Tag: kolkata

  • 15ರ ಬಾಲಕನ ಜೊತೆಗೆ ಸಪ್ತಪದಿ ತುಳಿದ 22 ವರ್ಷದ ಯುವತಿ

    15ರ ಬಾಲಕನ ಜೊತೆಗೆ ಸಪ್ತಪದಿ ತುಳಿದ 22 ವರ್ಷದ ಯುವತಿ

    ಕೋಲ್ಕತ್ತಾ: 22 ವರ್ಷ ವಯಸ್ಸಿನ ಯುವತಿಯೊಬ್ಬಳು 15 ವರ್ಷದ ಬಾಲಕನೊಂದಿಗೆ ವಿವಾಹವಾಗಿರುವ ಪ್ರಸಂಗ ಪಶ್ಚಿಮ ಬಂಗಾಳದ ಶಾಂತಿಪುರದಲ್ಲಿ  ನಡೆದಿದೆ.

    15 ವರ್ಷದ ಬಾಲಕ ನಾಡಿಯಾದ ಕೃಷ್ಣನಗರ ಪ್ರದೇಶದವನು. ಯುವತಿ ಜೊತೆ ಫೇಸ್‍ಬುಕ್‍ನಲ್ಲಿ ಪರಿಚಯವಾಗಿದ್ದನು ಎಂದು ತಿಳಿದು ಬಂದಿದೆ. ನಂತರ ಇವರ ಸ್ನೇಹ, ಪ್ರೀತಿಗೆ ತಿರುಗಿ ಇಬ್ಬರು ಮದುವೆಯಾಗಿದ್ದಾರೆ.

    ಡಿಸೆಂಬರ್ 25ರಂದು ಮನೆಯಿಂದ ಓಡಿ ಹೋಗಿರುವ ಈ ಜೋಡಿ ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡಿದೆ. ತದನಂತರ ನಿನ್ನೆ ಲೋಕಲ್ ರೈಲಿನಲ್ಲಿ ಶಾಂತಿಪುರಕ್ಕೆ ಬರುತ್ತಿದ್ದ ವೇಳೆ ಅವರ ಮಾತು ಕೇಳಿ ಪ್ರಯಾಣಿಕರಿಗೆ ಅನುಮಾನ ಬಂದಿದೆ. ಹೀಗಾಗಿ, ಚೈಲ್ಡ್‌ಲೈನ್‌ಗೆ ಮಾಹಿತಿ ನೀಡಿದ್ದಾರೆ. ಇದರ ಬೆನ್ನಲ್ಲೇ ರೈಲ್ವೆ ಪೊಲೀಸರು ಇವರನ್ನು ಬಂಧಿಸಿದ್ದಾರೆ. ಇದೀಗ ಇಬ್ಬರನ್ನು ವಶಕ್ಕೆ ಪಡೆದುಕೊಂಡಿರುವ ಶಾಂತಿಪುರ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.

    ಲಭ್ಯವಾಗಿರುವ ಮಾಹಿತಿ ಪ್ರಕಾರ ಬಾಲಕ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಯುವತಿ ಉತ್ತರಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದಾಳೆ ಎನ್ನಲಾಗಿದೆ. ರೈಲಿನಲ್ಲಿ ಪ್ರಯಾಣ ಬೆಳೆಸುತ್ತಿದ್ದ ವೇಳೆ ಇಬ್ಬರೂ ಉತ್ತರಪ್ರದೇಶಕ್ಕೆ ಹೋಗುವುದಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಿದ್ದರು. ಇದನ್ನೂ ಓದಿ: ನ್ಯೂ ಇಯರ್ ಪಾರ್ಟಿ- ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಯುವಕರು

  • ಕೋವಿಡ್ ಹೆಚ್ಚಾದ್ರೆ ಪಶ್ಚಿಮ ಬಂಗಾಳದಲ್ಲಿ ಶಾಲಾ-ಕಾಲೇಜ್ ಬಂದ್: ಮಮತಾ ಬ್ಯಾನರ್ಜಿ

    ಕೋವಿಡ್ ಹೆಚ್ಚಾದ್ರೆ ಪಶ್ಚಿಮ ಬಂಗಾಳದಲ್ಲಿ ಶಾಲಾ-ಕಾಲೇಜ್ ಬಂದ್: ಮಮತಾ ಬ್ಯಾನರ್ಜಿ

    ಕೋಲ್ಕತ್ತಾ: ಕೋವಿಡ್ 3ನೇ ಅಲೆ, ಓಮಿಕ್ರಾನ್ ಭೀತಿ ಹಿನ್ನೆಲೆಯಲ್ಲಿ ಅವಶ್ಯಕತೆ ಇದ್ದರೆ ಪಶ್ಚಿಮ ಬಂಗಾಳದಲ್ಲಿ ಶಾಲಾ-ಕಾಲೇಜುಗಳನ್ನು ಬಂದ್ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದರು.

    ಈ ಬಗ್ಗೆ ಸಭೆಯಲ್ಲಿ ಮಾತನಾಡಿದ ಅವರು, ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಅಗತ್ಯವಿದ್ದರೆ ಶಾಲಾ-ಕಾಲೇಜುಗಳನ್ನು ಬಂದ್ ಮಾಡುವಂತೆ ಮತ್ತು ಸರ್ಕಾರಿ ಕಚೇರಿಗಳು ಶೇ.50ರಷ್ಟು ಹಾಜರಾತಿಯೊಂದಿಗೆ ಕೆಲಸ ನಿರ್ವಹಿಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

    ಕೋವಿಡ್-19 ಪ್ರಕರಣಗಳು ಹೆಚ್ಚುವುದರ ಜೊತೆಗೆ ಓಮಿಕ್ರಾನ್ ಸೋಂಕುಗಳು ಕಾಣಿಸಿಕೊಳ್ಳುತ್ತಿವೆ. ಆದ್ದರಿಂದ, ಪರಿಸ್ಥಿತಿಯ ಪರಿಶೀಲನೆಯ ಅಗತ್ಯವಿದೆ. ಸಂಖ್ಯೆಗಳು ಹೆಚ್ಚುತ್ತಲೇ ಇದ್ದರೆ, ಶಾಲೆಗಳು ಮತ್ತು ಕಾಲೇಜುಗಳನ್ನು ಮುಚ್ಚಬೇಕು ಎಂದರು. ಇದನ್ನೂ ಓದಿ: ಇಂದು 566 ಪ್ರಕರಣ – ಬೆಂಗಳೂರಿನಲ್ಲಿ 400 ಕೇಸ್, 4 ಸಾವು

