Tag: kolkata

  • ಪ್ರಾಣ ನೀಡಲು ಸಿದ್ಧನಿದ್ದೇನೆ ಆದ್ರೆ ದೇಶ ವಿಭಜಿಸಲು ಬಿಡಲ್ಲ: ಮಮತಾ ಬ್ಯಾನರ್ಜಿ

    ಪ್ರಾಣ ನೀಡಲು ಸಿದ್ಧನಿದ್ದೇನೆ ಆದ್ರೆ ದೇಶ ವಿಭಜಿಸಲು ಬಿಡಲ್ಲ: ಮಮತಾ ಬ್ಯಾನರ್ಜಿ

    ಕೋಲ್ಕತ್ತಾ: ನಾನು ನನ್ನ ಪ್ರಾಣವನ್ನು ನೀಡಲು ಸಿದ್ಧನಿದ್ದೇನೆ, ಆದರೆ ದೇಶವನ್ನು ವಿಭಜಿಸಲು ಬಿಡುವುದಿಲ್ಲ ಎಂದು ಪಶ್ಚಿಮ ಬಂಗಾಳದ (West Bengal) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಹೇಳಿದರು.

    ಕೋಲ್ಕತ್ತಾದಲ್ಲಿ (Kolkata) ನಡೆದ ಈದ್-ಉಲ್-ಫಿತರ್ (Ed-Ul-Fitar) ಸಭೆಯಲ್ಲಿ ರಂಜಾನ್ (Ramzan) ಶುಭಾಶಯವನ್ನು ಕೋರಿದರು. ನಂತರ ಮಾತನಾಡಿದ ಅವರು, ಮುಸ್ಲಿಂ ಬಾಂಧವರು ದಯವಿಟ್ಟು ಈದ್ ಹಬ್ಬವನ್ನು ಆನಂದಿಸಿ. ಯಾರೂ ಭಯಪಡಬೇಕಾದ ಅಗತ್ಯವಿಲ್ಲ. ಯಾರೂ ನಿಮಗೆ ಹಾನಿಯುಂಟು ಮಾಡುವುದಿಲ್ಲ. ಕೆಲವು ಜನರು ದೇಶದಲ್ಲಿ ವಿಭಜನೆಗಳನ್ನು ಸೃಷ್ಟಿಸಲು ಬಯಸುತ್ತಿದ್ದಾರೆ. ಆದರೆ ನಾವು ಬಂಗಾಳದಲ್ಲಿ ಶಾಂತಿಯನ್ನು ಬಯಸುತ್ತೇವೆ. ನಮಗೆ ಘರ್ಷಣೆಗಳು ಬೇಡ, ಶಾಂತಿ ಬೇಕು. ನಾವೆಲ್ಲರೂ ಒಂದಾಗಿ ದೇಶವನ್ನು ಕಟ್ಟೋಣ. ಏನೇ ಆದರು ಎಲ್ಲರೂ ಒಟ್ಟಾಗಿ ಹೋರಾಡಿ ಗೆಲ್ಲೋಣ ಎಂದರು. ಇದನ್ನೂ ಓದಿ: 1 ಲಕ್ಷ ಕೋತಿಗಳನ್ನು ಕಳುಹಿಸಿಕೊಡಿ ಎಂದ ಚೀನಾ – ರಫ್ತಿಗೆ ಒಪ್ಪಿದ ಶ್ರೀಲಂಕಾ 

    ಕೆಲವರು ಮುಸ್ಲಿಂ (Muslim) ಮತಗಳನ್ನು ವಿಭಜಿಸಿವುದಾಗಿ ಹೇಳಿ ಬಿಜೆಪಿಯಿಂದ (BJP) ಹಣ ಪಡೆದಿದ್ದಾರೆ ಎಂದು ಟಿಎಂಸಿ (TMC) ವರಿಷ್ಠರು ಆರೋಪಿಸಿದ್ದಾರೆ. ಬಿಜೆಪಿಗೆ ಮುಸ್ಲಿಂ ಮತಗಳನ್ನು ವಿಭಜಿಸುವ ಧೈರ್ಯವಿಲ್ಲ. ಲೋಕಸಭಾ ಚುನಾವಣೆಗೆ (Election) ಇನ್ನೂ ಒಂದು ವರ್ಷವಿದೆ. ಯಾರು ಆಯ್ಕೆಯಾಗುತ್ತಾರೆ ಮತ್ತು ಯಾರು ಆಗುವುದಿಲ್ಲ ಎಂಬುವುದನ್ನು ನೀವೇ ನೋಡಿ ಎಂದು ತಿಳಿಸಿದರು. ಇದನ್ನೂ ಓದಿ: ಬ್ರಿಟನ್‌ ಉಪ ಪ್ರಧಾನಿ ಡೊಮಿನಿಕ್‌ ರಾಬ್‌ ರಾಜೀನಾಮೆ – ಸಂಕಷ್ಟದಲ್ಲಿ ಸುನಾಕ್‌ ಸರ್ಕಾರ? 

    ಇಂದು ಸಂವಿಧಾನ (Constitution) ಬದಲಾಗುತ್ತಿದೆ. ಹಾಗೆಯೇ ಇತಿಹಾಸವನ್ನೂ ಬದಲಾಯಿಸುತ್ತಿದ್ದಾರೆ. ನಾನು ಎನ್‌ಆರ್‌ಸಿಯನ್ನು (NRC) ಮಾಡಲು ಬಿಡುವುದಿಲ್ಲ. ಇದರ ವಿರುದ್ಧ ನಾನು ಹೋರಾಡುತ್ತೇನೆ. ಹೋರಾಡುವ ಧೈರ್ಯ ನನ್ನಲ್ಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಸ್ವರ್ಗ ಪ್ರಾಪ್ತಿಗೆ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ – ಬ್ರಿಟನ್ ಶಾಲೆಗಳಲ್ಲಿ ಹಿಂದೂಗಳಿಗೆ ಕಿರುಕುಳ

  • IPL 2023: ಆರ್‌ಸಿಬಿ ಗಾಯಾಳುಗಳ ಬದಲಿಗೆ ಕಣಕ್ಕಿಳಿಯಲಿದ್ದಾರೆ ಪಾರ್ನೆಲ್, ವೈಶಾಕ್ ವಿಜಯ್

    IPL 2023: ಆರ್‌ಸಿಬಿ ಗಾಯಾಳುಗಳ ಬದಲಿಗೆ ಕಣಕ್ಕಿಳಿಯಲಿದ್ದಾರೆ ಪಾರ್ನೆಲ್, ವೈಶಾಕ್ ವಿಜಯ್

    ನವದೆಹಲಿ: ಆರ್‌ಸಿಬಿ ತಂಡದ ರೀಸ್ ಟೋಪ್ಲಿ ಹಾಗೂ ರಜತ್ ಪಾಟಿದಾರ್ (Rajat Patidar) ಬದಲಿಗೆ ವೇಯ್ನ್ ಪಾರ್ನೆಲ್ (Wayne Parnell) ಮತ್ತು ವೈಶಾಕ್ ವಿಜಯ್ ಕುಮಾರ್ (Vyshak Vijay Kumar) ಆಡಲಿದ್ದಾರೆ.

