Tag: Kolluru

  • ಜಲಪಾತ ವೀಕ್ಷಣೆಗೆ ತೆರಳಿದ್ದ ಯುವಕ ಸಾವು- ಮೊಬೈಲ್‍ನಲ್ಲಿ ಕೊನೇ ಕ್ಷಣ ಸೆರೆ

    ಜಲಪಾತ ವೀಕ್ಷಣೆಗೆ ತೆರಳಿದ್ದ ಯುವಕ ಸಾವು- ಮೊಬೈಲ್‍ನಲ್ಲಿ ಕೊನೇ ಕ್ಷಣ ಸೆರೆ

    ಉಡುಪಿ: ಜಲಪಾತ ವೀಕ್ಷಣೆಗೆ ತೆರಳಿದ್ದ ಯುವಕನೊಬ್ಬ ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು (Kolluru) ಬಳಿಯಿರುವ ಅರಶಿನಗುಂಡಿ ಜಲಪಾತದಲ್ಲಿ (Arishina Gundi Falls) ನಡೆದಿದೆ.

    ಭದ್ರಾವತಿ ಮೂಲದ ಶರತ್ ಕುಮಾರ್ (23) ಮೃತಪಟ್ಟ ಯುವಕ. ಈತ ಜಲಪಾತದಲ್ಲಿ ಬೀಳುತ್ತಿರುವ ದೃಶ್ಯ ಮತ್ತೋರ್ವ ಯುವಕನ ಮೊಬೈಲ್ ನಲ್ಲಿ ಸೆರೆಯಾಗಿದೆ.

    ಕೊಲ್ಲೂರಿಗೆ ಕಾರಿನಲ್ಲಿ ಬಂದಿದ್ದ ಯುವಕ, ಜಲಪಾತ ವೀಕ್ಷಣೆಗೆ ತೆರಳಿದ್ದಾನೆ. ಈ ವೇಳೆ ಆತ ಕಾಲು ಜಾರಿ ಬಿದ್ದಿದ್ದಾನೆ. ಯುವಕನ ಮೃತದೇಹದ ಪತ್ತೆಗೆ ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸುತ್ತಿದೆ. ಇದನ್ನೂ ಓದಿ: ದೋಣಿ ಮುಳುಗಿ 15 ಮಂದಿ ಸಾವು, ಹಲವರು ನಾಪತ್ತೆ

    ಘಟನಾ ಸ್ಥಳಕ್ಕೆ ಕೊಲ್ಲೂರು ಪಿ.ಎಸ್.ಐ ಜಯಲಕ್ಷ್ಮಿ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದಾರೆ. ಈ ಸಂಬಂಧ ಕೊಲ್ಲೂರು ಠಾಣೆಯಲ್ಲಿ ದಾಖಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೊಲ್ಲೂರು, ಕೋಟ, ಮಂದಾರ್ತಿಯಲ್ಲಿ ಆನ್‍ಲೈನ್ ಪೂಜೆಗೆ ಆಡಳಿತ ಮಂಡಳಿ ರೆಡಿ

    ಕೊಲ್ಲೂರು, ಕೋಟ, ಮಂದಾರ್ತಿಯಲ್ಲಿ ಆನ್‍ಲೈನ್ ಪೂಜೆಗೆ ಆಡಳಿತ ಮಂಡಳಿ ರೆಡಿ

    ಉಡುಪಿ: ರಾಜ್ಯ ಸರ್ಕಾರದ ಹೊಸ ನಿಯಮದ ಪ್ರಕಾರ ಉಡುಪಿ ಜಿಲ್ಲೆಯಲ್ಲಿ ಮೂರು ಕಡೆ ಆನ್‍ಲೈನ್ ಪೂಜೆಗೆ ಅವಕಾಶ ನೀಡಲಾಗಿದೆ. ಕೊಲ್ಲೂರಿನಲ್ಲಿ ಈಗಾಗಲೇ ಭಕ್ತರಿಗೆ ಅವಕಾಶವಿದ್ದು, ಕೋಟ ಅಮೃತೇಶ್ವರಿ ಮತ್ತು ಮಂದಾರ್ತಿ ಕ್ಷೇತ್ರ ಹೊಸ ಸೇರ್ಪಡೆಯಾಗಿದೆ.

    ರಾಜ್ಯಾದ್ಯಂತ ಮುಜರಾಯಿ ದೇವಸ್ಥಾನಗಳಲ್ಲಿ ಆನ್‍ಲೈನ್ ಪೂಜೆಗೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಮುಜರಾಯಿ ಇಲಾಖೆಯಿಂದ ಉಡುಪಿ ಜಿಲ್ಲೆಯೊಳಗೆ ಮೂರು ದೇವಸ್ಥಾನಗಳಿಗೆ ಅವಕಾಶವಾಗಿದೆ. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಈಗಾಗಲೇ ಭಕ್ತರಿಗೆ ಬುಕ್ ಮಾಡಿ ಪೂಜೆ ಮಾಡಿಸಿ, ಪೋಸ್ಟ್ ಮೂಲಕ ಪ್ರಸಾದ ಪಡೆಯುವ ಅವಕಾಶ ಇತ್ತು. ಇದೀಗ ಕೋಟ ಅಮೃತೇಶ್ವರಿ, ಮಂದಾರ್ತಿ ದುರ್ಗಾ ಪರಮೇಶ್ವರಿ ದೇಗುಲದಲ್ಲಿ ಈ ಅವಕಾಶ ಕಲ್ಪಿಸಲಾಗಿದೆ. ಕ್ಷೇತ್ರಕ್ಕೆ ಬರಲು ಸಾಧ್ಯವಾಗದವರು ಈ ಅವಕಾಶ ಪಡೆಯಬಹುದು.

