Tag: kolkatta

  • ಕೋಲ್ಕತ್ತಾ ಮಾಲ್‌ನಲ್ಲಿ ಅಗ್ನಿ ಅವಘಡ – ಹಲವು ಮಂದಿ ಸಿಲುಕಿರುವ ಶಂಕೆ

    ಕೋಲ್ಕತ್ತಾ ಮಾಲ್‌ನಲ್ಲಿ ಅಗ್ನಿ ಅವಘಡ – ಹಲವು ಮಂದಿ ಸಿಲುಕಿರುವ ಶಂಕೆ

    ಕೋಲ್ಕತ್ತಾ: ಶುಕ್ರವಾರ ಕೋಲ್ಕತ್ತಾದ (Kolkatta) ಮಾಲ್‌ನಲ್ಲಿ ಭಾರೀ ಅಗ್ನಿ ಅವಘಡ (Massive Fire) ಸಂಭವಿಸಿದ್ದು ಹಲವು ಮಂದಿ ಒಳಗಡೆ ಸಿಲುಕಿದ್ದಾರೆ ಎಂದು ವರದಿಯಾಗಿದೆ.

    ಆಕ್ರೊಪೊಲಿಸ್ ಮಾಲ್‌ನಲ್ಲಿ (Acropolis Mall) ಬೆಂಕಿ ಕಾಣಿಸಿಕೊಂಡಿದ್ದು, 10 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಬಂದು ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸುತ್ತಿವೆ. ಇದನ್ನೂ ಓದಿ: ದರ್ಶನ್ ಇರೋ ಠಾಣೆಗೆ ಶಾಮಿಯಾನ ಹಾಕಿದ್ದರ ಹಿಂದಿನ ಸೀಕ್ರೆಟ್ ರಿವೀಲ್

    ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಮಾಲ್ ಒಳಗೆ ಇರುವ ಜನರನ್ನು ಸುರಕ್ಷಿತವಾಗಿ ಖಾಲಿ ಮಾಡಿಸುತ್ತಿದ್ದಾರೆ. ಬೆಂಕಿಗೆ ನಿಖರ ಕಾರಣ ಏನು ಎನ್ನುವುದು ತಿಳಿದು ಬಂದಿಲ್ಲ. ಇದನ್ನೂ ಓದಿ: ಕೋಳಿ ಎಸೆದಂತೆ ಎಸೆದು ಟ್ರಕ್‌ಗೆ ಗುದ್ದಿ, ಸಿಕ್ಕ ಸಿಕ್ಕ ವಸ್ತುಗಳಲ್ಲಿ ಹೊಡೆದು ಹತ್ಯೆ

    ಈ ವಾರ ಕೋಲ್ಕತ್ತಾದಲ್ಲಿ ಸಂಭವಿಸುತ್ತಿರುವ ಎರಡನೇ ಘಟನೆ ಇದಾಗಿದೆ. ಮಂಗಳವಾರ ಮುಂಜಾನೆ, ಕೋಲ್ಕತ್ತಾದ ಪಾರ್ಕ್ ಸ್ಟ್ರೀಟ್ ಪ್ರದೇಶದ ರೆಸ್ಟೋರೆಂಟ್‌ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿತ್ತು.

  • ಕನ್ಯಾಕುಮಾರಿಯಲ್ಲಿನ ಮೋದಿ ಧ್ಯಾನಕ್ಕೆ ದೀದಿ ಕಟು ಟೀಕೆ

    ಕನ್ಯಾಕುಮಾರಿಯಲ್ಲಿನ ಮೋದಿ ಧ್ಯಾನಕ್ಕೆ ದೀದಿ ಕಟು ಟೀಕೆ

    – ದೇವರಾಗಿದ್ರೆ ಯಾಕೆ ಧ್ಯಾನ ಮಾಡಬೇಕು?

    ಕೋಲ್ಕತ್ತಾ: ಜೂನ್ 4 ರ ಚುನಾವಣಾ ಫಲಿತಾಂಶಕ್ಕೂ (Loksabha Elections 2024) ಮುನ್ನ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಧ್ಯಾನ ಮಾಡಲು ತಮಿಳುನಾಡಿನ ಕನ್ಯಾಕುಮಾರಿಗೆ ಭೇಟಿ ನೀಡುವ ಕುರಿತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಕಟುವಾಗಿ ಟೀಕಿಸಿದ್ದಾರೆ.

    ಯಾರು ಬೇಕಾದರು ಹೋಗಿ ಧ್ಯಾನ ಮಾಡಬಹುದು. ಆದರೆ ಧ್ಯಾನ ಮಾಡುವಾಗ ಕ್ಯಾಮೆರಾ ತೆಗೆದುಕೊಂಡು ಹೋಗುತ್ತಾರೆಯೇ ಎಂದು ದೀದಿ ಪ್ರಶ್ನಿಸಿದ್ದಾರೆ. ಅಲ್ಲದೇ ಚುನಾವಣೆಗೆ 48 ಗಂಟೆಗಳ ಮೊದಲು ಎಸಿ ರೂಮಿನಲ್ಲಿ ಹೋಗಿ ಕೂರುತ್ತಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಚುನಾವಣೆ ಮುಗಿಯುತ್ತಿದ್ದಂತೆ 2 ದಿನ ಕನ್ಯಾಕುಮಾರಿಯಲ್ಲಿ ಧ್ಯಾನ ಮಾಡಲಿದ್ದಾರೆ ಮೋದಿ

    ಲೋಕಸಭಾ ಚುನಾವಣಾ ಪ್ರಚಾರದ ನಂತರ ಕನ್ಯಾಕುಮಾರಿಯಲ್ಲಿ ಸ್ವಾಮಿ ವಿವೇಕಾನಂದರಿಗೆ ಗೌರವಾರ್ಥವಾಗಿ ನಿರ್ಮಿಸಲಾದ ಸ್ಮಾರಕವಾದ ವಿವೇಕಾನಂದ ರಾಕ್ ಸ್ಮಾರಕದಲ್ಲಿ ಪ್ರಧಾನಿ ಮೋದಿ ಧ್ಯಾನ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಾನು ಕೂಡ ಕನ್ಯಾಕುಮಾರಿಗೆ ಭೇಟಿ ನೀಡುವ ಪ್ಲಾನ್‌ ಮಾಡಿದ್ದೆ. ಆದರೆ ಮೋದಿಯವರು ಅಲ್ಲಿಗೆ ಭೇಟಿ ನೀಡುವ ಕುರಿತು ತಿಳಿದುಕೊಂಡೆ ಎಂದರು.

    ಮೋದಿ ಭೇಟಿಯ ಕುರಿತು ಯಾಕೆ ಯಾರೂ ಬಾಯಿಬಿಡುತ್ತಿಲ್ಲ ಎಂದು ನನಗೆ ತಿಳಿದಿಲ್ಲ. ಸ್ವಾಮಿ ವಿವೇಕಾನಂದರು ಅಲ್ಲಿ ಧ್ಯಾನ ಮಾಡಿದ್ದರು. ಆದರೆ ಈಗ ಪ್ರಧಾನಿ ಅಲ್ಲಿಗೆ ಹೋಗಿ ಧ್ಯಾನ ಮಾಡುತ್ತಿದ್ದಾರೆ. ಇದು ನಿಜಕ್ಕೂ ನನಗೆ ತುಂಬಾ ಬೇಸರ ತಂದಿದೆ ಎಂದು ಬ್ಯಾನರ್ಜಿ ಹೇಳಿದರು.

