Tag: kolkata

  • ಇಂಡೋ-ಪಾಕ್ ದ್ವಿಪಕ್ಷೀಯ ಸರಣಿಗೆ ಪಿಎಂ ಅನುಮೋದನೆ ಬೇಕು: ಸೌರವ್ ಗಂಗೂಲಿ

    ಇಂಡೋ-ಪಾಕ್ ದ್ವಿಪಕ್ಷೀಯ ಸರಣಿಗೆ ಪಿಎಂ ಅನುಮೋದನೆ ಬೇಕು: ಸೌರವ್ ಗಂಗೂಲಿ

    ಕೋಲ್ಕತ್ತಾ: ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸರಣಿ ನಡೆಸಲು ಎರಡು ದೇಶಗಳ ಪ್ರಧಾನ ಮಂತ್ರಿಗಳ ಅನುಮೋದನೆ ಬೇಕು ಎಂದು ಬಿಸಿಸಿಐ ಅಧ್ಯಕ್ಷ ಸ್ಥಾನ ಅಲಂಕರಿಸಲಿರುವ ಸೌರವ್ ಗಂಗೂಲಿ ಹೇಳಿದ್ದಾರೆ.

    ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ನೂತನ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಲಿರುವ ಗಂಗೂಲಿ ಇಂದು ಕೋಲ್ಕತ್ತಾದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸರಣಿ ನಡೆಸಲು ಎರಡು ದೇಶದ ಪ್ರಧಾನ ಮಂತ್ರಿಗಳ ಅನುಮೋದನೆ ಬೇಕು ಎಂದು ತಿಳಿಸಿದ್ದಾರೆ.

    ಭಾರತ ಮತ್ತು ಪಾಕಿಸ್ತಾನ ನಡುವೆ ಯಾವಾಗ ದ್ವಿಪಕ್ಷೀಯ ಸರಣಿ ನಡೆಯಬೇಕು ಎಂಬುದನ್ನು ನೀವು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅನ್ನು ಕೇಳಬೇಕು. ಇದು ದೇಶ ತೆಗೆದುಕೊಂಡಿರುವ ನಿರ್ಧಾರ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾವು ಆಟವಾಡಬೇಕು ಎಂದರೆ ದೇಶದ ಅನುಮತಿ ಇರಬೇಕು. ಅದ್ದರಿಂದ ಈ ಪ್ರಶ್ನೆಗೆ ನಮ್ಮ ಬಳಿ ಉತ್ತರವಿಲ್ಲ ಎಂದು ಹೇಳಿದ್ದಾರೆ.

    ಸೌರವ್ ಗಂಗೂಲಿ ಅವರ ನಾಯಕತ್ವದಲ್ಲಿ ಭಾರತದ ಪಾಕಿಸ್ತಾನಕ್ಕೆ 2004 ರಲ್ಲಿ ಪ್ರವಾಸ ಹೋಗಿತ್ತು. ಈ ಪ್ರವಾಸ 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದ ಬಳಿಕ ಮೊದಲ ಬಾರಿಗೆ ಭಾರತ ಮತ್ತು ಪಾಕಿಸ್ತಾನ ನಡುವಿನ ಪ್ರವಾಸವಾಗಿತ್ತು. 1989ರ ನಂತರ ಮೊದಲ ಬಾರಿ ಭಾರತ ಪಾಕಿಸ್ತಾನಕ್ಕೆ ಪ್ರವಾಸ ಹೋಗಿ ಪಾಕ್ ನೆಲದಲ್ಲಿ ಕ್ರಿಕೆಟ್ ಆಡಿತ್ತು.

    ಭಾರತ ಮತ್ತು ಪಾಕಿಸ್ತಾನ ಎರಡು ತಂಡಗಳು 2012ರಲ್ಲಿ ಕೊನೆಯ ಬಾರಿಗೆ ದ್ವಿಪಕ್ಷೀಯ ಸರಣಿಯನ್ನು ಭಾರತದಲ್ಲಿ ಆಡಿತ್ತು. ಈ ಸರಣಿಯಲ್ಲಿ ಭಾರತ ಎರಡು ಟಿ-20 ಪಂದ್ಯಗಳು ಮತ್ತು ಮೂರ ಏಕದಿನ ಪಂದ್ಯಗಳ ಆತಿಥ್ಯವನ್ನು ವಹಿಸಿಕೊಂಡಿತ್ತು. ಇದಾದ ನಂತರ ಭಾರತ ಮತ್ತು ಪಾಕಿಸ್ತಾನ ಐಸಿಸಿ ಟೂರ್ನಿಯಲ್ಲಿ ಬಿಟ್ಟರೆ ಯಾವುದೇ ದ್ವಿಪಕ್ಷೀಯ ಸರಣಿಯನ್ನು ಆಡಿಲ್ಲ.

    ಕಳೆದ ಭಾನುವಾರ ಮುಂಬೈನಲ್ಲಿ ನಡೆದ ಸಭೆಯಲ್ಲಿ ಚುನಾವಣೆ ನಡೆಯದೇ ಅವಿರೋಧವಾಗಿ ಆಯ್ಕೆ ಸಂಬಂಧ ಮಾತುಕತೆ ನಡೆದಿತ್ತು. ಸೌರವ್ ಗಂಗೂಲಿ ಅವರನ್ನು ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ, ಗೃಹ ಸಚಿವ ಅಮಿತ್ ಶಾ ಪುತ್ರ ಜೇ ಶಾ ಕಾರ್ಯದರ್ಶಿಯಾಗಿಯೂ, ಕೇಂದ್ರ ಕಾರ್ಪೋರೇಟ್ ಮತ್ತು ವ್ಯವಹಾರಗಳ ಖಾತೆಯ ರಾಜ್ಯ ಸಚಿವ, ಬಿಸಿಸಿಐ ಮಾಜಿ ಅಧ್ಯಕ್ಷ ಅನುರಾಗ್ ಠಾಕೂರ್ ಅವರ ಸಹೋದರ ಅರುಣ್ ಧುಮಲ್ ಖಜಾಂಜಿ ಹುದ್ದೆಗೆ ಸ್ಪರ್ಧಿಸಿದ್ದು ಅ.23ಕ್ಕೆ ಅಧಿಕೃತವಾಗಿ ಘೋಷಣೆಯಾಗಲಿದೆ.

  • ಬಿಜೆಪಿ ಸೇರುವ ಬಗ್ಗೆ ಮೌನ ಮುರಿದ ಗಂಗೂಲಿ

    ಬಿಜೆಪಿ ಸೇರುವ ಬಗ್ಗೆ ಮೌನ ಮುರಿದ ಗಂಗೂಲಿ

    ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೂ ಮುನ್ನ ನಾನು ಬಿಜೆಪಿಗೆ ಸೇರ್ಪಡೆಯಾಗಲಿದ್ದೇನೆ ಎನ್ನುವ ವದಂತಿಗೆ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಪ್ರತಿಕ್ರಿಯಿಸಿದ್ದಾರೆ.

    ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ನೂತನ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಲಿರುವ ಗಂಗೂಲಿ ಭಾನುವಾರ ಮುಂಬೈನಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದರು. ಈ ಭೇಟಿಯ ನಂತರ ಬಿಸಿಸಿಐ ಅಧ್ಯಕ್ಷರಾಗಲು ಗಂಗೂಲಿಗೆ ಬಿಜೆಪಿ ಪಕ್ಷ ಸಹಾಯ ಮಾಡಿದೆ ಮತ್ತು ಗಂಗೂಲಿಯವರನ್ನು ಬಿಜೆಪಿ ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಲು ಅಸಕ್ತಿ ಹೊಂದಿದೆ ಎಂಬ ವಂದತಿ ಕೇಳಿ ಬಂದಿತ್ತು.

    ಈಗ ಈ ವಂದತಿಗಳಿಗೆ ತೆರೆ ಎಳೆದಿರುವ ಸೌರವ್ ಗಂಗೂಲಿ, ನಾನು ಮತ್ತು ಅಮಿತ್ ಶಾ ಅವರು ಭಾನುವಾರ ಮುಂಬೈನಲ್ಲಿ ಭೇಟಿ ಮಾಡಿದ್ದು ನಿಜ. ಆದರೆ ಈ ಭೇಟಿಯಲ್ಲಿ ನಾವು ಯಾವುದೇ ರಾಜಕೀಯ ವಿಚಾರದ ಬಗ್ಗೆ ಮಾತನಾಡಿಲ್ಲ. ನನ್ನನ್ನು ಬಿಜೆಪಿಗೆ ಸೇರಿಸಿಕೊಳ್ಳುವ ವಿಚಾರದ ಬಗ್ಗೆ ಅಮಿತ್ ಶಾ ಯಾವ ಪ್ರಶ್ನೆಯನ್ನು ಕೇಳಿಲ್ಲ. ಈ ವಿಚಾರದಲ್ಲಿ ನಾವು ಅವರಿಗೆ ಗೌರವ ನೀಡಬೇಕು ಎಂದು ಹೇಳಿದ್ದಾರೆ.

    ನನ್ನ ಹೆಸರು ರಾಜಕೀಯ ಪಕ್ಷದೊಂದಿಗೆ ಕೇಳಿ ಬರುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ನಾನು ನಮ್ಮ ರಾಜ್ಯ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿದಾಗಲೂ ನಾನು ಅವರ ಪಕ್ಷಕ್ಕೆ ಸೇರುತ್ತೇನೆ ಎಂದು ಸುದ್ದಿಯಾಗಿತ್ತು. ಆದರೆ ನೀವು ಅದರ ಫಲಿತಾಂಶವನ್ನು ನೋಡಿದ್ದಿರಾ. ನಾನು ಅವರನ್ನು ಭೇಟಿ ಮಾಡಿದೆ ಆದರೆ ಅವರ ಪಕ್ಷ ಸೇರಲಿಲ್ಲ ಎಂದು ತಿಳಿಸಿದರು.

    ಇದೇ ವೇಳೆ ಅಮಿತ್ ಶಾ ಅವರ ಭೇಟಿಯ ವಿಚಾರವಾಗಿ ಮಾತನಾಡಿದ ಗಂಗೂಲಿ, ಅವರನ್ನು ಭೇಟಿ ಮಾಡಿದ್ದು ವಿಶೇಷ ಮತ್ತು ವಿಭಿನ್ನವಾಗಿತ್ತು. ನಾವು ಈ ಭೇಟಿಯಲ್ಲಿ ಯಾವುದೇ ರಾಜಕೀಯ ವಿಚಾರದ ಬಗ್ಗೆ ಚರ್ಚೆ ಮಾಡಿಲ್ಲ. ನಾವು ಬಿಸಿಸಿಐಗೆ ಬಗ್ಗೆ ಮಾತನಾಡಿದೆವು ಎಂದು ವಿವರಿಸಿದರು.

    ಕಳೆದ ಭಾನುವಾರ ಮುಂಬೈನಲ್ಲಿ ನಡೆದ ಸಭೆಯಲ್ಲಿ ಚುನಾವಣೆ ನಡೆಯದೇ ಅವಿರೋಧವಾಗಿ ಆಯ್ಕೆ ಸಂಬಂಧ ಮಾತುಕತೆ ನಡೆದಿತ್ತು. ಸೌರವ್ ಗಂಗೂಲಿ ಅವರನ್ನು ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ, ಗೃಹ ಸಚಿವ ಅಮಿತ್ ಶಾ ಪುತ್ರ ಜೇ ಶಾ ಕಾರ್ಯದರ್ಶಿಯಾಗಿಯೂ, ಕೇಂದ್ರ ಕಾರ್ಪೋರೇಟ್ ಮತ್ತು ವ್ಯವಹಾರಗಳ ಖಾತೆಯ ರಾಜ್ಯ ಸಚಿವ, ಬಿಸಿಸಿಐ ಮಾಜಿ ಅಧ್ಯಕ್ಷ ಅನುರಾಗ್ ಠಾಕೂರ್ ಅವರ ಸಹೋದರ ಅರುಣ್ ಧುಮಲ್ ಖಜಾಂಜಿ ಹುದ್ದೆಗೆ ಸ್ಪರ್ಧಿಸಿದ್ದು ಅ.23ಕ್ಕೆ ಅಧಿಕೃತವಾಗಿ ಘೋಷಣೆಯಾಗಲಿದೆ.

    ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಬಿಸಿಸಿಐ ಆಡಳಿತ ಮಂಡಳಿಯನ್ನು 2017ರಲ್ಲಿ ವಜಾಗೊಳಿಸಿತ್ತು. ಬಳಿಕ ಸುಪ್ರೀಂ ಆಡಳಿತಾತ್ಮಕ ಸಮಿತಿಯನ್ನು ನೇಮಿಸಿತ್ತು. ಅಕ್ಟೋಬರ್ 23ರಂದು ಬಿಸಿಸಿಐ ಪದಾಧಿಕಾರಿಗಳಿಗೆ ಆಡಳಿತಾತ್ಮಕ ಸಮಿತಿ ಅಧಿಕಾರ ಹಸ್ತಾಂತರ ಮಾಡಲಿದೆ. ಹೀಗಾಗಿ ಚುನಾವಣೆ ಪ್ರಕ್ರಿಯೆ ಆರಂಭಗೊಂಡಿತ್ತು.

  • ಭೇಟಿಯಾದ ನಾಲ್ಕೇ ಗಂಟೆಗಳಲ್ಲಿ ಮದ್ವೆಯಾದ ಜೋಡಿ

    ಭೇಟಿಯಾದ ನಾಲ್ಕೇ ಗಂಟೆಗಳಲ್ಲಿ ಮದ್ವೆಯಾದ ಜೋಡಿ

    ಕೋಲ್ಕತ್ತಾ: ಫೇಸ್‍ಬುಕ್‍ನಲ್ಲಿ ಸ್ನೇಹಿತರಾದ ಯುವಕ ಹಾಗೂ ಯುವತಿ ಮೊದಲ ಬಾರಿ ಭೇಟಿಯಾಗಿ ಕೆಲವೇ ಗಂಟೆಗಳಲ್ಲಿ ಮದುವೆಯಾದ ಸಂಗತಿಯೊಂದು ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಡೆದಿದೆ.

