Tag: kodi mutt swamiji

  • ಚಂದ್ರಯಾನ-3 ಸಕ್ಸಸ್ ಆಗುತ್ತೆ – ಕೋಡಿಮಠ ಶ್ರೀಗಳ ಭವಿಷ್ಯ

    ಚಂದ್ರಯಾನ-3 ಸಕ್ಸಸ್ ಆಗುತ್ತೆ – ಕೋಡಿಮಠ ಶ್ರೀಗಳ ಭವಿಷ್ಯ

    – ದೇಶದಲ್ಲಿ ಜಲಪ್ರಳಯವಾಗುತ್ತೆ, ವಿಷಾನೀಲ ಬೀಸುತ್ತೆ, ಭೂಕಂಪ, ಸುನಾಮಿಯಿಂದ ಹೆಚ್ಚಿನ ಸಾವು ನೋವಾಗುತ್ತೆ
    – ಡಾ. ಶಿವಾನಂದ ಸ್ವಾಮೀಜಿ ಆಘಾತಕಾರಿ ಭವಿಷ್ಯ

    ಬೆಳಗಾವಿ: ಈ ಬಾರಿ ಚಂದ್ರಯಾನ-3 (Chandrayaan 3) ಯಶಸ್ವಿಯಾಗಲಿದೆ ಎಂದು ಬೆಳಗಾವಿಯಲ್ಲಿ ಕೋಡಿಮಠದ ಡಾ. ಶಿವಾನಂದ ಸ್ವಾಮೀಜಿ (Kodi Mutt Swamiji) ಭವಿಷ್ಯ ನುಡಿದಿದ್ದಾರೆ.

    ಬೆಳಗಾವಿಯಲ್ಲಿಂದು (Belagavi) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಬಾರಿ ಚಂದ್ರಯಾನ 3 ಯಶಸ್ವಿಯಾಗಲಿದೆ. ಆದ್ರೆ ಶ್ರಾವಣ ಮಾಸದ ಮಧ್ಯಂತರದಲ್ಲಿ ಜಾಗತಿಕ ಮಟ್ಟದಲ್ಲಿ ವಿಪರೀತ ಮಳೆಯಾಗಲಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುದ್ಧ ಭೀತಿಯಿದೆ. ಭೂಕಂಪನ, ಸುನಾಮಿಗಳಿಂದ ಹೆಚ್ಚಿನ ಜನರ ಸಾವು ನೋವು ಸಂಭವಿಸುತ್ತೆ. ವಿಷಾನೀಲ ಬೀಸುವ ಪ್ರಸಂಗವೂ ಇದೆ, ಅದು ಎಲ್ಲ ಕಡೆಯೂ ವ್ಯಾಪಿಸಲಿದೆ. ವಿಪರೀತ ಮಳೆಯಿಂದ (Rain) ಎರಡು ದೇಶಗಳು ನಾಶವಾಗಲಿವೆ. ಭಾರತದಲ್ಲಿ ಜಲಪ್ರಳಯ ಆಗುವ ಲಕ್ಷಣಗಳಿವೆ ಎಂದು ಆತಂಕಕಾರಿ ಭವಿಷ್ಯ ನುಡಿದಿದ್ದಾರೆ.

    ಭೂಕಂಪನದಿಂದ ದೊಡ್ಡ ದೊಡ್ಡ ನಗರಗಳಿಗೆ ಅಪಾಯವಿದೆ. ಇದ್ದಕ್ಕಿದ್ದಂತೆ ಜನರ ಸಾವಾಗುವ ಆತಂಕವಿದೆ. ಜಾಗತಿಕ ಮಟ್ಟದಲ್ಲಿ ವಿಷಾನೀಲದ ಪರಿಣಾಮ ಭಾರತದ ಮೇಲೂ ಆಗಲಿದೆ. ಜಗತ್ತಿನ ಸಾಮ್ರಾಟರು ತಲ್ಲಣಗೊಳ್ಳುವ ಪ್ರಸಂಗವೂ ಇದೆ. ಅದರ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕು. ಆದ್ರೆ ದಕ್ಷಿಣ ಭಾರತದಲ್ಲಿ ಸಮೃದ್ಧಿಯಾಗುವ ಲಕ್ಷಣಗಳಿವೆ, ಯಾವುದೇ ತೊಂದರೆಯಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಅಂತಿಮ ಹಂತದ ಡಿಬೂಸ್ಟಿಂಗ್‌ ಕಾರ್ಯಾಚರಣೆಯೂ ಯಶಸ್ವಿ – ಚಂದ್ರನ ಅಂಗಳಕ್ಕೆ ಇನ್ನೊಂದೇ ಹೆಜ್ಜೆ

