ತುಮಕೂರು: ಕೋಡಿಹಳ್ಳಿ ಚಂದ್ರಶೇಖರ್ ನಮ್ಮ ದೇಶದವರಲ್ಲ, ಚೈನಾ ಮಾಡೆಲ್ ಇರಬೇಕು ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಡಿಹಳ್ಳಿ ಕಮ್ಯೂನಿಸ್ಟ್ ನಿಬಂಧನೆಗಳನ್ನು ಬಲವಂತವಾಗಿ ಹೇರುವ ಮೂಲಕ ಸಾರಿಗೆ ನೌಕರರ ಹೋರಾಟದ ದಾರಿ ತಪ್ಪಿಸುತಿದ್ದಾರೆ. ನೌಕರರ ಹೋರಾಟದಲ್ಲಿ ಇದ್ದಕ್ಕಿದ್ದಂತೆ ಕಾಣಿಸಿಕೊಂಡಿದ್ದಾರೆ. ಬಹುಶಃ ಇವರು ಚೀನಾದಿಂದ ಬಂದಿರಬೇಕು. ಅವರು ನಮ್ಮ ದೇಶದವರಲ್ಲಿ ಚೈನಾ ಮಾಡೆಲ್ ಇರಬೇಕು ಎಂದು ಹರಿಹಾಯ್ದಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಈತ ರೈತರ ನೆರವಿಗೆ ನಿಂತಿಲ್ಲ, ರೈತರ ತರಕಾರಿಗಳು ರಸ್ತೆಗೆ ಬಿದ್ದಿತ್ತು. ನಾವು ಅದನ್ನು ಬೆಂಗಳೂರಿಗೆ ರವಾನಿಸಿ ಮಾರಾಟ ಮಾಡಿದ್ದೆವು. ಆಗ ಈತ ಎಲ್ಲಿಗೆ ಹೋಗಿದ್ದರು, ಈತನಿಗೆ ಮಾನ ಮರ್ಯಾದೆ ಇಲ್ವಾ, ಈ ರೀತಿ ಎತ್ತಿಕಟ್ಟಲು ನಾಚಿಕೆ ಆಗುವುದಿಲ್ಲವೇ? ಈನನ್ನು ಮೇಧಾವಿ ಅಂದುಕೊಂಡಿದ್ದೆ, ಈತ ವ್ಯವಸ್ಥೆಯನ್ನು ಬುಡಮೇಲು ಮಾಡುವವ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈತನನ್ನು ಸರ್ಕಾರ ಯಾಕೆ ಸುಮ್ಮನೆ ಬಿಟ್ಟಿದೆ, ಅರೆಸ್ಟ್ ಮಾಡಿ ಒಳಗೆ ಹಾಕಬೇಕು. ಕಾನೂನಿನ ಪ್ರಕಾರ ಚಂದ್ರಶೇಖರ್ ಅವರನ್ನು ಒಳಗೆ ಹಾಕಿದರೆ ಇಷ್ಟೊಂದು ಅಹಿತಕರ ಘಟನೆ ನಡೆಯುತ್ತಿರಲಿಲ್ಲ ಎಂದು ಕಿಡಿಕಾರಿದರು.
ಬೆಂಗಳೂರು: ಸಾರಿಗೆ ನೌಕರರ ಮುಷ್ಕರ ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಸಾರಿಗೆ ನೌಕರರ ಪ್ರತಿಭಟನೆಗೆ ಸರ್ಕಾರ ಕ್ಯಾರೇ ಎನ್ನಲಿಲ್ಲ. ಈ ಬೆನ್ನಲ್ಲೇ ಇದೀಗ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರು ಮುಷ್ಕರ ವಾಪಸ್ ಪಡೆಯುವ ಆಲೋಚನೆ ಇದೆ ಎಂದಿದ್ದಾರೆ.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಕೋಡಿಹಳ್ಳಿಗೆ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಸದ್ಯಕ್ಕೆ ಮುಷ್ಕರ ಕೈ ಬಿಡಿ, ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡುವ ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೋಡಿಹಳ್ಳಿ ಮುಷ್ಕರ ವಾಪಸ್ ಪಡೆಯುವ ಆಲೋಚನೆ ಮಾಡಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಸದ್ಯ ಸಿಎಂ ಅವರು ಸಾರಿಗೆ ನೌಕರರನ್ನ ಸರ್ಕಾರಿ ನೌಕರರನ್ನಾಗಿಸತ್ತೇವೆ ಎಂದು ಮಾತು ಕೊಡುವ ಮೂಲಕ ಕೋಡಿಹಳ್ಳಿ ಚಂದ್ರಶೇಖರ್ ಅವರ ಮನವೊಲಿಕೆ ಮಾಡಿದ್ರಾ ಎಂಬ ಅನುಮಾನ ಎದ್ದಿದೆ.
ಇತ್ತ ವೈಯಾಲಿಕಾವಲ್ ನಿವಾಸದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ಕೋಡಿಹಳ್ಳಿ, ಉಪವಾಸ ಕಾರ್ಯಕ್ರಮದಲ್ಲಿ ಇಂದು ತೀರ್ಮಾನ ಮಾಡುತ್ತೀವಿ. ಸಾರಿಗೆ ಇಲಾಖೆಯ ಪ್ರಮುಖರ ಜೊತೆ ಇಂದು ಮಾತನಾಡಿ ತೀರ್ಮಾನ ಕೈಗೊಳ್ಳುತ್ತೇವೆ. ಸಾರಿಗೆ ಅವ್ಯವಸ್ಥೆ ಜನರಿಗೆ ಸಮಸ್ಯೆ ಆಗಿದೆ. ರಾತ್ರಿ ಆದಂತಹ ಅನೇಕ ಅನುಮಾನಗಳ ಹಿನ್ನೆಲೆಯಲ್ಲಿ ಮುಷ್ಕರ ಮುಂದುವರಿಸಲಾಗಿತ್ತು ಎಂದರು.
ಸರ್ಕಾರದ ನಿಲುವು ಏನೇ ಇದ್ದರೂ ಬಹುತೇಕ ಇಂದು ಮುಷ್ಕರ ಅಂತಿಮ ಘಟ್ಟಕ್ಕೆ ಬರಲಿದೆ. ಸರ್ಕಾರದ ಗೊಂದಲದ ನಿಲುವಿನಿಂದ ಮುಷ್ಕರ ಮುಂದುವರಿಸಬೇಕಾಯಿತು. ಈಗ ವೇದಿಕೆಯಲ್ಲಿ ಎಲ್ಲ ಸ್ಪಷ್ಟಪಡಿಸಲಾಗುತ್ತದೆ. ನೌಕರರೇ ಮುಖ್ಯವಾಗಿದ್ದು, ನಮ್ಮ ತೀರ್ಮಾನ ಇಂದೇ ಘೋಷಣೆ ಮಾಡುತ್ತೇವೆ ಎಂದು ತಿಳಿಸಿದರು.
