Tag: Kolar

  • ಅಕ್ರಮ ಸಂಬಂಧಕ್ಕೆ ಬೇಸತ್ತು ಗಂಡನ ಕೊಲೆಗೆ 5 ಲಕ್ಷ ರೂ.ಗೆ ಸುಪಾರಿ ಕೊಟ್ಟ ಪತ್ನಿ

    ಅಕ್ರಮ ಸಂಬಂಧಕ್ಕೆ ಬೇಸತ್ತು ಗಂಡನ ಕೊಲೆಗೆ 5 ಲಕ್ಷ ರೂ.ಗೆ ಸುಪಾರಿ ಕೊಟ್ಟ ಪತ್ನಿ

    ಕೋಲಾರ: ಪತ್ನಿಯೊಬ್ಬಳು ತನ್ನ ಪತಿಯ ಕೊಲೆಗೆ 5 ಲಕ್ಷ ರೂ. ಸುಪಾರಿ ನೀಡಿದ್ದ ಪ್ರಕರಣವನ್ನು ಬೇಧಿಸುವಲ್ಲಿ ಕೋಲಾರ ಪೊಲೀಸರು ಯಶ್ವಸಿಯಾಗಿದ್ದಾರೆ.

    ಭಾಗ್ಯಮ್ಮ ಎಂಬ ಮಹಿಳೆ 2016ರ ಜನವರಿ 13ರಂದು ತನ್ನ ಪತಿ ನಾರಾಯಣ ಅವರನ್ನು ಕೊಲೆ ಮಾಡುವುದಕ್ಕಾಗಿ 5 ಲಕ್ಷ ರೂ. ಸುಪಾರಿ ನೀಡಿದ್ದಳು. ಕೊಲೆಯ ನಂತರ ಪತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಎಲ್ಲರನ್ನೂ ನಂಬಿಸಿದ್ದಳು.

    ಕೊಲೆಯಾದ ನಾರಾಯಣ ಮೂಲತಃ ಆಂಧ್ರಪ್ರದೇಶ ರಾಜ್ಯದ ನಿವಾಸಿ. 15 ವರ್ಷಗಳ ಹಿಂದೆ ನಾರಾಯಣಸ್ವಾಮಿ ಮುಳುಬಾಗಿಲು ಪಟ್ಟಣಕ್ಕೆ ಸಪ್ಲೈಯರ್ ಕೆಲಸಕ್ಕಾಗಿ ಆಗಮಿಸಿದ್ದರು. ನಂತರ ತಾವೇ ಒಂದು `ಬಾಯಿಕೊಂಡ ಗಂಗಮ್ಮ’ ಎಂಬ ಕಬಾಬ್ ಸೆಂಟರ್ ತೆರೆದು ಯಶ್ವಸಿಯಾಗಿ, ಸಾಕಷ್ಟು ಆಸ್ತಿ ಸಂಪಾದನೆ ಮಾಡಿಕೊಂಡಿದ್ದರು. ಆದರೆ ನಾರಾಯಣಸ್ವಾಮಿ ತನ್ನ ಪತ್ನಿ ಭಾಗ್ಯಮ್ಮಳ ಅಕ್ಕ ಮತ್ತು ಆಕೆಯ ಮಗಳೊಂದಿಗೆ ಅಕ್ರಮ ಸಂಬಂಧ ಹೊಂದಿದ್ದನು ಎನ್ನಲಾಗಿದೆ.

    ಗಂಡನ ಅಕ್ರಮ ಸಂಬಂಧದ ಬೇಸತ್ತ ಭಾಗ್ಯಮ್ಮ ತನಗೆ ಪರಿಚಯವಿದ್ದ ಬಾಲಾಜಿ ಸಿಂಗ್ ಎಂಬವರ ಮೂಲಕ ಜಮೀರ್ ಪಾಷಾ ಹಾಗು ವಾಸಿಂ ಪಾಷಾರನ್ನು ಸಂಪರ್ಕಿಸಿದ್ದಳು. ಇವರಿಬ್ಬರಿಗೂ ತನ್ನ ಪತಿಯನ್ನು ಕೊಲ್ಲಲು ಬರೋಬ್ಬರಿ 5 ಲಕ್ಷ ರೂ.ಗೆ ಸುಫಾರಿ ನೀಡಿದ್ದಳು.

    ಬೆಳಕಿಗೆ ಬಂದಿದ್ದು ಹೇಗೆ?: ಆರೋಪಿಗಳಾದ ಜಮೀರ್ ಪಾಷಾ ಮತ್ತು ವಾಸಿಂ ಪಾಷಾ ದರೋಡೆ ಪ್ರಕರಣದಲ್ಲಿ ಬಂಧಿಯಾಗಿದ್ದರು. ಪೊಲೀಸರ ವಿಚಾರಣೆ ವೇಳೆ ನಾರಾಯಣಸ್ವಾಮಿಯ ಕೊಲೆಯನ್ನು ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಭಾಗ್ಯಮ್ಮಳನ್ನು ಪೊಲೀಸರು ವಿಚಾರಿಸಿದಾಗ ಆಕೆಯು ಸಹ ತಪ್ಪೊಪ್ಪಿಕೊಂಡಿದ್ದಾಳೆ.

