Tag: kolkata

  • ರಾಜಕೀಯ ವಿರೋಧಿಗಳನ್ನು ಹತ್ತಿಕ್ಕಲು ಹಿಂಸಾಚಾರ ಬಳಸೋದು ಹಕ್ಕುಗಳ ಉಲ್ಲಂಘನೆ: ಮೋದಿ

    ರಾಜಕೀಯ ವಿರೋಧಿಗಳನ್ನು ಹತ್ತಿಕ್ಕಲು ಹಿಂಸಾಚಾರ ಬಳಸೋದು ಹಕ್ಕುಗಳ ಉಲ್ಲಂಘನೆ: ಮೋದಿ

    ಕೋಲ್ಕತ್ತಾ: ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುವುದು ಪ್ರಜಾಪ್ರಭುತ್ವದ ಹಕ್ಕು. ಅದರೆ ರಾಜಕೀಯ ವಿರೋಧಿಗಳನ್ನು ಹತ್ತಿಕ್ಕಲು ಅವರ ವಿರುದ್ಧ ಹಿಂಸಾಚಾರ ಬಳಸುವುದು ಹಾಗೂ ಬೆದರಿಕೆ ಒಡ್ಡುವುದು ಪ್ರಜಾಪ್ರಭುತ್ವ ಹಕ್ಕುಗಳ ಉಲ್ಲಂಘನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    ಪಶ್ಚಿಮ ಬಂಗಾಳದ ಠಾಕೂರ್ ನಗರದಲ್ಲಿ ನಡೆದ ಮಟುವಾ ಧರ್ಮ ಮಹಾಸಮ್ಮೇಳ ಉದ್ದೇಶಿಸಿ ಮಾತನಾಡಿದ ಅವರು, ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುವುದು ನಮ್ಮ ಪ್ರಜಾಸತ್ತಾತ್ಮಕ ಹಕ್ಕು. ಆದರೆ ರಾಜಕೀಯ ವಿರೋಧದಿಂದಾಗಿ ಯಾರು ಯಾರನ್ನೇ ಬೆದರಿಸಿದರೂ ಅದು ಇತರರ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಆದ್ದರಿಂದ ಹಿಂಸೆ, ಅರಾಜಕತೆಯ ಮನಸ್ಥಿತಿ ಎಲ್ಲಿಯೇ ಇದ್ದರೂ ಅದನ್ನು ವಿರೋಧಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳುವಳಿಕೆ ನೀಡಿದ್ದಾರೆ. ಇದನ್ನೂ ಓದಿ: ಮಾನವೀಯತೆ ಇರುವುದು ನಿಜವೇ? – ಸಿಎಂ ಕೇಜ್ರಿವಾಲ್‌ಗೆ ಅಗ್ನಿಹೋತ್ರಿ ಪ್ರಶ್ನೆ

    MODI 2

    ಪ್ರಸ್ತುತ ಭಾಷೆ, ಪ್ರದೇಶದ ಆಧಾರದ ಮೇಲೆ ಸಮಾಜವನ್ನು ವಿಭಜಿಸುವ ಪ್ರಯತ್ನಗಳು ನಡೆಯುತ್ತಿವೆ. ಇಂತಹ ಹೊತ್ತಿನಲ್ಲಿ ಆಧ್ಯಾತ್ಮಿಕ ಗುರು ಶ್ರೀ ಹರಿಚಂದ್ ಠಾಕೂರ್ ಅವರ ಬೋಧನೆ ತತ್ವಗಳು ಮಹತ್ವದ್ದಾಗಿವೆ ಎಂದಿದ್ದಾರೆ. ಇದನ್ನೂ ಓದಿ: ರಷ್ಯಾ- ಉಕ್ರೇನ್ ಯುದ್ಧದಲ್ಲಿ ಭಾರತದ ನಿಲುವು ಹಗ್ಗದ ಮೇಲೆ ನೃತ್ಯ ಮಾಡಿದಂತಾಗಿದೆ: ಶಶಿ ತರೂರ್

    ಮಟುವಾ ಹಿಂದುಳಿದ ಹಿಂದೂ ಸಮುದಾಯವಾಗಿದ್ದು, 2019ರ ಲೋಕಸಭೆ ಚುನಾವಣೆಯ ಮೊದಲು ಬಿಜೆಪಿ ಕೇಂದ್ರ ನಾಯಕರು ಭರವಸೆ ನೀಡಿದಂತೆ ಪೌರತ್ವ ತಿದ್ದುಪಡಿ ಕಾಯ್ದೆ (CAA) ಅನುಷ್ಠಾನಕ್ಕೆ ಒತ್ತಾಯಿಸುತ್ತಿದ್ದಾರೆ. ಆದರೆ ಈ ಸಮುದಾಯದಿಂದಲೇ ಶಾಸಕರಾಗಿ ಆಯ್ಕೆಯಾದವರು ಅದರ ಅನುಷ್ಠಾನದಲ್ಲಿ ವಿಳಂಬ ಮಾಡಿರುವುದರಿಂದ ಪಕ್ಷದ ನಾಯಕತ್ವದ ಬಗ್ಗೆ ಕೆಲವರು ಅತೃಪ್ತರಾಗಿದ್ದಾರೆ ಎಂದು ತಿಳಿಸಿದ್ದಾರೆ.

    MODI 3

    ಪ್ರಧಾನಮಂತ್ರಿ ಕಾರ್ಯಾಲಯ ಈಚೆಗಷ್ಟೇ ಹೊರಡಿಸಿದ ಸುತ್ತೋಲೆಯಲ್ಲೂ, ಠಾಕೂರ್ ಅವರು ಸ್ವಾತಂತ್ರ‍್ಯ ಪೂರ್ವದಲ್ಲಿ ಅವಿಭಜಿತ ಬಂಗಾಳದಲ್ಲಿ ತುಳಿತಕ್ಕೊಳಗಾದ, ದೀನದಲಿತ ಮತ್ತು ವಂಚಿತ ವ್ಯಕ್ತಿಗಳ ಸುಧಾರಣೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟವರು. ಅವರು ಪ್ರಾರಂಭಿಸಿದ ಸಾಮಾಜಿಕ ಮತ್ತು ಧಾರ್ಮಿಕ ಚಳವಳಿಯು ಈಗ ಬಾಂಗ್ಲಾದೇಶದಲ್ಲಿರುವ ಒರಕಂಡಿಯಲ್ಲಿ 1860ರಲ್ಲಿ ಹುಟ್ಟಿಕೊಂಡಿತು. ಮಟುವ ಧರ್ಮದ ರಚನೆಗೆ ಕಾರಣವಾಯಿತು ಎಂದು ಹೇಳಿದೆ.

     

  • ದೆಹಲಿಯ ಲಡ್ಡು ತಿನ್ನಬೇಡಿ: ಮಮತಾ ಬ್ಯಾನರ್ಜಿ

    ದೆಹಲಿಯ ಲಡ್ಡು ತಿನ್ನಬೇಡಿ: ಮಮತಾ ಬ್ಯಾನರ್ಜಿ

    ಕೋಲ್ಕತ್ತಾ: ನಾನು ಬುಡಕಟ್ಟು ಜನರಿಗಾಗಿ ಕೆಲಸ ಮಾಡಲು ಬಯಸುತ್ತೇನೆ ಮತ್ತು ದೆಹಲಿ ಲಡ್ಡುಗಳನ್ನು ತಿನ್ನಬೇಡಿ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹೇಳಿದ್ದಾರೆ.

