Tag: kolkata

  • ಗೆಳೆಯನಿಂದ ಅಶ್ಲೀಲ ಫೋಟೋ ಪೋಸ್ಟ್ – ಯುವತಿ ಆತ್ಮಹತ್ಯೆ

    ಗೆಳೆಯನಿಂದ ಅಶ್ಲೀಲ ಫೋಟೋ ಪೋಸ್ಟ್ – ಯುವತಿ ಆತ್ಮಹತ್ಯೆ

    -6 ತಿಂಗಳಲ್ಲಿ ಸ್ನೇಹ, ಬ್ರೇಕಪ್

    ಕೋಲ್ಕತ್ತಾ: ಮಾಜಿ ಗೆಳೆಯನೊಬ್ಬ ಫೇಸ್‍ಬುಕ್‍ನಲ್ಲಿ ಅಶ್ಲೀಲ ಫೋಟೋಗಳನ್ನು ಪೋಸ್ಟ್ ಮಾಡಿದ್ದರಿಂದ ಮನನೊಂದು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಾಡಿಯಾ ಜಿಲ್ಲೆಯಲ್ಲಿ ನಡೆದಿದೆ.

    ಈ ಘಟನೆ ಜಿಲ್ಲೆಯ ಧಂತಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ಯುವತಿ ಮತ್ತು ವ್ಯಕ್ತಿ ಆರು ತಿಂಗಳ ಹಿಂದೆ ಫೇಸ್‍ಬುಕ್ ಮೂಲಕ ಪರಿಚಯವಾಗಿ ಸ್ನೇಹಿತರಾಗಿದ್ದರು. ಆದರೆ ಇತ್ತೀಚೆಗೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ಮಾತನಾಡುತ್ತಿರಲಿಲ್ಲ.

    ಇದರಿಂದ ಕೋಪಗೊಂಡ ವ್ಯಕ್ತಿ ಫೇಸ್‍ಬುಕ್‍ನಲ್ಲಿ ನಕಲಿ ಖಾತೆ ತೆರೆದು ಯುವತಿಯ ಅಶ್ಲೀಲ ಫೋಟೋಗಳನ್ನು ಪೋಸ್ಟ್ ಮಾಡಿದ್ದಾನೆ. ಆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇದನ್ನು ನೋಡಿದ ಯುವತಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಸಂಬಂಧ ಯುವತಿಯ ತಂದೆ ದೂರು ನೀಡಿದ್ದಾರೆ. ನಾವು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಪ್ರಾರಂಭಿಸಿದ್ದೇವೆ. ಆದರೆ ಆ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ತಿಳಿದು ವ್ಯಕ್ತಿ ಪರಾರಿಯಾಗಿದ್ದಾನೆ. ಆತನಿಗಾಗಿ ಬಲೆ ಬೀಸಿದ್ದೇನೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಪೌರತ್ವ ಕಾಯ್ದೆ ಬಗ್ಗೆ ಮಾತನಾಡಿದ ಸೌರವ್ ಗಂಗೂಲಿ

    ಪೌರತ್ವ ಕಾಯ್ದೆ ಬಗ್ಗೆ ಮಾತನಾಡಿದ ಸೌರವ್ ಗಂಗೂಲಿ

    ಕೋಲ್ಕತ್ತಾ: ದೇಶದೆಲ್ಲೆಡೆ ಪ್ರತಿಭಟನೆಯ ಕಿಚ್ಚು ಹೊತ್ತಿಸಿರುವ ಪೌರತ್ವ ವಿಧೇಯಕ ಕಾಯ್ದೆ ಬಗ್ಗೆ ಭಾರತ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಾತನಾಡಿದ್ದಾರೆ.

    ಈ ವಿಚಾರವಾಗಿ ಶುಕ್ರವಾರ ಮಾತನಾಡಿದ ಸೌರವ್ ಗಂಗೂಲಿ, ಮೊದಲಿಗೆ ಈ ವಿವಾದತ್ಮಕ ವಿಚಾರದ ಬಗ್ಗೆ ಮಾತನಾಡಲು ನಿರಾಕರಿಸಿದರು. ಆದರೆ ನಂತರ ಮಾತನಾಡಿದ ಅವರು ಪೌರತ್ವ ಕಾಯ್ದೆ ವಿರುದ್ಧವಾಗಿ ಪ್ರತಿಭಟನೆ ಮಾಡುತ್ತಿರುವವರು ಶಾಂತ ರೀತಿಯಲ್ಲಿ ಪ್ರತಿಭಟನೆ ಮಾಡಬೇಕು ಎಂದು ಮನವಿ ಮಾಡಿದರು.

    ಪ್ರತಿಭಟನೆ ಮಾಡುವವರಿಗೆ ನನ್ನ ಸಂದೇಶವೆನೆಂದರೆ ಶಾಂತಿಯನ್ನು ಕಾಪಾಡಿಕೊಳ್ಳಿ ಎಂದು ಹೇಳುತ್ತೇನೆ. ನನಗೆ ಈ ಕಾಯ್ದೆಯ ಬಗ್ಗೆ ಸಂಪೂರ್ಣವಾಗಿ ಗೊತ್ತಿಲ್ಲ. ಆದ್ದರಿಂದ ನಾನು ಈ ರಾಜಿಕೀಯ ವಿವಾದವನ್ನು ಮಾಡಿಕೊಳ್ಳುವುದಿಲ್ಲ. ನನಗೆ ಕಾಯ್ದೆಯ ಬಗ್ಗೆ ಗೊತ್ತಿಲ್ಲದೇ ಇರುವಾಗ ಅದರ ಬಗ್ಗೆ ಪ್ರತಿಕ್ರಿಯೇ ನೀಡುವುದು ಸರಿಯಲ್ಲ. ಆದರೆ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಳ್ಳಬೇಕು ಎಂಬುದು ನನ್ನ ಅಭಿಪ್ರಾಯ ಎಂದು ಹೇಳಿದ್ದಾರೆ.

    ಪೌರತ್ವ ವಿಧೇಯಕ ಕಾಯ್ದೆಯಲ್ಲಿ ದೇಶಕ್ಕೆ ಮಾರಕವಾಗುವಂತ ಅಂಶ ಇದ್ದರೆ, ಅದನ್ನು ಸಂಬಂಧ ಪಟ್ಟ ವ್ಯಕ್ತಿಗಳ ಜೊತೆ ಮಾತನಾಡಿ ಬಗೆಹರಿಸಿಕೊಳ್ಳಬೇಕು. ಅದನ್ನು ಬಿಟ್ಟು ಈ ರೀತಿ ಹಿಂಸಾತ್ಮಕವಾಗಿ ಪ್ರತಿಭಟನೆ ಮಾಡುವುದು ಸರಿಯಲ್ಲ. ನನಗೆ ದೇಶದಲ್ಲಿ ಎಲ್ಲರೂ ಸಂತೋಷವಾಗಿರುವುದು ಮುಖ್ಯ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.