    ಜೂನ್ 1 ರಿಂದ ನಮ್ಮಲ್ಲಿ ಆನ್‍ಲೈನ್ ಪೂಜೆ ಆರಂಭವಾಗಲಿದೆ ಎಂದು ಕೋಟ ಅಮೃತೇಶ್ವರಿ ದೇವಸ್ಥಾನ ಮಾಹಿತಿ ನೀಡಿದೆ. ಕೋಟ ಅಮೃತೇಶ್ವರಿ ದೇವರಿಗೆ ವಿಶೇಷ ಅಭಿಷೇಕ ಬೆಳಗ್ಗೆ ಸಂಪನ್ನವಾಗುತ್ತದೆ. ಅಲಂಕಾರ ಪೂಜೆ, ಮಂಗಳಾರತಿ ನಡೆಸಿ ಲಾಕ್ ಡೌನ್ ಸಂದರ್ಭದಲ್ಲಿ ಬಾಗಿಲು ಮುಚ್ಚುತ್ತಿದ್ದರು, ಜೂನ್ 1 ರಿಂದ ದೇವಸ್ಥಾನ ತೆರೆಯಲಿದ್ದು, ಭಕ್ತರಿಗೆ ದರ್ಶನ ಅವಕಾಶ ಸಿಗಲಿದೆ. ಇದನ್ನೂ ಓದಿ: ಆನ್‍ಲೈನ್‍ನಲ್ಲಿ ಮಾದಪ್ಪನ ದರ್ಶನ ಆರಂಭ

    ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಆನ್ ಲೈನ್ ಪೂಜೆಗೆ ಅವಕಾಶ ಆರಂಭವಾಗಿದೆ. ಭಕ್ತರು ಆನ್‍ಲೈನ್ ಮೂಲಕ ಪೂಜೆ ಬುಕ್ ಮಾಡಬಹುದು. ಸರ್ಕಾರದ ನಿಯಮದಂತೆ ಪೂಜೆ ನಡೆಸುತ್ತೇವೆ. ಜೂನ್ 1ರಿಂದ ಭಕ್ತರಿಗೆ ನೇರ ದರ್ಶನ ಅವಕಾಶವಿದೆ. ಸರ್ಕಾರದ ಸುತ್ತೋಲೆ ಈವರೆಗೆ ನಮ್ಮ ಕೈ ಸೇರಿಲ್ಲ. ದೇಗುಲ ತೆರವಿಗೆ ಎಲ್ಲಾ ಸ್ವಚ್ಛತೆ, ಸಿದ್ಧತೆ ಮಾಡುತ್ತೇವೆ ಎಂದು ಮಂದರ್ತಿ ದೇವಸ್ಥಾನ ಧರ್ಮದರ್ಶಿ ಧನಂಜಯ ಶೆಟ್ಟಿ ಮಾಹಿತಿ ನೀಡಿದ್ದಾರೆ.

  • ಕೊಲ್ಲೂರಿನಲ್ಲಿ ಸಚಿವ ಆರ್.ಅಶೋಕ್ ಚಂಡಿಕಾಹೋಮ

    ಕೊಲ್ಲೂರಿನಲ್ಲಿ ಸಚಿವ ಆರ್.ಅಶೋಕ್ ಚಂಡಿಕಾಹೋಮ

    ಉಡುಪಿ: ಕಂದಾಯ ಸಚಿವ ಆರ್.ಅಶೋಕ್ ಅವರು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ಪತ್ನಿ, ಪುತ್ರನ ಜೊತೆ ದೇವಸ್ಥಾನಕ್ಕೆ ಆಗಮಿಸಿದ ಸಚಿವ ಆರ.ಅಶೋಕ್ ದೇವಿ ಮೂಕಾಂಬಿಕೆಯ ದರ್ಶನ ಪಡೆದರು. ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಕೊಲ್ಲೂರು ದೇವಸ್ಥಾನದಲ್ಲಿ ವಿಶೇಷ ಚಂಡಿಕಾಹೋಮ ದಲ್ಲಿ ಭಾಗಿಯಾದರು.

    ಕಳೆದ ಎರಡು ದಿನಗಳಿಂದ ಆರ್.ಅಶೋಕ್ ಅವರು ಉಡುಪಿ ಜಿಲ್ಲಾ ಪ್ರವಾಸದಲ್ಲಿದ್ದಾರೆ. ಬುಧವಾರ ಕೃಷ್ಣಮಠಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸೇವೆ ನೆರವೇರಿಸಿದರು. ಪರ್ಯಾಯ ಪಲಿಮಾರು ಸ್ವಾಮೀಜಿಯನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು.

