Tag: kolkata

  • ಕೋಲ್ಕತ್ತಾ ಪೊಲೀಸರಿಂದ ಬಿಸಿಸಿಐಗೆ ನೋಟಿಸ್

    ಕೋಲ್ಕತ್ತಾ ಪೊಲೀಸರಿಂದ ಬಿಸಿಸಿಐಗೆ ನೋಟಿಸ್

    ಕೋಲ್ಕತ್ತಾ: ಈಡನ್ ಗಾರ್ಡನ್ಸ್‌ನಲ್ಲಿ (Eden Gardens) ಭಾನುವಾರ ನಡೆಯತ್ತಿರುವ ಭಾರತ (India) ಮತ್ತು ದಕ್ಷಿಣ ಆಫ್ರಿಕಾ (South Africa) ನಡುವಿನ ವಿಶ್ವಕಪ್ (World Cup) ಕ್ರಿಕೆಟ್ (Cricket) ಪಂದ್ಯದ ಟಿಕೆಟ್‌ಗಳನ್ನು‌ ಬ್ಲ್ಯಾಕ್ ಮಾರ್ಕೆಟಿಂಗ್ ಮಾಡಿದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಈವೆಂಟ್‌ನ ಟಿಕೆಟ್ ಮಾರಾಟದ ಬಗ್ಗೆ ಮಾಹಿತಿ ನೀಡುವಂತೆ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ (Roger Binny) ಅವರಿಗೆ ನೋಟಿಸ್ (Notice) ನೀಡಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಶನಿವಾರ ಸಂಜೆ ತಡವಾಗಿ ಹೊರಡಿಸಲಾದ ನೋಟಿಸ್‌ನಲ್ಲಿ, ಟಿಕೆಟ್‌ಗಳ ಬ್ಲ್ಯಾಕ್ ಮಾರ್ಕೆಟಿಂಗ್ (Black Marketing) ಕುರಿತು ದೂರುಗಳ ತನಿಖೆ ನಡೆಸುತ್ತಿರುವ ಮೈದಾನ ಪೊಲೀಸ್ ಠಾಣೆಯ ಅಧಿಕಾರಿಗೆ ದಾಖಲೆಗಳನ್ನು ಸಲ್ಲಿಸುವಂತೆ ಬಿಸಿಸಿಐ ಅಧ್ಯಕ್ಷರಿಗೆ ತಿಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ನಾನು, ಧೋನಿ ಆತ್ಮೀಯ ಸ್ನೇಹಿತರಲ್ಲ: ಯುವರಾಜ್‌ ಸಿಂಗ್‌

    ಮಂಗಳವಾರದ ಕೆಲಸದ ಸಮಯದಲ್ಲಿ ಮೈದಾನ ಪಿಎಸ್‌ನ ತನಿಖಾಧಿಕಾರಿಗೆ ವೈಯಕ್ತಿಕವಾಗಿ ಅಥವಾ ಅವರ ಸಂಸ್ಥೆಯ ಯಾವುದೇ ಸಮರ್ಥ ವ್ಯಕ್ತಿಯ ಮೂಲಕ ಟಿಕೆಟ್‌ಗಳ ಮಾರಾಟಕ್ಕೆ ಸಂಬಂಧಿಸಿದ ದಾಖಲೆಗಳು ಮತ್ತು ಮಾಹಿತಿಯನ್ನು ಒದಗಿಸುವಂತೆ ಬಿಸಿಸಿಐ ಅಧ್ಯಕ್ಷರಿಗೆ ನೋಟಿಸ್ ಕಳುಹಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ವಿಶ್ವಕಪ್‌ನಿಂದ ಹೊರಗುಳಿದ ಪಾಂಡ್ಯ – ಉಪನಾಯಕನಾಗಿ ಕೆಎಲ್ ರಾಹುಲ್ ಆಯ್ಕೆ

    ಬ್ಲ್ಯಾಕ್ ಮಾರ್ಕೆಟಿಂಗ್ ಕುರಿತು ಕೋಲ್ಕತ್ತಾ ಪೊಲೀಸರು ಇದುವರೆಗೆ 19 ಜನರನ್ನು ಬಂಧಿಸಿದ್ದಾರೆ. ಬಂಧಿತರಿಂದ 108 ಟಿಕೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಟಿಕೆಟ್‌ಗಳ ಬ್ಲ್ಯಾಕ್ ಮಾರ್ಕೆಟಿಂಗ್‌ಗೆ ಸಂಬಂಧಿಸಿದಂತೆ ಏಳು ಪ್ರಕರಣಗಳನ್ನು ದಾಖಲಿಸಿದ್ದಾರೆ. ಇದನ್ನೂ ಓದಿ: ವಿಶ್ವಕಪ್‌ ಟೂರ್ನಿಯಿಂದಲೇ ಪಾಂಡ್ಯ ಔಟ್‌ – ಬದಲಿ ಆಟಗಾರನಾಗಿ ಈ ಕನ್ನಡಿಗ ಆಯ್ಕೆ

  • ಪಾಕ್-ಬಾಂಗ್ಲಾ ಪಂದ್ಯದ ವೇಳೆ ಪ್ಯಾಲೆಸ್ತೀನ್ ಧ್ವಜ ಹಾರಿಸಿದ ಯುವಕರು – ನಾಲ್ವರು ವಶಕ್ಕೆ

    ಪಾಕ್-ಬಾಂಗ್ಲಾ ಪಂದ್ಯದ ವೇಳೆ ಪ್ಯಾಲೆಸ್ತೀನ್ ಧ್ವಜ ಹಾರಿಸಿದ ಯುವಕರು – ನಾಲ್ವರು ವಶಕ್ಕೆ

    ಕೋಲ್ಕತ್ತಾ: ಮಂಗಳವಾರ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ (Eden Gardens Stadium) ನಡೆದ ಪಾಕಿಸ್ತಾನ-ಬಾಂಗ್ಲಾದೇಶ ವಿಶ್ವಕಪ್ (World Cup) ಕ್ರಿಕೆಟ್ ಪಂದ್ಯದ ವೇಳೆ ಪ್ಯಾಲೆಸ್ತೀನ್ (Palestinian) ಧ್ವಜ (Flag) ಹಾರಿಸಿದ ನಾಲ್ವರು ಯುವಕರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ವಶಕ್ಕೆ ಪಡೆದವರಲ್ಲಿ ಇಬ್ಬರು ಜಾರ್ಖಂಡ್‌ನ ನಿವಾಸಿಗಳಾಗಿದ್ದು, ಇನ್ನಿಬ್ಬರು ಕೋಲ್ಕತ್ತಾದ ಎಕ್ಬಾಲ್‌ಪೋರ್ ಮತ್ತು ನೆರೆಯ ಹೌರಾದಿಂದ ಬಂದವರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಬ್ಬರನ್ನು ಗೇಟ್ ಸಂಖ್ಯೆ 6ರ ಬಳಿ ಪ್ಯಾಲೆಸ್ತೀನ್ ಧ್ವಜ ಹಾರಿಸಿದ್ದಕ್ಕಾಗಿ ವಶಕ್ಕೆ ಪಡೆದಿದ್ದು, ಮತ್ತಿಬ್ಬರನ್ನು ಬ್ಲಾಕ್ ಜಿ1 ನಲ್ಲಿ ವಶಕ್ಕೆ ಪಡೆಯಲಾಗಿದೆ. ನಾವು ಅವರ ಉದ್ದೇಶವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೇವೆ ಎಂದು ಐಪಿಎಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಮತ್ತೆ 100 ರೂ. ಏರಿಕೆ!