    ಅಂತಾರಾಷ್ಟ್ರೀಯ ವಿಮಾನಯಾನದ ಬಗ್ಗೆ ಮತಾನಾಡಿ, ಅಂತಾರಾಷ್ಟ್ರೀಯ ವಿಮಾನ ಮತ್ತು ಸ್ಥಳೀಯ ರೈಲು ಸೇವೆಗಳ ಬಗ್ಗೆಯೂ ನಿರ್ಧಾರ ತೆಗೆದುಕೊಳ್ಳಲಾಗುವುದು. ಅಂತಾರಾಷ್ಟ್ರೀಯ ವಿಮಾನಗಳಲ್ಲಿ ರಾಜ್ಯಕ್ಕೆ ಆಗಮಿಸುವವರಲ್ಲಿ ಕೆಲವರಲ್ಲಿ ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗುತ್ತಿವೆ. ಇದರಿಂದಾಗಿ ಅಂತಾರಾಷ್ಟ್ರೀಯ ವಿಮಾನಗಳ ಕಾರ್ಯಾಚರಣೆಯ ಮೌಲ್ಯಮಾಪನ ಮಾಡಿ ಕಠಿಣ ನಿರ್ಧಾರ ತೆಗೆದುಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ 6 ಭಯೋತ್ಪಾದಕರ ಹತ್ಯೆ

    ಕೊರೊನಾ ತಡೆಗೆ ವಾರ್ಡ್ ಹಾಗೂ ಮಹಾನಗರದಲ್ಲಿ ಕಂಟೈನ್‍ಮೆಂಟ್ ವಲಯಗಳನ್ನು ಮರುಪರಿಚಯಿಸಲು ಸಲಹೆಯನ್ನು ನೀಡಿದ್ದಾರೆ. ಜೊತೆಗೆ ಅಗತ್ಯವಿದ್ದರೆ ಕಚೇರಿಗಳು ಶೇ.50ರಷ್ಟು ನೌಕರರ ಹಾಜರಾತಿಯೊಂದಿಗೆ ಕಾರ್ಯನಿರ್ವಹಿಸಲು ತಿಳಿಸಿದರು.

  • ಹಾರ್ನ್ ಹಾಕುವುದನ್ನು ಕಮ್ಮಿ ಮಾಡಿ – 32 ವರ್ಷಗಳಿಂದ ಸಂದೇಶ ಸಾರ್ತಿದ್ದಾರೆ ಸೈಲೆಂಟ್ ಕ್ರುಸೇಡರ್

    ಕೋಲ್ಕತ್ತಾ: ನಮ್ಮಲ್ಲಿ ಟ್ರಾಫಿಕ್ ಇದ್ದಾಗ ಯಾರಿಗೆ ತಾನೇ ತಾಳ್ಮೆ ಇರುತ್ತೆ? ಅರ್ಜೆಂಟ್ ಇಲ್ಲ ಅಂದ್ರೂ ಹಾರ್ನ್ ಹಾಕಿ ಗದ್ದಲ ಮಾಡಿ ಇತರ ಪ್ರಯಾಣಿಕರಿಗೂ ಕಿರಿಕಿರಿ ಮಾಡುವ ಚಟ ನಮ್ಮಲ್ಲಿ ಹೆಚ್ಚಿನವರಿಗೆ ಇದೆ. ಇಲ್ಲೊಬ್ಬ ವ್ಯಕ್ತಿ ಹಾರ್ನ್ ಹಾಕುವುದನ್ನು ಕಡಿಮೆ ಮಾಡಿ ಎಂಬ ಸಂದೇಶದೊಂದಿಗೆ ಓಡಾಡುತ್ತಿದ್ದು ಗಮನ ಸೆಳೆದಿದ್ದಾರೆ.

    ಅನವಶ್ಯಕ ಹಾರ್ನ್ ಮಾಡುವುದನ್ನು ನಿಲ್ಲಿಸಿ ಎಂಬ ಸಂದೇಶದೊಂದಿಗೆ ಓಡಾಡುತ್ತಿರುವ ಕೋಲ್ಕತ್ತಾದ ಉದ್ಯಮಿ ಕೈಲಾಶ್ ಮೆಹ್ತಾ ಕಳೆದ 32 ವರ್ಷಗಳಿಂದ ಸಂದೇಶವನ್ನು ಸಾರುತ್ತಿದ್ದಾರೆ. ಮೆಹ್ತಾ ತನ್ನನ್ನು ತಾನು ಸೈಲೆಂಟ್ ಕ್ರುಸೇಡರ್ ಎಂದು ಕರೆದಿದ್ದಾರೆ.

    ಕಳೆದ ನಾಲ್ಕು ವರ್ಷಗಳಿಂದ ಕೈಲಾಶ್ ಹಾರ್ನ್ ಮಾಡದೇ ಸ್ಕೂಟರ್ ಅನ್ನು ಓಡಿಸುತ್ತಿದು, ಹಾರ್ನ್ ಹಾಕುವುದನ್ನು ಕಡಿಮೆ ಮಾಡಿ ಎಂಬ ಪೋಸ್ಟರ್ ಕೂಡಾ ಬೆನ್ನಿಗೆ ಹಾಕಿಕೊಂಡು ಓಡಾಡುತ್ತಿದ್ದಾರೆ. ತಮ್ಮ ದ್ವಿಚಕ್ರ ವಾಹನವನ್ನು ನೋ ಹಾಂಕಿಂಗ್ ಟ್ಯಾಬ್ಲೋ ಆಗಿ ಪರಿವರ್ತಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ಭದ್ರತೆಗಾಗಿ 12 ಕೋಟಿಯ ದುಬಾರಿ ಕಾರು- ವಿಶೇಷತೆ ಏನು..?

