Tag: kodimutt swamiji

  • ಮತಾಂಧತೆ ಹೆಚ್ಚಾಗುತ್ತೆ, ಧಾರ್ಮಿಕ ಮುಖಂಡನ ಸಾವಾಗುತ್ತೆ: ಕೋಡಿಮಠದ ಶ್ರೀ ಭವಿಷ್ಯ

    ಮತಾಂಧತೆ ಹೆಚ್ಚಾಗುತ್ತೆ, ಧಾರ್ಮಿಕ ಮುಖಂಡನ ಸಾವಾಗುತ್ತೆ: ಕೋಡಿಮಠದ ಶ್ರೀ ಭವಿಷ್ಯ

    – ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಕೋಡಿಮಠದ ಶ್ರೀಗಳು ಹೇಳಿದ್ದೇನು?

    ಕೋಲಾರ: ಈವರ್ಷ ಧಾರ್ಮಿಕ ಮುಖಂಡನೊಬ್ಬನ (Religious Leader) ಸಾವಾಗುತ್ತೆ, ಮತಾಂಧತೆ ಹೆಚ್ಚಾಗುತ್ತದೆ. ಜಾಗತಿಕ ಮಟ್ಟದಲ್ಲಿ ಬಾಂಬ್ ಸ್ಫೋಟ ಸಂಭವಿಸುತ್ತೆ, ಭೂಕಂಪ ಆಗುತ್ತೆ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ (Kodimutt Swamiji) ಭವಿಷ್ಯ ನುಡಿದಿದ್ದಾರೆ.

    ಕೋಲಾರ (Kolara) ತಾಲೂಕಿನ ನರಸಾಪುರದ ಖಾಸಗಿ ಕಾರ್ಯಕ್ರಮದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ವರ್ಷ ಜಾಗತಿಕ ಮಟ್ಟದಲ್ಲಿ ತೊಂದರೆ ಇದೆ. ಬೆಂಕಿ, ನೀರಿನ ಹಾವಳಿ, ಯುದ್ಧ ಆಗುತ್ತೆ. ಅನೇಕ ಸಾವು ನೋವುಗಳು ಸಂಭವಿಸುತ್ತೆ. ಮತಾದಂತೆ ಹೆಚ್ಚಾಗುತ್ತೆ, ಬಾಂಬ್ ಸ್ಫೋಟ ಸಂಭವಿಸುತ್ತೆ, ಭೂಕಂಪ ಆಗುತ್ತೆ. ಧಾರ್ಮಿಕ ಮುಖಂಡನ ಸಾವು ಸಹ ಆಗಲಿದೆ ಎಂದು ಆತಂಕಪಟ್ಟಿದ್ದಾರೆ.

    ಉತ್ತಮ ಮಳೆ-ಬೆಳೆ ಆಗುತ್ತೆ:
    ರಾಜ್ಯ ಹಾಗೂ ರಾಷ್ಟ್ರ ರಾಜಕಾರಣ ಕುರಿತು ಯುಗಾದಿ ಕಳೆದ ನಂತರ ಹೇಳುವೆ. ಒಂದು ತಿಂಗಳು ಕಳೆದ ಮೇಲೆ ಮಳೆ, ಬೆಳೆ, ರಾಜಕೀಯ, ದುಡಿಮೆ, ವ್ಯಾಪಾರ ಎಲ್ಲಾ ಗೊತ್ತಾಗಲಿದೆ. ಯುಗಾದಿ ನಂತರ ರಾಜ್ಯದಲ್ಲಿ ಒಳ್ಳೆಯ ಮಳೆ, ಬೆಳೆ ಆಗುವ ಲಕ್ಷಣಗಳಿವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೇರಳದಲ್ಲಿ ಆನೆ ತುಳಿತಕ್ಕೆ ವ್ಯಕ್ತಿ ಬಲಿ; ಕರ್ನಾಟಕ ಸರ್ಕಾರದಿಂದ ಪರಿಹಾರ – ಈಶ್ವರ್‌ ಖಂಡ್ರೆ ಹೇಳಿದ್ದೇನು?

    ಗ್ಯಾರಂಟಿಗಳ ಬಗ್ಗೆ ನುಣುಚಿಕೊಂಡ ಶ್ರೀಗಳು:
    ಇದೇ ವೇಳೆ ರಾಜ್ಯ ಸರ್ಕಾರ ಗ್ಯಾರಂಟಿಗಳ (Gurantee Scheme) ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ, ನನಗಿಂತ ನಿಮಗೇ ಚೆನ್ನಾಗಿ ಗೊತ್ತು ಎಂದು ನುಣುಚಿಕೊಂಡಿದ್ದಾರೆ. ಯುಗಾದಿಯ ನಂತರ ನೂತನ ಸಂವತ್ಸರದ ಭವಿಷ್ಯ ಬರಲಿದೆ. ನಂತರ ರಾಷ್ಟ್ರ ರಾಜಕಾರಣದ ಬಗ್ಗೆಯೂ ಹೇಳುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ವಸತಿ ಶಾಲೆಯಲ್ಲಿ ಘೋಷವಾಕ್ಯ ಬದಲು; ಅಧಿಕಾರಿಯ ವಿರುದ್ಧ ಕ್ರಮ ವಹಿಸಿ: ಅಶೋಕ್ ಒತ್ತಾಯ