    ಉದ್ದೇಶವೊಂದರ ಸಲುವಾಗಿ ಪರಮಾತ್ಮ ನನ್ನನ್ನು ಕಳುಹಿಸಿದ್ದಾನೆ ಎಂದು ಈ ಹಿಂದೆ ಮೋದಿ ಹೇಳಿದ್ದರು. ಈ ಹೇಳಿಕೆಗೂ ಬ್ಯಾನರ್ಜಿ ಪ್ರಧಾನಿಯವರನ್ನು ಗೇಲಿ ಮಾಡಿದರು. ಅವರು (ಮೋದಿ) ದೇವರಾಗಿದ್ದರೆ ಯಾಕೆ ಧ್ಯಾನ ಮಾಡಬೇಕು..?. ಇತರರು ಅವರಿಗಾಗಿ ಧ್ಯಾನ ಮಾಡಬೇಕಲ್ವ ಎಂದು ಹೇಳಿದರು.

    ಇದೇ ವೇಳೆ ಎಚ್ಚರಿಕೆ ನೀಡಿದ ಬ್ಯಾನರ್ಜಿ, ಕನ್ಯಾಕುಮಾರಿಯಲ್ಲಿ ಮೋದಿ ಅವರ ಧ್ಯಾನವನ್ನು ದೂರದರ್ಶನದಲ್ಲಿ ಪ್ರಸಾರ ಮಾಡಿದರೆ ಅದು ಮಾದರಿ ನೀತಿ ಸಂಹಿತೆ (MCC) ಉಲ್ಲಂಘನೆಯಾಗುತ್ತದೆ ಎಂದು ಆರೋಪಿಸಿ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಹೇಳಿದರು.

  • ಮಧ್ಯರಾತ್ರಿ ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸಿದ ರೆಮಲ್ ಸೈಕ್ಲೋನ್ – ರೈಲು, ವಿಮಾನ ಹಾರಾಟ ಸ್ಥಗಿತ

    ಮಧ್ಯರಾತ್ರಿ ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸಿದ ರೆಮಲ್ ಸೈಕ್ಲೋನ್ – ರೈಲು, ವಿಮಾನ ಹಾರಾಟ ಸ್ಥಗಿತ

    ಕೋಲ್ಕತ್ತಾ: ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶಗಳಲ್ಲಿ ರೆಮಲ್ ಚಂಡಮಾರುತದ (Cyclone Remal) ಎಫೆಕ್ಟ್‌ ಜೋರಾಗಿದೆ. ಮಧ್ಯರಾತ್ರಿ ಅಪ್ಪಳಿಸಿದ ಸೈಕ್ಲೋನ್‌ಗೆ ಅಲ್ಲಲ್ಲಿ ಭೂಕುಸಿತ ಉಂಟಾಗಿದೆ.

    ಈ ಅವಧಿಯಲ್ಲಿ ಸಮುದ್ರದಲ್ಲಿ ಚಂಡಮಾರುತದ ಗರಿಷ್ಠ ವೇಗ ಗಂಟೆಗೆ 135 ಕಿ.ಮೀ ಆಗಿದೆ. ಇದರ ಪರಿಣಾಮದಿಂದ ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಹಾನಿ ಸಂಭವಿಸಿದೆ. ಸೈಕ್ಲೋನಿಕ್ ಚಂಡಮಾರುತವು ಪಶ್ಚಿಮ ಬಂಗಾಳವನ್ನು ಪ್ರವೇಶಿಸಿದ ತಕ್ಷಣ, ಬಿರ್ಭುಮ್, ನಾಡಿಯಾ, ಪೂರ್ವ ಬರ್ಧಮಾನ್, ಬಂಕುರಾ, ಪೂರ್ವ ಮೇದಿನಿಪುರ, ಉತ್ತರ 24 ಪರಗಣಗಳು, ದಕ್ಷಿಣ 24 ಪರಗಣಗಳು, ಕೋಲ್ಕತ್ತಾ, ಬಿಧಾನನಗರದ ವಿವಿಧ ಪ್ರದೇಶಗಳಲ್ಲಿ ಭಾರೀ ಮಳೆ ಪ್ರಾರಂಭವಾಯಿತು. ಇದನ್ನೂ ಓದಿ: ಅತ್ತಿಗೆಯಿಂದ ದೂರ ಇರಿ ಅಂದಿದ್ದಕ್ಕೆ ಮೈದುನನ ಕಲ್ಲಿನಿಂದ ಜಜ್ಜಿ ಕೊಲೆಗೈದ್ರು!

    ಪಶ್ಚಿಮ ಬಂಗಾಳದ (West Bengal) ವಿವಿಧ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದೆ. ಭಾರೀ ಮಳೆ ಮತ್ತು ಗಾಳಿಯಿಂದಾಗಿ ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶಗಳಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಹಲವೆಡೆ ಜೋರು ಗಾಳಿಗೆ ಮರಗಳು ಧರೆಗುರುಳಿದ್ದು, ಎಲ್ಲೆಂದರಲ್ಲಿ ಬಿದ್ದಿವೆ. ಈ ಹಿನ್ನೆಲೆಯಲ್ಲಿ ರೈಲು, ವಿಮಾನ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಬಾಂಗ್ಲಾದೇಶ ಮತ್ತು ಪಕ್ಕದ ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶಗಳಲ್ಲಿ ಮುಂದಿನ ಕೆಲವು ಗಂಟೆಗಳ ಕಾಲ ಪರಿಸ್ಥಿತಿ ಹದಗೆಡುವ ಎಚ್ಚರಿಕೆಯನ್ನು ಐಎಂಡಿ ನೀಡಿದೆ.

    ರೆಮಲ್ ಚಂಡಮಾರುತದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೇಂದ್ರ ಏಜೆನ್ಸಿಗಳಿಗೆ ಯುದ್ಧೋಪಾದಿಯಲ್ಲಿ ಕೆಲಸ ಮಾಡುವಂತೆ ಸೂಚಿಸಿದ್ದಾರೆ. ಬಂಗಾಳದ ಗವರ್ನರ್ ಸಿವಿ ಆನಂದ್ ಬೋಸ್ ಕೂಡ ಈ ನಿಟ್ಟಿನಲ್ಲಿ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ.

  • ಬಾಂಗ್ಲಾ ಸಂಸದನ ಕೊಲೆಯ ಹಿಂದಿದೆ ಹನಿಟ್ರ್ಯಾಪ್‌ ಘಾಟು!

    ಬಾಂಗ್ಲಾ ಸಂಸದನ ಕೊಲೆಯ ಹಿಂದಿದೆ ಹನಿಟ್ರ್ಯಾಪ್‌ ಘಾಟು!

    – 5 ಕೋಟಿ ರೂ. ಗೆ ಸುಪಾರಿ ಕೊಟ್ಟಿದ್ದ ಯುಎಸ್‌ ಪ್ರಜೆ
    – ಹನಿಟ್ರ್ಯಾಪ್‌ಗೆ ಬಳಸಿದ್ದ ಯುವತಿ ಪೊಲೀಸ್‌ ವಶಕ್ಕೆ

    ಕೋಲ್ಕತ್ತಾ: ಬಾಂಗ್ಲಾದೇಶದ ಸಂಸದನ (Bangladesh MP) ಕೊಲೆ ಪ್ರಕರಣದ ಹಿಂದೆ ಇದೀಗ ಹನಿಟ್ರ್ಯಾಪ್‌ (Honey- trap) ವಿಚಾರವೊಂದು ಇದೀಗ ಬಯಲಾಗಿದೆ.

    ಕೋಲ್ಕತ್ತಾದಲ್ಲಿ ಹತ್ಯೆಯಾಗುವ ಮೊದಲು ಸಂಸದ ಅನ್ವರುಲ್ ಅಜೀಂ ಅನ್ವರ್ (Anwarul Azim Anwar) ಅವರನ್ನು ಹನಿ ಟ್ರ್ಯಾಪ್ ಮಾಡಲು ಬಳಸಿದ್ದ ಯುವತಿಯನ್ನು ಢಾಕಾದಲ್ಲಿ ಬಂಧಿಸಲಾಗಿದೆ. ಯುವತಿಯನ್ನು ಶಿಲಾಂತಿ ರಹಮಾನ್ ಎಂದು ಗುರುತಿಸಲಾಗಿದೆ. ಈಕೆ ಬಾಂಗ್ಲಾದೇಶಿ ಪ್ರಜೆ ಮತ್ತು ಪ್ರಮುಖ ಆರೋಪಿ ಅಖ್ತರುಜ್ಜಮಾನ್ ಶಾಹಿನ್ (Akhtaruzzaman Shahin) ಅವರ ಗೆಳತಿ ಎಂದು ಬಾಂಗ್ಲಾದೇಶದ ಪೊಲೀಸ್ ಮೂಲಗಳು ತಿಳಿಸಿವೆ.