    ಈ ವಾರದ ಆರಂಭದಲ್ಲಿ ಸೌರವ್ ಗಂಗೂಲಿ ಅವರ ಮಗಳು ಸನಾ ಗಂಗೂಲಿ ಅವರು ಖುಷ್ವಂತ್ ಸಿಂಗ್ ಅವರ ಬರೆದಿರುವ `ದಿ ಎಡ್ ಆಫ್ ಇಂಡಿಯಾ` ಪುಸ್ತಕದ ಒಂದು ಆಯ್ದ ಭಾಗವನ್ನು ತನ್ನ ಇನ್‍ಸ್ಟಾಗ್ರಾಮ್‍ನಲ್ಲಿ ಹಾಕಿಕೊಂಡು ಫ್ಯಾಸಿಸ್ಟ್ ಆಡಳಿತದ ಬಗ್ಗೆ ಮಾತನಾಡಿದ್ದರು. ಸನಾ ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.

    ಮಗಳ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಟ್ವೀಟ್‍ವೊಂದನ್ನು ಮಾಡಿದ್ದ ಸೌರವ್ ಗಂಗೂಲಿ ಅವರು, ದಯವಿಟ್ಟು ಸನಾ ಅವರನ್ನು ಈ ಎಲ್ಲಾ ಹೇಳಿಕೆಗಳಿಂದ ದೂರವಿಡಿ. ಆ ಪೋಸ್ಟ್ ನಿಜವಲ್ಲ. ಆಕೆ ಇನ್ನೂ ಚಿಕ್ಕವಳು ಆಕೆಗೆ ರಾಜಕೀಯ ವಿಚಾರದ ಬಗ್ಗೆ ಗೊತ್ತಿಲ್ಲ ಎಂದು ಟ್ವೀಟ್ ಮಾಡಿ ಮಗಳ ಪರ ನಿಂತಿದ್ದರು.

  • ಸೀಕ್ರೆಟ್ ಸಾಂತಾ ಆಗಿ ಮಕ್ಕಳ ಜೊತೆ ವಿರಾಟ್ ಕ್ರಿಸ್ಮಸ್ ಆಚರಣೆ: ವಿಡಿಯೋ

    ಸೀಕ್ರೆಟ್ ಸಾಂತಾ ಆಗಿ ಮಕ್ಕಳ ಜೊತೆ ವಿರಾಟ್ ಕ್ರಿಸ್ಮಸ್ ಆಚರಣೆ: ವಿಡಿಯೋ

    ಕೋಲ್ಕತ್ತಾ: ಭಾರತ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ‘ಸೀಕ್ರೆಟ್ ಸಾಂತಾ’ ಆಗಿ ಪಶ್ಚಿಮ ಬಂಗಳಾದ ಕೋಲ್ಕತ್ತಾದಲ್ಲಿರುವ ದೀನದಲಿತರ ಮಕ್ಕಳ ಜೊತೆ ಕ್ರಿಸ್ಮಸ್ ಹಬ್ಬವನ್ನು ಆಚರಿಸಿದ್ದಾರೆ.

    ಖಾಸಗಿ ವಾಹಿನಿಯೊಂದು ಈ ವಿಡಿಯೋವನ್ನು ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಕೋಲ್ಕತ್ತಾದ ಆಶ್ರಮದಲ್ಲಿರುವ ಮಕ್ಕಳು ತಮ್ಮ ನೆಚ್ಚಿನ ಕ್ರೀಡಾಪಟುಗಳಾದ ಸಚಿನ್ ತೆಂಡೂಲ್ಕರ್, ಎಂ.ಎಸ್ ಧೋನಿ, ಕ್ರಿಸ್ಟಿಯಾನೊ ರೊನಾಲ್ಡೊ, ಪಿ.ವಿ ಸಿಂಧು ಹಾಗೂ ಕ್ರಿಸ್ಮೆಸ್ ಸಮಯದಲ್ಲಿ ಇಷ್ಟವಾಗುವ ವಸ್ತುಗಳನ್ನು ನೀಡಬೇಕೆಂದು ಹೇಳಿದ್ದಾರೆ. ಮಕ್ಕಳು ಮಾತನಾಡಿದ ಈ ವಿಡಿಯೋವನ್ನು ವಿರಾಟ್ ಅವರು ನೋಡಿದ್ದಾರೆ. ಇದನ್ನೂ ಓದಿ: ಸಂತಾಕ್ಲಾಸ್ ಡ್ರೆಸ್ ಧರಿಸಿದ ಸಚಿನ್ – ಅನಾಥ ಮಕ್ಕಳೊಂದಿಗೆ ಕ್ರಿಸ್ಮಸ್ ಆಚರಣೆ

    ಮಕ್ಕಳ ವಿಡಿಯೋ ನೋಡಿದ ನಂತರ ವಿರಾಟ್ ಸಾಂತಾ ಕ್ಲಾಸ್‍ನಂತಯೆ ಉಡುಪು ಧರಿಸಿ, ಮಕ್ಕಳಿಗೆ ಉಡುಗೊರೆಯನ್ನು ಹಂಚಿದ್ದಾರೆ. ಉಡುಗೊರೆ ಎಲ್ಲ ಹಂಚಿದ ಬಳಿಕ ವಿರಾಟ್ ತಾವು ಹಾಕಿದ ನಕಲಿ ಗಡ್ಡವನ್ನು ತೆಗೆದಿದ್ದಾರೆ. ವಿರಾಟ್‍ರನ್ನು ನೋಡುತ್ತಿದ್ದಂತೆ ಮಕ್ಕಳು ಮೊದಲು ಶಾಕ್ ಆಗಿ ನಂತರ ಖುಷಿಪಟ್ಟಿದ್ದಾರೆ. ಅಲ್ಲದೆ ವಿರಾಟ್‍ರನ್ನು ತಬ್ಬಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

    ವಿಡಿಯೋ ಕೊನೆಯಲ್ಲಿ ವಿರಾಟ್, ಈ ಮಕ್ಕಳು ವರ್ಷವಿಡೀ ನಮಗೆ ಬೆಂಬಲಿಸುತ್ತಾರೆ. ಮಕ್ಕಳ ಜೊತೆ ಸಮಯ ಕಳೆದಿದ್ದು ಹಾಗೂ ಅವರನ್ನು ಸಂತೋಷ ತಂದ ಕ್ಷಣ ಅದ್ಭುತವಾಗಿತ್ತು. ನಾನು ಎಲ್ಲರಿಗೂ ಕ್ರಿಸ್ಮಸ್ ಹಬ್ಬದ ಹಾಗೂ ಹೊಸ ವರ್ಷದ ಶುಭಾಶಯಗಳನ್ನು ಹೇಳಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ. ವಿರಾಟ್ ಅವರ ಈ ಕೆಲಸಕ್ಕೆ ನೆಟ್ಟಿಗರು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    https://twitter.com/StarSportsIndia/status/1207927652079812608?ref_src=twsrc%5Etfw%7Ctwcamp%5Etweetembed%7Ctwterm%5E1207927652079812608&ref_url=https%3A%2F%2Fwww.timesnownews.com%2Fsports%2Fcricket%2Farticle%2Fvideo-virat-kohli-turns-secret-santa-for-underprivileged-kids-ahead-of-christmas%2F529935

