Tag: kolkata

  • ಲಕ್ನೋ, ಕೋಲ್ಕತಾದಲ್ಲಿ ಐವರು ಉಗ್ರರ ಅರೆಸ್ಟ್

    ಲಕ್ನೋ, ಕೋಲ್ಕತಾದಲ್ಲಿ ಐವರು ಉಗ್ರರ ಅರೆಸ್ಟ್

    ಲಕ್ನೋ: ದೇಶದಲ್ಲಿ ಆತ್ಮಾಹುತಿ ದಾಳಿ ಮೂಲಕ ವಿಧ್ವಂಸಕ ಕೃತ್ಯ ಎಸಗಲು ಹೂಡಿದ್ದ ಉಗ್ರರನ್ನ ಸಂಚನ್ನ ಎಟಿಎಸ್ ಭೇದಿಸಿದೆ. ಉತ್ತರ ಪ್ರದೇಶದ ಲಖನೌದಲ್ಲಿ ಇಬ್ಬರು, ಕೋಲ್ಕತಾದಲ್ಲಿ ಶಂಕಿತ ಮೂವರನ್ನು ಎಸ್‍ಟಿಎಫ್ ಬಂಧಿಸಿದೆ.

    ಅಲ್‍ಖೈದಾ ಉಗ್ರರ ಜೊತೆಗಿನ ನಂಟಿನ ಹಿನ್ನೆಲೆಯಲ್ಲಿ ನಿನ್ನೆಯಷ್ಟೇ 11 ಸರ್ಕಾರಿ ಅಧಿಕಾರಿಗಳನ್ನು ಜಮ್ಮು ಕಾಶ್ಮೀರ ಸರ್ಕಾರ ವಜಾಗೊಳಿಸಿತ್ತು. ಇದರ ಬೆನ್ನಲ್ಲೇ ಮತ್ತಷ್ಟು ರೇಡ್ ಮಾಡಿರುವ ಎಟಿಎಸ್ ಅಲ್‍ಖೈದಾ ಸಂಪರ್ಕ ಹೊಂದಿದ್ದ ಇಬ್ಬರನ್ನು ಬೇಟೆಯಾಡಿದೆ. ಇಬ್ಬರಿಗೆ ಪಾಕಿಸ್ತಾನ, ಅಫ್ಘಾನಿಸ್ತಾನದ ಉಗ್ರರ ನಂಟಿರುವ ಸಾಧ್ಯತೆ ಇದೆ. ಕೋಲ್ಕತಾದಲ್ಲಿ ಬಾಂಗ್ಲಾದೇಶದ ಉಗ್ರ ಸಂಘಟನೆ ಜೆಎಂಬಿ ಜೊತೆ ನಂಟಿರುವ ಶಂಕೆಯಲ್ಲಿ ಮೂವರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ನಭೋ ಮಂಡಲಕ್ಕೆ ವರ್ಜಿನ್ ರಾಕೆಟ್ ಟೆಕಾಫ್ – ಗಗನಕ್ಕೆ ಹಾರಿದ ರಿಚರ್ಡ್ ಬ್ರಾನ್ಸನ್, ಶಿರಿಷಾ ಸಹಿತ 6 ತಜ್ಞರು

    ಕಾಶ್ಮೀರದಲ್ಲಿ ನಿಷೇಧಿತ ಐಎಸ್‍ಐಎಸ್ ಉಗ್ರ ಸಂಘಟನೆಯ ಸಿದ್ಧಾಂತದ ಪ್ರಚಾರದ ಸಂಬಂಧ ಎನ್‍ಐಎ, ಶ್ರೀನಗರ, ಅನಂತ್ ನಾಗ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಿದೆ. ಮತ್ತೊಂದೆಡೆ, ಅಫ್ಗಾನಿಸ್ತಾನದ ಪಶ್ಚಿಮ ಭಾಗದ ಬಹುತೇಕ ಭಾಗಗಳನ್ನು ತಾಲಿಬಾನ್ ತನ್ನ ಹಿಡಿತಕ್ಕೆ ತೆಗೆದುಕೊಂಡಿದ್ದು, ದಕ್ಷಿಣ ಭಾಗದ ಪ್ರದೇಶದತ್ತ ಮುನ್ನುಗ್ಗುತ್ತಿದೆ. ಈ ಹಿನ್ನೆಲೆಯಲ್ಲಿ ಕಂದಹಾರ್ ಜಿಲ್ಲೆಯಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಿಂದ ಸುಮಾರು 50 ರಾಜತಾಂತ್ರಿಕ ಮತ್ತು ಭದ್ರತಾ ಸಿಬ್ಬಂದಿಯನ್ನು ಭಾರತ ಮರಳಿ ಸ್ವದೇಶಕ್ಕೆ ಕರೆಸಿಕೊಂಡಿದೆ. ಇದನ್ನೂ ಓದಿ: ಪುದುಚೇರಿ ಸಿಎಂ ಸಂಪುಟ ರಚನೆ- 13 ಖಾತೆಗಳನ್ನು ಇಟ್ಟುಕೊಂಡ ಎನ್.ರಂಗಸ್ವಾಮಿ

  • ಕೋವಿಡ್ ರೂಲ್ಸ್ ಬ್ರೇಕ್ ಮಾಡಿ ಪಾರ್ಟಿ – 37 ಮಂದಿ ಬಂಧನ

    ಕೋವಿಡ್ ರೂಲ್ಸ್ ಬ್ರೇಕ್ ಮಾಡಿ ಪಾರ್ಟಿ – 37 ಮಂದಿ ಬಂಧನ

    ಕೋಲ್ಕತ್ತಾ: ಕೋವಿಡ್ ನಿಯಮವನ್ನು ಉಲ್ಲಂಘಿಸಿ ನಗರದ ಫೈ ಸ್ಟಾರ್ ಹೋಟೆಲ್‍ನಲ್ಲಿ ಪಾರ್ಟಿ ಮಾಡುತ್ತಿದ್ದ 37 ಮಂದಿಯನ್ನು ಕೋಲ್ಕತಾ ಪೊಲೀಸರು ಬಂಧಿಸಿದ್ದಾರೆ.

