Tag: kolkata

  • ಜರತಾರಿ ಸೀರೆ, ಆಭರಣ ಧರಿಸಿ ರೈಲ್ವೇ ನಿಲ್ದಾಣದಲ್ಲಿ ಊಟ ಹಂಚಿದ ಮಹಿಳೆ

    ಜರತಾರಿ ಸೀರೆ, ಆಭರಣ ಧರಿಸಿ ರೈಲ್ವೇ ನಿಲ್ದಾಣದಲ್ಲಿ ಊಟ ಹಂಚಿದ ಮಹಿಳೆ

    ಕೋಲ್ಕತ್ತಾ: ಜರತಾರಿ ಸೀರೆ, ಆಭರಣ ಧರಿಸಿ ರೈಲ್ವೇ ನಿಲ್ದಾಣದಲ್ಲಿ ಊಟ ಹಂಚಿದ ಮಹಿಳೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಮದುವೆ ಸಂಭ್ರಮದಲ್ಲಿ ಯಾರಿಗೂ ಊಟ ಕಮ್ಮಿಯಾಗಬಾರದು ಎಂದು ಊಟವನ್ನು ಹೆಚ್ಚೇ ಮಾಡಿಸುತ್ತಾರೆ. ಆದರೆ ಈ ವೇಳೆ ಹೆಚ್ಚು ಊಟ ವ್ಯರ್ಥವಾಗುವ ಸಂಭವವಿರುತ್ತೆ. ಕೋಲ್ಕತ್ತಾದಲ್ಲಿ ಮಹಿಳೆಯೊಬ್ಬರು ಮದುವೆಯ ಉಡುಪು ಧರಿಸಿ ರೈಲ್ವೇ ನಿಲ್ದಾಣದಲ್ಲಿ ಬಡವರಿಗೆ ಊಟ ಹಂಚುತ್ತಿದ್ದು, ಇತರರಿಗೆ ಮಾದರಿಯಾಗಿದ್ದಾರೆ.

    ಛಾಯಾಗ್ರಾಹಕ ನಿಲಂಜನ್ ಮೊಂಡಲ್ ಅವರು ಫೇಸ್‍ಬುಕ್ ಪೇಜ್ ನಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಮಹಿಳೆಯ ಹೆಸರು ಪಾಪಿಯ ಕರ್ ಎಂದು ಬರೆದುಕೊಂಡಿದ್ದಾರೆ. ಪಾಪಿಯ ಕರ್ ಅವರು ಡಿಸೆಂಬರ್ 5 ರಂದು ತನ್ನ ಸಹೋದರನ ಮದುವೆಯಲ್ಲಿ ಉಳಿದ ಆಹಾರವನ್ನು ಕೋಲ್ಕತ್ತಾ ಉಪನಗರ ರೈಲು ನಿಲ್ದಾಣವಾದ ರಾಣಾಘಾಟ್ ಜಂಕ್ಷನ್‍ನಲ್ಲಿ ಹಂಚಿದ್ದಾರೆ. ಇದನ್ನೂ ಓದಿ: ಮಗನ ಮದುವೆಗೆ 4 ಕೆಜಿ, 280 ಗ್ರಾಂ ತೂಕದ ಮದುವೆ ಕಾರ್ಡ್ ಮಾಡಿಸಿದ ತಂದೆ!

    ಮದುವೆಯ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿರುವ ಪಾಪಿಯ ಕರ್ ಅವರು ಪೇಪರ್ ಪ್ಲೇಟ್‍ಗಳಲ್ಲಿ ಸ್ವತಃ ಆಹಾರವನ್ನು ನೀಡುವುದನ್ನು ನಾವು ಫೋಟೋಗಳಲ್ಲಿ ನೋಡಬಹುದು. ಇವರು ದಾನ ಮಾಡುತ್ತಿದ್ದ ಊಟದಲ್ಲಿ ದಾಲ್, ರೊಟ್ಟಿ, ಸಬ್ಜಿ ಮತ್ತು ಅನ್ನವೂ ಇತ್ತು.

    ಈ ಫೋಟೋಗಳನ್ನು ನೋಡಿದ ನೆಟ್ಟಿಗರು ಮಹಿಳೆಯ ಸೇವಾ ಕಾರ್ಯವನ್ನು ಶ್ಲಾಘಿಸಿದರು. ಉತ್ತಮ ಕೆಲಸ, ನಿಮ್ಮ ಬಗ್ಗೆ ತುಂಬಾ ಹೆಮ್ಮೆ ಇದೆ ಎಂದು ಕಮೆಂಟ್ ಮಾಡುತ್ತಿದ್ದಾರೆ.

  • ರಸ್ತೆಯ ಪಕ್ಕದಲ್ಲಿ ನಿಂತಿದ್ದ ಟ್ರಕ್‍ಗೆ ಟೆಂಪೋ ಗುದ್ದಿ 18 ಮಂದಿ ಸಾವು

    ರಸ್ತೆಯ ಪಕ್ಕದಲ್ಲಿ ನಿಂತಿದ್ದ ಟ್ರಕ್‍ಗೆ ಟೆಂಪೋ ಗುದ್ದಿ 18 ಮಂದಿ ಸಾವು

    ಕೋಲ್ಕತ್ತಾ: ಹೆದ್ದಾರಿಯಲ್ಲಿ ಇಂದು ಮುಂಜಾನೆ ಟ್ರಕ್, ಟೆಂಪೋ ಮಧ್ಯ ಸಂಭವಿಸಿದ ರಸ್ತೆ ಅಪಘಾತದಲ್ಲಿ 18 ಮಂದಿ ಮೃತಪಟ್ಟಿದ್ದು, ಹಲವು ಮಂದಿ ಗಾಯಗೊಂಡಿರುವ ಘಟನೆ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಹಸ್ಖಾಲಿಯಲ್ಲಿ ನಡೆದಿದೆ.

    ಇಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದೆ. 30 ಜನರಿದ್ದ ಟೆಂಪೋ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿ ನಿಂತಿದ್ದ ಟ್ರಕ್‍ಗೆ ಡಿಕ್ಕಿ ಹೊಡೆದಿದೆ. 11 ಜನರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಏಳು ಮಂದಿಯನ್ನು ಶಕ್ತಿನಗರದ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರೆಲ್ಲರೂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮತ್ತಿಬ್ಬರನ್ನು ಎನ್‍ಆರ್‍ಎಸ್ ಮೆಡಿಕಲ್ ಆಸ್ಪತ್ರೆಗೆ ರವಾನಿಸಲಾಗಿದೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಹಣದಾಸೆಗೆ ಅಂಧ ಸ್ನೇಹಿತನನ್ನ ಕೊಂದ ವ್ಯಕ್ತಿಗೆ ಜೀವಾವಧಿ ಶಿಕ್ಷೆ!

    ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಫುಲ್ಬರಿ ಠಾಣಾ  ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ದುರಂತಕ್ಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂತಾಪ ಸೂಚಿಸಿದ್ದಾರೆ.

  • ಭಾರತ-ಮ್ಯಾನ್ಮಾರ್ ಗಡಿಯಲ್ಲಿ 6.1 ತೀವ್ರತೆಯ ಭೂಕಂಪ

    ಭಾರತ-ಮ್ಯಾನ್ಮಾರ್ ಗಡಿಯಲ್ಲಿ 6.1 ತೀವ್ರತೆಯ ಭೂಕಂಪ

    ನವದೆಹಲಿ: ಭಾರತ-ಮ್ಯಾನ್ಮಾರ್ ಗಡಿಯಲ್ಲಿ ಶುಕ್ರವಾರ ಬೆಳಿಗ್ಗೆ 6.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪ ಶಾಸ್ತ್ರ ಕೇಂದ್ರ ತಿಳಿಸಿದೆ.

    ಭಾರತದ ಈಶಾನ್ಯ ಭಾಗಗಳಾದ ತ್ರಿಪುರಾ, ಮಣಿಪುರ, ಮಿಜೊರಾಂ, ಅಸ್ಸಾಂಮ್ ಸೇರಿದಂತೆ ಕೋಲ್ಕತ್ತಾದ ವರೆಗೂ ಭೂಕಂಪನದ ಅನುಭವವಾಗಿದೆ. ಯುರೋಪಿಯನ್ – ಮೆಡಿಟರೇನಿಯನ್ ಸೀಸ್ಮಾಲಾಜಿಕಲ್ ಸೆಂಟರ್‍ನ ವೆಬ್ಸೈಟ್(ಇಎಮ್‍ಎಸ್‍ಸಿ)ನಲ್ಲಿ ಇದರ ಬಗ್ಗೆ ಮಾಹಿತಿ ನೀಡಿದೆ.  ಇದನ್ನೂ ಓದಿ: ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಟೊಮೆಟೊ ಬೆಲೆ

    ಬಾಂಗ್ಲಾದೇಶದ ಚಿತ್ತಗಾಂಗ್ ನಿಂದ ಪೂರ್ವಕ್ಕೆ 183 ಕಿ.ಮೀ ದೂರದ 30 ಕಿ.ಮೀ. ಆಳದಲ್ಲಿ ಭೂಕಂಪದ ಕೇಂದ್ರಬಿಂದು ಪತ್ತೆಯಾಗಿದೆ. ಇದನ್ನೂ ಓದಿ: ರೈತರ ಹೋರಾಟಕ್ಕೆ ಇಂದಿಗೆ ಒಂದು ವರ್ಷ – ಸಿಂಘು, ಟ್ರಿಕ್ರಿ ಗಡಿಯಲ್ಲಿ ಅನ್ನದಾತರ ಮಹಾಪಂಚಾಯತ್

    ಮುಂಜಾನೆ ಸುಮಾರು 5:15 ಗಂಟೆಗೆ ಮೊದಲ ಬಾರಿ ಭೂಮಿ ಕಂಪಿಸಿದರೆ, 5:53 ಕ್ಕೆ ಎರಡನೇ ಬಾರಿ ಕಂಪಿಸಿದೆ. ಭೂಕಂಪದ ಅನುಭವದ ಬಗ್ಗೆ ಮಿಜೋರಾಂನ ಥೆನ್ಜಾವ್ಲ್ ಎಂಬವರು “ನಾನು ಅನುಭವಿಸಿದ ಅತೀ ದೀರ್ಘವಾದ ಭೂಕಂಪಗಳಲ್ಲಿ ಇದು ಒಂದು” ಎಂದು ಟ್ವೀಟ್ ಮಾಡಿದ್ದಾರೆ.

  • ಇದು ನಿಮ್ಮ ಹೋರಾಟಕ್ಕೆ ಸಿಕ್ಕ ವಿಜಯವಾಗಿದೆ: ಮಮತಾ ಬ್ಯಾನರ್ಜಿ

    ಇದು ನಿಮ್ಮ ಹೋರಾಟಕ್ಕೆ ಸಿಕ್ಕ ವಿಜಯವಾಗಿದೆ: ಮಮತಾ ಬ್ಯಾನರ್ಜಿ

    ಕೋಲ್ಕತ್ತಾ: ಬಿಜೆಪಿಯು ನಿಮ್ಮನ್ನು ನಡೆಸಿಕೊಂಡ ಕ್ರೌರ್ಯದಿಂದ ವಿಚಲಿತರಾಗದೇ ಪಟ್ಟುಬಿಡದೇ ಹೋರಾಡಿದ್ದೀರಾ. ಇದು ನಿಮ್ಮ ಹೋರಾಟಕ್ಕೆ ಸಿಕ್ಕ ವಿಜಯವಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.