    ಹಾರ್ನ್ ಮಾಡುವುದರಿಂದ ಟ್ರಾಫಿಕ್ ಕಡಿಮೆಯಾಗುತ್ತದೆಯೇ? ಇಲ್ಲ. ನಿಯಮಗಳನ್ನು ಅನುಸರಿಸಿದರೆ ಟ್ರಾಫಿಕ್ ಅನ್ನು ಪರಿಹರಿಸಬಹುದು. ಹಾರ್ನ್ ಮಾಡಬೇಡಿ. ಆದರೆ ಬ್ರೇಕ್ ಹಾಕಿ ಎಂದು ಮೆಹ್ತಾ ಹೇಳುತ್ತಾರೆ.

    ವಾಹನ ಚಾಲಕರು ಹಾರ್ನ್ ಮಾಡುವುದನ್ನು ಕಡಿಮೆ ಮಾಡಿದರೆ ನಗರ ಹೆಚ್ಚು ನಾಗರಿಕ ಹಾಗೂ ವಾಸಯೋಗ್ಯವಾಗುತ್ತದೆ. ಅತಿಯಾದ ಹಾರ್ನ್ ಶಬ್ಧದಿಂದ ಜನರಲ್ಲಿ ಒತ್ತಡ ಹೆಚ್ಚುತ್ತದೆ. ಹೃದಯದ ಸಮಸ್ಯೆಗೂ ಕಾರಣವಾಗುತ್ತದೆ. ಹೀಗೆ ಹಾರ್ನ್ ಮಾಡುವುದರ ದುಷ್ಪರಿಣಾಮಗಳ ಬಗ್ಗೆ ನಾಗರಿಕರಿಗೆ ತಿಳುವಳಿಕೆ ನೀಡುವ ಉದ್ದೇಶದಿಂದ ಇಂತಹ ಪ್ರಯತ್ನ ಮಾಡುತ್ತಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ಕಛೇರಿಯಲ್ಲಿ ಶೇ.50, ಮದುವೆಗೆ 20 ಜನ ಮಾತ್ರ ಅವಕಾಶ – ಹೊಸ ನಿಯಮ ಜಾರಿಗೊಳಿಸಿದ ದೆಹಲಿ ಸರ್ಕಾರ

    ನಾನು ಅಮೆರಿಕಾದಲ್ಲಿ ವಾಸಮಾಡಿದ್ದೆ. ಅತ್ಯಂತ ಹೆಚ್ಚು ಜನಸಂಖ್ಯೆ ಇರುವ ಚೀನಾಗೂ ಪ್ರಯಾಣಿಸಿ ಓಡಾಡಿದ್ದೇನೆ. ಅವರು ಅನಗತ್ಯ ಹಾರ್ನ್ ಮಾಡುವುದಿಲ್ಲ. ಅಂತಹ ದೇಶದವರಿಗೆ ಸಾಧ್ಯವಿದ್ದರೆ, ನಮ್ಮ ದೇಶದಲ್ಲಿ ಏಕೆ ಸಾಧ್ಯವಿಲ್ಲ ಎಂದು ಮೆಹ್ತಾ ಸವಾಲು ಹಾಕಿದ್ದಾರೆ.

  • ಡ್ರೈವಿಂಗ್ ಕಲಿಯುತ್ತಿದ್ದಾಗ ವ್ಯಕ್ತಿಯ ಮೇಲೆ ಗಾಡಿಯನ್ನು ಹರಿಸಿದ ಮಾಜಿ ಪೊಲೀಸ್

    ಡ್ರೈವಿಂಗ್ ಕಲಿಯುತ್ತಿದ್ದಾಗ ವ್ಯಕ್ತಿಯ ಮೇಲೆ ಗಾಡಿಯನ್ನು ಹರಿಸಿದ ಮಾಜಿ ಪೊಲೀಸ್

    ಕೋಲ್ಕತ್ತಾ: ಡ್ರೈವಿಂಗ್ ಕಲಿಯುತ್ತಿದ್ದ ಮಾಜಿ ಪೊಲೀಸ್ ಅಧಿಕಾರಿಯೊಬ್ಬ ಚಾಲನೆಯ ಸಮಯದಲ್ಲಿ ವ್ಯಕ್ತಿಯೊಬ್ಬರ ಮೇಲೆ ಗಾಡಿಯನ್ನು ಹರಿಸಿದ್ದು, ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಘಟನೆ ಸೋಮವಾರ ಕೋಲ್ಕತ್ತಾದ ಗರಿಯಾ ಸಹಕಾರಿ ರಸ್ತೆಯಲ್ಲಿ ಬೆಳಗ್ಗೆ 9 ಗಂಟೆಯ ಹೊತ್ತಿಗೆ ನಡೆದಿದೆ. ಮೃತ ದುರ್ದೈವಿ ಪ್ರೊಫೆಸರ್ ಸುನಿಲ್ ಕುಮಾರ್ ಗರೈ ಮಾರುಕಟ್ಟೆಯಿಂದ ತರಕಾರಿಯನ್ನು ತರಲು ಹೋಗಿದ್ದು, ಮರಳುವಾಗ ದುರ್ಘಟನೆ ನಡೆದಿದೆ.

