Tag: kolkata

  • ಪಿಂಕ್ ಬಾಲ್ ಟೆಸ್ಟ್: 4, 5ನೇ ದಿನದ ಟಿಕೆಟ್ ಹಣ ವಾಪಸ್ ನೀಡಲು ಮುಂದಾದ ಸಿಎಬಿ

    ಪಿಂಕ್ ಬಾಲ್ ಟೆಸ್ಟ್: 4, 5ನೇ ದಿನದ ಟಿಕೆಟ್ ಹಣ ವಾಪಸ್ ನೀಡಲು ಮುಂದಾದ ಸಿಎಬಿ

    ಕೋಲ್ಕತಾ: ಮೂರೇ ದಿನದೊಳಗೆ ಭಾರತದ ಮೊದಲ ಪಿಂಕ್ ಬಾಲ್ ಟೆಸ್ಟ್ ಮುಗಿದ ನಂತರ ಉಳಿದ 4 ಮತ್ತು 5 ದಿನದ ಅಭಿಮಾನಿಗಳು ಖರೀದಿಸಿದ ಟಿಕೆಟ್ ಹಣವನ್ನು ಹಿಂದಿರುಗಿಸಲು ಕ್ರಿಕೆಟ್ ಅಸೋಸಿಯೇಷನ್ ಆಫ್ ಬಂಗಾಳ (ಸಿಎಬಿ) ನಿರ್ಧರಿಸಿದೆ.

    ಭಾನುವಾರ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಮೊದಲ ಐತಿಹಾಸಿಕ ಹಗಲು-ರಾತ್ರಿ ಟೆಸ್ಟ್ ಪಂದ್ಯವನ್ನು ಭಾರತ ಗೆದ್ದು ಇತಿಹಾಸ ನಿರ್ಮಿಸಿದೆ. ಭಾರತದ ಮೊದಲ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನು ಒಂದು ಇನ್ನಿಂಗ್ಸ್ ಮತ್ತು 46 ರನ್ ಗಳಿಂದ ಗೆಲ್ಲುವ ಮೂಲಕ ಬಾಂಗ್ಲಾದೇಶದ ವಿರುದ್ಧದ 2 ಪಂದ್ಯಗಳ ಸರಣಿಯನ್ನು ಭಾರತ ಕ್ಲೀನ್‍ಸ್ವೀಪ್ ಮಾಡಿಕೊಂಡಿದೆ.

    ಭಾರತದ ಬೌಲರ್ ಗಳ ಮಾರಕ ದಾಳಿ ಮತ್ತು ನಾಯಕ ವಿರಾಟ್ ಕೊಹ್ಲಿ ಅವರ ಅಬ್ಬರದ ಶತಕಕ್ಕೆ ಹೆದರಿದ ಬಾಂಗ್ಲಾ ತನ್ನ ಮೊದಲ ಪಿಂಕ್ ಬಾಲ್ ಪಂದ್ಯದಲ್ಲಿ ಕೇವಲ ಮೂರೇ ದಿನಕ್ಕೆ ಭಾರತಕ್ಕೆ ಶರಣಾಗಿತು. ಇದರಿಂದ ಭಾರತದ ಮೊದಲ ಪಿಂಕ್ ಬಾಲ್ ಪಂದ್ಯವನ್ನು ನೋಡಲು ಐದು ದಿನಗಳವರೆಗೂ ಟಿಕೆಟ್ ಖರೀದಿಸಿದ್ದ ಅಭಿಮಾನಿಗಳು ನಿರಾಶೆಯಾದಂತೆ ಆಗಿತ್ತು. ಆದರೆ ಈ ಉಳಿದ ಎರಡು ದಿನಗಳ ಟಿಕೆಟ್ ಹಣವನ್ನು ಸಿಎಬಿ ವಾಪಸ್ ಮಾಡುತ್ತೇವೆ ಎಂದು ಹೇಳಿದೆ.

    ಮಳೆಯಿಂದ ಪಂದ್ಯ ರದ್ದಾದರೆ. ಬೇರೆ ಯಾವುದೋ ಕಾರಣಕ್ಕೆ ಪಂದ್ಯವನ್ನು ಆಡಿಸದೆ ಇದ್ದಾಗ ಮಾತ್ರ ವಿಶ್ವಾದಾದ್ಯಂತ ಅಭಿಮಾನಿಗಳು ಖರೀದಿಸಿದ್ದ ಟಿಕೆಟ್ ಹಣವನ್ನು ವಾಪಸ್ ನೀಡುವ ಅಭ್ಯಾಸವಿದೆ. ಆದರೆ ಇದೇ ಮೊದಲ ಬಾರಿಗೆ ಟೆಸ್ಟ್ ಪಂದ್ಯವು ಎರಡು ದಿನ ಬೇಗ ಮುಗಿದಿದೆ ಎಂದು ಕ್ರಿಕೆಟ್ ಅಸೋಸಿಯೇಷನ್ ಆಫ್ ಬಂಗಾಳ ಅಭಿಮಾನಿಗಳು ಖರೀದಿಸಿದ್ದ 4 ಮತ್ತು 5 ನೇ ದಿನದ ಟಿಕೆಟ್ ಹಣವನ್ನು ವಾಪಸ್ ನೀಡುತ್ತೇವೆ ಎಂದು ಹೇಳಿರುವುದು ವಿಶೇಷ.

    ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಸಿಎಬಿಯ ಅಡಳಿತ ಮಂಡಳಿ, ಈಗಾಗಲೇ ನಾಲ್ಕು ಮತ್ತು ಐದನೇ ದಿನದ ಟಿಕೆಟ್ ಹಣವನ್ನು ಮರುಪಾವತಿ ಮಾಡುವ ಪ್ರಕ್ರಿಯೆ ಪ್ರಾರಂಭವಾಗಿದೆ. ಈ ಎರಡು ದಿನದ ಟಿಕೆಟ್ ಅನ್ನು ಆನಲೈನ್ ಮೂಲಕ ಬುಕ್ ಮಾಡಿದವರಿಗೆ ನಾವು ಸಂದೇಶ ಕಳುಹಿಸುತ್ತೇವೆ ಎಂದು ಹೇಳಿದೆ. ಇದರ ಜೊತೆ ಐತಿಹಾಸಿಕ ಪಂದ್ಯದಲ್ಲಿ ಭಾಗವಹಿಸಿದ ಕ್ರೀಡಾಭಿಮಾನಿಗಳನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಶ್ಲಾಘಿಸಿದ್ದಾರೆ.