    ಆರೋಪಿಗಳು ಕೋವಿಡ್ ನಿಯಮವನ್ನು ಮರೆತು ಹೋಟೆಲ್‍ನ ಎರಡನೇ ಹಾಗೂ ಮೂರನೇ ಮಹಡಿಯಲ್ಲಿ ತಡರಾತ್ರಿ 1.15ಕ್ಕೆ ಪಾರ್ಟಿ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ಮಾಡಿದ್ದಾರೆ.

    ಈ ವೇಳೆ ಪೊಲೀಸರು ಆರೋಪಿಗಳಿಂದ ಎರಡು ಕಾರು, ಗಾಂಜಾ, ಮದ್ಯದ ಬಾಟಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೇ ಘಟನೆ ವೇಳೆ ವ್ಯಕ್ತಿಯೋರ್ವ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಸದ್ಯ ಘಟನೆ ಸಂಬಂಧ ಭಾರತೀಯ ದಂಡ ಸಂಹಿತೆ ಮತ್ತು ವಿಪತ್ತು ನಿರ್ವಹಣಾ ಕಾಯ್ದೆಯ ಸೆಕ್ಷನ್‍ಗಳ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

    ಪಶ್ಚಿಮ ಬಂಗಾಳ ಸರ್ಕಾರವು ರಾಜ್ಯವ್ಯಾಪ್ತಿ ಜುಲೈ 15ರವರೆಗೆ ಕೋವಿಡ್ ನಿರ್ಬಂಧಗಳನ್ನು ವಿಸ್ತರಿಸಿದ್ದು, ರಾತ್ರಿ 9ರಿಂದ ಬೆಳಗ್ಗೆ 5ರವರೆಗೂ ಕರ್ಫ್ಯೂ ವಿಧಿಸಿದೆ. ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಯಾವುದೇ ಚಟುವಟಿಕೆಗಳಿಗೆ ಅನುಮತಿ ನೀಡಲು ಆಗುತ್ತಿಲ್ಲ ಎಂದು ಸೂಚಿಸಿದೆ. ಇದನ್ನೂ ಓದಿ: ಫೇಸ್‍ಬುಕ್ ನಲ್ಲಿ ಪರಿಚಯ – 2.50 ಲಕ್ಷ ರೂ. ಯುವಕನಿಗೆ ಪಂಗನಾಮ

  • ಲಾಕ್‍ಡೌನ್ ಎಫೆಕ್ಟ್‌ನಿಂದ ನಿರುದ್ಯೋಗ -ನಟ ಆತ್ಮಹತ್ಯೆಗೆ ಯತ್ನ

    ಲಾಕ್‍ಡೌನ್ ಎಫೆಕ್ಟ್‌ನಿಂದ ನಿರುದ್ಯೋಗ -ನಟ ಆತ್ಮಹತ್ಯೆಗೆ ಯತ್ನ

    ಕೊಲ್ಕತ್ತ: ಕೋವಿಡ್ ಸೋಂಕು ಎಷ್ಟೋ ಜನರ ಬದಕನ್ನೇ ಕಿತ್ತುಕೊಂಡಿದೆ. ಲಕ್ಷಾಂತರ ಜನರ ಉಸಿರನ್ನೇ ನಿಲ್ಲಿಸಿದೆ. ಇದೇ ಹಿನ್ನೆಲೆಯಲ್ಲಿ ಕೋವಿಡ್ ನಿಂದ ಕೆಲಸವಿಲ್ಲದೆ ನೊಂದ ನಟನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಇದನ್ನೂ ಓದಿ: ಲಸಿಕೆ ಹಾಕಿಸಿಕೊಂಡ ವರನೇ ಬೇಕೆಂದ ವಧು – ಶಶಿ ತರೂರ್ ತಬ್ಬಿಬ್ಬು

    ಹೌದು ಲಾಕ್‍ಡೌನ್ ವೇಳೆ ಎಲ್ಲೂ ಕೆಲಸ ಸಿಗದೆ ನಿರುದ್ಯೋಗದಿಂದ ಬಳಲಿದ ಬೆಂಗಾಲಿ ನಟನೊಬ್ಬ ಕೊಲ್ಕತ್ತಾದಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ. ಅದೃಷ್ಟವಶಾತ್ ಪೊಲೀಸರು ನಟನನ್ನು ಕಾಪಾಡಿದ್ದಾರೆ. ಇದನ್ನೂ ಓದಿ: ಕುಡಿಯಲು ನೀರು ಸಿಗದೆ ಬಾಲಕಿ ಸಾವು

     

    ನಿದ್ದೆ ಮಾತ್ರೆಯನ್ನು ನುಂಗಿದ 31 ವರ್ಷದ ಧಾರವಾಹಿ ನಟ ಫೇಸ್ ಬುಕ್ ಲೈವ್ ಮಾಡಿದ್ದಾನೆ. ಇದನ್ನು ಗಮನಿಸಿದ ಕೆಲವರು ಸುದ್ದಿಯನ್ನು ಪೊಲೀಸರಿಗೆ ತಿಳಿಸಿದ್ದಾರೆ. ತಕ್ಷಣ ಫೇಸ್ ಬುಕ್ ಲೈವ್ ಅನ್ನು ಟ್ರ್ಯಾಕ್ ಮಾಡಿದ ಪೊಲೀಸರು ನಟನನ್ನು ಕಾಪಾಡಿದ್ದಾರೆ.