    ಲೋಕಸಭೆ ಚುನಾವಣೆ ಫಲಿತಾಂಶದ ಬಗ್ಗೆ ಹೇಳಲು ಇನ್ನೂ ಸಮಯವಿದೆ, ನೋಡಿ ಹೇಳುತ್ತೇವೆ. ದೈವದ ಬಲ ಮನುಷ್ಯನಿಗೆ ಮುಖ್ಯವಾಗಿ ಬೇಕು. ಯಾರು ದೈವ ನಂಬುತ್ತಾನೆಯೋ ಅಂಥವರಿಗೆ ತೊಂದರೆಯಿಲ್ಲ. ಇಲ್ಲವಾದರೆ ಆಪತ್ತು, ಸಾವುಗಳು ಸಂಭವಿಸುತ್ತವೆ. ಕೆಲವರಿಗೆ ದೈವಬಲ ಇದ್ದರೂ ತೊಂದರೆ ಆಗುತ್ತದೆ, ಪ್ರಕೃತಿ ನಿಯಮವದು, ಪ್ರಾಕೃತಿಕ ದೋಷದಿಂದಲೇ ಸಾವುನೋವು ಹೆಚ್ಚುತ್ತಿವೆ ಎಂದು ಹೇಳಿದ್ದಾರೆ.

    ಆಹಾರ ಪದ್ಧತಿಯಲ್ಲಿ ಬದಲಾವಣೆ ಆಗಿದೆ, ಕೆಮಿಕಲ್ ಮಿಶ್ರಿತ ಆಹಾರ ಸೇವನೆ ಹೆಚ್ಚುತ್ತಿದೆ. ಸೀಮೆ ಗೊಬ್ಬರ, ದನದ ಗೊಬ್ಬರ ಹಾಕಿ ಬೆಳೆ ಮೊದಲು ಬೆಳೆಯಲಾಗುತ್ತಿತ್ತು. ಈಗ ಕೆಮಿಕಲ್ ಸಿಂಪಡಣೆ ಹೆಚ್ಚುತ್ತಿದೆ, ಹಣ್ಣಿಗೂ ಕೆಮಿಕಲ್ ಹಾಕಲಾಗುತ್ತಿದೆ. ವಿಷವನ್ನೆ ಬಿತ್ತಿ, ವಿಷವನ್ನೇ ಬೆಳೆದು, ವಿಷವನ್ನೇ ಉಣ್ಣುವಾಗ ಆರೋಗ್ಯ ವೃದ್ಧಿ ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಚಂದ್ರನ ಪ್ರೀ ಲ್ಯಾಂಡಿಂಗ್ ಕಕ್ಷೆ ಪ್ರವೇಶಿಸುವಲ್ಲಿ ರಷ್ಯಾದ ಲೂನಾ-25 ಲ್ಯಾಂಡರ್ ವಿಫಲ

    ಪ್ರಕೃತಿ ಕೂಡ ಮುನಿಸಿಕೊಳ್ಳುವ ಸ್ಥಿತಿ ಇದೆ. ಗಿಡಮರಗಳನ್ನ ಮನುಷ್ಯ ನಾಶ ಮಾಡುತ್ತಿದ್ದಾನೆ. ಈ ಪ್ರಕೃತಿಯ ದೋಷ ಮನುಕುಲಕ್ಕೆ ಇದೆ. ಮೊದಲು ಅಂತರ್ಜಲ ಹೆಚ್ಚಿತ್ತು, ಈಗ ಆಳವಾಗಿ ಬೋರ್‌ವೆಲ್‌ ಕೊರೆಸಬೇಕು. ಹೀಗಾಗಿ ಪ್ರಳಯ ಜಾಸ್ತಿ ಆಗ್ತಿವೆ. ಮನುಷ್ಯ ಅತಿವೇಗದಲ್ಲಿ ಹಣ ಮಾಡಲು ಹೊರಟಿದ್ದಾನೆ, ಹೀಗಾಗಿ ಆಪತ್ತು ಹೆಚ್ಚಿವೆ. ಇದೆಲ್ಲದರ ನಿಯಂತ್ರಣಕ್ಕೆ ಭಗವಂತನಿದ್ದಾನೆ, ದೈವ, ನಂಬಿಕೆ ಮೇಲೆ ಜೀವನ ಮಾಡಬೇಕು ಎಂದು ಸಲಹೆ ನೀಡಿದ್ದಾರೆ,