    ವಿಶೇಷವೆಂದರೆ, ಇದು ಭಾರತದಲ್ಲಿ ಆಡಿದ ಅತ್ಯಂತ ಚಿಕ್ಕದಾದ ಟೆಸ್ಟ್ (ಎಸೆದ ಚೆಂಡುಗಳ ಸಂಖ್ಯೆಗೆ ಅನುಗುಣವಾಗಿ). ಯಾಕೆಂದರೆ ಈ ಪಂದ್ಯ ಕೇವಲ 968 ಎಸೆತಗಳಲ್ಲಿ ಪೂರ್ಣಗೊಂಡಿದೆ. ಇದನ್ನು ಬಿಟ್ಟರೆ ಅಫ್ಘಾನಿಸ್ತಾನದ ಚೊಚ್ಚಲ ಟೆಸ್ಟ್ ಅನ್ನು ಭಾರತ 2018 ರಲ್ಲಿ 1028 ಎಸೆತಗಳಲ್ಲಿ ಪೂರ್ಣಗೊಳಿಸಿತ್ತು. ಭಾರತದ ಬಾಂಗ್ಲಾ ವಿರುದ್ಧದ ಪಂದ್ಯಲ್ಲಿ ಒಟ್ಟು 161.2 ಓವರ್ ಆಟವಾಡಿದರೆ. ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ 171.2 ಓವರ್ ಆಟವಾಡಿತ್ತು.

  • ಗಂಗೂಲಿ ಹೊಗಳಿದ ಕೊಹ್ಲಿ ವಿರುದ್ಧ ಕಿಡಿಕಾರಿದ ಗವಾಸ್ಕರ್

    ಗಂಗೂಲಿ ಹೊಗಳಿದ ಕೊಹ್ಲಿ ವಿರುದ್ಧ ಕಿಡಿಕಾರಿದ ಗವಾಸ್ಕರ್

    ಕೋಲ್ಕತ್ತಾ: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರನ್ನು ಹೊಗಳಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅಸಮಾಧಾನ ಹೊರಹಾಕಿದ್ದಾರೆ.

    ಈಡನ್ ಗಾರ್ಡನ್ಸ್ ಮೈದಾನದಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಮೊದಲ ಐತಿಹಾಸಿಕ ಹಗಲು-ರಾತ್ರಿ ಟೆಸ್ಟ್ ಪಂದ್ಯವನ್ನು ಭಾರತ ಗೆದ್ದು ಇತಿಹಾಸ ನಿರ್ಮಿಸಿದೆ. ಭಾರತದ ಮೊದಲ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನು ಒಂದು ಇನ್ನಿಂಗ್ಸ್ ಮತ್ತು 46 ರನ್ ಗಳಿಂದ ಗೆಲ್ಲುವ ಮೂಲಕ ಬಾಂಗ್ಲಾದೇಶದ ವಿರುದ್ಧದ 2 ಪಂದ್ಯಗಳ ಸರಣಿಯನ್ನು ಭಾರತ ಕ್ಲೀನ್‍ಸ್ವೀಪ್ ಮಾಡಿಕೊಂಡಿದೆ. ಈ ಪಂದ್ಯದ ಗೆಲುವಿನ ನಂತರ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರನ್ನು ಹೊಗಳಿದ ಕೊಹ್ಲಿ ವಿರುದ್ಧ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಕಿಡಿಕಾರಿದ್ದಾರೆ.

    ಕೋಲ್ಕತ್ತಾದಲ್ಲಿ ಸರಣಿ ಗೆಲುವಿನ ನಂತರ ಮಾತನಾಡಿದ ವಿರಾಟ್ ಕೊಹ್ಲಿ, ಭಾರತದಲ್ಲಿ ಗೆಲುವಿನ ಸಂಸ್ಕೃತಿ ಹುಟ್ಟಿಹಾಕಿದ್ದಕ್ಕೆ ಧನ್ಯವಾದಗಳು. ಭಾರತ ತಂಡದ ಗೆಲುವು ಆರಂಭವಾಗಿದ್ದು, ದಾದಾ ಕಟ್ಟಿದ ಟೀಂನಿಂದ. ಅಂದು ಅವರು ಆರಂಭ ಮಾಡಿದ್ದನ್ನು ನಾವು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ ಎಂದು ಹೇಳಿ ಸೌರವ್ ಗಂಗೂಲಿ ಅವರನ್ನು ಪ್ರಶಂಸಿಸಿದ್ದರು.

    ಕೊಹ್ಲಿ ಅವರ ಈ ಹೇಳಿಕೆಗೆ ಕೆಂಡಾಮಂಡಲವಾಗಿರುವ ಮಾಜಿ ಆಟಗಾರ ಸುನಿಲ್ ಗವಾಸ್ಕಾರ್, ಮೊದಲ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದ್ದು ಬಹಳ ಸಂತೋಷವಾಗಿದೆ. ಆದರೆ ವಿರಾಟ್ ಕೊಹ್ಲಿ ಅವರು ಭಾರತ, 1970 ಮತ್ತು 1980 ರ ಸಮಯದಲ್ಲಿಯೂ ಗೆಲುವು ಸಾಧಿಸಿತ್ತು ಎಂಬುದನ್ನು ಮರೆತಿದ್ದಾರೆ. ಆ ಸಮಯದಲ್ಲಿ ಕೊಹ್ಲಿ ಹುಟ್ಟಿರಲಿಲ್ಲ ಎಂದು ಕಿಡಿಕಾರಿದ್ದಾರೆ.

    ಭಾರತದ ತಂಡದ ಗೆಲುವಿನ ಪಯಣ ಶುರುವಾಗಿದ್ದು ದಾದಾ ತಂಡದಿಂದ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. ಈಗ ಗಂಗೂಲಿ ಅಧ್ಯಕ್ಷ ಎಂಬುದು ಎಲ್ಲರಿಗೂ ಗೊತ್ತು. ಈ ಕಾರಣಕ್ಕೆ ಕೊಹ್ಲಿ ಈ ಹೇಳಿಕೆಯನ್ನು ನೀಡಿರಬಹುದು. ಆದರೆ ಭಾರತ ಈ ಹಿಂದೆಯೂ ಕೂಡ ವಿಶ್ವಕಪ್ ಗೆದ್ದಿತ್ತು. ಹೊರ ದೇಶಗಳಿಗೆ ಹೋಗಿ ಅಲ್ಲಿ ಪಂದ್ಯಗಳನ್ನು ಗೆದ್ದು ಬಂದಿತ್ತು ಎಂಬುದನ್ನು ಕೊಹ್ಲಿ ಮರೆಯಬಾರದು ಎಂದು ಗವಾಸ್ಕಾರ್ ಹೇಳಿದ್ದಾರೆ.