  • ಸುವೇಂದು ಅಧಿಕಾರಿ, ಸಹೋದರರ ವಿರುದ್ಧ ಎಫ್‍ಐಆರ್

    ಸುವೇಂದು ಅಧಿಕಾರಿ, ಸಹೋದರರ ವಿರುದ್ಧ ಎಫ್‍ಐಆರ್

    ಕೋಲ್ಕತ್ತಾ: ಯಾಸ್ ಚಂಡಮಾರುತದಿಂದ ಸಂಕಷ್ಟಕ್ಕೆ ಒಳಗಾಗಿದ್ದ ಜನರಿಗಾಗಿ ಪುರಸಭೆಯಲ್ಲಿ ಸಂಗ್ರಹಿಸಿಡಲಾಗಿದ್ದ ಪರಿಹಾರ ಸಾಮಗ್ರಿಗಳನ್ನು ಕಳ್ಳತನ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಮತ್ತು ಅವರ ಸಹೋದರರ ಸೌಮೇಂದು ಅಧಿಕಾರಿ ವಿರುದ್ಧ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ಪೊಲೀಸರ ಮಾಹಿತಿ ಪ್ರಕಾರ ಕಾಂತಿ ಪುರಸಭೆ ಆಡಳಿತ ಮಂಡಳಿಯ ಸದಸ್ಯ ರತ್ನಾದೀಪ್ ಮನ್ನಾ ಅವರ ದೂರಿನಂತೆ, ಯಾಸ್ ಚಂಡಮಾರುತದಿಂದ ಸಂಕಷ್ಟಕ್ಕೆ ಒಳಗಾಗಿದ್ದ ಜನರಿಗೆ ವಿತರಿಸಲೆಂದು ಪಶ್ಚಿಮಬಂಗಾಳದ ಕಾಂತಿ ಪುರಸಭೆ ಕಚೇರಿಯಲ್ಲಿ ಶೇಖರಿಸಿಟ್ಟಿದ್ದ ಲಕ್ಷಾಂತರ ಮೌಲ್ಯದ ಪರಿಹಾರ ಸಾಮಾಗ್ರಿಗಗಳನ್ನು ಬಿಜೆಪಿ ಮುಖಂಡ ಸುವೇಂದು ಅಧಿಕಾರಿ ಮತ್ತು ಅವರ ಸಹೋದರ ಸೌಮೇಂದು ಅಧಿಕಾರಿ ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಆರೋಪದ ಬೆನ್ನಲ್ಲೇ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ನಂದಿ ಗ್ರಾಮದಲ್ಲಿ ಮಮತಾಗೆ ಸೋಲು – ಸುವೇಂದು ಅಧಿಕಾರಿಗೆ ಜಯ

    2021 ಮೇ 29ರಂದು ಮಧ್ಯಾಹ್ನ 12.30ಕ್ಕೆ ಸುವೇಂದು ಅಧಿಕಾರಿ ಹಾಗೂ ಸೌಮೇಂದು ಅಧಿಕಾರಿ ಅವರ ಸೂಚನೆಯಂತೆ ಪುರಸಭೆ ಕಚೇರಿ ಗೋಡೌನ್ ತೆರೆದು ಲಕ್ಷಾಂತರ ರೂಪಾಯಿ ಮೌಲ್ಯದ ಪರಿಹಾರ ಸಾಮಾಗ್ರಿಗಳನ್ನು ಟ್ರಕ್ ಮೂಲಕ ಕದ್ದೊಯ್ಯಲಾಗಿದೆ. ಈ ಕೃತ್ಯಕ್ಕೆ ಬಿಜೆಪಿ ನಾಯಕರು ಕೇಂದ್ರದ ಸಶಸ್ತ್ರ ಪಡೆಯ ನೆರವನ್ನು ಬಳಕೆ ಮಾಡಿದ್ದಾರೆ ಎಂದು ರತ್ನಾದೀಪ್ ಮನ್ನಾ ಆರೋಪ ಮಾಡಿದ್ದಾರೆ.

    ಇತ್ತ ಬಿಜೆಪಿಯ ಕೆಲ ನಾಯಕರು ಕೂಡ ಪರಿಹಾರ ಸಾಮಗ್ರಿಗಳನ್ನು ದುರುಪಯೋಗ ಮಾಡಿದ ಬಗ್ಗೆ ತೃಣಮೂಲ ಕಾಂಗ್ರೆಸ್ ನಾಯಕರ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ. ಇದರೊಂದಿಗೆ ಸುವೇಂದು ಅಧಿಕಾರಿ ಆಪ್ತ ರಾಖೇಲ್ ಬೆರಾ ಸರ್ಕಾರಿ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಎರಡು ಲಕ್ಷ ರೂ. ಪಡೆದು ವಂಚನೆ ಮಾಡಿದ್ದಾರೆಂದು ದೂರು ಕೇಳಿ ಬಂದ ಹಿನ್ನೆಲೆ ಅವರನ್ನು ವಂಚನೆ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಇದೀಗ ಕಳ್ಳತನದ ಆರೋಪದಲ್ಲಿ ಸುವೇಂದು ಅಧಿಕಾರಿ ವಿರುದ್ಧವು ಎಫ್‍ಐಆರ್ ದಾಖಲಾಗಿದೆ.

  • ಪಿಎಂ ಕೇರ್ ಫಂಡ್‍ಗೆ 37 ಲಕ್ಷ ರೂ. ನೀಡಿದ ಪ್ಯಾಟ್ ಕಮ್ಮಿನ್ಸ್

    ಪಿಎಂ ಕೇರ್ ಫಂಡ್‍ಗೆ 37 ಲಕ್ಷ ರೂ. ನೀಡಿದ ಪ್ಯಾಟ್ ಕಮ್ಮಿನ್ಸ್

    ಮುಂಬೈ: ಐಪಿಎಲ್‍ನಲ್ಲಿ ಕೋಲ್ಕತ್ತಾ ತಂಡದ ಪರ ಆಡುತ್ತಿರುವ ಆಸ್ಟ್ರೇಲಿಯಾ ತಂಡದ ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್ ಭಾರತದಲ್ಲಿ ವೇಗವಾಗಿ ಹಬ್ಬುತ್ತಿರುವ ಕೊರೊನಾ ಎರಡನೇ ಅಲೆಯ ನಡುವೆ ಭಾರತದಲ್ಲಿ ತಲೆದೂರಿರುವ ಆಕ್ಸಿಜನ್ ಕೊರತೆ ನೀಗಿಸುವ ನಿಟ್ಟಿನಲ್ಲಿ ಭಾರತದ ಪ್ರಧಾನಿ ನಿಧಿಗೆ 50,000 ಡಾಲರ್ (37 ಲಕ್ಷ ರೂ.) ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ.