    ಇದನ್ನೂ ಓದಿ: ಶೀಲ ಶಂಕಿಸಿದ ಗಂಡನನ್ನೇ ಕೊಂದಳು ಪತ್ನಿ!

    ಗಂಡನನ್ನು ಕೊಲ್ಲಲು ಜಮೀರ್ ಪಾಷಾ ಹಾಗು ವಸೀಂ ಪಾಷಾ ಎಂಬವರಿಗೆ ಭಾಗ್ಯಮ್ಮ ಸುಪಾರಿ ನೀಡಿದ್ದಳು ಎಂಬುದು ಈಗ ಬಯಲಾಗಿದ್ದು, ನ್ಯಾಯಾಲಯದ ಆದೇಶದಂತೆ ಇಂದು ಉಪ ವಿಭಾಗಾಧಿಕಾರಿ ಮಂಜುನಾಥ ನೇತೃತ್ವದಲ್ಲಿ ಮುಳಬಾಗಿಲು ತಾಲೂಕು ಹೊಸಹಳ್ಳಿ ರಸ್ತೆಯಲ್ಲಿರುವ ಫಾರ್ಮ್ ಹೌಸ್ ಆವರಣದಲ್ಲಿ ಮರು ಶವಪರೀಕ್ಷೆ ನಡೆಸಲಾಯಿತು.

    ಇದನ್ನೂ ಓದಿ: ಗಂಡನ ಕಾಮದಾಟ ಬೇಸತ್ತು ಸುಪಾರಿ ಕೊಟ್ಟು ಗಂಡನನ್ನೇ ಕೊಲ್ಲಿಸಿದ್ಳು!

     

  • ಮಗಳ ಸಾವಿನ ಸುದ್ದಿ ತಿಳಿದ ತಂದೆ ಹೃದಯಾಘಾತದಿಂದ ಸಾವು

    ಮಗಳ ಸಾವಿನ ಸುದ್ದಿ ತಿಳಿದ ತಂದೆ ಹೃದಯಾಘಾತದಿಂದ ಸಾವು

    ಕೋಲಾರ: ಮಗಳ ಸಾವಿನ ಸುದ್ದಿ ತಿಳಿದ ತಂದೆ ಹೃದಯಾಘಾತದಿಂದ ಸಾವನ್ನಪ್ಪಿದ ದಾರುಣ ಘಟನೆ ಕೋಲಾರ ಜಿಲ್ಲೆ ಮುಳಬಾಗಿಲು ಪಟ್ಟಣ ಮುತ್ಯಾಲಪೇಟೆಯಲ್ಲಿ ನಡೆದಿದೆ.

    ಮೇ 20 ರಂದು ಮನೆಯಲ್ಲಿ ಗ್ಯಾಸ್ ರೀಫಿಲ್ಲಿಂಗ್ ಮಾಡುವ ವೇಳೆ ಬೆಂಕಿ ತಗುಲಿ ತಂದೆ ಶ್ರೀಕಂಠ (45) ಹಾಗೂ ಅವರ ಮಕ್ಕಳಾದ 18 ವರ್ಷದ ಮಧುಮತಿ , 10 ವರ್ಷದ ರಕ್ಷಿತ ಗಾಯಗೊಂಡಿದ್ದರು. ಅವರಲ್ಲಿ ರಕ್ಷಿತ ಎಂಬ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಸಾವನ್ನಪ್ಪಿದ್ದಾಳೆ.

    ಮಗಳ ಸಾವಿನ ಸುದ್ದಿ ತಿಳಿದ ತಂದೆ ಶ್ರೀಕಂಠ ಇಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮುಳಬಾಗಿಲು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಕುಡಿತದ ಚಟ ಬಿಡಲೆಂದು ನಾಟಿ ಔಷಧಿ ಸೇವಿಸಿದ ಇಬ್ಬರ ದುರ್ಮರಣ!

    ಕುಡಿತದ ಚಟ ಬಿಡಲೆಂದು ನಾಟಿ ಔಷಧಿ ಸೇವಿಸಿದ ಇಬ್ಬರ ದುರ್ಮರಣ!

    ಕೋಲಾರ: ಕುಡಿತದ ಚಟ ಬಿಡಲು ನಾಟಿ ಔಷಧಿಯನ್ನ ಕುಡಿದ ಇಬ್ಬರು ವ್ಯಕ್ತಿಗಳು ಸಾವಿಗೀಡಾಗಿರುವ ಘಟನೆ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ನಗವಾರ ಗ್ರಾಮದಲ್ಲಿ ಕಳೆದ ರಾತ್ರಿ ನಡೆದಿದೆ.

    ನಗವಾರ ಗ್ರಾಮದ 55 ವರ್ಷದ ಚಲಪತಿ ಹಾಗೂ 38 ವರ್ಷದ ಶಂಕರಪ್ಪ ಎಂಬುವರು ಮೃತ ದುರ್ದೈವಿಗಳು.