    ಪಾರ್ನೆಲ್ ಇದುವರೆಗೆ 56 ಟಿ20 ಗಳಲ್ಲಿ ದಕ್ಷಿಣ ಆಫ್ರಿಕಾವನ್ನು (South Africa) ಪ್ರತಿನಿಧಿಸಿದ್ದರು. 6 ಟೆಸ್ಟ್‌ಗಳು 73 ಏಕದಿನ (ODI) ಪಂದ್ಯವಾಡಿರುವ ಪಾರ್ನೆಲ್ ಟಿ20ಯಲ್ಲಿ 59 ವಿಕೆಟ್ ಪಡೆದಿದ್ದಾರೆ. ಇದನ್ನೂ ಓದಿ: ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಸೋದೇಕೆ ಗೊತ್ತಾ – ಚಿಯರ್‌ ಗರ್ಲ್ಸ್‌ ಸಂಭಾವನೆ ಕೇಳಿದ್ರೆ ಶಾಕ್‌ ಆಗ್ತೀರಾ

    ಟೋಪ್ಲಿ ಏ.2ರಂದು ನಡೆದ ಆರಂಭಿಕ ಐಪಿಎಲ್‌ (IPL) ಪಂದ್ಯದ ಫಿಲ್ಡಿಂಗ್ ವೇಳೆ ಭುಜ (Shoulder) ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ವೈಶಾಕ್ ವಿಜಯ್‍ಕುಮಾರ್ ಹಿಮ್ಮಡಿ ಗಾಯಕ್ಕೊಳಗಾಗಿ ಆರಂಭಿಕ ಪಂದ್ಯದಿಂದಲೂ ಹೊರಗುಳಿದಿದ್ದರು.

    ಭುಜದ ಗಾಯದ ನಡುವೆಯೂ ಟೋಪ್ಲಿ ಕೆಕೆಆರ್ ವಿರುದ್ಧ ಆಡಲು ಕೋಲ್ಕತ್ತಾ (Kolkata) ಪ್ರಯಾಣಿಸಿದ್ದರು. ಆಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಆಲ್‍ರೌಂಡರ್ ಡೇವಿಡ್ ವಿಲ್ಲಿಯವರನ್ನು ಕಣಕ್ಕಿಳಿಸಿ ಯುಕೆಗೆ ಮರಳಿದ್ದಾರೆ.

    ಪಾಟಿದಾರ್ 2021-22ರ ಸಾಲಿನ ರಣಜಿ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಆರು ಪಂದ್ಯಗಳಲ್ಲಿ ಎರಡು ಶತಕಗಳು ಮತ್ತು ಐದು ಅರ್ಧ ಶತಕಗಳಿಸಿದ್ದರು. ಕಳೆದ ಬೇಸಿಗೆಯಲ್ಲಿ ಟೀಂ ಇಂಡಿಯಾದ ಏಕದಿನ ತಂಡದಲ್ಲಿ ಸ್ಥಾನ ಗಳಿಸಿದ್ದರು.

    ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದ್ದ ಆರ್‌ಸಿಬಿ ಎರಡನೇ ಮ್ಯಾಚ್‍ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 81 ರನ್‍ಗಳ ಸೋಲು ಕಂಡಿತ್ತು. ಇದನ್ನೂ ಓದಿ: IPL 2023: ಶಾರ್ದೂಲ್‌ ಬೆಂಕಿ ಬ್ಯಾಟಿಂಗ್‌, ವರುಣ್ ಮಿಂಚಿನ ಬೌಲಿಂಗ್‌ – RCBಗೆ ಹೀನಾಯ ಸೋಲು

  • Killer Plant Fungus: ವಿಶ್ವದಲ್ಲೇ ಮೊದಲ ಪ್ರಕರಣ ಭಾರತದಲ್ಲಿ ಪತ್ತೆ

    Killer Plant Fungus: ವಿಶ್ವದಲ್ಲೇ ಮೊದಲ ಪ್ರಕರಣ ಭಾರತದಲ್ಲಿ ಪತ್ತೆ

    – ಕೋಲ್ಕತ್ತಾದ ವ್ಯಕ್ತಿಯಲ್ಲಿ ಸೋಂಕು ದೃಢ

    ಕೋಲ್ಕತ್ತಾ: ವಿಶ್ವದಲ್ಲೇ ಅಪರೂಪದ ಮಾರಕ ಸಸ್ಯ ಶಿಲೀಂಧ್ರ (Plant Fungus) ಸೋಂಕಿಗೆ ಕೋಲ್ಕತ್ತಾದ (Kolkata) ವ್ಯಕ್ತಿ ತುತ್ತಾಗಿದ್ದು, ದೇಶದಲ್ಲಿ ಆತಂಕ ಮೂಡಿಸಿದೆ. ವಿಶ್ವದಲ್ಲೇ ಸೋಂಕು ದೃಢಪಟ್ಟ ಮೊದಲ ಪ್ರಕರಣ ಇದಾಗಿದೆ.

    61 ವಯಸ್ಸಿನ ವ್ಯಕ್ತಿ ಈ ಸೋಂಕಿ ಒಳಗಾಗಿದ್ದಾರೆ. ಕಳೆದ ಮೂರು ತಿಂಗಳಿಂದ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದರು. ಕರ್ಕಶ ಧ್ವನಿ, ಕೆಮ್ಮು, ಆಯಾಸ, ಗಂಟಲಲ್ಲಿ ತೊಂದರೆ ಕಾಣಿಸಿಕೊಂಡಿತ್ತು. ಕೋಲ್ಕತ್ತಾ ಆಸ್ಪತ್ರೆಗೆ ದಾಖಲಾದಾಗ ಸೋಂಕು ಇರುವುದು ದೃಢಪಟ್ಟಿದೆ. ಇದನ್ನೂ ಓದಿ: 10 ರೂ.ನ 30 ನೋಟು ಎಣಿಸಲು ಸಾಧ್ಯವಾಗದ ವರ- ಮದುವೆ ಕ್ಯಾನ್ಸಲ್ ಮಾಡಿದ ವಧು

    ವ್ಯಕ್ತಿಯು ಮಧುಮೇಹ, ಹೆಚ್ಐವಿ ಸೋಂಕು, ಮೂತ್ರಪಿಂಡದ ಕಾಯಿಲೆ, ಯಾವುದೇ ದೀರ್ಘಕಾಲದ ಕಾಯಿಲೆ, ಇಮ್ಯುನೊಸಪ್ರೆಸಿವ್ ಡ್ರಗ್ ಸೇವನೆ ಅಥವಾ ಆಘಾತದ ಇತಿಹಾಸವನ್ನು ಹೊಂದಿರಲಿಲ್ಲ. ರೋಗಿ, ವೃತ್ತಿಯಲ್ಲಿ ಸಸ್ಯ ಮೈಕೊಲೊಜಿಸ್ಟ್ ಆಗಿದ್ದಾರೆ. ದೀರ್ಘಕಾಲದವರೆಗೆ ಕೊಳೆಯುತ್ತಿರುವ ವಸ್ತುಗಳು, ಅಣಬೆಗಳು ಮತ್ತು ವಿವಿಧ ಸಸ್ಯ ಶಿಲೀಂಧ್ರಗಳನ್ನು ತನ್ನ ಸಂಶೋಧನಾ ಚಟುವಟಿಕೆಗಳ ಭಾಗವಾಗಿ ಬಳಸಿಕೊಂಡಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.