    ಪಶ್ಚಿಮ ಬಂಗಾಳದ ಬುಡಕಟ್ಟು ಜನಾಂಗದ ನಾಲ್ಕು ರಾಜಕೀಯ ಪಕ್ಷಗಳನ್ನು ಭೇಟಿ ಮಾಡಿದ್ದೇನೆ. ಎಲ್ಲರೊಂದಿಗೆ ಒಟ್ಟಾಗಿ ಕೆಲಸ ಮಾಡಬೇಕೆಂದು ನಾನು ಬಯಸುತ್ತೇನೆ. ಗುಡ್ಡಗಾಡು ಪ್ರದೇಶದಲ್ಲಿರುವ ಜನರಿಗಾಗಿ ಕೆಲಸ ಮಾಡಬೇಕು. ಆದರೆ ದೆಹಲಿಯ ಲಡ್ಡು ತಿನ್ನಬೇಡಿ ಎಂದು ಪರೋಕ್ಷವಾಗಿ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ‘Lockup’ ಶೋಗೆ ಬರುವಂತೆ ವಿಲ್ ಸ್ಮಿತ್‍ಗೆ ಆಫರ್ ಕೊಟ್ಟ ಕ್ವಿನ್ ಕಂಗನಾ

    ಇದೇ ವೇಳೆ ಬೆಲೆ ಏರಿಕೆಯ ಬಗ್ಗೆ ಜನರ ದಾರಿತಪ್ಪಿಸಲು, ಅವರು ಕೇಂದ್ರೀಯ ಸಂಸ್ಥೆಗಳನ್ನು ಬಳಸುತ್ತಿದ್ದಾರೆ. ಚುನಾವಣೆಯ ಸಮಯದಲ್ಲಿ ಅವರು ದೇಶದ ರಕ್ಷಕರು ಎಂದು ಹೇಳಿಕೊಳ್ಳುತ್ತಾರೆ, ಆದರೆ ಅದು ನಿಜವಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ರಶ್ಮಿಕಾ ವೀಡಿಯೋ ನೋಡಿ ಸುಸ್ತಾದ ಅಭಿಮಾನಿಗಳು – ಕೊಡಗಿನ ಬೆಡಗಿಯ ಜಿಮ್ ಕಸರತ್ತು

    ಉತ್ತರ ಬಂಗಾಳಕ್ಕೆ ಐದು ದಿನಗಳ ಕಾಲ ಮಮತಾ ಬ್ಯಾನರ್ಜಿ ಅವರು ಪ್ರವಾಸ ಕೈಗೊಂಡಿದ್ದು, ಸೋಮವಾರ ಜಿಜೆಎಂ ನಿಯೋಗ, ಹ್ಯಾಮ್ರೋ ಪಕ್ಷದ ಸದಸ್ಯರೊಂದಿಗೆ ಸಭೆ ನಡೆಸಿದರು.

  • ಇಂದಿನಿಂದ ಐಪಿಎಲ್ ಆರಂಭ – ಅತಿ ಹೆಚ್ಚು ರನ್ ಸಿಡಿಸಿದ ಟಾಪ್ ತಂಡಗಳು

    ಇಂದಿನಿಂದ ಐಪಿಎಲ್ ಆರಂಭ – ಅತಿ ಹೆಚ್ಚು ರನ್ ಸಿಡಿಸಿದ ಟಾಪ್ ತಂಡಗಳು

    ಪಿಎಲ್ ಕ್ರಿಕೆಟ್ ಪ್ರೇಮಿಗಳಲ್ಲಿ ಮೈ ರೋಮಾಂಚನಗೊಳಿಸುವ ಆಟ. ಕಡಿಮೆ ಎಸೆತಗಳಲ್ಲಿ ಹೆಚ್ಚು ಹೆಚ್ಚು ರನ್ ಹೊಳೆ ಹರಿಯುವ ಕ್ರಿಕೆಟ್ ಮಾದರಿಯಾಗಿರುವ ಟಿ ಟ್ವೆಂಟಿ. ಏಕದಿನ ಹಾಗೂ ಟೆಸ್ಟ್ ಪಂದ್ಯಗಳಿಗೆ ಹೋಲಿಸಿಕೊಂಡರೆ ವೇಗವಾಗಿ ಮುಗಿಯುವ ಈ ಕ್ರಿಕೆಟ್ ಮಾದರಿಯಲ್ಲಿ ಹಲವಾರು ಪ್ರತಿಷ್ಠಿತ ಟೂರ್ನಿಗಳು ಕೂಡ ಆಯೋಜನೆಯಾಗಿವೆ.

    RCB 2

    2003ರಲ್ಲಿ ಆರಂಭಗೊಂಡ ಐಪಿಎಲ್ ಪಂದ್ಯಗಳಲ್ಲಿ 200 ರನ್‍ಗಳ ಗಡಿ ದಾಟಿದ ಉದಾಹರಣೆಗಳು ಇವೆ. ಅದೇ ರೀತಿ ಅಲ್ಪ ಮೊತ್ತ ಕಲೆಹಾಕಿದ ಕೆಟ್ಟ ದಾಖಲೆಗಳೂ ಇವೆ. ಆದರೆ, ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಹಾಗೂ ಅತಿ ಕಡಿಮೆ ರನ್ ಕಲೆಹಾಕಿರುವ ತಂಡ ಎಂಬ ದಾಖಲೆಯ ಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‍ಸಿಬಿ) ಇಂದಿಗೂ ಮೊದಲ ಸ್ಥಾನದಲ್ಲಿದೆ. ಇದನ್ನೂ ಓದಿ: ಸಿಎಸ್‍ಕೆ ನಾಯಕ ಸ್ಥಾನಕ್ಕೆ ಧೋನಿ ರಾಜೀನಾಮೆ

    ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB)
    2013ರ ಐಪಿಎಲ್ ಆವೃತ್ತಿಯಲ್ಲಿ ಪುಣೆ ವಾರಿಯರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಆರ್‌ಸಿಬಿ 5 ವಿಕೆಟ್‍ಗಳ ಅಂತ್ಯಕ್ಕೆ 263 ರನ್ ಗಳಿಸುವಲ್ಲಿ ಯಶಸ್ವಿಯಾಗಿತ್ತು. ಮಿಂಚಿನ ಆಟವಾಡಿದ ಕ್ರಿಸ್‍ಗೇಲ್ 66 ಎಸೆತಗಳಲ್ಲಿ 175 ರನ್ ಗಳಿಸಿದರೆ ವಿರಾಟ್‍ಕೊಹ್ಲಿ 36 ಎಸೆತಗಳಲ್ಲಿ 33 ರನ್ ಗಳಿಸಲಷ್ಟೇ ಸಾಧ್ಯವಾಯಿತು. ನಂತರ ಬ್ಯಾಟಿಂಗ್ ಪ್ರಾರಂಭಿಸಿದ ಪುಣೆ ವಾರಿಯರ್ಸ್ 133 ರನ್‍ಗಳಿಗೆ ಆಲ್‍ಔಟ್ ಆಯಿತು. ಆರ್‌ಸಿಬಿ 130 ರನ್‍ಗಳ ಭರ್ಜರಿ ಜಯ ಸಾಧಿಸಿತ್ತು. 2016ರ ಆವೃತ್ತಿಯಲ್ಲೂ ಆರ್‌ಸಿಬಿ 248 ರನ್‍ಗಳನ್ನು ಕಲೆಹಾಕುವ ಮೂಲಕ ಐಪಿಎಲ್ ಸರಣಿಯ ಅತ್ಯಧಿಕ ರನ್‍ಗಳಿಸಿದ ತಂಡದ ಖ್ಯಾತಿ ಪಡೆಯಿತು.

    CSK

    ಚೆನ್ನೈ ಸೂಪರ್‌ ಕಿಂಗ್ಸ್‌(CSK)
    2010ರ ಐಪಿಎಲ್ ಆವೃತ್ತಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು 246 ರನ್‍ಗಳಿಸುವ ಮೂಲಕ ದಾಖಲೆ ಮಾಡಿತ್ತು. ರಾಜಸ್ತಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಮುರಳಿ ವಿಜಯ್ 56 ಎಸೆತಗಳಲ್ಲಿ 127 ರನ್‍ಗಳಿಸುವ ಮೂಲಕ ಪಂದ್ಯಶ್ರೇಷ್ಠರಾಗಿದ್ದರು. ಈ ಗುರಿ ಬೆನ್ನತ್ತಿದ ರಾಜಾಸ್ತಾನ್ ರಾಯಲ್ಸ್ ತಂಡವು 223ರನ್ ಗಳನ್ನು ಪೇರಿಸಿತ್ತು. 246 ರನ್‍ಗಳಿಸಿದರೂ ಸಿಎಸ್‍ಕೆ 23 ರನ್‍ಗಳ ಅಂತರದಲ್ಲಷ್ಟೇ ಗೆಲುವು ಸಾಧಿಸಲು ಸಾಧ್ಯವಾಯಿತು. ಇದನ್ನೂ ಓದಿ: ಈ ಸಲ ಕಪ್ ನಮ್ದೆ – ಆರ್​ಸಿಬಿಗೆ ಹರುಷ ತುಂಬಿದ ಹೊಸ ಸ್ಫೂರ್ತಿ ಗೀತೆ

