Tag: kolkata

  • ಅಮ್ಮ ಮೊಬೈಲ್ ಕಿತ್ತುಕೊಂಡಿದ್ದಕ್ಕೆ 17 ವರ್ಷದ ಮಗಳು ನೇಣಿಗೆ ಶರಣು!

    ಅಮ್ಮ ಮೊಬೈಲ್ ಕಿತ್ತುಕೊಂಡಿದ್ದಕ್ಕೆ 17 ವರ್ಷದ ಮಗಳು ನೇಣಿಗೆ ಶರಣು!

    ಕೊಲ್ಕತ್ತಾ: ಅಮ್ಮ ಮೊಬೈಲ್ ಫೋನ್ ಕಿತ್ತುಕೊಂಡಳು ಎಂದು ಕೋಪಗೊಂಡು 11ನೇ ತರಗತಿ ವಿದ್ಯಾರ್ಥಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಲ್ಕತ್ತಾದಲ್ಲಿ ನಡೆದಿದೆ. ಕೆಲವು ದಿನಗಳ ಹಿಂದೆ ಇದೇ ವಯಸ್ಸಿನ ಹುಡುಗಿಯೊಬ್ಬಳು ಓದುವ ಕಡೆ ಗಮನಹರಿಸುತ್ತಿಲ್ಲ ಅಂತ ಪೋಷಕರು ಬೈದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಳು.

    ಜ್ಯೋತಿ ಶಾ (17) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಮೊಬೈಲ್ ನಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದಾಳೆ ಅಂತ ಈಕೆಗೆ ತಾಯಿ ಬೈದಿದ್ದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ.

    ಏನಿದು ಪ್ರಕರಣ?: ಜ್ಯೋತಿಗೆ ಹುಟ್ಟುಹಬ್ಬದ ಉಡುಗೊರೆಯಾಗಿ ಪೋಷಕರು ಫೋನ್ ಕೊಡಿಸಿದ್ದರು. ಆದರೆ ಜ್ಯೋತಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದಳು. ಇದರಿಂದ ಆತಂಕಗೊಂಡ ಜ್ಯೋತಿ ತಾಯಿ, ಮಗಳು ಕಲಿಯುವ ಕಡೆ ಗಮನ ಕೊಡುವ ಬದಲು ಫೆಸ್‍ಬುಕ್ ಗೆ ಅಂಟಿಕೊಂಡಿದ್ದಾಳೆ ಅಂತ ಕಳೆದ ಮೂರು ದಿನಗಳ ಹಿಂದೆ ಫೋನ್ ಕಿತ್ತುಕೊಂಡು ಬೈದಿದ್ದರು. ಆದರೂ ಈಕೆ ಓದಿನ ಕಡೆ ನಿರ್ಲಕ್ಷ್ಯ ತೋರಿದ್ದಳು.

    ಗುರುವಾರ ಸಂಜೆ ಮತ್ತೆ ತಾಯಿ ಫೋನ್ ಕಿತ್ತುಕೊಂಡು ಬೈದಿದ್ದಾರೆ. ನಂತರ ಈಕೆ ರೂಮಿಗೆ ಹೋಗಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಂತರ ತಾಯಿ ಎಷ್ಟು ಬಾಗಿಲೂ ಬಡಿದರೂ ತೆರೆಯಲಿಲ್ಲ. ಕೊನೆಗೆ ನೆರೆಹೊರೆಯವರ ಸಹಾಯ ಪಡೆದು ಬಾಗಿಲು ಮುರಿದಿದ್ದಾರೆ. ತಕ್ಷಣ ಆಕೆಯನ್ನು ಸಮೀಪದ ಚಿತ್ತರಂಜನ್ ನ್ಯಾಷನಲ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ಕರೆದ್ಯೊಯಿದ್ದಾರೆ. ಆದರೆ ಮಾರ್ಗ ಮಧ್ಯದಲ್ಲಿಯೇ ಜ್ಯೋತಿ ಮೃತಪಟ್ಟಿದ್ದಾಳೆ ಎಂದು ಜಿಲ್ಲಾಧಿಕಾರಿ ಕಲ್ಯಾಣ್ ಬ್ಯಾರ್ನಜಿ ಅವರು ತಿಳಿಸಿದರು.

    ಕಳೆದ ಒಂದು ವಾರದಿಂದ ಅವಳು ಎಂದಿನಂತೆ ಚಟುವಟಿಕೆಯಿಂದ ಕೂಡಿರಲಿಲ್ಲ. ನಾವು ಕೇಳಿದ ಪ್ರಶ್ನೆಗಳಿಗೆ ಕಠಿಣವಾಗಿ ಉತ್ತರ ನೀಡುತ್ತಿದ್ದಳು ಎಂದು ಜ್ಯೋತಿಯ ತಂದೆ ಕೃಷ್ಣ ಪ್ರಸಾದ್ ಶಾ ಹೇಳಿದ್ದಾರೆ.

    ಈಗಿನ ಮಕ್ಕಳು ಜೊತೆಗಿರುವ ಸಂಬಂಧಿಕರು ಮತ್ತು ಸ್ನೇಹಿತರಿಗಿಂತ ಸಾಮಾಜಿಕ ಜಾಲತಾಣಗಳಲ್ಲಿಯೇ ಹೆಚ್ಚಿನ ಮಿತ್ರರು ಇದ್ದಾರೆ ಎಂದು ಭಾವಿಸಿದ್ದಾರೆ. ಹೀಗಾಗಿ ತಮ್ಮ ಮೊಬೈಲ್ ನಲ್ಲಿಯೇ ಹೆಚ್ಚು ಕಾಲ ಕಳೆಯುತ್ತಾರೆ. ಇದರಿಂದ ಓದುವ ಮಕ್ಕಳು ಇಂದು ತಮ್ಮ ಭವಿಷ್ಯದ ಚಿಂತನೆಯನ್ನೂ ಮಾಡದೆ ಸಾಮಾಜಿಕ ಜಾಲತಾಣದಲ್ಲಿ ಇರುತ್ತಾರೆ. ಇಂತಹ ಸಂದರ್ಭಗಳಲ್ಲಿ ಪೋಷಕರು ಮತ್ತು ಸ್ನೇಹಿತರು ಅವರ ಜೊತೆ ಹೆಚ್ಚಿನ ಕಾಲ ಬೆರೆತಾಗ ಅವರ ಮನಸ್ಥಿತಿಯನ್ನು ಬದಲಾಯಿಸಬಹುದು ಎಂದು ಮನಃ ಶಾಸ್ತ್ರಜ್ಞೆ ಮಾನ್ಸಿ ಜೋಶಿ ಅವರು ತಿಳಿಸಿದರು.

