Tag: Kolar

  • ಕೋಲಾರ ನಗರದ 19 ಉದ್ಯಾನವನಗಳ ಅಭಿವೃದ್ಧಿಗೆ ಮುಂದಾದ ನಗರಸಭೆ

    ಕೋಲಾರ ನಗರದ 19 ಉದ್ಯಾನವನಗಳ ಅಭಿವೃದ್ಧಿಗೆ ಮುಂದಾದ ನಗರಸಭೆ

    – ಅಮೃತ್ ಸಿಟಿ ಯೋಜನೆಯ 8 ಕೋಟಿ ಹಣ ಬಳಕೆ ಮೂಲಕ ಕಾಯಕಲ್ಪ

    ಕೋಲಾರ: ಮಕ್ಕಳಿಗೆ ಆಟವಾಡೋದಕ್ಕೆ, ಹಿರಿಯರು ವಿಶ್ರಾಂತಿ ಪಡೆಯೋದಕ್ಕೆ, ಜನರು ಬೆಳಗ್ಗೆ ಸಂಜೆ ವಾಯು ವಿಹಾರಕ್ಕೆ ಉದ್ಯಾನವನಗಳು (Park) ಅವಶ್ಯಕ. ಹಳ್ಳಿಯಲ್ಲಾದ್ರೆ ಮರ, ಗಿಡಗಳು ಸಿಗುತ್ತವೆ. ಆದರೆ ನಗರ ಪ್ರದೇಶದಲ್ಲಿ ವಾಯು ವಿಹಾರಕ್ಕೆ ಸೂಕ್ತ ಜಾಗ ಉದ್ಯಾನವನಗಳು. ಇಂತಹ ಉದ್ಯಾನವನಗಳ ಅಭಿವೃದ್ದಿಗೆ ಕೋಲಾರ ನಗರಸಭೆ (Kolar City Municipal Council) ಮಾಸ್ಟರ್ ಪ್ಲಾನ್ ರೂಪಿಸಿದೆ.

    ಹೌದು, ನಗರವನ್ನ ಸುತ್ತಿ ಬರುವ ಜನರು ಸುಸ್ತಾಗಿ ಕೊನೆ ಪಕ್ಷ ಒಂದು ಕ್ಷಣ ವಿಶ್ರಮಿಸೋಣ ಅಂದರೆ ನಗರ ಪ್ರದೇಶಗಳಲ್ಲಿ ಸಿಗೋದೇ ಪಾರ್ಕ್‌ಗಳು. ಇನ್ನೂ ಸಾಕಷ್ಟು ಜನರು ಬೆಳಗ್ಗೆ ಸಂಜೆ ವಾಯು ವಿಹಾರ ಮಾಡೋದು ಸಹ ಇದೆ ಪಾರ್ಕ್‌ಗಳಲ್ಲಿ. ಮತ್ತೆ ಕೆಲವು ಉದ್ಯಾನವನಗಳಲ್ಲಿ ಇತ್ತೀಚೆಗೆ ತೆರೆದ ವ್ಯಾಯಾಮ, ಜಿಮ್ ಸಹ ಮಾಡಲಾಗಿದೆ. ಆದರೆ ಈ ಪಾರ್ಕ್‌ಗಳು ಸರಿಯಾದ ನಿರ್ವಹಣೆ ಇಲ್ಲದೆ ಪಾಳು ಬಿದ್ದಿವೆ. ಪಾರ್ಕ್‌ಗಳು ಕುಡುಕರ ಅಡ್ಡೆಗಳಾಗಿ, ನಿರ್ವಹಣೆ ಇಲ್ಲದೆ ಅಳವಿನಂಚಿಗೆ ತಲುಪಿವೆ. ಇದನ್ನ ಮನಗಂಡ ಡಿಸಿ ಎಂಆರ್ ರವಿ ಅವರು ನಗರಸಭೆ ಮೂಲಕ ಅಭಿವೃದ್ಧಿಗೆ ಮುಂದಾಗಿದ್ದಾರೆ. ಕೋಲಾರ ನಗರಸಭೆ ಸರ್ವಜ್ಞ ಪಾರ್ಕ್, ಅಂಬೇಡ್ಕರ್ ಪಾರ್ಕ್, ಕುವೆಂಪು ಪಾರ್ಕ್ ಸೇರಿದಂತೆ ನಗರದಲ್ಲಿರುವ 19 ಉದ್ಯಾನವನಗಳಿಗೆ ಕಾಯಕಲ್ಪ ನೀಡಲು ಮಾಸ್ಟರ್ ಪ್ಲಾನ್‌ವೊಂದು ತಯಾರಾಗಿದೆ. ಇದನ್ನೂ ಓದಿ: ಕರ್ತವ್ಯನಿರತ ಯೋಧನಿಗೆ ವಿದ್ಯುತ್ ಶಾಕ್ – ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲೇ ಸಾವು

    ಸ್ವಚ್ಛತಾ ಹಿ ಸೇವಾ ಆಂದೋಲನದ ಭಾಗವಾಗಿ ಅಕ್ಟೋಬರ್ 2ರವರೆಗೆ ನಡೆಯಲಿರುವ ಈ ಅಭಿಯಾನದಲ್ಲಿ, ಪ್ರತಿ ಭಾನುವಾರ ನಗರದ ಎಲ್ಲಾ ಉದ್ಯಾನವನಗಳನ್ನು ಸಾರ್ವಜನಿಕರ ಸಹಭಾಗಿತ್ವದಲ್ಲಿ ಸ್ವಚ್ಛಗೊಳಿಸಲು ನಿರ್ಧರಿಸಲಾಗಿದೆ. ಅದರಂತೆ 85 ವರ್ಷಗಳಷ್ಟು ಹಳೆಯದಾದ ಸರ್ವಜ್ಞ ಪಾರ್ಕ್‌ನಲ್ಲಿರುವ ಬ್ಯಾಂಡ್ ಸ್ಟಾಂಡ್ ಮತ್ತು ರೇಡಿಯೋ ಕಿಯೋಸ್ಕ್ ಅನ್ನು ದುರಸ್ತಿಪಡಿಸಿ ಜನರ ಅನುಕೂಲಕ್ಕೆ ಅನುವು ಮಾಡಿಕೊಡಲು ಈಗಾಗಲೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದನ್ನೂ ಓದಿ: ನೇಪಾಳದಲ್ಲಿ ಅಲ್ಲೋಲ ಕಲ್ಲೋಲ – ಹಣಕಾಸು ಸಚಿವನನ್ನ ಬೀದಿಯಲ್ಲಿ ಅಟ್ಟಾಡಿಸಿ ಹೊಡೆದ ಉದ್ರಿಕ್ತರು

