Tag: kolkata

  • ಆಸ್ಟ್ರೇಲಿಯಾದಿಂದ ಭಾರತಕ್ಕೆ ಬಂದ ಎರಡೂವರೆ ವರ್ಷದ ಹೆಣ್ಣುಮಗುವಿಗೆ H5N1 ಹಕ್ಕಿ ಜ್ವರ!

    ಆಸ್ಟ್ರೇಲಿಯಾದಿಂದ ಭಾರತಕ್ಕೆ ಬಂದ ಎರಡೂವರೆ ವರ್ಷದ ಹೆಣ್ಣುಮಗುವಿಗೆ H5N1 ಹಕ್ಕಿ ಜ್ವರ!

    – ಮಾನವನಲ್ಲಿ ಪತ್ತೆಯಾದ ಮೊದಲ ಪ್ರಕರಣ

    ಕೋಲ್ಕತ್ತಾ: ಆಸ್ಟ್ರೇಲಿಯಾದಿಂದ (Autralia) ಭಾರತಕ್ಕೆ ಪ್ರಯಾಣಿಸಿದ್ದ ಎರಡೂವರೆ ವರ್ಷದ ಹೆಣ್ಣುಮಗುವಿನಲ್ಲಿ H5N1 ಹಕ್ಕಿ ಜ್ವರ (H5N1 Bird Flu) ಕಾಣಿಸಿಕೊಂಡಿದೆ. ಶುಕ್ರವಾರ ಭಾರತಕ್ಕೆ ಪ್ರಯಾಣಿಸಿದ್ದ ಮಗುವಿನಲ್ಲಿ ಹಕ್ಕಿ ಜ್ವರ ಪತ್ತೆಯಾಗಿದ್ದು, ಆಸ್ಟ್ರೇಲಿಯಾದಲ್ಲಿ ತೀವ್ರ ನಿಗಾ ಘಟಕ ಚಿಕಿತ್ಸೆಯ ಅಗತ್ಯತೆಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.

    ಅಲ್ಲದೇ ಏವಿಯನ್ ಇನ್ ಫ್ಲುಯೆಂಜಾ (H5N1) ವೈರಸ್‌ನಿಂದ ಮಾನವನಲ್ಲಿ ಉಂಟಾದ ಮೊದಲ ಸೋಂಕು ಇದಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮನೆಮಾಡಿದೆ. ಈ ನಡುವೆ ಪಕ್ಷಗಳಿಂದ ಉಂಟಾಗುವ ಈ ವೈರಸ್‌ ಮಾನವರಿಗೆ ತರುವ ಅಪಾಯಗಳು ಕಡಿಮೆ. ಹಾಗಾಗಿ ಜನರು ಆತಂಕಕ್ಕೆ ಒಳಗಾಗಬೇಕಾಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಅಭಯ ನೀಡಿದೆ.

    ಮಗುವಿನ ಪ್ರಯಾಣ ಹಿನ್ನೆಲೆ ಹೀಗಿದೆ..
    ಕಳೆದ ಫೆಬ್ರವರಿ 12 ರಿಂದ 29ರ ವರೆಗೆ ಕೋಲ್ಕತ್ತಾದಲ್ಲಿ (Kolkata) ಮಗು ಪ್ರಯಾಣಿಸಿತ್ತು. ಈ ವೇಳೆ ಯಾವುದೇ ಅನಾರೋಗ್ಯ ಇರಲಿಲ್ಲ. ಮಾರ್ಚ್‌ 1ರಂದು ಆಸ್ಟ್ರೇಲಿಯಾಕ್ಕೆ ತೆರಳಿದ್ದ ಮರುದಿನವೇ ಇಲ್ಲಿನ ಆಗ್ನೇಯ ವಿಕ್ಟೋರಿಯಾದ ಆಸ್ಪತ್ರೆಗೆ ದಾಖಲಿಸಲಾಯಿತು. ಮಗುವಿನ ಆರೋಗ್ಯ ಹದಗೆಡುತ್ತಿದ್ದ ಕಾರಣ ಮಾರ್ಚ್‌ 4ರಿಂದ ಒಂದು ವಾರಗಳ ವರೆಗೆ ಮೆಲ್ಬೋರ್ನ್‌ನ ತೀವ್ರ ನಿಗಾಘಟಕದಲ್ಲಿ ಇರಿಸಲಾಗಿತ್ತು. ಎರಡು ವಾರಗಳಲ್ಲಿ ಪೂರ್ಣ ಚಿಕಿತ್ಸೆ ಪಡೆದ ಬಳಿಕ ಆಸ್ಪತ್ರೆಯಿಂದ ಮಗುವನ್ನು ಡಿಸ್ಚಾರ್ಜ್ ಮಾಡಲಾಗಿತ್ತು. ಈ ವೇಳೆ ಮಗುವಿಗೆ ಹೆಚ್‌5ಎನ್‌1 ಗೆ ಪರೀಕ್ಷೆ ನಡಲಾಗಿತ್ತು. ಏಪ್ರಿಲ್‌ನಲ್ಲಿ ಮಗುವಿನ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದೀಗ ಮಗುವಿನ ಪರೀಕ್ಷಾ ವರದಿ ಪಾಸಿಟಿವ್‌ ಬಂದಿದೆ, ಆದ್ರೆ ಮಗು ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಮತ್ತು ಭಾರತದಲ್ಲಿರುವ ಮಗುವಿನ ಕುಟುಂಬಸ್ಥರಿಗೂ ಪರೀಕ್ಷೆ ನಡೆಸಲಾಗಿದ್ದು, ಅವರಿಗೆ ಸೂಂಕು ದೃಢಪಟ್ಟಿಲ್ಲ ಎಂದು ವೈದ್ಯರು ಹೇಳಿದ್ದಾರೆ.

    ಏನಿದು ಹಕ್ಕಿ ಜ್ವರ?
    ಏವಿಯನ್ ಇನ್ ಫ್ಲುಯೆಂಜಾ (Avian Influenza) ಎಂದು ಕರೆಯಲಾಗುವ ಬರ್ಡ್ ಫ್ಲೂ ಅಥವಾ ಹಕ್ಕಿ ಜ್ವರ ಮೂಲಭೂತವಾಗಿ ಪಕ್ಷಿಗಳ (ಕೋಳಿ, ಬಾತುಕೋಳಿ ಇತ್ಯಾದಿ) ಮೇಲೆ ಪರಿಣಾಮ ಬೀರುವ ಒಂದು ವೈರಾಣು ಸೋಂಕು. ಆದರೆ ಇದು ಮನುಷ್ಯರಿಗೂ ಸಹ ತಗುಲುತ್ತದೆ. ಹಕ್ಕಿಜ್ವರದಲ್ಲಿ H5N1, H7N9, H5N6 ಮತ್ತು H5N8 ಎಂಬ ನಾಲ್ಕು ಮಾದರಿಗಳಿವೆ.

    H5N1, H7N9, H5N6 ಮಾದರಿಯ ಹಕ್ಕಿ ಜ್ವರ ವೈರಸ್ ವಿಶ್ವದ ಹಲವು ದೇಶಗಳಲ್ಲಿ ಕಂಡುಬಂದಿದ್ದು, ಇದರಿಂದಾಗಿ ಸಾವಿರಾರು ಮಂದಿ ಸಾವನ್ನಪ್ಪಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ H5N1 ಸಾಮಾನ್ಯ ಮಾದರಿಯ ಹಕ್ಕಿ ಜ್ವರವಾಗಿದೆ. ಇದು ಮನುಷ್ಯರಲ್ಲಿ 1997ರಲ್ಲಿ ಪತ್ತೆ ಮಾಡಲಾಗಿದ್ದು, ಇದು ಪೀಡಿತರಲ್ಲಿ ಶೇ.60ರಷ್ಟು ಮಂದಿಯ ಪ್ರಾಣಕ್ಕೆ ಹಾನಿ ಉಂಟು ಮಾಡಿದೆ. ಹಕ್ಕಿಗಳಿಗೆ ಇದು ತುಂಬಾ ಮಾರಣಾಂತಿಕ ವೈರಸ್ ಆಗಿದ್ದು, ಮನುಷ್ಯರು ಹಾಗೂ ಪ್ರಾಣಿಗಳಿಗೆ ಕೂಡ ಇದು ಸುಲಭವಾಗಿ ಹಬ್ಬುತ್ತದೆ.

