Tag: kolkatta knight riders

  • ಈಡನ್‌ ಗಾರ್ಡನ್‌ನಲ್ಲಿ ಗೆದ್ದ ಮಳೆ – PBKS vs KKR ಪಂದ್ಯ ರದ್ದು, 4ನೇ ಸ್ಥಾನಕ್ಕೇರಿದ ಪಂಜಾಬ್‌

    ಈಡನ್‌ ಗಾರ್ಡನ್‌ನಲ್ಲಿ ಗೆದ್ದ ಮಳೆ – PBKS vs KKR ಪಂದ್ಯ ರದ್ದು, 4ನೇ ಸ್ಥಾನಕ್ಕೇರಿದ ಪಂಜಾಬ್‌

    ಕೋಲ್ಕತ್ತಾ: ಇಲ್ಲಿನ ಈಡನ್‌ ಗಾರ್ಡನ್‌ ಮೈದಾನದಲ್ಲಿ ನಡೆದ ಪಂಜಾಬ್‌ ಕಿಂಗ್ಸ್‌ vs ಕೋಲ್ಕತ್ತಾ ನೈಟ್‌ ರೈಡರ್ಸ್‌ ನಡುವಿನ ಪಂದ್ಯದಲ್ಲಿ ಮಳೆಯಾಟ ಮೇಲುಗೈ ಸಾಧಿಸಿದೆ.

    ನಿರಂತರ ಮಳೆಯಿಂದಾಗಿ ಪಂದ್ಯ ರದ್ದಾಗಿದ್ದು, ಉಭಯ ತಂಡಗಳು ತಲಾ ಒಂದೊಂದು ಅಂಕ ಪಡೆದುಕೊಂಡಿವೆ. ಇದರಿಂದ 11 ಅಂಕಗಳೊಂದಿಗೆ ಪಂಜಾಬ್‌ ಕಿಂಗ್ಸ್‌ 4ನೇ ಸ್ಥಾನಕ್ಕೆ ಜಿಗಿದರೆ, ಕೋಲ್ಕತ್ತಾ ನೈಟ್‌ರೈಡರ್ಸ್‌ 7 ಅಂಕಗಳೊಂದಿಗೆ 7ನೇ ಸ್ಥಾನದಲ್ಲಿ ಉಳಿದಿದೆ. ಮೊದಲ ಮೂರು ಸ್ಥಾನಗಳಲ್ಲಿ ಕ್ರಮವಾಗಿ ಗುಜರಾತ್‌ ಟೈಟಾನ್ಸ್‌, ಡೆಲ್ಲಿ ಕ್ಯಾಪಿಟಲ್ಸ್‌, ಆರ್‌ಸಿಬಿ ಸ್ಥಾನ ಪಡೆದುಕೊಂಡಿವೆ.

    ಗೆಲುವಿಗೆ 202 ರನ್‌ಗಳ ಗುರಿ ಪಡೆದ ಕೋಲ್ಕತ್ತಾ ರೆಹಮಾನುಲ್ಲಾ ಗುರ್ಬಾಜ್‌, ಸುನೀಲ್‌ ನರೇನ್‌ ಆರಂಭಿಕ ಜೋಡಿಯನ್ನು ಕಣಕ್ಕಿಳಿಸಿತ್ತು. ಮೊದಲ ಓವರ್‌ನಲ್ಲಿ 7 ರನ್‌ ಗಳಿಸುತ್ತಿದ್ದಂತೆ ಮಳೆ ಕಾಟ ಶುರುವಾಯಿತು. ಇದರಿಂದ ರಾತ್ರಿ 11:44 ಗಂಟೆಗೆ 5 ಓವರ್‌ಗಳ ಪಂದ್ಯ ನಡೆಸಲು ಯೋಜಿಸಲಾಗಿತ್ತು. ಆದ್ರೆ ನಿರಂತರ ಮಳೆಯಾಗಿದ್ದರಿಂದ ಪಂದ್ಯವನ್ನು ಫಲಿತಾಂಶವಿಲ್ಲದೇ ರದ್ದುಗೊಳಿಸಲಾಯಿತು.