    ಸುದೀಪ್ ಘೋಷಲ್ ಹಾಗೂ ಪ್ರತಿಮಾ ಬ್ಯಾನರ್ಜಿ ಮದುವೆಯಾದ ಜೋಡಿ. ಇಬ್ಬರು ಮೂರು ತಿಂಗಳ ಹಿಂದೆ ಫೇಸ್‍ಬುಕ್‍ನಲ್ಲಿ ಸ್ನೇಹಿತರಾಗಿದ್ದರು. ಪ್ರತಿಮಾ ಅಷ್ಟಮಿ ದಿನ ತನ್ನ ಸ್ನೇಹಿತರನ್ನು ಭೇಟಿ ಆಗಲು ಕೋಲ್ಕತ್ತಾಗೆ ಬರಲಿದ್ದಾರೆ ಎಂಬ ವಿಷಯ ಸುದೀಪ್‍ಗೆ ಫೇಸ್‍ಬುಕ್ ಮೂಲಕ ತಿಳಿಯಿತು. ಈ ವೇಳೆ ಇಬ್ಬರು ಭೇಟಿ ಆಗಲು ನಿರ್ಧರಿಸಿದ್ದರು.

    ನಾನು ಹೋಗಿದ್ದ ಪೆಂಡಾಲ್‍ನಲ್ಲಿ ಪ್ರತಿಮಾ ಕೂಡ ಬಂದಿದ್ದಳು. ಪ್ರತಿಮಾ ತನ್ನ ಸ್ನೇಹಿತರ ಜೊತೆ ಅಲ್ಲಿಗೆ ಬಂದಿದ್ದಳು. ಅಲ್ಲಿ ವಾತಾವರಣ ಹೇಗಿತ್ತು ಎಂದರೆ ನನಗೆ ಪ್ರತಿಮಾಳನ್ನು ಪ್ರಪೋಸ್ ಮಾಡಬೇಕು ಎನಿಸುತ್ತಿತ್ತು ಹಾಗೂ ನಾನು ಆಕೆಗೆ ಪ್ರಪೋಸ್ ಕೂಡ ಮಾಡಿದ್ದೇನೆ. ಆಕೆ ತುಂಬಾ ಸುಂದರವಾಗಿ ಕಾಣಿಸುತ್ತಿದ್ದಳು ಎಂದು ಸುದೀಪ್ ಹೇಳಿದ್ದಾರೆ.

    ಬೆಳಗ್ಗೆ ಮೊದಲ ಬಾರಿ ಭೇಟಿಯಾದ ನಂತರ ಸಂಜೆ 8 ಗಂಟೆಗೆ ಮತ್ತೆ ಸುದೀಪ್ ಹಾಗೂ ಪ್ರತಿಮಾ ಭೇಟಿ ಆಗಿದ್ದಾರೆ. ಈ ವೇಳೆ ಸುದೀಪ್ ಮಂಡಿಯೂರಿ ಪ್ರತಿಮಾಗೆ ಪ್ರಪೋಸ್ ಮಾಡಿದ್ದಾರೆ. ಬಳಿಕ ಸಾವಿರಾರು ಜನರ ನಡುವೆ ಇವರಿಬ್ಬರ ಮದುವೆ ಆಗಿದೆ.

    ಸುದೀಪ್ ಪ್ರೀತಿಯ ಸರಳತೆ ಹಾಗೂ ಮುಗ್ಧತೆ ನನಗೆ ಆಶ್ಚರ್ಯಗೊಳಿಸಿತ್ತು. ಹಾಗಾಗಿ ನಾನು ಮದುವೆಗೆ ಒಪ್ಪಿಗೆ ಸೂಚಿಸಿದೆ. ಇದು ಲವ್ ಅಟ್ ಫಸ್ಟ್ ಸೈಟ್ ಆಗಿದ್ದು, ರಾತ್ರಿ ಸುಮಾರು 10.30ಕ್ಕೆ ಹಿಂದ್ ಮೋಟರ್ಸ್ ಗೆ ಹೋಗಿ ಸ್ಥಳೀಯ ಪೆಂಡಾಲ್‍ನಲ್ಲಿ ಮಧ್ಯರಾತ್ರಿ ಮದುವೆಯಾಗಿದ್ದೇವೆ ಎಂದು ಪ್ರತಿಮಾ ತಿಳಿಸಿದ್ದಾರೆ.

  • ದುರ್ಗಾ ಪೂಜೆ ಮಾಡಿದಕ್ಕೆ ಕಿಡಿಕಾರಿದ ಮೌಲ್ವಿಗಳಿಗೆ ನುಸ್ರತ್ ತಿರುಗೇಟು

    ದುರ್ಗಾ ಪೂಜೆ ಮಾಡಿದಕ್ಕೆ ಕಿಡಿಕಾರಿದ ಮೌಲ್ವಿಗಳಿಗೆ ನುಸ್ರತ್ ತಿರುಗೇಟು

    ಕೋಲ್ಕತ್ತಾ: ದುರ್ಗಾ ಪೂಜೆ ಮಾಡಿದ್ದಕ್ಕೆ ತೃಣಮೂಲ ಕಾಂಗ್ರೆಸ್ ಸಂಸದೆ, ನಟಿ ನುಸ್ರತ್ ಜಹಾನ್ ವಿರುದ್ಧ ಮತ್ತೊಮ್ಮೆ ಇಸ್ಲಾಂ ಧಾರ್ಮಿಕ ಗುರುಗಳು ಕಿಡಿಕಾರಿದ್ದಾರೆ. ಆದರೆ ನುಸ್ರತ್ ಅವರು ತಮ್ಮ ನಡೆಯನ್ನು ಸಮರ್ಥಿಸಿಕೊಂಡು ಮೌಲ್ವಿಗಳಿಗೆ ಸಖತ್ ತಿರುಗೇಟು ಕೊಟ್ಟಿದ್ದಾರೆ.

    ಕೋಲ್ಕತ್ತಾದಲ್ಲಿ ನಡೆದ ದುರ್ಗಾ ಪೂಜೆ ಪತಿ ಜೊತೆಗೂಡಿ ಪೂಜೆ ಸಲ್ಲಿಸಿದ್ದರು. ಈ ರೀತಿ ಕಾಣಿಸಿಕೊಂಡು ಇಸ್ಲಾಂ ಧರ್ಮವನ್ನು ಅವಮಾನಿಸುವ ಬದಲು ಹೆಸರನ್ನು ಬದಲಾಯಿಸಿಕೊಳ್ಳಿ ಎಂದು ಮೌಲ್ವಿ ಮುಫ್ತಿ ಅಸಾದ್ ಕಾಸ್ಮಿ ಟೀಕಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನುಸ್ರತ್ ಅವರು, ಎಲ್ಲ ಧರ್ಮದ ಸೌಹಾರ್ದತೆ ಸಾರಲು ನನ್ನದೇ ಆದ ದಾರಿಯಲ್ಲಿ ನಾನು ಹೋಗುತ್ತಿದ್ದೇನೆ. ನಾನು ಮಾಡುತ್ತಿರುವ ಸರಿಯೆಂದು ನನಗೆ ಅನಿಸುತ್ತಿದೆ. ನಾವು ಎಲ್ಲಾ ಧರ್ಮದ ಹಬ್ಬಗಳನ್ನು ಆಚರಿಸಬೇಕು ಎಂದು ತಿರುಗೇಟು ನೀಡಿದ್ದಾರೆ.