    ರೋಗ ಲಕ್ಷಣಗಳೇನು?
    ಕೆಮ್ಮು, ಉಸಿರಾಟದಲ್ಲಿ ತೊಂದರೆ, ತೀವ್ರ ಜ್ವರ, ತಲೆನೋವು, ಸ್ನಾಯುಗಳ ನೋವು, ಮೂಗು ಸೋರುವಿಕೆ, ಗಂಟಲಿನ ಊತ, ಮೂಗು ಮತ್ತು ಒಸಡಿನಿಂದ ರಕ್ತ ಸೋರುವಿಕೆ.

  • ಪಶ್ಚಿಮ ಬಂಗಾಳದಲ್ಲಿ ಮತದಾನದ ವೇಳೆ ಹಿಂಸಾಚಾರ – EVM ಅನ್ನು ಕೊಳಕ್ಕೆ ಎಸೆದ ಕಿಡಿಗೇಡಿಗಳು

    ಪಶ್ಚಿಮ ಬಂಗಾಳದಲ್ಲಿ ಮತದಾನದ ವೇಳೆ ಹಿಂಸಾಚಾರ – EVM ಅನ್ನು ಕೊಳಕ್ಕೆ ಎಸೆದ ಕಿಡಿಗೇಡಿಗಳು

    ಕೋಲ್ಕತ್ತಾ: ಪಶ್ಚಿಮ ಬಂಗಾಳದ (West Bengal) ಒಂಬತ್ತು ಲೋಕಸಭಾ ಕ್ಷೇತ್ರಗಳಿಗೆ ಇಂದು (ಜೂ.1) ಏಳನೇ ಹಂತದಲ್ಲಿ ಮತದಾನ  (Lokshabha Elections 2024) ನಡೆಯುತ್ತಿದ್ದು, ವಿವಿಧ ಪ್ರದೇಶಗಳಲ್ಲಿ ಹಿಂಸಾಚಾರ (West Bengal Violence) ನಡೆದ ವರದಿಯಾಗಿದೆ.

    ಕೋಲ್ಕತ್ತಾ (Kolkata) ಬಳಿಯ ಜಾದವ್‍ಪುರ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಭಾಂಗಾರ್‌ನ ಸತುಲಿಯಾ ಪ್ರದೇಶದಲ್ಲಿ ಇಂಡಿಯನ್ ಸೆಕ್ಯುಲರ್ ಫ್ರಂಟ್ (ಐಎಸ್‍ಎಫ್) ಮತ್ತು ಸಿಪಿಐ(ಎಂ) ಬೆಂಬಲಿಗರ ನಡುವೆ ಘರ್ಷಣೆ ನಡೆದಿದೆ. ಘರ್ಷಣೆಯಲ್ಲಿ ಐಎಸ್‍ಎಫ್ ಸದಸ್ಯರು ಗಾಯಗೊಂಡಿದ್ದಾರೆ. ಅಲ್ಲದೇ ನಾಡ ಬಾಂಬ್‍ಗಳ ಎಸೆತದಿಂದ ಘರ್ಷಣೆ ಇನ್ನೂ ಉಲ್ಬಣಗೊಂಡಿದೆ.

    ದಕ್ಷಿಣ 24 ಪರಗಣ ಜಿಲ್ಲೆಯ ಕುಲ್ತಾಲಿಯಲ್ಲಿ ಜನರ ಗುಂಪೊಂದು ಮತಗಟ್ಟೆಗಳಿಗೆ ನುಗ್ಗಿ ಇವಿಎಂ (EVM) ವಶಪಡಿಸಿಕೊಂಡು ಹತ್ತಿರದ ಕೊಳಕ್ಕೆ ಎಸೆದಿದೆ. ಮತಗಟ್ಟೆ ಏಜೆಂಟರನ್ನು ಬೂತ್‍ಗಳಿಗೆ ಪ್ರವೇಶಿಸದಂತೆ ನಿಬರ್ಂಧಿಸಿದ ನಂತರ ಈ ಘಟನೆ ಸಂಭವಿಸಿದೆ. ಸ್ಥಳೀಯ ನಿವಾಸಿಗಳು ವಿವಿಪ್ಯಾಟ್‍ಗಳಲ್ಲಿನ ಪೇಪರ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ ಮೊರೆ ಹೋದ ಭವಾನಿ ರೇವಣ್ಣ

    ಬೆಳಿಗ್ಗೆ 6:40ರ ವೇಳೆಗೆ ಬೇನಿಮಾಧವಪುರ ಎಫ್‍ಪಿ ಶಾಲೆಯ ಬಳಿ ಸೆಕ್ಟರ್ ಆಫೀಸರ್ ರಿಸರ್ವ್ ಇವಿಎಂಗಳು ಮತ್ತು ಪೇಪರ್‍ಗಳನ್ನು ಜಯನಗರ (ಎಸ್‍ಸಿ) ಪಿಸಿಯ ಕುಲ್ತಾಳಿಯಲ್ಲಿ ಸ್ಥಳೀಯ ಜನರ ಗುಂಪು ಲೂಟಿ ಮಾಡಿದ್ದಾರೆ ಮತ್ತು 1 ಸಿಯು, 1 ಬಿಯು, 2 ವಿವಿಪ್ಯಾಟ್ ಯಂತ್ರಗಳನ್ನು ಸಮೀಪದ ಕೊಳಗಳಿಗೆ ಎಸೆದಿದ್ದಾರೆ. ಕೂಡಲೇ ಹೊಸ ಇವಿಎಂಗಳನ್ನು ಆ ಮತಗಟ್ಟೆಗಳಿಗೆ ಒದಗಿಸಲಾಗಿದೆ. ಇವಿಎಂಗಳನ್ನು ಕೊಳಕ್ಕೆ ಎಸೆದವರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

    ಸಂದೇಶ್‍ಖಾಲಿ ಸೇರಿದಂತೆ, ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿಯವರ ಭದ್ರಕೋಟೆಯಾಗಿರುವ ಡೈಮಂಡ್ ಹಾರ್ಬರ್ ಟಿಎಂಸಿ ಮತ್ತು ಬಿಜೆಪಿ ಬೆಂಬಲಿಗರ ನಡುವೆ ಘರ್ಷಣೆ ನಡೆದಿದೆ. ಈ ಘಟನೆಯನ್ನು ಬಿಜೆಪಿ ಅಭ್ಯರ್ಥಿ ಅಭಿಜಿತ್ ದಾಸ್ ಟಿಎಂಸಿ ದುಷ್ಕೃತ್ಯ ಎಂದು ಆರೋಪಿಸಿದ್ದಾರೆ. ಈ ಆರೋಪವನ್ನು ಟಿಎಂಸಿ ಸ್ಪಷ್ಟವಾಗಿ ನಿರಾಕರಿಸಿದೆ.

    ಜಾದವ್‍ಪುರದ ಗಂಗೂಲಿ ಬಗಾನ್‍ನಲ್ಲಿ ಸಿಪಿಐ(ಎಂ) ಕಾರ್ಯಕರ್ತರ ಮೇಲೆ ಟಿಎಂಸಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಅವರ ಶಿಬಿರ ಕಚೇರಿಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಆರೋಪಿಸಲಾಗಿದೆ. ಇಟ್ಖೋಲಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಟಿಎಂಸಿ ಮತ್ತು ಬಿಜೆಪಿ ಬೆಂಬಲಿಗರ ನಡುವೆ ಘರ್ಷಣೆಗಳು ನಡೆದಿದ್ದರಿಂದ, ದಕ್ಷಿಣ 24 ಪರಗಣ ಜಿಲ್ಲೆಯ ಕ್ಯಾನಿಂಗ್‍ನಲ್ಲಿ ಉದ್ವಿಗ್ನತೆ ಹೆಚ್ಚಾಯಿತು. ಈ ಪ್ರದೇಶದಲ್ಲಿ ಕಲ್ಲು ತೂರಾಟ ನಡೆದಿದ್ದು, ಮಾಧ್ಯಮದ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

    ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಮತ್ತು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ಪ್ರತಿಭಟನೆಯ ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮತದಾರರನ್ನು ಬೆದರಿಸಲು ಪಕ್ಷದ ಗೂಂಡಾಗಳು ಮತ್ತು ರಾಜ್ಯ ಪೊಲೀಸರನ್ನು ಬಳಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

