Tag: kolkata

  • ನೋಡ ನೋಡುತ್ತಲೇ ಸಿಂಹದ ಬೋನಿಗೆ ಬಿದ್ದ

    ನೋಡ ನೋಡುತ್ತಲೇ ಸಿಂಹದ ಬೋನಿಗೆ ಬಿದ್ದ

    – ಸಿಬ್ಬಂದಿಯ ಹರಸಾಹಸದಿಂದ ವ್ಯಕ್ತಿ ಪಾರು

    ಕೋಲ್ಕತ್ತಾ: ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬ ಅಲಿಪೋರ್ ಮೃಗಾಲಯದಲ್ಲಿ ಸಿಂಹವನ್ನು ನೋಡ ನೋಡುತ್ತ ಬೋನಿಗೆ ಬಿದ್ದು ಸಿಂಹದ ದಾಳಿಯಿಂದ ಗಾಯಗೊಂಡು ಅದೃಷ್ಟವಶತ್ ಪಾರಾಗಿದ್ದಾನೆ.

    ಮೃಗಾಲಯದಲ್ಲಿ ಪ್ರಾಣಿಗಳನ್ನು ನೋಡುತ್ತಿದ್ದ ವ್ಯಕ್ತಿ ಏಕಾಏಕಿ ಸಿಂಹದ ಬೋನಿಗೆ ನುಗ್ಗಿದ್ದಾನೆ. ಇದನ್ನು ಗಮನಿಸಿದ ಸಿಂಹ ಆತನ ಮೇಲೆ ದಾಳಿ ಮಾಡಿದೆ. ನಂತರ ರಕ್ಷಣಾ ಸಿಂಬಂದಿ ಹರಸಾಹಸಪಟ್ಟು ನಿರಂತರ ಕಾರ್ಯಚರಣೆಯ ಮೂಲಕ ವ್ಯಕ್ತಿಯನ್ನು ಬೋನಿನಿಂದ ಹೊರತಂದು ರಕ್ಷಣೆ ಮಾಡಲಾಗಿದೆ.

    ಗಾಯಗೊಂಡ ವ್ಯಕ್ತಿಯನ್ನು ಎಸ್‍ಎಸ್‍ಕೆಎಂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟದಲ್ಲಿ ಇಡಲಾಗಿದೆ. ಆಸ್ಪತ್ರೆಯ ವೈದ್ಯರ ಪ್ರಕಾರ ವ್ಯಕ್ತಿಯ ಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಸಿಂಹವು ವ್ಯಕ್ತಿಯ ಕಾಲಿನ ತೊಡೆಯ ಭಾಗಕ್ಕೆ ತೀವ್ರವಾಗಿ ಗಾಯಗೊಳಿಸಿದ್ದು ರಕ್ಷಣಾ ಸಿಬ್ಬಂದಿ ಸಿಂಹದ ಗಮನವನ್ನು ಬೇರೆಡೆಗೆ ಸೆಳೆದು ವ್ಯಕ್ತಿಯನ್ನು ರಕ್ಷಿಸಿದ್ದಾರೆ.

    ಮೃಗಾಲಯದಲ್ಲಿನ ಸಿಂಹದ ಬೋನಿಗೆ ಆ ವ್ಯಕ್ತಿ ಹೇಗೆ ಪ್ರವೇಶಿಸಿದ್ದಾನೆ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು. ವ್ಯಕ್ತಿಯು ಮಾನಸಿಕ ಅಸ್ವಸ್ಥ ಎಂದು ತಿಳಿಸಿದ್ದಾರೆ.

  • ಬೆಂಗಾಲಿ ಸ್ವೀಟ್‍ಗಳ ಮೇಲೆ ರಾಜಕೀಯ ಚಿಹ್ನೆ

    ಬೆಂಗಾಲಿ ಸ್ವೀಟ್‍ಗಳ ಮೇಲೆ ರಾಜಕೀಯ ಚಿಹ್ನೆ

    ಕೋಲ್ಕತ್ತಾ: ಬಂಗಾಳದಲ್ಲಿ ಚುನಾವಣೆ ದಿನಾಂಕ ಹತ್ತಿರ ಬರುತ್ತಿದ್ದಂತೆಯೇ ಎಲ್ಲೆಲ್ಲೂ ರಾಜಕೀಯವೇ ರಾರಾಜಿಸುತ್ತಿದೆ. ಇತ್ತೀಚೆಗೆ ಕ್ರಿಕೆಟಿಗ ಮನೋಜ್ ತಿವಾರಿ ಅವರ ಜಾಕೆಟ್ ಮೇಲೆ, ಅಗ್ನಿಮಿತ್ರ ಪಾಲ್ ಅವರ ಡಿಸೈನರ್ ಸೀರೆಗಳ ಕಮಲದ ಚಿಹ್ನೆ ಇತ್ತು. ಇದೀಗ ಸ್ವೀಟ್ ಅಂಗಡಿಯ ಮಾಲೀಕ ಸಂದೇಶ್ ಸರದಿ.