    ಇನ್ನು ಕೋಲಾರ ಜಿಲ್ಲೆಯಲ್ಲಿ ಸುಮಾರು 56 ಪಾರ್ಕ್ಗಳಿವೆ. ಈ ಪೈಕಿ 19 ಕೋಲಾರ ನಗರದಲ್ಲೆ ಇವೆ. ಇದರಲ್ಲಿ ಉತ್ತಮ ಸ್ಥಿತಿಯಲ್ಲಿರುವ ಪಾರ್ಕ್‌ಗಳೇ ಕಡಿಮೆ. ಜಿಲ್ಲೆಯ ಬಹುತೇಕ ಪಾರ್ಕ್‌ಗಳು ನಿರ್ವಹಣೆ ಇಲ್ಲದೆ ಸೊರಗಿ ತನ್ನ ಸ್ವರೂಪವನ್ನೇ ಕಳೆದುಕೊಂಡಿವೆ. ಹಾಗಾಗಿ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ 15ನೇ ಹಣಕಾಸು ಯೋಜನೆಯಡಿ ಅಮೃತ್ ನಗರೋತ್ಥಾನ ಕಾರ್ಯಕ್ರಮದಡಿಯಲ್ಲಿ ಉದ್ಯಾನಗಳ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಇದನ್ನೂ ಓದಿ: ಕರ್ನಾಟಕದಲ್ಲಿ ಮುಲ್ಲಾಗಳ ಸರ್ಕಾರ ಅನ್ನೋದು ಸಾಬೀತಾಗಿದೆ: ಅಶೋಕ್

    ನಗರದ ಸಮಾನ ಮನಸ್ಕರು ನಾಗರಿಕ ವೇದಿಕೆ ರಚಿಸಿಕೊಂಡು ಉದ್ಯಾನಗಳ ನಿರ್ವಹಣೆ ಮತ್ತು ಸ್ವಚ್ಛತಾ ಪಾಲನೆಗೆ ಅಮೃತ್ ಯೋಜನೆಯಡಿ ಉದ್ಯಾನಗಳಿಗೆ ಕಾಯಕಲ್ಪ ನೀಡುವುದು ಇದರ ಉದ್ದೇಶವಾಗಿದೆ. ಈಗಾಗಲೆ 8 ಕೋಟಿ ರೂ. ಅನುದಾನ ಮೀಸಲಿಟ್ಟಿರುವ ನಗರಸಭೆ ಮುಂದಿನ ಅಕ್ಟೋಬರ್ 2ರ ವೇಳೆ ಎಲ್ಲಾ ಪಾರ್ಕ್‌ಗಳನ್ನು ಸುಂದರೀಕರಣ ಮಾಡೋದು ಇದರ ಉದ್ದೇಶವಾಗಿದೆ. ಇದನ್ನೂ ಓದಿ: ನೇಪಾಳದ ಏರ್‌ಪೋರ್ಟ್ ಬಳಿ ಹೊಗೆ ಕಂಡು ದೆಹಲಿಗೆ ವಾಪಸಾದ ವಿಮಾನ – ಏರ್‌ ಇಂಡಿಯಾ, ಇಂಡಿಗೋ ಹಾರಾಟ ರದ್ದು

    ಅದರಂತೆ ಕುಳಿತುಕೊಳ್ಳಲು ಕಲ್ಲಿನ ಬೆಂಚುಗಳು, ನಡಿಗೆ ಪಥ, ಕಾರಂಜಿಗಳು ಹಾಗೂ ವಿದ್ಯುತ್ ದೀಪಗಳನ್ನು ಸರಿಪಡಿಸಿ ಸಾರ್ವಜನಿಕರ ಅನುಕೂಲಕ್ಕೆ ತಕ್ಕ ಹಾಗೆ ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸುವುದು ಇವರ ಉದ್ದೇಶ. ಅದರಂತೆ ಸ್ವಚ್ಛತಾ ಹಿ ಸೇವಾ ಅಭಿಯಾನದ ನೆನಪಿಗಾಗಿ ಎಲ್ಲಾ ಉದ್ಯಾನಗಳಲ್ಲಿ ಸಸಿಗಳನ್ನು ನೆಟ್ಟು, ಮಕ್ಕಳಿಗೆ, ವೃದ್ಧರಿಗೆ, ಸಮಾನ ಮನಸ್ಕರಿಗೆ ಉದ್ಯಾನವನಗಳನ್ನ ಹಸಿರಾಗಿಸಿ ಸುಂದರ ಮಾಡಲು ನಿರ್ಧಾರ ಮಾಡಲಾಗಿದೆ. ಇದು ಕೋಲಾರ ನಾಗರೀಕರು ಸೇರಿದಂತೆ ನಿತ್ಯ ಪಾರ್ಕ್‌ನಲ್ಲಿ ವಾಯುವಿಹಾರ ಮಾಡುವವರಿಗೆ ಖುಷಿಯ ವಿಚಾರವಾಗಿದೆ. ಇದನ್ನೂ ಓದಿ: ಪುತ್ರನಿಗೆ ಶಸ್ತ್ರಚಿಕಿತ್ಸೆ – ಶಾಸಕ ವಿನಯ್‌ಗೆ 2 ದಿನಗಳ ಮಧ್ಯಂತರ ಜಾಮೀನು ಮಂಜೂರು

    ಒಟ್ಟಿನಲ್ಲಿ ಮನಸ್ಸಿಗೆ ನೆಮ್ಮದಿ ಸಿಗಲಿ, ದೇಹಕ್ಕೆ ಒಂದಷ್ಟು ಉಲ್ಲಾಸ ಉತ್ಸಾಹ ಸಿಗಲಿ ಎಂದು ಜನರು ಉದ್ಯಾನವನಗಳಿಗೆ ಬರುತ್ತಾರೆ. ಆದರೆ ಪಾರ್ಕ್‌ಗಳ ಸರಿಯಾದ ನಿರ್ವಹಣೆ ಇಲ್ಲದೆ ಒಂದಷ್ಟು ನೆಮ್ಮದಿ ಇಲ್ಲದೆ ಇರುವುದನ್ನ ಮನಗಂಡ ಅಧಿಕಾರಿಗಳು ಉದ್ಯಾನವಗಳ ಅಭಿವೃದ್ಧಿಗೆ ಒತ್ತು ನೀಡಿರುವುದು ಖುಷಿಯ ವಿಚಾರವೇ ಸರಿ. ಇದನ್ನೂ ಓದಿ: ಈ ಜನ್ಮದಲ್ಲೇ ಮುಸ್ಲಿಂ ಧರ್ಮಕ್ಕೆ ಹೋಗಿಬಿಡಿ, ನಾವೇ ಹಾರ ಹಾಕಿ ಕಳುಹಿಸ್ತೇವೆ: ಶೋಭಾ ಕರಂದ್ಲಾಜೆ

  • Kolar| ದೇವಾಲಯ, ಮನೆ ಕಳವು ಪ್ರಕರಣ – ಇಬ್ಬರು ಆರೋಪಿಗಳ ಬಂಧನ

    Kolar| ದೇವಾಲಯ, ಮನೆ ಕಳವು ಪ್ರಕರಣ – ಇಬ್ಬರು ಆರೋಪಿಗಳ ಬಂಧನ

    – 3.78 ಲಕ್ಷ ರೂ. ಮೌಲ್ಯದ ಚಿನ್ನ, 380 ಗ್ರಾಂ ಬೆಳ್ಳಿ ಆಭರಣಗಳು ವಶಕ್ಕೆ

    ಕೋಲಾರ: ದೇವಾಲಯ, ಮನೆ ಕಳವು (Theft) ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ಕೋಲಾರದ (Kolar) ಕಾಮಸಮುದ್ರ ಪೊಲೀಸರು (Kamasamudra Police) ಬಂಧಿಸಿದ್ದಾರೆ.