    ಭಾಂಗಾರ್‍ನಲ್ಲಿ, ಟಿಎಂಸಿ ಮತ್ತು ಆಲ್ ಇಂಡಿಯಾ ಸೆಕ್ಯುಲರ್ ಫ್ರಂಟ್ (ಎಐಎಸ್‍ಎಫ್) ಕಾರ್ಯಕರ್ತರ ನಡುವಿನ ಘರ್ಷಣೆ ಶನಿವಾರ ಮುಂಜಾನೆ ಭುಗಿಲೆದ್ದಿದೆ. ಮಹಿಳಾ ಎಐಎಸ್‍ಎಫ್ ಕಾರ್ಯಕರ್ತೆ ಗಾಯಗೊಂಡಿದ್ದಾರೆ. ಹೆಚ್ಚುವರಿಯಾಗಿ, ಎಐಎಸ್‍ಎಫ್ ಅಭ್ಯರ್ಥಿ ನೂರ್ ಆಲಂ ಖಾನ್ ಅವರ ವಾಹನವನ್ನು ತೃಣಮೂಲ ಬೆಂಬಲಿಗರು ಧ್ವಂಸಗೊಳಿಸಿದ್ದಾರೆ.

    ದಮ್ ಡಮ್, ಬರಾಸತ್, ಬಸಿರ್ಹತ್, ಜಯನಗರ, ಮಥುರಾಪುರ, ಡೈಮಂಡ್ ಹಾರ್ಬರ್, ಜಾದವ್‍ಪುರ, ಕೋಲ್ಕತ್ತಾ ದಕ್ಷಿಣ್ ಮತ್ತು ಕೋಲ್ಕತ್ತಾ ಉತ್ತರ ಸೇರಿದಂತೆ ಪಶ್ಚಿಮ ಬಂಗಾಳದ ಒಂಬತ್ತು ಲೋಕಸಭಾ ಸ್ಥಾನಗಳಿಗೆ ಕಟ್ಟುನಿಟ್ಟಿನ ಭದ್ರತಾ ಕ್ರಮಗಳ ಅಡಿಯಲ್ಲಿ ಬೆಳಿಗ್ಗೆ 7 ಗಂಟೆಗೆ ಮತದಾನ ಪ್ರಾರಂಭವಾಯಿತು. ಸಂಜೆ 6ರವರೆಗೆ ಮತದಾನ ನಡೆಯಲಿದೆ. ಈ ಭಾಗಗಳಲ್ಲಿ ಭಾರೀ ಭದ್ರತೆಯಲ್ಲಿ ಮತದಾನ ನಡೆಯುತ್ತಿದೆ. ಬಹುತೇಕ ಭಾಗಗಳಲ್ಲಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಭಾರತಕ್ಕೆ ಶುಭ ಸುದ್ದಿ; ಪಿಒಕೆ ದೇಶದ ಅವಿಭಾಜ್ಯ ಅಂಗವಲ್ಲ – ಕೊನೆಗೂ ಸತ್ಯ ಒಪ್ಪಿಕೊಂಡ ಪಾಕ್!

  • ಕೋಲ್ಕತ್ತಾದಲ್ಲಿ ಹಿಂಸಾತ್ಮಕ ಪ್ರತಿಭಟನೆ ಸಾಧ್ಯತೆ – ಮೇ 28 ರಿಂದ 60 ದಿನ 144 ಸೆಕ್ಷನ್ ಜಾರಿ

    ಕೋಲ್ಕತ್ತಾದಲ್ಲಿ ಹಿಂಸಾತ್ಮಕ ಪ್ರತಿಭಟನೆ ಸಾಧ್ಯತೆ – ಮೇ 28 ರಿಂದ 60 ದಿನ 144 ಸೆಕ್ಷನ್ ಜಾರಿ

    ಕೋಲ್ಕತ್ತಾ: ಹಿಂಸಾತ್ಮಕ ಪ್ರತಿಭಟನೆಗಳು ನಡೆಯುವ ಮಾಹಿತಿಯ ಮೇರೆಗೆ ಕೋಲ್ಕತ್ತಾ (Kolkata) ನಗರದಲ್ಲಿ ಮೇ 28 ರಿಂದ 60 ದಿನಗಳ ಸುದೀರ್ಘ ಕಾಲ ಸೆಕ್ಷನ್ 144  (Section 144) ಜಾರಿಗೊಳಿಸಲಾಗಿದೆ.

    ಮೇ 28 ರಿಂದ ಜು.26 ರವರೆಗೆ 60 ದಿನಗಳವರೆಗೆ ಹಿಂಸಾತ್ಮಕ ಪ್ರತಿಭಟನೆಗಳು ನಡೆಯುವ ಸಾಧ್ಯತೆ ಇದೆ. ಮಾಹಿತಿ ಆಧಾರದ ಮೇಲೆ ಮುಂದಿನ ಆದೇಶದವರೆಗೆ ಐಪಿಸಿಯ ಸೆಕ್ಷನ್ 144ನ್ನು ಕೋಲ್ಕತ್ತಾ ಪೊಲೀಸ್ ಕಮಿಷನರ್ ವಿಧಿಸಿದ್ದಾರೆ. ಇದನ್ನೂ ಓದಿ: ಮಾನನಷ್ಟ ಕೇಸ್‌- ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ದೋಷಿ

    ಸಾರ್ವಜನಿಕ ಶಾಂತಿ ಕಾಪಾಡಲು ಈ ಆದೇಶ ಅಗತ್ಯವಾಗಿದೆ. ಇದರ ಅನ್ವಯ ಪೊಲೀಸರು (Kolkata Police) ನಿರ್ದೇಶನದ ಅನುಸಾರವಾಗಿ ಶಾಂತಿ ಕದಡುವವರ ವಿರುದ್ಧ ಕಾರ್ಯಾಚರಣೆಗಿಳಿಯಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಬೌಬಜಾರ್ ಪೊಲೀಸ್ ಠಾಣೆ, ಹೇರ್ ಸ್ಟ್ರೀಟ್ ಪೊಲೀಸ್ ಠಾಣೆ ಮತ್ತು ಕೋಲ್ಕತ್ತಾ ಟ್ರಾಫಿಕ್ ಗಾರ್ಡ್ ಹೆಡ್‍ಕ್ವಾರ್ಟರ್‌ಗಳು  ವ್ಯಾಪ್ತಿಯಲ್ಲಿರುವ ಬೆಂಟಿಕ್ ಸ್ಟ್ರೀಟ್ ಹೊರತುಪಡಿಸಿ, ಕೆಸಿ ದಾಸ್ ಕ್ರಾಸಿಂಗ್‍ನಿಂದ ವಿಕ್ಟೋರಿಯಾ ಹೌಸ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಿಗೆ ಸೆಕ್ಷನ್ 144 ಜಾರಿಗೊಳಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಮೇ 28 ರಂದು ಕೋಲ್ಕತ್ತಾದಲ್ಲಿ ರೋಡ್ ಶೋ ನಡೆಸಲಿದ್ದಾರೆ. ಈ ರೋಡ್ ಶೋ ತಪ್ಪಿಸಬೇಕೆಂದು ಮಮತಾ ಬ್ಯಾನರ್ಜಿ ಉದ್ದೇಶ ಪೂರ್ವಕವಾಗಿ ನಿಷೇಧಾಜ್ಞೆ ಹೇರಿದ್ದಾರೆ. ಇದನ್ನು ಪ್ರಶ್ನಿಸಿ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಬಿಜೆಪಿ ಹೇಳಿದೆ. ಇದನ್ನೂ ಓದಿ: ತಮಿಳುನಾಡಿನಲ್ಲಿ ಗೂಗಲ್‌ ಕಂಪನಿಯ ಫೋನ್‌ – ಹೂಡಿಕೆ ಕಳೆದುಕೊಂಡ ಕರ್ನಾಟಕ

  • ಭಾರತದ ಮೊದಲ ನೀರೊಳಗಿನ ಮೆಟ್ರೋ ಉದ್ಘಾಟನೆ – ನಾಳೆ ಪ್ರಧಾನಿ ಮೋದಿ ಚಾಲನೆ

    ಭಾರತದ ಮೊದಲ ನೀರೊಳಗಿನ ಮೆಟ್ರೋ ಉದ್ಘಾಟನೆ – ನಾಳೆ ಪ್ರಧಾನಿ ಮೋದಿ ಚಾಲನೆ

    ನವದೆಹಲಿ: ಕೋಲ್ಕತ್ತಾದಲ್ಲಿ (kolkata) ನಿರ್ಮಿಸಲಾದ ಭಾರತದ ಮೊದಲ ನದಿಯೊಳಗಿನ ಮೆಟ್ರೋ ಸುರಂಗವನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ನಾಳೆ ಉದ್ಘಾಟಿಸಲಿದ್ದಾರೆ.