    ಇದಕ್ಕೂ ಮುನ್ನ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಪಂಜಾಬ್‌ ಕಿಂಗ್ಸ್‌ ನಿಗದಿತ 20 ಓವರ್‌ ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 201 ರನ್‌ ಗಳಿಸಿತ್ತು. ಪಂಜಾಬ್‌ ಪರ ಬ್ಯಾಟಿಂಗ್‌ ಮಾಡಿದ್ದ ಪ್ರಿಯಾಂಶ್‌ ಆರ್ಯ 35 ಎಸೆತಗಳಲ್ಲಿ 4 ಸಿಕ್ಸ್‌, 8 ಬೌಂಡರಿ ಬಾರಿಸಿ 69 ರನ್‌, ಪ್ರಭಸಿಮ್ರನ್‌ ಸಿಂಗ್‌ 49 ಎಸೆತಗಳಲ್ಲಿ 6 ಸಿಕ್ಸ್‌ ಹಾಗೂ 6 ಬೌಂಡರಿ ಬಾರಿಸಿ 83 ರನ್‌ ಗಳಿಸಿದರು. ಶ್ರೇಯಸ್‌ ಅಯ್ಯರ್‌ 16 ಎಸೆತಗಳಲ್ಲಿ ತಲಾ ಒಂದೊಂದು ಸಿಕ್ಸ್‌ ಹಾಗೂ ಬೌಂಡರಿ ಹೊಡೆದು 25 ರನ್‌ ಗಳಿಸಿದರು. ಇನ್ನುಳಿದಂತೆ ಗ್ಲೆನ್‌ ಮ್ಯಾಕ್ಸ್‌ವೆಲ್‌ 8 ಎಸೆತಗಳಲ್ಲಿ 7ರನ್‌, ಮಾರ್ಕೊ ಜಾನ್ಸೆಮ್‌ 7 ಎಸೆತಗಳಲ್ಲಿ 3 ರನ್‌ ಹಾಗೂ ಜೋಶ್‌ ಇಂಗ್ಲಿಸ್‌ 6 ಎಸೆತಗಳಲ್ಲಿ 11 ರನ್‌ ಬಾರಿಸಿದರು.

    ಕೋಲ್ಕತ್ತಾ ಪರ ಬೌಲಿಂಗ್‌ ಮಾಡಿದ ವೈಭವ್‌ ಅರೋರಾ 2 ವಿಕೆಟ್‌ ಕಬಳಿಸಿದರೆ, ವರುಣ್‌ ಚಕ್ರವರ್ತಿ ಹಾಗೂ ಆಂಡ್ರೆ ರಸೆಲ್‌ ತಲಾ ಒಂದು ವಿಕೆಟ್‌ ಪಡೆದರು.

     

  • ಐಪಿಎಲ್‌ನಲ್ಲಿ ತನ್ನ ನೆಚ್ಚಿನ ಪ್ರತಿಸ್ಪರ್ಧಿ ತಂಡವನ್ನು ರಿವೀಲ್ ಮಾಡಿದ ಕೊಹ್ಲಿ

    ಐಪಿಎಲ್‌ನಲ್ಲಿ ತನ್ನ ನೆಚ್ಚಿನ ಪ್ರತಿಸ್ಪರ್ಧಿ ತಂಡವನ್ನು ರಿವೀಲ್ ಮಾಡಿದ ಕೊಹ್ಲಿ

    ಮುಂಬೈ: ಭಾರತದ (India) ಸ್ಟಾರ್ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ (Virat Kohli) ಐಪಿಎಲ್‌ನಲ್ಲಿ ತಮ್ಮ ನೆಚ್ಚಿನ ಪ್ರತಿಸ್ಪರ್ಧಿ ತಂಡ ಯಾವುದು ಎಂಬುವುದರ ಕುರಿತು ಇತ್ತೀಚಿಗೆ ಮಾತನಾಡಿದ್ದಾರೆ.

    ಇತ್ತೀಚಿಗೆ ಒಂದು ಸಂದರ್ಶನದಲ್ಲಿ ಮಾತನಾಡಿದ ಅವರು, 5 ಬಾರಿ ಐಪಿಎಲ್ ಟ್ರೋಫಿ ಗೆದ್ದ ತಂಡ ಮುಂಬೈ ಇಂಡಿಯನ್ಸ್ (Mumbai Indians) ಹಾಗೂ 3 ಬಾರಿ ಗೆದ್ದ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ (Kolkatta Knight Riders) ತಂಡಗಳ ನಡುವೆ ನಿಮ್ಮ ನೆಚ್ಚಿನ ಪ್ರತಿಸ್ಪರ್ಧಿ ಯಾವುದು ಎಂದು ಕೇಳಿದಕ್ಕೆ ಪ್ರತಿಕ್ರಿಯಿಸಿ, ನನಗೆ ಕೆಕೆಆರ್ (KKR)  ನೆಚ್ಚಿನ ಪ್ರತಿಸ್ಪರ್ಧಿ ತಂಡ ಎಂದು ಉತ್ತರಿಸಿದ್ದಾರೆ. ಇದನ್ನೂ ಓದಿ: ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಗೆ ರಾಖಿ ಕಟ್ಟಿದ ಶ್ರುತಿ