    ಕೊಂಡ್ರೊಸ್ಟೆರಿಯಮ್ ಪರ್ಪ್ಯೂರಿಯಮ್ ಒಂದು ಸಸ್ಯ ಶಿಲೀಂಧ್ರವಾಗಿದ್ದು, ಅದು ಸಸ್ಯಗಳಲ್ಲಿ ಬೆಳ್ಳಿಯ ಎಲೆ ರೋಗವನ್ನು ಉಂಟುಮಾಡುತ್ತದೆ. ಸಸ್ಯದ ಶಿಲೀಂಧ್ರವು ಮಾನವರಲ್ಲಿ ರೋಗವನ್ನು ಉಂಟುಮಾಡುವ ಮೊದಲ ನಿದರ್ಶನ ಇದಾಗಿದೆ. ಸಾಂಪ್ರದಾಯಿಕ ತಂತ್ರಗಳು (ಸೂಕ್ಷ್ಮದರ್ಶಕ) ಶಿಲೀಂಧ್ರವನ್ನು ಗುರುತಿಸಲು ವಿಫಲವಾಗಿದೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಮೋದಿ ಹಟಾವೋ, ದೇಶ್ ಬಚಾವೋ ಪೋಸ್ಟರ್ ಪ್ರಕರಣ- 8 ಮಂದಿ ಆರೋಪಿಗಳ ಬಂಧನ

  • ಇಂಡಿಗೊ ವಿಮಾನದಲ್ಲಿ ಸಿಗರೇಟ್ ಸೇದಿ ಆತಂಕ ತಂದೊಡ್ಡಿದ ಯುವತಿ

    ಇಂಡಿಗೊ ವಿಮಾನದಲ್ಲಿ ಸಿಗರೇಟ್ ಸೇದಿ ಆತಂಕ ತಂದೊಡ್ಡಿದ ಯುವತಿ

    ಬೆಂಗಳೂರು: ಕೋಲ್ಕತ್ತಾದಿಂದ (Kolkata) ಬೆಂಗಳೂರಿಗೆ ಬರುತ್ತಿದ್ದ ಇಂಡಿಗೊ (IndiGo) ವಿಮಾನದಲ್ಲಿ ಯುವತಿಯೊಬ್ಬಳು ಸಿಗರೇಟ್ (Cigarette) ಸೇದಿ ಆತಂಕ ಮೂಡಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಮಾ. 5ರಂದು 6ಇ716 ವಿಮಾನ ರಾತ್ರಿ 9.50ಕ್ಕೆ ಕೋಲ್ಕತ್ತಾದಿಂದ ಹೊರಟು ಬೆಂಗಳೂರಿನಲ್ಲಿ (Bengaluru) ಲ್ಯಾಂಡ್ ಆಗಲು ಅರ್ಧ ಗಂಟೆ ಬಾಕಿ ಇತ್ತು. ಆಗ ಪಶ್ಚಿಮ ಬಂಗಾಳದ ಯುವತಿ ಪ್ರಿಯಾಂಕ ಚಕ್ರವರ್ತಿ (24) ವಿಮಾನದ ಶೌಚಾಲಯದಲ್ಲಿ ಸಿಗರೇಟ್ ಹಚ್ಚಿದ್ದಾಳೆ. ತಕ್ಷಣವೇ ಎಚ್ಚೆತ್ತ ಸಿಬ್ಬಂದಿ ಶೌಚಾಲಯದ ಬಾಗಿಲು ತೆಗಿಸಿದ್ದಾರೆ. ಸಿಗರೇಟನ್ನು ಡಸ್ಟ್‌ಬಿನ್‌ಗೆ ಹಾಕಿ ನೀರು ಸುರಿದಿದ್ದಾರೆ. ಇದನ್ನೂ ಓದಿ: ಸಿಂಗಾಪುರದಲ್ಲಿ ಮಹಿಳೆಯರಿಗೆ ಕಿರುಕುಳ ಆರೋಪ- ಭಾರತ ಮೂಲದ ಯೋಗಾ ಶಿಕ್ಷಕನ ವಿಚಾರಣೆ

    ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಪ್ರಿಯಾಂಕರನ್ನು ಭದ್ರತಾ ವಿಭಾಗಕ್ಕೆ ಒಪ್ಪಿಸಲಾಗಿದೆ. ಪ್ರಯಾಣಿಕರ ಜೀವ ಮತ್ತು ವಯಕ್ತಿಕ ಸುರಕ್ಷತೆಗೆ ಅಪಾಯ ಉಂಟು ಮಾಡಿದ ಆರೋಪದಡಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (International Airport) ಪೊಲೀಸರು ಪ್ರಿಯಾಂಕ ಅವರನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಮೀಸಲು ಅರಣ್ಯದಲ್ಲಿ 60ಕ್ಕೂ ಹೆಚ್ಚು ಫೈರಿಂಗ್ ಕಾಟ್ರೇಜ್ ಪತ್ತೆ, ತನಿಖೆಗೆ ಇಳಿದ ಅರಣ್ಯ ಇಲಾಖೆ

  • ನೇತಾಜಿ ಎಡಪಂಥೀಯರಾಗಿದ್ರು.. ಅವರ ಧೋರಣೆಗೆ RSS, BJP ಸಿದ್ಧಾಂತ ಹೊಂದಿಕೆಯಾಗಲ್ಲ -‌ ನೇತಾಜಿ ಪುತ್ರಿ

    ನೇತಾಜಿ ಎಡಪಂಥೀಯರಾಗಿದ್ರು.. ಅವರ ಧೋರಣೆಗೆ RSS, BJP ಸಿದ್ಧಾಂತ ಹೊಂದಿಕೆಯಾಗಲ್ಲ -‌ ನೇತಾಜಿ ಪುತ್ರಿ

    ಕೋಲ್ಕತ್ತಾ: ನೇತಾಜಿ ಸುಭಾಷ್‌ ಚಂದ್ರ ಬೋಸ್‌ (Netaji Subhas Chandra Bose) ಅವರು ಎಡಪಂಥೀಯರು. ಅವರ ಧೋರಣೆಯನ್ನು ಆರ್‌ಎಸ್‌ಎಸ್‌ ಮತ್ತು ಬಿಜೆಪಿ (BJP) ಪ್ರತಿಬಿಂಬಿಸುವುದಿಲ್ಲ ಎಂದು ನೇತಾಜಿ ಅವರ ಪುತ್ರಿ ಅನಿತಾ ಜೋಸ್ ಫಾಫ್‌ (Anita Bose-Pfaff) ಅಭಿಪ್ರಾಯಪಟ್ಟಿದ್ದಾರೆ.