    ಮೈದಾನ ಪೊಲೀಸ್ ಠಾಣೆಯಿಂದ ನಾಲ್ವರನ್ನು ಕಾನೂನು ಪರಿಪಾಲಕರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಮೊದಲಿಗೆ ಅಲ್ಲಿ ಪೋಸ್ಟಿಂಗ್ ಮಾಡಿದ ಪೊಲೀಸರಿಗೆ ಪ್ರತಿಭಟನಾಕಾರರು ಏನು ಮಾಡುತ್ತಿದ್ದಾರೆ ಎಂದು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ನಂತರ ಅವರು ಪ್ಯಾಲೆಸ್ತೀನ್ ಧ್ವಜವನ್ನು ಹಾರಿಸುತ್ತಿರುವುದನ್ನು ಗಮನಿಸಿದ ಬಳಿಕ ಅವರನ್ನು ವಶಕ್ಕೆ ಪಡೆಯಲಾಯಿತು. ಆದರೆ ಅವರು ಯಾವುದೇ ಘೋಷಣೆಯನ್ನು ಕೂಗಲಿಲ್ಲ ಎಂದು ಐಪಿಎಸ್ ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಮೋದಿಗೆ ಕೇಜ್ರಿವಾಲ್‌ ಕಂಡರೆ ಭಯ, ಶ್ರೀಘ್ರವೇ ಬಂಧನ ಸಾಧ್ಯತೆ – ಸಚಿವೆ ಅತಿಶಿ

    ಆರಂಭಿಕ ತನಿಖೆಯಲ್ಲಿ ಇಪ್ಪತ್ತು ವಯಸ್ಸಿನ ನಾಲ್ವರು ಯುವಕರು ಗಾಜಾದಲ್ಲಿ ನಡೆಯುತ್ತಿರುವ ಇಸ್ರೇಲ್-ಹಮಾಸ್ ಸಂಘರ್ಷವನ್ನು ಪ್ರತಿಭಟಿಸುತ್ತಿದ್ದು, ಜನರಲ್ಲಿ ಸಂಚಲನ ಮೂಡಿಸುವ ಸಲುವಾಗಿ ಅಂತರ್‌ರಾಷ್ಟ್ರೀಯ ಪಂದ್ಯವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಕೋಲ್ಕತ್ತಾ ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಯಾರ ಪ್ರಭಾವಕ್ಕೂ ಒಳಗಾಗದಿದ್ರೆ ಫೋನ್‌ ಹ್ಯಾಕಿಂಗ್‌ ಪ್ರಯತ್ನ ಯಾಕೆ? – ಯಾವುದಕ್ಕೂ ಹೆದರಲ್ಲ: ರಾಗಾ ತಿರುಗೇಟು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಶ್ಚಿಮ ಬಂಗಾಳ ಸಚಿವನ ಮನೆ ಮೇಲೆ ಇಡಿ ದಾಳಿ

    ಪಶ್ಚಿಮ ಬಂಗಾಳ ಸಚಿವನ ಮನೆ ಮೇಲೆ ಇಡಿ ದಾಳಿ

    ಕೋಲ್ಕತ್ತಾ: ಅಕ್ರಮ ನೇಮಕಾತಿ (Recruitment Scam) ಪ್ರಕರಣವೊಂದರ ತನಿಖೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ (West Bengal) ಆಹಾರ ಮತ್ತು ಸರಬರಾಜು ಸಚಿವ ರಥಿನ್ ಘೋಷ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ಮಾಡಿದೆ.

    ಅವರಿಗೆ ಸೇರಿದ ಹಲವು ಸ್ಥಳಗಳಲ್ಲಿ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ. ರಾಜ್ಯದ ನಾಗರಿಕ ಸಂಸ್ಥೆಗಳ ನೇಮಕಾತಿಯಲ್ಲಿನ ಅಕ್ರಮಗಳ ತನಿಖೆಗೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕಿತ್ತಳೆ ಬಣ್ಣದ ವಂದೇ ಭಾರತ್ ರೈಲಿನ ಹಿಂದಿದೆ ವೈಜ್ಞಾನಿಕ ಚಿಂತನೆ – ರಾಜಕೀಯ ಅಲ್ಲ: ಅಶ್ವಿನಿ ವೈಷ್ಣವ್

    ಭದ್ರತಾ ಪಡೆಗಳ ತುಕಡಿಯೊಂದಿಗೆ ತನಿಖಾಧಿಕಾರಿಗಳು ಘೋಷ್ ಅವರ ಮನೆ ಮೇಲೆ ಬೆಳಿಗ್ಗೆ 6:10 ರ ಸುಮಾರಿಗೆ ದಾಳಿ ನಡೆಸಿದ್ದಾರೆ. ತನಿಖಾಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ಇತರ 12 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ಮಾಡಿದ್ದಾರೆ. ಈ ವೇಳೆ ಘೋಷ್ ಅವರು ಮನೆಯಲ್ಲಿದ್ದರೆ ಎಂಬುದು ತಿಳಿದು ಬಂದಿಲ್ಲ.