    ಆಂದ್ರಪ್ರದೇಶದ ಚಿತ್ತೂರು ಜಿಲ್ಲೆಯ ನಿಮ್ಮಕಂಪಲ್ಲಿ ಗ್ರಾಮದ ವಾಸಿ ಕೆ.ಚಿನ್ನಸ್ವಾಮಿ (57), ತಮಿಳುನಾಡಿನ ಸೇಲಂ ಜಿಲ್ಲೆಯ ಮೆಟ್ಟೂರು ವಾಸಿ ಮಣಿ ಬಾಬು (55) ಬಂಧಿತ ಆರೋಪಿಗಳು. ಬಂಗಾರಪೇಟೆ ತಾಲೂಕಿನ ಕುಂದರಸನಹಳ್ಳಿ ಗ್ರಾಮದ ಕಾಳಿಕಾಂಭ ದೇವಸ್ಥಾನ, ದೋಣಿಮಡಗು ಗ್ರಾಮದ ಸತೀಶ್‌ರೆಡ್ಡಿ, ಸೀನಪ್ಪ ಕೊಂಗರಹಳ್ಳಿ ಗ್ರಾಮದ ವೆಂಕಟೇಶಪ್ಪ, ಮುನಿಯಮ್ಮ, ಶೇಖ್ ಲಿಯಾಕತ್ ಮತ್ತು ಗೌರಮ್ಮ ಮನೆಗಳಲ್ಲಿ ಕಳ್ಳತನವಾಗಿತ್ತು. ಈ ಸಂಬಂಧ ಕಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿತ್ತು. ಈ ಹಿನ್ನೆಲೆ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಬದುಕಲು ಸಾಧ್ಯವಾಗುತ್ತಿಲ್ಲ, ದಯಮಾಡಿ ನನಗೆ ವಿಷ ಕೊಡಿ: ಜಡ್ಜ್‌ ಮುಂದೆ ದರ್ಶನ್‌ ಮನವಿ

    ಬಂಧಿತರಿಂದ 3.78 ಲಕ್ಷ ರೂ. ಮೌಲ್ಯದ 34 ಗ್ರಾಂ ಚಿನ್ನಾಭರಣ, 380 ಗ್ರಾಂ ಬೆಳ್ಳಿ ಆಭರಣಗಳನ್ನು ಮತ್ತು ಕೃತ್ಯಕ್ಕೆ ಉಪಯೋಗಿಸಿದ ಒಂದು ದ್ವಿಚಕ್ರವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದನ್ನೂ ಓದಿ: ಯಾದಗಿರಿ | ಅಕ್ಕಿ ಅಕ್ರಮ ಮಾರಾಟ ಜಾಲ ಪತ್ತೆ – 1.17 ಕೋಟಿ ಮೌಲ್ಯದ 4,108 ಕ್ವಿಂಟಾಲ್ ಸೀಜ್

  • ಅಮೆರಿಕದಲ್ಲಿ ಭೀಕರ ಅಪಘಾತ – ಕೋಲಾರ ಮೂಲದ ಬಾಡಿ ಬಿಲ್ಡರ್ ದುರ್ಮರಣ

    ಅಮೆರಿಕದಲ್ಲಿ ಭೀಕರ ಅಪಘಾತ – ಕೋಲಾರ ಮೂಲದ ಬಾಡಿ ಬಿಲ್ಡರ್ ದುರ್ಮರಣ

    – ಕನ್ನಡದ ನಟ, ನಟಿಯರಿಗೆ ತರಬೇತಿ ನೀಡಿದ್ದ ಸುರೇಶ್

    ಕೋಲಾರ: ಅಮೆರಿಕದ (America) ಫೂಂಡಾ ಚೆಕ್ಕಾಸ್‌ನಲ್ಲಿ ನಡೆದ ಭೀಕರ ಅಪಘಾತದಲ್ಲಿ (Accident) ಕೋಲಾರದ (Kolar) ಗಾಂಧಿನಗರ ಬಡಾವಣೆಯ ಬಾಡಿ ಬಿಲ್ಡರ್ ಒಬ್ಬರು ಮೃತಪಟ್ಟಿದ್ದಾರೆ.

    ನಗರದ ನಿವಾಸಿ ಸುರೇಶ್ ಬಾಬು (42) ಮೃತ ದುರ್ದೈವಿ. ಇವರು ಗಾಂಧಿನಗರದ ಚಲಪತಿ ಹಾಗೂ ಮುನಿಯಮ್ಮ ದಂಪತಿಯ ಪುತ್ರ. ಸುರೇಶ್, ಮೂರು ದಿನಗಳ ಹಿಂದೆ ಫ್ಲೋರಿಡಾದಿಂದ ಟೆಕ್ಸಾಸ್‍ಗೆ ತೆರಳುವಾಗ ನಡೆದಿದ್ದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಅಫ್ಘಾನಿಸ್ತಾನ ಭೂಕಂಪ – ಸಾವಿನ ಸಂಖ್ಯೆ 800ಕ್ಕೆ ಏರಿಕೆ: 2000ಕ್ಕೂ ಹೆಚ್ಚು ಜನರಿಗೆ ಗಾಯ

    ನಟಿ ಪ್ರೇಮ, ಪ್ರಿಯಾಮಣಿ ಮತ್ತಿತರ ಜೊತೆ ಮಾಡಲಿಂಗ್‌ನಲ್ಲಿ ಪೋಸ್‌ ಕೊಟ್ಟಿದ್ದ ಸುರೇಶ್ ಬಾಬು ಉಪ್ಪಿ 2 ಮತ್ತು ಇತರ ಚಲನಚಿತ್ರಗಳಲ್ಲಿಯೂ ನಟಿಸಿದ್ದರು. ಫಿಜಿಯೋಥೆರಪಿಸ್ಟ್ ಆಗಿ ತಮ್ಮದೇ ಸ್ವಂತ ಉದ್ಯಮ ಆರಂಭಿಸಿದ್ದರು. ಹಲವು ನಟ ನಟಿಯರಿಗೆ ದೈಹಿಕ ತರಬೇತಿಯನ್ನೂ ಸಹ ಅವರು ನೀಡಿದ್ದರು. ಅವರು ದೆಹಲಿ ಮೂಲದ ಯುವತಿಯನ್ನು ಪ್ರೀತಿಸಿ ವಿವಾಹವಾಗಿದ್ದರು.