ಸರ್ಕಾರ ಏನೇ ಮಾಡಲಿ, ಸರ್ಕಾರದ ಹಿತ ಮುಖ್ಯ. ನನ್ನ ಪ್ರತಿಷ್ಠೆ ಪ್ರಶ್ನೆ ಬೇಡ. ಸರ್ಕಾರವೇ ಗೆಲ್ಲಲಿ. ನೌಕರರ ಹಿತ ಕಾಯಿರಿ. ನೌಕರರಿಗೆ ಮುಷ್ಕರದ ಅವಶ್ಯಕತೆ ಇತ್ತು. ಸರ್ಕಾರದ ಗಮನಕ್ಕೆ ಬೇಡಿಕೆಗಳ ತರಲಾಗಿದೆ. ಸರ್ಕಾರಕ್ಕೆ ಸದ್ಯ ಎಲ್ಲ ಬೇಡಿಕೆ ಗಮನಕ್ಕೆ ಬಂದಿದೆ. ಸರ್ಕಾರದ ನಿಲುವಿಗೆ ನೌಕರರಿಗೆ ಖುಷಿ ಇಲ್ಲ. 9 ಬೇಡಿಕೆ ಇತ್ಯಾದಿ ಬಗ್ಗೆ ತೀರ್ಮಾನ ವಿಚಾರಗಳಲ್ಲೂ ನ್ಯೂನತೆ ಇದೆ. ಈಗ ವೇದಿಕೆಯಲ್ಲಿ ತೀರ್ಮಾನ ಮಾಡುತ್ತೇವೆ. ಸರ್ಕಾರ ಲಿಖಿತವಾಗಿ ಎಲ್ಲ ಹೇಳಲಿ ಆಮೇಲೆ ತೀರ್ಮಾನ ಮಾಡುತ್ತೇವೆ ಎಂದರು.
ಬೆಂಗಳೂರು: ಸಾರಿಗೆ ನೌಕರರ ಪ್ರತಿಭಟನೆ ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಈ ಮಧ್ಯೆ ಮುಷ್ಕರವನ್ನ ಹಿಂಪಡೆಯುವ ಆಲೋಚನೆ ಮಾಡಿರುವುದಾಗಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ವೈಯಾಲಿಕಾವಲ್ ನಿವಾಸದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಉಪವಾಸ ಕಾರ್ಯಕ್ರಮದಲ್ಲಿ ಇಂದು ತೀರ್ಮಾನ ಮಾಡುತ್ತೀವಿ. ಸಾರಿಗೆ ಇಲಾಖೆಯ ಪ್ರಮುಖರ ಜೊತೆ ಇಂದು ಮಾತನಾಡಿ ತೀರ್ಮಾನ ಕೈಗೊಳ್ಳುತ್ತೇವೆ. ಸಾರಿಗೆ ಅವ್ಯವಸ್ಥೆ ಜನರಿಗೆ ಸಮಸ್ಯೆ ಆಗಿದೆ. ರಾತ್ರಿ ಆದಂತಹ ಅನೇಕ ಅನುಮಾನಗಳ ಹಿನ್ನೆಲೆಯಲ್ಲಿ ಮುಷ್ಕರ ಮುಂದುವರಿಸಲಾಗಿತ್ತು ಎಂದರು.
ಸರ್ಕಾರದ ನಿಲುವು ಏನೇ ಇದ್ದರೂ ಬಹುತೇಕ ಇಂದು ಮುಷ್ಕರ ಅಂತಿಮ ಘಟ್ಟಕ್ಕೆ ಬರಲಿದೆ. ಸರ್ಕಾರದ ಗೊಂದಲದ ನಿಲುವಿನಿಂದ ಮುಷ್ಕರ ಮುಂದುವರಿಸಬೇಕಾಯಿತು. ಈಗ ವೇದಿಕೆಯಲ್ಲಿ ಎಲ್ಲ ಸ್ಪಷ್ಟಪಡಿಸಲಾಗುತ್ತದೆ. ನೌಕರರೇ ಮುಖ್ಯವಾಗಿದ್ದು, ನಮ್ಮ ತೀರ್ಮಾನ ಇಂದೇ ಘೋಷಣೆ ಮಾಡುತ್ತೇವೆ ಎಂದು ತಿಳಿಸಿದರು.
ಸರ್ಕಾರ ಏನೇ ಮಾಡಲಿ, ಸರ್ಕಾರದ ಹಿತ ಮುಖ್ಯ. ನನ್ನ ಪ್ರತಿಷ್ಠೆ ಪ್ರಶ್ನೆ ಬೇಡ. ಸರ್ಕಾರವೇ ಗೆಲ್ಲಲಿ. ನೌಕರರ ಹಿತ ಕಾಯಿರಿ. ನೌಕರರಿಗೆ ಮುಷ್ಕರದ ಅವಶ್ಯಕತೆ ಇತ್ತು. ಸರ್ಕಾರದ ಗಮನಕ್ಕೆ ಬೇಡಿಕೆಗಳ ತರಲಾಗಿದೆ. ಸರ್ಕಾರಕ್ಕೆ ಸದ್ಯ ಎಲ್ಲ ಬೇಡಿಕೆ ಗಮನಕ್ಕೆ ಬಂದಿದೆ. ಸರ್ಕಾರದ ನಿಲುವಿಗೆ ನೌಕರರಿಗೆ ಖುಷಿ ಇಲ್ಲ ಎಂದು ಹೇಳಿದರು.
9 ಬೇಡಿಕೆ ಇತ್ಯಾದಿ ಬಗ್ಗೆ ತೀರ್ಮಾನ ವಿಚಾರಗಳಲ್ಲೂ ನ್ಯೂನತೆ ಇದೆ. ಈಗ ವೇದಿಕೆಯಲ್ಲಿ ತೀರ್ಮಾನ ಮಾಡುತ್ತೇವೆ. ಸರ್ಕಾರ ಲಿಖಿತವಾಗಿ ಎಲ್ಲ ಹೇಳಲಿ ಆಮೇಲೆ ತೀರ್ಮಾನ ಮಾಡುತ್ತೇವೆ. ನೆನ್ನೆಯಷ್ಟು ಬೆಂಬಲ ಇವತ್ತು ನೌಕರರಿಂದ ನಿರೀಕ್ಷೆ ಕಡಿಮೆ ಇದೆ. ಉಪವಾಸ ಸತ್ಯಾಗ್ರಹ ಮಾತ್ರ ಮುಂದುವರಿಯಲಿದೆ ಎಂದರು.