    ವರದಿಗಳ ಪ್ರಕಾರ ಗರೈ ತಮ್ಮ ಬೈಕಿನಲ್ಲಿ ಮನೆಗೆ ತೆರಳುತ್ತಿದಾಗ ಹಿಂದಿನಿಂದ ಬಂದ ಕಾರು, ಬೈಕ್‌ಗೆ ಡಿಕ್ಕಿ ಹೊಡೆದಿದೆ. ರಸ್ತೆಯ ಮೇಲೆ ಬಿದ್ದ ಮೇಲೆ ಕಾರು ಅವರ ಮೇಲೆಯೇ ಹರಿದುಕೊಂಡು ಹೋಗಿದೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಬಿಗ್‍ಬಾಸ್ ಸ್ಪರ್ಧಿ ದಿವ್ಯ ಸುರೇಶ್ ರಂಪಾಟ

    ಪ್ರತ್ಯಕ್ಷದರ್ಶಿಗಳ ಪ್ರಕಾರ ಗರೈ ಅವರ ತಲೆ ಎಂಜಿನ್ ಮತ್ತು ಮಡ್‌ಗಾರ್ಡ್ ನಡುವೆ ಸಿಲುಕಿಕೊಂಡಿತ್ತು. ಸ್ಥಳದಲ್ಲಿ ನೆರೆದಿದ್ದ ಜನರು ಅವರನ್ನು ಅದರಿಂದ ಬಿಡಿಸಿ ಸ್ಥಳೀಯ ಆಸ್ಪತ್ರೆಗೆ ಸಾಗಿಸಿದರು. ಆದರೆ ತೀವ್ರ ರಕ್ತಸ್ರಾವದಿಂದ ಗರೈ ಸಾವನ್ನಪ್ಪಿದ್ದಾರೆ.

    ಗರೈಗೆ ಡಿಕ್ಕಿ ಹೊಡೆದ ಕಾರು ಮಧ್ಯಮ ಹಂತದ ಮಾಜಿ ಪೊಲೀಸ್ ಅಧಿಕಾರಿ ಓಡಿಸುತ್ತಿದ್ದು, ಅಪಘಾತದ ಸಮಯದಲ್ಲಿ ಕಾರು ಚಾಲನೆಯನ್ನು ಕಲಿಯುತ್ತಿದ್ದರು ಎನ್ನಲಾಗಿದೆ. ಗರೈ ಅವರ ಬೈಕ್ ಎದುರುಗಡೆ ಇದ್ದುದನ್ನು ಕಂಡು ಗಾಬರಿಗೊಳಗಾದ ಆರೋಪಿ ಗೊಂದಲದಲ್ಲಿ ಬ್ರೇಕ್ ಹಾಕುವ ಬದಲು ಆಕ್ಸಿಲೆಟರ್ ಒತ್ತಿದ್ದು, ಅಪಘಾತಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ಭದ್ರತೆಗಾಗಿ 12 ಕೋಟಿಯ ದುಬಾರಿ ಕಾರು- ವಿಶೇಷತೆ ಏನು..?

    ಸದ್ಯ ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದ ಸಾವು ಸಂಭವಿಸಿದ್ದಾಗಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಲಾಗಿದೆ.

  • ಮೋದಿ ಸರ್ಕಾರ ಕ್ರೈಸ್ತರನ್ನು ಟಾರ್ಗೆಟ್ ಮಾಡಿದೆ: ಪಿ. ಚಿದಂಬರಂ

    ಮೋದಿ ಸರ್ಕಾರ ಕ್ರೈಸ್ತರನ್ನು ಟಾರ್ಗೆಟ್ ಮಾಡಿದೆ: ಪಿ. ಚಿದಂಬರಂ

    ಕೋಲ್ಕತ್ತಾ: ಮೋದಿ ಸರ್ಕಾರವು ತನ್ನ ಬಹುಮತದ ಅಜೆಂಡಾವನ್ನು ಮುಂದುವರಿಸಲು ಕ್ರಿಶ್ಚಿಯನ್ನರನ್ನು ಗುರಿಯಾಗಿಸುತ್ತಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಹೇಳಿದ್ದಾರೆ.

    ಕೋಲ್ಕತ್ತಾದಲ್ಲಿ ಮಿಷನರೀಸ್ ಆಫ್ ಚಾರಿಟಿಯ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿರುವ ವಿಚಾರವಾಗಿ ಪಿ.ಚಿದಂಬರಂ ಗೃಹ ಸಚಿವಾಲಯವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿರುವ ಮಿಷನರೀಸ್ ಆಫ್ ಚಾರಿಟಿಗೆ ಭವಿಷ್ಯದ ದೃಷ್ಟಿಯಿಂದ ನೀಡುತ್ತಿರುವ ವಿದೇಶಿ ಕೊಡುಗೆಗಳನ್ನು ನಿರಾಕರಿಸುತ್ತಿರುದಕ್ಕಿಂತ ಆಘಾತಕಾರಿ ವಿಚಾರ ಮತ್ತೊಂದಿಲ್ಲ. ಭಾರತದಲ್ಲಿರುವ ಬಡವರು ಮತ್ತು ದಲಿತರ ಸೇವೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮದರ್ ತೆರೇಸಾ ಅವರ ಸ್ಮರಣೆಗೆ ಅತ್ಯಂತ ದೊಡ್ಡ ಅವಮಾನವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ:  ನೈಟ್ ಕರ್ಫ್ಯೂ – ಸರ್ಕಾರದ ವಿರುದ್ಧ ಹೋಂಸ್ಟೇ, ರೆಸಾರ್ಟ್ ಮಾಲೀಕರ ಅಸಮಾಧಾನ

    ಎಫ್‌ಸಿಆರ್‌ಎ ನೋಂದಣಿಯ ನವೀಕರಣಕ್ಕಾಗಿ ಮಿಷನರೀಸ್ ಆಫ್ ಚಾರಿಟಿಯು ನೀಡಿದ್ದ ಅರ್ಜಿಯನ್ನು ಡಿಸೆಂಬರ್ 25ರಂದು ಗೃಹ ಸಚಿವಾಲಯ ನಿರಾಕರಿಸಿತ್ತು. ಈ ಬಗ್ಗೆ ಚಿದಂಬರಂ ಟ್ವೀಟ್‌ ಮಾಡಿ, ಎಂಎಚ್‍ಎ ತನ್ನ ಕೌಶಲಗಳನ್ನು ಕೋಮು ಹಿಂಸಾಚಾರ ಮತ್ತು ಭಯೋತ್ಪಾದಕ ಚಟುವಟಿಕೆಗಳನ್ನು ಹತ್ತಿಕ್ಕಲು ಬಳಸಬೇಕೇ ಹೊರತು ಕ್ರಿಶ್ಚಿಯನ್ ಧರ್ಮಾರ್ಥ ಮತ್ತು ಮಾನವೀಯ ಕಾರ್ಯಗಳನ್ನು ನಿಗ್ರಹಿಸಲು ಅಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆಯನ್ನು ಕಿತ್ತೆಸೆಯುತ್ತೇವೆ: ಸಿದ್ದರಾಮಯ್ಯ