    ಅವರು ನನಗೆ ಹೆಸರು ಇಟ್ಟಿಲ್ಲ, ನಿನ್ನ ಹೆಸರನ್ನು ಬದಲಿಸಿಕೊ ಎಂದು ಹೇಳುವ ಹಕ್ಕು ಅವರಿಗಿಲ್ಲ ಎಂದು ಮಾತಿನ ಚಾಟಿ ಬೀಸಿದ್ದಾರೆ. ಹಿಂದೂ, ಮುಸ್ಲಿಂ ಎಂಬ ಧರ್ಮದ ಬೇಧ ಬೇಡ. ಪೂಜೆಯನ್ನು ಖುಷಿಯಿಂದ ಆಚರಿಸಿ. ಇದಕ್ಕೆ ರಾಜಕೀಯ ಬಣ್ಣ ಹಚ್ಚಬೇಡಿ, ಇದು ಹಬ್ಬವನ್ನು ಸಂಭ್ರಮಿಸುವ ಸಮಯ ಎಂದು ಹೇಳಿದ್ದಾರೆ.

    ಅಲ್ಲಾಹು ಹೊರತುಪಡಿಸಿ ಇತರೆ ದೇವರುಗಳನ್ನು ಪೂಜಿಸಲು ಇಸ್ಲಾಂ ಧರ್ಮದಲ್ಲಿ ಅನುಮತಿ ನೀಡಿಲ್ಲ. ಆದರೆ, ನುಸ್ರತ್ ದುರ್ಗಾ ಪೂಜೆಯನ್ನು ನೆರವೇರಿಸಿದ್ದಾರೆ. ಇದು ಸಂಪೂರ್ಣವಾಗಿ ಇಸ್ಲಾಂ ವಿರೋಧಿಯಾಗಿದೆ. ಅವರು ಇಸ್ಲಾಂ ಅನ್ನು ಅನುಸರಿಸುತ್ತಿಲ್ಲ. ಇದಲ್ಲದೆ ಮುಸ್ಲಿಮೇತರ ವ್ಯಕ್ತಿಯನ್ನು ಮದುವೆಯಾಗಿದ್ದಾರೆ. ಹೀಗಾಗಿ ಅವರು ತಮ್ಮ ಹೆಸರನ್ನು ಬದಲಾಯಿಸಿಕೊಳ್ಳಲಿ, ಅದನ್ನು ಬಿಟ್ಟಿ ಇಸ್ಲಾಂಗೆ ಅಪಮಾನ ಮಾಡುವುದು ಸರಿಯೇ ಎಂದು ಮುಫ್ತಿ ಅಸಾದ್ ಕಾಸ್ಮಿ ಪ್ರಶ್ನಿಸಿದ್ದರು.

    ಎಲ್ಲರನ್ನೂ ಒಳಗೊಂಡ ಭಾರತದ ಪ್ರತಿನಿಧಿ ಎಂದು ಈ ಹಿಂದೆ ಸಂಸದೆ ನುಸ್ರತ್ ಜಹಾನ್ ಹೇಳಿದ್ದರು. ಉದ್ಯಮಿ ನಿಖಿಲ್ ಜೈನ್ ಅವರನ್ನು ನುಸ್ರತ್ ಅವರು ಮದುವೆಯಾದ ಬಳಿಕ ಹಿಂದೂ ಧಾರ್ಮಿಕ ಆಚರಣೆ, ಪೂಜೆ ಪುನಸ್ಕಾರಗಳಲ್ಲಿ ಅವರು ತೊಡಗಿಕೊಂಡಿದ್ದರು. ಆದ್ದರಿಂದ ಅವರ ವಿರುದ್ಧ ಭಾರಿ ಟೀಕೆಗಳು ಕೇಳಿಬಂದಿತ್ತು.

    ಸಂಸದರಾದ ಬಳಿಕ ಸಂಸತ್ತಿನಲ್ಲಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಹಣೆಗೆ ಸಿಂಧೂರ ಇಟ್ಟುಕೊಂಡು ಬಂದಿದ್ದಕ್ಕೆ ಕೂಡ ನುಸ್ರತ್ ವಿರುದ್ಧ ಮೌಲ್ವಿಗಳು ಕಿಡಿಕಾರಿದ್ದರು. ಈಗ ಸಾಂಪ್ರದಾಯಿಕ ಸೀರೆಯನ್ನುಟ್ಟು, ಹಣೆಗೆ ಸಿಂಧೂರ ಹಾಗೂ ಮಂಗಳಸೂತ್ರವನ್ನು ಹಾಕಿಕೊಂಡು ನುಸ್ರತ್ ಅವರು ದುರ್ಗಾ ಪೂಜೆ ಮಾಡಿದ್ದೂ ಕೂಡ ಮೌಲ್ವಿಗಳ ಕೆಂಗಣ್ಣಿಗೆ ಕಾರಣವಾಗಿದೆ.

  • ದೇಶದ ದುಬಾರಿ ಮೂರ್ತಿ – 50 ಕೆ.ಜಿ ಚಿನ್ನದಲ್ಲಿ ದುರ್ಗೆಗೆ ಅಲಂಕಾರ

    ದೇಶದ ದುಬಾರಿ ಮೂರ್ತಿ – 50 ಕೆ.ಜಿ ಚಿನ್ನದಲ್ಲಿ ದುರ್ಗೆಗೆ ಅಲಂಕಾರ

    ಕೊಲ್ಕತ್ತಾ: ದೇಶದೆಲ್ಲೆಡೆ ನವರಾತ್ರಿ ಆಚರಣೆ ಜೋರಾಗಿದ್ದು, ನವ ದುರ್ಗೆಯರಿಗೆ ಪೂಜೆ ಸಲ್ಲಿಸಿ ಭಕ್ತರು ನವರಾತ್ರಿಯನ್ನು ಆಚರಿಸುತ್ತಿದ್ದಾರೆ. ಆದರೆ ಕೋಲ್ಕತ್ತಾದಲ್ಲಿ ನಡೆಯುತ್ತಿರುವ ಅದ್ಧೂರಿ ದುರ್ಗೆ ಆರಾಧನೆ ಎಲ್ಲರ ಗಮನ ಸೆಳೆದಿದೆ. ಬರೋಬ್ಬರಿ 50 ಕೆ.ಜಿ ಚಿನ್ನಾದಲ್ಲಿ ದುರ್ಗೆಯನ್ನು ಅಲಂಕರಿಸಲಾಗಿದೆ.

