Tag: kolkata

  • ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಮಹಿಳೆ ಈಗ ರಿಯಾಲಿಟಿ ಶೋಗೆ ಎಂಟ್ರಿ

    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಮಹಿಳೆ ಈಗ ರಿಯಾಲಿಟಿ ಶೋಗೆ ಎಂಟ್ರಿ

    ಕೋಲ್ಕತ್ತಾ: ಕಳೆದ ತಿಂಗಳು ರೈಲ್ವೆ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಹಾಡು ಹಾಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಮಹಿಳೆ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟಿದ್ದಾರೆ.

    ಕಳೆದ ತಿಂಗಳು ಪಶ್ಚಿಮ ಬಂಗಾಳದ ರಣಘಾಟ್ ನಿಲ್ದಾಣದಲ್ಲಿ ಮೊಂಡಲ್ ಎಂಬವರು 1972ರಲ್ಲಿ ಬಿಡುಗಡೆಯಾದ ‘ಶೋರ್’ ಚಿತ್ರದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರು ಹಾಡಿದ “ಏಕ್ ಪ್ಯಾರ್ ಕಾ ನಗ್ಮಾ ಹೇ” ಚಿತ್ರದ ಹಾಡನ್ನು ಹಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು.

    ಮೊಂಡಲ್ ಅವರ ಈ ವಿಡಿಯೋವನ್ನು ‘ಬಾರ್ಪೆಟಾ ಟೌನ್ ದಿ ಪ್ಲೇಸ್ ಆಫ್ ಪೀಸ್’ ಪೇಜ್ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿತ್ತು. ಈ ವಿಡಿಯೋ ವೈರಲ್ ಆಗಿದ್ದು, ಮೊಂಡಲ್ ಅವರಿಗೆ ಈಗ ಮುಂಬೈನಲ್ಲಿ ನಡೆಯುವ ರಿಯಾಲಿಟಿ ಶೋನಲ್ಲಿ ಅವಕಾಶ ಸಿಕ್ಕಿದೆ. ಮಹಿಳೆಯೊಬ್ಬರು ಮೊಂಡಲ್ ಅವರನ್ನು ಗುರುತಿಸಿ ಅವರನ್ನು ಸಂಪೂರ್ಣವಾಗಿ ಬದಲಾಯಿಸಿದ್ದಾರೆ.

    ರಿಯಾಲಿಟಿ ಶೋಗಾಗಿ ಮೊಂಡಲ್ ಪಾರ್ಲರ್ ನಲ್ಲಿ ತಯಾರಾಗುತ್ತಿರುವ ಫೋಟೋಗಳು ವೈರಲ್ ಆಗಿದ್ದು, ಈ ಕಾರ್ಯಕ್ರಮಕ್ಕಾಗಿ ಮೊಂಡಲ್ ಹೊಸ ಹೇರ್ ಸ್ಟೈಲ್ ಕೂಡ ಮಾಡಿಸಿದ್ದಾರೆ. ಮೊಂಡಲ್ ಅವರು ಹಾಡಿದ ವಿಡಿಯೋ ಇದುವರೆಗೂ 39 ಲಕ್ಷಕ್ಕೂ ಹೆಚ್ಚು ವ್ಯೂ ಪಡೆದಿದ್ದು, 59 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಅಲ್ಲದೆ 5 ಸಾವಿರಕ್ಕೂ ಹೆಚ್ಚು ಕಮೆಂಟ್ಸ್ ಬಂದಿದೆ.

    ಮುಂಬೈ ಅಲ್ಲದೆ ಕೇರಳ, ಕೋಲ್ಕತ್ತಾ ಹಾಗೂ ಬಾಂಗ್ಲಾದೇಶದ ರಿಯಾಲಿಟಿ ಶೋಗಳಲ್ಲಿ ಭಾಗವಹಿಸುವಂತೆ ಮೊಂಡಲ್ ಅವರಿಗೆ ಮನವಿ ಮಾಡಲಾಗುತ್ತಿದೆ. ಅಲ್ಲದೆ ತನ್ನದೆ ಸ್ವಂತ ಮ್ಯೂಸಿಕ್ ಆಲ್ಬಂ ಶುರು ಮಾಡುವಂತೆ ಮೊಂಡಲ್ ಅವರಿಗೆ ಅವಕಾಶ ಬರುತ್ತಿದೆ.

  • ನಿನ್ನಂತ ಯುವತಿಯರು ಅತ್ಯಾಚಾರಕ್ಕೆ ಒಳಗಾಗಬೇಕು – ತುಂಡುಡುಗೆ ಧರಿಸಿದ್ದಕ್ಕೆ ಕಪಾಳಮೋಕ್ಷ

    ನಿನ್ನಂತ ಯುವತಿಯರು ಅತ್ಯಾಚಾರಕ್ಕೆ ಒಳಗಾಗಬೇಕು – ತುಂಡುಡುಗೆ ಧರಿಸಿದ್ದಕ್ಕೆ ಕಪಾಳಮೋಕ್ಷ

    ಕೋಲ್ಕತ್ತಾ: ಮಹಿಳೆಯೊಬ್ಬಳು ತುಂಡುಡುಗೆ ಧರಿಸಿದ ಯುವತಿಗೆ ಕಪಾಳಮೋಕ್ಷ ಮಾಡಿದಲ್ಲದೇ ನಿನ್ನಂತ ಯುವತಿಯರು ಅತ್ಯಾಚಾರಕ್ಕೆ ಒಳಗಾಗಬೇಕು ಎಂದು ಹೇಳಿಕೆ ನೀಡಿದ ಘಟನೆಯೊಂದು ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಡೆದಿದೆ.

    ಜಾಧವ್‍ಪುರ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ತುಂಡುಡುಗೆ (Shorts) ಧರಿಸಿದ್ದಳು. ಇದನ್ನು ನೋಡಿದ ಮಹಿಳೆ ಯುವತಿಗೆ ಎರಡು ಬಾರಿ ಕಪಾಳಕ್ಕೆ ಹೊಡೆದಿದ್ದಾಳೆ. ಅಲ್ಲದೆ ನಿನ್ನಂತ ಯುವತಿಯರು ಅತ್ಯಾಚಾರಕ್ಕೆ ಒಳಗಾಗಬೇಕು ಎಂದು ವಿವಾದ್ಮಕ ಹೇಳಿಕೆಯನ್ನು ನೀಡಿದ್ದಾಳೆ.