ಬೆಂಗಳೂರು: ಪ್ರಮುಖ ಬೇಡಿಕೆಯನ್ನ ಈಡೇರಿಲಸಲು ಸರ್ಕಾರ ಒಪ್ಪದ ಹಿನ್ನೆಲೆ ಸಾರಿಗೆ ನೌಕರರು ತಮ್ಮ ಮುಷ್ಕರವನ್ನ ಮುಂದುವರಿಸಿದ್ದಾರೆ. ಸಾರಿಗೆ ನೌಕರರ ಪ್ರತಿಭಟನೆಗೆ ಸಾಥ್ ಖಾಸಗಿ ಬಸ್ ಸಂಘ ಸಹ ಬೆಂಬಲ ನೀಡಿದೆ. ಖಾಸಗಿ ಬಸ್ ನಂಬಿ ನೀವು ಊರಿಗೆ ತೆರಳುತ್ತಿದ್ರೆ ನಿಮ್ಮ ಪ್ರಯಾಣ ಮುಂದೂಡುವುದು ಉತ್ತಮ.
ಈ ವೇಳೆ ಮಾತನಾಡಿದ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್, ಒಳ್ಳೆಯ ನಾಯಕನ ನೇತೃತ್ವದಲ್ಲಿ ನಿಮ್ಮೆಲ್ಲರ ಪ್ರತಿಭಟನೆ ನಡೆಯುತ್ತಿದೆ. ಹೋರಾಟ ಅನ್ನೋದು ಯಾವುದೋ ಒಬ್ಬ ಬ್ರೋಕರ್ ಅಡಿಯಲ್ಲಿ ಅಗುವಂತದಲ್ಲ. ನಾಯಕನ ಹೋರಾಟದ ಮೇಲೆ ನಮ್ಮೆಲ್ಲರ ಪ್ರತಿಫಲ ಇರುತ್ತೆ ಅನ್ನೋದನ್ನ ಅರ್ಥ ಮಾಡಿಕೊಳ್ಳಬೇಕಿದೆ. ಆಡಳಿತದಲ್ಲಿರುವ ಸರ್ಕಾರದ ಪಕ್ಷದಲ್ಲಿಯೇ ನಾನಿದ್ದೇನೆ. ಅವರಿಗೆ ನಾನು ಮತ ಹಾಕಿದ್ದೇನೆ. ಸಾರಿಗೆ ಸಚಿವರು ನಮ್ಮ ಮನವಿಗಳಿಗೂ ಸ್ಪಂದಿಸಿಲ್ಲ. ಬಿಜೆಪಿ ಕಾರ್ಯಕರ್ತನಾಗಿ ಈ ಮಾತುಗಳನ್ನ ಹೇಳಲು ನನಗೆ ನೋವಾಗುತ್ತೆ ಎಂದರು.
ಇದು ಸರ್ಕಾರ ಮತ್ತು ಬಿ.ಎಸ್.ಯಡಿಯೂರಪ್ಪ ಅವರ ವೈಫಲ್ಯ ಅಲ್ಲ. ಇದು ಸಾರಿಗೆ ಮಂತ್ರಿಗಳ ವೈಫಲ್ಯ, ಲಕ್ಷ್ಮಣ ಸವದಿ ತಮ್ಮ ಪ್ರತಿಷ್ಠೆಯನ್ನ ಬಿಟ್ಟು ಇಲ್ಲಿಗೆ ಬಂದು ಸಮಸ್ಯೆಗಳನ್ನ ಆಲಿಸಬೇಕು ಎಂದು ಆಗ್ರಹಿಸಿದರು. ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳಿಗೆ ಸಾರಿಗೆ ಸಚಿವರು ಹೊಣೆ. ಹಾಗಾಗಿ ನಾಳೆಯಿಂದ ನಿಮ್ಮ ಬೆಂಬಲಕ್ಕೆ ನಾವು ಕೈ ಜೊತೆ ಜೋಡಿಸುತ್ತೇವೆ ಎಂದು ಹೇಳಿದರು.
ರಾಜ್ಯ ಸರ್ಕಾರ ಸಾರಿಗೆ ಇಲಾಖೆಯನ್ನ ಯಾಕೆ ಸೈಡ್ ನಲ್ಲಿ ಇಡುತ್ತಿದೆ ಅನ್ನೋದು ತಿಳಿಯುತ್ತಿಲ್ಲ. ಎಷ್ಟು ಜನ ಚಾಲಕರನ್ನ ಕೊರೋನಾ ಸಮಯದಲ್ಲಿ ಬೇರೆ ಬೇರೆ ರೀತಿಯಲ್ಲಿ ಬಳಸಿಕೊಂಡರು. ಅವರನ್ನ ಯಾಕೆ ಕೊರೊನಾ ವಾರಿಯರಸ್ ಅಂತಾ ಕರೆಯಲಿಲ್ಲ ಎಂದು ಖಾಸಗಿ ಟ್ಯಾಕ್ಸಿ ಮಾಲೀಕರ ಸಂಘದ ಅಧ್ಯಕ್ಷ ರಾಮಕೃಷ್ಣ ಹೊಳ್ಳ ಪ್ರಶ್ನಿಸಿದರು.
