‍ವೈ

    ನಿನ್ನೆ ಕಾಪು ಜನಸಂಕಲ್ಪದಲ್ಲಿ ಮಾತನಾಡಿದ ಬಿಎಸ್‍ವೈ, ನರೇಂದ್ರ ಮೋದಿ (Narendra Modi) ಪ್ರಧಾನಿಯಾದ ನಂತರ ಅವಿಶ್ರಾಂತ ಆಡಳಿತ ನೀಡಿದ್ದಾರೆ. ಜಗತ್ತೇ ಮೆಚ್ವುವ ವ್ಯಕ್ತಿ ಪ್ರಧಾನಿ ಮೋದಿ. ಕಾರ್ಯಕರ್ತರು ಎಲ್ಲಾ ಚುನಣವಣೆ ಗೆಲ್ಲಿಸಿ ಬಹುಮತ ಸಾಬೀತು ಮಾಡಬೇಕು ಎಂದಿದ್ದರು.

    ಸಿಎಂ ಆಗುವ ಭ್ರಮೆಯಲ್ಲಿರುವ ಕಾಂಗ್ರೆಸ್ (Congress) ನಾಯಕರು ಆಸೆ ಬಿಡೋದು ಒಳ್ಳೆಯದು. ಬಿಜೆಪಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರುತ್ತೆ. ನಾನು ಚಾಮರಾಜ ನಗರದಿಂದ, ಬೊಮ್ಮಾಯಿ ಉತ್ತರ ಕನ್ನಡದಿಂದ ಪ್ರವಾಸ ಮಾಡುತ್ತಾರೆ. 140ಕ್ಕೂ ಹೆಚ್ವು ಸೀಟು ಗೆದ್ದು ಪ್ರಧಾನಿಗೆ ಗೌರವ ತಂದು ಕೊಡುತ್ತೇವೆ ಎಂದು ಹೇಳಿದ್ದರು.

    Live Tv
    [brid partner=56869869 player=32851 video=960834 autoplay=true]

  • ಪುಷ್ಪರಥದ ಬದಲು ಚಿನ್ನದ ರಥದಲ್ಲಿ ಮೂಕಾಂಬಿಕೆಯ ಉತ್ಸವ- ಕೆಲ ಅರ್ಚಕರು, ಭಕ್ತರಿಗೆ ಅಸಮಾಧಾನ

    ಪುಷ್ಪರಥದ ಬದಲು ಚಿನ್ನದ ರಥದಲ್ಲಿ ಮೂಕಾಂಬಿಕೆಯ ಉತ್ಸವ- ಕೆಲ ಅರ್ಚಕರು, ಭಕ್ತರಿಗೆ ಅಸಮಾಧಾನ

    ಉಡುಪಿ: ಕೊಲ್ಲೂರು ಮೂಕಾಂಬಿಕಾ ಸನ್ನಿಧಾನದಲ್ಲಿ ನವಮಿಯಂದು ನಡೆದ ಮಹಾರಥೋತ್ಸವ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ. ಪುಷ್ಪಾಲಂಕೃತ ಮರದ ರಥದ ಬದಲು ಚಿನ್ನದ ರಥವನ್ನು ಉತ್ಸವಕ್ಕೆ ಬಳಸಿದ್ದು ಇದಕ್ಕೆ ಕಾರಣ.

    ಕೊಲ್ಲೂರಲ್ಲಿ ನವಮಿಗೆ ಪ್ರತಿವರ್ಷ ಉತ್ಸವಮೂರ್ತಿಯನ್ನು ಮರದ ಪುಷ್ಪಾಲಂಕೃತ ರಥದಲ್ಲಿಟ್ಟು ದೇಗುಲದ ಪ್ರಾಂಗಣದಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಆದರೆ ಈ ಬಾರಿ ಚಿನ್ನದ ರಥದಲ್ಲಿಟ್ಟು ಮೂಕಾಂಬಿಕಾ ದೇವಿಯ ರಥೋತ್ಸವ ಮಾಡಲಾಗಿದೆ. ಇದು ಕೆಲ ಅರ್ಚಕರಿಗೆ ಅಸಮಾಧಾನ ತಂದಿದೆ. ಅಲ್ಲದೆ ಕೆಲ ಭಕ್ತರೂ ಇದಕ್ಕೆ ದನಿಗೂಡಿಸಿದ್ದಾರೆ.