    2021ನೇ ವರ್ಷ ಕೊನೆಗೊಳ್ಳುತ್ತಿದ್ದಂತೆ, ಮೋದಿ ಸರ್ಕಾರ ಕ್ರಿಶ್ಚಿಯನ್ನರನ್ನು ಮತ್ತೊಮ್ಮೆ ಗುರಿಯಾಗಿಸಿಕೊಂಡಿದೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತಿದೆ. ಬಿಜೆಪಿ ತಮ್ಮ ಬಹುಮತದ ಅಜೆಂಡಾವನ್ನು ಮುಂದುವರೆಸಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

  • ಬಂಗಾಳದ ಐವರು ಬಿಜೆಪಿ ಶಾಸಕರು ಪಕ್ಷ ತೊರೆಯಬಹುದು: ಬಾಬುಲ್ ಸುಪ್ರಿಯೋ

    ಬಂಗಾಳದ ಐವರು ಬಿಜೆಪಿ ಶಾಸಕರು ಪಕ್ಷ ತೊರೆಯಬಹುದು: ಬಾಬುಲ್ ಸುಪ್ರಿಯೋ

    ಕೋಲ್ಕತ್ತಾ: ಬಿಜೆಪಿ ವಾಟ್ಸಾಪ್ ಗ್ರೂಪ್‍ನಿಂದ ಹೊರಬಂದ ಪಶ್ಚಿಮ ಬಂಗಾಳದ ಐವರು ಅತೃಪ್ತ ಶಾಸಕರು ಕೇಸರಿ ಪಕ್ಷವನ್ನು ತೊರೆಯಲಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ನಾಯಕ ಬಾಬುಲ್ ಸುಪ್ರಿಯೋ ಹೇಳಿದ್ದಾರೆ.

    ಮೂರು ತಿಂಗಳ ಹಿಂದೆ ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷಕ್ಕೆ ಸೇರ್ಪಡೆಗೊಂಡ ಕೇಂದ್ರದ ಮಾಜಿ ಸಚಿವ ಮತ್ತು ತೃಣಮೂಲ ಕಾಂಗ್ರೆಸ್ ನಾಯಕ ಬಾಬುಲ್ ಸುಪ್ರಿಯೋ ಅವರು ಈ ಕುರಿತಂತೆ ಟ್ವಿಟ್ಟರ್‌ನಲ್ಲಿ ಬಿಜೆಪಿಯಲ್ಲಿ ಒಂದರ ಹಿಂದೆ ಒಂದು ವಿಕೆಟ್ ಬೀಳುತ್ತಿದೆ. ಇನ್ನೂ ಐದು ವಿಕೆಟ್ ಬೀಳಲಿದೆ. ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿ ಪ್ರಚಾರದ ಮೇಲ್ವಿಚಾರಣೆ ನಡೆಸಿದ್ದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಿವಪ್ರಕಾಶ್ ಇದೀಗ ಕೈಲಾಸ ಪರ್ವತಕ್ಕೆ ಹೋಗಿದ್ದಾರೆ. ನಿಮ್ಮನ್ನು ಹಿಂದಿನಿಂದ ಎಳೆಯುವ ಬಂಗಾಳಿ ಹೇಡಿಗಳನ್ನು ಹುಡುಕಲು ಪ್ರಯತ್ನಿಸುತ್ತದ್ದರೆ ಮುರಳೀಧರ್ ಲೇನ್‍ಗೆ ಹೋಗಿ ಎಂದಿದ್ದಾರೆ.

    ಪಶ್ಚಿಮ ಬಂಗಾಳದ ಐವರು ಶಾಸಕರಾದ ಮುಕುತ್ಮೋನಿ ಅಧಿಕಾರಿ (ರಣಘಾಟ್ ದಕ್ಷಿಣ), ಸುಬ್ರತಾ ಠಾಕೂರ್ (ಗೈಘಾಟ), ಅಂಬಿಕಾ ರಾಯ್ (ಕಲ್ಯಾಣಿ), ಅಶೋಕ್ ಕೀರ್ತಾನಿಯಾ (ಬೊಂಗಾವ್ ಉತ್ತರ), ಮತ್ತು ಅಸಿಮ್ ಸರ್ಕಾರ್ (ಹರಿಂಘಟ) ಬಿಜೆಪಿ ವಾಟ್ಸಾಪ್ ಗ್ರೂಪ್ ತೊರೆದಿದ್ದಾರೆ. ಇದನ್ನೂ ಓದಿ:  ಪ್ರಧಾನಿ ಮೋದಿ ನಮ್ಮ ದೇಶದ ಹೆಮ್ಮೆ: ಗುಲಾಂ ನಬಿ ಆಜಾದ್

    ಈ ವಿಚಾರವಾಗಿ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಸುಕಾಂತ ಮಜುಂದಾರ್ ಅವರು, ಐವರು ಶಾಸಕರಲ್ಲಿ ಯಾರನ್ನು ಸಹ ಬಿಡುವುದಿಲ್ಲ, ಹೊಸ ಸಮಿತಿಗಳಲ್ಲಿ ಅವರಿಗೆ ಅವಕಾಶ ಕಲ್ಪಿಸುತ್ತೇವೆ. ಎಲ್ಲರೂ ಸ್ವಲ್ಪ ತಾಳ್ಮೆಯಿಂದಿರಬೇಕು ಎಂದಿದ್ದಾರೆ. ಇದನ್ನೂ ಓದಿ: 40 ವರ್ಷ ಮೇಲ್ಪಟ್ಟ ಮಹಿಳೆಯರು ಮೋದಿಯಿಂದ ಪ್ರಭಾವಿತರಾಗಿದ್ದಾರೆಯೇ ಹೊರತು ಜೀನ್ಸ್ ತೊಟ್ಟ ಹುಡುಗಿಯರಲ್ಲ: ದಿಗ್ವಿಜಯ್ ಸಿಂಗ್

