ಕೋಲಾರ: ಅಕ್ಕಿ ಸಾಗಾಟ ಮಾಡುತ್ತಿದ್ದ ಲಾರಿ (Lorry) ಡಿಕ್ಕಿಯಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಕೈವಾಕ್ (Skywalk) ಮುರಿದು ಬಿದ್ದ ಪರಿಣಾಮ ಕಾರು ಜಖಂಗೊಂಡ ಘಟನೆ ಕೋಲಾರ (Kolar) ಹೊರವಲಯದ ಕೊಂಡರಾಜನಹಳ್ಳಿಯಲ್ಲಿ ನಡೆದಿದೆ.
ಸ್ಕೈವಾಕ್ ಪಿಲ್ಲರ್ಗೆ ಲಾರಿ ಡಿಕ್ಕಿಯಾದ ಪರಿಣಾಮ ಸ್ಕೈವಾಕ್ ಮುರಿದು ಬಿದ್ದಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಿಲ್ಲ. ಸ್ಥಳಕ್ಕೆ ಆಗಮಿಸಿದ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಬೃಹತ್ ಎರಡು ಕ್ರೇನ್ಗಳನ್ನು ಬಳಸಿ ತೆರವು ಕಾರ್ಯ ಮಾಡಲಾಗಿದೆ. ಇದನ್ನೂ ಓದಿ: ಕರೂರು ಕಾಲ್ತುಳಿತ ದುರಂತ – ಮೃತರ ಕುಟುಂಬಕ್ಕೆ ತಲಾ 20 ಲಕ್ಷ ಪರಿಹಾರ ಘೋಷಿಸಿದ ವಿಜಯ್
ಸತತ ನಾಲ್ಕೈದು ಗಂಟೆಗಳ ಕಾರ್ಯಾಚರಣೆ ಬಳಿಕ ಮುರಿದು ಬಿದ್ದಿದ್ದ ಸ್ಕೈವಾಕ್ ತೆರವುಗೊಳಿಸಲಾಗಿದೆ. ಘಟನೆಯಿಂದ ಚೆನೈ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತವಾಗಿ ವಾಹನ ಸವಾರರು ಪರದಾಡುವಂತಾಯಿತು. ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: `ಮಹಾ’ ಮಳೆಗೆ `ಉತ್ತರ’ ತತ್ತರ – ಕಲಬುರಗಿಯಲ್ಲಿ ಭೀಮೆ ಆರ್ಭಟ; ಇಡೀ ಗ್ರಾಮವೇ ಅಪೋಷನ!
ಕೋಲಾರ: ಕಿಡಿಗೇಡಿಗಳು ಮನೆಗೆ ಬೆಂಕಿ (Fire) ಹಾಕಿದ ಪರಿಣಾಮ ಮನೆಯಲ್ಲಿದ್ದ ಸಾಮಗ್ರಿಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿರುವ ಘಟನೆ ಕೋಲಾರದಲ್ಲಿ (Kolar) ನಡೆದಿದೆ.
ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಚೀಟಿಂವಾರಪಲ್ಲಿ ಗ್ರಾಮದಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದೆ. ಚೀಟಿಂವಾರಪಲ್ಲಿ ಗ್ರಾಮದ ರೈತ ಜಯರಾಮ್ ಎಂಬವರಿಗೆ ಸೇರಿದ ಮನೆಗೆ ದುಷ್ಕರ್ಮಿಗಳು ಬೆಂಕಿ ಹಾಕಿದ ಹಿನ್ನೆಲೆ ಗೃಹೋಪಯೋಗಿ ವಸ್ತುಗಳು ಸುಟ್ಟು ಕರಕಲಾಗಿವೆ. ಜಯರಾಮ್ ಅವರು ಊರಿನಲ್ಲಿ ಮನೆ ಕೆಲಸ ಮಾಡಿಸುತ್ತಿರುವ ಕಾರಣ ಮನೆಯಲ್ಲಿದ್ದ ಎಲ್ಲಾ ವಸ್ತುಗಳನ್ನು ತೋಟದ ಮನೆಯಲ್ಲಿಡಲಾಗಿತ್ತು. ಇದನ್ನೂ ಓದಿ: ‘ಐ ಲವ್ ಮುಹಮ್ಮದ್’ ಅಭಿಯಾನಕ್ಕೆ 5 ದಿನಗಳ ಪ್ಲ್ಯಾನಿಂಗ್ – ಯುಪಿ ಪೊಲೀಸರ ತನಿಖೆಯಲ್ಲಿ ಬಯಲು
ಬೆಂಕಿಯಿಂದ ಮನೆಯಲ್ಲಿದ್ದ ರಸಗೊಬ್ಬರ, ಮನೆ ಸಾಮಾನುಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಸುಮಾರು 4 ಲಕ್ಷ ರೂಪಾಯಿ ಬೆಲೆ ಬಾಳುವ ವಸ್ತುಗಳು ಸುಟ್ಟು ಕರಕಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮನೆಗೆ ಬೆಂಕಿಯಿಟ್ಟಿರುವ ಕಿಡಿಗೇಡಿಗಳನ್ನು ಕೂಡಲೇ ಪತ್ತೆ ಹಚ್ಚಿ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ. ರಾಯಲ್ಪಾಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ | ಸಮಸ್ಯೆಗಳ ನಡ್ವೆ ನಾಯಿಗಳ ಭಯ; ಸಮೀಕ್ಷೆಗೆ ತೆರಳಿದ್ದ ಶಿಕ್ಷಕಿಗೆ ಜರ್ಮನ್ ಶೆಫರ್ಡ್ ನಾಯಿ ಕಡಿತ!