ಸಾರಿಗೆ ಸಿಬ್ಬಂದಿಯನ್ನ ಸರ್ಕಾರಿ ನೌಕರರು ಎಂದು ಪರಿಗಣಿಸಬೇಕೆಂದು ಪ್ರತಿಭಟನಾನಿರತರು ಆಗ್ರಹಿಸಿದ್ದರು. ಆದರೆ ಸರ್ಕಾರ ಈ ಬೇಡಿಕೆ ಪೂರ್ಣ ಮಾಡಲು ಸಾಧ್ಯವಿಲ್ಲ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ. ಆದ್ದರಿಂದ ನಮ್ಮ ಬೇಡಿಕೆ ಈಡೇರುವರೆಗೂ ಮುಷ್ಕರ ಮುಂದುವರಿಯುತ್ತದೆ ಎಂದು ಸಾರಿಗೆ ನೌಕರರು ಹೇಳಿದ್ದಾರೆ. ಈ ಎಲ್ಲ ಅನಾನುಕೂಲಗಳಿಗೆ ಸಾರಿಗೆ ಸಚಿವರೇ ಕಾರಣ. ಸಚಿವರು ಇಲ್ಲಿಯೇ ಬಂದು ನಮ್ಮ ಸಮಸ್ಯೆ ಆಲಿಸಲಿ ಎಂದು ಪ್ರತಿಭಟನಾ ನಿರತರು ಆಗ್ರಹಿಸಿದ್ದಾರೆ. ಇದನ್ನೂ ಓದಿ:ಸಾರಿಗೆ ನೌಕರರ ಸಂಧಾನ ವಿಫಲ – ಮುಷ್ಕರ ಮುಂದುವರಿಕೆ
ಇನ್ನು ಸಾರಿಗೆ ನೌಕರರಕ್ಕೆ ಹೋರಾಟಕ್ಕೆ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್, ಖಾಸಗಿ ಟ್ಯಾಕ್ಸಿ ಮಾಲೀಕರ ಸಂಘದ ಅಧ್ಯಕ್ಷ ರಾಮಕೃಷ್ಣ ಹೊಳ್ಳ, ಟ್ರಾವೆಲ್ ಅಸೋಸಿಯೇಷನ್ ಅಧ್ಯಕ್ಷ ರಾಧಕೃಷ್ಣ ಸಹ ಸಾಥ್ ನೀಡಿದ್ದಾರೆ. ಇನ್ನು ಕೊನೆಯದಾಗಿ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, ನಾಳೆಯ ಎಲ್ಲರೂ ಪ್ರತಿಭಟನೆಗೆ ಬರಬಹುದು ಎಂದು ಕರೆ ಕೊಟ್ಟಿದ್ದಾರೆ. ಇದನ್ನೂ ಓದಿ: ಪ್ರಯಾಣಿಕರೇ ಗಮನಿಸಿ – ಸಾರಿಗೆ ಮುಷ್ಕರದಲ್ಲಿ ಹೈಡ್ರಾಮಾ, ರಸ್ತೆಗೆ ಇಳಿಯಲ್ಲ ಬಸ್
ಬೆಂಗಳೂರು: ಸಾರಿಗೆ ನೌಕರರು ಮತ್ತು ಸರ್ಕಾರದ ನಡುವಿನ ಸಂಘರ್ಷ ಅಂತ್ಯವಾದ ಬೆನ್ನಲ್ಲೆ ಆರೋಗ್ಯ ಸಚಿವ ಸುಧಾಕರ್, ಪ್ರತಿಭಟನೆಯ ನೇತೃತ್ವ ವಹಿಸಿಕೊಂಡಿದ್ದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಹರಿಹಾಯ್ದಿದ್ದಾರೆ. ಅರಿವಿಲ್ಲದ ವಿಷಯಗಳಲ್ಲಿ ಮೂಗು ತೂರಿಸೋದು ಎಷ್ಟು ಸಮಂಜಸ ಅನ್ನೋ ಪ್ರಶ್ನೆಗೆ ಕೋಡಿಹಳ್ಳಿ ಚಂದ್ರಶೇಖರ್ ಉತ್ತರಿಸಲಿ ಎಂದು ಆರೋಗ್ಯ ಸಚಿವರು ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ.
ಸುಧಾಕರ್ ಟ್ವೀಟ್:
ರೈತ ನಾಯಕರು ಎನಿಸಿಕೊಂಡಿರುವ ಕೋಡಿಹಳ್ಳಿ ಚಂದ್ರಶೇಖರ್ ಅವರಿಗೆ ಸಾರಿಗೆ ವ್ಯವಸ್ಥೆ ಹಾಗೂ ಸಾರಿಗೆ ನೌಕರರ ಸಮಸ್ಯೆಗಳ ಬಗ್ಗೆ ಅರಿವಿದೆಯೇ? ತಮಗೆ ಅರಿವಿಲ್ಲದ ವಿಷಯಗಳ ಬಗ್ಗೆ ಮೂಗು ತೂರಿಸುವುದು ಎಷ್ಟು ಸಮಂಜಸ ಎಂದು ಜನ ಕೇಳುತ್ತಿರುವ ಪ್ರಶ್ನೆಗೆ ಕೋಡಿಹಳ್ಳಿ ಚಂದ್ರಶೇಖರ್ ಅವರು ಮೊದಲು ಉತ್ತರ ನೀಡಬೇಕು.
ಸಾರಿಗೆ ವ್ಯವಸ್ಥೆ ಅತ್ಯಂತ ಪ್ರಮುಖ ಮತ್ತು ಅಗತ್ಯ ಸೇವೆಯಾಗಿದ್ದು, ಶ್ರೀ ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾದಾಗಿನಿಂದ ಪದೇ ಪದೇ ಮುಷ್ಕರ, ಬಂದ್ ಗಳಿಗೆ ಕುಮ್ಮಕ್ಕು ನೀಡುವ ಮೂಲಕ ಸಾರ್ವಜನಿಕರ ದೈನಂದಿನ ಜೀವನಕ್ಕೆ ತೊಂದರೆ ಉಂಟುಮಾಡಿ ಬಡವರು, ದಿನಗೂಲಿ ಕಾರ್ಮಿಕರು, ಸಣ್ಣ ವ್ಯಾಪಾರಸ್ಥರಿಗೆ ಕಿರುಕುಳ ನೀಡುತ್ತಿದ್ದಾರೆ.
ಸಾರಿಗೆ ನೌಕರರ ಪ್ರತಿಭಟನೆಗೆ ಮೊಸಳೆ ಕಣ್ಣೀರು ಸುರಿಸುತ್ತಿರುವ ನಾಯಕರು ಕಾಂಗ್ರೆಸ್ ಸರ್ಕಾರ ಹಾಗು ಸಮ್ಮಿಶ್ರ ಸರ್ಕಾರಗಳು ಇದ್ದ ಸಂದರ್ಭದಲ್ಲಿ ಈ ಬೇಡಿಕೆಗಳನ್ನು ಏಕೆ ಪೂರೈಸಲಿಲ್ಲ?
ಸಾರಿಗೆ ನೌಕರರು ಮುಂದಿಟ್ಟಿರುವ ಬಹುತೇಕ ಬೇಡಿಕೆಗಳನ್ನು ಈಡೇರಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈಗಾಗಲೇ ಭರವಸೆ ನೀಡಿದ್ದಾರೆ. ತಮ್ಮನ್ನು ದಾರಿ ತಪ್ಪಿಸುತ್ತಿರುವವರ ಪ್ರಚೋದನೆಗೆ ಒಳಗಾಗದೆ ಪ್ರತಿಭಟನೆ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗುತ್ತಿರುವ ನೌಕರರಿಗೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.
ಬೆಳಗಾವಿ: ರಾಜ್ಯ ರೈತ ಸಂಘದ ಬೆಳಗಾವಿ ಜಿಲ್ಲಾಧ್ಯಕ್ಷ ಮತ್ತು ರೈತ ಮಹಿಳೆ ಜಯಶ್ರೀ ನಡುವೆ ಸಾರ್ವಜನಿಕವಾಗಿ ವಾಗ್ವಾದ ನಡೆದಿರುವ ಘಟನೆ ಜಿಲ್ಲಾಧಿಕಾರಿಗಳ ಕಚೇರಿ ಎದುರಿಗೆ ನಡೆದಿದೆ.