    ಇದೇ ವೇಳೆ ಈ ರಾಜ್ಯಕ್ಕೆ ಮಹಿಳಾ ಮುಖ್ಯಮಂತ್ರಿ ಆಗುವ ಯೋಗ ಇದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿ, ಮುಂದೆ ಮಹಿಳೆಯರಿಗೆ ಸಿಎಂ ಆಗುವ ಯೋಗ ಬರಲಿದೆ, ಅವರಿಗೂ ಅವಕಾಶ ಸಿಗಲಿದೆ, ಹಣದ ಹಿಂದೆ ಮನುಷ್ಯ ಹೋಗದೇ ದೈವದ ಹಿಂದೆ ಹೋಗಬೇಕು ಎಂದು ತಿಳಿವಳಿಕೆ ನೀಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಾನು ಭವಿಷ್ಯ ನುಡಿದಂತೆ ರೈಲು ದುರಂತ ಆಗಿದೆ; ದೇಶಕ್ಕೆ ಇನ್ನೊಂದು ಗಂಡಾಂತರ ಕಾದಿದೆ – ಕೋಡಿ ಮಠ ಶ್ರೀ ಭವಿಷ್ಯ

    ನಾನು ಭವಿಷ್ಯ ನುಡಿದಂತೆ ರೈಲು ದುರಂತ ಆಗಿದೆ; ದೇಶಕ್ಕೆ ಇನ್ನೊಂದು ಗಂಡಾಂತರ ಕಾದಿದೆ – ಕೋಡಿ ಮಠ ಶ್ರೀ ಭವಿಷ್ಯ

    – ಸಿಎಂ ಸಿದ್ದು ಸರ್ಕಾರ ಶುಭ ಸೂಚನೆ ನೀಡಿದ ಸ್ವಾಮೀಜಿ

    ಕೋಲಾರ: ದೇಶಕ್ಕೆ ಇನ್ನೂ ಒಂದು ಗಂಡಾಂತರ ಕಾದಿದೆ. ಈ ವರ್ಷ ಅಚಾನಕ್ಕಾಗಿ ಗುಡುಗು, ಮಿಂಚಿನ ಸಹಿತ ಮಳೆ ಬರಲಿದ್ದು, ಎರಡು-ಮೂರು ರಾಷ್ಟ್ರಗಳು ನೀರಿನಲ್ಲಿ ಮುಳುಗಲಿವೆ ಎಂದು ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ಸ್ವಾಮೀಜಿ (Kodi Mutt Shree) ಮತ್ತೊಂದು ಭವಿಷ್ಯ ನುಡಿದಿದ್ದಾರೆ.

    ಕೋಲಾರ (Kolara) ತಾಲ್ಲೂಕಿನ ಸುಗಟೂರು ಗ್ರಾಮದ ಯೋಗಿ ನಾರಾಯಣ ಮಠಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಈ ಹಿಂದೆ ಹೇಳಿದಂತೆ ರಾಜ್ಯದಲ್ಲಿ ಬಹುಮತದ ಸರ್ಕಾರ ಬಂದಿದೆ. ಈ ವರ್ಷದಲ್ಲಿ ದೊಡ್ಡ ಅವಘಡ ನಡೆಯುತ್ತೆ ಎಂದು ಹೇಳಿದ್ದೆ. ಅದರಂತೆ ರೈಲು ದುರಂತ ನಡೆದಿದೆ. ಇನ್ನೂ ಒಂದು ಗಂಡಾಂತರ ದೇಶಕ್ಕೆ ಕಾದಿದೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: 1 ಫೋನ್‌ ಕರೆ.. 9 ಅಧಿಕಾರಿಗಳು..; ಒಡಿಶಾ ರೈಲು ದುರಂತದ ಬಳಿಕ ಏನೇನಾಯ್ತು? – ಇಲ್ಲಿದೆ ಪಿನ್‌ ಟು ಪಿನ್‌ ಮಾಹಿತಿ

    ಎಲ್ಲೋ ನಡೆದ ಬಾಂಬ್ ದಾಳಿಯಿಂದ ನಮಗೆ ಸಾಕಷ್ಟು ಅನಾಹುತ ಸಂಭವಿಸಲಿದೆ. ಮತ್ತೆ ಕೈವಾರ ತಾತಯ್ಯನವರು ಹುಟ್ಟಿ ಬರುವ ಸಂಕೇತ ಇದೆ. ಅಂತಹ ಸೂಚನೆ ಈಗಾಗಲೆ ಸಿಕ್ಕಿದೆ. ಅದರಂತೆ ಬೆಟ್ಟದಲ್ಲಿ ಮೂನ್ಸೂಚನೆ ಸಿಕ್ಕಿದೆ ಎಂದು ತಿಳಿಸಿದ್ದಾರೆ.