    ಕೋಲ್ಕತ್ತಾ ನೈಟ್ ರೈಡರ್ಸ್ (KKR)
    ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು 2018ನೇ ಐಪಿಎಲ್ ಆವೃತ್ತಿಯಲ್ಲಿ ಅತಿಹೆಚ್ಚು ರನ್‍ಗಳಿಸಿದ ತಂಡವಾಗಿ ಹೊರಹೊಮ್ಮಿತ್ತು. ಕಿಂಗ್ಸ್ ಇಲವೆನ್ ಪಂಜಾಬ್ ವಿರುದ್ಧ ನಡೆದ ಪಂದ್ಯದಲ್ಲಿ 6 ವಿಕೆಟ್‍ಗಳನ್ನು ಕಳೆದುಕೊಂಡ ಕೆಕೆಆರ್ 245 ರನ್‍ಗಳ ಗುರಿ ನೀಡಿತ್ತು. ಇದರ ಬೆನ್ನತ್ತಿದ ಪಂಜಾಬ್ ತಂಡವು 8 ವಿಕೆಟ್‍ಗ ನಷ್ಟಕ್ಕೆ 214 ರನ್‍ಗಳಿಸಿ ಕೆಕೆಆರ್‍ಗೆ ಮಂಡಿಯೂರಿತು. ಸುನೀಲ್ ನರೇನ್ 36 ಎಸೆತಗಳಲ್ಲಿ 75 ರನ್‍ಗಳಿಸಿದ್ದರು. ಅಲ್ಲದೆ, ಬೌಲಿಂಗ್‍ನಲ್ಲೂ ಒಂದು ವಿಕೆಟ್ ಪಡೆಯುವ ಮೂಲಕ ಪಂದ್ಯಶ್ರೇಷ್ಠರಾಗಿದ್ದರು.

    ABD

    ಮುಂಬೈ ಇಂಡಿಯನ್ಸ್ (MI)
    2021ನೇ ಐಪಿಲ್ ಆವೃತ್ತಿಯಲ್ಲಿ ರೋಹಿತ್‍ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡವು ಸನ್‍ರೈಸಸ್ ಹೈದ್ರಾಬಾದ್ 9 ವಿಕೆಟ್‍ಗಳ ನಷ್ಟಕ್ಕೆ 235 ರನ್‍ಗಳಿಸಿತ್ತು. ಈ ಪಂದ್ಯದಲ್ಲಿ ಇಶಾನ್‍ಕಿಶನ್ 32 ಎಸೆತಗಳಲ್ಲಿ 84 ರನ್‍ಗಳಿಸಿದರೆ ಸೂರ್ಯಕುಮಾರ್ ಯಾದವ್ 40 ಎಸೆತಗಳಲ್ಲಿ 82 ರನ್‍ಗಳಿಸುವ ಮೂಲಕ ತಂಡದ ಗೆಲುವಿಗೆ ಕಾರಣವಾಗಿತ್ತು. ಆದೆರೆ, ಹೈದ್ರಾಬಾದ್ ತಂಡವು 8 ವಿಕೆಟ್ ನಷ್ಟಕ್ಕೆ 193 ರನ್‍ಗಳನ್ನು ಕಲೆಹಾಕಿತ್ತು. ಹಾಗಾಗಿ ಮುಂಬೈ ತಂಡವು 42 ರನ್‍ಗಳ ಭರ್ಜರಿ ಗೆಲುವು ಸಾಧಿಸಲು ಸಾಧ್ಯವಾಯಿತು.

    ಕಿಂಗ್ಸ್ ಇಲವೆನ್ ಪಂಜಾಬ್ (KIIP)
    2011ರ ಐಪಿಲ್ ಆವೃತ್ತಿಯಲ್ಲಿ ಆರ್‍ಸಿಬಿ ವಿರುದ್ಧ ನಡೆದ ಪಂದ್ಯದಲ್ಲಿ ಕಿಂಗ್ಸ್ ಪಂಜಾಬ್ ಕೇವಲ 2 ವಿಕೆಟ್‍ಗಳನ್ನು ಕಳೆದುಕೊಂಡು 232 ರನ್‍ಗಳಿಸುವ ಮೂಲಕ ದಾಖಲೆ ಬರೆದಿತ್ತು. ಆಸ್ಟ್ರೇಲಿಯಾ ಕ್ರಿಕೆಟಿಗ ಆಡಂ ಗಿಲ್‍ಕ್ರಿಸ್ಟ್ 55 ಎಸೆತಗಳಿಗೆ 106 ಪೇರಿಸಿ ಪಂದ್ಯಶ್ರೇಷ್ಠರಾಗಿದ್ದರು. ಆದರೆ, ಆರ್‍ಸಿಬಿ 17ನೇ ಓವರ್‍ಗೆ 121 ರನ್‍ಗಳಿಸುವ ಮೂಲಕ ತನ್ನೆಲ್ಲಾ ವಿಕೆಟ್‍ಗಳನ್ನು ಕಳೆದುಕೊಂಡಿತ್ತು. 111 ರನ್‍ಗಳ ಭಾರೀ ರನ್‍ಗಳ ಅಂತರದಿಂದ ಪಂಜಾಬ್ ಗೆಲುವು ಸಾಧಿಸಿತ್ತು.

  • ದಿದಿ ನಾಡಿನಲ್ಲಿ ಹಿಂಸಾಚಾರ; ಸಿಬಿಐ ತನಿಖೆಗೆ ಹೈಕೋರ್ಟ್ ಆದೇಶ

    ದಿದಿ ನಾಡಿನಲ್ಲಿ ಹಿಂಸಾಚಾರ; ಸಿಬಿಐ ತನಿಖೆಗೆ ಹೈಕೋರ್ಟ್ ಆದೇಶ

    ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬಿರ್ಭುಮ್ ಗ್ರಾಮದಲ್ಲಿ ನಡೆದ ಹಿಂಸಾಚಾರ ಪ್ರಕರಣವನ್ನು ಸಿಬಿಐಗೆ (ಕೇಂದ್ರಿಯ ತನಿಖಾ ದಳ) ವಹಿಸುವಂತೆ ಕೋಲ್ಕತ್ತಾ ಹೈಕೋರ್ಟ್ ಆದೇಶಿಸಿದೆ.

    Mamata banerjee

    ಹಿಂಸಾಚಾರ ಪ್ರಕರಣವನ್ನು ಸಿಬಿಐಗೆ ವಹಿಸದಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರ್ಕಾರವು ಮನವಿ ಮಾಡಿತ್ತು. ತನಿಖೆ ತಡೆಸಲು ವಿಶೇಷ ತಂಡವನ್ನೂ ರಚಿಸಲಾಗಿತ್ತು. ಆದರೆ, ರಾಜ್ಯ ಸರ್ಕಾರದ ಮನವಿಯನ್ನು ತಿರಸ್ಕರಿಸಿದ ನ್ಯಾಯಾಲಯವು ತನಿಖೆಯನ್ನು ಸಿಬಿಐಗೆ ವಹಿಸಿದೆ. ವಿಶೇಷ ತನಿಖಾ ತಂಡವು ಪ್ರಕರಣವನ್ನು ಸಿಬಿಐಗೆ ವರ್ಗಾಯಿಸುವಂತೆ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ್ ಹಾಗೂ ಆರ್.ಭಾರದ್ವಾಜ್ ಅವರಿದ್ದ ಪೀಠವು ಆದೇಶ ನೀಡಿದೆ. ಅಲ್ಲದೆ ಏಪ್ರಿಲ್ ೭ರ ಒಳಗೆ ತನಿಖಾ ಪ್ರಗತಿ ವರದಿ ಸಲ್ಲಿಸುವಂತೆ ಸಿಬಿಐಗೆ ಸೂಚಿಸಿದೆ. ಇದನ್ನೂ ಓದಿ: ಟಿಎಂಸಿ ನಾಯಕನನ್ನು ಅರೆಸ್ಟ್ ಮಾಡುವಂತೆ ಮಮತಾ ಬ್ಯಾನರ್ಜಿ ಆದೇಶ

    west bengal

    ನೆನ್ನೆಯಷ್ಟೇ ಹಿಂಸಾಚಾರ ನಡೆದ ಸ್ಥಳಕ್ಕೆ ಭೇಟಿ ನೀಡಿದ ಮಮತಾ ಬ್ಯಾನರ್ಜಿ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಘೋಷಿಸಿ, ಉದ್ಯೋಗಾವಕಾಶ ಕಲ್ಪಿಸುವ ಭರವಸೆಯನ್ನೂ ನೀಡಿದ್ದರು. ಅಲ್ಲದೆ, ಇಂದು ಬೆಳಿಗ್ಗೆಯಿಂದಲೇ ಅಕ್ರಮ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲು ವಿಶೇಷ ಕಾರ್ಯಾಚರಣೆಯನ್ನೂ ಪ್ರಾರಂಭಿಸಲು ಆದೇಶಿಸಿದ್ದರು. ಈ ಬೆನ್ನಲ್ಲೇ ಹೈಕೋರ್ಟ್ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿ ಆದೇಶ ನೀಡಿದೆ. ಇದನ್ನೂ ಓದಿ: ಆಟ ಇನ್ನೂ ಮುಗಿದಿಲ್ಲ: ರಾಷ್ಟ್ರಪತಿ ಚುನಾವಣೆ ಬಗ್ಗೆ ಬಿಜೆಪಿಗೆ ಮಮತಾ ಬ್ಯಾನರ್ಜಿ ಟಾಂಗ್‌