    ಕೆಲವರು ಭಾರತದ ತಂಡದ ಕ್ರಿಕೆಟ್ ಆರಂಭವಾಗಿದ್ದು 2000 ವರ್ಷದಿಂದ ಎಂಬಂತೆ ಮಾತನಾಡುತ್ತಾರೆ. ನಮ್ಮ ತಂಡ ಅದಕ್ಕೂ ಮುನ್ನ ವಿಶ್ವಕಪ್ ಗೆದ್ದಿತ್ತು. ಭಾರತ 70 ರ ದಶಕದಲ್ಲಿಯೇ ವಿದೇಶಕ್ಕೆ ಹೋಗಿ ಟೂರ್ನಿಯನ್ನು ಆಡಿ ಬಂದಿತ್ತು. ಅಲ್ಲಿ ಸರಣಿಯನ್ನು ಗೆದ್ದು ತಂದಿತ್ತು. ಬಲಿಷ್ಠ ವೆಸ್ಟ್ ಇಂಡೀಸ್ ವಿರುದ್ಧ 1983 ರ ವಿಶ್ವಕಪ್ ಗೆದ್ದಿತ್ತು ಎಂದು ನೆನಪಿಸಿ ಅಸಮಾಧಾನ ಹೊರಹಾಕಿದ್ದಾರೆ.

  • ಹಣದ ಸುರಿಮಳೆ-ಕಂತೆ ಕಂತೆ ಹಣ ನೋಡಿದ ಜನ ಅಚ್ಚರಿ

    ಹಣದ ಸುರಿಮಳೆ-ಕಂತೆ ಕಂತೆ ಹಣ ನೋಡಿದ ಜನ ಅಚ್ಚರಿ

    -2 ಸಾವಿರ, 500 ಮುಖಬೆಲೆಯ ನೋಟುಗಳು
    -ಹಣ ಆರಿಸಿಕೊಳ್ಳಲು ಮುಂದಾದ ಜನ

    ಕೋಲ್ಕತ್ತಾ: ಕಟ್ಟಡವೊಂದರಿಂದ ಹಣದ ಸುರಿಮಳೆಯಾಗಿದ್ದು, ಜನರು ಓಡಿ ಹೋಗಿ 2 ಸಾವಿರ, 500 ಮತ್ತು 100 ರೂ. ಮುಖಬೆಲೆಯ ನೋಟುಗಳನ್ನು ಜೇಬಿಗಿಳಿಸಿಕೊಂಡಿದ್ದಾರೆ. ಕಟ್ಟಡದ ಮೇಲಿಂದ ಕಂತೆ ಕಂತೆ ಹಣ ಎಸೆಯುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಸೆಂಟ್ರಲ್ ಕೋಲ್ಕತ್ತಾದ ನಂಬರ್ 27, ಬ್ಯಾಂಟಿಕ್ ಸ್ಟ್ರೀಟ್ ನಲ್ಲಿ ಈ ಘಟನೆ ನಡೆದಿದೆ. ಬುಧವಾರ ಮಧ್ಯಾಹ್ನ ಕಂದಾಯ ಗುಪ್ತಚರ ಇಲಾಖೆಯ ಅಧಿಕಾರಿಗಳು ಆಮದು ಮತ್ತು ರಫ್ತು ವ್ಯವಹಾರ ನಡೆಸುವ ಕಚೇರಿ (Hoque Merchantile Pvt Ltd) ಮೇಲೆ ದಾಳಿ ನಡೆಸಿದ್ದರು. ಅಧಿಕಾರಿಗಳು ಕಟ್ಟಡದ ಪರಿಶೀಲನೆಗೆ ಮುಂದಾದಾಗ ಅಲ್ಲಿಯವರು ತಮ್ಮಲ್ಲಿದ ಹಣವನ್ನು ಕಿಟಕಿ ಮೂಲಕ ಹೊರಗೆ ಎಸೆದಿದ್ದಾರೆ.

    ಕಟ್ಟಡದಿಂದ ಕಂತೆ ಕಂತೆ ಹಣ ಬೀಳೋದನ್ನು ನೋಡಿ ಜನರು ಅಚ್ಚರಿಗೊಂಡಿದ್ದಾರೆ. ಕೆಲವರು ಓಡೋಡಿ ಹೋಗಿ ಹಣವನ್ನ ಜೇಬಿಗೆ ಇಳಿಸಿಕೊಂಡಿದ್ದಾರೆ. ಕೂಡಲೇ ಅಧಿಕಾರಿಗಳು ಹೊರ ಎಸೆದ ಹಣವನ್ನು ವಶಕ್ಕೆ ಪಡೆದಿದ್ದಾರೆ. ಕಟ್ಟಡದ ಪರಿಶೀಲನೆ ಮುಂದುವರಿದಿದ್ದು, ದಾಳಿಗೆ ಸಂಬಂಧಿಸಿದ ಮಾಹಿತಿ ನೀಡಲು ಅಧಿಕಾರಿಗಳು ಹಿಂದೇಟು ಹಾಕಿದ್ದಾರೆ.

  • ಮದುಮಗಳಂತೆ ಸಿಂಗಾರಗೊಂಡ ಈಡನ್ ಗಾರ್ಡನ್ಸ್ – ವಿಶೇಷ ಟಾಕ್ ಶೋ, ಕ್ರೀಡಾ ತಾರೆಯರಿಗೆ ಸನ್ಮಾನ

    ಮದುಮಗಳಂತೆ ಸಿಂಗಾರಗೊಂಡ ಈಡನ್ ಗಾರ್ಡನ್ಸ್ – ವಿಶೇಷ ಟಾಕ್ ಶೋ, ಕ್ರೀಡಾ ತಾರೆಯರಿಗೆ ಸನ್ಮಾನ

    ಕೋಲ್ಕತ್ತಾ: ಭಾರತದಲ್ಲಿ ಮೊದಲ ಬಾರಿಗೆ ಹಗಲು-ರಾತ್ರಿ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಈ ಐತಿಹಾಸಿಕ ಪಂದ್ಯಕ್ಕೆ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನ ಮದುಮಗಳಂತೆ ಸಿಂಗಾರಗೊಂಡಿದೆ.

    ಸೌರವ್ ಗಂಗೂಲಿ ಅವರು ಬಿಸಿಸಿಐನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮೇಲೆ ಭಾರತದಲ್ಲಿ ಮೊದಲ ಬಾರಿಗೆ ಹಗಲು-ರಾತ್ರಿ ಟೆಸ್ಟ್ ಪಂದ್ಯವನ್ನು ಆಡಲು ಅನುಮತಿ ನೀಡಿದ್ದಾರೆ. ನವೆಂಬರ್ 22 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಭಾರತ ಮತ್ತು ಬಾಂಗ್ಲಾದೇಶ ತಂಡಗಳೆರಡು ಮೊದಲ ಬಾರಿಗೆ ಪಿಂಕ್ ಬಾಲ್‍ನಲ್ಲಿ ಟೆಸ್ಟ್ ಪಂದ್ಯವನ್ನು ಆಡಲು ಸಿದ್ಧವಾಗಿವೆ.

