Tag: Kola

  • ಇಷ್ಟಾರ್ಥಸಿದ್ಧಿಗಾಗಿ ಹರಕೆ ಕೋಲ ನೆರವೇರಿಸಿದ ಯು.ಟಿ ಖಾದರ್

    ಇಷ್ಟಾರ್ಥಸಿದ್ಧಿಗಾಗಿ ಹರಕೆ ಕೋಲ ನೆರವೇರಿಸಿದ ಯು.ಟಿ ಖಾದರ್

    ಮಂಗಳೂರು: ಇಷ್ಟಾರ್ಥಸಿದ್ಧಿಗಾಗಿ ವಿಧಾನಸಭಾ ಸಭಾಧ್ಯಕ್ಷರಾದ ಯು.ಟಿ ಖಾದರ್ (UT Khader) ಹರಕೆ ಕೋಲ ನೆರವೇರಿಸಿದ್ದಾರೆ.

    ಶ್ರೀ ಕ್ಷೇತ್ರ ಪನೋಲಿ ಬೈಲ್‌ನಲ್ಲಿ ತುಳುನಾಡಿನ ಕಾರ್ಣಿಕ ದೈವಗಳಾದ ಕಲ್ಲುರ್ಟಿ ಕಲ್ಕುಡ ದೈವಗಳ ಹರಕೆ ಕೋಲ (Daiva Kola) ನೆರವೇರಿಸಿದ್ದಾರೆ. ಇದನ್ನೂ ಓದಿ: ಮಥುರಾದಲ್ಲಿ ಕೃಷ್ಣ ದೇವಸ್ಥಾನ ಕೆಡವಿ ಮಸೀದಿ ನಿರ್ಮಾಣ – ಭಾರತೀಯ ಪುರಾತತ್ವ ಇಲಾಖೆ

    ಸ್ಥಳೀಯ ಮುಖಂಡರೊಂದಿಗೆ ಪೂಜಾ ಕೈಂಕರ್ಯಗಳಲ್ಲಿ ಭಾಗಿಯಾಗಿದ್ದ ಖಾದರ್, ಸಂಪ್ರದಾಯ ಬದ್ಧವಾಗಿ ಕೋಲ ನೆರವೇರಿಸಿ ಕಲ್ಲುರ್ಟಿ-ಕಲ್ಕುಡ ದೈವಗಳ ಆಶೀರ್ವಾದ ಪಡೆದಿದ್ದಾರೆ.

    ಯು.ಟಿ ಖಾದರ್ ಅವರೊಂದಿಗೆ ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜಾವ ಮತ್ತಿತ್ತರು ಭಾಗಿಯಾಗಿದ್ದರು. ಇದನ್ನೂ ಓದಿ: ಸಿಲಿಕಾನ್ ಸಿಟಿ ಸೇರಿದಂತೆ 4 ತಿಂಗಳು ರಾಜ್ಯವನ್ನ ಕಾಡಲಿದೆ ರಣಬಿಸಿಲು 

