Tag: kolkata

  • ದಯವಿಟ್ಟು ಪ್ರಜಾಪ್ರಭುತ್ವ ಉಳಿಸಿ – ಸಿಜೆಐಗೆ ಮಮತಾ ಬ್ಯಾನರ್ಜಿ ಮನವಿ

    ದಯವಿಟ್ಟು ಪ್ರಜಾಪ್ರಭುತ್ವ ಉಳಿಸಿ – ಸಿಜೆಐಗೆ ಮಮತಾ ಬ್ಯಾನರ್ಜಿ ಮನವಿ

    ಕೋಲ್ಕತ್ತಾ: ದಯವಿಟ್ಟು ಪ್ರಜಾಪ್ರಭುತ್ವವನ್ನು ಉಳಿಸಿ ಎಂದು ಸುಪ್ರೀಂ ಕೋರ್ಟ್‌ (Supreme Court) ಮುಖ್ಯ ನ್ಯಾಯಮೂರ್ತಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಒತ್ತಾಯಿಸಿದ್ದಾರೆ.

    ದೇಶದಲ್ಲಿ ಪ್ರಜಾಪ್ರಭುತ್ವ ಸಂಸ್ಥೆಗಳ ಉಸಿರುಗಟ್ಟಿಸಲಾಗುತ್ತಿದೆ. ಇದೇ ಪ್ರವೃತ್ತಿಯನ್ನು ಮುಂದುವರಿಸಿದರೆ, ರಾಷ್ಟ್ರವು ಅಧ್ಯಕ್ಷೀಯ ಸರ್ಕಾರಕ್ಕೆ ನೇತೃತ್ವ ವಹಿಸಬೇಕಾಗುತ್ತದೆ ಎಂದು ಎಚ್ಚರಿಸಿದ ಬ್ಯಾನರ್ಜಿ ಅವರು, ಪ್ರಜಾಪ್ರಭುತ್ವ ಮತ್ತು ಫೆಡರಲ್ ರಚನೆಯ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸಿಜೆಐಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಮನ್ ಕಿ ಬಾತ್‍ನಲ್ಲಿ ಬೆಂಗಳೂರಿನ ಸುರೇಶ್ ಕುಮಾರ್​ರನ್ನು ಪ್ರಶಂಸಿಸಿದ ಮೋದಿ

    ಕೋಲ್ಕತ್ತಾದಲ್ಲಿ ನ್ಯಾಷನಲ್ ಯೂನಿವರ್ಸಿಟಿ ಆಫ್ ಜ್ಯೂರಿಡಿಕಲ್ ಸೈನ್ಸಸ್ (ಎನ್‌ಯುಜೆಎಸ್) ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ ಸಿಜೆಐ ಯು.ಯು.ಲಲಿತ್ (UU Lalit) ಅವರ ಉಪಸ್ಥಿತಿಯಲ್ಲಿ ಬ್ಯಾನರ್ಜಿ ಮಾತನಾಡಿದ್ದಾರೆ.

    ಜನರನ್ನು ಕಿರುಕುಳದಿಂದ ರಕ್ಷಿಸಲು ನ್ಯಾಯಾಂಗ ಮುಂದಾಗಬೇಕು. ಎಲ್ಲಾ ಪ್ರಜಾಸತ್ತಾತ್ಮಕ ಅಧಿಕಾರವನ್ನು ಸಮಾಜದ ಒಂದು ನಿರ್ದಿಷ್ಟ ವರ್ಗವು ವಶಪಡಿಸಿಕೊಳ್ಳುತ್ತಿದೆ. ಪ್ರಜಾಪ್ರಭುತ್ವ ಎಲ್ಲಿದೆ? ದಯವಿಟ್ಟು ಪ್ರಜಾಪ್ರಭುತ್ವವನ್ನು ಉಳಿಸಿ ಎಂದು ಕೇಳಿಕೊಂಡಿದ್ದಾರೆ. ಇದನ್ನೂ ಓದಿ: ಒಟ್ಟು 9 ಸಾವಿರ ವ್ಯಾಗನ್ ಆರ್, ಸೆಲೆರಿಯೊ, ಇಗ್ನಿಸ್ ಕಾರುಗಳನ್ನು ಹಿಂದಕ್ಕೆ ಪಡೆದ ಮಾರುತಿ

    ನಾನು ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ಅವರನ್ನು ಅಭಿನಂದಿಸಬೇಕು. ನಾನು ಈ ವೇದಿಕೆಯನ್ನು ಬಳಸಬಹುದೇ ಎಂದು ನನಗೆ ತಿಳಿದಿಲ್ಲ. ಆದರೆ ಎರಡು ತಿಂಗಳಲ್ಲಿ ಅವರು ನ್ಯಾಯಾಂಗ ಎಂದರೆ ಏನು ಎಂದು ತೋರಿಸಿದ್ದಾರೆ ಎಂದು ಬಣ್ಣಿಸಿದ್ದಾರೆ.

    ಜನರು ನ್ಯಾಯಾಂಗದ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದಾರೆ ಎಂದು ನಾನು ಹೇಳುತ್ತಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ನ್ಯಾಯಾಂಗವು ಜನರನ್ನು ಅನ್ಯಾಯದಿಂದ ರಕ್ಷಿಸಬೇಕು. ಜನರ ಕೂಗನ್ನು ಆಲಿಸಬೇಕು. ಇದೀಗ ಜನರು ಮುಚ್ಚಿದ ಬಾಗಿಲುಗಳ ಹಿಂದೆ ಅಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೋಲ್ಕತ್ತಾದಲ್ಲಿ ಹಿಂಸಾಚಾರ – ಬಿಜೆಪಿ ರಾಜ್ಯಾಧ್ಯಕ್ಷನ ಬಂಧನ