    ಭಾರತದ ಶಕ್ತಿಪೀಠಗಳಲ್ಲಿ ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಕೂಡ ಒಂದು. ರಾಜ್ಯದ ಮೂಲೆ ಮೂಲೆಗಳಿಂದ ಹೊರರಾಜ್ಯಗಳಿಂದ ಇಲ್ಲಿಗೆ ಭಕ್ತರು ಬಂದು ದೇವಿಯ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಹರಕೆ ಹೊತ್ತು ಕೃತಾರ್ಥರಾದ ಲಕ್ಷಾಂತರ ಜನ ಇದ್ದಾರೆ. ನವರಾತ್ರಿಯ ಸಂದರ್ಭದಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಪೂರ್ತಿ ತಿಂಗಳು ಅನೇಕ ಕಾರ್ಯಕ್ರಮಗಳು ನಡೆಯುತ್ತದೆ.

    ನವಮಿಯಂದು ದೇಗುಲದ ಪ್ರಾಂಗಣದಲ್ಲಿ ಕೊಲ್ಲೂರು ಮೂಕಾಂಬಿಕೆಯ ಉತ್ಸವ ನಡೆಯುತ್ತದೆ. ಕಳೆದ ಇಷ್ಟೂ ವರ್ಷಗಳಲ್ಲಿ ದೇವಿಯನ್ನು ಹೂವಿನಿಂದ ಅಲಂಕರಿಸಿದ ಮರದ ರಥದಲ್ಲಿಟ್ಟು ಉತ್ಸವ ಮಾಡಲಾಗುತ್ತಿತ್ತು. ಈ ಬಾರಿ ಕೊರೊನಾ ಸಾಂಕ್ರಾಮಿಕದ ಕಾರಣ ದೇಗುಲದ ಅರ್ಚಕರು, ಸಿಬ್ಬಂದಿ ಆಸು-ಪಾಸಿನವರು ಮಾತ್ರ ರಥೋತ್ಸವದಲ್ಲಿ ಭಾಗಿಯಾಗಿದ್ದಾರೆ. ಈ ಬಾರಿ ಮರದ ರಥದ ಬದಲು ಚಿನ್ನದ ರಥದಲ್ಲಿ ದೇವಿಯನ್ನು ಉತ್ಸವ ಮಾಡಲಾಯಿತು. ಕೆಲ ಭಕ್ತರು ಅರ್ಚಕರಿಗೆ ಇದು ಸರಿ ಕಂಡಿಲ್ಲ.

    ಇದು ಸಂಪ್ರದಾಯಕ್ಕೆ ವಿರುದ್ಧ, ಶಿಷ್ಟಾಚಾರದ ಉಲ್ಲಂಘನೆಯಾಗಿದೆ ಎಂದು ತಗಾದೆ ತೆಗೆದಿದ್ದಾರೆ. ದೇಗುಲದ ಪ್ರಾಂಗಣದಲ್ಲಿ, ಆಡಳಿತಾಧಿಕಾರಿಯ ಕಚೇರಿಯ ಜಗಲಿಯಲ್ಲಿ ಕುಳಿತು ಗೊಣಗಾಟ ಶುರುಮಾಡಿದ್ದಾರೆ. ಹಲವಾರು ವರ್ಷಗಳಿಂದ ನಡೆದುಕೊಂಡು ಬಂದ ಸಂಪ್ರದಾಯವನ್ನು ಮುರಿಯಲಾಯ್ತು ಎಂದು ಮೂಗು ಮುರಿದಿದ್ದಾರೆ.

    ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಬೈಂದೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದೆ. ಹತ್ತು ವರ್ಷದ ಹಿಂದೆ ಬಿ.ಎಂ ಸುಕುಮಾರ್ ಶೆಟ್ಟಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾಗಿದ್ದರು. ಈ ಸಂದರ್ಭದಲ್ಲಿ ದೇವಸ್ಥಾನಕ್ಕೆ ಚಿನ್ನವನ್ನು ಸಮರ್ಪಿಸಲಾಗಿತ್ತು. ಬೈಂದೂರು ಕ್ಷೇತ್ರಕ್ಕೆ ಈಗ ಸುಕುಮಾರ್ ಶೆಟ್ಟಿ ಶಾಸಕರು. ಹೀಗಾಗಿ ಅಂದು ಸಮರ್ಪಿಸಲಾದ ಚಿನ್ನದ ರಥವನ್ನು ನವರಾತ್ರಿ ಉತ್ಸವಕ್ಕೆ ಬಳಸಿ ಎಂದು ಹೇಳಿದ್ದಾರಂತೆ. ಹೀಗಾಗಿ ಸಿದ್ಧವಾದ ಮರದ ರಥ ಪಕ್ಕಕ್ಕಿಟ್ಟು ಚಿನ್ನದ ರಥದಲ್ಲಿ ದೇವಿಯ ಮೆರವಣಿಗೆ ಆಗಿದೆ. ಈ ಬೆಳವಣಿಗೆ ಸದ್ಯ ಕೊಲ್ಲೂರಿನಲ್ಲಿ ಚರ್ಚೆಯ ವಿಷಯ.