  • ಬಿಜೆಪಿ ಟಿಕೆಟ್‍ಗಾಗಿ ದೈವದ ಮೊರೆ ಹೋದ ಮಡಿಕೇರಿ ಆಕಾಂಕ್ಷಿ ಭರತೀಶ್

    ಬಿಜೆಪಿ ಟಿಕೆಟ್‍ಗಾಗಿ ದೈವದ ಮೊರೆ ಹೋದ ಮಡಿಕೇರಿ ಆಕಾಂಕ್ಷಿ ಭರತೀಶ್

    ಮಡಿಕೇರಿ: ವಿಧಾನಸಭೆ ಚುನಾವಣೆ ಸ್ಪರ್ಧೆಗೆ ಬಿಜೆಪಿ (BJP) ಪಾಳಯದಲ್ಲಿ ಟಿಕೆಟ್‍ಗಾಗಿ ನಾನಾ ಕಸರತ್ತು ನಡೆಯುತ್ತಿದೆ. ಹಾಲಿ ಶಾಸಕರು ಹಾಗೂ ಹೊಸ ಮುಖಗಳು ಸಾಕಷ್ಟು ಲಾಬಿ ನಡೆಸುತ್ತಿದ್ದಾರೆ. ಈ ನಡುವೆ ಬಿಜೆಪಿ ನಾಯಕರು ಯಾರಿಗೆ ಟಿಕೆಟ್ ನೀಡಿದರೆ ಆ ಕ್ಷೇತ್ರ ಪಕ್ಷದ ಪಾಲಾಗುತ್ತದೆ ಎಂಬ ಲೆಕ್ಕಾಚಾರದಲ್ಲಿದ್ದಾರೆ. ಇದೇ ಸಂದರ್ಭದಲ್ಲಿ ಮಡಿಕೇರಿ (Madikeri) ಕ್ಷೇತ್ರದ ಪ್ರಬಲ ಆಕಾಂಕ್ಷಿಯೊಬ್ಬರು ರಾತ್ರಿ ವೇಳೆಯಲ್ಲಿ ದೈವದ (Daiva) ಮೊರೆ ಹೋಗಿ ವಿಶೇಷ ಪೂಜೆ ನೆರವೇರಿಸಿದ್ದಾರೆ.

    ಬಿಜೆಪಿ ಟಿಕೆಟ್ ಆಕಾಂಕ್ಷಿ ಅಗಿರುವ ಬಿ.ಬಿ ಭರತೀಶ್ ಎಂಬವರು ಮಡಿಕೇರಿ ನಗರದ ಮುತ್ತಪ್ಪನ್ ದೇವಾಲಯದ ಆವರಣದಲ್ಲಿ ನಡೆಯುತ್ತಿರುವ ದೈವಾರಾಧಾನೆಯಲ್ಲಿ ಕಾಣಿಸಿಕೊಂಡಿದ್ದಾರೆ. ಶುಕ್ರವಾರ ಒಂಭತ್ತು ಕೋಲಗಳ ಅರಾಧನೆ ನಡೆಯುವ ಸಂದರ್ಭದಲ್ಲಿ ಭರತೀಶ್ ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸಿದ್ದಾರೆ. ತಮಗೆ ಟಿಕೆಟ್ ದೊರೆಯುವಂತೆ ಹಾಗೂ ಮಡಿಕೇರಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ದೇವರು ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ. ಇದನ್ನೂ ಓದಿ: ನನ್ನ ಮಗನನ್ನು ನಿಮಗೆ ಬಿಟ್ಟಿದ್ದೇನೆ- ಕಾಂತಾದೇವಿ ಛೋಪ್ರಾ ಕಣ್ಣೀರು

    ಬಳಿಕ ಸುದ್ದಿಗಾರರೊಂದಿಗೆ ಮಾತಾನಾಡಿ, ಇದೇ ಮೊದಲ ಬಾರಿಗೆ ಮುತ್ತಪ್ಪನ್ ದೇವಾಲಯಕ್ಕೆ ಬಂದಿದ್ದೇನೆ. ದೇವರ ಬಳಿ ಇಷ್ಟಾರ್ಥ ಈಡೇರುವಂತೆ, ಕೊಡಗಿನಲ್ಲಿ (Kodagu) ಪ್ರಕೃತಿ ವಿಕೋಪಗಳು ನಡೆಯದೆ ಇರಲಿ ಹಾಗೂ ನಾಡು ಸಮೃದ್ಧಿಯಿಂದ ಇರುವಂತೆ ಪೂಜೆ ಸಲ್ಲಿಸಿದ್ದೇನೆ ಎಂದು ತಿಳಿಸಿದ್ದಾರೆ.