    ಜ್ಯೋತಿ ಯಾವುದೇ ರೀತಿಯ ಡೆತ್ ನೋಟ್ ಬರೆದಿರಲಿಲ್ಲ. ಆಕೆಯ ಕುಟುಂದವರು ಕೂಡ ಆತ್ಮಹತ್ಯೆಗೆ ನಿಖರ ಕಾರಣ ತಿಳಿಸಿಲ್ಲ ಅಂತ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದರು.

  • ತಾಯಿ ಸಾವನ್ನಪ್ಪಿದ ಕೆಲವೇ ಗಂಟೆಗಳಲ್ಲಿ ಪ್ರಾಣಬಿಟ್ಟ ಮಗ

    ತಾಯಿ ಸಾವನ್ನಪ್ಪಿದ ಕೆಲವೇ ಗಂಟೆಗಳಲ್ಲಿ ಪ್ರಾಣಬಿಟ್ಟ ಮಗ

    ಕೊಲ್ಕತ್ತಾ: ತಾಯಿ ಸಾವನ್ನಪ್ಪಿದ ಕೆಲವೇ ಗಂಟೆಗಳಲ್ಲಿ ನೊಂದ ಮಗ ಆತ್ಯಹತ್ಯೆಗೆ ಶರಣಾಗಿರುವ ಮನಕಲಕುವಂತಹ ಘಟನೆ ಪಶ್ಚಿಮ ಬಂಗಾಳದ ರಾನಘಾಟ್‍ನಲ್ಲಿ ನಡೆದಿದೆ.

    9ನೇ ತರಗತಿ ಓದುತ್ತಿದ್ದ ರಿಕು ಬಿಸ್ವಾಸ್ ಎಂಬಾತನೇ ತಾಯಿ ಸಾವಿನಿಂದ ನೊಂದು ಆತ್ಯಹತ್ಯೆಗೆ ಶರಣಾದ ಮೃತ ದುರ್ದೈವಿ.

    ಬಿಸ್ವಾಸ್‍ನ ತಾಯಿ ಅನಾರೋಗ್ಯದ ಕಾರಣದಿಂದ ಶನಿವಾರ ಬೆಳಿಗ್ಗೆ ನಾಡಿಯಾ ಜಿಲ್ಲೆಯ ಕಲ್ಯಾಣಿ ನಗರದಲ್ಲಿರುವ ಜಿಎನ್‍ಎಂ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ನಂತರ ತಾಯಿಯ ಸಾವಿನಿಂದ ನೊಂದ ಬಿಸ್ವಾಸ್ ಸಮೀಪದ ರಾನಘಾಟ್ ರೈಲ್ವೇ ನಿಲ್ದಾಣಕ್ಕೆ ಹೋಗಿ ಬರುತ್ತಿರುವ ರೈಲಿಗೆ ಓಡಿ ಹೋಗಿ ಜಿಗಿದು ಆತ್ಯಹತ್ಯೆಗೆ ಯತ್ನಿಸಿದ್ದಾನೆ.

    ಘಟನೆಯಲ್ಲಿ ಗಾಯಗೊಂಡ ಬಿಸ್ವಾಸ್ ಅನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ತಾಯಿ ಮೃತಪಟ್ಟ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ತೀವ್ರವಾಗಿ ಗಾಯಗೊಂಡಿದ್ದ ಬಿಸ್ವಾಸ್ ಮಧ್ಯಾಹ್ನ ಸಾವನ್ನಪ್ಪಿದ ಎಂದು ಪೊಲೀಸರು ತಿಳಿಸಿದ್ದಾರೆ.

  • ಪ್ರಜ್ಞೆ ತಪ್ಪಿ, ಚಲಿಸುತ್ತಿದ್ದ ರೈಲಿನಿಂದ ಹೊರಬಿದ್ದ ಚಾಲಕ

    ಪ್ರಜ್ಞೆ ತಪ್ಪಿ, ಚಲಿಸುತ್ತಿದ್ದ ರೈಲಿನಿಂದ ಹೊರಬಿದ್ದ ಚಾಲಕ

    ಕೊಲ್ಕತ್ತಾ: ಅನಾರೋಗ್ಯದಿಂದ ಪ್ರಜ್ಞೆ ತಪ್ಪಿದ ಪರಿಣಾಮ ಚಲಿಸುತ್ತಿದ್ದ ರೈಲಿನಿಂದ ಚಾಲಕರೊಬ್ಬರು ಹೊರಗಡೆ ಬಿದ್ದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

    ಡ್ರೈವರ್ ಕೆಳಕ್ಕೆ ಬಿದ್ದ ತಕ್ಷಣ ರೈಲು ನಿಲುಗಡೆಯಾಗಿದೆ. ರೈಲು ಚಾಲನೆ ಮಾಡಲು ಚಾಲಕ ಅಸಮರ್ಥನಾದ ಸಂದರ್ಭದಲ್ಲಿ ತಾನಾಗೇ ಆನ್ ಆಗುವ “ಡೆಡ್ ಮ್ಯಾನ್ ಸ್ವಿಚ್” ಮೇಲಿಂದ ಚಾಲಕ ಕೈ ತೆಗೆದಿದ್ದರಿಂದ ರೈಲು ತಾನಾಗೇ ನಿಲುಗಡೆಯಾಗಿದೆ ಎಂದು ತಿಳಿದು ಬಂದಿದೆ.

    ಕೊಲ್ಕತ್ತಾದಿಂದ ಸುಮಾರು 130 ಕಿ.ಮೀ ದೂರದಲ್ಲಿರುವ ದೈನ್ಹಾಟ್ ರೈಲ್ವೇ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ಬುದ್ರ್ವನ್ ಜಿಲ್ಲೆಯ ಹೌರಾ ನಿಲ್ದಾಣದಿಂದ ಕಟ್ವಾನ್ ನಗರಕ್ಕೆ ರೈಲು ಪ್ರಯಾಣಿಸುತ್ತಿತ್ತು. ರೈಲಿನಿಂದ ಬಿದ್ದ ಚಾಲಕನನ್ನು ಹಾಲ್ದರ್ ಎಂದು ಗುರುತಿಸಲಾಗಿದ್ದು, ಚಾಲಕನ ತಲೆಗೆ ತೀವ್ರವಾದ ಗಾಯವಾಗಿದೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೂರ್ವ ರೈಲ್ವೆಯ ಅಧಿಕಾರಿ ಆರ್. ಮಹಾಪಾತ್ರ ತಿಳಿಸಿದ್ದಾರೆ.