    ಇವರು ಕಳೆದ ಹಲವು ದಿನಗಳಿಂದ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ರು, ಕುಡಿತದ ಚಟಕ್ಕೊಳಗಾಗಿದ್ದರಿಂದ ಚಟ ಬಿಡಿಸುವ ಸಲುವಾಗಿ ಸಂಬಂಧಿಕರು ಶ್ರೀನಿವಾಸಪುರ ತಾಲೂಕಿನ ಗೌನಿಪಲ್ಲಿಯ ಉಪ್ಪರಹಳ್ಳಿಯಲ್ಲಿ ನಾಟಿ ಔಷಧಿಯನ್ನ ಕೊಡಿಸಿ ಕರೆದುಕೊಂಡು ಬಂದಿದ್ರು. ಅಲ್ಲಿ ನಾಟಿವೈದ್ಯ ಸುಬ್ರಮಣಿ ಎಂಬಾತ ಮದ್ಯಪಾನದೊಂದಿಗೆ ನಾಟಿ ಔಷಧಿಯನ್ನ ಬೆರಸಿ ಕುಡಿಯಲು ನೀಡಿದ್ದನು. ಅದನ್ನ ಕುಡಿದು ಮನೆಗೆ ಬಂದ ಇಬ್ಬರು ತೀವ್ರ ಅಸ್ವಸ್ಥರಾಗಿ ಚಲಪತಿ ಎಂಬುವವರು ಮನೆಯಲ್ಲಿಯೆ ಮೃತಪಟ್ಟಿದ್ರೆ, ತೀವ್ರ ಅಸ್ವಸ್ಥನಾಗಿದ್ದ ಶಂಕರ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮದ್ಯೆ ಸಾವನ್ನಪ್ಪಿದ್ದಾರೆ.

    ಇಬ್ಬರ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಕುರಿತು ನಂಗಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

     

  • ಕುಡಿಯಲು ನೀರು ಬೇಡುತ್ತಿವೆ ವನ್ಯಜೀವಿಗಳು

    ಕುಡಿಯಲು ನೀರು ಬೇಡುತ್ತಿವೆ ವನ್ಯಜೀವಿಗಳು

    ಕೋಲಾರ: ಅದು ಬರಕ್ಕೆ ತವರು ಜಿಲ್ಲೆ, ಬೇಸಿಗೆ ಬಂದ್ರೆ ಸಾಕು ಬಿಸಿ ತಾಳಲಾರದೆ ಕಾಡಿನಿಂದ ವನ್ಯ ಜೀವಿಗಳು ಅನ್ನ ನೀರಿಗಾಗಿ ನಾಡಿಗೆ ಬಂದು ಅಪಘಾತವಾಗಿ, ನಾಯಿಗಳ ದಾಳಿಗೆ ತುತ್ತಾಗುವುದು, ಇಲ್ಲ ಕಾಡಿನಲ್ಲೇ ಪ್ರಾಣ ಬಿಡುತ್ತಿವೆ. ಇಂತಹ ಸನ್ನಿವೇಶದಲ್ಲಿ ವನ್ಯಜೀವಿಗಳಿಗೆ ನೀರು ಆಹಾರದ ವ್ಯವಸ್ಥೆ ಮಾಡಿ ಮಾನವೀಯತೆ ತೋರಿಸಬೇಕಿದೆ.

    ಕಾಡಿನಲ್ಲಿ ಸ್ವಚ್ಚಂದವಾಗಿ ಕುಣಿಯುತ್ತಿರುವ ಕಾಡು ಪ್ರಾಣಿಗಳು ಈಗ ಆಹಾರ ಬಯಸಿ ನಾಡಿಗೆ ಬಂದು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿವೆ. ಮಳೆ ಅಭಾವದಿಂದ ಬರಗಾಲಕ್ಕೆ ತುತ್ತಾಗಿರುವ ಕೋಲಾರ ಜಿಲ್ಲೆಯಲ್ಲಿ ನೀರಿಗಾಗಿ ಹಾಹಾಕಾರ ಶುರವಾಗಿದೆ. ಅದು ಕೇವಲ ಜನ-ಜಾನುವಾರುಗಳಿಗೆ ಮಾತ್ರವಲ್ಲದೇ ಕಾಡಿನಲ್ಲಿರುವ ಕಾಡು ಪ್ರಾಣಿಗಳು ಕೂಡ ನೀರಿಲ್ಲದೆ ಸಾಯುವ ಪರಿಸ್ಥಿತಿ ಬಂದಿದೆ.

    ಕಾಡಿನಲ್ಲಿರುವ ಕೆರೆ ಕುಂಟೆಗಳು ಬತ್ತಿ ಹೋಗಿದ್ದು, ಪ್ರಾಣಿಗಳು ನೀರಿಗಾಗಿ ಊರುಗಳತ್ತ ಬರುತ್ತಿದ್ದು, ಇದರಿಂದ ಅನೇಕ ಜಿಂಕೆ, ನವಿಲು, ಹಾವು ಮುಂತಾದ ಕಾಡು ಪ್ರಾಣಿಗಳು ನಾಯಿಗಳಿಗೆ, ವಾಹನಗಳಿಗೆ ಸಿಕ್ಕಿ ಪ್ರಾಣವನ್ನ ಕಳೆದುಕೊಳ್ಳುತ್ತಿವೆ. ಕೋಲಾರ ಜಿಲ್ಲೆಯಲ್ಲಿ ಸುಮಾರು 3 ರಿಂದ 4 ಸಾವಿರ ಕೃಷ್ಣಮೃಗಗಳಿದ್ದು, ನೀರಿಗಾಗಿ ನಾಡಿನತ್ತ ಬಂದು ಪ್ರಾಣ ಕಳೆದುಕೊಳ್ಳುತ್ತಿವೆ.