    ನವರಾತ್ರಿ ಹಿನ್ನೆಲೆ ಅನೇಕ ಕಡೆ ದುರ್ಗಾ ದೇವಿಗಾಗಿ ಪೆಂಡಾಲ್ ನಿರ್ಮಿಸಿ ಭಕ್ತರು ಪೂಜೆ ಸಲ್ಲಿಸುತ್ತಾರೆ. ದುರ್ಗಾ ಪೆಂಡಾಲ್‍ನಲ್ಲಿ ಅನೇಕ ಕಾರ್ಯಕ್ರಮಗಳು ಕೂಡ ನಡೆಯುತ್ತವೆ. ಅದರಲ್ಲೂ ಪಶ್ಚಿಮ ಬಂಗಾಳದಲ್ಲಿ ದುರ್ಗೆ ಆರಾಧನೆ ತುಸು ಜೋರಾಗಿಯೇ ಮಾಡಲಾಗುತ್ತದೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ದುರ್ಗಾ ಪೂಜೆಯನ್ನು ಅದ್ಧೂರಿಯಾಗಿ ಮಾಡಲಾಗ್ತಿದೆ. ಕೊಲ್ಕತ್ತಾದ ಸಂತೋಷ್ ಮಿತ್ರ ದುರ್ಗಾ ಉತ್ಸವ ಸಮಿತಿ ಸದಸ್ಯರು ದುರ್ಗಾ ಪೆಂಡಾಲ್ ಹಾಕಿದ್ದಾರೆ. ಈ ಪೆಂಡಲ್‍ನಲ್ಲಿ ಪ್ರತಿಷ್ಠಾಪಿರುವ ದುರ್ಗೆಗೆ ಬರೋಬ್ಬರಿ 50 ಕೆ.ಜಿ ಚಿನ್ನವನ್ನು ಹಾಕಿದ್ದಾರೆ. ದುರ್ಗಾ ದೇವಿಯ ಮೂರ್ತಿ ಹಾಗೂ ಪೆಂಡಾಲ್‍ಗೆ ಹಾಕಿರುವ ಬಂಗಾರವೆಲ್ಲಾ ಸೇರಿ ಒಟ್ಟು 20 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ.

    ಈ ಬಾರಿಯ ನವರಾತ್ರಿಯಲ್ಲಿ ಕೋಲ್ಕತ್ತಾದ ದುರ್ಗಾ ದೇವಿಯ ಪ್ರತಿಮೆ ದೇಶದ ಅತ್ಯಂತ ದುಬಾರಿ ಮೂರ್ತಿ ಎಂದು ಸಮಿತಿ ಹೇಳಿಕೊಂಡಿದೆ. ಸಂತೋಷ್ ಮಿತ್ರ ಚೌಕದಲ್ಲಿ ನಿರ್ಮಿಸಲಾದ ಪೆಂಡಾಲ್‍ನಲ್ಲಿರುವ ದುರ್ಗಾ ದೇವಿ ಪ್ರತಿಮೆ 13 ಅಡಿ ಎತ್ತರವಿದೆ. ದುರ್ಗಾ ಪ್ರತಿಮೆಗೆ ಚಿನ್ನವನ್ನು ಲೇಪಿಸಲಾಗಿದ್ದು, ದೇವಿಯ ಮೈಮೇಲೆ ಕೂಡ ಚಿನ್ನಾಭರಣವನ್ನು ಹಾಕಲಾಗಿದೆ. ಅಲ್ಲದೆ ದೇವಿಯ ವಾಹನವಾದ ಸಿಂಹದ ಪ್ರತಿಮೆಗೂ ಕೂಡ ಚಿನ್ನವನ್ನು ಲೇಪಿಸಲಾಗಿದೆ.

    ಪೆಂಡಾಲ್ ಸುತ್ತಮುತ್ತ ಬಿಗಿ ಭದ್ರತೆ ಒದಗಿಸಲಾಗಿದ್ದು, ಈ ಚಿನ್ನದ ದುರ್ಗೆ ಈಗ ದೇಶದೆಲ್ಲೆಡೆ ಭಾರೀ ಸುದ್ದಿಯಾಗಿದ್ದಾಳೆ. ದುರ್ಗಾ ದೇವಿಯ ದುಬಾರಿ ಆಧಾರನೆ ಎಲ್ಲರ ಗಮನ ಸೆಳೆದಿದೆ.

  • ಮಮತಾ ಬ್ಯಾನರ್ಜಿಯಿಂದ ಮೋದಿ ಪತ್ನಿ ಜಶೋದಾಬೆನ್ ಭೇಟಿ

    ಮಮತಾ ಬ್ಯಾನರ್ಜಿಯಿಂದ ಮೋದಿ ಪತ್ನಿ ಜಶೋದಾಬೆನ್ ಭೇಟಿ

    ಕೋಲ್ಕತ್ತಾ: ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲು ದೆಹಲಿಗೆ ತೆರಳುವುದಕ್ಕೂ ಮುನ್ನ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಮೋದಿಯವರ ಪತ್ನಿ ಜಶೋದಾಬೆನ್ ಅವರನ್ನು ಭೇಟಿ ಮಾಡಿ ಅಚ್ಚರಿ ಮೂಡಿಸಿದ್ದಾರೆ.

    ಇಂದು ಮಮತಾ ಬ್ಯಾನರ್ಜಿಯವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲು ದೆಹಲಿಗೆ ಆಗಮಿಸಿದ್ದು, ಸಂಜೆ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ. ನಿನ್ನೆ (ಮಂಗಳವಾರ) ಕೋಲ್ಕತ್ತಾ ವಿಮಾನ ನಿಲ್ದಾಣದಿಂದ ಹೊರಡುವಾಗ ಅಲ್ಲಿಯೇ ಜಶೋದಾ ಬೆನ್ ಅವರನ್ನು ಭೇಟಿಯಾಗಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಕುಶಲೋಪರಿ ವಿಚಾರಿಸಿದ್ದಾರೆ. ಈ ವೇಳೆ ಮಮತಾ ಬ್ಯಾನರ್ಜಿ ಜಶೋದಾಬೆನ್ ಅವರಿಗೆ ಸೀರೆಯನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ವರದಿಯಾಗಿದೆ.

    ನಿವೃತ್ತ ಶಿಕ್ಷಕಿ ಜಶೋದಾಬೆನ್ ಅವರು ನೆರೆಯ ಜಾರ್ಖಂಡ್‍ನ ಧನ್ಬಾದ್‍ಗೆ ಭೇಟಿ ನೀಡಿ ಕೋಲ್ಕತಾದಿಂದ ಹೊರಟಿದ್ದರು ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಆಪ್ತ ಮೂಲಕಗಳು ತಿಳಿಸಿವೆ. ಧನ್ಬಾದ್‍ನಿಂದ 68 ಕಿ.ಮೀ. ದೂರದಲ್ಲಿರುವ ಬಂಗಾಳದ ಅಸನ್ಸೋಲ್‍ನಲ್ಲಿರುವ ಕಲ್ಯಾಣೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದರು ಎಂದು ತಿಳಿದುಬಂದಿದೆ.

    ಇದೇ ಅವಕಾಶವನ್ನು ಬಳಸಿಕೊಂಡು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜಶೋದಾಬೆನ್ ಅವರನ್ನು ಭೇಟಿ ಮಾಡಿ ಶುಭಾಶಯ ವಿನಿಮಯ ಮಾಡಿಕೊಂಡಿದ್ದಾರೆ. ಈ ವೇಳೆ ಸೀರೆಯನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಮಮತಾ ಬ್ಯಾನರ್ಜಿಯವರು ಇಂದು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲಿದ್ದಾರೆ. ಪಶ್ಚಿಮ ಬಂಗಾಳಕ್ಕೆ ಧನಸಹಾಯ, ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಲಿದ್ದಾರೆ ಎಂದು ತಿಳಿದು ಬಂದಿದೆ.

    ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರ 69ನೇ ಹುಟ್ಟುಹಬ್ಬವಾದ್ದರಿಂದ ಬಂಗಾಳಿ ಭಾಷೆಯಲ್ಲಿ ಟ್ವೀಟ್ ಮಾಡಿ ಮಮತಾ ಬ್ಯಾನರ್ಜಿ ಶುಭ ಹಾರೈಸಿದ್ದರು. ಪ್ರಧಾನಿ ‘ನರೇಂದ್ರ ಮೋದಿ ಜೀ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು’ ಎಂದು ಯಾವಾಗಲೂ ಮೋದಿಯರವನ್ನು ಟೀಕಿಸುತ್ತಿದ್ದ ಮಮತಾ ನಿನ್ನೆ ಟ್ವೀಟ್ ಮಾಡಿ ಶುಭ ಕೋರಿದ್ದರು.

  • ರಿಯಲ್ ಹೀರೋ, ಡಚ್ ನಾಯಿಗೆ ಸೇನೆಯಿಂದ ಸಂತಾಪ- ಸಾಮಾಜಿಕ ಜಾಲತಾಣಗಳಲ್ಲೂ ಹರಿದು ಬಂತು ಗೌರವ

    ರಿಯಲ್ ಹೀರೋ, ಡಚ್ ನಾಯಿಗೆ ಸೇನೆಯಿಂದ ಸಂತಾಪ- ಸಾಮಾಜಿಕ ಜಾಲತಾಣಗಳಲ್ಲೂ ಹರಿದು ಬಂತು ಗೌರವ

    ನವದೆಹಲಿ: ಸುಧಾರಿತ ಬಾಂಬ್‍ಗಳ ಪತ್ತೆ, ಭಯೋತ್ಪಾದನಾ ಕಾರ್ಯಾಚರಣೆ ವೇಳೆ ಸ್ಫೋಟಕಗಳನ್ನು ಗುರುತಿಸಲು ಸಹಾಯ ಮಾಡಿದ ‘ಡಚ್’ ಹೆಸರಿನ ನಾಯಿಯ ಸಾವಿಗೆ ಭಾರತೀಯ ಸೇನೆಯ ಪೂರ್ವ ಕಮಾಂಡ್ ಇಂದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ, ಡಚ್‍ನ ಶೌರ್ಯವನ್ನು ನೆನೆದಿದೆ. ಇದಕ್ಕೆ ಪ್ರತಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿಯೂ ಸಹ ಸಂತಾಪಗಳ ಮಹಾಪೂರವೇ ಹರಿದಿದೆ.

    ಡಚ್ 9 ವರ್ಷದ ನಾಯಿಯಾಗಿದ್ದು, ಬುಧವಾರ ಸಾವನ್ನಪ್ಪಿತ್ತು. ಬಾಂಬ್ ಸೇರಿದಂತೆ ಭಯೋತ್ಪಾದನಾ ಚಟುವಟಿಕೆಗಳನ್ನು ಪತ್ತೆ ಹಚ್ಚುವಲ್ಲಿ ಸೇನೆಗೆ ಅಗಾದ ಸಹಾಯವನ್ನು ಡಚ್ ಮಾಡಿದೆ. ನಾಯಿಯ ಸೇವೆಯನ್ನು ನೆನೆದು, ರಾಷ್ಟ್ರಕ್ಕೆ ಸೇವೆ ಸಲ್ಲಿಸಿದ ನಿಜವಾದ ಹೀರೋ ನಮ್ಮ ಡಚ್ ಎಂದು ಈಸ್ಟರ್ನ್ ಕಮಾಂಡ್ ನಾಯಿಗೆ ಶ್ರದ್ಧಾಂಜಲಿ ಸಲ್ಲಿಸಿದ ಚಿತ್ರಗಳನ್ನು ಟ್ವೀಟ್ ಮಾಡಿದೆ. ಸೇನೆ ಟ್ವೀಟ್ ಮಾಡುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲವರು ಸಂತಾಪ ಸೂಚಿಸಿ, ಬೇಸರ ವ್ಯಕ್ತಪಡಿಸಿದ್ದಾರೆ.

    ಇದು ಅತ್ಯಂತ ದುಃಖದ ಪೋಸ್ಟ್ ಆಗಿದ್ದರೂ, ಧೈರ್ಯಶಾಲಿ ನಾಯಿಗಳಿಗೆ ಮನುಷ್ಯರಷ್ಟೇ ಸಮಾನ ಗೌರವ ನೀಡುವ ಅತ್ಯುತ್ತಮ ಪೋಸ್ಟ್ ಆಗಿದೆ. ಈ ಗ್ರಹದಲ್ಲಿ ಪ್ರತಿಯೊಂದು ಜೀವರಾಶಿಗೂ ಸೂಕ್ತ ಸ್ಥಾನಮಾನವಿದೆ. ಅಗತ್ಯವಿದ್ದಾಗ ನಾವು ಅವುಗಳಿಗೆ ಸೂಕ್ತ ಗೌರವವನ್ನೂ ಸಲ್ಲಿಸುತ್ತೇವೆ. ಅದೇ ರೀತಿ ಈ ಪೋಸ್ಟ್ ನೋಡಿ ತುಂಬಾ ಖುಷಿಯಾಗಿದೆ ಎಂದು ಹಲವರು ಸೇನೆಯ ಟ್ವೀಟ್‍ಗೆ ಪ್ರತಿಕ್ರಿಯಿಸಿದ್ದಾರೆ.

    ಇನ್ನೂ ಕೆಲವರು ‘ಗೆಳೆಯನೇ ನಿನ್ನ ಪ್ರಯಾಣ ಸುಖಕರವಾಗಿರಲಿ’ ಎಂದು ಕಮೆಂಟ್ ಮಾಡಿದ್ದಾರೆ. ಭಾರತೀಯ ಸೇನೆಯ ಏಳು ಕಾರ್ಯಾಚರಣೆ ಕಮಾಂಡ್‍ಗಳ ಪೈಕಿ ಈಸ್ಟರ್ನ್ ಕಮಾಂಡ್ ಸಹ ಒಂದಾಗಿದೆ. ಇದರ ಪ್ರಧಾನ ಕಚೇರಿ ಕೋಲ್ಕತಾದ ಫೋರ್ಟ್ ವಿಲಿಯಂನಲ್ಲಿದೆ.