    ಈ ಕುರಿತು ಮಾತನಾಡಿರುವ ಕಮ್ಮಿನ್ಸ್, ನಾನು ಭಾರತ ದೇಶವನ್ನು ತುಂಬಾ ಇಷ್ಟಪಡುತ್ತೇನೆ. ಕಳೆದ ಹಲವು ವರ್ಷಗಳಿಂದ ನಾನು ಭಾರತಕ್ಕೆ ಬರುತ್ತಿದ್ದೇನೆ. ಬಂದಾಗಲೆಲ್ಲಾ ಇಲ್ಲಿನ ಜನ ಪ್ರೀತಿ, ವಾತ್ಸಲ್ಯದಿಂದ ಸಲಹುತ್ತಿದ್ದಾರೆ. ಆದರೆ ಇದೀಗ ಕೊರೊನಾ ಮಹಾಮಾರಿಯಿಂದ ಜನ ಬಳಲುತ್ತಿದ್ದಾರೆ. ಇದನ್ನು ಕಂಡು ನನಗೆ ತುಂಬಾ ದುಖಃವಾಗುತ್ತಿದೆ ಎಂದಿದ್ದಾರೆ.

    ಭಾರತದಲ್ಲಿ ಕೊರೊನಾ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಆದರೂ ಕೂಡ ಐಪಿಎಲ್ ಪಂದ್ಯಾಟಗಳು ನಡೆಯುತ್ತಿರುವುದನ್ನು ಕಂಡು ನಾನು ಭಾರತಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಇದರೊಂದಿಗೆ ಭಾರತೀಯರಿಗೆ ಲಾಕ್‍ಡೌನ್ ಮಧ್ಯೆ ಕೆಲ ಕಾಲ ವಿಶ್ರಾಂತಿ ಮತ್ತು ಮನರಂಜನೆಯನ್ನು ನೀಡಲು ಐಪಿಎಲ್ ಸಹಕಾರಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ನಾನೊಬ್ಬ ಆಟಗಾರನಾಗಿ ನನ್ನನ್ನು ಇಷ್ಟಪಡುವ ಜನರಿಗೆ ಸಹಾಯದ ಹಸ್ತ ಚಾಚಲು ಬಯಸುತ್ತೇನೆ. ಹಾಗಾಗಿ ಭಾರತದ ಪ್ರಧಾನಿ ಅವರ ನಿಧಿಗೆ ದೇಣಿಗೆ ನೀಡಲು ಬಯಸುತ್ತೇನೆ. ಪ್ರಮುಖವಾಗಿ ಭಾರತದ ಆಸ್ಪತ್ರೆಗಳಿಗೆ ಆಕ್ಸಿಜನ್ ಖರೀದಿಗಾಗಿ ಈ ಹಣ ನೀಡಲು ಮುಂದಾಗಿದ್ದೇನೆ. ನಾನು ಇತರ ಐಪಿಎಲ್‍ನ ಸಹ ಆಟಗಾರರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡಲು ಮನವಿ ಮಾಡುತ್ತೇನೆ. ನಾನು ಈಗಾಗಲೇ 50,000 ಡಾಲರ್‍ ಗಳನ್ನು ದೇಣಿಗೆಯಾಗಿ ನೀಡಿದ್ದೇನೆ ಎಂದು ತಿಳಿಸಿದರು.

    ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡುವ ಕಮ್ಮಿನ್ಸ್ ಈ ಬಾರಿಯ ಐಪಿಎಲ್‍ನಲ್ಲಿ 5 ಪಂದ್ಯಗಳಿಂದ 5 ವಿಕೆಟ್ ಪಡೆದರೆ ಬ್ಯಾಟಿಂಗ್‍ನಲ್ಲಿ ಒಟ್ಟು 82 ರನ್ ಸಿಡಿಸಿ ತಂಡಕ್ಕೆ ಆಧಾರವಾಗಿದ್ದಾರೆ. ಕಮ್ಮಿನ್ಸ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿ 66ರನ್ (34 ಎಸೆತ, 4 ಬೌಂಡರಿ, 6ಸಿಕ್ಸ್) ಸಿಡಿಸಿ ಮಿಂಚಿದ್ದರು.

  • ರಿಯಾನ್ ಪರಾಗ್ ವಿಶಿಷ್ಟ ಸಂಭ್ರಮಾಚರಣೆಗೆ ಫ್ಯಾನ್ಸ್ ಫಿದಾ

    ರಿಯಾನ್ ಪರಾಗ್ ವಿಶಿಷ್ಟ ಸಂಭ್ರಮಾಚರಣೆಗೆ ಫ್ಯಾನ್ಸ್ ಫಿದಾ

    ಮುಂಬೈ: ಐಪಿಎಲ್‍ನಲ್ಲಿ ಬೌಂಡರಿ, ಸಿಕ್ಸರ್‍ ಗಳ ಹಬ್ಬ ಒಂದು ಕಡೆ ಅಭಿಮಾನಿಗಳಿಗೆ ಕಿಕ್ ಕೊಟ್ಟರೆ ಇನ್ನೊಂದೆಡೆ ಕ್ರಿಕೆಟಿಗರು ಕ್ಯಾಚ್ ಹಿಡಿದಾಗ ಮಾಡುವ ಸಂಭ್ರಮಾಚರಣೆ ಇನ್ನಷ್ಟು ಮನರಂಜನೆ ನೀಡುತ್ತದೆ. ಇದೀಗ ಐಪಿಎಲ್‍ನಲ್ಲಿ ಆಡುತ್ತಿರುವ ರಾಜಸ್ಥಾನ ತಂಡದ ಯುವ ಆಟಗಾರ ಆಲ್‍ರೌಂಡರ್ ರಿಯಾನ್ ಪರಾಗ್ ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ಕ್ಯಾಚ್ ಹಿಡಿದು ವಿಶಿಷ್ಟವಾಗಿ ಸಂಭ್ರಮಾಚರಣೆ ಮಾಡುವ ಮೂಲಕ ನೋಡುಗರಿಗೆ ಐಪಿಎಲ್‍ನ ಕಿಕ್ ಹೆಚ್ಚಿಸಿದ್ದಾರೆ.