    ಅಮೆರಿಕದ ಪ್ರಜೆಯಾಗಿರುವ ಅಖ್ತರುಜ್ಜಮಾನ್, ಅನ್ವರುಲ್ ಅಜೀಂ ಅನ್ವರ್ ಸ್ನೇಹಿತ. ಕೋಲ್ಕತ್ತಾದ ನ್ಯೂ ಟೌನ್ ಪ್ರದೇಶದಲ್ಲಿ ಅಖ್ತರುಜ್ಜಮಾನ್ ಅವರ ಬಾಡಿಗೆ ನಿವಾಸದಲ್ಲಿ ಸಂಸದರನ್ನು ಹತ್ಯೆ ಮಾಡಲಾಗಿದೆ. ಅನ್ವರುಲ್ ಹತ್ಯೆಯಾದಾಗ ಶಿಲಾಂತಿ (Shilanti)  ಕೋಲ್ಕತ್ತಾದಲ್ಲಿ ಇದ್ದಳು. ಮೇ 15 ರಂದು ಕೊಲೆಗಾರ ಅಮಾನುಲ್ಲಾ ಅಮನ್ ಜೊತೆಗೆ ಢಾಕಾಗೆ ಮರಳಿದಳು. ಅನ್ವರುಲ್ ನನ್ನು ಬಾಂಗ್ಲಾದೇಶದಿಂದ ಕೋಲ್ಕತ್ತಾಗೆ ಕರೆತರಲು ಶಿಲಾಂತಿಯನ್ನು ಅಖ್ತರುಜ್ಜಮಾನ್ ಹನಿ ಟ್ರ್ಯಾಪ್ ಆಗಿ ಬಳಸಿಕೊಂಡಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಕೊಲೆಗೆ ಕಾರಣ ಏನೆಂದು ಪೊಲೀಸರು ಇನ್ನೂ ಬಹಿರಂಗಪಡಿಸಿಲ್ಲ. ಆದರೆ ಹಣಕಾಸಿನ ವಿಚಾರಕ್ಕೆ ಕೊಲೆಯಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಕೃತ್ಯದಲ್ಲಿ ಭಾಗಿಯಾದವರಿಗೆ ಅಖ್ತರುಜ್ಜಮಾನ್ ಸುಮಾರು 5 ಕೋಟಿ ರೂ. ನೀಡಿದ್ದಾನೆ ಎನ್ನಲಾಗಿದೆ. ಇದನ್ನೂ ಓದಿ: ಕತ್ತು ಹಿಸುಕಿ, ಚರ್ಮ ಸುಲಿದು ಬಾಂಗ್ಲಾ ಸಂಸದನ ದೇಹವನ್ನು ಕತ್ತರಿಸಿ ಹಾಕಿದ್ರು!

    ಪಶ್ಚಿಮ ಬಂಗಾಳದ ಅಪರಾಧ ತನಿಖಾ ಇಲಾಖೆ (CID) ಮುಂಬೈನಿಂದ ಶಂಕಿತನನ್ನು ಬಂಧಿಸಿದ ಬಳಿಕ ಒಂದೊಂದೇ ವಿಚಾರಗಳು ಬೆಳಕಿಗೆ ಬರುತ್ತಿವೆ. ಶಂಕಿತ ಜಿಹಾದ್ ಹವ್ಲಾದಾರ್, ನ್ಯೂ ಟೌನ್ ಫ್ಲಾಟ್‌ನಲ್ಲಿ ಇತರ ನಾಲ್ವರು ಜೊತೆಗೂಡಿ ಬಾಂಗ್ಲಾದೇಶಿ ಸಂಸದನನ್ನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಅಲ್ಲದೇ ವಿಚಾರಣೆಯ ವೇಳೆ, ಅಖ್ತರುಜ್ಜಮಾನ್ ಆದೇಶದ ಮೇರೆಗೆ ಕೊಲೆ ನಡೆಸಲಾಗಿದೆ ಎಂದು ಹವ್ಲಾದರ್ ಬಾಯ್ಬಿಟ್ಟಿದ್ದನು.

    ಸಂಸದರನ್ನು ಬರ್ಬರವಾಗಿ ಕೊಲೆ ಮಾಡಿದ ಬಳಿಕ ದೇಹದಿಂದ ಚರ್ಮ ಮತ್ತು ಮಾಂಸವನ್ನು ಬೇರೆ ಬೇರೆಯಾಗಿ ಮಾಡಿ ಅದಕ್ಕೆ ಅರಶಿಣ ಹಾಕಿದ್ದಾರೆ. ಅಲ್ಲದೇ ಮೂಳೆಗಳನ್ನು ಸಣ್ಣ ಸುಣ್ಣ ತುಂಡುಗಳನ್ನಾಗಿ ಮಾಡಲಾಗಿದೆ. ನಂತರ ಅವುಗಳನ್ನು ಪ್ಲಾಸ್ಟಿಕ್‌ ಚೀಲಗಳಲ್ಲಿ ತುಂಬಿ ಕೋಲ್ಕತ್ತಾದ ವಿವಿಧ ಪ್ರದೇಶಗಳಲ್ಲಿ ಬಿಸಾಕಿದ್ದಾರೆ ಎಂದು ಸಿಐಡಿ ಮೂಲಗಳು ತಿಳಿಸಿವೆ.

    ವೃತ್ತಿಪರ ಕಟುಕ ಹವ್ಲಾದರ್ ಬಾಂಗ್ಲಾದೇಶದ ಖುಲ್ನಾ ಜಿಲ್ಲೆಯ ಬರಾಕ್‌ಪುರ ನಿವಾಸಿಯಾಗಿದ್ದು, ಕೆಲ ದಿನಗಳಿಂದ ಮುಂಬೈನಲ್ಲಿ ಅಕ್ರಮವಾಗಿ ನೆಲೆಸಿದ್ದಾನೆ. ಎರಡು ತಿಂಗಳ ಹಿಂದೆಯಷ್ಟೇ ಕೋಲ್ಕತ್ತಾಗೆ ಆಗಮಿಸಿದ್ದನು ಎಂದು ಸಿಐಡಿ ಮೂಲಗಳು ಹೇಳಿವೆ.

  • ಸಂದೇಶ್‌ಖಾಲಿ ಕೇಸಿಗೆ ಮತ್ತೆ ಬಿಗ್ ಟ್ವಿಸ್ಟ್- TMC ವಿರುದ್ಧ ದೂರಿದ್ದ ಮಹಿಳೆಯರು ಯೂಟರ್ನ್

    ಸಂದೇಶ್‌ಖಾಲಿ ಕೇಸಿಗೆ ಮತ್ತೆ ಬಿಗ್ ಟ್ವಿಸ್ಟ್- TMC ವಿರುದ್ಧ ದೂರಿದ್ದ ಮಹಿಳೆಯರು ಯೂಟರ್ನ್

    ಕೋಲ್ಕತ್ತಾ: ಪಶ್ಚಿಮ ಬಂಗಾಳದ (West Bengal) ಸಂದೇಶ್‍ಖಾಲಿಯಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ತಮ್ಮ ಮೇಲೆ ಟಿಎಂಸಿ (TMC) ಮುಖಂಡರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದ ಮೂವರು ಮಹಿಳೆಯರ ಪೈಕಿ ಇಬ್ಬರು ಯೂಟರ್ನ್ ತೆಗೆದುಕೊಂಡಿದ್ದಾರೆ.