    ಕಳೆದ ಭಾನುವಾರವಷ್ಟೇ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ (International Cricket) 16 ವರ್ಷಗಳನ್ನು ಪೂರೈಸಿದ ಕೊಹ್ಲಿಗೆ ಬಿಸಿಸಿಐ (BCCI)  ಕಾರ್ಯದಶಿ ಜಯ್ ಶಾ (Jay Shah) 16 ವರ್ಷದ ಹಿಂದೆ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟ 19 ವರ್ಷದ ಯುವಕ. ಇಂದು 16 ವರ್ಷಗಳನ್ನು ಪೂರೈಸಿದ್ದಾರೆ. ಇದು ನಿಜವಾದ ವೃತ್ತಿಜೀವನದ ಆರಂಭ ಹಾಗೂ ಪೂರೈಸಿದ ರಾಜನಿಗೆ ಅಭಿನಂದನೆಗಳು ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದು ಶುಭ ಹಾರೈಸಿದ್ದರು.

    ಭಾರತದ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ವಿರಾಟ್ ಕೊಹ್ಲಿ 2008ರಲ್ಲಿ ಭಾರತ ಕ್ರಿಕೆಟ್ ತಂಡಕ್ಕೆ ಪಾದಾರ್ಪಣೆ ಮಾಡಿದ್ದಾರೆ. ತಮ್ಮ ಶಕ್ತಿಶಾಲಿ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಭಾರತ ತಂಡವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಜೊತೆಗೆ ಹಲವಾರು ದಾಖಲೆಗಳನ್ನು ಸೃಷ್ಟಿಸಿದ್ದಾರೆ.ಇದನ್ನೂ ಓದಿ: ವೈದ್ಯಕೀಯ ವೃತ್ತಿಪರರ ರಕ್ಷಣೆಗೆ ಟಾಸ್ಕ್ ಫೋರ್ಸ್ ರಚಿಸಿದ ಸುಪ್ರೀಂ ಕೋರ್ಟ್

    ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್  (Sachin Tendulkar) ಅವರ ದಾಖಲೆಯನ್ನು ವಿರಾಟ್ ಕೊಹ್ಲಿ ಮುರಿದು ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ. ಕೊಹ್ಲಿ 2008ರಲ್ಲಿ ಆರ್‌ಸಿಬಿ ತಂಡಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಅಲ್ಲಿಂದ ಇಲ್ಲಿಯವರೆಗೂ ಬೇರೆ ತಂಡಕ್ಕೆ ಹೋಗದೇ ನಿರಂತರವಾಗಿ ಆರ್‌ಸಿಬಿ (RCB) ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

  • ಪ್ರೀತಿ, ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದ ಸುನಿಲ್‌ ನರೇನ್

    ಪ್ರೀತಿ, ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದ ಸುನಿಲ್‌ ನರೇನ್

    ಚೆನ್ನೈ: ಕೋಲ್ಕತ್ತಾ ನೈಟ್‌ರೈಡರ್ಸ್‌ (Kolkata Knight Riders) ತಂಡದ ಸ್ಪಿನ್ ಮಾಂತ್ರಿಕ ಸುನಿಲ್ ನರೇನ್ (Sunil Naraine) ಅವರು ಪ್ರೀತಿ ಹಾಗೂ ಬೆಂಬಲ ನೀಡಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

    ಈ ಸಂಬಂಧ ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಕೆಕೆಆರ್ ಹಾಗೂ ಶಾರುಖ್‌ ಖಾನ್‌ ಸರ್ ಅಭಿಮಾನಿಗಳ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಇದೇ ವೇಳೆ ಸಿಎಸ್‌ಕೆ ಹಾಗೂ ಎಂಎಸ್‌ ಧೋನಿ ಅಭಿಮಾನಿಗಳಿಗೂ ವಿಶೇಷ ಕೃತಜ್ಞತೆಗಳನ್ನು ಸುನಿಲ್‌ ಅವರು ಸಲ್ಲಿಸಿದ್ದಾರೆ.