    ಯುವತಿ ಮೂಲತಃ ಬಂಗಾಂವ್ ನಿವಾಸಿಯಾಗಿದ್ದು, ಸಾಲ್ಟ್ ಲೇಕ್‍ನಲ್ಲಿ 5 ವರ್ಷದಿಂದ ವಾಸಿಸುತ್ತಿದ್ದಾಳೆ. ಈ ಘಟನೆ ನಂತರ ಯುವತಿ ಡೆಪ್ಯೂಟಿ ಪೊಲೀಸ್ ಕಮಿಷನರ್ ಕಚೇರಿಗೆ ಹೋಗಿ ಮಹಿಳೆ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾಳೆ. ಸದ್ಯ ಪೊಲೀಸರು ಮಹಿಳೆಯ ಪತ್ತೆಗಾಗಿ ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಇದನ್ನೂ ಓದಿ: ತುಂಡುಡುಗೆ ಉಟ್ಟ ಯುವತಿಯರನ್ನು ಕಂಡ್ರೆ ರೇಪ್ ಮಾಡಿ – 7 ಮಂದಿಗೆ ಮಹಿಳೆ ಸೂಚನೆ

    ಕಳೆದ ವಾರ ಅಂದರೆ ಗುರುವಾರ ನಾನು ವಸ್ತುವೊಂದನ್ನು ಖರೀದಿಸಲು ನನ್ನ ಪಿಜಿಯಿಂದ ಹತ್ತಿರದಲ್ಲಿದ್ದ ಅಂಗಡಿಗೆ ಹೋಗಿದ್ದೆ. ಈ ವೇಳೆ ಮಹಿಳೆ ನನ್ನ ಬಳಿ ಬಂದು ನಿನ್ನಂತ ಯುವತಿಯರು ಅತ್ಯಾಚಾರಕ್ಕೆ ಒಳಗಾಗಬೇಕು ಎಂದು ಬೆಂಗಾಲಿಯಲ್ಲಿ ಹೇಳಿದ್ದಳು. ಅವರು ಈ ರೀತಿ ಹೇಳುತ್ತಿದ್ದಂತೆ ನನ್ನ ಉಡುಪು ಬಗ್ಗೆ ಮಾತನಾಡಲು ನಿಮಗೆ ಹಕ್ಕಿಲ್ಲ ಎಂದು ಹೇಳಿದೆ ಎಂದು ಯುವತಿ ಹೇಳಿದ್ದಾಳೆ. ಇದನ್ನೂ ಓದಿ: ರೇಪ್ ಮಾಡಿ ಎಂದ ಮಹಿಳೆಯ ತುಂಡುಡುಗೆ ಧರಿಸಿದ ಫೋಟೋ ವೈರಲ್

    ಅಲ್ಲದೆ ಮಹಿಳೆ ನನಗೆ ಅಶ್ಲೀಲ ಪದಗಳಿಂದ ನಿಂದಿಸಿ ನನ್ನ ಕಪಾಳಕ್ಕೆ ಹೊಡೆದಿದ್ದಾಳೆ. ನಾನು ಆಕೆಯನ್ನು ಅರ್ಥ ಮಾಡಿಸಲು ಪ್ರಯತ್ನಿಸುತ್ತಿದೆ. ಆದರೆ ಆಕೆ ವಾದ ಮಾಡಬೇಡ ಎಂದು ಮತ್ತೆ ಕಪಾಳಮೋಕ್ಷ ಮಾಡಿದ್ದಾಳೆ. ಬಳಿಕ ಜನರು ಸೇರುತ್ತಿದ್ದಂತೆ ಮಹಿಳೆ ಸ್ಥಳದಿಂದ ಪರಾರಿಯಾಗಿದ್ದಾಳೆ ಎಂದು ಯುವತಿ ನಡೆದ ಘಟನೆಯನ್ನು ವಿವರಿಸಿದ್ದಾಳೆ.

    ಸದ್ಯ ಯುವತಿ ತನ್ನ ಸ್ನೇಹಿತರ ಸಹಾಯದಿಂದ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾಳೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ ಮಹಿಳೆಯ ಪತ್ತೆಗಾಗಿ ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.

  • ಹನುಮಾನ್ ಚಾಲಿಸಾ ಪಠಿಸಿದ ಮುಸ್ಲಿಂ ಮಹಿಳೆಗೆ ಜೀವ ಬೆದರಿಕೆ

    ಹನುಮಾನ್ ಚಾಲಿಸಾ ಪಠಿಸಿದ ಮುಸ್ಲಿಂ ಮಹಿಳೆಗೆ ಜೀವ ಬೆದರಿಕೆ

    ಕೋಲ್ಕತ್ತಾ: ತ್ರಿವಳಿ ತಲಾಖ್ ವಿರುದ್ಧ ಸುಪ್ರೀಂನಲ್ಲಿ ಅರ್ಜಿ ಸಲ್ಲಿಸಿದ್ದ ಬಿಜೆಪಿ ಸದಸ್ಯೆ ಇಶ್ರತ್ ಜಹಾನ್ ಅವರು ಹನುಮಾನ್ ಚಾಲಿಸಾ ಪಠಣದಲ್ಲಿ ಭಾಗವಹಿಸಿದಕ್ಕೆ ನನಗೆ ಜೀವ ಬೆದರಿಕೆ ಬಂದಿದೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.

    ಈ ವಿಚಾರವಾಗಿ ಹೌರಾದ ಗೋಲಬಾರಿ ಪೊಲೀಸ್ ಠಾಣೆಯಲ್ಲಿ ಇಶ್ರತ್ ಜಹಾನ್ ದೂರು ನೀಡಿದ್ದಾರೆ. ಈ ದೂರಿನಲ್ಲಿ ತನ್ನ ಸೋದರ ಮಾವ ಮತ್ತು ನನ್ನ ಮನೆಯ ಮಾಲೀಕ ಹಿಂದೂ ಧಾರ್ಮಿಕ ಸಮಾರಂಭದಲ್ಲಿ ಪಾಲ್ಗೊಂಡಿದ್ದಕ್ಕಾಗಿ ಜೀವ ಬೆದರಿಕೆ ಮತ್ತು ಮಾತಿನ ನಿಂದನೆ ಮಾಡುತ್ತಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.

    ಇಶ್ರತ್ ಜಹಾನ್ ಅವರು ತನ್ನ ದೂರಿನಲ್ಲಿ, ನಾನು ಹೌರಾದ ಎಸಿ ಮಾರುಕಟ್ಟೆಯ ಮುಂದೆ ಬಿಜೆಪಿ ಬೆಂಬಲಿಗರು ಆಯೋಜಿಸಿದ್ದ ಹನುಮಾನ್ ಚಾಲಿಸಾ ಪಾಥ್ ನಲ್ಲಿ ಭಾಗವಹಿಸಿದ್ದೆ. ಇದಾದ ನಂತರ ಬುಧವಾರ ನನ್ನ ಮಗನನ್ನು ಶಾಲೆಯಿಂದ ಕರೆದುಕೊಂಡು ಮನೆಗೆ ಬರುತ್ತಿರುವಾಗ ಸುಮಾರು 100 ಜನರು ನನ್ನನ್ನು ಸುತ್ತುವರಿದು ಹಿಜಾಬ್‍ನಲ್ಲಿ ಏಕೆ ಹಿಂದೂ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದೆ ಎಂದು ಪ್ರಶ್ನಿಸಿ ನನ್ನನ್ನು ನಿಂದಿಸಿದರು ಎಂದು ಪೊಲೀಸರಿಗೆ ತಿಳಿಸಿದ್ದಾರೆ.