  • ಫಿಂಚ್, ಮೋರಿಸ್ ಆರ್‌ಸಿಬಿಗೆ- ದಾಖಲೆ ಬೆಲೆಗೆ ಪ್ಯಾಟ್ ಕಮಿನ್ಸ್ ಸೇಲ್

    ಫಿಂಚ್, ಮೋರಿಸ್ ಆರ್‌ಸಿಬಿಗೆ- ದಾಖಲೆ ಬೆಲೆಗೆ ಪ್ಯಾಟ್ ಕಮಿನ್ಸ್ ಸೇಲ್

    ಕೋಲ್ಕತ್ತಾ: 2020ರ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮೊದಲ ದಿನದ ಹರಾಜು ಪ್ರಕ್ರಿಯೆ ಅಬ್ಬರದಿಂದ ಸಾಗಿದ್ದು, ಆಸ್ಟ್ರೇಲಿಯಾದ ಆಟಗಾರ ಪ್ಯಾಟ್ ಕಮಿನ್ಸ್ ದಾಖಲೆಯ ಮೊತ್ತಕ್ಕೆ ಹರಾಜಾಗಿದ್ದಾರೆ.

    ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ 2016 ರಲ್ಲಿ 16 ಕೋಟಿಗೆ ಹರಾಜಾಗಿದ್ದ ಭಾರತದ ಮಾಜಿ ಆಟಗಾರ ಯುವರಾಜ್ ಸಿಂಗ್ ಅತ್ಯಂತ ದುಬಾರಿ ಬೆಲೆಗೆ ಹರಾಜು ಆಗಿದ್ದರು. ಈಗ ಅವರನ್ನು ಬಿಟ್ಟರೆ ಕೆಕೆಆರ್ ತಂಡಕ್ಕೆ 15.5 ಕೋಟಿಗೆ ಈ ಬಾರಿ ಪ್ಯಾಟ್ ಕಮಿನ್ಸ್ ಹರಾಜು ಆಗಿದ್ದಾರೆ. ಕಮಿನ್ಸ್‍ಗಾಗಿ ಆರ್‌ಸಿಬಿ ತಂಡವು ಕೂಡ 14.75 ರ ವರೆಗೂ ಬಿಡ್ ಕೂಗಿದ್ದು, ಅಂತಿಮವಾಗಿ ಕೆಕೆಆರ್ ತಂಡ 15.5 ಕೋಟಿಗೆ ಪ್ಯಾಟ್ ಕಮಿನ್ಸ್ ಅವರನ್ನು ಖರೀದಿ ಮಾಡಿದೆ.

    ಮೊದಲ ದಿನದ ಹರಾಜು ಪ್ರಕ್ರಿಯೆಯಲ್ಲಿ ಕೇವಲ ಇಬ್ಬರು ಆಟಗಾರನ್ನು ಖರೀದಿಸಿದ ಆರ್‌ಸಿಬಿ, ಮೊದಲಿಗೆ ಆಸ್ಟ್ರೇಲಿಯಾದ ಸ್ಫೋಟಕ ಆರಂಭಿಕ ಬ್ಯಾಟ್ಸ್ ಮ್ಯಾನ್ ಆರೋನ್ ಫಿಂಚ್ ಅವರನ್ನು 4.40 ಕೋಟಿ ನೀಡಿ ಖರೀದಿ ಮಾಡಿತು. ನಂತರ ಸೌಥ್ ಆಫ್ರಿಕಾದ ಆಲ್‍ರೌಂಡರ್ ಕ್ರಿಸ್ ಮೋರಿಸ್ ಅವರನ್ನು 10 ಕೋಟಿಗೆ ಖರೀದಿ ಮಾಡಿದೆ. ಈ ಮೂಲಕ ತನ್ನ ಖಾತೆಯಲ್ಲಿದ್ದ 27.75 ಕೋಟಿ ಹಣದಲ್ಲಿ 14.4 ಕೋಟಿ ಹಣವನ್ನು ಖರ್ಚು ಮಾಡಿದೆ.

    ಡೇಲ್ ಸ್ಟೇನ್ ಆನ್‍ಸೋಲ್ಡ್, ಮ್ಯಾಕ್ಸ್ ವೆಲ್‍ಗೆ 10.75 ಕೋಟಿ
    ದಕ್ಷಿಣ ಆಫ್ರಿಕಾದ ಸ್ಟಾರ್ ಬೌಲರ್ ಡೇಲ್ ಸ್ಟೇನ್ ಈ ಬಾರಿಯ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಆನ್‍ಸೋಲ್ಡ್ ಆಟಗಾರನಾಗಿ ಉಳಿದಿದ್ದಾರೆ. ಆದರೆ ಆಸ್ಟ್ರೇಲಿಯಾ ತಂಡದ ಸ್ಟಾರ್ ಆಲ್‍ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್ ಅವರನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 10.75 ಕೋಟಿ ಕೊಟ್ಟು ಖರೀದಿ ಮಾಡಿದೆ. ಇಂಗ್ಲೆಂಡ್ ತಂಡದ ಆಟಗಾರ ಕ್ರಿಸ್ ವೋಕ್ಸ್ ಅವರನ್ನು ಡೆಲ್ಲಿ ಕ್ಯಾಪಿಟಲ್ ತಂಡ 1.5 ಕೋಟಿ ನೀಡಿ ಖರೀದಿ ಮಾಡಿದೆ.

    ಲಿನ್‍ಗೆ ಇಲ್ಲ ಬೇಡಿಕೆ, ಹರಾಜಿನಲ್ಲಿ ಮಿಂಚಿದ ಮಾರ್ಗನ್
    ಕಳೆದ ಬಾರಿ ಕೋಲ್ಕತ್ತಾ ತಂಡದಲ್ಲಿದ್ದ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್ ಮ್ಯಾನ್ ಕ್ರಿಸ್ ಲಿನ್ ಅವರನ್ನು ಆರಂಭಿಕ ಬೆಲೆ 2 ಕೋಟಿ ಕೊಟ್ಟು ಮುಂಬೈ ಇಂಡಿಯನ್ಸ್ ತಂಡ ಖರೀದಿ ಮಾಡಿದೆ. ಈ ಬಾರಿ ಹರಾಜಿನಲ್ಲಿ ಮಿಂಚಿದ ಇಂಗ್ಲೆಂಡ್ ನಾಯಕ ಮಾರ್ಗನ್ 5.25 ಕೋಟಿಗೆ ಕೆಕೆಆರ್ ಪಾಲಾಗಿದ್ದಾರೆ. ಇವರ ಜೊತೆಗೆ ಮತ್ತೊಬ್ಬ ಇಂಗ್ಲೆಂಡ್ ಆಟಗಾರ ಜೇಸನ್ ರಾಯ್ ಅವರನ್ನು ಡೆಲ್ಲಿ ಕ್ಯಾಪಿಟಲ್ ತಂಡ 1.5 ಕೋಟಿ ನೀಡಿ ಖರೀದಿ ಮಾಡಿದೆ.