    ಮಧ್ಯಮಗ್ರಾಮದ ಟಿಎಂಸಿ (TMC) ಶಾಸಕ ಘೋಷ್ ಅವರು ಈ ಹಿಂದೆ ಅಲ್ಲಿನ ಪುರಸಭೆಯ ಪದಾಧಿಕಾರಿಯಾಗಿದ್ದರು. 2014 ಮತ್ತು 2018ರ ನಡುವೆ ರಾಜ್ಯದ ವಿವಿಧ ನಾಗರಿಕ ಸಂಸ್ಥೆಗಳ ನಿಯಮದ ವಿರುದ್ಧವಾಗಿ ಸುಮಾರು 1,500 ಜನರನ್ನು ಅಕ್ರಮವಾಗಿ ನೇಮಕ ಮಾಡಿಕೊಂಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ. ಇದನ್ನೂ ಓದಿ: ಸಿಕ್ಕಿಂ ಪ್ರವಾಹ – 102 ಜನ ನಾಪತ್ತೆ, ಸಾವಿನ ಸಂಖ್ಯೆ 14ಕ್ಕೆ ಏರಿಕೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Super Blue Moon: ನೀಲಿ ಚಂದಿರನನ್ನು ಕಣ್ತುಂಬಿಕೊಂಡ ಜನ

    Super Blue Moon: ನೀಲಿ ಚಂದಿರನನ್ನು ಕಣ್ತುಂಬಿಕೊಂಡ ಜನ

    ಕೋಲ್ಕತ್ತಾ: ಬುಧವಾರ (ಇಂದು) ರಾತ್ರಿ ಶ್ರಾವಣ ಪೌರ್ಣಮಿ ಆಚರಣೆ ಸಂದರ್ಭದಲ್ಲಿ ದೇಶದ ವಿವಿಧೆಡೆ ಸೂಪರ್‌ ಬ್ಲೂ ಮೂನ್‌ (Super Blue Moon) ದರ್ಶನವಾಗಿದೆ. ಇತರೇ ದಿನಗಳಿಗಿಂತ ಚಂದ್ರ ದೊಡ್ಡದಾಗಿ ಕಾಣಿಸಿಕೊಂಡಿದ್ದು, ಈ ಕೌತುಕವನ್ನು ಜನರು ಕಣ್ತುಂಬಿಕೊಂಡಿದ್ದಾರೆ.

    ಆಗಸ್ಟ್ 30 ರಂದು ಕಾಣಿಸಿಕೊಳ್ಳುವ ಸೂಪರ್ ಬ್ಲೂ ಮೂನ್ ಖಗೋಳ ಘಟನೆಯಾಗಿದ್ದು, ಇದು 10 ವರ್ಷಗಳಿಗೊಮ್ಮೆ ಸಂಭವಿಸುತ್ತದೆ. ಬಾಹ್ಯಾಕಾಶದಲ್ಲಿ ಚಂದ್ರನೊಂದಿಗೆ ಸಂಭವಿಸುವ ಇದೇ ರೀತಿಯ ಖಗೋಳ ಘಟನೆಗಳನ್ನು ಬ್ಲೂ ಮೂನ್, ನ್ಯೂ ಮೂನ್, ಫುಲ್ ಮೂನ್, ಸೂಪರ್ ಮೂನ್ ಎಂದೂ ಕರೆಯಲಾಗುತ್ತದೆ.

    ಅದೇ ರೀತಿ ಇಂದು ಪಶ್ಚಿಮ ಬಂಗಾಳದ (West Bengal) ಕೋಲ್ಕತ್ತಾ, ಅಸ್ಸಾಂನ ಗುವಾಹಟಿ ಸೇರಿದಂತೆ ವಿವಿಧ ಕೆಲವು ರಾಜ್ಯಗಳಲ್ಲಿ ಸೂಪರ್‌ ಮೂನ್‌ ಕಾಣಿಸಿಕೊಂಡಿದೆ. ಕೆಲವೆಡೆ ಮಳೆ ಮೋಡದ ವಾತಾವರಣದಿಂದಾಗಿ ನಿರಾಸೆ ಮೂಡಿಸಿದೆ. ಇದನ್ನೂ ಓದಿ: 7,000 ರಾಖಿ ಕಟ್ಟಿಸಿಕೊಂಡು ವಿಶ್ವ ದಾಖಲೆ ಬರೆದ ಜನಪ್ರಿಯ ಆನ್‌ಲೈನ್ ಬೋಧಕ ಖಾನ್ ಸರ್

    ಸೂಪರ್ ಬ್ಲೂ ಮೂನ್ (Blue Moon) ಸಾಮಾನ್ಯ ದಿನಗಳಿಗಿಂತ 14 ಪ್ರತಿಶತ ದೊಡ್ಡದಾಗಿ ಮತ್ತು 30 ಪ್ರತಿಶತ ಪ್ರಕಾಶಮಾನವಾಗಿ ಕಾಣುತ್ತದೆ. ಇಂದು ಯಾವುದೇ ಉಪಕರಣಗಳಿಲ್ಲದೇ ಸೂಪರ್ ಬ್ಲೂ ಮೂನ್ ಅನ್ನು ಸುಲಭವಾಗಿ ನೋಡಬಹುದು. ಚಂದ್ರನು ನೀಲಿ ಬಣ್ಣದಲ್ಲಿ ಕಾಣುವುದಿಲ್ಲ, ಅದು ಸ್ವಲ್ಪ ತಿಳಿ ಕಿತ್ತಳೆ ಅಥವಾ ಹಳದಿ ಬಣ್ಣದಲ್ಲಿ ಕಾಣುತ್ತದೆ. ಸುತ್ತಲೂ ಸಾಕಷ್ಟು ಮಾಲಿನ್ಯವಿದ್ದಾಗ, ಇದರಿಂದಾಗಿ ಧೂಳಿನ ಕಣಗಳು ಗಾಳಿಯಲ್ಲಿ ಹರಡಿಕೊಂಡಿದ್ದರೆ ಮಾತ್ರ ಚಂದ್ರನು ನೀಲಿ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತಾನೆ. ಬ್ಲೂ ಮೂನ್ ಅಥವಾ ಸೂಪರ್ ಬ್ಲೂ ಮೂನ್ ನಲ್ಲಿ ಚಂದ್ರನು ನೀಲಿ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತಾನೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಅದರಂತೆ ಅಲ್ಲಲ್ಲಿ ಚಂದಿರನ ಕೌತುಕದ ದರ್ಶನವಾಗಿದೆ.

    ಏನಿದು ಬ್ಲೂ ಮೂನ್‌?
    ಸಾಮಾನ್ಯವಾಗಿ ತಿಂಗಳಿಗೆ ಒಮ್ಮೆ ಹುಣ್ಣಿಮೆ ಬರುತ್ತದೆ. ಆದ್ರೆ ಬ್ಲೂ ಮೂನ್‌ ಕಾಣಿಸಿಕೊಂಡಾಗ ಎರಡು ಬಾರಿ ಹುಣ್ಣಿಮೆ ಇರುತ್ತದೆ. ಇದನ್ನೂ ಓದಿ: 2024ಕ್ಕೆ ಮತ್ತೆ ಬರ್ತೀನಿ – ಹವಾ ಎಬ್ಬಿಸಿದ ಮೋದಿ ಟರ್ಮಿನೇಟರ್‌ ಪೋಸ್ಟರ್‌