    ಹಾಲ್ದರ್ ಅವರು ರೈಲ್ವೇ ಅಧಿಕಾರಿಗಳಿಗೆ ನೀಡಿರುವ ಹೇಳಿಕೆ ಪ್ರಕಾರ ತಾನು ಅನಾರೋಗ್ಯಕ್ಕೆ ಒಳಗಾಗಿ, ಇದ್ದಕ್ಕಿದ್ದ ಹಾಗೇ ತಲೆಸುತ್ತಿ ಬಂತು ಎಂದು ಹೇಳಿದ್ದಾರೆ. ಚಾಲಕ ಕೆಳಕ್ಕೆ ಬಿದ್ದ ಸಂದರ್ಭದಲ್ಲಿ ರೈಲು ಟ್ರ್ಯಾಕ್‍ಗಳನ್ನು ಬದಲಿಸುತ್ತಿತ್ತು. ಮಧ್ಯಾಹ್ನದ ವೇಳೆಗೆ ಚಾಲಕ ರೈಲಿನಿಂದ ಬೀಳೋದನ್ನ ಪ್ರತ್ಯಕ್ಷದರ್ಶಿಗಳು ಗಮನಿಸಿದ್ದರು. ಕೂಡಲೇ ಸ್ಥಳದಲ್ಲಿ ಜನಗಂಗುಳಿಯೇ ನೆರೆದಿತ್ತು. ನಂತರ ರೈಲ್ವೆ ಗಾರ್ಡ್ ಸ್ಥಳಕ್ಕೆ ದೌಡಾಯಿಸಿ ಚಾಲಕನನ್ನು ಆಸ್ಪತ್ರೆಗೆ ಕೊಂಡೊಯ್ಯುವಂತೆ ನೋಡಿಕೊಂಡ್ರು. ನಂತರ ಹೊಸ ಚಾಲಕ ಹಾಗೂ ಗಾರ್ಡ್‍ನನ್ನು ಕರೆಸಿದ್ದು, ಮಧ್ಯಾಹ್ನ 12.46 ಕ್ಕೆ ರೈಲು ಪ್ರಯಾಣ ಆರಂಭಿಸಿತು. ಘಟನೆಯಿಂದಾಗಿ ಇನ್ನೂ ಎರಡು ರೈಲುಗಳ ಸಂಚಾರ ತಡವಾಗಿತ್ತು.

    ರೈಲ್ವೆ ಅಧಿಕಾರಗಳು ಚಾಲಕನ ಆರೋಗ್ಯ ಸ್ಥಿತಿಯನ್ನ ಪರಿಶೀಲಿಸಲಿದ್ದಾರೆ. ಹೌರಾದಲ್ಲಿ ಚಾಲಕ ರೈಲನ್ನು ಏರಿದಾಗ ಚೆನ್ನಾಗಿಯೇ ಇದ್ದರು ಎಂದು ಮಹಾಪಾತ್ರ ತಿಳಿಸಿದ್ದಾರೆ.

  • ಟಿಎಂಸಿಗೆ ಮುಕುಲ್ ರಾಯ್ ರಾಜೀನಾಮೆ- ಬಿಜೆಪಿ ಸೇರ್ಪಡೆ ಸಾಧ್ಯತೆ?

    ಟಿಎಂಸಿಗೆ ಮುಕುಲ್ ರಾಯ್ ರಾಜೀನಾಮೆ- ಬಿಜೆಪಿ ಸೇರ್ಪಡೆ ಸಾಧ್ಯತೆ?

    ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಹಿರಿಯ ನಾಯಕ ಮುಕುಲ್ ರಾಯ್ ಸಿಂಗ್ ಪಕ್ಷದ ಕಾರ್ಯಕಾರಿ ಸಮಿತಿಗೆ ರಾಜೀನಾಮೆ ನೀಡಿದ್ದಾರೆ.

    ದುರ್ಗಾ ಪೂಜೆಯ ನಂತರ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆಯನ್ನು ನೀಡುವುದಾಗಿ ಹಾಗೂ ನಾನು ಯಾಕೆ ರಾಜೀನಾಮೆ ನೀಡುತ್ತಿದ್ದೇನೆ ಎನ್ನುವುದಕ್ಕೆ ಕಾರಣಗಳನ್ನು ತಿಳಿಸುವುದಾಗಿ ಹೇಳಿದ್ದಾರೆ. ತನಗೆ ಪಕ್ಷದಿಂದ ಹೊರ ನಡೆಯುವಂತೆ ಹಲವರು ಒತ್ತಡವನ್ನು ಹೇರಿದ್ದರು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

    ಮುಕುಲ್ ರಾಯ್ ಪಕ್ಷಕ್ಕೆ ರಾಜೀನಾಮೆಯನ್ನು ನೀಡಿದ ಕೆಲವೇ ಘಂಟೆಗಳಲ್ಲಿ ಟಿಎಂಸಿ ನಾಯಕ ಪಾರ್ಥ ಚಟರ್ಜಿ, ರಾಯ್ ಅವರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಿರುವುದಾಗಿ ಆದೇಶ ಹೊರಡಿಸಿದ್ದಾರೆ.

    ಮುಕುಲ್ ರಾಯ್ ಅವರು ಬಿಜೆಪಿ ಸೇರುವ ಸಾಧ್ಯತೆಯಿದ್ದು, ಈ ಮಾಹಿತಿ ನಿಜವಾದರೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪಕ್ಷಕ್ಕೆ ಹೆಚ್ಚಿನ ಬೆಂಬಲ ಲಭಿಸಿದಂತಾಗುತ್ತದೆ. ಈ ಕುರಿತು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಯ್, ನನ್ನ ಮುಂದಿನ ರಾಜಕೀಯ ನಿಲುವುಗಳ ಬಗ್ಗೆ ತಿಳಿಸುತ್ತೇನೆ. ಕೊಲ್ಕತ್ತಾ ಜನರಿಗೆ ದುರ್ಗಾ ಪೂಜೆಯ ವೇಳೆಯಲ್ಲಿ ರಾಜಕೀಯ ಸಂಘರ್ಷ ಕುರಿತು ಮಾತನಾಡುವುದು ಇಷ್ಟವಾಗುವುದಿಲ್ಲ ಎಂದರು.