    ಪಂಜಾಬ್‍ಗೆ ಸಲ್ಯೂಟ್ ಹೊಡೆದ ಯೋಧ ಕಾಟ್ರೆಲ್
    ವೆಸ್ಟ್ ಇಂಡೀಸ್ ತಂಡದ ಬೌಲರ್ ಶೆಲ್ಡನ್ ಕಾಟ್ರೆಲ್ ಅವರನ್ನು 8.5 ಕೋಟಿ ನೀಡಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಖರೀದಿ ಮಾಡಿದೆ. ಆಸ್ಟ್ರೇಲಿಯನ್ ವೇಗಿ ನೇಥನ್ ಕೌಲ್ಟರ್ ನೈಲ್ ಅವರನ್ನು ಮುಂಬೈ ಇಂಡಿಯನ್ಸ್ ತಂಡ 8 ಕೋಟಿ ನೀಡಿ ಖರೀದಿ ಮಾಡಿದೆ. ಇವರ ಜೊತೆಗೆ ಆಸ್ಟ್ರೇಲಿಯಾದ ವಿಕೆಟ್‍ಕೀಪರ್ ಬ್ಯಾಟ್ಸ್ ಮನ್ ಅಲಕ್ಸ್ ಕೇರಿ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ 2.4 ಕೋಟಿ ಕೊಟ್ಟು ಖರೀದಿಸಿದೆ. ಕೇರಿಗಾಗಿ ಆರ್‍ಸಿಬಿ 2.3 ಕೋಟಿ ವರೆಗೆ ಬಿಡ್ಡಿಂಗ್ ಮಾಡಿತ್ತು.

    ತಂಡಕ್ಕೆ ಬೇಕಾದ ಆಟಗಾರರ ಭೇಟೆಯಲ್ಲಿ ಚೆನ್ನೈ
    ತಂಡವನ್ನು ಬಲಪಡಿಸುವ ನಿಟ್ಟಿನಲ್ಲಿ ಆಟಗಾರರನ್ನು ಖರೀದಿಸುತ್ತಿರುವ ಕ್ಯಾಪ್ಟನ್ ಕೂಲ್ ಧೋನಿ ನಾಯಕತ್ವದ ತಂಡ ಚೆನ್ನೈ ಸೂಪರ್ ಕಿಂಗ್ಸ್, ಮೊದಲಿಗೆ ಇಂಗ್ಲೆಂಡ್ ತಂಡದ ಯುವ ಆಲ್ ರೌಂಡರ್ ಆಟಗಾರ ಸ್ಯಾಮ್ ಕರ್ರನ್ ಅವರನ್ನು 5.5 ಕೋಟಿ ನೀಡಿ ಖರೀದಿ ಮಾಡಿದೆ. ಇವರನ್ನು ಬಿಟ್ಟರೇ ಭಾರತದ ಲೆಗ್ ಸ್ಪಿನ್ನರ್ ಪಿಯೂಷ್ ಚಾವ್ಲಾ ಅವರನ್ನು 6.75 ಕೋಟಿ ನೀಡಿ ಚೆನ್ನೈ ಖರೀದಿ ಮಾಡಿದೆ.

    ಸನ್ ರೈಸರ್ಸ್ ಪಾಲಾದ ಭಾರತದ ಅಂಡರ್-19 ಕ್ಯಾಪ್ಟನ್ ಗಾರ್ಗ್
    ಭಾರತದ ಅಂಡರ್-19 ತಂಡದ ನಾಯಕ ಪ್ರಿಯಮ್ ಗಾರ್ಗ್ ಅವರನ್ನು ಸನ್ ರೈಸರ್ಸ್ ಹೈದರಾಬಾದ್ ತಂಡ 1.9 ಕೋಟಿ ನೀಡಿ ಖರೀದಿ ಮಾಡಿದೆ. ಇವರನ್ನು ಬಿಟ್ಟರೆ ದೇಶಿಯ ಪ್ರತಿಭೆಗಳಾದ ರಾಹುಲ್ ತ್ರಿಪಾಠಿ ಅವರನ್ನು 60 ಲಕ್ಷ ಕೆಕೆಅರ್ ತಂಡ, ದೀಪಕ್ ಹುಡಾ ಅವರನ್ನು 50 ಲಕ್ಷ ನೀಡಿ ಪಂಜಾಬ್ ತಂಡ, ಯಶಸ್ವಿ ಜಸ್ವಾಲ್ ಅವರನ್ನು 2.40 ಕೋಟಿ ನೀಡಿ ರಾಜಸ್ತಾನ್ ರಾಯಲ್ಸ್ ತಂಡ ಮತ್ತು ಜಯ್‍ದೇವ್ ಉನಾದ್ಕಟ್ ಅವರನ್ನು 3 ಕೋಟಿ ರಾಜಸ್ಥಾನ್ ತಂಡ ಖರೀದಿ ಮಾಡಿದೆ.

    ಕನ್ನಡಿಗ ರಾಬಿನ್ ಉತ್ತಪ್ಪ ರಾಜಸ್ಥಾನಕ್ಕೆ
    ಶಿಲ್ಪಾ ಶೆಟ್ಟಿ ಮಾಲೀಕತ್ವದ ರಾಜಸ್ಥಾನ್ ರಾಯಲ್ಸ್ ತಂಡವೂ ಕನ್ನಡಿಗ ರಾಬಿನ್ ಉತ್ತಪ್ಪ ಅವರನ್ನು 3 ಕೋಟಿಗೆ ಖರೀದಿ ಮಾಡಿದೆ. ಇವರನ್ನು ಬಿಟ್ಟರೆ ಕನ್ನಡಿಗನಾದ ಸ್ಟುವರ್ಟ್ ಬಿನ್ನಿ ಹಾಗೂ ಚೇತೇಶ್ವರ್ ಪೂಜಾರ, ಯೂಸಫ್ ಪಠಾಣ್, ಕೆ.ಸಿ ಕಾರಿಯಪ್ಪ ಆನ್‍ಸೋಲ್ಡ್ ಆಗಿ ಉಳಿದಿದ್ದಾರೆ.