    ತಮ್ಮ ಮೇಲೆ ಯಾವುದೇ ರೀತಿಯ ದೌರ್ಜನ್ಯಗಳು ನಡೆದಿಲ್ಲ. ಸ್ಥಳೀಯ ಬಿಜೆಪಿ ಕಾರ್ಯಕರ್ತರು ಬಲವಂತವಾಗಿ ಬಿಳಿ ಹಾಳೆ ಮೇಲೆ ಸಹಿ ಹಾಕಿಸಿಕೊಂಡಿದ್ದರು ಎಂದು ಮಹಿಳೆ ಆರೋಪ ಮಾಡಿದ್ದಾರೆ. ನಾನೆಂದಿಗೂ ರಾತ್ರಿ ಹೊತ್ತಲ್ಲಿ ಪಾರ್ಟಿ ಆಫೀಸ್‍ಗೆ ಹೋಗಿಲ್ಲ. ನನಗೆ ಲೈಂಗಿಕ ಕಿರುಕುಳವನ್ನು ಯಾರು ನೀಡಿಲ್ಲ ಎಂದಿದ್ದಾರೆ. ತಮ್ಮಿಂದ ತಪ್ಪಾಗಿದೆ ಎಂಬುದನ್ನು ಅರಿತು ಈಗ ಕೇಸ್ ವಾಪಸ್ ಪಡೆಯುತ್ತಿದ್ದೇನೆ. ಈ ವಿಚಾರ ತಿಳಿದ ಬಿಜೆಪಿಯ (BJP) ಕೆಲ ನಾಯಕರು ತಮ್ಮನ್ನು ಬೆದರಿಸುತ್ತಿದ್ದಾರೆ. ತಮಗೆ ರಕ್ಷಣೆ ಬೇಕು ಎಂದು ಕೋರಿ ಪೊಲೀಸರಿಗೆ ಮತ್ತೊಂದು ದೂರು ನೀಡಿದ್ದಾರೆ. ಇದನ್ನೂ ಓದಿ: ಇನ್‍ಸ್ಟಾಗ್ರಾಂನಲ್ಲಿ ಮತದಾನದ ಲೈವ್ – ಮರು ಮತದಾನಕ್ಕೆ ಚುನಾವಣಾ ಆಯೋಗ ಆದೇಶ

    ಇತ್ತ ಮಹಿಳೆಯರ ಈ ಆರೋಪವನ್ನು ಬಿಜೆಪಿ ತಳ್ಳಿಹಾಕಿದೆ. ಮಹಿಳೆಯರ ಯೂಟರ್ನ್ ಹೇಳಿಕೆಯನ್ನು ಖಂಡಿಸಿದೆ. ಇದರಲ್ಲಿ ಟಿಎಂಸಿ ಷಡ್ಯಂತ್ರವಿದೆ ಎಂದು ಬಿಜೆಪಿ ಕಿಡಿಕಾರಿದೆ. ಈ ಬೆನ್ನಲ್ಲೇ ಸಂದೇಶಖಲಿ ಪ್ರಕರಣ ಸಂಬಂಧ ಟಿಎಂಸಿ ಚುನಾವಣಾ ಆಯೋಗದ ಮೊರೆ ಹೋಗಿದೆ. ಇದು ಬಿಜೆಪಿ ರೂಪಿಸಿದ್ದ ಚುನಾವಣಾ ವ್ಯೂಹ, ಸುವೆಂದು ಸೇರಿ ಇತರರ ವಿರುದ್ಧ ಕ್ರಮ ತಗೋಬೇಕು ಎಂದು ಆಗ್ರಹಿಸಿದೆ.

  • ಸಿಂಹಗಳಿಗೆ ಸೀತಾ, ಅಕ್ಬರ್ ನಾಮಕರಣ ವಿವಾದ- ಅರಣ್ಯ ಇಲಾಖೆ ಹೇಳಿದ್ದೇನು?

    ಸಿಂಹಗಳಿಗೆ ಸೀತಾ, ಅಕ್ಬರ್ ನಾಮಕರಣ ವಿವಾದ- ಅರಣ್ಯ ಇಲಾಖೆ ಹೇಳಿದ್ದೇನು?

    ಕೋಲ್ಕತಾ: ಪಶ್ಚಿಮ ಬಂಗಾಳದ ಸಿಲಿಗುರಿಯ ಸಫಾರಿ ಪಾರ್ಕ್‌ ನಲ್ಲಿ ಸಿಂಹಗಳಿಗೆ ನಾಮಕರಣ ಮಾಡಿರುವುದು ಇದೀಗ ಭಾರೀ ವಿವಾದಕ್ಕೀಡಾಗಿದೆ. ಈ ಬೆನ್ನಲ್ಲೇ ಅರಣ್ಯ ಇಲಾಖೆ ಸ್ಪಷ್ಟನೆ ಕೂಡ ನೀಡಿದೆ.

    ಹೌದು. ಇತ್ತೀಚೆಗೆ ಸಫಾರಿ ಪಾರ್ಕ್‌ಗೆ ಒಡಿಶಾದಿಂದ ಒಂದು ಗಂಡು ಹಾಗೂ ಮತ್ತೊಂದು ಹೆಣ್ಣು ಸಿಂಹಗಳನ್ನು ತರಲಾಗಿತ್ತು. ಅವುಗಳಲ್ಲಿ ಹೆಣ್ಣು ಸಿಂಹಕ್ಕೆ ʼಸೀತಾʼ (Sita) ಮತ್ತು ʼಅಕ್ಬರ್‌ʼ (Akbar) ಎಂದು ನಾಮಕರಣ ಮಾಡಿರುವುದು ಬಯಲಾಗಿದೆ. ಈ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ವಿಶ್ವ ಹಿಂದೂ ಪರಿಷದ್‌ (VHP) ಮುಖಂಡರು ರೊಚ್ಚಿಗೆದ್ದಿದ್ದಾರೆ. ಇದನ್ನೂ ಓದಿ: ತಂಗಿಯ ನಿಶ್ಚಿತಾರ್ಥಕ್ಕೆ ಬಂದಿಲ್ಲವೆಂದು ಪತ್ನಿಗೇ ಚಾಕು ಇರಿದ!

    ಹೈಕೋರ್ಟ್‌ ಮೆಟ್ಟಿಲೇರಿದ ವಿಹೆಚ್‌ಪಿ: ಅರಣ್ಯಾಧಿಕಾರಿಗಳು ಹೆಣ್ಣು ಸಿಂಹಕ್ಕೆ ‘ಸೀತಾ’ ಹಾಗೂ ಗಂಡು ಸಿಂಹಕ್ಕೆ ‘ಅಕ್ಟ‌ರ್’ ಎಂದು ನಾಮಕರಣ ಮಾಡಿದ್ದಾರೆ. ಜೊತೆಗೆ ಅದನ್ನು ಸಫಾರಿ ವಲಯದಲ್ಲಿ ಒಂದೇ ಪ್ರದೇಶದೊಳಗೆ ಇರಿಸಿದ್ದಾರೆ. ಇದರಿಂದ ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ. ಕೂಡಲೇ ಪ್ರಾಣಿಗಳ ಹೆಸರು ಬದಲಿಸಬೇಕು. ಸಿಂಹಗಳನ್ನು ಬೇರೆ ಬೇರೆ ಕಡೆ ಇಡಬೇಕು ಎಂದು ಆಗ್ರಹಿಸಿ ವಿಹೆಚ್‌ಪಿ ನಾಯಕರು ಕೋಲ್ಕತ್ತಾ ಹೈಕೋರ್ಟ್ ಮೊರೆ ಹೋಗಿದ್ದಾರೆ. ಈ ಅರ್ಜಿ ಫೆ.20ರಂದು ವಿಚಾರಣೆಗೆ ಬರಲಿದೆ.