    ಹೈಕಮಾಂಡ್‍ನಿಂದ ಈಗಾಗಲೇ ಬಿಜೆಪಿ ಪಾಳಯದಲ್ಲಿ ಹೊಸ ಮುಖಗಳಿಗೆ ಆದ್ಯತೆ ನೀಡುವ ತೀರ್ಮಾನವಾಗಿದೆ. ತಮಗೂ ಈ ಬಾರಿ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿ ಭರತೀಶ್ ಇತ್ತೀಚಿಗೆ ದೇವಾಲಯಗಳನ್ನು ಸುತ್ತುವುದರಲ್ಲಿ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ: ಮಾನ್ವಿ ಕ್ಷೇತ್ರದಲ್ಲಿ ಜೋರಾದ ಕಾಂಗ್ರೆಸ್ ಟಿಕೆಟ್ ಫೈಟ್- ಸ್ಥಳೀಯರಿಗೆ ಮಣೆ ಹಾಕದಿದ್ದರೆ ಬಂಡಾಯದ ಎಚ್ಚರಿಕೆ

  • ಶ್ರೀ ಕ್ಷೇತ್ರ ಮಂದಾರಬೈಲಿನಲ್ಲಿ ವರ್ಷಾವಧಿ ಕೋಲ ಬಲಿ ಸೇವೆ

    ಶ್ರೀ ಕ್ಷೇತ್ರ ಮಂದಾರಬೈಲಿನಲ್ಲಿ ವರ್ಷಾವಧಿ ಕೋಲ ಬಲಿ ಸೇವೆ

    ಮಂಗಳೂರು: ಶ್ರೀ ಕ್ಷೇತ್ರ ಮಂದಾರಬೈಲು (Mandarbailu) ರಕ್ತೇಶ್ವರಿ, ಮಂತ್ರದೇವತೆ, ರಾಹು ಗುಳಿಗ ಸನ್ನಿಧಿಯಲ್ಲಿ ವರ್ಷಾವಧಿ ಕೋಲ ಬಲಿ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದೆ.

    ಸೋಮವಾರ ರಾತ್ರಿ 7:30ರಿಂದ ರಂಗಪೂಜೆ, ಬೆಳ್ಳಿ ರಥೋತ್ಸವ, ಮಂಗಳವಾರ ಬೆಳಗ್ಗೆ 8:00ರಿಂದ ನಾಗದೇವರಿಗೆ ತಂಬಿಲಸೇವೆ, ಆಶ್ಲೇಷಾ ಬಲಿ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ತಾಯಿಗೆ ಪಂಚಾಮೃತಾಭಿಷೇಕ, ಮಂದಾರಬೈಲ್ ಶ್ರೀ ದುರ್ಗಾಪರಮೇಶ್ವರೀ ವೆಂಕಟರಮಣ ದೇವರಿಗೆ ರಂಗಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.

    ಬುಧವಾರ ಬೆಳಗ್ಗೆ 8:00ಕ್ಕೆ ತಾಯಿಗೆ ಪಂಚಾಮೃತಾಭಿಷೇಕ, ಸರ್ವಾಲಂಕಾರ ಪೂಜೆ, ತಾಯಿಗೆ ವಿಶೇಷ ಅಷ್ಟನಾದದೊಂದಿಗೆ ಉಯ್ಯಾಲೆ ಸೇವೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿದೆ. ಗುರುವಾರ ಬೆಳಗ್ಗೆ 6:30ರಿಂದ 108 ಕಾಯಿ ಗಣಪತಿ ಹೋಮ, ಪಂಚಾಮೃತಾಭಿಷೇಕ, ಸರ್ವಾಲಂಕಾರ ಪೂಜೆ, ಅನ್ನಸಂತರ್ಪಣೆ ನಡೆಯಲಿದ್ದು, ಶುಕ್ರವಾರ ಬೆಳಗ್ಗೆ 6:30ರಿಂದ ಶ್ರೀ ಸೂಕ್ತ ಹೋಮ, ಧನ್ವಂತಲ ಹೋಮ, ತಾಯಿಗೆ ಹರಕೆ ರೂಪದಲ್ಲಿ ಬರುವ ಬೆಳ್ಳಿ ಬಂಗಾರವನ್ನು ಸಮರ್ಪಿಸುವುದು. ಸಂಜೆ ಗಂಟೆ 4:30ರಿಂದ ವಿವಿಧ ಭಜನಾ ತಂಡದವರಿಂದ ‘ಭಜನಾ ಸತ್ಸಂಗ ಕಾರ್ಯಕ್ರಮ’ ಜರುಗಲಿದೆ. ಇದನ್ನೂ ಓದಿ: ಶ್ರೀಕೃಷ್ಣ, ಹನುಮಂತ ಇಬ್ಬರೂ ಶ್ರೇಷ್ಠ ರಾಜತಾಂತ್ರಿಕರು: ಜೈಶಂಕರ್‌