    ಕೋಲ್ಕತ್ತಾದ ಬಲರಾಮ್ ಮುಲ್ಲಿಕ್ ರಾಧರಮನ್ ಮುಲ್ಲಿಕ್ ಸ್ವೀಟ್‍ಗಳ ಮೇಲೆ ರಾಜಕೀಯ ಪಕ್ಷದ ಚಿಹ್ನೆಗಳನ್ನು ರಚಿಸುವ ಮೂಲಕ ಮತದಾನದ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ.

    ರಾಜಕೀಯದ ಪ್ರಮುಖ ಪಕ್ಷಗಳ ಚಿಹ್ನೆ ಸೇರಿದಂತೆ ಕಾಂಗ್ರೆಸ್, ಭಾರತೀಯ ಜನತಾ ಪಕ್ಷದ ಚಿಹ್ನೆ ಜೊತೆಗೆ ಜೈ ಶ್ರೀ ರಾಮ್ ಮತ್ತು ಖೇಲಾ ಹೋಬ್ ಎಂಬ ಎರಡು ಪದಗಳನ್ನು ಸ್ವೀಟ್‍ಗಳ ಮೇಲೆ ರಚಿಸಿದ್ದಾರೆ. ಇದೀಗ ಈ ಸ್ವೀಟ್‍ಗಳು ಸೋಶಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದೆ.

    ಈ ಕುರಿತಂತೆ ಮಾತನಾಡಿದ ಸ್ವೀಟ್ ಹೌಸ್ ವ್ಯವಸ್ಥಾಪಕ ನಿರ್ದೇಶಕ ಸುದೀಪ್ ಮಲ್ಲಿಕ್, ವರ್ಷದ ಬಹುದೊಡ್ಡ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ನಾವು ಚುನಾವಣೆಯ ಸಂಬಂಧಪಟ್ಟಂತೆ ಸ್ವೀಟ್‍ಗಳನ್ನು ತಯಾರಿ ಮಾಡುತ್ತಿದ್ದು, ಈ ಸ್ವೀಟ್‍ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಖೇಲಾ ಹೋಬ್ ಮತ್ತು ಜೈ ಶ್ರೀ ರಾಮ್ ಎಂದು ಪದವನ್ನು ರಚಿಸಿರುವ ಸ್ವೀಟ್‍ಗಳಂತೂ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿಹೋಗಿದೆ ಎಂದು ಹೇಳಿದ್ದಾರೆ.

    ಸದ್ಯ ಈ ಸ್ವೀಟ್‍ಗಳು ಗ್ರಾಹಕರ ಗಮನ ಸೆಳೆಯುತ್ತಿದ್ದು, ಗ್ರಾಹಕರು ರಾಜಕೀಯ ಚಿಹ್ನೆಗಳುಳ್ಳ ಸ್ವೀಟ್‍ಗಳನ್ನು ಖರೀದಿಸಲು ಪ್ರಾರಂಭಿಸಿದ್ದಾರೆ ಎಂದು ತಿಳಿಸಿದರು.

  • 1 ಕಪ್ ಚಹಾದ ಬೆಲೆ ಬರೋಬ್ಬರಿ 1 ಸಾವಿರ ರೂಪಾಯಿ

    1 ಕಪ್ ಚಹಾದ ಬೆಲೆ ಬರೋಬ್ಬರಿ 1 ಸಾವಿರ ರೂಪಾಯಿ

    ಕೊಲ್ಕತ್ತಾ: ಒಂದು ಕಪ್ ಚಹಾದ ಬೆಲೆ 10 ರೂಪಾಯಿ ಇರುತ್ತೆ. ದೊಡ್ಡ ಹೋಟೆಲ್‍ಗಳಲ್ಲಿ ಸ್ವಲ್ಪ ಹೇಚ್ಚಾಗಿರುತ್ತದೆ. ಆದರೆ ಕೋಲ್ಕತ್ತಾದಲ್ಲಿ ಸಿಗುವ ಟೀ ಬೆಲೆ ಬರೋಬ್ಬರಿ 1000 ರೂಪಾಯಿ ಆಗಿದೆ.

    ಒಂದು ಕಪ್ ಟೀ ಬೆಲೆ ಬರೋಬ್ಬರಿ 1000 ರೂಪಾಯಿಯಂತೆ. ಕೋಲ್ಕತ್ತಾದಲ್ಲಿನ ಮುಕುಂದಪುರದ ನಿಜಶ್ ಟೀ ಅಂಗಡಿಯಲ್ಲಿ ಇಷ್ಟೋಂದು ಬೆಲೆಬಾಳುವ ಟೀಗಳು ದೊರೆಯುತ್ತದೆ.