    ನನ್ನ ಮನೆಯ ಹೊರಗೆ ಒಂದು ದೊಡ್ಡ ಮುಸ್ಲಿಂ ಜನಸಮೂಹ ಬಂದು ನೀನು ಯಾಕೆ ಬುರ್ಖಾ ಧರಿಸಿ ಹಿಂದೂಗಳ ಹನುಮಾನ್ ಚಾಲಿಸಾ ಕಾರ್ಯಕ್ರಮಕ್ಕೆ ಹೋಗಿದ್ದೆ ಎಂದು ಕೇಳಿದರು. ಅಷ್ಟೇ ಅಲ್ಲದೇ ನಾನು ಮನೆಯಿಂದ ಹೊರಹೋಗುವಂತೆ ಹೇಳಿದರು. ಇಲ್ಲದಿದ್ದರೆ ಅವರು ನನ್ನನ್ನು ಬಲವಂತವಾಗಿ ಮನೆಯಿಂದ ಹೊರಗೆ ತಳ್ಳುತ್ತೇವೆ ಎಂದು ಬೆದರಿಕೆ ಹಾಕಿದರು. ನನಗೆ ಜೀವ ಬೆದರಿಕೆ ಇದೆ. ನನಗೆ ರಕ್ಷಣೆ ಬೇಕು. ನಾನು ನನ್ನ ಮಗನೊಂದಿಗೆ ಏಕಾಂಗಿಯಾಗಿ ವಾಸಿಸುತ್ತಿದ್ದೇನೆ. ನನಗೆ ಯಾವಾಗ ಬೇಕಾದರೂ ಎನ್ ಬೇಕಾದರೂ ಆಗಬಹುದು ಎಂದು ದೂರಿನಲ್ಲಿ ತಿಳಿಸಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಗೋಲಬಾರಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು, ನಾವು ದೂರಿನ ತೆಗೆದುಕೊಂಡು ತನಿಖೆ ಆರಂಭಿಸಿದ್ದೇವೆ ಮತ್ತು ಇದರ ಬಗ್ಗೆ ತನಿಖೆ ಮಾಡಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

    2014ರಲ್ಲಿ ಸತತವಾಗಿ ಮೂರು ಬಾರಿ ತಲಾಖ್ ಎಂಬ ಪದವನ್ನು ಹೇಳುವ ಮೂಲಕ ಇಶ್ರತ್ ಜಹಾನ್ ಪತಿ ದುಬೈನಿಂದ ದೂರವಾಣಿಯಲ್ಲಿ ವಿಚ್ಛೇದನ ನೀಡಿದ ನಂತರ ಅವರು ತ್ರಿವಳಿ ತಲಾಖ್ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿದ್ದರು.

  • ಸಾಮಾಜಿಕ ಜಾಲತಾಣದಲ್ಲಿ ನಟಿಯ ಪೋಸ್ಟ್‌‌ಗೆ ಅಶ್ಲೀಲ ಕಮೆಂಟ್ -ವ್ಯಕ್ತಿ ಅರೆಸ್ಟ್

    ಸಾಮಾಜಿಕ ಜಾಲತಾಣದಲ್ಲಿ ನಟಿಯ ಪೋಸ್ಟ್‌‌ಗೆ ಅಶ್ಲೀಲ ಕಮೆಂಟ್ -ವ್ಯಕ್ತಿ ಅರೆಸ್ಟ್

    ಕೋಲ್ಕತ್ತಾ: ಸಾಮಾಜಿಕ ಜಾಲತಾಣದಲ್ಲಿ ಬೆಂಗಾಳಿ ನಟಿಯ ಪೋಸ್ಟ್‌‌ಗೆ ನಿಂದಿಸಿದಲ್ಲದೆ, ಅಶ್ಲೀಲವಾಗಿ ಕಮೆಂಟ್ ಮಾಡಿದ ಹಿನ್ನೆಲೆಯಲ್ಲಿ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ ಘಟನೆ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಡೆದಿದೆ.

    ಅರುನಿಮಾ ಗೋಶ್ ದೂರು ನೀಡಿದ್ದ ನಟಿಯಾಗಿದ್ದು, ಮುಕೇಶ್ ಶಾ ಬಂಧನಕ್ಕೊಳಗಾದ ವ್ಯಕ್ತಿ. ಮುಕೇಶ್ ಶಾ ದಕ್ಷಿಣ ಕೋಲ್ಕತ್ತಾದ ಗರ್ಫಾ ನಿವಾಸಿಯಾಗಿದ್ದು, ಅಶ್ಲೀಲವಾಗಿ ಕಮೆಂಟ್ ಮಾಡಿದ್ದಕ್ಕೆ ಭಾನುವಾರ ಪೊಲೀಸರು ಆತನನ್ನು ಬಂಧಿಸಿದ್ದಾರೆ.

    ಆರೋಪಿ ಮುಕೇಶ್ ಶಾ ಮೇ 30ರಿಂದ ನಟಿ ಅರುನಿಮಾ ಅವರ ಪೋಸ್ಟ್‌‌ಗೆ ನಿಂದಿಸುತ್ತಾ, ಕೆಟ್ಟದಾಗಿ ಕಮೆಂಟ್ ಮಾಡುತ್ತಿದ್ದನು. ಅಲ್ಲದೆ ಮುಕೇಶ್ ಮಯಾಂಕ್ ಹೆಸರಿನಲ್ಲಿ ನಕಲಿ ಖಾತೆ ಕೂಡ ತೆರೆದಿದ್ದನು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಮುಕೇಶ್ ಶಾ ಯಾಕೆ ಈ ರೀತಿ ಮಾಡಿದ್ದಾನೆ ಎಂದು ತಿಳಿಯಲು ಪ್ರಯತ್ನಿಸುತ್ತಿದ್ದೇವೆ. ಮುಕೇಶ್ ಮಾನಸಿಕವಾಗಿ ಸರಿಯಾಗಿ ಇದ್ದಾನೋ ಇಲ್ಲವೋ ಎಂಬುದನ್ನು ಪರಿಶೀಲಿಸುತ್ತೇವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ನಟಿ ಅರುನಿಮಾ, ನಾನು ಇಂತಹ ವಿಷಯಗಳನ್ನು ನಿರ್ಲಕ್ಷಿಸುತ್ತೇನೆ. ಆದರೆ ನಾನು ಎಲ್ಲಿ ಹೋದರೂ ಆತ ನನ್ನ ಹಿಂದೆ ಬರುತ್ತಿರುವುದನ್ನು ಗಮನಿಸಿದೆ. ಹಾಗಾಗಿ ಕೋಲ್ಕತ್ತಾ ಪೊಲೀಸರಿಗೆ ಸಂಪರ್ಕಿಸಿ ದೂರು ನೀಡಿದೆ ಎಂದು ಹೇಳಿದ್ದಾರೆ.