    ಕಳೆದ ವರ್ಷ ಜಾರಿಗೆ ತಂದ ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ನಂತರ ವಿವಾದಿತ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶುಕ್ರವಾರ ಅಭಿನಂದನೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ದೇಶದ ರೈತರಿಗೆ ನಾನು ಸಲ್ಯೂಟ್ ಮಾಡುತ್ತೇನೆ: ಅರವಿಂದ್ ಕೇಜ್ರಿವಾಲ್

    modi

    ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ‘ಬಿಜೆಪಿಯು ನಿಮ್ಮನ್ನು ನಡೆಸಿಕೊಂಡ ಕ್ರೌರ್ಯದಿಂದ ವಿಚಲಿತರಾಗದೇ ಪಟ್ಟುಬಿಡದೇ ಹೋರಾಡಿದ ಪ್ರತಿಯೊಬ್ಬ ರೈತನಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಇದು ನಿಮ್ಮ ವಿಜಯವಾಗಿದೆ. ಈ ಹೋರಾಟದಲ್ಲಿ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡ ಪ್ರತಿಯೊಬ್ಬರಿಗೂ ನನ್ನ ಸಂತಾಪಗಳು ಎಂದು ತಿಳಿಸಿದ್ದಾರೆ. ಇದನ್ನೂ ಓದಿ:  ಕೃಷಿ ಕಾಯ್ದೆ ವಾಪಸ್ ಪಡೆದ ಮೋದಿ ಸರ್ಕಾರ

    ಈ ಬಗ್ಗೆ ಕಾಂಗ್ರೆಸ್ ಮುಂಖಡ ರಾಹುಲ್ ಗಾಂಧಿ ಅವರು ಸಹ ಹಳೆಯ ವೀಡಿಯೋವೊಂದನ್ನು ಹಂಚಿಕೊಳ್ಳುವುದರ ಜೊತೆಗೆ, ಅನ್ನದಾತರ ಸತ್ಯಾಗ್ರಹ ಅಹಂಕಾರವನ್ನು ಅಡಗಿಸಿತು. ಅನ್ಯಾಯದ ವಿರುದ್ಧ ಗೆಲುವಿಗೆ ಅಭಿನಂದನೆಗಳು. ಜೈ ಹಿಂದ್ ಜೈ ಹಿಂದ್ ಕಾ ಕಿಸಾನ್ ಎಂದು ಟ್ವೀಟ್ ಮಾಡುವ ಮೂಲಕ ರೈತರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಅನ್ನದಾತರ ಸತ್ಯಾಗ್ರಹ ಅಹಂಕಾರ ಅಡಗಿಸಿತು: ರಾಹುಲ್ ಗಾಂಧಿ

  • ಕೇಕ್ ಮೇಲೆ ಗಂಡ ಎಂದು ಬರೆಸಿದ ನುಸ್ರತ್ – ಯಶ್ ಜೊತೆಗಿನ ವಿವಾಹದ ಬಗ್ಗೆ ಸುಳಿವು ಕೊಟ್ರಾ?

    ಕೇಕ್ ಮೇಲೆ ಗಂಡ ಎಂದು ಬರೆಸಿದ ನುಸ್ರತ್ – ಯಶ್ ಜೊತೆಗಿನ ವಿವಾಹದ ಬಗ್ಗೆ ಸುಳಿವು ಕೊಟ್ರಾ?

    ಕೋಲ್ಕತ್ತಾ: ಬೆಂಗಾಲಿ ನಟಿ ಹಾಗೂ ಟಿಎಂಸಿ ಸಂಸದೆ ನುಸ್ರತ್ ಜಹಾನ್, 36ನೇ ವಸಂತಕ್ಕೆ ಕಾಲಿಟ್ಟ ಯಶ್‍ದಾಸ್‍ಗುಪ್ತಾ ಅವರ ಹುಟ್ಟುಹಬ್ಬವನ್ನು ವಿಶೇಷವಾದ ಕೇಕ್ ಕತ್ತರಿಸುವ ಮೂಲಕ ಸೆಲಬ್ರೆಟ್ ಮಾಡಿದ್ದಾರೆ. ಬರ್ತ್‍ಡೇ ಸೆಲಬ್ರೆಟ್ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಿಶೇಷವೆಂದರೆ ಈ ಕೇಕ್ ಮೇಲೆ ನುಸ್ರತ್ ಜಹಾನ್ ಗಂಡ ಎಂದು ಬರೆಸಿರುವ ಮೂಲಕ ನುಸ್ರತ್ ಹಾಗೂ ಯಶ್ ಮದುವೆಯಾಗಿರುವ ಬಗ್ಗೆ ಸುಳಿವು ನೀಡಿದ್ರಾ ಎಂಬ ಪ್ರಶ್ನೆ ಎದ್ದಿದೆ.