    ನಗರ ಸಾರಿಗೆಯನ್ನು ಪರಿವರ್ತಿಸುವ ಸ್ಮಾರಕ ಅಭಿವೃದ್ಧಿಯಲ್ಲಿ, ಪ್ರಧಾನ ಮಂತ್ರಿ ಮೋದಿ ಅವರು ದೇಶದಾದ್ಯಂತ ಹಲವಾರು ಪ್ರಮುಖ ಮೆಟ್ರೋ ಮತ್ತು ಕ್ಷಿಪ್ರ ಸಾರಿಗೆ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಇದು ನಗರ ಚಲನಶೀಲತೆ ಮತ್ತು ಸಂಪರ್ಕವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಇದನ್ನೂ ಓದಿ: ಮಮತಾ ಸವಾಲು ಸ್ವೀಕಾರ – ಸಕ್ರೀಯ ರಾಜಕಾರಣಕ್ಕೆ ಇಳಿದ ಕೋಲ್ಕತ್ತಾ ಹೈಕೋರ್ಟ್‌ ಜಡ್ಜ್‌ ಗಂಗೋಪಾಧ್ಯಾಯ

    ಕೋಲ್ಕತ್ತಾ ಮೆಟ್ರೋ ವಿಸ್ತರಣೆಯು ಹೌರಾ ಮೈದಾನ-ಎಸ್ಪ್ಲಾನೇಡ್ ಮೆಟ್ರೋ ವಿಭಾಗವನ್ನು ಒಳಗೊಂಡಿದೆ. ಪ್ರಮುಖ ನದಿಯ ಅಡಿಯಲ್ಲಿ ಹಾದುಹೋಗುವ ಭಾರತದ ಮೊದಲ ಸಾರಿಗೆ ಸುರಂಗವನ್ನು ಒಳಗೊಂಡಿದೆ. ಇದು ದೇಶದ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ನಿರ್ಣಾಯಕ ಮೈಲಿಗಲ್ಲನ್ನು ಪ್ರತಿನಿಧಿಸುತ್ತದೆ.

    ನೀರೊಳಗಿನ ಮೆಟ್ರೋ ಜೊತೆಗೆ ಪ್ರಧಾನಿ ಮೋದಿ ಅವರು ಕವಿ ಸುಭಾಷ್ – ಹೇಮಂತ ಮುಖೋಪಾಧ್ಯಾಯ ಮೆಟ್ರೋ ವಿಭಾಗ ಮತ್ತು ಜೋಕಾ-ಎಸ್ಪ್ಲಾನೇಡ್ ಲೈನ್‌ನ ಭಾಗವಾಗಿರುವ ತಾರಾತಲಾ – ಮಜೆರ್ಹತ್ ಮೆಟ್ರೋ ವಿಭಾಗವನ್ನು ಸಹ ಉದ್ಘಾಟಿಸಲಿದ್ದಾರೆ. ಇದನ್ನೂ ಓದಿ: ಯುಪಿ ಪೊಲೀಸ್ ನೇಮಕಾತಿ ಪ್ರಶ್ನೆ ಪತ್ರಿಕೆ ಸೋರಿಕೆ – ನೇಮಕಾತಿ ಮಂಡಳಿಯ ಅಧ್ಯಕ್ಷೆ ರೇಣುಕಾ ಮಿಶ್ರಾ ವಜಾ

    ಪಿಂಪ್ರಿ ಚಿಂಚ್‌ವಾಡ್ ಮೆಟ್ರೋ-ನಿಗ್ದಿ ನಡುವೆ ಪುಣೆ ಮೆಟ್ರೋ ರೈಲು ಯೋಜನೆ ಹಂತ 1 ರ ವಿಸ್ತರಣೆಗೆ ಪ್ರಧಾನಮಂತ್ರಿ ಅಡಿಪಾಯ ಹಾಕಲಿದ್ದಾರೆ. ನಗರ ಸಾರಿಗೆ ಮೂಲಸೌಕರ್ಯಗಳ ನಿರಂತರ ವಿಸ್ತರಣೆ ಮತ್ತು ವರ್ಧನೆಯ ಭರವಸೆ ನೀಡಲಿದ್ದಾರೆ.

  • ಆತ್ಮಹತ್ಯೆ ಮಾಡಿಕೊಳ್ಳಲು ಸೇತುವೆ ಏರಿ ವ್ಯಕ್ತಿ ಹುಚ್ಚಾಟ- ಬಿರಿಯಾನಿ ಆಫರ್ ನೀಡಿ ರಕ್ಷಿಸಿದ ಪೊಲೀಸರು

    ಆತ್ಮಹತ್ಯೆ ಮಾಡಿಕೊಳ್ಳಲು ಸೇತುವೆ ಏರಿ ವ್ಯಕ್ತಿ ಹುಚ್ಚಾಟ- ಬಿರಿಯಾನಿ ಆಫರ್ ನೀಡಿ ರಕ್ಷಿಸಿದ ಪೊಲೀಸರು

    ಕೋಲ್ಕತ್ತಾ: ಸೇತುವೆ ಏರಿ ಆತ್ಮಹತ್ಯೆ (Suicide) ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿ ಹುಚ್ಚಾಟ ನಡೆಸುತ್ತಿದ್ದ ವ್ಯಕ್ತಿಗೆ ಬಿರಿಯಾನಿ (Biriyani) ಆಫರ್ ನೀಡಿ ಪೊಲೀಸರು ರಕ್ಷಣೆ ಮಾಡಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ  (West Bengal) ನಡೆದಿದೆ.

    ಕೋಲ್ಕತ್ತಾ ಮೂಲದ 40 ವರ್ಷದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನಗರದಲ್ಲಿರುವ ಸೇತುವೆಯನ್ನು ಏರಿ ಬೆದರಿಕೆ ಹಾಕಿ ಹುಚ್ಚಾಟ ನಡೆಸಿದ್ದಾರೆ. ಹೆಂಡತಿಯಿಂದ ಬೇರ್ಪಟ್ಟ ಕಾರಣ ತೀವ್ರ ಮಾನಸಿಕ ಒತ್ತಡಕ್ಕೆ ತುತ್ತಾಗಿದ್ದರು. ಇತ್ತ ವ್ಯವಹಾರದಲ್ಲಿಯೂ ಅರ್ಥಿಕ ನಷ್ಟಗಳಿಂದ ಸಮಸ್ಯೆ ಎದುರಿಸುತ್ತಿದ್ದರು. ಇದೇ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ. ಇದನ್ನೂ ಓದಿ: ಡಿಕೆಶಿ ಮತ್ತೆ ತಿಹಾರ್ ಜೈಲು ಸೇರುತ್ತಾರೆ: ಈಶ್ವರಪ್ಪ ಭವಿಷ್ಯ

    ವ್ಯಕ್ತಿ ಮಧ್ಯಾಹ್ನ 3:20ರ ಸುಮಾರಿಗೆ ವಾಹನದಲ್ಲಿ ಹಿರಿಯ ಮಗಳನ್ನು ಸೈನ್ಸ್ ಸಿಟಿಗೆ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಸೇತುವೆಯ ಬಳಿ ವಾಹನ ನಿಲ್ಲಿಸಿದ್ದಾರೆ. ಮೊಬೈಲ್ ಫೋನ್ ರಸ್ತೆಯ ಮೇಲೆ ಬಿದ್ದುಹೋಗಿದೆ ನಾನು ಅದನ್ನ ಹುಡುಕಿಕೊಂಡು ಬರುತ್ತೇನೆ ಎಂದು ಮಗಳಿಗೆ ಹೇಳಿ ಹೋಗಿದ್ದಾರೆ. ಇದನ್ನೂ ಓದಿ:  ಫೆ.13ರಂದು ದೆಹಲಿಯಲ್ಲಿ ರೈತರ ಪ್ರತಿಭಟನೆ- ಹರಿಯಾಣದ ಕೆಲವೆಡೆ ಇಂಟರ್ನೆಟ್ ಬ್ಯಾನ್, ಸೆಕ್ಷನ್ 144 ಜಾರಿ