    ರಾಯ್ ಅವರ ರಾಜೀನಾಮೆಗೆ ಟಿಎಂಸಿ ಪಕ್ಷ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡುವಿನ ಭಿನ್ನಾಭಿಪ್ರಾಯಗಳೇ ಕಾರಣ ಎಂದು ತಿಳಿದು ಬಂದಿದೆ. ರಾಯ್ ಅವರು ಹಲವು ದಿನಗಳ ಮುಂಚೆಯೇ ಪಕ್ಷ ತೆರೆಯುವ ಕುರಿತು ಸೂಚನೆಯನ್ನು ನೀಡಿದ್ದರು. ಟಿಎಂಸಿ ರಾಜ್ಯಸಭಾ ನಾಯಕ ಸ್ಥಾನದಿಂದ ಇವರನ್ನು ಕೆಳಗಿಳಿಸಿತ್ತು. ಅಲ್ಲದೆ ಸಾರಿಗೆ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಂಸತ್ತಿನ ಸ್ಥಾಯಿ ಸಮಿತಿಯ ಮುಖ್ಯಸ್ಥ ಸ್ಥಾನದಿಂದಲೂ ತೆಗೆದು ಹಾಕಲಾಗಿತ್ತು.

    ಕಳೆದ ಕೆಲವು ದಿನಗಳ ಹಿಂದೆ ಟಿಎಂಸಿಯ ಹಿರಿಯ ನಾಯಕರೊಬ್ಬರು ಮಮತಾ ಅವರು ಪಕ್ಷದ ಹೃದಯವಾದರೆ, ರಾಯ್ ಪಕ್ಷದ ತಲೆ ಇದ್ದ ಹಾಗೆ ಎಂದು ಹೇಳಿಕೆ ನೀಡಿದ್ದರು. ಮಮತಾ ಅವರ ಆಪ್ತ ವಲಯದಲ್ಲಿ ಕಾಣಿಸಿಕೊಳ್ಳುತ್ತಿದ್ದ ರಾಯ್ ಪಕ್ಷದ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದರು. ರಾಷ್ಟ್ರಪತಿ ಚುನಾವಣೆ ವೇಳೆ ಟಿಎಂಸಿ ಅಡ್ಡಮತದಾನ ಮಾಡಿ ರಾಮನಾಥ್ ಕೋವಿಂದ್ ಬೆಂಬಲ ನೀಡಿದ್ದಕ್ಕೆ ಮಮತಾ ಬ್ಯಾನರ್ಜಿ ಅಸಮಾಧಾನಗೊಂಡಿದ್ದರು. ಈ ಚುನಾವಣೆಯ ನಂತರ ಪಕ್ಷದಲ್ಲಿ ಅಂತರಿಕ ಒಡಕು ಉಂಟಾಗಿತ್ತು.

    ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಸ್ಥಾಪನೆಯಿಂದ ಅಧಿಕಾರವನ್ನು ಪಡೆಯುವ ತನಕ ಮುಕುಂದ್ ಅವರ ಕಾರ್ಯ ಮಹತ್ವ ಪೂರ್ಣವಾದ್ದು. ಮುಕುಂದ್ ಅವರ ರಾಜೀನಾಮೆಯು ಟಿಎಂಸಿಯಲ್ಲಿ ಭಾರೀ ಬದಲವಾಣೆಗೆ ಕಾರಣವಾಗಲಿದೆ ಎನ್ನುವ ವಿಶ್ಲೇಷಣೆ ಆರಂಭವಾಗಿದೆ.

    ಮುಕುಲ್ ರಾಯ್ ಅವರ ಮಗ ಶುಬ್ರನ್ಸು ರಾಯ್ ಪ್ರತಿಕ್ರಿಯಿಸಿದ್ದು, ತಂದೆ ರಾಜೀನಾಮೆ ನೀಡಿದರೂ ನಾನು ಟಿಎಂಸಿ ತೊರೆಯುವುದಿಲ್ಲ ಎಂದು ಹೇಳಿದ್ದಾರೆ.

  • ಧೋನಿ ಅಣ್ಣನಂತೆ ನಿಂತು ಧೈರ್ಯ ಹೇಳಿದ್ದಕ್ಕೆ ಸಿಕ್ತು ಹ್ಯಾಟ್ರಿಕ್: ಕುಲದೀಪ್ ಯಾದವ್

    ಧೋನಿ ಅಣ್ಣನಂತೆ ನಿಂತು ಧೈರ್ಯ ಹೇಳಿದ್ದಕ್ಕೆ ಸಿಕ್ತು ಹ್ಯಾಟ್ರಿಕ್: ಕುಲದೀಪ್ ಯಾದವ್

    ಕೋಲ್ಕತ್ತಾ: ಹ್ಯಾಟ್ರಿಕ್ ವಿಕೆಟ್ ಪಡೆದು ಕಪೀಲ್ ದೇವ್ ಚೇತನ್ ಶರ್ಮಾರ ಸಾಲಿನಲ್ಲಿ ನಾನು ನಿಲ್ಲುವುದಕ್ಕೆ ನನ್ನ ಅಣ್ಣ ಸ್ಥಾನದಲ್ಲಿರುವ ಧೋನಿಯ ಸ್ಫೂರ್ತಿದಾಯಕ ಮಾತುಗಳೇ ಕಾರಣ ಎಂದು ಎಡಗೈ ಲೆಗ್‍ಸ್ಪಿನ್ನರ್ ಕುಲದೀಪ್ ಯಾದವ್ ಹೇಳಿದ್ದಾರೆ.

    ಪಂದ್ಯ ಮುಗಿದ ಬಳಿಕ ಮಾತನಾಡಿದ ಕುಲದೀಪ್ ಯಾದವ್, ಬೌಲಿಂಗ್ ಮಾಡುವಾಗ ಪದೇ ಪದೇ ವಿಫಲವಾಗುತ್ತಿದ್ದ ವೇಳೆ ನನಗೆ ಧೈರ್ಯ ತುಂಬಿದ್ದು ಧೋನಿ. ನಿನಗೆ ಯಾವ ರೀತಿ ಹಾಕಬೇಕು ಅದೇ ರೀತಿ ಹಾಕು. ಆತ್ಮಸ್ಥೈರ್ಯವನ್ನು ಕಳೆದುಕೊಳ್ಳಬೇಡ. ಇದೇ ನನ್ನ ಹ್ಯಾಟ್ರಿಕ್ ವಿಕೆಟ್ ಪಡೆಯಲು ಸ್ಫೂರ್ತಿ ತುಂಬಿದ ಮಾತಾಗಿತ್ತು. ಪಂದ್ಯದ ಗತಿ ಬದಲಿಸಲು ಸಿಕ್ಕ ಅವಕಾಶ ದೊಡ್ಡದು. ಎಂದು ಕುಲದೀಪ್ ಯಾದವ್ ಧೋನಿಯನ್ನ ಹಾಡಿ ಹೊಗಳಿದ್ದಾರೆ.

    ಅಂತರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ನನ್ನ ಈ ಸಾಧನೆಗೆ ಅಣ್ಣನ ರೀತಿ ನಿಂತು ಧೈರ್ಯ ನೀಡಿ ಸಹಕಾರ ನೀಡಿದ್ದಾರೆ. ನಾನು ಎರಡನೇ ಏಕದಿನ ಪಂದ್ಯದಲ್ಲಿ ಬೌಲಿಂಗ್ ಮಾಡುವಾಗ ಹಲವಾರು ಬಾರಿ ಸರಿಯಾದ ಜಾಗಕ್ಕೆ ಬಾಲ್ ಹಾಕಲು ವಿಫಲನಾಗುತ್ತಿದ್ದೆ. ಬಳಿಕ ಅಣ್ಣ ಧೋನಿ ನನ್ನ ಬಳಿ ಬಂದು ಇದು ಆಟವಷ್ಟೇ. ಹೆಚ್ಚು ಒತ್ತಡಕ್ಕೆ ಒಳಗಾಗಬೇಡ ಕೂಲ್ ಆಗಿ ಬಾಲ್ ಮಾಡು. ನಿನಗೆ ಯಾವ ಜಾಗಕ್ಕೆ ಬಾಲ್ ಹಾಕಬೇಕು ಅನಿಸುತ್ತೆ ಹಾಗೇ ಮಾಡು ಎಂದು ಧೈರ್ಯ ತುಂಬಿದ್ದರು. ಹೀಗಾಗಿ ನಾನು ಯಶಸ್ಸು ಕಾಣಲು ಸಾಧ್ಯವಾಯಿತು ಎಂದು ಹೊಗಳಿದ್ದಾರೆ.

    ಕೇವಲ 252 ರನ್‍ಗೆ ಭಾರತ ಆಲ್‍ಔಟ್ ಆಗಿ ಸೋಲಿನ ಭೀತಿಯಲ್ಲಿಲ್ಲಿದ್ದ ಟೀ ಇಂಡಿಯಾಗೆ ಕೋಚ್‍ನ ರೀತಿಯಲ್ಲಿ ಧೊನಿ ಕೆಲಸ ಮಾಡುತ್ತಾರೆ. ಎಲ್ಲರಿಗೂ ಉತ್ತೇಜನ ನೀಡಿ ಪಂದ್ಯದ ಗತಿಯನ್ನು ಬದಲು ಮಾಡುವ ಶಕ್ತಿ ಧೋನಿಯವರ ಬಳಿ ಇದೆ ಎಂದು ಹೇಳಿದ್ದಾರೆ.

    ಕುಲ್‍ದೀಪ್ ಯಾದವ್ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದ ಧೋನಿ, ಈಡನ್ ಗಾರ್ಡನ್ ಸೃಷ್ಟಿಯಾದ ಮೈಲುಗಲ್ಲಿನ ಬಗ್ಗೆ ನಾನು ಕುಲದೀಪ್‍ಗೆ ಅಭಿನಂದನೆ ಸಲ್ಲಿಸುತ್ತೇನೆ. ಮ್ಯಾಥ್ಯು ವೆಡ್, ಅಸ್ಟನ್ ಅಗರ್ ಹಾಗೂ ಪ್ಯಾಟ್ ಕಮಿನ್ಸ್‍ರಂತಹ ಆಲ್‍ರೌಂಡರ್ ಆಟಗಾರರನ್ನ ಔಟ್ ಮಾಡಿ ಪೆವಲಿಯನ್ ಹಾದಿ ಹಿಡಿಯುವಂತೆ ಮಾಡಿದ್ದಾರೆ. ಅವರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ನಾಗ್ಪುರದಲ್ಲಿ 1987ರಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಚೇತನ್ ಶರ್ಮಾ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು. ಜೊತೆಗೆ ಮಾಜಿ ನಾಯಕ ಕಪಿಲ್ ದೇವ್ 1991ರಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದರು. ಈಗ ಇವರ ಸಾಲಿನಲ್ಲಿ ಕುಲದೀಪ್ ಯಾದವ್ ನಿಂತಿದ್ದು, ಈಡನ್‍ಗಾರ್ಡ್‍ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಭಾರತದ ಎರಡನೇ ಆಟಗಾರ ಎಂದು ಗುರುತಿಸಿಕೊಂಡಿದ್ದಾರೆ.

    ಕುಲದೀಪ್ ಯಾದವ್ 2014ರಲ್ಲಿ ಅಂಡರ್ 19 ವಿಶ್ವಕಪ್‍ನಲ್ಲಿ ಅಂತರಾಷ್ಟ್ರೀಯ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದರು. ಸ್ಕಾಟ್‍ಲ್ಯಾಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಕಿತ್ತು ಮಿಂಚಿದ್ದರು. ನಿನ್ನೆ ನಡೆದ ಪಂದ್ಯದಲ್ಲಿ ಕುಲದೀಪ್ ಎಸೆದ 33ನೇ ಓವರ್ ಪಂದ್ಯದ ದಿಕ್ಕನ್ನೇ ಬದಲಿಸಿ ಭಾರತಕ್ಕೆ ಗೆಲುವು ತಂದುಕೊಟ್ಟರು. ಇದರಿಂದ 5 ಏಕದಿನ ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ.

  • ಹಾರ್ದಿಕ್ ಪಾಂಡ್ಯ ರನೌಟ್ ಆದ್ರೂ ನಾಟೌಟ್ ಆಗಿದ್ದು ಹೇಗೆ?

    ಹಾರ್ದಿಕ್ ಪಾಂಡ್ಯ ರನೌಟ್ ಆದ್ರೂ ನಾಟೌಟ್ ಆಗಿದ್ದು ಹೇಗೆ?

    ಕೊಲ್ಕತ್ತಾ: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಭಾರತದ ತಂಡದ ಸ್ಟಾರ್ ಆಟಗಾರ ಹಾರ್ಧಿಕ್ ಪಾಂಡ್ಯ ನಾಟೌಟ್ ತೀರ್ಪು ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.

    ಪಂದ್ಯದ 45ನೇ ಓವರ್‍ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಕೇನ್ ರಿಚರ್ಡ್ ಸನ್ ಫುಲ್ಟಾಸ್ ಬಾಲ್ ಎಸೆದಿದ್ದರು. ಈ ಎಸೆತವನ್ನು ಪಾಂಡ್ಯ ಬಲವಾಗಿ ಹೊಡೆದಿದ್ದರು. ಆದರೆ ಬಾಲ್ ನಾಯಕ ಸ್ವೀವ್ ಸ್ಮಿತ್ ಕೈ ಸೇರಿತ್ತು. ಆದರೆ ಇದನ್ನು ನೋ ಬಲ್ ಎಂದು ಪ್ರಕಟಿಸಿದ ಅಂಪೈರ್ ನಾಟೌಟ್ ಎಂದು ತೀರ್ಪ ನೀಡಿದರು.

    ಈ ವೇಳೆ ಔಟ್ ಎಂದು ತಿಳಿದು ಪಾಂಡ್ಯ ಪೆವಿಲಿಯನ್ ಕಡೆಗೆ ಹೆಜ್ಜು ಹಾಕುತ್ತಿದ್ದರು. ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿದ್ದಕ್ಕೆ ಸ್ಪಿತ್ ಬೌಲರ್ ಕಡೆ ಬಾಲ್ ಎಸೆದ ರನ್ ಔಟ್ ಮಾಡಲು ಹೇಳಿದರು. ಕೈಗೆ ಬಾಲ್ ಸಿಕ್ಕಿದ ಕೂಡಲೇ ರಿಚರ್ಡ್ ಸನ್ ಬೇಲ್ಸ್ ಹಾರಿಸಿದರು. ಈ ವೇಳೆ ಆಸೀಸ್ ಆಟಗಾರರು ಔಟ್ ಗೆ ಮನವಿ ಮಾಡಿದರೂ ಆದರೆ ಅಂಪೈರ್ ತಮ್ಮ ಮೊದಲ ತೀರ್ಮಾನಕ್ಕೆ ಬದ್ಧರಾಗಿ ನಾಟೌಟ್ ಎಂದು ತೀರ್ಪು ನೀಡಿದರು.

    ನಿಯಮ ಏನ್ ಹೇಳುತ್ತೆ?
    ನಿಯಮ 37.7ರ ಪ್ರಕಾರ ಯಾವುದೇ ಬ್ಯಾಟ್ಸ್ ಮನ್ ತಾನು ಔಟ್ ಎಂದು ಭಾವಿಸಿ ಅಂಗಳದಿಂದ ಹೊರನಡೆಯುತ್ತಿರುವ ಸಂದರ್ಭದಲ್ಲಿ ಅಂಪೈರ್ ನಾಟೌಟ್  ಎಂದು ತೀರ್ಪು ಎಂದು ನೀಡಿದರೆ, ಪುನಃ ಅಂಪೈರ್ ಆಟಗಾರರನ್ನು ವಾಪಸ್ ಬರಲು ಸೂಚಿಸಬಹುದಾಗಿದೆ. ಆದರೆ ಈ ಅವಧಿಯಲ್ಲಿ ಅಂಗಳದಲ್ಲಿದ ಆಟಗಾರರ ಯಾವುದೇ ಚಟುವಟಿಕೆ ಮಾಡಿದರೂ ಅದು ಡೆಡ್‍ಬಾಲ್ ಎಂದು ಪರಿಗಣಿಸಲಾಗುತ್ತದೆ.

  • ಹೆದ್ದಾರಿಯಲ್ಲಿ ನಿಂತಿದ್ದ ಲಾರಿಯಿಂದ ಆಲೂಗಡ್ಡೆಯನ್ನ ತಿಂದ ಆನೆ- ವಿಡಿಯೋ

    ಹೆದ್ದಾರಿಯಲ್ಲಿ ನಿಂತಿದ್ದ ಲಾರಿಯಿಂದ ಆಲೂಗಡ್ಡೆಯನ್ನ ತಿಂದ ಆನೆ- ವಿಡಿಯೋ

    ಕೋಲ್ಕತ್ತಾ: ಆನೆಯೊಂದು ಹೆದ್ದಾರಿಯಲ್ಲಿ ನಿಂತಿದ್ದ ಲಾರಿಯಲ್ಲಿನ ಆಲೂಗಡ್ಡೆಗಳನ್ನು ತನ್ನ ಸೊಂಡಿಲಿನ ಸಹಾಯದಿಂದ ತಿನ್ನುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಪಶ್ಚಿಮ ಬಂಗಾಳ ರಾಜ್ಯದ ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಗರ್‍ಬೇಟಾ ಅರಣ್ಯ ಪ್ರದೇಶದ ರಾಷ್ಟ್ರೀಯ ಹೆದ್ದಾರಿ 60ರಲ್ಲಿ ಆಲೂಗಡ್ಡೆಗಳನ್ನು ತುಂಬಿರುವ ಲಾರಿಯೊಂದು ನಿಂತಿತ್ತು. ಈ ವೇಳೆ ಲಾರಿ ಬಳಿ ಬಂದ ಕಾಡು ಆನೆ ನೇರವಾಗಿ ತನ್ನ ಸೊಂಡಿಲಿನ ಸಹಾಯದ ಮೂಲಕ ಆಲೂಗಡ್ಡೆಗಳನ್ನು ತಿಂದಿದೆ.

    ಆಲೂಗಡ್ಡೆಗಳನ್ನು ಮುಚ್ಚಿರುವ ಪ್ಲಾಸ್ಟಿಕ್ ಕವರ್ ತೆಗೆದು ಆಲೂಗಡ್ಡೆಗಳನ್ನು ಕೆಳಗೆ ಬೀಳಿಸಿ ಒಂದೊಂದನ್ನಾಗಿ ತಿನ್ನುವ ದೃಶ್ಯಗಳನ್ನು ವಿಡಿಯೋದಲ್ಲಿ ಕಾಣಬಹುದು. ಇನ್ನೂ ಲಾರಿಯಲ್ಲಿದ್ದ ಚಾಲಕ ಹೊರಗೆ ಬಂದಿದ್ದಾನೆ. ಲಾರಿ ಚಾಲಕ ಮತ್ತು ಸ್ಥಳೀಯರು ಆನೆಯನ್ನು ಓಡಿಸಲು ಪಟಾಕಿಯನ್ನು ಸಹ ಸಿಡಿಸಿದ್ದಾರೆ. ಆದರೂ ಆನೆ ಯಾವುದನ್ನು ಲೆಕ್ಕಿಸದೇ ತನ್ನ ಪಾಡಿಗೆ ಅದು ಆಲೂಗಡ್ಡೆಗಳನ್ನು ತಿಂದು ತನ್ನ ಹೊಟ್ಟೆ ತುಂಬಿಸಿಕೊಂಡಿದೆ.