  • ಉಗುರಿನ ಮೇಲೆ ಚಂದ್ರಯಾನ-2 ಲ್ಯಾಂಡ್ ಮಾಡಿಸಿದ ಮೈಕ್ರೋ ಆರ್ಟಿಸ್ಟ್

    ಉಗುರಿನ ಮೇಲೆ ಚಂದ್ರಯಾನ-2 ಲ್ಯಾಂಡ್ ಮಾಡಿಸಿದ ಮೈಕ್ರೋ ಆರ್ಟಿಸ್ಟ್

    ಕೋಲ್ಕತ್ತಾ: ಪಶ್ಚಿಮ ಬಂಗಾಳದ ಸಿಲಿಗುರಿಯ ಮೈಕ್ರೋ ಆರ್ಟಿಸ್ಟ್ ರಮೇಶ್ ಶಾ, ಚಂದ್ರಯಾನ-2 ರ ಚಂದ್ರನ ಮೇಲೆ ಇಳಿಯುವ ಕಿರುಚಿತ್ರವನ್ನು ತಮ್ಮ ಉಗುರಿನ ಮೇಲೆ ಬರೆಯುವ ಮೂಲಕ ಪರಿಶ್ರಮ ಮತ್ತು ತಾಳ್ಮೆ ತೋರಿಸಿದ್ದಾರೆ.

    ರಮೇಶ್ ಶಾ ಅವರು ಈ ರೀತಿಯ ಚಿತ್ರ ಬಿಡಿಸುವವರ ಪೈಕಿ ವಿಶ್ವದದ್ಯಾಂತ ಮುಂಚೂಣಿಯಲ್ಲಿದ್ದಾರೆ. ಅವರು ಈ ರೀತಿಯ ತಮ್ಮ ಸಣ್ಣ ಪ್ರಮಾಣದ ಕಲಾತ್ಮಕ ಚಿತ್ರಗಳಿಂದ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‍ನ ಅತ್ಯಂತ ಮಹತ್ವದ ಪ್ರಶಸ್ತಿಯನ್ನು ಪಡೆದಿದ್ದಾರೆ.

    ಮೈಕ್ರೋ ಆರ್ಟಿಸ್ಟ್ ಆಗಿರುವ ರಮೇಶ್ ಶಾ, 15 ರಿಂದ 20 ಎಂಎಂ ಉಗುರಿನ ಜಾಗವನ್ನು ಬಳಸಿಕೊಂಡು ಚಂದ್ರಯಾನ್ -2 ರ ಲ್ಯಾಂಡಿಂಗ್ ಪೇಂಟಿಂಗ್ ಅನ್ನು ತಮ್ಮ ಬಲಗೈನ ಉಗುರಿನ ಮೇಲೆ ಚಿತ್ರಿಸಿದ್ದಾರೆ. ಈ ವರ್ಣಚಿತ್ರವನ್ನು ಪೂರ್ಣಗೊಳಿಸಲು ಅವರು ಮೂರು ದಿನಗಳ ಕಲವಾಕಾಶವನ್ನು ತೆಗೆದುಕೊಂಡಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿದ ಅವರು, ಬಾಹ್ಯಾಕಾಶ ನೌಕೆ ಚಂದ್ರನ ಮೇಲೆ ಸೇಫ್ ಲ್ಯಾಂಡ್ ಆದರೆ ಅದು ಭಾರತಕ್ಕೆ ಒಂದು ಐತಿಹಾಸಿಕ ಕ್ಷಣವಾಗಲಿದೆ. ಶನಿವಾರ ಚಂದ್ರನ ಮೇಲ್ಮೈಯ ದಕ್ಷಿಣ ಧ್ರುವದ ಬಳಿ ಚಂದ್ರಯಾನ್-2ನ ವಿಕ್ರಮ್ ಲ್ಯಾಂಡರ್ ಲ್ಯಾಂಡ್ ಆಗಲಿದೆ. ಈ ಮೂಲಕ ಈ ಸಾಧನೆ ಮಾಡಿದ ಭಾರತವು ಚಂದ್ರನ ಮೇಲೆ ರಾಕೆಟ್ ಇಳಿಸಿದ ವಿಶ್ವದ ನಾಲ್ಕನೇ ಶಕ್ತಿಶಾಲಿ ದೇಶವಾಗಲಿದೆ ಎಂದು ಹೇಳಿದರು.

    ನಾನು ಸೂಕ್ಷ್ಮ ಕಲೆಗಳನ್ನು ಚಿತ್ರಿಸುವ ಮೂಲಕ ಐದು ವಿಶ್ವ ದಾಖಲೆಗಳನ್ನು ಮಾಡಿದ್ದೇನೆ. ಚಾಲ್ತಿಯಲ್ಲಿರುವ ವಿಶ್ವ ಸಮಸ್ಯೆಗಳಿಗೆ ಸಂಬಂಧಿಸಿದ ವರ್ಣಚಿತ್ರಗಳನ್ನು ನಾನು ಬರೆಯುತ್ತೇನೆ. ಈ ರೀತಿಯ ಚಿತ್ರಗಳನ್ನು ಬರೆಯುವಾಗ ನನಗೆ ಒಳ್ಳೆಯ ಕೆಲಸ ಮಾಡಿದ ಅನುಭವವಾಗುತ್ತದೆ ಎಂದ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ಬಾಹ್ಯಾಕಾಶ ವಿಜ್ಞಾನಿಗಳನ್ನು ಚಂದ್ರಯಾನ-2 ಇಳಿಯುವ ಮುನ್ನ ಅಭಿನಂದನೆಗಳು ಎಂದು ಹೇಳಿದ್ದಾರೆ.

  • ಕೃಷ್ಣ ಜನ್ಮಾಷ್ಟಮಿ ಆಚರಣೆ ವೇಳೆ ನೂಕುನುಗ್ಗಲು – 6 ಮಂದಿ ಭಕ್ತರು ಸಾವು

    ಕೃಷ್ಣ ಜನ್ಮಾಷ್ಟಮಿ ಆಚರಣೆ ವೇಳೆ ನೂಕುನುಗ್ಗಲು – 6 ಮಂದಿ ಭಕ್ತರು ಸಾವು

    – ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ

    ಕೋಲ್ಕತ್ತಾ: ಇಂದು ದೇಶದೆಲ್ಲೆಡೆ ಕೃಷ್ಣ ಜನ್ಮಾಷ್ಟಮಿ ಆಚರಣೆ ಸಂಭ್ರಮದಿಂದ ಮಾಡಲಾಗುತ್ತಿದೆ. ಆದರೆ ಪಶ್ಚಿಮ ಬಂಗಾಳದ ಕಚುವಾ ಲೋಕನಾಥ ದೇವಾಲಯದಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಣೆ ವೇಳೆ ನೂಕುನುಗ್ಗಲಾಗಿ 6 ಮಂದಿ ಭಕ್ತರು ಸಾವನ್ನಪ್ಪಿದ್ದು, ಹಲವರು ಗಂಭೀರ ಗಾಯಗೊಂಡಿದ್ದಾರೆ.