    ನಂತರ ಸೇತುವೆ ಮೇಲೆ ಹತ್ತಿ ಅಲ್ಲಿಂದ ಕೆಳಗೆ ಜಿಗಿಯುವುದಾಗಿ ಬೆದರಿಕೆ ಹಾಕಿ ನೆರೆದಿದ್ದ ಜನರ ಮಂದೆ ಹುಚ್ಚಾಟ ನಡೆಸಿದ್ದಾರೆ. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಆತನ ಮನವೊಲಿಸಲು ಸುಮಾರು ಅರ್ಧ ಗಂಟೆಗಳ ಕಾಲ ಹಲವಾರು ವಿಧಾನಗಳಲ್ಲಿ ಪ್ರಯತ್ನಿಸಿದ್ದಾರೆ. ಇದನ್ನೂ ಓದಿ: ಮಶಾಕ್ ದರ್ಗಾದಲ್ಲಿ ಶಿವರಾತ್ರಿಯಂದು ಗುದ್ದಲಿ ಪೂಜೆ ಮಾಡ್ತೀವಿ: ಮುತಾಲಿಕ್

    ಕೊನೆಗೆ ತಿನ್ನಲು ಬಿರಿಯಾನಿ ನೀಡಿ ನಿನಗೆ ಕೆಲಸವನ್ನು ಸಹ ನೀಡುತ್ತೇವೆ ಎಂದು ಉದ್ಯೋಗದ ಭರವಸೆ ನೀಡಿದಾಗ ಆತ ಕೆಳಗೆ ಬಂದಿದ್ದಾರೆ. ಮಗಳೊಂದಿಗೆ ಮಾತನಾಡಿದ ಬಳಿಕ ವ್ಯಕ್ತಿಯ ಮನವೊಲಿಸಲು ಸಾಧ್ಯವಾಯಿತು ಎಂದು ಕೋಲ್ಕತ್ತಾ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕಪ್ಪು ಪಟ್ಟಿ ಧರಿಸಿ ಅಮಿತ್‌ ಶಾ ವಿರುದ್ಧ ಪ್ರತಿಭಟನೆ

  • ಒಂದೇ ವೇದಿಕೆಯಲ್ಲಿ 1 ಲಕ್ಷ ಜನರಿಂದ ಭಗವದ್ಗೀತೆ ಶ್ಲೋಕ ಪಠಣ

    ಒಂದೇ ವೇದಿಕೆಯಲ್ಲಿ 1 ಲಕ್ಷ ಜನರಿಂದ ಭಗವದ್ಗೀತೆ ಶ್ಲೋಕ ಪಠಣ

    ಕೋಲ್ಕತ್ತಾ: ಪಶ್ಚಿಮ ಬಂಗಾಳದ (West Bengal) ಕೋಲ್ಕತ್ತಾದ ಬ್ರಿಗೇಡ್ ಪರೇಡ್ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಸುಮಾರು 1 ಲಕ್ಷ ಜನರು ಸಾಮೂಹಿಕವಾಗಿ ಭಗವದ್ಗೀತೆಯ (Bhagavad Gita) ಪವಿತ್ರ ಶ್ಲೋಕಗಳನ್ನು ಪಠಿಸಿ, ದಾಖಲೆ ಬರೆದಿದ್ದಾರೆ.

    ಸಾಂಪ್ರದಾಯಿಕ ವೇಷಭೂಷಣಗಳಲ್ಲಿ ಪಾಲ್ಗೊಂಡಿದ್ದ ವಿವಿಧ ವಯೋಮಾನದ ಜನರು ಸಾಂಪ್ರದಾಯಿಕ ಸ್ಥಳದಲ್ಲಿ ಸಮಾವೇಶಗೊಂಡು, ಪೂಜ್ಯ ಋಷಿಗಳೊಂದಿಗೆ ಪವಿತ್ರ ಪುಸ್ತಕದ ಶ್ಲೋಕಗಳನ್ನು ಪಠಿಸಿದ್ದಾರೆ. ಇದನ್ನೂ ಓದಿ: Ayodhya Ram Mandir: ರಾಮಮಂದಿರ ಉದ್ಘಾಟನೆಗೆ ನೇಪಾಳದಿಂದ ಬರ್ತಿದೆ ಚಿನ್ನಾಭರಣ, ವಸ್ತ್ರ, ಸಿಹಿತಿನಿಸು

    ಈ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಸುಕಾಂತ ಮಜುಂದಾರ್, ‘ಭಗವದ್ಗೀತೆ ಜಗತ್ತಿಗೆ ಭಾರತ ನೀಡಿದ ಬಹುದೊಡ್ಡ ಕೊಡುಗೆ. ಈ ಕಾರ್ಯಕ್ರಮವನ್ನು ಅಪಹಾಸ್ಯ ಮಾಡುವವರಿಗೆ ಹಿಂದೂ ಧರ್ಮ ಮತ್ತು ಸಂಪ್ರದಾಯಗಳ ಬಗ್ಗೆ ಗೌರವವಿಲ್ಲ. ಹಿಂದೂಗಳನ್ನು ವಿಭಜಿಸಿದರೆ ಅವರ ಪ್ರಯತ್ನಗಳು ವಿಫಲವಾಗುತ್ತವೆ ಎಂದು ತಿಳಿಸಿದ್ದಾರೆ.

    ಬಂಗಾಳದ ಬಿಜೆಪಿ ಘಟಕ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ನಾಯಕತ್ವದ ಪ್ರಮುಖರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಲು ಸುಮಾರು 1,20,000 ವ್ಯಕ್ತಿಗಳು ನೋಂದಾಯಿಸಿಕೊಂಡಿದ್ದರು ಎಂದು ಸಂಘಟಕರು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಾಣಪ್ರತಿಷ್ಠೆಗೂ ಮುನ್ನ ಸಿಂಗಾರಗೊಳ್ಳಲಿದೆ ರಾಮನ ಮೆಟ್ಟಿಲು! – ಏನಿದರ ಮಹತ್ವ? ಈ ಹೆಸರು ಯಾಕೆ ಬಂತು?

    ಕೋಲ್ಕತ್ತಾದಲ್ಲಿ ಭಾನುವಾರ ನಡೆದ ‘ಲೋಕೇ ಕೊಂಥೆ ಗೀತಾ ಪಥ’ ಕಾರ್ಯಕ್ರಮಕ್ಕೆ ಶುಭ ಹಾರೈಸಿದ ಪ್ರಧಾನಿ ನರೇಂದ್ರ ಮೋದಿ ಅವರು, ವಿವಿಧ ಹಿನ್ನೆಲೆಯ ಜನ ಸೇರಿ ಭಗವದ್ಗೀತೆ ಪಠಣ ಮಾಡಿರುವುದು ಸಾಮಾಜಿಕ ಸೌಹಾರ್ದತೆಯನ್ನು ಹೆಚ್ಚಿಸುವುದಲ್ಲದೆ ಶಕ್ತಿ ತುಂಬಿದೆ ಎಂದು ಬಣ್ಣಿಸಿದ್ದಾರೆ.

  • ಜರೀನ್ ಖಾನ್ ಗೆ ಜಾಮೀನು: ನಿಟ್ಟುಸಿರಿಟ್ಟ ನಟಿ

    ಜರೀನ್ ಖಾನ್ ಗೆ ಜಾಮೀನು: ನಿಟ್ಟುಸಿರಿಟ್ಟ ನಟಿ

    ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದ ಭೀತಿ ಎದುರಿಸುತ್ತಿದ್ದ ಬಾಲಿವುಡ್ ನಟಿ, ಹಾಗೂ ಡಾನ್ಸರ್ ಜರೀನ್ ಖಾನ್ ಅವರಿಗೆ ಷರತ್ತುಬದ್ಧ ಜಾಮೀನು (Bail) ಸಿಕ್ಕಿದೆ. ವಿದೇಶ ಪ್ರವಾಸ ಮಾಡದಂತೆ ನಿರ್ಬಂಧದ ಜೊತೆಗೆ ಮೂವತ್ತು ಸಾವಿರ ರೂಪಾಯಿಗಳ ಬಾಂಡ್ ಅನ್ನು ಭದ್ರತೆಗೆ ನೀಡುವಂತೆ ಆದೇಶಿಸಲಾಗಿದೆ.