    ರಾಜ್ಯ ಮಟ್ಟದ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದ ಅವರು, ಕೆಲ ದಿನಗಳ ಹಿಂದೆಯಷ್ಟೇ ಕೋಲಾರಕ್ಕೆ ಆಗಮಿಸಿ ಪತ್ನಿ ಮತ್ತು ಮಕ್ಕಳನ್ನು ಅಮೆರಿಕಕ್ಕೆ ಕರೆದೊಯ್ದಿದ್ದರು.ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಭೂಕಂಪಕ್ಕೆ 800 ಮಂದಿ ಸಾವು – ನೆರವಿಗೆ ನಿಂತ ಭಾರತ; 15 ಟನ್‌ ಆಹಾರ ಸಾಮಗ್ರಿ ರವಾನೆ

  • ಶಾಸಕ ನಾರಾಯಣಸ್ವಾಮಿ ಬಿಪಿಎಲ್ ಕಾರ್ಡ್ ಆಗಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ: ಕೆ.ವೈ ನಂಜೇಗೌಡ

    ಶಾಸಕ ನಾರಾಯಣಸ್ವಾಮಿ ಬಿಪಿಎಲ್ ಕಾರ್ಡ್ ಆಗಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ: ಕೆ.ವೈ ನಂಜೇಗೌಡ

    – ಕೋಲಾರದಲ್ಲಿ ಮುಂದುವರಿದ ಕಾಂಗ್ರೆಸ್ ಶಾಸಕರ ವಾಕ್ಸಮರ

    ಕೋಲಾರ: ಕೋಲಾರದಲ್ಲಿ (Kolar) ಕಳೆದೊಂದು ವಾರದಿಂದ ಕಾಂಗ್ರೆಸ್ ಶಾಸಕರ ವಾಕ್ಸಮರ ಜೋರಾಗಿ ನಡೆಯುತ್ತಿದೆ. ಸ್ವಪಕ್ಷೀಯ ಕಾಂಗ್ರೆಸ್ ಶಾಸಕರು ಒಬ್ಬರನ್ನೊಬ್ಬರು ಕಾಲೆಳೆದುಕೊಳ್ಳುವ ಮೂಲಕ ಜಿಲ್ಲಾ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಲ್ಲವೆಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.

    ಭಾನುವಾರ ಬಂಗಾರಪೇಟೆ ಕಾಂಗ್ರೆಸ್ ಶಾಸಕ ಎಸ್.ಎನ್.ನಾರಾಯಣಸ್ವಾಮಿ (SN Naraynaswamy) ನಾನು ಬಿಪಿಎಲ್ ಕಾರ್ಡ್ ಎಂಎಲ್‌ಎ, ಮಾಲೂರು ಶಾಸಕ ಕೆ.ವೈ.ನಂಜೇಗೌಡ (KY Nanjegowda) ಎಪಿಎಲ್ ಶಾಸಕರೆಂದು ಆರೋಪಿಸಿದ್ದರು. ಅಲ್ಲದೇ ಅವರಿಗೆ ಉಸ್ತುವಾರಿ ಸಚಿವರು ಎರಡೂವರೆ ಸಾವಿರ ಕೋಟಿ ಅನುದಾನ ಕೊಟ್ಟಿದ್ರೆ ಅವರ ಸ್ವಾಮಿನಿಷ್ಠೆ ಇರಲಿ ಎಂದು ಶಾಸಕ ನಂಜೇಗೌಡಗೆ ಟಾಂಗ್ ನೀಡಿದ್ದರು. ಈ ಹಿನ್ನೆಲೆ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಇಂದು ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಟಾಂಗ್ ಕೊಟ್ಟಿದ್ದು, ಬಿಪಿಎಲ್ ಕಾರ್ಡ್ ಆಗಿದ್ದರೆ ನಾನು ರಾಜಕೀಯ ನಿವೃತ್ತಿ ಪಡೆಯುವುದಾಗಿ ಸವಾಲು ಹಾಕಿದ್ದಾರೆ. ಇದನ್ನೂ ಓದಿ: ದಾವಣಗೆರೆ | ಡಿಜೆಗೆ ಅನುಮತಿ ನಮ್ಮ ಹೋರಾಟಕ್ಕೆ ಸಿಕ್ಕ ಫಲ – ರಾಜಕೀಯ ಮುಖಂಡರಿಂದ ಸುಳ್ಳು ಪೋಸ್ಟ್

    ಕೋಲಾರ ಜಿಲ್ಲೆ ಮಾಲೂರು ಹಾಲು ಒಕ್ಕೂಟದಲ್ಲಿ ಮಾತನಾಡಿದ ಅವರು, ನಾರಾಯಣಸ್ವಾಮಿ ಅವರು ದೊಡ್ಡ ಇನ್‌ಕಮ್ ಟಾಕ್ಸ್ ಹೋಲ್ಡರ್ ಆಗಿದ್ದಾರೆ. ಬಿಪಿಎಲ್ ಕಾರ್ಡ್‌ನವರೆಂದು ಇನ್ನೊಮ್ಮೆ ಮಾತನಾಡಬೇಡಿ. ಬಿಪಿಎಲ್ ಕಾರ್ಡ್ ಅಂತ ನೀವು ಡಿಕ್ಲೇರ್ ಮಾಡಿದರೆ ನಾನು ರಾಜಕೀಯ ನಿವೃತ್ತಿ ಪಡೆಯುವೆ. ನಿಮ್ಮ ತಂದೆ ತಾಯಿ ಅವರು ಆಗ ಬಿಪಿಎಲ್ ಕಾರ್ಡ್ ಹೊಂದಿರಬಹುದು ಆದ್ರೆ ನೀನು ಬುದ್ಧಿವಂತ, ಎಪಿಎಲ್ ಆಗಿದ್ದೀಯಾ. ಈಗಲೂ ನೀನು ಬಿಪಿಎಲ್ ಕಾರ್ಡ್ ಎಂದು ಪ್ರೂವ್ ಮಾಡಿದರೆ ನಾನು ರಾಜಕೀಯದಲ್ಲಿ ಇರುವುದಿಲ್ಲ ಎಂದು ಸವಾಲಾಕಿದ್ದಾರೆ. ನಾನು ನಮ್ಮ ತಾತನವರ ಕಾಲದಿಂದ ಎಪಿಎಲ್ ಕಾರ್ಡ್ ಹೊಂದಿರುವೆ. ನಾವು ಏನು ಮಾಡುತ್ತೀವಿ, ಮಾತನಾಡುತ್ತಿದ್ದೇವೆ ಅಂತ ಜನರು ನೋಡುತ್ತಿದ್ದಾರೆ. ಮೂರು ಬಾರಿ ಶಾಸಕರಾಗಿದ್ದೀರಿ, ಯಾರ ಬಗ್ಗೆ ಮಾತನಾಡುತ್ತಿದ್ದೀರಿ ತಿಳಿದುಕೊಳ್ಳಿ ಎಂದರು. ಇದನ್ನೂ ಓದಿ: ಸರ್ಕಾರಿ ಕೆಲಸಗಳಿಗೆ ಇನ್ಮುಂದೆ ವಾರ್ಷಿಕ ಗುತ್ತಿಗೆ ಆಧಾರದಲ್ಲಿ ಹೆಲಿಕಾಪ್ಟರ್ ಸೇವೆ ಪಡೆಯಲು ನಿರ್ಧಾರ