    ಸದ್ಯ ಈ ಘಟನೆಯನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿರುವ ಪ್ರತಿ ಪಕ್ಷಗಳು, ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವಲ್ಲಿ ವಿಫಲವಾಗಿದೆ ಎಂದು ಟೀಕಿಸಲಾರಂಭಿಸಿವೆ. ಇದಕ್ಕೆ ತಿರುಗೇಟು ನೀಡಿರುವ ಮಮತಾ ಬ್ಯಾನರ್ಜಿ, ಆರೋಪಿಗಳು ಪತ್ತೆಯಾಗದೇ ಇದ್ದಲ್ಲಿ ಅವರನ್ನು ಬೇಟೆಯಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.

    west bengal fire accident

    ಏನಿದು ಪ್ರಕರಣ?
    ಇಲ್ಲಿನ ಬಗುಟಿ ಗ್ರಾಮ ಪಂಚಾಯ್ತಿ ಮುಖಂಡ ಭಾದು ಶೇಖ್ ಅವರ ಮೇಲೆ ಸೋಮವಾರ ರಾತ್ರಿ ದಾಳಿ ನಡೆದಿತ್ತು. ರಾಷ್ಟ್ರೀಯ ಹೆದ್ದಾರಿ-೬೦ರ ಅಂಗಡಿಯೊಂದರಲ್ಲಿ ಇರುವಾಗ ಶೇಖ್ ಅವರ ಮೇಲೆ ಬಾಂಬ್ ದಾಳಿ ನಡೆಸಲಾಗಿತ್ತು. ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಅವರು ಮೃತಪಟ್ಟಿದ್ದರು. ಮುಖಂಡನ ಸಾವಿನ ಸುದ್ದಿ ತಿಳಿದು ರೊಚ್ಚಿಗೆದ್ದ ಗುಂಪೊಂದು ೧೦ ರಿಂದ ೧೨ ಮನೆಗೆ ಬೆಂಕಿ ಹಚ್ಚಿದ್ದರು. ಇದರಿಂದಾಗಿ ೮ ಮಂದಿ ಸಜೀವ ದಹನವಾಗಿದ್ದರು. ಇದರಲ್ಲಿ ಇಬ್ಬರು ಮಕ್ಕಳೂ ಸಹ ಇದ್ದರು ಎಂಬುದಾಗಿ ಬೀರ್ಭುಮ್ ಎಸ್‌ಪಿ ನಾಗೇಂದ್ರ ತ್ರಿಪಾಟಿ ಮಾಹಿತಿ ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್ ಸ್ವಯಂಪ್ರೇರಿತವಾಗಿಯೇ ವಿಚಾರಣೆ ನಡೆಸಲು ಮುಂದಾಗಿತ್ತು. ಈ ನಡುವೆ ಜಿಲ್ಲೆಯ ಕೆಲ ಕುಟುಂಬಗಳು ಹಿಂಸಾಚಾರಕ್ಕೆ ಬೆಚ್ಚಿಬಿದ್ದಿದ್ದು, ತಮ್ಮ ಮನೆಗಳನ್ನು ತೊರೆದಿದ್ದರು.

     

  • ಬಿರ್‌ಭುಮ್‌ ಹಿಂಸಾಚಾರ- ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ: ಮೋದಿ

    ಬಿರ್‌ಭುಮ್‌ ಹಿಂಸಾಚಾರ- ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ: ಮೋದಿ

    ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬಿರ್‌ಭುಮ್‌ ಜಿಲ್ಲೆಯಲ್ಲಿ ನಡೆದ 8 ಜನರನ್ನು ಹತ್ಯೆ ಮಾಡಿದವರ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದರು.

    ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿರ್‌ಭುಮ್‌ನಲ್ಲಿ ನಡೆದ ಹಿಂಸಾಚಾರದ ಬಗ್ಗೆ ಸಂತಾಪವನ್ನು ಸೂಚಿಸುತ್ತಿದ್ದೇನೆ. ಘಟನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ. ಅವರಿಗೆ ಶಿಕ್ಷೆಯಾಗಲಿದೆ ಎಂದರು.

    ಈ ರೀತಿಯ ಅಪರಾಧ ಮಾಡುವವರನ್ನು ಮತ್ತು ಅಪರಾಧಿಗಳನ್ನು ಪ್ರೋತ್ಸಾಹಿಸುವವರನ್ನು ಕ್ಷಮಿಸಬಾರದು. ತಪ್ಪಿತಸ್ಥರನ್ನು ನ್ಯಾಯಾಂಗಕ್ಕೆ ತರಲು ಕೇಂದ್ರವು ರಾಜ್ಯಕ್ಕೆ ಎಲ್ಲಾ ರೀತಿಯ ಭರವಸೆಯನ್ನು ನೀಡುತ್ತದೆ ಎಂದರು. ಇದನ್ನೂ ಓದಿ: ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದ ಮುಸ್ಕಾನ್ ಸೆಮಿಸ್ಟರ್ ಪರೀಕ್ಷೆಗೆ ಗೈರು

    ಘಟನೆಯೇನು?: ಪಶ್ಚಿಮ ಬಂಗಾಳದ ಬಿರ್‌ಭುಮ್‌ ಜಿಲ್ಲೆಯ ರಾಮ್‍ಪುರಹಾಟ್ ಎಂಬಲ್ಲಿ ಮಂಗಳವಾರ ನಸುಕಿನಲ್ಲಿ ಮನೆಗಳಿಗೆ ಬೆಂಕಿಹತ್ತಿ ಇಬ್ಬರು ಮಕ್ಕಳು ಸೇರಿದಂತೆ ಎಂಟು ಜನರು ಸಜಿವ ದಹನರಾಗಿದ್ದಾರೆ. ಘಟನೆ ಸಂಬಂಧ 11 ಜನರನ್ನು ಬಂಧಿಸಲಾಗಿದೆ.

    ಈ ಘಟನೆಗೆ ಮುನ್ನ, ಸ್ಥಳೀಯ ಪಂಚಾಯಿತಿ ಮುಖಂಡನ ಹತ್ಯೆಯಾಗಿತ್ತು ಎಂದು ಡಿಜಿಪಿ ಮನೋಜ್ ಮಾಳವೀಯ ಅವರು ಹೇಳಿದ್ದಾರೆ. ಪಂಚಾಯಿತಿ ಮುಖಂಡ ಟಿಎಂಸಿ ಪಕ್ಷದವರು. ಟಿಎಂಸಿಯ ಎರಡು ಗುಂಪುಗಳ ನಡುವಣ ದ್ವೇಷವೇ ಘಟನೆಗೆ ಕಾರಣ ಎನ್ನಲಾಗುತ್ತಿದೆ. ಆದರೆ, ಇದನ್ನು ಪೊಲೀಸರು ದೃಢಪಡಿಸಿಲ್ಲ. ಇದನ್ನೂ ಓದಿ: ಬೈಕ್‍ಗೆ ಬಸ್ ಡಿಕ್ಕಿ- ಒಂದೇ ಕುಟುಂಬದ ನಾಲ್ವರು ಸಾವು

  • ದಿದಿ ನಾಡಿನಲ್ಲೇ ಹಿಂಸಾಚಾರ – ಹೆದರಿ ಮನೆ ತೊರೆಯುತ್ತಿರುವ ಜನರು

    ದಿದಿ ನಾಡಿನಲ್ಲೇ ಹಿಂಸಾಚಾರ – ಹೆದರಿ ಮನೆ ತೊರೆಯುತ್ತಿರುವ ಜನರು

    ಕೊಲ್ಕತ್ತಾ: ಪಶ್ಚಿಮ ಬಂಗಾಳದ ಬಿರ್‌ಭುಮ್‌ನಲ್ಲಿ ನೆನ್ನೆಯಷ್ಟೇ ನಡೆದ ಹಿಂಸಾಚಾರದಿಂದಾಗಿ 8 ಮಂದಿ ಸಜೀವ ದಹನವಾಗಿದ್ದಾರೆ. ಈ ಸಂಬಂಧ ಕೋಲ್ಕತ್ತಾ ಹೈಕೋರ್ಟ್ ಸ್ವಯಂಪ್ರೇರಿತವಾಗಿ ಇಂದು ಮಧ್ಯಾಹ್ನದಿಂದಲೇ ವಿಚಾರಣೆ ಪ್ರಾರಂಭಿಸಿದೆ.

