Tag: kolkata

  • ಗಂಗೂಲಿ ಆರೋಗ್ಯದಲ್ಲಿ ಚೇತರಿಕೆ

    ಗಂಗೂಲಿ ಆರೋಗ್ಯದಲ್ಲಿ ಚೇತರಿಕೆ

    ಕೋಲ್ಕತ್ತಾ: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ, ಪ್ರಸ್ತುತ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ನ ಅಧ್ಯಕ್ಷ ಸೌರವ್ ಗಂಗೂಲಿ ಎದೆನೋವು ಕಾಣಿಸಿಕೊಂಡ ಕಾರಣ ಬುಧವಾರ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಆಸ್ಪತ್ರೆಯ ವೈದ್ಯರು ಗಂಗೂಲಿ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ ಎಂದಿದ್ದಾರೆ.

    ಗಂಗೂಲಿ ಕಳೆದ ಕೆಲದಿನಗಳ ಹಿಂದೆ ಎದೆ ನೋವಿಗಾಗಿ ಚಿಕಿತ್ಸೆ ಪಡೆದಿದ್ದರು. ಇದೀಗ ಮತ್ತೆ ಎದೆ ನೋವು ಕಾಣಿಸಿಕೊಂಡ ಪರಿಣಾಮ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯ ವೈದ್ಯರು ಪರೀಕ್ಷಿಸಿ ನಂತರ ಇನ್ನೂಂದು ಸ್ಟಂಟ್ ಅಳವಡಿಸಬೇಕು ಎಂದು ತಿಳಿಸಿದ್ದಾರೆ.

    ಜನವರಿ ಮೊದಲ ವಾರದಲ್ಲಿ ಜಿಮ್‍ನಲ್ಲಿ ಅಭ್ಯಾಸ ಮಾಡುತ್ತಿದ ವೇಳೆ ಗಂಗೂಲಿ ಅವರಿಗೆ ಎದೆ ನೋವು ಕಾಣಿಸಿಕೊಂಡು ಆಸ್ಪತ್ರೆಯಲ್ಲಿ 5 ದಿನಗಳ ಕಾಲ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದರು. ಹೃದಯನಾಳಗಳಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದ ಆ್ಯಂಜಿಯೋಪ್ಲಾಸ್ಟಿ ಮಾಡಲಾಗಿತ್ತು. ಇದೀಗ ಮತ್ತೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆ ಸ್ಟಂಟ್ ಅಳವಡಿಕೆ ಮಾಡಬೇಕಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ಗಂಗೂಲಿ ಅವರ ಆರೋಗ್ಯ ಸ್ಥಿರವಾಗಿದ್ದು ಬೆಳಗ್ಗೆ ಉಪಹಾರ ಸೇವಿಸಿದ್ದಾರೆ. ಇಂದು ಅವರ ಆರೋಗ್ಯ ಸ್ಥಿತಿಯನ್ನು ಗಮನಿಸಿ ಮುಂದಿನ ಚಿಕಿತ್ಸೆಯ ಬಗ್ಗೆ ನಿರ್ಧರಿಸಲಾಗುವುದು ಎಂದು ಅಪೋಲೋ ಆಸ್ಪತ್ರೆಯ ಹಿರಿಯ ವೈದ್ಯರು ತಿಳಿಸಿದ್ದು, ಆರೋಗ್ಯ ಪರೀಕ್ಷಿಸಿ ತಜ್ಞ ವೈದ್ಯರಾದ ಡಾ. ದೇವಿ ಶೆಟ್ಟಿಯವರನ್ನೊಳಗೊಂಡ ವೈದ್ಯರ ತಂಡದೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದ್ದಾರೆ.

  • ಕೋಲ್ಕತ್ತಾದಲ್ಲಿ ಮೊದಲ ದೋಣಿ ಗ್ರಂಥಾಲಯ ಆರಂಭ

    ಕೋಲ್ಕತ್ತಾದಲ್ಲಿ ಮೊದಲ ದೋಣಿ ಗ್ರಂಥಾಲಯ ಆರಂಭ

    ಕೋಲ್ಕತ್ತಾ: ರಾಜ್ಯದಲ್ಲಿ ದೋಣಿಯಲ್ಲಿ ಪ್ರಯಾಣಿಸುವಾಗ ಸಮಯವನ್ನು ಓದಿನಲ್ಲಿ ಕಳೆಯಲೆಂದು ಮಕ್ಕಳಿಗಾಗಿ ದೋಣಿಯಲ್ಲಿ ಲೈಬ್ರರಿಯನ್ನು ತೆರೆಯುವ ಮೂಲಕ ಸಾರಿಗೆ ನಿಗಮವು ಹೊಸ ಪ್ರಯತ್ನಕ್ಕೆ ಮುಂದಾಗಿದೆ.

     

    ದೋಣಿಯಲ್ಲಿ ಪ್ರಯಾಣ ಬೆಳೆಸುವ ಮಕ್ಕಳಿಗಾಗಿ 500 ಬೇರೆ ಬೇರೆ ಹೆಸರಾಂತ ಲೇಖಕರ ಪುಸ್ತಕಗಳನ್ನು ಹೊಂದಿದ ಲೈಬ್ರರಿಯನ್ನು ಕೊಲ್ಕತ್ತಾದ ಸಾರಿಗೆ ನಿಗಮ ಮತ್ತು ಸ್ಥಳೀಯ ಪುಸ್ತಕ ಮಳಿಗೆಯ ಕೂಡುವಿಕೆಯಲ್ಲಿ ದೋಣಿಯಲ್ಲೇ ಪ್ರಾರಂಭಿಸಿದೆ.