  • ಕ್ಯಾಬ್‍ನಿಂದ ಹೊರ ಎಳೆದು ನಟಿಗೆ ಬೆದರಿಕೆ – ಚಾಲಕ ಬಂಧನ

    ಕ್ಯಾಬ್‍ನಿಂದ ಹೊರ ಎಳೆದು ನಟಿಗೆ ಬೆದರಿಕೆ – ಚಾಲಕ ಬಂಧನ

    ಕೋಲ್ಕತ್ತಾ: ಕ್ಯಾಬ್‍ನಿಂದ ಹೊರ ಎಳೆದು ಚಾಲಕನೊಬ್ಬ ಬಂಗಾಲಿ ಕಿರುತೆರೆ ನಟಿಗೆ ಬೆದರಿಕೆ ಹಾಕಿದ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಚಾಲಕನನ್ನು ಬಂಧಿಸಿದ್ದಾರೆ.

    ಸ್ವಸ್ತಿಕ ದತ್ತ ಬೆಂಗಾಲಿಯ ಖ್ಯಾತ ಕಿರುತೆರೆ ನಟಿಯಾಗಿದ್ದು, ಬುಧವಾರ ಚಿತ್ರೀಕರಣಕ್ಕಾಗಿ ಕ್ಯಾಬ್‍ನಲ್ಲಿ ಹೋಗುತ್ತಿದ್ದರು. ಈ ವೇಳೆ ಕ್ಯಾಬ್ ಚಾಲಕ ಜಮ್‍ಶೇದ್ ಏಕಾಏಕಿ ಕಾರ್ ನಿಲ್ಲಿಸಿ ನಟಿಗೆ ಇಳಿಯುವಂತೆ ಹೇಳಿದ್ದಾನೆ. ಇದಕ್ಕೆ ನಟಿ ಒಪ್ಪದಿದ್ದಕ್ಕೆ ಆಕೆಯನ್ನು ಎಳೆದು ಹೊರ ಹಾಕಿದ್ದಾನೆ. ಸ್ವಸ್ತಿಕ ಈ ಬಗ್ಗೆ ತಮ್ಮ ಫೇಸ್‍ಬುಕ್‍ನಲ್ಲಿ ಚಾಲಕ ಫೋಟೋ, ಆತನ ಫೋನ್ ನಂಬರ್ ಹಾಗೂ ಕಾರಿನ ನಂಬರ್ ಹಾಕಿ ಘಟನೆಯ ಬಗ್ಗೆ ವಿವರಿಸಿ ಪೋಸ್ಟ್ ಪ್ರಕಟಿಸಿದ್ದಾರೆ.

    ಪೋಸ್ಟ್ ನಲ್ಲಿ ಏನಿದೆ?
    ಬುಧವಾರ ಕೋಲ್ಕತ್ತಾದ ರಾನಿಯಾದಲ್ಲಿ ಶೂಟಿಂಗ್‍ಗೆ ಹೋಗಲು ನಾನು ಕ್ಯಾಬ್ ಬುಕ್ ಮಾಡಿದೆ. ಬಳಿಕ ಕ್ಯಾಬ್‍ನಲ್ಲಿ ಹೋಗುತ್ತಿದ್ದಾಗ ಚಾಲಕ ನಡುರಸ್ತೆಯಲ್ಲಿ ನನ್ನ ಪ್ರಯಾಣವನ್ನು ಕ್ಯಾನ್ಸಲ್ ಮಾಡಿ ಕಾರಿನಿಂದ ಇಳಿಯಲು ಹೇಳಿದ. ಆದರೆ ನಾನು ಕಾರಿನಿಂದ ಇಳಿಯಲು ಒಪ್ಪಲಿಲ್ಲ. ಆಗ ಚಾಲಕ ಕಾರಿನಲ್ಲಿ ತನ್ನ ಏರಿಯಾ ಕಡೆ ನನಗೆ ಕರೆದುಕೊಂಡು ಹೋಗಿ ನಿಂದಿಸಿದ್ದಾನೆ. ಅಲ್ಲದೆ ಆತ ಕಾರಿನಿಂದ ಇಳಿದು ಡೋರ್ ಓಪನ್ ಮಾಡಿ ನನ್ನನ್ನು ಹೊರ ಎಳೆದಿದ್ದಾನೆ. ಇದರಿಂದ ಕೋಪಗೊಂಡು ನಾನು ಹೆಲ್ಪ್ ಮೀ ಎಂದು ಕಿರುಚಲು ಶುರು ಮಾಡಿದೆ. ಆಗ ಚಾಲಕ ನನಗೆ ಬೆದರಿಕೆ ಹಾಕಿ ತನ್ನ ಹುಡುಗರನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾನೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ಚಾಲಕ ಬೆಂಗಾಲಿಯಲ್ಲಿ, “ನಿನಗೆ ಏನೂ ಬೇಕು ಅದನ್ನು ನೀನು ಮಾಡ್ಕೋ. ನೀನು ಏನೂ ಮಾಡುತ್ತೀಯಾ ಎಂದು ನಾನು ನೋಡುತ್ತೇನೆ” ಎಂದು ಬೆದರಿಕೆ ಹಾಕಿದ್ದಾನೆ. ನಾನು ಶೂಟಿಂಗ್‍ಗೆ ಲೇಟ್ ಹೋಗಿದ್ದೆ. ಅಲ್ಲದೆ ನನ್ನ ತಂಡ ನನಗಾಗಿ ಕಾಯುತಿತ್ತು. ಹಾಗಾಗಿ ನಾನು ಸ್ಥಳದಿಂದ ಶೂಟಿಂಗ್ ಸೆಟ್‍ಗೆ ಹೋದೆ. ಬಳಿಕ ನನ್ನ ತಂದೆಗೆ ಈ ವಿಷಯವನ್ನು ತಿಳಿಸಿದೆ. ಅವರು ಕಾನೂನು ಕ್ರಮಕೈಗೊಳ್ಳುತ್ತಾರೆ ಎಂದು ಹೇಳಿದ್ದಾರೆ” ಎಂದು ನಟಿ ಸ್ವಸ್ತಿಕ ತಿಳಿಸಿದ್ದಾರೆ.

    ಬುಧವಾರ ಬೆಳಗ್ಗೆ 8.15ಕ್ಕೆ ಶುರುವಾದ ಜಗಳ 8.45 ವರೆಗೂ ನಡೆದಿದೆ. ಈ ಘಟನೆ ಕೋಲ್ಕತ್ತಾದ ಇಎಂ ಬೈಪಾಸ್‍ನ ರೆಸ್ಟೋರೆಂಟ್ ಮುಂಭಾಗದಲ್ಲಿ ನಡೆದಿದೆ ಎಂದು ನಟಿ ಸ್ವಸ್ತಿಕ ದತ್ತ ಹೇಳಿದ್ದಾರೆ.