    ಕಾಡು ಪ್ರಾಣಿಗಳಿಗೆ ಬೇಕಿದೆ ನೀರು: ಬರದಿಂದ ಪರಿತಪ್ಪಿಸುತ್ತಿರುವ ಕಾಡಿನ ಪ್ರಾಣಿಗಳಿಗೆ ಬೇಸಿಗೆ ಮುಗಿಯವವರೆಗೂ ನೀರು ಒದಗಿಸುವ ಕೆಲಸ ಆಗಬೇಕಾಗಿದೆ. ಇದರಿಂದ ಕಾಡಿನ ಪ್ರಾಣಿ ಪಕ್ಷಿಗಳು, ನಾಡಿನತ್ತ ಮುಖ ಮಾಡುವುದು ಕಡಿಮೆಯಾಗುತ್ತದೆ. ಇಲ್ಲದಿದ್ದರೆ ನೀರನ್ನ ಹುಡುಕಿಕೊಂಡು ಬಂದು ನಾಯಿ ಅಥವಾ ರಸ್ತೆ ಅಪಘಾತದಲ್ಲಿ ಸಾವನ್ನಪ್ಪುವುದು ನಿಶ್ಚಿತ. ಅರಣ್ಯ ಸಂಪತ್ತನ್ನ ನಾಶ ಮಾಡಿ ಮಳೆಯಿಲ್ಲದೆ ಬರಗಾಲ ಅವರಿಸಿರುವ ಕೋಲಾರ ಜಿಲ್ಲೆಯಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಬೇಕು. ಅದಕ್ಕಾಗಿ ಸಂಘ ಸಂಸ್ಥೆಗಳು ಮಾತ್ರವಲ್ಲ, ಪ್ರತಿಯೊಬ್ಬರು ತಮ್ಮ ಮನೆ ಹಾಗು ಛಾವಣಿ ಮೇಲೆ ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡಿದ್ರೆ ಪ್ರಾಣಿ ಪಕ್ಷಿಗಳು ಉಳಿಯುತ್ತವೆ.

    ಒಟ್ನಲ್ಲಿ ಕೋಲಾರ ಜಿಲ್ಲೆಯಲ್ಲಿ ಜನ ಜಾನುವಾರುಗಳು ಮಾತ್ರವಲ್ಲದೆ ಕಾಡು ಪ್ರಾಣಿಗಳು ನೀರಿಗಾಗಿ ಪರಿತಪಿಸುತ್ತಿದ್ದು, ಇನ್ನಾದ್ರು ವನ್ಯ ಜೀವಿಗಳ ರಕ್ಷಣೆಗೆ ಅರಣ್ಯ ಇಲಾಖೆ, ದಾನಿಗಳು ನೀರನ್ನ ಒದಗಿಸುವ ಜೊತೆಗೆ ಮೂಕ ಪ್ರಾಣಿಗಳ ಜೀವ ಉಳಿಸುವ ಕೆಲಸ ಮಾಡಿ ಮಾನವೀಯತೆ ಮರೆಯಬೇಕಿದೆ.

    https://www.youtube.com/watch?v=L63TZVBnyxA

     

  • ಕೋಲಾರ: ನಕಲಿ ವೈದ್ಯ ಕೊಟ್ಟ ಇಂಜೆಕ್ಷನ್‍ಗೆ SSLC ಯುವಕ ಬಲಿ

    ಕೋಲಾರ: ನಕಲಿ ವೈದ್ಯ ಕೊಟ್ಟ ಇಂಜೆಕ್ಷನ್‍ಗೆ SSLC ಯುವಕ ಬಲಿ

    ಕೋಲಾರ: ನಕಲಿ ವೈದ್ಯ ನೀಡಿರುವ ಚುಚ್ಚುಮದ್ದಿನಿಂದ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ ನಡೆದಿದೆ.

    ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬೇತಮಂಗಲದಲ್ಲಿರುವ ಶಾರದಾ ಕ್ಲಿನಿಕ್‍ನಲ್ಲಿ ಬುಧವಾರದಂದು ಚಿಕಿತ್ಸೆ ಪಡೆದಿರುವ ವಡ್ಡಹಳ್ಳಿ ನಿವಾಸಿಯಾದ 16 ವರ್ಷದ ಅಭಿರಾಮ್ ಮೃತಪಟ್ಟಿದ್ದಾನೆ. ಕಿವಿ ನೋವಿಗೆಂದು ಶಾರದಾ ಕ್ಲಿನಿಕ್‍ನ ನಕಲಿ ವೈದ್ಯ ನವೀನ್ ಕುಮಾರ್ ಚುಚ್ಚು ಮದ್ದು ನೀಡಿದ್ದು, ಈ ವೇಳೆ ಅಭಿರಾಮ್ ತಕ್ಷಣವೇ ಕುಸಿದು ಬಿದ್ದಿದ್ದಾನೆ. ಅದಾದ ನಂತರ ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲು ಮಾಡಿದ ನಂತರ ಬಾಲಕ ಮೃತಪಟ್ಟಿದ್ದಾನೆ. ಅಭಿರಾಮ್ ಮನೆಯಲ್ಲಿ ಈಗ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

    ವೈದ್ಯ ನವೀನ್ ಕುಮಾರ್ ನಿರ್ಲಕ್ಷ್ಯದಿಂದ ಬಾಲಕ ಸಾವನ್ನಪ್ಪಿದಾನೆ ಎಂದು ಮೃತ ಬಾಲಕನ ಪೋಷಕರು ಹಾಗೂ ಸಂಬಂಧಿಕರು ಆರೋಪಸಿದ್ದಾರೆ. ಈ ಕುರಿತು ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.