    ಶನಿವಾರ ಬೆಳಗ್ಗೆ 7:30ರಿಂದ ಶ್ರೀ ಸತ್ಯನಾರಾಯಣ ಪೂಜೆ 10:40ರ ಶುಭಲಗ್ನದಲ್ಲಿ ಭಂಡಾರ ಏರುವುದು, ಪಲ್ಲಪೂಜೆ, ಅನ್ನಸಂತರ್ಪಣೆ ಹಾಗೂ ಸಂಜೆ 7:30ರಿಂದ ರಕ್ತೇಶ್ವರೀ ದೈವದ ನೇಮ, ನಂತರ ಶ್ರೀ ಮಂತ್ರದೇವತೆ ದೈವದ ಕೋಲ ಬಲಿ ಸೇವೆ, ದರ್ಶನ ಬಲಿ, ಪಲ್ಲಕ್ಕಿ ಬಲಿ, ಬೆಳ್ಳಿರಥೋತ್ಸವ, ತುಲಾಭಾರ ಸೇವೆ, ಅಭಯಪ್ರದಾನ, ಪ್ರಸಾದ ವಿತರಣೆ ನಡೆಯಲಿದೆ.

    ಭಾನುವಾರ ರಾತ್ರಿ ಗಂಟೆ 8:05ರಿಂದ ಶ್ರೀ ಗುಳಿಗ ದೈವದ ಕೋಲಬಲಿ ಸೇವೆ, ಅಭಯ ಪ್ರದಾನ, ಪ್ರಸಾದ ವಿತರಣೆ ಜರುಗಲಿದೆ. ಭಾನುವಾರ ಕ್ಷೇತ್ರದಲ್ಲಿ ವರ್ಷಾವಧಿ ಅಗೇಲು ಸೇವೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಭಾರತದ ಮಹಿಳೆಯರಿಗೆ ಚೊಚ್ಚಲ ಅಂಡರ್‌ 19 ವಿಶ್ವಕಪ್‌

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದೈವಕ್ಕೆ ಕೋಲ ನೀಡಿದ ಚಾರ್ಲಿ ಬೆಡಗಿ ಸಂಗೀತಾ ಶೃಂಗೇರಿ

    ದೈವಕ್ಕೆ ಕೋಲ ನೀಡಿದ ಚಾರ್ಲಿ ಬೆಡಗಿ ಸಂಗೀತಾ ಶೃಂಗೇರಿ

    ಕ್ಷಿತ್ ಶೆಟ್ಟಿ ನಟನೆಯ ಚಾರ್ಲಿ 777 ( Charlie 777)  ಮತ್ತು ಪುನೀತ್ ರಾಜ್ ಕುಮಾರ್ ನಟಿಸಿದ್ದ ಲಕ್ಕಿ ಮ್ಯಾನ್ ಸಿನಿಮಾಗಳ ಖ್ಯಾತಿಯ ನಟಿ ಸಂಗೀತಾ ಶೃಂಗೇರಿ (Sangeetha Sringeri) ನಿನ್ನೆಯಷ್ಟೇ ದೈವಕ್ಕೆ (Koragajja) ಕೋಲ (Kola) ನೀಡಿ ಪೂಜೆ ಸಲ್ಲಿಸಿದ್ದಾರೆ. ಮೊನ್ನೆಯಷ್ಟೇ ನಟಿ ಶ್ರುತಿ ಇದೇ ಕೊರಗಜ್ಜನಿಗೆ ಕೋಲ ನೀಡಿದ್ದರು. ನಟಿ ಪ್ರೇಮಾ ಕೂಡ ದರ್ಶನ ಪಡೆದುಕೊಂಡಿದ್ದರು. ಈಗ ನಿರೂಪಕಿ ಅನುಶ್ರೀ (Anushree) ಜೊತೆ ಕೊರಗಜ್ಜನಿಗೆ ಕೋಲ ಸೇವೆ ಮಾಡಿದ್ದಾರೆ ಸಂಗೀತಾ.