  • ಯುವಕನೊಂದಿಗೆ 16ರ ಬಾಲಕಿಯ ಸಂಬಂಧ – ಮಗಳನ್ನೇ ಕೊಂದು ಗಂಗಾ ನದಿಗೆ ಎಸೆದ್ರು

    ಯುವಕನೊಂದಿಗೆ 16ರ ಬಾಲಕಿಯ ಸಂಬಂಧ – ಮಗಳನ್ನೇ ಕೊಂದು ಗಂಗಾ ನದಿಗೆ ಎಸೆದ್ರು

    ಕೋಲ್ಕತ್ತಾ: ಪೋಷಕರೇ ತಮ್ಮ 16 ವರ್ಷದ ಮಗಳನ್ನು ಕೊಂದು ಆಕೆಯ ದೇಹವನ್ನು ಗಂಗಾ ನದಿಯಲ್ಲಿ ಎಸೆದಿರುವ ಘಟನೆ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ನಡೆದಿದೆ.

    ಆರೋಪಿಗಳನ್ನು ಧಿರೇನ್ ಮೊಂಡಾಲ್ ಮತ್ತು ಆತನ ಪತ್ನಿ ಸುಮತಿ ಮೊಂಡಾಲ್ ಎಂದು ಗುರುತಿಸಲಾಗಿದೆ. ಈ ಘಟನೆ ಭೂತ್ನಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಮಹೇಂದ್ರತೋಲಾ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಶನಿವಾರ ದಂಪತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಏನಿದು ಪ್ರಕರಣ?
    9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ 16 ವರ್ಷದ ಬಾಲಕಿ ಪಕ್ಕದ ಹಳ್ಳಿಯ ನಿವಾಸಿ ಅಚಿಂತ್ಯ ಮೊಂಡಾಲ್ ಯುವಕನೊಂದಿಗೆ ಸಂಬಂಧ ಹೊಂದಿದ್ದಳು. ಈ ಬಗ್ಗೆ ತಿಳಿದ ಬಾಲಕಿಯ ಪೋಷಕರು ಅವರಿಬ್ಬರ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೂ ಬಾಲಕಿ ಯುವಕನೊಂದಿಗೆ ಸಂಬಂಧ ಮುಂದುವರಿಸಿದ್ದಾಳೆ. ಇದರಿಂದ ಕೋಪಗೊಂಡ ಪೋಷಕರು ಮಗಳನ್ನು ಕೊಲೆ ಮಾಡಿ ನಂತರ ಮೂಟೆಯಲ್ಲಿ ಮೃತದೇಹವನ್ನು ತುಂಬಿ ಗಂಗಾನದಿಯಲ್ಲಿ ಎಸೆದಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಈ ಬಗ್ಗೆ ಮಾಹಿತಿ ತಿಳಿದು ಆರೋಪಿಗಳ ಮನೆಗೆ ಹೋಗಿ ಧಿರೇನ್ ಮತ್ತು ಆತನ ಪತ್ನಿ ಸುಮತಿ ಇಬ್ಬರನ್ನು ಬಂಧಿಸಲಾಗಿದೆ. ಇದೊಂದು ಮಾರ್ಯಾದಾ ಹತ್ಯೆ ಎಂದು ಶಂಕಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಸದ್ಯಕ್ಕೆ ಐಪಿಸಿ ಸೆಕ್ಷನ್ ಅಡಿಯಲ್ಲಿ ಈ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

  • ನೂತನ ಸಂಸದೆಯ ಅದ್ಧೂರಿ ಆರತಕ್ಷತೆ – ಮಮತಾ ಬ್ಯಾನರ್ಜಿ ಆಗಮನ

    ನೂತನ ಸಂಸದೆಯ ಅದ್ಧೂರಿ ಆರತಕ್ಷತೆ – ಮಮತಾ ಬ್ಯಾನರ್ಜಿ ಆಗಮನ

    ಕೋಲ್ಕತ್ತಾ: ನೂತನ ಸಂಸದೆ, ನಟಿ ನುಸ್ರತ್ ಜಹಾನ್ ಗುರುವಾರ ಅದ್ಧೂರಿಯಾಗಿ ಆರತಕ್ಷತೆ ಮಾಡಿಕೊಂಡಿದ್ದಾರೆ. ಇವರ ಆರತಕ್ಷತೆಗೆ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಕೂಡ ಆಗಮಿಸಿ ನವಜೋಡಿಗೆ ಆಶೀರ್ವಾದ ಮಾಡಿದ್ದಾರೆ.

    ಕೋಲ್ಕತ್ತಾದ ಐಟಿಸಿ ರಾಯಲ್‍ನಲ್ಲಿ ನುಸ್ರತ್ ಜಹಾನ್ ತಮ್ಮ ಆರತಕ್ಷತೆಯನ್ನು ಆಯೋಜಿಸಿದ್ದರು. ಈ ವೇಳೆ ಮಮತಾ ಬ್ಯಾನರ್ಜಿ ಅವರು ಆಗಮಿಸಿ ನವಜೋಡಿ ಜೊತೆ ಫೋಟೋಗೆ ಪೋಸ್ ಕೊಟ್ಟಿರುವ ಇದೀಗ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಫೋಟೋದಲ್ಲಿ ನಟಿ, ಸಂಸದೆ ಮಿಮಿ ಚಕ್ರವರ್ತಿ ಕೂಡ ಕಾಣಿಸಿಕೊಂಡಿದ್ದಾರೆ.

    ಈ ಆರತಕ್ಷತೆಯಲ್ಲಿ ನುಸ್ರತ್ ಜಹಾನ್ ಅವರು ಸಸ್ಯಹಾರ, ಮಾಂಸಾಹಾರ, ಬೆಂಗಾಲಿ, ಇಟಾಲಿಯನ್ ಆಹಾರವನ್ನು ಆಯೋಜಿಸಿದ್ದರು. ನುಸ್ರತ್ ಅವರ ಪತಿ ಹಾಗೂ ಕುಟುಂಬದವರು ಸಸ್ಯಹಾರಿಗಳಾದ ಕಾರಣ ಅವರಿಗಾಗಿ ಸಸ್ಯಹಾರಿ ಆಹಾರವನ್ನು ಮಾಡಿಸಿದ್ದರು.

    ನುಸ್ರತ್ ಜಹಾನ್ ಕಳೆದ ಜೂನ್ ತಿಂಗಳಿನಲ್ಲಿ ಉದ್ಯಮಿ ನಿಖಿಲ್ ಜೈನ್ ಜೊತೆ ಟರ್ಕಿಯ ಬೋದ್ರಮ್‍ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಬಗ್ಗೆ ನುಸ್ರತ್ ತಮ್ಮ ಟ್ವಿಟ್ಟರಿನಲ್ಲಿ ಮದುವೆ ಫೋಟೋ ಹಾಕಿ ಅಧಿಕೃತವಾಗಿ ಎಲ್ಲರಿಗೂ ತಿಳಿಸಿದ್ದರು. ತಮ್ಮ ಮದುವೆಯ ಕಾರಣದಿಂದ ಪ್ರಮಾಣ ವಚನವನ್ನೂ ಮುಂದೂಡಿದ್ದರು.