    https://twitter.com/Sunilnarine_74/status/1794954511976648726

    ಚೆನ್ನೈನ ಚೆಪಾಕ್‌ ಕ್ರೀಡಾಂಗಣದಲ್ಲಿ ಭಾನುವಾರ ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders) ಹಾಗೂ ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡಗಳ ನಡುವಿನ IPL 2024 ರ ಫೈನಲ್ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಕೆಕೆಆರ್ ತಂಡವು ಎಸ್‌ಆರ್‌ಹೆಚ್‌ ವಿರುದ್ಧ ಭರ್ಜರಿ ಜಯಗಳಿಸುವ ಮೂಲಕ 17ನೇ ಆವೃತ್ತಿಯ ಚಾಂಪಿಯನ್‌ ಆಗಿ ಹೊರಹೊಮ್ಮಿತು.

    ಐಪಿಎಲ್ 2024 ರ ಆವೃತ್ತಿಯ ಉದ್ದಕ್ಕೂ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ತಮ್ಮ ಅದ್ಭುತ ಪ್ರದರ್ಶನಗಳನ್ನು ಪ್ರದರ್ಶಿಸುವ ಮೂಲಕ ಕೋಲ್ಕತ್ತಾ ನೈಟ್ ರೈಡರ್ಸ್‌ನ ಸುನಿಲ್ ನರೇನ್ ಅವರು ಅಭೂತಪೂರ್ವ ಮೂರನೇ ಬಾರಿಗೆ ಪ್ರತಿಷ್ಠಿತ ಮೋಸ್ಟ್ ವ್ಯಾಲ್ಯುವೆಬಲ್ ಪ್ಲೇಯರ್ (MVP) ಪ್ರಶಸ್ತಿಯನ್ನು‌ ಮುಡಿಗೇರಿಸಿಕೊಂಡರು. ಇದನ್ನೂ ಓದಿ: IPL 2024: ಚಾಂಪಿಯನ್‌ KKRಗೆ 20 ಕೋಟಿ ರೂ., ಆರೆಂಜ್‌, ಪರ್ಪಲ್‌ ಕ್ಯಾಪ್‌‌ ಗೆದ್ದವ್ರಿಗೆ ಸಿಕ್ಕಿದ್ದೆಷ್ಟು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್‌

    ಐಪಿಎಲ್ 2024 ರ ಅಂತಿಮ ದಿನವಾದ ನಿನ್ನೆ (ಮೇ 26 ರಂದು) ತನ್ನ ಜನ್ಮದಿನವನ್ನು ಆಚರಿಸಿಕೊಂಡ ನರೇನ್, 14 ಇನ್ನಿಂಗ್ಸ್‌ಗಳಲ್ಲಿ 179.85 ಸ್ಟ್ರೈಕ್ ರೇಟ್‌ನಲ್ಲಿ ಅದ್ಭುತ ಶತಕ ಮತ್ತು ಮೂರು ಅರ್ಧ ಶತಕಗಳನ್ನು ಒಳಗೊಂಡಂತೆ 488 ರನ್ ಗಳಿಸುವ ಮೂಲಕ ತಮ್ಮ ಬ್ಯಾಟಿಂಗ್ ಪರಾಕ್ರಮವನ್ನು ಪ್ರದರ್ಶಿಸಿದರು. ಸುನಿಲ್ ನರೈನ್ 33 ಸಿಕ್ಸರ್‌ಗಳು ಮತ್ತು 50 ಬೌಂಡರಿಗಳ ಮೂಲಕ 17ನೇ ಆವೃತ್ತಿ IPLನಲ್ಲಿ ಬ್ಯಾಟಿಂಗ್‌ನಲ್ಲಿ ಮಿಂಚುವ ಮೂಲಕ KKR ಚಾಂಪಿಯನ್ ಆಗಲು ಕಾರಣರಾದರು. ಸನ್‌ರೈಸರ್ಸ್ ಹೈದರಾಬಾದ್‌ನ ಟ್ರಾವಿಸ್ ಹೆಡ್, ಪ್ಯಾಟ್ ಕಮ್ಮಿನ್ಸ್ ಮತ್ತು ಅಭಿಷೇಕ್ ಶರ್ಮಾ ಅವರ ತೀವ್ರ ಪೈಪೋಟಿಯ ಹೊರತಾಗಿಯೂ , ನರೇನ್ ಲೀಡರ್‌ಬೋರ್ಡ್‌ನ ಅಗ್ರಸ್ಥಾನದಲ್ಲಿ ತನ್ನ ಪ್ರಾಬಲ್ಯವನ್ನು ಉಳಿಸಿಕೊಂಡರು.