    ಏನಿದು ಪ್ರಕರಣ?
    ಇಲ್ಲಿನ ಬಗುಟಿ ಗ್ರಾಮ ಪಂಚಾಯಿತಿ ಮುಖಂಡ ಭಾದು ಶೇಖ್ ಅವರ ಮೇಲೆ ಸೋಮವಾರ ರಾತ್ರಿ ದಾಳಿ ನಡೆದಿತ್ತು. ರಾಷ್ಟ್ರೀಯ ಹೆದ್ದಾರಿ-60ರ ಅಂಗಡಿಯೊಂದರಲ್ಲಿ ಇರುವಾಗ ಶೇಖ್ ಅವರ ಮೇಲೆ ಬಾಂಬ್ ದಾಳಿ ನಡೆಸಲಾಗಿತ್ತು. ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಅವರು ಮೃತಪಟ್ಟಿದ್ದರು. ಮುಖಂಡನ ಸಾವಿನ ಸುದ್ದಿ ತಿಳಿದು ರೊಚ್ಚಿಗೆದ್ದ ಗುಂಪೊಂದು 10 ರಿಂದ 12 ಮನೆಗೆ ಬೆಂಕಿ ಹಚ್ಚಿದ್ದರು. ಇದರಿಂದಾಗಿ 8 ಮಂದಿ ಸಜೀವ ದಹನವಾಗಿದ್ದರು. ಇದರಲ್ಲಿ ಇಬ್ಬರು ಮಕ್ಕಳೂ ಸಹ ಇದ್ದರು ಎಂಬುದಾಗಿ ಬಿರ್‌ಬುಮ್ ಎಸ್‌ಪಿ ನಾಗೇಂದ್ರ ತ್ರಿಪಾಟಿ ಮಾಹಿತಿ ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್ ಸ್ವಯಂಪ್ರೇರಿತವಾಗಿಯೇ ವಿಚಾರಣೆ ನಡೆಸಲು ಮುಂದಾಗಿದೆ. ಇದನ್ನೂ ಓದಿ: ಯುಎಇಯಿಂದ ಜಮ್ಮು- ಕಾಶ್ಮೀರದಲ್ಲಿ 70 ಸಾವಿರ ಕೋಟಿ ಹೂಡಿಕೆ; 7 ಲಕ್ಷ ಉದ್ಯೋಗ ಸೃಷ್ಟಿಯ ಗುರಿ

    ಮನೆಗೆ ಬೆಂಕಿಯಿಟ್ಟ ಗುಂಪಿನ ಬಗ್ಗೆ ರಾಜ್ಯ ಸರ್ಕಾರವು ಎಡಿಜಿ (ಸಿಐಡಿ) ಜ್ಞಾನವಂತ್ ಸಿಂಗ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿದೆ. ಘಟನೆಗೆ ಸಂಬಂಧಿಸಿದಂತೆ 20ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಮಧ್ಯೆ ಕೇಂದ್ರ ಸರ್ಕಾರವೂ ಘಟನೆ ಬಗ್ಗೆ ಸಮಗ್ರ ವರದಿ ನೀಡುವಂತೆ ಪಶ್ಚಿಮ ಬಂಗಾಳ ರಾಜ್ಯ ಗೃಹ ಸಚಿವಾಲಯಕ್ಕೆ ಸೂಚಿಸಿದೆ.

    ಮನೆ ತೊರೆಯುತ್ತಿರುವ ಜನರು
    ಜಿಲ್ಲೆಯ ಜನರು ಹಿಂಸಾಚಾರಕ್ಕೆ ಬೆಚ್ಚಿಬಿದ್ದಿದ್ದು, ತಮ್ಮ ಮನೆಗಳನ್ನು ತೊರೆದು ಹೋಗುತ್ತಿದ್ದಾರೆ. ನಮ್ಮ ಭದ್ರತೆ ದೃಷ್ಟಿಯಿಂದ ಇಲ್ಲಿಂದ ಹೊರಡುತ್ತಿದ್ದೇವೆ. ಪೊಲೀಸರು ಬಿಗಿ ಭದ್ರತೆ ಕಲ್ಪಿಸಿದ್ದರೆ ಈ ಅನಾಹುತ ನಡೆಯುತ್ತಿರಲಿಲ್ಲ ಎಂದು ವಲಸೆ ಹೊರಡುತ್ತಿದ್ದ ವ್ಯಕ್ತಿಯೊಬ್ಬರು ಹೇಳಿದ್ದಾರೆ.

    ಈ ನಡುವೆ ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನ್‌ಕರ್ ಸಹ ವೀಡಿಯೋ ಸಂದೇಶದ ಮೂಲಕ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಘಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತ ಬ್ಯಾನರ್ಜಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ರಾಜ್ಯಪಾಲರ ಹೇಳಿಕೆಗೆ ತಿರುಗೇಟು ನೀಡಿದ್ದು, ಅನಗತ್ಯ ಹೇಳಿಕೆಗಳನ್ನ ನೀಡಬೇಡಿ ಎಂದಿದ್ದಾರೆ. ಇದನ್ನೂ ಓದಿ: ಆರ್.ಆರ್.ಆರ್ ಬೈಕಾಟ್ : ಕನ್ನಡ ಪರ ಹೋರಾಟಗಾರರಿಗೇ ಜವಾಬ್ದಾರಿ ಕೊಟ್ಟ ರಾಜಮೌಳಿ ಟೀಮ್

    ಇನ್ನು ಈ ಘಟನೆ ರಾಜಕೀಯ ಕಾದಾಟಕ್ಕೂ ಕಾರಣವಾಗಿದೆ. ಮಮತಾ ಬ್ಯಾನರ್ಜಿ ಸಿಎಂ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿಗರು ಆಗ್ರಹಿಸುತ್ತಿದ್ದಾರೆ. ಹಿಂಸಾಚಾರದಲ್ಲಿ 20ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಆದರೆ ನೈಜ ಸಂಖ್ಯೆಯನ್ನು ಮುಚ್ಚಿಡಲಾಗುತ್ತಿದೆ. ಘಟನೆ ನಡೆದ ಸ್ಥಳಕ್ಕೆ ಕಾಲಿಡಲು ಯಾರಿಗೂ ಬಿಡುತ್ತಿಲ್ಲ ಎಂದು ಬಿಜೆಪಿ ಎಂಪಿ ಆರೋಪಿಸಿದ್ದಾರೆ.

    ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಸುವೇಂದು ಅಧಿಕಾರಿ, ಬಿರ್‌ಭುವ್ ಜಿಲ್ಲೆಯ ಘಟನೆಯ ಉದ್ವಿಗ್ನತೆ ಭಯೋತ್ಪಾದನೆಯನ್ನು ಆವರಿಸಿದೆ. ಪಶ್ಚಿಮ ಬಂಗಾಳದಲ್ಲಿ ಕಾನೂನು ವ್ಯವಸ್ಥೆ ಪತನಗೊಂಡಿದೆ ಎಂಬುದು ಇದರಿಂದ ತಿಳಿಯುತ್ತದೆ ಎಂದು ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.