ಇವರಿಬ್ಬರ ಪ್ರೀತಿಗೆ 2 ಮನೆಯವರು ವಿರೋಧ ವ್ಯಕ್ತಪಡಿಸಿದರು. ಇದರಿಂದ ಮನನೊಂದು ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬ್ಯಾಟರಾಯನಹಳ್ಳಿ ಗ್ರಾಮದ ಬಳಿ ಬೈಕ್ ನಿಲ್ಲಿಸಿ, ಕೋಲಾರದಿಂದ ಬೆಂಗಳೂರಿಗೆ ತೆರಳುವ ರೈಲಿಗೆ ತಲೆಕೊಟ್ಟಿದ್ದಾರೆ.
ರೈಲಿನಡಿ ಸಿಲುಕಿದ ದೇಹಗಳು ಛಿದ್ರ ಛಿದ್ರವಾಗಿದೆ. ಘಟನಾ ಸ್ಥಳಕ್ಕೆ ಬೆಂಗಳೂರು ಕಂಟೋನ್ಮೆಂಟ್ ರೈಲ್ವೆ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೋಲಾರ: ಮಹಾಲಯ ಅಮಾವಾಸ್ಯೆ ಹಿನ್ನೆಲೆ ಕೋಲಾರ (Kolar) ತಾಲೂಕು ಕೋರಗೊಂಡನಹಳ್ಳಿಯಲ್ಲಿರುವ ಕಾಶಿ ವಿಶ್ವೇಶ್ವರ ಸ್ವಾಮಿ ದೇವಾಲಯದಲ್ಲಿ (Kashi Vishweshwara Swamy Temple) ನಟ ಧ್ರುವ ಸರ್ಜಾ (Dhruva Sarja) ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಕೋಲಾರ: ಶಾರ್ಟ್ ಸರ್ಕ್ಯೂಟ್ನಿಂದ ಬಟ್ಟೆ ಅಂಗಡಿ (Textile Shop) ಬೆಂಕಿಗೆ ಆಹುತಿಯಾಗಿರುವ ಘಟನೆ ಕೋಲಾರದಲ್ಲಿ (Kolar) ನಡೆದಿದೆ.
ಕೋಲಾರದ ಎಂ.ಜಿ.ರಸ್ತೆಯಲ್ಲಿರುವ ಬ್ರಾಂಡೆಡ್ ಫ್ಯಾಕ್ಟರಿ ಅಂಗಡಿಗೆ ಬೆಂಕಿ ಬಿದ್ದು ಅಂಗಡಿಯಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಬಟ್ಟೆಗಳು ಸುಟ್ಟು ಭಸ್ಮವಾಗಿದೆ. ಬಟ್ಟೆ ವ್ಯಾಪಾರಿ ಹಾಗೂ ಮಾಲೀಕ ಇಕ್ರಂ ಪಾಷಾ ಎಂಬವರಿಗೆ ಸೇರಿದ ಅಂಗಡಿಯಲ್ಲಿ ಮಧ್ಯಾಹ್ನ ಸಂಭವಿಸಿದ ಶಾರ್ಟ್ ಸರ್ಕ್ಯೂಟ್ನಿಂದ ಅಂಗಡಿಯಲ್ಲಿದ್ದ 20ರಿಂದ 25 ಲಕ್ಷ ರೂ. ಮೌಲ್ಯದ ಬಟ್ಟೆಗಳು ಹಾಗೂ ಕೆಲ ವಸ್ತುಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ತರಾತುರಿ ಜಾತಿಗಣತಿ, ಜಾತಿಗಳ ಜೊತೆ ಕ್ರಿಶ್ಚಿಯನ್ ಧರ್ಮ ಸೇರಿಸುವುದು ಬೇಡ: ನಿರ್ಮಲಾನಂದ ಶ್ರೀಗಳ ಎಚ್ಚರಿಕೆ
ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಬೆಂಕಿ ಧಗಧಗವೆಂದು ಹೊತ್ತಿ ಉರಿದಿದ್ದು, ಬೆಂಕಿಯ ಕೆನ್ನಾಲಿಗೆ ಪಕ್ಕದ ಕಟ್ಟಡಗಳಿಗೆ ಆವರಿಸುವ ಮೂಲಕ ಆತಂಕ ಮನೆಮಾಡಿತ್ತು. ಅಲ್ಲದೆ ಅಗ್ನಿ ಶಾಮಕ ದಳದವರು ಬೆಂಕಿ ನಂದಿಸಲು ಕೆಲ ಕಾಲ ಹರಸಾಹಸ ಪಡಬೇಕಾಗಿತ್ತು. ಇನ್ನು ಕೋಲಾರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು. ಇದನ್ನೂ ಓದಿ: ಸಿಎಂ ಆಗೋಕೆ ಹೆಲಿಕಾಪ್ಟರ್ ಖರೀದಿಸಿದ್ದಾರೆ ಅನ್ನೋದು ತಪ್ಪು ಕಲ್ಪನೆ – ಸತೀಶ್ ಜಾರಕಿಹೊಳಿ ಪರ ಬೋಸರಾಜು ಬ್ಯಾಟಿಂಗ್
ಕೋಲಾರ: ಮರು ಎಣಿಕೆಯಲ್ಲಿ ಮಂಜುನಾಥ್ ಗೌಡ (Manjunath Gowda) ಗೆದ್ದರೆ ರಾಜಕೀಯ ಬಿಡುತ್ತೇನೆ ಎಂದು ಮಾಲೂರು ಶಾಸಕ ಕೆವೈ ನಂಜೇಗೌಡ (KY Nanjegowda) ಸವಾಲು ಹಾಕಿದ್ದಾರೆ.
2023ರ ಮಾಲೂರು (Malur) ಕ್ಷೇತ್ರದ ಮರು ಮತ ಎಣಿಕೆ ನಡೆಸುವಂತೆ ಹೈಕೋರ್ಟ್ (High Court) ತೀರ್ಪು ನೀಡಿರುವ ಕುರಿತು ಕೋಲಾರದಲ್ಲಿ (Kolar) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನ್ಯಾಯಾಲಯದ ತೀರ್ಪು ಬಂದಿದೆ. ನನ್ನ ವಿರುದ್ಧ ಸೋತ ಅಭ್ಯರ್ಥಿ ಮರು ಎಣಿಕೆಗೆ ನ್ಯಾಯಾಲಯದ ಮೊರೆ ಹೋಗಿದ್ದರು. ರೀ ಕೌಂಟಿಂಗ್ ಕೊಟ್ರೆ ನಾನು ಬದ್ಧ ಎಂದು ಹಲವು ಬಾರಿ ಹೇಳಿದ್ದೆ. ಶಾಸಕ ಸ್ಥಾನವನ್ನು ಅಸಿಂಧುಗೊಳಿಸಲಾಗಿದೆ. ಹೀಗಾಗಿ ನಾನು ಅಪೀಲು ಹಾಕಿದ್ದೇನೆ ಎಂದರು. ಇದನ್ನೂ ಓದಿ: Malur Election | ಸ್ವತಂತ್ರ ಅಭ್ಯರ್ಥಿಗಳು ಪಡೆದ ಮತ ಗೆದ್ದವರಿಗೆ ಸೇರಿಸಿದ್ದಾರೆ: ಕೆ.ಎಸ್ ಮಂಜುನಾಥ್ ಗೌಡ
ಚುನಾವಣೆ ಪ್ರಕ್ರಿಯೆ ವಜಾ ಮಾಡಿದ ಮೇಲೆ ಚುನಾವಣೆ ಘೋಷಣೆ ಮಾಡಬೇಕಿತ್ತು. ರೀ ಕೌಂಟಿಂಗ್ ಮಾಡಿದ್ದರೆ ನಾನು ತಯಾರಿದ್ದೆ. ನಿಮ್ಮದೇ ಸರ್ಕಾರ, ನಿಮ್ಮದೇ ಮಂತ್ರಿ, ಅಧಿಕಾರಿಗಳು, ನೀವೆ ಕಾವಲಿದ್ದು ಮತ ಎಣಿಕೆ ಮಾಡಿದ್ದು. ವಿವಿ ಪ್ಯಾಟ್ ಕೌಂಟಿಂಗ್ ಮಾಡಿಸಿದ್ರು, ಅವರ ಪ್ರೊಸಿಜರ್ ಪ್ರಕಾರ ಮಾಡಿದ್ರು. ಇವರಿಗೆ ಹುಚ್ವು ಹಿಡಿದಿದೆ, ಜೀವಮಾನದಲ್ಲಿ ಅವರು ಹೊಸಕೋಟೆಯಲ್ಲಿ ಶಾಸಕರಾಗಲು ಸಾಧ್ಯವಿಲ್ಲ. ನ್ಯಾಯಾಲಯ ಅಸಿಂಧು ಮಾಡಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಮಾಲೂರು ಶಾಸಕ ನಂಜೇಗೌಡ ಆಯ್ಕೆ ಅಸಿಂಧು – ಮರು ಮತ ಎಣಿಕೆಗೆ ಹೈಕೋರ್ಟ್ ಆದೇಶ
ಮಾಲೂರು ತಾಲೂಕು ತಬ್ಬಲಿಯಾಗಿಲ್ಲ, ಮೂವತ್ತು ದಿನ ಸಮಯಾವಕಾಶ ಕೊಟ್ಟಿದ್ದಾರೆ. ಮರು ಎಣಿಕೆಯಲ್ಲಿ ಮಂಜುನಾಥ್ ಗೌಡ ಗೆದ್ದರೆ ರಾಜಕೀಯ ಬಿಡುವೆ. ಮರು ಎಣಿಕೆ ಆಗಲಿ, ಅಸಿಂಧು ವಿರುದ್ಧ ಸುಪ್ರೀಂ ಮೊರೆ ಹೋಗುವೆ. ಅವರ ಪರವಾಗಿ ಕೆಲ ಹುಚ್ಚರಿದ್ದಾರೆ, ಅವರು ಪಟಾಕಿ ಹೊಡೆದು ಸಿಹಿ ಹಂಚಿದ್ದಾರೆ. ಅವರೇನು ಶಾಸಕರಾಗಿದ್ದಾರಾ? ಇಲ್ಲವಲ್ಲಾ, ಯಾರೋ ಕೆಲವರು ಸಂಭ್ರಮ ಮಾಡಿದ್ದಾರೆ. ಮಂಜುನಾಥ್ ಗೌಡ ಹಗಲು ಕನಸು ಕಾಣುತ್ತಿದ್ದಾರೆ, ಭ್ರಮೆಯಲ್ಲಿದ್ದಾರೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಚಿತ್ರ ಪ್ರದರ್ಶನ, ರಕ್ತದಾನ ಶಿಬಿರ – ಸಮಾಜಸೇವಾ ಕಾರ್ಯಗಳೊಂದಿಗೆ ಮೋದಿ ಜನ್ಮದಿನಾಚರಣೆ
ಕೋಲಾರ: ರಜೆಯ ಮೇಲೆ ಊರಿಗೆ ಬಂದಿದ್ದ ಯೋಧರೊಬ್ಬರು (Soldier) ಹೃದಯಾಘಾತಕ್ಕೆ (Heartattack) ಬಲಿಯಾಗಿರುವ ಘಟನೆ ಕೋಲಾರ (Kolar) ಜಿಲ್ಲೆಯ ಮುಳಬಾಗಿಲು ತಾಲೂಕು ಆಚಂಪಲ್ಲಿ ಗ್ರಾಮದಲ್ಲಿ ನಡೆದಿದೆ.
ರಾತ್ರಿ ಮಲಗಿದ್ದಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಇಂದು ಸ್ವಗ್ರಾಮ ಆಚಂಪಲ್ಲಿ ಗ್ರಾಮದಲ್ಲಿ ಮುನಿ ನಾರಾಯಣ ಅವರ ಅಂತ್ಯಸಂಸ್ಕಾರ ನಡೆಯಲಿದೆ. ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕೋಲಾರ: ಅತ್ತೆಗೆ ತನ್ನ ಅಕ್ರಮ ಸಂಬಂಧ ತಿಳಿದಿದ್ದಕ್ಕೆ ಸೊಸೆ ಹಾಗೂ ಆಕೆಯ ಪ್ರಿಯಕರ ಸೇರಿ ಮಾರಣಾಂತಿಕ ಹಲ್ಲೆ ನಡೆಸಿರುವುದು ಶ್ರೀನಿವಾಸಪುರದ ಗುಮ್ಮಲಪಲ್ಲಿ (Gummalapalli) ಗ್ರಾಮದಲ್ಲಿ ನಡೆದಿದೆ.