    ಕೋಲ್ಕತ್ತಾದಲ್ಲಿ ಹಿಂಸಾಚಾರ – ಬಿಜೆಪಿ ರಾಜ್ಯಾಧ್ಯಕ್ಷನ ಬಂಧನ

    ಕೋಲ್ಕತ್ತಾ: ನಗರದ ಮೊಮಿನ್‌ಪೋರ್ (Mominpore) ಪ್ರದೇಶದಲ್ಲಿ ಧ್ವಜ ಹಾಕುವ ವಿಚಾರವಾಗಿ ಶನಿವಾರ 2 ಸಮುದಾಯಗಳ ನಡುವೆ ಘರ್ಷಣೆ (Violence) ನಡೆದಿತ್ತು. ಕಲ್ಲು ತೂರಾಟ ನಡೆದಿದ್ದು, ಕೆಲ ಮನೆಗಳಿಗೆ ಹಾನಿಯಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಈವರೆಗೆ ಪೊಲೀಸರು 38 ಜನರನ್ನು ಬಂಧಿಸಿದ್ದು, ಹೆಚ್ಚುವರಿಯಾಗಿ ಬಿಜೆಪಿ (BJP) ರಾಜ್ಯಾಧ್ಯಕ್ಷ ಸುಕಾಂತ್ ಮಜುಂದಾರ್ (Sukanta Majumdar) ಅವರನ್ನೂ ಬಂಧಿಸಿರುವುದಾಗಿ ಮೂಲಗಳು ತಿಳಿಸಿವೆ.

    ವರದಿಗಳ ಪ್ರಕಾರ ಪ್ರಕ್ಷುಬ್ಧ ಪ್ರದೇಶಕ್ಕೆ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಪರಿಸ್ಥಿತಿಯನ್ನು ಹತೋಟಿಗೆ ತರಲಾಗಿದೆ. ಮಜುಂದಾರ್ ಅವರು ಇಂದು ಘಟನಾ ಸ್ಥಳಕ್ಕೆ ಭೇಟಿ ನೀಡಲು ತೆರಳಿದ್ದ ಸಂದರ್ಭ ಅವರನ್ನು ಪೊಲೀಸರು ತಡೆದು ಬಂಧಿಸಿದ್ದಾರೆ. ಇದನ್ನೂ ಓದಿ:  ಪ್ರಯಾಣಿಕ ಖರೀದಿಸಿದ್ದ ಸಮೋಸಾದಲ್ಲಿ ಯೆಲ್ಲೋ ಕಲರ್ ಪೇಪರ್ – IRCTC ಹೇಳೋದೇನು?

    ಬಂಧನಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಮಜುಂದಾರ್, ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಮನೆಗಳ ಮೇಲೆ ದಾಳಿ ನಡೆಯುತ್ತಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಪೊಲೀಸರ ಪಾತ್ರ ಶೋಚನೀಯವಾಗಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಬಸ್ ಹತ್ತುವಾಗ ಬಿದ್ದ ಬೆಂಗಳೂರು ವಿವಿ ವಿದ್ಯಾರ್ಥಿನಿ- ಜ್ಞಾನಭಾರತಿ ಆವರಣದಲ್ಲಿ ಉದ್ವಿಗ್ನ ಸ್ಥಿತಿ

    ಬಂಗಾಳ (West Bengal) ಪೊಲೀಸರಿಗೆ ಪರಿಸ್ಥಿತಿಯನ್ನು ಹತೋಟಿಗೆ ತರಲು ಸಾಧ್ಯವಾಗದಿದ್ದರೆ, ರಾಜ್ಯ ಆಡಳಿತ ಕೇಂದ್ರದ ಪಡೆಗಳಿಂದ ಸಹಾಯ ಪಡೆಯಬೇಕೆಂದು ಒತ್ತಾಯಿಸಿದ್ದಾರೆ. ಇದೀಗ ಪ್ರದೇಶದಲ್ಲಿ ಪೊಲೀಸ್ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸೌರವ್ ಗಂಗೂಲಿ ಪತ್ನಿ ಡೋನಾ ಗಂಗೂಲಿ ಆಸ್ಪತ್ರೆಗೆ ದಾಖಲು

    ಸೌರವ್ ಗಂಗೂಲಿ ಪತ್ನಿ ಡೋನಾ ಗಂಗೂಲಿ ಆಸ್ಪತ್ರೆಗೆ ದಾಖಲು

    ಕೋಲ್ಕತ್ತಾ: ಮಾಜಿ ಕ್ರಿಕೆಟಿಗ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಅವರ ಪತ್ನಿ ಡೋನಾ ಗಂಗೂಲಿ (Dona Ganguly) ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಜ್ವರ, ಕೀಲು ನೋವು ಮತ್ತು ದದ್ದುಗಳಂತಹ ಚಿಕೂನ್‍ಗೂನ್ಯಾ (Chikungunya) ರೋಗದಿಂದ ಬಳಲುತ್ತಿದ್ದ ಡೋನಾ ಗಂಗೂಲಿ ಅವರನ್ನು ಮಂಗಳವಾರ ತಡರಾತ್ರಿ ಕೋಲ್ಕತ್ತಾದ (Kolkata) ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಕ್ಯಾಲಿಫೋರ್ನಿಯಾ – ಕಿಡ್ನ್ಯಾಪ್‌ ಆಗಿದ್ದ ಭಾರತ ಮೂಲದ ಒಂದೇ ಕುಟುಂಬ ನಾಲ್ವರು ಶವವಾಗಿ ಪತ್ತೆ

    ಡೋನಾ ಗಂಗೂಲಿ ಅವರು ಚಿಕೂನ್‍ಗುನ್ಯಾದಿಂದ ಬಳಲುತ್ತಿದ್ದಾರೆ. ಜ್ವರದಿಂದ ಬಳಲುತ್ತಿದ್ದೂ ಸದ್ಯಕ್ಕೆ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವುಡ್‍ಲ್ಯಾಂಡ್ಸ್ ಆಸ್ಪತ್ರೆಯ (Woodlands Hospital) ಎಂಡಿ ಮತ್ತು ಸಿಇಒ ಡಾ.ರೂಪಾಲಿ ಬಸು ಹೇಳಿದ್ದಾರೆ. ಇದನ್ನೂ ಓದಿ: ಬಾಲಿವುಡ್ ಗೆ ಪವನ್ ಒಡೆಯರ್: ‘ನೋಟರಿ’ ಮೂಲಕ ಬಿಟೌನ್ ಗೆ ಎಂಟ್ರಿ