    ಈ ಐತಿಹಾಸಿಕ ಪಂದ್ಯಕ್ಕೆ ಮೈದಾನವನ್ನು ಅಸೋಸಿಯೇಷನ್ ಆಫ್ ಬಂಗಾಳ (ಸಿಎಬಿ) ಸಂಪೂರ್ಣ ಸಿದ್ಧಗೊಳಿಸಿದ್ದು, ಬಣ್ಣ ಬಣ್ಣದ ಲೈಟುಗಳಿಂದ ಅಲಂಕಾರ ಮಾಡಲಾಗಿದೆ. ಪಿಂಕ್ ಬಾಲ್ ಪಂದ್ಯಕ್ಕೆ ಮದುಮಗಳಂತೆ ಸಿಂಗಾರಗೊಂಡಿರುವ ಈಡನ್ ಗಾರ್ಡನ್ಸ್ ಮೈದಾನದ ವಿಡಿಯೋವನ್ನು ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಬಿಸಿಸಿಐ ಪಿಂಕ್ ಬಾಲ್ ಪಂದ್ಯಕ್ಕೆ ನಾವು ಸಿದ್ಧ ಎಂದು ಬರೆದುಕೊಂಡಿದೆ.

    ಕೋಲ್ಕತಾದಲ್ಲಿ ನಡೆಯುವ ಈ ಪಂದ್ಯಕ್ಕೆ ಕ್ರಿಕೆಟ್ ಅಭಿಮಾನಿಗಳು ಸಿದ್ಧವಾಗಿದ್ದು, ಭಾರತದಲ್ಲಿ ಮೊದಲ ಬಾರಿಗೆ ನಡೆಯುವ ಹಗಲು ಮತ್ತು ರಾತ್ರಿ ಟೆಸ್ಟ್ ಪಂದ್ಯವನ್ನು ನೋಡಲು ಮುಂಗಡವಾಗಿಯೇ ಟೆಕೆಟ್ ಬುಕ್ ಮಾಡಿದ್ದಾರೆ. ಈ ಪಂದ್ಯದ ನಾಲ್ಕು ದಿನದ ಟೆಕೆಟ್ ಆಗಾಲೇ ಸೋಲ್ಡ್ ಔಟ್ ಆಗಿವೆ ಎಂದು ಬಿಸಿಸಿಐ ಅಧಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.

    ಶುಕ್ರವಾರ ನಡೆಯುವ ಪಂದ್ಯವನ್ನು ಟಾಸ್‍ಗೂ ಮುನ್ನ ಭಾರತೀಯ ಸೇನೆಯ ಪ್ಯಾರಾಟ್ರೂಪರ್ ಗಳು ಮೈದಾನದ ಮೇಲೆ ಹಾರಿ ನಂತರ ಎರಡು ತಂಡದ ನಾಯಕರಿಗೆ ಪಿಂಕ್ ಬಾಲ್‍ನ್ನು ಹಸ್ತಾಂತರ ಮಾಡುವ ಮೂಲಕ ಆರಂಭ ಮಾಡಲು ಯೋಚನೆ ಮಾಡಲಾಗಿದೆ. ಇದಾದ ನಂತರದಲ್ಲಿ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಈಡನ್ ಮೈದಾನದ ಬೆಲ್ ಹೊಡೆಯುವ ಪಂದ್ಯಕ್ಕೆ ಅಧಿಕೃತ ಆರಂಭ ನೀಡಲಿದ್ದಾರೆ.

    ಪಂದ್ಯದ ಚಹಾ ವಿರಾಮದ ವೇಳೆ ಮಾಜಿ ನಾಯಕರನ್ನು ಓಪನ್ ವಾಹನದಲ್ಲಿ ಕುರಿಸಿ ಮೈದಾನದ ಸುತ್ತ ಮೆರವಣಿಗೆ ಮಾಡಲಾಗುತ್ತದೆ. ನಂತರ 40 ನಿಮಿಷಗಳ ವಿರಾಮದ ಸಮಯದಲ್ಲಿ, ‘ಫ್ಯಾಬುಲಸ್ ಫೈವ್’ ಎಂಬ ಹೆಸರಿನಲ್ಲಿ ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಮತ್ತು ವಿವಿಎಸ್ ಲಕ್ಷ್ಮಣ್ ಅವರ ಒಳಗೊಂಡ ಟಾಕ್ ಶೋ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಅವರು 2001ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಟೆಸ್ಟ್ ಸರಣಿಯ ಗೆಲುವಿನ ಬಗ್ಗೆ ಮಾತನಾಡಲಿದ್ದಾರೆ.

    ಇದಾದ ನಂತರ ಸಚಿನ್. 2008ರ ಒಲಿಂಪಿಕ್ಸ್ ನಲ್ಲಿ ಶೂಟಿಂಗ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಅಭಿನವ್ ಬಿಂದ್ರಾ, ಟೆನಿಸ್ ತಾರೆ ಸಾನಿಯಾ ಮಿರ್ಜಾ, ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಪಿ.ವಿ ಸಿಂಧು ಮತ್ತು ಆರು ಬಾರಿ ಬಾಕ್ಸಿಂಗ್ ವಿಶ್ವ ಚಾಂಪಿಯನ್ ಗೆದ್ದ ಎಂಸಿ ಮೇರಿ ಕೋಮ್ ಸೇರಿದಂತೆ ಭಾರತೀಯ ಕ್ರೀಡಾ ತಾರೆಗಳನ್ನು ಸಿಎಬಿ ಸನ್ಮಾನಿಸಲಿದೆ. ವಿಶೇಷವಾಗಿ ವಿನ್ಯಾಸಗೊಳಿಸಲಾದ ಮೆಮೆಂಟೋಗಳನ್ನು ಗಣ್ಯರಿಗೆ ನೀಡಲಾಗುವುದು ಮತ್ತು ಅವರನ್ನು ಕ್ರೀಡಾಂಗಣದ ಸುತ್ತ ಗಾಲ್ಫ್ ಗಾಡಿಗಳಲ್ಲಿ ಮೆರವಣಿಗೆ ಮಾಡಲಾಗುವುದು ಎಂದು ಸಿಎಬಿ ಕಾರ್ಯದರ್ಶಿ ಅವಿಶೇಕ್ ದಾಲ್ಮಿಯಾ ಹೇಳಿದ್ದಾರೆ.