    ಚಂಡಿಕಾಹೋಮದ ಪೂರ್ಣಾಹುತಿಯಲ್ಲಿ ಪಾಲ್ಗೊಂಡ ಸಚಿವರ ಕುಟುಂಬಕ್ಕೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿ ಗೌರವಿಸಿದೆ. ಆರ್.ಅಶೊಕ್ ಭೇಟಿ ಹಿನ್ನೆಲೆಯಲ್ಲಿ ಸ್ಥಳೀಯ ಬಿಜೆಪಿ ನಾಯಕರು ದೇವಸ್ಥಾನಕ್ಕೆ ಭೇಟಿ ನೀಡಿದರು.

  • ಕೊಲ್ಲೂರಿನಲ್ಲಿ ರಕ್ಷಿತ್ ಶೆಟ್ಟಿ ಚಂಡಿಕಾ ಹೋಮ

    ಕೊಲ್ಲೂರಿನಲ್ಲಿ ರಕ್ಷಿತ್ ಶೆಟ್ಟಿ ಚಂಡಿಕಾ ಹೋಮ

    ಉಡುಪಿ: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಕುಟುಂಬಸ್ಥರು ಇಂದು ಕೊಲ್ಲೂರಿನ ಮೂಕಾಂಬಿಕಾ ದೇವಿಯ ಸನ್ನಧಿಯಲ್ಲಿ ಚಂಡಿಕಾ ಹೋಮ ನಡೆಸಿದರು.

    ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿರುವ ಮೂಕಾಂಬಿಕಾ ದೇವಿ ಸನ್ನಿಧಿಗೆ ಆಗಮಿಸಿದ ರಕ್ಷಿತ್ ಶೆಟ್ಟಿ, ತಂದೆ-ತಾಯಿ, ಸಹೋದರ ವಿಶೇಷ ಪೂಜೆ ಮತ್ತು ಹೋಮದಲ್ಲಿ ಭಾಗಿಯಾಗಿದರು. ಕುಟುಂಬದ ಶ್ರೇಯೋಭಿವೃದ್ಧಿಗಾಗಿ ಮತ್ತು ಮುಂದಿನ ಚಿತ್ರಕ್ಕೂ ಯಶಸ್ಸು ಸಿಗುವಂತೆ ತಾಯಿಯಲ್ಲಿ ರಕ್ಷಿತ್ ಪ್ರಾರ್ಥನೆ ಸಲ್ಲಿಸಿದರು.

    ಕಿರಿಕ್ ಪಾರ್ಟಿ ಸಿನಿಮಾ ಯಶಸ್ಸಿನ ಬಳಿಕ ರಕ್ಷಿತ್ ಶೆಟ್ಟಿ ವಿಭಿನ್ನ ಕಥಾ ಹಂದರವುಳ್ಳ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಟೀಸರ್ ಚಂದನವನದಲ್ಲಿ ಭರವಸೆ ಮೂಡಿಸಿದ್ದು, ಅಭಿಮಾನಿಗಳು ಸಿನಿಮಾಗಾಗಿ ಕಾಯುತ್ತಿದ್ದಾರೆ. ಕೆಜಿಎಫ್ ಚಿತ್ರದಂತೆ 1980ರ ದಶಕದ ಬ್ಯಾಕ್‍ಡ್ರಾಪ್ ನಲ್ಲಿ ಸಾಗುವ ಅವನೇ ಶ್ರೀಮನ್ನಾರಾಯಣ ಸಿನಿಮಾಗೆ ಸಾವಿರಾರು ಕಲಾವಿದರು ಸಾಥ್ ನೀಡಿದ್ದು, ಇಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ. ರಕ್ಷಿತ್ ಶೆಟ್ಟಿಯವರ ಹುಟ್ಟುಹಬ್ಬದಂದು ಚಿತ್ರದ ಎರಡನೇ ಟೀಸರ್ ರಿಲೀಸ್ ಆಗಿತ್ತು. ಟೀಸರ್ ನಲ್ಲಿಯ “ರಾಕ್ಷಸನ ಎದುರಿಸಬೇಕಾದರೆ, ಮೊದಲು ನಮ್ಮೊಳಗಿನ ರಾಕ್ಷಸನಿಂದ ಮುಕ್ತವಾಗಬೇಕು” ಡೈಲಾಗ್ ಅಭಿಮಾನಿಗಳಿಗೆ ಇಷ್ಟವಾಗಿತ್ತು.

  • ಕೊಲ್ಲೂರು ಪ್ರಸಾದ ಸ್ವೀಕರಿಸಿದ ಮೋದಿ, ಅಮಿತ್ ಶಾ

    ಕೊಲ್ಲೂರು ಪ್ರಸಾದ ಸ್ವೀಕರಿಸಿದ ಮೋದಿ, ಅಮಿತ್ ಶಾ

    ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಚಂಡಿಕಾ ಹೋಮ ಮಾಡಿ ಪ್ರಧಾನಿ ಮೋದಿಗೆ ಪ್ರಸಾದ ತಲುಪಿಸಲಾಗಿದೆ.

    ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕಾ ದೇವಿ ಸನ್ನಿಧಾನದಲ್ಲಿ ಅಗಸ್ಟ್ ತಿಂಗಳ ಮೊದಲ ವಾರದಲ್ಲಿ ನರಸಿಂಹ ಅಡಿಗರ ನೇತೃತ್ವದಲ್ಲಿ ಚಂಡಿಕಾ ಹೋಮ ನೆರವೇರಿಸಲಾಗಿತ್ತು. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಸರ್ಕಾರದ ಪರವಾಗಿ ಹೋಮ ಮಾಡಲು ಹೇಳಿಕೊಂಡಿದ್ದರು ಎಂದು ಅರ್ಚಕ ಅಡಿಗರು ಮಾಹಿತಿ ನೀಡಿದ್ದಾರೆ.