ಕಳೆದ 7 ವರ್ಷಗಳ ಹಿಂದೆ ತುಮ್ಮಲಪಲ್ಲಿ ಗ್ರಾಮದ ಮಂಜುನಾಥ್ ರೆಡ್ಡಿಯನ್ನು ಆಂಧ್ರಪ್ರದೇಶ ಮೂಲದ ಮಹಿಳೆ ಪ್ರೀತಿಸಿ ಮದುವೆಯಾಗಿದ್ದಳು. ಮದುವೆಯಾದ ಬಳಿಕ ಶಶಿಕುಮಾರ್ನೊಂದಿಗೆ ಅಕ್ರಮ ಸಂಬಂಧವನ್ನು ಹೊಂದಿದ್ದಳು. ಈ ವಿಚಾರ ಆಕೆಯ ಅತ್ತೆಗೆ ಗೊತ್ತಾಗಿತ್ತು. ಇದನ್ನೂ ಓದಿ: ಪಾನಿಪೂರಿ ತಿನ್ನುವ ವೇಳೆ ಗಲಾಟೆ – ಒಂದೇ ಪಂಚ್ಗೆ ಹಾರಿ ಹೋಯ್ತು ಯುವಕನ ಪ್ರಾಣ!
ಇದರಿಂದ ಸಿಟ್ಟಿಗೆದ್ದ ಸೊಸೆ ಹಾಗೂ ಆಕೆಯ ಪ್ರಿಯಕರ ಸೇರಿ ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡ ರಮಣಮ್ಮನನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ರಾಯಲ್ಪಾಡು ಪೊಲೀಸರು ಸೊಸೆ ಹಾಗೂ ಶಶಿಕುಮಾರ್ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಕೋಲಾರ: ಬಿಜೆಪಿಯವರ ವಿರುದ್ಧ ನೂರು ಎಫ್ಐಆರ್ (FIR) ದಾಖಲು ಮಾಡಿದರೂ ಹೆದರಲ್ಲ ಎಂದು ಕೋಲಾರ (Kolar) ಮಾಜಿ ಸಂಸದ ಎಸ್.ಮುನಿಸ್ವಾಮಿ (S Muniswamy) ಹೇಳಿದ್ದಾರೆ.
ಕೋಲಾರದ ಹೊರವಲಯದ ರತ್ನ ಕನ್ವೆನ್ಷನ್ ಹಾಲ್ನಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಸೇವಾ ಪ್ರಾಕ್ಷಿಕ ಕಾರ್ಯಾಗಾರದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರ್ಎಸ್ಎಸ್ನಲ್ಲಿ 42 ಸಂಘಟನೆಗಳಿವೆ. ಅದರಲ್ಲಿ ಭಾರತೀಯ ಜನತಾ ಪಾರ್ಟಿ ಒಂದು. ದೇಶ ಮತ್ತು ಧರ್ಮದ ರಕ್ಷಣೆಗೆ ಆರ್ಎಸ್ಎಸ್ ಹುಟ್ಟಿರೋದು, ದೇಶಕ್ಕೋಸ್ಕರ ಪ್ರಾಣ ಕೊಡಲು ಸಿದ್ಧ. ವೋಟ್ ಬ್ಯಾಂಕ್ಗೋಸ್ಕರ ಸಿದ್ದರಾಮಯ್ಯ ಒಂದು ಸಮುದಾಯವನ್ನು ಮೆಚ್ಚಿಸಲು ಹೊರಟಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ನಾನು ನಿಮ್ಮ ಜೊತೆಗಿದ್ದೇನೆ: ಮಣಿಪುರ ಜನರಿಗೆ ಪ್ರಧಾನಿ ಮೋದಿ ಭರವಸೆ