    ಈ ಕಾರ್ಯಕ್ರಮಗಳ ಜೊತೆಗೆ 2000 ದಲ್ಲಿ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾಗವಹಿಸಿದ ಬಾಂಗ್ಲಾ ಆಟಗಾರರನ್ನು ಸನ್ಮಾನಿಸಲು ಸಿಎಬಿ ತೀರ್ಮಾನ ಮಾಡಿದೆ. ಈ ಪಂದ್ಯದಲ್ಲಿ ಸೌರವ್ ಗಂಗೂಲಿಯವರು ಟೆಸ್ಟ್ ನಾಯಕನಾಗಿ ಪಾದಾರ್ಪಣೆ ಮಾಡಿದ್ದರು.

  • ಸಂಸದೆ ನುಸ್ರತ್ ಜಹಾನ್ ಆಸ್ಪತ್ರೆಗೆ ದಾಖಲು

    ಸಂಸದೆ ನುಸ್ರತ್ ಜಹಾನ್ ಆಸ್ಪತ್ರೆಗೆ ದಾಖಲು

    ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ನುಸ್ರತ್ ಜಹಾನ್ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಭಾನುವಾರ ನುಸ್ರತ್ ಅವರ ಆರೋಗ್ಯದಲ್ಲಿ ಏಕಾಏಕಿ ಏರುಪೇರು ಕಂಡಿದೆ. ಅಲ್ಲದೆ ಅವರಿಗೆ ಉಸಿರಾಡಲು ಕಷ್ಟವಾಗುತ್ತಿದ್ದರಿಂದ ಅವರನ್ನು ಕೋಲ್ಕತ್ತಾದ ಆಸ್ಪತ್ರೆಗೆ ದಾಖಲಿಸಲಾಯಿತು. ನುಸ್ರತ್ ಈಗ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

    ಕುಟುಂಬಸ್ಥರ ಪ್ರಕಾರ, ನುಸ್ರತ್ ಅವರನ್ನು ಭಾನುವಾರ ಬೆಳಗ್ಗೆ ಸುಮಾರು 9.30ಕ್ಕೆ ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿದ್ದರು. ಈ ಮೊದಲು ನುಸ್ರತ್ ಅಸ್ತಮಾದಿಂದ ಬಳಲುತ್ತಿದ್ದರು. ಹಾಗಾಗಿ ಅವರಿಗೆ ಉಸಿರಾಡಲು ಕಷ್ಟವಾಯಿತು ಎಂದು ಕುಟುಂಬಸ್ಥರು ಹೇಳಿದ್ದಾರೆ. ಆಸ್ಪತ್ರೆಗೆ ದಾಖಲಾದ ಕಾರಣ ನುಸ್ರತ್ ಅವರು ಸಂಸತ್‍ನಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಭಾಗವಹಿಸುತ್ತಿಲ್ಲ.

    ನುಸ್ರತ್ ಜಹಾನ್ ಇದೇ ವರ್ಷ ಜೂನ್ 19ರಂದು ಉದ್ಯಮಿ ನಿಖಿಲ್ ಜೈನ್ ಜೊತೆ ಟರ್ಕಿಯ ಬೋದ್ರಮ್‍ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಬಗ್ಗೆ ನುಸ್ರತ್ ತಮ್ಮ ಟ್ವಿಟ್ಟರಿನಲ್ಲಿ ಮದುವೆ ಫೋಟೋ ಹಾಕಿ ಅಧಿಕೃತವಾಗಿ ಎಲ್ಲರಿಗೂ ತಿಳಿಸಿದ್ದರು. ಜುಲೈ 4ರಂದು ನುಸ್ರತ್ ಹಾಗೂ ನಿಖಿಲ್ ಜೈನ್ ಕೋಲ್ಕತ್ತಾದಲ್ಲಿ ಆರತಕ್ಷತೆ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮಕ್ಕೆ ಬೆಂಗಾಲಿ ಕಲಾವಿದರು ಹಾಗೂ ರಾಜಕೀಯ ನಾಯಕರು ಆಗಮಿಸಿದ್ದರು.

  • ಕೋಲ್ಕತ್ತಾ ಪಿಂಕ್ ಟೆಸ್ಟ್ ಟಿಕೆಟ್ ಸೋಲ್ಡೌಟ್- ಸಂತಸದಲ್ಲಿ ಗಂಗೂಲಿ

    ಕೋಲ್ಕತ್ತಾ ಪಿಂಕ್ ಟೆಸ್ಟ್ ಟಿಕೆಟ್ ಸೋಲ್ಡೌಟ್- ಸಂತಸದಲ್ಲಿ ಗಂಗೂಲಿ

    ಕೋಲ್ಕತ್ತಾ: ಭಾರತದಲ್ಲಿ ಮೊದಲ ಬಾರಿಗೆ ಆಯೋಜಿಸಲಾಗಿರುವ ಪಿಂಕ್ ಬಾಲ್ ಡೇ-ನೈಟ್ ಟೆಸ್ಟ್ ಪಂದ್ಯದ ಮೊದಲ 3 ದಿನಗಳ ಟಿಕೆಟ್ ಮಾರಾಟವಾಗಿದ್ದು, ಈ ಕುರಿತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸಂತಸ ವ್ಯಕ್ತಪಡಿಸಿದ್ದಾರೆ.

    ಆನ್‍ಲೈನ್‍ನಲ್ಲಿ ಪಂದ್ಯದ ಮಾರಾಟಕ್ಕಿಟ್ಟ ಟಿಕೆಟ್‍ಗಳು ಖಾಲಿಯಾಗಿದ್ದು, ಟೆಸ್ಟ್ ಪಂದ್ಯದ ಎಲ್ಲಾ ಟಿಕೆಟ್‍ಗಳು ಮಾರಾಟವಾಗಿರುವುದರಿಂದ ಗಂಗೂಲಿ ಸಂತಸ ವ್ಯಕ್ತಪಡಿಸಿದ್ದಾರೆ. ಸದ್ಯ ಕೋಟಾ ಟಿಕೆಟ್‍ಗಳು ಮಾತ್ರವೇ ಮಾರಾಟಕ್ಕಿದ್ದು. ಅವು ಕೂಡ ವೇಗವಾಗಿ ಮಾರಾಟವಾಗುತ್ತಿದೆ ಎಂದು ಗಂಗೂಲಿ ತಿಳಿಸಿದ್ದಾರೆ. ಇದನ್ನು ಓದಿ: ಐತಿಹಾಸಿಕ ಟೆಸ್ಟ್ ಪಂದ್ಯಕ್ಕೆ ಸಾಕ್ಷಿಯಾಗಲಿದ್ದಾರೆ ಅಮಿತ್ ಶಾ