    ನಟಿ ಜರೀನ್ ಖಾನ್‌ಗೆ (Zareen Khan) ಈ ಹಿಂದೆ ಸಂಕಷ್ಟ ಎದುರಾಗಿತ್ತು. ವಂಚನೆ ಪ್ರಕರಣದ ಸಂಬಂಧಿಸಿದಂತೆ ಜರೀನ್ ಖಾನ್‌ಗೆ ಕೋಲ್ಕತಾ ನ್ಯಾಯಾಲಯ ಅರೆಸ್ಟ್ ವಾರೆಂಟ್ ಜಾರಿ ಮಾಡಿತ್ತು. ವಂಚನೆ ಪ್ರಕರಣ ಸಂಬಂಧವಾಗಿ ಜರೀನ್ ಖಾನ್‌ಗೆ ಕೋಲ್ಕತಾ ನ್ಯಾಯಾಲಯ ನೋಟಿಸ್ ಜಾರಿ ಮಾಡಿತ್ತು..

    2018ರಲ್ಲಿ ಕೋಲ್ಕತಾದಲ್ಲಿ (Kolkata) ಆಯೋಜಿಸಿದ್ದ ದುರ್ಗಾ ಪೂಜೆ ಕಾರ್ಯಕ್ರಮದಲ್ಲಿ ಜರೀನ್‌ಗೆ ಆಹ್ವಾನ ನೀಡಲಾಗಿತ್ತು. ಈ ಸಮಾರಂಭಕ್ಕಾಗಿ ಸಂಭಾವನೆ ಕೂಡ ನೀಡಲಾಗಿತ್ತು. ಆದರೆ ಅಂದು ನಟಿ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಈ ವಿಚಾರವಾಗಿ ನಟಿಯ ವಿರುದ್ದ ಆಯೋಜಕರು ಎಫ್‌ಐಆರ್ ದಾಖಲಿಸಿದ್ದರು. 2018ರಿಂದ ದಾಖಲಾದ ಪ್ರಕರಣದ ಕುರಿತು ನಟಿ ಕೋರ್ಟ್ ವಿಚಾರಣೆಗೆ ಹಾಜರಾಗಲಿಲ್ಲ.

     

    ಅರೆಸ್ಟ್ ವಾರೆಂಟ್ ಕುರಿತು ನಟಿ ಪ್ರತಿಕ್ರಿಯೆ ನೀಡಿ, ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಇದರಲ್ಲಿ ಸತ್ಯವಿಲ್ಲ. ಈ ಬಗ್ಗೆ ನನ್ನ ವಕೀಲರ ಜೊತೆ ಮಾತನಾಡುತ್ತೇನೆ ಎಂದಿದ್ದರು. ವೀರ್, ಹೇಟ್ ಸ್ಟೋರಿ 3, ಹೌಸ್‌ಫುಲ್ 2 ಸೇರಿದಂತೆ ಬಾಲಿವುಡ್‌ನ ಹಲವು ಸಿನಿಮಾಗಳಲ್ಲಿ ನಟಿಸಿರುವ ನಟಿಗೆ ಬಂಧನದ ಭೀತಿ ಎದುರಾಗಿತ್ತು.

  • ಗೂಡ್ಸ್ ರೈಲು ಡಿಕ್ಕಿ ಹೊಡೆದು 3 ಆನೆಗಳ ದುರ್ಮರಣ

    ಗೂಡ್ಸ್ ರೈಲು ಡಿಕ್ಕಿ ಹೊಡೆದು 3 ಆನೆಗಳ ದುರ್ಮರಣ

    ಕೋಲ್ಕತ್ತಾ: ಪಶ್ಚಿಮ ಬಂಗಾಳದ (West Bengal) ಬಕ್ಸಾ ಹುಲಿ ಸಂರಕ್ಷಿತ ಅರಣ್ಯದಲ್ಲಿ (Buxa Tiger Reserve) ಗೂಡ್ಸ್ ರೈಲು (Goods Train) ಡಿಕ್ಕಿ ಹೊಡೆದ ಪರಿಣಾಮ 3 ಆನೆಗಳು (Elephants) ಸಾವನ್ನಪ್ಪಿವೆ.

    ರಾಜಭಟ್ಖಾವಾ (Rajabhatkhawa) ಮತ್ತು ಕಲ್ಚಿನಿ (Kalchini) ರೈಲು ನಿಲ್ದಾಣಗಳ ನಡುವಿನ ಶಿಖಾರಿ ಗೇಟ್ ಬಳಿ ಬೆಳಗ್ಗೆ 7 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ. ಒಂದು ಮರಿ ಮತ್ತು ಎರಡು ವಯಸ್ಕ ಆನೆಗಳು ಗೂಡ್ಸ್‌ ರೈಲಿಗೆ ಡಿಕ್ಕಿ ಹೊಡೆದು ಸಾವನ್ನಪ್ಪಿವೆ. ಅಲಿಪುರ್ದೌರ್ ಜಿಲ್ಲೆಯ ಹುಲಿ ಸಂರಕ್ಷಿತ ಪ್ರದೇಶದ ಪಶ್ಚಿಮ ರಾಜಭಟ್ಖಾವಾ ಶ್ರೇಣಿಯಲ್ಲಿ ಸಂಭವಿಸಿದ ಈ ಘಟನೆಯು ಭಾರತದಲ್ಲಿ ರೈಲು ಡಿಕ್ಕಿಯಿಂದ ಆನೆಗಳು ಸಾವನ್ನಪ್ಪುವ ಅನೇಕ ಸಾಮಾನ್ಯ ಘಟನೆಗಳಲ್ಲಿ ಒಂದಾಗಿದೆ. ಇದನ್ನೂ ಓದಿ: ಜೂಜಾಟಕ್ಕೆ ಹಣ ಕೊಡದ ಪತ್ನಿಯ ತಲೆ ಒಡೆದು ಹತ್ಯೆ – ಆರೋಪಿ ಅರೆಸ್ಟ್

    ಈ ವರ್ಷದ ಆರಂಭದಲ್ಲಿ, ಪಶ್ಚಿಮ ಬಂಗಾಳದ ಅಲಿಪುರ್ದಾರ್ ಜಿಲ್ಲೆಯ ಚಪ್ರಮರಿ ಮೀಸಲು ಅರಣ್ಯದೊಳಗೆ ರೈಲು ಹಳಿ ದಾಟಲು ಪ್ರಯತ್ನಿಸುತ್ತಿದ್ದ ಗರ್ಭಿಣಿ ಆನೆ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿತ್ತು. ಭಾರತದಲ್ಲಿ ಪ್ರತಿ ವರ್ಷ ಸರಾಸರಿ 20 ಆನೆಗಳು ರೈಲು ಡಿಕ್ಕಿಯಿಂದ ಸಾಯುತ್ತವೆ ಎಂದು ಸರ್ಕಾರದ ಅಂಕಿಅಂಶಗಳು ತೋರಿಸುತ್ತವೆ. ರೈಲು ಅಪಘಾತಗಳು ಪಶ್ಚಿಮ ಬಂಗಾಳದಲ್ಲಿ ಅಸ್ವಾಭಾವಿಕ ಆನೆಗಳ ಸಾವಿಗೆ ಒಂದು ಕಾರಣವಾಗಿದೆ ಮತ್ತು ಅದನ್ನು ತಡೆಯಲು ಸರ್ಕಾರವು ಕಠಿಣವಾಗಿ ಪ್ರಯತ್ನಿಸುತ್ತಿದೆ. ಇದನ್ನೂ ಓದಿ: ಅಪರಿಚಿತೆಯ ಮಾತುಕೇಳಿ ವೀಡಿಯೋ ಕಾಲ್‍ನಲ್ಲಿ ನಗ್ನವಾಗಿ ಲಕ್ಷಾಂತರ ರೂ. ಕಳೆದುಕೊಂಡ!

  • ಅಭಿಮಾನಿಯ ಹೃದಯ ಬಡಿತ ನಿಲ್ಲಿಸಿತ್ತು, ವಿಶ್ವಕಪ್ ಕನಸನ್ನೇ ಭಗ್ನಗೊಳಿಸಿತ್ತು ಆ ಒಂದು ರನೌಟ್..!