    ಇನ್ನು ಎಂಎಲ್‌ಸಿ ಅನಿಲ್ ಕುಮಾರ್ ಜಿಲ್ಲೆಯ ಕಾಂಗ್ರೆಸ್ ಶಾಸಕರನ್ನು ಕೆಡಿಸುತ್ತಿದ್ದಾರೆಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಅನಿಲ್ ಕುಮಾರ್ ಹೇಳಿದೆಲ್ಲ ಕೇಳುವುದಕ್ಕೆ ನಾನು ಮಗುವೆ? ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದವನಲ್ಲ, ಕೆಳ ಹಂತದಿಂದ ನಾನು ಬಂದಿರುವೆ. ಈ ಹಿಂದೆ ಅನಿಲ್ ಕುಮಾರ್ ಮತ್ತು ನಾರಾಯಣಸ್ವಾಮಿ ಎಷ್ಟು ಒಗ್ಗಟ್ಟು ಆಗಿದ್ದರು. ಅನಿಲ್ ಕುಮಾರ್ ಸಾಮಾನ್ಯ ವ್ಯಕ್ತಿ, ಒಳ್ಳೆತನ ಇಲ್ಲಿ ಇರುತ್ತೆ ಅಲ್ಲಿ ಇರುತ್ತಾರೆ ಎಂದು ಶಾಸಕ ನಾರಾಯಣಸ್ವಾಮಿಗೆ ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ RSS vs RSS ನಡುವಿನ ಜಗಳ – ಪ್ರಿಯಾಂಕ್ ಖರ್ಗೆ

  • ಪ್ರಿಯಕರನ ಜೊತೆ ಸೇರಿ ಪತಿ ಕೊಲೆ; ಮೃತದೇಹ ಸುಟ್ಟುಹಾಕಲು ಹೋಗಿದ್ದ ಆರೋಪಿಗಳು ಪೊಲೀಸರಿಗೆ ಲಾಕ್‌

    ಪ್ರಿಯಕರನ ಜೊತೆ ಸೇರಿ ಪತಿ ಕೊಲೆ; ಮೃತದೇಹ ಸುಟ್ಟುಹಾಕಲು ಹೋಗಿದ್ದ ಆರೋಪಿಗಳು ಪೊಲೀಸರಿಗೆ ಲಾಕ್‌

    – ಪೊಲೀಸರ ಕಂಡೊಡನೆ ಶವವಿದ್ದ ಕಾರು ಬಿಟ್ಟು ಎಸ್ಕೇಪ್‌ಗೆ ಮುಂದಾಗಿದ್ದ ಆರೋಪಿಗಳು

    ಕೋಲಾರ: ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಪ್ರಿಯಕರನೊಂದಿಗೆ ಸೇರಿ ಪತ್ನಿಯೇ ಪತಿಯನ್ನ ಕೊಲೆ ಮಾಡಿದ್ದ ಪ್ರಕರಣದಲ್ಲಿ ಮೂವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

    ಪತಿಯನ್ನ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಪತ್ನಿ ಸೇರಿ ಮೂವರನ್ನ ಕೋಲಾರದ ರಾಯಲ್ಪಾಡು ಪೊಲೀಸರು ಬಂಧಿಸಿದ್ದಾರೆ. ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕು ರಾಯಲ್ಪಾಡು ಹೋಬಳಿಯ ಎಸ್.ಗೊಲ್ಲಪಲ್ಲಿ ಗ್ರಾಮದ ವೆಂಕಟರಮಣ ಎಂಬವನನ್ನ 2 ದಿನಗಳ ಹಿಂದೆ ಕೊಲೆ ಮಾಡಲಾಗಿತ್ತು. ವೆಂಕಟರಮಣನ ಪತ್ನಿ, ಆಕೆಯ ಪ್ರಿಯಕರ ವೇಣುಗೋಪಾಲ್ ಹಾಗೂ ಆತನಿಗೆ ಸಹಾಯ ಮಾಡಿದ ಬಾಲಾಜಿ ಎಂಬವರನ್ನ ಬಂಧಿಸಲಾಗಿದೆ.

    ಆ.24 ರ ರಾತ್ರಿ ಕೊಲೆ ಮಾಡಿದ್ದ ಆರೋಪಿಗಳು, ವೆಂಕಟರಮಣ ಶವವನ್ನ ಬುಲೆರೋ ಕಾರ್‌ನಲ್ಲಿ ಹಾಕಿಕೊಂಡು ಚಿಕ್ಕಬಳ್ಳಾಪುರ, ತುಮಕೂರು, ಹಿಂದೂಪುರ ಸೇರಿ ಹಲವೆಡೆ ಸುತ್ತಾಡಿದ್ದರು. ಎಲ್ಲಿಯೂ ಶವವನ್ನು ಬಿಸಾಡಲು ಜಾಗ ಸಿಗದೇ ರಾಯಲ್ಪಾಡು ಬಳಿ ಅರಣ್ಯದಲ್ಲಿ ಸುಟ್ಟು ಹಾಕಲು ತೆರಳುವ ವೇಳೆ ಪೊಲೀಸರ ಕಂಡು ಕಾರು ಬಿಟ್ಟು ಪರಾರಿಯಾಗಲು ಯತ್ನಿಸಿದ್ದಾರೆ.

