Tag: koffe with karan 8

  • ಕೊನೆಗೂ ಬಾಯ್‌ಫ್ರೆಂಡ್ ಬಗ್ಗೆ ಬಾಯ್ಬಿಟ್ಟ ಶ್ರೀದೇವಿ ಪುತ್ರಿ ಜಾನ್ವಿ

    ಕೊನೆಗೂ ಬಾಯ್‌ಫ್ರೆಂಡ್ ಬಗ್ಗೆ ಬಾಯ್ಬಿಟ್ಟ ಶ್ರೀದೇವಿ ಪುತ್ರಿ ಜಾನ್ವಿ

    ಬಾಲಿವುಡ್ ನಟಿ ಜಾನ್ವಿ ಕಪೂರ್ ಸಿನಿಮಾಗಿಂತ ಹೆಚ್ಚೆಚ್ಚು ತಮ್ಮ ಖಾಸಗಿ ವಿಚಾರವಾಗಿಯೇ ಚಾಲ್ತಿಯಲ್ಲಿರುತ್ತಾರೆ. ಇದೀಗ ‘ಕಾಫಿ ವಿತ್ ಕರಣ್’ ಸೀಸನ್ 8ರಲ್ಲಿ (Koffe With Karan 8) ಬಾಯ್‌ಫ್ರೆಂಡ್ ಬಗ್ಗೆ ಬಾಯ್ಬಿಟ್ಟಿದ್ದಾರೆ. ಇದನ್ನೂ ಓದಿ:ಬಾಲಿವುಡ್ ನಿರ್ಮಾಪಕನ ಜೊತೆ ಮದುವೆಗೆ ಸಜ್ಜಾದ ಕನ್ನಡದ ‘ಗಿಲ್ಲಿ’ ನಟಿ ರಾಕುಲ್

    ಸೆನ್ಸೇಷನಲ್ ಶೋ ಅಂದರೆ ಅದು ಕಾಫಿ ವಿತ್ ಕರಣ್ ಕಾರ್ಯಕ್ರಮ. ಏನಾದರೂ ವಿವಾದಗಳ ಅಥವಾ ಸ್ಟಾರ್‌ಗಳ ಸೀಕ್ರೆಟ್ ರಿವೀಲ್ ಆಗುವ ಮೂಲಕ ಶೋ ಅಭಿಮಾನಿಗಳ ಗಮನ ಸೆಳೆದಿದೆ. ಹೀಗಿರುವಾಗ ಕರಣ್ ಶೋಗೆ ಶ್ರೀದೇವಿ ಪುತ್ರಿಯರು ಜಾನ್ವಿ-ಖುಷಿ ಕಪೂರ್ ಎಂಟ್ರಿ ಕೊಟ್ಟಿದ್ದಾರೆ. ಇದೀಗ ತಮ್ಮ ರಿಯಲ್ ಲೈಫ್ ಲವ್ ಬಗ್ಗೆ ಜಾನ್ವಿ (Janhvi Kapoor) ರಿವೀಲ್ ಮಾಡಿದ್ದಾರೆ.

    ಜಾನ್ವಿ ಕಪೂರ್-ಶಿಖರ್ ಪಹಾಡಿಯಾ ಡೇಟಿಂಗ್ ದೃಢವಾಗಿದೆ. ಕಾರ್ಯಕ್ರಮದಲ್ಲಿ ನೀವು ಹೆಚ್ಚಾಗಿ ಫೋನಿನಲ್ಲಿ ಮಾತನಾಡೋದು ಯಾರ ಜೊತೆ, ನಿಮಗೆ ಯಾರು ತುಂಬಾ ಕ್ಲೋಸ್ ಎಂದು ಕರಣ್ ಜೋಹರ್ (Karan Johar) ಪ್ರಶ್ನೆ ಕೇಳಿದ್ದಾರೆ.

    ಅದಕ್ಕೆ ಜಾನ್ವಿ, ಮೊದಲಿಗೆ ಅಪ್ಪ, ತಂಗಿ ಖುಷಿ, ಶಿಖು ಎಂದು ಹೇಳಿದ್ದರು. ಶಿಖು ಎಂದು ಶಿಖರ್ ನಿಕ್ ನೇಮ್ ಅನ್ನು ಮಿಸ್ ಆಗಿ ಹೇಳಿದ್ದಕ್ಕೆ ಸ್ವತಃ ಜಾನ್ವಿಯೇ ಶಾಕ್ ಆದರು.

    ನಾನು ಶಿಖರ್ ಹೆಸರನ್ನು ತಪ್ಪಾಗಿ ತೆಗೆದುಕೊಂಡೆ ಎಂದು ಜಾನ್ವಿ ನಕ್ಕರು. ಶಿಖರ್ ಹೆಸರನ್ನು ಹೇಳುತ್ತಿದ್ದಂತೆ ಖುಷಿ ಮತ್ತು ಕರಣ್ ಜೋಹರ್ ಜೋರಾಗಿ ನಕ್ಕರು. ಆಗ ಜಾನ್ವಿ ಕೂಡ ನಾಚಿಕೆಯಿಂದ ತಲೆತಗ್ಗಿಸಿದ್ದಾರೆ. ಈ ಮೂಲಕ ಶಿಖರ್ ಜೊತೆಗಿನ ಡೇಟಿಂಗ್ ಸುದ್ದಿಗೆ ಸ್ಪಷ್ಟನೆ ಸಿಕ್ಕಿದೆ.