    ಮದುವೆಯ ಬಳಿಕ ಸಂಸದೆಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ನುಸ್ರತ್, ಬುರ್ಖಾ ಧರಿಸದೆ ಸಂಸತ್ ಪ್ರವೇಶಿಸಿರುವುದು, ಸಿಂಧೂರ ಇಟ್ಟಿರುವುದು ಹಾಗೂ ಕೈಗೆ ಬಳೆ ತೊಟ್ಟಿದ್ದಕ್ಕೆ ಮುಸ್ಲಿಂ ಧರ್ಮ ಗುರುಗಳು ಸೇರಿದಂತೆ ಹಲವರು ಟೀಕಿಸಿದ್ದರು. ಇದಕ್ಕೆ ಉತ್ತರಿಸಿರುವ ಸಂಸದೆ, ನಾನು `ಅಂತರ್ಗತ ಭಾರತ’ವನ್ನು ಪ್ರತಿನಿಧಿಸುತ್ತೇನೆ ಎಂದು ಟೀಕಾಕಾರರಿಗೆ ಖಾರವಾಗಿ ತಿರುಗೇಟು ನೀಡಿದ್ದರು.

  • ಜಗನ್ನಾಥ ಯಾತ್ರೆಯಲ್ಲಿ ನುಸ್ರತ್ ಜಹಾನ್- ನನ್ನ ಧರ್ಮ ಯಾವುದು ಅಂತ ನನಗೆ ಗೊತ್ತು

    ಜಗನ್ನಾಥ ಯಾತ್ರೆಯಲ್ಲಿ ನುಸ್ರತ್ ಜಹಾನ್- ನನ್ನ ಧರ್ಮ ಯಾವುದು ಅಂತ ನನಗೆ ಗೊತ್ತು

    -ಜನ್ಮದಿಂದಲೂ ಮುಸ್ಲಿಂ, ಈಗಲೂ ಮುಸ್ಲಿಂ
    -ಫತ್ವಾ ಹೊರಡಿಸಿದವ್ರಿಗೆ ಸಂಸದೆ ತಿರುಗೇಟು

    ಕೋಲ್ಕತ್ತಾ: ಹಲವು ಟೀಕೆ ಟಿಪ್ಪಣಿಗಳ ನಡುವೆಯೂ ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ ಇಸ್ಕಾನ್ ಮಂದಿರದ ಜಗನ್ನಾಥ ಯಾತ್ರೆಯಲ್ಲಿ ಭಾಗಿಯಾದರು. ಈ ಮೂಲಕ ತಮ್ಮ ವಿರುದ್ಧ ಫತ್ವಾ ಹೊರಡಿಸಿದ ಮುಸ್ಲಿಂ ಧರ್ಮಗುರುಗಳು ಮತ್ತು ಟೀಕಾಕಾರರಿಗೆ ಖಡಕ್ ತಿರುಗೇಟು ನೀಡಿದರು.

    ಸಂಸದೆಯಾಗಿ ಆಯ್ಕೆಯಾಗಿರುವ ನಟಿ ನುಸ್ರತ್ ಜಹಾನ್ ಅವರನ್ನು ಇಸ್ಕಾನ್ ದೇವಾಲಯ ಮಂಡಳಿ ವಿಶೇಷ ಅತಿಥಿಯನ್ನಾಗಿ ಆಹ್ವಾನಿಸಿತ್ತು. ಕೆಲವು ದಿನಗಳ ಹಿಂದೆ ನುಸ್ರತ್ ಜಹಾನ್ ಕೋಲ್ಕತ್ತಾ ಹಿಂದೂ ಉದ್ಯಮಿ ನಿಖಿಲ್ ಜೈನ್ ರನ್ನು ವಿವಾಹವಾಗಿದ್ದರು. ವಿವಾಹದ ಬಳಿಕ ಸೀರೆ ತೊಟ್ಟು, ಸಿಂಧೂರವಿಟ್ಟು, ಕೈ ಬಳೆ ಹಾಕಿ ನವ ವಧುವಿನಂತೆ ಸಂಸತ್ತಿಗೆ ಆಗಿಸಿ ಸಂಸದೆಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಬುರ್ಖಾ ಧರಿಸದೇ ಬಂದಿದ್ದಕ್ಕೆ ಕೆಲವು ಮುಸ್ಲಿಂ ಧರ್ಮಗುರುಗಳ ಕೆಂಗಣ್ಣಿಗೆ ನುಸ್ರತ್ ಜಹಾನ್ ಗುರಿಯಾಗಿದ್ದರು.

    ಯಾತ್ರೆಯಲ್ಲಿ ಭಾಗಿಯಾಗಿದ್ದ ವೇಳೆ ತಮ್ಮ ವಿರುದ್ಧ ಹೊರಡಿಸಲಾಗಿರುವ ಫತ್ವಾಗೆ ಪ್ರತಿಕ್ರಿಯಿಸಿದ ಸಂಸದೆ, ಆಧಾರರಹಿತ ವಿಚಾರಗಳತ್ತ ನಾನು ಗಮನ ನೀಡಲ್ಲ. ನನಗೆ ನನ್ನ ಧರ್ಮ ಯಾವುದು ಎಂಬುವುದು ಗೊತ್ತಿದೆ. ನಾನು ಜನ್ಮದಿಂದಲೂ ಮುಸ್ಲಿಂ, ಇಂದಿಗೂ ಮುಸ್ಲಿಂ ಧರ್ಮದಲ್ಲಿ ನಾನಿದ್ದೇನೆ. ಇದು ಧರ್ಮ ಮತ್ತು ನಂಬಿಕೆಯ ಪ್ರಶ್ನೆಯಾಗಿದ್ದು, ಕೆಲವರು ಈ ಕುರಿತು ತಮ್ಮನ್ನೇ ತಾವು ಪ್ರಶ್ನಿಸಿಕೊಳ್ಳುವುದು ಉತ್ತಮ ಎಂದು ತಿರುಗೇಟು ನೀಡಿದರು.

    ಪೂಜೆ ಸಲ್ಲಿಸಿದ ಸಂಸದೆ:
    ಯಾತ್ರೆಯಲ್ಲಿ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಸಾಥ್ ನೀಡಿದ ನುಸ್ರತ್ ಜಹಾನ್ ಪೂಜೆ ಸಲ್ಲಿಸಿ ತೆಂಗಿನಕಾಯಿ ಒಡೆದರು. ಈ ಧಾರ್ಮಿಕ ಕಾರ್ಯಕ್ರಮದಲ್ಲಿಯೂ ನುಸ್ರತ್ ಜಹಾನ್ ಮಂಗಲಸೂತ್ರ, ಸಿಂಧೂರವಿಟ್ಟು ಆಗಮಿಸಿದ್ದರು. ಹಿಂದೂ ಮಹಿಳೆಯರಂತೆ ವೇಷಭೂಷಣ ತೊಟ್ಟಿದ್ದಕ್ಕೆ ಸ್ಥಳೀಯ ಮುಸ್ಲಿಂ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