    ರಾಜ್ಯದಲ್ಲಿ ಆಧ್ಯಾತ್ಮಿಕವಾಗಿ ಅವರು (ಸರ್ಕಾರ) ನಡೆಯುತ್ತಿದ್ದಾರೆ. ಹಾಗಾಗಿ ಅವರಿಗೆ ಒಳ್ಳೆಯದಾಗಲಿ. ಅಧ್ಯಾತ್ಮ ಬಿಟ್ಟು ಹೋದ್ರೆ ಅವರಿಗೆ ದೈವವೇ ಉತ್ತರ ನೀಡಲಿದೆ ಎಂದು ಸ್ವಾಮೀಜಿಗಳು ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರಕ್ಕೆ ಶುಭಾಶಯ ತಿಳಿಸಿದ್ದಾರೆ. ಇದನ್ನೂ ಓದಿ: ಈ ವರ್ಷವೇ ಪಠ್ಯ ಪುಸ್ತಕ ಪರಿಷ್ಕರಣೆ: ಮಧು ಬಂಗಾರಪ್ಪ ಸ್ಪಷ್ಟನೆ

  • ಪ್ರಕೃತಿಯಲ್ಲಿ ಮಳೆ ಆರ್ಭಟ; ಮತೀಯ ಗಲಭೆಯಿಂದ ಸಾವು-ನೋವು ಹೆಚ್ಚಳ – ಕೋಡಿಮಠದ ಶ್ರೀ ಭವಿಷ್ಯ

    ಪ್ರಕೃತಿಯಲ್ಲಿ ಮಳೆ ಆರ್ಭಟ; ಮತೀಯ ಗಲಭೆಯಿಂದ ಸಾವು-ನೋವು ಹೆಚ್ಚಳ – ಕೋಡಿಮಠದ ಶ್ರೀ ಭವಿಷ್ಯ

    ಹಾಸನ: ರಾಜ್ಯದಲ್ಲಿ ಮಳೆಯಿಂದಾಗಿ ಹೆಚ್ಚುತ್ತಿರುವ ಹಾನಿ ಮತ್ತು ಮತೀಯ ಗಲಭೆಯಿಂದ ಉಂಟಾಗುತ್ತಿರುವ ಅಶಾಂತಿ ಬಗ್ಗೆ ಅರಸೀಕೆರೆ ತಾಲ್ಲೂಕಿನ ಶ್ರೀಕ್ಷೇತ್ರ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

    ಶುಭಕೃತ ನಾಮ ಸಂವತ್ಸರದ ಫಲದಲ್ಲಿ ಗುಡುಗು, ಮಿಂಚು, ಗಾಳಿ, ಮಳೆ ಹೆಚ್ಚಾಗಿ ಪ್ರಕೃತಿ ಅಲ್ಲೋಲ ಕಲ್ಲೋಲ ಆಗುತ್ತದೆ. ಬಯಲುಸೀಮೆ‌ ಮಲೆನಾಡಾಗುತ್ತದೆ, ಮಲೆನಾಡು ಬಯಲುಸೀಮೆಯಾಗಲು ಬಯಸುತ್ತದೆ. ಇದು ಹೀಗೆಯೇ ಮುಂದುವರಿಯುತ್ತದೆ. ಈ ಸಂವತ್ಸರದ ಫಲ ನೋಡಿದರೆ ಮೇಘ ಘರ್ಜಿಸೀತು, ಭೂಮಿ ತಲ್ಲಣಗೊಂಡೀತು. ಭೂಮಿ ಕಂಪಿಸುತ್ತೆ, ಗುಡ್ಡಗಳು ಕುಸಿಯುತ್ತವೆ, ಕೆರೆ ಕಟ್ಟೆಗಳು ಒಡೆದು ಹೋಗುತ್ತವೆ. ಇದು ಈ ಸಂವತ್ಸರದ ಕಡೆಯವರೆಗೂ ಇರುತ್ತೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹತ್ಯೆಯಾದವರ ಕುಟುಂಬಗಳಿಗೆ ಪರಿಹಾರ ನೀಡುವಲ್ಲಿ ತಾರತಮ್ಯ ಮಾಡಬಾರದು: ಮಂತ್ರಾಲಯ ಶ್ರೀ