    ಈ ಕುರಿತಂತೆ ತಮ್ಮ ಅನುಭವಗಳನ್ನು ಬರೆದುಕೊಂಡಿರುವ ಸಂಗೀತಾ ‘ನನಗೆ ಕಳೆದೆರಡು ದಿನಗಳಿಂದ ದಿವ್ಯ ಅನುಭವದಲ್ಲಿ ಇದ್ದೇನೆ. ಆ ಭಾವನೆಗಳನ್ನು ಪದಗಳಲ್ಲಿ ಹೇಳುವುದಕ್ಕೆ ಸಾಧ್ಯವಿಲ್ಲ. ತುಳುನಾಡು ದೈವ ಕೋಲಕ್ಕೆ ನಾನು ಸಾಕ್ಷಿಯಾಗಿದ್ದೇನೆ ಎನ್ನುವುದು ನನ್ನ ಪುಣ್ಯ. ಇಂಥದ್ದೊಂದು ಸಾನಿಧ್ಯ ಸಿಕ್ಕಿರುವುದಕ್ಕೆ ಕಾರಣ ನಿರ್ದೇಶಕರಾದ ಕಿರಣ್ ರಾಜ್ ಮತ್ತು ಭರತ್ ರಾಜ್ ಕೆ ಯಾದವ್. ಇವರ ಕುಟುಂಬಕ್ಕೆ ಕೃತಜ್ಞೆತೆಗಳು’ ಎಂದು ಬರೆದುಕೊಂಡಿದ್ದಾರೆ.

    ಕನ್ನಡ ಕಿರುತೆರೆ ಜಗತ್ತಿನಿಂದ ಬಣ್ಣದ ಪ್ರಪಂಚಕ್ಕೆ ಪರಿಚಯವಾದ ಸಂಗೀತಾ ಶೃಂಗೇರಿ, ಆನಂತರ ಎರಡು ಸೂಪರ್ ಹಿಟ್ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದರು. ರಕ್ಷಿತ್ ಜೊತೆಗಿನ 777 ಚಾರ್ಲಿ ಹಾಗೂ ಡಾರ್ಲಿಂಗ್ ಕೃಷ್ಣ ಮತ್ತು ಪುನೀತ್ ನಟನೆಯ ಲಕ್ಕಿಮ್ಯಾನ್ ಸಿನಿಮಾ ಇವರಿಗೆ ದೊಡ್ಡ ಹೆಸರನ್ನು ತಂದುಕೊಟ್ಟಿತು. ಈಗ ನಾನಾ ಸಿನಿಮಾಗಳಲ್ಲಿ ಸಂಗೀತಾ ನಟಿಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮಂಜಿನ ನಗರಿಯಲ್ಲಿ ಯುಗಾದಿ ಸಂಭ್ರಮ- ಜನಮನ ಸೆಳೆದ ದೈವ ಕೋಲಾರಾಧನೆ

    ಮಂಜಿನ ನಗರಿಯಲ್ಲಿ ಯುಗಾದಿ ಸಂಭ್ರಮ- ಜನಮನ ಸೆಳೆದ ದೈವ ಕೋಲಾರಾಧನೆ

    ಮಡಿಕೇರಿ: ಮಂಜಿನ ನಗರಿಯಲ್ಲಿ ವಿಶೇಷವಾಗಿ ಯುಗಾದಿ ಹಬ್ಬವನ್ನು ಆಚರಿಸಲಾಗಿದ್ದು, ಬೇವು- ಬೆಲ್ಲದ ಸಂಗಮದ ಈ ಹೊಸ ವರ್ಷವನ್ನು ವಿಶೇಷ ದೈವ ಕೋಲಾರಾಧನೆ ಮೂಲಕ ಬರಮಾಡಿಕೊಳ್ಳಲಾಯಿತು.