    nusrath jahan

    ಆಗಸ್ಟ್ 26ರಂದು ನುಸ್ರತ್ ಜಹಾನ್ ಗಂಡು ಮಗುವಿಗೆ ಜನ್ಮ ನೀಡಿದರು. ಅಲ್ಲದೇ ಮಗುವಿನ ಬರ್ತ್ ಸರ್ಟಿಫಿಕೇಟ್‍ನಲ್ಲಿ ಯಶ್ ದಾಸ್ ಗುಪ್ತಾ ಎಂದು ಉಲ್ಲೇಖಿಸಲಾಗಿತ್ತು. ಇದೀಗ ಯಶ್ ಬರ್ತ್‍ಡೇ ದಿನದಂದು ಇಬ್ಬರು ಒಟ್ಟಿಗೆ ಡಿನ್ನರ್ ಮಾಡುವುದರ ಮೂಲಕ ಸಖತ್ ಎಂಜಾಯ್ ಮಾಡಿದ್ದಾರೆ. ಬರ್ತ್‍ಡೇ ಕೇಕ್‍ನ ಒಂದು ಭಾಗದಲ್ಲಿ ಗಂಡ ಎಂದು ಬರೆಸಲಾಗಿದ್ದು, ಮತ್ತೊಂದು ಕಡೆ ಅಪ್ಪ ಎಂದು ಬರೆಸಲಾಗಿದೆ. ಜೊತೆಗೆ ಇಬ್ಬರು ಒಟ್ಟಿಗೆ ಸೆಲ್ಫಿಗೆ ಪೋಸ್ ನೀಡಿದ್ದಾರೆ. ಸದ್ಯ ಈ ಫೋಟೋಗಳನ್ನು ನುಸ್ರತ್ ತಮ್ಮ ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಹೆರಿಗೆ ಬಳಿಕ ಕ್ಯಾಮೆರಾ ಮುಂದೆ ನುಸ್ರತ್ ಜಹಾನ್ – ಮಗುವಿನ ತಂದೆ ಬಗ್ಗೆ ಹೇಳಿದ್ದೇನು?

    nusrath jahan

    ಈ ಮುನ್ನ 2019ರ ಜೂನ್ 19ರಂದು ನುಸ್ರತ್ ಜಹಾನ್ ಮತ್ತು ನಿಖಿಲ್ ಜೈನ್ ಟರ್ಕಿಯಲ್ಲಿ ವಿವಾಹವಾಗಿದ್ದರು. ಟರ್ಕಿ ಕಾನೂನಿನ ಪ್ರಕಾರ ಇದಕ್ಕೆ ಮಾನ್ಯತೆ ಇಲ್ಲ. ಭಾರತದಲ್ಲೂ ಅಧಿಕೃತವಾಗಿ ಯಾವುದೇ ಕಾನೂನಿನ ಪ್ರಕಾರ ನಾವು ಮದುವೆ ಆಗಿಲ್ಲ ನಮ್ಮದು ಲಿವ್ ಇನ್ ರಿಲೇಷನ್ ಶಿಪ್ ಅಷ್ಟೇ ಎಂದಿದ್ದರು. ಇದನ್ನೂ ಓದಿ:  ಗಂಡು ಮಗುವಿಗೆ ಜನ್ಮ ನೀಡಿದ ಸಂಸದೆ ನುಸ್ರತ್ ಜಹಾನ್

    nusrath jahan

    ನಂತರ ನುಸ್ರತ್ ಹಾಗೂ ಯಶ್ ದಾಸ್‍ಗುಪ್ತಾ ರಿಲೇಶನ್ ಶಿಪ್‍ನಲ್ಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಮಗುವಿನ ತಂದೆ ಹೆಸರನ್ನು ನುಸ್ರತ್ ಇಲ್ಲಿಯವರೆಗೂ ಬಹಿರಂಗ ಪಡಿಸಿಲ್ಲ. ಆದರೆ ಮಗುವಿನ ಜನನದ ಪ್ರಮಾಣ ಪತ್ರದಲ್ಲಿ ಮಗುವಿನ ಯಶ್ ದಾಸ್‍ಗುಪ್ತಾ ಎಂದು ಹೆಸರಿಸಲಾಗಿದೆ.

  • ದುರ್ಗಾ ದೇವಿ ರೀತಿ ಮಮತಾ ಬ್ಯಾನರ್ಜಿ ವಿಗ್ರಹ ಸ್ಥಾಪನೆ

    ದುರ್ಗಾ ದೇವಿ ರೀತಿ ಮಮತಾ ಬ್ಯಾನರ್ಜಿ ವಿಗ್ರಹ ಸ್ಥಾಪನೆ

    ಕೊಲ್ಕತ್ತಾ: ದುರ್ಗಾ ದೇವಿ ರೀತಿ ಮಮತಾ ಬ್ಯಾನರ್ಜಿ ಅವರ ಫೋಟೋವನ್ನು ಕೊಲ್ಕತ್ತಾದಲ್ಲಿ ಸ್ಥಾಪನೆ ಮಾಡಲಾಗಿದೆ.

    ನಿನ್ನೆಯಿಂದ ನವರಾತ್ರಿ ಪೂಜೆ ಪ್ರಾರಂಭವಾಗಿದೆ. ಈ ನಡುವೆ ಕೋಲ್ಕಾತ್ತಾದಲ್ಲಿ ದುರ್ಗಾ ಪೂಜೆಗೆ ತೃಣಮೂಲ ಕಾಂಗ್ರೆಸ್ ನಾಯಕಿ, ಸಿಎಂ ಮಮತಾ ಬ್ಯಾನರ್ಜಿ ಅವರ ಫೋಟೋವನ್ನು ದೇವತೆಯ ವಿಗ್ರಹದಂತೆ ಸ್ಥಾಪಿಸಿದ್ದು, ಅವರನ್ನು ದುರ್ಗಾ ದೇವಿಯಂತೆ ಚಿತ್ರಿಸಲಾಗಿದೆ. ವಿಗ್ರಹದ ಪ್ರತಿಯೊಂದು ಬಿಂಬವು ಅವರ ಸರ್ಕಾರದ ಪ್ರತಿ ಅಂಶವನ್ನು ಪ್ರತಿನಿಧಿಸುತ್ತದೆ ಎಂದು ಬಾಗುಯತಿ ನಜರುಲ್ ಪಾರ್ಕ್ ಉನ್ನಯನ ಸಮಿತಿಯ ಅಧ್ಯಕ್ಷ ಇಂದ್ರನಾಥ್ ಬಾಗಿ ಹೇಳಿದರು. ಇದನ್ನೂ ಓದಿ: ಥ್ರೋಬ್ಯಾಕ್ ವೀಡಿಯೋ ಎಂದು ವೈರಲ್ ವೀಡಿಯೋ ಶೇರ್ ಮಾಡಿದ ಡಿಡಬ್ಲ್ಯೂಆರ್