    ಕೊಲ್ಲೂರು ಮೂಕಾಂಬಿಕಾ ಸನ್ನಿಧಾನದ ಹಿರಿಯ ಅರ್ಚಕ ನರಸಿಂಹ ಅಡಿಗ ಚಂಡಿಕಾ ಹೋಮ ಮಾಡಿ, ದೇವಿಗೆ ವಿಶೇಷ ಪೂಜೆ ನೆರವೇರಿಸಿ ಪ್ರಸಾದವನ್ನು ದೆಹಲಿಗೆ ತೆಗೆದುಕೊಂಡು ಹೋಗಿದ್ದರು. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪ್ರಸಾದ ನೀಡಿದ್ದಾರೆ. ಈ ಸಂದರ್ಭದಲ್ಲಿ ಅಡಿಗರು ಅವರ ಜೊತೆ ಫೋಟೊವನ್ನು ಕ್ಲಿಕ್ಕಿಸಿಕೊಂಡಿದ್ದಾರೆ.

    ಈ ವಿಶೇಷ ಪೂಜೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿ ಗಮನಕ್ಕೆ ಬಂದಿಲ್ಲ. ಇದು ನರಸಿಂಹ ಅಡಿಗ ಅವರು ಮಾಡಿಸಿದ ವೈಯಕ್ತಿಕ ಪೂಜೆ. ಅವರೇ ಪೂಜೆ ಮಾಡಿಸಿ ಪ್ರಸಾದವನ್ನು ದೆಹಲಿಗೆ ತೆಗೆದುಕೊಂಡು ಹೋಗಿದ್ದಾರೆ. ಕಾಶ್ಮೀರದ ಬೆಳವಣಿಗೆ ಮತ್ತು ಇಲ್ಲಿ ನಡೆದ ಪೂಜೆಗೂ ಸಂಬಂಧವಿದೆಯೇ ಎಂಬ ಬಗ್ಗೆ ಮಾಹಿತಿಯಿಲ್ಲ ಎಂದು ದೇವಸ್ಥಾನದ ಅಧ್ಯಕ್ಷ ಹರೀಶ್ ಕುಮಾರ್ ಶೆಟ್ಟಿ ಮಾಹಿತಿ ನೀಡಿದ್ದಾರೆ.

  • ಮೋದಿ ಮತ್ತೆ ಪ್ರಧಾನಿಯಾಗ್ತಾರೆ- ಅಮೇರಿಕನ್ ಸಂಶೋಧಕ ಭವಿಷ್ಯ

    ಮೋದಿ ಮತ್ತೆ ಪ್ರಧಾನಿಯಾಗ್ತಾರೆ- ಅಮೇರಿಕನ್ ಸಂಶೋಧಕ ಭವಿಷ್ಯ

    ಉಡುಪಿ: ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗುತ್ತಾರೆ. ಮೋದಿ 2019 ರಲ್ಲಿ ಮತ್ತೆ ಅಧಿಕಾರ ಹಿಡಿಯುತ್ತಾರೆ ಅಂತ ಅಮೇರಿಕಾದ ಹಿಂದೂ ಧರ್ಮಗುರು, ಸಂಶೋಧಕ ಡೇವಿಡ್ ಫ್ರಾವ್ಲೇ ಹೇಳಿದ್ದಾರೆ.

    ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿಕೊಟ್ಟ ಸಂದರ್ಭ ಮಾಧ್ಯಮಗಳ ಜೊತೆ ಮಾತನಾಡಿದರು. ಪ್ರಧಾನಿ ಮೋದಿ ಭಾರತದ ಪುರಾತನ ಸಂಸ್ಕೃತಿ ಎತ್ತಿ ಹಿಡಿದಿದ್ದಾರೆ. ಮೋದಿ ಆಡಳಿತಾತ್ಮಕ ಮತ್ತು ಭಾರತೀಯ ನಾಗರೀಕತೆ ಪ್ರತಿಪಾದಕ ಎಂದ ಅವರು, ವಿಶ್ವದಲ್ಲಿ ಭಾರತದ ಧ್ವನಿಯನ್ನು ಮೋದಿ ಮೊಳಗಿಸಿದ್ದಾರೆ ಎಂದು ಸರ್ಟಿಫಿಕೇಟ್ ನೀಡಿದರು.