    ಈ ಹೋಟೆಲ್‍ನಲ್ಲಿ ಸಿಗುವ ಟೀಗಳಲ್ಲಿ ಅತೀ ದುಬಾರಿ ಟೀ ಎಂದರೆ ಬೋ-ಲಿಯೋ ಚಹಾದ ಒಂದು ಕಪ್‍ಗೆ 1000ರೂಪಾಯಿ ಆಗಿದೆ. ಟೀ ತಯಾರಿಸಲು ಬಳಸುವ ಬೋ-ಲಿಯೋ ಸೊಪ್ಪಿಗೆ 1 ಕೇಜಿಗೆ ಬರೋಬ್ಬರಿ 3 ಲಕ್ಷರೂಪಾಯಿಯಂತೆ. ಹಾಗಾಗಿ ಈ ಟೀ ಇಷ್ಟೊಂದು ಬೆಲೆ ಎಂದು ಹೇಳಲಾಗುತ್ತಿದೆ.

    ಸಿಲ್ವರ್ ಸ್ಯೂ ವೈಟ್, ಬ್ಲೂ ಟೆಸಾನೆ, ಲೆವೆಂಡರ್, ಹಿಬಿಸ್ಕಾಸ್, ವೈನ್ ಟೀ ಸೇರಿದಂತೆ ಹತ್ತಾರು ಬಗೆಯ ಟೀಗಳು ನಿಮಗೆ ಇಲ್ಲಿ ದೊರೆಯುತ್ತವೆ. 12 ರೂಪಾಯಿನಿಂದ ಪ್ರಾರಂಭವಾಗಿ 1000 ರೂಪಾಯಿ ಬೆಲೆಬಾಳುವ ಟೀಗಳು ಈ ಅಂಗಡಿಯಲ್ಲಿ ದೊರೆಯತ್ತವೆ.

    ಈ ಅಂಗಡಿ ಮಾಲೀಕರಾಗಿರುವ ಆಪಾರ್ಥ ಪ್ರತಿಮ್ ಗಂಗೂಲಿ ಅವರು ಮೊದಲು ಕಂಪನಿಯೊಂದಕ್ಕೆ ಕೆಲಸಕ್ಕೆ ಹೋಗುತ್ತಿದ್ದರು. ಮುಂದೆ ಒಂದು ದಿನ ನಾನ್ಯಾಕೆ ಒಂದು ವ್ಯಾಪಾರ ಶುರು ಮಾಡಬಾರದು ಎಂದು ಯೋಚಿಸುತ್ತಿದ್ದಾಗ ಟೀ ಅಂಗಡಿ ಮಾಡುವ ಆಲೋಚನೆ ಇವರಿಗೆ ಬಂದಿದೆ. ಇದೀಗ ಕೋಲ್ಕತ್ತಾದಲ್ಲಿ ಫೇಮಸ್ ಟೀ ಅಂಗಡಿಗಳಲ್ಲಿ ಇದೂ ಕೂಡಾ ಒಂದಾಗಿದೆ.

  • ಮೆಡಿಕಲ್ ಕಾಲೇಜಿನ ಆವರಣದಲ್ಲಿ ಓಡಾಡಿದ ಗಜರಾಜ – ಅರಣ್ಯಾಧಿಕಾರಿಗಳಿಂದ ಆನೆಯ ರಕ್ಷಣೆ

    ಮೆಡಿಕಲ್ ಕಾಲೇಜಿನ ಆವರಣದಲ್ಲಿ ಓಡಾಡಿದ ಗಜರಾಜ – ಅರಣ್ಯಾಧಿಕಾರಿಗಳಿಂದ ಆನೆಯ ರಕ್ಷಣೆ

    ಕೋಲ್ಕತ್ತಾ: ಮೇಡಿಕಲ್ ಕಾಲೇಜಿನ ಆವರಣದಲ್ಲಿ ಓಡಾಡುತ್ತಿದ್ದ ಆನೆಯನ್ನು ಅರಣ್ಯಾಧಿಕಾರಿಗಳು ರಕ್ಷಣೆ ಮಾಡುತ್ತಿರುವ ವೀಡಿಯೋ ವೈರಲ್ ಆಗಿದೆ.