    ಖ್ಯಾತ ಒಡಿಸ್ಸಾ ನೃತ್ಯಗಾರ್ತಿಯಾಗಿರುವ ಡೊನಾ ಗಂಗೂಲಿ ಅವರ ಆರೋಗ್ಯದ ಬಗ್ಗೆ ತೀವ್ರ ನಿಗಾವಹಿಸಲಾಗುತ್ತಿದೆ ಎಂದು ಸಿಇಒ ಡಾ.ರೂಪಾಲಿ ಬಸು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹಿಂದೂ ಕುಟುಂಬಕ್ಕೋಸ್ಕರ ಏರಿಯಾದಲ್ಲಿ ಮುಸ್ಲಿಮರಿಂದ ದುರ್ಗಾ ಪೂಜೆ ಆಯೋಜನೆ

    ಹಿಂದೂ ಕುಟುಂಬಕ್ಕೋಸ್ಕರ ಏರಿಯಾದಲ್ಲಿ ಮುಸ್ಲಿಮರಿಂದ ದುರ್ಗಾ ಪೂಜೆ ಆಯೋಜನೆ

    ಕೋಲ್ಕತ್ತಾ: ಮುಸ್ಲಿಂ ಸಮುದಾಯದ ಜನರನ್ನೇ ಹೊಂದಿರುವ ಕೋಲ್ಕತ್ತಾದ (Kolkata) ಕ್ಲಬ್ ಅಲಿಮುದ್ದೀನ್ ಸ್ಟ್ರೀಟ್‍ನ 13/A ಷರೀಫ್ ಲೇನ್‍ನಲ್ಲಿ ವಾಸಿಸುವ ಒಂದೇ ಒಂದು ಹಿಂದೂ ಕುಟುಂಬದ (Hindu family) ಸಂತೋಷಕ್ಕಾಗಿ ಅಲ್ಲಿದ್ದ ಮುಸ್ಲಿಂ ಸಮುದಾಯದ (Muslim community) ಎಲ್ಲಾ ಸದಸ್ಯರು ದುರ್ಗಾ ಪೂಜೆಯನ್ನು (Durga Puja) ಆಯೋಜಿಸಿದೆ.

    16 ವರ್ಷಗಳ ಹಿಂದೆ ಕಾರಣಾಂತರಗಳಿಂದ ಹಲವಾರು ಹಿಂದೂ ಕುಟುಂಬಗಳು ಏರಿಯಾ ಬಿಟ್ಟು ಹೋದ ಬಳಿಕ ಈ ಪ್ರದೇಶದಲ್ಲಿ ದುರ್ಗಾ ಪೂಜೆ ಆಚರಣೆಗಳು ನಿಂತುಹೋಗಿದ್ದವು. ಆದರೆ ಕಳೆದ ವರ್ಷ ಮುಸ್ಲಿಂ ಸಮುದಾಯದ ಯುವಕರು ಇಲ್ಲಿ ವಾಸಿಸುವ ಹಿಂದೂ ಕುಟುಂಬಕ್ಕೆ ಈ ವರ್ಷ ದಶಕಗಳ ಹಿಂದೆ ನಡೆಸುತ್ತಿದ್ದ ದುರ್ಗಾಪೂಜೆ ಆಚರಣೆಯನ್ನು ಪುನಃ ಮಾಡಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.

    ಸಯಂತ ಸೇನ್ ಅವರ ಕುಟುಂಬವು ಈ ಪ್ರದೇಶದಲ್ಲಿ ವಾಸಿಸುವ ಏಕೈಕ ಹಿಂದೂ ಬಂಗಾಳಿ ಕುಟುಂಬವಾಗಿದೆ ಮತ್ತು ಅವರ ತಂದೆಯು ದುರ್ಗಾ ಪೂಜೆಯ ಮೊದಲ ಕೆಲವು ಸಂಘಟಕರಲ್ಲಿ ಒಬ್ಬರು. ಇದನ್ನೂ ಓದಿ: ಖ್ಯಾತ ನಟಿ ಆಶಾ ಪರೇಖ್ ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು

    ಈ ಕುರಿತಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಯುವಕನೊಬ್ಬ, ತಮ್ಮ ಕಾಲೋನಿಯಲ್ಲಿ ದುರ್ಗಾಪೂಜೆ ಆಚರಣೆಯನ್ನು ಪುನಃ ಮಾಡುತ್ತಿರುವುದು ಸಂತೋಷವಾಗುತ್ತಿದೆ. ದುರ್ಗಾ ಪೂಜೆ ಸ್ಥಗಿತಗೊಂಡಾಗ ನನಗೆ ಮೂರರಿಂದ ನಾಲ್ಕು ವರ್ಷ. ಇಲ್ಲಿ ದುರ್ಗಾ ಪೂಜೆಯ ಆಚರಣೆಗಳು ನಡೆಯುತ್ತಿದ್ದವು ಎಂದು ನನ್ನ ತಂದೆ ಹೇಳುತ್ತಿದ್ದನ್ನು ಕೇಳಿದ್ದೆ. ಆದರೆ ಹಿಂದೂಗಳು ಏರಿಯಾ ಬಿಟ್ಟು ಹೋದ ಬಳಿಕ ದುರ್ಗಾ ಪೂಜೆ ನಿಂತುಹೋಗಿತ್ತು. ಇದೀಗ ಮುಸ್ಲಿಮರು ಈ ಏರಿಯಾದಲ್ಲಿ ಮತ್ತೆ ದುರ್ಗಾ ಪೂಜೆಯನ್ನು ಆಯೋಜಿಸಿದ್ದಾರೆ ಎಂದು ತಿಳಿಸಿದ್ದಾನೆ. ಇದನ್ನೂ ಓದಿ: ಹಾಸ್ಟೆಲ್ ವಿದ್ಯಾರ್ಥಿನಿಯರ ಸ್ನಾನದ ವೀಡಿಯೋ ರೆಕಾರ್ಡ್ ಮಾಡಿದ್ದವ ಅರೆಸ್ಟ್