  • ಯಾವುದೇ ಪ್ರಯಾಣದ ಹಿನ್ನೆಲೆ ಇಲ್ಲದಿದ್ದರೂ ವೈದ್ಯನಿಗೆ ಓಮಿಕ್ರಾನ್

    ಯಾವುದೇ ಪ್ರಯಾಣದ ಹಿನ್ನೆಲೆ ಇಲ್ಲದಿದ್ದರೂ ವೈದ್ಯನಿಗೆ ಓಮಿಕ್ರಾನ್

    ಕೋಲ್ಕತ್ತಾ: ಪಶ್ಚಿಮ ಬಂಗಾಳದ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯರೊಬ್ಬರಲ್ಲಿ ಕೊರೊನಾ ರೂಪಾಂತರಿ ಓಮಿಕ್ರಾನ್ ಕಂಡುಬಂದಿದೆ. ಇತ್ತೀಚೆಗೆ ಅವರು ಯಾವುದೇ ಪ್ರಯಾಣ ಮಾಡಿಲ್ಲ ಎಂಬ ಮಾಹಿತಿ ಆತಂಕ ಮೂಡಿಸಿದೆ.

    ವೈದ್ಯನಲ್ಲಿ ಕೋವಿಡ್ ಸೋಂಕಿನ ಲಕ್ಷಣ ಕಂಡು ಬಂದಿದ್ದು, ಅವರನ್ನು ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಶುಕ್ರವಾರ ಅವರ ವರದಿ ಪಾಸಿಟಿವ್ ಬಂದಿದೆ.

    ವೈದ್ಯ ನಾಡಿಯಾ ಜಿಲ್ಲೆಯ ಕೃಷ್ಣನಗರದವರಾಗಿದ್ದು, ಯಾವುದೇ ಅಂತಾರಾಷ್ಟ್ರೀಯ ಪ್ರಯಾಣದ ಇತಿಹಾಸ ಹೊಂದಿಲ್ಲ. ಸದ್ಯ ರೋಗಿಯನ್ನು ಕೋಲ್ಕತ್ತಾದ ಬೆಳೆಘಾಟಾ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಇದನ್ನೂ ಓದಿ: ವಡಿವೇಲುಗೆ ಕೊರೊನಾ- ಓಮಿಕ್ರಾನ್ ಸೋಂಕು ಶಂಕೆ

    ಪಶ್ಚಿಮ ಬಂಗಾಳದಲ್ಲಿ ಡಿಸೆಂಬರ್ 15ರಂದು ಮೊದಲ ಓಮಿಕ್ರಾನ್ ಪ್ರಕರಣ ವರದಿಯಾಗಿತ್ತು. ಅಬುದಾಭಿಯಿಂದ ಹಿಂದಿರುಗಿದ್ದ 7 ವರ್ಷದ ಬಾಲಕನಲ್ಲಿ ಓಮಿಕ್ರಾನ್ ಸೋಂಕು ಕಂಡು ಬಂದಿತ್ತು. ಡಿಸೆಂಬರ್ 23 ರಂದು ಇನ್ನೂ ಎರಡು ಪ್ರಕರಣಗಳು ದಾಖಲಾಗಿದ್ದು, ಶುಕ್ರವಾರದ ವರದಿಯಿಂದ ಅಲ್ಲಿನ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 4ಕ್ಕೆ ಏರಿದೆ. ಇದನ್ನೂ ಓದಿ: ಬಟ್ಟೆ ಮಾಸ್ಕ್ ಬೇಡ.. ಎನ್95, ಕೆ95 ಮಾಸ್ಕ್‌ಗಳನ್ನೇ ಬಳಸಿ – ತಜ್ಞರ ಸಲಹೆ

  • ಮಗನ ಕೈ ಹಿಡಿದಿರುವ ವೀಡಿಯೋ ಶೇರ್ ಮಾಡಿದ ನುಸ್ರತ್ ಜಹಾನ್

    ಮಗನ ಕೈ ಹಿಡಿದಿರುವ ವೀಡಿಯೋ ಶೇರ್ ಮಾಡಿದ ನುಸ್ರತ್ ಜಹಾನ್

    ಕೋಲ್ಕತ್ತಾ: ಬೆಂಗಾಲಿ ನಟಿ ಹಾಗೂ ಟಿಎಂಸಿ ಸಂಸದೆ ನುಸ್ರತ್ ಜಹಾನ್ ತಮ್ಮ ಪ್ರೀತಿಯ ಪುತ್ರನ ಕೈ ಹಿಡಿದಿರುವ ವೀಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

    ಸದಾ ಸೋಶಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ಸುದ್ದಿ ಮೂಲಕ ಸದ್ದು ಮಾಡುವ ನುಸ್ರತ್ 2021ರ ಆಗಸ್ಟ್ 26ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಸದ್ಯ 3 ತಿಂಗಳ ಬಳಿಕ ಮಗನ ಪುಟ್ಟ ಕೈ ಹಿಡಿದಿರುವ ಪೋಸ್ಟ್‌ವೊಂದನ್ನು ನುಸ್ರತ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಂಡಿದ್ದಾರೆ. ಮಗನ ಕೈ ಫೋಟೋ ಅಷ್ಟೇ ಅಲ್ಲದೇ ಯಶ್ ಹಾಗೂ ತಮ್ಮ ಕೆಲವೊಂದು ಫೋಟೋಗಳನ್ನು ಕೋಲಾಜ್ ಮಾಡಿ ವೀಡಿಯೋವನ್ನು ಹರಿಬಿಟ್ಟಿದ್ದಾರೆ. ಇದನ್ನೂ ಓದಿ: ಹೆರಿಗೆ ಬಳಿಕ ಕ್ಯಾಮೆರಾ ಮುಂದೆ ನುಸ್ರತ್ ಜಹಾನ್ – ಮಗುವಿನ ತಂದೆ ಬಗ್ಗೆ ಹೇಳಿದ್ದೇನು?