    ಅರಣ್ಯ ಇಲಾಖೆ ಸ್ಪಷ್ಟನೆ: ಸಿಂಹಗಳನ್ನು ಇತ್ತೀಚೆಗೆ ತ್ರಿಪುರಾದ ಸೆಪಹಿಜಾಲಾ ಝೂಲಾಜಿಕಲ್ ಪಾರ್ಕ್‌ನಿಂದ (Sepahijala Zoological Park in Tripura) ಸ್ಥಳಾಂತರಿಸಲಾಗಿದೆ ಮತ್ತು ಫೆಬ್ರವರಿ 13 ರಂದು ಸಫಾರಿ ಪಾರ್ಕ್‌ಗೆ ಬಂದ ನಂತರ ಮರುನಾಮಕರಣ ಮಾಡಲಾಗಿಲ್ಲ ಎಂದು ವಿವಾದದ ಕುರಿತು ಅರಣ್ಯ ಇಲಾಖೆ ಸ್ಪಷ್ಟನೆ ನೀಡಿದೆ.

  • ಪಾಪಿಗಳು ಹಾಜರಾದ ಫೈನಲ್ ಹೊರತುಪಡಿಸಿ ಎಲ್ಲಾ ಪಂದ್ಯಗಳನ್ನು ಟೀಂ ಇಂಡಿಯಾ ಗೆದ್ದಿದೆ: ಮಮತಾ ಕಿಡಿ

    ಪಾಪಿಗಳು ಹಾಜರಾದ ಫೈನಲ್ ಹೊರತುಪಡಿಸಿ ಎಲ್ಲಾ ಪಂದ್ಯಗಳನ್ನು ಟೀಂ ಇಂಡಿಯಾ ಗೆದ್ದಿದೆ: ಮಮತಾ ಕಿಡಿ

    ಕೋಲ್ಕತ್ತಾ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಬೆನ್ನಲ್ಲೇ ಇದೀಗ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯವರು (Mamta Banerjee) ಟೀಂ ಇಂಡಿಯಾ ವಿಶ್ವಕಪ್ ಸೋತಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಕಾರಣ ಎಂದು ಪರೋಕ್ಷವಾಗಿ ದೂರಿದ್ದಾರೆ.

    ಕೋಲ್ಕತ್ತಾ ನೇತಾಜಿ ಇಂಡೋರ್ ಕ್ರೀಡಂಗಣದಲ್ಲಿ ಟಿಎಂಸಿ (TMC) ಕಾರ್ಯಕರ್ತರ ಸಭೆಯಲ್ಲಿ ದೀದಿ ಮಾತನಾಡಿದರು. ಪಾಪಿಗಳು ಹಾಜರಾದ ಫೈನಲ್ ಪಂದ್ಯ ಉಳಿದ ಎಲ್ಲಾ ಪಂದ್ಯಗಳಲ್ಲಿಯೂ ಟೀಂ ಇಂಡಿಯಾ ಜಯಗಳಿಸಿದೆ. ವಿಶ್ವಕಪ್ 20203ರ (World Cup) ಫೈನಲ್ ಪಂದ್ಯವು ಕೋಲ್ಕತ್ತಾ ಅಥವಾ ಮುಂಬೈನಲ್ಲಿ ನಡೆಯುತ್ತಿದ್ದರೆ ಭಾರತ ಗೆಲುವು ಸಾಧಿಸುತ್ತಿತ್ತು ಎಂದು ಅವರು ತಿಳಿಸಿದರು.

    ಕೋಲ್ಕತ್ತಾದ ಈಡನ್ ಗಾರ್ಡನ್ ಅಥವಾ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ (Wankhede Stadium) ಫೈನಲ್ ಪಂದ್ಯ ನಡೆಯುತ್ತಿದ್ದರೆ ನಾವು ಗೆಲ್ಲುತ್ತಿದ್ದೆವು ಎಂದು ನಾನು ಈ ಸಂದರ್ಭದಲ್ಲಿ ಹೇಳಬಲ್ಲೆ. ಬಿಜೆಪಿಯವರು ಅವರಿಗೆ ಕೇಸರಿ ಜೆರ್ಸಿಯನ್ನು ನಿಡಿದ್ದಾರೆ ಎಂದು ಮಮತಾ ಇದೇ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಮೋದಿ ಅಪಶಕುನ, ಐರೆನ್ ಲೆಗ್- ವಿಶ್ವಕಪ್‌ನಲ್ಲಿ ಸೋತಿದ್ದಕ್ಕೆ ಪ್ರಧಾನಿಯನ್ನು ಹೀಯಾಳಿಸಿದ ರಾಗಾ

    ಭಾರತೀಯ ಕ್ರಿಕೆಟ್ (Team India) ಆಟಗಾರರು ಪಂದ್ಯದ ವೇಳೆ ಕೇಸರಿ ಜೆರ್ಸಿಗಳನ್ನು ಧರಿಸಲಿಲ್ಲ ಎಂದರು. ಆಟಗಾರರ ಜೆರ್ಸಿ ನೀಲಿ ಬಣ್ಣದ್ದಾಗಿದ್ದು, ಅಭ್ಯಾಸದ ಸಮಯದಲ್ಲಿ ಆರೆಂಜ್ ಜೆರ್ಸಿ ಧರಿಸುತ್ತಿದ್ದರು. ಎಲ್ಲಾ ಫೆಡರೇಶನ್‍ಗಳನ್ನು ರಾಜಕೀಯ ಪಕ್ಷಗಳು ವಶಪಡಿಸಿಕೊಂಡಿವೆ. ಕ್ರಿಕೆಟ್ ಹಾಗೂ ಕಬಡ್ಡಿಯಲ್ಲಿಯೂ ಕೇಸರಿ ಬಣ್ಣವನ್ನು ಬಳಸಲಾಗುತ್ತದೆ. ಕೇಸರಿ ಬಣ್ಣವು ತ್ಯಾಗಿಗಳ ಬಣ್ಣವಾಗಿತ್ತು, ಆದರೆ ನೀವು ಭೋಗಿಗಳು (ಲೌಕಿಕ ವ್ಯಕ್ತಿ) ಎಂದು ಕಿಡಿಕಾರಿದರು.

    ಈ ಹಿಂದೆ ಮಾತನಾಡಿದ್ದ ದೀದಿ, ಬಿಜೆಪಿ ಪಕ್ಷವು ಭಾರತೀಯ ಕ್ರಿಕೆಟ್ ತಂಡವನ್ನು ಒಳಗೊಂಡಂತೆ ದೇಶಾದ್ಯಂತ ವಿವಿಧ ಸಂಸ್ಥೆಗಳನ್ನು ಕೇಸರಿಕರಣಗೊಳಿಸಿದೆ ಎಂದು ಪ್ರತಿಪಾದಿಸಿದ್ದರು. ಈಗ ಎಲ್ಲವೂ ಕೇಸರಿ ಬಣ್ಣಕ್ಕೆ ತಿರುಗುತ್ತಿದೆ. ನಮ್ಮ ಭಾರತೀಯ ಆಟಗಾರರ ಬಗ್ಗೆ ನಮಗೆ ಹೆಮ್ಮೆ ಇದೆ ಮತ್ತು ಅವರು ವಿಶ್ವ ಚಾಂಪಿಯನ್ ಆಗುತ್ತಾರೆ ಎಂದು ನಾನು ನಂಬುತ್ತೇನೆ. ಆದರೆ ಅಭ್ಯಾಸ ಮಾಡುವಾಗ ಅವರ ಉಡುಗೆ ಕೂಡ ಕೇಸರಿ ಬಣ್ಣಕ್ಕೆ ತಿರುಗಿತು. ಅವರು ಮೊದಲು ನೀಲಿ ಬಣ್ಣವನ್ನು ಧರಿಸುತ್ತಿದ್ದರು ಎಂದು ಅವರು ಹೇಳಿದ್ದರು.