    ನಂಬರ್ ಪ್ಲೇಟ್ ಮೇಲೆ ಸ್ಟಿಕ್ಕರ್ ಅಂಟಿಸಿದ್ದ ಹಿನ್ನೆಲೆ ಅನುಮಾನಗೊಂಡ ರಾಯಲ್ಪಾಡು ಪಿಎಸ್‌ಐ, ವಾಹನ ಪರಿಶೀಲನೆ ನಡೆಸಿದ ವೇಳೆ ಡಿಕ್ಕಿಯಲ್ಲಿ ವೆಂಕಟರಮಣನ ಶವ ಪತ್ತೆಯಾಗಿತ್ತು. ವೆಂಕಟರಮಣನನ್ನ ಕೊಂದ ಪತ್ನಿ ಸೇರಿ ಆಕೆಗೆ ಸಹಾಯ ಮಾಡಿ ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

  • ಜೀವನದಲ್ಲಿ ಜಿಗುಪ್ಸೆ; ಸಶಸ್ತ್ರ ಮೀಸಲು ಪಡೆಯ ಪೇದೆ ಆತ್ಮಹತ್ಯೆ

    ಜೀವನದಲ್ಲಿ ಜಿಗುಪ್ಸೆ; ಸಶಸ್ತ್ರ ಮೀಸಲು ಪಡೆಯ ಪೇದೆ ಆತ್ಮಹತ್ಯೆ

    ಕೋಲಾರ: ಜೀವನದಲ್ಲಿ ಜಿಗುಪ್ಸೆಗೊಂಡು ಸಶಸ್ತ್ರ ಮೀಸಲು ಪಡೆಯ ಪೇದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ತಾಲೂಕಿನ ಚಿನ್ನಾಪುರ ಗ್ರಾಮದಲ್ಲಿ ನಡೆದಿದೆ.

    ಮಹೇಂದ್ರ ಪ್ರಸಾದ್‌ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಪೇದೆ. ಇವರು ಡಿಎಆರ್‌ನ ಡಾಗ್ ಸ್ಕ್ವಾಡ್‌ನಲ್ಲಿ ಕೆಲಸ ಮಾಡುತ್ತಿದ್ದರು.

    ಜೀವನದಲ್ಲಿ ಜಿಗುಪ್ಸೆ ಹಾಗೂ ವೈಯಕ್ತಿಕ ಕಾರಣಗಳಿಂದ ಮನನೊಂದು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಗಣೇಶ ಚತುರ್ಥಿ – ಕುರುಡುಮಲೆ ವಿನಾಯಕನಿಗೆ ವಿಶೇಷ ಪೂಜೆ, ಅಲಂಕಾರ

    ಗಣೇಶ ಚತುರ್ಥಿ – ಕುರುಡುಮಲೆ ವಿನಾಯಕನಿಗೆ ವಿಶೇಷ ಪೂಜೆ, ಅಲಂಕಾರ

    ಕೋಲಾರ: ದೇಶದಲ್ಲೆಡೆ ಇಂದು ಗಣೇಶ ಹಬ್ಬವನ್ನ ಅತ್ಯಂತ ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ ಅದರಂತೆ ಕೋಲಾರ (Kolar) ಜಿಲ್ಲೆಯ ಪುರಾಣ ಪ್ರಸಿದ್ಧ ಕುರುಡುಮಲೆ ವಿನಾಯಕನ ಸನ್ನಿಧಿಯಲ್ಲೂ (Kurudumale Vinayaka Temple) ಹಬ್ಬದ ಸಂಭ್ರಮ ಕಳೆಕಟ್ಟಿದೆ.

    ಪೌರಾಣಿಕ ಹಿನ್ನೆಲೆ ಇರುವ ಕುರುಡುಮಲೆ ವಿನಾಯಕನ ದೇವಸ್ಥಾನ ರಾಜಕೀಯವಾಗಿಯೂ ಸಾಕಷ್ಟು ಪ್ರಾಮುಖ್ಯತೆ ಪಡೆದಿದೆ. ಏಕಶಿಲಾ ಸಾಲಿಗ್ರಾಮ ಮೂರ್ತಿ ಗಣೇಶನನ್ನು ವಿಶೇಷವಾಗಿ ಅಲಂಕರಿಸಲಾಗಿದ್ದು, ಕುರುಡುಮಲೆ ವಿನಾಯಕನ ದರ್ಶನಕ್ಕೆ ಜನರ ದಂಡು ಆಗಮಿಸಿತ್ತು. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕು ಕುರುಡುಮಲೆ ವಿನಾಯಕನ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತು ಭಕ್ತರು ದರ್ಶನ ಪಡೆದು ಪುನೀತರಾದರು. ಇದನ್ನೂ ಓದಿ: ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದ ಉಗ್ರನಿಗೆ ಜೈಲಲ್ಲಿ ಇಡಿ ಡ್ರಿಲ್

    ಗಣೇಶ ಚತುರ್ಥಿ (Ganesha Chaturthi) ಹಿನ್ನೆಲೆಯಲ್ಲಿ ವಿನಾಯಕನ ದರ್ಶನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬಂದಿದ್ದು, ಕೋಲಾರ ಜಿಲ್ಲೆ ಸೇರಿದಂತೆ ಹೊರ ಜಿಲ್ಲೆ ಹೊರ ರಾಜ್ಯದಿಂದಲೂ ಭಕ್ತರ ಸಮೂಹ ಬಂದಿದೆ. ಇನ್ನೂ ವಿಶ್ವದ ಏಕೈಕ ಏಕಶಿಲಾ ಸಾಲಿಗ್ರಾಮ ಶಿಲಾಗಣಪತಿ ಅನ್ನೋ ನಂಬಿಕೆ ಇಲ್ಲಿದ್ದು, ಸಾವಿರಾರು ಭಕ್ತರು ಇಂದು ವಿನಾಯಕನ ದರ್ಶನ ಪಡೆದಿದ್ದಾರೆ. ಇನ್ನೂ ಗಣಪನ ದರ್ಶನ ಪಡೆಯಲು ಇಂದು ಬೆಳಗಿನಿಂದಲೇ ಭಕ್ತರ ದಂಡು ದೇವಸ್ಥಾನದ ಬಳಿ ನೆರೆದಿದ್ದು, ಇಲ್ಲಿನ ಇತಿಹಾಸದ ಪ್ರಕಾರ ಈ ಗಣಪತಿ ಮೂರ್ತಿಯನ್ನು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರನು ಪ್ರತಿಷ್ಠಾಪಿಸಿದರು ಎಂಬ ನಂಬಿಕೆ ಅನಾದಿಕಾಲದಿಂದಲೂ ಇದೆ. ಇದನ್ನೂ ಓದಿ: ಬಸ್ ಟೈಯರ್ ಸ್ಫೋಟಗೊಂಡು ಬೈಕ್‌ಗೆ ಡಿಕ್ಕಿ – ಗಣೇಶ ಹಬ್ಬದಂದೇ ಅತ್ತೆ, ಅಳಿಯ ಸಾವು

    ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿರುವ ವಿನಾಯಕನ ವಿಗ್ರಹವು 13 ಅಡಿ ಎತ್ತರವಿದೆ. ಇಲ್ಲಿರುವ ದೇಗುಲವು ಶ್ರೀಕೃಷ್ಣ ದೇವರಾಯನ ಆಡಳಿತ ಕಾಲದಲ್ಲಿ ನಿರ್ಮಾಣಗೊಂಡಿದೆ ಎಂಬುದು ಚರಿತ್ರೆಯಿಂದ ತಿಳಿದು ಬರುತ್ತದೆ. ಕುರುಡುಮಲೆ ಐತಿಹ್ಯ ಹೊಯ್ಸಳರ ಕಾಲದಲ್ಲಿ ಇದೊಂದು ಉಪನಗರವಾಗಿಯೇ ಪ್ರಸಿದ್ಧವಾಗಿತ್ತು. ತದನಂತರ ವಿಜಯನಗರವನ್ನು ಆಳಿದ ಆರಂಭಿಕ ಅರಸರ ಕಾಲದಲ್ಲಿ ಮುಳುವಾಯಿ ನಗರದ ಜೊತೆಜೊತೆಯಲ್ಲೇ ಇಲ್ಲಿಯೂ ದೇವಾಲಯಗಳ ಅಭಿವೃದ್ಧಿಗೊಂಡವು ಅನ್ನೋದು ಇತಿಹಾಸ ಎನ್ನಲಾಗಿದೆ. ಇದನ್ನೂ ಓದಿ: ದೇವರಿಗೆ ಧರ್ಮವಿಲ್ಲ, ಪ್ರಾರ್ಥನೆ ಯಾರೊಬ್ಬರ ಸ್ವತ್ತಲ್ಲ – ಡಿಕೆಶಿ

  • ಕಾಲೇಜು ಅಡ್ಮಿಷನ್ ಮುಗಿಸಿ ಹಿಂತಿರುಗುವಾಗ ಭೀಕರ ಅಪಘಾತ – ಅಣ್ಣ, ತಂಗಿ ದುರ್ಮರಣ

    ಕಾಲೇಜು ಅಡ್ಮಿಷನ್ ಮುಗಿಸಿ ಹಿಂತಿರುಗುವಾಗ ಭೀಕರ ಅಪಘಾತ – ಅಣ್ಣ, ತಂಗಿ ದುರ್ಮರಣ

    ಕೋಲಾರ: ತಂಗಿಯ ಅಡ್ಮಿಷನ್ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಅಣ್ಣ-ತಂಗಿಯಿದ್ದ ಬೈಕ್‌ಗೆ ಇನ್ನೋವಾ ಡಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಮೃತಪಟ್ಟಿರುವ ಘಟನೆ ಕೋಲಾರದಲ್ಲಿ (Kolar) ನಡೆದಿದೆ.

    ಕೋಲಾರ ತಾಲೂಕು ಶ್ರೀನಿವಾಸಪುರ ರಸ್ತೆಯಲ್ಲಿರುವ ವೀರಾಪುರ ಗೇಟ್ ಬಳಿಯ ಮಹರ್ಷಿ ಶಾಲೆ ಬಳಿ ಈ ಘಟನೆ ನಡೆದಿದೆ. ಕೋಲಾರ ತಾಲೂಕಿನ ಕೊಂಡೇನಹಳ್ಳಿ ನಿವಾಸಿಗಳಾದ ಯಶಸ್ವಿನಿ ಬಾಯಿ (16) ಹಾಗೂ ಹರ್ಷಿತ್ ಸಿಂಗ್ (20) ಮೃತ ಅಣ್ಣ-ತಂಗಿ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ವರುಣಾರ್ಭಟಕ್ಕೆ ತತ್ತರಿಸಿದ ಮುಂಬೈ – ವಿಮಾನ, ರೈಲು ಸಂಚಾರದಲ್ಲಿ ವ್ಯತ್ಯಯ, ರೆಡ್ ಅಲರ್ಟ್ ಘೋಷಣೆ

    ತಂದೆ, ತಾಯಿ ಇಬ್ಬರು ಕೂಲಿ ನಾಲಿ ಮಾಡಿ ತನ್ನಿಬ್ಬರು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುತ್ತಿದ್ರು. ಪಿಯುಸಿ ಓದುತ್ತಿದ್ದ ಮಗಳು, ಮಗ ಪದವಿ ವ್ಯಾಸಂಗ ಮಾಡುತ್ತಿದ್ದ. ಹರ್ಷಿತ್ ಕಾಲೇಜು ಮುಗಿಸಿಕೊಂಡು ತಂಗಿ ಯಶಸ್ವಿನಿಯನ್ನ ಕಾಲೇಜಿಗೆ ದಾಖಲು ಮಾಡಿ, ವಾಪಸ್ ತೆರಳುವ ವೇಳೆ ಈ ಅಪಘಾತ ಸಂಭವಿಸಿದೆ. ಇದನ್ನೂ ಓದಿ: ಸೆಲ್‌ನಲ್ಲೇ ವಾಕಿಂಗ್, ತೆಳುವಾದ ಬೆಡ್ ಮೇಲೆ ಸ್ಲೀಪಿಂಗ್ – ರಾಜಾತಿಥ್ಯ ಇಲ್ದೇ `ಡಿ’ ಗ್ಯಾಂಗ್ ಫುಲ್ ಸೈಲೆಂಟ್

    ಪ್ರತಿನಿತ್ಯ ಅಣ್ಣ-ತಂಗಿ ಇಬ್ಬರು ಬಸ್‌ನಲ್ಲೇ ಕಾಲೇಜಿಗೆ ತೆರಳುತ್ತಿದ್ದರು. ಆದ್ರೆ ತಂಗಿ ಕಾಲೇಜು ದಾಖಲಾತಿಗೆ ಕೆಲವು ದಾಖಲೆಗಳನ್ನ ಮರೆತಿದ್ದರು. ಈ ವೇಳೆ ಯಶಸ್ವಿನಿ ಹಾಗೂ ಹರ್ಷಿತ್ ಮನೆಯಿಂದ ಬೈಕ್‌ನಲ್ಲಿ ಹೋಗಿ ದಾಖಲೆ ಕೊಟ್ಟು ವಾಪಸ್ ಮನೆಗೆ ತೆರಳುವ ವೇಳೆ ಇನ್ನೋವಾ ಚಾರ್ಸಿ ತುಂಡಾಗಿ ಬೈಕ್‌ಗೆ ಡಿಕ್ಕಿಯಾದ ಪರಿಣಾಮ ಈ ಅಪಘಾತ ಸಂಭವಿಸಿದೆ. ಇನ್ನೂ ಅಪಘಾತದಲ್ಲಿ ಯಶಸ್ವಿನಿ ಸ್ಥಳದಲ್ಲೇ ಸಾವನ್ನಪ್ಪಿದ್ರೆ ಆಸ್ಪತ್ರೆಯಲ್ಲಿ ಹರ್ಷಿತ್ ಸಿಂಗ್ ಮೃತಪಟ್ಟಿದ್ದಾನೆ.

    ಇದೀಗ ಇಬ್ಬರು ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕೋಲಾರ ಗ್ರಾಮಾಂತರ ಪೊಲೀಸರು ಪ್ರಕರಣವನ್ನ ದಾಖಲಿಸಿಕೊಂಡು, ಇನ್ನೋವಾ ಕಾರು ಹಾಗೂ ಚಾಲಕನನ್ನ ವಶಕ್ಕೆ ಪಡೆದಿದ್ದಾರೆ.