    ಬೇತಮಂಗಲದಲ್ಲಿರುವ ಶಾರದಾ ಕ್ಲಿನಿಕ್‍ನಲ್ಲಿ ಡಾ. ನವೀನ್ ಕುಮಾರ್ ಎಂಡಿ, ಎಫ್‍ಎಜಿ ಎಂದು ಹಾಗೂ ಅತನ ಪತ್ನಿ ಶ್ವೇತ ನವೀನ್ ಕುಮಾರ್ ಎಂಬಿಬಿಎಸ್‍ಯೆಂದು ಫಲಕ ಹಾಕಿಕೊಂಡಿದ್ದಾರೆ.

     

  • ಭಾರೀ ಮಳೆಗೆ ಕೋಲಾರದಲ್ಲಿ ಭೂ ಕುಸಿತವಾಗಿ ಹೊಂಡ ನಿರ್ಮಾಣ

    ಭಾರೀ ಮಳೆಗೆ ಕೋಲಾರದಲ್ಲಿ ಭೂ ಕುಸಿತವಾಗಿ ಹೊಂಡ ನಿರ್ಮಾಣ

    ಕೋಲಾರ: ಸೋಮವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಭೂ ಕುಸಿತ ಉಂಟಾಗಿ ಹೊಂಡವೇ ನಿರ್ಮಾಣವಾಗಿರುವ ಘಟನೆ ಕೋಲಾರದ ಕೆಜಿಎಫ್‍ನ ಉರಿಗಾಂ ಬಳಿಯಿರುವ ಮಂಜುನಾಥ ನಗರದಲ್ಲಿ ನಡೆದಿದೆ.

    ನಿನ್ನೆ ರಾತ್ರಿ ಬಿದ್ದ ಮಳೆಯಿಂದ ಸುಮಾರು 50 ರಿಂದ 70 ಅಡಿಗಳಷ್ಟು ಭೂಮಿ ಕುಸಿದು ಹೊಂಡ ನಿರ್ಮಾಣವಾಗಿದ್ದು, ಘಟನೆಯಿಂದ ಸ್ಥಳೀಯರು ಆತಂಕಕ್ಕೀಡಾಗಿದ್ದಾರೆ. ಭೂ ಕುಸಿತದಿಂದ ಉಂಟಾಗಿರುವ ಹೊಂಡವನ್ನು ಜನರು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ.

    ಈ ಹಿಂದೆ ಕೆಜಿಎಫ್‍ನಲ್ಲಿ ಬಿಜಿಎಂಎಲ್ ಮೈನಿಂಗ್ ನೆಡದಿದ್ದು ಇದರ ಪರಿಣಾಮದಿಂದಲೇ ಭೂ ಕುಸಿತವಾಗಿರಬಹುದು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಘಟನೆ ಸಂಭವಿಸಿದ್ದರೂ ಸ್ಥಳಕ್ಕೆ ಯಾವುದೇ ಅಧಿಕಾರಿಗಳು ಭೇಟಿ ನೀಡಿಲ್ಲ. ಹೀಗಾಗಿ ಸ್ಥಳೀಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ರಾಜ್ಯದ ಹಲವೆಡೆ ರಾತ್ರಿ ಗುಡುಗು ಸಹಿತ ಮಳೆ- ಮೈಸೂರಿನಲ್ಲಿ ಸಿಡಿಲು ಬಡಿದು ವ್ಯಕ್ತಿ ಸಾವು

    ರಾಜ್ಯದ ಹಲವೆಡೆ ರಾತ್ರಿ ಗುಡುಗು ಸಹಿತ ಮಳೆ- ಮೈಸೂರಿನಲ್ಲಿ ಸಿಡಿಲು ಬಡಿದು ವ್ಯಕ್ತಿ ಸಾವು

    ಬೆಂಗಳೂರು: ಮಂಗಳವಾರ ರಾತ್ರಿ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆಯಾಗಿದೆ. ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಮಳೆ ಬಂದಿದ್ದರಿಂದ ವಾಹನ ಸವಾರರು ಪರದಾಡಿದರು. ರಾಮನಗರದಲ್ಲೂ ಭಾರಿ ಮಳೆಯಾಗಿದ್ದು ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ವಾಹನ ಸವಾರರು ಪರದಾಡುವಂತಾಯಿತು.