    ನಾಸಾದ ಪ್ರಕಾರ, ಈ ವರ್ಷ ನಾಲ್ಕು ಬಾರಿ ಬ್ಲೂ ಮೂನ್‌ ಸಂಭವಿಸಲಿದೆ. ಈ ತಿಂಗಳು ಎರಡು ದಿನ ಚಂದ್ರನು ಪೂರ್ಣ ಆಕಾರದಲ್ಲಿ ಆಗಸದಲ್ಲಿ ಉದಯಿಸಲಿದ್ದಾನೆ. ಸಮಯ ಹಾಗೂ ದಿನಾಂಕದ ಆಧಾರದ ಮೇಲೆ ಈ ಬಾರಿ ಉದಯಿಸುವ ಬ್ಲೂ ಮೂನ್‌ ಅನ್ನು 2ನೇ ಬ್ಲೂ ಮೂನ್‌ ಎಂದು ಅಂದಾಜಿಸಲಾಗಿದೆ. ಚಂದ್ರನ ಹಂತಗಳು ಸರಾಸರಿ 29.5 ದಿನಗಳವರೆಗೆ ಇರುವುದರಿಂದ 12 ಚಂದ್ರನ ಚಕ್ರಗಳನ್ನು ನಿಜವಾಗಿಯೂ 354 ದಿನಗಳಲ್ಲಿ ಪೂರ್ಣಗೊಳಿಸಬಹುದು ಎಂದು ಊಹಿಸಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ- 7 ಜನರ ದುರ್ಮರಣ

    ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ- 7 ಜನರ ದುರ್ಮರಣ

    ಕೋಲ್ಕತ್ತಾ: ಅಕ್ರಮ ಪಟಾಕಿ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ ಏಳು ಮಂದಿ ಸಾವನ್ನಪ್ಪಿದ ಘಟನೆ ಪಶ್ಚಿಮ ಬಂಗಾಳದ (West Bengal) ದತ್ತಪುಕೂರ್‌ನ ನಡೆದಿದೆ.

    ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ಅಲ್ಲದೇ ಸ್ಫೋಟದ ತೀವ್ರತೆಗೆ ಈ ಪ್ರದೇಶದಲ್ಲಿನ ಹಲವಾರು ಕಟ್ಟಡಗಳಿಗೆ ಹಾನಿಯಾಗಿದೆ. ಎರಡು ಅಂತಸ್ತಿನ ಮನೆಯೊಳಗೆ ಅಕ್ರಮವಾಗಿ ಪಟಾಕಿ ಕಾರ್ಖಾನೆ ನಡೆಸಲಾಗುತ್ತಿತ್ತು ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕುಕ್ಕರ್‌ನಿಂದ ಹೊಡೆದು ಪ್ರಿಯತಮೆಯ ಕೊಲೆಗೈದ ಪ್ರಿಯಕರ

    ಇದೇ ವರ್ಷ ಮೇ ತಿಂಗಳಲ್ಲಿ ಮಿಡ್ನಾಪುರ ಜಿಲ್ಲೆಯ ಎಗ್ರಾ ಎಂಬಲ್ಲಿ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಒಂಬತ್ತು ಮಂದಿ ಸಾವನ್ನಪ್ಪಿದರು. ಅಲ್ಲದೇ ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಮತ್ತೊಂದು ಪ್ರಕರಣದಲ್ಲಿ ಪಟಾಕಿ ತಯಾರಿಕಾ ಘಟಕದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ ಮೂರು ಜನರು ಸಾವನ್ನಪ್ಪಿದ್ದರು.

    ಹಲವಾರು ಸ್ಫೋಟಗಳ ಬಳಿಕ ರಾಜ್ಯ ಸರ್ಕಾರವು ಹೊಸ ನೀತಿಯನ್ನು ಘೋಷಿಸಿತ್ತು. ಇದರ ಅಡಿಯಲ್ಲಿ ಕೈಗಾರಿಕಾ ಕೇಂದ್ರಗಳಲ್ಲಿ ಮಾತ್ರ ಪಟಾಕಿಗಳನ್ನು ತಯಾರಿಸಲು ಸೂಚಿಸಲಾಗಿತ್ತು. ಅಲ್ಲದೇ ಅಕ್ರಮ ಪಟಾಕಿ ತಯಾರಿಕಾ ಘಟಕಗಳ ಪತ್ತೆಗೆ ಅಧಿಕಾರಿಗಳ ತಂಡವನ್ನು ರಚಿಸಲಾಗಿತ್ತು. ಇದನ್ನೂ ಓದಿ: ತಾಳಿ ಕಟ್ಟೋ ವೇಳೆ ಹಸೆಮಣೆಯಿಂದ ಎದ್ದ ವಧು – ಮುರಿದು ಬಿತ್ತು ಮದುವೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶಸ್ತ್ರಾಸ್ತ್ರ ಹಿಡಿದುಕೊಂಡು ಮಮತಾ ಮನೆಗೆ ನುಗ್ಗಲು ಯತ್ನಿಸಿದ ವ್ಯಕ್ತಿ ಅರೆಸ್ಟ್

    ಶಸ್ತ್ರಾಸ್ತ್ರ ಹಿಡಿದುಕೊಂಡು ಮಮತಾ ಮನೆಗೆ ನುಗ್ಗಲು ಯತ್ನಿಸಿದ ವ್ಯಕ್ತಿ ಅರೆಸ್ಟ್

    ಕೋಲ್ಕತ್ತಾ: ಶಸ್ತ್ರಾಸ್ತ್ರ ಹಾಗೂ ಮಾದಕ ವಸ್ತುಗಳೊಂದಿಗೆ ಬಂದು ಪಶ್ಚಿಮ ಬಂಗಾಳ (West Bengal) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ನಿವಾಸವನ್ನು ನುಗ್ಗಲು ಯತ್ನಿಸಿದ ವ್ಯಕ್ತಿಯನ್ನು ಕೋಲ್ಕತ್ತಾ (Kolkata) ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

    ಮಮತಾ ಬ್ಯಾನರ್ಜಿ ಅವರ ಕಾಳಿಘಾಟ್‌ನಲ್ಲಿರುವ ನಿವಾಸಕ್ಕೆ ಕಾರಿನಲ್ಲಿ ಬಂದ ವ್ಯಕ್ತಿ ಶಸ್ತ್ರಾಸ್ತ್ರ ಹಾಗೂ ಮಾದಕವಸ್ತುಗಳೊಂದಿಗೆ ನುಗ್ಗಲು ಯತ್ನಿಸಿದ್ದಾನೆ. ಸದ್ಯ ಘಟನೆ ವೇಳೆ ಮಮತಾ ಬ್ಯಾನರ್ಜಿ ತಮ್ಮ ನಿವಾಸದಲ್ಲಿ ಇರಲಿಲ್ಲ. ತಕ್ಷಣ ಆತನನ್ನು ಅಧಿಕಾರಿಗಳು ಬಂಧಿಸಿದ್ದಾರೆ.