    ಈ ಗ್ರಂಥಾಲಯ ಸ್ಥಾಪನೆಯ ಮುಖ್ಯ ಉದ್ದೇಶ ಏನೆಂದರೆ ಹೊಗ್ಲಿ ನದಿಯಲ್ಲಿ ದೋಣಿಯಲ್ಲಿ ಪ್ರಯಾಣಿಸುವಾಗ ಕೊಲ್ಕತ್ತಾದ ವಿಶೇಷತೆಯನ್ನು ತಿಳಿಸುವ ಸಣ್ಣ ಪ್ರಯತ್ನ ಇದಾಗಿದ್ದು, ದೋಣಿಯಲ್ಲಿ ಸಂಚರಿಸುವ ಮಕ್ಕಳಿಗಾಗಿ 500 ಬೇರೆ ಬೇರೆ ಲೇಖಕರ ಪುಸ್ತಕಗಳನ್ನು ಇಟ್ಟಿದ್ದೇವೆ. ಇದು ಇಂಗ್ಲೀಷ್ ಮತ್ತು ಬೆಂಗಾಳಿ ಭಾಷೆಯಲ್ಲಿದೆ. ಮಿಲೇನಿಯಮ್ ಪಾರ್ಕ್ ನಿಂದ ಬೇಲೂರು ಮಠ ಜೆಟ್ಟಿಗೆ ಪ್ರಯಾಣಿಸಲು 3 ಗಂಟೆಯ ಬೇಕಾಗುತ್ತದೆ ಈ ಹೊತ್ತನ್ನು ಓದಿನಲ್ಲಿ ಕಳೆಯಲಿ ಎಂಬ ಉದ್ದೇಶವನ್ನು ಹೊಂದಿದ್ದೇವೆ. ಪ್ರತಿದಿನ ದೋಣಿಯು ಮೂರು ಬಾರಿ ಈ ಮಾರ್ಗವಾಗಿ ಸಂಚರಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ದೋಣಿ ಲೈಬ್ರರಿಯಲ್ಲಿ ಮಕ್ಕಳಿಗೆ 50 ರೂಪಾಯಿ ಮತ್ತು ಹಿರಿಯರಿಗೆ 100 ರೂಪಾಯಿ ಟಿಕೆಟ್ ದರವನ್ನು ನಿಗದಿ ಪಡಿಸಲಾಗಿದೆ. ಈ ಪುಸ್ತಕಗಳ ಪೈಕಿ ಕಥೆ, ಕಾದಂಬರಿ, ಮತ್ತು ಕವನಗಳನ್ನು ಹೊಂದಿರುವ ಪುಸ್ತಕಗಳನ್ನು ಪ್ರಯಾಣಿಕರಿಗಾಗಿ ಕಲ್ಪಿಸಿಕೊಟ್ಟಿದ್ದಾರೆ. ಇದರೊಂದಿಗೆ ದೋಣಿಯಲ್ಲಿ ಉಚಿತ ವೈಫೈ ಸೌಲಭ್ಯವು ಇದೆ.

  • ಸೌರವ್‌ ಗಂಗೂಲಿಗೆ ಎದೆನೋವು- ಮತ್ತೆ ಆಸ್ಪತ್ರೆಗೆ ದಾಖಲು

    ಸೌರವ್‌ ಗಂಗೂಲಿಗೆ ಎದೆನೋವು- ಮತ್ತೆ ಆಸ್ಪತ್ರೆಗೆ ದಾಖಲು

    ಕೋಲ್ಕತ್ತಾ: ಟೀಂ ಇಂಡಿಯಾದ ಮಾಜಿ ನಾಯಕ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧ್ಯಕ್ಷ ಸೌರವ್‌ ಗಂಗೂಲಿ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಇಂದು ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗಂಗೂಲಿ ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಜನವರಿ ಮೊದಲ ವಾರದಲ್ಲಿ ಜಿಮ್‌ನಲ್ಲಿ ಅಭ್ಯಾಸ ಮಾಡುತ್ತಿದ್ದಾಗ ಗಂಗೂಲಿಗೆ ಹೃದಯ ನೋವು ಕಾಣಿಸಿಕೊಂಡು ಲಘು ಹೃದಯಾಘಾತವಾಗಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಖ್ಯಾತ ಹೃದಯ ಸರ್ಜನ್​ ಡಾ. ದೇವಿ ಶೆಟ್ಟಿ ಅವರು ಆಸ್ಪತ್ರೆಯಲ್ಲಿದ್ದ ಗಂಗೂಲಿ ಅವರರನ್ನು ಭೇಟಿ ಮಾಡಿ ಸಲಹೆಗಳನ್ನು ನೀಡಿದ್ದರು. ಬಳಿಕ ಗಂಗೂಲಿ ಡಿಸ್ಚಾರ್ಜ್‌ ಆಗಿದ್ದರು.