  • ಟಿಎಂಸಿ ಮುಖಂಡನ ಹತ್ಯೆ – ಹಲವು ಮನೆಗಳಿಗೆ ಬೆಂಕಿ, 10 ಮಂದಿ ಸಜೀವ ದಹನ

    ಟಿಎಂಸಿ ಮುಖಂಡನ ಹತ್ಯೆ – ಹಲವು ಮನೆಗಳಿಗೆ ಬೆಂಕಿ, 10 ಮಂದಿ ಸಜೀವ ದಹನ

    ಕೋಲ್ಕತ್ತ: ಟಿಎಂಸಿ ಮುಖಂಡನ ಹತ್ಯೆ ಬೆನ್ನಲ್ಲೇ ಪಶ್ಚಿಮ ಬಂಗಾಳದ ಬಿರ್‌ಭುಮ್‌ನಲ್ಲಿ ಹಲವು ಮನೆಗಳಿಗೆ ಬೆಂಕಿ ಬಿದ್ದ ಪರಿಣಾಮ 10 ಮಂದಿ ಸಜೀವ ದಹನವಾಗಿದ್ದಾರೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

    ಇಲ್ಲಿನ ರಾಮಪುರಹಾಟ್‌ನ ಬಗುಟಿ ಗ್ರಾಮ ಪಂಚಾಯಿತಿ ಮುಖಂಡ ಭಾದು ಶೇಖ್ ಅವರ ಮೇಲೆ ಸೋಮವಾರ ರಾತ್ರಿ ದಾಳಿ ನಡೆದಿತ್ತು. ರಾಷ್ಟ್ರೀಯ ಹೆದ್ದಾರಿ-60ರ ಅಂಗಡಿಯೊಂದರಲ್ಲಿ ಇರುವಾಗ ಶೇಖ್ ಅವರ ಮೇಲೆ ಬಾಂಬ್ ದಾಳಿ ನಡೆಸಲಾಗಿತ್ತು. ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಅವರು ಮೃತಪಟ್ಟಿದ್ದರು. ಮುಖಂಡನ ಸಾವಿನ ಸುದ್ದಿ ತಿಳಿದು ರೊಚ್ಚಿಗೆದ್ದ ಗುಂಪೊಂದು ಅವರ ಗ್ರಾಮದಲ್ಲಿನ ವಿರೋಧಿ ಗುಂಪಿನ ಕೆಲವು ಮನೆಗಳ ಮೇಲೆ ದಾಳಿ ನಡೆಸಲು ಮುಂದಾಗಿದೆ. ಇದನ್ನೂ ಓದಿ: ಭಗತ್ ಸಿಂಗ್ ಪುಣ್ಯಸ್ಮರಣೆಯಂದು ಪಂಜಾಬ್‌ನಲ್ಲಿ ಸಾರ್ವಜನಿಕ ರಜೆ

    ದಾಳಿ ಹಿನ್ನೆಲೆಯಲ್ಲಿ 10 ರಿಂದ 12 ಮಂದಿಗೆ ಬೆಂಕಿ ಬಿದ್ದಿದ್ದು, 10 ಮಂದಿ ಸಜೀವ ದಹನವಾಗಿದ್ದಾರೆ. ಸುಟ್ಟು ಕರಕಲಾದ 10 ಮೃತದೇಹವನ್ನು ಹೊರತೆಗೆಲಾಗಿದ್ದು, ಒಂದೇ ಮನೆಯಿಂದ 7 ಮೃತದೇಹಗಳನ್ನು ಹೊರತೆಗೆದಿರುವುದು ಇದೇ ವೇಳೆ ಬೆಳಕಿಗೆ ಬಂದಿದೆ. ದೇಹಗಳು ಸಂಪೂರ್ಣ ಸುಟ್ಟಿರುವುದರಿಂದ ವ್ಯಕ್ತಿಗಳ ಗುರುತು ಪತ್ತೆಯಾಗಿಲ್ಲ. ಎಲ್ಲ ದೇಹಗಳನ್ನು ಸಮೀಪದ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಲಾಗಿದೆ. ಇನ್ನೂ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ಮಾಹಿತಿ ನೀಢಿದಿದ್ದಾರೆ. ಇದನ್ನೂ ಓದಿ: ಸಂಸದ ಸ್ಥಾನಕ್ಕೆ ಅಖಿಲೇಶ್ ಯಾದವ್ ರಾಜೀನಾಮೆ

    ಇನ್ನೂ ಮುಖಂಡ ಶೇಖ್ ಅವರ ಹತ್ಯೆಯ ಸಂಬಂಧ ಈವರೆಗೂ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಮನೆಗೆ ಬೆಂಕಿಯಿಟ್ಟ ಗುಂಪಿನ ಬಗ್ಗೆ ರಾಜ್ಯ ಸರ್ಕಾರವು ಎಡಿಜಿ (ಸಿಐಡಿ) ಜ್ಞಾನವಂತ್ ಸಿಂಗ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿದೆ ಎಂದು ಡಿಜಿಪಿ ಮಾಳವೀಯ ಹೇಳಿದ್ದಾರೆ.

  • ಮೋದಿ ವಾರಣಾಸಿಯಿಂದ ಸ್ಪರ್ಧಿಸಬಹುದಾದರೆ, ನಾನು ಅಸನ್ಸೋಲ್‍ನಿಂದ ಸ್ಪರ್ಧಿಸಬಹುದು: ಶತ್ರುಘ್ನ ಸಿನ್ಹಾ

    ಮೋದಿ ವಾರಣಾಸಿಯಿಂದ ಸ್ಪರ್ಧಿಸಬಹುದಾದರೆ, ನಾನು ಅಸನ್ಸೋಲ್‍ನಿಂದ ಸ್ಪರ್ಧಿಸಬಹುದು: ಶತ್ರುಘ್ನ ಸಿನ್ಹಾ

    ಕೊಲ್ಕತ್ತಾ: ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿಯಿಂದ ಸ್ಪರ್ಧಿಸಬಹುದಾದರೆ, ನಾನು ಬಂಗಾಳದ ಅಸನ್ಸೋಲ್‍ನಿಂದ ಸ್ಪರ್ಧಿಸಬಹುದು ಎಂದು ಬಿಜೆಪಿಗೆ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಶತ್ರುಘ್ನ ಸಿನ್ಹಾ ತಿರುಗೇಟು ನೀಡಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿಯಿಂದ ಸ್ಪರ್ಧಿಸಬೇಕಾದರೆ ಬಿಜೆಪಿ ಏನು ಮಾಡುತ್ತಿತ್ತು ಎಂದು ವಾಗ್ದಾಳಿ ನಡೆಸಿದರು.

    ಪ್ರಧಾನಿ ಅವರಂತಹ ರಾಷ್ಟ್ರ ನಾಯಕರೇ, ಲೋಕಸಭೆ ಚುನಾವಣೆಯಲ್ಲಿ ಎಲ್ಲಿಂದಲಾದರೂ ಸ್ಪರ್ಧಿಸುವುದನ್ನು ಒಪ್ಪಿಕೊಂಡರೆ, ನನಗೂ ಅದೇ ಅನ್ವಯಿಸುತ್ತದೆ ಎಂದು ಕಿಡಿಕಾರಿದರು. ಇದನ್ನೂ ಓದಿ: 2.8 ಕೋಟಿ ಸಾಗಾಟ -ಸಿಕ್ಕಿ ಬಿದ್ದ ಮಾಜಿ ಸಂಸದನ ಪತ್ನಿ

    ಯಾವಾಗಲೂ ಬಂಗಾಳದ ಅಭಿವೃದ್ಧಿಗೆ ನಿಂತಿರುವ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿಗೆ ಅಸನ್ಸೋಲ್ ಮತದಾರರು ಬೆಂಬಲ ನೀಡುತ್ತಾರೆ ಎನ್ನುವುದು ನನಗೆ ಖಚಿತವಾಗಿದೆ. ನ್ಯಾಯಕ್ಕಾಗಿ ಮತ ನೀಡಿ ಬಿಜೆಪಿಯನ್ನು ಸೋಲಿಸುತ್ತಾರೆ ಎಂದರು. ಇದನ್ನೂ ಓದಿ: ‘ಶಾಸಕನ ಮೊಮ್ಮಗ’ ಎನ್ನುವುದೇ ಬೈಕ್ ನಂಬರ್ ಪ್ಲೇಟ್!

    ಇತ್ತೀಚೆಗೆ ಶತ್ರುಘ್ನ ಸಿನ್ಹಾ ಅವರು ಲೋಕಸಭಾ ಉಪಚುನಾವಣೆಗೆ ನಾಮಪತ್ರ ಸಲ್ಲಿಸುವುದರ ಕುರಿತು ಪಶ್ಚಿಮ ಬಂಗಾಳದ ಬಿಜೆಪಿ ನಾಯಕರಾದ ಸುಕಾಂತ ಮಜುಂದಾರ್ ಮತ್ತು ಅಗ್ನಿಮಿತ್ರ ಪಾಲ್ ಮಾತನಾಡಿ ರಾಜ್ಯಕ್ಕೆ ಶತ್ರುಘ್ನ ಸಿನ್ಹಾ ಅವರು ಹೊರಗಿನವರು ಎಂದು ಲೇವಡಿ ಮಾಡಿದ್ದರು.