     

     

    ಪಟೇಲರು ದೇಶವ ಒಗ್ಗೂಡಿಸಿದರು:
    ಯೂನಿಟಿ ಆಫ್ ಸ್ಟ್ಯಾಚು ಬಗ್ಗೆ ವಿರೋಧಿಸುತ್ತಿರುವುದು ಸರಿಯಲ್ಲ. ಸರ್ದಾರ್ ವಲ್ಲಭ ಭಾಯ್ ಪಟೇಲರು ಭಾರತವನ್ನು ಒಗ್ಗೂಡಿಸಿದವರು. ದೇಶದಲ್ಲಿ ಅವರಿಗೆ ಪುತ್ಥಳಿ ಮೂಲಕ ದೊಡ್ಡ ಗೌರವ ಸಿಕ್ಕಿದೆ. ಇದಕ್ಕೆ ಯಾರಾದರೂ ವಿರೋಧ ಮಾಡುವುದರಲ್ಲಿ ಅರ್ಥವಿಲ್ಲ. ಮೋದಿ ಭಾರತದ ಸಾಮಥ್ರ್ಯ ವಿಶ್ವದ ಮುಂದೆ ಪ್ರದರ್ಶಿಸಿದ್ದಾರೆ. ಪುತ್ಥಳಿಗೆ ತಗಲಿರುವ ವೆಚ್ಚದ ಬಗ್ಗೆ ಲೆಕ್ಕ ಹಾಕುವುದಕ್ಕಿಂತ ಮುಂದೆ ಅದರಿಂದ ದೇಶಕ್ಕೆ ಸಿಗುವ ಗೌರವ, ಲಾಭದ ಬಗ್ಗೆ ಆಲೋಚಿಸಿ. ನರೇಂದ್ರ ಮೋದಿ ಒಂದು ಕುಟುಂಬ- ಪಕ್ಷವಾಗಿ ಉಳಿದಿಲ್ಲ ಎಂದರು.

    ಕಮ್ಯುನಿಸ್ಟ್ ಸರ್ಕಾರಕ್ಕೆ ದೇವರ ಮೇಲೆ ನಂಬಿಕೆಯಿಲ್ಲ:
    ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರ ಭಾರತದಲ್ಲಿ ಬಹಳ ಚರ್ಚೆಯಾಗುತ್ತಿದೆ. ಕೇರಳದಲ್ಲಿ ಕಮ್ಯೂನಿಸ್ಟ್ ಪಾರ್ಟಿ ಅಧಿಕಾರದಲ್ಲಿ ಇರುವುದರಿಂದ ಕಮ್ಯೂನಿಸ್ಟರಿಗೆ ಹಿಂದೂ ಧರ್ಮದ ಬಗ್ಗೆ ಗೊತ್ತಿಲ್ಲ. ಆತ್ಮ, ಈಶ್ವರ- ಭಗವಂತನ ಮೇಲೆ ಅವರಿಗೆ ನಂಬಿಕೆಯಿಲ್ಲ. ಹಿಂದೂ ದೇವಸ್ಥಾನದ ಆದಾಯ ಅಲ್ಲಿನ ಸರಕಾರಕ್ಕೆ ಬೇಕು. ಅಲ್ಲಿನ ಸಂಪ್ರದಾಯ, ನಂಬಿಕೆ ಬೇಕಾಗಿಲ್ಲ. ದೇವಸ್ಥಾನದ ವಿಚಾರದಲ್ಲಿ ಕೇರಳ ಸರ್ಕಾರ ಮೂಗು ತೂರಿಸಬಾರದು. ಶಬರಿಮಲೆ ದೇವಸ್ಥಾನಕ್ಕೆ ಅದರದ್ದೇ ಆದ ಪದ್ಧತಿ ಇದೆ. ಅಯ್ಯಪ್ಪ ಭಕ್ತರ ನಂಬಿಕೆಗೆ ಸರಕಾರ ಬೆಲೆ ಕೊಡಬೇಕು ಕೊಲ್ಲೂರಿನಲ್ಲಿ ಡೇವಿಡ್ ಫ್ರಾವ್ಲೇ ಒತ್ತಾಯಿಸಿದರು.

    ವೇದ, ಜ್ಯೋತಿಷ್ಯ, ಆಯುರ್ವೇದ ವಿಚಾರದಲ್ಲಿ ಸಂಶೋಧಕನಾಗಿರುವ ಡೇವಿಡ್, ಭಾರತೀಯ ಸಂಸ್ಕೃತಿ ಬಗ್ಗೆ 30 ಪುಸ್ತಕ ಬರೆದಿದ್ದಾರೆ. ಅಮೇರಿಕಾದ ಪ್ರಜೆಯಾಗಿರುವ ಅವರು ಭಾರತವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿರುವುದಾಗಿ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೊಲ್ಲೂರಮ್ಮನ ಮೊರೆ ಹೋದ ಡಿಕೆಶಿ ಕುಟುಂಬ

    ಕೊಲ್ಲೂರಮ್ಮನ ಮೊರೆ ಹೋದ ಡಿಕೆಶಿ ಕುಟುಂಬ

    ಉಡುಪಿ: ಜಲಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿಕೆ ಶಿವಕುಮಾರ್ ಅವರು ಇಂದು ಕುಟುಂಬ ಸಮೇತರಾಗಿ ಜಿಲ್ಲೆಯ ಕೊಲ್ಲೂರು ಮೂಕಾಂಬಿಕಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ಹೌದು, ಸಿಬಿಐ ಹಾಗೂ ಇಡಿ ತನಿಖೆಯಿಂದ ಹೈರಾಣಾಗಿರುವ ಡಿಕೆ ಶಿವಕುಮಾರ್ ರವರು ಇಂದು ಕೊಲ್ಲೂರು ಮೂಕಾಂಬಿಕೆಗೆ ಶರಣಾಗಿದ್ದಾರೆ. ಪತ್ನಿ ಉಷಾ ಶಿವಕುಮಾರ್, ಮಗಳು ಐಶ್ವರ್ಯ ಜೊತೆ ಆಗಮಿಸಿದ ಅವರು, ದೇವಸ್ಥಾನದ ಪ್ರಾಂಗಣಕ್ಕೆ ಪ್ರವೇಶಿಸಿ ಗರುಡಗಂಬಕ್ಕೆ ಮೊದಲು ಪೂಜೆ ಸಲ್ಲಿಸಿದರು.