  • 2024ರಲ್ಲಿ ಅಣು ಬಾಂಬ್ ಸ್ಫೋಟಗೊಳ್ಳುವ ಸಾಧ್ಯತೆ ಇದೆ: ಕೋಡಿಮಠ ಸ್ವಾಮೀಜಿ ಭವಿಷ್ಯ

    2024ರಲ್ಲಿ ಅಣು ಬಾಂಬ್ ಸ್ಫೋಟಗೊಳ್ಳುವ ಸಾಧ್ಯತೆ ಇದೆ: ಕೋಡಿಮಠ ಸ್ವಾಮೀಜಿ ಭವಿಷ್ಯ

    ಗದಗ: 2024 ರಲ್ಲಿ ಜಗತ್ತಿಗೆ ಒಳ್ಳೆಯ ದಿನಗಳಿಲ್ಲ. 2024 ರಲ್ಲಿ ಅಣು ಬಾಂಬ್ ಸ್ಪೋಟಗೊಳ್ಳುವ ಸಾಧ್ಯತೆ ಇದೆ. ಯುದ್ಧದ ಭೀತಿ ಇದೆ. ಜನರು ತಲ್ಲಣ ಆಗುವಂತಹದ್ದಿದೆ. ಜಲ‌ ಕಂಠಗಳು ಹೆಚ್ಚಾಗುವ ಸಾಧ್ಯತೆ ಇದೆ ಅಂತ ಕೋಡಿಮಠದ (Kodi Mutt Swamiji) ಶಿವಾನಂದ ಶಿವಯೋಗಿ ರಾಜೇಂದ್ರ ‌ಮಹಾಸ್ವಾಮಿಗಳು ಭವಿಷ್ಯ ನುಡದಿದ್ದಾರೆ.

    ನಗರದ ಭಕ್ತರ ಮನೆಯೊಂದರಲ್ಲಿ ಮಾತನಾಡಿದ ಶ್ರೀಗಳು, ಜಗತ್ತಿನ ಅತೀ ದೊಡ್ಡ ಸಂತರೊಬ್ಬರು ಕೊಲೆಗೀಡಾಗುವ ಲಕ್ಷಣ ಇದೆ. ಒಂದೆರಡು ಪ್ರಧಾನಿಗಳ ಸಾವು ಆಗಲಿವೆ ಅಂತ ಅಘಾತಕಾರಿ ವಿಷಯ ತಿಳಿಸಿದ್ದಾರೆ. ಅಸ್ಥಿರತೆ ಇದೆ, ಯುದ್ಧದ ಭೀತಿ ಇದೆ. ಅಣು ಬಾಂಬ್ (Nuclear Bomb) ಸ್ಪೋಟದಿಂದ ಜಗತ್ತಿಗೆ ಹಾನಿಯಾಗುವ ಸಾಧ್ಯತೆ ಇದೆ. ಇದರಿಂದ ರೋಗ ರುಜಿನಗಳು ಹೆಚ್ಚಾಗಲಿವೆ. ಒಟ್ಟಿನಲ್ಲಿ 2024 ಜಗತ್ತಿಗೆ ಅಪಾಯವಿದೆ. ಜಗತ್ತಿನಲ್ಲಿ ಭಾರತವೂ ಸೇರಿಕೊಳ್ಳುತ್ತೆ ಎಂದರು.

    ಶ್ರೀರಾಮಂದಿರ ವಿಷಯದಲ್ಲಿ ಹಿಂದೂಗಳು ಒಂದಾಗಬೇಕು ಎಂಬ ಪೇಜಾವರ ಶ್ರೀಗಳ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದರು. ಹಿಂದೂಗಳು ಒಂದಾದ್ರೆ ಒಳ್ಳೆಯದು ಅನಿಸುತ್ತೆ. ಭಾರತೀಯರು ಒಗ್ಗಟ್ಟಾದ್ರೆ ಎಲ್ಲರಿಗೂ ಒಳ್ಳೆಯದಾಗುತ್ತೆ. ದಶವತಾರ ಎಷ್ಟು? ವಿಷ್ಣುವಿನ ಅವತಾರ ಎಷ್ಟು? 10 ತಾನೇ, 11 ಆಗಲಿಲ್ಲ. ಸ್ವಲ್ಪ ಮತೀಯ ಸಮಸ್ಯೆಗಳು ಉದ್ಭವವಾಗಿ ಜನರು ದುಃಖ ಅನುಭವಿಸುತ್ತಾರೆ. ಎಲ್ಲದಕ್ಕೂ ದೈವ ಮೊರೆ ಹೋಗಬೇಕು. ಯುಗಾದಿ ನಂತರ ರಾಜಕೀಯ ಬಗ್ಗೆ ಹೇಳುತ್ತೇನೆ. ಈಗ ಸೂಕ್ಷ್ಮವಾಗಿ ದಶವತಾರ ಬಗ್ಗೆ ಹೇಳಿ ಎಂದು ದಶವತಾರ ಬಗ್ಗೆ ಸೂಕ್ಷವಾಗಿ ಪ್ರಸ್ತಾಪಿಸಿದ್ದಾರೆ. ಇದನ್ನೂ ಓದಿ: ಸಂಘಟನೆ ಕೆಲಸದಲ್ಲಿ ತೊಡಗಿಸಿಕೊಂಡು ರಾಜ್ಯಾದ್ಯಂತ ಪ್ರವಾಸ ಮಾಡ್ತೇನೆ: ಜಗದೀಶ್ ಶೆಟ್ಟರ್