    ಈ ವಿಗ್ರಹವನ್ನು ನೋಡಿದರೆ, ಮಮತಾ ಬ್ಯಾನರ್ಜಿ ಅವರಂತೆ ನೀಲಿ ಹಂಚು ಮತ್ತು ಬಿಳಿ ಸೀರೆಯನ್ನು ಉಟ್ಟು ನಮಸ್ಕರಿಸಿ ನಿಂತಿದ್ದಾರೆ. ಇನ್ನೂ ಅವರ ಹಿಂದೆ ಇರುವ ಎಂಟು ಕೈಗಳು, ಅವರ ಸರ್ಕಾರದಲ್ಲಿ ಕೈಗೊಂಡಿದ್ದ ಯೋಜನೆಗಳು ಮತ್ತು ಸಾಧನೆಯನ್ನು ಪ್ರತಿನಿಧಿಸುತ್ತದೆ. ಇವರು ಬರೆದಿರುವ ಸಾಧನೆಯ ಲಿಪಿಯು ಉಪಭಾಷೆ ಬಂಗಾಳಿಯಲ್ಲಿದೆ.

    ಈ ಚಿತ್ರದ ಹಿಂದೆ ವಿಶ್ವ ಭೂಪಟವಿದ್ದು, ಇದು ಬ್ಯಾನರ್ಜಿ ಅವರ ಸಾಧನೆಯನ್ನು ಪ್ರತಿಬಿಂಬಿಸುತ್ತೆ. ಬ್ಯಾನರ್ಜಿ ಅವರು ಕಳೆದ ಸಮಯ, ಸ್ಥಳ ಮತ್ತು ಇತರ ಎಲ್ಲ ಅಂಶಗಳನ್ನು ಚಿತ್ರಿಸಲಾಗಿದೆ. ಈ ಹಿನ್ನೆಲೆ ವಾಸ್ತವದ ಬಗ್ಗೆ ಹೆಚ್ಚು ಮಾತನಾಡುತ್ತದೆ. ಇದನ್ನೂ ಓದಿ: ಹಣೆಗೆ ಗುಂಡು ಹಾರಿಸಿಕೊಂಡು 71 ವರ್ಷದ ವೃದ್ಧ ಸಾವು

    ಇತ್ತೀಚೆಗೆ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಭವಾನಿಪುರ ಚುನಾವಣೆಯಲ್ಲಿ ಬಿಜೆಪಿ ನಾಯಕಿ ಪ್ರಿಯಾಂಕಾ ಅವರನ್ನು ಸೋಲಿಸಿ ಗೆದ್ದಿದ್ದಾರೆ. ಇವರ ಚುನಾವಣಾ ಪ್ರಣಾಳಿಕೆಯಲ್ಲಿ, 25-60 ವರ್ಷ ವಯಸ್ಸಿನ ಕುಟುಂಬಗಳ ಮುಖ್ಯಸ್ಥರಿಗೆ ‘ಲಕ್ಷ್ಮಿ ಭಂಡಾರ್ ಯೋಜನೆ’ಯ ಮೂಲಕ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.

  • ಶೇ.60-65 ಮತದಾನದ ನಡೆದರೆ ಪ್ರಿಯಾಂಕಾಗೆ ಗೆಲುವು: ಸುವೇಂದು

    ಶೇ.60-65 ಮತದಾನದ ನಡೆದರೆ ಪ್ರಿಯಾಂಕಾಗೆ ಗೆಲುವು: ಸುವೇಂದು

    ಕೋಲ್ಕತ್ತಾ: ನಾವು ಪೊಲೀಸ್, ಮಾಫಿಯಾಗಳು ಮತ್ತು ಹಣದ ಶಕ್ತಿಯ ವಿರುದ್ಧ ಹೋರಾಡಬೇಕಾಗಿದೆ ಎಂದು ಬಂಗಾಳದ ಬಿಜೆಪಿ ಪಕ್ಷದ ನಾಯಕ ಸುವೇಂದು ಅಧಿಕಾರಿ ಹೇಳಿದ್ದಾರೆ.

    ಬಂಗಾಳ ಉಪಚುನಾವಣೆಗೆ ಬಗ್ಗೆ ಸುವೇಂದು ಅಧಿಕಾರಿ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಭವಾನಿಪುರ ವಿಧಾನಸಭಾ ಉಪಚುನಾವಣೆಯಲ್ಲಿ ನಾವು ಆಡಳಿತ, ಪೊಲೀಸ್, ಮಾಫಿಯಾಗಳು ಮತ್ತು ಹಣದ ಶಕ್ತಿಯ ವಿರುದ್ಧ ಹೋರಾಡಬೇಕಾಗಿದೆ. ಒಂದು ವೇಳೆ ಈ ಚುನಾವಣೆಯಲ್ಲಿ ಶೇ.60-65ರಷ್ಟು ಮತದಾನ ನಡೆದರೆ ‘ಬಂಗಾಳದ ಮಗಳು’ ಪ್ರಿಯಾಂಕಾ ಟಿಬ್ರೆವಾಲ್ ವಿಜಯಶಾಲಿಯಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ:  ಕೃಷಿಹೊಂಡದಲ್ಲಿ ಮುಳುಗಿ ಇಬ್ಬರು ಬಾಲಕರ ಸಾವು