    Live Tv
    [brid partner=56869869 player=32851 video=960834 autoplay=true]

  • ದಸರಾ ಸಂಭ್ರಮ – ಲಾರ್ಡ್ಸ್ ಪೆವಿಲಿಯನ್‌ನಲ್ಲಿ ನಿಂತು ತ್ರಿವರ್ಣ ಧ್ವಜ ಹಾರಿಸಿದ ಗಂಗೂಲಿ

    ದಸರಾ ಸಂಭ್ರಮ – ಲಾರ್ಡ್ಸ್ ಪೆವಿಲಿಯನ್‌ನಲ್ಲಿ ನಿಂತು ತ್ರಿವರ್ಣ ಧ್ವಜ ಹಾರಿಸಿದ ಗಂಗೂಲಿ

    ಕೋಲ್ಕತ್ತಾ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಅವರಿಂದು ದಕ್ಷಿಣ ಕೋಲ್ಕತ್ತಾದಲ್ಲಿ ನಡೆದ ದುರ್ಗಾ ಪೂಜೆಯ ಪಂಡಾಲ್ (Durga Puja Pandal) ಉದ್ಘಾಟಿಸಿದರು. ಇದೇ ವೇಳೆ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ಲಾರ್ಡ್ಸ್ ಮೈದಾನದಲ್ಲಿ (Lord’s Pavilion) ಇಂಗ್ಲೆಂಡ್ (England) ವಿರುದ್ಧ ನಡೆದ ನ್ಯಾಟ್‌ವೆಸ್ಟ್ ತ್ರಿಕೋನ ಸರಣಿಯ ಫೈನಲ್‌ನಲ್ಲಿ ಭಾರತ ಸ್ಮರಣೀಯ ಗೆಲುವು ಮೆಲುಕು ಹಾಕಿದ್ದಾರೆ.

    ಇಲ್ಲಿನ ದುರ್ಗಾಪೂಜಾ ಸಮಿತಿ ಪಕ್ಕದಲ್ಲೇ ಲಾರ್ಡ್ಸ್ ಪೆವಿಲಿಯನ್ ರೀತಿಯಲ್ಲೇ ತಾತ್ಕಾಲಿಕ ಪೆಂಡಾಲ್ ಸ್ಥಾಪಿಸಲಾಗಿದೆ. ದುರ್ಗಾಪೂಜೆ, ದುರ್ಗೋತ್ಸವ ಎಂದು ಕರೆಯುವ ಹಿಂದೂಗಳ ಈ ಆರಾಧನಾ ಮಹೋತ್ಸವವನ್ನು ಮಹಿಷಾಸುರನನ್ನು ಸಂಹಾರವನ್ನು ನೆನಪಿಸುವ ವಿಶೇಷ ಆಚರಣೆಯೂ ಆಗಿದೆ. ಇದನ್ನೂ ಓದಿ: ಸರಣಿ ಗೆದ್ದರೂ ಮುಖದಲ್ಲಿ ನಗುವಿಲ್ಲ – ಕೊಹ್ಲಿಯನ್ನು ಗುರಾಯಿಸಿದ ಪಂತ್

    2002ರಲ್ಲಿ ಲಾರ್ಡ್ಸ್‌ನಲ್ಲಿ ನಡೆದಿದ್ದ ನ್ಯಾಟ್‌ವೆಸ್ಟ್ ತ್ರಿಕೋನ ಸರಣಿಯಲ್ಲಿ ಭಾರತ (Team India) ಅವಿಸ್ಮರಣೀಯ ಗೆಲುವು ದಾಖಲಿಸಿತ್ತು. ಯುವರಾಜ್ ಸಿಂಗ್ (Yuvraj Singh), ಮೊಹಮ್ಮದ್ ಕೈಫ್ (Mohammad Kaif) ಬ್ಯಾಟಿಂಗ್ ಅಬ್ಬರದಿಂದ ಗೆಲುವು ದಾಖಲಿಸಿದ ನಂತರ ಸೌರವ್ ಗಂಗೂಲಿ ತಮ್ಮ ಟೀಶರ್ಟ್ ಬಿಚ್ಚಿ ಬಾಲ್ಕನಿಯಲ್ಲಿ ಬೀಸಿ ಸಂಭ್ರಮಿಸಿದ್ದರು. ಇದನ್ನೂ ಓದಿ: ಭಾರತ Vs ಆಸ್ಟ್ರೇಲಿಯಾ ಹೈವೋಲ್ಟೆಜ್ ಪಂದ್ಯದ ನಡುವೆ ಮೊಳಗಿತು ಜೈಶ್ರೀರಾಮ್ ಉದ್ಘೋಷ

    16 ದೇಶಗಳೊಂದಿಗೆ 113 ಟೆಸ್ಟ್ ಪಂದ್ಯಗಳನ್ನಾಡಿರುವ ಸೌರವ್ ಗಂಗೂಲಿ 7,212 ರನ್ ಬಾರಿಸಿದ್ದಾರೆ. 35 ಅರ್ಧ ಶತಕಗಳನ್ನು ಗಳಿಸಿದ್ದಾರೆ, ಜೊತೆಗೆ 32 ವಿಕೆಟ್‌ಗಳನ್ನೂ ಪಡೆದಿದ್ದಾರೆ. ಇನ್ನೂ 22 ದೇಶಗಳೊಂದಿಗೆ 311 ಏಕದಿನ ಕ್ರಿಕೆಟ್ ಪಂದ್ಯದಲ್ಲಿ 11,363 ರನ್ ಪೂರೈಸಿರುವ ಗಂಗೂಲಿ 100 ವಿಕೆಟ್ ಕಬಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸೀರೆಯುಟ್ಟು ಸಂಸದೆ ಮಹುವಾ ಮೊಯಿತ್ರಾ ಫುಟ್‍ಬಾಲ್ ಆಟ – ನೆಟ್ಟಿಗರು ಫುಲ್ ಫಿದಾ