    ಪ್ರಕೃತಿ ಮಡಿಲು ಕೊಡಗಿನಲ್ಲಿ ನಡೆದ ದೇವರ ಉತ್ಸವ ಯುಗಾದಿಯ ಬೆರಗನ್ನು ಮತ್ತಷ್ಟು ಹೆಚ್ಚಾಗುವಂತೆ ಮಾಡಿತು. ಹೌದು, ರಾತ್ರಿಯಿಡೀ ನಡೆಯೋ ಹತ್ತಾರು ದೈವ ಕೋಲಗಳ ಹಾಡು ಕುಣಿತ, ಸುಮಧುರ ಚಂಡೆನಾದ, ಧಗಧಗಿಸೋ ಬೆಂಕಿಯಲ್ಲಿ ಮಿಂದೇಳೋ ಕೋಲಗಳ ಕಸರತ್ತು ಮಂಜಿನ ನಗರಿಯ ಯುಗಾದಿ ಹಬ್ಬಕ್ಕೆ ಹೊಸ ಚೆಲುವನ್ನು ತಂದುಕೊಟ್ಟಿತ್ತು. ನಾನಾ ಬಗೆಯ ದೈವ ಕೋಲದ ವೈಭವೋಪೇತ ದೃಶ್ಯವಾಳಿಗಳು ದೇವಲೋಕವೇ ಧರೆಗಿಳಿಸಿದಂತೆ ಕಾಣಿಸುತ್ತಿತ್ತು.

    ತನ್ನ ಜಾನಪದ ಕಲೆಗಳ ಮೂಲಕ ಜಗತ್ತನ್ನು ಸೆಳೆಯೋ ಕೊಡಗಿನಲ್ಲೀಗ ಕೋಲಾರಾದನೆಯ ಸಮಯ. ಕೇರಳ ಮೂಲದ ದೇವರುಗಳು ಕೊಡಗಿನಲ್ಲಿಯೂ ನೆಲೆಸಿದ್ದು ಬೇಸಿಗೆಯಲ್ಲಿ ಎಲ್ಲೆಡೆ ದೇವರ ತೆರೆ ಗರಿಬಿಚ್ಚುತ್ತವೆ. ಮಡಿಕೇರಿಯ ಮುತ್ತಪ್ಪ ದೇವರ ಜಾತ್ರೆ ಇಡೀ ಜಿಲ್ಲೆಯಲ್ಲಿ ವಿಶಿಷ್ಟವಾದದ್ದು, ಮೂರು ದಿನಗಳ ಈ ಜಾತ್ರಾ ಮಹೋತ್ಸವ ನಡೆಯುತ್ತದೆ. ಜಾತ್ರೆಯ ಎರಡನೇ ದಿನದಂದು 14 ದೇವರ ಕೋಲಗಳು ನಡೆಯುತ್ತವೆ. ಮುತ್ತಪ್ಪನ್, ತಿರುವಪ್ಪನ್, ವಿಷ್ಣುಮೂರ್ತಿ, ಶ್ರೀ ಶಿವಭೂತಂ, ಕುಟ್ಟಿಚಾತನ್, ಪೊವ್ವಾದಿ, ಮಹಾಗುಳಿಗ, ಶ್ರೀಯಕ್ಷಿ ದೈವಕೋಲಗಳು ರಾತ್ರಿಯಿಡಿ ಬಗೆ ಬಗೆಯ ವೇಷಧರಿಸಿ, ಕೇರಳದ ವಿಶಿಷ್ಟ ಚೆಂಡೆವಾದ್ಯಕ್ಕೆ ಕುಣಿಯುತ್ತಾ ಭಕ್ತರನ್ನು ಭಾವಪರವಶಗೊಳಿಸಿದ್ದಾರೆ.