    14ನೇ ಆವೃತ್ತಿಯ 18ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಪರಸ್ಪರ ಎದುರುಬದುರಾಗಿದ್ದವು. ಈ ಪಂದ್ಯದಲ್ಲಿ ಪ್ಯಾಟ್ ಕಮಿನ್ಸ್ ಅವರ ಅದ್ಭುತ ಕ್ಯಾಚ್ ಒಂದನ್ನು ಹಿಡಿದ ರಿಯಾನ್ ಪರಾಗ್ ಸಹ ಆಟಗಾರ ರಾಹುಲ್ ತೆವಾಟಿಯರೊಂದಿಗೆ ವಿಶಿಷ್ಟ ಸಂಭ್ರಮಾಚರಣೆ ಮಾಡುವ ಮೂಲಕ ಎಲ್ಲರ ಮುಖದಲ್ಲೂ ಮಂದಹಾಸ ತರಿಸಿದ್ದಾರೆ.

    ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಕೋಲ್ಕತ್ತಾ ತಂಡ ವಿಕೆಟ್ ಕಳೆದುಕೊಂಡು ಸಾಗಿತ್ತು. ಆದರೂ ಕೂಡ ಬಿಗ್ ಹಿಟ್ಟರ್ ಪ್ಯಾಟ್ ಕಮಿನ್ಸ್ ಕಡೆಯಲ್ಲಿ ಸಿಡಿಯಬಹುದೆಂದು ಎಲ್ಲರು ಅಂದುಕೊಂಡಿದ್ದರು. ಆದರೆ ಕಡೆಯ ಓವರ್ ಎಸೆಯಲು ಬಂದ ಕ್ರಿಸ್ ಮೋರಿಸ್ ಅವರ ಎರಡನೇ ಎಸೆತದಲ್ಲಿ ಕೊಲ್ಕತ್ತಾ ತಂಡದ ಬ್ಯಾಟ್ಸ್ ಮ್ಯಾನ್ ಪ್ಯಾಟ್ ಕಮಿನ್ಸ್ ಸಿಕ್ಸರ್ ಬಾರಿಸಲು ಯತ್ನಿಸಿದರು. ಅದರೆ ಬೌಂಡರಿ ಲೈನ್ ಬಳಿ ರಿಯಾನ್ ಪರಾಗ್ ಹಿಡಿದ ಅದ್ಭುತ ಕ್ಯಾಚ್‍ಗೆ ಕಮಿನ್ಸ್ ಔಟ್ ಅದರು. ಈ ಕ್ಯಾಚ್ ಹಿಡಿದ ಬಳಿಕ ಮೈದಾನದಲ್ಲಿ ಪರಾಗ್ ಸಹಆಟಗಾರ ತೆವಾಟಿಯರೊಂದಿಗೆ ಮೊಬೈಲ್‍ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಂತೆ ಬೌಂಡರಿ ಲೈನ್ ಬರಿ ಪೋಸ್ ನೀಡಿದರು. ಇದೀಗ ಈ ವೀಡಿಯೋ ವೈರಲ್ ಅಗತೊಡಗಿದೆ. ಅಭಿಮಾನಿಗಳು ಕೂಡ ಈ ಸಂಭ್ರಮಾಚರಣೆ ಕಂಡು ಫಿದಾ ಆಗಿದ್ದಾರೆ.

    ಪರಾಗ್ ಕಳೆದ ವರ್ಷ ದುಬೈನಲ್ಲಿ ನಡೆದ ಐಪಿಎಲ್ ಟೂರ್ನಿಯಲ್ಲಿ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ ರಾಜಸ್ಥಾನ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಆ ಬಳಿಕ ಅಸ್ಸಾಂ ಮೂಲದ ಬಿಹು ನೃತ್ಯ ಮಾಡುವ ಮೂಲಕ ಸಂಭ್ರಮಾಚರಣೆ ಮಾಡಿದ್ದರು.

    ಐಪಿಎಲ್‍ನಲ್ಲಿ ಕ್ರಿಕೆಟ್ ರಸದೌತಣದೊಂದಿಗೆ ಕ್ರಿಕೆಟಿಗರ ಸಂಭ್ರಮಾಚರಣೆ ಕೂಡ ಇದೀಗ ಬಾರಿ ಸುದ್ದಿ ಮಾಡುತ್ತಿದೆ. ಕಳೆದ ಸೀಸನ್‍ಗಳಲ್ಲಿ ಹಲವು ಆಟಗಾರರು ವಿವಿಧ ಬಗೆಯ ಸಂಭ್ರಮಾಚರಣೆ ಮಾಡುವ ಮೂಲಕ ಐಪಿಎಲ್‍ನ ಕಳೆ ಹೆಚ್ಚಿಸಿದ್ದರು.