    ಸೀರೆಯುಟ್ಟು ಸಂಸದೆ ಮಹುವಾ ಮೊಯಿತ್ರಾ ಫುಟ್‍ಬಾಲ್ ಆಟ – ನೆಟ್ಟಿಗರು ಫುಲ್ ಫಿದಾ

    ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್(Trinamool Congress) ಸಂಸದೆ ಮಹುವಾ ಮೊಯಿತ್ರಾ (MP Mahua Moitra) ಅವರು ಕೃಷ್ಣಾನಗರ ಎಂಪಿ ಕಪ್ ಟೂರ್ನಿಯಲ್ಲಿ(Krishnanagar MP Cup Tournament) ಸೀರೆಯಲ್ಲೇ ಫುಟ್‍ಬಾಲ್ (Foot Ball) ಆಟ ಆಡಿದ್ದು, ಇದೀಗ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಈ ಫೋಟೋವನ್ನು ಮಹುವಾ ಮೊಯಿತ್ರಾ ಅವರೇ ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಕೆಂಪು-ಕಿತ್ತಳೆ ಬಣ್ಣದ ಸೀರೆಯನ್ನುಟ್ಟು, ಕಾಲಿಗೆ ಸ್ಪೋರ್ಟ್ಸ್ ಶೂ ತೊಟ್ಟು, ಕಣ್ಣಿಗೆ ಸನ್‍ಗ್ಲಾಸ್ ಧರಿಸಿಕೊಂಡು, ಫುಟ್‌ಬಾಲ್ ಆಡುತ್ತಿರುವುದನ್ನು ಫೋಟೋದಲ್ಲಿ ಕಾಣಬಹುದಾಗಿದೆ. ಅಲ್ಲದೆ ಮತ್ತೊಂದು ಫೋಟೋದಲ್ಲಿ ಗೋಲ್ ಕೀಪರ್(Goal Keeper) ಆಗಿ ನಿಂತಿರುವುದನ್ನು ಕೂಡ ನೋಡಬಹುದಾಗಿದೆ. ಇದನ್ನೂ ಓದಿ: ಮದರಸಾಗಳನ್ನು ಧ್ವಂಸಗೊಳಿಸುವಂತೆ ಕರೆ ನೀಡಿದ್ದ ಯತಿ ನರಸಿಂಹಾನಂದ ವಿರುದ್ಧ FIR

    ಫೋಟೋ ಜೊತೆಗೆ ಕೃಷ್ಣನಗರ ಎಂಪಿ ಕಪ್ ಟೂರ್ನಮೆಂಟ್ 2022 ರ ಫೈನಲ್‍ನ ಮೋಜಿನ ಕ್ಷಣಗಳು ಮತ್ತು ನಾನು ಸೀರೆಯಲ್ಲಿ ಆಟ ಆಡಿದ್ದೇನೆ ಎಂದು ಕ್ಯಾಪ್ಷನ್‌ನಲ್ಲಿ ಬರೆದುಕೊಂಡಿದ್ದಾರೆ. ಒಟ್ಟಾರೆ ಸಂಸದೆ ಸೀರೆ ಉಟ್ಟುಕೊಂಡು ಆಟವಾಡುತ್ತಿರುವುದನ್ನು ನೋಡಿ ನೆಟ್ಟಿಗರು ಫುಲ್ ಫಿದಾ ಆಗಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರಷ್ಯಾದಿಂದ ಡಿಸ್ಕೌಂಟ್‌ ಬೆಲೆಯಲ್ಲಿ ತೈಲ – 35 ಸಾವಿರ ಕೋಟಿ ಗಳಿಸಿದ ಭಾರತ

    Live Tv
    [brid partner=56869869 player=32851 video=960834 autoplay=true]

  • ದೀದಿ ವಿರುದ್ಧ ಬಿಜೆಪಿ ಪ್ರತಿಭಟನೆ – ಪೊಲೀಸರಿಂದ ಜಲಫಿರಂಗಿ ಅಸ್ತ್ರ ಬಳಕೆ

    ದೀದಿ ವಿರುದ್ಧ ಬಿಜೆಪಿ ಪ್ರತಿಭಟನೆ – ಪೊಲೀಸರಿಂದ ಜಲಫಿರಂಗಿ ಅಸ್ತ್ರ ಬಳಕೆ

    ಕೋಲ್ಕತ್ತಾ: ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ಬಿಜೆಪಿಯಿಂದ(BJP) ಇಂದು ಬೃಹತ್ ಪ್ರತಿಭಟನೆ(Protest) ನಡೆಯಿತು. ಆದರೆ ಸರ್ಕಾರ ಈ ಪ್ರತಿಭಟನೆಗೆ ಅವಕಾಶ ನೀಡಿರಲಿಲ್ಲ, ಪರಿಣಾಮ ಇಂದು ಕೋಲ್ಕತ್ತಾದಲ್ಲಿ ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ದೊಡ್ಡ ಸಂಘರ್ಷ ನಡೆಯಿತು.

    ಕೋಲ್ಕತ್ತಾ(Kolkata) ನಗರದಲ್ಲಿ ಟಿಎಂಸಿ(TMC) ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡುತ್ತಿರುವ ಬಿಜೆಪಿ ಇಂದು ನಬಣ್ಣ ಚಲೋ ಹೆಸರಿನಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಭಾಗಗಳಿಂದ ಕಾರ್ಯಕರ್ತರಿಗೆ ಬುಲಾವ್ ನೀಡಲಾಗಿತ್ತು. ಬಸ್, ರೈಲು, ಖಾಸಗಿ ವಾಹನಗಳ ಮೂಲಕ ಕೋಲ್ಕತ್ತಾ ನಗರವನ್ನು ಪ್ರವೇಶ ಮಾಡಲು ಪ್ರಯತ್ನಿಸಿದರು. ಆದರೆ ಪ್ರತಿಭಟನೆಗೆ ಸರ್ಕಾರ ಅನುಮತಿ ನೀಡದ ಹಿನ್ನಲೆಯಲ್ಲಿ ಪೊಲೀಸರು ಕಾರ್ಯಕರ್ತರ ಪ್ರವೇಶ ನಿರ್ಬಂಧಿಸಿದರು. ಆದರೂ ಬಿಜೆಪಿ ಧ್ವಜ ಹಿಡಿದು ಕಾರ್ಯಕರ್ತರು ನುಗ್ಗಿ ಬಂದಿದ್ದಾರೆ. ಈ ವೇಳೆ ಕಾರ್ಯಕರ್ತರನ್ನು ಚೆದುರಿಸಲು ಪೊಲೀಸರ ಲಾಠಿ ಜಾರ್ಜ್ ನಡೆದಿದೆ. ಅಷ್ಟೇ ಅಲ್ಲದೇ ಪರಿಸ್ಥಿತಿ ನಿಯಂತ್ರಣಕ್ಕೆ ಜಲಫಿರಂಗಿ ಅಸ್ತ್ರವನ್ನು ಉಪಯೋಗಿಸಲಾಯಿತು.

