Tag: Kolle

  • ಬಿಗ್ ಬಾಸ್ ಸ್ಪರ್ಧಿ, ನಟಿ ಸೊನಾಲಿ ಪೋಗಟ್ ಕೊಲೆಗೆ ನೂರು ಕೋಟಿ ಆಸ್ತಿ ಕಾರಣವಾ?

    ಬಿಗ್ ಬಾಸ್ ಸ್ಪರ್ಧಿ, ನಟಿ ಸೊನಾಲಿ ಪೋಗಟ್ ಕೊಲೆಗೆ ನೂರು ಕೋಟಿ ಆಸ್ತಿ ಕಾರಣವಾ?

    ಗೋವಾದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ನಟಿ ಸೊನಾಲಿ ಪೋಗಟ್ ಕುರಿತಾಗಿ ದಿನಕ್ಕೊಂದು ಮಾಹಿತಿ ಹೊರ ಬರುತ್ತಿವೆ. ನೂರಾರು ಕೋಟಿ ಆಸ್ತಿಗಾಗಿ ಸ್ವತಃ ಸೊನಾಲಿ ಅವರ ಪಿಎ ಸುಧೀರ್ ಅನ್ನುವವರೇ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಸೊನಾಲಿ ಅವರದ್ದು ನೂರು ಕೋಟಿಗೂ ಅಧಿಕ ಆಸ್ತಿಯಿದ್ದು, ಅದನ್ನು ತನ್ನ ಹೆಸರಿಗೆ ನೋಂದಾಯಿಸಲು ಸುಧೀರ್ ಪ್ಲ್ಯಾನ್ ಮಾಡಿದ್ದ ಎಂದು ಹೇಳಲಾಗುತ್ತಿದ್ದು, ಈ ಕುರಿತಾದ ದಾಖಲೆಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರಂತೆ.

    ಸುಧೀರ್, ಸೊನಾಲಿ ಸೇರಿದಂತೆ ಹಲವರು ಗೋವಾಗೆ ಶೂಟಿಂಗ್ ನೆಪದಲ್ಲಿ ಬಂದಿದ್ದರು. ಆದರೆ, ರಾತ್ರಿ ಸೊನಾಲಿ ಅವರಿಗೆ ಕುಡಿಸಿ, ಅದರಲ್ಲಿ ಡ್ರಗ್ಸ್ ಕೂಡ ಬೆರೆಸಿದ್ದರು ಎಂದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ. ಸೊನಾಲಿ ಅತಿಯಾಗಿ ಡ್ರಗ್ಸ್ ಸೇವನೆ ಮಾಡಿದ್ದರಿಂದ, ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೂ, ಸೊನಾಲಿ ಉಳಿಯಲಿಲ್ಲ ಎಂದು ಹೇಳಲಾಗುತ್ತಿದೆ. ಸೊನಾಲಿಯನ್ನು ಕೊಲೆ ಮಾಡಲೆಂದೇ ಈ ರೀತಿ ಮಾಡಿದ್ದಾರೆ ಎನ್ನುವ ಆರೋಪ ಆಕೆಯ ಕುಟುಂಬದ್ದು. ಇದನ್ನೂ ಓದಿ:200 ಕೋಟಿ ರೂ. ಸುಲಿಗೆ ಪ್ರಕರಣದಲ್ಲಿ ನಟಿ ನೋರಾ ಫತೇಹಿ ವಿಚಾರಣೆ

    ಗೋವಾ ಪೊಲೀಸರು ಈಗಾಗಲೇ ಸೊನಾಲಿ ಅವರ ಗುರುಗಾಂವ್‌ಗೆ ಬಂದಿದ್ದು, ಮಹತ್ವದ ದಾಖಲೆಗಳನ್ನು ವಶ ಪಡಿಸಿಕೊಂಡಿದ್ದಾರಂತೆ. ಅಲ್ಲದೇ, ಸೊನಾಲಿ ಅವರಿಗೆ ಸೇರಿದ್ದು ಎನ್ನಲಾದ ಮೂರು ಡೈರಿಗಳು ಕೂಡ ಪತ್ತೆ ಆಗಿವೆಯಂತೆ. ಅವುಗಳು ಕೊಲೆಯ ರಹಸ್ಯ ಬೇಧಿಸಲು ಸಹಾಯಕ್ಕೆ ಬರುತ್ತಿವೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಆಸ್ತಿ ಕಬಳಿಸಲು ತನ್ನ ಸಿಬ್ಬಂದಿಯಿಂದಲೇ ಸೊನಾಲಿ ಕೊಲೆಯಾಗಿದ್ದಾರೆ ಎನ್ನುವುದು ಆಘಾತಕಾರಿ ವಿಷಯ.