ಕೊಡಿಹಳ್ಳಿ ಚಂದ್ರಶೇಖರ ಅವರ ವಿರುದ್ಧ ಜಯಶ್ರೀ ಮಾತನಾಡಿದ್ದಾರೆ ಎನ್ನಲಾಗಿದ್ದು, ಈ ವೇಳೆ ಸಂಘದ ಅಧ್ಯಕ್ಷ ಸತ್ಯಪ್ಪಾ ಅವರು ಏಕವಚನದಲ್ಲಿ ಜಯಶ್ರೀ ಅವರ ಕುರಿತು ಮಾತನಾಡಿದ್ದಾರೆ. ಇದರಿಂದ ಆಕ್ರೋಶಗೊಂಡ ಜಯಶ್ರೀ ಅವರು ನನ್ನ ಬಗ್ಗೆ ಮಾತನಾಡ ಬೇಡ. ನನ್ನ ಬಗ್ಗೆ ಕೇವಲವಾಗಿ ಮಾತನಾಡಿದರೆ ಸರಿ ಇರುವುದಿಲ್ಲ. ನಿನ್ನ ಹಿಂದೆ ಎಷ್ಟು ಜನ ಬರುತ್ತಾರೆ ಎಂದು ಏಕವಚನದಲ್ಲೇ ಪ್ರಶ್ನಿಸಿ ತರಾಟೆ ತೆಗೆದುಕೊಂಡಿದ್ದಾರೆ.
ವಿವಿಧ ಭೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾ ರೈತ ಸಂಘದ ಮುಂದಾಳತ್ವದಲ್ಲಿ ಇಂದಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಗಿತ್ತು. ಈ ವೇಳೆ ಘಟನೆ ನಡೆದಿದ್ದು, ಇಬ್ಬರ ಜಗಳವನ್ನು ಕಂಡ ಸಂಘದ ಇತರೇ ಸದಸ್ಯರು ಜಗಳ ಬಿಡಿಸಿದ್ದಾರೆ. ಬಳಿಕ ಸ್ಥಳದಿಂದ ರೈತ ಮಹಿಳೆ ಜಯಶ್ರೀ ತೆರಳಿದ್ದಾರೆ.
ಬೆಳಗಾವಿ ಅಧಿವೇಶನಕ್ಕೂ ಮುನ್ನ ಜಿಲ್ಲಾ ರೈತ ಸಂಘದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಆ ಬಳಿಕ ಸಂಘ ಎರಡು ಬಣಗಳಾಗಿ ವಿಭಜನೆ ಆಗಿದೆ ಎನ್ನಲಾಗಿದೆ. ಅಧಿವೇಶನಕ್ಕೂ ಮುನ್ನ ಕೋಡಿಹಳ್ಳಿ ಚಂದ್ರಶೇಖರ್ ಅವರು ಕೂಡ ಸಂಘದಲ್ಲಿ ಉಂಟಾದ ಬಿರುಕಿನಿಂದ ಅಸಮಾಧಾನಗೊಂಡಿದ್ದರು ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ. ಅಂದು ಉಂಟಾದ ಅಸಮಾಧಾನವೇ ಇಂದು ಸದಸ್ಯರ ನಡುವಿನ ವಾಗ್ವಾದಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಚಿಕ್ಕಬಳ್ಳಾಪುರ: ಪ್ರಸಕ್ತ ರಾಜ್ಯ ರಾಜಕೀಯ ಬೆಳವಣಿಗೆಗಳು ಅಸಹ್ಯ ಮೂಡಿಸುತ್ತಿದೆ. ಬಿಹಾರದ ರಾಜಕೀಯಕ್ಕಿಂತ ಕರ್ನಾಟಕ ರಾಜಕೀಯ ಕೀಳಾಗಿದೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಹಾರ ರಾಜಕೀಯಕ್ಕಿಂತ ಕರ್ನಾಟಕದ ರಾಜಕೀಯ ಕೀಳಾಗುತ್ತಿದೆ. ಕರ್ನಾಟಕದಲ್ಲಿ ಶಾಸಕರು ಮೂರನೇ ಹಂತದ ರಾಜಕಾರಣಕ್ಕೆ ಇಳಿದಿದ್ದಾರೆ. ತಮ್ಮ ಶಾಸಕತ್ವವನ್ನು ಮಾರಿಕೊಳ್ಳಲು ಮುಂದಾಗಿದ್ದಾರೆ. ಇದಕ್ಕೆ ಇತಿಶ್ರೀ ಹಾಡಲೇ ಬೇಕು, ಇಲ್ಲವಾದಲ್ಲಿ ನಾಡಿಗೆ ಈ ವಿಚಾರ ಕಳಂಕವಾಗಲಿದೆ ಎಂದು ರಾಜ್ಯ ರಾಜಕಾರಣದಲ್ಲಿ ಆಗುತ್ತಿರುವ ಏರುಪೇರುಗಳ ಬಗ್ಗೆ ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿದೆ ಈ ಬಗ್ಗೆ ಚರ್ಚೆ ನಡೆಸಬೇಕಾದ ಶಾಸಕರು, ಮೂರನೇ ದರ್ಜೆಯ ರಾಜಕಾರಣ ಮಾಡುತ್ತಿರುವುದು ಬೇಸರ ಮೂಡಿಸಿದೆ ಎಂದು ಅಸಮಾಧಾನ ಹೊರಹಾಕಿದರು. ಅಲ್ಲದೇ ರಾಜ್ಯ ರಾಜಕೀಯವನ್ನು ಸರಿಮಾಡಲು ನಾಗರಿಕರು ಯೋಚನೆ ಮಾಡಬೇಕು. ಕೆಟ್ಟ, ಅಸಹ್ಯ ತರಿಸುವ ರಾಜಕಾರಣವನ್ನು ತಡೆಯಲು ನಾಗರಿಕರು ಆಲೋಚನೆ ಮಾಡಬೇಕು. ಇಲ್ಲವಾದಲ್ಲಿ ಇದೇ ಸ್ಥಿತಿ ಮುಂದೆಯೂ ನಡೆಯುತ್ತದೆ. ಹೀಗೆ ನಡೆಯಲು ನಾವು ಬಿಡಬಾರದು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಮಾತು ಇಡೀ ಹೆಣ್ಣು ಕುಲಕ್ಕೆ ಅವಮಾನ ಮಾಡಿದಂಗೆ ಎಂದು ನೊಂದ ಮಹಿಳೆ ಕಣ್ಣೀರು ಹಾಕಿದ್ದಾರೆ.