  • ಸೂರತ್‌ನಿಂದ ಕೋಲ್ಕತ್ತಾಗೆ ಹೊರಟ್ಟಿದ್ದ ಇಂಡಿಗೋ ವಿಮಾನ ಭೋಪಾಲ್‌ನಲ್ಲಿ ತುರ್ತು ಲ್ಯಾಂಡಿಂಗ್‌

    ಸೂರತ್‌ನಿಂದ ಕೋಲ್ಕತ್ತಾಗೆ ಹೊರಟ್ಟಿದ್ದ ಇಂಡಿಗೋ ವಿಮಾನ ಭೋಪಾಲ್‌ನಲ್ಲಿ ತುರ್ತು ಲ್ಯಾಂಡಿಂಗ್‌

    ಭೋಪಾಲ್‌: ಸೂರತ್‌ನಿಂದ ಕೋಲ್ಕತ್ತಾಗೆ ಹೊರಟ್ಟಿದ್ದ 172 ಪ್ರಯಾಣಿಕರಿದ್ದ ಇಂಡಿಗೋ ವಿಮಾನ ಇಂದು ಬೆಳಗ್ಗೆ ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ತುರ್ತು ಲ್ಯಾಂಡಿಂಗ್‌ ಆಗಿದೆ.

    ತಾಂತ್ರಿಕ ಕಾರಣಗಳಿಂದಾಗಿ ಇಂಡಿಗೋ ವಿಮಾನವನ್ನು ತುರ್ತು ಲ್ಯಾಂಡಿಂಗ್‌ ಮಾಡಲು ಭೋಪಾಲ್‌ಗೆ ಕಡೆ ತಿರುಗಿಸಲಾಗಿತ್ತು. ನಿಲ್ದಾಣದಲ್ಲಿ ವಿಮಾನ ಸುರಕ್ಷಿತವಾಗಿ ಇಳಿಯಿತು ಎಂದು ಭೋಪಾಲ್ ವಿಮಾನ ನಿಲ್ದಾಣ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿದ ಇಂಡಿಗೋ ಕಂಪನಿ, “ಸೂರತ್‌ನಿಂದ ಕೋಲ್ಕತ್ತಾಗೆ ತೆರಳುತ್ತಿದ್ದ ವಿಮಾನವನ್ನು ಮುನ್ನೆಚ್ಚರಿಕೆಯಾಗಿ ಭೋಪಾಲ್‌ ಕಡೆಗೆ ತಿರುಗಿಸಲಾಯಿತು. ಹಾರಾಟದ ಸಮಯದಲ್ಲಿ ಪೈಲಟ್‌ ಗಮನಕ್ಕೆ ದುರ್ವಾಸನೆ ಬಂದ ಹಿನ್ನೆಲೆಯಲ್ಲಿ ಎಚ್ಚರಿಕೆಯಂತೆ ಭೋಪಾಲ್‌ನಲ್ಲಿ ಇಳಿಸಲಾಯಿತು. ಮತ್ತೊಂದು ವಿಮಾನದ ಮೂಲಕ ಪ್ರಯಾಣಿಕರನ್ನ ಕೋಲ್ಕತ್ತಾಗೆ ಕಳುಹಿಸಲಾಯಿತು. ಸದ್ಯ ಭೋಪಾಲ್‌ನಲ್ಲಿರುವ ವಿಮಾನವನ್ನು ಪರಿಶೀಲನೆ ಮಾಡಲಾಗುತ್ತಿದೆ. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ನಾವು ವಿಷಾದಿಸುತ್ತೇವೆ” ಎಂದು ಹೇಳಿದೆ.

    ಒಡಿಶಾದಿಂದ 50 ಕ್ಕೂ ಹೆಚ್ಚು ಪ್ರಯಾಣಿಕರೊಂದಿಗೆ ಹೊರಟಿದ್ದ ಸ್ಪೈಸ್ ಜೆಟ್ ವಿಮಾನದ ಕ್ಯಾಬಿನ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಳೆದ ಸೋಮವಾರ ಸಂಜೆ ಕೋಲ್ಕತಾ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್‌ ಆಗಿತ್ತು.

  • ಪಶ್ಚಿಮ ಬಂಗಾಳದ ಜನತೆಗೆ ಉಚಿತ ಕೋವಿಡ್ ಲಸಿಕೆ: ಮಮತಾ ಬ್ಯಾನರ್ಜಿ

    ಪಶ್ಚಿಮ ಬಂಗಾಳದ ಜನತೆಗೆ ಉಚಿತ ಕೋವಿಡ್ ಲಸಿಕೆ: ಮಮತಾ ಬ್ಯಾನರ್ಜಿ

    – ಪ್ರಧಾನಿ ಮೋದಿಯನ್ನ ಹೊಗಳಿದ ದೀದಿ

    ಕೋಲ್ಕತ್ತಾ: ಪಶ್ಚಿಮ ಬಂಗಾಳದ ಜನತೆಗೆ ಕೋವಿಡ್-19 ಲಸಿಕೆಗಳನ್ನು ಉಚಿತವಾಗಿ ವಿತರಿಸುವುದಾಗಿ ಭಾನುವಾರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ. ಈ ಕುರಿತಂತೆ ಸರ್ಕಾರ ಎಲ್ಲಾ ರೀತಿಯ ತಯಾರಿ ನಡೆಸುತ್ತಿದೆ. ನಮ್ಮ ಸರ್ಕಾರವು ರಾಜ್ಯದಲ್ಲಿನ ಜನರಲ್ಲಿ ಹಣ ಪಡೆಯದೇ ಉಚಿತವಾಗಿ ಕೋವಿಡ್-19 ಲಸಿಕೆ ವಿತರಿಸುತ್ತಿದೆ ಎಂದು ಹೇಳಲು ನನಗೆ ಬಹಳ ಸಂತೋಷವಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು. ಈ ಹಿಂದೆ ಕೇರಳ, ತಮಿಳುನಾಡು ಮಧ್ಯ ಪ್ರದೇಶ ಸೇರಿದಂತೆ ಹಲವು ರಾಜ್ಯಗಳು ಜನರಿಗೆ ಉಚಿತ ಲಸಿಕೆ ವಿತರಿಸುವುದಾಗಿ ಘೋಷಿಸಿದ್ದವು.