ಒಂದಲ್ಲ ನೂರು ಎಫ್ಐಆರ್ ಹಾಕಿದರು ಹೆದುರುವುದಿಲ್ಲ, ಭಯ ಅನ್ನೋದು ನಮ್ಮಲ್ಲಿ ಇಲ್ಲ. ಸಿಟಿ ರವಿ, ವಿಕ್ರಂ ಹೆಗ್ಡೆ, ರಾಜೀವ್ ಮೇಲೆ ಹಾಕಿರುವ ಪ್ರಕರಣ ನೋಡಿದರೆ ರಾಜ್ಯದಲ್ಲಿ ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುತ್ತಿದೆ, ಸುಳ್ಳು ಗ್ಯಾರೆಂಟಿಗಳನ್ನು ಹೇಳಿ ಜನರನ್ನ ದಾರಿ ತಪ್ಪಿಸಿದೆ. ಮುಂದಿನ ದಿನಗಳಲ್ಲಿ ಜನ ಶಾಶ್ವತವಾಗಿ ವಿರೋಧ ಪಕ್ಷದ ಸ್ಥಾನದಲ್ಲಿ ಕೂರಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ವಿಧಾನ ಮಂಡಲದಲ್ಲಿಯ ಆರೋಗ್ಯಪೂರ್ಣ ಚರ್ಚೆಗಳೇ ಪ್ರಜಾಪ್ರಭುತ್ವದ ಯಶಸ್ಸಿನ ಮೂಲಾಧಾರ: ಬಸವರಾಜ ಹೊರಟ್ಟಿ
ಹಿಂದು ಸಂಘಟನೆಗಳ ಮುಖಂಡ ಮತ್ತು ದೇಶ ಭಕ್ತರನ್ನು ಒಳಗೆ ಹಾಕಿಸುತ್ತಿದ್ದೀರಿ. ಮುಂದೆ ಒಂದು ದಿನ ನಿಮ್ಮನ್ನು ಒಳಗೆ ಹಾಕಿಸುವಂತಹ ಕಾಲ ಹತ್ತಿರ ಬರುತ್ತದೆ. ಸಚಿವ ಸಂಪುಟದಲ್ಲಿ ಅನೇಕ ಸಚಿವರು ಭ್ರಷ್ಟಚಾರದಲ್ಲಿ ಸಿಕ್ಕಿ ಹಾಕಿಕೊಂಡು ಜಾಮೀನು ಮೇಲೆ ಹೊರಗಡೆ ಇದ್ದಾರೆ. ಮುಂದೆ ಶಾಶ್ವತವಾಗಿ ಒಳಗೆ ಹಾಕಿಸುವಂತಹ ಕೆಲಸ ನಮ್ಮ ಸರ್ಕಾರ ಬಂದ ಮೇಲೆ ಆಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: Hassan Tragedy | ಟ್ರಕ್ ಅಪಘಾತ ನಡೆದ ಜಾಗದಲ್ಲಿ ಹಂಪ್ಸ್ ನಿರ್ಮಿಸಲು ತೀರ್ಮಾನ
ಕೋಲಾರ: ಬಿಜೆಪಿಯವರಿಗೆ ಹಿಂದೂ-ಮುಸ್ಲಿಂ ಅನ್ನೋ ವಿಚಾರ ಬಿಟ್ರೆ ಇನ್ನೇನಿದೆ? ಪಹಲ್ಗಾಮ್ (Pahalgam Attack) ಆಗಿ ಎಷ್ಟು ದಿನ ಆಗಿದೆ? ಈ ಮಧ್ಯೆ ಇಂಡಿಯಾ ಪಾಕಿಸ್ತಾನ ಮ್ಯಾಚ್ (India-Pakistan Match) ಯಾಕೆ ಬೇಕಾಗಿತ್ತು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ (Santosh Lad) ಕೇಂದ್ರ ಬಿಜೆಪಿಗೆ ಟಾಂಗ್ ನೀಡಿದ್ದಾರೆ.
ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿನಿಮಾದವರು ಬೇಡ, ಸಿಂಧೂ ನದಿ ನೀರು ಕೊಡಲ್ಲ ಅಂತಾರೆ, ಕ್ರಿಕೆಟ್ ಮಾತ್ರ ಆಡಿಸುತ್ತಾರೆ. ಪಾಕಿಸ್ತಾನದ ಜೊತೆಗೆ ಇಂಡಿಯಾ ಕ್ರಿಕೆಟ್ ಆಡಬಹುದಾ ಎಂದು ಪ್ರಶ್ನಿಸಿದರು. ಇನ್ನೂ ಮೋದಿ ಗ್ರೇಟೆಸ್ಟ್ ಪ್ರೈಮ್ ಮಿನಿಸ್ಟರ್ ಎಂದು ಸಾಬೀತು ಮಾಡಲು ಹೊರಟಿದ್ದಾರೆ. ಬಿಜೆಪಿಯ ಪಿಎಂ ಮೋದಿ, ಅಡ್ವಾನಿ, ವಾಜಪೇಯಿ ಪಾಕಿಸ್ತಾನಕ್ಕೆ ಹೋಗಿದ್ದು, ಅಲ್ಲದೇ ಪಾಕಿಸ್ತಾನಕ್ಕೆ ಬಸ್ ಬಿಟ್ಟಿದ್ದು ಅವರೆ. ಹಾಗಾಗಿ ಎಲ್ಲವೂ ಮಾಡಿದ್ದು ಬಿಜೆಪಿಯವರೆ ಎಂದು ಕಿಡಿಕಾರಿದರು. ಇದನ್ನೂ ಓದಿ: Asia Cup 2025 | ಅಬ್ಬರಿಸಲು ʻಯಂಗ್ ಇಂಡಿಯಾʼ ರೆಡಿ – ಪ್ರಾಕ್ಟೀಸ್ ಸೆಷನ್ನಲ್ಲೇ 30 ಸಿಕ್ಸರ್ ಸಿಡಿಸಿದ ಶರ್ಮಾ