    ಅಷ್ಟೇ ಅಲ್ಲದೆ ಮುಂಜಾನೆ ವೇಳೆಗೆ ಭಕ್ತರು ಹರಕೆಯಾಗಿ ಸಲ್ಲಿಸಿರೋ ಸೌದೆಯಿಂದ ನಿರ್ಮಾಣವಾಗಿರೋ ಬೃಹತ್ ಬೆಂಕಿ ಕೊಂಡದ ಮೇಲೆ ಬೀಳೋ ವಿಷ್ಣುಮೂರ್ತಿ ಕೋಲ ಭಕ್ತರನ್ನು ಮೈನವಿರೇಳಿಸುವಂತೆ ಮಾಡಿದೆ. ದೈವದ ಪವಾಡಕ್ಕೆ ಮನಸೋಲೋ ಭಕ್ತರು ಬೇಡಿದ ವರವ ಕೊಡೋ ದೇವರಿಗೆ ವಂದಿಸುತ್ತಾರೆ. ಹಲವು ದಶಕಗಳಿಂದ ಈ ವಿಶಿಷ್ಟ ದೈವಕೋಲಾರಾಧನೆಗೆ ನಡೆಯುತ್ತಿದ್ದು, ಇದನ್ನು ನೋಡಲು ರಾಜ್ಯದ ವಿವಿಧೆಡೆಗಳಿಂದ ಸಹಸ್ರಾರು ಭಕ್ತರು ಆಗಮಿಸುತ್ತಾರೆ.

    ತೆಂಗಿನ ಗರಿಗಳಿಂದ ಸಿದ್ಧಗೊಂಡ ವಿಶಿಷ್ಟ ಸಿರಿಯನ್ನು ಧರಿಸಿರೋ ವಿಷ್ಣುಮೂರ್ತಿ ಕೋಲ ಚೆಂಡೆನಾದಕ್ಕೆ ನರ್ತಿಸುತ್ತಾ ಬೆಂಕಿಮೇಲೆ ಬೀಳುತ್ತಾ, ಜೊತೆಗಿರೋ ಸಹಚರರು ಎಳೆದಂತೆಲ್ಲಾ ಅಗ್ನಿಪ್ರವೇಶ ಮಾಡಿ ದೈವ ಭಕ್ತರ ಮುಂದೆ ತನ್ನ ಪವಾಡವನ್ನು ಪ್ರದರ್ಶನ ಮಾಡುತ್ತೆ. ತಲೆಗೆ ತಲೆಪ್ಪಾಡಿ, ಕೈಗೆ ಗಗ್ಗರ, ಸೊಂಟಕ್ಕೆ ವಿಶಿಷ್ಟ ಡಾಬು, ಮುಖಕ್ಕೆ ಅಲಂಕಾರ ಮಾಡಿಕೊಂಡು ಬಗೆ ಬಗೆಯ ದೈವ ಕೋಲಗಳು ಸಭಿಕರ ಮುಂದೆ ನರ್ತಿಸಿದವು. ಒಂದೊಂದು ಕೋಲವೂ ಒಂದೊಂದು ರೀತಿಯಲ್ಲಿ ನರ್ತಿಸುತ್ತಾ ಭಕ್ತರನ್ನು ರಂಜಿಸೋದು ಇಲ್ಲಿನ ವಿಶೇಷವಾಗಿದೆ. ಬೆಳಗಿನ ಜಾವ 3ಗಂಟೆ ಸುಮಾರಿಗೆ ಎಂಟ್ರಿಕೊಡೋ ಗುಳಿಗನ್ ದೈವ ಕೋಲ 10 ಅಡಿ ಎತ್ತರದ ತೆಲೆಪ್ಪಾಡಿಯೊಂದಿಗೆ ನೃತ್ಯ ಮಾಡೋದು ಎಲ್ಲರ ಗಮನ ಸೆಳೆದಿದೆ. ಈ ಕೋಲಗಳ ಮೂಲ ದೇವರು ಮುತ್ತಪ್ಪನ್ ಮತ್ತು ತಿರುವಪ್ಪನ್ ಹಾಗು ಕುಟ್ಟಿಚಾತನ್. ಕೆಂಪುಬಣ್ಣದ ವಿಶಿಷ್ಟ ವೇಷದಲ್ಲಿ ಬರುವ ಈ ಕೋಲಗಳು ಎಲ್ಲರ ಆಕರ್ಷಣೆಯ ಕೇಂದ್ರಬಿಂದು ಆಗಿತ್ತು. ಅಲ್ಲದೆ ದೇವಾಲಯದ ಆವರಣದಲ್ಲಿ ಕುಣಿದು ಕುಪ್ಪಳಿಸೋ ಮುತ್ತಪ್ಪನ್, ನೆರದಿರೋ ಭಕ್ತರ ಪ್ರಶ್ನೆಗಳಿಗೆ ಉತ್ತರಿಸುವ ಪರಿ ಭಕ್ತರ ಮನ ಗೆದ್ದಿದೆ.