    ಮೈಸೂರಿನಲ್ಲೂ ಮಳೆಯಾಗಿದ್ದು, ನಗರದ ಹೊರವಲಯದ ಕೆಂಪಯ್ಯನಹುಂಡಿಯಲ್ಲಿ ಸಿಡಲು ಬಡಿದು ನಾಡನಹಳ್ಳಿ ಗ್ರಾಮದ ನಿವಾಸಿ ನಾಗರಾಜು (42) ಎಂಬವರು ಸಾವನ್ನಪ್ಪಿದ್ದಾರೆ. ಕೆಂಪಯ್ಯನಹುಂಡಿಗೆ ಕೂಲಿ ಕೆಲಸಕ್ಕೆ ನಾಗರಾಜು ಬಂದಿದ್ದರು ಎಂದು ತಿಳಿದುಬಂದಿದೆ. ಈ ಸಂಬಂಧ ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

    ಕೋಲಾರ ಜಿಲ್ಲೆ ಮುಳಬಾಗಲು ತಾಲೂಕಿನ ಪಿ.ಗಂಗಾಪುರದಲ್ಲಿ ಒನಮ್ಮ ಎಂಬುವರಿಗೆ ಸೇರಿದ ಸೀಮೆಹಸುವೊಂದು ಸಿಡಿಲು ಬಡಿತಕ್ಕೆ ಸಿಲುಕಿ ಸಾವನ್ನಪ್ಪಿದೆ. ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹಿತ್ತಲಪುರಗ್ರಾಮದಲ್ಲಿ ಗ್ರಾಮದ ನಂಜುಂಡಯ್ಯ ಎಂಬುವರಿಗೆ ಸೇರಿದ ಹಸು ಸಾವನ್ನಪ್ಪಿದೆ. ಈ ವೇಳೆ ಅದೃಷ್ಟವಶಾತ್ ಸ್ಥಳದಲ್ಲಿದ್ದ ನಂಜುಡಯ್ಯ ಪಾರಾಗಿದ್ದಾರೆ.

     

  • ಬೆಳಕು ಇಂಪ್ಯಾಕ್ಟ್: 16 ವರ್ಷಗಳಿಂದ ಹಾಲು ಕುಡಿಯುವ ಬಾಲಕನಿಗೆ ಸಿಕ್ತು ನೆರವು

    ಬೆಳಕು ಇಂಪ್ಯಾಕ್ಟ್: 16 ವರ್ಷಗಳಿಂದ ಹಾಲು ಕುಡಿಯುವ ಬಾಲಕನಿಗೆ ಸಿಕ್ತು ನೆರವು

    ಕೋಲಾರ: ಆತ ಅನ್ನ ತಿನ್ನಲ್ಲ ನೀರು ಕುಡಿಯಲ್ಲ, ಕಳೆದ 16 ವರ್ಷಗಳಿಂದ ಅನ್ನ ನೀರು ಇಲ್ಲದೆ ಬದುಕುತ್ತಿರುವ ಬಾಲಕನಿಗೆ ಕೇವಲ ಹಾಲಷ್ಟೇ ಆಹಾರ. ಬರಿ ಹಾಲು ಕುಡಿದೆ ಜೀವನ ಸವೆಸುತ್ತಿರುವ ಬಾಲಕನಿಗೆ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮ ಆಸರೆಯಾಗಿದೆ. ಬೆಳಕಿನ ನೆರವಿನಿಂದ ಬಾಲಕನಿಗೆ ಹಾಲು, ಆತನನ್ನ ಪೋಷಣೆ ಮಾಡಲು ಕುಟುಂಬಕ್ಕೆ ನೆರವು ಸಿಕ್ಕಿದೆ.

    ಕೋಲಾರ ತಾಲೂಕಿನ ಕೋಡಿ ಕಣ್ಣೂರು ಗ್ರಾಮದ ಗೋವಿಂದಪ್ಪ ದಂಪತಿಗಳ ಎರಡನೆ ಮಗ ಸಂತೋಷ್ ಕೇವಲ ಹಾಲು ಮಾತ್ರ ಕುಡಿಯುತ್ತಾನೆ. ಸಂತೋಷ್ ಹುಟ್ಟಿದಾಗಿನಿಂದಲೂ ಅನ್ನವನ್ನು ಸೇವಿಸಲ್ಲ. ಇದುವರೆಗೂ ಬದುಕಿರೋದು ಕೇವಲ ಹಾಲನ್ನ ಕುಡಿದು ಅನ್ನೋದೆ ವಿಶೇಷ. ಬೇರೆ ಲಿಕ್ವಡ್ ಕುಡಿಸುವ ಪೋಷಕರು ಪಟ್ಟಿರುವ ಪ್ರಯತ್ನ ಅಷ್ಟಿಷ್ಟಲ್ಲ, ಈತನ ಬಾಯಿಗೆ ತಿಂಡಿ ಅಥವಾ ಇನ್ನೇನಾದ್ರು ತಿನ್ನಿಸೋದಿಕ್ಕೆ ಬಂದ್ರು ಉಗಿದುಬಿಡ್ತಾನೆ. ಹಾಲು ತುಂಬಿದ ಬಾಟಲ್ ಮಾತ್ರ ಈತನಿಗೆ ಗೊತ್ತಿರೋದು.