    ಭಾರತವು ಕೋವಿಡ್-19 ವ್ಯಾಕ್ಸಿಲೇಷನ್ ಡ್ರೈ ರನ್ ನನ್ನು ಜನವರಿ 16ರಿಂದ ದೇಶಾದ್ಯಂತ ವಿತರಿಸಲು ಆರಂಭಿಸುವುದಾಗಿ ಶನಿವಾರ ಪತ್ರಿಕಾ ಪ್ರಕಟಣೆಯಲ್ಲಿ ಕೇಂದ್ರ ಸರ್ಕಾರ ತಿಳಿಸಿತ್ತು. ಲಸಿಕೆ ವಿತರಣೆಯ ಮೊದಲ ಹಂತದಲ್ಲಿ 3 ಕೋಟಿ ಕಾರ್ಮಿಕರಿಗೆ ಪ್ರಥಮ ಆದ್ಯತೆ ನೀಡಲಾಗಿದ್ದು, ನಂತರ 50 ವರ್ಷಕ್ಕಿಂತ ಮೇಲ್ಪಟ್ಟ ಸುಮಾರು 27 ಕೋಟಿ ಜನರಿಗೆ ಮತ್ತು ಸಹ ಅಸ್ವಸ್ಥತೆ ಹೊಂದಿರುವವರಿಗೆ ಲಸಿಕೆ ವಿತರಿಸಲಾಗುತ್ತದೆ ಎಂದು ತಿಳಿಸಿದರು.

    ಇನ್ನೂ ಪ್ರಧಾನಿ ಮೋದಿಯವರ ಬಗ್ಗೆ ಮಾತನಾಡಿದ ಮಮತಾ ಬ್ಯಾನರ್ಜಿ, ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಭಾರತ ಪ್ರಧಾನಿ ಮೋದಿಯವರು ಹೆಗ್ಗುರುತಿನ ಹೆಜ್ಜೆ ದೊಡ್ಡ ಮಟ್ಟದಲ್ಲಿದೆ ಎಂದು ಶ್ಲಾಘಿಸಿದರು. ಈ ಮುನ್ನ ಲಸಿಕೆಯಲ್ಲಿ ಯಾವುದಾದರೂ ಲೋಪದೋಷವಿದೆಯಾ ಎಂದು ಕಂಡುಹಿಡಿಯಲು ಭಾರತ ನಕಲಿ ವ್ಯಾಕ್ಸಿನೇಷನ್ ಡ್ರೈ ರನ್ ಗಳ ಪರೀಕ್ಷೆ ನಡೆಸಿದ್ದವು ಎಂದರು.

    ಭಾನುವಾರ 8 ಗಂಟೆಯಷ್ಟರಲ್ಲಿ ಭಾರತದಲ್ಲಿ 24 ಗಂಟೆಯೊಳಗೆ 18,645 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1.4 ಕೋಟಿಗೆ ತಲುಪಿದೆ. ಸಕ್ರಿಯ ಪ್ರಕರಣಗಳು 2.33 ಲಕ್ಷಕ್ಕೆ ಇಳಿದಿದೆ. ಅಲ್ಲದೆ ಸೋಂಕಿನಿಂದ ಚೇತರಿಕೊಳ್ಳುತ್ತಿರುವವರ ಸಂಖ್ಯೆ ಕೂಡ 1,00,75,950ಕ್ಕೆ ಏರಿಕೆಯಾಗಿದೆ. ಶನಿವಾರ 201 ಜನರು ಮೃತಪಟ್ಟಿರುವುದು ವರದಿಯಲ್ಲಿ ತಿಳಿದು ಬಂದಿದೆ. ಶನಿವಾರ ಕೇರಳದಲ್ಲಿ 5,528 ಹೊಸ ಪ್ರಕರಣಗಳು ವರದಿಯಾಗಿದ್ದು, ಮಹಾರಾಷ್ಟ್ರದಲ್ಲಿ 3,581 ಪ್ರಕರಣಗಳು ದಾಖಲಾಗಿವೆ.

  • ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಎದೆನೋವು, ಆಸ್ಪತ್ರೆಗೆ ದಾಖಲು

    ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಎದೆನೋವು, ಆಸ್ಪತ್ರೆಗೆ ದಾಖಲು

    ಕೋಲ್ಕತ್ತಾ: ಬಿಸಿಸಿಐ ಅಧ್ಯಕ್ಷರಾದ ಸೌರವ್ ಗಂಗೂಲಿ ಅವರಿದೆ ಲಘು ಹೃದಯಘಾತದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಇಂದು ಬೆಳಿಗ್ಗೆ ಅನಾರೋಗ್ಯದ ಸಮಸ್ಯೆಯಿಂದಾಗಿ ಬಳಲುತ್ತಿದ್ದ ಗಂಗೂಲಿ ಅವರನ್ನು ಕೋಲ್ಕತ್ತಾದ ವುಡ್‌ಲ್ಯಾಂಡ್‌ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆಸ್ಪತ್ರೆಯ ವೈದ್ಯರು ತಪಾಸಣೆ ನಡೆಸಿ ಆಂಜಿಯೋಪ್ಲ್ಯಾಸ್ಟಿ ಟೆಸ್ಟ್ ಮಾಡುವಂತೆ ಸೂಚಿಸಿದ್ದಾರೆ.

    ಮನೆಯಲ್ಲಿನ ಜಿಮ್‍ನಲ್ಲಿ ವಕೌರ್ಟ್ ಮಾಡುತ್ತಿದ್ದಾಗ ತಲೆ ತಿರುಗಿ ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ವೈದ್ಯರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ  ಗಂಗೂಲಿ ಅವರ ಆರೋಗ್ಯ ಸ್ಥಿರವಾಗಿದ್ದು ಇಂದೇ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ವರದಿಯಾಗಿದೆ.

    ಕೋವಿಡ್ ಮಧ್ಯದಲ್ಲೇ ಗಂಗೂಲಿ ಅವರು ಕ್ರಿಕೆಟ್ ಪುನರಾರಂಭದ ಕೆಲಸ ಮಾಡುತ್ತಿದ್ದು, ಇತ್ತೀಚೆಗೆ ನಡೆದ ಬಿಸಿಸಿಐನ 89ನೇ ವಾರ್ಷಿಕ ಸಾಮಾನ್ಯ ಸಭೆಯ ಸಭೆಯ ನೇತೃತ್ವ ವಹಿಸಿದ್ದರು. ಅಲ್ಲದೆ 2022ರ ಐಪಿಎಲ್ ಸೀಸನ್‍ಗೆ 2 ಹೆಚ್ಚುವರಿ ಪ್ರಾಂಚೈಸಿಗಳನ್ನು ಸಹ ಘೋಷಣೆ ಮಾಡಿದ್ದಾರೆ.

    ಅಕ್ಟೋಬರ್ 2019ರಲ್ಲಿ ಗಂಗೂಲಿ ಅವರು ಬಿಸಿಸಿಐ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದು, ಆರಂಭದಲ್ಲಿ ಕೇವಲ 9 ತಿಂಗಳ ಅವಧಿಗೆ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಕೊರೊನಾ ಹಿನ್ನೆಲೆ ಅವರ ಅಧಿಕಾರಾವಧಿಯನ್ನು ವಿಸ್ತರಿಸಲಾಯಿತು. ಗಂಗೂಲಿಯವರನ್ನು ದಾದಾ ಎಂದೇ ಅವರ ಅಭಿಮಾನಿಗಳು ಕರೆಯುತ್ತಾರೆ.

  • ಹುಟ್ಟುಹಬ್ಬದ ಪಾರ್ಟಿ ಮುಗಿಸಿ ಬರುತ್ತಿದ್ದವಳಿಗೆ ಸ್ನೇಹಿತರಿಂದ ಕಿರುಕುಳ

    ಹುಟ್ಟುಹಬ್ಬದ ಪಾರ್ಟಿ ಮುಗಿಸಿ ಬರುತ್ತಿದ್ದವಳಿಗೆ ಸ್ನೇಹಿತರಿಂದ ಕಿರುಕುಳ

    – ಚಲಿಸುತ್ತಿರುವ ಕಾರಿನಲ್ಲಿ ಲೈಂಗಿಕ ದೌರ್ಜನ್ಯ

    ಕೋಲ್ಕತ್ತಾ: ಹುಟ್ಟುಹಬ್ಬದ ಪಾರ್ಟಿಯನ್ನು ಮುಗಿಸಿಕೊಂಡು ಸ್ನೇಹಿತರ ಜೊತೆಗೆ ಕಾರಿನಲ್ಲಿ ಹಿಂದಿರುಗುತ್ತಿದ್ದ ಯುವತಿಗೆ ಇಬ್ಬರು ಸ್ನೇಹಿತರು ಕಿರುಕುಳ ನೀಡಿರುವ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.

    ಕಿರುಕುಳಕ್ಕೊಳಗಾದ 21ರ ಯುವತಿ ಮಾಸ್ತೇಲಾ ನಿವಾಸಿಯಾಗಿದ್ದಾಳೆ. ಜಾದವ್‍ಪುರದ ಬಿಕ್ರಮ್‍ಘರ್ ಪ್ರದೇಶದಲ್ಲಿ ತನ್ನ ಸ್ನೇಹಿತನ ಹುಟ್ಟುಹಬ್ಬದ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಯುವತಿ, ರಾತ್ರಿ 11 ಗಂಟೆ ಸುಮಾರಿಗೆ ಮನೆಗೆ ಮರಳುತ್ತಿದ್ದಳು. ಅಂತೆಯೇ ಆಕೆ ತನ್ನ ಸ್ನೇಹಿತರ ಜೊತೆ ಕಾರಿನಲ್ಲಿ ಹೊರಟ್ಟಿದ್ದಾಳೆ. ಆಗ ಇಬ್ಬರು ಸ್ನೇಹಿತರು ಚಲಿಸುವ ಕಾರಿನಲ್ಲೇ ಲೈಂಗಿಕ ಕಿರುಕುಳ ನೀಡಲು ಪ್ರಾರಂಭಿಸಿದ್ದಾರೆ. ಸಂತ್ರಸ್ತೆ ಸಹಾಯಕ್ಕಾಗಿ ಕಿರುಚುತ್ತಲೇ ಇದ್ದಳು. ಯುವತಿಗೆ ಲೈಂಗಿಕ ಕಿರುಕುಳ ನೀಡಿ ನಂತರ ಅವಳನ್ನು ವಾಹನದಿಂದ ಭೋವಾನಿಪುರ ಪೊಲೀಸ್ ಠಾಣೆ ಬಳಿ ಎಸೆದು ಹೋಗಿದ್ದಾರೆ.