    ರಾಹುಲ್ ಗಾಂಧಿ ಹೇಳಿದ್ದೇನು..?: ರಾಜಸ್ಥಾನದ ಜಲೋರ್ ನಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡುತ್ತಾ, ಪ್ರಧಾನಿ ನರೇಂದ್ರ ಮೋದಿ (Narendra Modi) ಅಪಶಕುನ. ಅವರದ್ದು ಐರೆನ್ ಲೆಗ್. ಹೀಗಾಗಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಹೀನಾಯವಾಗಿ ಸೋತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೀಯಾಳಿಸಿದ್ದರು. ನಮ್ಮ ಹುಡುಗರು ಬಹುತೇಕ ವಿಶ್ವಕಪ್ ಗೆಲ್ಲುತ್ತಿದ್ದರು. ವಿಶ್ವಕಪ್ ಗೆಲ್ಲುವ ಹುಮ್ಮಸ್ಸಿನಲ್ಲಿಯೇ ಅಖಾಡಕ್ಕಿಳಿದಿದ್ದರು. ಆದರೆ ಕೆಟ್ಟ ಶಕುನವೊಂದು ಮೈದಾನ ಪ್ರವೇಶಿಸಿದ ಪರಿಣಾಮ ಕಪ್ ಕಳೆದುಕೊಳ್ಳುವಂತೆ ಮಾಡಿದೆ. ಅಲ್ಲದೇ ರಾಹುಲ್ ಗಾಂಧಿಯವರು ಜನರಿಂದಲೂ ಅಪಶುಕುನ ಎನ್ನುವ ಪದ ಹೇಳಿಸಿದ್ದರು.

  • ಟೀಂ ಇಂಡಿಯಾ ಪ್ರಾಕ್ಟೀಸ್ ಜೆರ್ಸಿ, ಮೆಟ್ರೋ ಸ್ಟೇಷನ್‍ಗೂ ಕೇಸರಿ ಬಣ್ಣ- ಕೇಂದ್ರದ ವಿರುದ್ಧ ದೀದಿ ವಾಗ್ದಾಳಿ

    ಟೀಂ ಇಂಡಿಯಾ ಪ್ರಾಕ್ಟೀಸ್ ಜೆರ್ಸಿ, ಮೆಟ್ರೋ ಸ್ಟೇಷನ್‍ಗೂ ಕೇಸರಿ ಬಣ್ಣ- ಕೇಂದ್ರದ ವಿರುದ್ಧ ದೀದಿ ವಾಗ್ದಾಳಿ

    ಕೋಲ್ಕತ್ತಾ: ಪಶ್ಚಿಮ ಬಂಗಾಳ (West Bengal) ಸಿಎಂ ಮಮತಾ ಬ್ಯಾನರ್ಜಿಯವರು (Mamata Banerjee) ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಟೀಂ ಇಂಡಿಯಾದ ಪ್ರ್ಯಾಕ್ಟೀಸ್ ಜೆರ್ಸಿಯಲ್ಲಿ ಇರುವ ಕೇಸರಿ ಬಣ್ಣವನ್ನು ಕಟುವಾಗಿ ವಿರೋಧಿಸಿದ್ದಾರೆ.

    ಪೊಸ್ತಾ ಬಝಾರ್‍ನಲ್ಲಿ ಜಗಧಾತ್ರಿ ಪೂಜಾದ ಉದ್ಘಾಟನೆ ವೇಳೆ ಮಾತನಾಡಿದ ಅವರು, ಟೀಂ ಇಂಡಿಯಾದ (Team India Jersy) ಅಭ್ಯಾಸ ಜೆರ್ಸಿಗಳಲ್ಲಿ ಕೇಸರಿ ಬಣ್ಣ ಅಲ್ಲದೇ ಮೆಟ್ರೋ ಸ್ಟೇಷನ್‍ಗಳ ಗೋಡೆಗಳಿಗೂ ಕೇಸರಿ ಬಣ್ಣವನ್ನು ಬಳಿಯಲಾಗುತ್ತಿದೆ. ಈ ಮೂಲಕ ಕೇಂದ್ರ ಸರ್ಕಾರವು ಹಲವು ಸಂಸ್ಥೆಗಳನ್ನು ಕೇಸರೀಕರಣಗೊಳಿಸುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

    ಈ ಹಿಂದೆ ಅವರು ನೀಲಿ ಬಣ್ಣದ ಜೆರ್ಸಿ ಧರಿಸುತ್ತಿದ್ದರು. ಆದರೆ ಇದೀಗ ಬಿಜೆಪಿಯವರು (BJP) ಇಡೀ ದೇಶಕ್ಕೆ ಕೇಸರಿ ಬಣ್ಣ ಬಳಿಯಲು ಪ್ರಯತ್ನಿಸುತ್ತಿದ್ದಾರೆ. ನಮ್ಮ ಭಾರತೀಯ ಆಟಗಾರರ ಮೇಲೆ ನಮಗೆ ಹೆಮ್ಮೆ, ಅಭಿಮಾನ ಹೊಂದಿದ್ದೇವೆ. ವಿಶ್ವಕಪ್ ನಲ್ಲಿ ಗೆಲ್ಲುತ್ತಾರೆಂದು ನಂಬುತ್ತೇನೆ. ಆದರೆ ನಮ್ಮ ಆಟಗಾರರು ಈಗ ಕೇಸರಿ ಬಣ್ಣದ ಜೆರ್ಸಿ ಹಾಕಿ ಆಡಬೇಕಿದೆ. ಇತ್ತ ಮೆಟ್ರೋ ಸ್ಟೇಷನ್‍ಗಳಿಗೂ ಕೇಸರಿ ಬಳಿಯಲಾಗಿದೆ. ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಬ್ಯಾನರ್ಜಿ ಅಸಮಾಧಾನ ಹೊರಹಾಕಿದ್ದಾರೆ.

    ಭಾರತ ದೇಶವು ಇಲ್ಲಿನ ಜನರಿಗೆ ಸೇರಿದ್ದಾಗಿದೆ ಹೊರತು ಕೇವಲ ಬಿಜೆಪಿಯವರಿಗೆ ಸೇರಿದ್ದಲ್ಲ. ಅಧಿಕಾರ ನಿಂತ ನೀರಲ್ಲ, ಬರುತ್ತದೆ ಹೋಗುತ್ತದೆ. ಆದರೆ ಇಂತಹದ್ದೆಲ್ಲಾ ಯಾವ ಕಾರಣಕ್ಕೂ ಫಲ ನೀಡುವುದಿಲ್ಲ ಎಂದು ದೀದಿ ಗುಡುಗಿದ್ದಾರೆ. ಇದನ್ನೂ ಓದಿ: ಸರಣಿ ಶ್ರೇಷ್ಠ ಪ್ರಶಸ್ತಿಗೆ 9 ಮಂದಿಯ ನಾಮನಿರ್ದೇಶನ – ಟೀಂ ಇಂಡಿಯಾದ ನಾಲ್ವರು ಆಯ್ಕೆ

  • 4 ಲಕ್ಷಕ್ಕೆ 21 ದಿನದ ಹೆಣ್ಣು ಶಿಶುವನ್ನು ಮಾರಿದ ತಾಯಿ!

    4 ಲಕ್ಷಕ್ಕೆ 21 ದಿನದ ಹೆಣ್ಣು ಶಿಶುವನ್ನು ಮಾರಿದ ತಾಯಿ!

    ಕೋಲ್ಕತ್ತಾ: ಇತ್ತೀಚಿನ ದಿನಗಳಲ್ಲಿ ಹಣಕ್ಕಾಗಿ ಜನ ಏನು ಮಾಡಲು ತಯಾರು ಇರುತ್ತಾರೆ. ಅಂತೆಯೇ ಇಲ್ಲೊಬ್ಬ ನಿರ್ದಯಿ ತಾಯಿ ತನ್ನ 21 ದಿನದ ಹೆಣ್ಣು ಮಗುವನ್ನು 4 ಲಕ್ಷಕ್ಕೆ ಮಾರಿದ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.