    ಬಿಜೆಪಿ ಅಭ್ಯರ್ಥಿ, ವಕೀಲೆ ಪ್ರಿಯಾಂಕಾ ಟಿಬ್ರೆವಾಲ್ ಇಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ವರಿಷ್ಠೆ ಮಮತಾ ಬ್ಯಾನರ್ಜಿ ವಿರುದ್ಧ ಭವಾನಿಪುರ ಕ್ಷೇತ್ರದಲ್ಲಿ ನಡೆಯುವ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲಿದ್ದಾರೆ. ಈ ಸೆಪ್ಟೆಂಬರ್ 30 ರಂದು ಭವಾನಿಪುರದಲ್ಲಿ ಉಪಚುನಾವಣೆ ನಡೆಯಲಿದ್ದು, ಅಕ್ಟೋಬರ್ 3 ರಂದು ಫಲಿತಾಂಶ ಪ್ರಕಟವಾಗಲಿದೆ. ಇದನ್ನೂ ಓದಿ:  ಶ್ರೀಮಂತ ಪಾಟೀಲ್ ಹೇಳಿದ್ದು ಸತ್ಯ, ಎಸಿಬಿ ಸ್ವಯಂ ಪ್ರೇರಿತ ಕೇಸ್ ದಾಖಲಿಸಲಿ :ಡಿಕೆಶಿ

    ಹೊಸದಾಗಿ ನೇಮಕಗೊಂಡ ಗುಜರಾತ್ ಮುಖ್ಯಮಂತ್ರಿ ಕುರಿತು ಮಾತನಾಡಿದ ಅವರು, ಭೂಪೇಂದ್ರ ಪಟೇಲ್ ಅವರು ಗುಜರಾತ್‍ನ ಮುಖ್ಯಮಂತ್ರಿಯಾಗಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಆಯ್ಕೆಯಾಗಿದ್ದಾರೆ. ಅವರಿಗೆ ಅಭಿನಂದನೆಗಳು ಎಂದು ಶುಭಕೋರಿದ್ದಾರೆ.

  • ಹೆರಿಗೆ ಬಳಿಕ ಕ್ಯಾಮೆರಾ ಮುಂದೆ ನುಸ್ರತ್ ಜಹಾನ್ – ಮಗುವಿನ ತಂದೆ ಬಗ್ಗೆ ಹೇಳಿದ್ದೇನು?

    ಹೆರಿಗೆ ಬಳಿಕ ಕ್ಯಾಮೆರಾ ಮುಂದೆ ನುಸ್ರತ್ ಜಹಾನ್ – ಮಗುವಿನ ತಂದೆ ಬಗ್ಗೆ ಹೇಳಿದ್ದೇನು?

    ಕೋಲ್ಕತ್ತಾ: ಬೆಂಗಾಲಿ ನಟಿ ಹಾಗೂ ಟಿಎಂಸಿ ಸಂಸದೆ ನುಸ್ರತ್ ಜಹಾನ್ ತಮ್ಮ ಚೊಚ್ಚಲ ಹೆರಿಗೆ ನಂತರ ಇದೇ ಪ್ರಥಮ ಬಾರಿಗೆ ಕ್ಯಾಮೆರಾ ಮುಂದೆ ಕಾಣಿಸಿಕೊಂಡಿದ್ದಾರೆ.

    ಆಗಸ್ಟ್ 8 ರಂದು ಗಂಡು ಮಗುವಿಗೆ ಜನ್ಮ ನೀಡಿದ ನುಸ್ರತ್ ಜಹಾನ್, ಒಂದು ತಿಂಗಳ ಒಳಗೆ ಇದೀಗ ಕೆಲಸವನ್ನು ಪುನರಾಂಭಿಸಿದ್ದಾರೆ. ಈ ಮಧ್ಯೆ ಶುಕ್ರವಾರ ಸಾರ್ವಜನಿಕವಾಗಿ ಕಾಣಿಸಿಕೊಂಡ ನುಸ್ರತ್ ಜಹಾನ್ ಮಗುವಿನ ತಂದೆ ಬಗ್ಗೆ ಮಾಧ್ಯಮದ ಎದುರಿಗೆ ಮಾತನಾಡಿದ್ದಾರೆ.  ಇದನ್ನೂ ಓದಿ:  ಗಂಡು ಮಗುವಿಗೆ ಜನ್ಮ ನೀಡಿದ ಸಂಸದೆ ನುಸ್ರತ್ ಜಹಾನ್

    Nusrat Jahan

    ಮಾಧ್ಯಮದವರು ಮಗುವಿನ ಮುಖವನ್ನು ಯಾವಾಗ ಮೊದಲ ಬಾರಿಗೆ ನೋಡಬಹುದು ಎಂದು ಪ್ರಶ್ನಿಸಿದಾಗ, ಅದನ್ನು ನೀವು ಅವನ ತಂದೆಯೊಂದಿಗೆ ಕೇಳಬೇಕು. ಸದ್ಯ ಅವರು ಯಾರನ್ನು ನೋಡಲು ಬಿಡುತ್ತಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ:  ಕುಣಿದು ಕುಪ್ಪಳಿಸಿ ದುರ್ಗಾ ಪೂಜೆ ನೆರವೇರಿಸಿದ ಸಂಸದೆ ನುಸ್ರತ್ ಜಹಾನ್