    ವ್ಯಕ್ತಿಯನ್ನು ಪೊಲೀಸರು ನೂರ್ ಆಲಂ ಎಂದು ಗುರುತಿಸಿದ್ದಾರೆ. ಆತ ಬ್ಯಾನರ್ಜಿ ನಿವಾಸಕ್ಕೆ ಕಪ್ಪು ಬಣ್ಣದ ಕಾರಿನಲ್ಲಿ ಬಂದಿದ್ದು, ಅದರಲ್ಲಿ ಪೊಲೀಸ್ ಎಂದು ಬರೆಯಲಾಗಿದ್ದ ಸ್ಟಿಕ್ಕರ್ ಅನ್ನು ಅಂಟಿಸಲಾಗಿತ್ತು. ಆತ ಕಪ್ಪು ಬಣ್ಣದ ಕೋಟ್ ಧರಿಸಿದ್ದ. ಮಮತಾ ನಿವಾಸದ ಬಳಿ ಅಧಿಕಾರಿಗಳು ತಪಾಸಣೆ ನಡೆಸಿದ ವೇಳೆ ಆತನ ವಾಹನದಲ್ಲಿ ಶಸ್ತ್ರಾಸ್ತ್ರ ಹಾಗೂ ಮಾದಕ ವಸ್ತು ಇರುವುದು ಕಂಡುಬಂದಿದೆ. ಇದನ್ನೂ ಓದಿ: ಕೃಷ್ಣ ಜನ್ಮಭೂಮಿ ಪ್ರಕರಣ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆದರೆ ಉತ್ತಮ – ಸುಪ್ರೀಂ ಕೋರ್ಟ್

    ತಕ್ಷಣ ಆತನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದಾಗ ಆತ ಮುಖ್ಯಮಂತ್ರಿಯನ್ನು ಭೇಟಿಯಾಗಲು ಬಯಸಿದ್ದಾಗಿ ತಿಳಿಸಿದ್ದಾನೆ. ಆತನ ಬಳಿ ಶಸ್ತ್ರಾಸ್ತ್ರ, ಮಾದಕ ವಸ್ತು, ಬಿಎಸ್‌ಎಫ್ ಹಾಗೂ ಇತರ ವಿವಿಧ ಏಜೆನ್ಸಿಗಳ ಹಲವಾರು ಗುರುತಿನ ಚೀಟಿಗಳು ಪತ್ತೆಯಾಗಿವೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಆತನ ನಿಜ ಉದ್ದೇಶ ಏನೆಂಬುದನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿ ಕೋಪಗೊಂಡಿದ್ದರೆ, ಬಿರೇನ್ ಸಿಂಗ್ ವಜಾ ಮಾಡಬಹುದಿತ್ತು: ಖರ್ಗೆ ಟಾಂಗ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ICC ODI World Cup: ಪಾಕ್ ಪಂದ್ಯಗಳಿಗೆ ಬಿಗಿ ಭದ್ರತೆ ನೀಡ್ತೇವೆ – ಬಂಗಾಳ ಕ್ರಿಕೆಟ್‌

    ICC ODI World Cup: ಪಾಕ್ ಪಂದ್ಯಗಳಿಗೆ ಬಿಗಿ ಭದ್ರತೆ ನೀಡ್ತೇವೆ – ಬಂಗಾಳ ಕ್ರಿಕೆಟ್‌

    ಕೋಲ್ಕತ್ತಾ: ಐಸಿಸಿ ಏಕದಿನ ವಿಶ್ವಕಪ್ (ICC World Cup 2023) ಟೂರ್ನಿಯ ವೇಳಾಪಟ್ಟಿ ಪ್ರಕಟವಾದ ಬೆನ್ನಲ್ಲೇ ಕೋಲ್ಕತ್ತಾದಲ್ಲಿ ನಡೆಯುವ ಪಾಕಿಸ್ತಾನ (Pakistan) ಪಂದ್ಯಗಳಿಗೆ ಭಾರೀ ಬಿಗಿ ಭದ್ರತೆ ಒದಗಿಸುವುದಾಗಿ ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಸ್ನೇಹಶಿಶ್ (Snehasish Ganguly) ತಿಳಿಸಿದ್ದಾರೆ.

    ಈಗಾಗಲೇ ನಿಗದಿಯಾಗಿರುವ ವೇಳಾಪಟ್ಟಿಯ ಪ್ರಕಾರ ಹೈದರಾಬಾದ್, ಅಹಮದಾಬಾದ್, ಬೆಂಗಳೂರು, ಚೆನ್ನೈ, ಕೋಲ್ಕತ್ತಾ ಸೇರಿ ಒಟ್ಟು 5 ಮಹಾನಗರಗಳಲ್ಲಿ ಪಾಕ್‌ನ 9 ಪಂದ್ಯಗಳು ನಡೆಯಲಿವೆ. ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ (Eden Gardens) ಪಾಕ್ ತಂಡವು ಅಕ್ಟೋಬರ್ 31ರಂದು ಬಾಂಗ್ಲಾದೇಶ ಹಾಗೂ ನವೆಂಬರ್ 12 ರಂದು ಇಂಗ್ಲೆಂಡ್ ವಿರುದ್ಧ ಸೆಣಸಲಿದೆ. ಇದರೊಂದಿಗೆ ನಿರ್ಣಾಯಕ ಪಂದ್ಯದಲ್ಲಿ ಟೀಂ ಇಂಡಿಯಾ (Team India), ದಕ್ಷಿಣ ಆಫ್ರಿಕಾ ವಿರುದ್ಧ ಇದೇ ಮೈದಾನದಲ್ಲಿ ಕಣಕ್ಕಿಳಿಯಲಿದೆ.

    ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರೂ ಆಗಿರುವ ಸೌರವ್ ಗಂಗೂಲಿ ಹಿರಿಯ ಸಹೋದರ ಸ್ನೇಹಶಿಶ್ ಗಂಗೂಲಿ, ಈಡನ್ ಗಾರ್ಡನ್‌ನಲ್ಲಿ ನಡೆಯುವ ಪಾಕ್ ಪಂದ್ಯಗಳಿಗೆ ಹೆಚ್ಚಿನ ಭದ್ರತೆ ಒದಗಿಸಲಾಗುವುದು ಎಂದು ಹೇಳಿದ್ದಾರೆ. ಇದನ್ನೂ ಓದಿ:  ನಮ್ಮ ತಂಡದಲ್ಲಿ ಬೆಸ್ಟ್‌ ಪ್ಲೇಯರ್‌ ಇದ್ದಾನೆ, ಯಾವುದಕ್ಕೂ ತಲೆ ಕೆಡಿಸಿಕೊಳ್ಳಲ್ಲ: ವಾಸಿಂ ಅಕ್ರಂ