  • ಡಿ.19 ರಂದು ಐಪಿಎಲ್ ಹರಾಜು- ಮೊದ್ಲ ಪಟ್ಟಿಯಲ್ಲಿ 332 ಆಟಗಾರರು

    ಡಿ.19 ರಂದು ಐಪಿಎಲ್ ಹರಾಜು- ಮೊದ್ಲ ಪಟ್ಟಿಯಲ್ಲಿ 332 ಆಟಗಾರರು

    – ಕೋಟಿ ವೀರರ ಪಟ್ಟಿ ಇಂತಿದೆ

    ಕೋಲ್ಕತ್ತಾ: ಐಪಿಎಲ್ 2020ರ ಆವೃತ್ತಿಯ ಹರಾಜು ಪ್ರಕ್ರಿಯೆಗೆ ಸಿದ್ಧತೆ ನಡೆದಿದ್ದು, ಎಲ್ಲಾ ತಂಡದ ಮಾಲೀಕರು ಆಲ್‍ರೌಂಡರ್ ಗಳನ್ನು ಕೋಟಿ ಕೋಟಿ ನೀಡಿ ಖರೀದಿ ಮಾಡಲು ತಯಾರಿ ನಡೆಸಿದ್ದಾರೆ. ಆಸೀಸ್‍ನ ಮ್ಯಾಕ್ಸ್ ವೆಲ್, ಪ್ಯಾಟ್ ಕಮ್ಮಿನ್ಸ್, ದಕ್ಷಿಣ ಆಫ್ರಿಕಾ ತಂಡದ ಕ್ರಿಸ್ ಮೋರಿಸ್ ರಂತಹ ವಿದೇಶಿ ಆಟಗಾರರು ಭಾರೀ ಮೊತ್ತ ಪಡೆಯಬಹುದು ಎಂಬ ವಿಶ್ಲೇಷಣೆ ಕೇಳಿ ಬಂದಿದೆ.

    ಡಿ.19 ರಂದು ಕೋಲ್ಕತ್ತಾದಲ್ಲಿ ಐಪಿಎಲ್ 2020 ಆವೃತ್ತಿಯ ಹರಾಜು ಪ್ರಕ್ರಿಯೆ ನಡೆಯಲಿದ್ದು, 971 ಮಂದಿಯ ಪಟ್ಟಿಯನ್ನು 332ಕ್ಕೆ ಇಳಿಕೆ ಮಾಡಿ ಐಪಿಎಲ್ ಆಡಳಿತ ಮಂಡಳಿ ಪಟ್ಟಿಯನ್ನು ತಂಡದ ಫ್ರಾಂಚೈಸಿಗಳಿಗೆ ನೀಡಿದೆ. ಈ ಪಟ್ಟಿಯಲ್ಲಿ ಭಾರತದ 19 ಮಂದಿ ಆಟಗಾರರು ಹಾಗೂ ಫ್ರಾಂಚೈಸಿಗಳು ಮನವಿ ಮಾಡಿದ 24 ಮಂದಿ ಕ್ರಿಕೆಟಿಗರು ಸೇರಿದ್ದಾರೆ. ಪ್ರಮುಖವಾಗಿ ವಿಂಡೀಸ್ ಬೌಲರ್ ಕೆಸ್ರಿಕ್ ವಿಲಿಯಮ್ಸ್, ಆಲ್‍ರೌಂಡರ್ ಕ್ರಿಸ್ಟಿಯನ್, ಲೆಗ್ ಸ್ಪಿನ್ನರ್ ಜಂಪಾ, ಮುಶ್ಫಿಕರ್ ರಹೀಂ, ಯುವ ಆಟಗಾರ ವಿಲ್ ಜಾಕ್ಸ್ ರಂತಹ ಆಟಗಾರರಿದ್ದಾರೆ.

    ಹರಾಜು ಪ್ರಕ್ರಿಯೆಯಲ್ಲಿ ಮೊದಲು ಬ್ಯಾಟ್ಸ್ ಮನ್‍ಗಳು ಆ ಬಳಿಕ ಆಲ್‍ರೌಂಡರ್, ವಿಕೆಟ್ ಕೀಪರ್, ವೇಗದ ಬೌಲರ್, ಸ್ಪಿನ್ ಬೌಲರ್ ಗಳನ್ನು ಹರಾಜು ಮಾಡಲಾಗುತ್ತದೆ. ಪ್ಯಾಟ್ ಕಮ್ಮಿನ್ಸ್, ಮ್ಯಾಕ್ಸ್ ವೆಲ್, ಕೆಸ್ರಿಕ್ ವಿಲಿಯಮ್ಸ್, ಆ್ಯಡಂ ಜಾಂಪಾ, ಜೋಶ್ ಹೇಜಲ್‍ವುಡ್, ಕ್ರಿಸ್ ಲಿನ್, ಮಿಚೆಲ್ ಮಾರ್ಷ್, ಡೇಲ್ ಸ್ಟೇನ್, ಏಂಜೆಲೊ ಮ್ಯಾಥ್ಯೂಸ್ 2 ಕೋಟಿ ರೂ. ಮೂಲ ಬೆಲೆಯನ್ನು ಹೊಂದಿದ್ದಾರೆ. ಉಳಿದಂತೆ ರಾಬಿನ್ ಉತ್ತಪ್ಪ, ಇಂಗ್ಲೆಂಡ್ ವಿಶ್ವಕಪ್ ಗೆದ್ದ ತಂಡದ ನಾಯಕ ಇಯಾನ್ ಮಾರ್ಗನ್, ಕ್ರಿಸ್ ವೋಕ್ಸ್ ಸೇರಿದಂತೆ ಇತರ ಕೆಲ ಆಟಗಾರರು 1.5 ಕೋಟಿ ರೂ. ಮೂಲ ಬೆಲೆಯನ್ನು ಪಡೆದಿದ್ದಾರೆ.

  • ಸ್ಮಗ್ಲಿಂಗ್ ಅಡ್ಡಗಳ ಮೇಲೆ ದಾಳಿ- 16.5 ಕೋಟಿ ರೂ. ಮೌಲ್ಯದ ಚಿನ್ನ ವಶ

    ಸ್ಮಗ್ಲಿಂಗ್ ಅಡ್ಡಗಳ ಮೇಲೆ ದಾಳಿ- 16.5 ಕೋಟಿ ರೂ. ಮೌಲ್ಯದ ಚಿನ್ನ ವಶ

    ಕೋಲ್ಕತ್ತಾ: ಚಿನ್ನವನ್ನು ಸಾಗಿಸುತ್ತಿದ್ದ ಅಡ್ಡಗಳ ಮೇಲೆ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ದಾಳಿ ನಡೆಸಿ, 16.5 ಕೋಟಿ ರೂ. ಮೌಲ್ಯದ 42 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ 10 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಒಟ್ಟು 42 ಕೆಜಿ ಚಿನ್ನದಲ್ಲಿ 500 ಗ್ರಾಂ ಆಭರಣ ಚಿನ್ನವಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ದೂರು ಬಂದ ಹಿನ್ನೆಲೆ ಕೋಲ್ಕತ್ತಾದ ವಿವಿಧ ಸ್ಥಳಗಳಲ್ಲಿರುವ ಆರೋಪಿಗಳ ಮನೆ ಮೇಲೆ ದಾಳಿ ಮಾಡಿ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಚಿನ್ನವನ್ನು ಬಾಂಗ್ಲಾದೇಶದಿಂದ ಭಾರತಕ್ಕೆ ಆಮದು ಮಾಡಿಕೊಳ್ಳುತ್ತಿದ್ದರು ಎಂದು ಡಿಆರ್‌ಐ ಅಧಿಕಾರಿಗಳು ತಿಳಿಸಿದ್ದಾರೆ.

    ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದು, ಕೋಲ್ಕತ್ತಾದಲ್ಲಿ ಮಾತ್ರವಲ್ಲದೆ ರಾಯಪುರ, ಮುಂಬೈನಲ್ಲಿಯೂ ಸಹ ಸ್ಮಗ್ಲಿಂಗ್ ಮಾಡಿದ್ದ ಚಿನ್ನವನ್ನು ವಶಪಡಿಸಿಕೊಂಡಿದ್ದೇವೆ. ಈ ಎರಡು ನಗರಗಳಿಂದ ಮೂವರನ್ನು ಬಂಧಿಸಲಾಗಿದೆ ಎಂದು ಡಿಆರ್‌ಐ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಡಿಆರ್‍ಐ ಅಧಿಕಾರಿಗಳು ಸ್ಮಗ್ಲಿಂಗ್ ಮಾಡುತ್ತಿದ್ದ 219 ಕೆಜಿಗೂ ಅಧಿಕ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

  • ಖರ್ಜೂರದ ಪ್ಯಾಕೆಟ್‍ಗಳಲ್ಲಿ ಡ್ರಗ್ಸ್ ಸಾಗಣೆ- 85 ಲಕ್ಷದ ಡ್ರಗ್ಸ್ ವಶಕ್ಕೆ

    ಖರ್ಜೂರದ ಪ್ಯಾಕೆಟ್‍ಗಳಲ್ಲಿ ಡ್ರಗ್ಸ್ ಸಾಗಣೆ- 85 ಲಕ್ಷದ ಡ್ರಗ್ಸ್ ವಶಕ್ಕೆ

    – ಅನುಮಾನ ಬಾರದಂತೆ ಪ್ಯಾಕ್ ಮಾಡುತ್ತಿದ್ದ ಆರೋಪಿಗಳು

    ಕೋಲ್ಕತ್ತಾ: ಅಂತರಾಷ್ಟ್ರೀಯ ಡ್ರಗ್ಸ್ ಸಾಗಾಣಿಕೆ ದಂಧೆಯನ್ನು ಕೋಲ್ಕತ್ತಾ ಪೊಲೀಸ್ ವಿಶೇಷ ಕಾರ್ಯಪಡೆ ಬೇಧಿಸಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.

    ಜಾಕೀರ್ ಹುಸೇನ್ ಹಾಗೂ ಈತನ ಸಹಚರರಾದ ಮಾಶುಕ್ ಅಹ್ಮದ್ ಹಾಗೂ ಪ್ರಶಾಂತ ದಾಸ್ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, 85 ಲಕ್ಷ ರೂ. ಬೆಲೆಯ 10 ಕೆ.ಜಿ. ಚರಸ್ ವಶಕ್ಕೆ ಪಡೆದಿದ್ದಾರೆ.

    ಡ್ರಗ್ಸ್ ಸಾಗಿಸಲು ಆರೋಪಿಗಳು ಖರ್ಜೂರದ ಚಿತ್ರವಿರುವ ಬಾಕ್ಸ್ ಹಾಗೂ ಕವರ್ ಗಳನ್ನು ಬಳಸುತ್ತಿದ್ದರು ಎಂದು ಆರೋಪಿಸಲಾಗಿದೆ. ಮೊದಲು ಜಾಕೀರ್ ಹುಸೇನ್‍ನನ್ನು ಪೊಲೀಸರು ಬಂಧಿಸಿದ್ದು, ಜಾಕೀರ್ ಹುಸೇನ್ ಸಹಾಯದಿಂದ ಉಳಿದ ಆರೋಪಿಗಳನ್ನು ಬಂಧಿಸಿದ್ದಾರೆ.

    ವಿಚಾರಣೆ ವೇಳೆ ಹುಸೇನ್‍ನಿಂದ ಪೊಲೀಸರು ಪ್ರಮುಖ ಮಾಹಿತಿಯನ್ನು ಕಲೆ ಹಾಕಿದ್ದು, ಈ ವೇಳೆ ನಗರದ ಬೆಹಲಾದ ಅಪಾರ್ಟ್ ಮೆಂಟಿನಲ್ಲಿ ದಂಧೆ ನಡೆಸಲಾಗುತ್ತಿದೆ ಎಂದು ಜಾಕೀರ್ ಪೊಲೀಸರಿಗೆ ತಿಳಿಸಿದ್ದಾನೆ. ನಂತರ ಪೊಲೀಸರು ಅಪಾರ್ಟ್ ಮೆಂಟ್ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಮಾಶುಕ್ ಅಹ್ಮದ್ ಹಾಗೂ ಪ್ರಶಾಂತ ದಾಸನನ್ನು ಪೊಲೀಸರು ಬಂಧಿಸಿದ್ದಾರೆ.

    ಈ ಕುರಿತು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿ, ಆರೋಪಿಗಳು ಡ್ರಗ್ಸ್ ಸಾಗಿಸಲು ಖರ್ಜೂರದ ಪ್ಯಾಕೆಟನ್ನು ಬಳಸುತ್ತಿದ್ದರು. ಯಾರಿಗೂ ತಿಳಿಯದ ಹಾಗೆ ಇವುಗಳನ್ನು ಪ್ಯಾಕ್ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಹೀಗೆ ಪ್ಯಾಕೆಟ್ ಹಾಗೂ ಬಾಕ್ಸ್ ಗಳಲ್ಲಿ ಪ್ಯಾಕ್ ಮಾಡಿ ಯಾರಿಗೂ ಅನುಮಾನ ಬಾರದಂತೆ ವಿದೇಶಕ್ಕೆ ಸಾಗಿಸುತ್ತಿದ್ದರು ಎಂದು ತಿಳಿಸಿದ್ದಾರೆ.

    ಪ್ಯಾಕ್ ಮಾಡಿದ ಡ್ರಗ್ಸನ್ನು ಚೀನಾಗೆ ಸಾಗಿಸುತ್ತಿದ್ದರು ಎಂದು ತಿಳಿದು ಬಂದಿದೆ. ಬಂಧಿತ ಮೂವರನ್ನು ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

  • ಕಲ್ಯಾಣ ಮಂಟಪದ ಬಾತ್‍ರೂಮಿನಲ್ಲಿ ಅಪ್ರಾಪ್ತೆ ಮೇಲೆ ರೇಪ್‍ಗೈದ ಯುವಕ

    ಕಲ್ಯಾಣ ಮಂಟಪದ ಬಾತ್‍ರೂಮಿನಲ್ಲಿ ಅಪ್ರಾಪ್ತೆ ಮೇಲೆ ರೇಪ್‍ಗೈದ ಯುವಕ

    ಕೋಲ್ಕತ್ತಾ: ಕಲ್ಯಾಣ ಮಂಟಪದ ಬಾತ್‍ರೂಮಿನಲ್ಲಿ ಆರು ವರ್ಷದ ಬಾಲಕಿ ಮೇಲೆ 19 ವರ್ಷದ ಯುವಕ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