    ಜನವರಿ 23 ರಂದು ನಗರದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವನ್ನು ಆಚರಿಸಲು ರಾಷ್ಟ್ರೀಯ ಸ್ವಯಂಸೇವಕ ಸಂಘದ ಯೋಜನೆಗಳ ಕುರಿತು ನೇತಾಜಿ ಪುತ್ರಿ ಪ್ರತಿಕ್ರಿಯಿಸಿದ್ದಾರೆ. ಆರ್‌ಎಸ್‌ಎಸ್‌ನ (RSS) ಸಿದ್ಧಾಂತ ಮತ್ತು ರಾಷ್ಟ್ರೀಯವಾಗಿ ನಾಯಕನ ಜಾತ್ಯತೀತತೆ ಮತ್ತು ಒಳಗೊಳ್ಳುವಿಕೆಯ ವಿಚಾರಗಳು ಪರಸ್ಪರ ವಿರುದ್ಧ ದಿಕ್ಕಿನಲ್ಲಿದೆ. ಒಂದಕ್ಕೊಂದು ತಾಳೆಯಾಗುವುದಿಲ್ಲ ಎಂದು ಅನಿತಾ ಜೋಸ್ ಫಾಫ್‌ ತಿಳಿಸಿದ್ದಾರೆ. ಇದನ್ನೂ ಓದಿ: Hath Se Hath Jodo Yatra – ಭಾರತ್ ಜೋಡೋ ಬೆನ್ನಲ್ಲೇ ಕಾಂಗ್ರೆಸ್‌ನಿಂದ ಹೊಸ ಅಭಿಯಾನ

    ಸಿದ್ಧಾಂತಕ್ಕೆ ಸಂಬಂಧಿಸಿದಂತೆ ದೇಶದ ಯಾವುದೇ ಪಕ್ಷಕ್ಕಿಂತ ಕಾಂಗ್ರೆಸ್ (Congress) ನೇತಾಜಿಯೊಂದಿಗೆ ಹೆಚ್ಚು ಸಾಮ್ಯತೆ ಹೊಂದಿದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್ ಧರ್ಮನಿಷ್ಠ ಹಿಂದೂಗಳಾಗಿದ್ದರೂ, ಇತರರ ನಂಬಿಕೆಗಳನ್ನು ಗೌರವಿಸುವ ಮನೋಭಾವದವರಾಗಿದ್ದ ನೇತಾಜಿ ಅವರು ಬೋಧಿಸಿದಂತೆ ಎಲ್ಲಾ ಧರ್ಮಗಳನ್ನು ಗೌರವಿಸುವ ಪರಿಕಲ್ಪನೆಯನ್ನು ಪ್ರತಿಬಿಂಬಿಸುವುದಿಲ್ಲ. ನೇತಾಜಿ ಅವರು ವಿವಿಧ ಧರ್ಮಗಳ ಸದಸ್ಯರ ನಡುವಿನ ಸಹಕಾರದ ಪರವಾಗಿದ್ದರು ಎಂದು ಹೇಳಿದ್ದಾರೆ.

    ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಈ ಧೋರಣೆಯನ್ನು ಪ್ರತಿಬಿಂಬಿಸಬೇಕಾಗಿಲ್ಲ. ಸರಳವಾದ ಲೇಬಲ್ ಹಾಕಲು ಬಯಸಿದರೆ, ಅವರು ಬಲಪಂಥೀಯರು. ಆದರೆ ನೇತಾಜಿ ಎಡಪಂಥೀಯರಾಗಿದ್ದರು ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ದೇವರಿದ್ದಂತೆ; ಅವರ ವಿರುದ್ಧ ಕೋಲಾರದಲ್ಲಿ ಸ್ಪರ್ಧೆ ಮಾಡಲ್ಲ – KGF Babu

    ಆರ್‌ಎಸ್‌ಎಸ್‌ ಮತ್ತು ನೇತಾಜಿ ಅವರ ಸಿದ್ಧಾಂತಗಳು ಪರಸ್ಪರ ಭಿನ್ನವಾಗಿವೆ ಎಂದು ನಾನು ಒಪ್ಪಿಕೊಳ್ಳುತ್ತೇನೆ. ಎರಡು ಮೌಲ್ಯ ವ್ಯವಸ್ಥೆಗಳು ಹೊಂದಿಕೆಯಾಗುವುದಿಲ್ಲ. ನೇತಾಜಿಯವರ ಆದರ್ಶ ಮತ್ತು ಆಲೋಚನೆಗಳನ್ನು ಸ್ವೀಕರಿಸಲು ಆರ್‌ಎಸ್‌ಎಸ್ ಬಯಸಿದ್ದರೆ ಅದು ಖಂಡಿತವಾಗಿಯೂ ಒಳ್ಳೆಯದು. ಹಲವಾರು ಗುಂಪುಗಳು ನೇತಾಜಿಯವರ ಜನ್ಮದಿನವನ್ನು ವಿಭಿನ್ನ ರೀತಿಯಲ್ಲಿ ಆಚರಿಸಲು ಬಯಸುತ್ತವೆ ಎಂದು ತಿಳಿಸಿದ್ದಾರೆ.

    ನೇತಾಜಿ ಆರ್‌ಎಸ್‌ಎಸ್‌ನ ಟೀಕಾಕಾರರೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, “ನಾನು ನಿಮಗೆ ನೀಡಬಹುದಾದ ಯಾವುದೇ ಉಲ್ಲೇಖ (ನೇತಾಜಿ) ನನಗೆ ತಿಳಿದಿಲ್ಲ. ಅವರು ಆರ್‌ಎಸ್‌ಎಸ್ ಸದಸ್ಯರ ಬಗ್ಗೆ ಟೀಕೆ ಹೇಳಿಕೆಗಳನ್ನು ನೀಡಿರಬಹುದು. ಅವರ (ನೇತಾಜಿ) ಅಭಿಪ್ರಾಯಗಳು ಏನೆಂದು ನನಗೆ ತಿಳಿದಿದೆ. RSS ಮತ್ತು ನೇತಾಜಿಯವರ ಜಾತ್ಯತೀತತೆಯ ಸಿದ್ಧಾಂತಗಳು ಒಂದಕ್ಕೊಂದು ಹೊಂದಿಕೆಯಾಗುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಜಮ್ಮುವಿನಲ್ಲಿ ಅವಳಿ ಬ್ಲಾಸ್ಟ್- ಭಾರತ್ ಜೋಡೋ ಯಾತ್ರೆಗೆ ಹೈಅಲರ್ಟ್

    ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದ ಸ್ಮರಣಾರ್ಥ ನಗರದ ಶಾಹಿದ್ ಮಿನಾರ್ ಮೈದಾನದಲ್ಲಿ ಸಾರ್ವಜನಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಈಡನ್ ಗಾರ್ಡನ್ಸ್‌ನಲ್ಲಿ 2ನೇ ಏಕದಿನ ಪಂದ್ಯ – ಸರಣಿ ಗೆಲ್ಲುವ ತವಕದಲ್ಲಿ ಭಾರತ, ಪುಟಿದೇಳುವ ವಿಶ್ವಾಸದಲ್ಲಿ ಲಂಕಾ