    BCCI ಮತ್ತು ICC ತೆಗೆದುಕೊಂಡ ನಿರ್ಧಾರದಿಂದ ಸಂತೋಷವಾಗಿದ್ದು, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹಾಗೂ ಐಸಿಸಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಕಳೆದ ನಾಲ್ಕು ತಿಂಗಳಿಂದ ನಾನು ಉತ್ತಮ ಪಂದ್ಯಗಳಿಗಾಗಿ ಕೆಲಸ ಮಾಡುತ್ತಿದ್ದೇನೆ. ಜಯ್ ಶಾ ಅವರು ಈಡನ್ ಗಾರ್ಡನ್ ಬಗ್ಗೆ ಉತ್ತಮ ದೃಷ್ಟಿಕೋನ ಹೊದಿದ್ದು, ಅದರಂತೆ ಉತ್ತಮ ಪಂದ್ಯಗಳನ್ನೇ ಇಲ್ಲಿ ಆಯೋಜಿಸಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ವಿಶ್ವಕಪ್ ವೇಳಾಪಟ್ಟಿ ಹೊರಬಿದ್ದ ಬೆನ್ನಲ್ಲೇ ಭಾರತಕ್ಕೆ ಬರಲು ಪಾಕ್ ಆಕ್ಷೇಪ

    ಈ ಹಿಂದೆಯೂ ನಾವು ಭಾರತ ಮತ್ತು ಪಾಕ್ ಪಂದ್ಯಗಳಿಗೆ ಆತಿಥ್ಯ ವಹಿಸಿದ್ದೇವೆ. ಈ ಬಾರಿ ಪಾಕಿಸ್ತಾನ ತನ್ನ ಎರಡು ಪಂದ್ಯಗಳನ್ನ ಈಡನ್ ಗಾರ್ಡನ್‌ನಲ್ಲಿ ಆಡಲಿದೆ. ಈ ಪಂದ್ಯಗಳು ಅತ್ಯಂತ ಕಠಿಣವಾಗಿರಲಿವೆ. ಈಗಾಗಲೇ ಐಪಿಎಲ್‌ನಲ್ಲಿ ಅತಿಹೆಚ್ಚು ಪ್ರೇಕ್ಷಕರನ್ನ ಈ ಅಂಗಳದಲ್ಲಿ ಕಂಡಿರುವುದರಿಂದ ಯಾವುದೇ ರೀತಿಯ ಸವಾಲುಗಳನ್ನು ನಾವು ಎದುರಿಸಲು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.

    ಈ ಪಂದ್ಯಗಳನ್ನು ಆಯೋಜಿಸುವ ಬಗ್ಗೆ ನನಗೆ ತುಂಬಾ ವಿಶ್ವಾಸವಿದೆ. ಪಾಕಿಸ್ತಾನ ತಂಡಕ್ಕೆ ವಿಶೇಷ ಭದ್ರತಾ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಈ ಹಿಂದೆಯೂ ಪಾಕ್ ತಂಡ ಕೋಲ್ಕತ್ತಾದಲ್ಲಿ ಆಡಿದೆ. ಮೊದಲ ಆದ್ಯತೆ ಕೋಲ್ಕತ್ತಾಗೆ ನೀಡಲಿದ್ದು, ನಂತರದಲ್ಲಿ ಚೆನ್ನೈ ಹಾಗೂ ಬೆಂಗಳೂರು ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯಗಳಿಗೆ ಭದ್ರತೆ ಒದಗಿಸಲಾಗುತ್ತದೆ ಎಂದು ಅವರು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ICC ODI World Cup 2023: ಏಕದಿನ ವಿಶ್ವಕಪ್‌ ವೇಳಾಪಟ್ಟಿ ಪ್ರಕಟ

    ಸಿಎಂ ಮಮತಾ ಬ್ಯಾನರ್ಜಿ ಹಾಗೂ ಕೋಲ್ಕತ್ತಾ ಪೊಲೀಸರ ಮೇಲೆ ನನಗೆ ನಂಬಿಕೆಯಿದೆ. ಸಾಮಾನ್ಯ ಪಂದ್ಯಗಳಿಗಿಂತ ಹೆಚ್ಚಿನ ಭದ್ರತಾ ವ್ಯವಸ್ಥೆಯನ್ನು ಈ ಪಂದ್ಯಗಳಿಗೆ ಒದಗಿಸಲಿದ್ದಾರೆ ಎಂದು ಶ್ಲಾಘಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 3 ವರ್ಷದ ಹಿಂದಿನ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್ – ಮಹಿಳೆಯ ಅಸ್ತಿಪಂಜರ ಸೆಪ್ಟಿಕ್ ಟ್ಯಾಂಕ್‍ನಲ್ಲಿ ಪತ್ತೆ

    3 ವರ್ಷದ ಹಿಂದಿನ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್ – ಮಹಿಳೆಯ ಅಸ್ತಿಪಂಜರ ಸೆಪ್ಟಿಕ್ ಟ್ಯಾಂಕ್‍ನಲ್ಲಿ ಪತ್ತೆ

    ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ (West Bengal) 3 ವರ್ಷದ ಹಿಂದೆ ಮಹಿಳೆಯೊಬ್ಬರು ನಾಪತ್ತೆಯಾಗಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ರಾಜ್ಯ ಅಪರಾಧ ತನಿಖಾ ಇಲಾಖೆ (CID) ಸೆಪ್ಟಿಕ್ ಟ್ಯಾಂಕ್‍ನಿಂದ ಆಕೆಯ ಅಸ್ಥಿಪಂಜರವನ್ನು ವಶಪಡಿಸಿಕೊಂಡಿದೆ. ಅಲ್ಲದೇ ಇದರಿಂದ ಕೊಲೆ ಮಾಡಿ ನಾಪತ್ತೆ ಕಥೆ ಕಟ್ಟಿದ್ದ ಪತಿಯ ಮುಖವಾಡ ಕಳಚಿದೆ.