    ಮುಂಗಾರು ಮಳೆ ಕಳೆದ ಮೇಲೆ, ಹಿಂಗಾರು ಕಡಿಮೆಯಾಗುತ್ತದೆ. ಆದರೆ ಅಕಾಲಿಕ ಮಳೆಗಳು ಹೆಚ್ಚಾಗುತ್ತವೆ. ಆಶ್ವಿಜ ಕಾರ್ತಿಕದಲ್ಲಿ ದೇಶಕ್ಕೆ ಕಷ್ಟ, ಭಂಗ, ನೋವಿದೆ. ರೋಗರುಜಿನಗಳು ಹೆಚ್ಚುತ್ತವೆ. ಕಳ್ಳಕಾಕರ ಕಾಟ, ಅಪಮೃತ್ಯಗಳು, ಕೊಲೆಗಳು, ಮತೀಯ ಗಲಭೆಗಳು ಹೆಚ್ಚಾಗಿ ಅಂತಾರಾಷ್ಟ್ರೀಯ ವಿಕೋಪಕ್ಕೆ ತುತ್ತಾಗುತ್ತದೆ. ಎಲ್ಲವೂ ಇನ್ನೂ ಇದೆ, ಇನ್ನೂ‌ ಹೆಚ್ಚುತ್ತದೆ ಎಂದು ಹೇಳಿದ್ದಾರೆ.

    ರಾಜಕೀಯದಲ್ಲಿ ಕಲಹಗಳಾಗುತ್ತವೆ, ಗುಂಪುಗಳಾಗುತ್ತವೆ. ಮಳೆ ಬರುತ್ತೆ ಬೆಳೆ ಸಿಕ್ಕಲ್ಲ, ಬೆಳೆ ಬರುತ್ತೆ ಅದನ್ನು ಮಳೆ ತಿನ್ನುತ್ತದೆ. ಶುಭಕೃತ ನಾಮ ಸಂವತ್ಸದ ಫಲ ಅಶುಭವಾಗಿರುತ್ತದೆ. ಬಲಾಢ್ಯ ಪೃಥ್ವಿ ಹೆಚ್ಚುತ್ತ ಹೋಗುತ್ತದೆ. ಆಕಾಶ ಎಲ್ಲಿ ಬೇಕು ಅಲ್ಲಿ ಘರ್ಜಿಸುತ್ತೆ ಕಂಡಮಂಡಲ ಆಗುತ್ತೆ. ದೊಡ್ಡ ದೊಡ್ಡ ಪಟ್ಟಣಗಳಿಗೆ ಭಂಗವಾಗುತ್ತೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಭಟ್ಕಳದಲ್ಲಿ ಗುಡ್ಡ ಕುಸಿತ – ನಾಲ್ವರು ಸಾವು, ಮೂವರ ಶವ ಹೊರತೆಗೆದ ರಕ್ಷಣಾ ಸಿಬ್ಬಂದಿ

    ಮತೀಯ ಗಲಭೆ ಇನ್ನೂ ಹೆಚ್ಚಾಗುತ್ತೆ. ಸಾವು-ನೋವು ಇನ್ನೂ ಜಾಸ್ತಿ ಆಗಿ ಅಶಾಂತಿ ಉಂಟಾಗಲಿದೆ. ಕಾರ್ತಿಕ ಆಶ್ವಿಜದಲ್ಲಿ ರಾಷ್ಟ್ರ, ರಾಜ್ಯಮಟ್ಟದ ಗೊಂದಲಗಳು, ಸಾವು-ನೋವುಗಳು ಆಗುವ ಲಕ್ಷಣ ಬಹಳ ಇದೆ. ಜನ ತಲ್ಲಣಗೊಳ್ಳುತ್ತಾರೆ. ಈ ತಿಂಗಳವರೆಗೂ ಕಾದುನೋಡಿ. ಶುಭಕೃತ ನಾಮ ಸಂವತ್ಸರದಲ್ಲಿ ಶುಭ ಆಗೋದಿಲ್ಲ. ಗಾಳಿ, ಮಳೆ, ವೃಕ್ಷಗಳು ಮುರಿದು ಬೀಳುತ್ತವೆ. ವಿಪರೀತ ಮಿಂಚು ಮತ್ತು ಗಾಳಿಯಾಗುತ್ತದೆ. ಸಾವು-ನೋವು ಹೆಚ್ಚಾಗಲಿದೆ. ಜಲಾಶಯಗಳು ತುಂಬಿ ಹರಿಯುತ್ತವೆ. ಕೆಲವು ಕಡೆ ಮಳೆ ಹೋದರೆ ಸಾಕು ಅಂತಾರೆ, ಕೆಲವು ಕಡೆ ಮಳೆ ಬೇಕು ಅಂತಾರೆ ಎಂದು ಶ್ರೀಗಳು ಭವಿಷ್ಯ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]