  • 6 ವಿಕೆಟ್‍ಗಳ ಭರ್ಜರಿ ಜಯ – 6ನೇ ಸ್ಥಾನಕ್ಕೆ ಜಿಗಿದ ರಾಜಸ್ಥಾನ

    6 ವಿಕೆಟ್‍ಗಳ ಭರ್ಜರಿ ಜಯ – 6ನೇ ಸ್ಥಾನಕ್ಕೆ ಜಿಗಿದ ರಾಜಸ್ಥಾನ

    – ಕ್ರೀಸ್ ಮೋರಿಸ್‍ಗೆ 4 ವಿಕೆಟ್
    – ಸಂಜು ಸ್ಯಾಮ್ಸನ್ ಔಟಾಗದೇ 42 ರನ್

    ಮುಂಬೈ: ಕ್ರೀಸ್ ಮೋರಿಸ್ ಬೌಲಿಂಗ್ ಮತ್ತು ಸಂಜು ಸ್ಯಾಮ್ಸನ್ ಅವರ ಉತ್ತಮ ಬ್ಯಾಟಿಂಗ್ ಪ್ರದರ್ಶನದಿಂದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ 6 ವಿಕೆಟ್‍ಗಳ ಜಯ ಸಾಧಿಸಿದೆ.

    ಕೋಲ್ಕತ್ತಾ ನೀಡಿದ ಸುಲಭ ಸವಾಲನ್ನು ರಾಜಸ್ಥಾನ 18.5 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 134 ರನ್ ಹೊಡೆಯುವ ಮೂಲಕ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಕೊನೆಯ ಸ್ಥಾನದಲ್ಲಿದ್ದ ರಾಜಸ್ಥಾನ 4 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಜಿಗಿದರೆ ಕೋಲ್ಕತ್ತಾ 8ನೇ ಸ್ಥಾನಕ್ಕೆ ಜಾರಿದೆ.

    ಯಶಸ್ವಿ ಜೈಸ್ವಾಲ್ 22 ರನ್(17 ಎಸೆತ, 5 ಬೌಂಡರಿ) ಶಿವಂ ದುಬೆ 22 ರನ್(18 ಎಸೆತ, 2 ಬೌಂಡರಿ, 1ಸಿಕ್ಸರ್) ಹೊಡೆದರು. ನಾಯಕ ಸಂಜು ಸ್ಯಾಮ್ಸನ್ ಔಟಾಗದೇ 42 ರನ್(41 ಎಸೆತ, 2 ಬೌಂಡರಿ, 1 ಸಿಕ್ಸರ್), ಡೇವಿಡ್ ಮಿಲ್ಲರ್ ಔಟಾಗದೇ 24 ರನ್(23 ಎಸೆತ, 3 ಬೌಂಡರಿ) ಹೊಡೆರು. ಕೋಲ್ಕತ್ತಾ ಪರವಾಗಿ ವರುಣ್ ಚಕ್ರವರ್ತಿ 2 ವಿಕೆಟ್ ಕಿತ್ತರೆ ಶಿವಂ ಮಾವಿ ಮತ್ತು ಪ್ರಸಿದ್ಧ್ ಕೃಷ್ಣ ತಲಾ ಒಂದು ವಿಕೆಟ್ ಪಡೆದರು.

    ಸಾಧಾರಣ ಮೊತ್ತ:  ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಮಧ್ಯಮ ಕ್ರಮಾಂಕದಲ್ಲೂ ಉತ್ತಮ ಆಟ ಬರಲಿಲ್ಲ.

    ನಿತೀಶ್ ರಾಣಾ 22 ರನ್(25 ಎಸೆತ, 1 ಬೌಂಡರಿ, 1 ಸಿಕ್ಸರ್) ರಾಹುಲ್ ತ್ರಿಪಾಠಿ 36 ರನ್(26 ಎಸೆತ, 1 ಸಿಕ್ಸರ್, 2 ಬೌಂಡರಿ) ದಿನೇಶ್ ಕಾರ್ತಿಕ್ 25 ರನ್(24 ಎಸೆತ, 4 ಬೌಂಡರಿ) ಹೊಡೆದು ಔಟಾದರು. ಸ್ಫೋಟಕ ಆಟ ಆಟಗಾರರದಿಂದ ಬರದೇ ಇದ್ದ ಕಾರಣ 9 ವಿಕೆಟ್ ನಷ್ಟಕ್ಕೆ 133 ರನ್ ಗಳಿಸಿತು.

    ಕ್ರೀಸ್ ಮೋರಿಸ್ 23 ರನ್ ನೀಡಿ 4 ವಿಕೆಟ್ ಕಿತ್ತರು. ಜಯದೇವ್ ಉನದ್ಕತ್, ಚೇತನ್ ಸಕಾರಿಯಾ, ಮುಸ್ತುಫಿಜುರ್ ರಹಮಾನ್ ತಲಾ ಒಂದೊಂದು ವಿಕೆಟ್ ಪಡೆದರು.

  • ಅಂದು ಬಿಜೆಪಿ ವಾಹನ, ಇಂದು ಟಿಎಂಸಿ ನಾಯಕನ ಮನೆಯಲ್ಲಿ ಇವಿಎಂ

    ಅಂದು ಬಿಜೆಪಿ ವಾಹನ, ಇಂದು ಟಿಎಂಸಿ ನಾಯಕನ ಮನೆಯಲ್ಲಿ ಇವಿಎಂ

    ಕೋಲ್ಕತ್ತಾ: ಒಂದು ಕೇಂದ್ರಾಡಳಿತ ಪ್ರದೇಶ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ. ಈ ನಡುವೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕನ ಮನೆಯಲ್ಲಿ ಇವಿಎಂ ಪತ್ತೆಯಾಗಿದೆ. ಪಶ್ಚಿಮ ಬಂಗಾಳಕ್ಕೆ ಮೂರನೇ ಹಂತದಲ್ಲಿ 31 ವಿಧಾನಸಭಾ ಕ್ಷೇತ್ರಗಳಿಗೆ ಇವತ್ತು ವೋಟಿಂಗ್ ನಡೆಯುತ್ತಿದೆ.