     

    ಆಕೆಯ ಸ್ನೇಹಿತರೇ ಅವಳಿಗೆ ಕಾರಿನಲ್ಲಿ ಕಿರುಕುಳ ನೀಡಿದ್ದಾರೆ. ಈ ಪ್ರಕರಣ ಜಾದವ್‍ಪುರ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಯುವತಿಗೆ ಕಿರುಕುಳ ನೀಡಿದ ಇಬ್ಬರು ಸ್ನೇಹಿತರಿಗಾಗಿ ಹುಡುಕುತ್ತಿದ್ದೇವೆ. ಮೊಬೈಲ್ ಟವರ್ ಸ್ಥಳದ ಮೂಲಕ ಪತ್ತೆ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

  • ರಾತ್ರಿ 8ಕ್ಕೆ ಚೆಕ್‍ಔಟ್ ಮಾಡದ ದಂಪತಿ – ಬಾಗಿಲು ತೆಗೆದು ಬೆಚ್ಚಿದ ಸಿಬ್ಬಂದಿ

    ರಾತ್ರಿ 8ಕ್ಕೆ ಚೆಕ್‍ಔಟ್ ಮಾಡದ ದಂಪತಿ – ಬಾಗಿಲು ತೆಗೆದು ಬೆಚ್ಚಿದ ಸಿಬ್ಬಂದಿ

    – ಏಳು ಗಂಟೆಗೆ ರೂಂ ಖಾಲಿ ಮಾಡೋದಾಗಿ ಹೇಳಿದ್ದ ದಂಪತಿ

    ಕೋಲ್ಕತ್ತಾ: ಹೋಟೆಲ್ ನಲ್ಲಿ ಮಹಿಳೆ ಕೊಲೆ ನಡೆದಿರುವ ಘಟನೆ ಕೋಲ್ಕತ್ತಾದ ನ್ಯೂಟೌನ್ ನಲ್ಲಿ ನಡೆದಿದೆ. ಆರತಕ್ಷಗೆ ಬಂದಿರೋದಾಗಿ ಹೇಳಿ ದಂಪತಿ ಹೋಟೆಲ್ ನಲ್ಲಿ ಬಾಡಿಗೆ ರೂಂ ಪಡೆದುಕೊಂಡಿದ್ದರು.

    ಮಂಗಳವಾದ ಮಧ್ಯಾಹ್ನದ ವೇಳೆ ಹೋಟೆಲ್ ಗೆ ಬಂದಿದ್ದ ದಂಪತಿ ಅಡ್ವಾನ್ಸ್ ಹಣ ನೀಡಿ ಕೋಣೆ ಬುಕ್ ಮಾಡಿದ್ದರು. ಸಂಜೆ ಏಳು ಗಂಟೆಗೆ ರೂಂ ಖಾಲಿ ಮಾಡೋದಾಗಿ ಸಹ ಹೇಳಿದ್ದರು. ರಾತ್ರಿ ಎಂಟು ಗಂಟೆಯಾದ್ರೂ ರೂಂ ಖಾಲಿ ಮಾಡದಿದ್ದಾಗ ಸಿಬ್ಬಂದಿ ಲ್ಯಾಂಡ್‍ಲೈನ್ ಗೆ ಫೋನ್ ಮಾಡಿದ್ದಾರೆ. ಕರೆ ಸ್ವೀಕರಿಸಿದ ಹಿನ್ನೆಲೆ ರೂಂ ಬಾಗಿಲು ತಟ್ಟಿದ್ದಾರೆ. ಕೋಣೆಯೊಳಗೆ ಟಿವಿ ಸೌಂಡ್ ಹೆಚ್ಚು ಮಾಡಿದ್ದರಿಂದ ನಕಲಿ ಕೀ ಬಳಸಿ ಬಾಗಿಲು ತೆಗೆದಿದ್ದಾರೆ.

    ಬೆಡ್ ಮಹಿಳೆಯ ಶವ ಸಿಕ್ಕಿದೆ. ಮಹಿಳೆಯ ಕತ್ತು ಮತ್ತು ಇನ್ನಿತರ ಭಾಗಗಳಲ್ಲಿ ಚಾಕುವಿನಿಂದ ಇರಿಯಲಾಗಿತ್ತು. ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಶವವನ್ನ ಸಾರ್ವಜನಿಕ ಆಸ್ಪತ್ರೆಯಲ್ಲಿರಿಸಿದ್ದಾರೆ.