    ಈಡನ್ ಗಾರ್ಡನ್ಸ್‌ನಲ್ಲಿ 2ನೇ ಏಕದಿನ ಪಂದ್ಯ – ಸರಣಿ ಗೆಲ್ಲುವ ತವಕದಲ್ಲಿ ಭಾರತ, ಪುಟಿದೇಳುವ ವಿಶ್ವಾಸದಲ್ಲಿ ಲಂಕಾ

    ಕೋಲ್ಕತ್ತಾ: ಭಾರತ (India) ಹಾಗೂ ಶ್ರೀಲಂಕಾ (Sri Lanka) ನಡುವಿನ ಎರಡನೇ ಏಕದಿನ ಪಂದ್ಯ (2nd ODI) ಇಂದು ಈಡನ್ ಗಾರ್ಡನ್ಸ್‌ನಲ್ಲಿ (Eden Gardens) ನಡೆಯಲಿದೆ.

    ಈಗಾಗಲೇ 3 ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯ ಗೆದ್ದಿರುವ ಭಾರತ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಇಂದಿನ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿ ಕೈವಶಪಡಿಕೊಳ್ಳುವ ತವಕದಲ್ಲಿ ಟೀಂ ಇಂಡಿಯಾ ಇದೆ. ಇತ್ತ ಮೊದಲ ಪಂದ್ಯ ಸೋತ ಶ್ರೀಲಂಕಾ ಎರಡನೇ ಪಂದ್ಯ ಗೆದ್ದು ಸರಣಿ ಸಮಬಲಗೊಳಿಸಿಕೊಂಡು ಭಾರತಕ್ಕೆ ಪೈಪೋಟಿ ನೀಡುವ ಇರಾದೆಯಲ್ಲಿದೆ. ಇದನ್ನೂ ಓದಿ: ಮಂಕಡ್ ರನೌಟ್ ಮಾಡಿದ ಶಮಿ – ಮನವಿ ವಾಪಸ್ ಪಡೆದ ರೋಹಿತ್ ನಡೆಗೆ ಭಾರೀ ಮೆಚ್ಚುಗೆ

    ಮೊದಲ ಪಂದ್ಯದಲ್ಲಿ ರನ್ ಮಳೆ ಸುರಿಸಿದ್ದ ಬ್ಯಾಟ್ಸ್‌ಮ್ಯಾನ್‌ಗಳು ಈಡನ್ ಗಾರ್ಡನ್ಸ್‌ನಲ್ಲೂ ಅಬ್ಬರಿಸುವ ಸಾಧ್ಯತೆ ಹೆಚ್ಚಿದೆ. ಬ್ಯಾಟ್ಸ್‌ಮ್ಯಾನ್‌ಗಳಿಗೆ ಸ್ನೇಹಿ ಪಿಚ್ ಆಗಿರುವ ಈಡನ್ ಗಾರ್ಡನ್ಸ್‌ ಸ್ಪಿನ್ನರ್‌ಗಳಿಗೂ ಹೆಚ್ಚು ನೆರವಾಗಲಿದೆ. ಇದನ್ನೂ ಓದಿ: ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ 49 ಬೌಂಡರಿ ಸಹಿತ 379 ರನ್ – ದಾಖಲೆ ಬರೆದ ಪೃಥ್ವಿ ಶಾ

    ಭಾರತ ತಂಡ ಬಹುತೇಕ ಮೊದಲ ಪಂದ್ಯವಾಡಿದ ತಂಡವನ್ನೇ ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಿದೆ. ಶ್ರೀಲಂಕಾ ಕೆಲ ಬದಲಾವಣೆಯೊಂದಿಗೆ ಆಡಬಹುದು. ಗೆಲ್ಲಲ್ಲೇ ಬೇಕಾದ ಒತ್ತಡದಲ್ಲಿರುವ ಶ್ರೀಲಂಕಾ ಟಫ್‍ ಫೈಟ್ ನೀಡಲು ನಿರ್ಧರಿಸಿದೆ. 2014ರಲ್ಲಿ ಶ್ರೀಲಂಕಾ ವಿರುದ್ಧ ಭಾರತ ಈಡನ್ ಗಾರ್ಡನ್ಸ್‌ನಲ್ಲಿ 5 ವಿಕೆಟ್ ನಷ್ಟಕ್ಕೆ 404 ರನ್ ಸಿಡಿಸಿದ್ದು, ಹೆಚ್ಚಿನ ಸ್ಕೋರ್ ರೆಕಾರ್ಡ್ ಆಗಿದೆ. ಇಂದು ಕೂಡ ಬಿಗ್ ಫೈಟ್ ಕಂಡುಬರಲಿದ್ದು ಅಭಿಮಾನಿಗಳು ಕಾಯುತ್ತಿದ್ದಾರೆ. ಮಧ್ಯಾಹ್ನ 1:30ಕ್ಕೆ ಪಂದ್ಯ ಆರಂಭವಾಗಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಆಪರೇಷನ್ ಥಿಯೇಟರ್‌ನಲ್ಲಿ ಮಹಿಳೆಯ ಖಾಸಗಿ ಭಾಗಗಳನ್ನು ಮುಟ್ಟಿ ಕಿರುಕುಳ

    ಆಪರೇಷನ್ ಥಿಯೇಟರ್‌ನಲ್ಲಿ ಮಹಿಳೆಯ ಖಾಸಗಿ ಭಾಗಗಳನ್ನು ಮುಟ್ಟಿ ಕಿರುಕುಳ

    ಕೋಲ್ಕತ್ತಾ: ಇಲ್ಲಿನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಆಪರೇಷನ್ ಥಿಯೇಟರ್‌ನಲ್ಲಿ (Operation Theatre) ಅರೆಪ್ರಜ್ಞಾವಸ್ಥೆಯಲ್ಲಿ ಮಲಗಿದ್ದಾಗ ಆಸ್ಪತ್ರೆ (Hospital) ಸಿಬ್ಬಂದಿಯೊಬ್ಬ ಆಕೆಯ ಖಾಸಗಿ ಭಾಗಗಳನ್ನ ಮುಟ್ಟಿ ಲೈಂಗಿಕ ಕಿರುಕುಳ ನೀಡಿರುವುದಾಗಿ ಮಹಿಳೆಯೊಬ್ಬರು ಆರೋಪಿಸಿ ಫೂಲ್ಬಗಾನ್ ಪೊಲೀಸರಿಗೆ (Police) ದೂರು ನೀಡಿದ್ದಾರೆ.