    ಮಹಿಳೆಯನ್ನು ರೂಪಾಲಿ ಮೊಂಡಲ್ ಎಂದು ಗುರುತಿಸಲಾಗಿದೆ. ಈಕೆ ಇನ್ನೊಬ್ಬ ಮಹಿಳೆಗೆ 4 ಲಕ್ಷಕ್ಕೆ ತನ್ನ ಮಗಳನ್ನು ಮಾರಾಟ ಮಾಡಿದ್ದಾಳೆ. ರೂಪಾಲಿ ಮಗು ಮಾರಾಟ ಮಾಡಿದ ವಿಚಾರದ ಸಂಬಂಧ ಆನಂದಪುರ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿತ್ತು. ಈ ಸಂಬಂಧ ತನಿಖೆ ನಡೆಸಿದಾಗ ಸತ್ಯ ವಿಚಾರ ಬಯಲಿಗೆ ಬಂದಿದೆ.

    ತಮ್ಮ ಗಮನಕ್ಕೆ ಬರುತ್ತಿದ್ದಂತೆಯೇ ಪೊಲೀಸರು ರೂಪಾಲಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆಕೆ ಸ್ಪಷ್ಟ ಕಾರಣ ಕೊಡುವಲ್ಲಿ ಎಡವಿದ್ದಾಳೆ. ಈ ಹಿನ್ನೆಲೆಯಲ್ಲಿ ಆಕೆಯ ಮೇಲೆ ಅನುಮಾನಗೊಂಡ ಪೊಲೀಸರು ರೂಪಾಲಿಯನ್ನು ಬಂಧಿಸಿದ್ದಾರೆ. ಬಳಿಕ ತನಿಕೆಗೆ ಒಳಪಡಿಸಿದಾಗ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಈಕೆಯ ಜೊತೆ ರೂಪ ದಾಸ್ ಹಾಗೂ ಸ್ವಪ್ನಾ ಸರ್ದಾರ್ ಎಂಬ ಇನ್ನಿಬ್ಬರು ಮಹಿಳೆಯರನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಟೊಮೆಟೋ ಕಳ್ಳತನದ ವೇಳೆ ರೈತನ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕಳ್ಳ

    ರೂಪಾಲಿ ಅವರ ಪಕ್ಕದ ಮನೆಯವರಾದ ಪ್ರತಿಮಾ ಭುವಿನ್ಯಾ ಅವರ ದೂರಿನ ಆಧಾರದ ಮೇಲೆ ಈ ಪ್ರಕರಣ ದಾಖಲಾಗಿದೆ. ಆರೋಪಿಗಳ ಮೇಲೆ 317 (ಮಗುವನ್ನು ತ್ಯಜಿಸುವುದು), 370 (ಖರೀದಿ- ಮಾರಾಟ), 372 (ಅಪ್ರಾಪ್ತರ ಮಾರಾಟ) ಮತ್ತು 120 ಬಿ (ಕ್ರಿಮಿನಲ್ ಪಿತೂರಿ) ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    ಇಬ್ಬರೂ ಆರೋಪಿಗಳ ತೀವ್ರ ವಿಚಾರಣೆಯ ನಂತರ, ಅವರು ಮಿಡ್ನಾಪುರದ ಕಲ್ಯಾಣಿ ಗುಹಾ ಹೆಸರನ್ನು ಹೇಳಿದ್ದಾರೆ. ಹೀಗಾಗಿ ಪರ್ನಶ್ರ್ರೀ ಪೊಲೀಸ್ ಠಾಣೆಯ ಅಧಿಕಾರಿಗಳು ಗುಹಾನನ್ನು ಕೂಡ ಬಂಧಿಸಿದ್ದಾರೆ. ಇತ್ತ ಶಿಶುವನ್ನು ರಕ್ಷಣೆ ಮಾಡಿದ್ದು, ಶಿಶುಪಾಲನಾ ಘಟಕಕ್ಕೆ ಹಸ್ತಾಂತರಿಸಲಾಗಿದೆ. ಕಲ್ಯಾಣಿ ಗುಹಾಗೆ ಮದುವೆಯಾಗಿ 15 ವರ್ಷಗಳಾಗಿದ್ದು, ಮಕ್ಕಳಿಲ್ಲ. ಹೀಗಾಗಿ ಕಲ್ಯಾಣಿ ಮಗುವನ್ನು 4 ಲಕ್ಷ ಕೊಟ್ಟು ತೆಗೆದುಕೊಂಡಿದ್ದಾಳೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಟಿಎಂಸಿ ನಾಯಕನನ್ನು ಅರೆಸ್ಟ್ ಮಾಡುವಂತೆ ಮಮತಾ ಬ್ಯಾನರ್ಜಿ ಆದೇಶ

    ಟಿಎಂಸಿ ನಾಯಕನನ್ನು ಅರೆಸ್ಟ್ ಮಾಡುವಂತೆ ಮಮತಾ ಬ್ಯಾನರ್ಜಿ ಆದೇಶ

    ಕೊಲ್ಕತ್ತಾ: ಇತ್ತೀಚೆಗಷ್ಟೇ ಪಶ್ಚಿಮ ಬಂಗಾಳದ ಬೀರ್ಭುಮ್ ಗ್ರಾಮದಲ್ಲಿ ನಡೆದ ಹಿಂಸಾಚಾರವು ಇದೀಗ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ರಾಜ್ಯಪಾಲರೂ ಸೇರಿದಂತೆ ಪ್ರತಿಪಕ್ಷದ ನಾಯಕರು ಘಟನೆಯನ್ನೇ ಪ್ರಮುಖವಾಗಿಟ್ಟುಕೊಂಡು ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮಮತಾ ಬ್ಯಾನರ್ಜಿ ಅವರನ್ನು ಒತ್ತಾಯಿಸುತ್ತಿದ್ದಾರೆ.

    ಈ ನಡುವೆ ಬೀರ್ಭುಮ್ ಗ್ರಾಮಕ್ಕೆ ಭೇಟಿ ನೀಡಿರುವ ಮಮತಾ ಬ್ಯಾನರ್ಜಿ ಅವರು ಹಿಂಸಾಚಾರ ನಡೆದ ಸ್ಥಳವನ್ನು ಪರಿಶೀಲಿಸಿ ಕಟ್ಟಿನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ ಘಟನೆಯಲ್ಲಿ ಹಾನಿಗೊಳಗಾದ ಮನೆಗಳ ದುರಸ್ತಿಗೆ 2 ಲಕ್ಷ ರೂ. ಹಾಗೂ ಸಂತ್ರಸ್ತ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಸಂತ್ರಸ್ತ ಕುಟುಂಬಗಳಿಗೆ ಉದ್ಯೋಗಾವಕಾಶ ನೀಡುವ ಭರವಸೆಯನ್ನು ನೀಡಿದ್ದಾರೆ. ಸ್ಥಳದಲ್ಲಿ 10 ಕುಟುಂಬಗಳಿಗೆ ತಲಾ 1 ಲಕ್ಷ ರೂ. ಚೆಕ್ ವಿತರಣೆ ಮಾಡಿದಾರೆ. ಅಲ್ಲದೆ ಬೆಂಕಿ ಅನಾಹುತದಿಂದ ಗಾಯಗೊಂಡವರ ಚಿಕಿತ್ಸೆಗೆ 50 ಸಾವಿರ ರೂ., ತೀವ್ರ ಗಾಯಗೊಂಡವರಿಗೆ 1 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

    ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಸ್ಥಳೀಯರು ನೀಡಿದ ದೂರಿನ ಮೇರೆಗೆ ರಾಮ್‍ಪುರಹತ್ ಬ್ಲಾಕ್-1 ಅಧ್ಯಕ್ಷ ಅನಾರುಲ್ ಶೇಖ್ ಅವರನ್ನು ಬಂಧಿಸುವಂತೆ ಪೊಲೀಸರಿಗೆ ಆದೇಶ ನೀಡಿದ್ದಾರೆ. ಘಟನೆಯ ಬಗ್ಗೆ ಬಿಜೆಪಿ ಮುಖಂಡರು ಆರೋಪಿಸುತ್ತಿರುವುದು ಇಲ್ಲಿನ ರಾಜಕೀಯ ಹಿನ್ನಡೆ. ಹಿಂಸಾಚಾರ ಹಾಗೂ ಕಾನೂನು ಬಾಹೀರತೆಗೆ ಅವಕಾಶ ನೀಡಿದಂತಾಗುತ್ತಿದೆ. ಈ ಘಟನೆಯ ಹಿಂದೆ ದೊಡ್ಡ ಶಕ್ತಿಯಿದೆ ಎಂಬುದು ಇದರಿಂದ ಗೋಚರವಾಗುತ್ತದೆ ಎಂದು ಶಂಕಿಸಿದ್ದಾರೆ. ಇದನ್ನೂ ಓದಿ: ಪೆಟ್ರೋಲ್‌, ಡೀಸೆಲ್‌, ಎಲ್‌ಪಿಜಿ ಆಯ್ತು ಈಗ ಸಿಎನ್‌ಜಿ, ಪಿಎನ್‌ಜಿ ದರದಲ್ಲೂ ಏರಿಕೆ

    ಇದೇ ವೇಳೆ ಮಮತಾ ಬ್ಯಾನರ್ಜಿ ಅವರನ್ನು ಸುತ್ತುವರಿದಿದ್ದ ಗ್ರಾಮಸ್ಥರು, ನಮ್ಮ ದೂರುಗಳಿಗೆ ಪೊಲೀಸರು ನಿರ್ಲಕ್ಷ್ಯ ವಹಿಸುತ್ತಿರುವ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಘಟನೆಯ ಕುರಿತು ಮಾಹಿತಿ ನೀಡಿರುವ ಪೊಲೀಸರು, ಮಂಗಳವಾರ ಹಿಂಸಾಚಾರ ಘಟನೆ ನಡೆದಿದ್ದು, ಒಂದು ದಿನದ ನಂತರ ಸುಟ್ಟ ಮೃತದೇಹಗಳನ್ನು ಹೊರತೆಗೆಯಲಾಯಿತು. ಘಟನೆಯ ನಂತರ ಅನೇಕರು ಹಿಂಸಾಚಾರಕ್ಕೆ ಹೆದರಿ ಗ್ರಾಮ ತೊರೆದಿದ್ದಾರೆ. ಈ ಪ್ರಕರಣದಲ್ಲಿ ಟಿಎಂಸಿ ಮುಖಂಡನ ಹತ್ಯೆ ಹಾಗೂ ಗ್ರಾಮಸ್ಥರ ಹತ್ಯೆಗೆ ಸಂಬಂಧಿಸಿದಂತೆ ಎರಡು ಎಫ್‍ಐಆರ್ ಗಳನ್ನು ದಾಖಲಿಸಲಾಗಿದೆ. ಈಗಾಗಲೇ ಸುಮಾರು 20 ಜನರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಆರೋಪಿಗಳನ್ನು ನ್ಯಾಯಾಂಗಕ್ಕೆ ತರಲು ರಾಜ್ಯಕ್ಕೆ ಯಾವುದೇ ರೀತಿಯಲ್ಲಿ ಸಹಾಯ ಮಾಡಲು ನಮ್ಮ ಸರ್ಕಾರ ಸಿದ್ಧವಿದೆ. ಇಂತಹ ಘೋರ ಅಪರಾಧ ಎಸಗಿದವರಿಗೆ ರಾಜ್ಯ ಸರ್ಕಾರ ಕಠಿಣ ಶಿಕ್ಷೆ ವಿಧಿಸಲಿದೆ ಎಂದು ನಾನುಭಾವಿಸುತ್ತೇನೆ. ಇಂತಹ ಅಪರಾಧ, ಅಪರಾಧಿಗಳನ್ನು ಎಂದಿಗೂ ಕ್ಷಮಿಸಬೇಡಿ ಎಂದು ಒತ್ತಾಯಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮಮತಾ ಬ್ಯಾನರ್ಜಿ, ಇದು ಬಿಜೆಪಿ ನಮ್ಮ ಸರ್ಕಾರದ ಮಾನಹಾನಿಗಾಗಿ ಮಾಡಿರುವ ಪಿತೂರಿ. ಬಿರ್ಭೂಮ್ ಘಟನೆಗೆ ಕಾರಣರಾದ ಎಲ್ಲರ ವಿರುದ್ಧ ಅವರ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು. ಇದನ್ನೂ ಓದಿ: ವಿಸ್ತಾರವಾದ, ಪ್ರತ್ಯೇಕವಾದ ನಿಲ್ಲುವವರೆಗೂ ಮುಸ್ಲಿಮರಿಗೆ ಆರ್ಥಿಕ ಬಹಿಷ್ಕಾರ: ಮುತಾಲಿಕ್

    ಏನಿದು ಪ್ರಕರಣ?
    ಇಲ್ಲಿನ ಬಗುಟಿ ಗ್ರಾಮ ಪಂಚಾಯ್ತಿ ಮುಖಂಡ ಭಾದು ಶೇಖ್ ಅವರ ಮೇಲೆ ಸೋಮವಾರ ರಾತ್ರಿ ದಾಳಿ ನಡೆದಿತ್ತು. ರಾಷ್ಟ್ರೀಯ ಹೆದ್ದಾರಿ-60ರ ಅಂಗಡಿಯೊಂದರಲ್ಲಿ ಇರುವಾಗ ಶೇಖ್ ಅವರ ಮೇಲೆ ಬಾಂಬ್ ದಾಳಿ ನಡೆಸಲಾಗಿತ್ತು. ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಅವರು ಮೃತಪಟ್ಟಿದ್ದರು. ಮುಖಂಡನ ಸಾವಿನ ಸುದ್ದಿ ತಿಳಿದು ರೊಚ್ಚಿಗೆದ್ದ ಗುಂಪೊಂದು 10 ರಿಂದ 12 ಮನೆಗೆ ಬೆಂಕಿ ಹಚ್ಚಿದ್ದರು.

    ಇದರಿಂದಾಗಿ 8 ಮಂದಿ ಸಜೀವ ದಹನವಾಗಿದ್ದರು. ಇದರಲ್ಲಿ ಇಬ್ಬರು ಮಕ್ಕಳೂ ಸಹ ಇದ್ದರು ಎಂಬುದಾಗಿ ಬೀರ್ಭುಮ್ ಎಸ್‍ಪಿ ನಾಗೇಂದ್ರ ತ್ರಿಪಾಟಿ ಮಾಹಿತಿ ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್ ಸ್ವಯಂಪ್ರೇರಿತವಾಗಿಯೇ ವಿಚಾರಣೆ ನಡೆಸಲು ಮುಂದಾಗಿತ್ತು. ಈ ನಡುವೆ ಜಿಲ್ಲೆಯ ಕೆಲ ಕುಟುಂಬಗಳು ಹಿಂಸಾಚಾರಕ್ಕೆ ಬೆಚ್ಚಿಬಿದ್ದಿದ್ದು, ತಮ್ಮ ಮನೆಗಳನ್ನು ತೊರೆದು ಹೋಗಿದ್ದಾರೆ. ಇದನ್ನೂ ಓದಿ: ಜಗನ್ ಸಹೋದರಿ ಭಾಷಣದ ವೇಳೆ ಜೇನು ದಾಳಿ – ಟವೆಲ್ ಬೀಸಿದ ಕಾರ್ಯಕರ್ತರು