    ಆಗಸ್ಟ್ 8ರಂದು ಕೋಲ್ಕತ್ತಾದ ನಿಯೀಟಿಯಾ ಆಸ್ಪತ್ರೆಯಲ್ಲಿ ನುಸ್ರತ್ ಜಹಾನ್ ಗಂಡು ಮಗುವಿಗೆ ಜನ್ಮ ನೀಡಿದ್ದರು. ನುಸ್ರತ್ ಮತ್ತು ಉದ್ಯಮಿ ನಿಖಿಲ್ ಜೈನ್ 2019ರಲ್ಲಿ ಟರ್ಕಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆ ಬಳಿಕ ಕೆಲ ಕಾರಣಗಳಿಂದ ಇವರಿಬ್ಬರ ನಡುವೆ ಪರಸ್ಪರ ಬಿರುಕು ಮೂಡಿ ಬೇರೆ ಬೇರೆಯಾಗಿದ್ದರು ಎಂಬ ಸುದ್ದಿ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಈ ಕುರಿತಂತೆ ನುಸ್ರತ್ ನಿಖಿಲ್ ಜೈನ್ ಜೊತೆಗಿನ ಮದುವೆಗೆ ಯಾವುದೇ ಮಾನ್ಯತೆ ಇಲ್ಲ. ಟರ್ಕಿಯಲ್ಲಿ ಮದುವೆ ನಡೆದಿದ್ದು, ಟರ್ಕಿ ಕಾನೂನಿನ ಪ್ರಕಾರ ಇದಕ್ಕೆ ಮಾನ್ಯತೆ ಇಲ್ಲ. ಭಾರತದಲ್ಲೂ ಅಧಿಕೃತವಾಗಿ ಯಾವುದೇ ಕಾನೂನಿನ ಪ್ರಕಾರ ನಾವು ಮದುವೆ ಆಗಿಲ್ಲ ನಮ್ಮದು ಲಿವ್ ಇನ್ ರಿಲೇಷನ್ ಶಿಪ್ ಅಷ್ಟೇ ಎಂದಿದ್ದರು.

  • ಗಂಡು ಮಗುವಿಗೆ ಜನ್ಮ ನೀಡಿದ ಸಂಸದೆ ನುಸ್ರತ್ ಜಹಾನ್

    ಗಂಡು ಮಗುವಿಗೆ ಜನ್ಮ ನೀಡಿದ ಸಂಸದೆ ನುಸ್ರತ್ ಜಹಾನ್

    ಕೋಲ್ಕತ್ತಾ: ಬೆಂಗಾಲಿ ನಟಿ ಹಾಗೂ ಟಿಎಂಸಿ ಸಂಸದೆ ನುಸ್ರತ್ ಜಹಾನ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

    ಆಗಸ್ಟ್ 25ರ ರಾತ್ರಿ ಕೋಲ್ಕತ್ತಾದ ನಿಯೀಟಿಯಾ ಆಸ್ಪತ್ರೆಗೆ ದಾಖಲಾಗಿದ್ದ ನುಸ್ರತ್ ಜಹಾನ್, ಗುರುವಾರ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ್ದಾರೆ. ಸದ್ಯದ ವರದಿ ಪ್ರಕಾರ ತಾಯಿ ಮತ್ತು ಮಗು ಇಬ್ಬರು ಕ್ಷೇಮವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

    ನಟ ಯ್ ದಾಸ್ ಗುಪ್ತಾ ನುಸ್ರತ್ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ ನಿನ್ನೆ ನುಸ್ರಾತ್‍ರನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಈ ಮುನ್ನ ನುಸ್ರತ್ ಆಗಸ್ಟ್ 25ರಂದು ತಪಾಸಣೆಗಾಗಿ ಕೋಲ್ಕತ್ತಾದ ಪಾರ್ಕ್ ಸ್ಟ್ರೀಟ್ ಪ್ರದೇಶದ ಆಸ್ಪತ್ರೆಗೆ ಭೇಟಿ ನೀಡಿದ್ದರು. ಇದೀಗ ಗಂಡು ಮಗುವಿಗೆ ಜನ್ಮ ನೀಡುವ ಮೂಲಕ ನುಸ್ರತ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಅಲ್ಲದೇ ಇಂದು ಮುಂಜಾನೆ ನುಜ್ರತ್ ಜಹಾನ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದು, ಭಯಕ್ಕಿಂತ ನಂಬಿಕೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದರು. ಇದನ್ನೂ ಓದಿ:ಖ್ಯಾತ ತಬಲ ವಾದ್ಯಕಾರ ಪಂಡಿತ್ ಸುಭಂಕರ್ ಬ್ಯಾನರ್ಜಿ ಕೊರೊನಾಗೆ ಬಲಿ

     

    View this post on Instagram

     

    A post shared by Nusrat (@nusratchirps)

    ನುಸ್ರತ್ ಮತ್ತು ಉದ್ಯಮಿ ನಿಖಿಲ್ ಜೈನ್ 2019ರಲ್ಲಿ ಟರ್ಕಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆ ಬಳಿಕ ಕೆಲ ಕಾರಣಗಳಿಂದ ಇವರಿಬ್ಬರ ನಡುವೆ ಪರಸ್ಪರ ಬಿರುಕು ಮೂಡಿ ಬೇರೆ ಬೇರೆಯಾಗಿದ್ದರು ಎಂಬ ಸುದ್ದಿ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಈ ಕುರಿತಂತೆ ನುಸ್ರತ್ ನಿಖಿಲ್ ಜೈನ್ ಜೊತೆಗಿನ ಮದುವೆಗೆ ಯಾವುದೇ ಮಾನ್ಯತೆ ಇಲ್ಲ. ಟರ್ಕಿಯಲ್ಲಿ ಮದುವೆ ನಡೆದಿದ್ದು, ಟರ್ಕಿ ಕಾನೂನಿನ ಪ್ರಕಾರ ಇದಕ್ಕೆ ಮಾನ್ಯತೆ ಇಲ್ಲ. ಭಾರತದಲ್ಲೂ ಅಧಿಕೃತವಾಗಿ ಯಾವುದೇ ಕಾನೂನಿನ ಪ್ರಕಾರ ನಾವು ಮದುವೆ ಆಗಿಲ್ಲ ನಮ್ಮದು ಲಿವ್ ಇನ್ ರಿಲೇಷನ್ ಶಿಪ್ ಅಷ್ಟೇ ಎಂದಿದ್ದರು. ಇದನ್ನೂ ಓದಿ:ಶಸ್ತ್ರ ಚಿಕಿತ್ಸೆ ನಂತರ ಅಭಿಷೇಕ್ ಫೋಟೋ ಶೇರ್