    ಕೋಲ್ಕತ್ತಾದ ವೆಸ್ಟ್ ಪೋರ್ಟ್ ಪ್ರದೇಶದಲ್ಲಿ ಪ್ರಕರಣ ನಡೆದಿದ್ದು, ಮಗಳ ಮೇಲೆ ದೌರ್ಜನ್ಯ ಎಸಗಿದ್ದಾನೆ ಎಂದು ಸಂತ್ರಸ್ತೆಯ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

    ಆರೋಪಿಯು ಕಲ್ಯಾಣ ಮಂಟಪದಲ್ಲಿ ಕೆಲಸಗಾರನಾಗಿದ್ದು, ಬಾಲಕಿಯನ್ನು ಬಾತ್‍ರೂಮಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ನಂತರ ಘಟನೆ ಕುರಿತು ಬಾಲಕಿ ತನ್ನ ತಾಯಿಗೆ ತಿಳಿಸಿದ್ದು, ಪ್ರಕರಣ ದಾಖಲಿಸಿದ್ದಾರೆ. ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 376(ಅತ್ಯಾಚಾರ) ಹಾಗೂ ಪೊಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಕೋಲ್ಕತ್ತಾ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಮುರಳಿಧರ್ ಶರ್ಮಾ ಮಾಹಿತಿ ನೀಡಿದ್ದಾರೆ.

    ಇತ್ತೀಚೆಗೆ 61 ವರ್ಷದ ವೃದ್ಧ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ಮುಂಬೈನ ಕುರ್ಲಾ ಸುಬರ್ನಿನಲ್ಲಿ ನಡೆದಿತ್ತು. ಬಾಲಕಿ ಸ್ನೇಹಿತರೊಂದಿಗೆ ಪಕ್ಕದ ಮನೆಯ ಬಳಿ ಆಟವಾಡುತ್ತಿದ್ದಾಗ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದ.

    ನಂತರ ಮೂರು ದಿನಗಳ ಕಾಲ ಆರೋಪಿ ಬಾಲಕಿ ಮೇಲೆ ಹಲ್ಲೆ ನಡೆಸಿದ್ದ. ಚಾಕೊಲೇಟ್ ನೀಡಿ ಬಾಲಕಿಯನ್ನು ಮನವೊಲಿಸಿ ಅತ್ಯಾಚಾರ ಎಸಗಿದ್ದ. ಘಟನೆ ನಂತರ ಬಾಲಕಿಗೆ ನೋವು ಕಾಣಿಸಿಕೊಂಡಿದ್ದು, ಆಗ ಮನೆಯವರಿಗೆ ತಿಳಿಸಿದ್ದಳು. ಈ ಸಂಬಂಧ ಮುಂಬೈನ ವಿನೋಭಾ ಭಾವೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಪೊಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದರು. ವೈದ್ಯಕೀಯ ಪರೀಕ್ಷೆ ವೇಳೆ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವುದು ಖಚಿತವಾಗಿತ್ತು. ಆರೋಪಿಯನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

  • 6 ವರ್ಷದ ಬಾಲಕಿಯನ್ನು ಬಾತ್‍ರೂಮಿನಲ್ಲಿ ಅತ್ಯಾಚಾರಗೈದ 19ರ ಯುವಕ

    6 ವರ್ಷದ ಬಾಲಕಿಯನ್ನು ಬಾತ್‍ರೂಮಿನಲ್ಲಿ ಅತ್ಯಾಚಾರಗೈದ 19ರ ಯುವಕ

    ಕೋಲ್ಕತ್ತಾ: 6 ವರ್ಷದ ಬಾಲಕಿಯನ್ನು 19 ವರ್ಷದ ಯುವಕನೋರ್ವ ಬಾತ್‍ರೂಮಿನಲ್ಲಿ ಕೂಡಿಹಾಕಿ ಅತ್ಯಾಚಾರ ಮಾಡಿರುವ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.

    ಈ ಘಟನೆ ಗುರುವಾರ ನಡೆದಿದ್ದು, ಕೋಲ್ಕತ್ತಾದ ತಾರತಾಲ ರಸ್ತೆಯಲ್ಲಿರುವ ಕಟ್ಟಡದ ಮೊದಲ ಮಹಡಿಯಲ್ಲಿ ಬಾತ್‍ರೂಮ್ ಒಳಗೆ ಕೂಡಿಹಾಕಿಕೊಂಡು ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ಅತ್ಯಾಚಾರ ಮಾಡಿದ 19 ವರ್ಷದ ಯುವಕನನ್ನು ಅರೆಸ್ಟ್ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

    ಯುವಕ ಬಾಲಕಿಯ ನೆರೆ ಮನೆಯವನಾಗಿದ್ದು, ಬಾಲಕಿಯನ್ನು ಕರೆದುಕೊಂಡು ಹೋಗಿ ಈ ರೀತಿ ಅತ್ಯಾಚಾರ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿಯು ಮನೆಗೆ ಬಂದು ಈ ವಿಚಾರವನ್ನು ತನ್ನ ತಾಯಿಗೆ ಹೇಳಿದೆ ನಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ತಾಯಿ ನೀಡಿದ ದೂರಿನ ಮೇರೆಗೆ ನಾವು ಆರೋಪಿಯನ್ನು ಅರೆಸ್ಟ್ ಮಾಡಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಈಗ ಆರೋಪಿಯನ್ನು ನಾವು ವಶಕ್ಕೆ ಪಡೆದಿದ್ದು, ಬಾಲಕಿಯ ವೈದ್ಯಕೀಯ ವರದಿಗಾಗಿ ಕಾಯುತ್ತಿದ್ದೇವೆ. ವರದಿ ಬಂದ ನಂತರ ಮುಂದಿನ ತನಿಖೆಯನ್ನು ಆರಂಭ ಮಾಡುತ್ತೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