    ಮಹಿಳೆ ತುಂಪಾ ಮಂಡಲ್ ಎಂಬಾಕೆ ಮಾರ್ಚ್ 2020 ರಲ್ಲಿ ನಾಪತ್ತೆಯಾಗಿದ್ದಳು. ನಂತರ ಆಕೆಯ ತಂದೆ ಲಕ್ಷ್ಮಣ್ ಹಾಲ್ದರ್ ಸ್ಥಳೀಯ ಪೊಲೀಸರಿಗೆ ನಾಪತ್ತೆ ದೂರು ಸಲ್ಲಿಸಿದರು. ಈ ಪ್ರಕರಣದಲ್ಲಿ ಮೃತ ಮಹಿಳೆಯ ಪತಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಅಲ್ಲದೇ ಕೊಲೆ ಆರೋಪ ಸಹ ಮಾಡಲಾಗಿತ್ತು. ಆದರೆ ಪೊಲೀಸರಿಗೆ ಯಾವುದೇ ಸಾಕ್ಷ್ಯಗಳು ಸಿಗದ ಹಿನ್ನೆಲೆಯಲ್ಲಿ ನ್ಯಾಯಾಲಯ ಆತನಿಗೆ ಜಾಮೀನು ಮಂಜೂರು ಮಾಡಿತ್ತು. ಇದನ್ನೂ ಓದಿ: ಲೇಡಿಸ್ ಪಿಜಿಗಳೇ ಟಾರ್ಗೆಟ್ – ಸ್ನಾನ ಮಾಡುವುದನ್ನು ಕದ್ದುಮುಚ್ಚಿ ವೀಡಿಯೋ ಮಾಡುತ್ತಿದ್ದಾಗಲೇ ಕಿರಾತಕ ಲಾಕ್

    ಬಳಿಕ ಮಹಿಳೆಯ ತಂದೆ ಪ್ರಕರಣದ ಉನ್ನತ ತನಿಖೆಗಾಗಿ ಕೋಲ್ಕತ್ತಾ ಹೈಕೋರ್ಟ್‍ನ್ನು (Kolkata High Court) ಸಂಪರ್ಕಿಸಿದ್ದರು. ಅವರ ಮನವಿಗೆ ಸ್ಪಂದಿಸಿದ್ದ ಹೈಕೋರ್ಟ್ ತನಿಖೆಗಾಗಿ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಿತ್ತು. ಬಳಿಕ ಈ ಜೂ.13 ರಂದು, ಹೈಕೋರ್ಟ್ ಆದೇಶದ ಮೇರೆಗೆ ಸಿಐಡಿ ಘಟನೆಯ ತನಿಖೆಯನ್ನು ವಹಿಸಿಕೊಂಡಿತ್ತು.

    ಪ್ರಕರಣದ ತನಿಖೆಯನ್ನು ಕೈಗೊಂಡಿದ್ದ ಸಿಐಡಿ ಮಹಿಳೆಯ ಪತಿಯನ್ನು ಮತ್ತೆ ವಿಚಾರಣೆ ನಡೆಸಿದೆ. ತನಿಖೆ ಆರಂಭಿಸಿದ 10 ದಿನಗಳಲ್ಲಿ ಪತಿ ತನ್ನ ಹೆಂಡತಿಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆಕೆಯ ಶವವನ್ನು ಸೆಪ್ಟಿಕ್ ಟ್ಯಾಂಕ್‍ನಲ್ಲಿ ಹಾಕಿದ್ದಾಗಿ ತಿಳಿಸಿದ್ದಾನೆ. ಆರೋಪಿ ಬೊಂಬಾಲ್ ಮಂಡಲ್ ವಿರುದ್ಧ ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ.

    ಪತ್ನಿಗೆ ಅಕ್ರಮ ಸಂಬಂಧ ಇರಬಹುದು ಎಂದು ಶಂಕಿಸಿ, ಆರೋಪಿ ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಂದಿದ್ದಾನೆ. ಬಳಿಕ ಸೆಫ್ಟಿಕ್ ಟ್ಯಾಂಕ್‍ನಲ್ಲಿ ಶವ ಮುಚ್ಚಿಟ್ಟಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಟೇಕ್‍ಆಫ್ ವೇಳೆ ವಿಮಾನದ ಟಯರ್ ಬ್ಲಾಸ್ಟ್ – ಸಿಬ್ಬಂದಿ ಸೇರಿ 11 ಜನರಿಗೆ ಗಾಯ

  • ಕಿಡ್ನಾಪ್ ಕಥೆ ಕಟ್ಟಿ ಸ್ನೆಹಿತನೊಂದಿಗೆ ಅಪ್ರಾಪ್ತೆ ಪರಾರಿ

    ಕಿಡ್ನಾಪ್ ಕಥೆ ಕಟ್ಟಿ ಸ್ನೆಹಿತನೊಂದಿಗೆ ಅಪ್ರಾಪ್ತೆ ಪರಾರಿ

    ಮುಂಬೈ: ಆಪ್ರಾಪ್ತೆಯೊಬ್ಬಳು ತನ್ನ ಪ್ರಿಯಕರನೊಂದಿಗೆ ಮನೆಬಿಟ್ಟು ಹೋಗಿ ಕಿಡ್ನಾಪ್ (Kidnap) ಕಥೆ ಕಟ್ಟಿದ ಪ್ರಕರಣ ಮಹಾರಾಷ್ಟ್ರದ (Maharashtra) ಪಾಲ್ಘರ್‌ನಲ್ಲಿ ನಡೆದಿದೆ.

    17 ವರ್ಷದ ಬಾಲಕಿ ತನ್ನ ಪ್ರೇಮಿಯೊಂದಿಗೆ ಮನೆಬಿಟ್ಟು ಕೋಲ್ಕತ್ತಾಗೆ ತೆರಳಿದ್ದಾಳೆ. ಬಳಿಕ ತನ್ನ ಸಹೋದರನಿಗೆ ವಾಟ್ಸಾಪ್ ಮೂಲಕ ವಾಯ್ಸ್ ಕಳಿಸಿದ್ದು, ತನ್ನನ್ನು ಅಪಹರಿಸಿದ್ದಾರೆ ಎಂದು ಹೇಳಿದ್ದಾಳೆ. ಈ ಬಗ್ಗೆ ಬಾಲಕಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ನಕಲಿ ಕಿಡ್ನಾಪ್ ಕಥೆಯನ್ನು ಬಯಲಿಗೆಳೆದಿದ್ದಾರೆ. ಇದನ್ನೂ ಓದಿ: ಭಾರೀ ಮಳೆಯಿಂದ ಭೂಕುಸಿತ – ಸಿಕ್ಕಿಂನಲ್ಲಿ ಸಿಲುಕಿದ್ದ 300 ಪ್ರವಾಸಿಗರನ್ನು ರಕ್ಷಿಸಿದ ಸೇನೆ

    ಕಂಪನಿಯೊಂದರಲ್ಲಿ ಹೌಸ್‍ಕೀಪಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಬಾಲಕಿ ಶುಕ್ರವಾರ ಕೆಲಸಕ್ಕೆಂದು ತೆರಳಿದ್ದಳು. ಆದರೆ ಆ ದಿನ ರಾತ್ರಿಯಾದರೂ ಮನೆಗೆ ವಾಪಸ್ ಆಗಿರಲಿಲ್ಲ. ನಂತರ ಆಕೆಯ ಕುಟುಂಬಸ್ಥರು ಆಕೆಗಾಗಿ ಹುಡುಕಾಟ ಆರಂಭಿಸಿದ್ದರು. ಈ ವೇಳೆ ಅಪಹರಣದ ಸಂದೇಶ ಬಂದಿತ್ತು. ಬಳಿಕ ಈ ಬಗ್ಗೆ ಐಪಿಸಿ ಸೆಕ್ಷನ್ 363ರ ಅಡಿ ಅಪಹರಣ ಪ್ರಕರಣ ದಾಖಲಿಸಲಾಗಿತ್ತು.