    https://twitter.com/BCCI/status/1194237138981642242

    ನ.22 ರಿಂದ 26ರವರೆಗೂ ಕೋಲ್ಕತ್ತಾ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಟೆಸ್ಟ್ ಪಂದ್ಯ ನಡೆಯಲಿದ್ದು, ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾದ ಬಳಿಕ ಬಾಂಗ್ಲಾ ಕ್ರಿಕೆಟ್ ಮಂಡಳಿಯನ್ನು ಒಪ್ಪಿಸಿ ಪಂದ್ಯವನ್ನು ಆಯೋಜಿಸುತ್ತಿದ್ದಾರೆ. ಇದಕ್ಕೂ ಮುನ್ನವೇ ಡೇ-ನೈಟ್ ಪಂದ್ಯ ಆಯೋಜಿಸುವ ಅವಕಾಶವಿದ್ದರೂ ಬಿಸಿಸಿಐ ಇದಕ್ಕೆ ಸಮ್ಮತಿ ಸೂಚಿಸಿರಲಿಲ್ಲ. ಸದ್ಯ ಗಂಗೂಲಿ ಅವರ ಸಮ್ಮತಿಯ ಹಿನ್ನೆಲೆಯಲ್ಲಿ ಡೇ-ನೈಟ್ ಪಂದ್ಯ ನಡೆಯುತ್ತಿರುವ ಕಾರಣ ಕ್ರಿಕೆಟ್ ಅಭಿಮಾನಿಗಳು ಐತಿಹಾಸಿಕ ಪಂದ್ಯಕ್ಕೆ ಸಾಕ್ಷಿಯಾಗಲು ಟಿಕೆಟ್ ಖರೀದಿ ಮಾಡಿದ್ದಾರೆ. ಇದನ್ನು ಓದಿ: ಮೊದಲ ಡೇ ನೈಟ್ ಟೆಸ್ಟ್ – ಧೋನಿ ಸೇರಿ ಮಾಜಿ ನಾಯಕರ ಕಾಮೆಂಟ್ರಿ

  • ಬೀಫ್ ಸೇವಿಸುವವರಿಗೆ ಹಾಲಿನ ಮಹತ್ವ ತಿಳಿಯುವುದಿಲ್ಲ- ದಿಲೀಪ್ ಘೋಷ್

    ಬೀಫ್ ಸೇವಿಸುವವರಿಗೆ ಹಾಲಿನ ಮಹತ್ವ ತಿಳಿಯುವುದಿಲ್ಲ- ದಿಲೀಪ್ ಘೋಷ್

    ಕೋಲ್ಕತ್ತಾ: ಭಾರತೀಯ ತಳಿಯ ಹಸುಗಳು ವಿಶೇಷ ಗುಣಗಳನ್ನು ಹೊಂದಿದ್ದು, ಹಾಲಿನಲ್ಲಿ ಚಿನ್ನ ಬೆರೆತಿರುತ್ತದೆ ಎಂದು ಹೇಳಿದ್ದ ಬಿಜೆಪಿ ಮುಖಂಡ ದಿಲೀಪ್ ಘೋಷ್ ಸದ್ಯ ಮತ್ತೊಂದು ಹೇಳಿಕೆಯನ್ನು ನೀಡಿದ್ದು, ಗೋ ಮಾಂಸ (ಬೀಫ್) ಸೇವಿಸುವವರಿಗೆ ಹಾಲಿನ ಮಹತ್ವ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.

    ಗೋವಿನ ಹಾಲಿನಲ್ಲಿ ಚಿನ್ನ ಬೆರೆತಿದೆ ಎಂಬ ಹೇಳಿಕೆಗೆ ಭಾರೀ ವಿಮರ್ಶೆಗಳು ಕೇಳಿಬಂದ ಹಿನ್ನೆಲೆಯಲ್ಲಿ ದಿಲೀಪ್ ಅವರು ಪ್ರತಿಕ್ರಿಯೆ ನೀಡಿದ್ದು, ನಾನು ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ. ನನ್ನ ವಿರುದ್ಧ ಟೀಕೆ ಮಾಡುವವರು ನಾನು ಹೇಳಿದ್ದು ಸುಳ್ಳು ಎಂದು ಸಾಬೀತು ಪಡಿಸಲಿ ಎಂದು ಸವಾಲು ಎಸೆದರು.

    ಈಗಾಗಲೇ ಯುಎಸ್‍ಎ, ಪೋಲ್ಯಾಂಡ್ ದೇಶಗಳಲ್ಲಿ ಹಸುವಿನ ಹಾಲಿನ ಬಣ್ಣದ ಕಾರಣ ತಿಳಿಯಲು ಹಲವು ಸಂಶೋಧನೆಗಳನ್ನು ನಡೆಸಿದ್ದಾರೆ. ಈ ಸಂಶೋಧನೆಗಳಲ್ಲಿ ಹಾಲಿಗೆ ಹಳದಿ ಬಣ್ಣ ಬರಲು, ಆದರಲ್ಲಿ ಹೆಚ್ಚಿನ ಪ್ರಮಾಣದ ಚಿನ್ನದ ಅಂಶವಿರುವುದೇ ಕಾರಣ ಎಂಬುವುದು ತಿಳಿದು ಬಂದಿದೆ ಎಂದು ತಮ್ಮ ವಾದಕ್ಕೆ ಸಮರ್ಥನೆಯನ್ನು ನೀಡಿದರು.

    ಕೆಲವರು ನಮ್ಮ ಸಂಸ್ಕೃತಿ, ಸಂಪ್ರಾದಾಯಗಳನ್ನು ಆಕ್ಷೇಪಿಸಲು ಇಷ್ಟಪಡುತ್ತಾರೆ. ಆದರೆ ನನ್ನ ಹೇಳಿಕೆಯನ್ನು ತಪ್ಪು ಎಂದು ಸಾಬೀತು ಪಡಿಸುವ ಚಿಂತನೆ ಮಾತ್ರ ಇಲ್ಲ. ಯಾರು ಈ ಬಗ್ಗೆ ಸಂಶೋಧನೆ ಮಾಡಲು ಬಯಸುವುದಿಲ್ಲ ಎಂದು ಟೀಕೆ ಮಾಡಿದ್ದಾರೆ. ಅಲ್ಲದೇ ಗೋ ಮಾಂಸ ಸೇವನೆ ಮಾಡುವವರಿಂದ ಹೇಗೆ ನೀವು ಹಾಲಿನ ಮಹತ್ವ ಬಗ್ಗೆ ಅರಿಯಲು ಪ್ರಯತ್ನಿಸುತ್ತಿರಿ ಎಂದು ಪ್ರಶ್ನಿಸಿದ್ದಾರೆ.