    ಪಶ್ಚಿಮ ಬಂಗಾಳದ ಮಿಡ್ನಾಪುರದ ಮೆಡಿಕಲ್ ಕಾಲೇಜು ಮತ್ತು ಹಾಸ್ಟೆಲ್ ಆವರಣದಲ್ಲಿ ರಾತ್ರಿ ಕಾಡಾನೆ ಆವರಣದ ತುಂಬಾ ಓಡಾಡಿದೆ. ವಿದ್ಯಾರ್ಥಿಗಳು ಪೊಲೀಸರಿಗೆ ಮತ್ತು ಅರಣ್ಯ ಇಲಾಖೆಗೆ ಮಾಹಿತಿಯನ್ನೂ ನೀಡಿದ್ದರು. ಈ ವಿಚಾರ ತಿಳಿದ ಹಲವರು ಆನೆಯನ್ನು ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಜನ ಕೂಡಾ ಕಾಲೇಜು ಆವರಣದಲ್ಲಿ ಜಮಾಯಿಸಿದ್ದರು. ಆನೆಯನ್ನು ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಸದ್ಯ ಈ ಕಾರ್ಯಾಚರಣೆಯ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಆನೆಯನ್ನು ಕ್ರೇನ್ ಮೂಲಕ ಟ್ರಕ್‍ಗೆ ತರುವ ದೃಶ್ಯವಿದೆ. ಹೀಗೆ ಅತ್ಯಂತ ಸುರಕ್ಷಿತವಾಗಿ ಆನೆಯನ್ನು ಹಿಡಿದ ಅರಣ್ಯ ಸಿಬ್ಬಂದಿ ಆನೆಯನ್ನು ಅರಣ್ಯಕ್ಕೆ ಕರೆತಂದಿದ್ದಾರೆ. ಇಲ್ಲಿ ಆನೆಗೆ ಸೂಕ್ತ ಆರೈಕೆ ಮಾಡಿ ಬಳಿಕ ಕಾಡಿಗೆ ಬಿಡಲು ನಿರ್ಧರಿಸಲಾಗಿದೆ ಎಂದು ಬರೆದು ಕೊಂಡು ಅರಣ್ಯ ಇಲಾಖೆ ಸಿಬ್ಬಂದಿಯ ಕಾರ್ಯಾಚರಣೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಅರಣ್ಯ ಅಧಿಕಾರಿ ರಮೇಶ್ ಪಾಂಡೆ ಅವರು ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ನಗರ ಪ್ರದೇಶಗಳಲ್ಲಿ ಆನೆಗಳನ್ನು ರಕ್ಷಿಸುವುದು ನಿಜವಾಗಿಯೂ ಕಷ್ಟ ಮತ್ತು ಸವಾಲಿನ ಕೆಲಸ. ಪಶ್ಚಿಮ ಬಂಗಾಳದ ಮಿಡ್ನಾಪುರದ ಅರಣ್ಯ ಅಧಿಕಾರಿಗಳು ಉತ್ತಮ ಕೆಲಸ ಮಾಡಿದ್ದಾರೆ. ಆನೆಯನ್ನು ಮರಳಿ ಕಾಡಿಗೆ ಬಿಡುಗಡೆ ಮಾಡಿದ ನಂತರ ಅದರ ಮೇಲ್ವಿಚಾರಣೆ ನಡೆಸಲಾಗುತ್ತಿದೆ ಎಂದು ರಮೇಶ್ ಪಾಂಡೆ ಹೇಳಿದ್ದಾರೆ.

  • 3 ದಿನದಲ್ಲಿ 200ಕ್ಕೂ ಹೆಚ್ಚು ಶ್ವಾನಗಳ ಸಾವು- ಜನರಲ್ಲಿ ಆತಂಕ

    3 ದಿನದಲ್ಲಿ 200ಕ್ಕೂ ಹೆಚ್ಚು ಶ್ವಾನಗಳ ಸಾವು- ಜನರಲ್ಲಿ ಆತಂಕ

    ಕೊಲ್ಕತ್ತಾ: ಮೂರು ದಿನಗಳಲ್ಲಿ 200ಕ್ಕೂ ಹೆಚ್ಚು ಶಾನ್ವಗಳು ಸಾವನ್ನಪ್ಪಿದೆ. ಈ ಮೂಲಕ ಜನರಲ್ಲಿ ಆತಂಕವನ್ನು ಮೂಡಿಸಿದ ಘಟನೆ ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯ ಬಿಷ್ಣುಪುರ ನಗರದಲ್ಲಿ ನಡೆದಿದೆ.

    ಮಂಗಳವಾರ 60, ಬುಧವಾರ 97, ಗುರುವಾರ 45 ಸೇರಿದಂತೆ ಮೂರು ದಿನಗಳಲ್ಲಿ ಸುಮಾರು 200 ನಾಯಿಗಳು ಸಾವನ್ನಪ್ಪಿವೆ. ಈ ಕುರಿತಾಗಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲಾಗಿದೆ. ಮೃತಪಟ್ಟ ನಾಯಿಗಳ ದ್ರವವನ್ನು ಸಂಗ್ರಹಿಸಿ ಕೊಲ್ಕತ್ತಾಕ್ಕೆ ಪರೀಕ್ಷೆಗೆ ಕಳುಹಿಸಲಾಗಿದೆ. ಮೃತ ನಾಯಿಗಳ ಶವವನ್ನು ಬಿಷ್ಣುಪುರ ಪುರಸಭೆಯವರು ಒಂದು ಕಡೆ ತೆಗೆದುಕೊಂಡು ಡಂಪಿಂಗ್ ಮಾಡಲಾಗುತ್ತಿದೆ.