    ಹೀಗಿರುವಾಗ ಸಂತೋಷ್ ಪೋಷಕರು ಪಬ್ಲಿಕ್ ಟಿವಿಯನ್ನ ಸಂಪರ್ಕಿಸಿ ಪ್ರತಿ ನಿತ್ಯ ಹಾಲು ಕೊಡಿಸುವಂತೆ ಮನವಿ ಮಾಡಿದ್ರು. ಪಬ್ಲಿಕ್ ಟಿವಿ ಮನವಿಯಂತೆ ಕೋಲಾರ, ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಪ್ರತಿನಿತ್ಯ ಹಾಲು ನೀಡುತ್ತಿದೆ. ಜೊತೆಗೆ ಕುಟುಂಬ ಪೋಷಣೆಗೆ ಒಂದು ಉದ್ಯೋಗಕ್ಕೆ ಕೂಡ ಬೆಳಕು ಆಸರೆಯಾಗಿದೆ.

    ಬೆಳಕಿನ ಆಸರೆ: ಸಂತೋಷ್ 6 ತಿಂಗಳ ಮಗುವಿನಲ್ಲಿ ಪಿಡ್ಸ್ ಬಂದು ಶಾಕ್ ಆದ ಕಾರಣ ಒಂದು ಕೈ, ಮೆದಳು ಸ್ವಾಧೀನ ಕಳೆದುಕೊಂಡಿದೆ. ಬೆಂಗಳೂರಿನ ವಿಕ್ಟೋರಿಯಾ, ನಿಮ್ಹಾನ್ಸ್ ಆಸ್ಪತ್ರೆಗಳು ಸೇರಿದಂತೆ ಹಲವೆಡೆ ತೋರಿಸಲಾಗಿದೆ. ಆದ್ರೂ ಯಾವುದೆ ಪ್ರಯೋಜನವಾಗಿಲ್ಲ, ಮೆದುಲಿಗೆ ಶಾಕ್ ಆಗಿರೋ ಕಾರಣ ಜೀವನ ಪರ್ಯಂತ ಇದು ಸರಿಹೋಗಲ್ಲ ಎಂದು ವೈದ್ಯರು ಹೇಳಿ ಕಳುಹಿಸಿದ್ದಾರೆ. ಕೂಲಿ ಮಾಡಿ ಜೀವನ ಸಾಗಿಸುವುದು ಕಷ್ಟಕರವಾದ ಜೀವನದಲ್ಲಿ ಮಗನಿಗೆ ದಿನಕ್ಕೆ ಅಲ್ಪಸ್ವಲ್ಪ ಹಾಲಿನ ಜೊತೆಗೆ, ಕೋಲಾರ ನೂತನ ವಿಧಾನ ಸೌಧ ಬಳಿ ಜೆರಾಕ್ಸ್ ಅಂಗಡಿ ಹಾಕಿ ಕೊಳ್ಳಲು ಅನುಮತಿ ಸಿಕ್ಕಿದೆ. ಅದರಂತೆ ಈಗ ಹಾಲು ಹಾಗೂ ಉದ್ಯೋಗ ಕಲ್ಪಿಸುವ ಮೂಲಕ ಬಡ ಕುಟುಂಬಕ್ಕೆ ಬೆಳಕಿನ ಆಸರೆ ಸಿಕ್ಕಿದೆ.

    ಒಟ್ನಲ್ಲಿ ಬೆಳಕು ಕಾರ್ಯಕ್ರಮದ ಮೂಲಕ ಸಂತೋಷನಿಗೆ ಹಾಲು ಕೊಡಿಸಿದ ಸಂತೋಷ, ಇತ್ತ ಕುಟುಂಬ ಪೋಷಣೆಗೆ ಒಂದು ಸಣ್ಣ ಅಂಗಡಿಗೂ ಅನುಮತಿ ನೀಡಿದ ಕಾಳಜಿ, ಇದರಿಂದ ಒಂದು ಬಡ ಕುಟುಂಬಕ್ಕೆ ಬೆಳಕು ಆಸರೆಯಾಯಿತಲ್ಲ ಎಂಬುದೇ ನೆಮ್ಮದಿಯ ವಿಚಾರ.

     

  • ತೆಲುಗು ಪ್ರಭಾವದ ಮಧ್ಯೆಯೂ ಕನ್ನಡದ ಕಂಪು ಪಸರಿಸುತ್ತಿರೋ ಕೋಲಾರದ ಕಿರಣ್

    ತೆಲುಗು ಪ್ರಭಾವದ ಮಧ್ಯೆಯೂ ಕನ್ನಡದ ಕಂಪು ಪಸರಿಸುತ್ತಿರೋ ಕೋಲಾರದ ಕಿರಣ್

    ಕೋಲಾರ: ತೆಲುಗು ಪ್ರಭಾವವೇ ಹೆಚ್ಚಿರುವ ಕೋಲಾರದ ಗಡಿ ಶ್ರೀನಿವಾಸಪುರದ ಕಿರಣ್ ಕನ್ನಡದ ಕಂಪು ಪಸರಿಸ್ತಿದ್ದಾರೆ.

    ಸಣ್ಣದೊಂದು ಕೊಠಡಿಯಲ್ಲಿಯೇ ಹೋರಾಟಗಾರರು, ಜ್ಞಾನಪೀಠ ಪುರಸ್ಕೃತರು, ಸಂತರು, ದಾರ್ಶನಿಕರು, ಸಮಾಜ ಸುಧಾರಕರ ಫೋಟೊಗಳಿಗೆ ಪೂಜೆ ಸಲ್ಲಿಸುತ್ತಿರುವ ಕಿರಣ್, ಕೋಲಾರದ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸ್ನಾತ್ತಕೋತ್ತರ ಪದವಿ ವಿದ್ಯಾರ್ಥಿ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಗಡಿ ಸೋಮಯಾಜಲಹಳ್ಳಿಯಲ್ಲಿ ಇಂದಿಗೂ ತೆಲುಗಿನ ಪ್ರಭಾವವೇ ಹೆಚ್ಚು. ಇದರ ನಡುವೆಯೂ ಕಿರಣ್ ಮಾತ್ರ ಕನ್ನಡವನ್ನೇ ಪಸರಿಸ್ತಿದ್ದಾರೆ.