    ದೇವಸ್ಥಾನದೊಳಗೆ ತೆರಳಿದ ಡಿಕೆಶಿ ಕುಟುಂಬ ಮೂಕಾಂಬಿಕೆಗೆ ಅರ್ಚಕರು ಸಚಿವರ ಪರವಾಗಿ ವಿಶೇಷ ಪೂಜೆ, ಆರತಿ ಸೇವೆಯನ್ನು ಸಲ್ಲಿಕೆ ಮಾಡಿದರು. ಪೂಜೆಯ ವೇಳೆ ಭಕ್ತಿ ಪರವಶರಾಗಿದ್ದ ಡಿಕೆಶಿ ಬಂದಿರುವ ಸಂಕಷ್ಟಗಳೆಲ್ಲ ದೂರವಾಗಿ ನೆಮ್ಮದಿ ಪ್ರಾಪ್ತಿ ಮಾಡುವಂತೆ ಪ್ರಧಾನ ಅರ್ಚಕರಲ್ಲಿ ದೇವಿಗೆ ಆರತಿ ಮಾಡಿಸಿದ್ದಾರೆ. ಅರ್ಚಕರು ರಾಜಕೀಯವಾಗಿ ಶ್ರೇಯೋಭಿವೃದ್ಧಿಯಾಗಲಿ, ಸಂಕಟಗಳೆಲ್ಲಾ ನಿವಾರಣೆಯಾಗಲಿ ಅಂತ ಅರ್ಚನೆ ಮಾಡಿದ್ದಾರೆ.

    ದೇಗುಲ ಭೇಟಿಯ ನಂತರ ದೇವಸ್ಥಾನದ ಪ್ರಾಂಗಣದಲ್ಲಿದ್ದ ಎಲ್ಲಾ ಗುಡಿಗಳ ಬಳಿಗೆ ತೆರಳಿದ ಅವರು ವೀರಭದ್ರ, ದೇವಿ, ಗಣಪತಿ ಗುಡಿಗಳಿಗೆ ಅರ್ಚನೆ ಸಲ್ಲಿಸಿದರು. ದೇವಸ್ಥಾನ ಭೇಟಿಯ ನಂತರ ಬೈಂದೂರು ತಾಲೂಕಿನ ವರಾಹಿ ನೀರಾವರಿ ಯೋಜನೆ ಬಗ್ಗೆ ಅಧಿಕಾರಿಗಳ ಜೊತೆ ಸಭೆಗೆ ತೆರಳಿದರು. ಜಿಲ್ಲಾಮಟ್ಟದ ನಾಯಕರಿಗೆ ಮಾಹಿತಿ ನೀಡಿದ ಡಿಕೆಶಿಯವರು ತಮ್ಮ ಕುಟುಂಬದ ಸದಸ್ಯರು ಮಾತ್ರ ಜೊತೆಗಿರುವಂತೆ ನೋಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೊಲ್ಲೂರಿಗೆ ಮಲಯಾಳಂ ಸೂಪರ್ ಸ್ಟಾರ್- ಮೂಕಾಂಬಿಕೆಯ ದರ್ಶನ ಪಡೆದ ಮೋಹನ್ ಲಾಲ್

    ಕೊಲ್ಲೂರಿಗೆ ಮಲಯಾಳಂ ಸೂಪರ್ ಸ್ಟಾರ್- ಮೂಕಾಂಬಿಕೆಯ ದರ್ಶನ ಪಡೆದ ಮೋಹನ್ ಲಾಲ್

    ಉಡುಪಿ: ಮಲಯಾಳಂ ಸೂಪರ್ ಸ್ಟಾರ್, ನಿರ್ದೇಶಕ ಮೋಹನ್‍ಲಾಲ್ ಇಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

    ಉಡುಪಿ ಜಿಲ್ಲೆ ಕುಂದಾಪುರದ ಪ್ರಸಿದ್ಧ ಕ್ಷೇತ್ರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬೆಳಗ್ಗೆ ದೇವಸ್ಥಾನಕ್ಕೆ ಭೇಟಿಕೊಟ್ಟು ದೇವಿಯ ಸನ್ನಿಧಿಯಲ್ಲಿ ಕೆಲಕಾಲ ಧ್ಯಾನ ಮಾಡಿದರು. ದೇವಿಗೆ ಮುಂಜಾನೆ ನಡೆಯುವ ಮಹಾಮಂಗಳಾರತಿಯಲ್ಲಿ ಪಾಲ್ಗೊಂಡರು.