    200 ನಾಯಿಗಳು ಸೋಕಿನಿಂದ ಮೃತಪಟ್ಟಿವೆ ಎಂದು ಶಂಕಿಸಲಾಗಿದೆ. ನಾಯಿಗಳಿಗೆ ಈ ಸಮಯದಲ್ಲಿ ಸೋಂಕು ಬರುವುದು ಸಮಾನ್ಯವಾಗಿದೆ. ಈ ಕುರಿತಾಗಿ ಆತಂಕಪಡುವ ಅಗತ್ಯವಿಲ್ಲ. ನಾಯಿಗಳಿಗೆ ಹರಡಿದ ಸೋಂಕು ಇತರ ಪ್ರಾಣಿ ಅಥವಾ ಮನುಷ್ಯರಿಗೆ ಹರಡುವ ಸಾಧ್ಯತೆ ಇಲ್ಲ. ನಾಯಿಗಳ ದ್ರವವನ್ನು ಪಡೆದಿದ್ದೇವೆ ಪರೀಕ್ಷೆ ಮಾಡುತ್ತೇವೆ ಎಂದು ಪಶುವೈದ್ಯರು ಹೇಳಿದ್ದಾರೆ.

  • ಫೆ.25ರವರೆಗೆ ಬಿಜೆಪಿ ನಾಯಕಿ ಪಮೇಲಾ ಗೋಸ್ವಾಮಿ ಪೊಲೀಸ್ ಕಸ್ಟಡಿಗೆ

    ಫೆ.25ರವರೆಗೆ ಬಿಜೆಪಿ ನಾಯಕಿ ಪಮೇಲಾ ಗೋಸ್ವಾಮಿ ಪೊಲೀಸ್ ಕಸ್ಟಡಿಗೆ

    – ಕೊಕೇನ್ ಪ್ರಕರಣದಲ್ಲಿ ತಡರಾತ್ರಿ ಅರೆಸ್ಟ್

    ಕೋಲ್ಕತ್ತಾ: ಕೊಕೇನ್ ಪ್ರಕರಣದಲ್ಲಿ ಬಂಧನದಲ್ಲಿರುವ ಪಶ್ಚಿಮ ಬಂಗಾಳದ ಬಿಜೆಪಿ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಪಮೇಲಾ ಗೋಸ್ವಾಮಿಯನ್ನ ಎನ್‍ಡಿಪಿಎಸ್ ನ್ಯಾಯಾಲಯ 5 ದಿನ ಪೊಲೀಸ್ ಕಸ್ಟಡಿಗೆ ನೀಡಿದೆ. ಶುಕ್ರವಾರ ರಾತ್ರಿ ಪಮೇಲಾ ಗೋಸ್ವಾಮಿ ಬಂಧನಕ್ಕೊಳಗಾಗಿದ್ದು, ಕಾರಿನಲ್ಲಿ 100 ಗ್ರಾಂ ಕೊಕೇನ್ ಪತ್ತೆಯಾಗಿತ್ತು.

    ನ್ಯಾಯಾಲಯದಲ್ಲಿ ಪಮೇಲಾ ಗೋಸ್ವಾಮಿ ತಮ್ಮನ್ನು ಉದ್ದೇಶಪೂರ್ವಕವಾಗಿ ಈ ಜಾಲದಲ್ಲಿ ಸಿಲುಕಿಸಲಾಗಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಸಿಐಡಿ ತನಿಖೆಯ ಅಗತ್ಯವಿದೆ, ರಾಕೇಶ್ ಸಿಶಂಗ್ ಎಂಬಾತ ಕೊಕೇನ್ ನನ್ನ ಬಳಿಯಲ್ಲಿರಿಸಿರುವ ಖಚಿತ ಮಾಹಿತಿ ನನಗೆ ಲಭ್ಯವಾಗಿದೆ. ಈ ಸಂಬಂಧ ಐದು ದಿನಗಳ ಹಿಂದೆ ನಾನು ಆಡಿಯೋ ರೆಕಾರ್ಡ್ ಸಹ ಮಾಡಿದ್ದೇನೆ ಎಂದು ಪಮೇಲಾ ವಿಚಾರಣೆ ವೇಳೆ ಹೇಳಿದ್ದಾರೆ.

    ನನ್ನ ವಿರುದ್ಧದ ಈ ಮೋಸದ ಜಾಲ ಬಹುದಿನಗಳಿಂದ ರಚಿಸಲಾಗಿದೆ. ನ್ಯೂ ಅಲಿಪುರ ಪೊಲೀಸ್ ಠಾಣೆ ಸಹ ಈ ಮೋಸದಾಟದ ಒಂದು ಭಾಗವಾಗಿರುವ ಸಾಧ್ಯತೆಗಳಿವೆ. ಪ್ರಕರಣದ ತನಿಖೆ ಡಿಟೆಕ್ಟಿವ್ ಡಿಪಾರ್ಟ್ ಮೆಂಟ್ (ಡಿಡಿ) ಅಥವಾ ಸಿಐಡಿ ನಡೆಸಬೇಕಿದೆ. ಸತ್ಯಕ್ಕೆ ಗೆಲವು ಸಿಗಲಿದೆ ಎಂದು ಹೇಳಿದ್ದು, ನ್ಯಾಯಾಲಯದಿಂದ ಹೊರ ಬಂದ ಬಳಿಕವೂ ಸಿಐಡಿ ತನಿಖೆಗೆ ಒತ್ತಾಯಿಸಿದ್ದಾರೆ.