  • ಖ್ಯಾತ ತಬಲಾ ವಾದಕ ಪಂಡಿತ್ ಸುಭಂಕರ್ ಬ್ಯಾನರ್ಜಿ ಕೊರೊನಾಗೆ ಬಲಿ

    ಖ್ಯಾತ ತಬಲಾ ವಾದಕ ಪಂಡಿತ್ ಸುಭಂಕರ್ ಬ್ಯಾನರ್ಜಿ ಕೊರೊನಾಗೆ ಬಲಿ

    ಕೋಲ್ಕತ್ತಾ: ಕೋವಿಡ್-19 ವಿರುದ್ಧ ಎರಡು ತಿಂಗಳ ಕಾಲ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಖ್ಯಾತ ತಬಲಾ ವಾದಕ ಪಂಡಿತ್ ಸುಭಂಕರ್ ಬ್ಯಾನರ್ಜಿ ಬುಧವಾರ ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

    ಸುಭಂಕರ್ ಬ್ಯಾನರ್ಜಿ(54) ಪತ್ನಿ, ಮಗ ಮತ್ತು ಮಗಳನ್ನು ಅಗಲಿದ್ದಾರೆ. ಈ ವಿಚಾರವನ್ನು ಸುಭಂಕರ್ ಬ್ಯಾನರ್ಜಿರವರ ಪುತ್ರ ಅರ್ಚಿಕ್ ಬ್ಯಾನರ್ಜಿ ಫೇಸ್‍ಬುಕ್‍ನಲ್ಲಿ ‘ಲಾಸ್ಟ್’ ಎಂದು ಪೋಸ್ಟ್ ಮಾಡಿದ್ದಾರೆ. ಗುರುವಾರ ಪಂಡಿತ್ ತೇಜೆಂದ್ರ ನಾರಾಯಣ ಮಜುಂದರ್, ಪಂಡಿತ್ ಪುರಬಯಾನ್ ಚಟರ್ಜಿ, ಉಸ್ತಾದ್ ರಶೀದ್ ಖಾನ್ ಸೇರಿದಂತೆ ಹಲವಾರು ಶಾಸ್ತ್ರೀಯ ಸಂಗೀತಗಾರರು ಕೋವಿಡ್ ನಿಯಮಗಳಿಗನುಸಾರವಾಗಿ ಬ್ಯಾನರ್ಜಿಯವರ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಲಿದ್ದಾರೆ. ಇದನ್ನೂ ಓದಿ:ಶಸ್ತ್ರ ಚಿಕಿತ್ಸೆ ನಂತರ ಅಭಿಷೇಕ್ ಫೋಟೋ ಶೇರ್

    ಜೂನ್ 20ರಂದು ಸುಭಂಕರ್ ಬ್ಯಾನರ್ಜಿ ಆಸ್ಪತ್ರೆಗೆ ದಾಖಲಾಗಿದ್ದರು ಮತ್ತು ತಿಂಗಳುಗಳ ಕಾಲ ವೆಂಟಿಲೇಟರ್ ಸಹಾಯದಿಂದ ಉಸಿರಾಡುತ್ತಿದ್ದರು. ಇಲ್ಲಿಯವರೆಗೂ ಪಂಡಿತ್ ರವಿಶಂಕರ್, ಉಸ್ತಾದ್ ಅಮ್ಜದ್ ಅಲಿಖಾನ್, ಪಂಡಿತ್ ಹರಿಪ್ರಸಾದ್ ಚೌರಾಸಿಯಾ, ಪಂಡಿತ್ ಶಿವಕುಮಾರ್ ಶರ್ಮಾರರಂತಹ ದಿಗ್ಗಜರೊಂದಿಗೆ ಹಲವು ಕಾರ್ಯಕ್ರಮಗಳಲ್ಲಿ ಪೈಪೋಟಿ ನೀಡುವ ಮೂಲಕ ಸುಭಂಕರ್ ಬ್ಯಾನರ್ಜಿ ಮಿಂಚಿದ್ದಾರೆ.

    ಬುಧವಾರ ರಾತ್ರಿ ಖ್ಯಾತ ತಬಲಾ ಕಲಾವಿದ ಜಾಕಿರ್ ಹುಸೇನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ನಾನು ಅವನನ್ನು ಕಳೆದುಕೊಳ್ಳುತ್ತಿದ್ದೇನೆ. ತಬಲಾ ಪ್ರಪಂಚ ಅವನನ್ನು ಕಳೆದುಕೊಳ್ಳುತ್ತಿದೆ. ಭಾರತೀಯ ಸಂಗೀತವು ಅವನನ್ನು ಕಳೆದುಕೊಳ್ಳುತ್ತಿದೆ ಎಂದು ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ:ಆಸ್ತಿ ತೆರಿಗೆ, ಅಡುಗೆ ಅನಿಲ ಹೆಚ್ಚಳ ವಿರೋಧಿಸಿ ಕಾಂಗ್ರೆಸ್‍ನಿಂದ ಬಿಬಿಎಂಪಿಗೆ ಮುತ್ತಿಗೆ