    ಮತದಾನದ ಹಿಂದಿನ ದಿನ ಟಿಎಂಸಿ ನಾಯಕ ಗೌತಮ್ ಘೋಷ್ ಮನೆಯಲ್ಲಿ ಇವಿಎಂ ಮತ್ತು ವಿವಿಪ್ಯಾಟ್ ಲಭ್ಯವಾಗಿವೆ.ಚುನಾವಣೆಯಲ್ಲಿ ಟಿಎಂಸಿ ಗೋಲ್ಮಾಲ್ ಮಾಡಲು ಮುಂದಾಗಿದೆ ಎಂದು ಉತ್ತರ ಉಲುಬೆರಿಯಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚಿರನ್ ಬೇರಾ ಆರೋಪಿಸಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ತಡರಾತ್ರಿ ಹೆಚ್ಚಿನ ಜನ ಸೇರಿದ್ದರಿಂದ ಪರಿಸ್ಥಿತಿ ನಿಯಂತ್ರಣಕ್ಕಾಗಿ ಚುನಾವಣಾ ಭದ್ರತಾ ಸಿಬ್ಬಂದಿ ಲಘು ಲಾಠಿ ಪ್ರಹಾರ ನಡೆಸಿದ ಗುಂಪುಗಳನ್ನು ಚದುರಿಸಿದ್ದಾರೆ.

    ಟಿಎಂಸಿ ನಾಯಕನ ಮನೆಯಲ್ಲಿ ಇವಿಎಂ ಮತ್ತು ವಿವಿಪ್ಯಾಟ್ ಲಭ್ಯವಾದ ಹಿನ್ನೆಲೆ ಚುನಾವಣಾ ಆಯೋಗ ಓರ್ವ ಅಧಿಕಾರಿಯನ್ನು ಅಮಾನತುಗೊಳಿಸಿದೆ. ಅಲ್ಲಿ ಸಿಕ್ಕಿರೋದು ರಿಸರ್ವ್ ಇವಿಎಂ. ಅದನ್ನ ಮತದಾನಕ್ಕಾಗಿ ಬಳಸಲ್ಲ. ಚುನಾವಣಾ ಅಧಿಕಾರಿ ಮಶೀನ್ ಜೊತೆ ಸಂಬಂಧಿಕರ ಮನೆಗೆ ಮಲಗಲು ತೆರಳಿದ್ದು ನಿಯಮ ಉಲ್ಲಂಘಟನೆ ಎಂದು ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ. ಈ ಸಂಬಂಧ ಟಿಎಂಸಿ ನಾಯಕ ಗೌತಮ್ ಘೋಷ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕೆಲ ದಿನಗಳ ಹಿಂದೆ ಬಿಜೆಪಿ ವಾಹನದಲ್ಲಿ ಇವಿಎಂ ಸಾಗಿಸಲಾಗಿತ್ತು. ಇದನ್ನೂ ಓದಿ: ಅಸ್ಸಾಂ ಬಿಜೆಪಿ ಅಭ್ಯರ್ಥಿ ಕಾರಿನಲ್ಲಿ ಇವಿಎಂ ಪತ್ತೆ

  • ತಂದೆಗೆ ಮದ್ಯ ಕುಡಿಸಿ ಬೆಂಕಿ ಹಚ್ಚಿ ಕೊಂದ ಮಗಳು

    ತಂದೆಗೆ ಮದ್ಯ ಕುಡಿಸಿ ಬೆಂಕಿ ಹಚ್ಚಿ ಕೊಂದ ಮಗಳು

    ಕೋಲ್ಕತ್ತಾ: 22 ವರ್ಷದ ಮಹಿಳೆಯೊಬ್ಬಳು 56 ವರ್ಷದ ತಂದೆಯನ್ನು ಊಟಕ್ಕೆಂದು ಕರೆದೊಯ್ದು ಮದ್ಯ ಕುಡಿಸಿ ಬೆಂಕಿ ಹಚ್ಚಿ ಕೊಂದಿರುವ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.

    ಈ ಕುರಿತಂತೆ ಪೊಲೀಸರು, ಮಹಿಳೆ ಕ್ರಿಸ್ಟೋಫರ್ ರಸ್ತೆ ಬಳಿಯ ಪಾರ್ಕ್ ಸರ್ಕಸ್ ನಿವಾಸಿಯಾಗಿದ್ದು, ಭಾನುವಾರ ರಾತ್ರಿ ತನ್ನ ತಂದೆಯೊಂದಿಗೆ ರೆಸ್ಟೋರೆಂಟ್‍ಗೆ ತೆರಳಿ ಮದ್ಯ ಕುಡಿಸಿದ್ದಾಳೆ. ಬಳಿಕ ಇಬ್ಬರು ಹೂಗ್ಲಿ ನದಿಯ ದಡದಲ್ಲಿರುವ ಬೆಂಚಿನ ಮೇಲೆ ಕುಳಿತುಕೊಂಡಿದ್ದರು. ಈ ವೇಳೆ ತಂದೆ ನಿದ್ರೆಗೆ ಜಾರಿದ ನಂತರ ಮಹಿಳೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾಳೆ. ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಘಟನೆ ಕುರಿತಂತೆ ವಿಚಾರಣೆ ವೇಳೆ ಮಹಿಳೆ, ತಾನು ಚಿಕ್ಕವಳಿದ್ದಾಗಲೆ ತಾಯಿ ತೀರಿಕೊಂಡಿದ್ದು, ನಂತರ ತಂದೆ ಮಹಿಳೆ ಮೇಲೆ ದೈಹಿಕವಾಗಿ ಹಲ್ಲೆ ನಡೆಸಲು ಆರಂಭಿಸಿದರು ಮತ್ತು ಭಾವನಾತ್ಮಕವಾಗಿ ಹಿಂಸೆ ನೀಡುತ್ತಿದ್ದರು ಎಂದು ಆರೋಪಿಸಿದ್ದಾಳೆ.