ಕಬ್ಬು ಬಾಕಿ ಪಾವತಿ, ಸೂಕ್ತ ಬೆಂಬಲ ಬೆಲೆ ನಿಗದಿಗಾಗಿ ಹೋರಾಡುತ್ತಿದ್ದ ರೈತ ಮಹಿಳೆಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಅವಮಾನ ಮಾಡಿದ್ದರು. ಇದರಿಂದ ರೈತರು ಕುಮಾರಸ್ವಾಮಿ ವಿರುದ್ಧ ಸಿಡಿದೆದ್ದಿದ್ದಾರೆ. ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರೈತ ಮಹಿಳೆ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಾತಿನಿಂದ ನನಗೆ ಬಹಳ ನೋವು, ಬೇಸರವಾಗಿದೆ. ನನ್ನ ಸ್ವಾಭಿಮಾನಕ್ಕೆ ಚ್ಯುತಿ ತಂದಿದ್ದಾರೆ. ನಾಲ್ಕು ವರ್ಷದಿಂದ ಎಲ್ಲಿ ಮಲಗಿದ್ದೆ ಎಂದು ಕೇಳುವುದು ಮುಖ್ಯಮಂತ್ರಿಗೆ ಶೋಭೆ ತರುವಂತಹದಲ್ಲ. ನಾವು ರೈತರು ಆಕ್ರೋಶದಲ್ಲಿ ಏನೋ ಮಾತನಾಡಿರಬಹುದು. ಆದರೆ ಅವರು ಈ ರೀತಿ ಮಾತನಾಡಬಾರದು. ನನಗೆ ಎಷ್ಟು ನೋವಾಗಿದೆ ಎಂದು ನನಗೆ ಗೊತ್ತಿದೆ ಎಂದು ಗಳಗಳನೇ ಅಳುತ್ತಾ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ.
ಕುಮಾರಸ್ವಾಮಿ ಮಾತನಾಡಿದ್ದು ಇಡೀ ಹೆಣ್ಣು ಕುಲಕ್ಕೆ ಅವಮಾನ ಮಾಡಿದಂಗೆ. ಅವರು ಅವಮಾನ ಮಾಡಿದ ಬಳಿಕ ರಾತ್ರಿಯೆಲ್ಲಾ ಫೋನ್ ಮಾಡಿ ಕೆಲ ಮಹಿಳೆಯರು ನಾವಿದ್ದೀವಿ ಚಿಂತೆ ಮಾಡಬೇಡ ಎಂದು ಸಮಾಧಾನ ಮಾಡಿದ್ದಾರೆ. ಆದರೂ ನನ್ನ ಆತ್ಮ ಗೌರವಕ್ಕೆ ಧಕ್ಕೆತರುವಂತಹ ಮಾತನ್ನು ಕೇಳಿ ರಾತ್ರಿಯೆಲ್ಲಾ ನಿದ್ದೆ ಬಂದಿಲ್ಲ ಎಂದು ಮಹಿಳೆ ಅಳಲು ತೋಡಿಕೊಂಡಿದ್ದಾರೆ.
ಸಿಎಂ ಕ್ಷಮೆ ಕೇಳಲೇಬೇಕು:
ನಿಮ್ಮ ಬಗ್ಗೆ ಬಹಳ ಗೌರವ ಇಟ್ಟಿದ್ದೆವು. ಆದ್ರೆ ನಿಮ್ಮ ಮಾತಿನಿಂದ ನನ್ನ ಆತ್ಮಗೌರವಕ್ಕೆ ಚ್ಯುತಿ ತಂದಿದ್ದೀರಿ. ಇದು ಸರಿನಾ ಹೇಳಿ ಎಂದು ಸಿಎಂಗೆ ಪ್ರಶ್ನೆ ಮಾಡಿದ್ದಾರೆ. ನೀವೇ ಬರುತ್ತೇನೆ ಎಂದು ಮಾತು ಕೊಟ್ರಿ, ಆದರೆ ನೀವೇ ಹಿಂದೆ ಸರಿದ್ರಿ. ನಮಗೆ ಕುತ್ತಿಗೆಗೆ ಬರುವ ತನಕ ತಡೆದುಕೊಳ್ಳುತ್ತೇವೆ. ಆದರೆ ಅಲ್ಲಿಗೆ ಬಂದ ಮೇಲೆ ನಮ್ಮ ಸಹನೆಯ ಕಟ್ಟೆ ಒಡೆಯುತ್ತದೆ. ಆದ್ದರಿಂದ ಆಕ್ರೋಶ ವ್ಯಕ್ತಪಡಿಸುತ್ತೇವೆ. ಇಂದು ನನ್ನ ಆತ್ಮ ಗೌರವಕ್ಕೆ ಧಕ್ಕೆ ತಂದಿದ್ದೀರಿ. ಆದ್ದರಿಂದ ನೀವು ಕ್ಷಮೆ ಕೇಳಲೇಬೇಕು ಎಂದು ನೊಂದ ಮಹಿಳೆ ಕಣ್ಣೀರಿಡುತ್ತಾ ಹೇಳಿದ್ದಾರೆ.
ಸಿಎಂ ಕುಮಾರಸ್ವಾಮಿ ಅವರ ಮಾತಿಗೆ ಪ್ರತಿಕ್ರಿಯಿಸಿದ ಕೋಡಿಹಳ್ಳಿ ಚಂದ್ರಶೇಖರ್ ಅವರು, ಇದು ರೈತರ ವಾಸ್ತವವಾಗಿದೆ. ಯಾಕೆಂದರೆ ದುಡಿದ ರೈತನಿಗೆ ನ್ಯಾಯೋಚಿತವಾಗಿ ಕೊಡಬೇಕು ಎಂದು ರೈತರು ಒತ್ತಾಯ ಮಾಡುತ್ತಿದ್ದಾರೆ. ಗುಜರಾತಿನಲ್ಲಿ ಒಂದು ಟನ್ ಗೆ 4,500 ಸಾವಿರ ಕೊಡುತ್ತಾರೆ. ಮಹಾರಾಷ್ಟ್ರದಲ್ಲಿ 3500 ರೂ ಕೊಡಬೇಕು ಎಂದು ತೀರ್ಮಾನ ಮಾಡಿದ್ದಾರೆ. ಕರ್ನಾಟಕದೊಳಗೆ ಕಾರ್ಖಾನೆ ದರನೇ ನಿಗದಿಯಾಗಿಲ್ಲ. ಕಾರ್ಖಾನೆ ಪ್ರಾರಂಭವಾಗುತ್ತವೆ. ಮೂರು ವರ್ಷಗಳ ಬಾಕಿ ಇನ್ನೂ ಕೊಟ್ಟಿಲ್ಲ. ಇದನ್ನು ಕೇಳಿದರೆ ಸರ್ಕಾರ ಸಿಡಿಮಿಡಿಗೊಳ್ಳುತ್ತದೆ. ಇದಕ್ಕೂ ಒಂದು ಮಾರ್ಗ ಇರುತ್ತದೆ. ರೈತರಿಗೆ ಕಷ್ಟ ಇದೆ ಆದ್ದರಿಂದ ಅವರಿಗೆ ಕೊಡಬೇಕಾದ ದುಡ್ಡು ಕೊಡಬೇಕು. ಅದು ಬಿಟ್ಟು ಅವರ ದುಡ್ಡಿನಲ್ಲಿ ಮಜಾ ಮಾಡಬಾರದು ಎಂದು ಗರಂ ಆಗಿದ್ದಾರೆ.