    ಪಾಮೇಲಾ ನಮ್ಮ ವಿರುದ್ಧ ಆರೋಪಗಳನ್ನ ಮಾಡುತ್ತಿರುವ ಉದ್ದೇಶ ನಮಗೆ ಗೊತ್ತಿಲ್ಲ. ಫೇಸ್‍ಬುಕ್ ನಲ್ಲಿ ಭಾರತಿ ಘೋಷ್, ಸ್ವಪ್ನಾ ದಾಸಗುಪ್ತಾ ಸೇರಿದಂತೆ ದೊಡ್ಡ ನಾಯಕರ ವಿರುದ್ಧವೂ ಆರೋಪ ಹೊರಿಸಿದ್ದಾರೆ. ಸ್ವತಃ ಪಮೇಲಾ ವಿರುದ್ಧವೇ ಅವರ ತಂದೆ ದೂರು ದಾಖಲಿಸಿದ್ದರು. ನಾನು ಎಲ್ಲ ತನಿಖೆಗೂ ಸಿದ್ಧನಿದ್ದೇನೆಂದು ರಾಕೇಶ್ ಸಿಂಗ್ ಆರೋಪಗಳಿಗೆ ತಿರುಗೇಟು ನೀಡಿದ್ದಾರೆ.

    ಕಾನೂನಿನ ಮುಂದೆ ಎಲ್ಲರೂ ಒಂದೇ: ಇನ್ನು ಪಮೇಲಾ ಬಂಧನದ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ, ಕಾನೂನಿನ ಮುಂದೆ ಎಲ್ಲರೂ ಒಂದೇ. ತನಿಖೆಯಿಂದ ಸತ್ಯ ಗೊತ್ತಾಗಲಿದೆ. ಈ ಕುರಿತು ಪಶ್ಚಿಮ ಬಂಗಾಳದ ರಾಜ್ಯಾಧ್ಯಕ್ಷ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

  • ವಿಶೇಷ ನ್ಯಾಯಾಲಯದಿಂದ ಅಮಿತ್ ಶಾಗೆ ಸಮನ್ಸ್ ಜಾರಿ

    ವಿಶೇಷ ನ್ಯಾಯಾಲಯದಿಂದ ಅಮಿತ್ ಶಾಗೆ ಸಮನ್ಸ್ ಜಾರಿ

    ಕೋಲ್ಕತಾ: ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ ಅವರು ದಾಖಲಿಸಿದ್ದ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಸಮನ್ಸ್ ಜಾರಿ ಮಾಡಿದೆ.

    ಅಭಿಷೇಕ್ ಬ್ಯಾನರ್ಜಿ ಅವರು ದಾಖಲಿಸಿದ್ದ ಮಾನಹಾನಿ ಪ್ರಕರಣದ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್, ಫೆಬ್ರವರಿ 22 ರಂದು ಖುದ್ದಾಗಿ ಅಥವಾ ವಕೀಲರ ಮೂಲಕ ವಿಚಾರಣೆಗೆ ಹಾಜರಾಗುವಂತೆ ಅಮಿತ್ ಶಾ ಅವರಿಗೆ ಸಮನ್ಸ್ ನಲ್ಲಿ ಸೂಚಿಸಿದೆ.

    2018 ರ ಆಗಸ್ಟ್ 11 ರಂದು ಕೋಲ್ಕತ್ತಾದ ಮಾಯೊ ರಸ್ತೆಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಅಮಿತ್ ಶಾ ಅವರು ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಅವರಿಗೆ ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದರು ಎಂದು ದೂರು ದಾಖಲಿಸಲಾಗಿತ್ತು. ಅಭಿಷೇಕ್ ಬ್ಯಾನರ್ಜಿ ಪರ ವಕೀಲ ಸಂಜಯ್ ಬಸು ಅವರು ನ್ಯಾಯಾಲಯದಲ್ಲಿ ವಾದಮಂಡಿಸಿದ್ದರು. ವಾದವನ್ನು ಆಲಿಸಿರುವ ನ್ಯಾಯಾಧೀಶರು ಖುದ್ದು ಅಮಿತ್ ಶಾ ಹಾಜರಾಗುವಂತೆ ತಿಳಿಸಿದ್ದಾರೆ ಎಂದು ಸಂಜಯ್ ಬಸು ತಿಳಿಸಿದ್ದಾರೆ.