    ಕೋಲ್ಕತ್ತಾಕ್ಕೆ ಆಗಮಿಸಿದ್ದ ಬಿಜೆಪಿ ಕಾರ್ಯಕರ್ತರನ್ನು ಪನಾಗಢ್, ದುರ್ಗಾಪುರ್, ರಾಣಿಗಂಜ್ ರೈಲ್ವೆ ನಿಲ್ದಾಣ ಸೇರಿದಂತೆ ಬೇರೆ ನಿಲ್ದಾಣಗಳಲ್ಲಿ ಬಂಧಿಸಲಾಯಿತು. ಪೊಲೀಸರು ಕೋಲ್ಕತ್ತಾ ರೈಲ್ವೆ ನಿಲ್ದಾಣದಲ್ಲಿ ಬ್ಯಾರಿಕೇಡ್ ಹಾಕಿ ಪ್ರತಿಭಟನಾಕಾರರನ್ನು ತಡೆ ಹಿಡಿದರು. ರಾಣಿಗಂಜ್ ರೈಲ್ವೆ ನಿಲ್ದಾಣದಲ್ಲಿ ಕಾರ್ಯಕರ್ತರನ್ನು ತಡೆದ ವೇಳೆ ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆಯಿತು. ದುರ್ಗಾಪುರ್ ರೈಲ್ವೆ ನಿಲ್ದಾಣದಲ್ಲಿ ಸುಮಾರು 20 ಮಂದಿ ಬಿಜೆಪಿ ಕಾರ್ಯಕರ್ತರನ್ನು ತಡೆದು ನಿಲ್ಲಿಸಲಾಯಿತು. ಈ ವೇಳೆ ಪೊಲೀಸರು, ಬಿಜೆಪಿ ಕಾರ್ಯಕರ್ತರ ನಡುವೆ ಸಂಘರ್ಷ ಏರ್ಪಟ್ಟಿತ್ತು. ಇದನ್ನೂ ಓದಿ: ಪಬ್ಲಿಕ್‌ ಟಿವಿ ಇಂಪ್ಯಾಕ್ಟ್‌ – ನಲಪಾಡ್‌ ಅಕಾಡೆಮಿಗೆ ಜೆಸಿಬಿ ಗುನ್ನಾ!

    POLICE JEEP

    ಇದೇ ಸಂದರ್ಭದಲ್ಲಿ ಬಿಜೆಪಿ ಸಂಸದ ಲಾಕೆಟ್ ಚಟರ್ಜಿ, ಪಕ್ಷದ ನಾಯಕ ರಾಹುಲ್ ಸಿನ್ಹಾ ಸೇರಿದಂತೆ ಹಲವು ನಾಯಕರನ್ನು ಪೊಲೀಸರು ಬಂಧಿಸಿ ವಶಕ್ಕೆ ಪಡೆದಿದ್ದಾರೆ. ಒಟ್ಟಿನಲ್ಲಿ ಟಿಎಂಸಿ ವಿರುದ್ಧ ಬಿಜೆಪಿ ಭ್ರಷ್ಟಾಚಾರದ ಅಸ್ತ್ರ ಪ್ರಯೋಗಿಸಿದರೇ ಇತ್ತ ದೀದಿ ಮಾತ್ರ ಪ್ರತಿಭಟನೆಗೆ ಅವಕಾಶ ನೀಡಿದೇ ಹತ್ತಿಕ್ಕುವ ಪ್ರಯತ್ನ ಮಾಡಿದ್ದಾರೆ. ಇದನ್ನೂ ಓದಿ: ಕರ್ನಾಟಕವನ್ನು ಹಿಂದಿಕ್ಕಿ 1.54 ಲಕ್ಷ ಕೋಟಿ ಹೂಡಿಕೆಯ ಸೆಮಿಕಂಡಕ್ಟರ್‌ ಘಟಕ ತನ್ನದಾಗಿಸಿಕೊಂಡ ಗುಜರಾತ್‌

    Live Tv
    [brid partner=56869869 player=32851 video=960834 autoplay=true]

  • ಗೇಮಿಂಗ್ ಆ್ಯಪ್ ಸ್ಕ್ಯಾಮ್- ಉದ್ಯಮಿ ಮನೆಯಿಂದ 12 ಕೋಟಿ ನಗದು ವಶ

    ಗೇಮಿಂಗ್ ಆ್ಯಪ್ ಸ್ಕ್ಯಾಮ್- ಉದ್ಯಮಿ ಮನೆಯಿಂದ 12 ಕೋಟಿ ನಗದು ವಶ

    ಕೋಲ್ಕತ್ತಾ: ಮೊಬೈಲ್ ಗೇಮಿಂಗ್ ಆ್ಯಪ್ ಮೂಲಕ ವಂಚನೆ ನಡೆಸಿರುವ ಆರೋಪದ ಮೇಲೆ ಜಾರಿ ನಿರ್ದೇಶನಾಲಯ(ED) ಕೋಲ್ಕತ್ತಾ(kolkata)ದ ಉದ್ಯಮಿಯೊಬ್ಬರಿಗೆ ಸಂಬಂಧಪಟ್ಟ 6 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿತು. ಈ ವೇಳೆ 12 ಕೋಟಿ ರೂ.ಗೂ ಅಧಿಕ ಹಣವನ್ನು ವಶಪಡಿಸಿಕೊಂಡಿದೆ.