    ದೇವಸ್ಥಾನದ ಪ್ರಾಂಗಣದಲ್ಲಿ ಗಣಪತಿ, ವೀರಭದ್ರ ಗುಡಿಗಳಿಗೆ ಭೇಟಿ ಕೊಟ್ಟು ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನಕ್ಕೆ ಬಂದಿದ್ದ ಭಕ್ತರು ಮೋಹನ್ ಲಾಲ್ ಅವರ ಜೊತೆ ಫೋಟೋ ತೆಗೆಸಿಕೊಳ್ಳಲು, ವೀಡಿಯೋ ಮಾಡಲು ನೂರಾರು ಜನ ಮುಗಿಬಿದ್ದರು. ಇದನ್ನೂ ಓದಿ: ಸಾಮಾನ್ಯರಂತೆ ಸುಳ್ಯದ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಖ್ಯಾತ ಮಲೆಯಾಳಂ ನಟ ಮಮ್ಮುಟ್ಟಿ

    ಸುಬ್ರಹ್ಮಣ್ಯಕ್ಕೆ ಭೇಟಿ: ಇದೇ ತಿಂಗಳ 15ರಂದು ಇವರು ದಕ್ಷಿಣಕನ್ನಡ ಜಿಲ್ಲೆಯ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ನೀಡಿದ್ದರು. ನಟ ಮೋಹನ್ ಲಾಲ್ ಗುರುವಾರ ಮುಂಜಾನೆ ದೇವರ ದರ್ಶನ ಪಡೆದು ಬಳಿಕ ಕುಕ್ಕೆ ಸುಬ್ರಹ್ಮಣ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ಮಲಯಾಳಂ ಕಾಯಂಕುಳಂ ಕೊಚ್ಚುನ್ನಿ ಚಿತ್ರದ ಚಿತ್ರೀಕರಣ ಪುತ್ತೂರು ತಾಲೂಕಿನ ಕಡಬದ ಬಲ್ಯ ಹಾಗೂ ಪದವು ನಲ್ಲಿ ನಡೆಯುತ್ತಿತ್ತು. ಕೊಚ್ಚುನ್ನಿ ಸಿನಿಮಾದಲ್ಲಿ ಮೋಹನ್ ಲಾಲ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.

    ನಿವಿನ್ ಪೌಲ್, ಪ್ರಿಯಾ ಆನಂದ್ ಸೇರಿದಂತೆ ಇತರ ಸಹ ನಟರು ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನೊಂದೆಡೆ ಬಹುಕೋಟಿ ವೆಚ್ಚದ ಮಮ್ಮುಟ್ಟಿ ನಟನೆಯ ಮಾಮಾಂಗಂ ಚಿತ್ರದ ಚಿತ್ರೀಕರಣ ಕೂಡಾ ಕಡಬದ ಕೊಯಿಲ ಫಾರ್ಮ್‍ನಲ್ಲಿ ನಡೆದಿತ್ತು. ಎರಡೂ ಚಿತ್ರದ ನಟರಿಗೆ ಸುಬ್ರಹ್ಮಣ್ಯದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.

  • ಎರಡು ದಿನದ ಹಿಂದೆಯಷ್ಟೇ ಕೊಲ್ಲೂರಿಗೆ ಬಂದಿದ್ದ ಪೇದೆ ಆತ್ಮಹತ್ಯೆಗೆ ಶರಣು!

    ಎರಡು ದಿನದ ಹಿಂದೆಯಷ್ಟೇ ಕೊಲ್ಲೂರಿಗೆ ಬಂದಿದ್ದ ಪೇದೆ ಆತ್ಮಹತ್ಯೆಗೆ ಶರಣು!

    ಉಡುಪಿ: ಪೊಲೀಸ್ ಕಾನ್ಸ್ ಸ್ಟೇಬಲ್ ನೇಣಿಗೆ ಶರಣಾದ ಘಟನೆ ಉಡುಪಿ ಜಿಲ್ಲೆಯ ಕೊಲ್ಲೂರಿನ ಸೌಪರ್ಣಿಕ ಗೆಸ್ಟ್ ಹೌಸ್ ನಲ್ಲಿ ನಡೆದಿದಿರುವ ಬಗ್ಗೆ ಬೆಳಕಿಗೆ ಬಂದಿದೆ.

    27 ವರ್ಷದ ನಾಗರಾಜ್ ಆತ್ಮಹತ್ಯೆಗೆ ಶರಣಾಗಿರೋ ಪೇದೆಯಾಗಿದ್ದು, ಇವರು ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

    ನಾಗರಾಜ್ ಜೊತೆ ಕೋಣೆಯಲ್ಲಿ ತಂಗುತ್ತಿದ್ದ ಇನ್ನೋರ್ವ ಪೇದೆ ಸಂದೀಪ್ ಎಂಬವರು ಕೆಲಸ ನಿಮಿತ್ತ ಶನಿವಾರ ಗಂಗೊಳ್ಳಿಗೆ ತೆರಳಿ ರಾತ್ರಿ ಪಾಳಿಯ ಬಳಿಕ ಇಂದು ಬೆಳಿಗ್ಗೆ ಕೋಣೆಗೆ ಮರಳಿದಾಗ ನಾಗರಾಜ್ ಅವರ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದೆ.

    ನಾಗರಾಜ್ ಅವರು ಮೂರು ವರ್ಷಗಳಿಂದ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ದಾವಣಗೆರೆಯ ಮಲೆಬೆನ್ನೂರು ಮೂಲದ ನಾಗರಾಜ್ ಅವರು 2014ರಲ್ಲಿ ಪೊಲೀಸ್ ಪೇದೆಯಾಗಿದ್ದು, ಅವರು ಜೋಯ್ಡಾಗೆ ವರ್ಗಾವಣೆಗೊಂಡಿದ್ದರು ಎನ್ನಲಾಗಿದೆ. ಎರಡು ದಿನಗಳ ಹಿಂದೆ ಕೊಲ್ಲೂರಿಗೆ ಬಂದಿದ್ದ ಅವರು ಇದೀಗ ದಿಢೀರ್ ಆತ್ಮಹತ್ಯೆಗೆ ಶರಣಾಗಿರುವುದು ನಿಗೂಢವಾಗಿದೆ.