    ಕಚುವಾ ಲೋಕನಾಥ ದೇವಾಲಯದಲ್ಲಿ ಪ್ರತಿವರ್ಷ ಕೃಷ್ಣ ಜನ್ಮಾಷ್ಟಮಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಅದೇ ರೀತಿ ಈ ಬಾರಿ ಕೂಡ ಶ್ರೀಕೃಷ್ಣನ ಜನ್ಮದಿನವನ್ನು ಆಚರಿಸಲಾಯಿತು. ಹೀಗಾಗಿ ಎಂದಿನಂತೆ ಲಕ್ಷಾಂತರ ಮಂದಿ ಭಕ್ತಾದಿಗಳು ದೇವಾಲಯದಲ್ಲಿ ಸೇರಿದ್ದರು. ಈ ಸಮಯದಲ್ಲಿ ಭಾರೀ ಮಳೆ ಆರಂಭವಾಗಿತ್ತು. ಗಂಟೆಗಟ್ಟಲೇ ಎಡಬಿಡದೆ ಮಳೆ ಸುರಿಯುತ್ತಿದ್ದ ಕಾರಣ ಭಕ್ತರು ಮಳೆಯಿಂದ ಆಶ್ರಯ ಪಡೆಯಲು ದೇವಾಲಯದ ಅಕ್ಕಪಕ್ಕದಲ್ಲಿದ್ದ ಅಂಗಡಿ, ಮಳಿಗೆ, ಮಂಟಪಗಳ ಕೆಳಗೆ ನಿಂತಿದ್ದರು.

    ದೇವಾಲಯದ ಪಕ್ಕದಲ್ಲಿದ್ದ ಬಿದಿರಿನ ಮಂಟಪದ ಕೆಳಗೆ ಭಕ್ತರು ನಿಂತಿದ್ದಾಗ ಭಾರೀ ಮಳೆಗೆ ಅದು ಕುಸಿದು ಬಿದ್ದಿದೆ. ಆ ಸ್ಥಳದಲ್ಲಿ ಹೆಚ್ಚಿನ ಭಕ್ತರು ಇದ್ದ ಕಾರಣಕ್ಕೆ ನೂಕುನುಗ್ಗಲು ಉಂಟಾಗಿ, ಜನರು ಕಕ್ಕಾಬಿಕ್ಕಿ ಓಡಿಹೋಗಿದ್ದಾರೆ. ಕುಸಿದು ಬಿದ್ದ ಮಂಟಪದ ಅಡಿಯಲ್ಲಿ ಸಿಲುಕಿ ಹಲವರು ಗಾಯಗೊಂಡಿದ್ದಾರೆ.

    ಜೊತೆಗೆ ಭಕ್ತರು ಮಂಟಪದಿಂದ ದೂರ ಹೋಗಲು ಪ್ರಯತ್ನಿಸಿದಾಗ ಕೆಲವರು ದೇವಾಲಯದ ಕಲ್ಯಾಣಿಯಲ್ಲಿ ಬಿದ್ದಿದ್ದಾರೆ. ನೂಕುನುಗ್ಗಲಾದ ಹಿನ್ನೆಲೆ ಕೆಲವರು ಕೆಳಗೆ ಬಿದ್ದು, ಕಲ್ತುಳಿತಕ್ಕೆ ಒಳಗಾಗಿದ್ದಾರೆ. ಪರಿಣಾಮ 6 ಮಂದಿ ಭಕ್ತರು ಸಾವನ್ನಪ್ಪಿದ್ದಾರೆ. ಹಲವರು ಗಂಭೀರ ಗಾಯಗೊಂಡಿದ್ದಾರೆ.

    ಗಾಯಾಳುಗಳನ್ನು ಸ್ಥಳೀಯ ಬರಸಥ್ ಆಸ್ಪತ್ರೆ ಹಾಗೂ ಆರ್.ಜಿ ಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

    ಈ ಬಗ್ಗೆ ತಿಳಿದ ಬಳಿಕ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೆ ಮೃತರ ಕುಟುಂಬಗಳಿಗೆ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಜೊತೆಗೆ ಗಂಭೀರ ಗಾಯಗೊಂಡವರಿಗೆ 1 ಲಕ್ಷ ರೂ. ಮತ್ತು ಇತರೆ ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರ ನೀಡುವುದಾಗಿ ಹೇಳಿದ್ದಾರೆ.

  • ಹಣ ಕೇಳಿದ್ದಕ್ಕೆ ಗ್ರಾಮ ಪಂಚಾಯತ್ ಸದಸ್ಯ ಸೇರಿ ನಾಲ್ವರಿಂದ ಗ್ಯಾಂಗ್‍ರೇಪ್

    ಹಣ ಕೇಳಿದ್ದಕ್ಕೆ ಗ್ರಾಮ ಪಂಚಾಯತ್ ಸದಸ್ಯ ಸೇರಿ ನಾಲ್ವರಿಂದ ಗ್ಯಾಂಗ್‍ರೇಪ್

    ಕೋಲ್ಕತ್ತಾ: ಮಹಿಳೆಯೊಬ್ಬಳ ಮೇಲೆ ಗ್ರಾಮ ಪಂಚಾಯತ್ ಸದಸ್ಯ ಸೇರಿದಂತೆ ನಾಲ್ವರು ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಘಟನೆ ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯಲ್ಲಿ ನಡೆದಿದೆ.

    ಈ ಘಟನೆ ಕಳೆದ ವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಂತ್ರಸ್ತೆ ಸರ್ಕಾರದ ಯೋಜನೆಯಡಿ ಮನೆ ಪಡೆಯಲು ಗ್ರಾಮ ಪಂಚಾಯತ್ ಸದಸ್ಯನಿಗೆ ಹಣ ನೀಡಿದ್ದಾಳೆ. ಆರೋಪಿ ಕೂಡ ಮನೆ ಕೊಡಿಸುವುದಾಗಿ ಭರವಸೆ ನೀಡಿದ್ದನು. ಆದರೆ ಗ್ರಾಮ ಪಂಚಾಯತ್ ಸದಸ್ಯ ಮನೆ ಕೊಡಿಸಲು ವಿಳಂಬ ಮಾಡುತ್ತಿದ್ದನು.

    ಮಹಿಳೆಗೆ ಈತ ಮನೆ ಕೊಡಿಸುವುದಿಲ್ಲ ಎಂಬ ಅನುಮಾನ ಬಂದಿದೆ. ತಕ್ಷಣ ತನ್ನ ಹಣವನ್ನು ವಾಪಸ್ ಕೊಡುವಂತೆ ಕೇಳಿದ್ದಾಳೆ. ಪದೆ ಪದೇ ಹಣವನ್ನು ವಾಪಸ್ ಕೊಡುವಂತೆ ಸಂತ್ರಸ್ತೆ ಒತ್ತಡ ಹಾಕಿದ್ದಾಳೆ. ಆಗ ಆರೋಪಿ ಹಣ ಕೊಡುವುದಾಗಿ ಹೇಳಿ ನಿರ್ಜನ ಪ್ರದೇಶದಲ್ಲಿ ಕರೆದಿದ್ದಾನೆ. ಸಂತ್ರಸ್ತೆ ಅಲ್ಲಿಗೆ ಹೋದ ತಕ್ಷಣ ಗ್ರಾಮ ಪಂಚಾಯತ್ ಸದಸ್ಯ ಸೇರಿ ನಾಲ್ವರು ಆಕೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ.

    ಸದ್ಯಕ್ಕೆ ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದೇವೆ. ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರೊಬ್ಬ ಆರೋಪಿಯನ್ನು ಇನ್ನೂ ಬಂಧಿಸಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.