    CRIME COURT

    ಕೋಲ್ಕತ್ತಾ (Kolkata) ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಪಿತ್ತಕೋಶದ ಶಸ್ತ್ರ ಚಿಕಿತ್ಸೆಗೆ ದಾಖಲಾಗಿದ್ದರು. ಗುರುವಾರ ಬೆಳಗ್ಗೆ 9 ಗಂಟೆ ವೇಳೆಗೆ ಆಪರೇಷನ್ ಥಿಯೇಟರ್‌ಗೆ ವರ್ಗಾಯಿಸಿ ಅರಿವಳಿಕೆ ನೀಡಿದ್ದಾರೆ. 11 ಗಂಟೆಗೆ ವೇಳೆಗೆಲ್ಲಾ ಶಸ್ತçಚಿಕಿತ್ಸೆ ಮುಗಿದಿದೆ. ಬಳಿಕ ಮಹಿಳೆ ಅರೆ ಪ್ರಜ್ಞಾವಸ್ಥೆಯಲ್ಲಿ ಮಲಗಿದ್ದಾಗ ಯಾರೋ ತನ್ನ ಖಾಸಗಿ ಭಾಗಗಳನ್ನು ಮುಟ್ಟಿ ಕಿರುಕುಳ ನೀಡಿರುವುದಾಗಿ ಮಹಿಳೆ ಲಿಖಿತ ದೂರು ನೀಡಿದ್ದಾರೆ. ಇದನ್ನೂ ಓದಿ: ವಿಧಾನಸೌಧದಲ್ಲಿ 10 ಲಕ್ಷ ಹಣ ಸಿಕ್ಕಿದ ಕೇಸ್ – ಆರೋಪಿ ಜಗದೀಶ್‌ಗೆ ಷರತ್ತುಬದ್ಧ ಜಾಮೀನು

    ಮಹಿಳೆ ಹೇಳಿದ್ದೇನು?
    ನಾನು ನಿಧಾನವಾಗಿ ಪ್ರಜ್ಞಾವಸ್ಥೆಗೆ ಬರುತ್ತಿದ್ದೆ. ಈ ವೇಳೆ ಸ್ವಲ್ಪವೇ ಕಣ್ಣು ತೆರೆದು ನೋಡಿದಾಗ ನನ್ನ ಬಲಭಾಗದಲ್ಲಿ ವ್ಯಕ್ತಿಯೊಬ್ಬ ನಿಂತಿದ್ದ. ಅವನು ನನ್ನನ್ನು ತಬ್ಬಿಕೊಳ್ಳುತ್ತಿದ್ದ. ನನಗೆ ತುಂಬಾ ನೋವಾಗುತ್ತಿತ್ತು. ನನಗೆ ಅರಿವಳಿಕೆ ನೀಡಿದ್ದರಿಂದ ಅವನನ್ನು ತಡೆಯಲು ಸಾಧ್ಯವಾಗಲಿಲ್ಲ. ಆದರೆ ನನಗೆ ಪ್ರಜ್ಞೆ ಬಂದು ನೋಡಿದಾಗ ನನ್ನ ಖಾಸಗಿ ಭಾಗಗಳಲ್ಲಿ ಆಗಿದ್ದ ಗುರುತುಗಳನ್ನು ಗಮನಿಸಿದೆ ಎಂದು ಹೇಳಿದ್ದಾರೆ.

    ಆಪರೇಷನ್ ಥಿಯೇಟರ್‌ನಲ್ಲಿ ನನಗೆ ಏನಾಯಿತು ಅನ್ನೋದು ಸಂಪೂರ್ಣವಾಗಿ ತಿಳಿದಿಲ್ಲ. ಆದ್ರೆ ಅಪರಾಧ ನಡೆಯುವಾಗ ಯಾರೊಬ್ಬರೂ ಮಹಿಳಾ ಸಿಬ್ಬಂದಿ ಇರಲಿಲ್ಲ. ಆದ್ರೆ ನನ್ನ ಬಲ ಎದೆಯ ಮೇಲೆ ಗುರುತುಗಳು ಕಂಡುಬಂದಿವೆ ಎಂದು ಸಂತ್ರಸ್ತೆ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಕನ್ನಡಿಗರಿಗೆ ಕೈಗಾರಿಕೆಗಳ ಉದ್ಯೋಗದಲ್ಲಿ ಶೇ.80 ರಷ್ಟು ಪ್ರಾಶಸ್ತ್ಯ, ಭಾಷಾ ಅಭಿವೃದ್ಧಿಗೆ ಶೀಘ್ರ ಕಾನೂನು ಸ್ವರೂಪ: ಬೊಮ್ಮಾಯಿ

    ಮಹಿಳೆ ನೀಡಿದ ಲಿಖಿತ ದೂರಿನ ಆಧಾರದ ಮೇಲೆ ಫೂಲ್ಬಗಾನ್ ಪೊಲೀಸ್ ಠಾಣೆಯಲ್ಲಿ ಅಪರಿಚಿತ ಆರೋಪಿ ವಿರುದ್ಧ ಐಪಿಸಿ (IPC) ಸೆಕ್ಷನ್ 354ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ. ಮಹಿಳೆಯ ವೈದ್ಯಕೀಯ ಪರೀಕ್ಷೆಯನ್ನೂ ನಡೆಸಿದ್ದು, ಮೆಡಿಕಲ್ ರಿಪೋರ್ಟ್‌ಗಾಗಿ ಕಾಯುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮದುವೆ ದಿನವೂ ಲ್ಯಾಪ್‍ಟಾಪ್ ಹಿಡಿದುಕೊಂಡು ಕುಳಿತ ವರ!

    ಮದುವೆ ದಿನವೂ ಲ್ಯಾಪ್‍ಟಾಪ್ ಹಿಡಿದುಕೊಂಡು ಕುಳಿತ ವರ!

    ಕೋಲ್ಕತ್ತಾ: ಕೊರೊನಾ (Corona) ಲಾಕ್‍ಡೌನ್ ನಂತರ ಐಟಿ ಬಿಟಿ ಕಂಪನಿಯಲ್ಲಿ ಕೆಲಸ ಮಾಡುವವರಿಗೆ ವರ್ಕ್ ಫ್ರಮ್ ಹೋಮ್ (Work From Home) ಸಾಮಾನ್ಯವಾಗಿದೆ. ಆದರೆ ಇಲ್ಲೊಬ್ಬ ವರ (Groom) ತನ್ನ ಮದುವೆಯ ದಿನವೂ ಮಂಟಪದಲ್ಲಿ ಲ್ಯಾಪ್‍ಟಾಪ್ ಹಿಡಿದುಕೊಂಡು ಕೆಲಸ ಮಾಡುತ್ತಿದ್ದಾನೆ.