    ಅಭಿಮಾನಿಯ ಹೃದಯ ಬಡಿತ ನಿಲ್ಲಿಸಿತ್ತು, ವಿಶ್ವಕಪ್ ಕನಸನ್ನೇ ಭಗ್ನಗೊಳಿಸಿತ್ತು ಆ ಒಂದು ರನೌಟ್..!

    ಬೆಂಗಳೂರು: 2019ರ ಜುಲೈ 9 ರಂದು ನ್ಯೂಜಿಲೆಂಡ್ (New Zealand) ವಿರುದ್ಧ ನಡೆದ ವಿಶ್ವಕಪ್ (World Cup) ಸೆಮಿಫೈನಲ್ (Semi-Final) ಪಂದ್ಯದಲ್ಲಿ ಎಂ.ಎಸ್ ಧೋನಿ (MS Dhoni) ಕೊನೆಯ ಕ್ಷಣದಲ್ಲಿ ರನೌಟ್‌ಗೆ ತುತ್ತಾದರು. ಈ ರನೌಟ್ ಇಡೀ ವಿಶ್ವಕಪ್ ಗೆಲ್ಲುವ ಕನಸನ್ನೇ ನುಚ್ಚುನೂರು ಮಾಡಿತ್ತು. ಕೋಟ್ಯಂತರ ಅಭಿಮಾನಿಗಳಲ್ಲೂ ನೋವುಂಟುಮಾಡಿತ್ತು. ಮೊಬೈಲ್‌ನಲ್ಲಿ ಈ ದೃಶ್ಯ ನೋಡುತ್ತಿದ್ದಂತೆ ಕೋಲ್ಕತ್ತಾದಲ್ಲಿ (Kolkata) ಕ್ರಿಕೆಟ್ ಅಭಿಮಾನಿಯೊಬ್ಬ ಹೃದಯಾಘಾತದಿಂದ (Heart Attack) ಸಾವನ್ನಪ್ಪಿದ್ದರು.

    ಅಂದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್ ತಂಡ 8 ವಿಕೆಟ್ ನಷ್ಟಕ್ಕೆ 239 ರನ್ ಗಳಿಸಿತ್ತು. ನೆರೆದಿದ್ದ ಅಭಿಮಾನಿಗಳು ಗೆಲುವು ಟೀಂ ಇಂಡಿಯಾದ್ದೇ (India) ಎಂದು ಬೀಗುತ್ತಿದ್ದರು. ಗೆಲ್ಲಲು 240 ರನ್ ಗಳ ಗುರಿಯನ್ನು ಪಡೆದ ಭಾರತ 49.3 ಓವರ್ ಗಳಲ್ಲಿ 221 ರನ್ ಗಳಿಗೆ ಆಲೌಟ್ ಆಗಿ ಸೋಲನ್ನು ಒಪ್ಪಿಕೊಂಡಿತು. ಆರಂಭದಲ್ಲಿ 5 ರನ್ ಗಳಿಗೆ ಮೂರು ವಿಕೆಟ್ ಕಳೆದುಕೊಂಡು 92 ರನ್‌ಗಳಿಗೆ 6 ವಿಕೆಟ್ ಉರುಳಿದಾಗ ನ್ಯೂಜಿಲೆಂಡ್ ಸುಲಭವಾಗಿ ಗೆಲ್ಲುವ ಸಾಧ್ಯತೆ ಇತ್ತು. ಆದರೆ ಜಡೇಜಾ ಮತ್ತು ಧೋನಿ 7ನೇ ವಿಕೆಟಿಗೆ 116 ರನ್ ಜೊತೆಯಾಟವಾಡಿ ಭಾರತವನ್ನು ಗೆಲುವಿನ ಸನಿಹಕ್ಕೆ ತಂದಿಟ್ಟಿದ್ದರು. ಇದನ್ನೂ ಓದಿ: ನನ್ನ ಮಗನ ಹೆಸರಿಗೂ ದ್ರಾವಿಡ್‌-ಸಚಿನ್‌ ಹೆಸರಿಗೂ ಸಂಬಂಧವಿಲ್ಲ: ಕ್ರಿಕೆಟಿಗ ರಚಿನ್‌ ತಂದೆ

    5 ಓವರ್ ಗಳಲ್ಲಿ 52 ರನ್ ಗಳಿಸುವ ಒತ್ತಡದಲ್ಲಿ ಸಿಲುಕಿದ್ದ ಸಂದರ್ಭದಲ್ಲಿ ಜಡೇಜಾ ತಂಡವನ್ನು ಗೆಲುವಿನ ಸನಿಹ ಕೊಂಡ್ಯೊಯುವ ಪ್ರಯತ್ನ ನಡೆಸಿದರು. 46ನೇ ಓವರಿನಲ್ಲಿ ಬೌಂಡರಿ ಸಮೇತ 10 ರನ್ ಗಳಿಸಿದ ಈ ಜೋಡಿ 7ನೇ ವಿಕೆಟ್‌ಗೆ ಶತಕದ ಜೊತೆಯಾಟ ನೀಡಿದರು. 122 ಎಸೆತಗಳಲ್ಲಿ ಈ ಜೋಡಿ 116 ರನ್ ಗಳಿಸಿತು. ಆದರೆ ಅಂತಿಮ ಹಂತದಲ್ಲಿ ಸಿಕ್ಸರ್ ಸಿಡಿಸಲು ಯತ್ನಿಸಿದ ಜಡೇಜಾ 59 ಎಸೆತಗಳಲ್ಲಿ 77 ರನ್ (4 ಬೌಂಡರಿ, 4 ಸಿಕ್ಸರ್) ಗಳಿಸಿ ಟ್ರೆಂಟ್ ಬೋಲ್ಟ್ ಗೆ ವಿಕೆಟ್ ಒಪ್ಪಿಸಿದರು. ಇತ್ತ ಜಡೇಜಾ ನಿರ್ಗಮನದೊಂದಿಗೆ ತಂಡದ ಗೆಲುವಿನ ಆಸರೆಯಾಗಿದ್ದ ಧೋನಿ 50 ರನ್ (72 ಎಸೆತ, 1 ಬೌಂಡರಿ, 1ಸಿಕ್ಸರ್) ಸಿಡಿಸಿ ರನೌಟ್ ಆದರು. ಇದನ್ನೂ ಓದಿ: ಹೀನಾಯ ಸೋಲಿನ ಬೆನ್ನಲ್ಲೇ ಪಾಕ್‌ಗೆ ಮತ್ತೆ ಶಾಕ್‌ – ಗುಡ್‌ಬೈ ಹೇಳಿದ ಬೌಲಿಂಗ್‌ ಕೋಚ್‌

    ಸೆಮಿಫೈನಲ್ ಪಂದ್ಯದಲ್ಲಿ ಕೊನೆಯ 10 ಎಸೆತಗಳಲ್ಲಿ 25 ರನ್ ಬೇಕಿದ್ದಾಗ 48ನೇ ಓವರ್‌ನ 3ನೇ ಎಸೆತದಲ್ಲಿ ಧೋನಿ 2 ರನ್ ಕದಿಯಲು ಪ್ರಯತ್ನಿಸಿದರು. ಆದ್ರೆ ಫೀಲ್ಡಿಂಗ್‌ನಲ್ಲಿದ್ದ ಮಾರ್ಟಿನ್ ಗಪ್ಟಿಲ್ ಎಸೆದ ಡೈರೆಕ್ಟ್ ವಿಕೆಟ್ ಥ್ರೋ ಗೆ ಧೋನಿ ರನೌಟ್ ಆಗಿದ್ದರು. ಈ ಮೂಲಕ ಭಾರತದ ವಿಶ್ವಕಪ್ ಕನಸು ಭಗ್ನಗೊಂಡಿತ್ತು. ಅಲ್ಲದೇ ಅದು ಧೋನಿ ಅವರ ಕ್ರಿಕೆಟ್ ವೃತ್ತಿ ಜೀವನದ ಕೊನೆಯ ವಿಶ್ವಕಪ್ ಟೂರ್ನಿಯೂ ಆಗಿತ್ತು. ಇದನ್ನೂ ಓದಿ: World Cup: ಈ ದಾಖಲೆ ಬರೆದ ಭಾರತದ ಮೊದಲ ಕ್ಯಾಪ್ಟನ್‌ ರೋಹಿತ್‌ ಶರ್ಮಾ