    Live Tv
    [brid partner=56869869 player=32851 video=960834 autoplay=true]

  • ರೈಲ್ವೆ ಹಳಿ ಪಕ್ಕದಲ್ಲಿ ಮೃತದೇಹ ಪತ್ತೆ – ಕೊಲೆಯ ಶಂಕೆ

    ರೈಲ್ವೆ ಹಳಿ ಪಕ್ಕದಲ್ಲಿ ಮೃತದೇಹ ಪತ್ತೆ – ಕೊಲೆಯ ಶಂಕೆ

    ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ತಾಲೂಕಿನ ವೈ ಹುಣಸೇನಹಳ್ಳಿ ಬಳಿಯ ರೈಲ್ವೆ ಹಳಿ ಪಕ್ಕದಲ್ಲೇ ವ್ಯಕ್ತಿಯೊಬ್ಬನ ಮೃತದೇಹ ಪತ್ತೆಯಾಗಿದ್ದು, ಕೊಲೆಯ ಶಂಕೆ ವ್ಯಕ್ತವಾಗುತ್ತಿದೆ.

    ವೈ ಹುಣಸೇನಹಳ್ಳಿಯ ರೈಲ್ವೆ ನಿಲ್ದಾಣದ ಬಳಿಯ ತುಸು ದೂರದಲ್ಲೇ ಶವ ಪತ್ತೆಯಾಗಿದ್ದು, ಮೃತ ವ್ಯಕ್ತಿಯನ್ನ ನಾರಾಯಣದಾಸರಹಳ್ಳಿ ನಿವಾಸಿ ನರಸಿಂಹಮೂರ್ತಿ(40) ಎಂದು ಗುರುತಿಸಲಾಗಿದೆ. ಈತ ಸ್ಥಳೀಯ ಖಾಸಗಿ ಶಾಲೆಯ ವಾಹನ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಮೃತದೇಹದ ಬಳಿ ಮೊಬೈಲ್ ಫೋನ್ ಹಾಗೂ ಬೈಕ್ ಸಹ ಪತ್ತೆಯಾಗಿದೆ. ಇದನ್ನೂ ಓದಿ: ಗಲೀಜಾದ ಹಾಸಿಗೆಯಲ್ಲಿ ಮಲಗಲು ಹೇಳಿದ ಸಚಿವ – ಅವಮಾನದಿಂದ ರಾಜೀನಾಮೆ ಕೊಟ್ಟ ಉಪಕುಲಪತಿ 

    ಮೃತದೇಹದ ತಲೆ ಹಾಗೂ ಹೊಟ್ಟೆ ಭಾಗದಲ್ಲಿ ಗಂಭೀರತರನಾದ ಗಾಯಗಳಾಗಿದ್ದು, ಸಾಕಷ್ಟು ಅನುಮಾನಗಳನ್ನ ಮೂಡಿಸುತ್ತಿವೆ. ಯಾರೋ ಉದ್ದೇಶಪೂರ್ವಕವಾಗಿ ಕೊಲೆ ಮಾಡಿ ರೈಲಿನ ಹಳಿ ಮೇಲೆ ಎಸೆದಿರುವ ರೀತಿಯಲ್ಲಿ ಕುರುಹುಗಳು ಕಾಣುತ್ತಿದೆ.

    ಘಟನಾ ಸ್ಥಳಕ್ಕೆ ಶಿಡ್ಲಘಟ್ಟ ಸಿಪಿಐ ಧರ್ಮೇಗೌಡ ಹಾಗೂ ಗ್ರಾಮಾಂತರ ಠಾಣಾ ಪಿಎಸ್‍ಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಎಸ್‍ಪಿ ಡಿ.ಎಲ್.ನಾಗೇಶ್ ಸಹ ಭೇಟಿ ನೀಡಿದ್ದಾರೆ. ಈ ಸಂಬಂಧ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಗುಜರಾತಿಗಳು, ರಾಜಸ್ಥಾನಿಗಳು ಇಲ್ಲದೇ ಮಹಾರಾಷ್ಟ್ರಕ್ಕೆ ಹಣವಿಲ್ಲ: ವಿವಾದಕ್ಕೆ ಸಿಲುಕಿದ ರಾಜ್ಯಪಾಲರ ಹೇಳಿಕೆ 

    Live Tv
    [brid partner=56869869 player=32851 video=960834 autoplay=true]