    ಸರ್ಕಾರದ ಸಣ್ಣ ಕಟ್ಟಡದ ಆಶ್ರಯ ಪಡೆದುಕೊಂಡಿರುವ ಕಿರಣ್, ಮನೆಯವರ ಆಸರೆ ಇಲ್ಲದೆ ವಿದ್ಯಾರ್ಥಿ ವೇತನದಲ್ಲೇ ಓದ್ತಿದ್ದಾರೆ. ಕಿರಣ್ ಹವ್ಯಾಸ ಮತ್ತು ಕನ್ನಡಾಭಿಮಾನವನ್ನ ಕಂಡ ಸ್ಥಳೀಯರು ಬೆಂಬಲಕ್ಕೆ ನಿಂತಿದ್ದಾರೆ.

    ಒಟ್ಟಿನಲ್ಲಿ, ಯುವ ಪೀಳಿಗೆಯಂತೆ ಮೊಬೈಲ್ ಮೇನಿಯಾದಲ್ಲಿ ಮುಳುಗಿಹೋಗದ ಕಿರಣ್ ಎಲ್ಲರ ಗಮನ ಸೆಳೆದಿದ್ದಾರೆ.

    https://www.youtube.com/watch?v=VqZ-7hzYkNQ

  • ವಿಡಿಯೋ: ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಪೊಲೀಸರ ಎದುರೇ ಇತ್ತಂಡಗಳ ಹೊಡೆದಾಟ

    ವಿಡಿಯೋ: ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಪೊಲೀಸರ ಎದುರೇ ಇತ್ತಂಡಗಳ ಹೊಡೆದಾಟ

    ಕೋಲಾರ: ನಗರದ ಜಿಲ್ಲಾಸ್ಪತ್ರೆಯಲ್ಲಿ ಪೊಲೀಸರ ಎದುರೇ ಇತ್ತಂಡಗಳು ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ಬುಧವಾರ ರಾತ್ರಿ ನಡೆದಿದೆ. ಈ ದೃಶ್ಯಗಳು ಜಿಲ್ಲಾಸ್ಪತ್ರೆಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

    ನಗರದ ಶೇನ್ ಷಾ ಬಡವಾಣೆಯಲ್ಲಿ ಉರುಸ್ ಮೆರವಣಿಗೆ ವೇಳೆ ಏಜಾಜ್ ಅಹಮದ್ ಮತ್ತು ವಸೀಮ್ ಗುಂಪುಗಳ ನಡುವೆ ಗಲಾಟೆ ಉಂಟಾಗಿತ್ತು. ಎರಡು ಗುಂಪುಗಳು ಒಬ್ಬರ ಮೇಲೊಬ್ಬರು ಬ್ಲೇಡ್ ಮತ್ತು ಚಾಕುವಿನಿಂದ ಹಲ್ಲೆ ಮಾಡಿಕೊಂಡಿದ್ದರು. ಗಲಾಟೆಯಲ್ಲಿ ಏಜಾಜ್ ಅಹಮದ್ ಗುಂಪಿನ 6 ಜನರು ಗಂಭೀರವಾಗಿ ಗಾಯಗಳಾಗಿತ್ತು.

    ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ತೀವ್ರ ನಿಘಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆಸ್ಪತ್ರೆಗೆ ಗಾಯಾಳುಗಳನ್ನು ದಾಖಲು ಮಾಡುತ್ತಿದ್ದಂತೆ ತುರ್ತು ನಿಗಾ ಘಟಕದಲ್ಲಿ ಸ್ಥಳದಲ್ಲಿಯೇ ಪೊಲೀಸರು ಇದ್ದರೂ ಎರಡು ಗುಂಪುಗಳ ಸದಸ್ಯರು ಕೈಗೆ ಸಿಕ್ಕ ವಸ್ತುಗಳಿಂದ ಹಲ್ಲೆ ಮಾಡಿಕೊಳ್ಳಲು ಮುಂದಾಗಿದ್ದರು. ಇದರಿಂದ ಆಸ್ಪತ್ರೆಯಲ್ಲಿದ್ದ ಸಿಬ್ಬಂದಿ ಮತ್ತು ರೋಗಿಗಳಲ್ಲಿ ಭಯದ ವಾತವಾರಣ ನಿರ್ಮಾಣವಾಗಿತ್ತು.

    ವಿಷಯ ತಿಳಿದು ಸ್ಥಳಕ್ಕಾಗಾಮಿಸಿದ ನಗರ ಠಾಣಾ ಪಿಎಸ್‍ಐ ಪ್ರದೀಪ್ ವಾಸೀಂ ಗುಂಪಿನ 8 ಜನರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    https://www.youtube.com/watch?v=EnSV5WDKu1M