    https://www.youtube.com/watch?v=cq6s7vsMhaQ

  • ಧೋತಿ ಧರಿಸಿ ಬಂದ ನಿರ್ದೇಶಕನಿಗೆ ಎಂಟ್ರಿ ನೀಡದ ಮಾಲ್ ಸಿಬ್ಬಂದಿ

    ಧೋತಿ ಧರಿಸಿ ಬಂದ ನಿರ್ದೇಶಕನಿಗೆ ಎಂಟ್ರಿ ನೀಡದ ಮಾಲ್ ಸಿಬ್ಬಂದಿ

    ಕೋಲ್ಕತ್ತಾ: ಬಂಗಾಲಿ ಸಿನಿಮಾ ನಿರ್ದೇಶಕರೊಬ್ಬರು ಧೋತಿ ಧರಿಸಿದ್ದ ಕಾರಣ ಮಾಲ್ ಸಿಬ್ಬಂದಿ ಪ್ರವೇಶ ಕಲ್ಪಿಸಿದೇ ಉದ್ಧಟತನ ತೋರಿಸಿದ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.

    ನಿರ್ದೇಶಕ ಆಶೀಶ್ ಅವಿಕುಂತ್ ಶನಿವಾರ ಸಂಜೆ ನಗರದ ಕ್ವಿಸ್ಟ್ ಮಾಲ್‍ಗೆ ತೆರಳಿದ್ದರು. ಈ ವೇಳೆ ಮಾಲ್ ಸಿಬ್ಬಂದಿ ಆಶೀಶ್ ಅವರಿಗೆ ಪ್ರವೇಶ ಕೊಡದೇ ಸತಾಯಿಸಿದ್ದಾರೆ. ಮಾಲ್ ಒಳಗಡೆ ಧೋತಿ ಮತ್ತು ಲುಂಗಿ ಧರಿಸಿದ ವ್ಯಕ್ತಿಗಳಿಗೆ ಪ್ರವೇಶವಿಲ್ಲ ಎಂದು ಹೇಳಿದ್ದಾರೆ. ಇದನ್ನು ವಿರೋಧಿಸಿ ಮಾಲ್ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕೆ ಇಳಿದಿದ್ದು, ಆಶೀಶ್ ಮಾಲ್ ಸಿಬ್ಬಂದಿಯೊಂದಿಗೆ ಇಂಗ್ಲಿಷ್ ಮಾತನಾಡಿದಾಗ ಅವ್ರಿಗೆ ಪ್ರವೇಶ ಕಲ್ಪಿಸಲಾಗಿದೆ.

    ಆಶೀಶ್ ಈ ಘಟನೆಯನ್ನು ಖಂಡಿಸಿ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದು, ಮಾಲ್‍ಗಳ ಪ್ರವೇಶಕ್ಕೆ ನಿರಾಕರಿಸುವುದು ಇದೇ ಮೊದಲೇನಲ್ಲ. ಆದರೆ ಮೊಟ್ಟ ಮೊದಲ ಬಾರಿಗೆ ಧೋತಿ ಧರಿಸಿ ಬಂದ ಕಾರಣ ನೀಡಿ ಪ್ರವೇಶ ನಿರಾಕರಿಸಿದ್ದಾರೆ. ನಾನು ಕಳೆದ 26 ವರ್ಷಗಳಿಂದಲೂ ಧೋತಿ ಧರಿಸುತ್ತಾ ಬಂದಿದ್ದೇನೆ. ಭದ್ರತೆಯ ಕಾರಣ ನೀಡಿ, ಧೋತಿ ಮತ್ತು ಲುಂಗಿ ಧರಿಸಿದ್ದವರನ್ನು ಒಳಗಡೆ ಬಿಡಲ್ಲ ಎಂದು ಹೇಳಿದ್ದಾರೆ. ನಂತರ ನಾನು ಇಂಗ್ಲಿಷ್ ನಲ್ಲಿ ಮಾತನಾಡುವುದನ್ನು ಕಂಡ ಸಿಬ್ಬಂದಿ ಮಾಲ್‍ಗೆ ಪ್ರವೇಶ ನೀಡಿದರು. ಆದರೆ ಈ ಕೃತ್ಯವನ್ನು ಪ್ರತಿಭಟಿಸುವ ಸಲುವಾಗಿ ಮಾಲ್ ಅನ್ನು ಪ್ರವೇಶಿಸದೆ ಹಿಂದಿರುಗಿದೆ ಎಂದು ಹೇಳಿಕೊಂಡಿದ್ದಾರೆ.

     

    ಇದು ಹೊಸ ರೀತಿಯ ನಿಯಮವಾಗಿದ್ದು, ಖಾಸಗಿ ಹೋಟೆಲ್ ಹಾಗೂ ಕ್ಲಬ್‍ಗಳು ಧರಿಸುವ ಬಟ್ಟೆ ಕುರಿತು ಆಕ್ಷೇಪಿಸಿ ಪ್ರವೇಶ ನಿರಾಕರಿಸಿದ್ದು ವರ್ಣಬೇಧ ಮತ್ತು ಭಾರತೀಯ ಸಂಸ್ಕೃತಿ ಬಗೆಗಿನ ಉದಾಸೀನವನ್ನು ತೋರಿಸುತ್ತದೆ ಎಂದು ಹಲವಾರು ಕಿಡಿಕಾರಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೈರಲ್ ಆಗಿದ್ದು. ಪೋಸ್ಟ್ ಕುರಿತು ವ್ಯಾಪಕ ಪ್ರತಿಕ್ರಿಯೆಗಳು ಬಂದಿವೆ ಹಾಗು ಮಾಲ್‍ನ ಮ್ಯಾನೇಜ್‍ಮೆಂಟ್ ವಿರುದ್ಧ ಹಲವು ಟೀಕೆಗಳು ವ್ಯಕ್ತವಾಗಿವೆ.