  • ಆಧಾರ್ ಕಾರ್ಡ್‌ನಲ್ಲಿ ಊಟದ ಮೆನು -ಫೋಟೋ ವೈರಲ್

    ಆಧಾರ್ ಕಾರ್ಡ್‌ನಲ್ಲಿ ಊಟದ ಮೆನು -ಫೋಟೋ ವೈರಲ್

    ಕೋಲ್ಕತ್ತಾ: ನವ ಜೋಡಿ ತಮ್ಮ ಮದುವೆಯ ದಿನವನ್ನು ವಿನೂತನವಾಗಿಸುವ ಸಲುವಾಗಿ ಮದುವೆ ಊಟದ ಮೆನು ಕಾರ್ಡ್ ನ್ನು ಆಧಾರ್ ಕಾರ್ಡ್ ನಂತೆ ಮುದ್ರಿಸಿ ಮದುವೆಗೆ ಬಂದಂತಹ ಅತಿಥಿಗಳನ್ನು ಆಶ್ಚರ್ಯವಾಗಿಸುವಂತೆ ಮಾಡಿದ್ದಾರೆ.

    ಕೋಲ್ಕತ್ತಾದ ನವ ಜೋಡಿ ಗೊಗೋಲ್ ಸಹಾ ಮತ್ತು ಸುವರ್ಣ ದಾಸ್ ತಮ್ಮ ಮದುವೆಯಲ್ಲಿ ಏನಾದರೂ ವಿಶೇಷತೆಯನ್ನು ಮಾಡಿ ಗಮನಸೆಳೆಯಬೇಕೆಂದು ನಿರ್ಧರಿಸಿ ಊಟದ ಮೆನುವನ್ನು ಆಧಾರ್ ಕಾರ್ಡ್ ನಂತೆ ಮುದ್ರಿಸಿ ಅತಿಥಿಗಳಿಗೆ ನೀಡಿದ್ದಾರೆ. ವಿಭಿನ್ನ ಮೆನುವನ್ನು ಮದುವೆಗೆ ಹೋದ ವ್ಯಕ್ತಿಯೊಬ್ಬರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹಾಗಾಗಿ ಈ ಹೊಸ ಬಗೆಯ ಮೆನು ಕಾರ್ಡ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ಗೂಗೋಲ್ ಸಹಾ, ಇದು ಸುವರ್ಣ ದಾಸ್ ಅವರ ಆಲೋಚನೆ. ನಾವಿಬ್ಬರೂ ಡಿಜಿಟಲ್ ಇಂಡಿಯಾಕ್ಕೆ ಪ್ರೋತ್ಸಾಹ ಕೊಡುವ ನಿಟ್ಟಿನಲ್ಲಿ ಆಧಾರ್ ಕಾರ್ಡ್ ಮಾದರಿಯ ಮೆನುವನ್ನು ಹಂಚಿದ್ದೇವೆ ಎಂದು ಸ್ಥಳೀಯ ವಾಹಿನಿಯೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

    ಇನ್ನೂ ಮದುವೆಗೆ ಬಂದ ಕೆಲ ಅತಿಥಿಗಳು ಆಧಾರ್ ಕಾರ್ಡ್‍ನಂತಿರುವ ಮೆನುವನ್ನು ನೋಡಿ ಗೊಂದಲಕ್ಕೆ ಒಳಗಾಗಿದ್ದು, ಈ ಮದುವೆಗೆ ಆಧಾರ್ ಕಾರ್ಡ್ ಕಡ್ಡಾಯವೆಂದು ಬಾವಿಸಿದ್ದರಂತೆ.

  • ಸೌರವ್ ಗಂಗೂಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್

    ಸೌರವ್ ಗಂಗೂಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್

    ಕೋಲ್ಕತ್ತಾ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ನ ಅಧ್ಯಕ್ಷ ಸೌರವ್ ಗಂಗೂಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ಎದೆನೋವು ಕಾಣಿಸಿಕೊಂಡ ಕಾರಣ ಬುಧವಾರ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಗಂಗೂಲಿ ಅವರ ಆರೋಗ್ಯ ಸ್ಥಿರವಾಗಿ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ಗಂಗೂಲಿ ಕಳೆದ ಕೆಲದಿನಗಳ ಹಿಂದೆ ಎದೆ ನೋವಿಗಾಗಿ ಚಿಕಿತ್ಸೆ ಪಡೆದಿದ್ದರು. ಆದಾದ ಬಳಿಕ ಮತ್ತೆ ಎದೆ ನೋವು ಕಾಣಿಸಿಕೊಂಡ ಪರಿಣಾಮ ಜನವರಿ 27 ರಂದು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯ ವೈದ್ಯರು ಪರೀಕ್ಷಿಸಿ ನಂತರ ಆ್ಯಂಜಿಯೋಪ್ಲಾಸ್ಟಿ ನಡೆಸಿ ಎರಡು ಸ್ಟಂಟ್ ಆಳವಡಿಸಿದ್ದಾರೆ.

    ಹೃದಯನಾಳಗಳಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದ ಗಂಗೂಲಿಯವರಿಗೆ ಆ್ಯಂಜಿಯೋಪ್ಲಾಸ್ಟಿ ಮಾಡಲಾಗಿತ್ತು. ಈ ಮೂಲಕ ಕಳೆದ 20 ದಿನಗಳ ಅಂತರದಲ್ಲಿ 2 ಬಾರಿ ಆಸ್ಪತ್ರೆಯಲ್ಲಿ ಎದೆ ನೋವಿಗಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

    ಗಂಗೂಲಿ ಅವರ ಆರೋಗ್ಯ ಸ್ಥಿರವಾಗಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಕೆಲ ದಿನಗಳಲ್ಲಿ ಸಹಜ ಜೀವನ ಕ್ರಮಕ್ಕೆ ಮರಳುತ್ತಾರೆ ಎಂದು ಹಿರಿಯ ವೈದ್ಯರು ತಿಳಿಸಿದ್ದಾರೆ. ಬೆಂಗಳೂರಿನ ಖ್ಯಾತ ತಜ್ಞ ವೈದ್ಯರಾದ ಡಾ.ದೇವಿ ಶೆಟ್ಟಿಯವರನ್ನು ಒಳಗೊಂಡ ವೈದ್ಯರ ತಂಡ ಗಂಗೂಲಿಯವರ ಆರೋಗ್ಯದ ಮೇಲೆ ನಿಗಾ ವಹಿಸಿತ್ತು.

  • ನಶೆಯಲ್ಲಿ ಪುತ್ರನ ಮೇಲೆ ಬಾಂಬ್ ಎಸೆಯಲು ಬಂದವ ಸ್ಫೋಟಕ್ಕೆ ಬಲಿ

    ನಶೆಯಲ್ಲಿ ಪುತ್ರನ ಮೇಲೆ ಬಾಂಬ್ ಎಸೆಯಲು ಬಂದವ ಸ್ಫೋಟಕ್ಕೆ ಬಲಿ

    ಕೋಲ್ಕತ್ತಾ: ಕುಡಿದ ಅಮಲಿನಲ್ಲಿ ಮಗನ ಮೇಲೆ ಬಾಂಬ್ ಎಸೆದು ಕೊಲ್ಲಲು ಹೋದ ತಂದೆ ಸ್ಫೋಟಕ್ಕೆ ಬಲಿಯಾಗಿರುವ ಘಟನೆ ಉತ್ತರ ಕೋಲ್ಕತ್ತಾದ ಕಾಶಿಪುರ್‍ನಲ್ಲಿ ನಡೆದಿದೆ.

    ಮಗನ ಮೇಲೆ ಬಾಂಬ್ ಎಸೆಯಲು ಹೋದ ತಂದೆ ಶೇಖ್ ಮತ್ಲಾಬ್ (65) ಎಂದು ಗುರುತಿಸಲಾಗಿದೆ. ಈತನ ಮಗ ಶೇಖ್ ನಜೀರ್ ಆಗಿದ್ದಾನೆ. ಬಾಂಬ್ ಸ್ಫೋಟಗೊಂಡ ಪರಿಣಾಮ ಶೇಖ್ ಸಾವನ್ನಪ್ಪಿದ್ದಾನೆ. ನಜೀರ್‍ನಿಗೆ ಚಿಕಿತ್ಸೆಗೆ ನೀಡಲಾಗುತ್ತಿದೆ.

    ಪ್ರತಿನಿತ್ಯ ಕುಡಿದ ಮಲಿನಲ್ಲಿ ಬರುತ್ತಿದ್ದ ಶೇಖ್ ಮನೆಯಲ್ಲಿ ಜಗಳವಾಡುತ್ತಿದ್ದನು. ಮಗ ನಜೀರ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದನು. ಕೆಲಸ ಮುಗಿಸಿ ವಾಪಾಸ್ ಬಂದಿದ್ದಾನೆ. ತಂದೆ -ಮಗನ ಮಧ್ಯೆ ಕೆಲವು ವಿಚಾರಕ್ಕಾಗಿ ಜಗಳವಾಗಿದೆ. ಕೋಪದಲ್ಲಿದ್ದ ತಂದೆ ಕಚ್ಚಾ ಬಾಂಬ್ ಹಿಡಿದು ಮಗನ ಮೇಲೆ ದಾಳಿ ಮಾಡಲು ಬಂದಿದ್ದಾನೆ. ಆಗ ಗಲಾಟೆಯಲ್ಲಿ ಬಾಂಬ್ ಕೆಳಗೆ ಬಿದ್ದು, ಸ್ಫೋಟಗೊಂಡಿದೆ. ತಂದೆ-ಮಗ ಇಬ್ಬರು ಗಾಯಗೊಂಡಿದ್ದರು, ನೆರೆಹೊರೆಯವರು ಇಬ್ಬರನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ನಜೀರ್‍ಗೆ ಚಿಕಿತ್ಸೆ ಮುಂದುವರಿಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಕುರಿತಾಗಿ ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.