    ತನಿಖೆ ನಡೆಸಿದ್ದ ಪೊಲೀಸರು ಬಾಲಕಿ ತನ್ನ ಗೆಳೆಯನೊಂದಿಗೆ ಪಶ್ಚಿಮ ಬಂಗಾಳದ ಕೋಲ್ಕತ್ತಾಗೆ ವಿಮಾನದಲ್ಲಿ ತೆರಳಿರುವುದು ಪತ್ತೆಯಾಗಿತ್ತು. ಇಬ್ಬರ ಪತ್ತೆಗೆ ಪೊಲೀಸರ ತಂಡ ಕೋಲ್ಕತ್ತಾಗೆ (Kolkata) ತೆರಳಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಮಾವಿನ ಹಣ್ಣಿಗಾಗಿ ನಡೆದ ಗಲಾಟೆ- ಸಹೋದರರನ್ನು ಬಡಿದು ಕೊಂದ ದುಷ್ಕರ್ಮಿಗಳು

  • ಸತ್ತಿದ್ದಾನೆಂದು ಹೆಣಗಳ ರಾಶಿಯಲ್ಲಿ ಇಟ್ಟಿದ್ದ ಮಗನನ್ನು ಜೀವಂತವಾಗಿ ಹೊರ ತೆಗೆದ ತಂದೆ!

    ಸತ್ತಿದ್ದಾನೆಂದು ಹೆಣಗಳ ರಾಶಿಯಲ್ಲಿ ಇಟ್ಟಿದ್ದ ಮಗನನ್ನು ಜೀವಂತವಾಗಿ ಹೊರ ತೆಗೆದ ತಂದೆ!

    – ರೈಲು ದುರಂತಕ್ಕೆ ಸಿಲುಕಿದ್ದ ಮಗನಿಗಾಗಿ 230 ಕಿಮೀ ದೂರದಿಂದ ಬಂದ ಅಪ್ಪನ ನಂಬಿಕೆ ಹುಸಿಯಾಗಲಿಲ್ಲ

    ಭುವನೇಶ್ವರ: ಒಡಿಶಾ ರೈಲು ಅಪಘಾತದಲ್ಲಿ (Odisha Train Accident) ಮೃತಪಟ್ಟಿದ್ದಾನೆಂದು ನೂರಾರು ಶವಗಳ ರಾಶಿಯಲ್ಲಿ ಇಟ್ಟಿದ್ದ ತನ್ನ ಮಗನನ್ನು ಜೀವಂತವಾಗಿ ಗುರುತಿಸಿ ತಂದೆ ಹೊರ ತೆಗೆಸಿರುವ ಅಚ್ಚರಿಯ ಘಟನೆ ನಡೆದಿದೆ.

    ಹೆಲರಾಮ್‌ ಮಲಿಕ್‌ ಅವರು ತನ್ನ ಪುತ್ರ ಬಿಸ್ವಜಿತ್‌ ಬದುಕಿದ್ದಾನೆ ಎಂಬುದನ್ನು ಗುರುತಿಸಿ ನಿಟ್ಟುಸಿರು ಬಿಟ್ಟಿದ್ದಾರೆ. ನಂತರ ಮಗನನ್ನು ವಾಪಸ್‌ ಕರೆದುಕೊಂಡು ಬಂದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ದುರಂತವಾಗಿ 4 ದಿನ ಕಳೆದರೂ 101 ಮೃತದೇಹಗಳ ಗುರುತು ಇನ್ನೂ ಪತ್ತೆಯಾಗಿಲ್ಲ

    ರೈಲು ದುರಂತದಲ್ಲಿ ನಿಮ್ಮ ಮಗ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದರು. ಈ ಮಾತನ್ನು ಒಪ್ಪಲು ನಿರಾಕರಿಸಿದ ತಂದೆ ತನ್ನ ಮಗನಿಗಾಗಿ ಕೋಲ್ಕತ್ತಾದಿಂದ ಬಾಲಾಸೋರ್‌ಗೆ 230 ಕಿಮೀ ಪ್ರಯಾಣ ಮಾಡಿದ್ದರು.

    ಶವಗಾರದಲ್ಲಿ ಶವಗಳ ಮಧ್ಯೆ ಇರಿಸಿದ್ದ ಮಗನನ್ನು ಗುರುತಿಸಿ ಆತ ಬದುಕಿರುವುದನ್ನು ಖಚಿತ ಪಡಿಸಿಕೊಂಡರು. ನಂತರ ಒಡಿಶಾದಿಂದ ಮನೆಗೆ ಕರೆತಂದ ನಂತರ, ಮಗನನ್ನು ಎಸ್‌ಎಸ್‌ಕೆಎಂ ಆಸ್ಪತ್ರೆಯ ಟ್ರಾಮಾ ಕೇರ್ ಘಟಕದಲ್ಲಿ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯಿತು. ಗಂಭೀರ ಗಾಯಗಳ ಹೊರತಾಗಿಯೂ, ಬಿಸ್ವಜಿತ್‌ ಆರೋಗ್ಯ ಸ್ಥಿರವಾಗಿದೆ. ಇದನ್ನೂ ಓದಿ: 275 ಮಂದಿ ಸಾವನ್ನಪ್ಪಿದ ದುರಂತದ ಬೆನ್ನಲ್ಲೇ ಒಡಿಶಾದಲ್ಲಿ ಹಳಿ ತಪ್ಪಿದ ಗೂಡ್ಸ್ ರೈಲು!

    ಒಡಿಶಾದ ಬಾಲಾಸೋರ್‌ ಬಳಿ ಪ್ರಯಾಣಿಕರಿದ್ದ ಎರಡು ರೈಲು ಹಾಗೂ ಸರಕುಗಳಿದ್ದ ಒಂದು ರೈಲು ಅಪಘಾತಕ್ಕೀಡಾಗಿದ್ದವು. ಈ ಭೀಕರ ದುರಂತದಲ್ಲಿ ಸುಮಾರು 275 ಮಂದಿ ದುರ್ಮರಣಕ್ಕೀಡಾಗಿದ್ದಾರೆ. 1,100 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಬೆಚ್ಚಿಬೀಳಿಸುವಂತಹ ದುರಂತಕ್ಕೆ ವಿಶ್ವಾದ್ಯಂತ ವಿಷಾದ ವ್ಯಕ್ತವಾಗಿತ್ತು. ಅಪಘಾತವು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಗಿದೆ.