Tag: kolkata

  • ಪ್ರಧಾನಿ ರ‍್ಯಾಲಿ ವೇಳೆ, ಮೇಲ್ಛಾವಣೆ ಕುಸಿದು 20 ಮಂದಿ ಗಾಯ!

    ಪ್ರಧಾನಿ ರ‍್ಯಾಲಿ ವೇಳೆ, ಮೇಲ್ಛಾವಣೆ ಕುಸಿದು 20 ಮಂದಿ ಗಾಯ!

    ಕೋಲ್ಕತ್ತಾ: ಪ್ರಧಾನಿ ಮೋದಿಯವರ ರ‍್ಯಾಲಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ಮೇಲ್ಛಾವಣೆ ಏಕಾಏಕಿ ಕುಸಿದು 20 ಮಂದಿ ಗಾಯಗೊಂಡಿರುವ ಘಟನೆ ಪಶ್ಚಿಮ ಬಂಗಾಳದ ಮಿಡ್ನಾಪುರ ದಲ್ಲಿ ನಡೆದಿದೆ.

    ಇಂದು ಮಿಡ್ನಾಪುರದಲ್ಲಿ ಹಮ್ಮಿಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿಯವರ ರ‍್ಯಾಲಿಯಲ್ಲಿ ತಾತ್ಕಾಲಿಕ ನಿರ್ಮಿಸಿದ್ದ ಮೇಲ್ಛಾವಣೆ ಕುಸಿದು 20 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡ ಜನರನ್ನು ಹತ್ತಿರದ ಆಸ್ಪತ್ರೆಗೆ ಬೈಕ್ ಹಾಗೂ ಅಂಬುಲೆನ್ಸ್ ಗಳಲ್ಲಿ ಕರೆದುಕೊಂಡು ಹೋಗಿ ದಾಖಲಿಸಲಾಗಿದೆ.

    ಮೇಲ್ಛಾವಣೆ ಕುಸಿದ ಗಾಯಗೊಂಡ ವಿಷಯ ತಿಳಿದ ಪ್ರಧಾನಿ ಮೋದಿಯವರು ತಮ್ಮ ಕಾರ್ಯಕ್ರಮದ ನಂತರ ಖುದ್ದು ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳ ಯೋಗ-ಕ್ಷೇಮ ವಿಚಾರಿಸಿದ್ದಾರೆ.

    ಇಂದು ಬೆಳಗ್ಗೆ ನರೇಂದ್ರ ಮೋದಿಯವರ ಬೃಹತ್ ರ‍್ಯಾಲಿಯನ್ನು ಜಿಲ್ಲೆಯ ಮಿಡ್ನಾಪುರದಲ್ಲಿ ಅದ್ಧೂರಿಯಾಗಿ ಹಮ್ಮಿಕೊಳ್ಳಲಾಗಿತ್ತು. ಜನ ಮೋದಿಯವರನ್ನು ಕಣ್ತುಂಬಿಕೊಳ್ಳಬೇಕಂಬ ಬಯಕೆಯಿಂದ ಜನ ರಸ್ತೆ ಬದಿಯಿದ್ದ, ತಾತ್ಕಾಲಿಕ ಮೇಲ್ಚಾವಣಿಯ ಕಂಬವನ್ನು ಏರಿದ್ದಾರೆ. ಏರಿದ್ದಾರೆ. ಅಲ್ಲದೇ ಬೆಳಿಗ್ಗೆಯಿಂದಲೂ ಸುರಿಯುತ್ತಿರುವ ಮಳೆಯಿಂದಾಗಿ ಮೇಲ್ಛಾವಣೆ ಸಂಪೂರ್ಣ ನೆನೆದು ಹೋಗಿತ್ತು. ತಾತ್ಕಾಲಿಕ ಮೇಲ್ಛಾವಣೆಗೆ ಭಾರ ಹೆಚ್ಚಿದ್ದರಿಂದ ಕುಸಿದು ಬಿದ್ದಿದೆ ಎಂದು ವರದಿಯಾಗಿದೆ.

  • ಶಾಲಾ ಬಸ್‍ನಲ್ಲಿ ಹುಡುಗಿ ಪಕ್ಕದ ಸೀಟಿಗಾಗಿ ಹುಡುಗರ ಕಿತ್ತಾಟ, ಮಾರಣಾಂತಿಕ ಹಲ್ಲೆ

    ಶಾಲಾ ಬಸ್‍ನಲ್ಲಿ ಹುಡುಗಿ ಪಕ್ಕದ ಸೀಟಿಗಾಗಿ ಹುಡುಗರ ಕಿತ್ತಾಟ, ಮಾರಣಾಂತಿಕ ಹಲ್ಲೆ

    ಕೋಲ್ಕತ್ತಾ: ಶಾಲಾ ಬಸ್ಸಿನಲ್ಲಿ ಹುಡುಗಿ ಪಕ್ಕ ಕುಳಿತುಕೊಳ್ಳುವ ವಿಷಯಕ್ಕೆ ಸಂಬಂಧಿಸಿ ಆರಂಭವಾದ ಜಗಳ ಮಾರಣಾಂತಿಕ ದಾಳಿಯಲ್ಲಿ ಕೊನೆಗೊಂಡ ಘಟನೆ ಪಶ್ಚಿಮ ಬಂಗಾಳದ ಡಂಡಂ ನಗರದಲ್ಲಿ ನಡೆದಿದೆ.

    11ನೇ ತರಗತಿಯ ವಿನಯ್(ಹೆಸರು ಬದಲಾಯಿಸಲಾಗಿದೆ) ದಾಳಿಗೊಳಗಾದ ಬಾಲಕನಾಗಿದ್ದಾನೆ. ವಿಕ್ರಮ್(ಹೆಸರು ಬದಲಾಯಿಸಲಾಗಿದೆ) ಎನ್ನುವ 12ನೇ ತರಗತಿಯ ವಿದ್ಯಾರ್ಥಿಯು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಇವರಿಬ್ಬರೂ ಡಂಡಂ ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಾಗಿದ್ದಾರೆ. ಕೇವಲ ಬಸ್ಸಿನಲ್ಲಿ ಹುಡುಗಿ ಪಕ್ಕದಲ್ಲಿ ಕುಳಿತುಕೊಳ್ಳುವ ವಿಚಾರಕ್ಕೆ ಜಗಳ ನಡೆದು, ವಿಕೋಪಕ್ಕೆ ತಿರುಗಿ ಮಾರಣಾಂತಿಕ ಹಲ್ಲೆ ನಡೆದಿದೆ.

    ಘಟನೆಯಿಂದ ವಿನಯ್ ನ ಕತ್ತು ಹಾಗೂ ಭುಜಕ್ಕೆ ಗಂಭೀರ ಗಾಯಗಳಾಗಿದ್ದು, ಕೂಡಲೇ ಡಂಡಂ ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ವಿನಯ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಘಟನೆ ಸಂಬಂಧ ಆರೋಪಿ ವಿಕ್ರಮ್ ನನ್ನು ಸೋಮವಾರ ಸಂಜೆ ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

    ಏನಿದು ಗಲಾಟೆ?
    ಸೋಮವಾರ ಸಂಜೆ ಸುಮಾರು 4.45 ರಷ್ಟೊತ್ತಿಗೆ ಶಾಲಾ ಮಕ್ಕಳು ಶಾಲಾ ವಾಹನದಲ್ಲಿ ಮನೆಗೆ ಮರಳುತ್ತಿದ್ದರು. ಈ ವೇಳೆ ವಿನಯ್ ಹುಡುಗಿ ಪಕ್ಕ ಕುಳಿತಿದ್ದ. ಅಷ್ಟರಲ್ಲಿ ಬಸ್ಸನ್ನೇರಿದ ವಿಕ್ರಮ್ ನನ್ನ ಗೆಳತಿಯ ಪಕ್ಕದಿಂದ ಎದ್ದೇಳು ಎಂದು ಗಲಾಟೆ ಮಾಡಿದ್ದಾನೆ. ಇಬ್ಬರ ನಡುವೆ ಜಗಳ ತಾರಕ್ಕೇರಿದಾಗ, ಅಲ್ಲೇ ಇದ್ದ ವಿದ್ಯಾರ್ಥಿಗಳು ಅವರಿಬ್ಬರನ್ನು ಸಮಾಧಾನ ಪಡಿಸಲು ಯತ್ನಿಸಿದರಾದರೂ ಪ್ರಯೋಜನವಾಗಿಲ್ಲ.

    ಇದರಿಂದ ಸಿಟ್ಟಿಗೆದ್ದ ವಿಕ್ರಮ್ ಬಸ್ ನಿಂದ ಕೆಳಗಿಳಿದು ರಸ್ತೆ ಬದಿಯ ಅಂಗಡಿಯಲ್ಲಿದ್ದ ಪೀಲರ್ (ಆಲೂಗಡ್ಡೆ ಸುಲಿಯುವ ಸಾಧನ)ವನ್ನು ಎತ್ತಿಕೊಂಡು ಬಸ್ ಏರಿದ್ದಾನೆ. ಕೈಗೆ ಸಿಕ್ಕ ಪೀಲರ್ ನಿಂದ ವಿನಯ್ ಮೇಲೆ ಮನಬಂದಂತೆ ದಾಳಿ ಮಾಡಿದ್ದಾನೆ. ಆತನ ಕ್ರೌರ್ಯಕ್ಕೆ ಬೆಚ್ಚಿದ ಬಸ್ ಚಾಲಕ, ಸಹಾಯಕ ಮತ್ತು ಇತರ ವಿದ್ಯಾರ್ಥಿಗಳು ಆರೋಪಿ ಬಾಲಕನನ್ನು ತಡೆದು ಬಸ್‍ನಿಂದ ಕೆಳಗಡೆ ಇಳಿಸಿದ್ದಾರೆ.

  • ಜೀನ್ಸ್ ಧರಿಸಿದ್ದಕ್ಕೆ ಯುವತಿಯನ್ನು ಬೆದರಿಸಿ ಆಕೆಯ ಬಟ್ಟೆ ಎಳೆದ ಕಿಡಿಗೇಡಿ!

    ಜೀನ್ಸ್ ಧರಿಸಿದ್ದಕ್ಕೆ ಯುವತಿಯನ್ನು ಬೆದರಿಸಿ ಆಕೆಯ ಬಟ್ಟೆ ಎಳೆದ ಕಿಡಿಗೇಡಿ!

    ಕೋಲ್ಕತ್ತಾ: ಯುವತಿಯೊಬ್ಬರು ತನ್ನ ಸ್ನೇಹಿತನ ಜೊತೆ ಸಬ್‍ಅರ್ಬನ್ ರೈಲಿನಲ್ಲಿ ಪ್ರಯಾಣಿಸುವಾಗ ಸಹ ಪ್ರಯಾಣಿಕರು ಆಕೆಯನ್ನು ಬೆದರಿಸಿ ಆಕೆಯ ಬಟ್ಟೆ ಎಳೆದ ಘಟನೆ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಡೆದಿದೆ.

    ಯುವತಿ ಕೋಲ್ಕತ್ತಾದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಶನಿವಾರ ಸಂಜೆ ತನ್ನ ಸ್ನೇಹಿತನ ಜೊತೆ ಸೀಲ್ದಾಹ್ ಸ್ಟೇಷನ್‍ನಿಂದ ಜನರಲ್ ಕಂಪಾಟ್ಮೆಂಟ್‍ನಲ್ಲಿ ಪ್ರಯಾಣಿಸುತ್ತಿದ್ದರು.

    ಟ್ರೈನಿನಲ್ಲಿ ಸಾಕಷ್ಟು ಜನವಿದ್ದರು ಹಾಗೂ ನಾನು ಕುಳಿತುಕೊಳ್ಳಲು ಅಲ್ಲಿ ಸ್ವಲ್ಪ ಜಾಗವಿತ್ತು. ಆಗ ಮಧ್ಯ ವಯಸ್ಕರ ವ್ಯಕ್ತಿಗೆ ಸ್ವಲ್ಪ ಜರುಗಲು ಹೇಳಿದೆ. ಆದರೆ ಆತ ನಿರಾಕರಿಸಿದ್ದ. ಅಲ್ಲಿ ಫ್ಯಾನ್ ಇಲ್ಲ ನಾನು ಆ ಕಡೆ ಹೋಗುವುದ್ದಿಲ್ಲ ಎಂದು ಆ ವ್ಯಕ್ತಿ ಹೇಳಿದ್ದ ಎಂದು ಯುವತಿ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿದ್ದಾರೆ.

    ನಾನು ಹಾಗೂ ನನ್ನ ಸ್ನೇಹಿತ ಆ ವ್ಯಕ್ತಿ ಜೊತೆ ವಾದ ಮಾಡದೇ ಆ ಸ್ವಲ್ಪ ಜಾಗದಲ್ಲೇ ಇಬ್ಬರು ಅಡ್ಜೆಸ್ಟ್ ಮಾಡಿ ಕುಳಿತ್ತಿದ್ದೆವು. ಆಗ ಆ ವ್ಯಕ್ತಿ “ಇದು ಮಹಿಳೆಯರ ಕಂಪಾಟ್ಮೆಂಟ್ ಅಲ್ಲ” ಎಂದು ನಿಂದಿಸಿದ್ದಾನೆ.

    ಸದ್ಯ ಯುವತಿ ತನ್ನ ಮೊಬೈಲಿನಲ್ಲಿ ಆ ವ್ಯಕ್ತಿಯ ವಿಡಿಯೋವನ್ನು ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ಸರ್ಕಾರಿ ರೈಲ್ವೇ ಪೊಲೀಸರಿಗೂ ಈ ಬಗ್ಗೆ ದೂರು ನೀಡಿದ್ದಾರೆ.

    ಆ ಅಪರಿಚಿತ ವ್ಯಕ್ತಿ ಮೇಲೆ ದೂರು ನೀಡಲಾಗಿದೆ. ನಾನು ಆ ವ್ಯಕ್ತಿಯನ್ನು ಹುಡುಕುತ್ತಿದ್ದೇವೆ. ಅಷ್ಟೇ ಅಲ್ಲದೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಶುರು ಮಾಡಿದ್ದೇವೆ ಎಂದು ಸರ್ಕಾರಿ ರೈಲ್ವೇ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

  • ನಿಮ್ಮ ಸ್ತನಗಳು ನೈಜವೇ? – ಸಂದರ್ಶನದಲ್ಲಿ ಶಿಕ್ಷಕಿಗೆ ಎದುರಾಯ್ತು ಭಯಾನಕ ಪ್ರಶ್ನೆ

    ನಿಮ್ಮ ಸ್ತನಗಳು ನೈಜವೇ? – ಸಂದರ್ಶನದಲ್ಲಿ ಶಿಕ್ಷಕಿಗೆ ಎದುರಾಯ್ತು ಭಯಾನಕ ಪ್ರಶ್ನೆ

    ಕೋಲ್ಕತ್ತಾ: ಲಿಂಗಾ ಪರಿವರ್ತನೆ ಶಸ್ತ್ರ ಚಿಕಿತ್ಸೆ ಒಳಪಟ್ಟ ಶಿಕ್ಷಕಿಯರೊಬ್ಬರಿಗೆ ಶಾಲೆಯ ಸಂದರ್ಶನದಲ್ಲಿ ನಿಮ್ಮ ಸ್ತನಗಳು ನಿಜವೇ, ನೀವು ಮಗುವಿಗೆ ಜನ್ಮ ನೀಡಲು ಸಾಧ್ಯವಾಗುತ್ತಾ ಎಂಬ ಪ್ರಶ್ನೆಗಳನ್ನು ಎದುರಿಸಿದ್ದಾಗಿ ತಿಳಿಸಿದ್ದಾರೆ.

    ಸುಚಿತ್ರಾ ಡೇ ಎಂಬವರು ಇಂಗ್ಲಿಷ್ ಹಾಗೂ ಭೂಗೋಳ ಶಾಸ್ತ್ರದಲ್ಲಿ ಉನ್ನತ ಪದವಿಯನ್ನು ಪಡೆದಿದ್ದು, ಬಿಎಡ್ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ಅಲ್ಲದೇ ಶಿಕ್ಷಕರಾಗಿ ಅನುಭವವನ್ನು ಹೊಂದಿದ್ದು, ಶಾಲೆಯೊಂದರಲ್ಲಿ ಶಿಕ್ಷಕರ ಸಂದರ್ಶನಕ್ಕೆ ಹೋದ ವೇಳೆ ಲೈಂಗಿಕ ಶೋಷಣೆ ನಡೆದಿರುವ ಕುರಿತು ಬಹಿರಂಗ ಪಡಿಸಿದ್ದಾರೆ.

    ಅಂದಹಾಗೇ ಹಿರಣ್ಮೆ ಡೇ ಎಂದು ಹೆಸರು ಹೊಂದಿದ್ದ 30 ವರ್ಷದ ಸುಚಿತ್ರಾ ಡೇ 2017 ರಲ್ಲಿ ಲಿಂಗಾ ಪರಿವರ್ತನೆಗೆ ಒಳಗಾಗಿದ್ದರು. ಸಂದರ್ಶನದ ವೇಳೆ ತಮ್ಮನ್ನು ತೃತೀಯ ಲಿಂಗಿಯಂತೆ ಕಂಡು ಹಾಸ್ಯಾಸ್ಪದವಾಗಿ ವರ್ತಿಸಿದ್ದರು ಎಂದು ತಿಳಿಸಿದ್ದಾರೆ. ಇದೇ ವೇಳೆ 2014 ಸುಪ್ರೀಂ ಕೋರ್ಟ್ ತೀರ್ಪನ್ನು ಪ್ರಸ್ತಾಪಿಸಿದ ಅವರು ಶೈಕ್ಷಣಿಕ ಸಂಸ್ಥೆಗಳಲ್ಲಿ ತೃತೀಯ ಲಿಂಗಿಗಳು ಉದ್ಯೋಗ ಅವಕಾಶ ಪಡೆಯಬಹುದು ಎಂದು 2014 ರಲ್ಲಿ ತೀರ್ಪು ನೀಡಿತ್ತು. ಸದ್ಯ ತಮಗಾದ ಅನುಭವವನ್ನು ಸುಚಿತ್ರಾ ಡೇ ಅವರು ಪಶ್ಚಿಮ ಬಂಗಾಳ ಮಾನವ ಹಕ್ಕುಗಳ ಸಮಿತಿಗೆ ಪತ್ರ ಬರೆದಿದ್ದಾರೆ.

  • ಪಶ್ಚಿಮ ಬಂಗಾಳದಲ್ಲಿ ಮುಂದುವರಿದ ತಾಪಮಾನ- ಪ್ರಾಥಮಿಕ ಶಾಲೆಗಳ ರಜೆ ವಿಸ್ತರಣೆ

    ಪಶ್ಚಿಮ ಬಂಗಾಳದಲ್ಲಿ ಮುಂದುವರಿದ ತಾಪಮಾನ- ಪ್ರಾಥಮಿಕ ಶಾಲೆಗಳ ರಜೆ ವಿಸ್ತರಣೆ

    ಕೋಲ್ಕತ್ತಾ: ರಾಜ್ಯದ ಕೆಲ ಭಾಗಗಳಲ್ಲಿ ತಾಪಮಾನ ಹಾಗು ಉಷ್ಣ ಹವೆ ಮುಂದುವರಿದಿದ್ದು, ಪಶ್ಚಿಮ ಬಂಗಾಳ ಸರ್ಕಾರ ಪ್ರಾಥಮಿಕ ಶಾಲೆಗಳ ರಜೆಯನ್ನು ವಿಸ್ತರಿಸಿದೆ.

    ಕೋಲ್ಕತ್ತಾ ಹಾಗೂ ಪಶ್ಚಿಮ ಬಂಗಾಳದ ದಕ್ಷಿಣ ಭಾಗಗಳಲ್ಲಿ ಒಣ ಹವೆ ಹೆಚ್ಚಾಗುತ್ತಿದೆ. ಹೀಗಾಗಿ ಪ್ರಾಥಮಿಕ ಶಿಕ್ಷಣ ಮಂತ್ರಿ ಪಾರ್ಥ ಚಟರ್ಜಿ ಸೋಮವಾರ ಪ್ರಾಥಮಿಕ ಶಾಲಾ ಬೇಸಿಗೆ ರಜೆಯನ್ನು ಜೂನ್20 ರಿಂದ 30ಕ್ಕೆ ವಿಸ್ತರಿಸಿ ಆದೇಶ ಹೊರಡಿಸಿದ್ದಾರೆ.

    ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟುತ್ತಿದೆ. ಉಷ್ಣ ಹವೆ ಬೀಸುತ್ತಿದ್ದ ಪರಿಣಾಮ ಜನರಲ್ಲಿ ಕೆಲವೊಂದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. 40.6ಡಿಗ್ರಿ ಯಷ್ಟು ಗರಿಷ್ಠ ಉಷ್ಣತೆ ದಾಖಲಾಗಿದ್ದು, ಕನಿಷ್ಠ 30 ಡಿಗ್ರಿ ದಾಖಲಾಗಿದೆ ಅಂತಾ ಪ್ರಾದೇಶಿಕ ಹವಾಮಾನ ಇಲಾಖೆ ತಿಳಿಸಿದೆ.

    ಸರ್ಕಾರಿ ಶಾಲೆಗಳು ಜೂನ್ 20 ಕ್ಕೆ ಪ್ರಾರಂಭವಾಗಬೇಕಿತ್ತು. ಆದರೆ ತಾಪಮಾನ ಹೆಚ್ಚಾಗಿರುವ ಕಾರಣದಿಂದಾಗಿ ಜೂನ್ 30ಕ್ಕೆ ಮುಂದೂಡಲಾಗಿದೆ. ಖಾಸಗಿ ಪ್ರಾಥಮಿಕ ಶಾಲೆಗಳು ಕೂಡಾ ರಜೆಯನ್ನು ವಿಸ್ತರಿಸುವಂತೆ ಸಚಿವ ಪಾರ್ಥ ಚಟರ್ಜಿ ವಿನಂತಿ ಮಾಡಿದ್ದಾರೆ.

    ಕೋಲ್ಕತ್ತಾ ಹಾಗು ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ಈ ಬಿಸಿ ಹಬೆ ಇನ್ನೂ ಎರಡು ದಿನಗಳ ಕಾಲ ಮುಂದುವರಿಯಲಿದೆ. ರಾಜ್ಯದಲ್ಲಿ ಮುಂಗಾರು ದುರ್ಬಲವಾಗಿದ್ದು, ಇನ್ನೆರಡು ದಿನಗಳ ಕಾಲ ಪಶ್ಚಿಮ ಬಂಗಾಳದ ಗಂಗಾಟಿಕ್ ಜಿಲ್ಲೆಗಳಲ್ಲಿ ಈ ರೀತಿ ವ್ಯತಿರಿಕ್ತ ಹವಾಮಾನ ಮುಂದುವರಿಯಲಿದೆ ಎಂದು ಇಲಾಖೆ ತಿಳಿಸಿದೆ.

  • ಆಟವಾಡೋದಾಗಿ ರಿಯಲ್ ಗನ್‍ನಿಂದಲೇ ಶೂಟ್: ಐಸಿಯುನಲ್ಲಿ ತಾಯಿ

    ಆಟವಾಡೋದಾಗಿ ರಿಯಲ್ ಗನ್‍ನಿಂದಲೇ ಶೂಟ್: ಐಸಿಯುನಲ್ಲಿ ತಾಯಿ

    ಕೋಲ್ಕತ್ತಾ: ಆಟವಾಡೋ ಗನ್ ಎಂದು ತಿಳಿದು ಮಗಳು ತಾಯಿಗೆ ಶೂಟ್ ಮಾಡಿದ ಘಟನೆ ಭಾನುವಾರ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ನಡೆದಿದೆ.

    ಕಾಕೋಲಿ ಜಾನಾ ಗುಂಡಿನ ಏಟಿನಿಂದ ಆಸ್ಪತ್ರೆಯಲ್ಲಿ ಬಳುತ್ತಿರುವ ಮಹಿಳೆ. ಆಟವಾಡೋ ಪಿಸ್ತೂಲ್ ಎಂದು ತಿಳಿದು ತಾಯಿಯೇ ಆ ಪಿಸ್ತೂಲ್‍ನನ್ನು ತನ್ನ ಮಗಳಿಗೆ ನೀಡಿದ್ದರು. ಬಾಲಕಿ ಆ ಪಿಸ್ತೂಲ್‍ನಲ್ಲಿ ಆಟವಾಡುವಾಗ ನಿಜವಾದ ಪಿಸ್ತೂಲ್ ಎಂದು ತಿಳಿಯದೇ ತನ್ನ ತಾಯಿಗೆ ಶೂಟ್ ಮಾಡಿದ್ದಾಳೆ.

    ಭಾನುವಾರ ಬೆಳಗ್ಗೆ ಕಾಕೋಲಿ ತನ್ನ ಮನೆಯ ಆವರಣದಲ್ಲಿ ಆ ಪಿಸ್ತೂಲ್ ಅನ್ನು ನೋಡಿದ್ದರು. ನಂತರ ಅದು ಆಟವಾಡೋ ಪಿಸ್ತೂಲ್ ಎಂದು ತಿಳಿದು ತನ್ನ ಮಗಳಿಗೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಬಾಲಕಿ ಆ ಪಿಸ್ತೂಲ್‍ನಿಂದ ಆಟವಾಡುವಾಗ ಆಕಸ್ಮಿಕವಾಗಿ ತನ್ನ ತಾಯಿಯ ಬೆನ್ನಿಗೆ ಶೂಟ್ ಮಾಡಿದ್ದಾಳೆ. ತಕ್ಷಣ ಕಾಕೋಲಿ ಅವರನ್ನು ಆರಂಬಗ್ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ಸದ್ಯ ಕಾಕೋಲಿ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಘಟನೆಗೆ ಸಂಬಂಧಿಸಿದಂತೆ ಬಾಲಕಿಯನ್ನು ವಶಕ್ಕೆ ಪಡೆದಿದ್ದೇವೆ. ಬಾಲಕಿ ಆಕಸ್ಮಿಕವಾಗಿ ಗುಂಡನ್ನು ಹಾರಿಸಿದ್ದಾಳೆ. ಆ ಗುಂಡು ರೂಮಿನಲ್ಲಿ ಕುಳಿತ್ತಿದ್ದ ಆಕೆಯ ತಾಯಿಯ ಬೆನ್ನಿಗೆ ಬಿದ್ದಿದೆ. ಸದ್ಯ ಬಾಲಕಿ ಶಾಕ್ ನಲ್ಲಿದ್ದು, ಏನು ಹೇಳುವ ಸ್ಥಿತಿಯಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

    ಸದ್ಯ ಪೊಲೀಸರು ಆ ಪಿಸ್ತೂಲ್ ಮನೆಯ ಆವರಣದಲ್ಲಿ ಹೇಗೆ ಬಂತು ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

  • ಹೆಬ್ಬಾವಿನೊಂದಿಗೆ ಸೆಲ್ಫಿ- ಕೂದಲೆಳೆ ಅಂತರದಲ್ಲಿ ಅರಣ್ಯಾಧಿಕಾರಿ ಪಾರು!

    ಹೆಬ್ಬಾವಿನೊಂದಿಗೆ ಸೆಲ್ಫಿ- ಕೂದಲೆಳೆ ಅಂತರದಲ್ಲಿ ಅರಣ್ಯಾಧಿಕಾರಿ ಪಾರು!

    ಕೋಲ್ಕತ್ತಾ: ಜನರನ್ನು ಮನರಂಜಿಸೋಕೆ ಹೋಗಿ ಅರಣ್ಯ ಇಲಾಖೆಯ ಸಿಬ್ಬಂದಿಯೋರ್ವ ಪ್ರಾಣಕ್ಕೆ ಸಂಚಕಾರ ತಂದುಕೊಂಡಿದ್ದ ಘಟನೆ ಪಶ್ಚಿಮಬಂಗಾಳದಲ್ಲಿ ನಡೆದಿದೆ.

    ಹೆಬ್ಬಾವಿನೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ಮೂಲಕ ಜನರನ್ನು ಮನರಂಜಿಸಲು ಹೋಗಿ ಅಪಾಯವನ್ನು ತನ್ನ ಮೈಮೇಲೆ ಎಳೆದುಕೊಂಡಿದ್ದರು. ಸಹೋದ್ಯೋಗಿಯ ಸಮಯಪ್ರಜ್ಞೆಯಿಂದಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಜಲ್ಪೈಗುರಿ ಹಳ್ಳಿಗಾಡಿನ ಜನತೆ ಅರಣ್ಯ ಅಧಿಕಾರಿಗಳಿಗೆ ಕರೆಮಾಡಿ, ತಮ್ಮ ಮೇಕೆಗಳನ್ನು ರಾಕ್ ಪೈಥಾನ್ ಹೆಬ್ಬಾವು ತಿಂದು ಹಾಕುತ್ತಿದೆ ಎಂದು ದೂರು ನೀಡಿದ್ದರು. ಹೆಬ್ಬಾವನ್ನು ಹಿಡಿಯಲು ಅರಣ್ಯ ಇಲಾಖೆಯ ಸಿಬ್ಬಂದಿ ಹಳ್ಳಿಗೆ ಧಾವಿಸಿ, 18 ಅಡಿ ಉದ್ದದ ಸುಮಾರು 40 ಕೆ.ಜಿ ತೂಕದ ಹಾವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದರು.

    ಈ ಸಂದರ್ಭದಲ್ಲಿ ಸೆಲ್ಫಿ ಕ್ರೇಜ್ ಇದ್ದ ಅರಣ್ಯಾಧಿಕಾರಿ ಹೆಬ್ಬಾವನ್ನು ತಮ್ಮ ಕೊರಳಿಗೆ ಹಾಕಿಕೊಂಡು ಸೇರಿದ್ದ ಜನರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದರು. ಆಗ ಹೆಬ್ಬಾವು ಅಧಿಕಾರಿಯ ಕೊರಳಿಗೆ ಹಿಂದಿನಿಂದ ಬಿಗಿಯಾಗಿ ಸುತ್ತಿಕೊಳ್ಳಲಾರಂಭಿಸಿತ್ತು.

    ಕೂಡಲೇ ಅರಣ್ಯಾಧಿಕಾರಿ “ಹಾವಿನ ಬಾಲವನ್ನು ಹಿಡಿ” ಎಂದು ಕಿರುಚುತ್ತಾ ಜನರಿಂದ ದೂರ ಓಡಿದರು. ಇದನ್ನು ನೋಡುತ್ತಲೇ ಸುತ್ತಲಿದ್ದ ಜನರೆಲ್ಲ ಅಲ್ಲಿಂದ ದೂರ ಓಡಿಹೋದರು. ಕೂಡಲೇ ಎಚ್ಚೆತ್ತ ಅವರ ಸಹಾಯಕ ಅಧಿಕಾರಿ ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಹಾವನ್ನು ಅವರ ಕುತ್ತಿಗೆಯಿಂದ ಬಿಡಿಸಿದ್ದಾರೆ.

    ಈ ಘಟನೆಯನ್ನು ನೋಡುತ್ತಿದ್ದ ಜನರ ಪ್ರಾಣವೇ ಬಾಯಿಗೆ ಬಂದಂತಾಗಿತ್ತು. ಕೆಲವರು ಅರಣ್ಯಾಧಿಕಾರಿಯ ಶೌರ್ಯದ ಕುರಿತು ಗುಣಗಾನ ಮಾಡಿದ್ರೆ, ಇನ್ನು ಕೆಲವರು ಅದನ್ನು ಟೀಕಿಸಿದರು. ಕೆಲ ಸಮಯದ ನಂತರ ಹಾವನ್ನು ಸುರಕ್ಷಿತವಾಗಿ ಕಾಡಿನೊಳಕ್ಕೆ ಬಿಡಲಾಯಿತು.

  • ಬಸ್ಸಿನಲ್ಲಿ ಮಹಿಳೆಯರಿಬ್ಬರ ಮುಂದೆಯೇ ಹಸ್ತಮೈಥುನ ಮಾಡ್ದ!

    ಬಸ್ಸಿನಲ್ಲಿ ಮಹಿಳೆಯರಿಬ್ಬರ ಮುಂದೆಯೇ ಹಸ್ತಮೈಥುನ ಮಾಡ್ದ!

    ಕೋಲ್ಕತ್ತಾ: ಬಸ್ಸಿನಲ್ಲಿ ಕುಳಿತಿದ್ದ ಇಬ್ಬರು ಮಹಿಳೆಯರನ್ನು ನೋಡಿಕೊಂಡು ವ್ಯಕ್ತಿಯೊಬ್ಬ ಹಸ್ತಮೈಥುನ ಮಾಡಿಕೊಂಡ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.

    ಘಟನೆಗೆ ಸಂಬಂಧಿಸಿದಂತೆ ಕೂಡಲೇ ಮಹಿಳೆಯರು ವಿಡಿಯೋ ಮಾಡಿ ಶ್ಯಾಂಪುಕುರ್ ಪೊಲೀಸರಿಗೆ ದೂರು ನೀಡಿದ್ದು, ಸದ್ಯ ಆರೋಪಿಯನ್ನು ಬಂಧಿಸಲಾಗಿದೆ.

    ಘಟನೆ ವಿವರ: ಮಹಿಳೆಯರಿಬ್ಬರು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಹೂಗ್ಲಿ ಜಿಲ್ಲೆಯ ಬೈದ್ಯಾಬಟಿ ಎಂಬಲ್ಲಿ ಬಸ್ಸಿಗೆ ಹತ್ತಿದ್ದಾನೆ. ನಂತರ ಮಹಿಳೆಯರು ಕಾಣಿಸುವಂತೆ ಹಿಂದುಗಡೆ ಸೀಟಿನಲ್ಲಿ ಬಂದು ಕುಳಿತಿದ್ದಾನೆ. ಬಳಿಕ ಮಹಿಳೆಯರಿಬ್ಬರನ್ನು ನೋಡಿಕೊಂಡು ಬಸ್ಸಿನಲ್ಲೇ ಹಸ್ತಮೈಥುನ ಮಾಡಿಕೊಂಡಿದ್ದಾನೆ. ವ್ಯಕ್ತಿಯ ನೀಚ ಕೃತ್ಯವನ್ನು ಕಂಡ ಮಹಿಳೆಯರು ತಮ್ಮ ಮೊಬೈಲ್ ನಲ್ಲಿ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಅಲ್ಲದೇ ಆ ವಿಡಿಯೋವನ್ನು ಆ ಕೂಡಲೇ ತಮ್ಮ ಫೇಸ್‌ಬುಕ್‌ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಎರಡು ವಿಡಿಯೋವನ್ನು ಅಪ್ಲೋಡ್ ಮಾಡಿದ ಮಹಿಳೆಯರು ಅದನ್ನು ಕೋಲ್ಕತ್ತಾ ಪೊಲೀಸರ ಪೇಜ್ ಗೂ ಟ್ಯಾಗ್ ಮಾಡಿದ್ದಾರೆ.

    ಘಟನೆಯ ಕುರಿತು ನಾವು ಬಸ್ಸಿನಲ್ಲೇ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ನಿರ್ವಾಹಕನಿಗೆ ಮನವಿ ಮಾಡಿದ್ವಿ. ಆದ್ರೆ ಆತ ನಮ್ಮ ಕೋರಿಕೆಯನ್ನು ನಿರಾಕರಿಸಿದ್ದಾನೆ ಅಂತ ಫೇಸ್‌ಬುಕ್‌ ಪೋಸ್ಟ್ ನಲ್ಲಿ ಮಹಿಳೆಯರು ಬರೆದುಕೊಂಡಿದ್ದಾರೆ. ಪೋಸ್ಟ್ ನೋಡಿ ಬಳಿಕ ಕೂಡಲೇ ಎಚ್ಚೆತ್ತ ಪೊಲೀಸರು ಆರೋಪಿಯನ್ನು ಒಂದು ಗಂಟೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

  • ಐಪಿಎಲ್‍ನಲ್ಲಿ ಮತ್ತೊಮ್ಮೆ ಅಂಪೈರ್ ಎಡವಟ್ಟು-ಅಭಿಮಾನಿಗಳು ಗರಂ

    ಐಪಿಎಲ್‍ನಲ್ಲಿ ಮತ್ತೊಮ್ಮೆ ಅಂಪೈರ್ ಎಡವಟ್ಟು-ಅಭಿಮಾನಿಗಳು ಗರಂ

    ಕೋಲ್ಕತ್ತಾ: ಐಪಿಎಲ್ 11ನೇ ಆವೃತ್ತಿಯಲ್ಲಿ ಆನ್ ಫೀಲ್ಡ್ ನಲ್ಲಿದ್ದ ಅಂಪೈರ್ ಮತ್ತೊಮ್ಮೆ ಎಡವಟ್ಟು ಮಾಡಿಕೊಂಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗಿದೆ.

    ಈಡನ್ ಗಾಡ್ ನಲ್ಲಿ ನಡೆದ ಕೋಲ್ಕತಾ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ಅಂಪೈರ್ ಎಡವಟ್ಟು ಮಾಡಿಕೊಂಡಿದ್ದಾರೆ. 16 ನೇ ಓವರ್ ಬೌಲ್ ಮಾಡುತ್ತಿದ್ದ ಕೋಲ್ಕತ್ತಾ ವೇಗಿ ಟಾಮ್ ಕುರ್ರಾನ್ 5ನೇ ಎಸೆತವನ್ನು ಆನ್ ಫೀಲ್ಡ್ ಅಂಪೈರ್ ನೋ ಬಾಲ್ ನೀಡಿದರು. ಆದರೆ ಬಳಿಕ ರಿಪ್ಲೈಯಲ್ಲಿ ಇದು ನೋ ಬಾಲ್ ಆಗದಿರುವುದು ಕಂಡು ಬಂದಿದೆ.

    ಈ ವೇಳೆ ಬೌಲರ್ ಟಾಮ್ ಹಾಗೂ ಕೆಕೆಆರ್ ತಂಡದ ನಾಯಕ ಕಾರ್ತಿಕ್ ಅಂಪೈರ್ ಮನವೊಲಿಸಲು ಪ್ರಯತ್ನಿಸಿದರೂ ಅಂಪೈರ್ ತಮ್ಮ ತೀರ್ಪನ್ನು ಮರು ಪರಿಶೀಲಿಸಲಿಲ್ಲ. ಈ ಹಿಂದೆ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ತಂಡದ ಬೌಲರ್ ಆಂಡ್ರ್ಯೂ ಟೈ ಆನ್ ಫೀಲ್ಡ್ ಅಂಪೈರ್ ತಪ್ಪಿನಿಂದ ದಂಡ ತೆತ್ತಿದ್ದರು. ಅಲ್ಲದೇ ಹೈದರಾಬಾದ್ ತಂಡದ ನಾಯಕ ಕೇನ್ ವಿಲಿಯಂ ಸನ್ ಚೆನ್ನೈ ವಿರುದ್ಧ ಪಂದ್ಯದಲ್ಲಿ ಸೊಂಟದಿಂದ ಮೇಲ್ಭಾಗಕ್ಕೆ ಬಂದ ಪೂಲ್ ಟಾಸ್ ಎಸೆತವನ್ನು ಸಿಕ್ಸರ್ ಗೆ ಆಟ್ಟಿದ್ದರೂ ಅಂಪೈರ್ ನೋ ಬಾಲ್ ತೀರ್ಪು ನೀಡಿರಲಿಲ್ಲ. ಸದ್ಯ ಅಂಪೈರ್ ಎಡವಟ್ಟಿನ ವಿರುದ್ಧ ಹಲವು ಕ್ರಿಕೆಟ್ ಅಭಿಮಾನಿಗಳು ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲದಲ್ಲಿ ಹಂಚಿಕೊಂಡಿದ್ದಾರೆ.