    ಈ ದೈವ ಕೋಲಾರಾಧನೆಗೆ ಕೇರಳದ 38 ಜನರ ತಂಡ ಒಟ್ಟು 14 ದೈವಕೋಲಗಳಿಗೆ ಜೀವ ತುಂಬಿ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ಶಿವನ ಸಂಕೇತವಾದ ಮುತ್ತಪ್ಪ ಹಾಗು ವಿಷ್ಣುವಿನ ಸಂಕೇತವಾದ ತಿರುವಪ್ಪನ್ ಇಲ್ಲಿ ನೆಲೆಸಿರೋದ್ರಿಂದ ಭಕ್ತರ ಎಲ್ಲಾ ಬೇಡಿಕೆಗಳು ಈಡೇರುತ್ತವೆ ಎಂಬುವುದು ಭಕ್ತರ ನಂಬಿಕೆ.

    ಮಂಜಿನ ನಗರಿ ಮಡಿಕೇರಿಯಲ್ಲಿ ನಡೆದ ಈ ವಿಶೇಷ ಉತ್ಸವಕ್ಕೆ ರಾತ್ರಿಯಿಡೀ ನೆತ್ತಿ ಮೇಲೆ ಸುರಿಯೋ ಮಂಜನ್ನ ಲೆಕ್ಕಿಸದೇ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ವಿಶೇಷ ಅಲಂಕಾರಗೊಂಡಿದ್ದ ದೇವಾಲಯದ ಆವರಣದಲ್ಲಿ ದೈವಗಳು ಕುಣಿದು ನಲಿಯುತ್ತಿರುವುದನ್ನ ಕಣ್ತುಂಬಿಕೊಳ್ಳಲು ಭಕ್ತರಿಗೆ ದೇವ ಲೋಕವೇ ಧರೆಗಿಳಿದ ಅನುಭವವಾಗಿದೆ ಎಂದರೆ ಸುಳ್ಳಾಗಲ್ಲ. ಬಗೆ ಬಗೆಯ ವೈವಿಧ್ಯಮಯ ನೃತ್ಯಗಳನ್ನು ಮಾಡುತ್ತಾ ಭಕ್ತರಿಗೆ ದರ್ಶನ ನೀಡೋ ದೈವವನ್ನು ಕಣ್ಣು ಮಿಟುಕಿಸದೆ ನೋಡೋ ಭಕ್ತಗಣ ರಾತ್ರಿಯಿಡೀ ದೇವರನ್ನು ನೆನೆಯುತ್ತಾ ಭಕ್ತಿಯ ಅಲೆಯಲ್ಲಿ ಮಿಂದೆದಿದ್ದಾರೆ.