    ರೂಂ ನೀಡುವ ವೇಳೆ ಹೋಟೆಲ್ ಸಿಬ್ಬಂದಿ ಇಬ್ಬರ ಗುರುತಿನ ಚೀಟಿಯ ಜೆರಾಕ್ಷ್ ಪಡೆದುಕೊಂಡಿದ್ದರು. ಗುರುತಿನ ಚೀಟಿ ಪ್ರಕಾರ ಇಬ್ಬರು ಪಶ್ವಿಮ ಮಿಡ್ನಾಪುರದ ನಿವಾಸಿಗಳೆಂದು ತಿಳಿದು ಬಂದಿದೆ. ಅಮಿತ್ ಘೋಷ್ ಮತ್ತು ಚುಮಕಿ ರೂಂ ಪಡೆದು ಸಂಜೆ ಏಳು ಗಂಟೆಗೆ ಹೊರಡೋದಾಗಿ ಹೇಳಿದ್ದರು. ಕೆಲ ಸಮಯದ ಬಳಿಕ ಹೊರ ಬಂದಿದ್ದ ಅಮಿತ್ ಸಹ ಇದೇ ಮಾತನ್ನ ಹೇಳಿ ಹೋಟೆಲ್ ನಿಂದ ಹೊರ ಹೋಗಿದ್ದನು. ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

     

  • ಸುವೇಂದು ಸೇರಿದಂತೆ 11 ಟಿಎಂಸಿ ಶಾಸಕರು, ಓರ್ವ ಸಂಸದ ಬಿಜೆಪಿಗೆ ಸೇರ್ಪಡೆ

    ಸುವೇಂದು ಸೇರಿದಂತೆ 11 ಟಿಎಂಸಿ ಶಾಸಕರು, ಓರ್ವ ಸಂಸದ ಬಿಜೆಪಿಗೆ ಸೇರ್ಪಡೆ

    – ಇಂದು ಆರಂಭವಷ್ಟೇ, ಚುನಾವಣೆಯಲ್ಲಿ ಮಮತಾ ಏಕಾಂಗಿಯಾಗಲಿದ್ದಾರೆ
    – 200ಕ್ಕೂ ಹೆಚ್ಚು ಸ್ಥಾನವನ್ನು ಬಿಜೆಪಿ ಗೆಲ್ಲಲ್ಲಿದೆ – ಅಮಿತ್ ಶಾ

    ಕೋಲ್ಕತ್ತಾ: 2021ರಲ್ಲಿ ನಡೆಯಲಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಏರಲೇಬೇಕೆಂದು ಬಿಜೆಪಿ ಪಣ ತೊಟ್ಟಿದ್ದು, ಇಂದು ಅಮಿತ್ ಶಾ ಸಮ್ಮುಖದಲ್ಲಿ ಟಿಎಂಸಿ ಪ್ರಭಾವಿ ಮುಖಂಡ ಸುವೇಂದು ಅಧಿಕಾರಿ ಸೇರಿದಂತೆ 11 ಮಂದಿ ಟಿಎಂಸಿ ಶಾಸಕರು, ಓರ್ವ ಸಂಸದ ಮತ್ತು ಮಾಜಿ ಸಂಸದರೊಬ್ಬರು ಬಿಜೆಪಿ ಸೇರ್ಪಡೆಯಾಗಿದ್ದಾರೆ.

    ಕೇಂದ್ರ ಗೃಹ ಸಚಿವ ಅಮಿತ್ ಶಾ ಎರಡು ದಿನಗಳ ಕಾಲ ಪಶ್ಚಿಮ ಬಂಗಾಳ ಪ್ರವಾಸ ಕೈಗೊಂಡಿದ್ದು ಇಂದು ಮಿಡ್ನಾಪುರದಲ್ಲಿ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದರು. ಈ ವೇಳೆ ಟಿಎಂಸಿ ನಾಯಕರು ಬಿಜೆಪಿಗೆ ಸೇರ್ಪಡೆಯಾದರು.

    ಈ ವೇಳೆ ಮಾತನಾಡಿದ ಅಮಿತ್ ಶಾ, ನೀವು ಕಾಂಗ್ರೆಸ್‍ಗೆ ಮೂರು ದಶಕ, ಕಮ್ಯೂನಿಸ್ಟರಿಗೆ 27 ವರ್ಷ ಹಾಗೂ 10 ವರ್ಷ ಮಮತಾ ದೀದಿಗೆ ಅಧಿಕಾರ ನೀಡಿದ್ದೀರಿ. ಮುಂದಿನ 5 ವರ್ಷ ಅಧಿಕಾರ ನಡೆಸಲು ಬಿಜೆಪಿಗೆ ಮತ ನೀಡಿ. ನಾವು ಸೋನಾರ್ ಬಂಗಾಳವನ್ನಾಗಿ ಮಾಡುತ್ತೇವೆ ಎಂದು ಭರವಸೆ ನೀಡಿದರು.