    ನಿಯಮ ಏನು ಹೇಳುತ್ತೆ?
    ಐಸಿಸಿ ನಿಯಮಗಳ ಪ್ರಕಾರ ಅಂಪೈರ್ ಒಮ್ಮೆ ನೀಡಿದ ತೀರ್ಪನ್ನು ಮತ್ತೆ ದೃಶ್ಯಗಳನ್ನು ನೋಡಿ ಬದಲಿಸುವಂತಿಲ್ಲ. ತೀರ್ಪು ಪ್ರಕಟಿಸುವ ಮುನ್ನ ಮೂರನೇ ಅಂಪೈರ್ ಸಹಾಯ ಪಡೆಯ ಬಹುದಾಗಿದೆ.

  • ಅಭಿಮಾನಿಗಳಲ್ಲಿ ಕ್ಷಮೆ ಕೋರಿದ ಶಾರುಖ್ ಖಾನ್

    ಅಭಿಮಾನಿಗಳಲ್ಲಿ ಕ್ಷಮೆ ಕೋರಿದ ಶಾರುಖ್ ಖಾನ್

    ಕೋಲ್ಕತ್ತಾ: ಬಾಲಿವುಡ್ ಸೂಪರ್ ಸ್ಟಾರ್ ಹಾಗೂ ಕೆಕೆಆರ್ ತಂಡದ ಮಾಲೀಕರಾಗಿರುವ ಶಾರುಖ್ ಖಾನ್ ಕೆಕೆಆರ್ ತಂಡದ ಅಭಿಮಾನಿಗಳಲ್ಲಿ ಕ್ಷಮೆ ಕೋರಿದ್ದಾರೆ.

    ಕೋಲ್ಕತ್ತಾ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ ಮುಂಬೈ ವಿರುದ್ಧ ಪಂದ್ಯದಲ್ಲಿ ಕೆಕೆಆರ್ ತಂಡ 102 ರನ್ ಗಳ ಭಾರೀ ಅಂತರದಲ್ಲಿ ಸೋಲುಂಡಿತ್ತು. ಈ ಕುರಿತು ಟ್ವೀಟ್ ಮಾಡಿರುವ ಶಾರುಖ್, ಕ್ರೀಡೆ ಎಂಬುವುದು ಸ್ಫೂರ್ತಿಯಾಗಿದ್ದು, ಇಲ್ಲಿ ಸೋಲು ಅಥವಾ ಗೆಲುವು ಸಾಮಾನ್ಯ. ಆದರೆ ತಂಡದಲ್ಲಿ ಇಂದು ಗೆಲುವಿನ ಸ್ಫೂರ್ತಿ ಕ್ಷೀಣಿಸಿದ್ದರಿಂದ ಮಾಲೀಕನಾಗಿ ತಾನು ಅಭಿಮಾನಿಗಳಲ್ಲಿ ಕ್ಷಮೆ ಕೇಳಬೇಕಿದೆ ಎಂದು ಬರೆದುಕೊಂಡಿದ್ದಾರೆ.

    ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಮುಂಬೈ ನಾಲ್ಕನೇ ಸ್ಥಾನಕ್ಕೆ ಏರಿದೆ. ಕೊಲ್ಕತ್ತಾ ವಿರುದ್ಧ ಪಂದ್ಯದಲ್ಲಿ ಗೆಲುವು ಪಡೆಯುವ ಮೂಲಕ ಮುಂಬೈ ಉತ್ತಮ ರನ್ ರೆಟ್ ನೊಂದಿಗೆ ಅಂಕಪಟ್ಟಿಯಲ್ಲಿ 10 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದಿದೆ.

    ಕೋಲ್ಕತ್ತಾ ತಂಡ ಕಳೆದ ಮೂರು ದಿನಗಳಲ್ಲಿ ಮುಂಬೈ ವಿರುದ್ಧ ಮುಖಾಮುಖಿ ಆದ ಎರಡು ಪಂದ್ಯಗಳಲ್ಲೂ ಸೋಲುಂಡಿದೆ. ಅಲ್ಲದೇ ಇದುವರೆಗೂ ಐಪಿಎಲ್ ನಲ್ಲಿ ಆಡಿರುವ 23 ಪಂದ್ಯಗಳಲ್ಲಿ 18 ರಲ್ಲಿ ಪಂದ್ಯದಲ್ಲಿ ಸೋತಿದೆ. ಇದರಲ್ಲಿ 8 ಪಂದ್ಯಗಳನ್ನು ಸತತವಾಗಿ ಸೋತಿರುವುದು ವಿಶೇಷವಾಗಿದೆ.

    ಮುಂಬೈ ಪರ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಯುವ ಆಟಗಾರ ಈಶಾನ್ ಕಿಶಾನ್ ಕೇವಲ 21 ಎಸೆತಗಳಲ್ಲಿ 62 ರನ್(7 ಬೌಂಡರಿ, 6 ಸಿಕ್ಸರ್) ಸಿಡಿಸಿ ಮಿಂಚಿದ್ದರು. ಪಂದ್ಯದ ಬಳಿಕ ಮಾತನಾಡಿದ ಈಶಾನ್, ಯುವ ಆಟಗಾರರಿಗೆ ಟಾಪ್ ಆರ್ಡರ್ ನಲ್ಲಿ ಬ್ಯಾಟಿಂಗ್ ನಡೆಸಲು ಅವಕಾಶ ನೀಡಿದರೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತದೆ. ತಂಡದ ನಾಯಕ ಹಾಗೂ ಮಾಲೀಕರ ಪ್ರೋತ್ಸಾಹ ಉತ್ತಮವಾಗಿದ್ದು, ತಾನು ಯಾವುದೇ ಆರ್ಡರ್ ನಲ್ಲಿ ಆಡಲು ಸಿದ್ಧವಿರುವುದಾಗಿ ತಿಳಿಸಿದ್ದಾರೆ.