    ಇಡಿ ಅಧಿಕಾರಿಗಳ ತಂಡ ಬ್ಯಾಂಕ್ ಅಧಿಕಾರಿಗಳೊಂದಿಗೆ ಶನಿವಾರ ಕೋಲ್ಕತ್ತಾದ ಗಾರ್ಡನ್ ರೀಚ್ ಪ್ರದೇಶದಲ್ಲಿರುವ ಉದ್ಯಮಿ ಅಮೀರ್ ಖಾನ್ ಅವರ ನಿವಾಸದ ಮೇಲೆ ದಾಳಿ ನಡೆಸಿದೆ. ಈವರೆಗೆ ಉದ್ಯಮಿಯ ಮನೆಯಿಂದ 12 ಕೋಟಿ ರೂ.ಗೂ ಅಧಿಕ ಹಣವನ್ನು ವಶಪಡಿಸಿಕೊಂಡಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: 6 ತಿಂಗಳು ರಜೆ ಹಾಕಿ- ಡೀನ್ ವಿರುದ್ಧ ಸಚಿವ ಸೋಮಣ್ಣ ಗರಂ

    ಭಾರೀ ಮೊತ್ತದ ಹಣವನ್ನು ಎಣಿಕೆ ಮಾಡಲು ಯಂತ್ರಗಳನ್ನು ತರಿಸಲಾಗಿದೆ. ಹಣವನ್ನು ಸಾಗಿಸಲು ಉದ್ಯಮಿಯ ಮನೆಗೆ ಟ್ರಕ್‌ಗಳನ್ನು ತರಲಾಗಿದೆ. ಇಡಿ ದಾಳಿಯ ಹಿನ್ನೆಲೆ ಕೇಂದ್ರದ ಪಡೆಗಳಿಂದ ಆ ಪ್ರದೇಶದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಇದನ್ನೂ ಓದಿ: ಮಳೆ ಅವಾಂತರ: ಭಾರತ-ನ್ಯೂಜಿಲೆಂಡ್ ಟೆಸ್ಟ್ ಇನ್ನಿಂಗ್ಸ್ ರದ್ದು, ನಾಳೆ ಡ್ರಾ ಸಾಧ್ಯತೆ

    ವರದಿಗಳ ಪ್ರಕಾರ ಇ-ನಗ್ಗೆಟ್ಸ್(E-Nuggets) ಎಂಬ ಮೊಬೈಲ್ ಗೇಮಿಂಗ್ ಆ್ಯಪ್‌ನ ಬಳಕೆದಾರರಿಗೆ ವಂಚಿಸಿರುವ ಆರೋಪದ ಮೇಲೆ ಆರೋಪಿ ಅಮೀರ್ ಖಾನ್ ಮತ್ತು ಇತರರ ವಿರುದ್ಧ ಫೆಡರಲ್ ಬ್ಯಾಂಕ್ ಅಧಿಕಾರಿಗಳು ದೂರು ನೀಡಿದ್ದರು. ಈ ದೂರಿನ ಮೇರೆಗೆ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ) ಅಡಿಯಲ್ಲಿ ಉದ್ಯಮಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಹಣದ ವಿಚಾರಕ್ಕೆ ಟಿಎಂಸಿ ಬೆಂಬಲಿಗನನ್ನು ಹಿಗ್ಗಾಮುಗ್ಗಾ ಥಳಿಸಿದ ಬಿಜೆಪಿ ಮುಖಂಡ

    ಹಣದ ವಿಚಾರಕ್ಕೆ ಟಿಎಂಸಿ ಬೆಂಬಲಿಗನನ್ನು ಹಿಗ್ಗಾಮುಗ್ಗಾ ಥಳಿಸಿದ ಬಿಜೆಪಿ ಮುಖಂಡ

    ಕೋಲ್ಕತ್ತಾ: ಹಣ ನೀಡದೇ ವಂಚಿಸಿದ್ದಕ್ಕೆ ಟಿಎಂಸಿ ಕಾರ್ಯಕರ್ತನನ್ನು ಬಿಜೆಪಿ ಯುವ ಘಟಕದ ಮುಖಂಡರೊಬ್ಬರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.

    ಶನಿವಾರ ಕೋಲ್ಕತ್ತಾದ ಐಸಿಸಿಆರ್ ಸಭಾಂಗಣದಲ್ಲಿ ‘ಮೋದಿ@20: ಡ್ರೀಮ್ಸ್ ಮೀಟ್ ಡೆಲಿವರಿ’ ಪುಸ್ತಕ ಕುರಿತಂತೆ ಚರ್ಚೆ ನಡೆಸಲು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಮಾಜಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರ ಭಾಷಣ ಮುಗಿಯುತ್ತಿದ್ದಂತೆ ಬಿಜೆಪಿ ಯುವ ಮುಖಂಡ ಅಭಿಜಿತ್ ನಹಾ ಅವರು, ರಾಯ್ ಚೌಧರಿ ಎಂಬವರನ್ನು ಸಭಾಂಗಣದ ಹೊರಗೆ ಎಳೆದುಕೊಂಡು ಹೋಗಿ ಥಳಿಸಿದ್ದಾರೆ. ಈ ವೀಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ತೃಣಮೂಲ ಕಾಂಗ್ರೆಸ್ ಬೆಂಬಲಿಗನಾಗಿರುವ ರಾಯ್ ಚೌಧರಿ ತನ್ನ ಬಳಿ ಹಣ ಪಡೆದು ವಂಚಿಸಿದ್ದಾನೆ. ಅಲ್ಲದೇ ತನ್ನ ಪಕ್ಷದಲ್ಲಿ ಇಲ್ಲದೇ ಇರುವ ಇತರರ ಬಳಿಯೂ ಹಣ ಪಡೆದು ಹಿಂತಿರುಗಿಸಿಲ್ಲ. ಐಪಿಎಸ್ ಅಧಿಕಾರಿಗಳ ಹೆಸರಿನಲ್ಲಿ ಹಣ ಪಡೆದು ಹೀಗೆ ಹಲವರಿಗೆ ಮೋಸ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಡ್ಯೂಟಿ ಬಿಟ್ಟು ಸಮವಸ್ತ್ರದಲ್ಲೇ ಬ್ಯೂಟಿ ಕಡೆ ವಾಲಿ ಕೆಲಸ ಕಳೆದುಕೊಂಡ ಇನ್ಸ್‌ಪೆಕ್ಟರ್!