    ಟಿಎಂಸಿ ತೊರೆಯಲು ಬಿಜೆಪಿ ಪ್ರಚೋದಿಸುತ್ತಿದೆ ಎಂದು ಮಮತಾ ಬ್ಯಾನರ್ಜಿ ಹೇಳುತ್ತಿದ್ದಾರೆ. ಆದರೆ ಅವರು ಕಾಂಗ್ರೆಸ್ ತೊರೆದು ಟಿಎಂಸಿ ಪಕ್ಷವನ್ನು ಸ್ಥಾಪಿಸಲಿಲ್ಲವೇ? ಇದು ಕೇವಲ ಆರಂಭ ಅಷ್ಟೇ. ಚುನಾವಣೆ ಸಮಯದಲ್ಲಿ ಮಮತಾ ಬ್ಯಾನರ್ಜಿ ಏಕಾಂಗಿ ಆಗಲಿದ್ದಾರೆ ಎಂಧು ಗುಡುಗಿದ ಅಮಿತ್ ಶಾ, ಮುಂದಿನ ಚುನಾವಣೆಯಲ್ಲಿ 200ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಈ ವೇಳೆ ಮಾತನಾಡಿದ ಸುವೇಂದು ಅಧಿಕಾರಿ ಪಶ್ಚಿಮ ಬಂಗಾಳದ ಆರ್ಥಿಕ ಪರಿಸ್ಥಿತಿ ಅತ್ಯಂತ ಕೆಟ್ಟದಾಗಿದೆ. ನರೇಂದ್ರ ಮೋದಿಯವರಿಂದ ಮಾತ್ರ ಅಭಿವೃದ್ಧಿ ಸಾಧ್ಯ. ಈ ಕಾರಣಕ್ಕೆ ನಾವು ಬಿಜೆಪಿಗೆ ಬಂದಿದ್ದೇವೆ ಎಂದು ತಿಳಿಸಿದರು.

  • ಮಮತಾ ನಾಡಿನಲ್ಲಿ ಅಮಿತ್ ಶಾ ಪ್ರವಾಸ

    ಮಮತಾ ನಾಡಿನಲ್ಲಿ ಅಮಿತ್ ಶಾ ಪ್ರವಾಸ

    -ಟಿಎಂಸಿ ನಾಯಕರ ರಾಜೀನಾಮೆ

    ಕೋಲ್ಕತ್ತಾ: ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿ ಮುಖಂಡರಾದ ಅಮಿತ್ ಶಾ ಎರಡು ದಿನಗಳ ಪ್ರವಾಸಕ್ಕೆ ಪಶ್ಚಿಮ ಬಂಗಾಳಕ್ಕೆ ಆಗಮಿಸಿದ್ದಾರೆ. ಬಿಜೆಪಿ ನಾಯಕರು ವಿಮಾನ ನಿಲ್ದಾಣದಲ್ಲಿ ಶಾ ಅವರನ್ನು ಸ್ವಾಗತಿಸಿದ್ದಾರೆ.

    ವಿಧಾನಸಭಾ ಚುನಾವಣೆಗೆ ಮುನ್ನ ಪಶ್ಚಿಮ ಬಂಗಾಳದಲ್ಲಿ ತಮ್ಮ ಪಕ್ಷದ ಪ್ರಚಾರ, ಮತ್ತು ಕಾರ್ಯವೈಖರಿಯನ್ನು ತಿಳಿಯಲು ಕೆಂದ್ರ ಗೃಹ ಸಚಿವ ಅಮಿತ್ ಶಾ ಪಶ್ಚಿಮ ಬಂಗಾಳಕ್ಕೆ ಆಗಮಿಸಿದ್ದಾರೆ.

    ತೃಣಮೂಲ ಕಾಂಗ್ರೆಸ್ ಪಕ್ಷದ ಶಾಸಕ ಶಿಲ್ಭದ್ರ ದತ್ತ ಇಂದು ಬೆಳಗ್ಗೆ ಟಿಎಂಸಿ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನಿನ್ನೆಯಷ್ಟೇ ಸುವೇಂದು ಅಧಿಕಾರಿ ಮತ್ತು ಜಿತೇಂದ್ರ ತಿವಾರಿ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಬಂಗಾಳ ಭೇಟಿ ಹಿನ್ನೆಲೆಯಲ್ಲಿ ಟಿಎಂಸಿ ಶಾಸಕರು ರಾಜೀನಾಮೆ ಸಲ್ಲಿಸುತ್ತಿದ್ದಾರೆ.

    ಕೋಲ್ಕತ್ತಾಗೆ ಆಗಮಿಸಿದ ನಂತರ ಅಮಿತ್ ಶಾ ಗುರುದೇವ್ ಟ್ಯಾಗೋರ್, ಈಶ್ವರ್ ಚಂದ್ರ ವಿದ್ಯಾ ಸಾಗರ್ ಮತ್ತು ಶ್ಯಾಮಾ ಪ್ರಸಾದ್ ಮುಖರ್ಜಿ ಅವರು ಇದ್ದಂತಹ ಶ್ರೇಷ್ಠ ಪೂಜ್ರು ಇದ್ದ ಭೂಮಿಗೆ ನಾನು ನಮಸ್ಕರಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

    ಇಂದು ಮಿಡ್ನಾಪುರದಲ್ಲಿ ನಡೆಯಲಿರುವ ಸಾರ್ವಜನಿಕ ರ್ಯಾಲಿಯಲ್ಲಿ ಶಾ ಮಾತನಾಡಲಿದ್ದಾರೆ. ರ್ಯಾಲಿಯಲ್ಲಿ ಟಿಎಂಸಿ ನಾಯಕರು ಬಿಜೆಪಿಗೆ ಸೇರುವ ಸಾಧ್ಯತೆಯಿದೆ.