    ನಾಗರಾಜ್ ಅವರ ಮದುವೆ ನಿಗದಿಯಾಗಿತ್ತು ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ಸಿಕ್ಕಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

  • ಸಾಧನಾ ಸಮಾವೇಶಕ್ಕೆ ಕೊಲ್ಲೂರಿನಿಂದ ಊಟ- ಆಡಳಿತ ಮಂಡಳಿ ವಿರುದ್ಧ ಡಿವಿಎಸ್ ಕಿಡಿ

    ಸಾಧನಾ ಸಮಾವೇಶಕ್ಕೆ ಕೊಲ್ಲೂರಿನಿಂದ ಊಟ- ಆಡಳಿತ ಮಂಡಳಿ ವಿರುದ್ಧ ಡಿವಿಎಸ್ ಕಿಡಿ

    ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿ ವಿರುದ್ಧ ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಕಿಡಿಕಾರಿದ್ದಾರೆ.

    ಈ ಬಗ್ಗೆ ಟ್ವಟ್ಟರ್ ನಲ್ಲಿ ಪ್ರತಿಕ್ರಿಯಿಸಿರೋ ಅವರು, ಭಕ್ತಾದಿಗಳು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಹುಂಡಿಗೆ ಹಾಕಿದ ಹಣದಿಂದ ಕಲ್ಲಡ್ಕದ ಶ್ರೀರಾಮ ವಿದ್ಯಾಲಯದ ಬಡ ಮಕ್ಕಳಿಗೆ ಬರುತ್ತಿದ್ದ ಮಧ್ಯಾಹ್ನದ ಬಿಸಿಯೂಟ ಕಿತ್ತುಕೊಂಡ ಕಾಂಗ್ರೆಸ್ ಸರ್ಕಾರ, ಅದೇ ದುಡ್ಡಲ್ಲಿ ರಾಜಕೀಯ ಕಾರ್ಯಕ್ರಮದ ಊಟಕ್ಕೆ ಉಪಯೋಗಿಸಿದ್ದು ವಿಪರ್ಯಾಸ. ಅದಕ್ಕೆ ಸಮರ್ಥನೆ ಬೇರೆ ಕೇಡು ಅಂತ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಅಂದು ಕಲ್ಲಡ್ಕ ಶಾಲೆ ಮಕ್ಕಳಿಗೆ ಬಿಸಿಯೂಟ ಕಟ್- ಈಗ ಕಾಂಗ್ರೆಸ್ ಸಮಾವೇಶಕ್ಕೆ ಕೊಲ್ಲೂರು ದೇಗುಲದ ಆಹಾರ, ಜನರ ಆಕ್ರೋಶ

    ಜಿಲ್ಲೆಯ ಬೈಂದೂರಿನಲ್ಲಿ ಸೋಮವಾರ ನಡೆದಿದ್ದ ಸಾಧನಾ ಸಮಾವೇಶಕ್ಕೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಿಂದ ಊಟದ ವ್ಯವಸ್ಥೆ ಮಾಡಲಾಗಿತ್ತು. ಇದಕ್ಕೆ ರಾಜ್ಯಾದ್ಯಂತ ಭಾರೀ ವಿವಾದ ವ್ಯಕ್ತವಾಗಿದ್ದು, ಈ ಸಂಬಂಧ ದೇವಸ್ಥಾನದ ಆಡಳಿತ ಮಂಡಳಿ ಸ್ಪಷ್ಟನೆ ನೀಡಿತ್ತು. ಇದನ್ನೂ ಓದಿ: ಊಟ ಎಲ್ಲಿಂದ ಬಂದ್ರೂ ಊಟನೇ ಅಲ್ವಾ: ಸಿಎಂ ಸಮರ್ಥನೆ

    ದೇವಸ್ಥಾನದ ಊಟವನ್ನು ಸಮಾವೇಶಕ್ಕೆ ನೀಡಬಹುದು. ಇದು ದೇವಸ್ಥಾನದ ಪ್ರಸಾದ. ಸರ್ಕಾರಿ ಕಾರ್ಯಕ್ರಮಕ್ಕೆ ನೀಡಲು ಅವಕಾಶ ಇದೆ. ಆದಾಗ್ಯೂ ಹೊರೆಯಾಗಬಾರದೆಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಎರಡು ದಿನದ ಹಿಂದೆಯೇ 1 ಲಕ್ಷ ರೂಪಾಯಿ ಚೆಕ್ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿತ್ತು. ಇದನ್ನೂ ಓದಿ: ಬೂಟಾಟಿಕೆಗೆ ಖಾವಿ ಹಾಕ್ತಾನೆ, ಯೋಗಿ ಯಾವತ್ತಾದ್ರೂ ಸಗಣಿ ಹೊತ್ತಿದ್ದಾನಾ: ಸಿಎಂ ಸಿದ್ದರಾಮಯ್ಯ