    ಇಂದು ಅಸನ್ಸೋಲ್ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲಿದ್ದಾರೆ. ಶತ್ರುಘ್ನ ಸಿನ್ಹಾ ಅವರು ಬಿಜೆಪಿಯ ಅಗ್ನಿಮಿತ್ರ ಪಾಲ್ ವಿರುದ್ಧ ಕಣಕ್ಕಿಳಿದಿದ್ದಾರೆ. ಅಸನ್ಸೋಲ್ ಲೋಕಸಭಾ ಕ್ಷೇತ್ರ ಮತ್ತು ಬಳ್ಳಿಗುಂಜೆ ವಿಧಾನಸಭಾ ಕ್ಷೇತ್ರಕ್ಕೆ ಏಪ್ರಿಲ್ 12 ರಂದು ಉಪಚುನಾವಣೆ ನಡೆಯಲಿದ್ದು, ಏಪ್ರಿಲ್ 16 ರಂದು ಮತ ಎಣಿಕೆ ನಡೆಯಲಿದೆ.

  • ಪರೀಕ್ಷಾ ಸಮಯದಲ್ಲೇ ಉಪಚುನಾವಣೆ ಯಾಕೆ – ಆಯೋಗದ ವಿರುದ್ಧ ಮಮತಾ ಕಿಡಿ

    ಪರೀಕ್ಷಾ ಸಮಯದಲ್ಲೇ ಉಪಚುನಾವಣೆ ಯಾಕೆ – ಆಯೋಗದ ವಿರುದ್ಧ ಮಮತಾ ಕಿಡಿ

    ಕೊಲ್ಕತ್ತಾ: ಪಂಚರಾಜ್ಯ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಗೆಲುವು ಸಾಧಿಸಿರುವ ಬಿಜೆಪಿ ವಿರುದ್ಧ ಸತತವಾಗಿ ವಾಗ್ದಾಳಿ ನಡೆಸುತ್ತಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇದೀಗ ಚುನಾವಣಾ ಆಯೋಗವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

    ಪಶ್ಚಿಮ ಬಂಗಾಳದ 12ನೇ ತರಗತಿಯ ಬೋರ್ಡ್ ಪರೀಕ್ಷೆಗಳ ಸಮಯದಲ್ಲಿ ಅಸನ್ಸೋಲ್ ಲೋಕಸಭಾ ಕ್ಷೇತ್ರ ಹಾಗೂ ಬ್ಯಾಲಿಗುಂಗೆ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಿಗದಿಪಡಿಸಿರುವುದಕ್ಕಾಗಿ ಚುನಾವಣಾ ಆಯೋಗವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಕಾರಣದಿಂದಾಗಿ ಪರೀಕ್ಷೆಗಳನ್ನು ಮರುಹೊಂದಿಸಬೇಕಾಗಿದೆ ಎಂದು ಅವರು ಆಗ್ರಹಿಸಿದ್ದಾರೆ.

    ಚುನಾವಣಾ ಆಯೋಗವು ಬಿಜೆಪಿಯ ಆಜ್ಞೆಯಂತೆ ಕೆಲಸ ನಿರ್ವಹಿಸುತ್ತಿದೆ. ಹಾಗಾಗಿಯೇ ಅದು ಉಪಚುನಾವಣೆಯ ದಿನಾಂಕವನ್ನು ನಿಗದಿಪಡಿಸುವಾಗ ರಾಜ್ಯದ ಬೋರ್ಡ್ ಪರೀಕ್ಷೆಗಳನ್ನು ಪರಿಗಣಿಸಿಲ್ಲ. ಏ.2 ಮತ್ತು ಏ.26ರ ನಡುವೆ ನಡೆಯಬೇಕಿದ್ದ  12ನೇ ತರಗತಿಯ ಬೋರ್ಡ್ ಪರೀಕ್ಷೆಗಳು ನಡೆಯಲಿದ್ದು, ಏ.27ರಂದು ಪರೀಕ್ಷೆ ಕೊನೆಗೊಳ್ಳಲಿದೆ. ಈ ನಡುವೆ ಚುನಾವಣಾ ದಿನಾಂಕವನ್ನು ನಿಗದಿ ಮಾಡಿರುವುದು ಆಕ್ಷೇಪಾರ್ಹ ಎಂದು ಹೇಳಿದ್ದಾರೆ. ಇದನ್ನೂ ಓದಿ: ರೊಲ್ಸ್ ರಾಯಲ್ಸ್‌ಗಾಗಿ ಮತ್ತೊಂದು ವಿವಾದಕ್ಕೆ ಸಿಲುಕಿದ ವಿಜಯ್ ದಳಪತಿ

    ಇದಕ್ಕೆ ಪ್ರತಿಕ್ರಿಯಿಸಿರುವ ಚುನಾವಣಾ ಆಯೋಗವು, ಏ.12ರಂದು ಉಪಚುನಾವಣೆ ನಡೆಯುವ ಕಾರಣ ಏ.6ರಿಂದ 15ರ ವರೆಗೆ ಯಾವುದೇ ಪರೀಕ್ಷೆಗಳು ಇರುವುದಿಲ್ಲ. ಏ.16ರಂದು ಮತ ಏಣಿಕೆ ಕಾರ್ಯ ನಡೆಯಲಿದ್ದು, ಮೊದಲ ಭಾಷೆ ಏಪ್ರಿಲ್ 2 ರಂದು ಮತ್ತು 2ನೇ ಭಾಷೆ ಏಪ್ರಿಲ್ 4 ರಂದು ನಡೆಯಲಿದೆ. ಅಲ್ಲದೆ, ಉನ್ನತ ಶಿಕ್ಷಣದ ವೃತ್ತಿಪರ ಪರೀಕ್ಷೆಗಳು ಏಪ್ರಿಲ್ 5 ರಂದು ನಡೆಯಲಿದೆ. ಹಾಗಾಗಿ ಯಾವುದೇ ತೊಂದರೆಯಾಗುವುದಿಲ್ಲ ಎಂದು ಹೇಳಿದೆ.

    ಚುನಾವಣಾ ಆಯೋಗವು ಬಿಜೆಪಿಯ ಆಜ್ಞೆಯಂತೆ ಕೆಲಸ ಮಾಡುತ್ತಿಲ್ಲ. ಆದರೆ, ಯಾವುದೇ ಸ್ಥಾನಕ್ಕೆ ತೆರವಾದ 6 ತಿಂಗಳಲ್ಲಿ ಉಪಚುನಾವಣೆ ನಡೆಸಬೇಕಿರುವುದರಿಂದ ದಿನಾಂಕವನ್ನು ನಿಗದಿ ಮಾಡಲಾಗಿದೆ. ಕೇಂದ್ರ ಪಡೆಗಳು ಶೀಘ್ರದಲ್ಲೇ ಕೆಲಸ ಪ್ರಾರಂಭಿಸಲಿದ್ದು, ಅವರು ಶಾಲೆಗಳಲ್ಲಿ ಸ್ಥಾಪಿಸುವ ಮತಗಟ್ಟೆಗಳಲ್ಲೇ ಉಳಿಯಲಿದ್ದಾರೆ. ಈ ವೇಳೆ ಶಾಲೆಗಳಿಗೆ ಅಳವಡಿಸಲಾಗುವ ಸುರಕ್ಷಸತಾ ಸೌಲಭ್ಯವನ್ನು ಬೋರ್ಡ್ ಪರೀಕ್ಷೆಗೂ ಬಳಸಲಾಗುವುದು ಎಂದಿದ್ದಾರೆ.