    ನಾವು ಅಭಿವೃದ್ಧಿಯತ್ತ ಸಾಗುತ್ತಿರುವ ಹೊಸ ಭಾರತದ ನವ ನಾಗರೀಕರು. ಹಾಗಾಗಿ ಎಲ್ಲ ಧರ್ಮ ಮತ್ತು ಸಂಸ್ಕೃತಿಗೆ ಗೌರವ ನೀಡುವುದು ಅವಶ್ಯಕ. ಕೆಲವರು ಮತಗಳಿಗಾಗಿ ದೇವರನ್ನು ವಿಗಂಡನೆ ಮಾಡಲು ಹೊರಟಿದ್ದಾರೆ. ನಾನು ಮುಸ್ಲಿಂ ಮತ್ತು ಜಾತ್ಯಾತೀತ ಭಾರತದ ಮಹಿಳೆ. ದೇವರ ಹೆಸರಿನಲ್ಲಿ ಜನರನ್ನು ವಿಭಜಿಸುವುದು ನನ್ನ ಧರ್ಮ ಎಲ್ಲಿಯೂ ಹೇಳಿಲ್ಲ ಎಂದು ನುಸ್ರತ್ ಜಹಾನ್ ತಿಳಿಸಿದರು.

  • ಅಭ್ಯಾಸದ ವೇಳೆ ಕುಸಿದು ಮೃತಪಟ್ಟ 20 ವರ್ಷದ ಬಾಕ್ಸರ್

    ಅಭ್ಯಾಸದ ವೇಳೆ ಕುಸಿದು ಮೃತಪಟ್ಟ 20 ವರ್ಷದ ಬಾಕ್ಸರ್

    ಕೋಲ್ಕತ್ತಾ: ಅಭ್ಯಾಸದ ವೇಳೆ 20 ವರ್ಷದ ಬಾಕ್ಸರ್ ಕುಸಿದು ಬಿದ್ದು ಮೃತಪಟ್ಟ ಘಟನೆ ಪಶ್ಚಿಮ ಬಂಗಾಳದ ಕೋಲ್ಕತ್ತಾದ ಬಾವಾನಿಪುರದಲ್ಲಿ ನಡೆದಿದೆ.

    ಜ್ಯೋತಿ ಪ್ರಧಾನ್ ಮೃತಪಟ್ಟ ಬಾಕ್ಸರ್. ಜ್ಯೋತಿ ಕಿಡ್ಡರ್ ಪುರ ಪ್ರದೇಶದ ಭೂಕೈಲಾಶ್‍ನ ನಿವಾಸಿಯಾಗಿದ್ದು, ಜೋಗೇಶ್ ಚಂದ್ರ ಚೌಧರಿ ಕಾನೂನು ಕಾಲೇಜಿನಲ್ಲಿ ಪದವಿ ಓದುತ್ತಿದ್ದರು. ಜ್ಯೋತಿ ರಾಷ್ಟ್ರೀಯ ಟೂರ್ನಿಮೆಂಟ್‍ನಲ್ಲಿ ಪಶ್ಚಿಮ ಬಂಗಾಳವನ್ನು ಪ್ರತಿನಿಧಿಸಿದ್ದರು.

    ಬುಧವಾರ ಜ್ಯೋತಿ ಭವಾನಿಪುರದ ಬಾಕ್ಸಿಂಗ್ ಅಸೋಸಿಯೇಶನ್‍ನಲ್ಲಿ ಬಾಕ್ಸಿಂಗ್ ಅಭ್ಯಾಸ ನಡೆಸುತ್ತಿದ್ದರು. ಈ ವೇಳೆ ಜ್ಯೋತಿ ಅಲ್ಲಿಯೇ ಕುಸಿದು ಬಿದ್ದಿದ್ದಾರೆ. ಬಳಿಕ ಅವರನ್ನು ಹತ್ತಿರದ ಎಸ್‍ಎಸ್‍ಕೆಎಂ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆಸ್ಪತ್ರೆಗೆ ಹೋಗುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

    ಈ ಘಟನೆ ಬಗ್ಗೆ ಹತ್ತಿರದ ಪೊಲೀಸ್ ಠಾಣೆಯ ಪೊಲೀಸರಿಗೆ ಯಾವುದೇ ದೂರು ಬಂದಿಲ್ಲ. ಸದ್ಯ ಜ್ಯೋತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಕಳುಹಿಸಲಾಗಿದೆ. ನಾವು ಈಗ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ. ಬಳಿಕ ಸಾವಿನ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

  • ಸಂಸದೆ ನುಸ್ರತ್ ಜಹಾನ್ ಇಸ್ಕಾನ್ ಕಾರ್ಯಕ್ರಮದ ವಿಶೇಷ ಅತಿಥಿ

    ಸಂಸದೆ ನುಸ್ರತ್ ಜಹಾನ್ ಇಸ್ಕಾನ್ ಕಾರ್ಯಕ್ರಮದ ವಿಶೇಷ ಅತಿಥಿ

    ಕೋಲ್ಕತ್ತಾ: ನಾನು ಅಂತರ್ಗತ ಭಾರತವನ್ನು ಪ್ರತಿನಿಧಿಸುತ್ತೇನೆ ಎಂದು ಹೇಳುವ ಮೂಲಕ ಸುದ್ದಿಯಾಗಿದ್ದ ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ಅವನರನ್ನು ಇಸ್ಕಾನ್‍ನ ‘ಸಾಮಾಜಿಕ ಸಾಮರಸ್ಯ’ ಕುರಿತ ರಥಯಾತ್ರೆಗೆ ವಿಶೇಷ ಅತಿಥಿಯನ್ನಾಗಿ ಆಹ್ವಾನಿಸಲಾಗಿದೆ.

    ಇಸ್ಕಾನ್‍ನ ಆಹ್ವಾನವನ್ನು ನುಸ್ರತ್ ಜಹಾನ್ ಅವರು ಖುಷಿಯಿಂದಲೇ ಸ್ವಾಗತಿಸಿದ್ದು, ಇಸ್ಕಾನ್ ವಕ್ತಾರ ರಾಧಾರಮಣ್ ದಾಸ್ ಅವರು ಆಹ್ವಾನ ಸ್ವೀಕರಿಸಿದ್ದಕ್ಕೆ ಧನ್ಯವಾದ ತಿಳಿಸಿದ್ದಾರೆ. ಅಂತರ್ಗತ ಭಾರತದ ಹೊಸ ಕಲ್ಪನೆಯನ್ನು ನೀಡುವ ಮೂಲಕ ಭವಿಷ್ಯದ ದಾರಿಯನ್ನು ತೋರಿಸಿದ್ದಾರೆ ಎಂದು ರಾಧಾರಮಣ ದಾಸ್ ತಿಳಿಸಿದ್ದಾರೆ.

    ಇದು ಇಂಟರ್‍ನ್ಯಾಷನಲ್ ಸೊಸೈಟಿ ಆಫ್ ಕೃಷ್ಣ ಕಾನ್ಸಿಯಸ್‍ನೆಸ್(ಇಸ್ಕಾನ್)ನ 48ನೇ ರಥಯಾತ್ರೆಯಾಗಿದ್ದು, 1971ರಿಂದಲೂ ಈ ರಥಯಾತ್ರೆ ನಡೆಯುತ್ತಿದೆ. ಕಾರ್ಯಕ್ರಮವನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಉದ್ಘಾಟಿಸುತ್ತಿದ್ದಾರೆ.