    ಅಂತಿಮವಾಗಿ ಭಾರತ 49.3 ಓವರ್‌ಗಳಿಗೆ ಆಲೌಟ್ ಆಯಿತು. ಅದು ಇಡೀ ಭಾರತೀಯರಿಗೆ ಮರೆಯದ ಘಟನೆಯಾಗಿ ಉಳಿಯಿತು. ಇದೀಗ 2023ರ ವಿಶ್ವಕಪ್ ಟೂರ್ನಿಯಲ್ಲೂ ಮತ್ತೆ ಭಾರತ ನ್ಯೂಜಿಲೆಂಡ್ ತಂಡ ಮುಖಾಮುಖಿಯಾಗುತ್ತಿದ್ದು, ಈ ಎಲ್ಲ ಕ್ಷಣಗಳನ್ನ ನೆನಪಿಸಿದೆ. ಇದನ್ನೂ ಓದಿ: World Cup 2023: ಅರ್ಧಶತಕ ಸಿಡಿಸಿದ್ರೂ ಸಚಿನ್‌ ದಾಖಲೆ ಸರಿಗಟ್ಟಿದ ಚೇಸ್‌ ಮಾಸ್ಟರ್‌

    ಇದೇ ಆವೃತ್ತಿಯಲ್ಲಿ ಧರ್ಮಶಾಲಾ ಕ್ರೀಡಾಂಗಣದಲ್ಲಿ ಕಿವೀಸ್ ನೀಡಿದ್ದ 274 ರನ್‌ಗಳ ಗುರಿ ಬೆನ್ನಟ್ಟಿ ಭಾರತ ಜಯ ಸಾಧಿಸಿತ್ತು. ಪ್ರಸ್ತುತ ವಿಶ್ವಕಪ್ ಟೂರ್ನಿಯಲ್ಲಿ ಸೋಲಿನ ಮುಖವನ್ನೇ ನೋಡದ ಟೀಂ ಇಂಡಿಯಾ ಇನ್ನೆರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ರೆ ವಿಶ್ವ ಏಕದಿನ ಕ್ರಿಕೆಟ್‌ಗೆ ಸಾಮ್ರಾಟನಾಗಲಿದೆ. ಕೋಟ್ಯಂತರ ಅಭಿಮಾನಿಗಳ ಆಶಯವೂ ಇದೇ ಆಗಿದೆ. ಇದನ್ನೂ ಓದಿ: World Cup 2023: ವಿಶ್ವದ ನಂ.1 T20 ಬ್ಯಾಟರ್‌ಗೆ ಬೆಸ್ಟ್‌ ಫೀಲ್ಡರ್‌ ಪ್ರಶಸ್ತಿ

  • ಕೊಹ್ಲಿ 35ನೇ ಹುಟ್ಟುಹಬ್ಬಕ್ಕೆ ಚಿನ್ನದ ಬ್ಯಾಟ್ ಗಿಫ್ಟ್ ಕೊಟ್ಟ ಕ್ರಿಕೆಟ್ ಮಂಡಳಿ

    ಕೊಹ್ಲಿ 35ನೇ ಹುಟ್ಟುಹಬ್ಬಕ್ಕೆ ಚಿನ್ನದ ಬ್ಯಾಟ್ ಗಿಫ್ಟ್ ಕೊಟ್ಟ ಕ್ರಿಕೆಟ್ ಮಂಡಳಿ

    ಕೋಲ್ಕತ್ತಾ: ಇಂಡಿಯನ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಅವರ 35ನೇ ಹುಟ್ಟುಹಬ್ಬದಂದು ಬೆಂಗಾಲ್ ಕ್ರಿಕೆಟ್ ಮಂಡಳಿಯು (CAB) ಚಿನ್ನದ ಬ್ಯಾಟ್ ಅನ್ನು ಉಡುಗೊರೆಯಾಗಿ ನೀಡಿದೆ.

    ಟೀಂ ಇಂಡಿಯಾ ನಾಯಕ ಸೌರವ್ ಗಂಗೂಲಿ (Sourav Ganguly) ಸಹೋದರ, ಸಿಎಬಿ ಮಂಡಳಿಯ ಅಧ್ಯಕ್ಷ ಸ್ನೇಹಶಿಶ್ ಗಂಗೂಲಿ (Snehasish Ganguly) ಅವರು ಕೊಹ್ಲಿಗೆ ಈ ಗಿಫ್ಟ್ ಅನ್ನು ಹಸ್ತಾಂತರ ಮಾಡಿದರು. ಈ ಚಿನ್ನದ ಬ್ಯಾಟಿನ ಮೇಲೆ ‘ಹ್ಯಾಪಿ ಬರ್ತ್ ಡೇ ವಿರಾಟ್’ ಎಂದು ವಿಶ್ ಮಾಡಲಾಗಿದೆ. ಅದರ ಕೆಳಗೆ ‘ನೀವು ಸಮರ್ಪಣೆಯ ಸಂಕೇತವಾಗಿದ್ದೀರಿ. ಅಲ್ಲದೆ ವಯಸ್ಸು ಕೇವಲ ನಂಬರ್ ಅಷ್ಟೇ ಎಂಬುದನ್ನು ನೀವು ಪ್ರೂವ್ ಮಾಡಿದ್ದೀರಿ ಎಂಬುದಾಗಿಯೂ ಬರೆಯಲಾಗಿದೆ.

    ಭಾನುವಾರ ದಕ್ಷಿಣ ಆಫ್ರಿಕಾದ‌ (South Africa) ವಿರುದ್ಧ ನಡೆದ ಏಕದಿನ ವಿಶ್ವಕಪ್ (World Cup 2023) ಟೂರ್ನಿಯ ಪಂದ್ಯದಲ್ಲಿ ಕೊಹ್ಲಿ 49 ಶತಕ ಸಿಡಿಸಿದ್ದಾರೆ. ಈ ಮೂಲಕ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಸರಿಗಟ್ಟಿದ್ದರು. 1998 ರಲ್ಲಿ ಸಚಿನ್ ತಮ್ಮ 25ನೇ ಹುಟ್ಟುಹಬ್ಬದಂದು ಈ ಸಾಧನೆ ಮಾಡಿದ್ದರು.

    ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ 49ನೇ ಶತಕವನ್ನು ಸಿಡಿಸಿ ಸಚಿನ್ ದಾಖಲೆ ಸರಿಗಟ್ಟಿದ ಬಳಿಕ ಪ್ರತಿಕ್ರಿಯಿಸಿದ್ದ ಕೊಹ್ಲಿ, ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ನನ್ನ ಹೀರೋ, ಎಂದಿಗೂ ನಾನು ಅವರಿಗೆ ಸಮನಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: 49th Century: ಅಭಿಮಾನಿಗಳ ʻವಿರಾಟೋತ್ಸವʼ – ಮುಗಿಲು ಮುಟ್ಟಿದ ಸಂಭ್ರಮ

    ನಾನು ತೆಂಡೂಲ್ಕರ್ ಬ್ಯಾಟಿಂಗ್ ನೋಡುತ್ತಾ ಬೆಳೆದಿದ್ದೇನೆ. ಅವರ ಬ್ಯಾಟಿಂಗ್ ಶೈಲಿ ಅತ್ಯುತ್ತಮವಾದದ್ದು. ನಾನು ಆ ಮಟ್ಟಕ್ಕೆ ಏರಲು ಸಾಧ್ಯವಿಲ್ಲ. ಏನೇ ಆದರೂ ಸಚಿನ್ ನನ್ನ ನಾಯಕರಾಗಿರುತ್ತಾರೆ. ನಾನು ಎಲ್ಲಿಂದ ಬಂದಿದ್ದೇನೆ ಎಂದು ನನಗೆ ತಿಳಿದಿದೆ ಮತ್ತು ಇಲ್ಲಿ ನಿಂತು ಸಚಿನ್ ಅವರಿಂದ ಮೆಚ್ಚುಗೆಯನ್ನು ಪಡೆಯುವುದು ನನಗೆ ತುಂಬಾ ಖುಷಿಕೊಟ್ಟಿದೆ ಎಂದಿದ್ದಾರೆ.