    ಕೋಲ್ಕತ್ತಾದ (Kolkata) ವರನೊಬ್ಬ ಪುರೋಹಿತರೊಂದಿಗೆ ಕುಳಿತು ತನ್ನ ಮದುವೆ ಕಾರ್ಯದ ಜೊತೆಗೆ ಲ್ಯಾಪ್‍ಟಾಪ್‍ನಲ್ಲಿ (Laptop) ಕೆಲಸವನ್ನು ಮಾಡುತ್ತಿದ್ದಾನೆ. ಇತ್ತ ಪುರೋಹಿತರು ವಿಧಿವಿಧಾನಗಳನ್ನು ನೆರವೇರಿಸಿ ವರನನ್ನು ಆಶೀರ್ವದಿಸುತ್ತಿದ್ದಾರೆ. ಆದರೆ ವರ ಪುರೋಹಿತರ ಕಡೆಗೆ ನೋಡದೇ ಆತ ತನ್ನ ಲ್ಯಾಪ್‍ಟಾಪ್‌ನಲ್ಲಿ ಕೆಲಸ ಮಾಡುತ್ತ ಮಗ್ನನಾಗಿದ್ದಾನೆ. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

     

    View this post on Instagram

     

    A post shared by Calcutta Instagrammers (@ig_calcutta)

    ಈ ಫೋಟೋವನ್ನು ಹಂಚಿಕೊಂಡಿರುವ ಇನ್‍ಸ್ಟಾಗ್ರಾಮ್ ಪೇಜ್‌ ಮದುವೆ ಸಮಯದಲ್ಲೂ ವರ್ಕ್ ಫ್ರಮ್ ಹೋಮ್ ಕೆಲಸ ಮಾಡುವ ಸ್ನೇಹಿತನನ್ನು ಟ್ಯಾಗ್ ಮಾಡಿ ಎಂದು ತಿಳಿಸಿದೆ. ವರ ಲ್ಯಾಪ್‍ಟಾಪ್‍ನಲ್ಲಿ ನಿಖರವಾಗಿ ಏನು ಕೆಲಸ ಮಾಡುತ್ತಿದ್ದಾನೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಕೆಲವರು ಆಫೀಸ್ ಕೆಲಸ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಯಚೂರು ನಗರ ಕ್ಷೇತ್ರ ಮತದಾರರ ಪಟ್ಟಿಯಲ್ಲಿ 40 ಸಾವಿರ ಹೆಸರು ಮಾಯ

    ಕೆಲವರು ಈ ಫೋಟೋ ನೋಡಿ ಹಾಸ್ಯ ಮಾಡಿದ್ದರೇ, ಇನ್ನೂ ಕೆಲವರು ಟೀಕಿಸಿದ್ದಾರೆ. ನೆಟ್ಟಿಗನೊಬ್ಬ ಕಾಮೆಂಟ್ ಮಾಡಿದ್ದು, ಈ ವ್ಯಕ್ತಿಗೆ ತನ್ನ ಸ್ವಂತ ವಿವಾಹವನ್ನು ಆನಂದಿಸಲು ಸಹ ಆಗುತ್ತಿಲ್ಲ ಎಂದು ಹೇಳಿದ್ದಾನೆ. ಮತ್ತೊಬ್ಬ ಕಾಮೆಂಟ್ ಮಾಡಿ, ನನಗೆ ಇದು ತಮಾಷೆಯಾಗಿ ಕಾಣುತ್ತಿಲ್ಲ. ಯಾವುದೇ ಸಂಸ್ಥೆಯು ಉದ್ಯೋಗಿಯನ್ನು ಅವರ ಮದುವೆಯ ದಿನಗಳಲ್ಲಿ ಕೆಲಸ ಮಾಡಲು ಕೇಳುವುದಿಲ್ಲ ಎಂದಾತ ಅವನು ಮದುವೆಯಾಗುವ ಮಹಿಳೆಯನ್ನು ದೇವರು ಆಶೀರ್ವದಿಸುತ್ತಾನೆ ಎಂದು ವ್ಯಂಗ್ಯವಾಡಿದ್ದಾನೆ. ಇದನ್ನೂ ಓದಿ: ಪ್ರೀತಿಸಿ ಮದ್ವೆಯಾಗಿದ್ದ ಪೊಲೀಸ್ ಪೇದೆ ಪತ್ನಿ ಅನುಮಾನಾಸ್ಪದ ಸಾವು

    Live Tv
    [brid partner=56869869 player=32851 video=960834 autoplay=true]

  • ಮಗನಿಂದಲೇ ಮಾಜಿ ನೌಕಾಪಡೆ ಅಧಿಕಾರಿಯ ಹತ್ಯೆ – ದೇಹದ ಭಾಗಗಳು ಕೊಳದಲ್ಲಿ ಪತ್ತೆ

    ಮಗನಿಂದಲೇ ಮಾಜಿ ನೌಕಾಪಡೆ ಅಧಿಕಾರಿಯ ಹತ್ಯೆ – ದೇಹದ ಭಾಗಗಳು ಕೊಳದಲ್ಲಿ ಪತ್ತೆ

    ಕೋಲ್ಕತ್ತಾ: ಮಾಜಿ ನೌಕಾಪಡೆ ಅಧಿಕಾರಿಯೊಬ್ಬರನ್ನು (Ex-Navy Officer) ತನ್ನ ಮಗನೇ (Son) ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಕೋಲ್ಕತ್ತಾದಲ್ಲಿ (Kolkata) ನಡೆದಿದೆ. ಮಾಜಿ ಅಧಿಕಾರಿಯ ಮೃತದೇಹ ಛಿದ್ರವಾದ ಸ್ಥಿತಿಯಲ್ಲಿ ಬುರುಯಿರ್‌ಪುರ ಪ್ರದೇಶದ ಕೊಳದಲ್ಲಿ ಪತ್ತೆಯಾಗಿದೆ.

    ಮೃತ ವ್ಯಕ್ತಿಯನ್ನು ಉಜ್ವಲ್ ಚಕ್ರವರ್ತಿ (55) ಎಂದು ಗುರುತಿಸಲಾಗಿದೆ. ಅವರು 2000 ಇಸವಿಯಲ್ಲಿ ನಿವೃತ್ತರಾದ ಭಾರತೀಯ ನೌಕಾಪಡೆಯ ಮಾಜಿ ನಾನ್ ಕಮಿಷನ್ಡ್ ಅಧಿಕಾರಿ ಎಂದು ಪೊಲೀಸರು ತಿಳಿಸಿದ್ದಾರೆ.

    CRIME

    ವರದಿಗಳ ಪ್ರಕಾರ ಚಕ್ರವರ್ತಿ ಅವರು ನಾಪತ್ತೆಯಾಗಿರುವುದಾಗಿ ನವೆಂಬರ್ 15 ರಂದು ಅವರ ಕುಟುಂಬದ ಸದಸ್ಯರು ಪೊಲೀಸರಿಗೆ ದೂರು ನೀಡಿದ್ದಾರೆ. ಇದಾದ ಬಳಿಕ ಬುರುಯಿರ್‌ಪುರದ ಕೊಳದಲ್ಲಿ ಪ್ಲಾಸ್ಟಿಕ್‌ನಲ್ಲಿ ಸುತ್ತಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಇದನ್ನೂ ಓದಿ: ಸಿಎಂ ಮಂಗಳೂರಿನಲ್ಲಿ ಇರುವಾಗಲೇ ಸ್ಕೆಚ್ – ಟೈಮರ್ ಕೈಕೊಟ್ಟು ದಾರಿ ಮಧ್ಯೆ ಬಾಂಬ್ ಸ್ಫೋಟ

    ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದು, ಮಾಜಿ ಅಧಿಕಾರಿಯ ಹತ್ಯೆಯನ್ನು ಅವರ ಮಗನೇ ನಡೆಸಿರುವುದಾಗಿ ತಿಳಿದುಬಂದಿದೆ. ಉಜ್ವಲ್ ಚಕ್ರವರ್ತಿ ಮದ್ಯವ್ಯಸನಿಯಾಗಿದ್ದು, ತನ್ನ ಮಗನ ಮೇಲೆ ನಿರಂತರವಾಗಿ ಹಲ್ಲೆ ನಡೆಸುತ್ತಿದ್ದರು. ನವೆಂಬರ್ 14ರಂದು ಜಗಳ ಅತಿರೇಕಕ್ಕೆ ಹೋಗಿದ್ದು, ಮಗ ಪ್ರತೀಕಾರವಾಗಿ ತಂದೆಯ ಮೇಲೆ ದಾಳಿ ಮಾಡಿದ್ದಾನೆ. ಇದರಿಂದ ಉಜ್ವಲ್ ಚಕ್ರವರ್ತಿ ಸಾವನ್ನಪ್ಪಿದ್ದಾರೆ.

    crime

    ತಂದೆಯ ಕೊಲೆಯ ಬಳಿಕ ಅವರ ಛಿದ್ರವಾದ ಮೃತದೇಹವನ್ನು ಪ್ಲಾಸ್ಟಿಕ್‌ನಲ್ಲಿ ಸುತ್ತಿ, ಕೊಳದಲ್ಲಿ ಎಸೆದಿದ್ದಾರೆ. ಮಗನ ಕೃತ್ಯಕ್ಕೆ ಆತನ ತಾಯಿ ಕೂಡಾ ಸಹಾಯ ಮಾಡಿರುವುದಾಗಿ ತಿಳಿದುಬಂದಿದೆ. ಇದೀಗ ಘಟನೆಯ ಬಗ್ಗೆ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. ಇದನ್ನೂ ಓದಿ: ಜೈಪುರದಲ್ಲೊಂದು ಅಮಾನುಷ ಕೃತ್ಯ – ದಂಪತಿಗೆ ಚಪ್ಪಲಿ ಹಾರ ಹಾಕಿ, ಮೂತ್ರ ಕುಡಿಸಿದ್ರು

    Live Tv
    [brid partner=56869869 player=32851 video=960834 autoplay=true]

  • ಟಿಎಂಸಿ ಪಂಚಾಯತ್ ನಾಯಕನ ಮನೇಲಿ ಕಚ್ಚಾ ಬಾಂಬ್ ಸ್ಫೋಟ – ಇಬ್ಬರಿಗೆ ಗಾಯ

    ಟಿಎಂಸಿ ಪಂಚಾಯತ್ ನಾಯಕನ ಮನೇಲಿ ಕಚ್ಚಾ ಬಾಂಬ್ ಸ್ಫೋಟ – ಇಬ್ಬರಿಗೆ ಗಾಯ

    ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಪಂಚಾಯತ್ (Trinamool Congress panchayat) ನಾಯಕನ ನಿರ್ಮಾಣ ಹಂತದ ಕಟ್ಟಡದಲ್ಲಿ ಕಚ್ಚಾ ಬಾಂಬ್ (Crude Bomb) ಸ್ಫೋಟಗೊಂಡು, ಇಬ್ಬರು ಕಟ್ಟಡ ಕಾರ್ಮಿಕರು ಗಾಯಗೊಂಡಿರುವ ಘಟನೆ ಬಂಗಾಳದ (Bengal) ದೇಗಂಗಾದಲ್ಲಿ (Deganga) ನಡೆದಿದೆ.

    ಟಿಎಂಸಿ ನಾಯಕ ಶಾಹಿ ಸುಲ್ತಾನ್‌ (TMC leader Shahi Sultana) ಅವರ ನಿರ್ಮಾಣ ಹಂತದಲ್ಲಿರುವ ಕಟ್ಟಡಕ್ಕೆ ಕೆಲವು ಕಾರ್ಮಿಕರು ಹೋಗಿದ್ದರು. ಈ ವೇಳೆ ಮೆಟ್ಟಿಲುಗಳ ಕೆಳಗೆ ಇಟ್ಟಿದ್ದ ಬಾಂಬ್‍ಗಳು ಸ್ಫೋಟಗೊಂಡು ಇಬ್ಬರು ಕಾರ್ಮಿಕರು ಗಾಯಗೊಂಡಿದ್ದಾರೆ. ಇದೀಗ ಗಾಯಾಳುಗಳನ್ನು ಬಿಸ್ವನಾಥಪುರ ಪ್ರಾಥಮಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದಿದ್ದು, ಅದೃಷ್ಟವಶಾತ್ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೊಂದು ಹನಿಟ್ರ್ಯಾಪ್ ಕೇಸ್ – ಪ್ರೀತ್ಸೋ ನೆಪದಲ್ಲಿ ಮಾಯಾಂಗನೆ ಹನಿಟ್ರ್ಯಾಪ್ ಖೆಡ್ಡಕ್ಕೆ ಬಿದ್ದ ಯುವಕ

    ಘಟನಾ ಸ್ಥಳದಿಂದ ಪೊಲೀಸರು ಮೂರು ಹೆಚ್ಚುವರಿ ಬಾಂಬ್‍ಗಳನ್ನು ವಶಪಡಿಸಿಕೊಂಡಿದ್ದು, ಈ ಬಗ್ಗೆ ತನಿಖೆ ಆರಂಭಿಸಿದ್ದರೂ ಇಲ್ಲಿಯವರೆಗೂ ಯಾರನ್ನೂ ಬಂಧಿಸಿಲ್ಲ. ಕಳೆದ ಮಂಗಳವಾರ ಉತ್ತರ 24 ಪರಗಣದ ಟಿಎಂಸಿ ಪಂಚಾಯತ್ ನಾಯಕ ಸುಕುರ್ ಅಲಿ ಅವರನ್ನು ಶಸ್ತ್ರಾಸ್ತ್ರಗಳೊಂದಿಗೆ ಪೊಲೀಸರು ಬಂಧಿಸಿದ್ದರು. ಮುಂದಿನ ವರ್ಷ ನಡೆಯಲಿರುವ ಪಂಚಾಯತ್ ಚುನಾವಣೆಗೂ ಮುನ್ನವೇ ಬಂಗಾಳದ ಕೆಲವು ಭಾಗಗಳಲ್ಲಿ ಈ ರೀತಿಯ ಬೆಳವಣಿಗೆಗಳ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಇದನ್ನೂ ಓದಿ: ಪತಿಯ ಕಿರುಕುಳ – ಪ್ರೀತಿಸಿ ಮದುವೆಯಾಗಿದ್ದ ತುಂಬು ಗರ್ಭಿಣಿ ನೇಣಿಗೆ ಶರಣು

    Live Tv
    [brid partner=56869869 player=32851 video=960834 autoplay=true]