    ನುಸ್ರತ್ ಜಹಾನ್ ಅವರು ಕೋಲ್ಕತ್ತಾ ಮೂಲದ ಉದ್ಯಮಿಯನ್ನು ಮದುವೆಯಾಗಿದ್ದಾರೆ. ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಬುರ್ಖಾ ಧರಿಸದಿರುವುದು, ಮಂಗಳ ಸೂತ್ರ ಕಟ್ಟಿರುವುದು ಹಾಗೂ ಸಿಂಧೂರ ಇಟ್ಟಿದ್ದಕ್ಕೆ ಮುಸ್ಲಿಂ ಗುರುಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಅಲ್ಲದೆ, ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಮುಸ್ಲಿಂ ನಾಯಕರು ಆಕ್ರೋಶ ಹೊರಹಾಕಿದ್ದರು.

    ಟೀಕೆಗಳಿಗೆ ಉತ್ತರಿಸಿದ್ದ ಸಂಸದೆ ನುಸ್ರತ್ ಜಹಾನ್, ನಾನು ಅಂತರ್ಗತ ಭಾರತವನ್ನು ಪಾಲಿಸುತ್ತೇನೆ, ಯಾವುದೇ ಜಾತಿ, ಪಂಥ, ಧರ್ಮಕ್ಕೆ ಸೀಮಿತವಾಗಿಲ್ಲ ಎಂದು ಉತ್ತರಿಸಿದ್ದರು. ಇದೀಗ ಸಂಸದೆ ನುಸ್ರತ್ ಅವರು ತಮ್ಮ ಪತಿ ಹಾಗೂ ಇತರ ನಟ, ನಟಿಯರೊಂದಿಗೆ ಇಸ್ಕಾನ್‍ನ ರಥಯಾತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.

    ನುಸ್ರತ್ ಜಹಾನ್ ಅವರು ಹೊಸ ಭಾರತವನ್ನು ಪ್ರತಿನಿಧಿಸುತ್ತಾರೆ, ನಾವೆಲ್ಲರೂ ಅಂತರ್ಗತ ಭಾರತದಲ್ಲಿ ನಂಬಿಕೆ ಇಟ್ಟವರು. ಇತರ ಧರ್ಮಗಳ ನಂಬಿಕೆಗಳನ್ನು ಗೌರವಿಸಬೇಕು. ಅವರ ಹಬ್ಬಗಳಲ್ಲಿ ಭಾಗವಹಿಸುವ ಮೂಲಕ ಭಾರತವನ್ನು ಮತ್ತೆ ಬೆಳಗುವಂತೆ ಮಾಡಬೇಕು. ಇದು ಭಾರತದ ನಿಲುವಾಗಿದೆ, ಈ ನಿಟ್ಟಿನಲ್ಲಿ ನುಸ್ರತ್ ಅವರು ಯುವಕರಿಗೆ ಮಾರ್ಗದರ್ಶಿಯಾಗಿದ್ದಾರೆ ಎಂದು ರಾಧಾರಮಣ ದಾಸ್ ತಿಳಿಸಿದ್ದಾರೆ.

    ಎಲ್ಲರಿಗೂ ಅವರ ಆಯ್ಕೆಯನ್ನು ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಸಮಾಜ ನೀಡಿದೆ, ಈ ಮೂಲಕ ನವು ಸಂತೋಷಕರವಾದ ಸಮಾಜವನ್ನು ನಿರ್ಮಿಸಬೇಕು. ಹೀಗಾಗಿಯೇ ದೇವರು ಎಲ್ಲರಿಗೂ ಸ್ವಾತಂತ್ರ ನೀಡಿದ್ದಾನೆ. ಈ ಸ್ವಾತಂತ್ರ್ಯವನ್ನು ನಾವು ಯಾರಿಂದಲೂ ಕಸಿಕೊಳ್ಳಬಾರದು ಎಂದು ತಿಳಿಸಿದ್ದಾರೆ.

    ನುಸ್ರತ್ ಜಹಾನ್ ವಿವಾದ: ಬುರ್ಖಾ ಧರಿಸದೆ ಸಂಸತ್ ಪ್ರವೇಶಿಸಿರುವುದು, ಸಿಂಧೂರ ಇಟ್ಟಿರುವುದು ಹಾಗೂ ಕೈಗೆ ಬಳೆ ತೊಟ್ಟಿದ್ದಕ್ಕೆ ಸಂಸದೆ ನುಸ್ರತ್ ಅವರನ್ನು ಮುಸ್ಲಿಂ ಧರ್ಮ ಗುರುಗಳು ಸೇರಿದಂತೆ ಹಲವರು ಟೀಕಿಸಿದ್ದರು. ಇದಕ್ಕೆ ಉತ್ತರಿಸಿದ್ದ ಸಂಸದೆ, ನಾನು `ಅಂತರ್ಗತ ಭಾರತ’ವನ್ನು ಪ್ರತಿನಿಧಿಸುತ್ತೇನೆ ಎಂದು ಟೀಕಾಕಾರರಿಗೆ ತಿರುಗೇಟು ನೀಡಿದ್ದರು.

    ನಾನು ಜಾತಿ, ಮತ, ಧರ್ಮಗಳ ಹಂಗು ಮೀರಿದ `ಅಂತರ್ಗತ ಭಾರತ’ವನ್ನು ಪ್ರತಿನಿಧಿಸುತ್ತೇನೆ. ಅಲ್ಲದೆ ಎಲ್ಲ ಧರ್ಮಗಳನ್ನು ಗೌರವಿಸುತ್ತೇನೆ ಎಂದು ಸಂಸತ್‍ನಲ್ಲಿ ಉತ್ತರಿಸಿದ್ದರು. ತಮ್ಮ ಟ್ವಿಟ್ಟರ್ ಖಾತೆಯಲ್ಲಿಯೂ ಸಹ ಈ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದರು. ನಾನು ಇನ್ನೂ ಮುಸ್ಲಿಂ ಧರ್ಮದಲ್ಲಿದ್ದೇನೆ. ಆದರೆ ನಾನು ಧರಿಸುವ ಉಡುಪಿನ ಕುರಿತು ಟೀಕಿಸುವ ಹಕ್ಕು ಯಾರಿಗೂ ಇಲ್ಲ. ನಂಬಿಕೆ ಉಡುಪುಗಳನ್ನು ಮೀರಿದ ವಿಷಯ. ಎಲ್ಲ ಧರ್ಮಗಳ ಅಮೂಲ್ಯವಾದ ಸಿದ್ಧಾಂತಗಳಲ್ಲಿ ನಂಬಿಕೆ ಇಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕಿದೆ ಎಂದು ಜಹಾನ್ ಟೀಕಾಕಾರರನ್ನು ಕುಟುಕಿದ್ದರು.