ಮುಖ್ಯಮಂತ್ರಿ ಸ್ಥಾನಕ್ಕೆ ಗೌರವ ಅಂತ ಇರುತ್ತದೆ. ತಾನು ಖಾಸಗಿ ವ್ಯಕ್ತಿಯಾಗಿ ನಡೆದುಕೊಳ್ಳುವುದು ಬೇರೆ ವಿಚಾರ. ಸಿಎಂ ಸ್ಥಾನದ ಗೌರವವನ್ನು ಕಾಪಾಡಿಕೊಳ್ಳಬೇಕು ಎಂದು ನಡೆದುಕೊಳ್ಳುವುದು ಬೇರೆಯಾಗಿದೆ. ಹಾಗಾಗಿ ಹೆಣ್ಣು ಮಗಳು ಯಾರೇ ಆಗಿರಲಿ. ನಮ್ಮ ಸಮಾಜದಲ್ಲಿ ಯಾವ ರೀತಿ ಗೌರವಿಸುತ್ತೇವೆಯೋ ಅದೇ ರೀತಿ ಗೌರವ ಕೊಡಬೇಕು. ಓರ್ವ ಸಿಎಂ ಆಗಿ ಈ ರೀತಿ ಪದವನ್ನು ಬಳಸಬಾದರು. ಈ ರೀತಿ ಮಾತನಾಡಿದರೆ ಅವರ ಗೌರವಕ್ಕೆ ಧಕ್ಕೆ ತರುತ್ತದೆ ಇದರಿಂದ ಸರ್ಕಾರಕ್ಕೂ ಒಳ್ಳೆಯದಾಗಲ್ಲ ಎಂದು ಹೇಳಿದ್ದಾರೆ.
ಮಹಿಳೆ ಇವತ್ತು ಚಳವಳಿಗೆ ಬಂದವಳಲ್ಲ. ಅನೇಕ ವರ್ಷಗಳ ಹಿಂದೆ ಚಳವಳಿ, ಹೋರಾಟದಲ್ಲಿ ಭಾಗವಹಿಸಿದ್ದಾಳೆ. ಆದ್ದರಿಂದ ಕನಿಷ್ಠ ಮಹಿಳೆಗೂ ಗೌರವ ಕೊಡಬೇಕು. ಸಿಎಂ ಮಾತನನ್ನು ಒಪ್ಪುವಂತದಲ್ಲ. ಇದನ್ನು ರೈತರು ಸಹಿಸಲ್ಲ, ಆದ್ದರಿಂದ ಅವರೇ ವಾಪಸ್ ಪಡೆಯಬೇಕು. ಮೊದಲು ರೈತರ ಬಾಕಿ ಕೊಡಿ. ಬಳಿಕ ಆ ಹೆಣ್ಣು ಮಗಳ ಬಳಿ ಕ್ಷಮೆ ಕೇಳಬೇಕು ಎಂದು ಅವರು ಆಕ್ರೋಶದಿಂದ ಹೇಳಿದ್ದಾರೆ.
ಬೆಂಗಳೂರು: ರೈತ ಸಂಘದ ಮಧ್ಯೆ ಮಹಾ ಬಿರುಕು ಉಂಟಾಗಿದ್ದು, ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಕಳಸಾ ಬಂಡೂರಿ ರೈತರು ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿಯಿಂದ ಬೆಂಗಳೂರು ಮೆಜೆಸ್ಟಿಕ್ ರೈಲ್ವೆ ಸ್ಟೇಷನ್ ಗೆ ಬಂದಿಳಿದ ಮಹದಾಯಿ, ಕಳಸಬಂಡೂರಿ ರೈತರು ಸಂಪೂರ್ಣ ಸಾಲಮನ್ನಾ ಮಹದಾಯಿ, ಕಳಸಾ ಬಂಡೂರಿ ಯೋಜನೆ ಜಾರಿಗಾಗಿ ಬೆಂಗಳೂರು ಚಲೋ ನಡೆಸಿದ್ದಾರೆ.
ಈ ವೇಳೆ ಕೋಡಿಹಳ್ಳಿ ರೈತ ಮುಖಂಡರೇ ಅಲ್ಲ, ಕೋಡಿಹಳ್ಳಿ ಬೆಂಗಳೂರಿನಲ್ಲಿ ಕೂತು ರಾಜಕೀಯ ಮಾಡ್ತಾರೆ. ಕೋಡಿಹಳ್ಳಿ ಒಂದು ಸಂಘಟನೆ ಮಾಡಲಿ, ಅದು ಬಿಟ್ಟು ರಾಜಕೀಯ ಬಿಟ್ಟು ಬಿಡಲಿ. ಮೊನ್ನೆ ನಡೆದ ಹೋರಾಟಕ್ಕೂ ಕರೆದಿಲ್ಲ. ರಾಷ್ಟ್ರಪತಿಗಳ ಭೇಟಿ ಸಂದರ್ಭದಲ್ಲಿ ಈ ಹಿಂದೆ ರೈತರಿಂದ ದುಡ್ಡು ಕಲೆಕ್ಟ್ ಮಾಡಿದ್ರು. ಅವರ್ಯಾಕೆ ದುಡ್ಡು ವಸೂಲಿ ಮಾಡಬೇಕು? ಕೋಡಿಹಳ್ಳಿ ರಾಜಕೀಯ ಮಾಡುತ್ತಿದ್ದಾರೆ. ಇಂತಹ ಹೋರಾಟಗಾರರ ಅವಶ್ಯಕತೆ ನಮಗಿಲ್ಲ ಅಂತ ಕೋಡಿಹಳ್ಳಿ ವಿರುದ್ಧ ರೈತರು ಕಿಡಿಕಾರಿದ್ದಾರೆ.
ಚಳಿಗಾಲ ಅಧಿವೇಶನ ಸಮಯದಲ್ಲೂ ಪ್ರತಿ ರೈತರಿಂದ ಆರುನೂರು ರೂ. ತೆಗೆದುಕೊಂಡು ಒಂದು ದಿನ ಚಳಿಗಾಲ ಅಧಿವೇಶನ ನಡೆದಾಗ ಪ್ರತಿಭಟನೆ ಮಾಡಿ ಆರೆಸ್ಟ್ ಆಗಿ ನಾಟಕ ಮಾಡ್ತಾರೆ. ಇನ್ನು 21 ರಂದು ಹಾವೇರಿಯಲ್ಲಿ ನಡೆಯುವ ಸಮಾವೇಶ ಘೇರಾವ್ ಹಾಕುವ ಎಚ್ಚರಿಕೆಯನ್ನು ರೈತ ಸಂಘ ನೀಡಿದೆ. ಒಟ್ಟಿನಲ್ಲಿ ಸಾಲಮನ್ನಾದ ಹೋರಾಟದ ಮಧ್ಯೆಯೇ ರೈತರ ಮಧ್ಯೆ ಬಿರುಕು ಮೂಡಿದ್ದು, ಕೋಡಿಹಳ್ಳಿ ವಿರುದ್ಧ ಆಕ್ರೋಶ ಸ್ಫೋಟಗೊಂಡಿರುವುದು ಅಚ್ಚರಿ ಮೂಡಿಸಿದೆ.