    ರಾಯ್ ಚೌಧರಿ ಅವರು ವೃತ್ತಿಯಲ್ಲಿ ವಕೀಲರಾಗಿದ್ದು, ಬಿಜೆಪಿ ನಾಯಕ ಸಮಿಕ್ ಭಟ್ಟಾಚಾರ್ಯ ಅವರನ್ನು ಭೇಟಿಯಾಗಲು ಕಾರ್ಯಕ್ರಮಕ್ಕೆ ಬಂದಿದ್ದ ವೇಳೆ ಈ ವೇಳೆ ಘಟನೆ ಜರುಗಿದೆ. ಅಲ್ಲದೇ ಚೌಧರಿ ಅವರ ಪರಿಚಯವಿರುವುದಾಗಿ ಸಮಿಕ್ ಭಟ್ಟಾಚಾರ್ಯರು ಸಹ ಒಪ್ಪಿಕೊಂಡರು. ಇದನ್ನೂ ಓದಿ: ಮಲಗಿದ್ದ ತಾಯಿಯ ಪಕ್ಕದಿಂದ ಮಗು ಕದ್ದು ಓಡಿದ – ಖತರ್ನಾಕ್ ಕಳ್ಳನ ವೀಡಿಯೋ ವೈರಲ್

    Live Tv
    [brid partner=56869869 player=32851 video=960834 autoplay=true]

  • ಇಂಡಿಗೋ ವಿಮಾನದಲ್ಲಿ ಹೊಗೆ ಎಚ್ಚರಿಕೆ – ಕೋಲ್ಕತ್ತಾದಲ್ಲಿ ಲ್ಯಾಂಡಿಂಗ್

    ಇಂಡಿಗೋ ವಿಮಾನದಲ್ಲಿ ಹೊಗೆ ಎಚ್ಚರಿಕೆ – ಕೋಲ್ಕತ್ತಾದಲ್ಲಿ ಲ್ಯಾಂಡಿಂಗ್

    ಕೋಲ್ಕತ್ತಾ: ದೆಹಲಿಯಿಂದ ಕೋಲ್ಕತ್ತಾಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಹೊಗೆ ಉಂಟಾಗಿರುವಂತೆ ಎಚ್ಚರಿಕೆ ಬಾರಿಸಿಕೊಂಡಿದ್ದು, ವಿಮಾನವನ್ನು ಸೂಕ್ತ ಮುನ್ನೆಚ್ಚರಿಕಾ ಕ್ರಮವನ್ನು ವಹಿಸಿಕೊಂಡು ಕೋಲ್ಕತ್ತಾದಲ್ಲಿ ಇಳಿಸಲಾಗಿದೆ. ಆದರೆ ವಿಮಾನದಲ್ಲಿ ಹೊಗೆ ಅಥವಾ ಬೆಂಕಿ ಉಂಟಾಗಿರಲಿಲ್ಲ, ಅದು ಕೇವಲ ತಾಂತ್ರಿಕ ದೋಷದಿಂದ ಎಚ್ಚರಿಕೆಯ ಸೂಚನೆ ನೀಡಲಾಗಿದೆ ಎನ್ನಲಾಗಿದೆ.

    ಭಾನುವಾರ ದೆಹಲಿಯಿಂದ ಹೊರಟಿದ್ದ ವಿಮಾನ 6ಇ-2513(ವಿಟಿ-ಐಜೆಎ) ನಲ್ಲಿ ಸರಕುಗಳನ್ನು ಇಡಲಾಗಿದ್ದ ಪ್ರದೇಶದಲ್ಲಿ ಹೊಗೆ ಉಂಟಾಗಿರುವಂತೆ ಎಚ್ಚರಿಕೆ ಬಾರಿಸಿಕೊಂಡಿತ್ತು. ಆದರೆ ಅದು ತಾಂತ್ರಿಕ ದೋಷದಿಂದ ಹೊಗೆ ಎಚ್ಚರಿಕೆ ನೀಡಿದ್ದು, ಘಟನೆಯ ಬಗ್ಗೆ ವಿಮಾನಯಾನ ನಿಯಂತ್ರಕ ಡಿಜಿಸಿಎ ತನಿಖೆ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿಂದು 720 ಹೊಸ ಕೋವಿಡ್ ಪ್ರಕರಣ ದೃಢ – 2 ಸಾವು

    ವಿಮಾನ ಕೋಲ್ಕತ್ತಾ ನಿಲ್ದಾಣವನ್ನು ತಲುಪಿದ ತಕ್ಷಣ ತಪಾಸಣೆ ನಡೆಸಲಾಯಿತು. ಬಳಿಕ ಅದು ನಕಲಿ ಎಚ್ಚರಿಕೆ ಎಂದು ದೃಢಪಡಿಸಲಾಗಿದೆ ಎಂದು ಇಂಡಿಗೋ ತಿಳಿಸಿದೆ. ಇದನ್ನೂ ಓದಿ: ಅಬಕಾರಿ ನೀತಿ ಹಗರಣ: ಮನೀಶ್ ಸಿಸೋಡಿಯಾ ಸೇರಿ 8 ಆರೋಪಿಗಳ ವಿರುದ್ಧ ಸಿಬಿಐ ಲುಕ್‌ಔಟ್ ನೋಟಿಸ್

    ಕಳೆದ ಕೆಲವು ತಿಂಗಳುಗಳಲ್ಲಿ ದೇಶದ ಹಲವು ವಿಮಾನಯಾನ ಸಂಸ್ಥೆಗಳು ತಾಂತ್ರಿಕ ಸಮಸ್ಯೆಗಳನ್ನು ಎದುರಿಸಿವೆ. ಇಂಡಿಗೋ ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾಗಿದ್ದು, ಜುಲೈನಲ್ಲಿ ಶೇ.58.8 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ.

    Live Tv
    [brid partner=56869869 player=32851 video=960834 autoplay=true]