    ಮಹಿಳೆ ಮದುವೆ ನಂತರ ಹಿಂಸೆ ನೀಡುವುದನ್ನು ನಿಲ್ಲಿಸಿದ್ದ ತಂದೆ, ಮದುವೆ ಮುರಿದು ಮಹಿಳೆ ಮನೆಗೆ ಹಿಂದಿರುಗಿದ ಬಳಿಕ ಮತ್ತೆ ಕಿರುಕುಳ ನೀಡಲು ಆರಂಭಿಸಿದರು ಎಂದು ತಿಳಿಸಿದ್ದಾಳೆ. ಸದ್ಯ ಮಹಿಳೆಯ ಚಿಕ್ಕಪ್ಪ ಘಟನೆ ವಿಚಾರವಾಗಿ ನೀಡಿದ ದೂರಿನ ಮೇರೆಗೆ ಆಕೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇದೀಗ ಮಹಿಳೆ ಹತ್ಯೆಗೈದಿರುವುದಾಗಿ ಒಪ್ಪಿಕೊಂಡಿದ್ದು, ಆಕೆಯನ್ನು ಮಾರ್ಚ್ 29ರವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.

  • ಮರೆತ ಬ್ಯಾಗ್ ಹಿಂದಿರುಗಿಸಿದ ಉಬರ್ ಚಾಲಕ- ವ್ಯಕ್ತಿಯ ಪ್ರಾಮಾಣಿಕತೆಗೆ ಶ್ಲಾಘನೆ

    ಮರೆತ ಬ್ಯಾಗ್ ಹಿಂದಿರುಗಿಸಿದ ಉಬರ್ ಚಾಲಕ- ವ್ಯಕ್ತಿಯ ಪ್ರಾಮಾಣಿಕತೆಗೆ ಶ್ಲಾಘನೆ

    ಕೋಲ್ಕತ್ತಾ: ವ್ಯಕ್ತಿಯೋರ್ವ ಕಳೆದುಕೊಂಡಿದ್ದ ಬ್ಯಾಗ್‍ವೊಂದನ್ನು ಟ್ಯಾಕ್ಸಿ ಚಾಲಕ ಹುಡುಕಿಕೊಂಡು ಹೋಗಿ ಹಿಂದಿರುಗಿಸಿದ್ದಾರೆ. ಸದ್ಯ ಟ್ಯಾಕ್ಸಿ ಚಾಲಕನ ಪ್ರಾಮಾಣಿಕತೆ ಕುರಿತಂತೆ ಟ್ವಿಟ್ಟರ್ ಪೋಸ್ಟ್ ವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಎಲ್ಲರ ಮನ ಗೆಲ್ಲುತ್ತಿದೆ.

    ಇತ್ತೀಚೆಗಷ್ಟೇ ಪತ್ರಕರ್ತ ಅಭಿಜಿತ್ ಎಂಬವರು ಕೋಲ್ಕತ್ತಾ ವಿಮಾನ ನಿಲ್ದಾಣದಿಂದ ಹಿಂದಿರುಗುತ್ತಿದ್ದ ವೇಳೆ ಮ್ಯಾಕ್‍ಬುಕ್, ಕೀ ಹಾಗೂ ಹಣವಿದ್ದ ಬ್ಯಾಗ್‍ನನ್ನು ಕಾರಿನಲ್ಲಿಯೇ ಮರೆತಿದ್ದರು. ಬಳಿಕ ಅಭಿಜಿತ್ ಉಬರ್ ಡ್ರೈವರ್‍ ಗೆ ಕರೆ ಮಾಡಿ ಬ್ಯಾಗ್ ಮರೆತಿದ್ದು, ಅದನ್ನು ಹಿಂದಿರುಗಿಸುವಂತೆ ಕೇಳಿಕೊಂಡಿದ್ದರು. ಈ ವೇಳೆ ತಕ್ಷಣ ಹಿಂದೆ-ಮುಂದೆ ಯೋಚಿಸದೇ ಕ್ಯಾಬ್ ಡ್ರೈವರ್ ಮತ್ತೆ ಹಿಂದಿರುಗಿ ಬಂದು ಬ್ಯಾಗ್‍ನನ್ನು ವಾಪಸ್ ನೀಡಿದ್ದಾರೆ.

    ಈ ವಿಚಾರವನ್ನು ಅಭಿಜಿತ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ಕೋಲ್ಕತ್ತಾ ವಿಮಾನ ನಿಲ್ದಾಣದಿಂದ ಮನೆಗೆ ಬಂದ ಬಳಿಕ ನಾನು ಕ್ಯಾಬ್‍ನಲ್ಲಿಯೇ ಬ್ಯಾಗ್ ಮರೆತಿದ್ದೇನೆ ಎಂಬ ವಿಚಾರ ನೆನಪಾಯಿತು. ಬ್ಯಾಗ್ ಒಳಗೆ ಮ್ಯಾಕ್‍ಬುಕ್, ಕೀ ಹಾಗೂ ಹಣವಿತ್ತು. ಹಾಗಾಗಿ ಕ್ಯಾಬ್ ಚಾಲಕ ಸರವನ್ ಕುಮಾರ್ ಗೆ ಮರು ಕರೆ ಮಾಡಿದೆ. ಅದನ್ನು ಹಿಂದಿರುಗಿಸಲು ಸಮಯವನ್ನು ಲೆಕ್ಕಿಸದೇ ಚಾಲಕ ಮಧ್ಯರಾತ್ರಿ ಬಂದು ವಾಪಸ್ ನೀಡಿದರು ಎಂದು ಕ್ಯಾಪ್ಷನ್ ಹಾಕುವ ಮೂಲಕ ಚಾಲಕನ ಫೋಟೋವನ್ನು ಶೇರ್ ಮಾಡಿದ್ದಾರೆ.

    ಇದೀಗ ಉಬರ್ ಚಾಲಕ ಸರವನ್ ಪ್ರಾಮಾಣಿಕತೆಗೆ ನೆಟ್ಟಿಗರು ಫಿದಾ ಆಗಿದ್ದು, ಕಮೆಂಟ್ ಮಾಡುವ ಮೂಲಕ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.