    ಈ ಹಿಂದೆಯೂ ಗೋ ಮಾಂಸ ಸೇವನೆ ಮಾಡುವವರ ವಿರುದ್ಧ ಟೀಕೆ ಮಾಡಿದ್ದ ಘೋಷ್, ಗೋವು ನಮ್ಮ ತಾಯಿ. ನಮ್ಮ ತಾಯಿಯೊಂದಿಗೆ ಯಾರದರು ಅಸಭ್ಯವಾಗಿ ನಡೆದುಕೊಂಡರೆ ಸುಮ್ಮನೆ ಇರುವುದಿಲ್ಲ. ಅವರಿಗೆ ಯಾವ ರೀತಿ ಪಾಠ ಕಲಿಸಬೇಕೋ ಹಾಗೆ ಕಲಿಸುತ್ತೇವೆ. ಪವಿತ್ರ ಭೂಮಿಯಲ್ಲಿ ಗೋವು ಹತ್ಯೆ ಹಾಗೂ ಗೋ ಮಾಂಸ ಸೇವಿಸುವುದು ಅಪರಾಧ ಎಂದು ಹೇಳಿದ್ದರು.

  • ಫೋನ್ ಆರ್ಡರ್ ಮಾಡಿದ್ದ ಬಿಜೆಪಿ ಎಂಪಿಗೆ ಬಂದಿದ್ದು ಎರಡು ಕಲ್ಲು

    ಫೋನ್ ಆರ್ಡರ್ ಮಾಡಿದ್ದ ಬಿಜೆಪಿ ಎಂಪಿಗೆ ಬಂದಿದ್ದು ಎರಡು ಕಲ್ಲು

    ಕೋಲ್ಕತ್ತಾ: ದೀಪಾವಳಿ ಹಬ್ಬದ ಪ್ರಯುಕ್ತ ಫೋನ್ ಆರ್ಡರ್ ಮಾಡಿದ ಸಂಸದರೊಬ್ಬರಿಗೆ ಆನ್‍ಲೈನ್ ಸಂಸ್ಥೆ ಎರಡು ಕಲ್ಲನ್ನು ಕಳುಹಿಸಿದೆ.

    ಪಶ್ಚಿಮ ಬಂಗಾಳದ ಮಾಲ್ಡಾ ಕ್ಷೇತ್ರದ ಬಿಜೆಪಿ ಸಂಸದ ಖಾಗನ್ ಮುರ್ಮು ಅವರು ದೀಪಾವಳಿ ಹಬ್ಬಕ್ಕೆಂದು ಇ-ಕಾಮರ್ಸ್ ಎಂಬ ಆನ್‍ಲೈನ್ ಕಂಪನಿಯ ಮೂಲಕ ಸ್ಯಾಮ್ಸಂಗ್ ಕಂಪನಿಯ ಮೊಬೈಲ್ ಫೋನ್ ಅನ್ನು ಆರ್ಡರ್ ಮಾಡಿದ್ದಾರೆ. ಆದರೆ ಫೋನಿನ ಬದಲು ಅವರಿಗೆ ಎರಡು ಕಲ್ಲನ್ನು ಪಾರ್ಸೆಲ್ ಮಾಡಲಾಗಿದೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಮುರ್ಮು ಅವರು ಸೋಮವಾರ ಬೆಳಗ್ಗೆ ಪಾರ್ಸೆಲ್ ಬಂದಿದೆ. ಆಗ ನಾನು ಮನೆಯಲ್ಲಿ ಇರಲಿಲ್ಲ. ನನ್ನ ಹೆಂಡತಿ ಪಾರ್ಸೆಲ್ ಪಡೆದು 11,999 ರೂ ಕ್ಯಾಶ್ ನೀಡಿದ್ದಾಳೆ. ನಂತರ ನಾನು ಮನೆಗೆ ಬಂದು ಬಾಕ್ಸ್ ತರೆದು ನೋಡಿದಾಗ ಅಲ್ಲಿ ಎರಡು ಕಲ್ಲುಗಳು ಮಾತ್ರ ಇದ್ದವು. ವಿಶೇಷವೆಂದರೆ ನಾವು ಸ್ಯಾಮ್ಸಂಗ್ ಮೊಬೈಲ್ ಬುಕ್ ಮಾಡಿದರೆ ಅವರು ರೆಡ್‍ಮಿ ಮೊಬೈಲ್ ಬಾಕ್ಸ್ ನಲ್ಲಿ ಕಲ್ಲನ್ನು ಪಾರ್ಸೆಲ್ ಮಾಡಿದ್ದಾರೆ ಎಂದು ಹೇಳಿದ್ದಾರೆ.

    ನಾನು ಯಾವತ್ತು ಆನ್‍ಲೈನ್ ಅಲ್ಲಿ ವ್ಯಾಪಾರ ಮಾಡಿದ ವ್ಯಕ್ತಿ ಅಲ್ಲ. ಆದರೆ ಇದನ್ನು ನನ್ನ ಮಗ ನನಗಾಗಿ ಬುಕ್ ಮಾಡಿದ್ದ. ಆದರೆ ನಾವು ತೆಗೆಯುವ ಮುಂಚೆಯೇ ಯಾರೋ ಬಾಕ್ಸ್ ಓಪನ್ ಮಾಡಿದ್ದಾರೆ. ಬೇಕೆಂದೆ ಎರಡು ಕಲ್ಲು ಇಟ್ಟುಕೊಟ್ಟಿದ್ದಾರೆ. ಈ ಸಂಬಂಧ ನಾನು ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಈ ವಿಷಯವನ್ನು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವರಿಗೆ ವರದಿ ಮಾಡುತ್ತೇನೆ ಎಂದು ಹೇಳಿದ್ದಾರೆ.

    ಈ ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಮಾಲ್ಡಾ ಠಾಣೆಯ ಪೊಲೀಸ್ ಅಧಿಕಾರಿ ಅಲೋಕ್ ರಾಜೋರಿಯಾ, ಇದು ಸಂಸ್ಥೆಯಿಂದ ಆಗಿರುವ ಸಮಸ್ಯೆ ಅಲ್ಲ. ಇದರ ಮಧ್ಯೆ ಯಾರೋ ಬೇಕಂತಲೇ ಹೀಗೆ ಮಾಡಿದ್ದಾರೆ. ನಾವು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

  • ಹೂಕುಂಡ ಸ್ಫೋಟ – 5 ವರ್ಷದ ಬಾಲಕ ದುರ್ಮರಣ

    ಹೂಕುಂಡ ಸ್ಫೋಟ – 5 ವರ್ಷದ ಬಾಲಕ ದುರ್ಮರಣ

    ಕೋಲ್ಕತ್ತಾ: ದೀಪಾವಳಿ ಸಮಯದಲ್ಲಿ ಮಕ್ಕಳಿಗೆ ಪಟಾಕಿ ಸಿಡಿಸುವುದು ಎಂದರೆ ಅಚ್ಚುಮೆಚ್ಚು. ಆದರೆ ಕೋಲ್ಕತ್ತಾದಲ್ಲಿ ಈ ಪಟಾಕಿಯೇ ಐದು ವರ್ಷದ ಮಗುವನ್ನು ಬಲಿಪಡೆದಿದೆ.