  • Kolar | ಜಮೀನು ವಿವಾದ – ತಲ್ವಾರ್‌ನಿಂದ ಹೊಡೆದು ತಮ್ಮನಿಂದಲೇ ಅಣ್ಣನ ಕೊಲೆ

    Kolar | ಜಮೀನು ವಿವಾದ – ತಲ್ವಾರ್‌ನಿಂದ ಹೊಡೆದು ತಮ್ಮನಿಂದಲೇ ಅಣ್ಣನ ಕೊಲೆ

    ಕೋಲಾರ: ಜಮೀನು ವಿವಾದದ (Land Dispute) ಹಿನ್ನೆಲೆಯಲ್ಲಿ ತಲ್ವಾರ್‌ನಿಂದ ತಲೆಗೆ ಹೊಡೆದು ತಮ್ಮನೇ ಅಣ್ಣನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕೋಲಾರದಲ್ಲಿ (Kolar) ನಡೆದಿದೆ.

    ಚಲಪತಿ ಅಲಿಯಾಸ್ ವೆಂಕಟಾಚಲಪತಿ (50) ಕೊಲೆಯಾದ ಅಣ್ಣ. ಪಕ್ಕದ ಮನೆಯಲ್ಲೇ ವಾಸ ಮಾಡುವ ತಮ್ಮ ಮುನಿರಾಜು (40) ಕೊಲೆ ಮಾಡಿ ಬಳಿಕ ಪೊಲೀಸರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾನೆ. ಬೆಳಗ್ಗೆ 6:30ರ ಸುಮಾರಿಗೆ ಕುರಿಗಳಿಗೆ ಮೇವು ನೀಡಲು ಹೋದ ಅಣ್ಣನನ್ನು ತಲ್ವಾರ್‌ನಿಂದ ಕೊಚ್ಚಿ ತಮ್ಮ ಕೊಲೆ ಮಾಡಿದ್ದಾನೆ. ಕೋಲಾರ ಜಿಲ್ಲೆಯ ಬಂಗಾರಪೇಟೆ (Bangarpet) ತಾಲೂಕಿನ ರಾಮಾಪುರದಲ್ಲಿ (Ramapura) ಇಂದು ಮುಂಜಾನೆ ಈ ಘಟನೆ ನಡೆದಿದೆ. ಇದನ್ನೂ ಓದಿ: ಧರ್ಮಸ್ಥಳ ಕೇಸ್‌ನಲ್ಲಿ ಅನಾಮಿಕನ ಮಂಪರು ಪರೀಕ್ಷೆ ಮಾಡಿ: ಕಿಶೋರ್ ಕುಮಾರ್ ಪುತ್ತೂರು

    ಅಣ್ಣ ಚಲಪತಿ ಜಮೀನಿನಲ್ಲಿ ಸರಿಯಾಗಿ ಭಾಗ ಕೊಡದ ಹಿನ್ನೆಲೆ ಹಲವು ಬಾರಿ ನ್ಯಾಯ ಪಂಚಾಯ್ತಿಗಳನ್ನು ಮಾಡಲಾಗಿದೆ. ಜೊತೆಗೆ ಜಮೀನು ವಿವಾದ ನ್ಯಾಯಾಲಯದಲ್ಲೂ ಇದ್ದು, ಇತ್ತೀಚೆಗೆ ಹಿರಿಯರ ಸಮ್ಮುಖದಲ್ಲಿ 35 ಲಕ್ಷ ಹಣ ಕೊಟ್ಟು ತೀರ್ಮಾನ ಸಹ ಮಾಡಿಕೊಂಡಿದ್ದಾನೆ. ಆದರೆ ಇಂದು ಮುಂಜಾನೆ ಕುರಿ ಶೆಡ್‌ಗೆ ತೆರಳಿದ ಅಣ್ಣನನ್ನ ಹಿಂಬಾಲಿಸಿದ ತಮ್ಮ ಮುನಿರಾಜು ಶೆಡ್‌ನಲ್ಲಿ ತಲ್ವಾರ್‌ನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಇದನ್ನೂ ಓದಿ: ಶಕ್ತಿ ಯೋಜನೆ ಪ್ರತಿಷ್ಠಿತ ವಿಶ್ವ ದಾಖಲೆಗೆ ಸೇರ್ಪಡೆ; Golden Book of World Records ನಲ್ಲಿ ದಾಖಲು

    ಇನ್ನೂ ಮನೆಯಿಂದ ಶೆಡ್‌ಗೆ ಚಲಪತಿ ತೆರಳುವ ಹಾಗೂ ನಂತರ ತಮ್ಮ ಮುನಿರಾಜು ಶೆಡ್‌ಗೆ ತೆರಳಿ ಬಾಗಿಲು ಹಾಕಿಕೊಳ್ಳುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನೂ ಕೊಲೆ ಮಾಡಿದ ಬಳಿಕ ಪೊಲೀಸರಿಗೆ ಶರಣಾಗಿರುವ ಕೊಲೆ ಆರೋಪಿ ಮುನಿರಾಜು ತಾನೇ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಇನ್ನೂ ಸ್ಥಳಕ್ಕೆ ಎಫ್‌ಎಸ್‌ಎಲ್ ತಂಡ ಹಾಗೂ ಕೆಜಿಎಫ್ ಎಸ್ಪಿ ಶಿವಾಂಶು ರಜಪೂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೂದಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಜಮ್ಮುಕಾಶ್ಮೀರದ ಕುಪ್ವಾರಾದಲ್ಲಿ ಮೇಘಸ್ಫೋಟ – 5 ದಿನಗಳಲ್ಲಿ 3ನೇ ದುರಂತ

    ಇನ್ನೂ ಚಲಪತಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ತನ್ನ ಪತಿಯನ್ನ ತಲ್ವಾರ್‌ನಿಂದ ಕೊಚ್ಚಿ ಚುಚ್ಚಿಕೊಲೆ ಮಾಡಿದ್ದಾರೆ. ಇದರಲ್ಲಿ ಮುನಿರಾಜು ಮಾತ್ರವಲ್ಲದೇ ಸಾಕಷ್ಟು ಜನರ ಕುತಂತ್ರ ಸಹ ಇದೆ. ಅಲ್ಲದೆ ಕೊಲೆ ಮಾಡಿದ ಬಳಿಕ ಮತ್ತಷ್ಟು ತಲೆಗಳನ್ನ ಬಲಿ ಪಡೆಯುವುದಾಗಿಯೂ ಅವರೇ ಹೇಳಿದ್ದಾರೆ ಎಂದು ಪತ್ನಿ ನಾರಾಯಣಮ್ಮ ಹಾಗೂ ತಂಗಿ ಸುನಂದಮ್ಮ ಆರೋಪಿಸಿದ್ದಾರೆ. ಇದನ್ನೂ ಓದಿ: ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ – ಪ್ರವಾಹ ಭೀತಿ