83 ಸಾವಿರ ಕೋಟಿ ಅಭಿವೃದ್ಧಿಗೆ, 60 ಸಾವಿರ ಕೋಟಿ ಗ್ಯಾರಂಟಿಗಳಿಗೆ ಕೊಡುತ್ತಿದ್ದೇವೆ. ಬಿಜೆಪಿಯವರು ಗ್ಯಾರಂಟಿ ಕೊಡದೆ ಅಭಿವೃದ್ಧಿಗೆ ಮಾತ್ರ ಅಷ್ಟು ಹಣ ಮೀಸಲಿಟ್ಟಿದ್ದರು, ಉಳಿದ ಹಣ ಎಲ್ಲಿ ಹೋಯ್ತು? ಆಗ ರಾಜ್ಯ ದಿವಾಳಿಯಾಗಿಲ್ವಾ? ದೇಶ ಆರ್ಥಿಕ ಸಂಕಷ್ಟದಲ್ಲಿದೆ, ಆದ್ರೆ ರಾಜ್ಯ ಸುಧಾರಿಸಿದೆ. ಜಿಎಸ್ಟಿ ಸೇರಿ ಎಲ್ಲದರಲ್ಲೂ ರಾಜ್ಯ ಮುಂದಿದೆ. ಗುಜರಾತ್ ಮಾಡೆಲ್ ಅಂತಾರೆ ಎಲ್ಲಾಗಿದೆ ಮಾಡೆಲ್? ಗಿಫ್ಟ್ ಸಿಟಿ ಅಂತ ಮಾಡಿ ಮೋದಿ ಅವರು ಎಲ್ಲಿ ಅಭಿವೃದ್ಧಿ ಮಾಡಿದ್ದಾರೆ? ಸಾಕಷ್ಟು ಬಾರಿ ಸಿಎಂ ಆಗಿದ್ದವರು ಏನು ಮಾಡಿದ್ದಾರೆ ಎಂದು ಪ್ರಶ್ನೆಗಳ ಸುರಿಮಳೆಗೈದರು. ಇದನ್ನೂ ಓದಿ: 14 ವರ್ಷದ ಬಾಲಕಿ ಮೇಲೆ ಅತ್ಯಾಚಾರ – ನಿಪ್ಪಾಣಿ ವ್ಯಕ್ತಿಗೆ 30 ವರ್ಷ ಜೈಲು ಶಿಕ್ಷೆ
ಖೇಲೋ ಇಂಡಿಯಾ ಅನ್ನೋ ದೊಡ್ಡ ಕಾರ್ಯಕ್ರಮ 426 ಕೋಟಿ ಗುಜರಾತ್ಗೆ ಮಾತ್ರ ಹೋಗುತ್ತೆ, ಎಲ್ಲಿ ಎಷ್ಟು ಮೆಡಲ್ ಬಂದಿದೆ? ಈ ಮೊದಲು ಕಡಿಮೆ ಇತ್ತು, ಈಗಲೂ ಕಡಿಮೆ ಇದೆ. ಗುಜರಾತ್ ಯಾಕೆ ಇಂದಿಗೂ ಮಾಡೆಲ್ ಆಗಿಲ್ಲ? ನಮ್ಮ ರಾಜ್ಯದಲ್ಲಿ ಎಂಜಿನಿಯರಿಂಗ್ ಕಾಲೇಜು, ಸಿಎಸ್ಟಿ, ಎಫ್ಡಿಎ ಸೇರಿ ನಾವು ಅಭಿವೃದ್ಧಿಯಲ್ಲಿದ್ದೇವೆ, ಆದ್ರೆ ದೇಶವೆ ಹಿಂದುಳಿದಿದೆ. ಅಭಿವೃದ್ಧಿ ಮಾಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ʻಬೆಂಕಿಯ ಬಲೆʼಯಲ್ಲಿ ನೇಪಾಳ – ಕನ್ನಡಿಗರ ರಕ್ಷಣೆಗೆ ತಂಡ ರಚಿಸಿದ ರಾಜ್ಯ ಸರ್ಕಾರ
ಇನ್ನು ಮದ್ದೂರು ಕಲ್ಲು ತೂರಾಟ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಹಿಂದೂ ಮುಸ್ಲಿಂ ಗಲಾಟೆ ಬಿಟ್ರೆ ಬಿಜೆಪಿ ಏನೂ ಮಾಡುತ್ತಿಲ್ಲ. ಕಲ್ಲು ತೂರಾಟ ಮಾಡಿದವರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಬೇಕು. ಹಿಂದೂ ಎನ್ನುವವರು ಮೊದಲಿಗೆ ಅಂತರ್ಜಾತಿ ವಿವಾಹ ಮಾಡಿಸಲಿ, ಹಿಂದೂ ಮಾತ್ರ ಎನ್ನುವವರು ಹೀಗೆ ಮಾಡಿ. ಅವರ ಆಸ್ತಿಗಳನ್ನ ಬಡವರಿಗೆ ಕೊಡಿ. ನಾವೆಲ್ಲಾ ಹಿಂದು ನಾವೆಲ್ಲಾ ಒಂದು ಎನ್ನುವವರು ಮೊದಲು ಸಣ್ಣ ಜಾತಿಗಳವರೊಂದಿಗೆ ಮದುವೆ ಮಾಡಿಸಿ ಮಾದರಿಯಾಗಲಿ ಎಂದು ಸವಾಲೆಸೆದರು. ಇದನ್ನೂ ಓದಿ: ಮಂಗಳೂರು | ಬೈಕಂಪಾಡಿಯಲ್ಲಿ ಅಗ್ನಿ ಅವಘಡ – ಅಮೆಜಾನ್ ಸುಗಂಧದ್ರವ್ಯ ತಯಾರಕ ಕಂಪನಿ ಬೆಂಕಿಗಾಹುತಿ
ಬಿಜೆಪಿ ನಾಯಕರ ಮಕ್ಕಳು ಯಾವ ಪ್ರತಿಭಟನೆಗೆ, ಯಾವ ಹೋರಾಟಕ್ಕೆ ಬಂದಿದ್ದಾರೆ? ಬರಲ್ಲ, ಅಲ್ಲಿ ಹೋರಾಟ ಮಾಡೋದು, ಗಾಯಗಳಾಗೋದು ಎಲ್ಲವೂ ಬಡವರ ಮಕ್ಕಳಿಗೆ. ಇನ್ನೂ ಬಿಜೆಪಿಯವರು ಏನು ಮಾಡಿದ್ದಾರೆ? ಶಕ್ತಿ ಪೀಠಗಳು ಹೆಚ್ಚಾಗಿ ಮಾಡಿರುವುದು ಕಾಂಗ್ರೆಸ್ನವರು ಎಂದರು. ಇದನ್ನೂ ಓದಿ: ಸಂಡೂರಿನ ನಾರಿಹಳ್ಳದಲ್ಲಿ ಅಪರೂಪದ ಮ್ಯಾಂಗನೀಸ್ ಶಿಲಾ ಶಾಸನ ಪತ್ತೆ
ಇನ್ನೂ ಭದ್ರಾವತಿ ಶಾಸಕ ಸಂಗಮೇಶ್ ಮುಂದಿನ ಜನ್ಮದಲ್ಲಿ ಮಸ್ಲಿಂ ಆಗಿ ಹುಟ್ಟುತ್ತೇನೆ ಎಂಬ ಹೇಳಿಕೆ ಬಗ್ಗೆ ಮಾತನಾಡಿ, ದೇವೇಗೌಡ್ರು ಈ ಹಿಂದೆ ನಾನು ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟಬೇಕು ಎಂದಿದ್ದರು. ಅವರ ಬಗ್ಗೆ ನನಗೆ ಗೌರವ ಇದೆ. ಆದ್ರೆ ನಮ್ಮ ಶಾಸಕರು ಮಾತ್ರ ಹಾಗೆ ಮಾತನಾಡಬಾರದ? ನಾವು ಮಾತನಾಡಿದ್ರೆ ಓಲೈಕೆನಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ರಾಜ್ಯ ಸರ್ಕಾರ ಹಿಂದೂಗಳನ್ನ ಯಾವ ಸ್ಥಿತಿಗೆ ತಳ್ಳಿರಬಹುದು? – ವಿಜಯೇಂದ್ರ ಆತಂಕ
ಇನ್ನೂ ಧರ್ಮಸ್ಥಳಕ್ಕೆ ತೆಲುಗು ನಟ, ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಬರುವ ವಿಚಾರವಾಗಿ ಮಾತನಾಡಿದ ಅವರು, ಅಷ್ಟೇ ಬಿಜೆಪಿಯಲ್ಲಿ ಹಿಂದೂ ಅನ್ನೋ ವಿಚಾರ ಬಿಟ್ರೆ ಇನ್ನೇನಿದೆ? ಏನಕ್ಕೆ ಬರ್ತಾರೆ ಬಂದು ಏನು ಮಾಡ್ತಾರೆ? ಧರ್ಮ ರಕ್ಷಣೆ ಅಂತಾರೆ, ಇಷ್ಟೇ ಅವರ ಸಾಧನೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ – ಸೆ.12ರ ನಂತರ ಮದ್ದೂರಿಗೆ ಹೆಚ್ಡಿಕೆ