  • ಕಾರ್ತಿಕ್‌ ಆರ್ಯನ್‌ ಜೊತೆಗಿನ ಬ್ರೇಕಪ್‌ ಬಗ್ಗೆ ಸಾರಾ ರಿಯಾಕ್ಷನ್‌

    ಕಾರ್ತಿಕ್‌ ಆರ್ಯನ್‌ ಜೊತೆಗಿನ ಬ್ರೇಕಪ್‌ ಬಗ್ಗೆ ಸಾರಾ ರಿಯಾಕ್ಷನ್‌

    ಬಾಲಿವುಡ್ ನಟಿ ಸೈಫ್ ಅಲಿ ಖಾನ್ (Sara Ali Khan) ಅವರು ಸಿನಿಮಾ, ಜಾಹೀರಾತುಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ‘ಕಾಫಿ ವಿತ್ ಕರಣ್’ ಸೀಸನ್ 8ರಲ್ಲಿ (Koffe With Karan 8) ಅನನ್ಯಾ ಪಾಂಡೆ (Ananya Panday) ಜೊತೆ ಸಾರಾ ಅತಿಥಿಯಾಗಿ ಭಾಗವಹಿಸಿದ್ದಾರೆ. ಈ ವೇಳೆ, ಕಾರ್ತಿಕ್ ಆರ್ಯನ್ ಜೊತೆಗಿನ ಬ್ರೇಕಪ್ ಬಗ್ಗೆ ನಟಿ ಮೌನ ಮುರಿದಿದ್ದಾರೆ.

    ಅನನ್ಯಾ ಪಾಂಡೆ ಜೊತೆ ಸಾರಾ ಅಲಿ ಖಾನ್, ಕರಣ್ ಜೋಹರ್ (Karan Johar) ಶೋನಲ್ಲಿ ಮುಖ್ಯ ಅತಿಥಿಯಾಗಿ ಬಂದಿದ್ದಾರೆ. ಕಾರ್ತಿಕ್ ಜೊತೆಗಿನ ಲವ್ ಬ್ರೇಕಪ್ ಕೇಳಿದ ಕರಣ್ ಪ್ರಶ್ನೆಗೆ ನಟಿ ತಬ್ಬಿಬ್ಬಾಗಿದ್ದಾರೆ. ಬಳಿಕ ಹೌದು.. ನಾನು ಕಾರ್ತಿಕ್ ಜೊತೆ ಬ್ರೇಕಪ್ ಮಾಡಿಕೊಂಡಿದ್ದೇನೆ. ನಾವಿಬ್ಬರೂ ಈಗ ಬೆಸ್ಟ್ ಫ್ರೆಂಡ್ಸ್, ಪ್ರೇಮಿಗಳಲ್ಲ ಎಂದಿದ್ದಾರೆ ಸಾರಾ.

    ಮತ್ತೆ ಕರಣ್, ಬ್ರೇಕಪ್ ಆದ ಮೇಲೆ ನಿಮಗೆ ಬೇಸರ ಆಗಿಲ್ವಾ? ಎಂದು ಕೇಳಿದ್ದಾರೆ. ಹೌದು ಆಗಿತ್ತು. ತುಂಬಾನೇ ನೋವು ಆಗಿತ್ತು. ಈಗ ಎಲ್ಲವನ್ನೂ ಮರೆಯುತ್ತಿದ್ದೇನೆ. ಯಾವುದೇ ಸಂಬಂಧವಾಗಿರಲಿ ಅವರ ಜೊತೆ ಸಾಕಷ್ಟು ಹಂಚಿಕೊಂಡಿರುತ್ತೇವೆ. ಅಂಥವರ ಜೊತೆ ಸಂಬಂಧ ಮುರಿದುಕೊಂಡಾಗ ಸಹಜವಾಗಿ ಬೇಸರವಾಗುತ್ತದೆ ಎಂದು ಕಾರ್ತಿಕ್ ಜೊತೆಗಿನ ಬ್ರೇಕಪ್ ಬಗ್ಗೆ ಸಾರಾ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ಡಿಸೆಂಬರ್ 12ಕ್ಕೆ ರಜನಿ ಹುಟ್ಟು ಹಬ್ಬ: ಲಾಲ್ ಸಲಾಂ ಟೀಸರ್ ರಿಲೀಸ್

    ಇನ್ನೂ ಕರಣ್ ನಿರೂಪಣೆಯ ಕಾರ್ಯಕ್ರಮಕ್ಕೆ ಬರಲು ಹಲವು ಸೆಲೆಬ್ರಿಟಿಗಳು ಹಿಂದೇಟು ಹಾಕುತ್ತಾರೆ, ತೀರಾ ವೈಯಕ್ತಿಕ ವಿಚಾರಗಳ ಕುರಿತು ಪ್ರಶ್ನೆಗಳೇ ಈ ಶೋನಲ್ಲಿ ಇರುತ್ತದೆ. ಇತ್ತೀಚೆಗೆ ದೀಪಿಕಾ ಪಡುಕೋಣೆ- ರಣ್‌ವೀರ್ ಸಿಂಗ್ ಈ ಕಾರ್ಯಕ್ರಮಕ್ಕೆ ಬಂದಿದ್ದರು. ರಣ್‌ವೀರ್ ಜೊತೆ ರಿಲೇಷನ್‌ಶಿಪ್‌ನಲ್ಲಿರುವಾಗಲೇ ಬೇರೆಯವರ ಜೊತೆ ಡೇಟ್ ಮಾಡುತ್ತಿದ್ದೆ ಎಂದು ಮಾತನಾಡಿದ್ದ ದೀಪಿಕಾ ಹೇಳಿಕೆ ಸಖತ್ ಟ್ರೋಲ್ ಆಗಿತ್ತು.