    ಕೋಲ್ಕಾತ್ತಾದ ನಗರದ ದಕ್ಷಿಣ ಭಾಗದಲ್ಲಿರುವ ಹರಿದೇವನಪುರ ಎಂಬ ಪ್ರದೇಶದಲ್ಲಿ ಮನೆಯವರ ಜೊತೆ ಪಟಾಕಿ ಸಿಡಿಸುತ್ತಿದ್ದ 5 ವರ್ಷದ ಅದಿದಾಸ್ ಹೂಕುಂಡ ಸ್ಫೋಟಗೊಂಡ ಕಾರಣ ಭಾನುವಾರ ಸಂಜೆ ಸಾವನ್ನಪ್ಪಿದ್ದಾನೆ.

    ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿಯೊಬ್ಬರು, ಬಾಲಕ ಅದಿ ದೀಪವಾಳಿ ಹಬ್ಬದ ಪ್ರಯಕ್ತ ಭಾನುವಾರ ಸಂಜೆ ಮನೆಯವರ ಜೊತೆ ಸೇರಿಕೊಂಡು ಪಟಾಕಿ ಹೊಡೆಯುತ್ತಿದ್ದ. ಈ ವೇಳೆ ಪಕ್ಕದಲ್ಲಿ ಯಾರೋ ಹೊಡೆದು ಇಟ್ಟಿದ್ದ ಹೂಕುಂಡ ಬ್ಲಾಸ್ಟ್ ಆಗಿ ಬಾಲಕನ ಕುತ್ತಿಗೆಗೆ ತೀವ್ರವಾಗಿ ಗಾಯವಾಗಿತ್ತು ಎಂದು ಹೇಳಿದ್ದಾರೆ.

    ಕುತ್ತಿಗೆಯ ಭಾಗಕ್ಕೆ ಪಟಾಕಿಯ ತುಣುಕುಗಳು ತಗುಲಿದ ಕಾರಣ ರಕ್ತಸ್ರಾವವಾಗಿ ಬಾಲಕ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ನಂತರ ಬಾಲಕನನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ವೈದ್ಯರು ಬಾಲಕ ಮೃತಪಟ್ಟಿದ್ದಾನೆ ಎಂದು ಹೇಳಿದ್ದಾರೆ. ಈ ಸಂಬಂಧ ಹರಿದೇವನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಉಸಿರಾಟದ ತಂತ್ರಗಾರಿಕೆ ಕಲಿಸ್ತೀನಿ ಎಂದು ರೇಪ್‍ಗೈದ ಖ್ಯಾತ ಕಲಾವಿದ

    ಉಸಿರಾಟದ ತಂತ್ರಗಾರಿಕೆ ಕಲಿಸ್ತೀನಿ ಎಂದು ರೇಪ್‍ಗೈದ ಖ್ಯಾತ ಕಲಾವಿದ

    ಕೋಲ್ಕತ್ತಾ: ನಾಟಕದಲ್ಲಿ ಉಸಿರಾಟದ ತಂತ್ರಗಾರಿಕೆಯನ್ನು ಕಲಿಸುತ್ತೇನೆ ಎಂದು ಕಲಾವಿದೆಯನ್ನು ಅತ್ಯಾಚಾರಗೈದ ಪಶ್ಚಿಮ ಬಂಗಾಳದ ಖ್ಯಾತ ಚಲನಚಿತ್ರಕಾರ, ರಂಗಭೂಮಿ ಕಲಾವಿದ ಸುದೀಪ್ತೊ ಚಟರ್ಜಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಘಟನೆ ಬಳಿಕ ಚಟರ್ಜಿ ಹಲವು ಬಾರಿ ಸಂತ್ರಸ್ತೆಯನ್ನು ಅತ್ಯಾಚಾರ ನಡೆಸಿದ್ದಾನೆ. ಬಂಧನದ ಬಳಿಕ ಚಟರ್ಜಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ. ನ್ಯಾಯಾಲಯ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ನೀಡಿದ್ದು, ಅಧಿಕಾರಿಗಳು ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ.

    ಈ ವರ್ಷ ಮಾರ್ಚ್ ನಲ್ಲಿ ಘಟನೆ ನಡೆದಿದ್ದು, ಅಕ್ಟೋಬರ್ 17ರಂದು ಸಂತ್ರಸ್ತೆ ತನಗಾದ ಅನ್ಯಾಯವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಾಗ ಪ್ರಕರಣ ಬೆಳಕಿಗೆ ಬಂದಿದೆ. ಶುಕ್ರವಾರ ಸಂತ್ರಸ್ತೆ ಫೂಲ್‍ಭಾಗ್ ಪೊಲೀಸ್ ಠಾಣೆಗೆ ತೆರಳಿ ಚಟರ್ಜಿ ವಿರುದ್ಧ ದೂರು ಸಹ ದಾಖಲಿಸಿದ್ದಾರೆ. ಇತ್ತ ಭಲೆಗಟ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರು ಆರೋಪಿ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಎಫ್‍ಐಆರ್ ದಾಖಲಾಗಿದೆ. ಶನಿವಾರ ಫೂಲ್‍ಭಾಗ್ ಠಾಣೆಯ ಪೊಲೀಸರು ಚಟರ್ಜಿಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಲಯ ಆರೋಪಿಯನ್ನು ಎರಡು ದಿನ ಪೊಲೀಸ್ ಕಸ್ಟಡಿಗೆ ನೀಡಿದೆ.

    ಚಟರ್ಜಿ ನನಗೆ ನಟನಾ ತರಬೇತಿ ನೀಡುತ್ತಿದ್ದರು. ಒಂದು ದಿನ ತರಬೇತಿಗಾಗಿ ಮನೆಗೆ ಕರೆಸಿಕೊಂಡಿದ್ದರು. ಅಂದು ನಾಟಕದಲ್ಲಿ ಉಸಿರಾಟದ ತಂತ್ರಗಾರಿಕೆ ಹೇಳಿ ಕೊಡುತ್ತೇನೆಂದು ಅತ್ಯಾಚಾರ ಮಾಡಿದರು. ಇದೇ ರೀತಿ ಚಟರ್ಜಿ ಹಲವು ವಿದ್ಯಾರ್ಥಿನಿಯರನ್ನು ಅತ್ಯಾಚಾರ ಗೈದಿದ್ದಾನೆ. ತರಬೇತಿ ವೇಳೆಯೂ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಸಂತ್ರಸ್ತೆ ಫೇಸ್‍ಬುಕ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.