     

    https://www.youtube.com/watch?v=JfXmZujzUJk

     

  • ಮೋದಿಗೆ ರಾಜಕೀಯ ದಾರಿ ತೋರಿಸಿದ್ದ ಗುರು ಆತ್ಮಸ್ಥಾನಂದ ಮಹಾರಾಜ್ ಸ್ವಾಮೀಜಿ ವಿಧಿವಶ

    ಮೋದಿಗೆ ರಾಜಕೀಯ ದಾರಿ ತೋರಿಸಿದ್ದ ಗುರು ಆತ್ಮಸ್ಥಾನಂದ ಮಹಾರಾಜ್ ಸ್ವಾಮೀಜಿ ವಿಧಿವಶ

    ಕೋಲ್ಕತ್ತಾ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಬದುಕಿನ ಪಥ ಬದಲಿಸಿ ರಾಜಕೀಯ ದಾರಿ ತೋರಿಸಿದ್ದ ಗುರು ಕೋಲ್ಕತ್ತಾ ರಾಮಕೃಷ್ಣಾ ಆಶ್ರಮದ ಆತ್ಮಸ್ಥಾನಂದ ಮಹಾರಾಜ್ ಸ್ವಾಮೀಜಿ ಅವರು ಭಾನುವಾರ ಸಂಜೆ ವಿಧಿವಶರಾಗಿದ್ದಾರೆ. ಇತ್ತ ಪ್ರಧಾನಿ ಮೋದಿ ಅವರು ಗುರುವಿನ ಅಗಲಿಕೆಗೆ ಸಂತಾಪವನ್ನು ಸೂಚಿಸಿದ್ದಾರೆ.

    99 ವರ್ಷದ ಆತ್ಮಸ್ಥಾನಂದ ಮಹಾರಾಜ್ ಶ್ರೀಗಳು ವಯೋ ಸಹಜ ಸಮಸ್ಯೆಗಳಿಂದ ಬಳಲುತ್ತಿದ್ದರು. ಆತ್ಮಸ್ಥಾನಂದ ಸ್ವಾಮೀಜಿ ಅವರು ನಿನ್ನೆ ಸಂಜೆ ಕೋಲ್ಕತ್ತಾದ ರಾಮಕೃಷ್ಣ ಆಶ್ರಮದಲ್ಲಿ ವಿಧಿವಶವಾಗಿದ್ದಾರೆ. ಸ್ವಾಮೀಜಿ ಅವರ ಅನಾರೋಗ್ಯ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಹ ಬಂದು ಶ್ರೀಗಳನ್ನು ಭೇಟಿಯಾಗಿದ್ದರು.

    ಪ್ರಧಾನಿ ನರೇಂದ್ರ ಮೋದಿ ಅವರು ರಾಜಕೀಯ ಪ್ರವೇಶಿಸುವುದಕ್ಕೂ ಮುನ್ನ ರಾಮಕೃಷ್ಣಾಶ್ರಮದಲ್ಲಿ ಸನ್ಯಾಸಿಯಾಗಲು ಬಯಸಿದ್ದರು. ಆದರೆ ಬಾಲಕ ಮೋದಿ ಕೋರಿಕೆಯನ್ನು ಅಂದು ತಿರಸ್ಕರಿಸಿದ್ದ ಆತ್ಮಸ್ಥಾನಂದ ಸ್ವಾಮೀಜಿ, ಮೋದಿ ಸನ್ಯಾಸತ್ವ ತಡೆದು ದೇಶ ಸೇವೆ ಮಾಡುವಂತೆ ಸಲಹೆ ನೀಡಿದ್ದರು ಎಂದು ಹೇಳಲಾಗಿದೆ.

    ಆತ್ಮಸ್ಥಾನಂದ ಮಹಾರಾಜ್ ಸ್ವಾಮೀಜಿ ಅವರು 1919, ಮೇ 10ರಂದು ಬಾಂಗ್ಲಾದೇಶದ ಢಾಕಾ ಬಳಿಯ ಸಬ್ಜಿಪುರ ಗ್ರಾಮದಲ್ಲಿ ಜನಿಸಿದ್ದರು. 1938ರಲ್ಲಿ ಸ್ವಾಮಿ ವಿಜಯಾನಂದರ ಅನತಿಯಂತೆ ತಮ್ಮ 22ನೇ ವಯಸ್ಸಿನಲ್ಲಿ ಬೇಲುರಿನ ರಾಮಕೃಷ್ಣ ಆಶ್ರಮವನ್ನು ಸೇರಿದ್ದರು.

     

  • 9 ವರ್ಷದ ಮಗಳ ಮುಂದೆಯೇ ತಾಯಿಯ ಮೇಲೆ ನೆರೆಮನೆಯವನಿಂದ ಅತ್ಯಾಚಾರ

    9 ವರ್ಷದ ಮಗಳ ಮುಂದೆಯೇ ತಾಯಿಯ ಮೇಲೆ ನೆರೆಮನೆಯವನಿಂದ ಅತ್ಯಾಚಾರ

    ಕೋಲ್ಕತ್ತಾ: ಮಧ್ಯ ವಯಸ್ಕ ಮಹಿಳೆಯನ್ನು ಆಕೆಯ 9 ವರ್ಷದ ಮಗಳ ಮುಂದೆಯೇ ನೆರೆಮನೆಯ ವ್ಯಕ್ತಿಯೊಬ್ಬ ಅತ್ಯಾಚಾರ ಎಸೆಗಿರುವ ಘಟನೆ ಕೊಲ್ಕತ್ತಾದಲ್ಲಿ ಭಾನುವಾರ ನಡೆದಿದೆ.

    ಆಶೀಶ್ ಪಟೇಲ್ (30) ಅತ್ಯಾಚಾರಗೈದ ಕಾಮುಕ. ಆಶೀಶ್ ಮಹಿಳೆಯ ಮನೆಯಲ್ಲಿ ಆಕೆಯ ಪತಿಯಿಲ್ಲದ ವೇಳೆ ಅತ್ಯಾಚಾರ ಮಾಡಿದ್ದಾನೆ ಎಂದು ಪೊಲೀಸ್ ಆಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಭಾನುವಾರ ಬೆಳಗಿನ ಜಾವ ಸುಮಾರು 3 ಗಂಟೆಯ ವೇಳೆಗೆ ಮನೆಗೆ ನುಗ್ಗಿದ ಆಶೀಶ್ ನನ್ನ ಮಗಳ ಮುಂದೆ ನನ್ನನ್ನು ಅತ್ಯಾಚಾರಗೈದು ಹಲ್ಲೆ ಮಾಡಿದ್ದಾನೆ. ಈ ವೇಳೆ ನನ್ನ ಮಗಳ ಮೇಲೆಯೂ ಹಲ್ಲೆ ಮಾಡಿದ್ದಾನೆ ಎಂದು ಸಂತ್ರಸ್ಥ ಮಹಿಳೆ ತಿಳಿಸಿದ್ದಾರೆ.

    ಸದ್ಯ ಪೊಲೀಸರು ಆರೋಪಿ ಆಶೀಶ್ ಪಟೇಲ್ ನನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.