     

    View this post on Instagram

     

    A post shared by Nusrat (@nusratchirps)

    ಈ ಮುನ್ನ ಸೆಪ್ಟೆಂಬರ್ 9 ರಂದು ಹೆರಿಗೆ ನಂತರ ಮೊದಲ ಬಾರಿಗೆ ಮಾಧ್ಯಮದವರ ಮುಂದೆ ಕಾಣಿಸಿಕೊಂಡಿದ್ದ ನುಸ್ರತ್‍ಗೆ ಮಗುವಿನ ಮುಖವನ್ನು ಯಾವಾಗ ತೋರಿಸುತ್ತೀರಾ ಎಂದು ಕೇಳಿದ್ದ ಪ್ರಶ್ನೆಗೆ ಅದನ್ನು ನೀವು ಅವನ ತಂದೆಯೊಂದಿಗೆ ಕೇಳಬೇಕು. ಸದ್ಯ ಅವರು ಯಾರನ್ನು ನೋಡಲು ಬಿಡುತ್ತಿಲ್ಲ ಎಂದು ಹೇಳಿದ್ದರು. ಇದನ್ನೂ ಓದಿ:  ಗಂಡು ಮಗುವಿಗೆ ಜನ್ಮ ನೀಡಿದ ಸಂಸದೆ ನುಸ್ರತ್ ಜಹಾನ್

    ಆಗಸ್ಟ್ 26ರಂದು ಕೋಲ್ಕತ್ತಾದ ನಿಯೀಟಿಯಾ ಆಸ್ಪತ್ರೆಯಲ್ಲಿ ನುಸ್ರತ್ ಜಹಾನ್ ಗಂಡು ಮಗುವಿಗೆ ಜನ್ಮ ನೀಡಿದ್ದರು. ನುಸ್ರತ್ ಮತ್ತು ಉದ್ಯಮಿ ನಿಖಿಲ್ ಜೈನ್ 2019ರಲ್ಲಿ ಟರ್ಕಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆ ಬಳಿಕ ಕೆಲ ಕಾರಣಗಳಿಂದ ಇವರಿಬ್ಬರ ನಡುವೆ ಪರಸ್ಪರ ಬಿರುಕು ಮೂಡಿ ಬೇರೆ ಬೇರೆಯಾಗಿದ್ದರು ಎಂಬ ಸುದ್ದಿ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಈ ಕುರಿತಂತೆ ನುಸ್ರತ್ ನಿಖಿಲ್ ಜೈನ್ ಜೊತೆಗಿನ ಮದುವೆಗೆ ಯಾವುದೇ ಮಾನ್ಯತೆ ಇಲ್ಲ. ಟರ್ಕಿಯಲ್ಲಿ ಮದುವೆ ನಡೆದಿದ್ದು, ಟರ್ಕಿ ಕಾನೂನಿನ ಪ್ರಕಾರ ಇದಕ್ಕೆ ಮಾನ್ಯತೆ ಇಲ್ಲ. ಭಾರತದಲ್ಲೂ ಅಧಿಕೃತವಾಗಿ ಯಾವುದೇ ಕಾನೂನಿನ ಪ್ರಕಾರ ನಾವು ಮದುವೆ ಆಗಿಲ್ಲ ನಮ್ಮದು ಲಿವ್ ಇನ್ ರಿಲೇಷನ್ ಶಿಪ್ ಅಷ್ಟೇ ಎಂದಿದ್ದರು.

  • 2024ರ ಚುನಾವಣೆಯಲ್ಲಿ ಬಿಜೆಪಿಗೆ ಸೋಲು: ಮಮತಾ ಬ್ಯಾನರ್ಜಿ

    2024ರ ಚುನಾವಣೆಯಲ್ಲಿ ಬಿಜೆಪಿಗೆ ಸೋಲು: ಮಮತಾ ಬ್ಯಾನರ್ಜಿ

    ಕೋಲ್ಕತ್ತಾ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅನುಭವಿಸಿದ ಸೋಲನ್ನು 2024ರ ಲೋಕಸಭಾ ಚುನಾವಣೆಯಲ್ಲೂ ಕಾಣಲಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿಶ್ವಾಸ ವ್ಯಕ್ತಪಡಿಸಿದರು.

    ಇದೇ ತಿಂಗಳ 19ರಂದು ನಡೆಯುವ ಕೋಲ್ಕತ್ತಾದ ಮುನ್ಸಿಪಲ್ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಂಗಾಳವು ಕೋಮು ಸೌಹಾರ್ದ ರಾಜ್ಯವಾಗಿದೆ. ಆದರೆ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಕೋಮು ಸೌಹಾರ್ದತೆಯನ್ನು ಕೆಡಿಸಲು ನಡೆಸಿದಂತಹ ಪ್ರಚಾರವನ್ನು ಎಲ್ಲರೂ ನೋಡಿದ್ದೇವೆ ಎಂದು ಹರಿಹಾಯ್ದರು.

    ಬಿಜೆಪಿಯವರು ಏನೇ ಮಾಡಿದರೂ ರಾಜ್ಯದ ಜನರು ವಿಧಾನಸಭಾ ಚುನಾವಣೆಯಲ್ಲಿ ತಕ್ಕ ಉತ್ತರವನ್ನು ನೀಡಿದ್ದಾರೆ. ಹಾಗೆಯೇ ಮುಂದಿನ ದಿನಗಳಲ್ಲಿ ಇಡೀ ದೇಶವೂ ಈ ರೀತಿಯಾಗೆ ಚಿಂತಿಸಿ ಬಿಜೆಪಿಯನ್ನು ಸೋಲಿಸುತ್ತದೆ ಎಂದರು. ಇದನ್ನೂ ಓದಿ: ಖಾಸಗಿ ಜೆಟ್ ಪತನಗೊಂಡು 9 ಮಂದಿ ದುರ್ಮರಣ

    ಜನತೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಉದ್ಯಮವನ್ನು ಹೆಚ್ಚಿಸಿ ನಿರುದ್ಯೋಗಿಗಳಿಗೆ ಸಹಾಯ ಮಾಡುವುದು ತೃಣಮೂಲ ಕಾಂಗ್ರೆಸ್ಸಿನ ಗುರಿಯಾಗಿದೆ. ಈ ನಿಟ್ಟಿನಲ್ಲಿ ಕೆಲಸವನ್ನು ಕೈಗೊಳ್ಳುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ನವದೆಹಲಿ-ಕರ್ನಾಟಕ ಎಕ್ಸ್‌ಪ್ರೆಸ್‍ನಲ್ಲಿ ಬಾಂಬ್ – ಹುಸಿ ಕರೆಗೆ ಪ್ರಯಾಣಿಕರು ಕಂಗಾಲು

    ತೃಣ ಮೂಲ ಕಾಂಗ್ರೆಸ್ ಪಕ್ಷವು ರಾಷ್ಟ್ರಮಟ್ಟದಲ್ಲಿ ವಿಸ್ತರಿಸುತ್ತಿದೆ. ತ್ರಿಪುರಾದ ರಾಜಕೀಯ ಕ್ಷೇತ್ರವನ್ನು ಪ್ರವೇಶಿಸಲು ಇತ್ತೀಚೆಗೆ ಅಲ್ಲಿನ ಮುನ್ಸಿಪಲ್ ಚುನಾವಣೆಯಲ್ಲಿ ಟಿಎಂಸಿ ಬಿಜೆಪಿಯ ವಿರುದ್ಧ ಸ್ಪರ್ಧೆ ನಡೆಸಿತ್ತು. ಗೋವಾ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಬಿಜೆಪಿ ವಿರುದ್ಧ ಗೆಲುವು ಸಾಧಿಸಲು ಟಿಎಂಸಿ ಸಜ್ಜಾಗುತ್ತಿದೆ.

  • ಮದುವೆಯಲ್ಲಿ ವರನಿಗೆ ಸಿಂಧೂರ ಇಟ್ಟ ವಧು – ವೀಡಿಯೋ ವೈರಲ್

    ಮದುವೆಯಲ್ಲಿ ವರನಿಗೆ ಸಿಂಧೂರ ಇಟ್ಟ ವಧು – ವೀಡಿಯೋ ವೈರಲ್

    ಕೋಲ್ಕತ್ತಾ :  ವಧು ಒಬ್ಬರು ಮದುವೆಯ ವೇಳೆ ವರನಿಗೆ ಸಿಂಧೂರ ಇಟ್ಟಿರುವ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ವಧು ಶಾಲಿನಿ, ವರ ಅಂಕನ್ ಮಜುಂದಾರ್ ಹಳೆಯ ಮೇಲೆ ಸಿಂಧೂರ ಇಟ್ಟಿದ್ದಾರೆ. ಡಿಸೆಂಬರ್ 2ರಂದು ಶಾಲಿನಿ ಹಾಗೂ ಅಂಕನ್ ಮಜುಂದಾರ್ ಸಪ್ತಪದಿ ತುಳಿದರು. ಮದುವೆ ಸಮಾರಂಭದ ಫೋಟೋ ಹಾಗೂ ವೀಡಿಯೋವನ್ನು ವಧುವಿನ ಸಹೋದರಿ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದರು.

    ಈ ವೀಡಿಯೋದಲ್ಲಿ ಶಾಲಿನಿ ನಗುತ್ತಾ ವರ ಅಂಕನ್ ಮಂಜುಂದಾರ್ ಹಣೆಯ ಮೇಲೆ ಸಿಂಧೂರ ಇಡುತ್ತಾರೆ. ಈ ವೇಳೆ ಮದುವೆ ಬಂದಿದ್ದ ಅಥಿತಿಗಳು ದಂಪತಿಗೆ ಪ್ರೋತ್ಸಹ ನೀಡುತ್ತಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ನಡುರಾತ್ರಿ ಕಾರು ಹಿಂಬಾಲಿಸಿ ಅಪರಿಚಿತನ ಕಿರಿಕ್ – ಪುಂಡನ ಪುಂಡಾಟಕ್ಕೆ ಇಡೀ ಕುಟುಂಬ ಹೈರಾಣು

    ವಿಶೇಷವೆಂದರೆ ಈ ಮದುವೆಯನ್ನು ಮೂವರು ಪುರೋಹಿತರು ಸೇರಿ ನೆರವೇರಿಸಿದರು. ಮದುವೆಯ ಮಂತ್ರಗಳನ್ನು ಸಂಸ್ಕøತದಲ್ಲಿ ಮಾತ್ರವಲ್ಲದೇ ಬೆಂಗಾಲಿಯನ್ನು ಕೂಡ ಪಠಿಸಿದರು. ವೈರಲ್ ಆಗುತ್ತಿರುವ ವಿಭಿನ್ನವಾದ ಈ ಮದುವೆಯ ವೀಡಿಯೋಗೆ ಇಲ್ಲಿಯವರೆಗೂ ಸುಮಾರು 3 ಲಕ್ಷಕ್ಕೂ ಅಧಿಕ ವೀವ್ಸ್, 4 ಸಾವಿರಕ್ಕೂ ಅಧಿಕ ಲೈಕ್ಸ್ ಹಾಗೂ ಕಾಮೆಂಟ್‍ಗಳ ಸುರಿಮಳೆಯೇ ಹರಿದು ಬರುತ್ತಿದೆ. ಇದನ್ನೂ ಓದಿ: ಪತಿಗೆ ಡೈವೋರ್ಸ್ ಕೊಡು, ಮುಸ್ಲಿಂ ಯುವಕನ ಜೊತೆ ಮದುವೆ ಮಾಡಿಸ್ತೀನಿ – ನೂರ್ ಜಹಾನ್ ಅರೆಸ್ಟ್

     

    View this post on Instagram

     

    A post shared by RajKummar Rao (@rajkummar_rao)

    ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ನಟ ರಾಜ್‌ಕುಮಾರ್ ರಾವ್ ಮದುವೆ ಸಮಾರಂಭದ ವೇಳೆ ಪತ್ರಲೇಖ ಕೂಡ ಪತಿಗೆ ಸಿಂಧೂರ ಇಟ್ಟಿದ್ದ ವೀಡಿಯೋ ವೈರಲ್ ಆಗಿತ್ತು.