    ಆದರೂ ಚುನಾವಣೆಯಿಂದ ವಿದ್ಯಾರ್ಥಿಗಳ ಪರೀಕ್ಷೆಗಳಿಗೆ ತೊಂದರೆಯಾಗಲಿದೆ ಎಂದು ಮಮತಾ ಬ್ಯಾನರ್ಜಿ ತಮ್ಮ ವಾದ ಮುಂದುವರಿಸಿದ್ದಾರೆ. ಪಂಜಾಬ್, ಉತ್ತರ ಪ್ರದೇಶ, ಗೋವಾ, ಮಣಿಪುರ ಮತ್ತು ಉತ್ತರಾಖಂಡದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಗಳ ಜೊತೆಗೆ ಈ ಎರಡೂ ಕ್ಷೇತ್ರಗಳಿಗೂ ಚುನಾವಣೆ ನಡೆಸಬಹುದಿತ್ತು. ಆಗಲೇ ಚುನಾವಣೆ ನಡೆಸಿದ್ದರೆ ವಿದ್ಯಾರ್ಥಿಗಳು ಈ ಸಮಸ್ಯೆ ಎದುರಿಸಬೇಕಾಗುತ್ತಿರಲಿಲ್ಲ. ಹಾಗಾಗಿ ಮುಖ್ಯಕಾರ್ಯದರ್ಶಿಗಳು ಹಾಗೂ ಚುನಾವಣಾ ಆಯೋಗವು ಪರೀಕ್ಷೆಯನ್ನು ಗಮನದಲ್ಲಿಟ್ಟುಕೊಂಡು ಉಪಚುನಾವಣೆಯ ದಿನಾಂಕವನ್ನು ನಿಗದಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ರಾಯಚೂರಿನಲ್ಲಿ ಮದ್ಯ ಮಾರಾಟ ನಿಷೇಧ

    ಈ ನಡುವೆ ಪಶ್ಚಿಮ ಬಂಗಾಳ ಕೌನ್ಸಿಲ್ ಫಾರ್ ಹೈಯರ್ ಸೆಕೆಂಡರಿ ಎಜುಕೇಶನ್ ಸಂಸ್ಥೆಯು ತನ್ನ 12ನೇ ತರಗತಿಯ ಕೆಲವು ಪರೀಕ್ಷಾ ದಿನಾಂಕಗಳನ್ನು ಜೆಇಇ ಸಂಸ್ಥೆಯೊಂದಿಗೆ ಹೊಂದಿಕೆಯಾಗುವಂತೆ ಪರಿಷ್ಕರಿಸಿದೆ.

  • ರಣಜಿ ಟ್ರೋಫಿ- ನೂತನ ದಾಖಲೆ ಸೃಷ್ಟಿಸಿದ ಜಾರ್ಖಂಡ್

    ರಣಜಿ ಟ್ರೋಫಿ- ನೂತನ ದಾಖಲೆ ಸೃಷ್ಟಿಸಿದ ಜಾರ್ಖಂಡ್

    ಕೊಲ್ಕತ್ತಾ: ಜಾರ್ಖಂಡ್ ಮತ್ತು ನಾಗಾಲ್ಯಾಂಡ್ ನಡುವಿನ ರಣಜಿ ಟ್ರೋಫಿ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಾರ್ಖಂಡ್ ತಂಡ ಅತಿ ಹೆಚ್ಚು ರನ್ ಗಳಿಸುವ ಮೂಲಕ ನೂತನ ದಾಖಲೆಯನ್ನು ಸೃಷ್ಟಿಸಿದೆ.

    ಈಡನ್ ಗಾರ್ಡ್‍ನ್‍ನಲ್ಲಿ ನಡೆದ ಪಂದ್ಯದ ವೇಳೆ ನಾಗಾಲ್ಯಾಂಡ್ ನಾಯಕ ರೊಂಗ್‍ಸೆನ್ ಜೊನಾಥನ್ ಟಾಸ್ ಗೆದ್ದು, ಎದುರಾಳಿ ತಂಡ ಜಾರ್ಖಂಡ್‍ಗೆ ಬ್ಯಾಟಿಂಗ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ಬ್ಯಾಟಿಂಗ್ ಮಾಡಿದ ಜಾರ್ಖಂಡ್ ತಂಡ ಮೊದಲ ದಿನದ ಅಂತ್ಯಕ್ಕೆ 5 ವಿಕೆಟ್‍ಗೆ 402ರನ್ ಗಳಿಸಿತ್ತು. ಕುಮಾರ್ ಕುಶಾಗ್ರಾ ದ್ವಿಶತಕ ಹಾಗೂ ವಿರಾಟ್ ಸಿಂಗ್ 107 ರನ್ ದಾಖಲಿಸಿದ್ದರು.

    ಎರಡನೇ ದಿನದಾಟದಲ್ಲಿ ಕುಶಾಗ್ರಾ ಹಾಗೂ ಅನುಜುಲ್ ರಾಯ್ ಜೊತೆಯಾಡಿ 166 ರನ್ ಕಲೆ ಹಾಕಿದ್ದರು. ಅನುಕುಲ್ ರಾಯ್ ಅರ್ಧಶತಕಗಳಿಸಿದ್ದಾರೆ. 9 ವಿಕೆಟ್ ನಷ್ಟಕ್ಕೆ 769ರನ್ ಗಳಿಸಿತ್ತು. ಮೂರನೇ ದಿನವೂ ಜಾರ್ಖಂಡ್‍ನ ಆಟ ಮುಂದುವರೆದಿದ್ದು, ರಾಹುಲ್ ಶುಕ್ಲಾ ಅರ್ಧಶತಕ ಗಳಿಸಿ ಜಾರ್ಖಂಡ್‍ಗೆ 880 ರನ್ ಗಳಿಸಲು ಸಹಾಯ ಮಾಡಿದರು. ಇದನ್ನೂ ಓದಿ: ಉಕ್ರೇನ್‌ ಮೇಲಿನ ಯುದ್ಧ ಅಕ್ಷಮ್ಯ ಅಪರಾಧ: ರಷ್ಯಾ ಪೈಲಟ್‌ ಸಂದೇಶದ ವೀಡಿಯೋ ವೈರಲ್‌

    ಜಾರ್ಖಂಡ್ 880 ರನ್ ಗಳಿಸಿದ ಹಿನ್ನೆಲೆಯಲ್ಲಿ ರಣಜಿ ಟ್ರೋಫಿ ಇನ್ನಿಂಗ್ಸ್‌ನಲ್ಲಿ ನಾಲ್ಕನೇ ಅತಿ ಹೆಚ್ಚು ರನ್ ದಾಖಲಿಸಿದ ತಂಡವಾಗಿ ಹೊರಹೊಮ್ಮಿದೆ. ಈ ಮೂಲಕ ಜಾರ್ಖಂಡ್, ಮುಂಬೈನ ದಾಖಲೆಯನ್ನು ಮುರಿದಿದೆ. 1990-91ರಲ್ಲಿ ಮುಂಬೈ ತಂಡ ಹೈದರಾಬಾದ್ ವಿರುದ್ಧ 6 ವಿಕೆಟ್ ನಷ್ಟಕ್ಕೆ 855 ರನ್ ಗಳಿಸಿತ್ತು.

    ರಣಜಿ ಟ್ರೋಫಿಯಲ್ಲಿ ಅತಿ ಹೆಚ್ಚು ರನ್‍ಗಳಿಸಿದ ಮೊದಲ ನಾಲ್ಕು ತಂಡಗಳು:
    944/6 – ಹೈದರಾಬಾದ್ vs ಆಂಧ್ರಪ್ರದೇಶ್
    912/6- ತಮಿಳುನಾಡು vs ಗೋವಾ
    880/10- ಜಾರ್ಖಂಡ್ vs ನಾಗಾಲ್ಯಾಂಡ್

    ಇನ್ನುಳಿದಂತೆ 2020ರ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತದ ಅಂಡರ್-19 ಭಾಗವಾಗಿದ್ದ ಕುಶಾಗ್ರಾ 213 ಎಸೆತಗಳಲ್ಲಿ ದ್ವಿಶತಕ ಗಳಿಸಿ ದಾಖಲೆಯನ್ನು ಸೃಷ್ಟಿಸಿದರು. ರಣಜಿ ಟ್ರೋಫಿ ಹಾಗೂ ಪ್ರಥಮ ದರ್ಜೆಯ ಕ್ರಿಕೆಟ್‍ನಲ್ಲಿ 250ರನ್ ಗಳಿಸಿದ ಕುಶಗ್ರಾ ಅತ್ಯಂತ ಕಿರಿಯ ಆಟಗಾರರಾಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಪಾಕಿಸ್ತಾನದ ಜಾವೇದ್ ಮಿಯಾಂದಾದ್ ಅವರ ದಾಖಲೆಯನ್ನು ಮುರಿದಿದ್ದಾರೆ. ಇದನ್ನೂ ಓದಿ: ಪಂಡಿತರಿಗಿಂತ ಹೆಚ್ಚಾಗಿ ಮುಸ್ಲಿಮರು ಕಾಶ್ಮೀರದಲ್ಲಿ ಹತ್ಯೆಯಾಗಿದ್ದಾರೆ: ಕೇರಳ ಕಾಂಗ್ರೆಸ್‌