  • ಟ್ರಕ್ ಚೇಸ್ ಮಾಡಿ ಸಿನಿಮೀಯ ರೀತಿಯಲ್ಲಿ ಅತ್ಯಾಚಾರಿಯಿಂದ ಮಹಿಳೆಯನ್ನು ರಕ್ಷಿಸಿದ ಪೊಲೀಸರು

    ಟ್ರಕ್ ಚೇಸ್ ಮಾಡಿ ಸಿನಿಮೀಯ ರೀತಿಯಲ್ಲಿ ಅತ್ಯಾಚಾರಿಯಿಂದ ಮಹಿಳೆಯನ್ನು ರಕ್ಷಿಸಿದ ಪೊಲೀಸರು

    – 15 ಕಿ.ಮೀ ಚೇಸ್ ಮಾಡಿ ಲಾರಿ ಚಾಲಕನ ಬಂಧನ

    ಕೋಲ್ಕತ್ತಾ: ಅತ್ಯಾಚಾರಿಗಳಿಂದ ಮಹಿಳೆಯನ್ನು ರಕ್ಷಿಸಲು ಪೊಲೀಸರು ಸಿನಿಮೀಯ ರೀತಿಯಲ್ಲಿ ಲಾರಿ ಚೇಸ್ ಮಾಡಿದ್ದು, ಸುಮಾರು 15 ಕಿ.ಮೀ. ದೂರ ಹಿಂಬಾಲಿಸಿ ಮಹಿಳೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಪಶ್ಚಿಮ ಬಂಗಾಳದ ಪೂರ್ವ ಬುದ್ರ್ವಾನ್ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಪ್ರಾಥಮಿಕ ತನಿಖೆ ವೇಳೆ ಮಾಹಿತಿ ಬಹಿರಂಗವಾಗಿದ್ದು, 30 ವರ್ಷದ ಕಿವುಡ ಹಾಗೂ ಮೂಗ ಮಹಿಳೆಯ ಮೇಲೆ ಅತ್ಯಾಚಾರ ಎಸಗಲು ಕಿಡ್ನ್ಯಾಪ್ ಮಾಡಿದ್ದೆವು ಎಂದು ಲಾರಿ ಚಾಲಕ ಅಬ್ದುಲ್ ಶೇಖ್ ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಪೂರ್ವ ಬುದ್ರ್ವಾನ್‍ನ ಗುಸ್ಕರಾದಲ್ಲಿ ಸ್ವಯಂ ಸೇವಕ ಬಿಕಾಶ್ ಗೊರಾಯಿ ದ್ವಿಚಕ್ರ ವಾಹನದ ಮೂಲಕ ಗಸ್ತು ತಿರುಗುತ್ತಿದ್ದರು. ಈ ವೇಳೆ ಲಾರಿಯ ಕ್ಯಾಬೀನ್‍ನಿಂದ ಮಹಿಳೆ ಕಿರುಚುತ್ತಿದ್ದ ಧ್ವನಿ ಕೇಳಿಸಿದೆ. ಆಗ ಚಾಲಕನನ್ನು ಹೊರಗೆ ಬರುವಂತೆ ತಿಳಿಸಿದ್ದಾರೆ. ಚಾಲಕ ಇದ್ದಕ್ಕಿದ್ದಂತೆ ವಾಹನವನ್ನು ಚಲಾಯಿಸಿದ್ದಾನೆ. ಬಿಕಾಶ್ ಲಾರಿಯನ್ನು ಬಿಡದೆ ಹಿಂಬಾಲಿಸಿದ್ದಾರೆ. ಆದರೆ ದ್ವಿಚಕ್ರ ವಾಹನದಿಂದ ಇವರನ್ನು ಹಿಂಬಾಲಿಸಲು ಆಗುವುದಿಲ್ಲ ಎಂದು ಅರಿತು ಸ್ಥಳೀಯ ಪೊಲೀಸರಿಗೆ ಕರೆ ಮಾಡಿ, ಘಟನೆ ಕುರಿತು ವಿವರಿಸಿ, ವಾಹನದ ನೋಂದಣಿ ಸಂಖ್ಯೆಯನ್ನು ನೀಡಿದ್ದಾರೆ.

    ಎಸ್‍ಯುವಿ(ಸ್ಪೋರ್ಟ್ ಯುಟಿಲಿಟಿ ವೆಹಿಕಲ್) ಕಾರಿನಲ್ಲಿ ಗಸ್ತಿನಲ್ಲಿದ್ದ ಪೊಲೀಸರಿಗೆ ಮಾಹಿತಿ ರವಾನೆಯಾಗಿದ್ದು, ಲಾರಿಯನ್ನು ಹಿಂಬಾಲಿಸಿದ್ದಾರೆ. ರಾಜ್ಯ ಹೆದ್ದಾರಿಯಲ್ಲಿ ಲಾರಿ ಸಾಗುತ್ತಿದ್ದು, ಚಾಲಕ ಅಜಾಗರೂಕತೆಯಿಂದ ವಾಹನ ಚಾಲನೆ ಮಾಡುತ್ತಿದ್ದರಿಂದ ವಾಹನವನ್ನು ಓವರ್‍ಟೇಕ್ ಮಾಡಲು ಕಷ್ಟವಾಯಿತು. ಅಲ್ಲದೆ ಚಾಲಕ ರಸ್ತೆ ತುಂಬೆಲ್ಲ ಲಾರಿಯನ್ನು ತಿರುಗಿಸುತ್ತಿದ್ದ, ನಾವು ಓವರ್‍ಟೇಕ್ ಮಾಡಲು ಪ್ರಯತ್ನಿಸಿದಾಗಲೆಲ್ಲ ನಮ್ಮ ವಾಹನದ ಮೇಲೆ ಲಾರಿ ಹರಿಸಲು ಯತ್ನಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    ಅಗಲವಾದ ರಸ್ತೆ ಬರುವವರೆಗೆ ಲಾರಿಯನ್ನು ಓವರ್‍ಟೇಕ್ ಮಾಡಲು ಸಾಧ್ಯವಾಗಲಿಲ್ಲ. ನಂತರ ಲಾರಿಯನ್ನು ಓವರ್‍ಟೇಕ್ ಮಾಡಿ, ನಿಲ್ಲಿಸಿದೆವು. ಚಾಲಕನ ಕ್ಯಾಬಿನನ್ನು ಪರಿಶೀಲಿಸಿದ್ದು, ಈ ವೇಳೆ ಮಹಿಳೆಯನ್ನು ಡ್ರೈವರ್ ಸೀಟ್ ಹಿಂದೆ ಕೂರಿಸಲಾಗಿತ್ತು. ಮಹಿಳೆಯ ಕೈಕಾಲುಗಳನ್ನು ಕಟ್ಟಲಾಗಿತ್ತು ಎಂದು ಪೂರ್ವ ಬುದ್ರ್ವಾನ್‍ನ ಎಸ್‍ಪಿ ಭಾಸ್ಕರ್ ಮುಖರ್ಜಿ ವಿವರಿಸಿದ್ದಾರೆ.

    ಲಾರಿ ಚಾಲಕ ಅಬ್ದುಲ್ ಶೇಖ್‍ನನ್ನು ಪೊಲೀಸರು ಬಂಧಿಸಿದ್ದು, ಅಪಹರಣ ಹಾಗೂ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಸುಮೊಟೋ ಪ್ರಕರಣವನ್ನು ದಾಖಲಿಸಲಾಗಿದೆ. ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಿಳೆ ಊರಿನವಳಲ್ಲ ಎಂಬುದನ್ನು ಅರಿತ ಲಾರಿ ಚಾಲಕ ಆಕೆಯನ್ನು ಹಿಂಬಾಲಿಸಿ, ನಂತರ ಲಾರಿಯೊಳಗೆ ಹತ್ತುವಂತೆ ಬಲವಂತ ಮಾಡಿದ್ದಾನೆ. ನಂತರ ಕೈ ಕಾಲುಗಳನ್ನು ಕಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.