ಮೂರು ಪಕ್ಷದ ನಾಯಕರನ್ನ ಭೇಟೆ ಮಾಡ್ತೆವೆ ನಮಗೆ ನ್ಯಾಯ ದೊರಕಿಸಿ ಕೊಡಲಿ. ಸಿಎಂ ಕುಮಾರಸ್ವಾಮಿ, ವಿರೋಧ ಪಕ್ಷದ ನಾಯಕ ಯಡಿಯೂರಪ್ಪ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯರನ್ನ ಭೇಟಿ ಮಾಡ್ತೆವೆ. ಕುಮಾರಸ್ವಾಮಿ ಸಂಪೂರ್ಣ ಸಾಲಮನ್ನಾ ಮಾಡ್ತೀವಿ ಅಂತಾ ಹೇಳಿದ್ರು ಅದರಂತೆ ಮಾಡಲಿ. ಸಾಲಮನ್ನಾ, ಮಹಾದಾಯಿ ಯೋಜನೆ ಜಾರಿ ಮಾಡೋವರೆಗೂ ನಮ್ಮ ಹೋರಾಟ ನಿಲ್ಲಲ್ಲ. ಕೇಂದ್ರಸರ್ಕಾರದ ಫಸಲ ಭೀಮ ಯೋಜನೆಯಿಂದ ಸರಿಯಾಗಿ ದುಡ್ಡು ಬರ್ತಿಲ್ಲ. ಹಣ ಬಂದಿದ್ದರು ಅಧಿಕಾರಿಗಳು ಹಣ ನುಂಗುತ್ತಿದ್ದಾರೆ. ನಮ್ಮ ರೈತರು ಸಾಕಷ್ಟು ಜನ ಬರುತ್ತಿದ್ದಾರೆ ನಮ್ಮ ಬೇಡಿಕೆ ಈಡೇರುವರೆಗೂ ಹೊರಾಟ ಮಾಡ್ತಿವಿ ಅಂತ ರೈತರು ಧಿಕ್ಕಾರ ಕೂಗುತ್ತಿದ್ದಾರೆ.
ಚಾಮರಾಜನಗರ: ಈಗ ಮಳೆ ಬರ್ತಿದೆ. ಈಗಲೇ ಬಿತ್ತನೆ ಕಾರ್ಯ ಶುರು ಮಾಡಿ. ಒಂದು ವೇಳೆ ಬಿತ್ತನೆ ಮಾಡಿಲ್ಲ ಅಂದ್ರೆ ನಿಮ್ಮ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಚಾಮರಾಜನಗರದ ಜಿಲ್ಲಾಧಿಕಾರಿ ಬಿ.ರಾಮು ಆದೇಶ ಹೊರಡಿಸಿದ್ದಾರೆ.
ಬರಗಾಲದಲ್ಲಿ ರೈತರ ನೆರವಿಗೆ ಬಾರದ ಜಿಲ್ಲಾಡಳಿತ ಇದೀಗ ಎರಡು ಮೂರು ಬಾರಿ ಮಳೆ ಬಿದ್ದ ತಕ್ಷಣವೇ ಬಿತ್ತನೆ ಕಾರ್ಯದಲ್ಲಿ ತೊಡಗಿಕೊಳ್ಳಿ ಎಂದು ಆದೇಶ ನೀಡಿದೆ. ಒಂದು ವೇಳೆ ಬಿತ್ತನೆ ಕಾರ್ಯದಲ್ಲಿ ತೊಡಿಗಿಕೊಳ್ಳದಿದ್ದರೆ ರೈತರಿಗೆ ಭೂ ಸುಧಾರಣೆ ಕಾಯ್ದೆಯಡಿ ನೋಟಿಸ್ ಜಾರಿ ಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ರೈತರ ಮೇಲೆ ಜಿಲ್ಲಾಧಿಕಾರಿಗಳು ಹಕ್ಕು ಚಲಾವಣೆ ಮಾಡಿದ್ದಾರೆ.
ಡಿಸಿ ಒಬ್ಬ ಮೂರ್ಖ: ಇವಾಗ್ಲೇ ಬಿತ್ತನೆ ಮಾಡಿ ಎಂಬುವುದು ದುರಂಹಕಾರ ಆದೇಶ. ಬಿತ್ತನೆ ಮಾಡದೇ ಇದ್ದರೆ ಕ್ರಮ ತೆಗೆದುಕೊಳ್ಳುವುದಾಗಿ ಆದೇಶ ನೀಡಿದ್ದಾರೆ. ಕೂಡಲೇ ಅದನ್ನ ಹಿಂಪಡೆಯಬೇಕು. ಇದೊಂದು ನಾಚಿಕೆಗೇಡಿತನದ ಕೆಲಸ. ಡಿಸಿ ಒಬ್ಬ ಮೂರ್ಖ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಾಮರಾಜನಗರದಲ್ಲಿ ಕಳೆದ ಐದು ವರ್ಷಗಳಿಂದ ಭೀಕರ ಬರಗಾಲ ಆವರಿಸಿದ್ದು, ಇದರಿಂದ ಮಣ್ಣಿನ ಸತ್ವ ಸಂಪೂರ್ಣ ಕಳೆದುಕೊಂಡಿದೆ. ಇದೀಗ ಕಳೆದ ಒಂದು ತಿಂಗಳಿಂದ ಜಿಲ್ಲೆಯಲ್ಲಿ ತಕ್ಕ ಮಟ್ಟಿಗೆ ಮಳೆ ಆಗುತ್ತಿದೆ. ಹೀಗಾಗಿ ರೈತರು ತಮ್ಮ ಜಮೀನನ್ನು ಉತ್ತು ಹದ ಮಾಡಿಕೊಂಡು ಮಣ್ಣನ್ನು ಫಲವತ್ತುಗೊಳಿಸುತ್ತಿದ್ದಾರೆ. ಹೀಗಿರುವಾಗ ಏಕಾ ಏಕಿ ಜಿಲ್ಲಾಧಿಕಾರಿಗಳು ಹೊರಡಿಸಿರುವ ಈ ಆದೇಶದಿಂದ ರೈತರು ಆಕ್ರೋಶಗೊಂಡಿದ್ದು, ಡಿಸಿ ತಮ್ಮ ಆದೇಶವನ್ನು ವಾಪಸ್ಸು ಪಡೆದು ರೈತರ ಕ್ಷಮೆ ಯಾಚನೆ ಮಾಡಬೇಕೆಂದು ಜಿಲ್ಲೆಯ ರೈತರು ಆಗ್ರಹಿಸಿದ್ದಾರೆ.